Food Timing: ಸರ್ಕಾಡಿಯನ್‌ ಆಹಾರ ಕ್ರಮ: ಏನಿದರ ಮರ್ಮ? - Vistara News

ಆರೋಗ್ಯ

Food Timing: ಸರ್ಕಾಡಿಯನ್‌ ಆಹಾರ ಕ್ರಮ: ಏನಿದರ ಮರ್ಮ?

ಸೂರ್ಯನ ಬೆಳಕಿನ ಲಭ್ಯತೆಯ ಆಧಾರದ ಮೇಲೆ ನಮ್ಮ ಊಟ-ನಿದ್ದೆಯನ್ನು ಹೊಂದಿಸಿಕೊಳ್ಳಬೇಕು ಎಂಬ ಮಾತಿದೆ. ಏನಿದು ಮತ್ತು ಏನಿದರ ಉಪಯೋಗ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Food Timing
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ಊಟ-ನಿದ್ದೆಯ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಬಹಳಷ್ಟು ಸಲಹೆಗಳನ್ನು ಕೇಳಿರುತ್ತೇವೆ. ದಿನ-ರಾತ್ರಿಯ ಅವಧಿಯನ್ನು ಆಧರಿಸಿ, ಅಂದರೆ ಸೂರ್ಯನ ಬೆಳಕಿನ ಲಭ್ಯತೆಯ ಆಧಾರದ ಮೇಲೆ ನಮ್ಮ ಊಟ-ನಿದ್ದೆಯನ್ನು ಹೊಂದಿಸಿಕೊಳ್ಳಬೇಕು ಎಂಬ ಮಾತಿನಲ್ಲಿ ಹುರುಳಿಲ್ಲದೆ ಇಲ್ಲ. ಇದೇ ತತ್ವವನ್ನು ಆಧರಿಸಿದ್ದು ಸರ್ಕಾಡಿಯನ್‌ ಡಯಟ್‌ ಎಂಬ ಕಲ್ಪನೆ. ಏನಿದು ಮತ್ತು ಏನಿದರ ಉಪಯೋಗ ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Food Timing

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರವೇ ಆಹಾರ ಸೇವಿಸುವುದು ಈ ಕ್ರಮದ ಮುಖ್ಯ ಅಂಶ. ವಿವರಗಳಿಗೆ ಬರುವುದಾದರೆ, ಸೂರ್ಯನ ಬೆಳಕು ಇರುವಷ್ಟೂ ಹೊತ್ತು ನಮ್ಮ ದೇಹದ ಚಯಾಪಚಯ ಕ್ರಿಯೆ ಚುರುಕಾಗಿರುತ್ತದೆ. ದೇಹದಲ್ಲಿ ಸಾಕಷ್ಟು ಪ್ರಮಾಣದ ಇನ್ಸುಲಿನ್‌ ಉತ್ಪತ್ತಿಯಾಗಿ ಮೆಲಟೋನಿನ್‌ ಪ್ರಮಾಣ ಕಡಿಮೆ ಇರುತ್ತದೆ. ಸೂರ್ಯಾಸ್ತವಾಗಿ ರಾತ್ರಿಯಾಗುತ್ತಿದ್ದಂತೆ, ಮೆಲಟೋನಿನ್‌ ಎಂಬ ರಾತ್ರಿಯ ಹಾರ್ಮೋನುಗಳ ಸ್ರವಿಸುವಿಕೆ ಹೆಚ್ಚಿ, ಇನ್ಸುಲಿನ್‌ ಕಡಿಮೆಯಾಗುತ್ತದೆ. ಮೆಲಟೋನಿನ್‌ ಹೆಚ್ಚಾದಂತೆ, ದೇಹ ವಿಶ್ರಾಂತಿಗೆ ಜಾರುತ್ತದೆ ಎಂಬ ಸುಳಿವು ನೀಡಿದಂತಾಗಿ, ಪಚನದ ಕೆಲಸವನ್ನು ಕೈಬಿಟ್ಟು, ರಿಪೇರಿ ಕೆಲಸಕ್ಕೆ ನಮ್ಮ ಕೋಶಗಳು ಅಣಿಯಾಗುತ್ತವೆ. ಹಾಗಾಗಿಯೇ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಹೊಟ್ಟೆ ತುಂಬುವಷ್ಟು ಮಾಡಿ, ರಾತ್ರಿಯ ಊಟವನ್ನು ಕಡಿಮೆ ಮಾಡಬೇಕೆಂಬ ಕ್ರಮವನ್ನು ಈ ಡಯಟ್‌ ಪ್ರತಿಪಾದಿಸುತ್ತದೆ. ಅಷ್ಟೇ ಅಲ್ಲ, ರಾತ್ರಿಯೂಟ ಸೂರ್ಯಾಸ್ತದ ಮುನ್ನವೇ ಮಾಡುವುದು ಮುಖ್ಯ.

ನಿದ್ದೆಯೊಂದಿಗೇನು ನಂಟು?

ಇದೀಗ ಕುತೂಹಲದ ವಿಷಯ. ನಮ್ಮ ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳಿಗೂ ನಿದ್ದೆಗೂ ಅವಿನಾಭಾವ ನಂಟು. ಗ್ರೆಲಿನ್‌ ಎಂಬ ಚೋದಕ ನಮ್ಮ ಹಸಿವನ್ನು ಹೆಚ್ಚಿಸಿದರೆ ಲೆಪ್ಟಿನ್‌ ಚೋದಕವು ಅದನ್ನು ನಿಯಂತ್ರಿಸುತ್ತದೆ. ಈ ಹಾರ್ಮೋನುಗಳು ಕೆಲಸ ಮಾಡುವುದು ಸಹ ಸೂರ್ಯನ ಬೆಳಕಿನ ಆಧಾರದ ಮೇಲೆ. ನಮ್ಮ ನಿದ್ದೆಯು ಸಹ ನಮ್ಮ ದೇಹದ ಜೈವಿಕ ಗಡಿಯಾರವನ್ನೇ (ಸರ್ಕಾಡಿಯನ್‌ ರಿದಂ) ಅವಲಂಬಿಸಿದೆ. ಬೆಳಗಿನ ಹೊತ್ತು ನಾವು ನಿದ್ದೆ ಮಾಡುತ್ತಿದ್ದರೆ, ಹಸಿವು ಹೆಚ್ಚಿಸುವ ಗ್ರೆಲಿನ್‌ ಚೋದಕ ಸಹಜವಾಗಿ ಸ್ರವಿಸುವ ಸಮಯವದು. ಇನ್ನು ರಾತ್ರಿ ಎಚ್ಚರವಾಗಿದ್ದರೆ, ಅದು ಹಸಿವು ತಗ್ಗಿಸುವ ಲೆಪ್ಟಿನ್‌ ಹಾರ್ಮೋನಿನ ಹೊತ್ತು. ಆರೋಗ್ಯ ಏರುಪೇರಾಗಿ ಹಾಳು ಬೀಳಲು ಇದಕ್ಕಿಂತ ಇನ್ನೇನು ಬೇಕು?

