Donald Trump: ಎರಡು ವರ್ಷಗಳ ನಂತರ ವಾಪಸ್​ ಫೇಸ್​​ಬುಕ್​​ಗೆ ಬಂದ ಡೊನಾಲ್ಡ್​ ಟ್ರಂಪ್​; ’ಐ ಆ್ಯಮ್​ ಬ್ಯಾಕ್’​ ಪೋಸ್ಟ್​ - Vistara News

ವಿದೇಶ

Donald Trump: ಎರಡು ವರ್ಷಗಳ ನಂತರ ವಾಪಸ್​ ಫೇಸ್​​ಬುಕ್​​ಗೆ ಬಂದ ಡೊನಾಲ್ಡ್​ ಟ್ರಂಪ್​; ’ಐ ಆ್ಯಮ್​ ಬ್ಯಾಕ್’​ ಪೋಸ್ಟ್​

ಡೊನಾಲ್ಡ್​ ಟ್ರಂಪ್​ ಅವರು 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ ಅವರು ಹುದ್ದೆಬಿಟ್ಟುಕೊಡಲು ತಕರಾರು ಎತ್ತಿದ್ದರು. ಅವರ ಬೆಂಬಲಿಗರು ಅಮೆರಿಕ ಕ್ಯಾಪಿಟಲ್​ ಕಟ್ಟಡದ ಮೇಲೆ ದಾಳಿಯನ್ನೂ ಮಾಡಿದ್ದರು. ಅದರ ಬೆನ್ನಲ್ಲೇ ಅವರ ಫೇಸ್​​ಬುಕ್​, ಯೂಟ್ಯೂಬ್​​ ನಿರ್ಬಂಧಿಸಲಾಗಿತ್ತು.

VISTARANEWS.COM


on

Donald Trump
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತೇನೆ ಎಂದು ಹೇಳಿರುವ ಅಮೆರಿಕ ರಿಪಬ್ಲಿಕನ್ ಪಕ್ಷದ ನಾಯಕ, ಯುಎಸ್​ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ (Donald Trump)​ ಅವರು ಪ್ರಚಾರದ ಭರಾಟೆಯಲ್ಲಿದ್ದಾರೆ. ಅದರ ಮಧ್ಯೆ ಈಗ ಅವರ ಫೇಸ್​ಬುಕ್​ ಮತ್ತು ಯೂಟ್ಯೂಬ್​​ಗಳೂ ಸಕ್ರಿಯಗೊಂಡಿವೆ. 2021ರಲ್ಲಿ ಅಧ್ಯಕ್ಷ ಸ್ಥಾನ ಕಳೆದುಕೊಂಡ ಬಳಿಕ ಟ್ರಂಪ್​ ಅವ್ಯವಸ್ಥೆ ಸೃಷ್ಟಿಸಿದ್ದರು. ಅವರ ಬೆಂಬಲಿಗರು ಅಮೆರಿಕ ಕ್ಯಾಪಿಟಲ್​ ಕಟ್ಟಡದ ಮೇಲೆ ದಾಳಿ ಮಾಡಿದ್ದರು. ಅದಕ್ಕೆ ಡೊನಾಲ್ಡ್​ ಟ್ರಂಪ್​ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್​ಗಳೇ ಕಾರಣ. ಇದರಿಂದಲೇ ಪ್ರಚೋದನೆ ಪಡೆದು ಬೆಂಬಲಿಗರು ದಾಳಿ ಮಾಡಿದ್ದಾರೆ ಎನ್ನಲಾಗಿತ್ತು. ಹೀಗಾಗಿ 2021ರ ಜನವರಿ 6ರಿಂದಲೇ ಟ್ರಂಪ್​ ಅವರ ಫೇಸ್​​ಬುಕ್​ ಮತ್ತು ಯೂಟ್ಯೂಬ್​​ಗಳನ್ನು ನಿರ್ಬಂಧಿಸಲಾಗಿತ್ತು. 2023ರವರೆಗೆ ಈ ನಿಷೇಧ ಮುಂದುವರಿಯುವುದಾಗಿ ಹೇಳಿತ್ತು. ಅದೀಗ ಮತ್ತೆ ಸಕ್ರಿಯಗೊಂಡಿದೆ.

