Shivaji statue: ಈಗ ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಪಾಲಿಟಿಕ್ಸ್: ಲಕ್ಷ್ಮೀ ಹೆಬ್ಬಾಳ್ಕರ್ v/s ರಮೇಶ್ ಜಾರಕಿಹೊಳಿ ದಂಗಲ್ - Vistara News

ಕರ್ನಾಟಕ

Shivaji statue: ಈಗ ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಪಾಲಿಟಿಕ್ಸ್: ಲಕ್ಷ್ಮೀ ಹೆಬ್ಬಾಳ್ಕರ್ v/s ರಮೇಶ್ ಜಾರಕಿಹೊಳಿ ದಂಗಲ್

ಸರ್ಕಾರಿ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮ ಮಾಡಲು ಹೆಬ್ಬಾಳ್ಕರ್‌ ಯತ್ನಿಸಿದ್ದಾರೆ. ಚುನಾವಣೆ ಹೊತ್ತಲ್ಲಿ ಸರ್ಕಾರಿ ಯೋಜನೆಯನ್ನು ತನ್ನದೆಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಮಾಡಲು ಯತ್ನಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಸೇರಿ ಇತರ ಬಿಜೆಪಿ ನಾಯಕರು ಆರೋಪಿಸಿದ್ದಾರೆ.

VISTARANEWS.COM


on

Karnataka Election
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ʻಶಿವಾಜಿ ಪ್ರತಿಮೆ’ (shivaji statue) ಅನಾವರಣಕ್ಕೆ ಸಂಬಂಧಿಸಿ ಲಕ್ಷ್ಮೀ ಹೆಬ್ಬಾಳ್ಕರ್ (Laxmi hebbalkar) ಹಾಗೂ ರಮೇಶ್ ಜಾರಕಿಹೊಳಿ (ramesh jarkiholi) ಮಧ್ಯೆ ರಾಜಕೀಯ ಪ್ರತಿಷ್ಠೆಯ ಸಮರ ಆರಂಭವಾಗಿದೆ.

ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸರ್ಕಾರಿ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮ ಮಾಡಲು ಹೆಬ್ಬಾಳ್ಕರ್‌ ಯತ್ನಿಸಿದ್ದಾರೆ. ಚುನಾವಣೆ ಹೊತ್ತಲ್ಲಿ ಸರ್ಕಾರಿ ಯೋಜನೆಯನ್ನು ತನ್ನದೆಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಮಾಡಲು ಯತ್ನಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಸೇರಿ ಇತರ ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಸ್ಥಾಪಿಸಲಾಗಿರುವ 50 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಮಾರ್ಚ್ 5ರಂದು ಅನಾವರಣಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ಧತೆ ನಡೆಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 50 ಲಕ್ಷ ರೂ. ಅನುದಾನದಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣವಾಗಿದೆ.

ಪ್ರತಿಮೆ ಪ್ರತಿಷ್ಠಾಪನೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಾಂಗ್ರೆಸ್ ಘಟಾನುಘಟಿ ನಾಯಕರು ಬರುವುದಾಗಿ ಪ್ರಕಟಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವರು ಆಗಮಿಸುವ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದಾರೆ.

ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರೋಧ ವ್ಯಕ್ತಪಡಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳರನ್ನು ಕರೆಸಿ ಪ್ರತಿಮೆ ಲೋಕಾರ್ಪಣೆ ಮಾಡಿಸಲು ಪ್ಲಾನ್‌ ಮಾಡಿದ್ದಾರೆ. ಈ ಬಗ್ಗೆ ಹಿರೇಬಾಗೇವಾಡಿ ಅಭಿಮಾನಿಗಳ ಸಮಾವೇಶದಲ್ಲಿ ತಿಳಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ರಾಜಹಂಸಗಡ ಕೋಟೆಗೆ ಭೇಟಿ‌ ನೀಡಲು ರಮೇಶ್ ಜಾರಕಿಹೊಳಿ, ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Adiyodi Statue : ಆದಿಯೋಗಿ ಪ್ರತಿಮೆ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್‌ ವಜಾ; ಕೋರ್ಟ್‌ ಗರಂ ಆಗಿದ್ದು ಯಾಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

Prajwal Revanna Case: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ವಿಡಿಯೊ ವೈರಲ್‌ ಮಾಡಿದವರ ಕುರಿತು ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದ ವಕೀಲ ದೇವರಾಜೇಗೌಡ ಅವರನ್ನು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನ ಮಾಡಲಾಗಿತ್ತು. ಈ ಸಂಬಂಧ ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಜೆಎಂಎಫ್‌ಸಿ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಹೀಗಾಗಿ ಗುರುವಾರವೂ ಒಂದು ದಿನ ಅವಧಿ ವಿಸ್ತರಣೆ ಮಾಡಿ ಕೋರ್ಟ್‌ ಆದೇಶಿಸಿತ್ತು. ಅಲ್ಲದೆ, ಶುಕ್ರವಾರ (ಮೇ 17) ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚಿಸಿತ್ತು. ಇಂದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.

