Puneeth Rajkumar: ಎತ್ತರದಲ್ಲಿದ್ದೂ ಹತ್ತಿರವಿದ್ದ ಅಭಿಜಾತ ಕಲಾವಿದ ಪುನೀತ್ ರಾಜಕುಮಾರ್ - Vistara News

ಕರ್ನಾಟಕ

Puneeth Rajkumar: ಎತ್ತರದಲ್ಲಿದ್ದೂ ಹತ್ತಿರವಿದ್ದ ಅಭಿಜಾತ ಕಲಾವಿದ ಪುನೀತ್ ರಾಜಕುಮಾರ್

Puneeth Rajkumar: ಪುನೀತರನ್ನು ಕಳೆದುಕೊಂಡಾಗ ಎದೆಯೊಳಗೆ ನೋವು ತುಂಬಿಕೊಂಡಿತ್ತು. ವಿಸ್ತಾರ ನ್ಯೂಸ್ ವೆಬ್‌ನಲ್ಲಿ ಇದನ್ನು ಬರೆದು ಇದೀಗ ಆ ನೋವನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದೇನೆ.

VISTARANEWS.COM


on

Attempt to defame Puneeth Rajkumar's name on his Birthday, what is the trend on Twitter?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ನಾರಾಯಣ ಯಾಜಿ, ಖ್ಯಾತ ಲೇಖಕರು, ಅಂಕಣಕಾರರು

ಕರಾವಳಿಯವರಾದ ನಮಗೆ ಸಿನಿಮಾ ಎನ್ನುವುದು ಬದುಕಿನಲ್ಲಿ ಅಷ್ಟೇನೂ ಮುಖ್ಯ ಅಂತ ಅನಿಸ್ತಿರಲಿಲ್ಲ. ನಾವೆಲ್ಲರೂ ಯಕ್ಷಗಾನಕ್ಕೆ ಆತುಕೊಂಡವರು. ಬೆಳತನಕ ಯಕ್ಷಗಾನವನ್ನು ನೋದುವ ಸಲುವಾಗಿ ಆಟ ಪ್ರಾರಂಭವಾಗುವಾಗ ನೆಲದ ಮೇಲೆ ಕುಳಿತು ನಂತರ ಮಧ್ಯರಾತ್ರಿ ಆಗುತ್ತಿದ್ದಂತೆ ಪುಸಕ್ಕನೆಂದು ಗೇಟ್ ಕೀಪರನ ಕಣ್ಣು ತಪ್ಪಿಸಿ ಆರಾಂ ಖುರ್ಚಿಯ ಮೇಲೆ ಕುಳಿತು ರಾಕ್ಷಸ ವೇಷವನ್ನೋ, ಶಂಭುಹೆಗಡೆಯವರ ಕರ್ಣನನ್ನೋ ನೋಡುತ್ತಾ ಮೈಮರೆಯುತ್ತಿದ್ದೆವು. ಮತ್ತೊಂದು ಕಾರಣವೆಂದರೆ ತಾಲೂಕು ಕೇಂದ್ರದಲ್ಲಿ ಮಾತ್ರ ಸಿನಿಮಾ ಟಾಕೀಸ್ ಇರುವುದು ಹಾಗೂ ಅಲ್ಲಿಗೆ ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆಯಿಲ್ಲದಿರುವುದು. ಆ ಕಾಲದಲ್ಲಿ ಮನರಂಜನೆಯೆಂದರೆ ಯಕ್ಷಗಾನ ಮಾತ್ರ. ಆದರೂ ಆಗ ಡಾ. ರಾಜಕುಮಾರ್ ಸಿನಿಮಾ ಅಂದರೆ ಮಾತ್ರ ಊರಿನ ಎಲ್ಲರನ್ನೂ ಬಡಿದೆಬ್ಬಿಸುವುದು ಸಾಮಾನ್ಯವಾಗಿತ್ತು. ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ಹೊನ್ನಾವರಕ್ಕೆ ಹೋಗಿ ಟಿಕೆಟ್ ಪಡೆವ ಗಲಾಟೆಯಲ್ಲಿ ಸಿನಿಮಾ ನೋಡಿ ನಂತರ ರಾತ್ರಿಹೊತ್ತು ಅವರ ಅಭಿನಯವನ್ನು ವಿಮರ್ಶೆ ಮಾಡುತ್ತಾ ಊರಿಗೆ ಬರುವುದಿತ್ತು.

ಈಗ ನಮಗನಿಸುವುದು ರಾಜಕುಮಾರ್ ಅವರ ಸಿನಿಮಾ ಮಾತ್ರ ನಮ್ಮನ್ನು ಸೆಳೆಯುತ್ತಿರುವುದು ಏಕೆಂದರೆ ಅವರ ಅಭಿನಯದಲ್ಲಿನ ವೈವಿಧ್ಯತೆ. ಮೂಲತಃ ನಾಟಕರಂಗದಿಂದ ಬಂದ ಅವರ ಅಭಿನಯದಲ್ಲಿ ನಾಟಕೀಯತೆಯ ಅಂಶ ಪ್ರಧಾನವಾಗಿರುತ್ತಿತ್ತು. ಈಗೇನಾದರೂ ಪೂನಾದ Film Institute ನವರ ಹತ್ತಿರ ಹೀಗೆ ಅಭಿನಯಿಸಬಹುದೋ ಎಂದು ಕೇಳಿದರೆ ಖಂಡಿತವಾಗಿ ಒಪ್ಪಲಿಕ್ಕಿಲ್ಲ. ಡಾ. ರಾಜ್ ಅವರು ಅಮ್ಮಾS ಅಮ್ಮಾS .. ಎನುತ್ತ ತುಂಬುತೋಳಿನ ಅಂಗಿಯನ್ನು ಹಾಕಿ ಬಿಳಿ ಬಣ್ನದ ಪ್ಯಾಂಟಿನಲ್ಲಿ ಹೊರಗಿನಿಂದ ಬರುವ ದೃಶ್ಯವನ್ನು ಮರೆಯಲಾರೆವು. ಅವೆಲ್ಲವೂ ಆದರ್ಶಮಯ ಪಾತ್ರಗಳು. ಅವರು ಯಾವತ್ತಿಗೂ ದೃಶ್ಯ ಮಾಧ್ಯಮದಲ್ಲಿ ಕುಡಿಯುವ ಅಥವಾ ಸಿಗರೇಟ್ ಸೇದುವ ದೃಶ್ಯಕ್ಕೆ ವಿರೋಧವಾಗಿದ್ದರು. ಅವರ ಒಂದು ಚಿತ್ರದ ಹೆಸರು ನೆನಪಾಗುತ್ತಿಲ್ಲ. ಅದರಲ್ಲಿ ಖಳನಾಯಕನಾಗಿ ತೂಗುದೀಪ ಇದ್ದರು ಎನ್ನುವ ನೆನಪು. ಅವರ ಮನೆಯಲ್ಲಿ ನಡೆಯುತಿರುವ ಪಾರ್ಟಿಯಲ್ಲಿ ವೇಟರ್ ಗ್ಲಾಸಿನಲ್ಲಿ ವಿಸ್ಕಿ ತಂದು ಎಲ್ಲರಿಗೂ ಕೊಡುತ್ತಿರುವಂತೆ ರಾಜ ಅವರ ಹತ್ತಿರವೂ ಬರುತ್ತಾನೆ. ಆಗ ತಮ್ಮ ಬಲಗಡೆ ತಿರುಗಿ ಆ ಉದ್ದ ಮೂಗು ಮತ್ತು ಚೂಪು ಮೀಸೆಯ ಕೆಳಗಡೆ ತುಂಟ ನಗುವಿನೊಂದಿಗೆ ತಲೆಯಲ್ಲಾಡಿಸಿ ಮತ್ತೊಬ್ಬ ವೇಟರನನ್ನು ಕರೆದು ಅವನಲ್ಲಿರುವ ತಂಪುಪಾನೀಯದ ಬಾಟಳನ್ನು ತೆಗೆದುಕೊಳ್ಳುತ್ತಾರೆ. ಆಗ ಖಳನಾಯಕಾನ ಹೆಂದತಿ Good, Keep it up ಎನ್ನುವ ಸೀನ್ ಒಂದಿದೆ. ಇದು ಅವರು ಪರದೆಯಮೇಲೂ ಕಾಣಿಸುವ ಇಮೇಜ್ ಆಗಿತ್ತು. ಇಂತಹ ಅನೇಕ ಸಂಗತಿಗಳು ಅವರನ್ನು ನಟಸಾರ್ವಭೌಮರನ್ನಾಗಿಸಿತ್ತು. ಇಂತಹ ಹೊತ್ತಿನಲ್ಲಿ ಬಂದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಆರತಿಯ ಸಂಗಡ ಆರುತಿಂಗಳ ಮಗುವೊಂದು ಕಂಡು ಬಂದಾಗ ಅದು ರಾಜಕುಮಾರ ಅವರ ಮಗನಂತೆ ಎನ್ನುವುದು ದೊಡ್ಡ ಸುದ್ಧಿಯಾಗಿತ್ತು. ಮುದ್ದಾಗಿರುವ ಆತನನ್ನು ನೋಡಲು ನನ್ನ ಆಯಿಯ ಸಮೇತ ನಮ್ಮೂರಿನಲ್ಲಿ ಎಲ್ಲರೂ ಓಡೋಡಿ ಹೋಗಿ ಚಿತ್ರವನ್ನು ನೋಡಿ ಚಿತ್ರದ ಕಥೆಯನ್ನು ಅವರ ಮಗನ ವಿಷಯವನ್ನು ಬಣ್ಣಿಸ್ವ್ದುದನ್ನು ಕೇತ್ತಾ ಬೆಳೆದಿದ್ದೆವು. ಅದೇ ಕಾರಣಕ್ಕಾಗಿ ಈ ಚಿತ್ರವನ್ನೊಮ್ಮೆ ಕಾರಣಕ್ಕಾಗಿಯಾದರೂ ನೋಡಬೇಕೆಂದು ಹಂಬಲಿಸಿದುದರ ನೆನಪಾಗುತ್ತದೆ.

