ವಿದೇಶ
Donald Trump: ಮೂರನೇ ಮಹಾಯುದ್ಧ ತಡೆಯುವ ಶಕ್ತಿ ಇರುವುದು ನನಗೆ ಮಾತ್ರ ಎಂದ ಡೊನಾಲ್ಡ್ ಟ್ರಂಪ್!
ಬೈಡೆನ್ ಸರ್ಕಾರ ಅಮೆರಿಕವನ್ನು ಪರಮಾಣು ಯುದ್ಧದತ್ತ ಕೊಂಡೊಯ್ಯುತ್ತಿದೆ. ಇದು ಮೂರನೇ ಮಹಾಯುದ್ಧವಾಗಿ ಜಗತ್ತೇ ನಾಶವಾಗಬಹುದು. ಆಡಳಿತದಲ್ಲಿ ಇರುವವರು ಸರಿಯಾಗಿ ವರ್ತಿಸುತ್ತಿಲ್ಲ ಎಂದು ಟ್ರಂಪ್ ವಾಗ್ದಾಳಿ ನಡೆಸಿದರು.
ವಾಷಿಂಗ್ಟನ್: 2024ರಲ್ಲಿ ನಡೆಯಲಿರುವ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವುದಾಗಿ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ (Donald Trump) ಈಗಾಗಲೇ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿರುವ ಅವರು ಹಲವೆಡೆ ಪ್ರಚಾರ, ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ. ಸೋಮವಾರ ಅಯೋವಾದ ಡೇವನ್ಪೋರ್ಟ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಡೊನಾಲ್ಡ್ ಟ್ರಂಪ್ ‘ಮೂರನೇ ಮಹಾಯುದ್ಧವನ್ನು ತಡೆಯಬಲ್ಲ ಶಕ್ತಿ ಇರುವುದು ನನಗೆ ಮಾತ್ರ’ ಎಂದು ಹೇಳಿದರು.
ಚುನಾವಣಾ ಪ್ರಚಾರದ ವೇಳೆ, ಈಗಿನ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ವಾಕ್ ಪ್ರಹಾರ ನಡೆಸಿದ ಡೊನಾಲ್ಡ್ ಟ್ರಂಪ್ ‘ಜಗತ್ತಿನಲ್ಲಿ ಮೂರನೇ ಮಹಾಯುದ್ಧ ನಡೆಯುವುದು ಗ್ಯಾರೆಂಟಿ. ಆದರೆ ಅದನ್ನು ತಪ್ಪಿಸುವ ಸಾಮರ್ಥ್ಯ ಇರುವುದು ನನಗೆ ಮಾತ್ರ. ನಾನು ಅಮೆರಿಕವನ್ನು ಎಲ್ಲ ರೀತಿಯಿಂದಲೂ ರಕ್ಷಿಸಬಲ್ಲೆ’ ಎಂದು ಹೇಳಿದರು. ಡೊನಾಲ್ಡ್ ಟ್ರಂಪ್ ಹೀಗೆ ಹೇಳುತ್ತಿದ್ದಂತೆ ನೆರೆದಿದ್ದ ಜನರು ದೊಡ್ಡದಾಗಿ, ಉತ್ಸಾಹದಿಂದ ಘೋಷಣೆ ಕೂಗಿದರು.
‘ಜೋ ಬೈಡೆನ್ ಆಡಳಿತ ಸಮರ್ಪಕವಾಗಿಲ್ಲ. ಇವರಿಂದಾಗಿ ರಷ್ಯಾ ದೇಶ ಚೀನಾದ ತೆಕ್ಕೆಗೆ ಜಾರುತ್ತಿದೆ. ಈ ಸರ್ಕಾರ ಅಮೆರಿಕವನ್ನು ಪರಮಾಣು ಯುದ್ಧದತ್ತ ಕೊಂಡೊಯ್ಯುತ್ತಿದೆ. ಇದು ಮೂರನೇ ಮಹಾಯುದ್ಧವಾಗಿ ಜಗತ್ತೇ ನಾಶವಾಗಬಹುದು. ಆಡಳಿತದಲ್ಲಿ ಇರುವವರು ಸರಿಯಾಗಿ ವರ್ತಿಸುತ್ತಿಲ್ಲ. ಒಳ್ಳೆಯರ ರೀತಿಯಿಂದ ಮಾತನಾಡಬೇಕಾದಲ್ಲಿ, ಕಠಿಣವಾದ ನಿಲುವು ತಳೆಯುತ್ತಿದ್ದಾರೆ. ಕಠಿಣತೆ ಪ್ರದರ್ಶಿಸಬೇಕಾದಲ್ಲಿ ತುಂಬ ವಿಧೇಯತೆ, ಒಳ್ಳೆಯತನ ತೋರಿಸುತ್ತಿದ್ದಾರೆ. ಅವರೇನು ಮಾಡುತ್ತಿದ್ದಾರೆ ಎಂಬುದು ನಿಜಕ್ಕೂ ಗೊತ್ತಾಗುತ್ತಿಲ್ಲ. ಖಂಡಿತ ಇದು ನಮ್ಮನ್ನು ವಿಶ್ವ ಯುದ್ಧದ ಅಂಚಿಗೇ ಕೊಂಡೊಯ್ಯುತ್ತದೆ. ಆದರೆ ನಾನು ಅದನ್ನು ತಡೆಯಬಲ್ಲೆ’ ಎಂದು ಟ್ರಂಪ್ ಹೇಳಿದ್ದಾರೆ. ಅಷ್ಟಲ್ಲದೆ, ರಷ್ಯಾ-ಉಕ್ರೇನ್ ಯುದ್ಧಕ್ಕೂ ಅಂತ್ಯ ಹಾಡಬಲ್ಲೆ ಎಂದಿದ್ದಾರೆ.
