ಪ್ರೀತಿಸಿದ ಹುಡುಗಿ ಮೋಸ ಮಾಡಿ ಹೋಗುತ್ತಿದ್ದಂತೆ ಯುವಕನ ಕೈಗೆ ಬಂತು 25 ಸಾವಿರ ರೂ.; ನಿಮಗೆ ಗೊತ್ತಾ ಈ ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಫಂಡ್? - Vistara News

ವೈರಲ್ ನ್ಯೂಸ್

ಪ್ರೀತಿಸಿದ ಹುಡುಗಿ ಮೋಸ ಮಾಡಿ ಹೋಗುತ್ತಿದ್ದಂತೆ ಯುವಕನ ಕೈಗೆ ಬಂತು 25 ಸಾವಿರ ರೂ.; ನಿಮಗೆ ಗೊತ್ತಾ ಈ ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಫಂಡ್?

ಪ್ರತೀಕ್​ ಅವರ ಈ ಟ್ವೀಟ್ ಭರ್ಜರಿ ವೈರಲ್ ಆಗುತ್ತಿದೆ. ‘ಹಾರ್ಟ್​ಬ್ರೇಕ್​ ಇನ್​ಶೂರೆನ್ಸ್​ ಫಂಡ್​’ ಎನ್ನುವ ಹೆಸರೇ ನೆಟ್ಟಿಗರನ್ನು ಭರ್ಜರಿ ಆಕರ್ಷಿಸುತ್ತಿದೆ. ಹಲವರು ಕಮೆಂಟ್​ ಮಾಡುತ್ತಿದ್ದಾರೆ.

VISTARANEWS.COM


on

heartbreak insurance fund
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾನು ನನ್ನ ಹುಡುಗಿಗಾಗಿ ಎಷ್ಟೆಲ್ಲ ಖರ್ಚು ಮಾಡಿದೆ, ಏನೆಲ್ಲ ಮಾಡಿದೆ. ಆದರೆ ಕೊನೆಗೂ ಅವಳು ನನ್ನನ್ನು ಬಿಟ್ಟು ಹೋದಳು, ದುಡ್ಡೂ ಹೋಯ್ತು, ಅವಳೂ ಹೋದ್ಳು ಎಂದು ಪರಿತಪಿಸುವ ಅನೇಕ ಯುವಕರನ್ನು ನಾವು ನೋಡಿದ್ದೇವೆ. ಆದರೆ ಅಪರೂಪವೆಂಬಂತೆ ಇಲ್ಲೊಬ್ಬ ಯುವಕ, ‘ನನಗೆ ನನ್ನ ಗರ್ಲ್​ಫ್ರೆಂಡ್ ಮೋಸ ಮಾಡಿ ಹೋದಳು, ಆದರೆ ಆಕೆ ಹೋಗುತ್ತಿದ್ದಂತೆ 25 ಸಾವಿರ ರೂಪಾಯಿ ಹಣ ಬಂತು’. ಇದು ಸಾಧ್ಯವಾಗಿದ್ದು ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಫಂಡ್ (Heartbreak Insurance Fund) ನಿಂದಾಗಿ ಎಂದು ಹೇಳಿಕೊಂಡಿದ್ದಾನೆ ಮತ್ತು ಅದು ಹೇಗೆ ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾನೆ.

