Harjot Singh Bains: ಐಪಿಎಸ್‌ ಅಧಿಕಾರಿಯನ್ನು ಮದುವೆಯಾಗಲಿದ್ದಾರೆ ಪಂಜಾಬ್‌ ಸಚಿವ ಹರ್ಜೋತ್‌ ಸಿಂಗ್ - Vistara News

ದೇಶ

Harjot Singh Bains: ಐಪಿಎಸ್‌ ಅಧಿಕಾರಿಯನ್ನು ಮದುವೆಯಾಗಲಿದ್ದಾರೆ ಪಂಜಾಬ್‌ ಸಚಿವ ಹರ್ಜೋತ್‌ ಸಿಂಗ್

Harjot Singh Bains: ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಭಗವಂತ್‌ ಮಾನ್‌ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಮದುವೆಯಾಗುತ್ತಿರುವ ನಾಲ್ಕನೇ ಶಾಸಕ ಹರ್ಜೋತ್‌ ಸಿಂಗ್‌ ಬೈನ್ಸ್‌.

VISTARANEWS.COM


on

AAP Punjab Minister Harjot Singh Bains To Marry Senior Police Officer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂಡೀಗಢ: ಪಂಜಾಬ್‌ ಶಿಕ್ಷಣ ಸಚಿವ, ಆನಂದ್‌ಪುರ ಸಾಹಿಬ್‌ ಶಾಸಕ ಹರ್ಜೋತ್‌ ಸಿಂಗ್‌ ಬೈನ್ಸ್‌ (Harjot Singh Bains) ಅವರು ಐಪಿಎಸ್‌ ಅಧಿಕಾರಿ ಜ್ಯೋತಿ ಯಾದವ್‌ ಅವರನ್ನು ಮದುವೆಯಾಗಲಿದ್ದಾರೆ. ಇದರೊಂದಿಗೆ ಪಂಜಾಬ್‌ನಲ್ಲಿ ಆಪ್‌ ಸರ್ಕಾರ ರಚನೆಯಾದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಾಲ್ಕನೇ ಶಾಸಕ ಎನಿಸಿದ್ದಾರೆ.

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಹರ್ಜೋತ್‌ ಸಿಂಗ್‌ ಅವರು ಮಾನ್ಸಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿರುವ (SP) ಜ್ಯೋತಿ ಯಾದವ್‌ ಅವರನ್ನು ಮದುವೆಯಾಗಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮಾರ್ಚ್‌ ಕೊನೆಯ ವಾರದಲ್ಲಿ ಮದುವೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮದುವೆಯಾಗಲಿರುವ ಜೋಡಿಗೆ ವಿಧಾನಸಭೆ ಸ್ಪೀಕರ್‌ ಕುಲ್ತಾರ್‌ ಸಿಂಗ್‌ ಸಂಧ್ವಾನ್‌ ಶುಭ ಹಾರೈಸಿದ್ದಾರೆ.

ಹರಿಯಾಣ ಮೂಲದ ಐಪಿಎಸ್‌ ಅಧಿಕಾರಿಯಾಗಿರುವ ಜ್ಯೋತಿ ಯಾದವ್‌ ಅವರು ಕಳೆದ ವರ್ಷ ಆಪ್‌ ಶಾಸಕ ರಾಜಿಂದರ್‌ಪಾಲ್‌ ಕೌರ್‌ ಛೀನಾ ಅವರ ಜತೆ ವಾಗ್ವಾದ ಮಾಡಿದ ವಿಡಿಯೊ ವೈರಲ್‌ ಆಗಿತ್ತು. ಇದಾದ ಬಳಿಕ ಯಾದವ್‌ ಅವರು ಸುದ್ದಯಲ್ಲಿದ್ದರು. ಪಂಜಾಬ್‌ನಲ್ಲಿ ಆಪ್‌ ಸರ್ಕಾರ ರಚನೆಯಾದ ಬಳಿಕ ಸಿಎಂ ಭಗವಂತ್‌ ಮಾನ್‌, ಶಾಸಕರಾದ ನರಿಂದರ್‌ ಕೌರ್‌ ಭಾರಜ್‌ ಹಾಗೂ ನರಿಂದರ್‌ಪಾಲ್‌ ಸಿಂಗ್‌ ಸವಾನ ಅವರು ಮದುವೆಯಾಗಿದ್ದಾರೆ. ಈಗ ಇವರ ಸಾಲಿಗೆ ಹರ್ಜೋತ್‌ ಸಿಂಗ್‌ ಕೂಡ ಸೇರಲಿದ್ದಾರೆ.