ಇದನ್ನೂ ಓದಿ: Joe Biden Visits Kyiv: ಸಮರಪೀಡಿತ ಉಕ್ರೇನ್‌ಗೆ ಜೋ ಬೈಡೆನ್ ಅಚ್ಚರಿಯ ಭೇಟಿ, ಹೆಚ್ಚಿನ ಶಸ್ತ್ರಾಸ್ತ್ರ ನೆರವಿನ ಭರವಸೆ
ಡೊನಾಲ್ಡ್ ಟ್ರಂಪ್ ಅವರು 2017ರಿಂದ 2021ರವರೆಗೆ, ಅಮೆರಿಕದ 45ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2021ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಗೆದ್ದು, ಜೋ ಬೈಡೆನ್ ಅಧ್ಯಕ್ಷರಾದರು. ಅಧಿಕಾರ ಬಿಟ್ಟುಕೊಡುವ ಸಂದರ್ಭದಲ್ಲೂ ಕೂಡ ಡೊನಾಲ್ಡ್ ಟ್ರಂಪ್ ರಗಳೆ ಮಾಡಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸವಾಗಿದೆ ಎಂದು ಆರೋಪಿಸಿದ್ದರು. ಸದ್ಯ 2024ರ ಚುನಾವಣೆಗೆ ಕಾಯುತ್ತಿದ್ದಾರೆ.
ಕರ್ನಾಟಕ
ವಿಸ್ತಾರ TOP 10 NEWS: ಮೇ 10ಕ್ಕೆ ಚುನಾವಣೆ ಮುಹೂರ್ತದಿಂದ, ಟೆಕ್ಕಿ ಪ್ರತಿಭಾ ಅತ್ಯಾಚಾರಿಗೆ 30 ವರ್ಷ ಜೈಲುವರೆಗಿನ ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
ಕರ್ನಾಟಕದಲ್ಲಿ 16ನೇ ವಿಧಾನಸಭೆಯನ್ನು ಆಯ್ಕೆ ಮಾಡುವ ಸಲುವಾಗಿ ಮೇ 10 ರ ಬುಧವಾರದಂದು ಒಂದೇ ಹಂತದಲ್ಲಿ ಚುನಾವಣೆ (Karnataka Election) ನಡೆಯಲಿದೆ. ಈ ಕುರಿತು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Karnataka Elections 2023: ರಾಜ್ಯದಲ್ಲಿ ಯಾವ ಪಕ್ಷಕ್ಕೆ ಅಧಿಕಾರ? ಚುನಾವಣೆ ಪೂರ್ವ ಸಮೀಕ್ಷೆಗಳು ಹೇಳುವುದೇನು?
ಮುಂಬರುವ ಲೋಕಸಭೆ ಚುನಾವಣೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ, ರಾಹುಲ್ ಗಾಂಧಿ ಅನರ್ಹತೆ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಎಂಬುದು ಸೇರಿ ಹಲವು ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Elections 2023) ದಿನಾಂಕ ನಿಗದಿಯಾಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, 13ಕ್ಕೆ ಫಲಿತಾಂಶ ಪ್ರಕಟವಾಗಿದೆ. ಇದರ ಬೆನ್ನಲ್ಲೇ, ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಎಬಿಪಿ-ಸಿವೋಟರ್ ಹಾಗೂ ಜೀ ನ್ಯೂಸ್-ಮ್ಯಾಟ್ರಿಜ್ ಚುನಾವಣೆಪೂರ್ವ ಸಮೀಕ್ಷೆ ನಡೆಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Karnataka Elections 2023 : ಕಾಂಗ್ರೆಸ್ ಏನೇ ಆರೋಪ ಮಾಡಿದರೂ ಜನರು ನಮ್ಮ ಪರ: ಬೊಮ್ಮಾಯಿ ವಿಶ್ವಾಸ
ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು (Karnataka Elections 2023) ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ. ಕಾಂಗ್ರೆಸ್ ಏನೇ ಆರೋಪ ಮಾಡಿದರೂ ಜನತಾ ಜನಾರ್ದನ ನಮ್ಮ ಪರವಾಗಿದ್ದಾನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಚುನಾವಣೆ ಘೋಷಣೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ತಳಮಟ್ಟದಿಂದಲೇ ಗಟ್ಟಿಯಾಗಿದೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Karnataka Election: ಚುನಾವಣೆ ಘೋಷಣೆ ಬೆನ್ನಿಗೇ ಗರ್ಜಿಸಿದ ಕಾಂಗ್ರೆಸ್: ʼಮತ್ತೆ ಗರ್ಜಿಸಲಿದೆ ಕರ್ನಾಟಕʼ ಅಭಿಯಾನ ಆರಂಭ
ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ದಿನದಿಂದಲೇ ಕಾಂಗ್ರೆಸ್ ಪಕ್ಷ “ಮತ್ತೆ ಗರ್ಜಿಸಲಿದೆ ಕರ್ನಾಟಕ” ಎಂಬ ಹೊಸ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಚಾಲನೆ ನೀಡಿ ಲೋಗೋ ಬಿಡುಗಡೆ ಮಾಡಿದ್ದಾರೆ. ಈ ಅಭಿಯಾನವು ಕರ್ನಾಟಕದ ಜನರಿಗೆ ಪಕ್ಷದ ಬದ್ಧತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ಸೃಷ್ಟಿಸುವ ದೂರದೃಷ್ಟಿಯನ್ನು ಹೊಂದಿದೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ ವಿಧಾನಸಭೆ ಚುನಾವಣೆಯ ಎಲ್ಲ ಸುದ್ದಿಗಳನ್ನೂ ಓದಲು ಇಲ್ಲಿ ಕ್ಲಿಕ್ ಮಾಡಿ.
