New York Times On Kashmir: ಭಾರತದ ವಿರುದ್ಧ ನ್ಯೂಯಾರ್ಕ್‌ ಟೈಮ್ಸ್‌ ಪಿತೂರಿ, ಕಾಶ್ಮೀರ ಕುರಿತ ಲೇಖನಕ್ಕೆ ಕೇಂದ್ರ ಖಂಡನೆ - Vistara News

ದೇಶ

New York Times On Kashmir: ಭಾರತದ ವಿರುದ್ಧ ನ್ಯೂಯಾರ್ಕ್‌ ಟೈಮ್ಸ್‌ ಪಿತೂರಿ, ಕಾಶ್ಮೀರ ಕುರಿತ ಲೇಖನಕ್ಕೆ ಕೇಂದ್ರ ಖಂಡನೆ

New York Times On Kashmir:‌ ಜಮ್ಮು-ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯ ದಮನವಾಗಿದೆ ಎಂಬುದಾಗಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಅನುರಾಗ್‌ ಠಾಕೂರ್‌ ಅವರು ಪತ್ರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Mischievous, propaganda: Anurag Thakur slams New York Times article on Kashmir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಗೋದ್ರಾ ಹತ್ಯಾಕಾಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬಿಂಬಿಸಿ ಬ್ರಿಟನ್‌ನ ಬಿಬಿಸಿ ಡಾಕ್ಯುಮೆಂಟರಿ ಬಿಡುಗಡೆ ಮಾಡಿದ ಬೆನ್ನಲ್ಲೇ, ಜಮ್ಮು-ಕಾಶ್ಮೀರದ ಕುರಿತು ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಆಕ್ಷೇಪಾರ್ಹ ಲೇಖನ New York Times On Kashmir() ಪ್ರಕಟಿಸಿದೆ. ನ್ಯೂಯಾರ್ಕ್‌ ಟೈಮ್ಸ್‌ ಲೇಖನವನ್ನು ಕೇಂದ್ರ ಸರ್ಕಾರ ಖಂಡಿಸಿದ್ದು, “ಭಾರತದ ವಿರುದ್ಧ ಪತ್ರಿಕೆಯು ದುರುದ್ದೇಶಪೂರಕವಾಗಿ ಲೇಖನ ಪ್ರಕಟಿಸಿದೆ” ಎಂದಿದೆ.

“ಭಾರತದ ಕುರಿತು ವರದಿ ಪ್ರಕಟಿಸುವಾಗ ನ್ಯೂಯಾರ್ಕ್‌ ಟೈಮ್ಸ್‌ ತಟಸ್ಥ ನಿಲುವು ಪ್ರದರ್ಶಿಸುವುದನ್ನು ಬಹಳ ಹಿಂದೆಯೇ ನಿಲ್ಲಿಸಿದೆ. ಜಮ್ಮು-ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕುರಿತು ಪತ್ರಿಕೆ ಪ್ರಕಟಿಸಿರುವ ಲೇಖನವು ಕಾಲ್ಪನಿಕವಾಗಿದೆ. ಭಾರತ ಹಾಗೂ ಭಾರತದ ಪ್ರಜಾಪ್ರಭುತ್ವದ ಕುರಿತು ದುರುದ್ದೇಶಪೂರಕ ವರದಿ ಪ್ರಕಟಿಸುವ ಮೂಲಕ ಪಿತೂರಿ ಮಾಡುತ್ತಿದೆ. ಆದರೆ, ನಮ್ಮ ದೇಶ, ದೇಶದ ಪ್ರಧಾನಿ ಬಗ್ಗೆ ವಿದೇಶಿ ಮಾಧ್ಯಮಗಳು ಹರಡುತ್ತಿರುವ ಸುಳ್ಳುಗಳನ್ನು ಯಾರೂ ನಂಬುವುದಿಲ್ಲ” ಎಂದು‌ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.

ಅನುರಾಗ್‌ ಠಾಕೂರ್‌ ಖಂಡನೆ

ಲೇಖನದಲ್ಲೇನಿದೆ?

ದಿ ಕಾಶ್ಮೀರ್‌ ಟೈಮ್ಸ್‌ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಸೀನ್‌ ಅವರು ಬರೆದಿರುವ ಲೇಖನವನ್ನು ದಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ Op-ed (ಸಂಪಾದಕೀಯ ಪುಟದ ಎದುರಿನ ಪುಟ)ನಲ್ಲಿ ಪ್ರಕಟಿಸಲಾಗಿದೆ. “ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ. ಕೇಂದ್ರ ಸರ್ಕಾರ ಅಥವಾ ನರೇಂದ್ರ ಮೋದಿ ಅವರನ್ನು ಟೀಕಿಸುವ ಮಾಧ್ಯಮಗಳನ್ನು ಹತ್ತಿಕ್ಕಲಾಗುತ್ತಿದೆ. ಕಾಶ್ಮೀರದಲ್ಲೂ ಮಾಧ್ಯಮ ಸ್ವಾತಂತ್ರ್ಯ ಮಣ್ಣಾಗಿದೆ” ಎಂಬುದಾಗಿ ಭಸೀನ್‌ ಬರೆದಿದ್ದಾರೆ.

ಇದನ್ನೂ ಓದಿ: Bob Blackman: ಪ್ರಧಾನಿ ಮೋದಿ ಬಗೆಗಿನ ಬಿಬಿಸಿ ಸಾಕ್ಷ್ಯಚಿತ್ರವನ್ನು ಖಂಡಿಸಿದ ಬ್ರಿಟಿಷ್ ಸಂಸದ ಬಾಬ್ ಬ್ಲ್ಯಾಕ್‌ಮನ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Election Results 2024: ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು!