ಇದು ಡಾ. ರಾಜಕುಮಾರ್‌ ಅವರು ಕನ್ನಡಿಗರನ್ನು ಆವರಿಸಿರುವ ರೀತಿ. ಹೀಗೆ ಇರುವಾಗ ನಾವೂ ಬೆಳೆದು ದೊಡ್ದವರಾಗಿ ಹಾಯ್ಸ್ಕೂಲಿನ ಕೊನೆಯ ವರ್ಷದಲ್ಲಿಯೋ ಕಾಲೇಜಿನ ಮೊದಲ ವರ್ಷದಲ್ಲಿಯೋ ಇರಬೇಕು ಭಾಗ್ಯವಂತ ಸಿನೇಮಾ ಬಿಡುಗಡೆಯಾಯಿತು. ಇಡೀ ಕನ್ನಡನಾಡನ್ನು ಸೆರೆಹಿಡಿದ ಸಿನೇಮಾ ಅಂದರೆ ಇದು. “ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ” ಎನ್ನುವ ಈ ಒಂದು ಹಾಡಿನ ಕುರಿತು ಎಷ್ಟು ಹೇಳಿದರೂ ಕಡಿಮೆಯೇ. ಈ ಹಾಡಿನಲ್ಲಿ ಪುನೀತ ತನ್ನ ತಾತನನ್ನು ಮಲಗಿಸುವ ರೀತಿ ನಮ್ಮ ಮಕ್ಕಳು ಚಿಕ್ಕರವರಿರುವಾಗ ನಮ್ಮನ್ನು ತನ್ನ ಮಡಿಲಲ್ಲಿ ಮಲಗಿಸಿ ಆಟಾವಾಡುವ ಪರಿಯಲ್ಲಿದೆ. ಸರಿಯಾಗಿ ಹಲ್ಲು ಬಾರದ ಪುನೀತ ಅಶ್ವತ್ಥರನ್ನು ಮಲಗಿಸುವಾಗ ಥಟ್ಟಂತ ಹಾರಿ ಹಾಸಿಗೆಯಮೇಲೆ ಅಜ್ಜನ ಪಕ್ಕದಲ್ಲಿ ಕುಳಿತು ಅವನ ಎದೆಯಮೇಲೆ ಪುಟ್ಟ ಕೈ ಇಡುವರೀತಿ ಇದೆಯಲ್ಲಾ, ಅದು ನಿರ್ದೇಶಕರು ಹೇಳಿ ಬರುವಂತಹದ್ದಲ್ಲ. ತಕ್ಷಣವೇ ಹಾಸಿಗೆಯಿಂದ ಹಾರಿ ದೇವರ ಫೋಟೋಕ್ಕೆ ಅಜ್ಜನ ಕ್ಷೇಮಕ್ಕಾಗಿ ಹಾರೈಸುವ ಮತ್ತು ತಿರುಗಿ ಬಂದು ಅಶ್ವತ್ಥರನ್ನು ಲಾಲಿಸುವ ದೃಶ್ಯ ಇನ್ನೂ ನನ್ನ ಭಿತ್ತಿಯಲ್ಲಿ ಹಸಿರಾಗಿ ಇದೆ. ಅಶ್ವತ್ಥ ಅವರು ಅಸಾಮಾನ್ಯ ನಟ.

ಅವರೆದುರು ನಟನೆಯಲ್ಲಿ ಯಾರೂ ನಿಲ್ಲಲಾರರು. ಆ ಗಾಂಭೀರ್ಯ, ದೇಹದ ಭಾಷೆ, ನಾಟಕದ ಹಿನ್ನೆಲೆಯನ್ನು ಮೀರಿ ಸಿನೇಮಾದ ಕ್ಯಾಮರಾಕ್ಕೆ ಬದಲಾಯಿಸುವ ಅವರಂತೆ ನಟನಾ ಸಾಮರ್ಥ್ಯವುಳ್ಳ ನಟ ಭಾರತೀಯ ಇತಿಹಾಸದಲ್ಲಿ ಮತ್ತೊಬ್ಬ ಸಿಗಲಿಕ್ಕಿಲ್ಲ. ಅಂತಹ ಅಶ್ವತ್ಥ ಅವರು ಪುನೀತ ಅಭಿನಯವನ್ನು ನೋಡುತ್ತಾ ಅದನ್ನು ಅನುಭವಿಸಿ ಮೆಚ್ಚುಗೆಯನ್ನು ಸೂಚಿಸುವ ಕಣ್ಣುಗಳು ಈ ಪದ್ಯದ್ದುದ್ದಕ್ಕೂ ಇವೆ. ಅಭಿಜಾತ ಕಲಾವಿದನಾಗಿ ಹುಟ್ಟುವುದೆಂದೆರೆ ಇದೆ ಹೊರತೂ ಬೇರೇನೂ ಅಲ್ಲ. ಭಕ್ತ ಪ್ರಹ್ಲಾದ ಎನ್ನುವ ಸಿನೇಮಾವನ್ನು ಮಾಡುವ ಕನಸು ಡಾ. ರಾಜಕುಮಾರ ಅವರಿಗೆ ಯಾವತ್ತಿಗೂ ಇತ್ತಂತೆ. ಹಿರಣ್ಯ ಕಶಿಪುವನ್ನು ಅವರು ಅಭಿನಯಿಸಿದ ರೀತಿಗೆ ಅವರೇ ಉದಾಹರಣೆಯಾಗಿ ನಿಲ್ಲಬಲ್ಲರು. ಅದಕ್ಕೆ ಸರಿಯಾಗಿ ಸರಿತಾ ಕಯಾದುವಿನ ಪಾತ್ರ. ಲವಲವಿಕೆಯ ನಾರದನಾಗಿ ಅನಂತನಾಗ್ ಈ ಎಲ್ಲದರ ನಡುವೆ ಅವರೆಲ್ಲರನ್ನೂ ಮೀರಿಸಿದ ನಟನೆ ಬಾಲಕ ಪ್ರಹ್ಲಾದನದ್ದು. ಇಂತಹ ಪ್ರಹ್ಲಾದ ಸಿಕ್ಕಿದುದರಿಂದಲೇ ಡಾ. ರಾಜ್ ಈ ಚಿತ್ರವನ್ನು ಮಾಡಿರಬೇಕು. ಬಾಲನತ ಪುನೀಟ ಅಭಿನಯಿಸುತ್ತಿರಲಿಲ್ಲ. ಅದನ್ನು ಅನುಭವಿಸಿ ತನ್ನ ಎಚ್ಚರದಲ್ಲಿಯೇ ತಾನು ವಹಿಸಿದ ಪಾತ್ರವಾಗಿ ಬಿಡುತ್ತಿದ್ದರು.