5. SC ST Reservation: ಮಾರ್ಚ್ 30ಕ್ಕೆ ನಡೆಯಲ್ಲ ಬಂಜಾರ ಸಮುದಾಯದ ಪ್ರತಿಭಟನೆ; ನೀತಿ ಸಂಹಿತೆ ಜಾರಿ ಹಿನ್ನೆಲೆ ಮುಷ್ಕರ ವಾಪಸ್
ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಗುರುವಾರ (ಮಾ. 30) ನಡೆಯಬೇಕಿದ್ದ ಬಂಜಾರ ಸಮುದಾಯದವರ ಬೃಹತ್ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ. ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ತೀರ್ಮಾನವನ್ನು ಹಿಂತೆಗೆದುಕೊಳ್ಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Amritpal Singh: ವಿಡಿಯೊ ಬಿಟ್ಟ ಅಮೃತ್‌ಪಾಲ್, ಬಂಧನದ ಯತ್ನ ಸಿಖ್ಖರ ಮೇಲಿನ ದಾಳಿ ಎಂದ ಖಲಿಸ್ತಾನಿ ನಾಯಕ
ಖಲಿಸ್ತಾನಿಗಳ ನಾಯಕ, ಪಂಜಾಬ್‌ನಲ್ಲಿ ಗಲಭೆಗೆ ಕಾರಣವಾಗಿರುವ ಅಮೃತ್‌ಪಾಲ್ ಸಿಂಗ್ (Amritpal Singh) ಮಾರ್ಚ್ 18ರಿಂದ ನಾಪತ್ತೆಯಾಗಿದ್ದಾನೆ. ಈತನ ಬಂಧನಕ್ಕೆ ರಾಜ್ಯದ ಪೊಲೀಸರು ಸತತ ಕಾರ್ಯಾಚರಣೆ ನಡೆಸಿದರೂ ಇದುವರೆಗೆ ಬಂಧನ ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ, ಅಮೃತ್‌ಪಾಲ್ ಸಿಂಗ್ ವಿಡಿಯೊ ಬಿಡುಗಡೆ ಮಾಡಿದ್ದು, “ನನ್ನ ಬಂಧನಕ್ಕೆ ನಡೆಸುತ್ತಿರುವ ಕಾರ್ಯಾಚರಣೆಯು ಇಡೀ ಸಿಖ್ ಸಮುದಾಯದ ಮೇಲೆ ನಡೆಸುತ್ತಿರುವ ದಾಳಿ” ಎಂದಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Karnataka Rain: ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ; ಚಾಮರಾಜನಗರ, ಬೆಂಗಳೂರಲ್ಲಿ ತಂಪೆರೆದ ವರುಣ
ಕಳೆದ ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸಲಿದ್ದಾನೆ. ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ, ರಾಮನಗರ, ಕೋಲಾರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ (Karnataka Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್‌ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
ಬ್ಯಾಂಕ್ ಖಾತೆಗೆ ಲಿಂಕ್ ಹೊಂದಿರುವ ಯುಪಿಐ ಬಳಕೆಗೆ (UPI transactions) ಸಂಬಂಧಿಸಿ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದು ಉಚಿತ ಎಂದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಬುಧವಾರ ಸ್ಪಷ್ಟೀಕರಣ ನೀಡಿದೆ. ಇದರದೊಂದಿಗೆ ಯುಪಿಐ ಮೂಲಕ ಹಣ ಪಾವತಿಗೆ ಶುಲ್ಕ ( Interchange fee ) ವಿಧಿಸಲಾಗುತ್ತದೆ ಎಂಬ ವದಂತಿಗಳಿಗೆ ತೆರೆ ಎಳೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Rape and murder : ಬೆಂಗಳೂರಿನ ಐಟಿ ಉದ್ಯೋಗಿ ಪ್ರತಿಭಾ ಅತ್ಯಾಚಾರ, ಕೊಲೆ ಪ್ರಕರಣ; ಕ್ಯಾಬ್ ಡ್ರೈವರ್‌ಗೆ 30 ವರ್ಷ ಜೈಲು
ಇಡೀ ರಾಜ್ಯವೇ ನಡುಗುವಂತೆ ಮಾಡಿದ, ಐಟಿ ಉದ್ಯೋಗಿಗಳ ವಲಯದಲ್ಲಿ ತಲ್ಲಣವನ್ನು ಸೃಷ್ಟಿಸಿದ್ದ 2005ರ ಐಟಿಯ ಉದ್ಯೋಗಿಯ ಅತ್ಯಾಚಾರ ಮತ್ತು ಕೊಲೆ (Rape and murder) ಪ್ರಕರಣದಲ್ಲಿ ಆರೋಪಿಗೆ 30 ವರ್ಷಗಳ ಜೈಲುವಾಸದ ಶಿಕ್ಷೆಯನ್ನು ನೀಡಲಾಗಿದೆ. ಆರೋಪಿ ಶಿವಕುಮಾರ್ ಎಂಬಾತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ ಕೋರ್ಟ್ 30 ವರ್ಷಗಳ ಕಾಲ ಜೈಲಿನಿಂದ ಹೊರಗೆ ಬಿಡಬಾರದು ಎಂಬ ಷರತ್ತು ವಿಧಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. IPL 2023: ಐಪಿಎಲ್ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ
ಬಹುನಿರೀಕ್ಷಿತ 16ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಟೂರ್ನಿ(IPL 2023) ಆರಂಭಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಈ ಬಾರಿ ಯಾವ ತಂಡ ಕಪ್ ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿದೆ. ಅದರಲ್ಲೂ ಆರ್ಸಿಬಿ ಅಭಿಮಾನಿಗಳು ಈ ಬಾರಿ ಪಕ್ಕಾ ಕಪ್ ನಮ್ದೇ ಎಂದು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಆರ್ಸಿಬಿ(RCB) ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- SC ST Scholarship: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೀಘ್ರವೇ ಬಂಪರ್, ಏರಿಕೆ ಆಗಲಿದೆ ವಿದ್ಯಾರ್ಥಿ ವೇತನ
- Google: ಗೂಗಲ್‌ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
- Ballary young Mayor : ಬಳ್ಳಾರಿ ಪಾಲಿಕೆಗೆ 21 ವರ್ಷದ ಯುವತಿ ಮೇಯರ್, ರಾಜ್ಯದಲ್ಲೇ ಅತಿಕಿರಿಯ ವಯಸ್ಸಿನ ಮಹಾಪೌರರು!