ಆತನ ಹೆಸರು ಪ್ರತೀಕ್ ಆರ್ಯನ್​. ತಾನು 25 ಸಾವಿರ ಪಡೆದ ಬಗ್ಗೆ ಮಾತನಾಡಿದ ಆತ ‘ನಾನು ಮತ್ತು ನನ್ನ ಪ್ರೇಯಸಿ ಸೇರಿ ಜಂಟಿ ಖಾತೆ ತೆರೆದಿದ್ದೆವು. ನಾವು ಅದರಲ್ಲಿ ತಿಂಗಳಿಗೆ 500 ರೂಪಾಯಿ (ತಲಾ) ಠೇವಣಿ ಇಡುತ್ತ ಬಂದೆವು. ಜಂಟಿ ಖಾತೆ ತೆರೆಯುವಾಗ ನಮ್ಮ ಮಧ್ಯೆ ಒಂದು ಒಪ್ಪಂದವೂ ಆಯಿತು. ಇಬ್ಬರಲ್ಲಿ ಯಾರೇ ಮೋಸ ಮಾಡಿದರೂ, ಹೀಗೆ ಡಿಪೋಸಿಟ್​ ಹಣ ಇನ್ನೊಬ್ಬರಿಗೆ ಸಂದಾಯವಾಗುತ್ತದೆ. ಸಂಬಂಧವನ್ನು ಮೊದಲು ಮುರಿದುಕೊಳ್ಳುವವರಿಗೆ ಒಂದು ರೂಪಾಯಿಯೂ ಸಿಗುವುದಿಲ್ಲ ಎಂಬುದು ಒಪ್ಪಂದವಾಗಿತ್ತು. ಅದರಂತೆ ನನ್ನ ಪ್ರೇಯಸಿ ಮೊದಲು ಮೋಸ ಮಾಡಿ ಹೋದಳು. ಹೀಗಾಗಿ ಖಾತೆಯಲ್ಲಿದ್ದ 25 ಸಾವಿರ ರೂಪಾಯಿ ಹಣ ನನಗೇ ಸೇರಿತು’ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಪ್ರತೀಕ್​ ಮತ್ತು ಆತನ ಪ್ರೇಯಸಿ ಜಂಟಿ ಖಾತೆ ತೆರೆಯುವಾಗ ಅದಕ್ಕೆ ‘ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಫಂಡ್​’ ಎಂದೇ ಹೆಸರಿಟ್ಟುಬಿಟ್ಟಿದ್ದರು. ನಿಜಕ್ಕೂ ಒಂದಾಗಿದ್ದ ಇಬ್ಬರ ಹೃದಯಗಳ ಮಧ್ಯೆ ಬ್ರೇಕ್​ ಆಗಿ, ಈಗ ಹುಡುಗನಿಗೆ ಹಣ ಸಿಕ್ಕಿದೆ.

ಇದನ್ನೂ ಓದಿ: Lovers suicide | ಪ್ರೀತಿಗೆ ಮನೆಯಲ್ಲಿ ವಿರೋಧ: ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಪ್ರತೀಕ್​ ಅವರ ಈ ಟ್ವೀಟ್ ಭರ್ಜರಿ ವೈರಲ್ ಆಗುತ್ತಿದೆ. ‘ಹಾರ್ಟ್​ಬ್ರೇಕ್​ ಇನ್​ಶೂರೆನ್ಸ್​ ಫಂಡ್​’ ಎನ್ನುವ ಹೆಸರೇ ನೆಟ್ಟಿಗರನ್ನು ಭರ್ಜರಿ ಆಕರ್ಷಿಸುತ್ತಿದೆ. ಹಲವರು ಕಮೆಂಟ್​ ಮಾಡುತ್ತಿದ್ದಾರೆ. ‘ನಾನೂ ಕೂಡ ಹೂಡಿಕೆಗೆ ಆಯ್ಕೆಗಳನ್ನು ಹುಡುಕುತ್ತಿದ್ದೇನೆ. ನೀವು ಹೇಳಿದ್ದನ್ನು ಕೇಳಿದ ಮೇಲೆ ಇದು ಅತ್ಯಂತ ಲಾಭದಾಯಕ ಹೂಡಿಕೆ ಎನ್ನಿಸುತ್ತಿದೆ. ಯಾರಾದರೂ ನನ್ನೊಂದಿಗೆ ಜಂಟಿ ಖಾತೆಗೆ ಬರುವವರು ಇದ್ದೀರಾ?’ ಎಂದು ಒಬ್ಬರು ತಮಾಷೆಯುಕ್ತವಾಗಿ ಪ್ರಶ್ನಿಸಿದ್ದಾರೆ. ‘ಈ ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಎಂಬುದು ಸ್ವಲ್ಪ ರಿಸ್ಕ್​ ಅನ್ನಿಸುತ್ತದೆ, ಈ ಹೂಡಿಕೆ ಮಾಡುವವರು, ಮತ್ತೊಬ್ಬರನ್ನು ಬಿಟ್ಟು ಹೋಗುವ ಮುನ್ನ ಯೋಚಿಸಿ’ ಎಂದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Viral News: ದೆಹಲಿ To ಗೋವಾ ವಿಮಾನ ಟಿಕೆಟ್​​ ಬೆಲೆಗಿಂತ ದುಬಾರಿ ಟೀಮ್​ ಇಂಡಿಯಾದ ಟಿ20 ವಿಶ್ವಕಪ್​ ಜೆರ್ಸಿ

Viral News: ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ಪ್ರಯಾಣದ ದರ 5,134 ರೂ. ಆದರೆ, ಟೀಮ್​ ಇಂಡಿಯಾದ ಆಟಗಾರರ ಹೊಸ ಜೆರ್ಸಿಯ ಬೆಲೆ 5,999 ರೂ. ಇದೆ. ಇದೀಗ ಜೆರ್ಸಿ ಮತ್ತು ವಿಮಾನ ಟಿಕೆಟ್​ ದರದ ಫೋಟೊಗಳನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಅಚ್ಚರಿ ಪಟ್ಟಿದ್ದಾರೆ.