ಹಾಡಿನ ಅಭಿನಯದ ಸಂಧರ್ಭ ಬಂದಾಗ ಹಾಲುಗಲ್ಲದ ಮುಗ್ಧಮನಸ್ಸಿನ ಅವರ ನಡತೆಯೆನ್ನುವುದು ನಾಟ್ಯಶಾಸ್ತ್ರದ ಯಾವ ಪ್ರಮೇಯಕ್ಕೂ ಸಿಗುವಂತಹದಲ್ಲ. ಪರಕಾಯ ಪ್ರವೇಶವಾಗಿರುತ್ತಿತ್ತು. ನಾಯಕನಟನಾಗಿ ಅವರ ಮಿಲನ ಸಿನೇಮಾ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮಹತ್ವದ ಸಿನೇಮಾವಾಗಿ ನಿಲ್ಲುತ್ತದೆ. ಅರಿವಿಲ್ಲದೇ ಮದುವೆಯಾಗಿ, ಆಕೆ ಮತ್ತೊಬ್ಬನನ್ನು ಪ್ರೀತಿಸುವ ಸಂಗತಿ ತಿಳಿದು ಬೇಸರಿಸದೇ ಆಕೆಯ ಹಿತವನ್ನು ಬಯಸುವ ತನ್ನೊಳಗೆ ಆಕೆಯ ಮೇಲೆ ಪ್ರೀತಿಯಿದ್ದೂ ಅದನ್ನು ತೋರ್ಪಡಿಸದ ನಟನಾ ಸಾಮರ್ಥ್ಯವನ್ನು ಅವರು ಇಲ್ಲಿ ತೋರಿದ್ದಾರೆ. ಪುನೀತ ಅವರ ಅಭಿನಯ ತನ್ನ ತಂದೆಯಂತೆ ಅಲ್ಲ; ಹೆಬ್ಬೆರಳನ್ನು ಮೇಲಕ್ಕೆತ್ತಿ ಕಿರುಬೆರಳನ್ನು ಹೊರಚಾಚಿ ಏನು ಎಂದು ಕೇಳುವ ಅವರ ಭಾವವೇ ಚಂದ. ಪಾಶ್ಚಾತ್ಯ ಪ್ರಭಾವದಿಂದ ಅಭಿನಯದಲ್ಲಿ ಸಹಜತೆ ಎಂದು ಮುಖಭಾವವನ್ನಷ್ಟೇ ಅಭಿವ್ಯಕ್ತಿಸುವ ಪರಂಪರೆಯನ್ನು ಹಿಂದೀ ಚಿತ್ರರಂಗದಲ್ಲಿ ಕಾಣಬಹುದು. ದಕ್ಷಿಣಭಾರತೀಯ ಚಿತ್ರಗಳಲ್ಲಿ ಮಲೆಯಾಳಂ ಭಾಷೆಯನ್ನುಳಿದು ಚಿತ್ರಗಳಲ್ಲಿ ನಟನೆಯಲ್ಲಿ ಓವರ ಆಕ್ಟಿಂಗ್ ಇದೆ. ಕರ್ನಾಟದ ನಾಟಕ ಕಂಪನಿಗಳಂತೆ. ಆದರೆ ಪುನೀತರ ಅಭಿನಯದಲ್ಲಿ ಯಾರ ಹೋಲಿಕೆಯೂ ಇಲ್ಲ. ತಾನೇ ಹುತ್ತದಿಂದ ಉದ್ಭವಗೊಂಡ ವಾಲ್ಮೀಕಿಯಾಗಿ ಅವರು ಕಾಣಿಸಿಕೊಳ್ಳುತ್ತಾರೆ.

ಈ ನಡುವೆ ಪುನೀತ ನಡುವೆ ಅಭಿನಯದಿಂದ ಕೆಲಕಾಲ ಹೊರ ಉಳಿದುಬಿಟ್ಟಿದ್ದರು. ಆಗ ಶಿವರಾಜ ಕುಮಾರ, ರಾಘವೇಂದ್ರ ರಾಜಕುಮಾರ ತಮ್ಮ ತಮ್ಮ ಸಹಜಾಭಿನಯದಿಂದ ಕನ್ನಡದ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. ಡಾ. ರಾಜ ಮತ್ತು ಕನ್ನಡನಾಡಿನ ನಡುವೆ ಒಂದು ಅಸ್ಮಿತತೆಯಿದೆ. ಅದನ್ನು ನಾವು ಗೋಕಾಕ ಚಳುವಳಿಯ ಕಾಲದಲ್ಲಿ ನೋಡಿದ್ದೇವೆ. ಕಾರ್ಯ ಆದಮೇಲೆ ಎಂತಹ ಒತ್ತಡವಿದ್ದರೂ ಅದನ್ನು ನಿರಾಕರಿಸಿ ರಾಜಕೀಯದೆಡೆ ತಲೆ ಹಾಕಿಯೂ ಮಲಗಲಿಲ್ಲ. ಈ ಗುಣ ಪುನೀತರಲ್ಲಿತ್ತು. ಇದನ್ನು ಗುರುತಿಸಿದ್ದು ಕರುನಾಡ ಸಹೃದಯ ಮನಸ್ಸುಗಳು. ಸಹಜವಾಗಿ ಇದು ಅವರನ್ನು ಎಲ್ಲ ಕಲಾವಿದರನ್ನು ಮೀರಿಸಿ ಡಾ. ರಾಜಕುಮಾರ ಅವರ ಜಾಗದಲ್ಲಿ ನೋಡಲು ಪ್ರಾರಂಭಿಸಿತೇ ಹೊರತು ಆ ಮಹಾನ್ ನಟನ ಮಗ ಎನ್ನುವ ಒಂದೇ ಕಾರಣದಿಂದ ಅಲ್ಲ.