ಇದನ್ನೂ ಓದಿ: Swara Bhaskar: ಸ್ವರಾ ಭಾಸ್ಕರ್- ಫಹಾದ್ ಮದುವೆ ಸಂಭ್ರಮ, ಹಳದಿ ಶಾಸ್ತ್ರ ಹೇಗಿತ್ತು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Viral Video : 25 ವರ್ಷದ ಕನ್ಯೆಯನ್ನು ಮದುವೆಯಾದ 70 ವರ್ಷದ ಮುದುಕ ಕಲೀಮುಲ್ಲಾ!

Viral Video : ಮದುವೆಯಾದ ಜೋಡಿಯ ಹೆಸರು ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್. ರೇಷ್ಮಾ ಪರ್ವೀನ್ ಅಮಾಸ್ ಬ್ಲಾಕ್ನ ಹಮ್ಜಾಪುರ ವಾರ್ಡ್ ಸಂಖ್ಯೆ 11 ರ ಇಸ್ಲಾಂನಗರದ ನಿವಾಸಿ. 70 ವರ್ಷದ ಕಲೀಮುಲ್ಲಾ ನೂರಾನಿ ಬೈಡಾ ಗ್ರಾಮದ ನಿವಾಸಿ. ಇಬ್ಬರೂ ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆ. ಆದಾಗ್ಯೂ, ಕಲೀಮುಲ್ಲಾ ತನಗಿನ್ನೂ ವಯಸ್ಸ 50 ಎಂದು ಹೇಳುತ್ತಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

VISTARANEWS.COM


on

Viral Video
Koo

ಗಯಾ: ಮುದುಕನ ಮದುವೆ ಹೊಸತಲ್ಲ. ಆದರೆ, ಪ್ರತಿ ಬಾರಿಯೂ ಮುದುಕರು ಮದುವೆಯಾಗಿರುವುದು ಸುದ್ದಿಯಾಗುವುದು ಅವರು ವರಿಸಿದ ಕನ್ಯೆಯ ವಯಸ್ಸಿನ ಆಧಾರದ ಮೇಲೆ ಅಂತೆಯೇ ಬಿಹಾರದಲ್ಲೂ ಒಂದು ಘಟನೆ ನಡೆದಿದೆ. ಕಲೀಮುಲ್ಲಾ ಎಂಬ ಹೆಸರಿನ 70 ವರ್ಷದ ವ್ಯಕ್ತಿ 25 ವರ್ಷದ ಯುವತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾನೆ. ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದ್ದು,ಕುಟುಂಬ ಮತ್ತು ಗ್ರಾಮಸ್ಥರೆಲ್ಲರೂ ಆತನ ಮದುಗೆ ಬಂದು ತಿಂದುಂಡು ಹೋಗಿದ್ದಾರೆ. ಅಚ್ಚರಿಯೆಂದರೆ ಮದುವೆಯನ್ನು ಸಂಪೂರ್ಣ ಧಾರ್ಮಿಕ ಸಂಪ್ರದಾಯಗಳ ಪ್ರಕಾರವೇ ನಡೆಸಲಾಗಿದೆ.