Election Results 2024: ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕೆಲವು ಕಡೆ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳಿಂತ ಭಾರೀ ಅಂತರದಿಂದ ಗೆದ್ದರೆ ಇನ್ನು ಕೆಲವೆಡೆ ಗೆಲುವಿನ ಅಂತರ ತೀರಾ ಕಡಿಮೆ ಕಂಡು ಬಂದಿದೆ. ಹಾಗಾದರೆ ಅತೀ ಹೆಚ್ಚು ಮತ್ತು ಅತೀ ಕಡಿಮೆ ಅಂತರದಿಂದ ಗೆದ್ದವರು ಯಾರು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Election Results 2024
Koo

ನವದೆಹಲಿ: ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ (Election Results 2024). ಎನ್‌ಡಿಎ (NDA) ಮೈತ್ರಿಕೂಟ ಸತತ ಮೂರನೇ ಬಾರಿ ದೆಹಲಿ ಗದ್ದುಗೆ ಏರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ (Congress)ಗೆ ಈ ಚುನಾವಣೆ ಚೇತರಿಕೆ ನೀಡಿದೆ. ಕೆಲವು ಕಡೆ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳಿಂತ ಭಾರೀ ಅಂತರದಿಂದ ಗೆದ್ದರೆ ಇನ್ನು ಕೆಲವೆಡೆ ಗೆಲುವಿನ ಅಂತರ ತೀರಾ ಕಡಿಮೆ ಕಂಡು ಬಂದಿದೆ. ಹಾಗಾದರೆ ಅತೀ ಹೆಚ್ಚು ಮತ್ತು ಅತೀ ಕಡಿಮೆ ಅಂತರದಿಂದ ಗೆದ್ದವರು ಯಾರು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅತೀ ಹೆಚ್ಚು ಅಂತರದಿಂದ ಜಯ ಗಳಿಸಿದವರು

ಅಭ್ಯರ್ಥಿಕ್ಷೇತ್ರಪ್ರತಿಸ್ಪರ್ಧಿಅಂತರ
ಶಂಕರ್‌ ಲಾಲ್ವಾನಿ
(ಬಿಜೆಪಿ)
ಇಂದೋರ್‌
(ಮಧ್ಯ ಪ್ರದೇಶ)
ʼನೋಟಾʼ11.72 ಲಕ್ಷ
ರಕಿಬುಲ್ ಹುಸೇನ್
(ಕಾಂಗ್ರೆಸ್‌)
ಧುಬ್ರಿ
(ಅಸ್ಸಾಂ)
ಬದ್ರುದ್ದೀನ್ ಅಜ್ಮಲ್
(ಎಐಯುಡಿಎಫ್)
10.12 ಲಕ್ಷ
ಶಿವರಾಜ್‌ ಸಿಂಗ್‌ ಚೌಹಾನ್‌
(ಬಿಜೆಪಿ)
ವಿದಿಶಾ
(ಮಧ್ಯ ಪ್ರದೇಶ)
ಪ್ರತಾಪ್ ಭಾನು ಶರ್ಮಾ
(ಕಾಂಗ್ರೆಸ್)
8.2 ಲಕ್ಷ
ಸಿ.ಆರ್‌.ಪಾಟೀಲ್‌
(ಬಿಜೆಪಿ)
ನವ್ಸಾರಿ
(ಗುಜರಾತ್‌)
ನೈಶಾದ್ ಭಾಯ್ ಭೂಪತ್
ಭಾಯ್ ದೇಸಾಯಿ (ಕಾಂಗ್ರೆಸ್)
7.73 ಲಕ್ಷ
ಅಮಿತ್‌ ಶಾ
(ಬಿಜೆಪಿ)
ಗಾಂಧಿನಗರ (ಗುಜರಾತ್‌)ಸೋನಾಲ್ ಪಟೇಲ್ (ಕಾಂಗ್ರೆಸ್‌)7.44 ಲಕ್ಷ

ಅತೀ ಕಡಿಮೆ ಅಂತರದಿಂದ ಜಯ ಗಳಿಸಿದವರು

ಅಭ್ಯರ್ಥಿಕ್ಷೇತ್ರಪ್ರತಿಸ್ಪರ್ಧಿಅಂತರ
ರವೀಂದ್ರ ದತ್ತಾರಾಮ್ ವಾಯ್ಕರ್ (ಏಕನಾಥ್ ಶಿಂಧೆ ಶಿವಸೇನೆ)ಮುಂಬೈ ವಾಯುವ್ಯ (ಮಹಾರಾಷ್ಟ್ರ)ಅಮೋಲ್ ಗಜಾನನ್ ಕೀರ್ತಿಕರ್
(ಶಿವಸೇನೆ
ಯುಬಿಟಿ)
48
ಅಡೂರು ಪ್ರಕಾಶ್‌
(ಕಾಂಗ್ರೆಸ್‌)
ಆಟಿಂಗಲ್‌
(ಕೇರಳ)
ವಿ.ಜಾಯ್‌
(ಸಿಪಿಐ (ಎಂ)
684
ಅಜೇಂದ್ರ ಲೋಧಿ (ಸಮಾಜವಾದಿ ಪಾರ್ಟಿ)ಹಮೀರ್ಪುರ್
(ಉತ್ತರ ಪ್ರದೇಶ)
ಕುನ್ವರ್ ಪುಷ್ಪೇಂದ್ರ
ಸಿಂಗ್ (ಬಿಜೆಪಿ)
2,629
ರಮಾಶಂಕರ್ ರಾಜ್ಭರ್ (ಸಮಾಜವಾದಿ ಪಾರ್ಟಿ)ಸೇಲಂಪುರ್
(ಉತ್ತರ ಪ್ರದೇಶ)
ರವೀಂದ್ರ
ಕುಶಾವಾಹ (ಬಿಜೆಪಿ)
3,573

ರಾಜ್ಯವಾರು ಸರಾಸರಿ ಅಂತ

2024ರ ಲೋಕಸಭಾ ಚುನಾಚಣೆಯ ಜಯದ ಸರಾಸರಿ ಅಂತರ 1.6 ಲಕ್ಷ ಮತಗಳು. ಈ ಪೈಕಿ 5ಕ್ಕಿಂತ ಹೆಚ್ಚು ಸೀಟುಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಧ್ಯ ಪ್ರದೇಶ ಮೊದಲ ಸ್ಥಾನದಲ್ಲಿದೆ. ಇಲ್ಲಿ ಜಯದ ಅಂತರ 3.4 ಲಕ್ಷ ಮತಗಳು.