ಫೇಸ್​ಬುಕ್ ಮತ್ತು ಯೂಟ್ಯೂಬ್​​ಗಳು ಸಕ್ರಿಯಗೊಂಡ ಬೆನ್ನಲ್ಲೇ ಟ್ರಂಪ್​ ಅದರಲ್ಲಿ ಪೋಸ್ಟ್​/ವಿಡಿಯೊಗಳನ್ನು ಹಾಕಿದ್ದಾರೆ. ಫೇಸ್​​ಬುಕ್​​ನಲ್ಲಿ “I’M BACK!” ಎಂದು ಪೋಸ್ಟ್ ಹಾಕಿದ್ದರೆ, ಯೂಟ್ಯೂಬ್​​ನಲ್ಲಿ ಒಂದು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಹಾಗೇ, 2016ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಹಿಲರಿ ಕ್ಲಿಂಟನ್​ ವಿರುದ್ಧ ತಾವು ಗೆದ್ದಿದ್ದನ್ನು ತೋರಿಸುವ ವಿಡಿಯೊವೊಂದನ್ನು ಅವರು ಯೂಟ್ಯೂಬ್​ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಡೊನಾಲ್ಡ್​ ಟ್ರಂಪ್​ ಅವರ ಟ್ವಿಟರ್​ ಮತ್ತು ಇನ್​ಸ್ಟಾಗ್ರಾಂ ಖಾತೆಗಳೂ ನಿರ್ಬಂಧಗೊಂಡಿದ್ದವು. ಅದರಲ್ಲಿ ಟ್ವಿಟರ್​ ಖಾತೆ ಕಳೆದ ವರ್ಷ ನವೆಂಬರ್​ನಲ್ಲಿಯೇ ಮರುಸ್ಥಾಪನೆಗೊಂಡಿದೆ. ಎಲಾನ್​ ಮಸ್ಕ್​ ಟ್ವಿಟರ್​ ಖರೀದಿ ಮಾಡಿದ ತಕ್ಷಣವೇ ಟ್ರಂಪ್​ ಖಾತೆ ಚಾಲ್ತಿಗೆ ಬಂದಿತ್ತು. ಇನ್​ಸ್ಟಾಗ್ರಾಂ ಅಕೌಂಟ್​ ಈ ವರ್ಷದ ಪ್ರಾರಂಭದಲ್ಲಿಯೇ ಮರುಸ್ಥಾಪನೆಗೊಂಡಿದೆ.

2016ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಡೊನಾಲ್ಡ್ ಟ್ರಂಪ್​ ಅವರು ತಮ್ಮ ಸೋಷಿಯಲ್ ಮೀಡಿಯಾಗಳನ್ನು ಅದ್ಭುತವಾಗಿ ಸದ್ಬಳಕೆ ಮಾಡಿಕೊಂಡಿದ್ದರು. ಅವರ ಬೆಂಬಲಿಗರು, ಅನುಯಾಯಿಗಳನ್ನು ತಲುಪಲು ಇದನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದರು. ಈಗ 2024ರ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷೀಯ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದಾರೆ. ಮತ್ತೀಗ ಅವರ ಸೋಷಿಯಲ್ ಮೀಡಿಯಾಗಳೂ ಮರುಸ್ಥಾಪನೆಗೊಂಡಿದೆ. ಇದು ಟ್ರಂಪ್​​ಗೆ ಚುನಾವಣಾ ಪ್ರಚಾರಕ್ಕೆ ಮತ್ತೊಂದು ಕೈ ಬಲ ಸಿಕ್ಕಂತಾಗಿದೆ.

ತಮ್ಮ ಸೋಷಿಯಲ್ ಮೀಡಿಯಾಗಳೆಲ್ಲ ನಿರ್ಬಂಧಗೊಂಡಾಕ್ಷಣ ಡೊನಾಲ್ಡ್ ಟ್ರಂಪ್​ ಸುಮ್ಮನೆ ಕುಳಿತಿರಲಿಲ್ಲ. 2021ರ ವರ್ಷಾಂತ್ಯದಲ್ಲಿ ಅವರು ತಮ್ಮದೇ ಆದ ಒಂದು ಸಾಮಾಜಿಕ ಮಾಧ್ಯಮವನ್ನು ಸೃಷ್ಟಿಸಿಕೊಂಡಿದ್ದರು. ಅದಕ್ಕೆ Truth Social ಎಂದು ಹೆಸರಿಡಲಾಗಿತ್ತು. ಅವರು ಈ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಬೆಂಬಲಿಗರು, ಅಭಿಮಾನಿ/ಅನುಯಾಯಿಗಳೊಟ್ಟಿಗೆ ಸಂವಹನ ನಡೆಸುತ್ತಿದ್ದರು. ಅವರೊಂದಿಗೆ ಸಂಪರ್ಕದಲ್ಲಿದ್ದರು.