ಮದುವೆಯಾದ ಜೋಡಿಯ ಹೆಸರು ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್. ರೇಷ್ಮಾ ಪರ್ವೀನ್ ಅಮಾಸ್ ಬ್ಲಾಕ್ನ ಹಮ್ಜಾಪುರ ವಾರ್ಡ್ ಸಂಖ್ಯೆ 11 ರ ಇಸ್ಲಾಂನಗರದ ನಿವಾಸಿ. 70 ವರ್ಷದ ಕಲೀಮುಲ್ಲಾ ನೂರಾನಿ ಬೈಡಾ ಗ್ರಾಮದ ನಿವಾಸಿ. ಇಬ್ಬರೂ ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆ. ಆದಾಗ್ಯೂ, ಕಲೀಮುಲ್ಲಾ ತನಗಿನ್ನೂ ವಯಸ್ಸ 50 ಎಂದು ಹೇಳುತ್ತಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಮದುಗೆ ಆದ ವಿಚಾರದ ಬಗ್ಗೆ ಕಲೀಮುಲ್ಲಾನನ್ನು ಮಾತನಾಡಿಸಿದಾಗ, ನನ್ನದೇನೂ ತಪ್ಪಿಲ್ಲ. ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾನೆ. ಮದುವೆಗೆ ವಯಸ್ಸು ಲೆಕ್ಕವೇ ಅಲ್ಲ. ಹುಡುಗಿ ಕೂಡ ಈ ಮದುವೆಗೆ ಸಂತೋಷದಿಂದ ಒಪ್ಪಿಕೊಂಡಿದ್ದಾಳೆ. ಇದನ್ನು ಅವರು ಮಾಧ್ಯಮಗಳ ಮುಂದೆಯೂ ಹೇಳಿದ್ದಾಳೆ ಎಂದು ಸಮರ್ಥಿಸಿಕೊಂಡಿದ್ದಾನೆ. ಕಲೀಮುಲ್ಲಾ ವೃದ್ಧಾಪ್ಯದಲ್ಲಿ ಏಕೆ ವಿವಾಹವಾಗಿದ್ದೇನೆ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ. ಮದುವೆಗೆ ಯಾವುದೇ ವಯಸ್ಸು ಇಲ್ಲ. ನನ್ನನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ನಾನು ಮದುವೆಯ ಬಗ್ಗೆ ಯೋಚಿಸಿದೆ. ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: School Teacher : ಶಾಲಾ ಕೊಠಡಿಯಲ್ಲೇ ಚಾಪೆ ಹಾಸಿ, ಮಕ್ಕಳಿಗೆ ಗಾಳಿ ಹಾಕಲು ಹೇಳಿ ಗಡದ್ದಾಗಿ ನಿದ್ದೆ ಹೊಡೆದ ಟೀಚರ್​!

ಕಲೀಮುಲ್ಲಾ ಖಾನ್ ಪತ್ನಿ ನಿಧನ

ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್ ಯಾವುದೇ ಒತ್ತಡವಿಲ್ಲದೆ ಮದುವೆಯಾಗಿದ್ದಾರೆ. ಆದಾಗ್ಯೂ ಮದುವೆ ಚರ್ಚೆಯು ಇಡೀ ಪ್ರದೇಶದಲ್ಲಿ ಹರಡಿದಿದೆ. 70 ವರ್ಷದ ವ್ಯಕ್ತಿ 25 ವರ್ಷದ ಮಹಿಳೆಯನ್ನು ಏಕೆ ಮದುವೆಯಾಗಿದ್ದಾನೆ ಎಂದು ಚರ್ಚಿಸುತ್ತಿದ್ದಾನೆ. ಅಂದ ಹಾಗೆ ಕಲೀಮುಲ್ಲಾನ ಪತ್ನಿ ನಿಧನ ಹೊಂದಿದ್ದಾರೆ. ಅಲ್ಲಿಂದ ಆತನಿಗೆ ಏಕಾಂಗಿತನ ಕಾಡಿತ್ತು. ಅದಕ್ಕೆ ಎಲ್ಲ ಕೆಲಸ ಮಾಡಬಲ್ಲವಳನ್ನೇ ಮದುವೆಯಾಗಿದ್ದಾರೆ.

