Tripura Election Result: ಅಧಿಕಾರ ಉಳಿಸಿಕೊಂಡ ಬಿಜೆಪಿ, ಕೈಗೂಡದ 'ಕಿಂಗ್‌'ಮೇಕರ್ ಆಸೆ, ಲೆಫ್ಟ್-ಕೈಗೆ ಮತ್ತೆ ನಿರಾಸೆ - Vistara News

ದೇಶ

Tripura Election Result: ಅಧಿಕಾರ ಉಳಿಸಿಕೊಂಡ ಬಿಜೆಪಿ, ಕೈಗೂಡದ ‘ಕಿಂಗ್‌’ಮೇಕರ್ ಆಸೆ, ಲೆಫ್ಟ್-ಕೈಗೆ ಮತ್ತೆ ನಿರಾಸೆ

Tripura Election Result: ಭಾರೀ ಕುತೂಹಲ ಕೆರಳಿಸಿದ್ದ ಮತ್ತು ತೀವ್ರ ಸ್ಪರ್ಧೆಗೆ ಕಾರಣವಾಗಿದ್ದ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತವನ್ನು ಪಡೆಯಲು ಯಶಸ್ವಿಯಾಗಿದೆ. ಒಟ್ಟು 33 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

VISTARANEWS.COM


on

Tripura Election Result: BJP retains power in tripura and cong-left parties defeated
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
vistara-vishleshane-

ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ಲ್ಲರ ನಿರೀಕ್ಷೆ ಹುಸಿ ಮಾಡಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷ(BJP)ವು, ತ್ರಿಪುರಾದಲ್ಲಿ ಸರಳ ಬಹುಮತದೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೇರಿದೆ(Tripura Election Result). ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16ರಂದು ಮತದಾನ ನಡೆದಿತ್ತು. ಮಾರ್ಚ್ 2, ಗುರುವಾರ ರಿಸಲ್ಟ್ ಪ್ರಕಟವಾಗಿದ್ದು, ಬಿಜೆಪಿಯ 33 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಆದರೆ, ಈ ಬಾರಿಯ ಚುನಾವಣೆಯು ಬಿಜೆಪಿಗೆ ಅಷ್ಟು ಸುಲಭವಾಗಿರಲಿಲ್ಲ. ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಕೂಟ(Left parties and Congress) ಹಾಗೂ ತಿಪ್ರಾ ಮೋಥಾ ಪಕ್ಷ(Tipra Motha party)ಗಳಿಂದ ತೀವ್ರ ಪ್ರತಿಸ್ಪರ್ಧೆಯನ್ನು ಎದುರಿಸಬೇಕಾಯಿತು.

ಎಕ್ಸಿಟ್ ಪೋಲ್‌ಗಳು ಕೂಡ ತ್ರಿಪುರಾದಲ್ಲಿ ಹಂಗ್ ಅಸೆಂಬ್ಲಿಯನ್ನು ಊಹಿಸಿದ್ದವು ಮತ್ತು ತಿಪ್ರಾ ಮೋಥಾದ ನಾಯಕ, ರಾಜಮನೆತನದ ಪ್ರದ್ಯೋತ್ ಮಾಣಿಕ್ಯ ದೇಬ್ ಬರ್ಮ್ ಅವರು ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಫಲಿತಾಂಶವು ಮಾತ್ರ ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿದೆ. ತ್ರಿಪುರಾ ವಿಧಾನಸಭೆ ಬಲ 60. ಸರಳ ಬಹುಮತಕ್ಕೆ 31 ಸೀಟು ಗೆಲ್ಲಬೇಕು. ಬಿಜೆಪಿ, 33 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ತನ್ನಲ್ಲೇ ಉಳಿಸಿದೆ ಕೊಂಡಿದೆ.

ದಶಕಗಳ ಎಡಪಕ್ಷಗಳ ಆಡಳಿತಕ್ಕೆ ಕೊನೆ ಹಾಡಿ, 2018ರಲ್ಲಿ ಬಿಜೆಪಿ ಭರ್ಜರಿ ಜಯದೊಂದಿಗೆ ತ್ರಿಪುರಾದಲ್ಲಿ ಇತಿಹಾಸ ಸೃಷ್ಟಿಸಿತ್ತು. ಈಶಾನ್ಯ ಭಾರತದ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯಲು ತ್ರಿಪುರಾ ಗೆಲ್ಲುವ ಮೂಲಕ, ತಾನು ಎಲ್ಲಡೆಯೂ ಸಲ್ಲುವ ಪಕ್ಷ ಎಂಬುದನ್ನು ಸಾಬೀತು ಪಡಿಸಿತ್ತು. ಈಗ ಮತ್ತೆ, 2023ರಲ್ಲಿ ಅದೇ ಕೆಲಸವನ್ನು ಮತ್ತೆ ರಿಪೀಟ್ ಮಾಡಿದೆ.

ಯಾರಿಗೆ ಎಷ್ಟು ಸೀಟು?