ಯೂಟ್ಯೂಬ್​ ಪ್ರತಿಕ್ರಿಯೆ ಏನು?
ಡೊನಾಲ್ಡ್​ ಟ್ರಂಪ್​ ಅವರ ಯೂಟ್ಯೂಬ್​ ಅಕೌಂಟ್​ ಮರುಸ್ಥಾಪಿಸಿದ ಬಗ್ಗೆ ಟ್ವೀಟ್ ಮಾಡಿರುವ ಯೂಟ್ಯೂಬ್​, ‘ಹಿಂಸಾತ್ಮಕ, ಪ್ರಚೋದನಾತ್ಮಕ ವಿಡಿಯೊಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ನಾವು ಎಚ್ಚರಿಕೆ ವಹಿಸುತ್ತಿದ್ದೇವೆ. ಇದೇ ಕಾರಣಕ್ಕೆ ಟ್ರಂಪ್​ ಅಕೌಂಟ್​ ನಿರ್ಬಂಧಿಸಲಾಗಿತ್ತು. ಆದರೆ ಯಾವುದೇ ಮಹತ್ವದ ಚುನಾವಣೆ ಪೂರ್ವದಲ್ಲಿ ಪ್ರಮುಖ ಅಭ್ಯರ್ಥಿಗಳಿಗೆ ಸೋಷಿಯಲ್ ಮೀಡಿಯಾ ಬಳಕೆ ಮಾಡಲು ಸಮತೋಲಿತವಾಗಿ ಅವಕಾಶ ನೀಡುವ ಸಲುವಾಗಿ ನಿರ್ಬಂಧ ತೆರವುಗೊಳಿಸಲಾಗಿದೆ’ ಎಂದು ಹೇಳಿದೆ.

ಇದನ್ನೂ ಓದಿ: Donald Trump: ಮೂರನೇ ಮಹಾಯುದ್ಧ ತಡೆಯುವ ಶಕ್ತಿ ಇರುವುದು ನನಗೆ ಮಾತ್ರ ಎಂದ ಡೊನಾಲ್ಡ್​ ಟ್ರಂಪ್​!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Nijjar Killing: 2023ರ ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಇದರ ಬೆನ್ನಲ್ಲೇ, ಹತ್ಯೆ ಮಾಡಿದ ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

VISTARANEWS.COM


on

Nijjar Killing
Koo

ಒಟ್ಟಾವ: ಖಲಿಸ್ತಾನಿ ಉಗ್ರರ ಪರವಾಗಿರುವ ಕೆನಡಾ ಸರ್ಕಾರವೀಗ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯ (Nijjar Killing) ಆರೋಪಿಗಳನ್ನು ಬಂಧಿಸಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ತಂಡದಲ್ಲಿದ್ದ ಕೆಲವು ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಯಾರನ್ನು ಬಂಧಿಸಲಾಗಿದೆ ಎಂಬುದರ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

ಕೆನಡಾ ಸರ‍್ರೆಯಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಹತ್ಯೆ ಮಾಡಿದವರು ಭಾರತದ ಏಜೆಂಟ್‌ಗಳು ನೇಮಿಸಿದವರೇ ಆಗಿದ್ದಾರೆ ಎಂಬುದಾಗ ಕೆನಡಾ ಆರೋಪಿಸಿದೆ. ಆದರೆ, ಹತ್ಯೆ ಮಾಡಿದ ತಂಡದ ಸದಸ್ಯರನ್ನೇ ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೊಂದವರು ಯಾರು? ಅವರು ಭಾರತದ ಮೂಲದವರಾ? ಅವರು ನೀಡಿದ ಮಾಹಿತಿ ಏನು ಎಂಬ ಮಾಹಿತಿಯು ಕೆನಡಾ ಪೊಲೀಸರಿಂದಲೇ ಹೊರಬರಬೇಕಿದೆ. ಹತ್ಯೆ ಮಾಡಿದ ತಂಡದವರು ಎನ್ನಲಾದ ಮೂವರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

2023ರ ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ನಾನು ಭಾರತದ ಜತೆ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದರು. ಆದರೆ, ಭಾರತ ಮಾತ್ರ ಸರಿಯಾದ ಸಾಕ್ಷ್ಯ ಕೊಡಿ ಎಂದು ಹೇಳಿದೆ.