ಇನ್ನು ಎರಡನೇ ಸ್ಥಾನದಲ್ಲಿ ಗುಜರಾತ್‌ ಇದ್ದು ಇಲ್ಲಿ 2.8 ಲಕ್ಷ ಮತ ಮತ್ತು ಉತ್ತರಾಖಂಡದಲ್ಲಿ 2.3 ಲಕ್ಷ ಮತಗಳ ಅಂತರ ಕಂಡು ಬಂದಿದೆ. ತಮಿಳುನಾಡಿನಲ್ಲಿ 2.2 ಲಕ್ಷ ಮತಗಳ ಮಾರ್ಜಿನ್‌ ಕಂಡು ಬಂದಿದೆ. ಇನ್ನು ಪಂಜಾಬ್‌ನಲ್ಲಿ ಗೆಲುವಿನ ಸರಾಸರಿ ಅಂತರ 70,500 ದಾಖಲಾಗಿದೆ. ಉತ್ತರ ಪ್ರದೇಶದಲ್ಲಿ, ಮಹಾರಾಷ್ಟ್ರ, ಬಿಹಾರದಲ್ಲಿಯೂ ಒಂದು ಲಕ್ಷಕ್ಕಿಂತ ಕಡಿಮೆ ಕಂಡು ಬಂದಿದೆ.

ಇದನ್ನೂ ಓದಿ: Election Results 2024: 10 ಲಕ್ಷ ಮತಗಳಿಂದ ಗೆದ್ದು ಇತಿಹಾಸ ಸೃಷ್ಟಿಸಿದ ಬಿಜೆಪಿಯ ಶಂಕರ್‌ ಲಾಲ್ವಾನಿ! ಗರಿಷ್ಠ ವೋಟುಗಳಿಂದ ಗೆದ್ದವರ ಮಾಹಿತಿ ಇಲ್ಲಿದೆ

Continue Reading

ಪ್ರಮುಖ ಸುದ್ದಿ

Election Results 2024: ನಿತೀಶ್‌ಕುಮಾರ್, ಚಂದ್ರಬಾಬು ನಾಯ್ಡು ನೆರವಿಲ್ಲದೆ ಮೋದಿ ಸರ್ಕಾರ ನಡೆಸಲಾಗದೆ?

Election Results 2024: ಟಿಡಿಪಿ ಹಾಗೂ ಜೆಡಿಯುಗಳು ಎನ್‌ಡಿಎಯಿಂದ ಇಂಡಿ ಬಣದ ಕಡೆ ಜಿಗಿದರೆ ಮೋದಿ ಪಿಎಂ ಆಗುವುದು ಸುಲಭವಲ್ಲ. ಆಗ ಅವರು ಏಕಾಏಕಿ 28 ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ. ಅವರ ಸ್ಥಾನಬಲ 262 ಸ್ಥಾನಗಳಿಗೆ ಇಳಿಯುತ್ತದೆ.

VISTARANEWS.COM


on

Election Results 2024 chandrababu naidu nitish kumar 2
Koo

ಹೊಸದಿಲ್ಲಿ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ (Election Results 2024) ನಿಶ್ಚಯವಾಗುತ್ತಿದ್ದಂತೆಯೇ ಇಬ್ಬರು ಪ್ರಾದೇಶಿಕ ನಾಯಕರು ಕಿಂಗ್‌ಮೇಕರ್‌ಗಳಾಗಿ (kingmakers) ಹೊರಹೊಮ್ಮಿದ್ದು, ಇವರನ್ನು ಹೊರತುಪಡಿಸಿ ಸರ್ಕಾರ ರಚಿಸಲು ಎನ್‌ಡಿಎಗೆ (NDA) ಹಾಗೂ ಇಂಡಿಯಾ (INDIA Bloc) ಒಕ್ಕೂಟಕ್ಕೂ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಇವರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಎನ್‌ಡಿಎ ಮುಂದಾಗಿದ್ದರೆ, ತಮ್ಮತ್ತ ಸೆಳೆಯಲು ಇಂಡಿ ಒಕ್ಕೂಟ ಮುಂದಾಗಿದೆ.

ಇವರಲ್ಲಿ ಒಬ್ಬರು ತೆಲುಗು ದೇಶಂ ಪಕ್ಷದ (TDP) ನಾಯಕ ಎನ್ ಚಂದ್ರಬಾಬು ನಾಯ್ಡು (N Chandrababu Naidu). ಇವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಎದುರಾಳಿ, ಆಂಧ್ರ ಮುಖ್ಯಮಂತ್ರಿ ಜಗನ್‌ ರೆಡ್ಡಿ ಎಂಟು ತಿಂಗಳ ಹಿಂದೆ ಬಂಧಿಸಿ ಎರಡು ತಿಂಗಳು ಜೈಲಿನಲ್ಲಿ ಹಾಕಿದ್ದರು. ಮತ್ತೊಬ್ಬರು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು (JDU) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar).‌ ಇವರಿಬ್ಬರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ಒದಗಿಸುವ ಕಿಂಗ್ ಮೇಕರ್‌ಗಳಾಗಿ ಹೊಮ್ಮಿದ್ದಾರೆ.

ಟಿಡಿಪಿ ತನ್ನದೇ ಆದ 16 ಸ್ಥಾನಗಳನ್ನು ಗೆದ್ದುಕೊಂಡಿದೆ. ಎನ್‌ಡಿಎ ಆಂಧ್ರಪ್ರದೇಶದಲ್ಲಿ ಒಟ್ಟು 25 ಸ್ಥಾನಗಳಲ್ಲಿ 21ರಲ್ಲಿ ಗೆಲುವು ಸಾಧಿಸಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ತನ್ನ ಮಿತ್ರ ಪಕ್ಷಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಬಿಜೆಪಿಯಂತೆಯೇ 12 ಸ್ಥಾನಗಳನ್ನು ಗೆದ್ದಿದೆ. ನಿನ್ನೆ ಸಂಜೆಯ ಹೊತ್ತಿಗೆ ಫಲಿತಾಂಶದ ಚಿತ್ರಣವು ಸ್ಪಷ್ಟವಾಗುತ್ತಿದ್ದಂತೆ, ಬಹುಮತವನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ಎರಡೂ ಒಕ್ಕೂಟಗಳ ನಾಯಕರು ಇಬ್ಬರನ್ನೂ ಸಂರ್ಕಿಸಿದ್ದರು. ನಾಯ್ಡು ಅವರು ನಿನ್ನೆಯೇ ಮೋದಿ ಹಾಗೂ ಅಮಿತ್‌ ಶಾಗೆ ಕರೆ ಮಾಡಿ, ತಮ್ಮ ಬೆಂಬಲ ಎನ್‌ಡಿಎ ಜೊತೆಗಿರುವುದನ್ನು ಖಚಿತಪಡಿಸಿದ್ದಾರೆ. ಅತ್ತ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಅವರು ನಾಯ್ಡು ಹಾಗೂ ನಿತೀಶ್‌ರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ.