ಈ ಗುಣವೇ ಅವರು ನಿರೂಪಕರಾಗಿ ನಡೆಸಿಕೊಟ್ಟ ಕನ್ನಡದ ಕೋಟ್ಯಧಿಪತಿಯ ಯಶಸ್ಸಿಗೆ ಕಾರಣ. ನಾನೊಮ್ಮೆ ನನ್ನ ಓರ್ವ ಸ್ನೇಹಿತರಿಗೆ ಈ ಕಾರ್ಯಕ್ರಮಕ್ಕೆ ಫೋನ್ ಫ್ರೆಂಡ್ ಆಗಿ ಭಾಗವಹಿದ್ದೆ. 1972ರಲ್ಲಿ ಇಳಾಬೆನ್ ಭಟ್ಟ್ ಅವರು ಸ್ಥಾಪಿಸಿದ ಸೇವಾ ಸಂಸ್ಥೆಯ ಕುರಿತಾದ ಪ್ರಶ್ನೆ ಅದಾಗಿತ್ತು. ತುಂಬಾ ಕ್ಲಿಷ್ಟಕರ ಪ್ರಶ್ನೆ. ನಾನು ತಕ್ಷಣವೇ ಉತ್ತರಿಸಿವುದನ್ನು ಗಮನಿಸಿ ನನ್ನೊಟ್ಟಿಗೆ ಮತ್ತೂ ಮಾತಾಡಿ ನನ್ನಿಂದಲೇ ಆ ವಿಷಯದ ವಿವರಣೆಯನ್ನು ಹೇಳಿಸಿರುವುದನ್ನು ಈಗ ನೆನಪಿಗೆ ಬರುತ್ತದೆ. ಅದನ್ನು ಟೀವಿ ಕಾರ್ಯಕ್ರಮದ ತಂತ್ರಗಾರಿಕೆ ಎನ್ನಬಹುದೇನೋ, ಆದರೆ ಆ ದಿವಸ ಕಾರ್ಯಕ್ರ್ಮ ಮುಗಿದ ತಕ್ಷಣ ಮತ್ತೆ ನನಗೆ ಫೋನ್ ಮಾಡಿ ಅವರ ವಯಕ್ತಿಕ ಅಭಿನಂದನೆಗಳನ್ನು ತಿಳಿಸಿ “ನೀವೇಕೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಬಂದಿಲ್ಲ” ಎಂದು ಕೇಳಿದ್ದರು. ನಾನು ಏನೋ ತೇಲಿಸಿ ಉತ್ತರ ಕೊಟ್ಟಿದ್ದೆ. ಆಗ ನನಗೆ ಡಾ. ರಾಜ ಕುಮಾರ ಕುಟುಂಬದವರು ಎತ್ತರದಲ್ಲಿದ್ದವರಾದರೂ, ಹತ್ತಿರದಲ್ಲಿಯೂ ಇರುತ್ತಾರೆ ಎನ್ನುವ ಅನುಭವವಾಯಿತು.

ಪುನೀತರನ್ನು ಕಳೆಕೊಂಡಾಗ ಎದೆಯೊಳಗೆ ಈ ನೋವು ತುಂಬಿಕೊಂಡಿತ್ತು. ವಿಸ್ತಾರ ನ್ಯೂಸ್ ನಲ್ಲಿ ಇದನ್ನು ಬರೆದು ಇದೀಗ ಆ ನೋವನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದೇನೆ.

ಇದನ್ನೂ ಓದಿ: Kabzaa Movie: ಕಬ್ಜ ಸೆಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌: ಸಿನಿಮಾದಲ್ಲಿದ್ದಾರ ನಟ? ವಿಡಿಯೊ ವೈರಲ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Jatra Rathotsava: ಇಂಡಿಯ ಕಮರಿಮಠದ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ದುರ್ಮರಣ; ಮತ್ತೊಬ್ಬ ಗಂಭೀರ

Jatra Rathotsava: ಭಾನುವಾರ ಸಂಜೆ ಗೋಧೋಳಿ ಮುಹೂರ್ತದಲ್ಲಿ ಶ್ರೀ ಸಿದ್ದಲಿಂಗ ಮಹರಾಜರ ರಥೋತ್ಸವ ನಡೆದಿದ್ದು, ಸಾವಿರಾರು ಜನರು ಭಾಗಿಯಾಗಿದ್ದರು. ಜಾತ್ರೆಯಲ್ಲಿನ ನೂಕು ನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತರಿಬ್ಬರು ಲಚ್ಯಾಣ ಗ್ರಾಮದವರು ಎಂದು ತಿಳಿದುಬಂದಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಮಹಾರಾಷ್ಟ್ರದ ತಡವಾಳ ಗ್ರಾಮದ ನಿವಾಸಿಯಾಗಿದ್ದಾನೆ.

VISTARANEWS.COM


on

Jatra Rathotsava Two killed and one serious after being hit by wheel of a chariot at Indi Kamarimath
Koo

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ದಲಿಂಗ ಮಹಾರಾಜರ ಕಮರಿಮಠದ ಜಾತ್ರೆಯಲ್ಲಿ (Kamarimatha Fair) ನಡೆದ ರಥೋತ್ಸವ (Jatra Rathotsava) ವೇಳೆ ರಥದ ಚಕ್ರ ಹಾಯ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ.

ಭಾನುವಾರ ಸಂಜೆ ಗೋಧೋಳಿ ಮುಹೂರ್ತದಲ್ಲಿ ಶ್ರೀ ಸಿದ್ದಲಿಂಗ ಮಹರಾಜರ ರಥೋತ್ಸವ ನಡೆದಿದ್ದು, ಸಾವಿರಾರು ಜನರು ಭಾಗಿಯಾಗಿದ್ದರು. ಜಾತ್ರೆಯಲ್ಲಿನ ನೂಕು ನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮೃತರಿಬ್ಬರು ಲಚ್ಯಾಣ ಗ್ರಾಮದವರು ಎಂದು ತಿಳಿದುಬಂದಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಮಹಾರಾಷ್ಟ್ರದ ತಡವಾಳ ಗ್ರಾಮದ ನಿವಾಸಿಯಾಗಿದ್ದಾನೆ. ಘಟನಾ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

Sahil Khan: ಬೆಟ್ಟಿಂಗ್​ ಅಕ್ರಮದಲ್ಲಿ ಭಾಗಿ; ನಟ ಸಾಹಿಲ್ ಖಾನ್ ಅರೆಸ್ಟ್‌

ಬೆಂಗಳೂರು: ಮಹದೇವ್ ಬೆಟ್ಟಿಂಗ್ ಆ್ಯಪ್ (Mahadev betting app case) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ (Betting App Case) ನಟ ಮತ್ತು ಫಿಟ್‌ನೆಸ್‌ ಪ್ರಭಾವಿ ಸಾಹಿಲ್ ಖಾನ್ (Sahil Khan Arrested) ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಮುಂಬೈ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ನಟನನ್ನು ಬಂಧಿಸಿದ್ದು, ಬಾಂಬೆ ಹೈಕೋರ್ಟ್‌ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಇದಕ್ಕೂ ಮೊದಲು, 2023ರ ಡಿಸೆಂಬರ್‌ನಲ್ಲಿ ಸಾಹಿಲ್ ಮತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿದ ಇನ್ನುಳಿದ ಮೂವರನ್ನು ವಿಶೇಷ ತನಿಖಾ ತಂಡ ವಿಚಾರಣೆಗೆ ಕರೆದಿತ್ತು. ಆದರೆ, ಅವರು ಹಾಜರಾಗಲಿಲ್ಲ. ತಾವು ಕೇವಲ ಬ್ರ್ಯಾಂಡ್ ಪ್ರಮೋಟರ್‌ ಎಂದು ಹೇಳಿಕೊಂಡು ಬಂದಿದ್ದರು. ಆದರೆ, ಸಾಹಿಲ್ ಆ್ಯಪ್‌ನ ಸಹ ಮಾಲೀಕ ಎಂಬುದು ಪೊಲೀಸರಿಗೆ ತನಿಖೆಯಲ್ಲಿ ಗೊತ್ತಾಗಿದೆ. ಸಾಹಿಲ್‌ ಈ ಬೆಟ್ಟಿಂಗ್ ಆ್ಯಪ್‌ ಸಂಬಂಧಿಸಿದ ಪ್ರಚಾರದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ತಿಂಗಳಿಗೆ 3 ಲಕ್ಷ ರೂ. ಹಣವನ್ನು ಪಡೆದುಕೊಳ್ಳುತ್ತಿದ್ದರು ಎಂದು ವರದಿಯಾಗಿದೆ. ಮಾತ್ರವಲ್ಲ 24 ತಿಂಗಳುಗಳ ಕಾಲ ಈ ಆ್ಯಪ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿತ್ತು.