2023ರ ಸಾಲಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು 33, ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಕೂಟ 14, ತಿಪ್ರಾ ಮೋಥಾ 13 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. 2018 ಚುನಾವಣೆಗೆ ಹೋಲಿಸಿದರೆ, ಬಿಜೆಪಿ ಹತ್ತು ಸ್ಥಾನಗಳನ್ನು ಕಳೆದುಕೊಂಡಿದೆ. ಇದೇ ವೇಳೆ, ಎಡ ಪಕ್ಷಗಳಿಗೂ 2 ಸ್ಥಾನಗಳು ಮೈನಸ್ ಆಗಿವೆ. ಬಿಜೆಪಿ ಮತ್ತು ಎಡಪಕ್ಷಗಳು ಕಳೆದುಕೊಂಡ ಸ್ಥಾನಗಳು ತಿಪ್ರಾ ಪಾಲಾಗಿವೆ.

ಮತ ಪ್ರಮಾಣ: ಬಿಜೆಪಿ ಶೇ. 41.2 ಮತಗಳನ್ನು ಪಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಶೇ.9.79 ಮತ ಕಡಿಮೆಯಾಗಿದೆ. ಇದೇ ವೇಳೆ, ಕಾಂಗ್ರೆಸ್‌- ಲೆಫ್ಟ್ ಪಾರ್ಟಿ ಕೂಡ ಶೇ.9.84 ಮತ ಕಡಿಮೆಯಾಗಿದ್ದು, ಒಟ್ಟು 36.3 ಪಡೆದುಕೊಂಡಿದೆ.

2018ರ ಫಲಿತಾಂಶ: ಬಿಜೆಪಿ 36, ಸಿಪಿಎಂ 16 ಮತ್ತು ಐಪಿಎಫ್‌ಟಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಕಿಂಗ್ ಮೇಕರ್ ಆಗಲಿಲ್ಲ ಮೋಥಾ

2023ರ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ್ದು ತಿಪ್ರಾ ಮೋಥಾ ಪಾರ್ಟಿ(ತಿಪ್ರಾಹ ಇಂಡಿಜಿನೀಯಸ್ ಪ್ರೊಗ್ರೆಸಿವ್ ರಿಜೀನಲ್ ಅಲೈನ್ಸ್). ರಾಜಮನೆತನದ ಪ್ರದ್ಯೋತ್ ಮಾಣಿಕ್ಯ ದೇಬ್ ಬರ್ಮ್ ಅವರು ಈ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಚುನಾವಣಾ ಪೂರ್ವ ತಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ, ಬುಡುಕಟ್ಟು ಪಕ್ಷಗಳನ್ನು ಒಗ್ಗೂಡಿಸಿ ತಿಪ್ರಾ ಪಾರ್ಟಿಯ ಮೂಲಕ ಪ್ರದ್ಯೋತ್ ಈ ಬಾರಿ ಚುನಾವಣಾ ಕಣಕ್ಕೆ ಧುಮುಕಿದ್ದರು.

ತ್ರಿಪುರಾದ ಸುಮಾರು 20ರಿಂದ 25 ಕ್ಷೇತ್ರಗಳಲ್ಲಿ ಬುಡಕಟ್ಟು ಜನಾಂಗದ ಮತಗಳು ನಿರ್ಣಾಯಕವಾಗಿದ್ದವು. ಹಿನ್ನೆಲೆಯಲ್ಲಿ ತಿಪ್ರಾ ಮೋಥಾ ಪಾರ್ಟಿ ಬಿಜೆಪಿಗೆ ಭಾರೀ ಹೊಡೆತವನ್ನು ನೀಡಲಿದ್ದು, ಹಂಗ್ ಅಸೆಂಬ್ಲಿಯನ್ನು ಬಹುತೇಕರು ನಿರೀಕ್ಷಿಸಿದ್ದರು. ಹಂಗ್ ಅಸೆಂಬ್ಲಿ ಸೃಷ್ಟಿಯಾಗದಿದ್ದರೂ, ಕಾಂಗ್ರೆಸ್‌ನ ಮಾಜಿ ನಾಯಕರೂ ಆಗಿರುವ ಪ್ರದ್ಯೋತ್ ತಮ್ಮ ಶಕ್ತಿಯನ್ನು ಈ ಎಲೆಕ್ಷನ್‌ನಲ್ಲಿ ಪ್ರದರ್ಶಿಸಿದ್ದಾರೆ. ಒಟ್ಟು 13 ಕ್ಷೇತ್ರಗಳನ್ನು ಗೆದ್ದುಕೊಂಡು, ಬಿಜೆಪಿಯ ಹಿಂದಿನ ಚುನಾವಣೆಯಲ್ಲಿ ಗೆದ್ದ ಸ್ಥಾನಗಳನ್ನು ಈ ಬಾರಿ ಕಡಿಮೆ ಮಾಡಲು ಯಶಸ್ವಿಯಾಗಿದೆ.