Continue Reading

ದೇಶ

Tamil Nadu News : ತಮಿಳುನಾಡಿನಲ್ಲಿ 24 ಗಂಟೆಯೊಳಗೆ ಇಬ್ಬರು ಪ್ರತಿಪಕ್ಷ ನಾಯಕರ ಕಗ್ಗೊಲೆ

Tamil Nadu News : ಶಿವಗಂಗೈನ ಬಿಜೆಪಿ ಕಾರ್ಯಕರ್ತನನ್ನು ಶನಿವಾರ ರಾತ್ರಿ ಗುಂಪೊಂದು ಕೊಚ್ಚಿ ಕೊಲೆ ಮಾಡಿದೆ. ಶಿವಗಂಗೈನ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಸೆಲ್ವಕುಮಾರ್ ಅವರು ಅದೇ ಪ್ರದೇಶದಲ್ಲಿ ತಮ್ಮ ಒಡೆತನದ ಇಟ್ಟಿಗೆ ಗೂಡುಗಳಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಕೊಲ್ಲಲಾಗಿದೆ.

VISTARANEWS.COM


on

Tamil Nadu News
Koo

ಬೆಂಗಳೂರು: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ತಮಿಳುನಾಡಿನಲ್ಲಿ ಇಬ್ಬರು ಪ್ರತಿ ಪಕ್ಷದ ನಾಯಕರನ್ನು 24 ಗಂಟೆಗಳ ಅವಧಿಯೊಳಗೆ ಕೊಲೆ ಮಾಡಲಾಗಿದೆ. ಕೊಲೆಯಾದವರಲ್ಲಿ ಒಬ್ಬರು ಬಿಜೆಪಿ ಮತ್ತು ಇನ್ನೊಬ್ಬರು ಎಐಎಡಿಎಂಕೆಯ ನಾಯಕರಾಗಿದ್ದಾರೆ. ಅವರಿಬ್ಬರನ್ನೂ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇದರಿಂದ ಕೆರಳಿದ ವಿರೋಧ ಪಕ್ಷದ ನಾಯಕರು ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಯಾರಿಗೂ ಭದ್ರತೆ ಇಲ್ಲ ಎಂದು ಆರೋಪಿಸಿದ್ದಾರೆ.

ಶಿವಗಂಗೈನ ಬಿಜೆಪಿ ಕಾರ್ಯಕರ್ತನನ್ನು ಶನಿವಾರ ರಾತ್ರಿ ಗುಂಪೊಂದು ಕೊಚ್ಚಿ ಕೊಲೆ ಮಾಡಿದೆ. ಶಿವಗಂಗೈನ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಸೆಲ್ವಕುಮಾರ್ ಅವರು ಅದೇ ಪ್ರದೇಶದಲ್ಲಿ ತಮ್ಮ ಒಡೆತನದ ಇಟ್ಟಿಗೆ ಗೂಡುಗಳಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಕೊಲ್ಲಲಾಗಿದೆ. ಅವರು ತಮ್ಮ ದ್ವಿಚಕ್ರ ವಾಹನದಲ್ಲಿದ್ದಾಗ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ವ್ಯಕ್ತಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ, “ಸಮಾಜ ವಿರೋಧಿ ಶಕ್ತಿಗಳಿಗೆ ಸರ್ಕಾರ ಅಥವಾ ಪೊಲೀಸರ ಬಗ್ಗೆ ಯಾವುದೇ ಭಯವಿಲ್ಲ. ಪೊಲೀಸರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುವ ಮುಖ್ಯಮಂತ್ರಿಗಳು ರಾಜಕೀಯ ನಾಟಕವಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪುದುಚೇರಿ ಗಡಿಗೆ ಹತ್ತಿರವಿರುವ ಕಡಲೂರು ಪ್ರದೇಶದಲ್ಲಿ ಎಐಎಡಿಎಂಕೆ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ತಿರುಪಪುಲಿಯೂರ್ ನಿವಾಸಿ ಪದ್ಮನಾಭನ್ ಕೊಲೆಯಾದ ವ್ಯಕ್ತಿ. ಘಟನೆಯ ದಿನದಂದು ಅವರು ಬಾಗೂರು ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ಅವರನ್ನು ಸುತ್ತುವರೆದಿದ್ದರು. ಈ ವೇಳೆ ವಾಗ್ವಾದ ನಡೆದಿತ್ತು.ಬಳಿಕ ಅದು ಅವರ ಸಾವಿನಲ್ಲಿ ಕೊನೆಗೊಂಡಿತು.

