Winter Sleep: ಚಳಿಗಾಲದಲ್ಲಿ ನಿದ್ದೆ ಹೆಚ್ಚೇ? ಕಾರಣವಿದೆ! - Vistara News

ಆರೋಗ್ಯ

Winter Sleep: ಚಳಿಗಾಲದಲ್ಲಿ ನಿದ್ದೆ ಹೆಚ್ಚೇ? ಕಾರಣವಿದೆ!

ಚಳಿ ಹೆಚ್ಚಾದಷ್ಟೂ ಹೊದ್ದು ಮಲಗಿದರಾಯ್ತು ಎಂಬ ಭಾವ ತೀವ್ರವಾಗುತ್ತದೆ. ಚಳಿಗಾಲ ಕಳೆದು, ರಾತ್ರಿ ಕಿರಿದಾಗಿ, ಸೆಖೆ ಏರುತ್ತಿದ್ದಂತೆ ನಿದ್ದೆಯೂ ಕಡಿಮೆಯಾಗುತ್ತದೆ. ಹೀಗೇಕೆ? ಈ ಲೇಖನ ಓದಿ.

VISTARANEWS.COM


on

Winter Sleep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಳಿಗಾಲದ ರಾತ್ರಿಗಳು ದೀರ್ಘ; ನಿದ್ದೆ ಇನ್ನೂ ದೀರ್ಘ! ಬೆಳಗಾಗಿದ್ದು ಗೊತ್ತೇ ಆಗುವುದಿಲ್ಲ; ಗೊತ್ತಾದರೂ ಏಳಲು ಮನಸ್ಸಾಗುವುದಿಲ್ಲ. ನಸುಕಿಗೆ ಕಿರುಚುವ ಅಲಾರಾಂ ಗಡಿಯಾರ ಆ ಹೊತ್ತಿನ ಶತ್ರುವಿನಂತೆ ಭಾಸವಾಗುತ್ತದೆ. ಚಳಿ ಹೆಚ್ಚಾದಷ್ಟೂ ಹೊದ್ದು ಮಲಗಿದರಾಯ್ತು ಎಂಬ ಭಾವ ತೀವ್ರವಾಗುತ್ತದೆ. ಚಳಿಗಾಲ ಕಳೆದು, ರಾತ್ರಿ ಕಿರಿದಾಗಿ, ಸೆಖೆ ಏರುತ್ತಿದ್ದಂತೆ ನಿದ್ದೆಯೂ ಕಡಿಮೆಯಾಗುತ್ತದೆ. ಹೀಗೇಕೆ? ನಿಜಕ್ಕೂ ಹೀಗಾಗುವುದು ಹೌದೇ ಅಥವಾ ಇದು ನಮ್ಮ ಭ್ರಮೆಯೇ? ವಿಜ್ಞಾನಿಗಳ ಬಳಿ ಇದಕ್ಕೆ ಉತ್ತರವಿದೆ.

ಸೂರ್ಯನ ಬೆಳಕಿಗೆ ಮತ್ತು ದೇಹದೊಳಗಿನ ಜೈವಿಕ ಗಡಿಯಾರ ಅಥವಾ ಸರ್ಕಾಡಿಯನ್‌ ರಿದಂಗೆ ನೇರ ಸಂಬಂಧವಿದೆ. ಇದಕ್ಕೆ ತಕ್ಕಂತೆ ನಮ್ಮ ಚಟುವಟಿಕೆಗಳನ್ನು ನಾವು ಹೊಂದಿಸಿಕೊಳ್ಳುವುದು ಜಾಣತನ ಎನ್ನುತ್ತಾರೆ ಜರ್ಮನಿಯ ಹೆಡ್‌ವಿಗ್ಸ್‌ ಆಸ್ಪತ್ರೆಯ ಅಧ್ಯಯನಕಾರರು. ಹಾಗಾಗಿ ನಿದ್ದೆ ಹಾಳುಬೀಳಾದ ಇಂದಿನ ನಗರವಾಸಿಗಳಿಂದ ಹಿಡಿದು ಎಲ್ಲರಿಗೂ, ಚಳಿಗಾಲದಲ್ಲಿ ನಿದ್ದೆ ಸ್ವಲ್ಪ ಹೆಚ್ಚು. ಅದರಲ್ಲೂ ನಮಗೆ ಕನಸುಗಳನ್ನು ನೀಡುವ ಆರ್‌ಇಎಮ್‌ (rapid eye movement) ನಿದ್ದೆಯ ಅವಧಿ ಚಳಿಗಾಲದಲ್ಲಿ ದೀರ್ಘ, ಬೇಸಿಗೆಯಲ್ಲಿ ಕಡಿಮೆಯಂತೆ. ಹಾಗಾಗಿ ಋತುಮಾನಕ್ಕೂ ನಮ್ಮ ನಿದ್ದೆಗೂ ಸ್ಪಷ್ಟವಾದ ನಂಟಿದೆ.

Winter Sleep

ಈ ಅಧ್ಯಯನಕ್ಕಾಗಿ, ನಿದ್ದೆಯ ಸಮಸ್ಯೆಯಿರುವ 188 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಆದರೆ ಇವರಾರು ನಿದ್ದೆಗಾಗಿ ಔಷಧ ತೆಗೆದುಕೊಳ್ಳದವರಾಗಿದ್ದರು. ಅವರನ್ನು ಎಬ್ಬಿಸಲು ಯಾವುದೇ ಅಲರಾಂಗಳು ಇಲ್ಲದಂಥ, ಪ್ರಯೋಗಶಾಲೆಯಲ್ಲಿ ಅವರೆಲ್ಲರನ್ನೂ ಮಲಗಿಸಿ, ನಿದ್ದೆಯ ಪೂರ್ವಾಪರಗಳನ್ನು ಹಲವಾರು ತಿಂಗಳುಗಳವರೆಗೆ ಗಮನಿಸಲಾಗಿತ್ತು. ಬೇಸಿಗೆಗಿಂತಲೂ ಚಳಿಗಾಲದಲ್ಲಿ ಇವರ ನಿದ್ದೆಯ ಅವಧಿ ಸುಮಾರು ಒಂದು ತಾಸಿನಷ್ಟು ಹೆಚ್ಚಾಗಿತ್ತು. ಜೊತೆಗೆ, ಆರ್‌ಇಎಂ ನಿದ್ದೆಯ ಅವಧಿಯೂ ಅರ್ಧ ತಾಸಿನಷ್ಟು ಅಧಿಕವಾಗಿತ್ತು.

