Rishabh Pant jersey number 17 print on cap of all Delhi Capitals players IPL 2023 : ಡೆಲ್ಲಿ ಕ್ಯಾಪಿಟಲ್ಸ್​ ಆಟಗಾರರೆಲ್ಲರ ಕ್ಯಾಪ್​ನಲ್ಲಿ ರಿಷಭ್​ ಪಂತ್​​ ಜೆರ್ಸಿ ನಂಬರ್​ 17 ಪ್ರಿಂಟ್​ - Vistara News

ಕ್ರಿಕೆಟ್

IPL 2023 : ಡೆಲ್ಲಿ ಕ್ಯಾಪಿಟಲ್ಸ್​ ಆಟಗಾರರೆಲ್ಲರ ಕ್ಯಾಪ್​ನಲ್ಲಿ ರಿಷಭ್​ ಪಂತ್​​ ಜೆರ್ಸಿ ನಂಬರ್​ 17 ಪ್ರಿಂಟ್​

ರಿಷಭ್​ ಪಂತ್​ ಐಪಿಎಲ್​ನಲ್ಲಿ (IPL 2023) ಆಡದಿರುವ ಹೊರತಾಗಿಯೂ ಅವರಿಗೆ ಪ್ರೋತ್ಸಾಹ ನೀಡುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉದ್ದೇಶ

VISTARANEWS.COM


on

Rishabh Pant jersey number 17 print on cap of all Delhi Capitals players
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭೀಕರ ಕಾರು ಅಪಘಾತಕ್ಕೆ ಒಳಗಾಗಿ ಗಾಯಗೊಂಡಿರುವ ರಿಷಭ್​ ಪಂತ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಅವರು ಸುಧಾರಣೆಯ ಹಂತದಲ್ಲಿದ್ದು ಮೈದಾನಕ್ಕೆ ಇಳಿದು ಆಡಲು ವರ್ಷವೇ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು 2023ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡುವುದಿಲ್ಲ. ರಿಷಭ್​ ಪಂತ್​ ಅಲಭ್ಯತೆ ಡೆಲ್ಲಿ ತಂಡಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿದೆ. ತಂಡದ ನಾಯಕರಾಗಿದ್ದ ಜತೆಗೆ ವಿಕೆಟ್​ಕೀಪಿಂಗ್​ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದ್ದ ಕಾರಣ ಅವರ ಸ್ಥಾನಕ್ಕೆ ಪರ್ಯಾಯ ಆಟಗಾರನನ್ನು ಹುಡುಕುವ ಸಮಸ್ಯೆ ಎದುರಾಗಿದೆ.. ಹರಾಜು ಪ್ರಕ್ರಿಯೆಯಲ್ಲಿ ಡೇವಿಡ್​ ವಾರ್ನರ್ ಅವರನ್ನು ತಂಡಕ್ಕೆ ತನ್ನ ತೆಕ್ಕೆಗೆ ತೆಗೆದುಕೊಂಡು ನಾಯಕತ್ವ ಪಟ್ಟ ನೀಡಿದೆ. ಆದರೆ ವಿಕೆಟ್​ ಕೀಪಿಂಗ್​ಗೆ ಉತ್ತಮ ಆಯ್ಕೆ ಕಷ್ಟ.