ಇದನ್ನೂ ಓದಿ: Khalistan terrorist: ʼನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿಲ್ಲʼ ಎಂದ ನ್ಯೂಜಿಲ್ಯಾಂಡ್‌ ಉಪಪ್ರಧಾನಿಗೇ ಬೆದರಿಕೆ ಹಾಕಿದ ಪನ್ನುನ್!‌

Continue Reading

ವಿದೇಶ

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

ಚೀನಾದ ಶಾಂಘೈ ವಿಶ್ವವಿದ್ಯಾಲಯ ಎಸ್‌ಜೆಟಿಯು ಹಾಗೂ ಪಾಕಿಸ್ತಾನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸುಪಾರ್ಕೊ ಜತೆಗೂಡಿ ಚಂದ್ರಯಾನ ಮಿಷನ್‌ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಚೀನಾದ ನೆರವಿನಿಂದ ಮೊದಲ ಚಂದ್ರಯಾನ ಕೈಗೊಂಡಿರುವ ಪಾಕಿಸ್ತಾನವು ಭಾರತಕ್ಕಿಂತ 16 ವರ್ಷ ಹಿಂದಿದೆ ಎಂಬುದು ಸಾಬೀತಾಗಿದೆ.

VISTARANEWS.COM


on

Pakistan
Koo

ಇಸ್ಲಾಮಾಬಾದ್:‌ ಆರ್ಥಿಕವಾಗಿ ದಿವಾಳಿಯಾಗಿರುವ, ಉತ್ತಮ ನಾಯಕ ಸಿಗದೆ ಆಡಳಿತಾತ್ಮಕವಾಗಿಯೂ ಅರಾಜಕತೆಯಿಂದ ಕೂಡಿರುವ, ಉಗ್ರರ ಪೋಷಣೆಗಾಗಿ ಜಾಗತಿಕವಾಗಿ ಹಣಕಾಸು ನೆರವು ಸಿಗದೆ ಒದ್ಡಾಡುತ್ತಿರುವ ಪಾಕಿಸ್ತಾನವೀಗ (Pakistan) ಚೀನಾದ (China) ನೆರವಿನಿಂದ ಮೊದಲ ಚಂದ್ರಯಾನ (Pakistan Lunar Mission) ಕೈಗೊಂಡಿದೆ. ಚೀನಾದ ನೆರವಿನಿಂದ ಪಾಕಿಸ್ತಾನ ಕೈಗೊಂಡಿರುವ ಚಂದ್ರಯಾನವು ಚಂದ್ರನ ಮೇಲ್ಮೈ ಕುರಿತು ಅಧ್ಯಯನ ನಡೆಸಲಿದೆ ಎಂದು ತಿಳಿದುಬಂದಿದೆ.

ಸುಮಾರು 53 ದಿನಗಳವರೆಗೆ ಪಾಕಿಸ್ತಾನದ ಚಂದ್ರಯಾನದ ಉಪಗ್ರಹವು ಚಂದ್ರನ ಮೇಲ್ಮೈ ಕುರಿತು ಅಧ್ಯಯನ ಮಾಡಲಿದೆ. ಚಂದ್ರಯಾನದ ಉಡಾವಣೆ ಯಶಸ್ವಿಯಾಗುತ್ತಲೇ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ದೇಶದ ಜನರಿಗೆ ಹಾಗೂ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಅಣ್ವಸ್ತ್ರದಲ್ಲಿ ಹೇಗೆ ಪಾಕಿಸ್ತಾನದ ವಿಜ್ಞಾನಿಗಳು ಪಾರಮ್ಯ ಸಾಧಿಸಿದ್ದರೋ, ಅದೇ ರೀತಿ ಬಾಹ್ಯಾಕಾಶ ಕ್ಷೇತ್ರದಲ್ಲೂ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದು ದೇಶವೇ ಹೆಮ್ಮೆ ಪಡುವ ವಿಚಾರವಾಗಿದೆ” ಎಂಬುದಾಗಿ ನೂತನ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೀನಾದ ಶಾಂಘೈ ವಿಶ್ವವಿದ್ಯಾಲಯ ಎಸ್‌ಜೆಟಿಯು ಹಾಗೂ ಪಾಕಿಸ್ತಾನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸುಪಾರ್ಕೊ ಜತೆಗೂಡಿ ಚಂದ್ರಯಾನ ಮಿಷನ್‌ ಕೈಗೊಳ್ಳಲಾಗಿದೆ. ಐಕ್ಯೂಬ್‌-ಕ್ಯೂ ಸ್ಯಾಟಲೈಟ್‌ (iCube-Q Satellite) ಎರಡು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಇವು ಚಂದ್ರನ ಮೇಲ್ಮೈ ಫೋಟೊಗಳನ್ನು ಕಳುಹಿಸಲಿವೆ. ಇದು ಚೀನಾದ ಆರನೇ ಚಂದ್ರಯಾನವಾಗಿದ್ದು, ಚಂದ್ರನ ಅಂಗಳದಲ್ಲಿರುವ ಮಣ್ಣು ಹಾಗೂ ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