Winter Sleep

“ಋತುಮಾನದ ಬದಲಾವಣೆಯು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಮೇಲೆ ಸರ್ವತ್ರವಾಗಿ ಪರಿಣಾಮ ಬೀರುತ್ತದೆ. ಇದು ಸಹಜ. ಆದರೆ ಈ ಪರಿಣಾಮದಿಂದ ನಮ್ಮಲ್ಲಿ ಹೆಚ್ಚಿನ ಬದಲಾವಣೆ ಆಗದಂತೆ ನಾವು ನಿರ್ವಹಿಸಲು ಯತ್ನಿಸುತ್ತೇವೆ” ಎನ್ನುತ್ತಾರೆ ಅಧ್ಯಯನಕಾರರು. ಆದರೆ ಈ ಅಧ್ಯಯನವನ್ನು ನಿದ್ದೆಯ ಸಮಸ್ಯೆಯಿಲ್ಲದ, ಆರೋಗ್ಯವಂತ ಜನರ ಮೇಲೆ ನಡೆಸಿ, ಪರಿಣಾಮ ಒಂದೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವ ಅಗತ್ಯವಿದೆ.

ಕೆಲವು ಭೌಗೋಳಿಕ ಪ್ರದೇಶಗಳಲ್ಲಿ ಋತುಮಾನದ ಬದಲಾವಣೆಯೊಂದಿಗೆ, ದಿನ-ರಾತ್ರಿಯ ಅವಧಿಯಲ್ಲಿ ತೀವ್ರ ಬದಲಾವಣೆ ಉಂಟಾಗುತ್ತದೆ. ಬೇಸಿಗೆಯಲ್ಲಿ ರಾತ್ರಿ 9ಕ್ಕೆ ಕತ್ತಲಾಗಿ, ಬೆಳಗಿನ 5ಕ್ಕೇ ಸೂರ್ಯ ಮೂಡಿದರೆ, ಚಳಿಗಾಲದಲ್ಲಿ ಸಿಕ್ಕಾಪಟ್ಟೆ ಹಿಮ ಸುರಿದು, ಸಂಜೆ ೪ಕ್ಕೆ ಕತ್ತಲಾಗಿ ಬೆಳಗಿನ 7ಕ್ಕೆ ರವಿ ಬರುವಂಥ ಪ್ರದೇಶಗಳಿವೆ. ಇಂಥ ಸ್ಥಳಗಳಲ್ಲಿ ಋತುಮಾನಕ್ಕೆ ತಕ್ಕಂತೆ ದಿನ-ರಾತ್ರಿಯನ್ನು ಮತ್ತು ನಿದ್ದೆಯನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಸುಲಭದ್ದಲ್ಲ.

ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Covishield Vaccine: ಕೋವಿಶೀಲ್ಡ್ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ, ಕೂಲ್‌ ಡ್ರಿಂಕ್ಸ್‌ ಸೇವಿಸಬಾರದು: ತಪ್ಪು ಮಾಹಿತಿ ಕೊಟ್ಟ ಕಾಲೇಜುಗಳಿಗೆ ನೋಟಿಸ್

Covishield Vaccine: ಕೋವಿಶೀಲ್ಡ್ ಲಸಿಕೆ ಅಡ್ಡಪಾರಿಣಾಮಗಳ ಸಂಬಂಧ ಸೂಚನಾ ಪತ್ರ ಹೊರಡಿಸಿ ಎಡವಟ್ಟು ಮಾಡಿಕೊಂಡಿದ್ದ ಚಿಕ್ಕಬಳ್ಳಾಪುರದ ಹಲವು ಕಾಲೇಜು ಆಡಳಿತ ಮಂಡಳಿಗಳ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.

VISTARANEWS.COM


on

Covishield Vaccine
Koo

ಚಿಕ್ಕಬಳ್ಳಾಪುರ: ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ದಿಢೀರ್‌ ಹೃದಯಾಘಾತ, ರಕ್ತ ಹೆಪ್ಪುಗಟ್ಟುವುದು ಸೇರಿ ಹಲವು ರೀತಿಯ ಅಡ್ಡಪರಿಣಾಮಗಳು ಉಂಟಾಗಲಿವೆ ಎಂಬ ಸುದ್ದಿಗಳು ವರದಿಯಾದ ಹಿನ್ನೆಲೆಯಲ್ಲಿ ಲಸಿಕೆ ಪಡೆದವರಲ್ಲಿ ಆತಂಕ ಮೂಡಿದೆ. ಈ ನಡುವೆ ಕೋವಿಶೀಲ್ಡ್ ಲಸಿಕೆ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ ಹಾಗೂ ತಂಪು ಪಾನೀಯ ಸೇವನೆ ಮಾಡದಂತೆ ಹಲವು ಕಾಲೇಜು ಆಡಳಿತ ಮಂಡಳಿಗಳು ಸೂಚನಾ ಪತ್ರದ ಮೂಲಕ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದವು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ, ತಪ್ಪು ಮಾಹಿತಿ ನೀಡಿದ ನಗರದ ವಿವಿಧ ಕಾಲೇಜುಗಳ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.

ನಗರದ ಸಿದ್ದರಾಮಯ್ಯ ಲಾ ಕಾಲೇಜು ಹಾಗೂ ಜಚನಿ ಪ್ರಥಮ ದರ್ಜೆ ಕಾಲೇಜುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಿಂದ ನೋಟಿಸ್ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ದಿಢೀರ್ ಹೃದಯಾಘಾತ, ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಸೂಚನೆ ಪ್ರಕಾರ ಈ ಲಸಿಕೆ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ ಹಾಗೂ ತಂಪು ಪಾನೀಯಗಳು ಸೇವನೆ ಮಾಡಬಾರದು ಎಂದು ಕಾಲೇಜು ಆಡಳಿತ ಮಂಡಳಿಗಳು ಸೂಚನಾ ಪತ್ರ ಹೊರಡಿಸಿದ್ದವು.

ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಲೇಜುಗಳ ಸೂಚನಾ ಪತ್ರಗಳು ವೈರಲ್‌ ಆಗಿದ್ದರಿಂದ ತಕ್ಷಣ ಎಚ್ಚೆತ್ತ ಜಿಲ್ಲಾಡಳಿತ, ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಸೂಚನಾ ಪತ್ರಗಳ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ಜಿಲ್ಲಾಧಿಕಾರಿ ನೇತೃತ್ವದ ಡಿಜಾಸ್ಟರ್ ಮ್ಯಾನೇಜ್ಮೆಂಟ್ ಕಮಿಟಿಯಿಂದ ಕಾಲೇಜುಗಳಿಗೆ ನೋಟಿಸ್‌ ನೀಡಲಾಗಿದೆ.

ಇದನ್ನೂ ಓದಿ | Covishield vaccine: ಕೋವಿಶೀಲ್ಡ್‌ ‌ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್‌ ವೈರಲ್‌!

ಆರೋಗ್ಯ ಇಲಾಖೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ

ಕೋವಿಶೀಲ್ಡ್‌ ಲಸಿಕೆ ಪಡೆದವರು ಫ್ರಿಡ್ಜ್‌ನಲ್ಲಿಟ್ಟ ನೀರು, ತಂಪು ಪಾನೀಯಗಳು ಹಾಗೂ ಐಸ್‌ಕ್ರೀಂ ಸೇವಿಸಬಾರದು ಎಂಬ ಕಾಲೇಜು ಆಡಳಿತ ಮಂಡಳಿಗಳ ಸೂಚನಾ ಪತ್ರ ವೈರಲ್‌ ಆಗಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿತ್ತು. ಹೀಗಾಗಿ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮಗಳ ಬಗ್ಗೆ ಇಲಾಖೆಯಿಂದ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ತಿಳಿಸಿದೆ.

ರಕ್ಷಿತ್‌ ಗಣಪತಿ ಎಂಬುವವರು, ಎಕ್ಸ್‌ ಖಾತೆಯಲ್ಲಿ ಚಿಕ್ಕಬಳ್ಳಾಪುರದ ಸಿದ್ದರಾಮಯ್ಯ ಲಾ ಕಾಲೇಜಿನ ಸೂಚನಾ ಪತ್ರ ಹಾಕಿ, “ಇದು ನಿಜವೇ? ಈ ಪತ್ರ ನೆನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ, ದಯವಿಟ್ಟು ಸ್ಪಷ್ಟನೆ ನೀಡಿ ಎಂದು ಕೋರಿ, ಸಿಎಂ ಸಿದ್ದರಾಮಯ್ಯ, ಆರೋಗ್ಯ ಇಲಾಖೆಗೆ ಟ್ಯಾಗ್‌ ಮಾಡಿದ್ದರು. ಇದಕ್ಕೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

Continue Reading

ಆರೋಗ್ಯ

Health Tips Kannada: ಕೊಲೆಸ್ಟ್ರಾಲ್‌ ತಗ್ಗಿಸಲು ಈ ಬೆಳಗಿನ ಪೇಯಗಳಿಂದ ಸಾಧ್ಯ! ಪ್ರಯತ್ನಿಸಿ

ಆಹಾರದ ಬದಲಾವಣೆಗಳಿಂದ ಕೊಲೆಸ್ಟ್ರಾಲ್‌ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ನಾರು ಹೆಚ್ಚಿರುವ ಆಹಾರಗಳು, ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವುಳ್ಳವು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳಿಂದ ಈ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸ್ವಾಸ್ಥ್ಯ ಪರಿಣಿತರು. ಎಂಥಾ ಆಹಾರಗಳವು? ಈ (Health Tips Kannada) ಲೇಖನ ಓದಿ.

VISTARANEWS.COM


on

Health Tips Kannada
Koo

ಜೀವನಶೈಲಿಯ ದೋಷಗಳಿಂದಾಗಿ ಹಲವಾರು ರೋಗಗಳು ನಮಗೆ ಗಂಟಿಕ್ಕಿಕೊಳ್ಳುತ್ತಿವೆ. ಆಹಾರ ಕ್ರಮದಲ್ಲಿನ ದೋಷ ಮತ್ತು ವ್ಯಾಯಾಮ ಇಲ್ಲದಿರುವಂಥ ಕಾರಣದಿಂದ ದೇಹದಲ್ಲಿ ಜಮೆಯಾಗುವ ಕೊಬ್ಬು ಹೆಚ್ಚುತ್ತಿದೆ. ನಮ್ಮ ಶರೀರ ಚೆನ್ನಾಗಿ ಕೆಲಸ ಮಾಡಲು ಸಣ್ಣ ಪ್ರಮಾಣದಲ್ಲಿ ಕೊಲೆಸ್ಟ್ರಾಲ್‌ ಅಗತ್ಯವಿದೆ. ಅದು ನಮಗೆ ನಿತ್ಯದ ಆಹಾರದಿಂದಲೇ ದೊರೆಯುತ್ತದೆ. ಆದರೆ ಅತಿಯಾದ ಕೊಬ್ಬಿನ ಆಹಾರದ ಸೇವನೆ, ಸಂಸ್ಕರಿತ ಸಕ್ಕರೆಯ ಮೇಲಿನ ನಮ್ಮ ಪ್ರೀತಿಯಿಂದಾಗಿ ಶರೀರದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಹೃದಯದ ತೊಂದರೆ ಮತ್ತು ಪಾರ್ಶ್ವವಾಯುವಿನಂಥ ಮಾರಣಾಂತಿಕ ಸಮಸ್ಯೆಗಳು ಗಂಟಿಕ್ಕಿಕೊಳ್ಳಬಹುದು. ಇದಕ್ಕಾಗಿ ವೈದ್ಯರು ಸೂಚಿಸುವ ಔಷಧಿ ಮತ್ತು ವ್ಯಾಯಾಮ ಕಡ್ಡಾಯವಾಗಿ ಬೇಕಾಗುತ್ತದೆ. ಇದಲ್ಲದೆ, ಇನ್ನೂ ಕೆಲವು ಆಹಾರದ ಬದಲಾವಣೆಗಳಿಂದ ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ನಾರು ಹೆಚ್ಚಿರುವ ಆಹಾರಗಳು, ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣವುಳ್ಳವು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳಿಂದ ಈ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸ್ವಾಸ್ಥ್ಯ ಪರಿಣಿತರು. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಾವು ದೇಹಕ್ಕೆ ನೀಡುವಂಥ ಆಹಾರಗಳು ಹಲವು ರೀತಿಯಲ್ಲಿ ಮಹತ್ವವನ್ನು ಪಡೆದಿವೆ. ಅದರಲ್ಲೂ ಬೆಳಗಿನ ಪೇಯಗಳು ಕೊಲೆಸ್ಟ್ರಾಲ್‌ ಕಡಿತ ಮಾಡುವುದಕ್ಕೆ ಸೂಕ್ತವಾದಂಥವು. ಎಂಥ ಪೇಯಗಳನ್ನು ಬೆಳಗಿನ ಹೊತ್ತು ದೇಹಕ್ಕೆ ನೀಡಿದರೆ (Health Tips Kannada) ಸೂಕ್ತ?