ಮಾರ್ಚ್​ 24ರಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಂಪ್​ನಲ್ಲಿ ನಡೆದ ಸಭೆಯಲ್ಲಿ ಕೋಚ್​ ರಿಕಿ ಪಾಂಟಿಂಗ್ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್​ ಅಗತ್ಯವನ್ನು ಸ್ಮರಿಸಿಕೊಂಡಿದ್ದರು. ಇದೇ ವೇಳೆ ಪಂತ್​ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವಂತೆಯೂ ಮನವಿ ಮಾಡಿದ್ದರು. ಅದಕ್ಕಿಂತ ಹೆಚ್ಚಾಗಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರರು ಧರಿಸುವ ಜೆರ್ಸಿ ಅಥವಾ ಕ್ಯಾಪ್​ನಲ್ಲಿ ರಿಷಭ್​ ಪಂತ್​ ಜೆರ್ಸಿ ಸಂಖ್ಯೆ 17 ಪ್ರಿಂಟ್​ ಮಾಡಲು ಮುಂದಾಗಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ರಿಷಭ್ ಪಂತ್​ಗೆ ವಿಶ್ವಾಸ ತುಂಬಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ರಿಷಭ್​ ಪಂತ್​ ಅಲಭ್ಯತೆಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ಡೇವಿಡ್​ ವಾರ್ನರ್​ಗೆ ನಾಯಕತ್ವ ನೀಡಲಾಗಿದೆ. ಮಿನಿ ಹರಾಜಿನಲ್ಲಿ 6.5 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ತೆಗೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ ಅವರಿಗೆ ತಂಡವನ್ನು ಮುನ್ನಡೆಸುವ ಹೊಣೆಗಾರಿಕೆ ನೀಡಿದೆ. ಅದೇ ರೀತಿ ಆಲ್​ರೌಂಡರ್​ ಅಕ್ಷರ್ ಪಟೇಲ್​ಗೆ ಉಪನಾಯಕನ ಪಟ್ಟವನ್ನು ಕಟ್ಟಿದೆ.

ಇದನ್ನೂ ಓದಿ : Rishabh Pant: ರಿಷಭ್​ ಪಂತ್​ ಭೇಟಿಯಾದ ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​

ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ ಐಪಿಎಲ್​ ಟ್ರೋಫಿ ಎತ್ತಿ ಹಿಡಿಯಲು ಸಫಲವಾಗಿಲ್ಲ. ಹೀಗಾಗಿ ವಾರ್ನರ್​ ನಾಯಕತ್ವದಲ್ಲಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವುದಕ್ಕೆ ಸಜ್ಜಾಗಿದೆ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಐದನೇ ತಂಡವಾಗಿ ಐಪಿಎಲ್​ ಮುಗಿಸಿದ್ದ ಕಾರಣ ಪ್ಲೇಆಫ್ ಹಂತಕ್ಕೂ ಹೋಗಿರಲಿಲ್ಲ. ಏಪ್ರಿಲ್​ 1ರಂದು ನಡೆಯುವ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಲಖನೌ ಸೂಪರ್​ ಜಯಂಟ್ಸ್​ ತಂಡಕ್ಕೆ ಎದುರಾಗಲಿದೆ.

ಸುಧಾರಣೆಯ ಹಾದಿಯಲ್ಲಿ ಪಂತ್​

ಡೆಲ್ಲಿಯಿಂದ ಡೆಹ್ರಾಡೂನ್​ಗೆ ಹೋಗುವ ಹಾದಿಯಲ್ಲಿ ರಿಷಭ್​ ಪಂತ್​ ಚಲಾಯಿಸುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಪವಾಡಸದೃಶ ರಿಷಭ್​ ಪಂತ್​ ಪಾರಾಗಿದ್ದರು. ಮೊದಲಿಗೆ ಡೆಹ್ರಾಡೂನ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮಂಡಿಯ ಗಾಯಕ್ಕಾಗಿ ಮುಂಬಯಿಯ ಕೋಕಿಲಾ ಬೆನ್​ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

ಎಡಗೈ ಬ್ಯಾಟರ್​ ಪ್ರಸ್ತುತ ಮನೆಯಲ್ಲಿಯೇ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಕಳೆದ ಕೆಲವೊಂದು ದಿನಗಳಿಂದ ಅವರು ತಾವು ಊರುಗೋಲಿನ ಸಮೇತ ನಡೆದುಕೊಂಡು ಹೋಗುವ ವಿಡಿಯೊವನ್ನು ಶೇರ್​ ಮಾಡಿಕೊಂಡಿದ್ದರು. ಅಲ್ಲದೇ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Gautam Gambhir: 27 ವರ್ಷದ ಬಳಿಕ ಲಂಕಾ ವಿರುದ್ಧ ಸೋಲು; ಗಂಭೀರ್​ ಫುಲ್​ ಟ್ರೋಲ್​