VISTARANEWS.COM


on

Prajwal Revanna Case Lawyer Devarajegowda sent to judicial custody End of police custody
Koo

ಹಾಸನ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ (physical Abuse) ಕೇಸ್‌ ಆರೋಪಿ ವಕೀಲ ದೇವರಾಜೇಗೌಡ (Devarajegowda) ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಗುರುವಾರವೂ ಒಂದು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಶುಕ್ರವಾರ ಕೋರ್ಟ್‌ ಮುಂದೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಂಗ ಬಂಧನವಿರಿಸಿ ಆದೇಶಿಸಲಾಗಿದೆ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ಸಾಕ್ಷಿ ಬಿಡುಗಡೆ ಮುಂದಾಗಿದ್ದ ದೇವರಾಜೇಗೌಡ ಅವರೀಗ ಇದಕ್ಕೆ ಸಂಬಂಧಪಟ್ಟಂತೆ ಬೇರೆ ಕೇಸ್‌ನಲ್ಲಿ ಲಾಕ್‌ ಆದಂತೆ ಆಗಿದೆ.

ಒಟ್ಟು ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದೇವರಾಜೇಗೌಡ ಅವರು ಈಗ ಮತ್ತೆ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ. ದೇವರಾಜೇಗೌಡ ಪರ ವಕೀಲರು ಇಂದು ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ವಿಡಿಯೊ ವೈರಲ್‌ (video viral) ಮಾಡಿದವರ ಕುರಿತು ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದ ವಕೀಲ ದೇವರಾಜೇಗೌಡ ಅವರನ್ನು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನ ಮಾಡಲಾಗಿತ್ತು. ಈ ಸಂಬಂಧ ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಜೆಎಂಎಫ್‌ಸಿ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಹೀಗಾಗಿ ಗುರುವಾರವೂ ಒಂದು ದಿನ ಅವಧಿ ವಿಸ್ತರಣೆ ಮಾಡಿ ಕೋರ್ಟ್‌ ಆದೇಶಿಸಿತ್ತು. ಅಲ್ಲದೆ, ಶುಕ್ರವಾರ (ಮೇ 17) ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚಿಸಿತ್ತು. ಇಂದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.

ದೇವರಾಜೇಗೌಡ ಮೇ 11ರಂದು ಬಂಧನಕ್ಕೆ ಒಳಗಾಗಿದ್ದರು. ಇವರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪಗಳನ್ನು ಹೊರಿಸಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಹೊಳೆನರಸೀಪುರ, ಹಾಸನ ಸೇರಿ ಇತರ ಅಗತ್ಯ ಸ್ಥಳಗಳಿಗೆ ಕರೆದೊಯ್ದು ವಿಚಾರಣೆಯನ್ನು ಕೈಗೊಂಡಿದ್ದರು.

ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ದೇವರಾಜೇಗೌಡ

ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: HD Revanna: ಬಸವನಗುಡಿ ನಿವಾಸದಿಂದ ದೂರವೇ ಉಳಿದ ಎಚ್‌ ಡಿ ರೇವಣ್ಣ; ಜ್ಯೋತಿಷಿಗಳ ಕಟ್ಟೆಚ್ಚರ?

ಪತಿಯು ಮಾಲೀಕತ್ವದ ಸೈಟ್ ವಿಚಾರವಾಗಿ ದೇವರಾಜೇಗೌಡ ಅವರನ್ನು ಮಹಿಳೆಯೊಬ್ಬರು ಭೇಟಿಯಾಗಿದ್ದರು. ಆ ಪರಿಚಯವನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ದೇವರಾಜೇಗೌಡ ವಿರುದ್ಧ ಕೇಳಿ ಬಂದಿದೆ.

Continue Reading

ಬೆಂಗಳೂರು

Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

Road Accident : ಬೆಂಗಳೂರು-ಮೈಸೂರಲ್ಲಿ ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತದಲ್ಲಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಯುವಕನೊರ್ವ ಬೈಕ್‌ ಅಪಘಾತದಲ್ಲಿ ಮೃತಪಟ್ಟರೆ, ಮೈಸೂರಲ್ಲಿ ಎರಡು ಅಪಘಾತದಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.