ಸಂಖ್ಯೆಗಳ ಆಟ ಹೀಗಿದೆ

ಇಂಡಿಯಾ ಮಿತ್ರಪಕ್ಷಗಳು ಒಟ್ಟಾಗಿ 233 ಸ್ಥಾನಗಳನ್ನು ಗೆದ್ದಿವೆ. ಇದು ಬಹುಮತಕ್ಕೆ 39 ಸ್ಥಾನ ಕಡಿಮೆ ಬರುತ್ತದೆ. ಬಿಜೆಪಿ ನೇತೃತ್ವದ ಎನ್‌ಡಿಎ 291 ಸ್ಥಾನ ಗೆದ್ದಿದ್ದು, ಇದು ಬಹುಮತಕ್ಕಿಂತ 19 ಹೆಚ್ಚು ಇದೆ. ಬಿಜೆಪಿ ತನ್ನ ಸ್ವಂತ ಬಲದಿಂದ 240 ಸ್ಥಾನ ಗಳಿಸಿದೆ. ಮ್ಯಾಜಿಕ್ ಫಿಗರ್‌ಗಿಂತ 32 ಕಡಿಮೆ. ಯಾವುದೇ ಮೈತ್ರಿಯಲ್ಲಿ ಇಲ್ಲದ ಸಂಸದರಲ್ಲಿ 4 ವೈಎಸ್‌ಆರ್‌ಸಿಪಿ ಮತ್ತು ಪಕ್ಷೇತರರು ಇದ್ದಾರೆ. ಆದ್ದರಿಂದ, ಇಂಡಿ ಬಣವು ಅಧಿಕಾರವನ್ನು ಪಡೆಯಲು ಬಯಸಿದರೆ ಅವರು ಜೆಡಿಯು, ಟಿಡಿಪಿ ಮತ್ತು ಕೆಲವು ಸ್ವತಂತ್ರರನ್ನು ಒಟ್ಟುಗೂಡಿಸಲೇಬೇಕು. ಮತ್ತೊಂದೆಡೆ, ಬಿಜೆಪಿಯು ಅಧಿಕಾರದಲ್ಲಿ ಉಳಿಯಬೇಕಾದರೆ ಇವರನ್ನು ಎಷ್ಟು ವೆಚ್ಚವಾದರೂ ಉಳಿಸಿಕೊಳ್ಳಬೇಕು.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ಸಂಜೆ ಪಕ್ಷದ ಪತ್ರಿಕಾಗೋಷ್ಠಿಯಲ್ಲಿ ಹೊಸ ಪಾಲುದಾರರ ಕುರಿತು ಮಾತನಾಡುವಾಗ ಕೆಲವು ಸುಳಿವನ್ನು ನೀಡಿದರು. “ನಾವು ನಮ್ಮ ಮೈತ್ರಿ ಪಾಲುದಾರರೊಂದಿಗೆ ಮಾತನಾಡಲಿದ್ದೇವೆ ಮತ್ತು ನಮ್ಮೊಂದಿಗೆ ಸೇರಬಹುದಾದ ಹೊಸ ಪಾಲುದಾರರೊಂದಿಗೆ ನಾವು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಮತ್ತು ಬಹುಮತವನ್ನು ಪಡೆಯಬಹುದು ಎಂಬುದರ ಕುರಿತು ಪರಿಶೀಲಿಸಲಿದ್ದೇವೆ. ನಾನು ಈಗ ನಮ್ಮ ಎಲ್ಲಾ ತಂತ್ರಗಳನ್ನು ಬಹಿರಂಗಪಡಿಸಿದರೆ, ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ವಹಿಸುತ್ತಾರೆ” ಎಂದರು.

ಜಿಗಿತಶೂರ ನಿತೀಶ್‌

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಎನ್‌ಡಿಎಗೆ ಜಿಗಿದದ್ದು ಇತ್ತೀಚೆಗೆ. ಅವರು ಇದಕ್ಕೂ ಹಿಂದೆ ಅವರು ಯುಪಿಎ ಜತೆಗಿದ್ದರು. ಆದರೆ ಪ್ರತಿ ಅವಧಿಯಲ್ಲಿಯೂ ಅವರು ಬಣ ಬದಲಿಸುವುದಕ್ಕೇ ಕುಖ್ಯಾತರಾಗಿದ್ದಾರೆ. ಕೆಲವೇ ತಿಂಗಳ ಹಿಂದೆ ಇಂಡಿ ಒಕ್ಕೂಟದ ಅನೇಕರು ನಿತೀಶ್‌ ರಾಜಕೀಯ ಮುಗಿಯಿತು ಎಂದಿದ್ದರು. ಅದು ಸಂಭವಿಸಿಲ್ಲ. ಬಿಹಾರದಲ್ಲಿ ಎನ್‌ಡಿಎಯನ್ನು ಮುನ್ನಡೆಸಿದ್ದ ನಿತೀಶ್‌ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟು ಕಡಿಮೆ ಸ್ಥಾನಗಳಲ್ಲಿ ಸಮಾಧಾನ ಮಾಡಿಕೊಳ್ಳಬೇಕಾಗಿ ಬಂದಿತ್ತು. ಇದೀಗ ಜೆಡಿಯು ಮುಖ್ಯಸ್ಥರು ಮೇಲುಗೈ ಸಾಧಿಸಿದ್ದಾರೆ. ಅವರ ಜಿಗಿತದ ಇತಿಹಾಸ ಬಿಜೆಪಿ ಆತಂಕಪಡಬೇಕಾದ ವಿಷಯವೇ.