Green tea

ಗ್ರೀನ್‌ ಟೀ

ಹಲವು ರೀತಿಯ ಉತ್ತಮ ಪಾಲಿಫೆನಾಲ್‌ಗಳನ್ನು ಹೊಂದಿರುವ ಗ್ರೀನ್‌ ಟೀ, ಉತ್ಕರ್ಷಣ ನಿರೋಧಕಗಳ ಖಜಾನೆಯಂತಿದೆ. ಅದರಲ್ಲೂ ಗ್ರೀನ್‌ ಟೀದಲ್ಲಿರುವ ಕೆಟಿಚಿನ್‌ ಅಂಶಗಳು ಕೊಲೆಸ್ಟ್ರಾಲ್‌ಗಳ ಜೊತೆ ಕೆಲಸ ಮಾಡುತ್ತವೆ. ಇದರಿಂದ ಆಹಾರದಲ್ಲಿನ ಕೊಲೆಸ್ಟ್ರಾಲ್‌ ಅಂಶವನ್ನು ದೇಹ ಹೀರಿಕೊಳ್ಳುವುದನ್ನು ಕಡಿಮೆ ಮಾಡಲು ಸಾಧ್ಯವಿದೆ. ಹಾಗಾಗಿ ನಿಯಮಿತವಾಗಿ ಗ್ರೀನ್‌ ಟೀ ಕುಡಿಯುವುದರಿಂದ ದೇಹದಲ್ಲಿ ಎಲ್‌ಡಿಎಲ್‌ ಮತ್ತು ಒಟ್ಟಾರೆ ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.

Chia seeds and soy milk

ಚಿಯಾ ಬೀಜ ಮತ್ತು ಸೋಯ್‌ ಹಾಲು

ಈ ಮಿಶ್ರಣ ಕೊಲೆಸ್ಟ್ರಾಲ್‌ ನಿರ್ವಹಣೆಯಲ್ಲಿ ಸಾಕಷ್ಟು ದಕ್ಷತೆಯನ್ನು ಪ್ರದರ್ಶಿಸಿದೆ. ನಾರು, ಪ್ರೊಟೀನ್‌ ಮತ್ತು ಒಮೇಗಾ ೩ ಕೊಬ್ಬಿನಾಮ್ಲಗಳ ಜೊತೆಗೆ ಹಲವು ಸೂಕ್ಷ್ಮ ಸತ್ವಗಳು ಇದರಿಂದ ದೇಹ ಸೇರುತ್ತವೆ. ದೇಹದಲ್ಲಿ ಎಚ್‌ಡಿಎಲ್‌ ಅಥವಾ ಉತ್ತಮ ಕೊಬ್ಬನ್ನು ಹೆಚ್ಚಿಸುವ ಸಾಧ್ಯತೆ ಚಿಯಾ ಬೀಜಗಳಿಗಿದೆ. ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಕ್ಷಮತೆ ಸೋಯಾ ಹಾಲಿಗಿದೆ. ಹಾಗಾಗಿ ಈ ಮಿಶ್ರಣವನ್ನೂ ಬೆಳಗಿನ ಪೇಯವಾಗಿ ಉಪಯೋಗಿಸಬಹುದು.

Beetroot and carrot juice

ಬೀಟ್‌ರೂಟ್‌ ಮತ್ತು ಕ್ಯಾರೆಟ್‌ ರಸ

ಹೆಚ್ಚಿನ ನೈಟ್ರೇಟ್‌ ಅಂಶವಿರುವ ಬೀಟ್‌ರೂಟ್‌ ರಸ ಕೊಲೆಸ್ಟ್ರಾಲ್‌ ತಗ್ಗಿಸುವ ಸಾಧ್ಯತೆಯನ್ನು ಹೊಂದಿದೆ. ಇನ್ನು, ಬೀಟಾ ಕ್ಯಾರೋಟಿನ್‌ನಂಥ ಕೆರೋಟಿನಾಯ್ಡ್‌ಗಳನ್ನು ಹೊಂದಿರುವ ಕ್ಯಾರೆಟ್‌ ಸಹ ಕೊಲೆಸ್ಟ್ರಾಲ್‌ ಹೀರಿಕೊಳ್ಳುವುದನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಿದ್ದು, ಪೂರಕ ಪರಿಣಾಮವನ್ನು ದಾಖಲಿಸಿವೆ.