VISTARANEWS.COM


on

By

road Accident in Bengaluru mysore
Koo

ಮೈಸೂರು/ಬೆಂಗಳೂರು: ಮೈಸೂರಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಅಪಘಾತ (Road Accident) ನಡೆದಿದ್ದು, ಇಬ್ಬರು ಮೃತಪಟ್ಟರೆ, ಬೆಂಗಳೂರಲ್ಲಿ ಬರ್ತ್‌ ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಯುವಕ ಸ್ವಯಂ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಬೈಕ್‌ಗಳ ನಡುವೆ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿಯಲ್ಲಿ ಅಪಘಾತ ನಡೆದಿದೆ.

ಹುಣಸೂರು ತಾಲೂಕಿನ ಮರೂರುಕಾವಲ್ ಗ್ರಾಮದ ನಿವಾಸಿ ಸಾಗರ್ (35) ಮೃತ ದುರ್ದೈವಿ. ಹಿಂಬದಿ ಕುಳಿತಿದ್ದ ಅರಸು ಕಲ್ಲಹಳ್ಳಿ ಗ್ರಾಮದ ಹರೀಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಹರೀಶ್‌ನನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮತ್ತೊಂದು ವಾಹನದ ಸವಾರ ಕೆಸ್ತೂರು ಕೊಪ್ಪಲು ಗ್ರಾಮದ ನಿವಾಸಿ ಕೆಂಡಗಣ್ಣ ಅವರು ತೀವ್ರ ಗಾಯವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಕಾರು-ಸ್ಕೂಟರ್‌ ಅಪಘಾತ; ಮಹಿಳೆ ಸಾವು

ಕಾರು- ಸ್ಕೂಟರ್ ನಡುವೆ ಭೀಕ ಅಪಘಾತ ಸಂಭವಿಸಿದ್ದು, ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಹೆಬ್ಬಾಳು ಬಡಾವಣೆ ನಿವಾಸಿ ರಾಧಾ (34) ಮೃತ ದುರ್ದೈವಿ.

ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Student Death : ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ; ಕಾಲೇಜು ಕಿರುಕುಳಕ್ಕೆ ಬೇಸತ್ತಳೇ?

ಹೆಲ್ಮೆಟ್‌ರಹಿತ ಸವಾರಿಗೆ ಯುವಕ ಬಲಿ

ಬೆಂಗಳೂರಿನ ನಾಗವಾರ ಕಡೆಯಿಂದ ಮೂಡಲಪಾಳ್ಯ ಕಡೆಗೆ ಬೈಕ್‌ನಲ್ಲಿ ಬರುವಾಗ ಯುವಕನೊರ್ವ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ವರುಣ್‌ ಮೃತ ದುರ್ದೈವಿ.

ಮೂಲತಃ ಕೋಲಾರದ ವರುಣ್ ಬೆಂಗಳೂರು ಪೀಣ್ಯ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ಏಷಿಯನ್ ಪೈಂಟ್ಸ್‌ನಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿ ಸ್ನೇಹಿತನ ಬರ್ತ್ ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ವರುಣ್ ಬಳಿಕ ಹಾಸ್ಟೆಲ್‌ಗೆ ತೆರಳಿ ಸ್ನೇಹಿತರ ಭೇಟಿಯಾಗಿ ಬರುತ್ತಿದ್ದ. ಈ ವೇಳೆ ಮಾಳಗಾಳ ಬಳಿ ಸೆಲ್ಫ್‌ ಆ್ಯಕ್ಸಿಡೆಂಟ್‌ ಆಗಿದೆ. ಹೆಲ್ಮೆಟ್ ಧರಿಸದೇ ಇದ್ದಿದ್ದರಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವರುಣ್‌ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ತಂದೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ವರುಣ್‌ ತಮ್ಮ ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದು, ಇಡೀ ಕುಟುಂಬಕ್ಕೆ ವರುಣ್‌ ಆಧಾರವಾಗಿದ್ದ. ತಾಯಿಯ ಆಸ್ಪತ್ರೆ ಖರ್ಚಿಗೂ ಈತನೇ ಆಧಾರವಾಗಿದ್ದ. ವರುಣ್‌ ಸಾವು ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

CM Siddaramaiah: ಸಿದ್ದರಾಮಯ್ಯ ಸರ್ಕಾರಕ್ಕೆ 1 ವರ್ಷ; ಚಾರ್ಜ್‌ಶೀಟ್‌ ರೆಡಿ ಮಾಡಿದ ಬಿಜೆಪಿ; ಕೌಂಟರ್‌ಗೆ ಕಾಂಗ್ರೆಸ್‌ ತಯಾರಿ

