Attempt to kill Pakistan cricketer by poisoning! The player described the condition of not having money for treatmentವಿಷ ಹಾಕಿ ಪಾಕಿಸ್ತಾನ ಕ್ರಿಕೆಟಿಗನ ಕೊಲೆ ಯತ್ನ! ಚಿಕಿತ್ಸೆಗೂ ಹಣವಿಲ್ಲದ ಸ್ಥಿತಿ ವಿವರಿಸಿದ ಆಟಗಾರ - Vistara News

ಕ್ರಿಕೆಟ್

ವಿಷ ಹಾಕಿ ಪಾಕಿಸ್ತಾನ ಕ್ರಿಕೆಟಿಗನ ಕೊಲೆ ಯತ್ನ! ಚಿಕಿತ್ಸೆಗೂ ಹಣವಿಲ್ಲದ ಸ್ಥಿತಿ ವಿವರಿಸಿದ ಆಟಗಾರ

ಮಾಜಿ ಕ್ರಿಕೆಟಿಗ ಇಮ್ರಾನ್​ ನಜೀರ್​ಗೆ ಸತತವಾಗಿ ಪಾದರಸ(Slow Poison) ಉಣಿಸಿ ಕೊಲೆ ಮಾಡಲು ಯತ್ನಿಸಲಾಗಿತ್ತು.

VISTARANEWS.COM


on

Attempt to kill Pakistan cricketer by poisoning! The player described the condition of not having money for treatment
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ಲಾಮಾಬಾದ್​: ಪಾಕಿಸ್ತಾನ ಕ್ರಿಕೆಟ್​ ಸಂಸ್ಥೆಯೆಂದರೆ ವಿವಾದದ ಗೂಡು. ಕ್ರಿಕೆಟ್​ ತಂಡದಲ್ಲೂ ಜಗಳ, ದ್ವೇಷ ಮಾಮೂಲಿ. ಎಲ್ಲದಕ್ಕಿಂತ ದ್ವೇಷ ಸಾಧನೆಗಾಗಿ ಅಲ್ಲಿ ಕೊಲೆ ಯತ್ನವೂ ನಡೆಯುತ್ತದೆ. ಅಂಥದ್ದೊಂದು ದೇಷದ ಬಲೆಗೆ ಈಡಾಗಿ ಹಾಸಿಗೆ ಹಿಡಿದ ಕತೆಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್​ ನಜೀರ್​ ಹೇಳಿದ್ದಾರೆ. ತಮಗೆ ನಿಧಾನ ವಿಷ (Slow Poison) ಉಣಿಸಿ ಕೊಲೆ ಮಾಡಲು ಯತ್ನಿಸಿದ ವಿಷಯವನ್ನು ಬಹಿರಂಗ ಮಾಡಿದ್ದಾರೆ. ಯಾರು ಆ ರೀತಿ ಮಾಡಿದ್ದಾರೆ ಎಂಬುದನ್ನು ಬಹಿರಂಗ ಮಾಡಿಲ್ಲ. ಆದರೆ, ಕಷ್ಟಕಾಲದಲ್ಲಿ ತಮಗೆ ನೆರವಾದ ಮಾಜಿ ಆಲ್​ರೌಂಡರ್​ ಶಾಹಿದ್ ಅಫ್ರಿದಿಯನ್ನು ಹೊಗಳಿದ್ದಾರೆ.

ಇಮ್ರಾನ್​ ನಜೀರ್​ಗೆ ಕ್ರಿಕೆಟ್​ ತಂಡದಲ್ಲಿ ಇರುವ ಅವಧಿಯಲ್ಲಿ ನಿರಂತರವಾಗಿ ಸ್ವಲ್ಪ ಸ್ವಲ್ಪನೇ ಪಾದರಸ ಹಾಕಿದ್ದಾರೆ. ಪಾದರಸ ನಿಧಾನ ವಿಷವಾಗಿದ್ದು ಮನುಷ್ಯನ ದೇಹದ ಗಂಟುಗಳಲ್ಲಿ ಸೇರಿಕೊಂಡು ದುರ್ಬಲಗೊಳಿಸುತ್ತದೆ. ಅಂತೆಯೇ ನಜೀರ್​ ಕೂಡ ಪಾದರಸ ದೇಹಕ್ಕೆ ಸೇರಿಕೊಂಡು ಸಂಪೂರ್ಣವಾಗಿ ಅಸ್ವಸ್ಥರಾಗಿದ್ದಾರೆ. ಎದ್ದೇಳಲು ಸಾಧ್ಯವಾಗದೇ ಹಾಸಿಗೆ ಹಿಡಿದ್ದರು.

ಸತತವಾಗಿ ಪಾದರಸ ದೇಹಕ್ಕೆ ಸೇರಿಕೊಂಡ ಕಾರಣ ಆದ ಸಮಸ್ಯೆಯನ್ನು ನಜೀರ್​ ವಿವರಿಸಿದ್ದಾರೆ. ತಮಗೆ ಬೆರಳುಗಳನ್ನು ಬಗ್ಗಿಸಲೂ ಆಗುತ್ತಿರಲಿಲ್ಲ ಎಂದು ಅವರು ಹೇಳಿಕೊಂಡು ತಮ್ಮ ಪಾಡನ್ನು ವಿವರಿಸಿದ್ದಾರೆ.

ನಾನು ಎಮ್​ಆರ್​ಐ ಸೇರಿದಂತೆ ನಾನಾ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಪಾದರಸ ದೇಹ ಸೇರಿಕೊಂಡಿದ್ದು ಗೊತ್ತಾಗಿದೆ. 10 ವರ್ಷಗಳಿಂದ ನನಗೆ ಪಾದರಸವನ್ನು ಹಾಕಲಾಗಿತ್ತು. ಅದರಿಂದಾಗಿ ನನ್ನ ದೇಹದ ಗಂಟುಗಳಿಗೆ ಸಂಪೂರ್ಣ ಹಾನಿಯಾಗಿತ್ತು. 6ರಿಂದ 7 ವರ್ಷ ಹಾಸಿಗೆ ಹಿಡಿದು ನರಳಾಡಿದೆ ಎಂದು ನಜೀರ್ ತಮ್ಮ ಕತೆಯನ್ನು ಹೇಳಿಕೊಂಡಿದ್ದಾರೆ.