ಭಾರತಕ್ಕಿಂತ ಪಾಕ್‌ 16 ವರ್ಷ ಹಿಂದೆ

ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಚೀನಾದ ನೆರವಿನಿಂದ ಮೊದಲ ಚಂದ್ರಯಾನ ಕೈಗೊಂಡಿರುವ ಪಾಕಿಸ್ತಾನವು ಭಾರತಕ್ಕಿಂತ 16 ವರ್ಷ ಹಿಂದಿದೆ ಎಂಬುದು ಸಾಬೀತಾಗಿದೆ. ಭಾರತದ ಇಸ್ರೋ 2008ರಲ್ಲಿ ಮೊದಲ ಬಾರಿಗೆ ಚಂದ್ರಯಾನ ಕೈಗೊಂಡು ಯಶಸ್ವಿಯಾಗಿತ್ತು. ಈಗ ಭಾರತವು ಮೂರನೇ ಬಾರಿ ಚಂದ್ರಯಾನ ಕೈಗೊಂಡಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಲ್ಯಾಂಡರ್‌ ಹಾಗೂ ರೋವರ್‌ಗಳನ್ನು ಸಾಫ್ಟ್‌ ಲ್ಯಾಂಡ್‌ ಮಾಡಿದ ಮೊದಲ ದೇಶ ಎಂಬ ಖ್ಯಾತಿಗೆ ಭಾಜನವಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್‌ ಬಚಾವ್‌ ಆಗಿದ್ದು ಹೇಗೆ?

Continue Reading

ದೇಶ

Rachita Taneja: ಭಾರತದ ಕಾರ್ಟೂನಿಸ್ಸ್ ರಚಿತಾ ತನೇಜಾಗೆ ಕೋಫಿ ಅನ್ನಾನ್‌ ಪ್ರಶಸ್ತಿ ಗರಿ

Rachita Taneja: ಅಂತಾರಾಷ್ಟ್ರೀಯ ಮಾಧ್ಯಮ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತದ ರಚಿತಾ ತನೇಜಾ ಹಾಗೂ ಜುಂಜಿ ಅವರಿಗೆ ಕೋಫಿ ಅನ್ನಾನ್‌ ಕರೇಜ್‌ ಇನ್‌ ಕಾರ್ಟೂನಿಂಗ್‌ ಅವಾರ್ಡ್‌ ನೀಡಲಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಪಡೆದವರು ಯಾರು, ಅವರ ಹಿನ್ನೆಲೆ ಏನು ಎಂಬುದು ಸೇರಿ ಹಲವು ಮಾಹಿತಿ ಇಲ್ಲಿದೆ.

VISTARANEWS.COM


on

Rachita Taneja
Koo

ನವದೆಹಲಿ: ಭಾರತದ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದೆ, ಮೊನಚು ಕಾರ್ಟೂನ್‌ಗಳ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ರಚಿತಾ ತನೇಜಾ (Rachita Taneja) ಅವರಿಗೆ ಪ್ರತಿಷ್ಠಿತ ‘ಕೋಫಿ ಅನ್ನಾನ್‌ ಕರೇಜ್‌ ಇನ್‌ ಕಾರ್ಟೂನಿಂಗ್‌ ಅವಾರ್ಡ್‌’ (Kofi Annan Courage in Cartooning Award) ಲಭಿಸಿದೆ. ರಚಿತಾ ತನೇಜಾ ಹಾಗೂ ಹಾಂಕಾಂಗ್‌ನ ಜುಂಜಿ ಅವರಿಗೆ (Zunzi) ಅವರಿಗೆ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಾಧ್ಯಮ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತದ ರಚಿತಾ ತನೇಜಾ ಹಾಗೂ ಜುಂಜಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಮೊನಚು ಕಾರ್ಟೂನ್‌ಗಳ ಮೂಲಕವೇ ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿದ, ಜನರಲ್ಲಿ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ಇವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತವು 180 ರಾಷ್ಟ್ರಗಳ ಪಟ್ಟಿಯಲ್ಲಿ 161ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಹಾಂಕಾಂಗ್‌ 140ನೇ ಸ್ಥಾನದಲ್ಲಿದೆ.

ಯಾರಿವರು ರಚಿತಾ ತನೇಜಾ?