CM Siddaramaiah: ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಮುಗಿ ಬೀಳುತ್ತಿರುವ ಬಿಜೆಪಿಗರು ಕಾನೂನು ಸುವ್ಯವಸ್ಥೆ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಇನ್ನು ಒಂದು ವರ್ಷ ಸರ್ಕಾರ ಏನೆಲ್ಲ ವೈಫಲ್ಯಗಳನ್ನು ಮಾಡಿದೆ ಎಂಬ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು, ಇದು ಸರ್ಕಾರದ ಸಾಧನೆ ಎಂದು ನೆಗೆಟಿವ್‌ ರೋಲ್‌ನಲ್ಲಿ ಬಿಂಬಿಸಲು ಮುಂದಾಗಿದೆ. ಬಿಜೆಪಿಯ “ಫೆಲ್ಯೂರ್ ಸರ್ಕಾರ” ಅಸ್ತ್ರಕ್ಕೆ ಪ್ರತಿಯಾಗಿ ಸಾಧನಾ ಸಮಾವೇಶ ಮಾಡಿ ಚೆಕ್‌ಮೇಟ್‌ ಕೊಡಲು ಕಾಂಗ್ರೆಸ್ ಪ್ಲ್ಯಾನ್‌ ಮಾಡಿಕೊಂಡಿದೆ.

VISTARANEWS.COM


on

1 year of CM Siddaramaiah government BJP prepares chargesheet and Congress gears up for counter
Koo

ಬೆಂಗಳೂರು: ದೇಶಾದ್ಯಂತ ಲೋಕಸಭಾ ಚುನಾವಣೆ (Lok Sabha Election 2024) ಕಾವು ಜೋರಾಗಿಯೇ ಇದೆ. ಈ ನಡುವೆ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ (Karnataka Congress Government) ಒಂದು ವರ್ಷ ಪೂರ್ಣವಾಗುತ್ತಿದೆ. ಮೇ 20ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್ ರೆಡಿ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಕೌಂಟರ್‌ ಕೊಡಲು ಸಿಎಂ ಮತ್ತವರ ಮಂತ್ರಿ ಮಂಡಲದ ಸದಸ್ಯರು ಪ್ಲ್ಯಾನ್‌ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಮುಗಿ ಬೀಳುತ್ತಿರುವ ಬಿಜೆಪಿಗರು ಕಾನೂನು ಸುವ್ಯವಸ್ಥೆ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಇನ್ನು ಒಂದು ವರ್ಷ ಸರ್ಕಾರ ಏನೆಲ್ಲ ವೈಫಲ್ಯಗಳನ್ನು ಮಾಡಿದೆ ಎಂಬ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು, ಇದು ಸರ್ಕಾರದ ಸಾಧನೆ ಎಂದು ನೆಗೆಟಿವ್‌ ರೋಲ್‌ನಲ್ಲಿ ಬಿಂಬಿಸಲು ಮುಂದಾಗಿದೆ.

ರಾಜ್ಯದಲ್ಲಿ ಎಂದೂ ಕಂಡರಿಯದ ಭೀಕರ ಬರಗಾಲ ಬಂದಿದೆ. ಆದರೆ, ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ರೈತರಿಗೆ ಪರಿಹಾರವನ್ನು ನೀಡಿಲ್ಲ. ರೈತರ ಬದುಕು ದುಸ್ತರವಾಗಿದೆ. ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರದ ಹಣವೂ ರೈತರಿಗೆ ತಲುಪುತ್ತಿಲ್ಲ. ಅದನ್ನು ಬ್ಯಾಂಕ್‌ಗಳು ಸಾಲಕ್ಕೆ ಬಳಸಿಕೊಳ್ಳುತ್ತಿವೆ. ಇನ್ನು ಸರ್ಕಾರವು ಒಂದು ವರ್ಷದಲ್ಲಿ ಹೊಸ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನೂ ಮಾಡಿಲ್ಲ.

ಇಷ್ಟಲ್ಲದೆ ಶಾಸಕರ ಪರಿಸ್ಥಿತಿ ಇನ್ನೂ ಕಷ್ಟಕರವಾಗಿದೆ. ಶಾಸಕರಿಗೆ ಅನುದಾನ ಕೊಡಲು ಹಣವಿಲ್ಲ. ರಾಜ್ಯದಲ್ಲಿ ಸರಣಿ ಕೊಲೆ, ಅತ್ಯಾಚಾರಗಳಾದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಅನುದಾನ ಕೊಡುತ್ತೇವೆ, ಕೊಡುತ್ತೇವೆ ಎಂದೇ ದಿನ ದೂಡುತ್ತಿದೆ ಎಂದು ಸ್ವಪಕ್ಷೀಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಜನರ ಮುಂದಿಡಲು ಬಿಜೆಪಿ ಮುಂದಾಗಿದೆ.