ಇಮ್ರಾನ್​ ನಜೀರ್​ ಪಾಕಿಸ್ತಾನ ಕ್ರಿಕೆಟ್ ತಂಡ ಪರವಾಗಿ 1999ರಿಂದ 2012ರವರೆಗೆ ಆಡಿದ್ದರು. 8 ಟೆಸ್ಟ್​ ಹಾಗೂ 79 ಒಡಿಐನಲ್ಲಿ ಅವರು ತಂಡದ ಭಾಗವಾಗಿದ್ದರು. 427 ಟೆಸ್ಟ್​ ರನ್​ ಹಾಗೂ 1895 ಏಕ ದಿನ ರನ್​ಗಳನ್ನು ಅವರು ಬಾರಿಸಿದ್ದಾರೆ. 2007ರ ವಿಶ್ವ ಕಪ್​ನಲ್ಲಿ ವೆಸ್ಟ್​ ಇಂಡೀಸ್​ ತಂಡದ ವಿರುದ್ಧ 160 ರನ್ ಬಾರಿಸಿದ್ದರು. ಇದು ಪಾಕಿಸ್ತಾನ ಕ್ರಿಕೆಟ್​ ಇತಿಹಾಸದಲ್ಲಿಯೇ ವಿಶ್ವ ಕಪ್​ನಲ್ಲಿ ಬಾರಿಸಿದ ಗರಿಷ್ಠ ವೈಯಕ್ತಿಕ ರನ್​.

ನಿರಂತರವಾಗಿ ವಿಷ ಹಾಕಿದ ಕಾರಣ ನನಗೆ ಎದ್ದೇಳಲು ಕೂಡ ಆಗಲಿಲ್ಲ. ಚಿಕಿತ್ಸೆ ಪಡೆಯಲು ಆರಂಭಿಸಿದ ಬಳಿಕ ಸ್ವಲ್ಪ ಸ್ವಲ್ಪವೇ ಸುಧಾರಿಸಿಕೊಳ್ಳುತ್ತಿದ್ದೇನೆ. ಹಾಗೆಂದು ವಿಷ ಹಾಕಿದವರಿಗೆ ನಾನು ಕೇಡು ಬಯಸಿಲ್ಲ. ಅದಕ್ಕಿಂತ ನನ್ನ ಜೀವ ಉಳಿಸಿದವರಿಗೆ ಧನ್ಯವಾದ ಹೇಳುತ್ತಿದ್ದೇನೆ ಎಂದು ನಜೀರ್ ನುಡಿದಿದ್ದಾರೆ.

ಇದನ್ನೂ ಓದಿ : World Cup 2023: ಅಕ್ಟೋಬರ್​ 5 ರಿಂದ ಏಕದಿನ ವಿಶ್ವಕಪ್ ಕ್ರಿಕೆಟ್‌ ಆರಂಭ; ನವೆಂಬರ್​ 19ಕ್ಕೆ ಫೈನಲ್‌!

ಕ್ರಿಕೆಟ್​ಗೆ ನಿವೃತ್ತಿ ಹೇಳಿದರೂ ಚಿಕಿತ್ಸೆಗಾಗಿ ನಜೀರ್​ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರು. ಹೀಗಾಗಿ ಕೊನೇ ಹಂತದಲ್ಲಿ ಅವರೂ ಹಣ ಖಾಲಿಯಾಗಿ ಸಮಸ್ಯೆ ಎದುರಿಸಿದ್ದರು. ಈ ವೇಳೆ ಪಾಕಿಸ್ತಾನದ ತಂಡದ ಮಾಜಿ ಆಲ್​ರೌಂಡರ್​ ಶಾಹಿದ್​ ಅಫ್ರಿದಿ ನೆರವಿಗೆ ಬಂದಿದ್ದರು. ಅವರು ಚಿಕಿತ್ಸೆಗೆ ನೆರವು ಕೊಟ್ಟಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

SRH vs PBKS: ಒಂದು ದಿನ ಕಳೆಯುವ ಮುನ್ನವೇ ಕೊಹ್ಲಿಯ ಸಿಕ್ಸರ್​ ದಾಖಲೆ ಮುರಿದ ಅಭಿಷೇಕ್

SRH vs PBKS: ಪಂಜಾಬ್​ ವಿರುದ್ಧದ ಪಂದ್ಯದಲ್ಲಿ 21 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಅಭಿಷೇಕ್​ ಒಟ್ಟು 28 ಎಸೆತಗಳಿಂದ 66 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 6 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಯಿತು.

VISTARANEWS.COM


on

SRH vs PBKS
Koo

ಹೈದರಾಬಾದ್: ವಿರಾಟ್​ ಕೊಹ್ಲಿ(Virat Kohli) ಅವರು ಶನಿವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ 4 ಸಿಕ್ಸರ್​ ಬಾರಿಸುವ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಆದರೆ ಈ ದಾಖಲೆ ಒಂದು ದಿನ ಕಳೆಯುವ ಮುನ್ನವೇ ಪತನಗೊಂಡಿದೆ. ಸನ್​ರೈಸರ್ಸ್ ಹೈದರಾಬಾದ್(SRH vs PBKS)​ ತಂಡದ ಯುವ ಆಟಗಾರ ಅಭಿಷೇಕ್​ ಶರ್ಮ(Abhishek Sharma) ಈ ದಾಖಲೆಯನ್ನು ಮರಿದಿದ್ದಾರೆ.