VISTARANEWS.COM


on

viral news
Koo

ಮುಂಬಯಿ: ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಟೀಮ್​ ಇಂಡಿಯಾದ ಹೊಸ ಜೆರ್ಸಿ(India’s Jersey T20 World Cup) ಪ್ರಕಟಗೊಂಡಿದೆ. ಸೋಮವಾರ ಭಾರತ ತಂಡದ ಕಿಟ್​ ಪ್ರಯೋಜಕತ್ವ ಪಡೆದಿರುವ ಕ್ರೀಡಾ ಉಡುಪುಗಳ ಅಡಿಡಾಸ್​ ಕಂಪೆನಿ, ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಡಾಂಗಣದಲ್ಲಿ ಹೆಲಿಕಾಪ್ಟರ್ ಮೂಲಕ ದೈತ್ಯ ಗಾತ್ರದ ಹೊಸ ಜೆರ್ಸಿಯನ್ನು ಅನಾವರಣ ಮಾಡಿತ್ತು. ರೋಹಿತ್​ ಶರ್ಮ, ರವೀಂದ್ರ ಜಡೇಜಾ ಮತ್ತು ಕುಲ್​ದೀಪ್​ ಯಾದವ್​ ಒಳಗೊಂಡ ವಿಶೇಷ ವಿಡಿಯೊ ಇದಾಗಿತ್ತು. ಇದೀಗ ಆಟಗಾರರ ಜೆರ್ಸಿ ಬೆಲೆ ದೆಹಲಿಯಿಂದ ಗೋವಾಕ್ಕೆ ಪ್ರಯಾಣಿಸುವ ವಿಮಾನದ ಟಿಕೆಟ್​ ಬೆಲೆಗಿಂತಲೂ ಅಧಿಕವಾಗಿದೆ.(Viral News)

ಹೌದು, ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ಪ್ರಯಾಣದ ದರ 5,134 ರೂ. ಆದರೆ, ಟೀಮ್​ ಇಂಡಿಯಾದ ಆಟಗಾರರ ಹೊಸ ಜೆರ್ಸಿಯ ಬೆಲೆ 5,999 ರೂ. ಇದೆ. ಇದೀಗ ಜೆರ್ಸಿ ಮತ್ತು ವಿಮಾನ ಟಿಕೆಟ್​ ದರದ ಫೋಟೊಗಳನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಅಚ್ಚರಿ ಪಟ್ಟಿದ್ದಾರೆ.

ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ದರದ ಫೋಟೊ

ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯಲ್ಲಿ ಅಂಗಿಯ ಭುಜಗಳು ಕಿತ್ತಳೆ ಬಣ್ಣದಲ್ಲಿದ್ದು, ಮೂರು ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ. ಉಳಿದ ಭಾಗವು ನೀಲಿ ಬಣ್ಣದ್ದಾಗಿದೆ. ಶರ್ಟ್​ನ ಕಾಲರ್​ ಸುತ್ತಲೂ ತ್ರಿವರ್ಣದ ಪಟ್ಟಿ ಹೊಂದಿದೆ.

ಜೆರ್ಸಿ ಕಂಡು ಟ್ರೋಲ್​ ಮಾಡಿದ ನೆಟ್ಟಿಗರು

ಹೊಸ ಜೆರ್ಸಿಯಲ್ಲಿ ರೋಹಿತ್​ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಉಪನಾಯಕ ಹಾರ್ದಿಕ್​ ಪಾಂಡ್ಯ ಅವರ ಎಡಿಟೆಡ್​ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಫೊಟೊ ಕಂಡ ಕೆಲ ನೆಟ್ಟಿಗರು ಇದು ಇಂಡಿಯನ್​ ಆಯಿಲ್​ ಕಂಪೆನಿಯ ಡ್ರೆಸ್​ನಂತಿದೆ,, ಹಾರ್ಫಿಕ್​ ಬಾಟಲ್​ ತರಾ ಇದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಜೀತಾ​ಲಾಲ್​ ಚಂಪಕ್ಲಾಲ್ ಅವರಿಂದ ಸ್ಫೂರ್ತಿ ಪಡೆದು ಈ ಜೆರ್ಸಿ ಮಾಡಲಾಗಿದೆ ಎಂದು ಹೇಳಿದ್ದಾರೆ.


ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

2013ರಲ್ಲಿ ಎಂಎಸ್ ಧೋನಿ ನಾಯಕರಾಗಿದ್ದಾಗ ಭಾರತ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿತ್ತು. ಅಂದಿನಿಂದ, ಭಾರತವು ಏಕದಿನ ವಿಶ್ವಕಪ್, ಟಿ 20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ವಿಫಲವಾಗಿದೆ. ಇದೀಗ ಈ ಬಾರಿಯ ಟಿ20 ವಿಶ್ವಕಪ್​ ಗೆದ್ದು ಐಸಿಸಿ ಟ್ರೋಫಿ ಬರ ನೀಗಿಸಲು ರೋಹಿತ್​ ಪಡೆ ಪಣತೊಟ್ಟಿದೆ.

Continue Reading

ವೈರಲ್ ನ್ಯೂಸ್

Viral News: ತಮ್ಮನ ಬದಲು ನೀಟ್‌ ಪರೀಕ್ಷೆ ಬರೆದ ಅಣ್ಣ; ಕೊನೆಯ ಕ್ಷಣದಲ್ಲಿ ಸಹೋದರರ ಕಳ್ಳಾಟ ಬಯಲಾಗಿದ್ದು ಹೇಗೆ?

Viral News: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ಆಕಾಂಕ್ಷಿಯ ಬದಲಾಗಿ ಆತನ ಸಹೋದರ ಪರೀಕ್ಷೆ ಬರೆದಿದ್ದಾನೆ. ಸದ್ಯ ಇವರ ಈ ಮೋಸದಾಟ ಬೆಳಕಿಗೆ ಬಂದಿದೆ. ಪರೀಕ್ಷೆಗೆ ಹಾಜರಾದ ನೀಟ್ ಆಕಾಂಕ್ಷಿಯ ಸಹೋದರ, ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮತ್ತು ನೀಟ್ ಆಕಾಂಕ್ಷಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್‌ ಚಿತ್ರ ʼಮುನ್ನಾಭಾಯಿ ಎಂಬಿಬಿಎಸ್‌ʼ ಸಿನಿಮಾದಿಂದ ಸ್ಫೂರ್ತಿಗೊಂಡು ಸಹೋದರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

VISTARANEWS.COM


on

Viral News
Koo

ಜೈಪುರ: 2003ರಲ್ಲಿ ತೆರೆಕಂಡ ಬಾಲಿವುಡ್‌ನ ʼಮುನ್ನಾಭಾಯಿ ಎಂಬಿಬಿಎಸ್‌ʼ ಚಿತ್ರ ನಿಮಗೆಲ್ಲ ನೆನಪಿರಬಹುದು. ಎಂಬಿಬಿಎಸ್‌ ವಿದ್ಯಾರ್ಥಿಯಾಗಿರುವ ನಾಯಕ ಮುನ್ನಾ ಭಾಯಿ (ಸಂಜಯ್‌ ದತ್‌) ತನ್ನ ಪರವಾಗಿ ವೈದ್ಯನೊಬ್ಬನ ಮೂಲಕ ಪರೀಕ್ಷೆ ಬರೆಸುತ್ತಾನೆ. ಆ ವೇಳೆ ಈ ದೃಶ್ಯ ಜನಪ್ರಿಯವಾಗಿತ್ತು. ಅದೆಲ್ಲ ಸರಿ ಈಗ್ಯಾಕೆ ಈ ವಿಚಾರ ಎಂಬ ಸಂದೇಹ ನಿಮ್ಮನ್ನು ಕಾಡಬಹುದು. ಇದನ್ನೇ ಹೋಲುವ ಘಟನೆಯೊಂದು ವರದಿಯಾಗಿದೆ. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET)ಯ ಆಕಾಂಕ್ಷಿಯ ಬದಲಾಗಿ ಆತನ ಸಹೋದರ ಪರೀಕ್ಷೆ ಬರೆದಿದ್ದಾನೆ. ಸದ್ಯ ಇವರ ಈ ಮೋಸದಾಟ ಬೆಳಕಿಗೆ ಬಂದಿದೆ (Viral News).

ರಾಜಸ್ಥಾನದ ಬಾರ್ಮರ್‌ನಲ್ಲಿ ಈ ಘಟನೆ ನಡೆದಿದೆ. ಪರೀಕ್ಷೆಗೆ ಹಾಜರಾದ ನೀಟ್ ಆಕಾಂಕ್ಷಿಯ ಸಹೋದರ, ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮತ್ತು ನೀಟ್ ಆಕಾಂಕ್ಷಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್‌ ಚಿತ್ರ ʼಮುನ್ನಾಭಾಯಿ ಎಂಬಿಬಿಎಸ್‌ʼ ಸಿನಿಮಾದಿಂದ ಸ್ಫೂರ್ತಿಗೊಂಡು ಸಹೋದರರು ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾರ್ಮರ್‌ನ ಅಂತ್ರಿ ದೇವಿ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ಅನಿತಾ ಚೌಧರಿ ಭಾನುವಾರ ಗೋಪಾಲ ರಾಮ್ ಬದಲಿಗೆ ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಸಿಂಗ್ ಮೀನಾ ತಿಳಿಸಿದ್ದಾರೆ.