Food Timing

ಹಾಗಾಗಿ, ಸರ್ಕಾಡಿಯನ್‌ ಆಹಾರ ಪದ್ಧತಿಯ ಉಪಕ್ರಮಗಳು ಸ್ಪಷ್ಟವಾಗಿವೆ. ನಿಸರ್ಗದ ನಿಯಮಕ್ಕೆ ನಮ್ಮ ಜೀವನ ಬದ್ಧವಾಗಿರಬೇಕು. ಹಗಲಿನಲ್ಲಿ ಉಣ್ಣು, ಚಟುವಟಿಕೆಯಿಂದಿರು; ರಾತ್ರಿ ನಿದ್ದೆ, ವಿಶ್ರಾಂತಿಯ ಸಮಯ. ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುವುದು, ಯಾವ್ಯಾಗಲೋ ನಿದ್ದೆ ಮಾಡುವುದು- ಇಂಥವುಗಳಿಂದ ಜೈವಿಕ ಚಕ್ರವೇ ಏರುಪೇರಾಗುತ್ತದೆ. ಇನ್ನು ತೂಕ ಇಳಿಸುವ, ಆರೋಗ್ಯ ಸುಧಾರಿಸುವ ಮಾತೆಲ್ಲಿ? ಸರ್ಕಾಡಿಯನ್‌ ಆಹಾರ ಕ್ರಮವನ್ನು ಕೆಲವು ದಿನಗಳ ಮಟ್ಟಿಗೆ ಪಾಲಿಸಿದರೆ ಆಗುವ ಪ್ರಯೋಜನ ಅಷ್ಟಕ್ಕಷ್ಟೆ. ಅದನ್ನು ಜೀವನಕ್ರಮದಲ್ಲಿ ನಿಯಮಿತವಾಗಿ ಅಳವಡಿಸಿಕೊಂಡರೆ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ, ಆರೋಗ್ಯ ನಳನಳಿಸುತ್ತದೆ.

ಇದನ್ನೂ ಓದಿ: Health Benefits of Cereals: ಸಿರಿ ಧಾನ್ಯಗಳನ್ನೇಕೆ ತಿನ್ನಬೇಕು ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

ಚುಟುಕು ಡಯೆಟ್‌ಗಳಿಂದ ಕೆಲವೇ ದಿನಗಳಲ್ಲಿ ಕರಗುವ ತೂಕ ಮತ್ತೆ ಕೆಲವೇ ದಿನಗಳಲ್ಲಿ ಮರಳಿ ಬರುತ್ತದೆ. ಬದಲಿಗೆ, ಹಲವಾರು ತಿಂಗಳುಗಳ ಪ್ರಯತ್ನದಿಂದ ಕೊಬ್ಬು ಕರಗಿಸಿದರೆ, ಅದರಿಂದ ಸ್ನಾಯುಗಳನ್ನು ಹುರಿಗಟ್ಟಿಸಲು, ದೇಹವನ್ನು ಸಶಕ್ತವಾಗಿಸಲು ಸಾಧ್ಯವಿದೆ. ಹೇಗೆ, ಏನು ಎಂಬಿತ್ಯಾದಿ (Weight Loss Tips) ಮಾಹಿತಿ ಇಲ್ಲಿದೆ.

VISTARANEWS.COM


on

Weight Loss Tips
Koo

ಇಡೀ ಲೋಕವೆಲ್ಲ ಒಂದೇ ಮಂತ್ರವನ್ನು ಜಪಿಸಬೇಕು ಎಂದಾದರೆ, ಎಲ್ಲರೂ ಜಪಿಸುವುದೇನು? ʻತೂಕ ಇಳಿಸುವುದು (Weight Loss Tips) ಹೇಗೆ?ʼ ಎನ್ನುವ ಮಂತ್ರವೇ ಎಲ್ಲೆಡೆಯಿಂದ ಕೇಳಿಬರಬಹುದು. ಹಾಗೆ ತೂಕ ಇಳಿಸುವ ಪ್ರಯತ್ನದಲ್ಲಿರುವವರು ಸುತ್ತೆಲ್ಲ ಕಾಣುತ್ತಿದ್ದರೂ, ಫಲಿತಾಂಶ ಕಾಣದೆ ನಿರಾಶರಾದವರೇ ಹೆಚ್ಚು. ಹೊಸವರ್ಷಕ್ಕೆ, ಹುಟ್ಟಿದ ದಿನಕ್ಕೆ ಎಂದೆಲ್ಲ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವವರಲ್ಲಿ ತೂಕ ಇಳಿಸುವ ಶಪಥಗಳೇ ಹೆಚ್ಚಾಗಿರುತ್ತವೆ. ಮುಂದಿನ ವರ್ಷಕ್ಕೆ ಮತ್ತದೇ ಶಪಥ ಹೊಸದಾಗಿ ಸ್ವೀಕಾರವಾಗುತ್ತದೆ. ಹಾಗಾದರೆ ಏರಿದ್ದು ಇಳಿಯಲೇ ಬೇಕು ಎಂಬ ನಿರ್ಣಯ ತೂಕದ ವಿಷಯದಲ್ಲಿ ಇಲ್ಲ; ಬಂದಿದ್ದು ಹೋಗಲೇಬೇಕು ಎನ್ನುವ ನಿಯಮ ಹೊಟ್ಟೆಯ ವಿಷಯದಲ್ಲೂ ಇಲ್ಲ ಎಂದರ್ಥವೇ? ಹಾಗೇನಿಲ್ಲ. ಸಮಾಧಾನವೇ ಇಲ್ಲದಂಥ ಸಮಸ್ಯೆಗಳೇನಲ್ಲ ಇದು. ಆದರೆ ತೂಕ ಇಳಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ನಿಜ. ಕಾರಣ, ಹೆಚ್ಚು ಬಾರಿ ತೂಕ ಕರಗಿಸುವ ಬಗ್ಗೆ ಗಮನ ನೀಡುವು ಭರದಲ್ಲಿ ಚುಟುಕು ಡಯೆಟ್‌ಗಳ ಮೊರೆ ಹೋಗುತ್ತೇವೆ. ಆಗದಿರುವಂಥ ಸರ್ಕಸ್‌ಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದರ ಪರಿಣಾಮವೇನೆಂದರೆ ದೇಹದಲ್ಲಿ ಕೊಬ್ಬು ಕರಗುವ ಬದಲು, ನೀರಿನಿಂದ ಇರುವಂಥ ತೂಕ ಮಾತ್ರವೇ ಕ್ಷಿಪ್ರವಾಗಿ ಕರಗುತ್ತದೆ. ಅದೂ ಇಲ್ಲದಿದ್ದರೆ ಸ್ನಾಯುಗಳು ಮಾಯವಾಗಿ ದೇಹ ತೊಂದರೆಗೆ ಸಿಲುಕುತ್ತದೆ. ಇದರ ಜೊತೆಗೆ ತಪ್ಪಾಗಿ ವ್ಯಾಯಾಮಗಳನ್ನೂ ಮಾಡಿದರೆ, ಗಾಯಗಳ ಸಮಸ್ಯೆ ತಲೆದೋರುತ್ತದೆ. ಹಾಗಾಗಿ ತೂಕ ಕರಗಿಸುವ ಗುರಿಯನ್ನು ಕೊಬ್ಬು ಕರಗಿಸುವ ಗುರಿಯನ್ನಾಗಿ ಮಾರ್ಪಾಡು ಮಾಡಿಕೊಂಡರೆ, ಫಲಿತಾಂಶ ದೊರೆಯುತ್ತದೆ. ಇದರಲ್ಲೂ ಸೂಕ್ಷ್ಮವಿದೆ. ಕೆಲವೇ ದಿನಗಳಲ್ಲಿ ಕರಗುವ ತೂಕ ಮತ್ತೆ ಕೆಲವೇ ದಿನಗಳಲ್ಲಿ ಮರಳಿ ಬರುತ್ತದೆ. ಬದಲಿಗೆ, ಹಲವಾರು ತಿಂಗಳುಗಳ ಪ್ರಯತ್ನದಿಂದ ಕೊಬ್ಬು ಕರಗಿಸಿದರೆ, ಅದರಿಂದ ಸ್ನಾಯುಗಳನ್ನು ಹುರಿಗಟ್ಟಿಸಲು, ದೇಹವನ್ನು ಸಶಕ್ತವಾಗಿಸಲು ಸಾಧ್ಯವಿದೆ. ಡಯೆಟ್‌ ಮಾಡುವ ಭರದಲ್ಲಿ, ಅಗತ್ಯ ಪೋಷಕಾಂಶಗಳಿಂದ ಶರೀರವನ್ನು ವಂಚಿಸಬಾರದು. ಆದರೆ ಕ್ಯಾಲರಿಗಳ ಕೊರತೆಯನ್ನು ಸೃಷ್ಟಿಸಬೇಕಷ್ಟೆ. ದೇಹಕ್ಕೆ ಒದಗಿಸುವ ಕ್ಯಾಲರಿಗಳನ್ನು ಪಿಷ್ಟ, ಪ್ರೊಟೀನ್‌, ನಾರು, ಖನಿಜಗಳು ಸಾಂದ್ರವಾಗಿರಬೇಕು. ಜೊತೆಗೆ ಸರಿಯಾದ ವ್ಯಾಯಾಮ. ಆಗ ದೇಹದ ಕೊಬ್ಬು ಕರಗಿಸಿ, ಆ ಮೂಲಕ ತೂಕ ಇಳಿಸಬಹುದು. ಶರೀರ ಕೃಶವಾಗಿ ಕಾಣುವ ಬದಲು ಆರೋಗ್ಯಪೂರ್ಣ ಕಳೆಯನ್ನು ಹೊಂದಿರುತ್ತದೆ.