ಇಂದು(ಭಾನುವಾರ) ನಡೆದ ಐಪಿಎಲ್​ನ 69ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ಮೂಲಕ ಸಿಕ್ಸರ್​ಗಳ ಸುರಿಮಳೆಯನ್ನೇ ಸುರಿಸಿದ ಅಭಿಷೇಕ್​ ಬರೋಬ್ಬರಿ 6 ಸಿಕ್ಸರ್​ ಬಾರಿಸಿ ಮಿಂಚಿದರು. ಇದೇ ವೇಳೆ ಈ ಬಾರಿ ಅತ್ಯಧಿಕ ಸಿಕ್ಸರ್​ ಬಾರಿಸಿದ ವಿರಾಟ್​ ಕೊಹ್ಲಿ(37) ಅವರ ದಾಖಲೆಯನ್ನು ಹಿಂದಿಕ್ಕಿದರು. ಸದ್ಯ ಅಭಿಷೇಕ್​ 41* ಸಿಕ್ಸರ್​ ಬಾರಿಸಿದ ಸಾಧನೆ ಮಾಡಿದ್ದಾರೆ. ಆರ್​ಸಿಬಿ ಕೂಡ ಪ್ಲೇ ಆಫ್​ ಪ್ರವೇಶಿಸಿದ ಕಾರಣ ಕೊಹ್ಲಿಗೆ ಈ ದಾಖಲೆಯನ್ನು ಮುರಿಯುವ ಅವಕಾಶ ಇನ್ನೂ ಜೀವಂತವಿದೆ. ಒಟ್ಟಾರೆಯಾಗಿ ಉಭಯ ಆಟಗಾರರ ಮಧ್ಯೆ ಸಿಕ್ಸರ್​ ಪೈಪೋಟಿ ಏರ್ಪಟ್ಟಿದೆ.

ಈ ಬಾರಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಟಾಪ್​ 5 ಆಟಗಾರರು


ಅಭಿಷೇಕ್ ಶರ್ಮ-41 ಸಿಕ್ಸರ್​​

ವಿರಾಟ್​ ಕೊಹ್ಲಿ-37 ಸಿಕ್ಸರ್​

ನಿಕೋಲಸ್​ ಪೂರನ್​-36 ಸಿಕ್ಸರ್​

ಹೆನ್ರಿಚ್​ ಕ್ಲಾಸೆನ್​-33 ಸಿಕ್ಸರ್​

ಸುನೀಲ್​ ನರೈನ್​-32 ಸಿಕ್ಸರ್

ಇದನ್ನೂ ಓದಿ PBKS vs SRH: ಸೋಲಿನ ಮೂಲಕ ಅಭಿಯಾನ ಮುಗಿಸಿದ ಪಂಜಾಬ್​; ಹೈದರಾಬಾದ್​​ಗೆ 4 ವಿಕೆಟ್​ ಜಯ

ಪಂಜಾಬ್​ ವಿರುದ್ಧದ ಪಂದ್ಯದಲ್ಲಿ 21 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಅಭಿಷೇಕ್​ ಒಟ್ಟು 28 ಎಸೆತಗಳಿಂದ 66 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 6 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಯಿತು.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಂಜಾಬ್​ ಕಿಂಗ್ಸ್​ 5 ವಿಕೆಟ್​ಗೆ 214 ರನ್​ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಆದರೆ ಈ ಮೊತ್ತ ಹೈದರಾಬಾದ್​ ತಂಡವನ್ನು ಕಟ್ಟಿ ಹಾಕಲು ಸಾಕಾಗಲಿಲ್ಲ. ಗುರಿ ಬೆನ್ನಟ್ಟಿದ ಸನ್​ರೈಸರ್ಸ್​ ಹೈದರಾಬಾದ್ 19.1​ ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 215 ಬಾರಿಸಿ ತವರಿನಲ್ಲಿ ವಿಜಯ ಪತಾಕೆ ಹಾರಿಸಿತು. ಉಭಯ ತಂಡಗಳ ಜಿದ್ದಾಜಿದ್ದಿನ ಬ್ಯಾಟಿಂಗ್​ ಪರಾಕ್ರಮದಿಂದಾಗಿ ಈ ಪಂದ್ಯದಲ್ಲಿ ಒಟ್ಟು 429 ರನ್​ ದಾಖಲಾಯಿತು.

ಈಗಾಗಲೇ ಪ್ಲೇ ಆಫ್​ ಪ್ರವೇಶಿಸಿರುವ ಹೈದರಾಬಾದ್​ ಈ ಗೆಲುವಿನೊಂದಿಗೆ 17 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ರಾತ್ರಿ ನಡೆಯುವ ಪಂದ್ಯದಲ್ಲಿ ರಾಜಸ್ಥಾನ್​ ತಂಡ ಕೆಕೆಆರ್​ ವಿರುದ್ಧ ಗೆದ್ದರೆ ಹೈದರಾಬಾದ್​ ಮೂರನೇ ಸ್ಥಾನಕ್ಕೆ ಕುಸಿದು ಎಲಿಮಿನೇಟರ್​​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಆಡಲಿದೆ. ​ಎಲಿಮಿನೇಟರ್ ಪಂದ್ಯ ಬುಧವಾರ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

Continue Reading

ಕ್ರೀಡೆ

PBKS vs SRH: ಸೋಲಿನ ಮೂಲಕ ಅಭಿಯಾನ ಮುಗಿಸಿದ ಪಂಜಾಬ್​; ಹೈದರಾಬಾದ್​​ಗೆ 4 ವಿಕೆಟ್​ ಜಯ

PBKS vs SRH: ಈಗಾಗಲೇ ಪ್ಲೇ ಆಫ್​ ಪ್ರವೇಶಿಸಿರುವ ಹೈದರಾಬಾದ್​ ಈ ಗೆಲುವಿನೊಂದಿಗೆ 17 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ರಾತ್ರಿ ನಡೆಯುವ ಪಂದ್ಯದಲ್ಲಿ ರಾಜಸ್ಥಾನ್​ ತಂಡ ಕೆಕೆಆರ್​ ವಿರುದ್ಧ ಗೆದ್ದರೆ ಹೈದರಾಬಾದ್​ ಮೂರನೇ ಸ್ಥಾನಕ್ಕೆ ಕುಸಿದು ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಆಡಲಿದೆ. ​