ನಾಯ್ಡು ಪುನರಾಗಮನ

2019ರಲ್ಲಿ ಮೂರು ಸ್ಥಾನಗಳನ್ನು ಗೆದ್ದ ನಾಯ್ಡು ಅವರದ್ದು ಈ ಬಾರಿ ಭರ್ಜರಿ ಪುನರಾಗಮನ. ಲೋಕಸಭೆಯಲ್ಲಿ 16 ಸ್ಥಾನ ಗೆಲ್ಲುವುದರ ಜೊತೆಗೆ ಅವರು ವಿಧಾನಸಭೆಯನ್ನೂ ತನ್ನದಾಗಿಸಿಕೊಂಡಿದ್ದಾರೆ. ಟಿಡಿಪಿಯ ಹೆಗಲ ಮೇಲೆ ಸವಾರಿ ಮಾಡುತ್ತಾ ಬಿಜೆಪಿ ಕೂಡ ತನಗೆ ಅಸ್ತಿತ್ವವೇ ಇಲ್ಲದ ರಾಜ್ಯದಲ್ಲಿ ಮೂರು ಕಡೆ ಗೆಲುವು ಸಾಧಿಸಿದೆ. 1990ರಲ್ಲಿ ಸಮ್ಮಿಶ್ರ ಯುಗದಲ್ಲಿ ಪ್ರಧಾನ ಮಂತ್ರಿಯಾಗಿ ಎಚ್‌.ಡಿ ದೇವೇಗೌಡ ಮತ್ತು ಐ.ಕೆ ಗುಜ್ರಾಲ್ ಅವರನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಯಾಗಿ ನಾಯ್ಡು ಅವರು ರಾಜಕೀಯ ಬಣಗಳಲ್ಲೆಲ್ಲ ಸ್ನೇಹಿತರನ್ನು ಹೊಂದಿದ್ದಾರೆ. ಅವರ ಪುತ್ರ ನಾರಾ ಲೋಕೇಶ್ ಸೇರಿದಂತೆ ಟಿಡಿಪಿಯ ಹಿರಿಯ ನಾಯಕರು ತಾವು ಎನ್‌ಡಿಎಯಲ್ಲೇ ಉಳಿಯುವುದಾಗಿ ಹೇಳಿದ್ದರೂ, ಅಂತಿಮ ನಿಲುವನ್ನು ಪಕ್ಷದ ಮುಖ್ಯಸ್ಥ ನಾಯ್ಡು ತೆಗೆದುಕೊಳ್ಳಬೇಕಿದೆ.

ಟಿಡಿಪಿ ಹಾಗೂ ಜೆಡಿಯುಗಳು ಎನ್‌ಡಿಎಯಿಂದ ಇಂಡಿ ಬಣದ ಕಡೆ ಜಿಗಿದರೆ ಮೋದಿ ಪಿಎಂ ಆಗುವುದು ಸುಲಭವಲ್ಲ. ಆಗ ಅವರು ಏಕಾಏಕಿ 28 ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ. ಅವರ ಸ್ಥಾನಬಲ 262 ಸ್ಥಾನಗಳಿಗೆ ಇಳಿಯುತ್ತದೆ. ಆಗ ಎನ್‌ಡಿಎ ಬಹುಮತದ 272 ಸ್ಥಾನಬಲ ಪಡೆಯಲು ಕನಿಷ್ಠ 10 ಮಂದಿ ಸ್ವತಂತ್ರರನ್ನೇ ಅವಲಂಬಿಸಬೇಕಾಗುತ್ತದೆ. ಇಂಡಿ ಒಕ್ಕೂಟದಿಂದಲೂ ಕೆಲವರನ್ನು ಸೆಳೆಯಬೇಕಾಗಬಹುದು. ಭಾರಿ ಖಜಾನೆ ಹೊಂದಿರುವ ಹಾಗೂ ಆಪರೇಶನ್‌ ಕಮಲದ ಅನುಭವ ಹೊಂದಿರುವ ಬಿಜೆಪಿಗೆ ಇದು ಕಷ್ಟವಲ್ಲವಾದರೂ, ಸದಾ ಕಿರುಕುಳ ಕೊಡುವ ಇವರನ್ನು ಇಟ್ಟುಕೊಂಡು ಆಡಳಿತ ನಡೆಸುವುದು ಕಷ್ಟವೇ.

ಈಗಾಗಲೇ ಜೆಡಿಯುವಿನ ನಿತೀಶ್ ಕುಮಾರ್‌ಗೆ ಕಾಂಗ್ರೆಸ್‌ ರಾಷ್ಟ್ರದ ಉಪಪ್ರಧಾನ ಮಂತ್ರಿ ಮಾಡುವ ಆಫರ್ ಕೊಟ್ಟಿದೆ ಎನ್ನಲಾಗಿದೆ. ನಿತೀಶ್‌ ಕುಮಾರ್‌ ಅವರು ಇಂಡಿ ಬಣದ ಮುಖಂಡರಿಗೂ ಆಪ್ತರು. ಅತ್ತ ಚಂದ್ರಬಾಬು ನಾಯ್ಡುವಿಗೂ ಕಾಂಗ್ರೆಸ್‌ ಗಾಳ ಹಾಕಿದೆ. ಆದರೆ ಕೇವಲ ಈಗಿರುವ 236 ಸೀಟು ಇಟ್ಟುಕೊಂಡು ಇಂಡಿ ಬಣ ಸರ್ಕಾರ ರಚಿಸುವುದು ಅಸಾಧ್ಯ. ಟಿಡಿಪಿ ಹಾಗೂ ಜೆಡಿಯು ಸ್ಥಾನಗಳು ಸೇರಿದರೂ 264 ಸೀಟುಗಳಾಗುತ್ತವೆ. ಮತ್ತೂ 8 ಸಂಸದರನ್ನು ಕಲೆಹಾಕಬೇಕು. ಆದರೆ ಆಯ್ಕೆ ಮುಂದಿಟ್ಟರೆ ಸ್ವತಂತ್ರರು ಎನ್‌ಡಿಎ ಜೊತೆಗೆ ಹೋಗಬಹುದೇ ಹೊರತು ಇಂಡಿ ಜೊತೆಗೆ ಹೋಗುವುದು ಕಷ್ಟ.

ಇದನ್ನೂ ಓದಿ: Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?

Continue Reading

ದೇಶ

Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?

Election Results 2024: ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ಮೋದಿ 10 ವರ್ಷ 19 ದಿನ ಅಧಿಕಾರದಲ್ಲಿದ್ದಾರೆ.
10 ವರ್ಷ ಆಡಳಿತ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ನಾಲ್ಕನೇಯವರಾಗಿದ್ದಾರೆ. ಮೂರನೇ ಬಾರಿಯೂ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದಲ್ಲಿ ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಎನ್ನುವ ದಾಖಲೆಗೆ ಮೋದಿ ಪಾತ್ರರಾಗಿದ್ದಾರೆ.

