GST : ರಾಜ್ಯಗಳು ಒಪ್ಪಿದರೆ ಪೆಟ್ರೋಲ್‌, ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಗೆ: ನಿರ್ಮಲಾ ಸೀತಾರಾಮನ್ - Vistara News

ಪ್ರಮುಖ ಸುದ್ದಿ

GST : ರಾಜ್ಯಗಳು ಒಪ್ಪಿದರೆ ಪೆಟ್ರೋಲ್‌, ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಗೆ: ನಿರ್ಮಲಾ ಸೀತಾರಾಮನ್

ಪೆಟ್ರೋಲ್‌ ಮತ್ತು ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಗೆ ಬರಬೇಕಿದ್ದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬರಬೇಕಾಗಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.

VISTARANEWS.COM


on

F20 FUEL
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ರಾಜ್ಯ ಸರ್ಕಾರಗಳು ಒಪ್ಪಿದರೆ ಪೆಟ್ರೋಲಿಯಂ ಮತ್ತು ಅನಿಲವನ್ನು ಜಿಎಸ್‌ಟಿ (GST) ವ್ಯಾಪ್ತಿಗೆ ತರಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಉದ್ಯಮ ವಲಯದ ಮಂಡಳಿ ಪಿಎಚ್‌ಡಿಸಿಸಿಐ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿತ್ತೀಯ ಬಲವರ್ಧನೆಗೆ ಬೇಕಾದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದರು.

ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬುದು ಸುದೀರ್ಘ ಕಾಲದ ಬೇಡಿಕೆಯಾಗಿದೆ. ಪೆಟ್ರೋಲ್-ಡೀಸೆಲ್‌ ಅನ್ನು ಜಿಎಸ್‌ಟಿಗೆ ಒಳಪಡಿಸಿದರೆ, ಇವುಗಳ ದರ ಇಳಿಕೆಯಾಗಲಿದೆ. ಜನ ಸಾಮಾನ್ಯರಿಗೆ, ಉದ್ದಿಮೆ ವಲಯಕ್ಕೂ ಅನುಕೂಲವಾಗಲಿದೆ. ಆದರೆ ಹಲವಾರು ರಾಜ್ಯಗಳು ಈ ಪ್ರಸ್ತಾಪಕ್ಕೆ ಒಪ್ಪುತ್ತಿಲ್ಲ.

ರಾಜಯ ಸರ್ಕಾರಗಳಿಗೆ ಪೆಟ್ರೋಲ್-ಡೀಸೆಲ್‌ ಮಾರಾಟದ ಮೇಲಿನ ತೆರಿಗೆ ಪ್ರಮುಖ ಆದಾಯ ಮೂಲವಾದ್ದರಿಂದ ಅದನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಮ್ಮತಿಸುತ್ತಿಲ್ಲ. ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲ ರಾಜ್ಯಗಳು ಈ ಬಗ್ಗೆ ಒಮ್ಮತಕ್ಕೆ ಬರಬೇಕಾದ ಅಗತ್ಯ ಇದೆ ಎನ್ನುತ್ತಾರೆ ತಜ್ಞರು. ಈ ಹಿಂದೆಯೂ ಕೇಂದ್ರ ವಾಣಿಜ್ಯ ಸಚಿವರು, ರಾಜ್ಯಗಳಲ್ಲಿ ಒಮ್ಮತದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯಪುರ

Honor Killing: ಮರ್ಯಾದೆಗಾಗಿ ಗರ್ಭಿಣಿಯನ್ನು ಸುಟ್ಟು ಕೊಂದ ಇಬ್ಬರಿಗೆ ಗಲ್ಲು ಶಿಕ್ಷೆ, 6 ಮಂದಿಗೆ ಜೀವಾವಧಿ‌ ಶಿಕ್ಷೆ

Honor Killing: 2017ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಾಳಾಗುಂಡಕನಾಳ ಗ್ರಾಮದಲ್ಲಿ ಗರ್ಭಿಣಿಯ ಹತ್ಯೆ ಪ್ರಕರಣ ನಡೆದಿತ್ತು. ಪ್ರೀತಿಸಿ ಮದುವೆಯಾಗಿದ್ದರಿಂದ ಮಹಿಳೆಗೆ ಪೋಷಕರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದರು.