ಐಪಿಎಫ್‌ಟಿ ವಾಶೌಟ್

ಬಿಜೆಪಿ ನೇತೃತ್ವದ ಮೈತ್ರಿಕೂಟದ ಲೆಕ್ಕಾಚಾರವು 10ಕ್ಕೂ ಹೆಚ್ಚು ಸ್ಥಾನಗಳಿಂತಲೂ ಕುಸಿದಿದ್ದರೆ, ಪಕ್ಷದ ಸ್ಥಾನಗಳ ಸಂಖ್ಯೆ 36ರಿಂದ 33ಕ್ಕೆ ಇಳಿಕೆಯಾಗಿದೆ. ಈ ಚುನಾವಣೆಯಲ್ಲಿ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ(ಐಪಿಎಫ್‌ಟಿ) ಸೋಲು ಕಂಡಿದೆ. 2018ರಲ್ಲಿ 8 ಸ್ಥಾನ ಗೆದ್ದಿದ್ದ ಐಪಿಎಫ್‌ಟಿ ಕೇವಲ 1 ಸ್ಥಾನವನ್ನು ಮಾತ್ರ ಗೆದ್ದಿದೆ.

ಎಡಪಕ್ಷಗಳು, ಕಾಂಗ್ರೆಸ್‌ಗೆ ಮತ್ತೆ ಹಿನ್ನಡೆ

2023ರ ಚುನಾವಣೆಯಲ್ಲಿ ಹೇಗಾದರೂ ಗೆದ್ದೇ ಗೆಲ್ಲಬೇಕೆಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕೆ ಧುಮುಕಿದ್ದವು. ಆದರೆ, ಅವರ ಈ ಪ್ರಯತ್ನಕ್ಕೆ ಮತದಾರ ಸೊಪ್ಪು ಹಾಕಿಲ್ಲ. ಇನ್‌ಫ್ಯಾಕ್ಟ್‌ ಕಳೆದ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಎರಡು ಸ್ಥಾನ ಕುಸಿತವಾಗಿದೆ. 14 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಮಾತ್ರ ಸಾಧ್ಯವಾಗಿದೆ.

ಇದನ್ನೂ ಓದಿ: Northeast Assembly Election Result: ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾಗೆ ಗೆಲುವು; ಸಂಭ್ರಮಾಚರಣೆ ಶುರು

ಮಾಣಿಕ್ ಸಾಹಾ ಮತ್ತೆ ಸಿಎಂ

ಮಿಸ್ಟರ್ ಕ್ಲೀನ್ ಎಂದ ಖ್ಯಾತರಾಗಿರುವ ಹಾಲಿ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಸಾಹಾ ಅವರು ಬಾರ್ಡೋವಲಿ ಟೌನ್ ಕ್ಷೇತ್ರದಿಂದ ಸ್ಪರ್ಧಿಸಿ, 1,257 ಮತಗಳ ಅಂತರದಿಂದ ಕಾಂಗ್ರೆಸ್‌ನ ಹಿರಿಯ ನಾಯಕ ಆಶೀಸ್ ಕುಮಾರ್ ವಿರುದ್ಧ ಗೆದ್ದಿದ್ದಾರೆ. 69 ವರ್ಷದ ಸಾಹಾ ಎರಡನೇ ಬಾರಿಗೆ ಸಿಎಂ ಆಗಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hijab Ban: ತರಗತಿಯಲ್ಲಿ ಹಿಜಾಬ್‌, ಬುರ್ಖಾ ನಿಷೇಧ; ಕಾಲೇಜು ಆದೇಶ ಎತ್ತಿಹಿಡಿದ ಹೈಕೋರ್ಟ್‌

Hijab Ban: ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದು ಅವರ ಆಯ್ಕೆ ಹಾಗೂ ವೈಯಕ್ತಿಕ ವಿಚಾರವಾಗಿದೆ ಎಂದು ಮುಸ್ಲಿಂ ವಿದ್ಯಾರ್ಥಿನಿಯರ ಪರ ವಕೀಲ ವಾದ ಮಂಡಿಸಿದರು. ಕಾಲೇಜಿನಲ್ಲಿ ಯಾವುದೇ ಧರ್ಮ, ಜಾತಿ, ಸಮುದಾಯವನ್ನು ಗಮನಿಸಿದೆ, ಎಲ್ಲರಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಪರ ವಕೀಲ ತಿಳಿಸಿದರು. ಕೊನೆಗೆ ನ್ಯಾಯಾಲಯವು, ಆಡಳಿತ ಮಂಡಳಿ ತೀರ್ಮಾನವನ್ನು ಎತ್ತಿಹಿಡಿಯಿತು.

VISTARANEWS.COM


on

Hijab Ban
Koo

ಮುಂಬೈ: ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌, ಬುರ್ಖಾ ಧರಿಸುವ ಕುರಿತು ವಿವಾದ (Hijab Row) ಭುಗಿಲೆದ್ದಿದೆ. ಇದರ ಬೆನ್ನಲ್ಲೇ, ಕಾಲೇಜಿನಲ್ಲಿ ಹಿಜಾಬ್‌, ಬುರ್ಖಾ ನಿಷೇಧಿಸಿದ (Hijab Ban) ಮುಂಬೈ ಮೂಲದ ಕಾಲೇಜಿನ ಆದೇಶವನ್ನು ಬಾಂಬೆ ಹೈಕೋರ್ಟ್‌ (Bombay High Court) ಎತ್ತಿಹಿಡಿದಿದೆ. ಕಾಲೇಜಿನಲ್ಲಿ ಹಿಜಾಬ್‌, ಬುರ್ಖಾ ನಿಷೇಧಿಸಿದ ಕಾಲೇಜಿನ ಆಡಳಿತ ಮಂಡಳಿ ತೀರ್ಮಾನದ ವಿಷಯದಲ್ಲಿ ಮಧ್ಯಪ್ರವೇಶ ಇಲ್ಲ ಎಂಬುದಾಗಿ ಬಾಂಬೆ ಹೈಕೋರ್ಟ್‌ ಖಡಾಖಂಡಿತವಾಗಿ ಹೇಳಿದೆ.