VISTARANEWS.COM


on

PBKS vs SRH
Koo

ಹೈದರಾಬಾದ್​: ಎಡಗೈ ಬ್ಯಾಟರ್​ ಅಭಿಷೇಕ್​​ ಶರ್ಮ(66) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ಸನ್​ರೈರ್ಸ್​ ಹೈದರಾಬಾದ್​(PBKS vs SRH) ತಂಡ ತವರಿನಲ್ಲೇ ನಡೆದ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ 4 ವಿಕೆಟ್ ಅಂತರದ ಗೆಲುವು ಸಾಧಿಸಿದೆ.​ ಈಗಾಗಲೇ ಪ್ಲೇ ಆಫ್​ ಪ್ರವೇಶಿಸಿರುವ ಹೈದರಾಬಾದ್​ ಈ ಗೆಲುವಿನೊಂದಿಗೆ 17 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ರಾತ್ರಿ ನಡೆಯುವ ಪಂದ್ಯದಲ್ಲಿ ರಾಜಸ್ಥಾನ್​ ತಂಡ ಕೆಕೆಆರ್​ ವಿರುದ್ಧ ಗೆದ್ದರೆ ಹೈದರಾಬಾದ್​ ಮೂರನೇ ಸ್ಥಾನಕ್ಕೆ ಕುಸಿದು ಎಲಿಮಿನೇಟರ್​​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಆಡಲಿದೆ. ​ಎಲಿಮಿನೇಟರ್ ಪಂದ್ಯ ಬುಧವಾರ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

ಬ್ಯಾಟಿಂಗ್​ ಸ್ನೇಹಿಯಾದ ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಂಜಾಬ್​ ಕಿಂಗ್ಸ್​ 5 ವಿಕೆಟ್​ಗೆ 214 ರನ್​ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಆದರೆ ಈ ಮೊತ್ತ ಹೈದರಾಬಾದ್​ ತಂಡವನ್ನು ಕಟ್ಟಿ ಹಾಕಲು ಸಾಕಾಗಲಿಲ್ಲ. ಗುರಿ ಬೆನ್ನಟ್ಟಿದ ಸನ್​ರೈಸರ್ಸ್​ ಹೈದರಾಬಾದ್ 19.1​ ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 215 ಬಾರಿಸಿ ತವರಿನಲ್ಲಿ ವಿಜಯ ಪತಾಕೆ ಹಾರಿಸಿತು. ಉಭಯ ತಂಡಗಳ ಜಿದ್ದಾಜಿದ್ದಿನ ಬ್ಯಾಟಿಂಗ್​ ಪರಾಕ್ರಮದಿಂದಾಗಿ ಈ ಪಂದ್ಯದಲ್ಲಿ ಒಟ್ಟು 429 ರನ್​ ದಾಖಲಾಯಿತು.

ಹೆಡ್​ ಕ್ಲೀನ್​ ಬೌಲ್ಡ್​


ಗುರಿ ಬೆನ್ನಟ್ಟಿದ ಹೈದರಾಬಾದ್​ ತಂಡ ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಟ್ರಾವಿಸ್​ ಹೆಟ್​​ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಹೆಡ್​​ ಅವರು ಅರ್ಶದೀಪ್​ ಸಿಂಗ್​ ಅವರ ಮೊದಲ ಎಸೆತಲ್ಲೇ ಕ್ಲೀನ್​ ಬೌಲ್ಡ್​ ಆದರು. ಹೆಡ್​ ವಿಕೆಟ್​ ಬಿದ್ದರೂ ಕೂಡ ವಿಚಲಿತರಾಗದ ಅಭಿಷೇಕ್​ ಶರ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಪಂಜಾಬ್​ ಬೌಲರ್​ಗಳ ಮೇಲೆರಗಿ ಸತತ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ತಮ್ಮ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು.

​ಅಭಿಷೇಕ್ ಶರ್ಮ ಅವರಿಗೆ ಮತ್ತೊಂದು ತುದಿಯಲ್ಲಿ ರಾಹುಲ್​ ತ್ರಿಪಾಠಿ ಕೂಡ ಉತ್ತಮ ಸಾಥ್​ ನೀಡಿದರು. ಉಭಯ ಆಟಗಾರರು ಸೇರಿಕೊಂಡು ದ್ವಿತೀಯ ವಿಕೆಟ್​ಗೆ 72 ರನ್​ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಮೊತ್ತವನ್ನು ಈ ಜೋಡಿ ಕೇವಲ 4.6 ಓವರ್​ನಲ್ಲಿ ಬಾರಿಸಿದರು. ತಿಪಾಠಿ 18 ಎಸೆತ ಎದುರಿಸಿ 33(4 ಬೌಂಡರಿ, 2 ಸಿಕ್ಸರ್​) ಬಾರಿಸಿದರು.