Ginger, lemon juice

ಶುಂಠಿ, ನಿಂಬೆ ರಸ

ಬೆಳಗಿನ ಹೊತ್ತು ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆ ರಸ ಮತ್ತು ಅರ್ಧ ಚಮಚ ಶುಂಠಿ ರಸ ಸೇರಿಸಿ ಕುಡಿಯುವುದು ಸಹ ಉತ್ತಮ ಪರಿಣಾಮಗಳನ್ನ ತೋರಿಸಬಲ್ಲದು. ಉತ್ಕರ್ಷಣ ನಿರೋಧಕಗಳನ್ನು ನಿಂಬೆ ರಸ ದೇಹಕ್ಕೆ ನೀಡಿದರೆ, ಟ್ರೈಗ್ಲಸರೈಡ್‌ ಮತ್ತು ಎಲ್‌ಡಿಎಲ್‌ ತಗ್ಗಿಸುವ ಗುಣವನ್ನು ಶುಂಠಿ ಹೊಂದಿದೆ. ಜೊತೆಗೆ, ಬೆಳಗಿನ ಹೊತ್ತು ಚೈತನ್ಯವನ್ನು ನೀಡಿ, ವ್ಯಾಯಾಮ ಮಾಡುವ ಉತ್ಸಾಹವನ್ನೂ ಹೆಚ್ಚಿಸುತ್ತದೆ ಈ ಪೇಯ.

Tomato juice

ಟೊಮೇಟೊ ರಸ

ಟೊಮೆಟೊದ ಕೆಂಪು ಬಣ್ಣಕ್ಕೆ ಕಾರಣವಾಗುವುದು ಅದರಲ್ಲಿರುವ ಲೈಕೊಪೇನ್‌ ಅಂಶ. ಇದು ಎಲ್‌ಡಿಎಲ್‌ ಕಡಿಮೆ ಮಾಡುವ ಗುಣವನ್ನು ಢಾಳಾಗಿ ತೋರಿಸಿದೆ. ಅಧ್ಯಯನಗಳ ಪ್ರಕಾರ, ಅತಿ ಹೆಚ್ಚು ಪ್ರಮಾಣದ ಲೈಕೊಪೇನ್‌ ಅಂಶವು (ದಿನಕ್ಕೆ 25 ಎಂಜಿಗಿಂತ ಹೆಚ್ಚು), ಕಡಿಮೆ ತೀವ್ರತೆಯ ಸ್ಟ್ಯಾಟಿನ್‌ಗಳು (ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಔಷಧಿಗಳು) ಬೀರುವ ಪರಿಣಾಮವನ್ನೇ ತೋರುತ್ತವೆ.

Turmeric and soy milk

ಅರಿಶಿನ ಮತ್ತು ಸೋಯ್‌ ಹಾಲು

ಸೋಯ್‌ ಹಾಲಿನಲ್ಲಿ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಇನ್ನು ಅರಿಶಿನದಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಎಲ್‌ಡಿಎಲ್‌ ಮತ್ತು ಟ್ರೈಗ್ಲಿಸರೈಡ್‌ಗಳನ್ನು ತಗ್ಗಿಸುವ ಗುಣವನ್ನು ತೋರಿಸಿದೆ. ಹಾಗಾಗಿ ಪ್ರಾಣಿಜನ್ಯ ಹಾಲಿಗೆ ಅರಿಶಿನ ಸೇರಿಸುವ ಬದಲು, ಸೋಯಾ ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು ಕೊಲೆಸ್ಟ್ರಾಲ್‌ ತಗ್ಗಿಸುವುದಕ್ಕೆ ಒಳ್ಳೆಯ ಉಪಾಯ.

ಇದನ್ನೂ ಓದಿ: Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

Continue Reading

ಆರೋಗ್ಯ

Health Tips Kannada: ಕಣ್ಣಿನ ಕೆಳಗೆ ಕಪ್ಪಾಗಿದೆಯೇ? ಇಲ್ಲಿದೆ ಸರಳ ಮನೆಮದ್ದು

ಕಣ್ಣಿನ ಕೆಳಭಾಗದಲ್ಲಿ ಕಾಣುವ ಗಾಢಬಣ್ಣದ ವರ್ತುಲಗಳು ಇಡೀ ಮುಖಕ್ಕೆ ವಯಸ್ಸಾದ, ಸುಸ್ತಾದ ಮತ್ತು ನಿದ್ದೆಗೆಟ್ಟ ಕಳೆಯನ್ನು ನೀಡುವುದಂತೂ ಹೌದು. ಅದೇನು ಗಂಭೀರವಾದ ಆರೋಗ್ಯ ಸಮಸ್ಯೆಯ ಲಕ್ಷಣ ಅಲ್ಲದಿದ್ದರೂ, ಇದನ್ನು ಸರಿ ಮಾಡುವುದು ಹೇಗೆಂಬ ಪ್ರಶ್ನೆ ಮೂಡುವುದಂತೂ ಹೌದು. ಈ ಕುರಿತು (Health Tips Kannada) ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Health Tips Kannada
Koo

ಅಂದದ ಮೊಗಕ್ಕೆ ಕಣ್ಣೇ ಭೂಷಣ ಎಂದು ಹಾಡಿದವರಿದ್ದಾರೆ. ಅಂಥ ಸುಂದರ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಕಾಣಿಸಿಕೊಂಡರೆ… ಅದೇ ದೋಷ ಎನಿಸಿಬಿಡುತ್ತದೆ. ಜೊತೆಗೆ, ಆರೋಗ್ಯದ ಬಗ್ಗೆಯೂ ಪ್ರಶ್ನೆಗಳು ಏಳುತ್ತವೇ? ಸಾಕಷ್ಟು ನಿದ್ದೆ ಮಾಡಿ, ಚೆನ್ನಾಗಿ ನೀರು ಕುಡೀರಿ, ಸೊಪ್ಪು ತಿನ್ನಿ ಎಂದೆಲ್ಲಾ ಆರೋಗ್ಯ ಸಲಹೆಗಳು ಕೇಳಿ ಬಂದರೆ ಸಹಜವೇ. ಕಣ್ಣಿನ ಕೆಳಭಾಗದಲ್ಲಿ ಕಾಣುವ ಗಾಢಬಣ್ಣದ ವರ್ತುಲಗಳು ಇಡೀ ಮುಖಕ್ಕೆ ವಯಸ್ಸಾದ, ಸುಸ್ತಾದ ಮತ್ತು ನಿದ್ದೆಗೆಟ್ಟ ಕಳೆಯನ್ನು ನೀಡುವುದಂತೂ ಹೌದು. ಅದೇನು ಗಂಭೀರವಾದ ಆರೋಗ್ಯ ಸಮಸ್ಯೆಯ ಲಕ್ಷಣ ಅಲ್ಲದಿದ್ದರೂ, ಇದನ್ನು ಸರಿ ಮಾಡುವುದು ಹೇಗೆಂಬ (Health Tips Kannada) ಪ್ರಶ್ನೆ ಮೂಡುವುದಂತೂ ಹೌದು.

dark circles

ಇದು ಬರುವುದೇಕೆ?