Gautam Gambhir: ಭಾರತ ತಂಡಕ್ಕೆ ಕಠಿಣವಾದ ವಿದೇಶಿ ಕ್ರಿಕೆಟ್​ ಸರಣಿ ಯಾವದು ಎಂದು ಪ್ರಶ್ನೆ ಮಾಡಿದರೆ, ಗಂಭೀರ್​ ಮಾತ್ರ ಶ್ರೀಲಂಕಾ ಪ್ರವಾಸ ಎನ್ನುತ್ತಾರೆ ಎಂದು ಗಂಭೀರ್​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

VISTARANEWS.COM


on

Gautam Gambhir
Koo

ಮುಂಬಯಿ: ಗೌತಮ್ ಗಂಭಿರ್(Gautam Gambhir)​ ಅವರು ಭಾರತ ತಂಡದ ಕೋಚ್​ ಆಗುತ್ತಿದ್ದಂತೆ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ, ಅವರ ಕೋಚಿಂಗ್​ನಲ್ಲಿ ಭಾರತ ತಂಡ ಆಡಿದ ಮೊದಲ ಏಕದಿನ ಸರಣಿಯಲ್ಲೇ ದುರ್ಬಲ ಲಂಕಾ ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ. ಜತೆಗೆ 27 ವರ್ಷಗಳ ಬಳಿಕ ಭಾರತ ತಂಡ ಲಂಕಾ ವಿರುದ್ಧ ಸರಣಿ ಸೋಲು ಕಂಡ ಅಪಮಾನಕ್ಕೂ ಒಳಗಾಗಿದೆ. ಇದೇ ಕಾರಣದಿಂದ ನೆಟ್ಟಿಗರು ಗಂಭೀರ್​ ಅವರನ್ನು ಮೀಮ್ಸ್​ಗಳ ಮೂಲಕ ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ.

‘ಭಾರತ ತಂಡಕ್ಕೆ ಕಠಿಣವಾದ ವಿದೇಶಿ ಕ್ರಿಕೆಟ್​ ಸರಣಿ ಯಾವದು ಎಂದು ಪ್ರಶ್ನೆ ಮಾಡಿದರೆ ಆಟಗಾರರು, ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ? ಎಂದು ಹೇಳುತ್ತಾರೆ. ಆದರೆ, ಗಂಭೀರ್​ ಮಾತ್ರ ಶ್ರೀಲಂಕಾ ಪ್ರವಾಸ ಕಠಿಣ ಎನ್ನುತ್ತಾರೆ ಎಂದು ನೆಟ್ಟಿಗರೊಬ್ಬರು ಟ್ರೋಲ್​ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ ಬಿಸಿಸಿಐ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಆಟಗಾರರು ಆಡದೇ ಇದ್ದರೆ ಕೋಚ್​ ಏನು ಮಾಡಲು ಸಾಧ್ಯ ಎಂದು ಗಂಭೀರ್​ ಪರ ಬ್ಯಾಟ್​ ಬೀಸಿದ್ದಾರೆ.

ಇದನ್ನೂ ಓದಿ Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

ಬುಧವಾರ ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡ 249 ರನ್‌ ಬಾರಿಸಿ ಸವಾಲೊಡ್ಡಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್‌ ಶರ್ಮ (35), ವಾಷಿಂಗ್ಟನ್‌ ಸುಂದರ್‌ (30) ರನ್​ ಗಳಿಸಿದರು. ಉಳಿದ ಯಾವ ಬ್ಯಾಟರ್‌ಗಳೂ ರನ್‌ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಪಂದ್ಯ ಸೋತಿತು. ಸತತ ಮೂರು ಪಂದ್ಯಗಳಲ್ಲೂ ಶ್ರೀಲಂಕಾ ತಂಡವು ಸ್ಪಿನ್‌ ದಾಳಿ ನಡೆಸುವ ಮೂಲಕ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಸ್ಪಿನ್​ಗೆ ಹೆಚ್ಚಾಗಿ ಉತ್ತಮ ಬ್ಯಾಟ್​ ಬೀಸುತ್ತಿದ್ದ ಭಾರತ ಲಂಕಾದಲ್ಲಿ ಪರದಾಟ ನಡೆಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