- Priyanka Chopra: ಫೇರ್‌ನೆಸ್ ಆ್ಯಡ್‌ಗಳಲ್ಲಿ ನಟಿಸುವುದು ಹಾನಿಕರ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದೇಕೆ?
- Kabzaa Movie: ಕಬ್ಜ ಒಟಿಟಿ ರಿಲೀಸ್ ಯಾವಾಗ? ಕಬ್ಜ 2ಗೆ ತಯಾರಿ ನಡೆದಿದ್ಯಾ?
ಗ್ಯಾಜೆಟ್ಸ್
Google: ಗೂಗಲ್‌ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
Google: ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ಅನುಸರಿಸಿದ್ದ ಟೆಕ್ ದೈತ್ಯ ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು 1,337 ಕೋಟಿ ರೂ. ದಂಡವನ್ನು ವಿಧಿಸಿತ್ತು.
ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT)ಯು 30 ದಿನಗಳವರೆಗೆ 1,337.76 ಕೋಟಿ ರೂ. ದಂಡವನ್ನು ಪಾವತಿಸುವಂತೆ ಟೆಕ್ ದೈತ್ಯ ಕಂಪನಿಯ ಗೂಗಲ್‌ಗೆ (Google) ಆದೇಶಿಸಿದೆ. ಎನ್‌ಸಿಎಲ್ಎಟಿಯ ಇಬ್ಬರು ನ್ಯಾಯಾಧೀಶರ ಪೀಠವು ಈ ಆದೇಶವನ್ನು ಮಾಡಿದೆ. ಗೂಗಲ್ ವಿರುದ್ಧ ಇಷ್ಟು ಬೃಹತ್ ಪ್ರಮಾಣದ ದಂಡವನ್ನುಭಾರತೀಯ ಸ್ಪರ್ಧಾತ್ಮಕ ಆಯೋಗ(CCI) ವಿಧಿಸಿತ್ತು. ಸಿಸಿಐನ ಈ ಆದೇಶನ್ನು ಗೂಗಲ್, ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು.
ಭಾರತೀಯ ಸ್ಪರ್ಧಾತ್ಮಕ ಆಯೋಗವು ಕಳೆದ ವರ್ಷ, ಅಕ್ಟೋಬರ್ 20 ರಂದು, ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳಿಗಾಗಿ ಗೂಗಲ್‌ಗೆ 1,337.76 ಕೋಟಿ ದಂಡವನ್ನು ವಿಧಿಸಿತ್ತು. ಅಲ್ಲದೇ, ಅಳವಡಿಸಿಕೊಂಡಿರುವ ನ್ಯಾಯಸಮ್ಮತವಲ್ಲದ ಪದ್ಧತಿಗಳನ್ನು ನಿಲ್ಲಿಸುವಂತೆಯೂ ಗೂಗಲ್ ಸೂಚಿಸಿತ್ತು.
ಇದನ್ನೂ ಓದಿ: Google service down : ಗೂಗಲ್ ಸೇವೆಯಲ್ಲಿ ವ್ಯತ್ಯಯ, ಯೂಟ್ಯೂಬ್, ಡ್ರೈವ್, ಜಿಮೇಲ್‌ಗೆ ಅಡಚಣೆ, ಬಳಕೆದಾರರ ಪರದಾಟ
ದೈತ್ಯ ಸರ್ಚ್ ಎಂಜಿನ್ ಆಗಿರುವ ಗೂಗಲ್, ಸಿಸಿಐ ನೀಡಿರುವ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ಆದರೆ, ಗೂಗಲ್ ಮನವಿಯನ್ನು ತಿರಸ್ಕರಿಸಿರುವ ಎನ್‌ಸಿಎಲ್ಎಟಿ, ಸಿಸಿಐ ನಡೆಸಿರುವ ವಿಚಾರಣೆಯಲ್ಲಿ ಯಾವುದೇ ಸಹಜ ನ್ಯಾಯ ಪರಿಪಾಲನೆಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿತು. ಅಲ್ಲದೇ, 30 ದಿನಗಳಲ್ಲಿ ದಂಡವನ್ನು ಪಾವತಿಸುವಂತೆ ಗೂಗಲ್‌ಗೆ ಸೂಚಿಸಿತು.