VISTARANEWS.COM


on

honour killing
Koo

ವಿಜಯಪುರ: ಮರ್ಯಾದಾ ಹತ್ಯೆ ಪ್ರಕರಣದ (Honor Killing) ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ಇತರ 6 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ವಿಜಯಪುರ ಜಿಲ್ಲಾ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. 2017ರಲ್ಲಿ ಗರ್ಭಿಣಿಯನ್ನು ಸುಟ್ಟು ಕೊಂದಿದ್ದ ಪೋಷಕರು ಹಾಗೂ ಸಂಬಂಧಿಕರಿಗೆ ಇದೀಗ ಶಿಕ್ಷೆ ನೀಡಲಾಗಿದೆ.

ಇಬ್ರಾಹಿಂ ಸಾಬ್ ಅತ್ತಾರ, ಅಕ್ಬರಸಾಬ್ ಅತ್ತಾರ ಗಲ್ಲು ಶಿಕ್ಷೆಗೆ ಒಳಗಾದವರು. ರಮಜಾನಭೀ ಅತ್ತಾರ, ದಾವಲಭೀ ಜಮಾದಾರ್, ಅಜಮಾ ದಖನಿ, ಜಿಲಾನಿ‌ ದಖನಿ, ಅಬ್ದುಲ್ ಖಾದರ್ ದಖನಿ, ದಾವಲಭಿ ಧನ್ನೂರಗೆ ಜೀವಾವಧಿ‌ ಶಿಕ್ಷೆ ಹಾಗೂ 4.19 ಲಕ್ಷ ದಂಡ ವಿಧಿಸಲಾಗಿದೆ.

2017ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಾಳಾಗುಂಡಕನಾಳ ಗ್ರಾಮದಲ್ಲಿ ಗರ್ಭಿಣಿಯ ಹತ್ಯೆ ಪ್ರಕರಣ ನಡೆದಿತ್ತು. ಹಾಳಗುಂಡಕನಾಳ ಗ್ರಾಮದ ಬಾನು ಬೇಗಂ ಅತ್ತಾರ್ ಹಾಗೂ ಸಾಯಬಣ್ಣ ಕೊಣ್ಣೂರ ಎಂಬುವರು 2017ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದು ಬಾನುಬೇಗಂ ಮನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಮದುವೆಯಾದ ಬಳಿಕ ಬೇರೆ ನಗರದಲ್ಲಿ ಬಾನು ಬೇಗಂ ಹಾಗೂ ಸಾಯಬಣ್ಣ ವಾಸವಿದ್ದರು. ಈ ವೇಳೆ ಬಾನು ಬೇಗಂ ಗರ್ಭಿಣಿಯಾದ ಕಾರಣ ಹೆರಿಗೆಗಾಗಿ ಗಂಡನ ಮನೆಗೆ ಬಂದಿದ್ದಳು. ಇದನ್ನೇ ಕಾಯುತ್ತಿದ್ದ ಆಕೆಯ ಪೋಷಕರು ಬಾನುಬೇಗಂ ಹಾಗೂ ಸಾಹೇಬಣ್ಣರನ್ನ ಕೊಲೆ ಮಾಡಲು ಮುಂದಾಗಿದ್ದರು. ಪತಿ ಮತ್ತು ಪತ್ನಿ ಮೇಲೆ ಹಲ್ಲೆ ಮಾಡುವ ವೇಳೆ ಹಲ್ಲೆಗೊಳಗಾಗಿ ಬಾನು ಬೇಗ ಮೂರ್ಚೆ ಹೋಗಿದ್ದಳು. ಮೂರ್ಚೆ ಹೋದ ಗರ್ಭಿಣಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು.

ಇದನ್ನೂ ಓದಿ | Prajwal Revanna Case: ರೇವಣ್ಣ ಮೇಲೆ ಕಿಡ್ನ್ಯಾಪ್‌ ಕೇಸ್;‌ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ, ನಾಳೆ SIT ಮುಂದೆ ಹಾಜರ್‌?

ಘಟನೆ ವೇಳೆ ಹಲ್ಲೆಕೋರರಿಂದ ಸಾಯಬಣ್ಣನನ್ನು ರಕ್ಷಣೆ ಮಾಡಲಾಗಿತ್ತು. ಬಾನುಬೇಗಂ ತಂದೆ-ತಾಯಿ ಹಾಗೂ ಅವರ ಸಂಬಂಧಿಕರು ಈ ಕೃತ್ಯ ಎಸಗಿದ್ದರು. ಈ ಪ್ರಕರಣ ಕುರಿತು ತನಿಖೆ ನಡೆಸಿ ತಾಳಿಕೋಟೆ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದರು. ಸುಧೀರ್ಘ ವಾದ-ವಿವಾದ ಆಲಿಸಿದ ನ್ಯಾಯಾಧೀಶ ಸತೀಶ್ ಎಲ್.ಪಿ. ಅವರು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಎಸ್. ಲೋಕೂರ ವಾದ ಮಂಡಿಸಿದ್ದರು.

ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಸದ್ದಾಂ ಹುಸೇನ್ ಅರೆಸ್ಟ್‌

Physical Abuse

ಹುಬ್ಬಳ್ಳಿ: ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಅನ್ಯಕೋಮಿ‌ನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಆಘಾತಕಾರಿ ವಿಷಯ ತಿಳಿಸಿದ್ದರು. ಮಗಳು ಗರ್ಭಿಣಿಯಾದ ಸುದ್ದಿ ತಿಳಿದು ಪೋಷಕರು ಕಂಗಾಲಾಗಿದ್ದರು. ಹೀಗಾಗಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ದಾಂಹುಸೇನ್ ಬಂಧಿತ ಆರೋಪಿ. ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ್ದ ಯುವಕ, ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಯುವಕನ ವಿರುದ್ಧ ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿ, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಶುಕ್ರವಾರ ಸಂಜೆ ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

Physical Abuse

ಇದನ್ನೂ ಓದಿ | Prajwal Revanna Case: ಪೆನ್‌ಡ್ರೈವ್‌ ಲೀಕ್‌ ಮಾಡಿದ್ದು ಯಾರು? ಎಸ್‌ಐಟಿಗೆ ಸಾಕ್ಷಿ ಕೊಟ್ಟ ದೇವರಾಜೇಗೌಡ!

ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪ್ರಾಪ್ತೆ ಆಸ್ಪತ್ರೆಗೆ ಹೋಗಿದ್ದನ್ನು ಅರಿತ ಯುವಕ, ಆಕೆ ಕುಟುಂಬಸ್ಥರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಹೀಗಾಗಿ ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದು ಪರ ಸಂಘಟನೆಗಳ ಆಕ್ರೋಶ ಹೊರಹಾಕಿವೆ.

Continue Reading

ವಿದೇಶ

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

ಚೀನಾದ ಶಾಂಘೈ ವಿಶ್ವವಿದ್ಯಾಲಯ ಎಸ್‌ಜೆಟಿಯು ಹಾಗೂ ಪಾಕಿಸ್ತಾನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸುಪಾರ್ಕೊ ಜತೆಗೂಡಿ ಚಂದ್ರಯಾನ ಮಿಷನ್‌ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಚೀನಾದ ನೆರವಿನಿಂದ ಮೊದಲ ಚಂದ್ರಯಾನ ಕೈಗೊಂಡಿರುವ ಪಾಕಿಸ್ತಾನವು ಭಾರತಕ್ಕಿಂತ 16 ವರ್ಷ ಹಿಂದಿದೆ ಎಂಬುದು ಸಾಬೀತಾಗಿದೆ.

VISTARANEWS.COM


on

Pakistan
Koo

ಇಸ್ಲಾಮಾಬಾದ್:‌ ಆರ್ಥಿಕವಾಗಿ ದಿವಾಳಿಯಾಗಿರುವ, ಉತ್ತಮ ನಾಯಕ ಸಿಗದೆ ಆಡಳಿತಾತ್ಮಕವಾಗಿಯೂ ಅರಾಜಕತೆಯಿಂದ ಕೂಡಿರುವ, ಉಗ್ರರ ಪೋಷಣೆಗಾಗಿ ಜಾಗತಿಕವಾಗಿ ಹಣಕಾಸು ನೆರವು ಸಿಗದೆ ಒದ್ಡಾಡುತ್ತಿರುವ ಪಾಕಿಸ್ತಾನವೀಗ (Pakistan) ಚೀನಾದ (China) ನೆರವಿನಿಂದ ಮೊದಲ ಚಂದ್ರಯಾನ (Pakistan Lunar Mission) ಕೈಗೊಂಡಿದೆ. ಚೀನಾದ ನೆರವಿನಿಂದ ಪಾಕಿಸ್ತಾನ ಕೈಗೊಂಡಿರುವ ಚಂದ್ರಯಾನವು ಚಂದ್ರನ ಮೇಲ್ಮೈ ಕುರಿತು ಅಧ್ಯಯನ ನಡೆಸಲಿದೆ ಎಂದು ತಿಳಿದುಬಂದಿದೆ.