ಅಧಿಕಾರಿಗಳಾದ ಲೇಖ್‌ರಾಜ್‌ ಸಿಯಾಗ್‌ ಮತ್ತು ಡಿಎಸ್‌ಟಿ ಇನ್‌ಚಾರ್ಜ್‌ ಮಹಿಪಾಲ್‌ ಸಿಂಗ್‌ ಕೂಡಲೇ ಸ್ಥಳಕ್ಕೆ ಧಾವಿಸಿ ಕೃಷ್ಣ ರಾಮ್ ಅವರ ಪುತ್ರ ಭಗೀರಥ ರಾಮ್ ವಿಷ್ಣೋಯ್ ಮತ್ತು ಆತನ ಕಿರಿಯ ಸಹೋದರ ಗೋಪಾಲ ರಾಮ್‌ನನ್ನು ಪರೀಕ್ಷಾ ಕೇಂದ್ರದಿಂದ ಬಂಧಿಸಿದ್ದಾರೆ. ಭಗೀರಥ ರಾಮ್ ವಿಷ್ಣೋಯ್ ಜೋಧಾಪುರ ಎಸ್‌.ಎನ್‌.ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ನ ಮೊದಲ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ.

ಘಟನೆ ವಿವರ

ಭಗೀರಥ ರಾಮ್ ವಿಷ್ಣೋಯ್ ಆಧಾರ್‌ ಕಾರ್ಡ್‌ನಲ್ಲಿರುವ ತನ್ನ ಫೋಟೊವನ್ನು ಎಡಿಟ್‌ ಮಾಡಿ ಅದರ ಬದಲಿಗೆ ಸಹೋದರ ಗೋಪಾಲ ರಾಮ್ ಫೋಟೊ ಎಡಿಟ್‌ ಮಾಡಿ ನೀಟ್‌ ಪರೀಕ್ಷೆ ಬರೆಯಲು ತೆರಳಿದ್ದ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಕಿಲಾಡಿ ಸಹೋದರರ ಕ್ರಿಮಿನಲ್‌ ಐಡಿಯಾ ಸಾಂಗವಾಗಿ ನೆರವೇರುತ್ತಿತ್ತು. ಆದರೆ ಕೊನೆ ಕ್ಷಣದಲ್ಲಿ ಇವರ ಅದೃಷ್ಟ ಕೈಕೊಟ್ಟಿತ್ತು. ಪ್ರಾಂಶುಪಾಲೆಯ ಕಣ್ಣಿಗೆ ಬಿದ್ದು ಇವರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Viral News : ನಿಜವಾದ ಪೊಲೀಸ್​ಗೆ ತಪ್ಪಾಗಿ ಸೆಲ್ಯೂಟ್​ ಹೊಡೆದು ಸಿಕ್ಕಿ ಬಿದ್ದ ನಕಲಿ ಪೊಲೀಸ್​!

ದಾಖಲೆ ಪ್ರಮಾಣದಲ್ಲಿ ನೋಂದಣಿ

ನೀಟ್‌ ಯುಜಿ 2024ಕ್ಕೆ ಈ ಬಾರಿ ದಾಖಲೆ ಪ್ರಮಾಣದ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಅತ್ಯಧಿಕ 23 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದ ಇದರಲ್ಲಿ 10 ಲಕ್ಷ ಮಂದಿ ಪುರುಷರಾದರೆ 13 ಮಂದಿ ಸ್ತ್ರೀಯರು. ವಿಶೇಷ ಎಂದರೆ ಪುದುಚೇರಿ, ಜಮ್ಮು ಮತ್ತು ಕಾಶ್ಮೀರ ಮತ್ತಿತರ ಕಡೆಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

Continue Reading

ವೈರಲ್ ನ್ಯೂಸ್

Viral Video: ವಿದ್ಯಾರ್ಥಿಯ ಗುಪ್ತಾಂಗಕ್ಕೆ ಇಟ್ಟಿಗೆ ಕಟ್ಟಿ ಕಿಡಿಗೇಡಿಗಳ ವಿಕೃತಿ; ವಿಡಿಯೋ ವೈರಲ್‌