ಮತ್ತೆ ಸಿಡಿದ ಅಭಿಷೇಕ್ ಶರ್ಮ

ಮೂರನೇ ವಿಕೆಟ್​ಗೂ ಅಭಿಷೇಕ್​, ನಿತೀಶ್​ ರೆಡ್ಡಿ ಜತೆಗೂಡಿ ಮತ್ತೊಂದು ಅರ್ಧಶತಕದ ಜತೆಯಾಟ ನಡೆಸಿ ಗಮನಸೆಳೆದರು. ಸಿಕ್ಸರ್​ಗಳ ಸುರಿಮಳೆ ಸುರಿಸಿದ ಅಭಿಷೇಕ್​ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರನಾಗಿ ಹೊರಮೊಮ್ಮಿದರು. ಇದೇ ವೇಳೆ 37 ಸಿಕ್ಸರ್​ ಬಾರಿಸಿರುವ ವಿರಾಟ್​ ಕೊಹ್ಲಿಯ ದಾಖಲೆ ಪತನಗೊಂಡಿತು. ಒಟ್ಟು 28 ಎಸೆತ ಎದುರಿಸಿದ ಅಭಿಷೇಕ್​ ಬರೋಬ್ಬರಿ 6 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿ 66 ರನ್​ ಬಾರಿಸಿದರು. 51 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇದು ಈ ಆವೃತ್ತಿಯ 3ನೇ ಅರ್ಧಶತಕವಾಗಿದೆ.

ಇದನ್ನೂ ಓದಿ RCB vs CSK: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

ಅಭಿಷೇಕ್​ ವಿಕೆಟ್​ ಪತನದ ಬಳಿಕ ಉತ್ತಮವಾಗಿ ಆಡುತ್ತಿದ್ದ ನಿತೀಶ್​ ರೆಡ್ಡಿ 37 ರನ್​ಗೆ ವಿಕೆಟ್​ ಕಳೆದುಕೊಂಡರು. ಬಳಿಕ ಬಂದ ಶಾಬಾಜ್​ ಅಹ್ಮದ್​ 3 ರನ್​ಗೆ ವಿಕೆಟ್​ ಕೈಚೆಲ್ಲಿದರು. ಈ ವೇಳೆ ಹೈದರಾಬಾದ್​ ಕೊಂಚ ಆತಂಕಕ್ಕೆ ಸಿಲುಕಿತು. ಇದೇ ವೇಳೆ ಹೆನ್ರಿಚ್​ ಕ್ಲಾಸೆನ್​ ಜವಾಬ್ದಾರಿಯು ಬ್ಯಾಟಿಂಗ್​ ನಡೆಸಿ 42 ರನ್​ ಬಾರಿಸಿದರು. ಅಂತಿಮವಾಗಿ ಅಬ್ದುಲ್​ ಸಮದ್​(11*) ಮತ್ತು ಸನ್ವೀರ್ ಸಿಂಗ್(6*) ಅಜೇಯ ರನ್​ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಾಬ್​ ಬ್ಯಾಟರ್​ಗಳು ಬೃಹತ್​ ಮೊತ್ತ ಪೇರಿಸಿದರೂ ಬೌಲರ್​ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಾರದ ಕಾರಣ ಸೋಲಿಗೆ ತುತ್ತಾದರು.

ಪ್ರಭಾಸಿಮ್ರಾನ್ ಅರ್ಧಶತಕ ವ್ಯರ್ಥ


ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕೂಡ ಅತ್ಯಂತ ಜೋಶ್​ನಲ್ಲಿ ಬ್ಯಾಟಿಂಗ್ ನಡೆಸಿತು. ಆರಂಭಿಕ ಆಟಗಾರರಾದ ​ಅಥರ್ವ ತೈಡೆ ಮತ್ತು ಪ್ರಭಾಸಿಮ್ರಾನ್ ಸಿಂಗ್ 10 ಸರಾಸರಿಯಲ್ಲಿ ರನ್​ ಗಳಿಸಿ ಮೊದಲ ವಿಕೆಟ್​ಗೆ 97 ರನ್​ ಒಟ್ಟುಗೂಡಿಸಿದರು. ಅಥರ್ವ ತೈಡೆ 46 ರನ್​ ಬಾರಿಸಿದರೆ, ಪ್ರಭಾಸಿಮ್ರಾನ್ 71 ರನ್(7 ಬೌಂಡರಿ, 4 ಸಿಕ್ಸರ್​)​ ಬಾರಿಸಿದರು. ಆ ಬಳಿಕ ಬಂದ ರೀಲಿ ರೋಸೊ ಕೂಡ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸಿ 4 ಸಿಕ್ಸರ್​ ಮತ್ತು 3 ಬೌಂಡರಿ ನೆರವಿನಿಂದ 47 ರನ್​ ಗಳಿಸಿ ಔಟಾದರು. ಈ ಮೂಲಕ ಕೇವಲ 3 ರನ್​ ಅಂತರದಿಂದ ಅರ್ಧಶಕ ವಂಚಿತರಾದರು.

5 ನೇ ಕ್ರಮಾಂಕದಲ್ಲಿ ಆಡಲಿಳಿದ ಜಿತೇಶ್​ ಶರ್ಮ ಕೇವಲ 15 ಎಸೆತಗಳಿಂದ ಅಜೇಯ 32 ರನ್​ ಬಾರಿಸಿ ತಂಡದ ಬೃಹತ್​ ಮೊತಕ್ಕೆ ಕಾರಣರಾದರು. ಹೈದರಾಬಾದ್​ ಪರ ಎಡಗೈ ವೇಗಿ ಟಿ ನಟರಾಜ್​ 33 ರನ್​ಗೆ 2 ವಿಕೆಟ್​ ಉರುಳಿಸಿದರು. ನಾಯಕ ಪ್ಯಾಟ್​ ಕಮಿನ್ಸ್​ ಮತ್ತು ವಿಜಯಕಾಂತ್ ವ್ಯಾಸಕಾಂತ್ ತಲಾ ಒಂದು ವಿಕೆಟ್​ ಪಡೆದರು.