ಸುಮಾರು 53 ದಿನಗಳವರೆಗೆ ಪಾಕಿಸ್ತಾನದ ಚಂದ್ರಯಾನದ ಉಪಗ್ರಹವು ಚಂದ್ರನ ಮೇಲ್ಮೈ ಕುರಿತು ಅಧ್ಯಯನ ಮಾಡಲಿದೆ. ಚಂದ್ರಯಾನದ ಉಡಾವಣೆ ಯಶಸ್ವಿಯಾಗುತ್ತಲೇ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ದೇಶದ ಜನರಿಗೆ ಹಾಗೂ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಅಣ್ವಸ್ತ್ರದಲ್ಲಿ ಹೇಗೆ ಪಾಕಿಸ್ತಾನದ ವಿಜ್ಞಾನಿಗಳು ಪಾರಮ್ಯ ಸಾಧಿಸಿದ್ದರೋ, ಅದೇ ರೀತಿ ಬಾಹ್ಯಾಕಾಶ ಕ್ಷೇತ್ರದಲ್ಲೂ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದು ದೇಶವೇ ಹೆಮ್ಮೆ ಪಡುವ ವಿಚಾರವಾಗಿದೆ” ಎಂಬುದಾಗಿ ನೂತನ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೀನಾದ ಶಾಂಘೈ ವಿಶ್ವವಿದ್ಯಾಲಯ ಎಸ್‌ಜೆಟಿಯು ಹಾಗೂ ಪಾಕಿಸ್ತಾನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸುಪಾರ್ಕೊ ಜತೆಗೂಡಿ ಚಂದ್ರಯಾನ ಮಿಷನ್‌ ಕೈಗೊಳ್ಳಲಾಗಿದೆ. ಐಕ್ಯೂಬ್‌-ಕ್ಯೂ ಸ್ಯಾಟಲೈಟ್‌ (iCube-Q Satellite) ಎರಡು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಇವು ಚಂದ್ರನ ಮೇಲ್ಮೈ ಫೋಟೊಗಳನ್ನು ಕಳುಹಿಸಲಿವೆ. ಇದು ಚೀನಾದ ಆರನೇ ಚಂದ್ರಯಾನವಾಗಿದ್ದು, ಚಂದ್ರನ ಅಂಗಳದಲ್ಲಿರುವ ಮಣ್ಣು ಹಾಗೂ ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

ಭಾರತಕ್ಕಿಂತ ಪಾಕ್‌ 16 ವರ್ಷ ಹಿಂದೆ

ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಚೀನಾದ ನೆರವಿನಿಂದ ಮೊದಲ ಚಂದ್ರಯಾನ ಕೈಗೊಂಡಿರುವ ಪಾಕಿಸ್ತಾನವು ಭಾರತಕ್ಕಿಂತ 16 ವರ್ಷ ಹಿಂದಿದೆ ಎಂಬುದು ಸಾಬೀತಾಗಿದೆ. ಭಾರತದ ಇಸ್ರೋ 2008ರಲ್ಲಿ ಮೊದಲ ಬಾರಿಗೆ ಚಂದ್ರಯಾನ ಕೈಗೊಂಡು ಯಶಸ್ವಿಯಾಗಿತ್ತು. ಈಗ ಭಾರತವು ಮೂರನೇ ಬಾರಿ ಚಂದ್ರಯಾನ ಕೈಗೊಂಡಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಲ್ಯಾಂಡರ್‌ ಹಾಗೂ ರೋವರ್‌ಗಳನ್ನು ಸಾಫ್ಟ್‌ ಲ್ಯಾಂಡ್‌ ಮಾಡಿದ ಮೊದಲ ದೇಶ ಎಂಬ ಖ್ಯಾತಿಗೆ ಭಾಜನವಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್‌ ಬಚಾವ್‌ ಆಗಿದ್ದು ಹೇಗೆ?

Continue Reading

ಪ್ರಮುಖ ಸುದ್ದಿ

T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

T20 World Cup: ಭಾರತದ ಮಾಜಿ ಅಂಡರ್ -19 ನಾಯಕ ಉನ್ಮುಕ್ತ್ ಚಾಂದ್ ಟಿ 20 ವಿಶ್ವಕಪ್ ಗಾಗಿ ಯುಎಸ್ಎ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಎಂಐಎಲ್ ಸಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಪಂದ್ಯಾವಳಿಯಲ್ಲಿ ಯುಎಸ್ಎಯನ್ನು ಪ್ರತಿನಿಧಿಸುವ ಭರವಸೆಯನ್ನು ಚಾಂದ್ ಹೊಂದಿದ್ದರು. ಎಂಐಎಲ್​ನಲ್ಲಿ 3 ಋತುಗಳಲ್ಲಿ ಅವರು 45 ಇನ್ನಿಂಗ್ಸ್​ಗಳಲ್ಲಿ 1500 ರನ್ ಗಳಿಸಿದ್ದರು. ಆದರೂ ವಿಶ್ವಕಪ್​​ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.