ಮುಂಬೈನಲ್ಲಿರುವ ಚೆಂಬುರ್‌ ಟ್ರೋಂಬೆ ಎಜುಕೇಷನ್‌ ಸೊಸೈಟಿಯ ಎನ್‌.ಜಿ.ಆಚಾರ್ಯ ಹಾಗೂ ಕೆ.ಕೆ. ಮರಾಠೆ ಕಾಲೇಜಿನಲ್ಲಿ ಇತ್ತೀಚೆಗೆ ವಸ್ತ್ರಸಂಹಿತೆ ಜಾರಿಗೆ ತರಲಾಗಿದ್ದು, ಕಾಲೇಜು ಆವರಣದಲ್ಲಿ ಹಿಜಾಬ್‌, ನಕಾಬ್‌, ಬುರ್ಖಾ, ಶಾಲು, ಟೋಪಿ, ಬ್ಯಾಡ್ಜ್‌ಗಳನ್ನು ಧರಿಸಿಕೊಂಡು ಬರುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದರೆ, ಕಾಲೇಜಿನಲ್ಲಿ ಪದವಿಯ ದ್ವಿತೀಯ ಹಾಗೂ ಅಂತಿಮ ವರ್ಷದ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ 9 ವಿದ್ಯಾರ್ಥಿನಿಯರು ಕಾಲೇಜಿನ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿದಾರರ ವಾದ ಏನಾಗಿತ್ತು?

ವಿದ್ಯಾರ್ಥಿಗಳ ಪರ ಹಿರಿಯ ವಕೀಲ ಅಲ್ತಾಫ್‌ ಖಾನ್‌ ವಾದ ಮಂಡಿಸಿದರು. “ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದು ಅವರ ಆಯ್ಕೆ ಹಾಗೂ ವೈಯಕ್ತಿಕ ವಿಚಾರವಾಗಿದೆ. ಹೀಗೆ, ಹಿಜಾಬ್‌ ಧರಿಸುವುದನ್ನು ನಿಷೇಧಿಸುವ ಮೂಲಕ ಕಾಲೇಜಿನ ಆಡಳಿತ ಮಂಡಳಿಯು ಕಾನೂನುಬಾಹಿರ, ನಿರಂಕುಶ ಹಾಗೂ ಹಟಮಾರಿತನದ ನಿರ್ಧಾರ ತೆಗೆದುಕೊಂಡಿದೆ. ಇಸ್ಲಾಂನಲ್ಲಿ ಹಿಜಾಬ್‌ ಧರಿಸುವುದು ಅತ್ಯವಶ್ಯಕವಾಗಿದೆ. ಈ ಕುರಿತು ಕುರಾನ್‌ನಲ್ಲಿ ಕೂಡ ಉಲ್ಲೇಖಿಸಲಾಗಿದೆ” ಎಂದು ಕುರಾನ್‌ನ ಹಲವು ಅಧ್ಯಾಯಗಳನ್ನು ಕೋರ್ಟ್‌ಗೆ ನೀಡಿದರು.

ಕಾಲೇಜು ಆಡಳಿತ ಮಂಡಳಿ ವಾದ ಹೀಗಿತ್ತು

ಕಾಲೇಜು ಆಡಳಿತ ಮಂಡಳಿ ಪರ ಅನಿಲ್‌ ಅತುರ್ಕರ್‌ ವಾದ ಮಂಡಿಸಿದರು. “ಕಾಲೇಜಿನಲ್ಲಿ ಯಾವುದೇ ಧರ್ಮ, ಜಾತಿ ಹಾಗೂ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ವಸ್ತ್ರಸಂಹಿತೆ ತಂದಿಲ್ಲ. ಎಲ್ಲ ತೀರ್ಮಾನಗಳನ್ನು ಸಮಾನ ವಸ್ತ್ರಸಂಹಿತೆ ಜಾರಿಯಲ್ಲಿರಲಿ ಎಂದು ತೆಗೆದುಕೊಳ್ಳಲಾಗಿದೆ. ಇಸ್ಲಾಂ ವಿರೋಧಿಯಾಗಿ, ಯಾವುದೇ ಧರ್ಮದ ವಿರೋಧಿಯಾಗಿ ಈ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಎ.ಎಸ್.ಚಂದುರ್ಕರ್‌ ಹಾಗೂ ರಾಜೇಶ್‌ ಪಾಟೀಲ್‌ ಅವರಿದ್ದ ಪೀಠವು, ಕಾಲೇಜು ಆಡಳಿತ ಮಂಡಳಿಯ ತೀರ್ಮಾನದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿತು.