ಇದರ ಹೊರತಾಗಿಯೂ, ಕಾನೂನುಬಾಹಿರ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿರುವುದನ್ನು ಉಲ್ಲೇಖಿಸಿ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ʻಸ್ಟೈಲ್ʼ ಮತ್ತು ʻಎಕ್ಸ್‌ಕ್ಯೂಸ್ ಮಿʼ ಸಿನಿಮಾ ಪಾತ್ರಗಳಿಗೆ ಹೆಸರುವಾಸಿಯಾದ ಸಾಹಿಲ್ ಈಗ ಫಿಟ್‌ನೆಸ್‌ನತ್ತ ಗಮನಹರಿಸಿದ್ದಾರೆ.

ಇದನ್ನೂ ಓದಿ: The Rulers: ಅಂಬೇಡ್ಕರ್ ಹೆಸರಲ್ಲಿ ಸಿನಿಮಾ ಮಾಡಿದ್ದಕ್ಕೆ` ರೌಡಿ ಶೀಟರ್ʼ ಪಟ್ಟ ಕೊಡ್ತಾ ಕಾಂಗ್ರೆಸ್ ಸರ್ಕಾರ? ನಟ ಹೇಳಿದ್ದೇನು?

2023ರಲ್ಲಿ, ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ವಿಚಾರಣೆ ನಡೆಸಿದ ಕ್ರೈಂ ಬ್ರ್ಯಾಂಚ್‌ ವಿಭಾಗವು ಡಿಸೆಂಬರ್ 15ರಂದು ತಮ್ಮ ಹೇಳಿಕೆಗಳನ್ನು ದಾಖಲಿಸಲು ಸಾಹಿಲ್ ಖಾನ್ ಮತ್ತು ಇತರ ಮೂವರಿಗೆ ಸಮನ್ಸ್ ನೀಡಿತ್ತು ಎಂದು ವರದಿಯಾಗಿದೆ. ಆದರೆ, ಸಾಹಿಲ್ ಖಾನ್ ತನಿಖೆಗಾಗಿ ಪೊಲೀಸರ ಮುಂದೆ ಹಾಜರಾಗಲಿಲ್ಲ. ಇದಲ್ಲದೆ ಸೋಷಿಯಲ್‌ ಮೀಡಿಯಾಗಳಲ್ಲಿ ನಿರಂತರವಾಗಿ ಪೋಸ್ಟ್‌ ಮಾಡುತ್ತಲೇ ಇರುತ್ತಿದ್ದರು. ಪೊಲೀಸರ ಸಮನ್ಸ್‌ಗಳನ್ನು ಅವರು ನಿರ್ಲಕ್ಷಿಸುತ್ತಿರುವುದನ್ನು ಕಂಡು ನೆಟ್ಟಿಗರಿಂದ ಟೀಕೆಗೆ ಗುರಿಯಾಗುತ್ತಿದ್ದರು. ವರದಿಗಳ ಪ್ರಕಾರ, ಸಾಹಿಲ್ ಖಾನ್ ಅವರು ಈ ಆ್ಯಪ್ ಪ್ರಚಾರ ಮಾಡಲು ಸೆಲೆಬ್ರಿಟಿ ಕೂಟಗಳನ್ನು ಆಯೋಜಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು ಮಹದೇವ್​ ಬೆಟ್ಟಿಂಗ್​ ಪ್ರಕರಣ?

ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗೆ (Chhattisgarh Polls) ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಭಾಗಿಯಾಗಿದ್ದಾರೆ ಎನ್ನಲಾದ ಬೆಟ್ಟಿಂಗ್ ಹಗರಣವೊಂದು ಹೊರಕ್ಕೆ ಬಂದಿತ್ತು. ಮಹದೇವ್‌ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್ ಪ್ರಮೋಟರ್‌ಗಳಿಂದ (Mahadev Betting App Promoters) ಇದುವರೆಗೆ ಭೂಪೇಶ್‌ ಬಘೇಲ್‌ (Bhupel Bhaghel) ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಹೇಳಿದ್ದರು. ಚುನಾವಣೆ ಹೊತ್ತಿನಲ್ಲೇ ಇ.ಡಿ ಪ್ರಸ್ತಾಪಿಸಿದ ವಿಷಯವು ಚರ್ಚೆಗೆ ಗ್ರಾಸವಾಗಿತ್ತು.

ಅಕ್ರಮವಾಗಿ ಹಣದ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಈಗಾಗಲೇ ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರನ್ನು ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿ 5.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿತ್ತು. ಅಷ್ಟೇ ಅಲ್ಲ, 15 ಕೋಟಿ ರೂ. ಇರುವ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡಿತ್ತು. ಆಸಿಂ ದಾಸ್‌ ಎಂಬಾತನನ್ನು ಕೂಡ ಇ.ಡಿ ಬಂಧಿಸಿತ್ತು. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೇ ಲಂಚ ಸ್ವೀಕರಿಸಿದ್ದಾರೆ ಎಂದು ಇ.ಡಿ ತಿಳಿಸಿತ್ತು.

Continue Reading

ಕರ್ನಾಟಕ

Karnataka Weather: ರಾಜ್ಯದಲ್ಲಿ ಮೇ 2ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಳ; ಆರೆಂಜ್‌ ಅಲರ್ಟ್‌ ಘೋಷಣೆ

Karnataka Weather: ರಾಜ್ಯದಲ್ಲಿ ಭಾನುವಾರ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಏರಿಕೆ ಕಂಡುಬಂದಿದ್ದು, ದಕ್ಷಿಣ ಒಳನಾಡಿನ ಹಲವು ಕಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆ 3.5ರಿಂದ 5 ಡಿ. ಸೆಲ್ಸಿಯಸ್‌ವರೆಗೆ ಉಷ್ಣಾಂಶ ಏರಿಕೆ ದಾಖಲಾಗಿದೆ.

VISTARANEWS.COM


on

Karnataka Weather
Koo

ಬೆಂಗಳೂರು: ರಾಜ್ಯದಲ್ಲಿ ಅಲ್ಲಲ್ಲಿ ಸುರಿಯುತ್ತಿದ್ದ ಮಳೆಯು, ಕಳೆದ ನಾಲ್ಕೈದು ದಿನಗಳಿಂದ ಕಣ್ಮರೆಯಾಗಿದ್ದರಿಂದ ಹಲವೆಡೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಭಾನುವಾರ ಸಹ 38.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ (Karnataka Weather) ವರದಿಯಾಗಿದೆ. ಇನ್ನು ಕಲಬುರಗಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, 8 ವರ್ಷಗಳ ಬಳಿಕ ಗರಿಷ್ಠ ತಾಪಮಾನಕ್ಕೆ ನಗರ ಸಾಕ್ಷಿಯಾಗುತ್ತಿದೆ. ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮೇ 2 ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ರಾಜ್ಯದಲ್ಲಿ ಭಾನುವಾರ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಏರಿಕೆ ಕಂಡುಬಂದಿದ್ದು, ದಕ್ಷಿಣ ಒಳನಾಡಿನ ಹಲವು ಕಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆ 3.5ರಿಂದ 5 ಡಿ. ಸೆಲ್ಸಿಯಸ್‌ವರೆಗೆ ಉಷ್ಣಾಂಶ ಏರಿಕೆಯಾಗಿದೆ. ಇನ್ನು ಮೇ 2 ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.