ರಚಿತಾ ತನೇಜಾ ಅವರು ಕಾರ್ಟೂನಿಸ್ಟ್‌ ಆಗಿದ್ದು, ಸ್ಯಾನಿಟರಿ ಪ್ಯಾನೆಲ್ಸ್‌ ಎಂಬ ವೆಬ್‌ಕಾಮಿಕ್‌ ಆನ್‌ಲೈನ್‌ ವೇದಿಕೆ ಮೂಲಕವೇ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಾರೆ. ಕಿರುಕುಳ, ಹೆಣ್ಣುಮಕ್ಕಳ ಮುಟ್ಟು, ಸರ್ವಾಧಿಕಾರ ಸೇರಿ ಹಲವು ವಿಷಯಗಳ ಕುರಿತು ಇವರ ಕಾರ್ಟೂನ್‌ಗಳು ಚರ್ಚೆಯನ್ನು ಹುಟ್ಟುಹಾಕಿವೆ. ಇವರ ವಿರುದ್ಧ ಎಬಿವಿಪಿ ಕೇಸ್‌ ಕೂಡ ದಾಖಲಿಸಿದೆ. ನ್ಯಾಯಾಂಗ ನಿಂದನೆಯ ಪ್ರಕರಣದ ವಿಚಾರಣೆಯೂ ನಡೆಯುತ್ತಿದ್ದು, ಪ್ರಕರಣ ಸಾಬೀತಾದರೆ ಇವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

“ಮುಖ್ಯವಾಹಿನಿಯಲ್ಲಿರುವ ಪತ್ರಕರ್ತರು ಪಾರದರ್ಶಕವಾಗಿ ಕೆಲಸ ಮಾಡಲು ಆಗದಿದ್ದರೆ ಅಥವಾ ಅವರು ಆಡಳಿತ ಪಕ್ಷದಿಂದ ಪ್ರಭಾವಿತರಾಗಿದ್ದರೆ, ಅಂತಹ ಸಂದರ್ಭದಲ್ಲಿ ಕಾರ್ಟೂನಿಸ್ಟ್‌ಗಳು ಮಾಧ್ಯಮ ಸ್ವಾತಂತ್ರ್ಯವನ್ನು ಮುನ್ನಡೆಸಬೇಕು, ನಿಷ್ಪಕ್ಷಪಾತವಾಗಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಬೇಕು” ಎಂಬುದಾಗಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ರಚಿತಾ ತನೇಜಾ ಹೇಳಿದರು. ಹಾಂಕಾಂಗ್‌ನ ಜುಂಜಿ ಅವರು ಪತ್ರಿಕೆಯೊಂದರಲ್ಲಿ ಕಾರ್ಟೂನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಚೀನಾ ನೂತನ ಭದ್ರತಾ ಕಾನೂನುಗಳನ್ನು ಅಳವಡಿಸಿಕೊಂಡ ಬಳಿಕ ಪತ್ರಿಕೆಯು ಇವರನ್ನು ಕೆಲಸದಿಂದ ವಜಾಗೊಳಿಸಿತ್ತು.

ಇದನ್ನೂ ಓದಿ: Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Continue Reading

ದೇಶ

2026ರಲ್ಲಿ ಭಾರತ ಪೀಸ್‌ ಪೀಸ್‌ ಆಗುತ್ತದೆ ಎಂದ ಪಾಕ್‌ ಮಾಜಿ ಸಂಸದ; ಮೋದಿ ಹಿಂದುತ್ವವೂ ಪತನ ಎಂದು ಹೇಳಿಕೆ!

ಫೈಸಲ್‌ ರಾಜಾ ಅಬಿದಿ ಎಂಬ ಪಾಕಿಸ್ತಾನದ ಮಾಜಿ ಸಂಸದನು ಭಾರತದ ಕುರಿತು ದುರಹಂಕಾರದ ಮಾತುಗಳನ್ನಾಡಿದ್ದಾನೆ. “ಭಾರತದ ಸಂಸತ್ತಿನಲ್ಲಿ ಅಖಂಡ ಭಾರತ ಕಲ್ಪನೆಯ ನಕ್ಷೆ ಹಾಕಲಾಗಿದೆ. ಈ ನಕ್ಷೆಯಲ್ಲಿ ನೇಪಾಳ, ಶ್ರೀಲಂಕಾ, ಭೂತಾನ್‌ ಹಾಗೂ ಪಾಕಿಸ್ತಾನವೂ ಸೇರಿದೆ. ಆದರೆ, ಒಂದು ಮಾತು ನೆನಪಿರಲಿ. 2026ರ ನವೆಂಬರ್‌ನಲ್ಲಿ ಭಾರತವು ಚೂರು ಚೂರಾಗುತ್ತದೆ” ಎಂದು ಟಿವಿ ಸಂದರ್ಶನದ ವೇಳೆ ಹೇಳಿದ್ದಾನೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