Continue Reading

ಕ್ರೀಡೆ

RCB vs CSK: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

RCB vs CSK: ಶನಿವಾರದ ಚೆನ್ನೈ ಮತ್ತು ಆರ್​ಸಿಬಿ(RCB vs CSK) ನಡುವಣ ಪಂದ್ಯ ಜಿಯೋ ಸಿನಿಮಾದಲ್ಲಿ(jiocinema) 50 ಕೋಟಿ ವೀಕ್ಷಣೆ ಕಾಣುವ ಮೂಲಕ ಐಪಿಎಲ್(IPL 2024)​ ಇತಿಹಾಸದಲ್ಲೇ ಡಿಜಿಟಲ್​ ವೀಕ್ಷಣೆಯಲ್ಲಿ ಅತ್ಯಧಿಕ ವೀಕ್ಷಣೆ ಕಂಡ ಪಂದ್ಯವೆಂಬ ದಾಖಲೆ ನಿರ್ಮಿಸಿದೆ.

VISTARANEWS.COM


on

RCB vs CSK
Koo

ಬೆಂಗಳೂರು: ಫೈನಲ್​ ಪಂದ್ಯಕ್ಕೂ ಮಿಗಿಲಾದ ಕಾತುಕ ಸೃಷ್ಟಿಸಿದ್ದ ಶನಿವಾರದ ಚೆನ್ನೈ ಮತ್ತು ಆರ್​ಸಿಬಿ(RCB vs CSK) ನಡುವಣ ಪಂದ್ಯ ಜಿಯೋ ಸಿನಿಮಾದಲ್ಲಿ(jiocinema) 50 ಕೋಟಿ ವೀಕ್ಷಣೆ ಕಾಣುವ ಮೂಲಕ ದಾಖಲೆಯೊಂದನ್ನು ಬರೆದಿದೆ. ಐಪಿಎಲ್(IPL 2024)​ ಇತಿಹಾಸದಲ್ಲೇ ಡಿಜಿಟಲ್​ ವೀಕ್ಷಣೆಯಲ್ಲಿ ಅತ್ಯಧಿಕ ವೀಕ್ಷಣೆ ಕಂಡ ಪಂದ್ಯವೆಂಬ ದಾಖಲೆ ನಿರ್ಮಿಸಿದೆ.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು.


ಅದರಲ್ಲೂ ಅಂತಿಮ ಓವರ್​ ವೇಳೆಗೆ ವೀಕ್ಷಕರ ಸಂಖ್ಯೆ ಒಂದೇ ಕ್ಷಣ ಏರಿಕೆ ಕಂಡಿತು. ಚೆನ್ನೈಗೆ(RCB vs CSK) ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಪಂದ್ಯದಲ್ಲಿ 201ರನ್​ ಗಡಿ ದಾಟಿಬೇಕಿತ್ತು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು ಪಂದ್ಯ ಗೆಲ್ಲದಿದ್ದರೂ ಕೂಡ ಪ್ಲೇ ಆಫ್​ ಲೆಕ್ಕಾಚಾರದಲ್ಲಿ 201 ರನ್​ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರು. ಈ ಗುರಿ ತಲುಪಲು ಚೆನ್ನೈಗೆ ಅಂತಿಮವಾಗಿ 6 ಎಸೆತಗಳಲ್ಲಿ 17 ರನ್ ತೆಗೆಯುವ ಸವಾಲು ಎದುರಾಯಿತು. ಈ ವೇಳೆ  ಯಶ್​ ದಯಾಳ್​ ಎಸೆತ ಅಂತಿಮ ಓವರ್​ನ ಮೊದಲ ಎಸೆತವನ್ನೇ ಧೋನಿ ಔಟ್​ ಆಫ್​ದಿ ಸ್ಟೇಡಿಯಂಗೆ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್​ 110 ಮೀ. ದೂರ ಚಿಮ್ಮಿತು. ಈ ವೇಳೆ ಪಂದ್ಯ ರೋಚಕ ಘಟ್ಟ ತಲುಪಿತು. 5 ಎಸೆತಗಳಲ್ಲಿ 11 ರನ್ ಬೇಕಿದ್ದಾಗ ಧೋನಿ ಮತ್ತೊಂದು ಸಿಕ್ಸರ್​ಗೆ ಪ್ರಯತ್ನಪಟ್ಟರು. ಆದರೆ ಇದು ಬ್ಯಾಟ್​ನ ತಳಭಾಗಕ್ಕೆ ಸಿಕ್ಕಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ಔಟಾದರು. ಅಂತಿಮವಾಗಿ 2 ಎಸೆತಕ್ಕೆ 10 ರನ್​ ಬೇಕಿದ್ದಾಗ ಜಡೇಜಾ 2 ಬಾಲ್​ ಡಾಡ್​ ಮಾಡಿದರು. ಆರ್​ಸಿಬಿ 27 ರನ್​ಗಳ ಗೆಲುವು ಸಾಧಿಸಿ 4ನೇ ತಂಡವಾಗಿ ಪ್ಲೇ ಆಫ್​ಗೆ ಪ್ರವೇಶ ಪಡೆಯಿತು.

ಇದನ್ನೂ ಓದಿ RCB vs CSK: ಧೋನಿ ವರ್ತನೆಗೆ ‘ಇಟ್‌ ಹರ್ಟ್ಸ್‌​’ ಎಂದ ಆರ್​ಸಿಬಿ ಅಭಿಮಾನಿಗಳು; ಧೋನಿ ಮಾಡಿದ ತಪ್ಪೇನು?


​ಅಭಿಮಾನಿಗಳು ಈ ಪಂದ್ಯವನ್ನು ಅಕ್ಷರಶಃ ಫೈನಲ್‌ ಎಂದೇ ಪರಿಗಣಿಸಿದ್ದರು. ಆರ್​ಸಿಬಿ ಗೆಲುವಿನ ಬಳಿಕ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತು.  ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಸಂಭ್ರಮಾಚರಣೆ ಕಂಡು ಬಂತು.