ಶಾಖದ ಅಲೆಯ ಎಚ್ಚರಿಕೆ

ಏಪ್ರಿಲ್ 29ರಂದು ಬೀದರ್, ಕಲಬುರಗಿ, ಬಿಜಾಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದೇ ರೀತಿಯ ಪರಿಸ್ಥಿತಿ ಮೇ 5ರವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 38°C ಮತ್ತು 23°C ಇರುವ ಸಾಧ್ಯತೆ ಇದೆ.

ಇದನ್ನೂ ಓದಿ | Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

Continue Reading

ಕರ್ನಾಟಕ

PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್‌ ಗಾಂಧಿಗೆ ಮೋದಿ ಟಾಂಗ್!

PM Narendra Modi: ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಕುರಿತು ನರೇಂದ್ರ ಮೋದಿ ಪ್ರಸ್ತಾಪಿಸಿದರು. ಕೆಫೆ ಬಾಂಬ್‌ ಸ್ಫೋಟದ ಬಳಿಕ ಕಾಂಗ್ರೆಸ್‌ ನಾಯಕರು ಮೃದುವಾಗಿ ಮಾತನಾಡಲು ಶುರು ಮಾಡಿದರು. ಇದು ಸಿಲಿಂಡರ್‌ ಸ್ಫೋಟ ಎಂದರು, ಔದ್ಯಮಿಕ ವೈಷಮ್ಯದಿಂದ ಹೀಗೆ ಮಾಡಿದರು ಎಂದರು. ಆದರೆ, ದೋಷಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಯಿತು. ಆಗ ಕಾಂಗ್ರೆಸ್‌ ನಾಯಕರು ಓಲೈಸುವುದನ್ನು ನಿಲ್ಲಿಸಿದರು” ಎಂದು ಗುಡುಗಿದರು.

VISTARANEWS.COM


on

PM Narendra Modi
Koo

ಹೊಸಪೇಟೆ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಭಾನುವಾರ ಕರ್ನಾಟಕದಲ್ಲಿ (Karnataka) ಸಾಲು ಸಾಲು ರ‍್ಯಾಲಿಗಳನ್ನು ಕೈಗೊಳ್ಳುತ್ತಿರುವ ನರೇಂದ್ರ ಮೋದಿ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಸಮಾವೇಶದಲ್ಲೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಅದರಲ್ಲೂ, “ಒಬ್ಬ ಪುಕ್ಕಲ ನಾಯಕ ದೇಶವನ್ನು ಆಳಬಲ್ಲನೆ” ಎಂದು ಪ್ರಶ್ನಿಸುವ ಮೂಲಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟರು.

“ದೇಶದಲ್ಲಿ ರಾಮಮಂದಿರ ನಿರ್ಮಾಣವಾದರೆ ದಂಗೆ ಸೃಷ್ಟಿಯಾಗುತ್ತದೆ. ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಕಾಂಗ್ರೆಸ್‌ ನಾಯಕರು ಭಯ ಹುಟ್ಟಿಸುತ್ತಿದ್ದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿದರೂ ಇದೇ ರೀತಿ ಆಗುತ್ತದೆ ಎಂದು ಸುಳ್ಳು ಹಬ್ಬಿಸಿದರು. ಆದರೆ, ಈಗ ರಾಮಮಂದಿರ ನಿರ್ಮಿಸಲಾಗಿದೆ. 370ನೇ ವಿಧಿಯನ್ನೂ ರದ್ದುಗೊಳಿಸಲಾಗಿದೆ. ಎಲ್ಲಾದರೂ ಗಲಾಟೆ ನಡೆಯಿತೇ? ಬೆಂಕಿ ಹೊತ್ತಿಕೊಂಡಿತೇ? ಅಷ್ಟಕ್ಕೂ, ಪುಕ್ಕಲ ನಾಯಕನೊಬ್ಬ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಬಲ್ಲನೇ? ದೇಶ ಮುನ್ನಡೆಸಲು ಛಾತಿ ಇರುವ ನಾಯಕ ಬೇಕೇ ಹೊರತು, ಪುಕ್ಕಲ ನಾಯಕ” ಎಂದು ರಾಹುಲ್‌ ಗಾಂಧಿ ಪ್ರಸ್ತಾಪಿಸದೆ ಕುಟುಕಿದರು.

“ಮೇ 7ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿ ಗೆಲುವು ಸಾಧಿಸಿದರೆ ರೈತರು, ಬಡವರ ಪರವಾಗಿ ಕೆಲಸ ಮಾಡಲಾಗುತ್ತದೆ. ಹಾಗಾಗಿ, ಬಳ್ಳಾರಿಯಲ್ಲಿ ಬಿ.ಶ್ರೀರಾಮುಲು, ಕೊಪ್ಪಳದಲ್ಲಿ ಬಸವರಾಜ್‌ ಅವರನ್ನು ಗೆಲ್ಲಿಸಿ. ನೀವು ನೀಡುವ ಪ್ರತಿಯೊಂದು ಮತವೂ ಮೋದಿಯ ಕೈ ಬಲಪಡಿಸುತ್ತದೆ. ಇದು ದೇಶದಲ್ಲಿ ಉತ್ತಮ ಆಡಳಿತ ನೀಡಲು ಸಹಕಾರಿಯಾಗುತ್ತದೆ. ನೀವು ನೀಡುವ ಮತವು ವಿಕಸಿತ ಭಾರತ, ವಿಕಸಿತ ಕರ್ನಾಟಕದ ಗ್ಯಾರಂಟಿಯಾಗಿದೆ” ಎಂದು ತಿಳಿಸಿದರು.

ಕೆಫೆ ಬಾಂಬ್‌ ಸ್ಫೋಟದ ಕುರಿತೂ ಉಲ್ಲೇಖ

ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಕುರಿತು ನರೇಂದ್ರ ಮೋದಿ ಪ್ರಸ್ತಾಪಿಸಿದರು. ಕೆಫೆ ಬಾಂಬ್‌ ಸ್ಫೋಟದ ಬಳಿಕ ಕಾಂಗ್ರೆಸ್‌ ನಾಯಕರು ಮೃದುವಾಗಿ ಮಾತನಾಡಲು ಶುರು ಮಾಡಿದರು. ಇದು ಸಿಲಿಂಡರ್‌ ಸ್ಫೋಟ ಎಂದರು, ಔದ್ಯಮಿಕ ವೈಷಮ್ಯದಿಂದ ಹೀಗೆ ಮಾಡಿದರು ಎಂದರು. ಆದರೆ, ದೋಷಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಯಿತು. ಆಗ ಕಾಂಗ್ರೆಸ್‌ ನಾಯಕರು ಓಲೈಸುವುದನ್ನು ನಿಲ್ಲಿಸಿದರು” ಎಂದು ಗುಡುಗಿದರು.

“ಬಿಜೆಪಿ ನೇತೃತ್ವದ ಸರ್ಕಾರವು ದೇಶದಲ್ಲಿ ಬಾಂಬ್‌ ದಾಳಿಯನ್ನು ನಿಯಂತ್ರಿಸಿದೆ. ಮಂಗಳೂರು, ಅಯೋಧ್ಯೆ, ಮುಂಬೈ ಸೇರಿ ಯಾವುದೇ ನಗರಗಳಲ್ಲಿ ಬಾಂಬ್‌ ದಾಳಿಯನ್ನು ನಿಯಂತ್ರಿಸಿದೆ. ಬಾಂಬ್‌ ದಾಳಿಕೋರರನ್ನು ನಾವು ಮಟ್ಟಹಾಕಿದ್ದೇವೆ. ಒಂದು ಕಾಲದಲ್ಲಿ ಯೋಧರನ್ನು ಅಪಹರಿಸಿ, ಅವರ ರುಂಡ ಕತ್ತರಿಸಿ ಕಳುಹಿಸಲಾಗುತ್ತಿತ್ತು. ಆದರೆ, ಈಗ ಕೇಂದ್ರದಲ್ಲಿ ಮೋದಿ ಸರ್ಕಾರವಿದೆ. ಮನೆಯೊಳಗೆ ನುಗ್ಗಿ ಹೊಡೆಯುವ ಸಾಮರ್ಥ್ಯ ನಮ್ಮದಾಗಿದೆ” ಎಂದರು.