ಕಡಲೂರು ಜಿಲ್ಲೆಯ ನವನೀತ ನಗರ ಪ್ರದೇಶದ ಮುರಳಿ ಮತ್ತು ಶ್ರೀಧರ್ ಎಂಬ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗಾಗಿ ಕರೆದೊಯ್ಯಲಾಗಿದೆ ಎಂದು ಬಹೌರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪಿ.ಕೆ.ಸಜಿತ್ ತಿಳಿಸಿದ್ದಾರೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: School Teacher : ಶಾಲಾ ಕೊಠಡಿಯಲ್ಲೇ ಚಾಪೆ ಹಾಸಿ, ಮಕ್ಕಳಿಗೆ ಗಾಳಿ ಹಾಕಲು ಹೇಳಿ ಗಡದ್ದಾಗಿ ನಿದ್ದೆ ಹೊಡೆದ ಟೀಚರ್​!

ತಮಿಳುನಾಡಿನಲ್ಲಿ ರಾಜಕೀಯ ಪಕ್ಷದ ನಾಯಕರಿಂದ ಹಿಡಿದು ಸಾಮಾನ್ಯ ಮಹಿಳೆಯರವರೆಗೆ ಯಾರಿಗೂ ಭದ್ರತೆ ಇಲ್ಲ ಎಂದು ಹೇಳಿದ್ದಾರೆ. ರಾಜ್ಯದ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಳನಿಸ್ವಾಮಿ, ಪ್ರತಿದಿನ ಕೊಲೆಗಳು ಮತ್ತು ದರೋಡೆಗಳು ನಡೆಯುತ್ತಿವೆ/ ಜನವರಿಯಿಂದ 595 ಕೊಲೆಗಳು ನಡೆದಿವೆ ಎಂದು ಆರೋಪಿಸಿದರು.

ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕೊಲೆಗಳು ಮತ್ತು ದರೋಡೆಗಳು ಪ್ರತಿದಿನ ನಡೆಯುತ್ತಿವೆ. ತಮಿಳುನಾಡಿನಲ್ಲಿ ಕೊಲೆಗಳು ನಡೆಯದೆ ದಿನವೇ ಇಲ್ಲ . ಜನವರಿಯಿಂದ ಇಲ್ಲಿಯವರೆಗೆ 595 ಕೊಲೆಗಳು ನಡೆದಿವೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

School Teacher : ಶಾಲಾ ಕೊಠಡಿಯಲ್ಲೇ ಚಾಪೆ ಹಾಸಿ, ಮಕ್ಕಳಿಗೆ ಗಾಳಿ ಹಾಕಲು ಹೇಳಿ ಗಡದ್ದಾಗಿ ನಿದ್ದೆ ಹೊಡೆದ ಟೀಚರ್​!

School Teacher :

VISTARANEWS.COM


on

School Teacher
Koo

ಅಲಿಗಢ: ಶಾಲೆಗಳಲ್ಲಿ ಮಕ್ಕಳ ಯೋಗಕ್ಷೇಮವನ್ನು ಶಿಕ್ಷಕರು (School Teacher) ನೋಡಿಕೊಳ್ಳಬೇಕು. ಆದರೆ, ಟೀಚರ್ ಮಕ್ಕಳನ್ನು ಹಾಗೆಯೇ ಬಿಟ್ಟು ಕೊಠಡಿಯಲ್ಲೇ ಗಡದ್ದಾಗಿ ನಿದ್ದೆ ಹೊಡೆದ ಘಟನೆಯೊಂದು ವೈರಲ್ ಆಗಿದೆ. ಅಷ್ಟಕ್ಕೂ ಮುಗಿಯದೇ ಅವರು ಪುಟಾಣಿ ಮಕ್ಕಳಿಗೆ ಗಾಳಿ ಬೀಸುವಂತೆ ಹೇಳಿದ್ದಾರೆ. ಉತ್ತರ ಪ್ರದೇಶದ ಅಲಿಗಢದ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಶಿಕ್ಷಕಿ ನೆಲದ ಮೇಲೆ ಚಾಪೆ ಹಾಸಿ ಮೇಲೆ ಆರಾಮವಾಗಿ ಮಲಗಿರುವುದನ್ನು ನೋಡಬಹುದು. ಮೂವರು ಹೆಣ್ಣು ಮಕ್ಕಳು ಅವರಿಗೆ ಬಟ್ಟೆಯಿಂದ ಗಾಳಿ ಬೀಸುತ್ತಿದ್ದಾರೆ.