Viral Video:ವಿದ್ಯಾರ್ಥಿಯೊಬ್ಬ ಆನ್‌ಲೈನ್‌ ಗೇಮಿಂಗ್‌ ಚಟಕ್ಕೆ ಬಿದ್ದು, 20,000ರೂ ಸಾಲದ ಸುಳಿಗೆ ಬಿದ್ದಿದ್ದ. ಆರೋಪಿಗಳು ಬಡ್ಡಿ ಎಲ್ಲಾ ಸೇರಿಸಿ 50,000 ಕೊಡಲೇಬೇಕೆಂದು ಹೇಳಿದ್ದರು. ಅಷ್ಟೊಂದು ಹಣವನ್ನು ಕೊಡಲು ಸಾಧ್ಯವಾಗದೇ ಇದ್ದಾಗ ವಿದ್ಯಾರ್ಥಿಯನ್ನು ಆರು ಜನ ಅಪ್ರಾಪ್ತರು ಸೇರಿ ಚೆನ್ನಾಗಿ ಥಳಿಸಿದ್ದು, ಬಳಿಕ ಆತನನ್ನು 10 ದಿನಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ಮಾಡಿದ್ದಾರೆ. ಆತನ ಗುಪ್ತಾಂಗಕ್ಕೆ ಇಟ್ಟಿಗೆ ಕಟ್ಟಿ ವಿಕೃತಿ ಮೆರೆದಿದ್ದಾರೆ.

VISTARANEWS.COM


on

Viral Video
Koo

ಉತ್ತರಪ್ರದೇಶ: ಆನ್‌ಲೈನ್‌ ಗೇಮಿಂಗ್‌ (Online Gaming)ನಲ್ಲಿ ಸೋತು ಹಣ ವಾಪಾಸ್‌ ನೀಡಲು ವಿಳಂಬ ಮಾಡಿದನೆಂದು ನೀಟ್‌ ಪರೀಕ್ಷೆಗೆ(NEET Exam) ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯನ್ನ ಚೆನ್ನಾಗಿ ಥಳಿಸಿ ಚಿತ್ರಹಿಂಸೆ ನೀಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಕಿಡಿಗೇಡಿಗಳು ವಿದ್ಯಾರ್ಥಿಯ ಗುಪ್ತಾಂಗಕ್ಕೆ ಇಟ್ಟಿಗೆ ಕಟ್ಟಿ ವಿಕೃತಿ ಮೆರೆದಿದ್ದು, ಆರು ಜನ ಅಪ್ರಾಪ್ತರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇನ್ನು ಈ ಶಾಕಿಂಗ್‌ ವಿಡಿಯೋ(Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವರಿಂದ ಖಂಡನೆ ವ್ಯಕ್ತವಾಗಿದೆ.

ಘಟನೆ ವಿವರ:

ಇಟವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯೊಬ್ಬ ಆನ್‌ಲೈನ್‌ ಗೇಮಿಂಗ್‌ ಚಟಕ್ಕೆ ಬಿದ್ದು, 20,000ರೂ ಸಾಲದ ಸುಳಿಗೆ ಬಿದ್ದಿದ್ದ. ಆರೋಪಿಗಳು ಬಡ್ಡಿ ಎಲ್ಲಾ ಸೇರಿಸಿ 50,000 ಕೊಡಲೇಬೇಕೆಂದು ಹೇಳಿದ್ದರು. ಅಷ್ಟೊಂದು ಹಣವನ್ನು ಕೊಡಲು ಸಾಧ್ಯವಾಗದೇ ಇದ್ದಾಗ ವಿದ್ಯಾರ್ಥಿಯನ್ನು ಆರು ಜನ ಅಪ್ರಾಪ್ತರು ಸೇರಿ ಚೆನ್ನಾಗಿ ಥಳಿಸಿದ್ದು, ಬಳಿಕ ಆತನನ್ನು 10 ದಿನಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ಮಾಡಿದ್ದಾರೆ. ಆತನ ಗುಪ್ತಾಂಗಕ್ಕೆ ಇಟ್ಟಿಗೆ ಕಟ್ಟಿ ವಿಕೃತಿ ಮೆರೆದಿದ್ದಾರೆ. ಬಳಿಕ ಆತನನ್ನು ಬೆಂಕಿ ಹಾಕಿ ಸುಡಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ 11 ಜನ ಆರೋಪಿಗಳು ಭಾಗಿಯಾಗಿದ್ದು, ಆರು ಅಪ್ರಾಪ್ತರನ್ನು ಅರೆಸ್ಟ್‌ ಮಾಡಲಾಗಿದೆ. ಪ್ರಮುಖ ಆರೋಪಿ ಸೇರಿದಂತೆ ಐವರು ಎಸ್ಕೇಪ್‌ ಆಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಸೋಮವಾರ ಸಂತ್ರಸ್ತ ವಿದ್ಯಾರ್ಥಿಯ ಬಾವ ಕಾಕಡಿಯೋ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:Narendra Modi: ಮತದಾನ ಮಾಡಿ ಬಂದ ಮೋದಿಗೆ ರಾಖಿ ಕಟ್ಟಿ, ಆಶೀರ್ವಾದ ಮಾಡಿದ ಅಜ್ಜಿ; Video ಇದೆ