Weight Loss

ಏನು ಮಾಡಬೇಕು?

ಇದಕ್ಕಾಗಿ ಪೋಷಕಾಂಶ ತಜ್ಞರು ಕೆಲವು ನಿಯಮಗಳನ್ನು ಒಪ್ಪುತ್ತಾರೆ. ಮೊದಲನೆಯದಾಗಿ, ಬೆಳಗಿನ ಉಪಹಾರದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಒದಗಿಸುವುದು. ಆದರೆ ನಿಮಗೆ ಬೆಳಗ್ಗೆ 1200 ಕ್ಯಾಲರಿಯ ಆಹಾರ ಬೇಕು ಎಂದಿದ್ದರೆ, ಅದನ್ನು ಅಂದಾಜು 900 ಕ್ಯಾಲರಿಗಳಿಗೆ ಇಳಿಸುವುದು. ಈ ಆಹಾರದಲ್ಲಿ ಪ್ರೊಟೀನ್‌ ಮತ್ತು ಸಂಕೀರ್ಣ ಪಿಷ್ಟಗಳು ಭರಿತವಾಗಿ ಇರಬೇಕು. ಇದರಿಂದ ಶರೀರ ಸೊರಗುವುದಿಲ್ಲ ಮತ್ತು ಹಸಿವೂ ಆಗುವುದಿಲ್ಲ. ದೇಹಕ್ಕೆ ಬೇಕಾದ ಉಳಿದ 300 ಕ್ಯಾಲರಿಯನ್ನು ಶರೀರ ತನ್ನ ಕೊಬ್ಬಿನ ದಾಸ್ತಾನಿನಿಂದ ತೆಗೆದುಕೊಳ್ಳುತ್ತದೆ. ಇದನ್ನು ಎಲ್ಲಾ ಹೊತ್ತಿನ ಆಹಾರಗಳಲ್ಲೂ ಕ್ರಮೇಣ ಅಳವಡಿಸಿಕೊಳ್ಳಬಹುದು.

30-30-30

ಇದೊಂದು ಸುಸ್ಥಿರವಾದ ತೂಕ ಇಳಿಕೆಯ ಕ್ರಮ. ಬೆಳಗಿನ ಉಪಾಹಾರಕ್ಕೆ, ದೊಡ್ಡ ಮಟ್ಟದಲ್ಲಿ ಅಂದರೆ, 30 ಗ್ರಾಂನಷ್ಟು ಪ್ರೊಟೀನ್‌ ತಿನ್ನುವುದು. ದಿನಕ್ಕೆ 30 ನಿಮಿಷಗಳ ಕಡಿಮೆ ತೀವ್ರತೆಯ ವ್ಯಾಯಾಮವನ್ನು ತಪ್ಪದೆ ಮಾಡುವುದು, ತಿಂಗಳಿನ 30 ದಿನಗಳು ಏನು-ಎಷ್ಟು ಎಂಬ ಲಕ್ಷ್ಯ ಇರಿಸಿಕೊಂಡೇ ತಿನ್ನುವುದು. ೩೧ನೇ ದಿನವೆಂಬುದು ಇದ್ದರೆ ಬೇಕಾದ್ದು ತಿನ್ನಿ! ಇದರಿಂದ ದೇಹಸ್ವಾಸ್ಥ್ಯ ಸುಧಾರಿಸಲು ಸಾಕಷ್ಟು ಅವಕಾಶ ದೊರೆಯುತ್ತದೆ.

ಪ್ರೊಟೀನ್‌ ಲೆಕ್ಕ ಎಂದರೆ?

ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ತಿನ್ನಬೇಕು ಎನ್ನುವುದು ನಿಜ. ಆದರೆ 30 ಗ್ರಾಂ ಲೆಕ್ಕ ಮಾಡುವುದು ಹೇಗೆ? ಒಂದು ದೊಡ್ಡ ಮೊಟ್ಟೆಯ ಬಿಳಿ ಭಾಗದಲ್ಲಿ ಅಂದಾಜು 6 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಒಂದು ಹಾಳೆ ಚೀಸ್‌ನಿಂದ ೪-೫ ಗ್ರಾಂ ಪ್ರೊಟೀನ್‌ ದೊರೆಯಬಹುದು. ಇಂಥ ಲೆಕ್ಕಗಳ ಆಧಾರದ ಮೇಲೆ ಹಾಲು, ಮೊಸರು, ಕಾಯಿ-ಬೀಜಗಳು, ಮೊಟ್ಟೆ, ಚಿಕನ್‌, ಸೋಯಾಬೀನ್‌, ಮೊಳಕೆ ಕಾಳುಗಳು- ಇಂಥವೆಲ್ಲ ಅಗತ್ಯವಾದ ಪ್ರೊಟೀನನ್ನು ದೇಹಕ್ಕೆ ಒದಗಿಸುವ ಹಲವಾರು ದಾರಿಗಳು. ಅದೇ ರೀತಿಯಲ್ಲಿ ತೌಡು, ಸಿಪ್ಪೆಗಳಿರುವ ಧಾನ್ಯಗಳು, ಸಿರಿ ಧಾನ್ಯಗಳನ್ನು ತಿನ್ನುವ ಮೂಲಕ ಸಂಕೀರ್ಣ ಪಿಷ್ಟಗಳನ್ನು ದೊರಕಿಸಿಕೊಡಬಹುದು.