ಉತ್ತರ ಪ್ರದೇಶದ ಅಲಿಗಢದ ಧನಿಪುರ ಪ್ರದೇಶದ ಗೋಕುಲ್ಪುರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. 2 ನಿಮಿಷಗಳ ವೀಡಿಯೊದಲ್ಲಿ ಶಿಕ್ಷಕಿ ತರಗತಿಯ ನೆಲದ ಮೇಲೆ ಮಲಗಿರುವುದನ್ನು ಮತ್ತು ಹುಡುಗಿಯೊಬ್ಬಳು ಹ್ಯಾಂಡ್ ಹೆಲ್ಡ್ ಫ್ಯಾನ್ ಅನ್ನು ಅವಳತ್ತ ಬೀಸುತ್ತಿರುವುದನ್ನು ನೋಡಬಹುದು. ಇನ್ನೊಬ್ಬಳು ಹುಡುಗಿ ಅವಳಿಂದ ಫ್ಯಾನ್ ಅನ್ನು ತೆಗೆದುಕೊಂಡು ಅದೇ ರೀತಿ ಮಾಡುತ್ತಾಳೆ. ಇತರರು ಮಕ್ಕಳು ಶಿಕ್ಷಕರ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ.

ವರದಿಯ ಪ್ರಕಾರ, ಘಟನೆ ವೈರಲ್ ಆದ ಬಳಿಕ ಶಾಲಾ ಶಿಕ್ಷಕಿ ಡಿಂಪಲ್ ಬನ್ಸಾಲ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ವೀಡಿಯೊ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ, ಪ್ರಾಥಮಿಕ ಶಿಕ್ಷಣ ಅಧಿಕಾರಿ ರಾಕೇಶ್ ಕುಮಾರ್ ಸಿಂಗ್ ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಕುಡಿದ ಅಮಲಿನಲ್ಲಿ ಕೆಲಸಕ್ಕೆ ಬರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ಬಿಯೋಹರಿ ಬ್ಲಾಕ್​​ನ ಶಂಕರ್​ಗರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನೊಬ್ಬ ಕುಡಿದು ಹೋಗುತ್ತಿರುವುದನ್ನು ಗ್ರಾಮಸ್ಥರು ಶನಿವಾರ ಚಿತ್ರೀಕರಿಸಿದ್ದರು.

ಸೋಮವಾರ ತನಿಖಾ ವರದಿ ಬಂದ ನಂತರ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿಕ್ಷಾ ಸಪ್ತಾಯ

ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿ 2020 ರ 4 ನೇ ವಾರ್ಷಿಕೋತ್ಸವವನ್ನು “ಶಿಕ್ಷಾ ಸಪ್ತಾಹ” ಎಂಬ ಒಂದು ವಾರದ ಅಭಿಯಾನದೊಂದಿಗೆ ಆಚರಿಸುತ್ತಿದೆ ಎಂದು ಭಾನುವಾರ ತಿಳಿಸಿದೆ. ಶಿಕ್ಷಣ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ದೇಶಾದ್ಯಂತ ಏಳು ಶಾಲೆಗಳು ವಿದ್ಯಾಂಜಲಿ ಮತ್ತು ಭೋಜನ ಉಪಕ್ರಮಗಳ ಮೂಲಕ ಶಿಕ್ಷಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತದೆ.