ಇದನ್ನೂ ಓದಿ: Hijab Row : ಹಾಸನ ಖಾಸಗಿ ಕಾಲೇಜಿನಲ್ಲಿ ಹಿಜಾಬ್‌ VS ಕೇಸರಿ ಶಾಲು

Continue Reading

ಬಾಲಿವುಡ್

Kangana Ranaut: ಸಂಸತ್ತಿನ ಹೊರಗೆ ಕೈ ಕುಲುಕಿ ಸಂತಸದ ಕ್ಷಣ ಹಂಚಿಕೊಂಡ ಚಿರಾಗ್ ಪಾಸ್ವಾನ್-ಕಂಗನಾ!

Kangana Ranaut: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಈ ಮುಂಚೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. 2011 ರಲ್ಲಿ, ಇಬ್ಬರು ಮಿಲೇ ನಾ ಮಿಲೇ ಹಮ್ ಚಿತ್ರದಲ್ಲಿ ನಟಿಸಿದ್ದರು. ಅಷ್ಟಾಗಿ ಸಿನಿಮಾ ಯಶಸ್ಸು ಕಂಡಿಲ್ಲ. ಆ ಬಳಿಕ ಕ್ರಮೇಣ ಚಿರಾಗ್ ಪಾಸ್ವಾನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಇದೀಗ ಮತ್ತೆ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಒಟ್ಟಿಗೆ ಕಂಡಿದ್ದಾರೆ.

VISTARANEWS.COM


on

Kangana Ranaut Chirag Paswan In Parliament
Koo

ಬೆಂಗಳೂರು: ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ (Kangana Ranaut) ಒಮ್ಮತ ಮೂಡದ ಹಿನ್ನೆಲೆಯಲ್ಲಿ (Chirag Paswan In Parliament) ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇದೀಗ ಎರಡನೇ ಬಾರಿ ಲೋಕಸಭೆ ಸ್ಪೀಕರ್‌ ಆಗಿ ಓಂ ಬಿರ್ಲಾ  ಆಯ್ಕೆಯಾದರು. ಈ ವೇಳೆ ಗಮನ ಸೆಳೆದಿದ್ದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ . ಸಂಸತ್ ಭವನದ ಹೊರಗೆ ಚುನಾವಣಾ ಫಲಿತಾಂಶಗಳು ಪ್ರಕಟವಾದ ತಕ್ಷಣ ಪಾಸ್ವಾನ್ ಹಾಗೂ ಕಂಗನಾ ಒಬ್ಬರಿಗೊಬ್ಬರು ಕೈ ಕುಲುಕಿ ಮಾತನಾಡಿದ್ದಾರೆ. ಇವರಿಬ್ಬರ ಸಂತೋಷದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಈ ಮುಂಚೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. 2011 ರಲ್ಲಿ, ಇಬ್ಬರು ಮಿಲೇ ನಾ ಮಿಲೇ ಹಮ್ ಚಿತ್ರದಲ್ಲಿ ನಟಿಸಿದ್ದರು. ಅಷ್ಟಾಗಿ ಸಿನಿಮಾ ಯಶಸ್ಸು ಕಂಡಿಲ್ಲ. ಆ ಬಳಿಕ ಕ್ರಮೇಣ ಚಿರಾಗ್ ಪಾಸ್ವಾನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಇದೀಗ ಮತ್ತೆ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಒಟ್ಟಿಗೆ ಕಂಡಿದ್ದಾರೆ.

ಅನೇಕ ಚಲನಚಿತ್ರಗಳು ಮತ್ತು ಹಲವಾರು ಚುನಾವಣೆಗಳ ನಂತರ, ಇಬ್ಬರೂ ಮತ್ತೆ ಸಹೋದ್ಯೋಗಿಗಳಾಗಿದ್ದಾರೆ, ಚಲನಚಿತ್ರ ಸೆಟ್‌ನಲ್ಲಿ ಅಲ್ಲ ಆದರೆ ಸಂಸತ್ತಿನಲ್ಲಿ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

18ನೇ ಲೋಕಸಭೆಯ ಸ್ಪೀಕರ್‌ ಆಗಿ ಎನ್‌ಡಿಎಯಿಂದ ಕಣಕ್ಕಿಳಿದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಅವರು ಆಯ್ಕೆಯಾಗಿದ್ದಾರೆ (Lok Sabha Speaker). ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇದೀಗ ಎರಡನೇ ಬಾರಿ ಲೋಕಸಭೆ ಸ್ಪೀಕರ್‌ ಆಗಿ ಆಯ್ಕೆ ಆಗಿರುವ ಓಂ ಬಿರ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಎಲ್ಲಾ ಸಂಸತ್‌ ಸದಸ್ಯರು ಪಕ್ಷಾತೀತ ಅಭಿನಂದನೆ ಸಲ್ಲಿಸಿದರು.