VISTARANEWS.COM


on

T20 World Cup
Koo

ಬೆಂಗಳೂರು: ಭಾರತ ಅಂಡರ್​-19 ವಿಶ್ವ ಕಪ್​ ವಿಜೇತ ತಂಡದ ನಾಯಕರಾಗಿದ್ದ ಉನ್ಮುಕ್ತ್​ ಚಾಂದ್​ಗೆ (Unmukth Chand) ಅದೃಷ್ಟ ಸದಾ ಕೈಕೊಡುತ್ತದೆ. ಭಾರತ ತಂಡದಲ್ಲಿ ಸ್ಥಾನ ಪಡೆಯದ ಅವರು ಐಪಿಎಲ್​ನಲ್ಲಿ ಅವಕಾಶ ಪಡೆಯುವಲ್ಲೂ ಸೋತಿದ್ದರು. ಹೀಗಾಗಿ ಅವರು ಅವಕಾಶಗಳನ್ನು ಅರಸಿಕೊಂಡು ಅಮೆರಿಕಕ್ಕೆ ಹೋಗಿದ್ದರು. ಅಲ್ಲಿನ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗುವುದು ಅವರ ಗುರಿಯಾಗಿತ್ತು. ಅದಕ್ಕೆ ತಕ್ಕ ಹಾಗೆ ಉತ್ತಮ ಪ್ರದರ್ಶನವನ್ನೂ ನೀಡಿದ್ದರು. ಆದಾಗ್ಯೂ ಅವರ ಭಾಗ್ಯದ ಬಾಗಿಲು ತೆರೆದಿಲ್ಲ. ಮುಂಬರುವ ವಿಶ್ವ ಕಪ್(T20 World Cup) ​ ಯುಎಸ್​ ತಂಡಕ್ಕೆ ಅವರು ಆಯ್ಕೆಯಾಗಿಲ್ಲ.

ವಿಶ್ವ ಕಪ್​ನ ಸಹ-ಆತಿಥೇಯ ಅಮೆರಿಕ ಶುಕ್ರವಾರ (ಮೇ 3ಂದು) ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಚಾಂದ್ ಅವಕಾಶ ಪಡೆದಿಲ್ಲ. ನ್ಯೂಜಿಲೆಂಡ್​​ನ ಮಾಜಿ ಆಲ್ರೌಂಡರ್ ಕೋರಿ ಆ್ಯಂಡರ್ಸನ್ ಸೇರ್ಪಡೆ ತಂಡದ ಪ್ರಮುಖ ಅಂಶವಾಗಿದೆ. ವೇಗದ ಬೌಲಿಂಗ್ ಆಲ್ರೌಂಡರ್ 2015 ರಲ್ಲಿ ಏಕದಿನ ವಿಶ್ವಕಪ್ ಫೈನಲ್​ಗೆ ಅರ್ಹತೆ ಪಡೆದ ನ್ಯೂಜಿಲೆಂಡ್ ತಂಡದ ಪ್ರಮುಖ ಸದಸ್ಯರಾಗಿದ್ದರು. 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ಪರ ಆಡುವಾಗ ಆ್ಯಂಡರ್ಸನ್ ಕೇವಲ 36 ಎಸೆತಗಳಲ್ಲಿ ಏಕದಿನ ಶತಕ ಬಾರಿಸಿದ್ದರು.

ಭಾರತದ ಮಾಜಿ ಅಂಡರ್ -19 ನಾಯಕ ಉನ್ಮುಕ್ತ್ ಚಾಂದ್ ಟಿ 20 ವಿಶ್ವಕಪ್ ಗಾಗಿ ಯುಎಸ್ಎ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಎಂಐಎಲ್ ಸಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಪಂದ್ಯಾವಳಿಯಲ್ಲಿ ಯುಎಸ್ಎಯನ್ನು ಪ್ರತಿನಿಧಿಸುವ ಭರವಸೆಯನ್ನು ಚಾಂದ್ ಹೊಂದಿದ್ದರು. ಎಂಐಎಲ್​ನಲ್ಲಿ 3 ಋತುಗಳಲ್ಲಿ ಅವರು 45 ಇನ್ನಿಂಗ್ಸ್​ಗಳಲ್ಲಿ 1500 ರನ್ ಗಳಿಸಿದ್ದರು. ಆದರೂ ವಿಶ್ವಕಪ್​​ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.