Have enough fiber in the diet Eat plenty of whole grains fruits and raw vegetables Simple Steps to Preventing Diabetes

ನಾರು ಬೇಕಲ್ಲವೇ?

ಇದಕ್ಕಾಗಿ ಋತುಮಾನದ ಸೊಪ್ಪು-ಹಣ್ಣು-ತರಕಾರಿಗಳು ಊಟದಲ್ಲಿ ಸಾಕಷ್ಟಿರಲಿ. ಖನಿಜಗಳು ಕೊರತೆಯಾಗದಂತೆ ನೋಡಿಕೊಳ್ಳಲು ಇದಿಷ್ಟು ಆಹಾರಗಳು ಸಾಕಾಗುತ್ತವೆ. ಜೊತೆಗೆ ಚೆನ್ನಾಗಿ ನೀರು ಕುಡಿಯಿರಿ. ಇನ್ನೊಂದು ನೆನಪಿನಿಂದ ಮಾಡಬೇಕಾದ ಕೆಲಸವೆಂದರೆ ಗುಣಮಟ್ಟದ ನಿದ್ದೆ. ಉಳಿದೆಲ್ಲ ಮಾಡಿ, ಸರಿಯಾಗಿ ನಿದ್ದೆ ಮಾಡದಿದ್ದರೆ ಸರ್ವಬಣ್ಣ ಮಸಿ ನುಂಗಿತು ಎಂಬಂತಾಗುತ್ತದೆ. ಇಷ್ಟಾದ ಮೇಲೆ ದೇಹದ ಕೊಬ್ಬು ಕರಗದೆ ಎಲ್ಲಿ ಹೋಗುತ್ತದೆ!

ಇದನ್ನೂ ಓದಿ: Health Tips Kannada: ಕಣ್ಣಿನ ಕೆಳಗೆ ಕಪ್ಪಾಗಿದೆಯೇ? ಇಲ್ಲಿದೆ ಸರಳ ಮನೆಮದ್ದು

Continue Reading

ಆರೋಗ್ಯ

Tips For Healthy Skin: ಕಡಲೆಹಿಟ್ಟೆಂಬ ಶತಮಾನಗಳ ಹಳೆಯ ಸೌಂದರ್ಯವರ್ಧಕ!

ಯಾವುದೇ ರಾಸಾಯನಿಕಗಳಿಲ್ಲ, ಮನೆಯಲ್ಲಿ ತ್ವರಿತವಾಗಿ ಮಾಡಿಕೊಳ್ಳಬಹುದಾದ ಕಡಲೆಹಿಟ್ಟೆಂಬ ಸೌಂದರ್ಯವರ್ಧಕಕ್ಕೆ ಸಮನಾಗಿ ಬೇರೊಂದಿಲ್ಲ. ಎಷ್ಟೊ ತಲೆಮಾರುಗಳಿಂದ ಈ ಅಭ್ಯಾಸ ಚಾಲ್ತಿಯಲ್ಲಿದೆ, ಮುಂದೆಯೂ ಇರಲಿದೆ. ಏನಿದೆ ಅಂಥದ್ದು ಕಡಲೆಹಿಟ್ಟಿನಲ್ಲಿ? ಇಲ್ಲಿದೆ (Tips For Healthy Skin) ಉಪಯುಕ್ತ ಮಾಹಿತಿ.

VISTARANEWS.COM


on

Tips For Healthy Skin
Koo

ಕೆಲವು ಹಳೆಯ ಕಾಲದ ಅಭ್ಯಾಸಗಳು ಎಂದಿಗೂ ಬದಲಾಗುವುದಿಲ್ಲ. ಹೊಸತು ಎಂಥದ್ದೇ ಬಂದರೂ, ಹಳೆಯದ ತೂಕ ಕಡಿಮೆಯಾಗುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ಮುಖದ ಕಾಂತಿಗಾಗಿ ಕಡಲೆಹಿಟ್ಟನ್ನು ಬಳಸುವ ಅಭ್ಯಾಸ. ಎಷ್ಟೊ ತಲೆಮಾರುಗಳಿಂದ ಈ ಅಭ್ಯಾಸ ಚಾಲ್ತಿಯಲ್ಲಿದೆ, ಮುಂದೆಯೂ ಇರಲಿದೆ. ಕಾರಣ, ಕಡಲೆಹಿಟ್ಟಿನ ಸಾಮರ್ಥ್ಯವೇ ಅಂಥದ್ದು. ಯಾವುದೇ ರಾಸಾಯನಿಕಗಳಿಲ್ಲ, ಮನೆಯಲ್ಲಿ ತ್ವರಿತವಾಗಿ ಮಾಡಿಕೊಳ್ಳಬಹುದಾದ ಈ ಸೌಂದರ್ಯವರ್ಧಕಕ್ಕೆ ಸಮನಾಗಿ ಬೇರೊಂದಿಲ್ಲ. ಏನಿದೆ ಅಂಥದ್ದು (Tips For Healthy Skin) ಕಡಲೆಹಿಟ್ಟಿನಲ್ಲಿ?
ಕಡಲೆಹಿಟ್ಟು ಉತ್ಕರ್ಷಣ ನಿರೋಧಕಗಳಿಂದ ಭರಿತವಾಗಿದೆ. ಚರ್ಮದ ಮೇಲಿನ ಮೃತ ಕೋಶಗಳನ್ನು ತೆಗೆದುಹಾಕಿ, ಹೆಚ್ಚಿನ ಎಣ್ಣೆಯಂಶವನ್ನು ತೆಗೆದು, ಹೊಸ ಕೋಶಗಳ ಬೆವಳಣಿಗೆಗೆ ಅಗತ್ಯವಾದ ಕೆಲಸ ಮಾಡುತ್ತದೆ. ಹಾಗಾಗಿ ಕಡಲೆ ಹಿಟ್ಟನ್ನು ನಿಯಮಿತವಾಗಿ ಬಳಸಿದಾಗ ಚರ್ಮ ನಯವಾದಂತಾಗಿ, ಕಾಂತಿ ಹೆಚ್ಚುತ್ತದೆ. ಇದಿಷ್ಟನ್ನೂ ಯಾವುದೇ ರಾಸಾಯನಿಕಗಳಿಲ್ಲದಂತೆ, ನೈಸರ್ಗಿಕವಾದ, ಆರೋಗ್ಯಕರ ವಸ್ತುವಿನಿಂದ ನಾವು ಪಡೆಯಬಹುದಾದ್ದು. ಕ್ಲೆನ್ಸರ್‌, ಎಕ್ಸ್‌ಫಾಲಿಯೇಟರ್‌ ಮತ್ತು ಬ್ರೈಟ್ನರ್‌- ಎಲ್ಲವೂ ಕಡಲೆಹಿಟ್ಟೊಂದರಿಂದಲೇ ಸಾಧಿಸಬಹುದು ನಾವು.
ಇದು ಭಾರತದಲ್ಲಿ ಮಾತ್ರವೇ ಅಲ್ಲ, ದಕ್ಷಿಣ ಏಷ್ಯಾ ದೇಶಗಳಲ್ಲಿ ಶತಮಾನಗಳಿಂದ ಬಳಕೆಯಲ್ಲಿ ಇರುವಂಥದ್ದು. ಇದರ ಉರಿಯೂತ ಶಾಮಕ ಗುಣದಿಂದಾಗಿಯೇ ಇದು ಮೊಡವೆಯನ್ನೂ ನಿಯಂತ್ರಿಸಬಲ್ಲದು. ವಾತಾವರಣದ ಧೂಳು, ಹೊಗೆ, ಮಾಲಿನ್ಯಗಳಿಂದ ಮಂಕಾಗುವ ಚರ್ಮಕ್ಕೆ ಕಾಂತಿ ನೀಡುವುದಕ್ಕೆ ಇದು ಒಳ್ಳೆಯ ಮತ್ತು ಸರಳ ಉಪಾಯ. ಇದರಿಂದ ಮಾಡುವ ಫೇಸ್‌ಮಾಸ್ಕ್‌ಗಳು ಸಾಮಾನ್ಯವಾಗಿ ಎಲ್ಲರಿಗೂ ಒಗ್ಗುವಂಥವು. ಹಾಲು, ಮೊಸರು, ಹಣ್ಣಿನ ಪೇಸ್ಟ್‌ಗಳು, ತರಕಾರಿ ರಸಗಳು ಮುಂತಾದ ಯಾವುದನ್ನೇ ಆದರೂ ಕಡಲೆಹಿಟ್ಟಿನೊಂದಿಗೆ ಬಳಸಬಹುದು. ವಾರಕ್ಕೆ 2-3 ದಿನ ಇದನ್ನು ಬಳಸಿದರೆ ಸಾಕಾಗುತ್ತದೆ. ಇದನ್ನು ಅತಿಯಾಗಿ ಬಳಕೆ ಮಾಡಿದರೆ ಚರ್ಮದ ಶುಷ್ಕತೆ ಹೆಚ್ಚಬಹುದು; ಸೂಕ್ಷ್ಮ ಚರ್ಮದವರಿಗೆ ತೊಂದರೆ ಆಗಬಹುದು.