ಇದನ್ನೂ ಓದಿ: Paris Olympics 2024 : ಪುರಷರ 10 ಮೀಟರ್​ ಏರ್​ರೈಫಲ್​​ ಸ್ಪರ್ಧೆಯಲ್ಲಿ ಫೈನಲ್​ಗೇರಿದ ಅರ್ಜುನ್ ಬಬುಟಾ

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುತ್ತಿರುವ ಶಾಲಾ ಸ್ವಯಂಸೇವಕ ನಿರ್ವಹಣಾ ಕಾರ್ಯಕ್ರಮವಾದ ವಿದ್ಯಾಂಜಲಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 7, 2021 ರಂದು ಪ್ರಾರಂಭಿಸಿದ್ದರು. ದೇಶಾದ್ಯಂತ ಸಮುದಾಯ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಮತ್ತು ಖಾಸಗಿ ವಲಯದ ಪಾಲ್ಗೊಳ್ಳುವಿಕೆಯ ಮೂಲಕ ಶಾಲೆಗಳನ್ನು ಬಲಪಡಿಸುವ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

Continue Reading

ಪ್ರಮುಖ ಸುದ್ದಿ

CUET UG Result 2024: ಸಿಯುಇಟಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

CUET UG Result 2024 :

VISTARANEWS.COM


on

CUET UG Result 2024
Koo

ಬೆಂಗಳೂರು: ಎನ್​​ಟಿಯ ಸಿಯುಇಟಿ ಯುಜಿ ಫಲಿತಾಂಶವನ್ನು (CUET UG Result 2024) ಪ್ರಕಟಿಸಿದೆ. ಪದವಿಪೂರ್ವ ಕೋರ್ಸ್​ಗಳಿಗೆ ಸೇರಲು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು cuetug.ntaonline.in ವೆಬ್​​ಸೈಟ್​ನಲ್ಲಿ ಅಂಕಗಳನ್ನು ಪರಿಶೀಲಿಸಬಹುದು. ಸಿಯುಇಟಿ ಯುಜಿ ಫಲಿತಾಂಶಗಳನ್ನು exams.nta.ac.in/CUET-UG/ ನಲ್ಲಿ ಪರಿಶೀಲಿಸಬಹುದು.

ಸಿಯುಇಟಿ ಯುಜಿ ಪರೀಕ್ಷೆಯನ್ನು ಮೇ 15, 16, 17, 18, 21, 22, 24 ಮತ್ತು 29 ರಂದು ವಿದೇಶದ 26 ನಗರಗಳು ಸೇರಿದಂತೆ 379 ನಗರಗಳಲ್ಲಿರುವ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ. ಒಟ್ಟು 13.48 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜುಲೈ 19, 2024 ರಂದು ಮರು ಪರೀಕ್ಷೆ ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರಗಳನ್ನು ಜುಲೈ 7 ರಂದು ಬಿಡುಗಡೆ ಮಾಡಲಾಗಿತ್ತು. ಆಕ್ಷೇಪಣೆ ವಿಂಡೋವನ್ನು ಜುಲೈ 9, 2024 ರಂದು ಮುಚ್ಚಿದ್ದರು.

ಫಲಿತಾಂಶಗಳ ಜೊತೆಗೆ ಏಜೆನ್ಸಿ ಅಂತಿಮ ಉತ್ತರ ಕೀಯನ್ನು ಸಹ ಬಿಡುಗಡೆ ಮಾಡಿದೆ. ತಾತ್ಕಾಲಿಕ ಉತ್ತರ ಕೀ ವಿರುದ್ಧ ಅಭ್ಯರ್ಥಿಗಳು ಹಾಕಿದ ಪ್ರಶ್ನೆಗಳ ಆಧಾರದ ಮೇಲೆ ಅಂತಿಮ ಉತ್ತರ ಕೀಯನ್ನು ಸಿದ್ಧಪಡಿಸಲಾಗಿದೆ. ತಜ್ಞರ ಸಮಿತಿಯು ಸವಾಲುಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗಿದೆ. ಪರಿಷ್ಕೃತ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ಫಲಿತಾಂಶವನ್ನು ಸಿದ್ಧಪಡಿಸಿ ಘೋಷಿಸಲಾಗಿದೆ.

ಇದನ್ನೂ ಓದಿ: Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

ಎನ್​ಟಿಎ ಸಿಯುಇಟಿ ಯುಜಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು.