ವಿಪ್‌ ಜಾರಿ

ಆರಂಭದಲ್ಲಿ ಎನ್‌ಡಿಎ ಪ್ರತಿಪಕ್ಷಗಳ ಮನವೊಲಿಸಲು ಯತ್ನಿಸಿತ್ತು. ಓಂ ಬಿರ್ಲಾ ಅವರನ್ನು ಬೆಂಬಲಿಸಲು ಒಪ್ಪಿಗೆ ಸೂಚಿಸಿದ್ದ ಇಂಡಿ ಬಣ ಡೆಪ್ಯುಟಿ ಸ್ಪೀಕರ್ ತಮಗೆ ಸಿಗಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಇದಕ್ಕೆ ಎನ್‌ಡಿಎ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮಾತುಕತೆ ಮುರಿದು ಬಿದ್ದು ಕೊನೆಯ ಕ್ಷಣದಲ್ಲಿ ಕೊಂಡಿಕುನಾಲ್ ಸುರೇಶ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ ಎಲ್ಲ ಸದಸ್ಯರಿಗೆ ಹಾಜರಾಗುವಂತೆ ಮಂಗಳವಾರ ವಿಪ್‌ ಜಾರಿ ಮಾಡಿದ್ದವು.

Continue Reading

ದೇಶ

Terrorist Killed: ಮುಂದುವರಿದ ಉಗ್ರರ ಬೇಟೆ; ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

Terrorist Killed: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಬೇಟೆ ಮುಂದುವರಿದಿದ್ದು, ಬುಧವಾರ ಓರ್ವ ಭಯೋತ್ಪಾದಕನ್ನು ಹೊಡೆದುರುಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಗಂಡೋಹ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಯ ಸಿಬ್ಬಂದಿ ಒಬ್ಬ ಭಯೋತ್ಪಾದಕನನ್ನು ಕೊಂದಿದ್ದಾರೆ. “ಇಂದು ನಡೆದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಕೊಲ್ಲಲಾಗಿದೆ. ಎನ್‌ಕೌಂಟರ್‌ ಈಗಲೂ ಮುಂದುವರಿದಿದೆʼʼ ಎಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ತಿಳಿಸಿದರು.

VISTARANEWS.COM


on

Terrorist Killed
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಬೇಟೆ ಮುಂದುವರಿದಿದ್ದು, ಬುಧವಾರ ಓರ್ವ ಭಯೋತ್ಪಾದಕನ್ನು ಹೊಡೆದುರುಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಗಂಡೋಹ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ (Security Forces)ಯ ಸಿಬ್ಬಂದಿ ಒಬ್ಬ ಭಯೋತ್ಪಾದಕನನ್ನು ಕೊಂದಿದ್ದಾರೆ (Terrorist Killed). ಇನ್ನೂ ಇಬ್ಬರು ಭಯೋತ್ಪಾದಕರು ಅಡಗಿ ಕುಳಿತಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ರಾಜ್ಯದಲ್ಲಿ ಇತ್ತೀಚೆಗೆ ಭಯೋತ್ಪಾದಕರ ಹಾವಳಿ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಸೇನೆ ನಿರಂತರವಾಗಿ ಪ್ರಯತ್ನಿಸುತ್ತಿದೆ. “ಇಂದು ನಡೆದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಕೊಲ್ಲಲಾಗಿದೆ. ಎನ್‌ಕೌಂಟರ್‌ ಈಗಲೂ ಮುಂದುವರಿದಿದೆʼʼ ಎಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ತಿಳಿಸಿದರು.

ʼʼಇಂದು ಬೆಳಿಗ್ಗೆ ಶೋಧ ಕಾರ್ಯಾಚರಣೆ ಪ್ರಾರಂಭಿಸಿದಾಗ ಮೂವರು ಭಯೋತ್ಪಾದಕರು ಇರುವ ಬಗ್ಗೆ ಸುಳಿವು ಲಭಿಸಿತ್ತು. ಈ ವೇಳೆ ಉಗ್ರರೂ ದಾಳಿ ನಡೆಸಿದ್ದರು. ಸೇನಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು. ಕಳೆದ ಒಂದು ವಾರದಲ್ಲಿ ಭಯೋತ್ಪಾದಕರ ಪತ್ತೆಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆʼʼ ಎಂದು ಅವರು ಹೇಳಿದರು. ದೋಡಾ, ರಾಜೌರಿ, ಪೂಂಚ್ ಪ್ರದೇಶಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಸೇನೆ ಭಯೋತ್ಪಾದಕರ ನಿರ್ಮೂಲನೆಗೆ ಪಣ ತೊಟ್ಟಿದೆ.

ಜೂನ್ 11, 12ರಂದು ಚಟ್ಟರ್ಗಲ್ಲಾ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದರು. ಇದಕ್ಕೆ ಸೇನೆ ಪ್ರತಿಕಕಾರ ತೀರಿಸಿಕೊಳ್ಳುತ್ತಿದ್ದು, ಈಗಾಗಲೆ 7-8 ಭಯೋತ್ಪಾದಕರು ಸತ್ತಿದ್ದಾರೆ. ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ ಆರೋಪದ ಮೇಲೆ ಮೂವರು ಸ್ಥಳೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ.