VISTARANEWS.COM


on

Election Results 2024
Koo

ನವದೆಹಲಿ: ಲೋಕಸಮರದ ಜನಾದೇಶ(Election Results 2024) ಹೊರಬಿದ್ದಿದೆ. ಕೇಂದ್ರದಲ್ಲಿ ಬಿಜೆಪಿ(BJP) ನೇತೃತ್ವ ಎನ್‌ಡಿಎ ಸರ್ಕಾರ(NDA) ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಇನ್ನು ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಪ್ರಧಾನಿ ಮೋದಿ(PM Narendra Modi) ಮೂರನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರುತ್ತಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಈ ಐದು ವರ್ಷ ಪೂರ್ಣಗೊಳಿಸಿದರೆ ಅವರು ಅತಿ ಸುದೀರ್ಘವಾಗಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಇರುವ ಜವಾಹರಲಾಲ್‌ ನೆಹರೂ(Jawaharlal Nehru) ಮತ್ತು ಇಂದಿರಾಗಾಂಧಿ(Indira Gandhi) ಸಾಲಿಗೆ ಸೇರಲಿದ್ದಾರೆ.

ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ಮೋದಿ 10 ವರ್ಷ 19 ದಿನ ಅಧಿಕಾರದಲ್ಲಿದ್ದಾರೆ.
10 ವರ್ಷ ಆಡಳಿತ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ನಾಲ್ಕನೇಯವರಾಗಿದ್ದಾರೆ. ಮೂರನೇ ಬಾರಿಯೂ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದಲ್ಲಿ ಈ ಸಾಧನೆ ಮಾಡಿದ ಮೊದಲ ಪ್ರಧಾನಿ ಎನ್ನುವ ದಾಖಲೆಗೆ ಮೋದಿ ಪಾತ್ರರಾಗಿದ್ದಾರೆ.

ಜವಾಹರಲಾಲ್‌ ನೆಹರೂ

ಜವಾಹರಲಾಲ್ ನೆಹರು ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದರು. ದೀರ್ಘಾವಧಿಗೆ ಪ್ರಧಾನಿಯಾದವರ ಪಟ್ಟಿಯಲ್ಲಿ ನೆಹರು(16 ವರ್ಷ 286 ದಿನ) ಮೊದಲ ಸ್ಥಾನದಲ್ಲಿದ್ದಾರೆ. ಅವರು 1947 ರಿಂದ 1964ರಲ್ಲಿ ವಿಧಿವಶರಾಗುವವರೆಗೆ ಪ್ರಧಾನಿಯಾಗಿ ಮುಂದುವರೆದಿದ್ದರು. ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಹರೂ ಅವರು ದೊಡ್ಡ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿದರು ಮತ್ತು ವೈಜ್ಞಾನಿಕ ಶಿಕ್ಷಣವನ್ನು ಉತ್ತೇಜಿಸಿದರು. ಅವರು ಶೀತಲ ಸಮರದ ಸಮಯದಲ್ಲಿ ಯುಎಸ್ ಮತ್ತು ಸೋವಿಯತ್ ಒಕ್ಕೂಟದಿಂದ ಸ್ವತಂತ್ರವಾಗಿ ದೇಶವನ್ನು ಉಳಿಸಿಕೊಂಡು ಅಲಿಪ್ತ ಭಾರತದ ವಿದೇಶಾಂಗ ನೀತಿಯನ್ನು ಸ್ಥಾಪಿಸಲು ಸಹಾಯ ಮಾಡಿದರು.

ಇಂದಿರಾ ಗಾಂಧಿ (1966ರಿಂದ1977, 1980ರಿಂದ1984)

ಜವಾಹರಲಾಲ್ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಒಟ್ಟು 15 ವರ್ಷ 350 ದಿನಗಳ ಕಾಲ ಪ್ರಧಾನಿಯಾಗಿದ್ದರು. ಇಂದಿರಾಗಾಂಧಿ(15 ವರ್ಷ 350 ದಿನ) ಎರಡನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿ 10 ವರ್ಷ 19 ದಿನ ಆಡಳಿತ ನಡೆಸಿ ಮೂರನೇ ಸ್ಥಾನದಲ್ಲಿದ್ದಾರೆ. 1975ರಲ್ಲಿ ತುರ್ತುಪರಿಸ್ಥಿತಿಯ ಜಾರಿ, ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಸೇರಿದಂತೆ ಹಲವು ದಿಟ್ಟ ಮತ್ತು ವಿವಾದಾತ್ಮಕ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದರು. ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದು ಇಂದಿರಾ ಗಾಂಧಿ 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಹೀನಾಯ ಹಿನ್ನಡೆ ಕಂಡು ಅಧಿಕಾರ ತ್ಯಜಿಸಬೇಕಾಯಿತು. ಆದರೆ 1980ರಲ್ಲಿ ಅವರು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಮರಳಿದರು. ಆದರೆ 1984ರಲ್ಲಿ ಸಿಖ್‌ ಭಯೋತ್ಪಾದನೆಗೆ ಬಲಿಯಾದರು.

ಅಟಲ್ ಬಿಹಾರಿ ವಾಜಪೇಯಿ (1996, 1998-2004)

ನುರಿತ ವಾಗ್ಮಿ ಮತ್ತು ದೂರದೃಷ್ಟಿಯ ನಾಯಕ, ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಒಮ್ಮೆ 13 ದಿನ, ಮತ್ತೊಮ್ಮೆ 13 ತಿಂಗಳಷ್ಟೇ ಅವರು ಪ್ರಧಾನಿಯಾಗಿದ್ದರು. ಆದರೆ 1998ರಿಂದ 2004ರ ಅವರು ಪೂರ್ಣಾವಧಿ ಪ್ರಧಾನಿಯಾಗಿದ್ದರು. ಒಂದೆಡೆ ಪರಮಾಣು ಪರೀಕ್ಷೆಯ ದಿಟ್ಟತನ ಮತ್ತು ಇನ್ನೊಂದೆಡೆ ಪಾಕಿಸ್ತಾನದೊಂದಿಗೆ ಶಾಂತಿಯನ್ನು ಬೆಳೆಸುವ, ಸಂದರ್ಭ ಬಂದಾಗ ಅದಕ್ಕೆ ಬುದ್ಧಿ ಕಲಿಸುವ ಅವರ ಉಪಕ್ರಮಗಳಿಗಾಗಿ ವಾಜಪೇಯಿ ಸದಾ ನೆನಪಿನಲ್ಲಿರುತ್ತಾರೆ. ಹೆದ್ದಾರಿ ನಿರ್ಮಾಣದ ಕ್ರಾಂತಿ ನಡೆದಿದ್ದು ಅವರ ಕಾಲದಲ್ಲಿ.