ಪಂದ್ಯ ಮುಕ್ತಾಯವಾದಾಗ ತಡರಾತ್ರಿಯಾಗಿದ್ದರೂ ಅಭಿಮಾನಿಗಳ ಸಡಗರಕ್ಕೆ ಕೊರತೆ ಇರಲಿಲ್ಲ. ಪುಟ್ಟ ಮಕ್ಕಳು ಸೇರಿದಂತೆ ಆರ್‌ಸಿಬಿ ಫ್ಯಾನ್ಸ್‌ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದರು. ಮಕ್ಕಳಂತೂ ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಕೂಗುತ್ತಿರುವುದು ಕಂಡು ಬಂತು. ಚಿನ್ನಸ್ವಾಮಿ ಕ್ರೀಡಾಂಗಣದ ಎದುರಿನ ರಸ್ತೆ ಬ್ಲಾಕ್ ಮಾಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಇದು ನಿಜವಾದ ಹೊಸ ಅಧ್ಯಾಯ ಎನ್ನುವ ಮಾತು ಎಲ್ಲೆಡೆ ಕೇಳಿ ಬಂದಿದೆ.

Continue Reading

ಕ್ರೀಡೆ

Rohit Sharma: ಐಪಿಎಲ್ ಪ್ರಸಾರಕರ ವಿರುದ್ಧ ಕಿಡಿ ಕಾರಿದ ಹಿಟ್​ಮ್ಯಾನ್​ ರೋಹಿತ್​

Rohit Sharma: ಸ್ಟಾರ್ ಸ್ಪೋರ್ಟ್ಸ್ ನಾನು ತಂಡದ ಸಹ ಆಟಗಾರರು ಮತ್ತು ಸಹೋದ್ಯೋಗಿಗಳೊಂದಿಗೆ ಆಡಿದ ವೈಯಕ್ತಿಕ ಮಾತುಕತೆಗಳ ಆಡಿಯೊ ಮತ್ತು ವಿಡಿಯೊ ತುಣುಕನ್ನು ಹಂಚಿಕೊಳ್ಳುವುದನ್ನು ಸ್ಟಾರ್ ಸ್ಪೋರ್ಟ್ಸ್ ಮುಂದುವರೆಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್​ ಹುಟ್ಟಿಸುವ ಸಲುವಾಗಿ ಪ್ರಸಾರಕರು ಈ ರೀತಿ ಕ್ರಿಕೆಟಿಗರ ಗೌಪ್ಯತೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ರೋಹಿತ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Rohit Sharma
Koo

ಮುಂಬಯಿ: ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಐಪಿಎಲ್ ಬ್ರಾಡ್‌ಕಾಸ್ಟರ್(IPL Broadcaster) ಸ್ಟಾರ್ ಸ್ಪೋರ್ಟ್ಸ್(Star Sports) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ರೋಹಿತ್​ ಅವರು ಧವಳ್ ಕುಲಕರ್ಣಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು. ಇದನ್ನು ರೆಕಾರ್ಡ್​ ಮಾಡುತ್ತಿರುವ ಕ್ಯಾಮೆರಾಮನ್​ಗೆ ಆಡಿಯೊ ಆಫ್​ ಮಾಡಿ ಎಂದು ಕೋರಿಕೊಂಡಿದ್ದರು. ಆದರೂ ಕೂಡ ಆಡಿಯೊ ರೆಕಾರ್ಡ್​ ಮಾಡಿ ಈ ತುಣುಕನ್ನು ಹರಿ ಬಿಟ್ಟು ಖಾಸಗಿತನವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.

ರೋಹಿತ್​ ಶರ್ಮ ಈ ಕುರಿತು ಟ್ವೀಟ್​ ಮಾಡಿದ್ದು, ‘ತನ್ನ ವಿನಂತಿಯ ಹೊರತಾಗಿಯೂ, ಸ್ಟಾರ್ ಸ್ಪೋರ್ಟ್ಸ್ ನಾನು ತಂಡದ ಸಹ ಆಟಗಾರರು ಮತ್ತು ಸಹೋದ್ಯೋಗಿಗಳೊಂದಿಗೆ ಆಡಿದ ವೈಯಕ್ತಿಕ ಮಾತುಕತೆಗಳ ಆಡಿಯೊ ಮತ್ತು ವಿಡಿಯೊ ತುಣುಕನ್ನು ಹಂಚಿಕೊಳ್ಳುವುದನ್ನು ಸ್ಟಾರ್ ಸ್ಪೋರ್ಟ್ಸ್ ಮುಂದುವರೆಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್​ ಹುಟ್ಟಿಸುವ ಸಲುವಾಗಿ ಪ್ರಸಾರಕರು ಈ ರೀತಿ ಕ್ರಿಕೆಟಿಗರ ಗೌಪ್ಯತೆಗೆ ಅಡ್ಡಿಪಡಿಸುವುದು ಸರಿಯಲ್ಲ. ಸ್ವಲ್ಪವಾದರೂ ಸಾಮಾನ್ಯ ಜ್ಞಾನ ಇರಬೇಕು” ಎಂದು ಟ್ವೀಟ್​ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕ್ರಿಕೆಟಿಗರ ಜೀವನವು ಎಷ್ಟು ಗೊಂದಲವಾಗಿದೆ ಎಂದರೆ, ಈಗ ನಾವು ನಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ, ತರಬೇತಿ ಅಥವಾ ಪಂದ್ಯದ ದಿನಗಳಲ್ಲಿ ಗೌಪ್ಯವಾಗಿ ಮಾತನಾಡು ಕೂಡ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ನಡೆಸುವ ಪ್ರತಿಯೊಂದು ಸಂಭಾಷಣೆಯನ್ನು ಕೂಡ ಕ್ಯಾಮೆರಾಗಳು ರೆಕಾರ್ಡ್ ಮಾಡುತ್ತಿವೆ. ಇದು ಒಳ್ಳೆಯ ವಾತಾವರಣವಲ್ಲ ಎಂದು ರೋಹಿತ್​ ಬೇಸರ ವ್ಯಕ್ತಪಡಿಸಿದ್ದಾರೆ.