ಬುಕ್‌ ರಿಲೀಸ್‌ಗೆ ಬಿಜೆಪಿ ಸಿದ್ಧತೆ

ರಾಜ್ಯ ಸರ್ಕಾರದ ಮೇಲೆ ಮಾಡಲಾಗುವ ಎಲ್ಲ ಆರೋಪಗಳ ಪಟ್ಟಿಯನ್ನು ಒಂದು ಪುಸ್ತಕ ರೂಪದಲ್ಲಿ ತರಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇದನ್ನು ದೊಡ್ಡ ಮಟ್ಟದಲ್ಲಿ ಅಭಿಯಾನವನ್ನಾಗಿ ಕೈಗೊಳ್ಳಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸರ್ಕಾರದ ವಿರುದ್ಧ ಇದೇ ಇವರಿಗೆ ಪ್ರಮುಖ ಅಸ್ತ್ರವಾಗಿರಲಿದೆ.

ಕೌಂಟರ್‌ ಕೊಡಲು ಸಿದ್ದು ಪ್ಲ್ಯಾನ್‌ ಏನು?

ಇತ್ತ ಒಂದು ವರ್ಷ ಪೂರೈಸಿರುವ ಸಿದ್ದರಾಮಯ್ಯ ಸರ್ಕಾರದಿಂದ ಸಾಧನಾ ಸಮಾವೇಶ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ಈಗ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಫಲಿತಾಂಶದವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಜೂನ್ ಎರಡನೇ ವಾರದಲ್ಲಿ ಸಾಧನಾ ಸಮಾವೇಶ ಮಾಡಲು ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.

ಇದನ್ನೂ ಓದಿ: DK Shivakumar: ಉತ್ತರ ಪ್ರದೇಶದಲ್ಲಿ ಡಿಕೆಶಿ; ಅಮೇಥಿ, ರಾಯ್‌ ಬರೇಲಿಯಲ್ಲಿ ಮಾಡ್ತಾರಾ ಕಮಾಲ್?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಅಧಿಕ ಸ್ಥಾನ ಬಂದರೆ ಎರಡನ್ನೂ ಒಟ್ಟಿಗೆ ಸೇರಿ ಸಮಾವೇಶ ಮಾಡುವಂತೆ ಸಿಎಂ ಆಪ್ತರು ಸಲಹೆ ನೀಡಿದ್ದಾರೆನ್ನಲಾಗಿದೆ. ಈ ಸಮಾವೇಶ ಮಾಡುವ ಮೂಲಕ ಗ್ಯಾರಂಟಿ ಸರ್ಕಾರದ ಯಶಸ್ವಿ ನಾಗಾಲೋಟ ಮುಂದುವರಿಯುತ್ತದೆ ಎಂಬ ಸಂದೇಶವನ್ನು ರವಾನೆ ಮಾಡಲು ಚಿಂತನೆ ನಡೆಸಲಾಗಿದೆ. ಒಟ್ಟಾರೆಯಾಗಿ ಬಿಜೆಪಿಯ “ಫೆಲ್ಯೂರ್ ಸರ್ಕಾರ” ಅಸ್ತ್ರಕ್ಕೆ ಪ್ರತಿಯಾಗಿ ಸಾಧನಾ ಸಮಾವೇಶ ಮಾಡಿ ಚೆಕ್‌ಮೇಟ್‌ ಕೊಡಲು ಕಾಂಗ್ರೆಸ್ ಪ್ಲ್ಯಾನ್‌ ಮಾಡಿಕೊಂಡಿದೆ.

Continue Reading

ಕ್ರೈಂ

Anjali Murder Case: ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನಿಸಿದ ಅಂಜಲಿ ಹಂತಕ!

Anjali Murder Case: ಅರಸೀಕೆರೆ ನಿಲ್ದಾಣದಲ್ಲಿ ಜನರಲ್ ಬೋಗಿ ಹತ್ತಿಕೊಂಡ ಆರೋಪಿ‌ ಗಿರೀಶ್, ರೈಲು ಹತ್ತಿದ ನಂತರ ಸಂತ್ರಸ್ತೆಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದ. ಚಿಕ್ಕಜಾಜೂರಿನ ರೈಲು ನಿಲ್ದಾಣದಲ್ಲಿ ಮಹಿಳೆ ರೆಸ್ಟ್ ರೂಂಗೆ ಹೋದಾಗ ಆಕೆಯನ್ನು ಹಿಂಬಾಲಿಸಿದ್ದ. ರೆಸ್ಟ್ ರೂಂ‌ ಕಿಂಡಿಯಿಂದ ಗಮನಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳೆ, ನಿನಗೆ ಅಕ್ಕತಂಗಿಯರಿಲ್ವಾ ಎಂದು ದಬಾಯಿಸಿದ್ದರು. ಆಗ ಮಹಿಳೆಗೆ ಚಾಕು ತೋರಿಸಿ ಗಿರೀಶ್‌ ಚುಚ್ಚಲು ಮುಂದಾಗಿದ್ದ.