ಕೆಲವರಿಗೆ ಆನುವಂಶಿಕವಾಗಿ ಈ ಲಕ್ಷಣಗಳು ಬರಬಹುದು. ಕುಟುಂಬದ ಹತ್ತಿರದ ರಕ್ತ ಸಂಬಂಧಿಗಳಲ್ಲಿ ಈ ತೊಂದರೆಯಿದ್ದರೆ, ಅದು ವರ್ಗಾವಣೆಗೊಂಡಿರಬಹುದು. ನಿದ್ದೆ ಸಾಕಾಗದಿದ್ದರೆ, ನಿದ್ರಿಸುವ ಸಮಯ ಅನಿಯಮಿತವಾಗಿದ್ದರೆ, ಕಪ್ಪು ವರ್ತುಲಗಳು ಬರುತ್ತವೆ. ಕಣ್ಣಿನ ಕೆಳಗಿನ ಭಾಗದ ಚರ್ಮ ಅತಿ ಸೂಕ್ಷ್ಮವಾದ್ದರಿಂದ ಈ ಭಾಗದಲ್ಲಿನ ರಕ್ತನಾಳಗಳ ಚಟುವಟಿಕೆ ಢಾಳಾಗಿ ಕಾಣುತ್ತದೆ. ಪಿಗ್ಮೆಂಟೇಶನ್‌ ಸಹ ಎದ್ದು ಕಾಣುವಂತಾಗುತ್ತದೆ. ವಯಸ್ಸು ಹೆಚ್ಚಿದಂತೆ. ಕೊಲಾಜಿನ್‌ ಕಡಿಮೆಯಾಗಿ ಚರ್ಮದ ಬಿಗಿ ನೈಸರ್ಗಿಜವಾಗಿಯೇ ಕಡಿಮೆಯಾಗುತ್ತದೆ. ಇದರಿಂದ ಕಣ್ಣಿನ ಕೆಳಗೆ ಚರ್ಮ ಜೋತಾಡಬಹುದು; ಮತ್ತೂ ಕಪ್ಪಾಗಿ ಕಾಣಬಹುದು. ಇದನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳು ನೆರವಾಗುತ್ತವೆ.

Cold compress

ತಣ್ಣನೆಯ ಕಂಪ್ರೆಸ್‌

ತಂಪಾದ ನೀರಲ್ಲಿ ಅದ್ದಿದ ಬಟ್ಟೆ, ಫ್ರಿಜ್‌ನಲ್ಲಿ ಕೆಲಕಾಲ ಇರಿಸಿದ ತೇವದ ಟೀ ಬ್ಯಾಗ್‌ ಮುಂತಾದವುಗಳನ್ನು ಕಣ್ಣಿನ ಮೇಲೆ 10-15 ನಿಮಿಷ ಇರಿಸಿಕೊಳ್ಳಿ. ಅದರಲ್ಲೂ ಗ್ರೀ ಟೀ ಅಥವಾ ಕ್ಯಾಮೊಮೈಲ್‌ ಟೀ ಹೆಚ್ಚು ಉಪಯುಕ್ತ. ಇದರಿಂದ ಈ ಭಾಗದಲ್ಲಿ ಉಬ್ಬಿದಂತೆ ಕಾಣುವ ರಕ್ತನಾಳಗಳು ಸಂಕೋಚಗೊಳ್ಳುತ್ತವೆ. ಇದರಿಂದ ಕಣ್ಣಿನ ಕೆಳಗಿನ ಭಾಗ ಉಬ್ಬಿದಂತಾಗಿ ಕಪ್ಪಾಗಿದ್ದರೆ ಕಡಿಮೆಯಾಗುತ್ತದೆ.

Nutrient Rich Cucumber Benefits

ಸೌತೇಕಾಯಿ

ತಂಪಾದ ಸೌತೇಕಾಯಿಯ ಗಾಲಿಯಂಥ ತುಂಡನ್ನು ಕಣ್ಣುಗಳ ಮೇಲಿರಿಸಿ 20 ನಿಮಿಷ ಬಿಡಿ. ಇದನ್ನು ದಿನವೂ ಮಾಡಬಹುದು. ಇದರಿಂದ ಕಣ್ಣಿನ ಕೆಳಗೆ ಉಬ್ಬಿದ್ದರೆ ಕಡಿಮೆಯಾಗಿ, ಗಾಢಬಣ್ಣವೂ ತಿಳಿಯಾಗುತ್ತದೆ. ಜೊತೆಗೆ ಕಣ್ಣನ್ನು ತಂಪಾಗಿಸಿ, ದೃಷ್ಟಿಗೂ ಅನುಕೂಲ ಒದಗಿಸುತ್ತದೆ.

Nutrient-Rich Potato Benefits

ಆಲೂಗಡ್ಡೆ

ಸೌತೇಕಾಯಿಯಂತೆ, ಆಲೂಗಡ್ಡೆಗೂ ನೈಸರ್ಗಿಕವಾದ ಬ್ಲೀಚಿಂಗ್‌ ಗುಣವಿದೆ. ಹಾಗಾಗಿ ಕಪ್ಪಾದ ಚರ್ಮವನ್ನು ನಿಧಾನಕ್ಕೆ ತಿಳಿಯಾಗಿಸುತ್ತದೆ. ಫ್ರಿಜ್‌ನಲ್ಲಿಟ್ಟ ಆಲೂಗಡ್ಡೆಯನ್ನು ತುರಿದು ರಸ ತೆಗೆಯಿರಿ, ಈ ತಂಪಾದ ರಸದಲ್ಲಿ ಸ್ವಚ್ಛ ಹತ್ತಿಯ ಬಟ್ಟೆಯನ್ನು ಅದ್ದಿ ಕಣ್ಣುಗಳ ಕೆಳಗಿರಿಸಿಕೊಳ್ಳಿ. 15 ನಿಮಿಷಗಳ ನಂತರ ತಂಪಾದ ನೀರಲ್ಲಿ ತೊಳೆಯಿರಿ.