ಇದನ್ನೂ ಓದಿ: PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

Continue Reading

Lok Sabha Election 2024

Narendra Modi: ನಿಮ್ಮ ಸೇವೆಗೆಂದೇ ಭಗವಂತ ನನ್ನನ್ನು ಈ ಭೂಮಿಗೆ ಕಳುಹಿಸಿದ್ದಾನೆ, ಈ ಜೀವ ದೇಶಕ್ಕಾಗಿ ಎಂದ ಮೋದಿ

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರ್ನಾಟಕದಲ್ಲಿ ಭರ್ಜರಿಯಾಗಿ ಪ್ರಚಾರ ನಡೆಸಿದ್ದಾರೆ. ನನ್ನ ಜೀವ ಈ ದೇಶದ ಜನರಿಗಾಗಿ ಮುಡಿಪು ಎಂದು ನರೇಂದ್ರ ಮೋದಿ ಹೇಳಿದ್ದಾರೆ. ನಿಮ್ಮ ಕನಸೇ ಮೋದಿ ಸಂಕಲ್ಪ ಎಂದು ಇಲ್ಲಿಯ ಇಡೀ ಜನಸಮೂಹಕ್ಕೆ ಭರವಸೆ ನೀಡುತ್ತೇನೆ. ನನ್ನ ಪ್ರತಿ ಕ್ಷಣವನ್ನೂ ದೇಶಕ್ಕಾಗಿ, ದೇಶದ ಜನರಿಗಾಗಿ ಮೀಸಲಿಟ್ಟು ಶ್ರಮಿಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

VISTARANEWS.COM


on

Narendra Modi
Koo

ಬೆಳಗಾವಿ, ಶಿರಸಿ, ದಾವಣಗೆರೆ ಮತ್ತು ಹೊಸಪೇಟೆಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದ ನರೇಂದ್ರ ಮೋದಿ (Narendra Modi) ಅವರು ಹಿಂದೆಂದಿಗಿಂತ ಹೆಚ್ಚು ಭಾವುಕರಾಗಿ, ಆಕ್ರಮಣಕಾರಿಯಾಗಿ ಮಾತನಾಡಿದರು. ನಿಮ್ಮ ಸೇವೆಗಾಗಿಯೇ ಭಗವಂತ ನನ್ನನ್ನು ಈ ಭೂಮಿಗೆ ಕಳುಹಿಸಿದ್ದಾನೆ. ಈ ನನ್ನ ಜೀವ ದೇಶಕ್ಕೆ ಮೀಸಲು ಎಂದರು.
ನನ್ನ ಜೀವನದ ಕ್ಷಣಕ್ಷಣವೂ ಈ ದೇಶದ ಒಳಿತಿಗಾಗಿ, ಈ ದೇಶದ ಜನರ ಒಳಿತಿಗಾಗಿ ಮೀಸಲು. 24×7 ನಾನು ಈ ದೇಶಕ್ಕಾಗಿ ದುಡಿಯುತ್ತಿದ್ದೇನೆ. ಇದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ ಎಂದು ಮೋದಿ ಹೇಳಿದಾಗ ವೇದಿಕೆ ಮುಂಭಾಗದ ಸಾವಿರಾರು ಮಂದಿ ಮೋದಿ ಮೋದಿ ಎಂಬ ಜಯಘೋಷ ಮೊಳಗಿಸಿದರು.

ನಿಮ್ಮ ಕನಸೇ ಮೋದಿ ಸಂಕಲ್ಪ ಎಂದು ಇಲ್ಲಿಯ ಇಡೀ ಜನಸಮೂಹಕ್ಕೆ ಭರವಸೆ ನೀಡುತ್ತೇನೆ. ನನ್ನ ಪ್ರತಿ ಕ್ಷಣವನ್ನೂ ದೇಶಕ್ಕಾಗಿ, ದೇಶದ ಜನರಿಗಾಗಿ ಮೀಸಲಿಟ್ಟು ಶ್ರಮಿಸುತ್ತೇನೆ. ದಿನದ 24 ಗಂಟೆಯೂ ಕೆಲಸ ಮಾಡುತ್ತಾ 2047ರ ವಿಕಸಿತ ಭಾರತಕ್ಕಾಗಿ ನನ್ನ ಸೇವೆ ಮುಡಿಪಾಗಿಡುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಭಯೋತ್ಪಾದಕರಿಗೆ ಕಾಂಗ್ರೆಸ್‌ ಕುಮ್ಮಕ್ಕು

ಕಾಂಗ್ರೆಸ್‌ ಬಾಂಬರ್‌ಗಳಿಗೆ ಕುಮ್ಮಕ್ಕು ನೀಡುತ್ತಿದೆ. ನಾವು ಎನ್‌ಐಎ ಮೂಲಕ ಇಂಥ ದೇಶದ್ರೋಹಿಗಳನ್ನು ಬಗ್ಗುಬಡಿಯುವ ಕೆಲಸವನ್ನು ಮಾಡುತ್ತಿದ್ದೇವೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟವನ್ನು (Rameswaram cafe blast) ಮೊದಲು ಸಿಲಿಂಡರ್ ಸ್ಫೋಟವೆಂದು ಕಾಂಗ್ರೆಸ್ ಸರ್ಕಾರದವರು ಹೇಳಿದ್ದರು. ಆದರೆ, ಎನ್ಐಎ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕೇವಲ ವೋಟಿನ ರಾಜಕಾರಣ ಮಾಡುವ ಕಾಂಗ್ರೆಸ್‌ನಿಂದ ಇಷ್ಟೆಲ್ಲ ಪ್ರಕರಣಗಳು ನಡೆಯುತ್ತಿವೆ. ಕೆಲವು ಮತಾಂಧ ಸಂಘಟನೆಗಳನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ನ ಸಂಪ್ರದಾಯವಾಗಿದೆ. ಆದರೆ, ಬಿಜೆಪಿ ನಾಯಕರು ಯಾವತ್ತೂ ಈ ರೀತಿ ಆತಂಕಕಾರಿ ರಾಜಕಾರಣ ಮಾಡಲ್ಲ. ಹಿಂದೂಸ್ಥಾನ ಅಂದರೆ, ಭಯೋತ್ಪಾದನೆಯ ಮಾತು ಬಂದರೆ, ಅಂಥವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ಈ ಹಿಂದೆ ಮಂಗಳೂರಲ್ಲಿ ಸ್ಫೋಟ, ಬೆಂಗಳೂರಲ್ಲಿ ಸ್ಫೋಟ, ದೆಹಲಿಯಲ್ಲಿ ಸ್ಫೋಟ, ಸೂರತ್‌ನಲ್ಲಿ ಸ್ಫೋಟ ಹೀಗೆ ದೇಶದ ಎಲ್ಲ ಕಡೆ ಸ್ಫೋಟ.. ಸ್ಫೋಟವೆಂದು ನ್ಯೂಸ್ ಬರುತ್ತಿತ್ತು. ಆದರೆ, ಈಗ ಅಂದ್ರೆ 2014ರ ನಂತರ ಬಾಂಬ್‌ ಸ್ಫೋಟದ ಪ್ರಕರಣಗಳು ಆಗುತ್ತಾ ಇದೆಯಾ? ಕಾಂಗ್ರೆಸ್‌ ಪಕ್ಷದಿಂದ ಆ್ಯಂಟಿ ಸೋಷಿಯಲ್ ಹಾಗೂ ಆ್ಯಂಟಿ ನ್ಯಾಷನಲ್ ಕಾರ್ಯ ನಡೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.