  • · exams.nta.ac.in/CUET-UG/ ನಲ್ಲಿ ಸಿಯುಇಟಿ ಯುಜಿಯ ಅಧಿಕೃತ ವೆಬ್​​ಸೈಟ್​ಗೆ ಭೇಟಿ ನೀಡಬಹುದು.
  • · ಮುಖಪುಟದಲ್ಲಿ ಲಭ್ಯವಿರುವ ಸಿಯುಇಟಿ ಯುಜಿ ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
  • · ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
  • · ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
  • · ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್ಲೋಡ್ ಮಾಡಿ.
  • · ಹೆಚ್ಚಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ.

ವಿವರಗಳಿಗಾಗಿ ಅಭ್ಯರ್ಥಿಗಳು ಸಿಯುಇಟಿ ಯುಜಿಯ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಬಹುದು.

Continue Reading
Advertisement
Women Suicide
ಪ್ರಮುಖ ಸುದ್ದಿ15 mins ago

Women Suicide : ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಲೈವ್​ ವಿಡಿಯೊ ಮಾಡುತ್ತಾ ನೇಣು ಹಾಕಿಕೊಂಡು ಆತ್ಮಹತ್ಯೆ

HD kumaraswamy
ಪ್ರಮುಖ ಸುದ್ದಿ32 mins ago

HD kumaraswamy : ಆಸ್ಪತ್ರೆಯಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಡಿಸ್ಚಾರ್ಜ್

Viral Video
ಪ್ರಮುಖ ಸುದ್ದಿ44 mins ago

Viral Video : 25 ವರ್ಷದ ಕನ್ಯೆಯನ್ನು ಮದುವೆಯಾದ 70 ವರ್ಷದ ಮುದುಕ ಕಲೀಮುಲ್ಲಾ!

Tamil Nadu News
ದೇಶ1 hour ago

Tamil Nadu News : ತಮಿಳುನಾಡಿನಲ್ಲಿ 24 ಗಂಟೆಯೊಳಗೆ ಇಬ್ಬರು ಪ್ರತಿಪಕ್ಷ ನಾಯಕರ ಕಗ್ಗೊಲೆ

School Teacher
ಪ್ರಮುಖ ಸುದ್ದಿ2 hours ago

School Teacher : ಶಾಲಾ ಕೊಠಡಿಯಲ್ಲೇ ಚಾಪೆ ಹಾಸಿ, ಮಕ್ಕಳಿಗೆ ಗಾಳಿ ಹಾಕಲು ಹೇಳಿ ಗಡದ್ದಾಗಿ ನಿದ್ದೆ ಹೊಡೆದ ಟೀಚರ್​!

ಪ್ರಮುಖ ಸುದ್ದಿ2 hours ago

Paris Olympics 2024 : ಪುರಷರ 10 ಮೀಟರ್​ ಏರ್​ರೈಫಲ್​​ ಸ್ಪರ್ಧೆಯಲ್ಲಿ ಫೈನಲ್​ಗೇರಿದ ಅರ್ಜುನ್ ಬಬುಟಾ

Manu Bhaker
ಪ್ರಮುಖ ಸುದ್ದಿ3 hours ago

Manu Bhaker : ಭಾರತಕ್ಕೆ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಪದಕ ತಂದುಕೊಟ್ಟ ಮನು ಭಾಕರ್ ಯಾರು? ಅವರ ಹಿನ್ನೆಲೆಯೇನು?

Turmeric Stains
ಲೈಫ್‌ಸ್ಟೈಲ್3 hours ago

Turmeric Stains: ಬಟ್ಟೆಯ ಮೇಲಿನ ಅರಶಿನ ಕಲೆ ಹೋಗಲಾಡಿಸಲು ಇಲ್ಲಿದೆ ಸರಳ ಉಪಾಯ

Puttamadegowda
ಕರ್ನಾಟಕ3 hours ago

Puttamadegowda: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ತಂದೆ ಅನಾರೋಗ್ಯದಿಂದ ನಿಧನ

Shirur landslide
ಕ್ರೈಂ3 hours ago

Shirur landslide: ಶಿರೂರು ಭೂಕುಸಿತ; ಇನ್ನೂ ಪತ್ತೆಯಾಗದವರ ಶೋಧ ಕಾರ್ಯಾಚರಣೆ ಕೈಬಿಟ್ಟ ಜಿಲ್ಲಾಡಳಿತ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ6 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ8 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ10 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ11 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ1 day ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