Facemask

ಫೇಸ್‌ಮಾಸ್ಕ್‌

ಮೊದಲಿಗೆ ಕಡಲೆಹಿಟ್ಟನ್ನು ಸರಿಯಾದ ವಸ್ತುಗಳೊಂದಿಗೆ ಮಿಶ್ರ ಮಾಡಿ ಪೇಸ್ಟ್‌ ಸಿದ್ಧ ಮಾಡಿ. ಹಾಲು, ಮೊಸರು, ಗುಲಾಬಿ ಜಲ ಮುಂತಾದ ಯಾವುದೂ ಆಗಬಹುದು. ಇದರಿಂದ ಹದವಾದ ಪೇಸ್ಟ್‌ ಸಿದ್ಧವಾದ ಮೇಲೆ, ಮುಖಕ್ಕೆ ವೃತ್ತಾಕಾರದಲ್ಲಿ ಹಚ್ಚಿ. ಆದರೆ ತೀರಾ ಉಜ್ಜಬೇಡಿ; ಇದರಿಂದ ಕೆಂಪಾಗಿ ಚರ್ಮಕ್ಕೆ ಕಿರಿಕಿರಿ ಉಂಟಾಗಬಹುದು. ೨೦ ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ನಂತರ ಮುಖ ಒರೆಸದೆ ಗಾಳಿಗೆ ಆರುವುದಕ್ಕೆ ಬಿಡಿ. ನಂತರ ಹಗುರವಾದ ಮಾಯಿಶ್ಚರೈಸರ್‌ ಹಚ್ಚಿ. ಇದನ್ನು ವಾರದಲ್ಲಿ 2-3 ದಿನ ಮಾಡಿದರೆ ಸಾಕಾಗುತ್ತದೆ.

Tumeric Rhizome with Green Leaf and Turmeric Powder

ಅರಿಶಿನದೊಂದಿಗೆ

ಹರಿದ್ರಾ ಸಹ ಸೌಂದರ್ಯವರ್ಧನೆಗಾಗಿ ಬಳಕೆಯಲ್ಲಿದೆ. 1 ಚಮಚ ಕಡಲೆ ಹಿಟ್ಟಿಗೆ ಚಿಟಿಕೆ ಅರಿಶಿನ, ಅರ್ಧ ಚಮಚ ಜೇನುತುಪ್ಪ ಮತ್ತು ಪೇಸ್ಟ್‌ ಮಾಡುವುದಕ್ಕೆ ಸಾಕಾಗುವಷ್ಟು ಗುಲಾಬಿ ಜಲ ಹಾಕಿ. ಇದನ್ನು ಮುಖಕ್ಕೆ ಸಮನಾಗಿ ಹಚ್ಚಿ. 20 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಮುಖ ಆರಿದ ನಂತರ ನಿತ್ಯ ಬಳಸುವ ಮಾಯಿಶ್ಚರೈಸರ್‌ ಹಚ್ಚಿ.

Lemon Anti Infective Foods

ನಿಂಬೆಯ ಸ್ಕ್ರಬ್‌

ಒಂದು ಚಮಚ ಕಡಲೆಹಿಟ್ಟನ್ನು 1 ಚಮಚ ಮೊಸರಿನೊಂದಿಗೆ ಮಿಶ್ರ ಮಾಡಿ. ಇದಕ್ಕೆ ಅರ್ಧ ಚಮಚ ಜೇನುತುಪ್ಪ ಮತ್ತು ಆರೆಂಟು ಹನಿ ನಿಂಬೆ ರಸ ಹಾಕಿ. ಇದನ್ನು ಒದ್ದೆ ಮುಖಕ್ಕೆ ಹಾಕಿ, ಲಘುವಾಗಿ ಉಜ್ಜಿ. ಇದನ್ನು ಅತಿಯಾಗಿ ಮಾಡಿದರೆ ಚರ್ಮ ಕೆಂಪಾಗುತ್ತದೆ, ಜಾಗ್ರತೆ. ಒಂದೆರಡು ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕು.

ಕ್ಲೆನ್ಸರ್‌

ಒಂದು ಚಮಚ ಕಡಲೆ ಹಿಟ್ಟಿಗೆ ಅರ್ಧ ಚಮಚ ಹಾಲು, ಅರ್ಧ ಚಮಚ ಗುಲಾಬಿಜಲ ಬೆರೆಸಿ ಪೇಸ್ಟ್‌ ಮಾಡಿ. ಇದನ್ನು ವೃತ್ತಾಕಾರದಲ್ಲಿ ಮುಖಕ್ಕೆ ಹಾಕಿ. ಆದರೆ ಜೋರಾಗಿ ಉಜ್ಜಬಾರದು. ಒಂದೆರಡು ನಿಮಿಷಗಳ ನಂತರ ತೊಳೆಯಿರಿ. ಇದನ್ನು ವಾರದಲ್ಲಿ 2-3 ಬಾರಿ ಮಾಡಬಹುದು.

fruit Facemask

ತರಕಾರಿ-ಹಣ್ಣುಗಳ ಮಾಸ್ಕ್‌

ಪಪ್ಪಾಯ, ಬಾಳೆಯಣ್ಣು, ಮೆಲನ್‌ಗಳು ಮುಂತಾದ ಯಾವುದೇ ಹಣ್ಣುಗಳನ್ನು ಕಡಲೆಹಿಟ್ಟಿನೊಂದಿಗೆ ಬೆರೆಸಿ ಫೇಸ್‌ಮಾಸ್ಕ್‌ ತಯಾರಿಸಬಹುದು. ಸೌತೇಕಾಯಿ, ಕ್ಯಾರೆಟ್‌ ಮುಂತಾದ ತರಕಾರಿಗಳ ರಸವನ್ನು ಕಡಲೆಹಿಟ್ಟಿನೊಂದಿಗೆ ಸೇರಿಸಿ ಮುಖಕ್ಕೆ ಮಾಸ್ಕ್‌ ಮಾಡಿದರೆ ಉತ್ತಮ ಪರಿಣಾಮ ದೊರೆಯುತ್ತದೆ. ಇಂಥ ಯಾವುದನ್ನು ಬಳಸುವಾಗಲೂ ನಿಮ್ಮ ಚರ್ಮಕ್ಕೆ ಒಗ್ಗುತ್ತದೆಯೋ ಇಲ್ಲವೊ ಎಂಬ ಅನುಮಾನವಿದ್ದರೆ, ಕೈಮೇಲೆ ಪ್ಯಾಚ್‌ ಟೆಸ್ಟ್‌ ಮಾಡಿಕೊಳ್ಳಿ.