ಇಂತಹದ್ದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಫತೇಹ್‌ಪುರದಲ್ಲಿ ನಡೆದಿತ್ತು. ಆನ್‌ಲೈನ್‌ ಗೇಮ್‌ನ ಚಟ ಹೊಂದಿದ್ದ ಯುವಕನೊಬ್ಬ ಸಾಲ ತೀರಿಸಲು ಇನ್ಶೂರೆನ್ಸ್‌ ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಂದಿದ್ದ. ಹಿಮಾಂಶು ಎಂಬ ಆರೋಪಿ 50 ಲಕ್ಷ ರೂ.ಗಳ ವಿಮೆ ಹಣವನ್ನು ಪಡೆಯಲು ತನ್ನ ತಾಯಿಯನ್ನು ಕೊಂದು ನಂತರ ಶವವನ್ನು ಸೆಣಬಿನ ಚೀಲದಲ್ಲಿ ತುಂಬಿ ಯಮುನಾ ನದಿಯ ದಂಡೆಯಲ್ಲಿ ಎಸೆದಿದ್ದ. ಹಿಮಾಂಶು ಜನಪ್ರಿಯ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ ಒಂದರಲ್ಲಿ ಗೇಮಿಂಗ್‌ ಆಡುವ ಚಟ ಹೊಂದಿದ್ದ. ಇದಕ್ಕಾಗಿ ಆತನ ಸುಮಾರು 4 ಲಕ್ಷ ರೂ. ಸಾಲ ಮಾಡಿದ್ದ. ಇದನ್ನು ತೀರಿಸಲು ಆತ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Continue Reading

ಕ್ರೀಡೆ

India’s Jersey T20 World Cup: ಭಾರತ ತಂಡದ ಹೊಸ ಜೆರ್ಸಿ ಕಂಡು ಟ್ರೋಲ್​ ಮಾಡಿದ ನೆಟ್ಟಿಗರು

India’s Jersey T20 World Cup: ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯಲ್ಲಿ ಅಂಗಿಯ ಭುಜಗಳು ಕಿತ್ತಳೆ ಬಣ್ಣದಲ್ಲಿದ್ದು, ಮೂರು ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ. ಉಳಿದ ಭಾಗವು ನೀಲಿ ಬಣ್ಣದ್ದಾಗಿದೆ. ಶರ್ಟ್​ನ ಕಾಲರ್​ ಸುತ್ತಲೂ ತ್ರಿವರ್ಣದ ಪಟ್ಟಿ ಹೊಂದಿದೆ. ಬಹುತೇಕ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಈ ಜೆರ್ಸಿ ಅಷ್ಟಾಗಿ ಇಷ್ಟವಾಗಿಲ್ಲ.

VISTARANEWS.COM


on

India’s Jersey T20 World Cup
Koo

ಮುಂಬಯಿ: ಮುಂಬರುವ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಟೀಮ್​ ಇಂಡಿಯಾದ ಹೊಸ ಜೆರ್ಸಿ(India’s Jersey T20 World Cup) ಸೋಮವಾರ ಪ್ರಕಟಗೊಂಡಿತ್ತು. ಇದೀಗ ಈ ನೂತನ ಜೆರ್ಸಿ ಕಂಡು ನೆಟ್ಟಿಗರು ಹಲವು ಮೀಮ್ಸ್​ಗಳ ಮೂಲಕ ಟ್ರೋಲ್​ ಮಾಡಲಾರಂಭಿಸಿದ್ದಾರೆ.

ಭಾರತ ತಂಡದ ಕಿಟ್​ ಪ್ರಯೋಜಕತ್ವ ಪಡೆದಿರುವ ಕ್ರೀಡಾ ಉಡುಪುಗಳ ಅಡಿಡಾಸ್​ ಕಂಪೆನಿ, ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಡಾಂಗಣದಲ್ಲಿ ಹೆಲಿಕಾಪ್ಟರ್ ಮೂಲಕ ದೈತ್ಯ ಗಾತ್ರದ ಹೊಸ ಜೆರ್ಸಿಯನ್ನು ಅನಾವರಣ ಮಾಡಲಾಗಿತ್ತು. ರೋಹಿತ್​ ಶರ್ಮ, ರವೀಂದ್ರ ಜಡೇಜಾ ಮತ್ತು ಕುಲ್​ದೀಪ್​ ಯಾದವ್​ ಒಳಗೊಂಡ ವಿಶೇಷ ವಿಡಿಯೊ ಇದಾಗಿತ್ತು.