ಕರ್ನಾಟಕ
ವಿಸ್ತಾರ TOP 10 NEWS: ತಾರಕಕ್ಕೇರಿದ ಮೀಸಲಾತಿ ಆಕ್ರೋಶದಿಂದ, ಅಮೃತ್‌ಪಾಲ್ ಸಿಂಗ್ ಪಾಕ್ ನಂಟಿನವರೆಗಿನ ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. SC ST Reservation : ಬಾಗಲಕೋಟೆ ತಾಂಡಾಗಳಲ್ಲೂ ಆಕ್ರೋಶ; ಬಿಜೆಪಿ ಧ್ವಜ ತೆರವು, ಪ್ರವೇಶ ನಿರಾಕರಿಸಿ ಪೋಸ್ಟರ್
ಬಿಜೆಪಿ ಸರಕಾರವು ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ (SC ST Reservation) ಒಳಮೀಸಲು ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಮಾಡಿರುವ ಶಿಫಾರಸನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿ ರಾಜ್ಯಾದ್ಯಂತ ಬಂಜಾರ ಸಮುದಾಯದ ಪ್ರತಿಭಟನೆ ನಿಧಾನಕ್ಕೆ ಬೇರೆ ಬೇರೆ ಜಿಲ್ಲೆಗಳಿಗೆ ವ್ಯಾಪಿಸುತ್ತಿದೆ. ಸೋಮವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಆರಂಭಗೊಂಡ ಪ್ರತಿಭಟನೆ ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಕಲ್ಲೆಸೆಯುವ ಹಂತಕ್ಕೆ ತಲುಪಿತ್ತು. ಶಿವಮೊಗ್ಗದಲ್ಲಿ ಮಂಗಳವಾರವೂ ರಸ್ತೆ ತಡೆ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವ ಘಟನೆಗಳ ಮೂಲಕ ಮುಂದುವರಿದಿದೆ. ಈ ನಡುವೆ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ನಾನಾ ಕಡೆಗಳಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಬಾಗಲಕೋಟೆಯ ಮುಚಖಂಡಿ ಬಂಜಾರಾ ತಾಂಡದಲ್ಲಿ ಹಾಕಲಾದ ಎಲ್ಲ ಬಿಜೆಪಿ ಧ್ವಜಗಳನ್ನು ಕಿತ್ತು ಹಾಕಲಾಗಿದ್ದು, ಬಿಜೆಪಿ ನಾಯಕರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: SC ST Reservation: 2B ಪ್ರವರ್ಗ ಹಿಂತೆಗೆತಕ್ಕೆ ಸಿಡಿದ ಮುಸ್ಲಿಮರು; ರಾಜ್ಯದ ಹಲವು ಕಡೆ ಬೃಹತ್ ಪ್ರತಿಭಟನೆ
ಹೆಚ್ಚಿನ ಓದಿಗಾಗಿ: SC ST Reservation: ಬಿಜೆಪಿಯವರಿಂದಲೇ ಮನೆ ಮೇಲೆ ದಾಳಿ: ಬಿ.ಎಸ್. ಯಡಿಯೂರಪ್ಪ ಪರವಾಗಿ ಕಾಂಗ್ರೆಸ್ ಬ್ಯಾಟಿಂಗ್
2. Karnataka Election: ಈ ಬಾರಿಯೂ ಅತಂತ್ರ ವಿಧಾನಸಭೆ? ಕುಮಾರಸ್ವಾಮಿ ಜತೆ ʼಸಂಧಾನʼಕ್ಕೆ ಬಂದವರಾರು?
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಮೂರೂ ಪಕ್ಷಗಳು ಹೇಳುತ್ತಿರುವ ಬೆನ್ನಲ್ಲೇ, ರಾಷ್ಟ್ರೀಯ ಪಕ್ಷದ ವತಿಯಿಂದ ಫೀಲರ್ (ಸಂಧಾನಕಾರರು) ಒಬ್ಬರು ಆಗಮಿಸಿದ್ದರು ಎಂಬ ಹೊಸ ವಿಚಾರವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Ramagiri: 120 ಕೋಟಿ ರೂ. ವೆಚ್ಚದಲ್ಲಿ ರಾಮನಗರ ಬೆಟ್ಟ ಅಭಿವೃದ್ಧಿ: ವಾಸ್ತುಶಿಲ್ಪಿಗಳಿಂದ ಪ್ರಾತ್ಯಕ್ಷಿಕೆ
ರಾಮನಗರದ ರಾಮದೇವರ ಬೆಟ್ಟದಲ್ಲಿರುವ ರಾಮನ ದೇವಸ್ಥಾನವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಸರಕಾರ ತೀರ್ಮಾನಿಸಿದ್ದು, ಮಂಗಳವಾರ ಆ ಸಂಬಂಧದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸಮ್ಮುಖದಲ್ಲಿ ವಿಕಾಸಸೌಧದಲ್ಲಿ ಈ ಕಾರ್ಯಕ್ರಮ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Lokayukta Raid : ಶಾಸಕ ಮಾಡಾಳ್ ವಿರೂಪಾಕ್ಷಪ್ಪ 5 ದಿನ ಲೋಕಾಯುಕ್ತ ಕಸ್ಟಡಿಗೆ, ಕುಟುಂಬದ ಭೇಟಿ ಬಗ್ಗೆ ನಾಳೆ ನಿರ್ಧಾರ
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಟೆಂಡರ್ ವಿಚಾರದಲ್ಲಿ ನಡೆದ ಲಂಚ ಹಗರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನ ಲೋಕಾಯುಕ್ತ ಪೊಲೀಸರ ಕಸ್ಟಡಿ (Lokayukta Raid) ವಿಧಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ವಿಸ್ತಾರ Explainer: ರಾಹುಲ್ ಗಾಂಧಿಗೆ ಶಿಕ್ಷೆಯಾಗುವಂತೆ ಮಾಡಿದ ʼಮೋದಿʼ ಸರ್‌ನೇಮ್‌ನ ಹಿನ್ನೆಲೆ ಇದು!