VISTARANEWS.COM


on

anjali murder case culprit girish
Koo

ದಾವಣಗೆರೆ: ಹುಬ್ಬಳ್ಳಿ ಬೆಂಡಿಗೇರಿಯ ಅಂಜಲಿ ಎಂಬ ಯುವತಿಯನ್ನು ಕೊಂದು (Anjali Murder Case) ತಲೆ ತಪ್ಪಿಸಿಕೊಂಡಿದ್ದ ಆರೋಪಿ ಗಿರೀಶ್‌, ರೈಲಿನಲ್ಲಿ ಮತ್ತೊಬ್ಬ ಮಹಿಳೆಯ ಕೊಲೆಗೆ (Murder attempt) ಯತ್ನಿಸಿದ್ದ ಎಂದು ಗೊತ್ತಾಗಿದೆ. ಕೊಲೆ ಯತ್ನಕ್ಕೆ (Hubli crime) ಒಳಗಾದ ಮಹಿಳೆ ಈ ಕುರಿತು ದಾವಣಗೆರೆಯಲ್ಲಿ ದೂರು (FIR) ನೀಡಿದ್ದಾರೆ.

ಅಂಜಲಿ‌ ಕೊಲೆ ಆರೋಪಿ‌ ಗಿರೀಶ್ ಮೇಲೆ ಮತ್ತೊಂದು ಎಫ್‌ಐಆರ್ ದಾವಣಗೆರೆ ರೈಲ್ವೇ ಪೊಲೀಸ್ ಠಾಣೆಯಲ್ಲಿ‌ ದಾಖಲಾಗಿದೆ. ಗದಗ ಮೂಲದ ಲಕ್ಷ್ಮೀ ಹಾಗೂ ಗಂಡ ಮಹಾಂತೇಶ್ ಸವಟೂರು ಪ್ರಕರಣ ದಾಖಲಿಸಿದ್ದಾರೆ. ತುಮಕೂರಿನಿಂದ ವಿಶ್ವಮಾನವ ಎಕ್ಸಪ್ರೆಸ್ ಟ್ರೈನ್‌ನಲ್ಲಿ ಪತಿ ಜೊತೆ ಇವರು ಪ್ರಯಾಣಿಸುತ್ತಿದ್ದರು. ಆಗ ಅಂಜಲಿ ಕೊಲೆ ಆರೋಪಿ ಗಿರೀಶ್ ಹಲ್ಲೆ ಮಾಡಿದ್ದ.

ಅರಸೀಕೆರೆ ನಿಲ್ದಾಣದಲ್ಲಿ ಜನರಲ್ ಬೋಗಿ ಹತ್ತಿಕೊಂಡ ಆರೋಪಿ‌ ಗಿರೀಶ್, ರೈಲು ಹತ್ತಿದ ನಂತರ ಸಂತ್ರಸ್ತೆಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದ. ಚಿಕ್ಕಜಾಜೂರಿನ ರೈಲು ನಿಲ್ದಾಣದಲ್ಲಿ ಮಹಿಳೆ ರೆಸ್ಟ್ ರೂಂಗೆ ಹೋದಾಗ ಆಕೆಯನ್ನು ಹಿಂಬಾಲಿಸಿದ್ದ. ರೆಸ್ಟ್ ರೂಂ‌ ಕಿಂಡಿಯಿಂದ ಗಮನಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳೆ, ನಿನಗೆ ಅಕ್ಕತಂಗಿಯರಿಲ್ವಾ ಎಂದು ದಬಾಯಿಸಿದ್ದರು. ಆಗ ಮಹಿಳೆಗೆ ಚಾಕು ತೋರಿಸಿ ಗಿರೀಶ್‌ ಚುಚ್ಚಲು ಮುಂದಾಗಿದ್ದ.