ಇದರ ಜತೆಗೆ ಮಂಗಳವಾರ ಸಂಜೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ರಜೌರಿ ಜಿಲ್ಲೆಯ ಪಿಂಡ್ ಗ್ರಾಮದಿಂದ ಚೀನಾದ ಹ್ಯಾಂಡ್ ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಭದ್ರತಾ ಪಡೆಯ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: Kathua Terror Attack: ಯೋಧನ ಹತ್ಯೆಗೆ ಪ್ರತಿಕಾರ; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು ಕಾಶ್ಮೀರದ ಉರಿಯಲ್ಲಿ ಎನ್​ಕೌಂಟರ್​

ಮೂರು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಕನಿಷ್ಠ ಇಬ್ಬರು ಉಗ್ರರನ್ನು ಹೊಡೆದುರುಳಿಸಿದರು. ಈ ಮೂಲಕ ಗಡಿ ನಿಯಂತ್ರಣ ರೇಖೆ (LoC) ಉದ್ದಕ್ಕೂ ಒಳನುಸುಳುವ ಭಯೋತ್ಪಾದಕರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಹತ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಉತ್ತರ ಕಾಶ್ಮೀರದ ಉರಿ ಸೆಕ್ಟರ್‌ನ ಗೊಹಲ್ಲಾನ್ ಪ್ರದೇಶದ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನಾ ಸಿಬ್ಬಂದಿ ಉಗ್ರರ ಅನುಮಾನಾಸ್ಪದ ಚಲನೆಯನ್ನು ಗಮನಿಸಿ ಈ ಬಗ್ಗೆ ಪ್ರಶ್ನಿಸಿದರು. ಆಗ ಭಯೋತ್ಪಾದಕರು ಗುಂಡು ಹಾರಿಸಿದರು. ಬಳಿಕ ಸೇನಾ ಸಿಬ್ಬಂದು ಪ್ರತಿ ದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಿದರು. ʼʼಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Continue Reading

ದೇಶ

Parliament Sessions: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸದನ; ಶೇಕ್‌ ಹ್ಯಾಂಡ್‌ ಮಾಡಿದ ಪ್ರಧಾನಿ ಮೋದಿ, ರಾಹುಲ್‌

Parliament Sessions: ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಚುನಾಯಿತರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕರ ರಾಹುಲ್‌ ಗಾಂಧಿ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದರು. ಈ ವೇಳೆ ಪರಸ್ಪರ ಶೇಕ್‌ ಹ್ಯಾಂಡ್‌ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಅವರ ಸೀಟ್‌ವರೆಗೆ ಕರೆದೊಯ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

VISTARANEWS.COM


on

Parliament Sessions
Koo

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ(Parliament Sessions)ದ ಮೂರನೇ ದಿನವಾದ ಇಂದು ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಯಿತು. ಇಂದು ಸ್ಪೀಕರ್‌ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಓಂ ಬಿರ್ಲಾ(Om Birla) ಅವರು ಎರಡನೇ ಬಾರಿ ಲೋಕಸಭೆಯ ಸ್ಪೀಕರ್‌ ಆಗಿ ಚುನಾಯಿತರಾಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪರಸ್ಪರ ಹಸ್ತಾಲಾಘವ(Shake Hand) ಮಾಡಿದ ಅಪರೂಪದ ಕ್ಷಣಗಳಿಗೆ ಇಡೀ ಸದನವೇ ಸಾಕ್ಷಿ ಆಯಿತು.

ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಚುನಾಯಿತರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕರ ರಾಹುಲ್‌ ಗಾಂಧಿ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದರು. ಈ ವೇಳೆ ಪರಸ್ಪರ ಶೇಕ್‌ ಹ್ಯಾಂಡ್‌ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಅವರ ಸೀಟ್‌ವರೆಗೆ ಕರೆದೊಯ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

18ನೇ ಲೋಕಸಭೆಯ ಸ್ಪೀಕರ್‌ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಎನ್‌ಡಿಎಯಿಂದ ಕಣಕ್ಕಿಳಿದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಅವರು ಸ್ಪೀಕರ್‌ ಆಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ (Lok Sabha Speaker). ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇಂಡಿ ಬಣದಿಂದ ಕಾಂಗ್ರೆಸ್‌ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಕಣಕ್ಕಿಳಿದಿದ್ದರು. ಭಾರೀ ಕುತೂಹಲ ಮೂಡಿಸಿದ್ದ ಈ ಐತಿಹಾಸಿಕ ಚುನಾವಣೆಯಲ್ಲಿ ಇದೀಗ ಓಂ ಬಿರ್ಲಾ ಗೆಲುವಿನ ನಗೆ ಬೀರಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಓಂ ಬಿರ್ಲಾ ಅವರು ಬಹುಮತಗಳನ್ನು ಪಡೆದುಕೊಂಡರು. ಓಂ ಬಿರ್ಲಾ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು. ಬಳಿಕ ಹಲವು ನಾಯಕರು ಅನುಮೋದಿಸಿದರು. ಧ್ವನಿ ಮತದ ಮೂಲಕ ಸದಸ್ಯರು ಮತ ಚಲಾಯಿಸಿದರು. ಈ ಮೂಲಕ ಓಂ ಬಿರ್ಲಾ ಅವರು ಬಲರಾಮ್ ಜಖರ್ (1980-89) ನಂತರ ಎರಡು ಪೂರ್ಣ ಅವಧಿಗೆ ಆಯ್ಕೆಯಾದ ಎರಡನೇ ಸ್ಪೀಕರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಲೋಕಸಭೆಯ ಎರಡನೇ ಸ್ಪೀಕರ್ ಎಂ.ಎ.ಅಯ್ಯಂಗಾರ್ ಮತ್ತು ಗುರ್ದಿಯಾಲ್ ಸಿಂಗ್ ಧಿಲ್ಲಾನ್ ಈ ಹಿಂದೆ ಎರಡು ಬಾರಿ ಈ ಹುದ್ದೆಯನ್ನು ಆಯ್ಕೆಯಾಗಿದ್ದರೂ ಅವರ ಎರಡನೇ ಅವಧಿ ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ಉಳಿದಿರಲಿಲ್ಲ. ಹಂಗಾಮಿ ಸ್ಪೀಕರ್‌ ಭಾರ್ತೃಹರಿ ಮಹತಾಬ್‌ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು

ಇದನ್ನೂ ಓದಿ:Life threat: ಹುಬ್ಬಳ್ಳಿ ಏರ್‌ಪೋರ್ಟ್‌ ನಿರ್ದೇಶಕರಿಗೆ ಜೀವ ಬೆದರಿಕೆ; ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಮೇಲ್‌ ಐಡಿಯಿಂದ ಸಂದೇಶ

Continue Reading
Advertisement
Varthur Santhosh Animal Transport Rules Violation Allegation
ಕ್ರೈಂ3 mins ago

Varthur Santhosh: ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿದ್ದ ವರ್ತೂರು ಸಂತೋಷ್​ ವಿರುದ್ಧ ಪ್ರಕರಣ ದಾಖಲು

Hijab Ban
ದೇಶ4 mins ago

Hijab Ban: ತರಗತಿಯಲ್ಲಿ ಹಿಜಾಬ್‌, ಬುರ್ಖಾ ನಿಷೇಧ; ಕಾಲೇಜು ಆದೇಶ ಎತ್ತಿಹಿಡಿದ ಹೈಕೋರ್ಟ್‌

honey trap harish gowda
ಕ್ರೈಂ9 mins ago

Honey Trap: ಎಂಎಲ್‌ಎ ಹರೀಶ್‌ ಗೌಡಗೆ ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್‌ ಸೆರೆ, ಇವರ ಖತರ್‌ನಾಕ್‌ ಐಡಿಯಾ ನೋಡಿ!

Kangana Ranaut Chirag Paswan In Parliament
ಬಾಲಿವುಡ್22 mins ago

Kangana Ranaut: ಸಂಸತ್ತಿನ ಹೊರಗೆ ಕೈ ಕುಲುಕಿ ಸಂತಸದ ಕ್ಷಣ ಹಂಚಿಕೊಂಡ ಚಿರಾಗ್ ಪಾಸ್ವಾನ್-ಕಂಗನಾ!

Viral Video
Latest39 mins ago

Viral Video: ಸಿಮೆಂಟ್, ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ ಮಹಿಳೆ; ಹೇಗೆ ಕೆಲಸ ಮಾಡುತ್ತೆ ನೋಡಿ!

Terrorist Killed
ದೇಶ39 mins ago

Terrorist Killed: ಮುಂದುವರಿದ ಉಗ್ರರ ಬೇಟೆ; ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

Viral Video
Latest43 mins ago

Viral Video: ಮುಂದಿನ ಐದು ಸಾಲಿನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ! ಇದು ಸ್ವಾಮೀಜಿಯೊಬ್ಬರ ಕಂಡೀಷನ್‌!

AFG vs SA Semi Final
ಕ್ರೀಡೆ51 mins ago

AFG vs SA Semi Final: ಚೊಚ್ಚಲ ಫೈನಲ್​ ನಿರೀಕ್ಷೆಯಲ್ಲಿ ಆಫ್ಘನ್​-ದಕ್ಷಿಣ ಆಫ್ರಿಕಾ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್?​

Development of Gaanagapura kshethra on Pandharpur, Thulajapur model says DC Fauzia Tarannum
ಕಲಬುರಗಿ56 mins ago

Kalaburagi News: ಪಂಢರಪುರ, ತುಳಜಾಪುರ ಮಾದರಿಯಲ್ಲಿ ಗಾಣಗಾಪುರ ಕ್ಷೇತ್ರ ಅಭಿವೃದ್ಧಿ

CM Siddaramaiah
ಪ್ರಮುಖ ಸುದ್ದಿ57 mins ago

CM Siddaramaiah: ಗಣಿ ಪರಿಸರ ಪುನಶ್ಚೇತನ ನಿಗಮದ ಸಭೆ; ಅಧಿಕಾರಿಗಳ ವಿಳಂಬ ಧೋರಣೆಗೆ ಸಿಎಂ ಗರಂ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