ಇದನ್ನೂ ಓದಿ: Health Tips Kannada: ಕೊಲೆಸ್ಟ್ರಾಲ್‌ ತಗ್ಗಿಸಲು ಈ ಬೆಳಗಿನ ಪೇಯಗಳಿಂದ ಸಾಧ್ಯ! ಪ್ರಯತ್ನಿಸಿ

Continue Reading

ಆರೋಗ್ಯ

Health Tips Kannada : ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು?

Health Tips Kannada: ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು? ಇವತ್ತು ಎಲ್ಲರೂ ಬಯಸೋದು ಆರೋಗ್ಯ ಚೆನ್ನಾಗಿರಲಿ ಎಂದು. ಆದರೆ ಇದಕ್ಕಾಗಿ ಎಷ್ಟು ಗಂಟೆಗಳ ಕಾಲ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು ಮತ್ತು ಮಲಗಬೇಕು ಎನ್ನುವ ಗೊಂದಲ ಇದ್ದೇ ಇರುತ್ತದೆ. ಆದರೆ ಹೊಸ ಅಧ್ಯಯನವೊಂದು ಇದಕ್ಕೆ ಉತ್ತರ ಕಂಡು ಹಿಡಿದಿದೆ.

VISTARANEWS.COM


on

By

Health Tips Kannada
Koo

ಉತ್ತಮ (Health Tips Kannada) ಆರೋಗ್ಯಕ್ಕಾಗಿ (Good Health) ಎಷ್ಟು ಗಂಟೆಗಳ ಕಾಲ ಕುಳಿತುಕೊಳ್ಳಬೇಕು (Sit), ನಿಂತುಕೊಳ್ಳಬೇಕು (Stand) ಮತ್ತು ಮಲಗಬೇಕು (Sleep) ಎನ್ನುವ ಗೊಂದಲ ಎಲ್ಲರಲ್ಲೂ ಇರುತ್ತದೆ. ಇದರಲ್ಲಿ ಎಷ್ಟು ಗಂಟೆ ಮಲಗಬೇಕು ಎನ್ನುವುದಕ್ಕೆ ಬಹುತೇಕ ಮಂದಿಗೆ ಉತ್ತರ ಗೊತ್ತಿರುತ್ತದೆ. ಆದರೆ ಎಷ್ಟು ಗಂಟೆ ನಿಲ್ಲಬೇಕು, ಕುಳಿತುಕೊಳ್ಳಬೇಕು ಎನ್ನುವುದನ್ನು ಹೇಳುವುದು ಕಷ್ಟ.

ಇದೀಗ ಹೊಸ ಅಧ್ಯಯನವೊಂದು ನಾವು ಆರೋಗ್ಯವಾಗಿರಲು ಎಷ್ಟು ಹೊತ್ತು ಸಕ್ರಿಯವಾಗಿರುವುದು ಅತ್ಯಗತ್ಯ ಎಂಬುದನ್ನು ಹೇಳಿದೆ. ಅದರಲ್ಲೂ ನಾವು ಎಷ್ಟು ಗಂಟೆಗಳ ಕಾಲ ಕುಳಿತುಕೊಳ್ಳಬೇಕು ಅಥವಾ ನಿಲ್ಲಬೇಕು ಅಥವಾ ವ್ಯಾಯಾಮ ಮಾಡಬೇಕು ಎಂಬುದಕ್ಕೆ ಈ ಹೊಸ ಅಧ್ಯಯನವು ಉತ್ತರ ನೀಡಿದೆ.

ಜಡ ಜೀವನಶೈಲಿಯನ್ನು ಮುರಿಯುವ ಒಂದು ಸುಲಭ ವಿಧಾನವೆಂದರೆ ಹೆಚ್ಚು ದೈಹಿಕವಾಗಿ ಸಕ್ರಿಯವಾಗಿರುವುದು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯಕಾರಣ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತೊಂದರೆಗಳು. ಹೆಚ್ಚು ಹೊತ್ತು ವ್ಯಾಯಾಮ ಮಾಡುವುದು, ಆರೋಗ್ಯಕರ, ಪೌಷ್ಟಿಕಾಂಶ ಭರಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಅಲ್ಲದೇ ದೀರ್ಘ ಗಂಟೆಗಳ ಕಾಲ ಕುಳಿತುಕೊಳ್ಳುವ ತೊಂದರೆಗಳನ್ನು ಎದುರಿಸುವುದು ಕೂಡ ಬಹುಮುಖ್ಯ.

ಇದನ್ನೂ ಓದಿ: Health Tips Kannada: ಕೊಲೆಸ್ಟ್ರಾಲ್‌ ತಗ್ಗಿಸಲು ಈ ಬೆಳಗಿನ ಪೇಯಗಳಿಂದ ಸಾಧ್ಯ! ಪ್ರಯತ್ನಿಸಿ

ದೈಹಿಕ ಚಟುವಟಿಕೆಗಾಗಿ ಎಷ್ಟು ಗಂಟೆಗಳನ್ನು ವಿನಿಯೋಗಿಸಬೇಕು, ಎಷ್ಟು ಸಮಯ ನಿಲ್ಲಬೇಕು ಅಥವಾ ಕುಳಿತುಕೊಳ್ಳಬೇಕು ಎಂಬುದರ ಕುರಿತು ಹೊಸ ಆಸ್ಟ್ರೇಲಿಯನ್ ತಂಡವೊಂದು ಅಧ್ಯಯನ ನಡೆಸಿದೆ.

ಎಷ್ಟು ಗಂಟೆಗಳ ದೈಹಿಕ ಚಟುವಟಿಕೆ ಮುಖ್ಯ?