ಜನರ ಆಸ್ತಿ ಮೇಲೆ ಕಾಂಗ್ರೆಸ್‌ಗೆ ಕಣ್ಣು

ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದ ಜನರ ಆಸ್ತಿಪಾಸ್ತಿಯ ಪರಿಶೀಲನೆ ನಡೆಸುತ್ತಾರಂತೆ. ನಿಮ್ಮ ಆಸ್ತಿ, ನಿಮ್ಮ ಜಮೀನು, ನಿಮ್ಮ ಚಿನ್ನವನ್ನು ಸರ್ವೆ ಮಾಡ್ತಾರಂತೆ. ಮಹಿಳೆಯರ ಮಂಗಳ ಸೂತ್ರವನ್ನು ಸರ್ವೆ ಮಾಡುತ್ತಾರಂತೆ. ಕಾಂಗ್ರೆಸ್ ಪಕ್ಷದವರು ಹಾಗೆ ಸರ್ವೆ ಮಾಡ್ತೀನಿ ಅಂತಾ ಹೋದರೆ ಸುಮ್ಮನೆ ಬಿಡುತ್ತೇನಾ? ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ವೆ, ಎಕ್ಸ್‌ರೇ ಕಾರ್ಯವನ್ನು ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್‌ ಶ್ರೀರಾಮನ ವಿರೋಧಿ

ಕಾಂಗ್ರೆಸ್‌ ಶ್ರೀರಾಮನ ವಿರೋಧಿಯಾಗಿದೆ. 500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನವರು ಕಾಂಗ್ರೆಸ್‌ ನಾಯಕರ ಮನೆ ಬಾಗಿಲಿಗೆ ಹೋಗಿ ಆಹ್ವಾನ ನೀಡಿದರೂ ಅವರು ಉದ್ಘಾಟನೆಗೆ ಬರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿರಸಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: PM Narendra Modi: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 5 ವರ್ಷಕ್ಕೆ 5 ಪಿಎಂ; ಕರ್ನಾಟಕದಲ್ಲಿ ಶಿಕ್ಷಣ ನೀತಿಯಲ್ಲೂ ರಾಜಕೀಯ: ಮೋದಿ ಕಿಡಿ

ಅಯೋಧ್ಯೆಯಲ್ಲಿ ಪ್ರಭು ರಾಮನ ಪ್ರತಿಷ್ಠಾಪನೆ ಮಾಡಲು 500 ವರ್ಷಗಳ ಕಾಲ ಹೋರಾಟ ನಡೆಸಿದರು. ಆದರೆ, ನಿಮ್ಮ ಎನ್‌ಡಿಎ ಸರ್ಕಾರ ಇಷ್ಟು ವರ್ಷಗಳ ಹೋರಾಟಕ್ಕೆ ಫಲ ನೀಡಿದೆ. ರಾಮ ಮಂದಿರವನ್ನು ನಿರ್ಮಾಣ ಮಾಡಿ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ನಿಮ್ಮೆಲ್ಲರ ಮತಗಳಿಂದ ಮಾತ್ರ ಸಾಧ್ಯವಾಗಿದೆ. ಇದರಿಂದ ಈ ದೇಶಕ್ಕೆ ಪುಣ್ಯ ಸಿಗುವುದಿಲ್ಲವೇ? ಈ ಪುಣ್ಯದ ಹಕ್ಕುದಾರರು ಯಾರು? ನಮಗೆ ಮತಹಾಕಿದ ನೀವೇ ಇದಕ್ಕೆ ಹಕ್ಕುದಾರರಾಗಿದ್ದೀರಿ. ಹೀಗಾಗಿ ಇದರ ಪುಣ್ಯ ನಿಮಗೇ ಸಿಗುತ್ತದೆ ಎಂದು ಹೇಳಿದರು.

Continue Reading
Advertisement
Jatra Rathotsava Two killed and one serious after being hit by wheel of a chariot at Indi Kamarimath
ಕರ್ನಾಟಕ5 mins ago

Jatra Rathotsava: ಇಂಡಿಯ ಕಮರಿಮಠದ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ದುರ್ಮರಣ; ಮತ್ತೊಬ್ಬ ಗಂಭೀರ

Karnataka Weather
ಕರ್ನಾಟಕ10 mins ago

Karnataka Weather: ರಾಜ್ಯದಲ್ಲಿ ಮೇ 2ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಳ; ಆರೆಂಜ್‌ ಅಲರ್ಟ್‌ ಘೋಷಣೆ

Amrita Pandey
ಸಿನಿಮಾ19 mins ago

Amrita Pandey: ಭೋಜ್‌ಪುರಿ ಜನಪ್ರಿಯ ನಟಿ ಅಮೃತಾ ಪಾಂಡೆ ಆತ್ಮಹತ್ಯೆ; ಸಾವಿಗೆ ಮುನ್ನ ಬರೆದ ವಾಟ್ಸಾಪ್ ಸ್ಟೇಟಸ್‌ನಲ್ಲಿ ಏನಿದೆ?

PM Narendra Modi
ಕರ್ನಾಟಕ24 mins ago

PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್‌ ಗಾಂಧಿಗೆ ಮೋದಿ ಟಾಂಗ್!

Narendra Modi
Lok Sabha Election 202444 mins ago

Narendra Modi: ನಿಮ್ಮ ಸೇವೆಗೆಂದೇ ಭಗವಂತ ನನ್ನನ್ನು ಈ ಭೂಮಿಗೆ ಕಳುಹಿಸಿದ್ದಾನೆ, ಈ ಜೀವ ದೇಶಕ್ಕಾಗಿ ಎಂದ ಮೋದಿ

RCB vs GT
ಕ್ರೀಡೆ57 mins ago

RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

PM Narendra Modi
ಕರ್ನಾಟಕ1 hour ago

PM Narendra Modi: ನೇಹಾ ಹಿರೇಮಠ ಹತ್ಯೆ ಆತಂಕಕಾರಿ; ಹೊಸಪೇಟೆಯಲ್ಲಿ ಕಾಂಗ್ರೆಸ್‌ಗೆ ಮೋದಿ ಚಾಟಿ!

Hassan Pen Drive Case
ಕರ್ನಾಟಕ1 hour ago

Hassan Pen Drive Case: ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾದ ಸೆಕ್ಷನ್‌ಗಳು ಏನು ಹೇಳುತ್ತವೆ? ಆರೋಪ ಸಾಬೀತಾದ್ರೆ ಶಿಕ್ಷೆ ಏನು?

KKR vs DC
ಕ್ರಿಕೆಟ್2 hours ago

KKR vs DC: ಮೊದಲ ಸೋಲಿಗೆ ಸೇಡು ತೀರಿಸಿಕೊಂಡೀತೇ ಡೆಲ್ಲಿ?; ಕೆಕೆಆರ್​ ಎದುರಾಳಿ

Karnataka Drought Relief HDK accuses Congress government of lying says HD Kumarswamy
ರಾಜಕೀಯ2 hours ago

Karnataka Drought: ಬರ ಪರಿಹಾರ ಬಗ್ಗೆ ಸುಳ್ಳು ಹೇಳಿದ ಕಾಂಗ್ರೆಸ್‌; ಯುಪಿಎ ಕೊಟ್ಟಿದ್ದು ಅತಿ ಕಡಿಮೆ ಎಂದ ಎಚ್‌ಡಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20243 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20246 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20247 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20248 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ11 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20241 day ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

ಟ್ರೆಂಡಿಂಗ್‌