VISTARANEWS.COM


on

Faisal Raza Abidi
Koo

ಇಸ್ಲಾಮಾಬಾದ್:‌ ಅಸಮರ್ಥ ನಾಯಕತ್ವ, ಉಗ್ರರ ಪೋಷಣೆ, ರಾಜಕೀಯ ಅರಾಜಕತೆ, ಧಾರ್ಮಿಕ ಮೂಲಭೂತವಾದ, ಸೇನೆಯ ಸರ್ವಾಡಳಿತ ಸೇರಿ ಹಲವು ಕಾರಣಗಳಿಂದಾಗಿ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನವು ಹಣಕಾಸು ನೆರವಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಇಷ್ಟಿದ್ದರೂ ಅಲ್ಲಿನ ನಾಯಕರು ಮಾತ್ರ ಅಹಂಕಾರದ ಮಾತುಗಳನ್ನಾಡುವುದು, ಭಾರತದ ವಿರುದ್ಧ ಉದ್ಧಟತನದ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, “2026ರ ನವೆಂಬರ್‌ನಲ್ಲಿ ಭಾರತವು (India) ತುಂಡು ತುಂಡಾಗುತ್ತದೆ” ಎಂಬುದಾಗಿ ಪಾಕಿಸ್ತಾನದ (Pakistan) ಮಾಜಿ ಸಂಸದನೊಬ್ಬ (Pakistan ex Senator) ನಾಲಗೆ ಹರಿಬಿಟ್ಟಿದ್ದಾನೆ.

ಸುದ್ದಿವಾಹಿನಿಯೊಂದರ ಜತೆ ಮಾತನಾಡುವ ವೇಳೆ ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಫೈಸಲ್‌ ರಾಜಾ ಅಬಿದಿ (Faisal Raza Abidi) ಎಂಬ ಮಾಜಿ ಸಂಸದನು ದುರಹಂಕಾರದ ಮಾತುಗಳನ್ನಾಡಿದ್ದಾನೆ. “ಭಾರತದ ಸಂಸತ್ತಿನಲ್ಲಿ ಅಖಂಡ ಭಾರತ ಕಲ್ಪನೆಯ ನಕ್ಷೆ ಹಾಕಲಾಗಿದೆ. ಈ ನಕ್ಷೆಯಲ್ಲಿ ನೇಪಾಳ, ಶ್ರೀಲಂಕಾ, ಭೂತಾನ್‌ ಹಾಗೂ ಪಾಕಿಸ್ತಾನವೂ ಸೇರಿದೆ. ಆದರೆ, ಒಂದು ಮಾತು ನೆನಪಿರಲಿ. 2026ರ ನವೆಂಬರ್‌ನಲ್ಲಿ ಭಾರತವು ಚೂರು ಚೂರಾಗುತ್ತದೆ. ನರೇಂದ್ರ ಮೋದಿ ಅವರ ಹಿಂದುತ್ವ ಅಜೆಂಡಾ ಕೂಡ ಪತನವಾಗುತ್ತದೆ” ಎಂದು ಹೇಳಿದ್ದಾನೆ.

“ಅಖಂಡ ಭಾರತ ಕಲ್ಪನೆಯ ಕುರಿತು ಪಾಕಿಸ್ತಾನ ಮಾತನಾಡಿದರೆ ತಮಾಷೆ ಮಾಡುತ್ತಾರೆ. ಆದರೆ, 2026ರ ನವೆಂಬರ್‌ 26ರಂದು ಅಲ್ಲಾ ಪಾಕಿಸ್ತಾನದ ಪರವಾಗಿರುತ್ತಾನೆ. ಅಂದು ನಡೆಯುವ ಘಟನೆಯು ನಿಮ್ಮನ್ನು ಅಚ್ಚರಿಯ ಮಡುವಿನಲ್ಲಿ ಬೀಳಿಸುತ್ತದೆ. ಮೋದಿ ಹಿಂದುತ್ವದಿಂದ ಹೊರಗೆ ಬರಲಿರುವ ಜನ, ಪ್ರಾಣ ಉಳಿದರೆ ಸಾಕು ಎಂದು ಹೇಳುತ್ತಾರೆ. ಪಾಕಿಸ್ತಾನದ ಶಸ್ತ್ರಾಸ್ತ್ರಗಳು ಹಾಗೂ ಮಾನವ ಸಂಪನ್ಮೂಲವು ಭಾರತದ ನಾಶಕ್ಕೆ ಸಿದ್ಧವಾಗಿದೆ. ನರೇಂದ್ರ ಮೋದಿ ಆಡಳಿತದಲ್ಲಿಯೇ ಭಾರತ ತುಂಡು ತುಂಡಾಗುವುದೇ ಮುಖ್ಯ” ಎಂಬುದಾಗಿ ಎಲುಬಿಲ್ಲದ ನಾಲಗೆ ಹರಿಬಿಟ್ಟಿದ್ದಾನೆ.

“ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಅವರ ಪ್ರತಿಪಾದನೆಗೆ ಜನರಿಂದ ಅಪಾರ ಬೆಂಬಲವೂ ವ್ಯಕ್ತವಾಗುತ್ತಿದೆ. ಹಾಗಾಗಿ, ಭಾರತವು ಚೂರು ಚೂರು ಆಗುವುದು ಮುಖ್ಯ” ಎಂಬುದಾಗಿ ಅಬಿದಿ ಹೇಳಿದ್ದಾನೆ. ಆ ಮೂಲಕ ಭಾರತದ ಮೇಲೆ ಪಾಕಿಸ್ತಾನವು ಶಸ್ತ್ರಾಸ್ತ್ರಗಳ ಸಮೇತ ದಾಳಿ ಮಾಡುತ್ತದೆ ಎಂಬುದರ ಮುನ್ಸೂಚನೆ ನೀಡಿದ್ದಾನೆ. ಇದುವರೆಗೆ ಭಾರತದ ವಿರುದ್ಧ ನಾಲ್ಕು ಬಾರಿ ಯುದ್ಧಕ್ಕಿಳಿದಿರುವ ಪಾಕಿಸ್ತಾನವು, ನಾಲ್ಕಕ್ಕೆ ನಾಲ್ಕು ಬಾರಿಯೂ ಹೀನಾಯವಾಗಿ ಸೋಲುಂಡಿದೆ. ಇನ್ನು ಮೋದಿ ಆಡಳಿತದಲ್ಲಿ 2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌, 2019ರ ಪುಲ್ವಾಮ ದಾಳಿಗೆ ಪ್ರತಿಯಾಗಿ ಬಾಲಾಕೋಟ್‌ ವಾಯುದಾಳಿ ಮೂಲಕ ಪಾಕಿಸ್ತಾನದ ಉಗ್ರರನ್ನು ಹಿಮ್ಮೆಟ್ಟಿಸಲಾಗಿದೆ. ಹೀಗಿದ್ದರೂ, ಪಾಕಿಸ್ತಾನದ ನಾಯಕರು ಭಾರತದ ವಿಚಾರದಲ್ಲಿ ಹಗುರವಾಗಿ ಮಾತನಾಡುವುದನ್ನು ಬಿಟ್ಟಿಲ್ಲ ಎಂಬುದಕ್ಕೆ ಇದೇ ನಿದರ್ಶನವಾಗಿದೆ.

ಇದನ್ನೂ ಓದಿ: Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

Continue Reading
Advertisement
Rain News
ಕರ್ನಾಟಕ2 hours ago

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ನವ ವಿವಾಹಿತ ಸಾವು, ಕಾರ್ಮಿಕನ ಸ್ಥಿತಿ ಗಂಭೀರ

ಪ್ರಮುಖ ಸುದ್ದಿ2 hours ago

IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

Nijjar Killing
ವಿದೇಶ2 hours ago

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Rohith Vemula
ದೇಶ2 hours ago

Rohith Vemula: ರೋಹಿತ್‌ ವೇಮುಲ ದಲಿತನಲ್ಲ ಎಂದ ಪೊಲೀಸರು; ಮರು ತನಿಖೆಗೆ ‘ಕೈ’ ಸರ್ಕಾರ ಆದೇಶ!

Rinku Singh
ಪ್ರಮುಖ ಸುದ್ದಿ2 hours ago

Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

honour killing
ವಿಜಯಪುರ2 hours ago

Honor Killing: ಮರ್ಯಾದೆಗಾಗಿ ಗರ್ಭಿಣಿಯನ್ನು ಸುಟ್ಟು ಕೊಂದ ಇಬ್ಬರಿಗೆ ಗಲ್ಲು ಶಿಕ್ಷೆ, 6 ಮಂದಿಗೆ ಜೀವಾವಧಿ‌ ಶಿಕ್ಷೆ

Pakistan
ವಿದೇಶ3 hours ago

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

T20 World Cup
ಪ್ರಮುಖ ಸುದ್ದಿ3 hours ago

T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

Health Tips Kannada
ಆರೋಗ್ಯ3 hours ago

Health Tips Kannada : ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು?

Meeting with representatives of various political parties about MLC election in Hosapete
ವಿಜಯನಗರ3 hours ago

Vijayanagara News: ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆ; ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ9 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ21 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