ಮನಮೋಹನ್ ಸಿಂಗ್ (2004-2014)

ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ಒಟ್ಟು 10 ವರ್ಷಗಳ ಕಾಲ ಪ್ರಧಾನಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯು ಗಮನಾರ್ಹ ಆರ್ಥಿಕ ಸುಧಾರಣೆಗಳು ಮತ್ತು ಉದಾರೀಕರಣದ ಉಪಕ್ರಮಗಳಿಂದ ಗುರುತಿಸಲ್ಪಟ್ಟಿದೆ. ಮನಮೋಹನ್ ಸಿಂಗ್ 10 ವರ್ಷ 4 ದಿನ ಆಡಳಿತ ನಡೆಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೂರನೇ ಬಾರಿಗೆ ಐದು ವರ್ಷ ಪೂರ್ಣಗೊಳಿಸಿದಲ್ಲಿ ಮೋದಿ ದಾಖಲೆ ಬರೆಯಲಿದ್ದಾರೆ.

ಇದನ್ನೂ ಓದಿ:Election Results 2024: ರಾಮ ಮಂದಿರ ಭದ್ರ, ಯುಪಿ ಅಭದ್ರ: ಉತ್ತರ ಪ್ರದೇಶದಲ್ಲಿ ಬಿಜೆಪಿ 64ರಿಂದ 36ಕ್ಕೆ ಕುಸಿಯಲು ಕಾರಣ ಇಲ್ಲಿದೆ

Continue Reading

Lok Sabha Election 2024

Election Results 2024: ವಾರಣಾಸಿಯಲ್ಲಿ ಮೋದಿ ಮತ ಗಳಿಕೆ ಪ್ರಮಾಣ ಕುಸಿಯುವಂತೆ ಮಾಡಿದ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ

Election Results 2024: ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಜಯ ಸಾಧಿಸಿದ್ದಾರೆ. ಆದರೆ ಈ ಬಾರಿ ಮತ ಗಳಿಕೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆ ಬಾರಿಗಿಂತ ಸುಮಾರು 9% ವೋಟು ಕಡಿಮೆ ಬಂದಿರುವುದು ಬಿಜೆಪಿಗರಲ್ಲಿ ಆತಂಕ ಮೂಡಿಸಿದೆ. ಇತ್ತ ಮೋದಿ ವಿರುದ್ಧ ಸತತ ಮೂರನೇ ಬಾರಿಗೆ ಕಣಕ್ಕಿಳಿದ ಕಾಂಗ್ರೆಸ್‌ನ ಅಜಯ್‌ ರಾಯ್‌ ತಮ್ಮ ಮತ ಗಳಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

VISTARANEWS.COM


on

Election Results 2024
Koo

ಲಕ್ನೋ: ಸುಮಾರು ಎರಡು ತಿಂಗಳ ಕಾಲ ನಡೆದ ಚುನಾವಣೆ ಹಬ್ಬ ಮಂಗಳವಾರ (ಜೂನ್‌ 4) ಮತ ಎಣಿಕೆಯೊಂದಿಗೆ ಮುಕ್ತಾಯವಾಗಿದೆ (Election Results 2024). ಸುದೀರ್ಘ ದಿನಗಳ ಕುತೂಹಲ ಕೊನೆಗೂ ತಣಿದಿದೆ. ಎಕ್ಸಿಟ್‌ ಪೋಲ್‌ಗಿಂತ ಭಿನ್ನವಾಗಿ ಫಲಿತಾಂಶ ಹೊರ ಬಂದಿದ್ದು, ಬಿಜೆಪಿ (BJP) ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡುವಲ್ಲಿ ಎಡವಿದೆ. ಅದಾಗ್ಯೂ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಅಧಿಕಾರಕ್ಕೇರುವುದು ನಿಶ್ಚಿತ. ಈ ಮಧ್ಯೆ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್‌ನ ಅಜಯ್‌ ರಾಯ್‌ (Ajay Rai) ವಿರುದ್ಧ ಗೆಲುವು ಕಂಡಿದ್ದಾರೆ. ಸತತ ಮೂರನೇ ಬಾರಿಗೆ ಇಲ್ಲಿಂದ ಮೋದಿ ಆಯ್ಕೆಯಾಗಿದ್ದಾರೆ. ಆದರೆ ಮತ ಗಳಿಕೆ ಪ್ರಮಾಣ ಕುಸಿದಿದೆ. ಅದು ಯಾಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೋದಿ ಅವರು 6,12,970 ಮತ ಪಡೆದುಕೊಂಡಿದ್ದಾರೆ. ಅಂದರೆ ಶೇ. 54.23. ಇನ್ನು ಅಜಯ್‌ ರಾಯ್‌ ಅವರಿಗೆ 4,60,457 ವೋಟು ಲಭಿಸಿದೆ (ಶೇ. 40.74). ಮೋದಿ ಕಾಂಗ್ರೆಸ್‌ ವಿರುದ್ಧ 1,52,513 ಅಂತರಿಂದ ಗೆಲುವು ಸಾಧಿಸಿದ್ದರೂ ಕಳೆದ ಸಲಕ್ಕೆ ಹೋಲಿಸಿದರೆ ಮತ ಗಳಿಕೆ ಪ್ರಮಾಣದಲ್ಲಿ ಸುಮಾರು ಶೇ. 9ರಷ್ಟು ಕುಸಿತವಾಗಿದೆ.

ಹಿಂದಿನ ಲೆಕ್ಕಾಚಾರ

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ 6,74,664 ಮತ (63.62%) ಲಭಿಸಿತ್ತು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಅಂದರೆ 2014ರಲ್ಲಿ ಮೋದಿಗೆ ಲಭಿಸಿದ್ದು 5,81,022 ವೋಟು (56.37%). ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಮತ ಗಳಿಕೆ ಗಣನೀಯವಾಗಿ ಕುಸಿದಿದೆ.