ಯುಎಸ್ಎ ತಂಡ

ವಿಕೆಟ್ ಕೀಪರ್-ಬ್ಯಾಟ್ಸ್​​ಮನ್​ ಮೊನಂಕ್ ಪಟೇಲ್ ಟಿ 20 ವಿಶ್ವಕಪ್​ನಲ್ಲಿ ಯುಎಸ್ಎ ತಂಡವನ್ನು ಮುನ್ನಡೆಸಲಿದ್ದಾರೆ. ಯುಎಸ್ಎ ವೇಗದ ಬೌಲರ್ ಅಲಿ ಖಾನ್ ಈವೆಂಟ್​ಗೆ ಫಿಟ್ ಆಗಿದ್ದಾರೆ. ಸ್ನಾಯುಸೆಳೆತದ ಗಾಯದಿಂದಾಗಿ ಖಾನ್ ಇತ್ತೀಚೆಗೆ ಕೆನಡಾ ವಿರುದ್ಧದ ಟಿ 20 ಐ ಸರಣಿಯಿಂದ ಹೊರಗುಳಿದಿದ್ದರು.

ಇದನ್ನೂ ಓದಿ: IPL 2024 : ರೋಹಿತ್​ ಶರ್ಮಾ ಬೆಂಚು ಕಾಯುವಂತೆ ಮಾಡಿದ ಹಾರ್ದಿಕ್ ಪಾಂಡ್ಯ

ಖಾನ್ ಟಿ 20 ಕ್ರಿಕೆಟ್​​ ಅನುಭವವನ್ನು ಹೊಂದಿದ್ದಾರೆ. ಅವರು ವಿಶ್ವದಾದ್ಯಂತ ಹಲವಾರು ಟಿ 20 ತಂಡಗಳಿಗಾಗಿ ಆಡಿದ್ದಾರೆ. ಅವರು ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್ನ ಭಾಗವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಬ್ಯಾಟರ್​​ ಸ್ಟೀವನ್ ಟೇಲರ್ ಅವರೊಂದಿಗೆ ಯುಎಸ್ಎ ಟಿ 20 ಐ ಆಟಗಾರ ಸೌರಭ್ ನೇತ್ರವಾಲ್ಕರ್ ಕೂಡ ತಂಡದಲ್ಲಿದ್ದಾರೆ.

‘ಎ’ ಗುಂಪಿನಲ್ಲಿ ಅಮೆರಿಕ, ಮಾಜಿ ಚಾಂಪಿಯನ್ ಭಾರತ, ಪಾಕಿಸ್ತಾನ, ಐರ್ಲೆಂಡ್ ಮತ್ತು ಕೆನಡಾ ತಂಡಗಳಿವೆ. ಸಹ-ಆತಿಥೇಯರು ಜೂನ್ 1 ರಂದು ಕೆನಡಾ ವಿರುದ್ಧ ಟಿ 20 ವಿಶ್ವಕಪ್ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2024: ಅಮೆರಿಕ ತಂಡ:

ಮೊನಂಕ್ ಪಟೇಲ್ (ನಾಯಕ), ಆರೋನ್ ಜೋನ್ಸ್ (ಉಪನಾಯಕ), ಆಂಡ್ರೀಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸಾರ್ಗ್ ಪಟೇಲ್, ನಿತೀಶ್ ಕುಮಾರ್, ನೊಶ್ತುಶ್ ಕೆಂಜಿಗೆ, ಸೌರಭ್ ನೇತ್ರಲ್ವಾಕರ್, ಶಾಡ್ಲಿ ವ್ಯಾನ್ ಶಾಲ್ಕ್ವಿಕ್, ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್. ಮೀಸಲು ಆಟಗಾರರು: ಗಜಾನಂದ್ ಸಿಂಗ್, ಜುವಾಯ್ ಡ್ರೈಸ್ಡೇಲ್, ಯಾಸಿರ್ ಮೊಹಮ್ಮದ್