ರಾಹುಲ್ ಗಾಂಧಿಯವರ ಸಂಸತ್ ಅನರ್ಹತೆಗೆ ಕಾರಣವಾಗಿರುವ ʼಮೋದಿʼ ಹೇಳಿಕೆಯಲ್ಲಿ ಉಲ್ಲೇಖವಾಗಿರುವ ʼಮೋದಿʼಗಳು ಯಾರು? ಈ ಉಪನಾಮದವರು ಯಾರ್ಯಾರು, ಎಲ್ಲಿಲ್ಲಿದ್ದಾರೆ, ಏನು ಮಾಡುತ್ತಾರೆ? ಇಲ್ಲಿದೆ ಒಂದು ವಿವರ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. EPFO: ಇಪಿಎಫ್ ಬಡ್ಡಿ ದರ 8.15%ಕ್ಕೆ ಏರಿಕೆ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲೆ 8.15% ಬಡ್ಡಿ ದರವನ್ನು ನಿಗದಿಪಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Atiq Ahmed: ಅತೀಕ್ ಅಹ್ಮದ್ ಕುಟುಂಬದಲ್ಲಿ ಎಲ್ಲರೂ ಕ್ರಿಮಿನಲ್ಗಳೇ; ಮರಣದಂಡನೆಗೆ ಉಮೇಶ್ ಪಾಲ್ ತಾಯಿಯಿಂದ ಆಗ್ರಹ
2005ರಲ್ಲಿ ಬಹುಜನ ಸಮಾಜ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ರನ್ನು 2006ರಲ್ಲಿ ಅಪರಹಣ ಮಾಡಿದ ಆರೋಪದಡಿ ಗ್ಯಾಂಗ್ಸ್ಟರ್, ರಾಜಕಾರಣಿ ಅತಿಕ್ ಅಹ್ಮದ್ (Atiq Ahmed)ಗೆ ಇಂದು ಪ್ರಯಾಗ್ರಾಜ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಅತಿಕ್ ಅಹ್ಮದ್ ಸಮಾಜವಾದಿ ಪಕ್ಷ (ಅಖಿಲೇಶ್ ಯಾದವ್ ಪಕ್ಷ)ದ ರಾಜಕಾರಣಿಯಾಗಿದ್ದ. ಫಲ್ಪುರ ಕ್ಷೇತ್ರದ ಸಂಸದನಾಗಿದ್ದ. ರಾಜು ಪಾಲ್ ಹತ್ಯೆಯಲ್ಲಿ ಈತನ ಕೈವಾಡ ಇದೆ ಮತ್ತು ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅಪಹರಣ ಕೇಸ್ನಲ್ಲಿ ಕೂಡ ಭಾಗಿಯಾದ ಆರೋಪ ಹೊತ್ತ ಹಿನ್ನೆಲೆಯಲ್ಲಿ ಅವನನ್ನು 2009ರಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Amritpal Singh: ಅಮೃತ್‌ಪಾಲ್ ಸಿಂಗ್ನ ಆಪ್ತನಿಗೆ, ಪಾಕಿಸ್ತಾನ ಮಾಜಿ ಸೇನಾ ಮುಖ್ಯಸ್ಥನ ಪುತ್ರನ ಜತೆ ನಂಟು!
ಪೊಲೀಸರ ಕಣ್ತಪ್ಪಿಸಿ, ನಾಪತ್ತೆಯಾಗಿರುವ ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ (Amritpal Singh)ಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಜತೆ ಸಂಪರ್ಕವಿತ್ತು ಎಂಬುದನ್ನು ಈಗಾಗಲೇ ಭಾರತದ ಗುಪ್ತಚರ ದಳ ತಿಳಿಸಿದೆ. ಅದರೊಂದಿಗೆ ಈಗ ಇನ್ನೊಂದು ಮಹತ್ವದ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ‘ಅಮೃತ್‌ಪಾಲ್ ಸಿಂಗ್ನ ಸಂಘಟನೆಯಲ್ಲಿ ಹಣಕಾಸು ವಿಭಾಗ ನೋಡಿಕೊಳ್ಳುತ್ತಿದ್ದ, ಅವನ ಆಪ್ತನಲ್ಲಿ ಒಬ್ಬನಾಗಿರುವ ದಲ್ಜಿತ್ ಖಲ್ಸಿ ಮತ್ತು ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಖಾಮರ್ ಜಾವೇದ್ ಬಜ್ವಾನ ಪುತ್ರ ಇಬ್ಬರೂ ಪರಮಾಪ್ತರು ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. PAN-Aadhaar link: ಪ್ಯಾನ್-ಆಧಾರ್ ಲಿಂಕ್ ಗಡುವು ಜೂನ್ 30ರವರೆಗೆ ವಿಸ್ತರಣೆ
ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ನಿಗದಿಯಾಗಿದ್ದ ಗಡುವು ಮೂರು ತಿಂಗಳು ವಿಸ್ತರಣೆಯಾಗಿದೆ. ಈ ಮೊದಲು ಮಾರ್ಚ್ 30 ಅಂತಿಮ ದಿನವಾಗಿತ್ತು. ಈ ಗಡುವನ್ನು 2023ರ ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ. ಅಲ್ಲದೇ, ಒಂದೊಮ್ಮೆ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗದೇ ಇದ್ದರೆ ಜುಲೈ 1ರಿಂದ ಲಿಂಕ್ ಆಗದ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗಲಿವೆ ಎಂದು ಸಚಿವಾಲಯವು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Indian Masters T10: ಭಾರತದಲ್ಲಿ ಚೊಚ್ಚಲ ಟಿ10 ಕ್ರಿಕೆಟ್ ಟೂರ್ನಿ; ಶೀಘ್ರದಲ್ಲೇ ಆರಂಭ
ಭಾರತದಲ್ಲಿ ಈಗಾಗಲೇ ಪುರುಷರ ಮತ್ತು ಮಹಿಳೆಯರ ಟಿ20 ಕ್ರಿಕೆಟ್ ಲೀಗ್ ಚಾಲ್ತಿಯಲ್ಲಿದೆ. ಇದೀಗ ಮತ್ತೊಂದು ಪ್ರಯೋಗ ಎಂಬಂತೆ ಚೊಚ್ಚಲ ಆವೃತ್ತಿಯ “ಟಿ10 ಇಂಡಿಯಾ ಮಾಸ್ಟರ್ಸ್ ಕ್ರಿಕೆಟ್”(Indian Masters T10) ಟೂರ್ನಿ ಆರಂಭಗೊಳ್ಳಲಿದೆ. ಇದೇ ವರ್ಷ ಜೂನ್‌ನಲ್ಲಿ ಈ ಟೂರ್ನಿಗೆ ಚಾಲನೆ ಸಿಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- SC ST Reservation: ಬಿಎಸ್‌ವೈ ಮನೆಗೆ ಕಲ್ಲು ತೂರಿದವನ ಜತೆ ಸಿದ್ದರಾಮಯ್ಯ ಫೋಟೊ; ಸಿದ್ದು ಹೇಳಿದ್ದೇನು?