ಇತ್ತ ಮೋದಿ ವಿರುದ್ಧ ಮೂರನೇ ಬಾರಿ ಕಣಕ್ಕಿಳಿರುವ ಅಜಯ್‌ ರಾಯ್‌ 2019ಕ್ಕಿಂತ ಈ ಬಾರಿ ಅಧಿಕ ಮತ ಗಳಿಸಿದ್ದಾರೆ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಾರ್ಟಿ (ಎಸ್‌ಪಿ) ನಡುವಿನ ಮೈತ್ರಿಯೇ ಮೋದಿ ಅವರ ಮತ ಗಳಿಕೆ ಕುಸಿಯಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲಿ ಎರಡು ಪಕ್ಷಗಳ ನಡುವೆ ಒಪ್ಪಂದ ನಡೆದ ಕಾರಣ ಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ. ಇದರಿಂದ ಮತ ಹಂಚಿ ಹೋಗದೆ ಕಾಂಗ್ರೆಸ್‌ನ ತಂತ್ರ ಕೈ ಹಿಡಿದಿದೆ. ಮತ ಎಣಿಕೆಯಾಗಿ ಕೆಲವು ಹೊತ್ತಿನಲ್ಲಿ ಮೋದಿ ಅವರಿಗೆ ಸುಮಾರು 6 ಸಾವಿರದಷ್ಟು ಮತಗಳಿಂದ ಹಿನ್ನಡೆಯಾಗಿ ಕೆಲ ಹೊತ್ತು ಬಿಜೆಪಿ ಕಾರ್ಯಕರ್ತರ ಮನದಲ್ಲಿ ಆತಂಕದ ಮೂಡಿತ್ತು.

ಇದನ್ನೂ ಓದಿ: Narendra Modi : ವಾರಾಣಸಿಯಲ್ಲೂ ಮೋದಿ ಜನಪ್ರಿಯತೆ ಮಸುಕು; ಗೆಲುವಿನ ಅಂತರ ಕೇವಲ 1.5 ಲಕ್ಷ ಮತಗಳು

ಅಜಯ್ ರಾಯ್​ ಹಿನ್ನೆಲೆ

ಅಜಯ್​ ರಾಯ್​ ಎಬಿವಿಪಿ ಹಾಗೂ ಆರ್​ಎಸ್​ಎಸ್​ ಮೂಲದವರು. ಹಿಂದೆ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ ಉತ್ತರ ಪ್ರದೇಶ ವಿಧಾನಸಭೆಗೆ ನಾಲ್ಕು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಆದರೆ 2008ರಲ್ಲಿ ಅವರಿಗೆ ಬಿಜೆಪಿ ಮತ್ತೆ ಟಿಕೆಟ್​ ನಿರಾಕರಿಸಿತ್ತು. ಈ ವೇಳೆ ಮೂಲ ಪಕ್ಷವನ್ನು ತೊರೆದು ಕೈ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಅಜಯ್​ ರಾಯ್​ 2014ರಲ್ಲಿ ಮತ್ತು 2019ರಲ್ಲಿ ವಾರಾಣಸಿಯಿಂದಲೇ ಸ್ಪರ್ಧಿಸಿದ್ದರು. ಆದರೆ ಎರಡೂ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದೀಗ ಮೂರನೇ ಬಾರಿಗೂ ಸೋತಿದ್ದಾರೆ. ಆದರೆ ಈ ಬಾರಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 

Continue Reading
Advertisement
Murder Case
ಪ್ರಮುಖ ಸುದ್ದಿ4 mins ago

Murder News : ಹಾಸನದಲ್ಲಿ ನಟೋರಿಯಸ್​ ರೌಡಿ ಚೈಲ್ಡ್​ ರವಿ ಬರ್ಬರ ಕೊಲೆ

Election Results 2024
Lok Sabha Election 202416 mins ago

Election Results 2024: ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು!

Chikkodi Lok Sabha Result:
ಪ್ರಮುಖ ಸುದ್ದಿ26 mins ago

Chikkodi Lok Sabha Result : ಕಾಂಗ್ರೆಸ್​ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಜೈಕಾರ ಕೂಗಿದ ಜಮೀರನ ಬಂಧನ

Election Results 2024 chandrababu naidu nitish kumar 2
ಪ್ರಮುಖ ಸುದ್ದಿ32 mins ago

Election Results 2024: ನಿತೀಶ್‌ಕುಮಾರ್, ಚಂದ್ರಬಾಬು ನಾಯ್ಡು ನೆರವಿಲ್ಲದೆ ಮೋದಿ ಸರ್ಕಾರ ನಡೆಸಲಾಗದೆ?

Election Results 2024
ದೇಶ1 hour ago

Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?

World Environment Day
ಪರಿಸರ1 hour ago

World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಯನ್ನು ಉಳಿಸಲು ಈ 5 ಸೂತ್ರ ಪಾಲಿಸೋಣ

Election Results 2024
Lok Sabha Election 20241 hour ago

Election Results 2024: ವಾರಣಾಸಿಯಲ್ಲಿ ಮೋದಿ ಮತ ಗಳಿಕೆ ಪ್ರಮಾಣ ಕುಸಿಯುವಂತೆ ಮಾಡಿದ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ

Election Results 2024
ದೇಶ2 hours ago

Election Results 2024: ಹ್ಯಾಟ್ರಿಕ್‌ ಸರದಾರ ಮೋದಿಗೆ ವಿಶ್ವನಾಯಕರಿಂದ ಅಭಿನಂದನೆ

election results 2024 Modi and Yogi
ಪ್ರಮುಖ ಸುದ್ದಿ2 hours ago

Election Results 2024: ರಾಮ ಮಂದಿರ ಭದ್ರ, ಯುಪಿ ಅಭದ್ರ: ಉತ್ತರ ಪ್ರದೇಶದಲ್ಲಿ ಬಿಜೆಪಿ 64ರಿಂದ 36ಕ್ಕೆ ಕುಸಿಯಲು ಕಾರಣ ಇಲ್ಲಿದೆ

Election Results 2024
ದೇಶ2 hours ago

Election Results 2024: 543ರಲ್ಲಿ 542 ಕ್ಷೇತ್ರಗಳ ಫಲಿತಾಂಶ ಘೋಷಣೆ; ಪಕ್ಷಗಳ ಅಂತಿಮ ಬಲಾಬಲ ಹೀಗಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ1 day ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