Tomato juice

ಟೊಮಾಟೊ ರಸ

ಇದೂ ಸಹ ಗಾಢ ಬಣ್ಣವನ್ನು ತಿಳಿಯಾಗಿಸಬಲ್ಲ ಗುಣವನ್ನು ಹೊಂದಿದೆ. ಟೊಮಾಟೊ ರಸ ತೆಗೆದು, ಕೆಲವು ಹನಿ ನಿಂಬೆರಸ ಸೇರಿಸಿ. ಇದರಲ್ಲಿ ಸ್ವಚ್ಛ ವಸ್ತ್ರವನ್ನು ಅದ್ದಿ, ಕಣ್ಣುಗಳ ಕೆಳಗಿರಿಸಿಕೊಳ್ಳಿ. ೧೦ ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.

Almond Oil

ಬಾದಾಮಿ ಎಣ್ಣೆ

ವಿಟಮಿನ್‌ ಇ ಹೇರಳವಾಗಿದೆ ಬಾದಾಮಿ ತೈಲದಲ್ಲಿ. ರಾತ್ರಿ ಮಲಗುವ ಮುನ್ನ, ಇದರ ಕೆಲವು ಹನಿಗಳನ್ನು ಕಣ್ಣ ಕೆಳಭಾಗದಲ್ಲಿ ಲಘುವಾಗಿ ಹಚ್ಚಿ ಮಸಾಜ್‌ ಮಾಡಿ. ರಾತ್ರಿಡೀ ಇದನ್ನು ಹಾಗೆಯೇ ಬಿಡಿ. ಹಚ್ಚಿದ ಎಣ್ಣೆ ಅತಿಯಾದರೆ ಕಣ್ಣುರಿ ಬಂದೀತು. ಹಾಗಾಗಿ ಸ್ವಲ್ಪವೇ ಹಚ್ಚಿ.

ರೋಸ್‌ ವಾಟರ್‌

ಗುಲಾಬಿ ಜಲ

ಹತ್ತಿಯ ಪ್ಯಾಡ್‌ಗಳಲ್ಲಿ ತಂಪಾದ ಗುಲಾಬಿ ಜಲದಲ್ಲಿ ಅದ್ದಿ, ಮುಚ್ಚಿದ ಕಣ್ಣುಗಳ ಮೇಲೆ ಇರಿಸಿಕೊಳ್ಳಿ. ಸೌತೇಕಾಯಿಯಂಥದ್ದೇ ಪರಿಣಾಮಗಳನ್ನು ಗುಲಾಬಿ ಜಲವೂ ನೀಡಬಲ್ಲದು. ೧೫ ನಿಮಿಷಗಳ ನಂತರ ತಂಪಾದ ನೀರಲ್ಲಿ ತೊಳೆಯಿರಿ.

Aloe Vera Home Remedies For Stretch Marks

ಲೋಳೆಸರ

ಇದರ ತಂಪಾದ ತಾಜಾ ಜೆಲ್‌ ತೆಗೆಯಿರಿ. ಅದನ್ನು ಕಣ್ಣಿನ ಕೆಳಭಾಗದಲ್ಲಿ ಇರಿಸಿಕೊಂಡು 20 ನಿಮಿಷ ಬಿಡಿ. ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಬಿಗಿಯಾಗಿಸಿ, ತೇವವನ್ನು ಹಿಡಿದಿಡುತ್ತದೆ. ಜೊತೆಗೆ ಕಣ್ಣಿನ ಕೆಳಭಾಗದ ಕಪ್ಪು ಚರ್ಮವನ್ನು ತಿಳಿಯಾಗಿಸುತ್ತದೆ. ಇವೆಲ್ಲವುಗಳ ಜೊತೆಗೆ, ದೇಹಕ್ಕೆ ಚೆನ್ನಾಗಿ ನೀರು ಬೇಕು. ಋತುಮಾನದ ಸೊಪ್ಪು-ತರಕಾರಿ-ಹಣ್ಣುಗಳು ಬೇಕು. ಕಣ್ತುಂಬಾ ನಿದ್ದೆಯಂತೂ ಕಡ್ಡಾಯ.

ಇದನ್ನೂ ಓದಿ: Aloe Vera Benefits: ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಲೋಳೆಸರದ ಮಾಸ್ಕ್‌ ಬಳಸಿ

Continue Reading

ದೇಶ

Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Covaxin: ಕೊವ್ಯಾಕ್ಸನ್‌ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್‌ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್‌ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ ಎಂಬುದಾಗಿ ಭಾರತ್‌ ಬಯೋಟೆಕ್‌ ಪ್ರಕಟಣೆ ಹೊರಡಿಸಿದೆ. ಕೋವಿಶೀಲ್ಡ್‌ ಅಡ್ಡಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತ್‌ ಬಯೋಟೆಕ್‌ ಕಂಪನಿಯು ಸ್ಪಷ್ಟನೆ ನೀಡಿದೆ.

VISTARANEWS.COM


on

Covaxin
Koo

ನವದೆಹಲಿ: ಬ್ರಿಟನ್‌ನಲ್ಲಿ (UK) ಅಸ್ಟ್ರಾಜೆನಿಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಯ (Covishield vaccine) ಅಡ್ಡ ಪರಿಣಾಮಗಳ (Side effects) ಬಗ್ಗೆ ಕೋಲಾಹಲ ಹೆಚ್ಚುತ್ತಿರುವಂತೆಯೇ ಭಾರತದಲ್ಲಿಯೂ ಕೋವಿಶೀಲ್ಡ್‌ ಲಸಿಕೆ ಸೈಡ್‌ ಎಫೆಕ್ಟ್‌ಗಳ ಕುರಿತು ಅಧ್ಯಯನ ನಡೆಯಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕೊವ್ಯಾಕ್ಸಿನ್‌ (Covaxin) ಅತ್ಯಂತ ಸುರಕ್ಷಿತವಾಗಿ ತಯಾರಿಸಲಾದ ಲಸಿಕೆಯಾಗಿದೆ ಎಂಬುದಾಗಿ ಭಾರತದ ಲಸಿಕಾ ತಯಾರಿಕಾ ಕಂಪನಿಯಾದ ಭಾರತ್‌ ಬಯೋಟೆಕ್‌ (Bharat Biotech) ಪ್ರಕಟಣೆ ತಿಳಿಸಿದೆ.