ಅತ್ಯುತ್ತಮ ಆರೋಗ್ಯಕ್ಕಾಗಿ, ವ್ಯಕ್ತಿಯ ದಿನವು ಬೆಳಗಿನ ವ್ಯಾಯಾಮ ದಿಂದ ಪ್ರಾರಂಭವಾಗಬೇಕು. ಕನಿಷ್ಠ ಎಂಟು ಗಂಟೆಗಳ ನಿದ್ರೆಯನ್ನು ಒಳಗೊಂಡ ನಾಲ್ಕು ಗಂಟೆಗಳ ದೈಹಿಕ ಚಟುವಟಿಕೆಯನ್ನು ಒಳಗೊಂಡಿರಬೇಕು. ಲಘು- ತೀವ್ರತೆಯ ಚಟುವಟಿಕೆಯು ಮನೆಗೆಲಸವನ್ನು ಮಾಡುವುದರಿಂದ ಭೋಜನವನ್ನು ಮಾಡುವವರೆಗೆ ಇರುತ್ತದೆ. ಆದರೆ ಮಧ್ಯಮ ಮತ್ತು ಹುರುಪಿನ ವ್ಯಾಯಾಮವು ಚುರುಕಾದ ನಡಿಗೆ ಅಥವಾ ಜಿಮ್ ವ್ಯಾಯಾಮದಂತಹ ಹೆಚ್ಚು ಉದ್ದೇಶಪೂರ್ವಕ ಚಲನೆಯನ್ನು ಒಳಗೊಂಡಿರುತ್ತದೆ ಎನ್ನುತ್ತಾರೆ ಸಂಶೋಧಕರು.

ದಿನದಲ್ಲಿ 4 ಗಂಟೆಗಳ ದೈಹಿಕ ಚಟುವಟಿಕೆ, 8 ಗಂಟೆಗಳ ನಿದ್ದೆ, 6 ಗಂಟೆ ಕುಳಿತುಕೊಳ್ಳುವುದು, 5 ಗಂಟೆ ನಿಂತಿರುವುದು ಆರೋಗ್ಯವಾಗಿರಲು ವ್ಯಕ್ತಿಗೆ ಅತ್ಯಗತ್ಯವಾಗಿದೆ.


ಅಧ್ಯಯನ ಏನು ಹೇಳುತ್ತದೆ?

ಆಸ್ಟ್ರೇಲಿಯದ ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ನೇತೃತ್ವದ ಅಂತಾರಾಷ್ಟ್ರೀಯ ತಂಡವು 24 ಗಂಟೆಗಳ ದಿನದಲ್ಲಿ 2,000ಕ್ಕೂ ಹೆಚ್ಚು ಜನರ ನಡವಳಿಕೆಯನ್ನು ಅಧ್ಯಯನ ನಡೆಸಿದೆ. ಆರೋಗ್ಯವಾಗಿರಲು ಕುಳಿತುಕೊಳ್ಳುವುದು, ಮಲಗುವುದು, ನಿಂತಿರುವುದು ಮತ್ತು ದೈಹಿಕವಾಗಿ ಸಕ್ರಿಯವಾಗಿರುವ ಸಮಯವನ್ನು ಸರಿಯಾಗಿ ನಿರ್ಧರಿಸಿದೆ.

ಅತ್ಯುತ್ತಮ ಆರೋಗ್ಯಕ್ಕೆ ಸಂಬಂಧಿಸಿ 24 ಗಂಟೆಗಳಲ್ಲಿ ದೈಹಿಕ, ಮಾನಸಿಕ ಚಟುವಟಿಕೆಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸಗಳಿರುತ್ತವೆ. ವಿಭಿನ್ನ ಆರೋಗ್ಯ ಗುರುತುಗಳಿಗೆ ಸೊಂಟದ ಸುತ್ತಳತೆಯಿಂದ ಹಿಡಿದು ಉಪವಾಸದ ಗ್ಲೂಕೋಸ್‌ನವರೆಗೆ ಪ್ರತಿ ನಡವಳಿಕೆಗೆ ವಿಭಿನ್ನ ಹಂತಗಳಿವೆ ಎಂದು ಸ್ವಿನ್‌ಬರ್ನ್ ಟೆಕ್ನಾಲಜಿ ವಿಶ್ವವಿದ್ಯಾಲಯದ ನಗರ ಪರಿವರ್ತನೆಗಳ ಕೇಂದ್ರದಿಂದ ಕ್ರಿಶ್ಚಿಯನ್ ಬ್ರೇಕೆನ್‌ರಿಡ್ಜ್ ಹೇಳಿದ್ದಾರೆ.

ಹೆಚ್ಚು ಸಮಯ ದೈಹಿಕವಾಗಿ ಸಕ್ರಿಯವಾಗಿರುವ ಅಥವಾ ಲಘು-ತೀವ್ರತೆಯ ಚಲನೆಗಳೊಂದಿಗೆ ಕುಳಿತುಕೊಳ್ಳುವ ಸಮಯವನ್ನು ಬದಲಾಯಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ, ಇದು ರಕ್ತದ ಗ್ಲೂಕೋಸ್ ಮಟ್ಟಗಳೊಂದಿಗೆ ಸಂಬಂಧಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹೆಚ್ಚು ಕುಳಿತುಕೊಳ್ಳುವುದು ಅನಾರೋಗ್ಯಕರ

ಒಂದು ನಿರ್ದಿಷ್ಟ ಚಟುವಟಿಕೆಯು ಇನ್ನೊಂದನ್ನು ಬದಲಿಸುವ ವ್ಯಕ್ತಿಯ ಇಡೀ ದಿನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕೂಡ ಸಂಶೋಧಕರು ಕಂಡು ಹಿಡಿದಿದ್ದಾರೆ. ಒಂದೇ ಕಡೆ ಅತಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದೂ ಅನಾರೋಗ್ಯಕ್ಕೆ ದಾರಿ ಎಂದು ಅಧ್ಯಯನ ತಿಳಿಸಿದೆ.

ಹೆಚ್ಚು ಚಟುವಟಿಕೆಯೂ ಒಳ್ಳೆಯದಲ್ಲ

ವ್ಯಾಯಾಮವು ಹೆಚ್ಚು ಪ್ರಯೋಜನಕಾರಿಯಾಗಿದ್ದರೂ ಸಮಯದ ಬಳಕೆ ವಾಸ್ತವಿಕ ಮತ್ತು ಸಮತೋಲಿತವಾಗಿರಬೇಕು. ಹೆಚ್ಚು ಸಮಯ ವ್ಯಾಯಾಮ ಮಾಡಲು ಸಲಹೆ ನೀಡಬಹುದು. ಆದರೂ ಅತಿಯಾಗಿ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Covishield Vaccine: ಕೋವಿಶೀಲ್ಡ್ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ, ಕೂಲ್‌ ಡ್ರಿಂಕ್ಸ್‌ ಸೇವಿಸಬಾರದು: ತಪ್ಪು ಮಾಹಿತಿ ಕೊಟ್ಟ ಕಾಲೇಜುಗಳಿಗೆ ನೋಟಿಸ್

Covishield Vaccine: ಕೋವಿಶೀಲ್ಡ್ ಲಸಿಕೆ ಅಡ್ಡಪಾರಿಣಾಮಗಳ ಸಂಬಂಧ ಸೂಚನಾ ಪತ್ರ ಹೊರಡಿಸಿ ಎಡವಟ್ಟು ಮಾಡಿಕೊಂಡಿದ್ದ ಚಿಕ್ಕಬಳ್ಳಾಪುರದ ಹಲವು ಕಾಲೇಜು ಆಡಳಿತ ಮಂಡಳಿಗಳ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.