ಹೊಟ್ಟೆಗೆ ಚಾಕು ಚುಚ್ಚಲು ಬಂದಾಗ ಮಹಿಳೆ ಎಡಗೈ ಮುಂದಿಟ್ಟು ತಡೆದಿದ್ದರು. ನಂತರ ಪತಿಯನ್ನು ಕರೆದಿದ್ದರು. ಪ್ರಯಾಣಿಕರು ಬಂದು ಸುತ್ತುವರಿದಾಗ, ಚಲಿಸುತ್ತಿದ್ದ ರೈಲು ಗಾಡಿಯಿಂದಲೇ ಆಸಾಮಿ ಜಿಗಿದಿದ್ದಾನೆ. ಮಹಿಳೆಯ ಕೈಗೆ ಚುಚ್ಚಿದ ಗಾಯವಾಗಿದೆ. ನಂತರ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಸಂತ್ರಸ್ತೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗೆ‌ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮಾಯಕೊಂಡ ಬಳಿ ರೈಲಿನಿಂದ ಕೆಳಗೆ ಧುಮುಕಿದ್ದ ಗಿರೀಶ್‌ ಅಲಿಯಾಸ್‌ ವಿಶ್ವನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದರು. ಹಲ್ಲೆಗೊಳಗಾದ ಮಹಿಳೆಯನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾಧ್ಯಮಗಳಲ್ಲಿ ಬಂದಿದ್ದ ಗಿರೀಶ್‌ ಫೋಟೋ ನೋಡಿದ್ದ ರೈಲ್ವೆ ಪೊಲೀಸರು, ಕೊಲೆ ಆರೋಪಿಯನ್ನು ಗುರುತಿಸಿದ್ದರು. ಕೂಡಲೇ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಒಪ್ಪಿಸಿದ್ದರು.

ಎಲ್ಲಿದ್ದ ಗಿರೀಶ್?‌

ಆರೋಪಿ ಗಿರೀಶ್‌ ಮೈಸೂರಿನಲ್ಲಿ ಮಹಾರಾಜ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಆತ ನೀಡಿದ ಮಾಹಿತಿ ಪ್ರಕಾರ, ಗಿರೀಶ್ ಮತ್ತು ಅಂಜಲಿ ಪರಸ್ಪರ ಪ್ರೀತಿಸುತ್ತಿದ್ದರು. 15 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಒಂದು ವಾರದ ಮೊದಲು 2 ಸಾವಿರ ರೂ. ಹಣ ಕೇಳಿದ್ದಳು. ಗಿರೀಶ್‌ ಅದನ್ನು ಫೋನ್ ಪೇ ಮಾಡಿದ್ದ. ಆ ನಂತರ ಗಿರೀಶನ ನಂಬರ್ ಅನ್ನು ಅಂಜಲಿ ಬ್ಲಾಕ್ ಲಿಸ್ಟ್‌ಗೆ ಹಾಕಿದ್ದಳು. ಆತನ ಫೋನ್ ರೀಸಿವ್ ಮಾಡುತ್ತಿರಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಗಿರೀಶ್‌ ಮೈಸೂರನಿಂದ ಹುಬ್ಬಳ್ಳಿಗೆ ಬಂದು ನಸುಕಿನ ಜಾವ ಕೊಲೆ ಮಾಡಿದ್ದಾನೆ.

ಕೊಲೆ ನಂತರ ಹುಬ್ಬಳ್ಳಿ ಹೊಸ ಬಸ್ ಸ್ಟ್ಯಾಂಡ್‌ನಿಂದ ಬಸ್‌ ಹತ್ತಿ ಹಾವೇರಿಗೆ ಬಂದಿದ್ದ. ಹಾವೇರಿಯಿಂದ ಮೈಸೂರಿಗೆ ಟ್ರೈನ್ ಹತ್ತಿದ್ದ. ಮೈಸೂರಿನ ಮಹಾರಾಜ್ ಹೋಟೆಲ್‌ನಲ್ಲಿ ಮಲಗಿದ್ದ. ಆ ನಂತರ ಮೈಸೂರಿನಿಂದ ಹುಬ್ಬಳ್ಳಿಗೆ ಬರಲೆಂದು ವಾಪಸ್ ಬರುತ್ತಿದ್ದಾಗ ಟ್ರೈನ್‌ನಲ್ಲಿ ಸಾರ್ವಜನಿಕರೊಡನೆ ಕಿರಿಕ್ ಆಗಿ ಟ್ರೈನ್‌ನಿಂದ ಹಾರಿದ್ದ.

ಪೊಲೀಸರು ಹೇಳೋದೇನು?