Continue Reading

ಕ್ರೀಡೆ

IPL 2024 : ರೋಹಿತ್​ ಶರ್ಮಾ ಬೆಂಚು ಕಾಯುವಂತೆ ಮಾಡಿದ ಹಾರ್ದಿಕ್ ಪಾಂಡ್ಯ

IPL 2024: ಐದು ಬಾರಿಯ ಚಾಂಪಿಯನ್ಸ್ ಮುಂಬಯಿ ಇಂಡಿಯನ್ಸ್ ತವರು ಸ್ಟೇಡಿಯಮ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತಾ ವಿರುದ್ಧ ಮುಂಬೈ ಇಂಡಿಯನ್ಸ್ ಆಡಿದ 10 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿದೆ. ಪ್ರಸ್ತುತ ಮುಂಬೈನಲ್ಲಿ ಫಾರ್ಮ್​ನಲ್ಲಿ ಇಲ್ಲ. ಆದರೂ ಗೆಲುವಿಗಾಗಿ ಪ್ರಯತ್ನಿಸಲಿದೆ.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್ 2024 ರ (IPL 2024) 51 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಮುಂಬೈ ಇಂಡಿಯನ್ಸ್ ತನ್ನ ಕೊನೆಯ ನಾಲ್ಕು ಪಂದ್ಯಗಳನ್ನು ತವರಿನಲ್ಲಿ ಆಡಿದೆ ಮತ್ತು ಅದರಲ್ಲಿ ಮೂರನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ತವರಿನ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಂಡು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ ಮೂರು ಪಂದ್ಯಗಳ ಸೋಲಿನ ಸರಣಿಯನ್ನು ಕೊನೆಗೊಳಿಸುವ ವಿಶ್ವಾಸದಲ್ಲಿದೆ ಹಾರ್ದಿಕ್ ಪಾಂಡ್ಯ ಬಳಗ.

ಐದು ಬಾರಿಯ ಚಾಂಪಿಯನ್ಸ್ ಮುಂಬಯಿ ಇಂಡಿಯನ್ಸ್ ತವರು ಸ್ಟೇಡಿಯಮ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತಾ ವಿರುದ್ಧ ಮುಂಬೈ ಇಂಡಿಯನ್ಸ್ ಆಡಿದ 10 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿದೆ. ಪ್ರಸ್ತುತ ಮುಂಬೈನಲ್ಲಿ ಫಾರ್ಮ್​ನಲ್ಲಿ ಇಲ್ಲ. ಆದರೂ ಗೆಲುವಿಗಾಗಿ ಪ್ರಯತ್ನಿಸಲಿದೆ.

ರೋಹಿತ್ ಶರ್ಮಾಗೆ ಇಲ್ಲ ಚಾನ್ಸ್​

ಶುಕ್ರವಾರ (ಮೇ 3) ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಂತರ ಆತಿಥೇಯರು ಆಟಕ್ಕಾಗಿ ವಿಶೇಷ ಪ್ಲೇಯಿಂಗ್ ಇಲೆವೆನ್ ಅನ್ನು ಘೋಷಿಸಿದರು. ಅಂದರೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಹೆಸರು ಆಡುವ ಹನ್ನೊಂದರಲ್ಲಿ ಕಾಣೆಯಾಗಿತ್ತು. ಆದರೆ, ಅವರು ಇಂಪ್ಯಾಕ್ಟ್​ ಪ್ಲೇಯರ್ ಆಗಿ ಆಡಿದರು. ಅವರು ಫೀಲ್ಡಿಂಗ್​ಗೆ ಬರಲಿಲ್ಲ.

ಇದನ್ನೂ ಓದಿ: KL Rahul : ವಿಶ್ವ ಕಪ್​ ತಂಡಕ್ಕೆ ಕೆ. ಎಲ್​ ರಾಹುಲ್​ ಬೇಡ ಅಂದಿದ್ದು ರೋಹಿತ್ ಶರ್ಮಾ; ಸ್ಫೋಟಕ ಮಾಹಿತಿ ಬಹಿರಂಗ

ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಮಾಡುತ್ತಿರುವುದರಿಂದ, ಅನುಭವಿ ಬ್ಯಾಟರ್​ ಮೈದಾನಕ್ಕೆ ಇಳಿಯಲಿಲ್ಲ. ಆದರೆ ಪಂದ್ಯದ ದ್ವಿತೀಯಾರ್ಧದಲ್ಲಿ ಬ್ಯಾಟಿಂಗ್ ಮಾಡಲು ಹೊರಬಂದರು. ಕಳೆದ ಮೂರು ಇನ್ನಿಂಗ್ಸ್​ಗಳಲ್ಲಿ ರೋಹಿತ್ ಎರಡಂಕಿಯ ಗಡಿ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಮರಳಲು ಎದುರು ನೋಡುತ್ತಿದ್ದಾರೆ.