VISTARANEWS.COM


on

Covishield Vaccine
Koo

ಚಿಕ್ಕಬಳ್ಳಾಪುರ: ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ದಿಢೀರ್‌ ಹೃದಯಾಘಾತ, ರಕ್ತ ಹೆಪ್ಪುಗಟ್ಟುವುದು ಸೇರಿ ಹಲವು ರೀತಿಯ ಅಡ್ಡಪರಿಣಾಮಗಳು ಉಂಟಾಗಲಿವೆ ಎಂಬ ಸುದ್ದಿಗಳು ವರದಿಯಾದ ಹಿನ್ನೆಲೆಯಲ್ಲಿ ಲಸಿಕೆ ಪಡೆದವರಲ್ಲಿ ಆತಂಕ ಮೂಡಿದೆ. ಈ ನಡುವೆ ಕೋವಿಶೀಲ್ಡ್ ಲಸಿಕೆ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ ಹಾಗೂ ತಂಪು ಪಾನೀಯ ಸೇವನೆ ಮಾಡದಂತೆ ಹಲವು ಕಾಲೇಜು ಆಡಳಿತ ಮಂಡಳಿಗಳು ಸೂಚನಾ ಪತ್ರದ ಮೂಲಕ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದವು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ, ತಪ್ಪು ಮಾಹಿತಿ ನೀಡಿದ ನಗರದ ವಿವಿಧ ಕಾಲೇಜುಗಳ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.

ನಗರದ ಸಿದ್ದರಾಮಯ್ಯ ಲಾ ಕಾಲೇಜು ಹಾಗೂ ಜಚನಿ ಪ್ರಥಮ ದರ್ಜೆ ಕಾಲೇಜುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಿಂದ ನೋಟಿಸ್ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ದಿಢೀರ್ ಹೃದಯಾಘಾತ, ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಸೂಚನೆ ಪ್ರಕಾರ ಈ ಲಸಿಕೆ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ ಹಾಗೂ ತಂಪು ಪಾನೀಯಗಳು ಸೇವನೆ ಮಾಡಬಾರದು ಎಂದು ಕಾಲೇಜು ಆಡಳಿತ ಮಂಡಳಿಗಳು ಸೂಚನಾ ಪತ್ರ ಹೊರಡಿಸಿದ್ದವು.

ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಲೇಜುಗಳ ಸೂಚನಾ ಪತ್ರಗಳು ವೈರಲ್‌ ಆಗಿದ್ದರಿಂದ ತಕ್ಷಣ ಎಚ್ಚೆತ್ತ ಜಿಲ್ಲಾಡಳಿತ, ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಸೂಚನಾ ಪತ್ರಗಳ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ಜಿಲ್ಲಾಧಿಕಾರಿ ನೇತೃತ್ವದ ಡಿಜಾಸ್ಟರ್ ಮ್ಯಾನೇಜ್ಮೆಂಟ್ ಕಮಿಟಿಯಿಂದ ಕಾಲೇಜುಗಳಿಗೆ ನೋಟಿಸ್‌ ನೀಡಲಾಗಿದೆ.

ಇದನ್ನೂ ಓದಿ | Covishield vaccine: ಕೋವಿಶೀಲ್ಡ್‌ ‌ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್‌ ವೈರಲ್‌!

ಆರೋಗ್ಯ ಇಲಾಖೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ

ಕೋವಿಶೀಲ್ಡ್‌ ಲಸಿಕೆ ಪಡೆದವರು ಫ್ರಿಡ್ಜ್‌ನಲ್ಲಿಟ್ಟ ನೀರು, ತಂಪು ಪಾನೀಯಗಳು ಹಾಗೂ ಐಸ್‌ಕ್ರೀಂ ಸೇವಿಸಬಾರದು ಎಂಬ ಕಾಲೇಜು ಆಡಳಿತ ಮಂಡಳಿಗಳ ಸೂಚನಾ ಪತ್ರ ವೈರಲ್‌ ಆಗಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿತ್ತು. ಹೀಗಾಗಿ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮಗಳ ಬಗ್ಗೆ ಇಲಾಖೆಯಿಂದ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ತಿಳಿಸಿದೆ.

ರಕ್ಷಿತ್‌ ಗಣಪತಿ ಎಂಬುವವರು, ಎಕ್ಸ್‌ ಖಾತೆಯಲ್ಲಿ ಚಿಕ್ಕಬಳ್ಳಾಪುರದ ಸಿದ್ದರಾಮಯ್ಯ ಲಾ ಕಾಲೇಜಿನ ಸೂಚನಾ ಪತ್ರ ಹಾಕಿ, “ಇದು ನಿಜವೇ? ಈ ಪತ್ರ ನೆನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ, ದಯವಿಟ್ಟು ಸ್ಪಷ್ಟನೆ ನೀಡಿ ಎಂದು ಕೋರಿ, ಸಿಎಂ ಸಿದ್ದರಾಮಯ್ಯ, ಆರೋಗ್ಯ ಇಲಾಖೆಗೆ ಟ್ಯಾಗ್‌ ಮಾಡಿದ್ದರು. ಇದಕ್ಕೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

Continue Reading
Advertisement
RCB vs GT
ಕ್ರೀಡೆ8 seconds ago

RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಇಂದು ಶೇ.99ರಷ್ಟು ನಿರಾಸೆ ಖಚಿತ; ಪಂದ್ಯ ನಡೆಯುವುದೇ ಅನುಮಾನ

rahul gandhi gary Kasparov
ವೈರಲ್ ನ್ಯೂಸ್13 mins ago

Rahul Gandhi: ರಾಹುಲ್‌ ಗಾಂಧಿಗೆ “ಮೊದಲು ರಾಯ್‌ಬರೇಲಿಯಿಂದ ಗೆಲ್ಲಿ…” ಎಂದ ಚೆಸ್‌ ದಂತಕಥೆ ಗ್ಯಾರಿ ಕಾಸ್ಪರೋವ್!

Lok Sabha Election 2024
Lok Sabha Election 202441 mins ago

Lok Sabha Election 2024: ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್‌ ಅಭ್ಯರ್ಥಿ; ವಿಡಿಯೊ ಇಲ್ಲಿದೆ

Viral News
ವೈರಲ್ ನ್ಯೂಸ್48 mins ago

Viral News: ಹೆರಿಗೆಯಾದ ಮೂರು ಗಂಟೆಗಳಲ್ಲೇ ಅಪಾರ್ಟ್‌ಮೆಂಟ್‌ ಮೇಲಿಂದ ಮಗುವನ್ನೇ ಎಸೆದ್ಳಾ?

king dasharatha kaikeyi dhavala dharini column
ಅಂಕಣ1 hour ago

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Weight Loss Tips
ಆರೋಗ್ಯ2 hours ago

Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

saddam hussain pocso case culprit hubli
ಕ್ರೈಂ2 hours ago

Physical Abuse: ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸದ್ದಾಂ ಹುಸೇನ್‌ ಕಾಲಿಗೆ ಗುಂಡೇಟು

Karnataka Weather Forecast
ಮಳೆ2 hours ago

Karnataka Weather: ಯೆಲ್ಲೋ ಅಲರ್ಟ್‌; ಬೆಂಗಳೂರು ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Pakistan PM
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಪಾಕಿಸ್ತಾನ ಮೊದಲು ತನ್ನ ತಟ್ಟೆಯಲ್ಲಿ ಬಿದ್ದಿರುವ ನೊಣ ತೆಗೆಯಲಿ, ಪಾಠ ಕಲಿಯಲಿ

Tips For Healthy Skin
ಆರೋಗ್ಯ3 hours ago

Tips For Healthy Skin: ಕಡಲೆಹಿಟ್ಟೆಂಬ ಶತಮಾನಗಳ ಹಳೆಯ ಸೌಂದರ್ಯವರ್ಧಕ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ16 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