ರೋಹಿತ್​ ಅವರು ಕೆಕೆಆರ್​ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಜತೆ ಮಾತನಾಡುತ್ತಿದ್ದಾಗಲೂ ಇದನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಲಾಗಿತ್ತು. ಈಡನ್ ಗಾರ್ಡನ್ಸ್​​ನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೂ ಮೊದಲು ರೋಹಿತ್ ಅವರು ನಾಯರ್ ಅವರೊಂದಿಗೆ ಸಂವಾದ ನಡೆಸಿದ್ದರು.

ಇದನ್ನೂ ಓದಿ IPL 2024 : ʻಅಶ್ವಿನಿ ದೊಡ್ಮನೆಯ ಅದೃಷ್ಟ ದೇವತೆ’: ತುಚ್ಛ ಪದ ಬಳಸಿದವರಿಗೆ ಭಾರೀ ತಿರುಗೇಟು!

ನಾಯಕತ್ವದ ಕರ್ತವ್ಯಗಳಿಂದ ಮುಕ್ತರಾದ ನಂತರ ರೋಹಿತ್ ಈ ಬಾರಿ ದೊಡ್ಡ ಸ್ಕೋರ್ ಮಾಡುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ಈ ನಿರೀಕ್ಷೆಗಳಲ್ಲೆ ಹುಸಿಯಾಗಿತ್ತು. ರೋಹಿತ್​ ಈ ಬಾರಿ 1 ಶತಕ ಬಾರಿಸಿದ್ದು ಬಿಟ್ಟರೆ ಉಳಿದ ಬಹುತೇಕ ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ತೋರಿದ್ದರು. ಐಪಿಎಲ್​​ ವೇದಿಕೆಯಲ್ಲಿ ಮಿಂಚಲು ಸಾಧ್ಯವಾಗದಿದ್ದರೂ, ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ರೋಹಿತ್ ದೊಡ್ಡ ಮೊತ್ತವನ್ನು ಗಳಿಸಲು ಎದುರು ನೋಡುತ್ತಿದ್ದಾರೆ.

ಟೀಮ್​ ಇಂಡಿಯಾದ(team india) ಮೊದಲ ಬ್ಯಾಚ್​ ಮೇ 25ರಂದು ನ್ಯೂಯಾರ್ಕ್(New York)​ಗೆ ಪ್ರಯಾಣಿಸಲಿದೆ. ಈ ಬ್ಯಾಚ್​ನಲ್ಲಿ ನಾಯಕ ರೋಹಿತ್​ ಶರ್ಮ(Rohit Sharma), ಉಪನಾಯಕ ಹಾರ್ದಿಕ್​ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​ ಸೇರಿ ಐಪಿಎಲ್​ ಪ್ಲೇ ಆಫ್​ನಿಂದ ಹೊರಬಿದ್ದ ತಂಡದ ಆಟಗಾರರು ಪ್ರಯಾಣಿಸಲಿದ್ದಾರೆ. ಉಳಿದ ಆಟಗಾರರು ಮೇ 26 ಐಪಿಎಲ್​ ಫೈನಲ್​ ಬಳಿಕ ವಿಮಾನ ಏರಲಿದ್ದಾರೆ. ಒಟ್ಟು 2 ಬ್ಯಾಚ್​ಗಳಾಗಿ ಭಾರತೀಯ ಆಟಗಾರರು ಪ್ರಯಾಣಿಸಲಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.

Continue Reading
Advertisement
SRH vs PBKS
ಕ್ರೀಡೆ27 mins ago

SRH vs PBKS: ಒಂದು ದಿನ ಕಳೆಯುವ ಮುನ್ನವೇ ಕೊಹ್ಲಿಯ ಸಿಕ್ಸರ್​ ದಾಖಲೆ ಮುರಿದ ಅಭಿಷೇಕ್

Harish Poonja
ಕರ್ನಾಟಕ1 hour ago

Harish Poonja: ಪೊಲೀಸರಿಗೆ ಧಮ್ಕಿ; ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

Ebrahim Raisi
ವಿದೇಶ1 hour ago

Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

PBKS vs SRH
ಕ್ರೀಡೆ2 hours ago

PBKS vs SRH: ಸೋಲಿನ ಮೂಲಕ ಅಭಿಯಾನ ಮುಗಿಸಿದ ಪಂಜಾಬ್​; ಹೈದರಾಬಾದ್​​ಗೆ 4 ವಿಕೆಟ್​ ಜಯ

West Nile fever Health department on alert
ಆರೋಗ್ಯ2 hours ago

West Nile fever : ಕೇರಳದಲ್ಲಿ ವೆಸ್ಟ್‌ ನೈಲ್ ಭೀತಿ; ಮೈಸೂರು ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಅಲರ್ಟ್‌

Great Khali
ದೇಶ2 hours ago

Great Khali: ಜಗತ್ತಿನ ಕುಬ್ಜ ಮಹಿಳೆಯನ್ನು ಮಗುವಿನಂತೆ ಎತ್ತಿ ಆಡಿಸಿದ ಗ್ರೇಟ್‌ ಖಲಿ; ಜನ ಕೆಂಡವಾಗಿದ್ದು ಏಕೆ?

Kalki 2898 AD
ಪ್ರಮುಖ ಸುದ್ದಿ2 hours ago

Kalki 2898 AD: ಮೇ 22ಕ್ಕೆ ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ; ಕಲ್ಕಿ ಚಿತ್ರದ 5ನೇ ಸೂಪರ್ ಸ್ಟಾರ್ ಯಾರು?

RCB vs CSK
ಕ್ರೀಡೆ2 hours ago

RCB vs CSK: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

Rain News
ಕರ್ನಾಟಕ3 hours ago

Rain News: ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು, ಯುವಕನಿಗೆ ಗಂಭೀರ ಗಾಯ

Prajwal Revanna Case
ಕರ್ನಾಟಕ3 hours ago

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