- BJP MPs Protest: ವಿದೇಶಿ ಮಹಿಳೆಗೆ ಜನಿಸಿದ ರಾಹುಲ್ ದೇಶಭಕ್ತನಲ್ಲ; ಬಿಜೆಪಿ ವಾಗ್ದಾಳಿ, ಸಂಸದರಿಂದ ಪ್ರತಿಭಟನೆ
- NCERT: ಹೊಸ ಶಿಕ್ಷಣ ನೀತಿ ಅನುಸಾರ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪರಿಷ್ಕರಣೆ, ಮುಂದಿನ ವರ್ಷದಿಂದಲೇ ಜಾರಿ
- Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?
- ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ; ಬಸ್ಗೆ ಬೆಂಕಿ ಹೊತ್ತಿ ಉರಿದು, 20 ಹಜ್ ಯಾತ್ರಿಕರ ದುರ್ಮರಣ
- Karnataka Elections : ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಕೂಡ್ಲಿಗಿ ಶಾಸಕ ಎನ್.ವೈ ಗೋಪಾಲಕೃಷ್ಣ ಕಾಂಗ್ರೆಸ್‌ಗೆ
- ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
- BJP Karnataka: ʼಅಪ್ಪನನ್ನು ಮರೆತʼ ಬಿಜೆಪಿ ವಿರುದ್ಧ ಅನಂತಕುಮಾರ್ ಪುತ್ರಿ ಅಸಮಾಧಾನ
ಆಹಾರ/ಅಡುಗೆ
Chicken Manchurian: ಚಿಕನ್ ಮಂಚೂರಿಯನ್ ಯಾರದ್ದು? ಟ್ವಿಟರ್‌ನಲ್ಲಿ ಭಾರತ-ಪಾಕ್ ನೆಟ್ಟಿಗರ ಜಟಾಪಟಿ
Chicken Manchurian: ಚಿಕನ್ ಮಂಚೂರಿಯನ್ ಪಾಕಿಸ್ತಾನದ ರೆಸಿಪಿ ಎಂಬರ್ಥದಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಟ್ವೀಟ್ ಮಾಡಿತ್ತು. ಇದು ಭಾರತ ಮತ್ತು ಪಾಕಿಸ್ತಾನಿ ನೆಟ್ಟಿಗರ ಕದನಕ್ಕೆ ಕಾರಣವಾಗಿದೆ.
ನವದೆಹಲಿ: ಭಾರತದ ಬಹುತೇಕ ರೆಸ್ಟೊರೆಂಟ್‌ಗಳಲ್ಲಿ ಚಿಕನ್ ಮಂಚೂರಿಯನ್ (Chicken Manchurian) ಅತ್ಯಂತ ಬೇಡಿಕೆಯ ಡಿಶ್. ಭಾರತ ಮಾತ್ರವಲ್ಲದೇ, ದಕ್ಷಿಣ ಏಷ್ಯಾದಲ್ಲೇ ಈ ಡಿಶ್‌ಗೆ ವ್ಯಾಪಕ ಬೇಡಿಕೆ ಇದೆ. ಆದರೆ, ದಿ ನ್ಯೂಯಾರ್ಕ್ ಟೈಮ್ಸ್ (The New York Times) ಈ ಚಿಕನ್ ಮಂಚೂರಿಯನ್ ಬಗ್ಗೆ ಮಾಡಿದ ಟ್ವೀಟ್‌ವೊಂದು, ಸೋಷಿಯಲ್ ಮೀಡಿಯಾದಲ್ಲಿ ಭಾರತ ಮತ್ತು ಪಾಕಿಸ್ತಾನ ನೆಟ್ಟಿಗರ ನಡುವಿನ ಕದನಕ್ಕೆ ಕಾರಣವಾಗಿದೆ.
ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಚಿಕನ್ ಮಂಚೂರಿಯನ್ ತಯಾರಿಸುವ ಮಾಹಿತಿಯನ್ನು ಒಳಗೊಂಡ ಲೇಖನವನ್ನು ಟ್ಯಾಗ್ ಮಾಡಿ, a stalwart of Pakistani Chinese cooking ಎಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‌ನೊಂದಿಗೆ ಚಿಕನ್ ಮಂಚೂರಿಯನ್ ಮಾಲೀಕತ್ವದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಚರ್ಚೆಗಳು ಶುರುವಾಗಿವೆ.