ಹೊಸ ಜೆರ್ಸಿಯಲ್ಲಿ ರೋಹಿತ್​ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಉಪನಾಯಕ ಹಾರ್ದಿಕ್​ ಪಾಂಡ್ಯ ಅವರ ಎಡಿಟೆಡ್​ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಫೊಟೊ ಕಂಡ ಕೆಲ ನೆಟ್ಟಿಗರು ಇದು ಇಂಡಿಯನ್​ ಆಯಿಲ್​ ಕಂಪೆನಿಯ ಡ್ರೆಸ್​ನಂತಿದೆ,, ಹಾರ್ಫಿಕ್​ ಬಾಟಲ್​ ತರಾ ಇದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಜೀತಾ​ಲಾಲ್​ ಚಂಪಕ್ಲಾಲ್ ಅವರಿಂದ ಸ್ಫೂರ್ತಿ ಪಡೆದು ಈ ಜೆರ್ಸಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯಲ್ಲಿ ಅಂಗಿಯ ಭುಜಗಳು ಕಿತ್ತಳೆ ಬಣ್ಣದಲ್ಲಿದ್ದು, ಮೂರು ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ. ಉಳಿದ ಭಾಗವು ನೀಲಿ ಬಣ್ಣದ್ದಾಗಿದೆ. ಶರ್ಟ್​ನ ಕಾಲರ್​ ಸುತ್ತಲೂ ತ್ರಿವರ್ಣದ ಪಟ್ಟಿ ಹೊಂದಿದೆ. ಬಹುತೇಕ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಈ ಜೆರ್ಸಿ ಅಷ್ಟಾಗಿ ಇಷ್ಟವಾಗಿಲ್ಲ. ಇದೇ ಕಾರಣದಿಂದ ದಯವಿಟ್ಟು ಈ ಜೆರ್ಸಿಯನ್ನು ಬದಲಿಸಿ ಎಂದು ಬಿಸಿಸಿಐಗೆ ಸಲಹೆಯನ್ನೂ ನೀಡಿದ್ದಾರೆ. ಈ ಜೆರ್ಸಿ ಬದಲು 2019ರ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಧರಿಸಿದ್ದ ಜೆರ್ಸಿ ಉತ್ತಮ ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಪ್ರಕಟಗೊಂಡ ಎಲ್ಲ ತಂಡಗಳ ಆಟಗಾರರ ಪಟ್ಟಿ

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading
Advertisement
Dina Bhavishya
ಭವಿಷ್ಯ2 mins ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

70.94 percent voting in Koppal Lok Sabha constituency says Koppal DC Nalin Atul
ಕೊಪ್ಪಳ5 hours ago

Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94ರಷ್ಟು ಮತದಾನ

Rampura PSI Mahesh Hosapete admitted to the hospital Hanagal village road accident injured persons
ಕರ್ನಾಟಕ5 hours ago

Road Accident: ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸಿದ ಪಿಎಸ್‌ಐ

Lok Sabha Election 2024
ಕರ್ನಾಟಕ5 hours ago

Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

Mayawati
ಪ್ರಮುಖ ಸುದ್ದಿ5 hours ago

Mayawati: ನೇಮಿಸಿದ 5 ತಿಂಗಳಲ್ಲೇ ಸೋದರಳಿಯನನ್ನು ಉತ್ತರಾಧಿಕಾರಿ ಹುದ್ದೆಯಿಂದ ತೆಗೆದ ಮಾಯಾವತಿ!

IPL 2024
ಪ್ರಮುಖ ಸುದ್ದಿ5 hours ago

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

Music Festival
ಬೆಂಗಳೂರು6 hours ago

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Amanatullah Khan
ದೇಶ6 hours ago

Amanatullah Khan: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಆಪ್‌ ಎಂಎಲ್‌ಎ ಪುತ್ರನಿಂದ ಹಲ್ಲೆ; ಬಿತ್ತು ಕೇಸ್

Yuzvendra Chahal
ಕ್ರಿಕೆಟ್6 hours ago

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Bescom Helpline
ಕರ್ನಾಟಕ6 hours ago

BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 mins ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ8 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ11 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ13 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