“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್‌ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ” ಎಂಬುದಾಗಿ ಭಾರತ್‌ ಬಯೋಟೆಕ್‌ ಕಂಪನಿಯು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

“ಕೊವ್ಯಾಕ್ಸನ್‌ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್‌ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್‌ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು, ರಕ್ತ ಹೆಪ್ಪುಗಟ್ಟುವುದು, ಥ್ರಂಬೊಸಿಟೋಪೇನಿಯಾ, ಪೆರಿಕಾರ್ಡಿಟಿಸ್‌ ಹಾಗೂ ಮೈಯೋಕಾರ್ಡಿಟಿಸ್‌ ಸೇರಿ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ. ಹಾಗಾಗಿ, ಕೊವ್ಯಾಕ್ಸಿನ್‌ ಲಸಿಕೆಯು ಅತ್ಯಂತ ಸುರಕ್ಷಿತವಾಗಿದೆ” ಎಂದು ಮಾಹಿತಿ ನೀಡಿದೆ.

ಅಸ್ಟ್ರಾಜೆನೆಕಾ ಕೋವಿಶೀಲ್ಡ್‌ ಲಸಿಕೆ ಮತ್ತು ಥ್ರಂಬೋಸಿಸ್ (ಟಿಟಿಎಸ್) ನಡುವಿನ ಸಂಬಂಧವನ್ನು ಒಪ್ಪಿಕೊಂಡಿದೆ. ಅಸ್ಟ್ರಾಜೆನೆಕಾ ಲಸಿಕೆ ಸೂತ್ರವನ್ನು ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಕೋಟ್ಯಂತರ ಮಂದಿ ಪಡೆದಿದ್ದಾರೆ. ಈಗ ಅಮೆರಿಕದಲ್ಲಿ ಅಡ್ಡಪರಿಣಾಮದ ಕುರಿತು ಕಂಪನಿಯೇ ಒಪ್ಪಿಕೊಂಡಿರುವುದರಿಂದ ಭಾರತದಲ್ಲೂ ಈ ಕುರಿತು ಅಧ್ಯಯನ ನಡೆಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಇದನ್ನೂ ಓದಿ: CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

Continue Reading
Advertisement
Jai Shri Ram Slogan
ಕರ್ನಾಟಕ1 min ago

Jai Shri Ram Slogan: ಜೈ ಶ್ರೀರಾಮ್ ಎಂದು ಕೂಗಿದ್ರೆ ಬೂಟುಗಾಲಲ್ಲಿ ಒದೆಯಿರಿ ಎಂದ ಕಾಂಗ್ರೆಸ್‌ ಮುಖಂಡ

Ballari Lok Sabha constituency Congress candidate E Tukaram election campaign in Kuduthini
ಬಳ್ಳಾರಿ4 mins ago

Lok Sabha Election 2024: ಕುಡುತಿನಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಭರ್ಜರಿ ರೋಡ್‌ ಶೋ

IPL 2024
ಕ್ರೀಡೆ5 mins ago

IPL 2024 : ರೋಹಿತ್​ ಶರ್ಮಾ ಬೆಂಚು ಕಾಯುವಂತೆ ಮಾಡಿದ ಹಾರ್ದಿಕ್ ಪಾಂಡ್ಯ

Darshanam Mogulaiah
ದೇಶ11 mins ago

Darshanam Mogulaiah: 2 ವರ್ಷದ ಹಿಂದೆ ಪದ್ಮಶ್ರೀ ಪಡೆದ ಸಾಧಕ ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕ!

Prajwal Revanna Case Who is the kingpin of Prajwal video pen drive HDK team is on its way
ಕ್ರೈಂ15 mins ago

Prajwal Revanna Case: ಪ್ರಜ್ವಲ್‌ ವಿಡಿಯೊ ಪೆನ್‌ಡ್ರೈವ್ ಕಿಂಗ್‌ಪಿನ್ ಯಾರು? ಬೆನ್ನತ್ತಿ ಹೊರಟಿದೆ ಎಚ್‌ಡಿಕೆ ಟೀಂ!

KL Rahul
ಕ್ರೀಡೆ26 mins ago

KL Rahul : ವಿಶ್ವ ಕಪ್​ ತಂಡಕ್ಕೆ ಕೆ. ಎಲ್​ ರಾಹುಲ್​ ಬೇಡ ಅಂದಿದ್ದು ರೋಹಿತ್ ಶರ್ಮಾ; ಆಂತರಿಕ ಮಾಹಿತಿ ಬಹಿರಂಗ

Physical Abuse
ಕರ್ನಾಟಕ42 mins ago

Physical Abuse: ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಸದ್ದಾಂ ಹುಸೇನ್ ಅರೆಸ್ಟ್‌

Rachita Taneja
ದೇಶ56 mins ago

Rachita Taneja: ಭಾರತದ ಕಾರ್ಟೂನಿಸ್ಸ್ ರಚಿತಾ ತನೇಜಾಗೆ ಕೋಫಿ ಅನ್ನಾನ್‌ ಪ್ರಶಸ್ತಿ ಗರಿ

Rahul Gandhi
ಪ್ರಮುಖ ಸುದ್ದಿ58 mins ago

Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

Prajwal Revanna Case Kidnapping case filed against Revanna Anticipatory bail plea postponed
ಕ್ರೈಂ1 hour ago

Prajwal Revanna Case: ರೇವಣ್ಣ ಮೇಲೆ ಕಿಡ್ನ್ಯಾಪ್‌ ಕೇಸ್;‌ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ, ನಾಳೆ SIT ಮುಂದೆ ಹಾಜರ್‌?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ6 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ17 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