“ಅಂಜಲಿ ಕೊಲೆ ಆರೋಪಿ ಪತ್ತೆಗಾಗಿ ಎಂಟು ತಂಡಗಳನ್ನು ನಾವು ರಚನೆ ಮಾಡಿದ್ದೆವು. ನಿನ್ನೆ ರೇಲ್ವೆ ಪೊಲೀಸರ ಸಹಾಯದಿಂದ ಆರೋಪಿ ಸಿಕ್ಕಿದ್ದಾನೆ. ಆರೋಪಿ ಗಿರೀಶ್‌ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ. ಬೆಳಗಿನ ಜಾವ 4.30ಗೆ ನಮ್ಮ ಕಸ್ಟಡಿಗೆ ದೊರೆತಿದ್ದಾನೆ. ಈತ ಮೈಸೂರಿನಿಂದ ಗೋವಾ, ಮಹಾರಾಷ್ಟ್ರ ಕಡೆ ಹೋಗಿ ತಲೆಮರೆಸಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದ. ಗಿರೀಶ್ ಮೇಲೆ ಬೈಕ್ ಕಳ್ಳತನ ವಿಚಾರದಲ್ಲಿಯೂ 4 ಪ್ರಕರಣಗಳು ದಾಖಲು ಆಗಿವೆ. ಅವನು ಹೇಳುವ ಪ್ರಕಾರ ಹುಡುಗಿ ಫೋನ್ ಬ್ಲಾಕ್ ಮಾಡಿದ್ದಳು. ನಾವು ಪ್ರೀತಿ ಮಾಡ್ತಿದ್ದೆವು ಎಂದು ಹೇಳಿದ್ದಾನೆ. ಪ್ರಜ್ಞೆ ಬಂದರ ನಂತರ ಪೂರ್ತಿ ಹೇಳಿಕೆ ಪಡೆದುಕೊಳ್ಳಲಾಗುವುದು” ಎಂದು ಪೋಲಿಸ್ ಕಮೀಷನರ್ ರೇಣುಕಾ ಸುಕುಮಾರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Anjali Murder Case: ಅಂಜಲಿ ಹಂತಕನಿಗೆ ಸಾರ್ವಜನಿಕರಿಂದ ಗೂಸಾ, ಬಂಧನ

Continue Reading
Advertisement
Prajwal Revanna Case Lawyer Devarajegowda sent to judicial custody End of police custody
ಕ್ರೈಂ23 mins ago

Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

RCB vs CSK
ಕ್ರೀಡೆ36 mins ago

RCB vs CSK: ನಾಳಿನ ಪಂದ್ಯಕ್ಕೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ಆರ್​ಸಿಬಿ ಆಟಗಾರರು; ವಿಡಿಯೊ ವೈರಲ್​

Kannada New Movie The judgement Trailer Out Kannada
ಸ್ಯಾಂಡಲ್ ವುಡ್38 mins ago

Kannada New Movie: ಕುತೂಹಲ ಮೂಡಿಸಿದೆ ರವಿಚಂದ್ರನ್ ಅಭಿನಯದ ‘ದ ಜಡ್ಜ್ ಮೆಂಟ್’ ಟ್ರೈಲರ್‌!

Crime News
ದೇಶ40 mins ago

ಶಾಲೆ ಸಮೀಪದ ಚರಂಡಿಯಲ್ಲಿ 4 ವರ್ಷದ ಮಗುವಿನ ಮೃತದೇಹ ಪತ್ತೆ; ಭುಗಿಲೆದ್ದ ಹಿಂಸಾಚಾರ

Bal Jeevan Bima
ಮನಿ ಗೈಡ್56 mins ago

Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

road Accident in Bengaluru mysore
ಬೆಂಗಳೂರು57 mins ago

Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

Swati Maliwal
ದೇಶ58 mins ago

Swati Maliwal: “ಪೀರಿಯೆಡ್ಸ್‌ ಆಗಿದೆ.. ಪ್ಲೀಸ್‌ ಬಿಟ್ಟು ಬಿಡು ಅಂದ್ರೂ ಕೇಳಲಿಲ್ಲ”-ಆಘಾತಕಾರಿ ಸಂಗತಿ ಬಿಚ್ಚಿಟ್ಟ ಸ್ವಾತಿ ಮಲಿವಾಲ್‌

Viral Video
ವೈರಲ್ ನ್ಯೂಸ್1 hour ago

Viral Video: ಅಳುತ್ತಾ ವಿದಾಯ ಹೇಳಿದ್ದೇಕೆ ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್?

1 year of CM Siddaramaiah government BJP prepares chargesheet and Congress gears up for counter
ರಾಜಕೀಯ1 hour ago

CM Siddaramaiah: ಸಿದ್ದರಾಮಯ್ಯ ಸರ್ಕಾರಕ್ಕೆ 1 ವರ್ಷ; ಚಾರ್ಜ್‌ಶೀಟ್‌ ರೆಡಿ ಮಾಡಿದ ಬಿಜೆಪಿ; ಕೌಂಟರ್‌ಗೆ ಕಾಂಗ್ರೆಸ್‌ ತಯಾರಿ

RCB vs CSK
ಕ್ರೀಡೆ1 hour ago

RCB vs CSK: ಆರ್​ಸಿಬಿ-ಚೆನ್ನೈ ಪಂದ್ಯಕ್ಕೆ ಮಳೆ ನಿಯಮ ಹೇಗಿದೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ8 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ22 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