ನಾವು ಬೌಲಿಂಗ್ ಮಾಡುತ್ತೇವೆ. ಇದು ಯಾವಾಗಲೂ ಹೆಮ್ಮೆಗಾಗಿ ಆಡುವ ಪಂದ್ಯ. ನಮಗೆ ಸಾಕಷ್ಟು ಕಠಿಣವಾಗಿ ಕಾಣುತ್ತದೆ ಆದರೆ ಅದೇ ಸಮಯದಲ್ಲಿ, ನಾವು ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇವೆ. ತವರಿಗೆ ಮರಳಲು ಸಂತೋಷವಾಗಿದೆ. ಉತ್ತಮ ಟ್ರ್ಯಾಕ್​ನಂತೆ ಕಾಣುತ್ತದೆ. ಇದು ಹೊಸ ಪಿಚ್​ ಆದ್ದರಿಂದ ಮೊದಲು ಬೌಲಿಂಗ್ ಮಾಡುವುದು ಒಳ್ಳೆಯದು ಎಂದು ಭಾವಿಸಿದೆ. ನಬಿ ಬದಲಿಗೆ ನಮನ್ ಧೀರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ,” ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಪ್ಲೇಯಿಂಗ್ ಇಲೆವೆನ್ ಇಂತಿದೆ

ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೇಹಾಲ್ ವಧೇರಾ, ಹಾರ್ದಿಕ್ ಪಾಂಡ್ಯ (ಸಿ), ನಮನ್ ಧೀರ್, ಟಿಮ್ ಡೇವಿಡ್, ಜೆರಾಲ್ಡ್ ಕೊಟ್ಜೆ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.

ಕೋಲ್ಕತಾ ನೈಟ್ ರೈಡರ್ಸ್: ಫಿಲಿಪ್ ಸಾಲ್ಟ್ (ವಿಕೆಟ್​ ಕೀಪರ್), ಸುನಿಲ್ ನರೈನ್, ಆಂಗ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.

Continue Reading
Advertisement
honour killing
ವಿಜಯಪುರ3 mins ago

Honor Killing: ಮರ್ಯಾದೆಗಾಗಿ ಗರ್ಭಿಣಿಯನ್ನು ಸುಟ್ಟು ಕೊಂದ ಇಬ್ಬರಿಗೆ ಗಲ್ಲು ಶಿಕ್ಷೆ, 6 ಮಂದಿಗೆ ಜೀವಾವಧಿ‌ ಶಿಕ್ಷೆ

Pakistan
ವಿದೇಶ20 mins ago

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

T20 World Cup
ಪ್ರಮುಖ ಸುದ್ದಿ22 mins ago

T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

Health Tips Kannada
ಆರೋಗ್ಯ51 mins ago

Health Tips Kannada : ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು?

Meeting with representatives of various political parties about MLC election in Hosapete
ವಿಜಯನಗರ55 mins ago

Vijayanagara News: ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆ; ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

Election campaign meeting for Kalaburgi Lok Sabha constituency BJP candidate Umesh Jadav at kalaburagi
ರಾಜಕೀಯ58 mins ago

Lok Sabha Election 2024: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಗ್ಯಾರಂಟಿ: ಬಿ.ಎಲ್. ಸಂತೋಷ್

Jai Shri Ram Slogan
ಕರ್ನಾಟಕ1 hour ago

Jai Shri Ram Slogan: ಜೈ ಶ್ರೀರಾಮ್ ಎಂದು ಕೂಗಿದ್ರೆ ಬೂಟುಗಾಲಲ್ಲಿ ಒದೆಯಿರಿ ಎಂದ ಕಾಂಗ್ರೆಸ್‌ ಮುಖಂಡ

Ballari Lok Sabha constituency Congress candidate E Tukaram election campaign in Kuduthini
ಬಳ್ಳಾರಿ1 hour ago

Lok Sabha Election 2024: ಕುಡುತಿನಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಭರ್ಜರಿ ರೋಡ್‌ ಶೋ

IPL 2024
ಕ್ರೀಡೆ1 hour ago

IPL 2024 : ರೋಹಿತ್​ ಶರ್ಮಾ ಬೆಂಚು ಕಾಯುವಂತೆ ಮಾಡಿದ ಹಾರ್ದಿಕ್ ಪಾಂಡ್ಯ

Darshanam Mogulaiah
ದೇಶ2 hours ago

Darshanam Mogulaiah: 2 ವರ್ಷದ ಹಿಂದೆ ಪದ್ಮಶ್ರೀ ಪಡೆದ ಸಾಧಕ ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ7 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ18 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