ಚಿಕನ್ ಮಂಚೂರಿಯನ್ ರೆಸಿಪಿ ಕುರಿತು ದಿ ನ್ಯೂಯಾರ್ಕ್ ಟೈಮ್ಸ್ ಮಾಡಿರುವ ಟ್ವೀಟ್
ಭಾರತೀಯ ನೆಟ್ಟಿಗರು ನ್ಯೂಯಾರ್ಕ್ ಟೈಮ್ಸ್ ತಪ್ಪು ಮಾಹಿತಿಯನ್ನು ನೀಡಿದೆ ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಅಲ್ಲದೇ, ಚಿಕನ್ ಮಂಚೂರಿಯನ್ ಮೊದಲು ತಯಾರಿಸಿದ್ದೇ ಭಾರತದಲ್ಲಿ ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನದ ನೆಟ್ಟಿಗರು ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಚಿಕನ್ ಮಂಚೂರಿಯನ್ ಮೂಲ ಪಾಕಿಸ್ತಾನದ್ದು ಎಂದು ವಾದಿಸಿದ್ದಾರೆ.
ಈ ಎರಡೂ ವಾದಗಳ ಮಧ್ಯೆ ಅರ್ಥ ಸತ್ಯ ಮತ್ತು ಸುಳ್ಳು ಇದೆ. ಕೆಲವು ವರದಿಗಳ ಪ್ರಕಾರ, ಮುಂಬೈನಲ್ಲಿ ಈಗಲೂ ರೆಸ್ಟೆರೊಂಟ್‌ಗಳನ್ನು ಹೊಂದಿರುವ ಚೀನಾ ಮೂಲದ ಬಾಣಸಿಗ ನೆಲ್ಸನ್ ವಾಂಗ್ ಅವರು ಈ ಚಿಕನ್ ಮಂಚೂರಿಯನ್ ಮೊದಲಿಗೆ ಪರಿಚಯಿಸಿದ್ದಾರೆ. ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಕೂಡ ವರದಿ ಮಾಡಿದೆ. ನೆಲ್ಸನ್ ವಾಂಗ್ ಅವರು ಭಾರತದಲ್ಲಿ ನೆಲಿಸಿದ್ದ ಚೀನಾ ಬಾಣಸಿಗರ ಮೂರನೇ ತಲೆಮಾರಿನ ವ್ಯಕ್ತಿಯಾಗಿದ್ದಾರೆ.
ಮತ್ತೆ ಕೆಲವು ವರದಿಗಳು, ಚಿಕನ್ ಮಂಚೂರಿಯನ್ ಪಾಕಿಸ್ತಾನದಲ್ಲಿ ಮೊದಲಿಗೆ ತಯಾರಿಸಲಾಯಿತು ಎಂದು ಹೇಳಿವೆ. 1970ರ ದಶಕದಲ್ಲಿ ಪಾಕ್ ಬಾಣಸಿಗ ಅಲಿ ಸಿಕಂದರ್ ತಾಹಿರ್ ಎಂಬಾತ, ಚೀನಿ ಶೈಲಿಯಲ್ಲಿ ಚಿಕನ್ ಮಂಚೂರಿಯನ್ ತಯಾರಿಸಿದನಂತೆ. ಈತ ಮೊದಲು ಕರಾಚಿಯ ಚೀನಿ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ. ಈತ ಪಾಕಿಸ್ತಾನದ ಖಾದ್ಯಗಳು, ಮಸಾಲೆಗಳನ್ನು ಬಳಸಿಕೊಂಡು ಸ್ಥಳೀಯವಾಗಿ ಚಿಕನ್ ಮಂಚೂರಿಯನ್ ಸಿದ್ಧಪಡಿಸಿದ. ಮುಂದೆ ಈ ಚಿಕನ್ ಮಂಚೂರಿಯನ್ ಭಾರತಕ್ಕೂ ಕಾಲಿಟ್ಟು ಪ್ರಸಿದ್ಧಿಯಾಯಿತು ಎಂದು ಹೇಳಲಾಗುತ್ತಿದೆ. ಆದರೆ, ನಿರ್ದಿಷ್ಟವಾಗಿ ಇದು ಪಾಕಿಸ್ತಾನ ಅಥವಾ ಭಾರತದ್ದೇ ಎಂದು ಹೇಳುವುದಕ್ಕೆ ದಾಖಲೆಗಳಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: Fried Chicken: ಹೊಂಬಣ್ಣದ ಗರಿ ಗರಿ ಫ್ರೈಡ್ ಚಿಕನ್ ಮನೆಯಲ್ಲೇ ಮಾಡಲು ಐದು ಸೂತ್ರಗಳು!
ಚಿಕನ್ ಮಂಚೂರಿಯನ್ ಇತಿಹಾಸ ಏನೇ ಇರಲಿ. ಆದರೆ, ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಹಾಗಾಗಿ, ಭಾರತ ಮತ್ತು ಪಾಕಿಸ್ತಾನಿ ನೆಟ್ಟಿಗರಿಬ್ಬರೂ ಚಿಕನ್ ಮಂಚೂರಿಯನ್ ಮೇಲೆ ತಮ್ಮ ಮಾಲೀಕತ್ವವನ್ನು ಪ್ರದರ್ಶಿಸುವ ಕೆಲಸ ಮಾಡುತ್ತಿದ್ದಾರೆ!
-
ಕರ್ನಾಟಕ12 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ16 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ11 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ7 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್‌ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್‌ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?