​ಪಂದ್ಯದ ಸೋಲಿಗೆ ಸಹ ಆಟಗಾರರ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ರೋಹಿತ್​ ನೇರ ಆರೋಪವನ್ನು ಕೂಡ ಮಾಡಿದ್ದಾರೆ. ನಾನು ತಂಡದ ಗೆಲುವಿಗಾಗಿ ಪ್ರಯತ್ನಪಟ್ಟಿದ್ದೇನೆ. ಆದರೆ, ಉಳಿದ ಆಟಗಾರರು ಬ್ಯಾಟಿಂಗ್​ ವೈಫಲ್ಯ ಕಂಡರು. ಒಬ್ಬರೇ ಆಡಿ ಪಂದ್ಯವನ್ನು ಗೆಲ್ಲಿಸುವುದು ಕಷ್ಟ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಸಹ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್​, “ದೇಶೀಯ ಕ್ರಿಕೆಟ್ ಆಡುವುದು ಬಹಳ ಮುಖ್ಯ. ನಾವು ಮುಖ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿಗೆ ದೇಶೀಯ ಕ್ರಿಕೆಟ್​ ಪ್ರದರ್ಶನ ನೋಡಿ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ದೇಶೀಯ ಕ್ರಿಕೆಟ್, ಭಾರತೀಯ ಕ್ರಿಕೇಟ್‌ನ ಬೆನ್ನೆಲುಬು” ಎಂದು ಹೇಳಿದ್ದಾರೆ.

Continue Reading

ಕ್ರೀಡೆ

Rohit Sharma: ಸೋಲಿನ ಬಳಿಕ ದೇಶೀಯ ಕ್ರಿಕೆಟ್​ನ ಮಹತ್ವ ತಿಳಿಸಿದ ರೋಹಿತ್​; ನೆಟ್ಟಿಗರಿಂದ ತೀವ್ರ ತರಾಟೆ

Rohit Sharma: ​ ಪಂದ್ಯದ ಸೋಲಿಗೆ ಸಹ ಆಟಗಾರರ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ರೋಹಿತ್ ನೇರ ಆರೋಪ ಮಾಡಿದ್ದಾರೆ. ನಾನು ತಂಡದ ಗೆಲುವಿಗಾಗಿ ಪ್ರಯತ್ನಪಟ್ಟಿದ್ದೇನೆ. ಆದರೆ, ಉಳಿದ ಆಟಗಾರರು ಬ್ಯಾಟಿಂಗ್​ ವೈಫಲ್ಯ ಕಂಡರು ಎಂದು ಹೇಳಿದ್ದಾರೆ.

VISTARANEWS.COM


on

Rohit Sharma
Koo

ಕೊಲಂಬೊ: 27 ವರ್ಷ ಬಳಿಕ ಶ್ರೀಲಂಕಾ ವಿರುದ್ಧ ಸರಣಿ ಸೋಲು ಕಂಡ ಭಾರತ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಈ ಸೋಲಿನ ಬಳಿಕ ದೇಶೀಯ ಕ್ರಿಕೆಟ್​ನ ಮಹತ್ವ ಏನೆಂದು ತಿಳಿಸಿದ್ದಾರೆ. ಬುಧವಾರ ನಡೆದಿದ್ದ ಸರಣಿಯ ಅಂಯಿಮ ಏಕದಿನ ಪಂದ್ಯದಲ್ಲಿ ಭಾರತ ಲಂಕಾ(Sri Lanka) ವಿರುದ್ಧ 110 ರನ್​ಗಳ ಹೀನಾಯ ಸೋಲಿಗೆ ತುತ್ತಾಗಿತ್ತು.

ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್​, “ದೇಶೀಯ ಕ್ರಿಕೆಟ್ ಆಡುವುದು ಬಹಳ ಮುಖ್ಯ. ನಾವು ಮುಖ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿಗೆ ದೇಶೀಯ ಕ್ರಿಕೆಟ್​ ಪ್ರದರ್ಶನ ನೋಡಿ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ದೇಶೀಯ ಕ್ರಿಕೆಟ್, ಭಾರತೀಯ ಕ್ರಿಕೇಟ್‌ನ ಬೆನ್ನೆಲುಬು” ಎಂದು ಹೇಳಿದ್ದಾರೆ.

ರೋಹಿತ್​ ಅವರ ಈ ಹೇಳಿಕೆಗೆ ನೆಟ್ಟಿಗರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಸರಣಿ ಸೋತಾಗ ಮಾತ್ರ ದೇಶೀಯ ಕ್ರಿಕೆಟ್​ ನೆನೆಪಾಗುತ್ತದೆ. ಅದೆಷ್ಟೋ ಆಟಗಾರರು ದೇಶೀಯ ಕ್ರಿಕೆಟ್​ನಲ್ಲಿ ನಿಮಗಿಂತ ಶ್ರೇಷ್ಠ ಸಾಧನೆ ಮತ್ತು ಪ್ರದರ್ಶನ ತೋರಿದರೂ ಅವರಿಗೆ ಅವಕಾಶ ನೀಡದೆ ನಿಮ್ಮ ಒಳ ರಾಜಕೀಯದಿಂದ ಐಪಿಎಲ್​ನಲ್ಲಿ ಆಡಿದ ಆಟಗಾರರಿಗೆ ಮಣೆ ಹಾಕುತ್ತಿದ್ದೀರಿ. ಈಗ ನಿಮ್ಮ ಬುಡಕ್ಕೆ ನೀರು ಬಂದಾಗ ದೇಶೀಯ ಕ್ರಿಕೆಟ್ ನೆನಪಾಗುತ್ತದೆ ಎಂದು ಹೇಳುವ ಮೂಲಕ ರೋಹಿತ್​ಗೆ ತಿವಿದಿದ್ದಾರೆ.

ಇದನ್ನೂ ಓದಿ IND vs SL 3rd ODI: 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಏಕದಿನ ಸರಣಿ ಶ್ರೀಲಂಕಾ ಮಡಿಲಿಗೆ

ಬುಧವಾರ ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡ 249 ರನ್‌ ಬಾರಿಸಿ ಸವಾಲೊಡ್ಡಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್‌ ಶರ್ಮ (35), ವಾಷಿಂಗ್ಟನ್‌ ಸುಂದರ್‌ (30) ರನ್​ ಗಳಿಸಿದರು. ಉಳಿದ ಯಾವ ಬ್ಯಾಟರ್‌ಗಳೂ ರನ್‌ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಪಂದ್ಯ ಸೋತಿತು. ಸತತ ಮೂರು ಪಂದ್ಯಗಳಲ್ಲೂ ಶ್ರೀಲಂಕಾ ತಂಡವು ಸ್ಪಿನ್‌ ದಾಳಿ ನಡೆಸುವ ಮೂಲಕ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಸ್ಪಿನ್​ಗೆ ಹೆಚ್ಚಾಗಿ ಉತ್ತಮ ಬ್ಯಾಟ್​ ಬೀಸುತ್ತಿದ್ದ ಭಾರತ ಲಂಕಾದಲ್ಲಿ ಪರದಾಟ ನಡೆಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

​ಪಂದ್ಯದ ಸೋಲಿಗೆ ಸಹ ಆಟಗಾರರ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ರೋಹಿತ್​ ನೇರ ಆರೋಪವನ್ನು ಕೂಡ ಮಾಡಿದ್ದಾರೆ. ನಾನು ತಂಡದ ಗೆಲುವಿಗಾಗಿ ಪ್ರಯತ್ನಪಟ್ಟಿದ್ದೇನೆ. ಆದರೆ, ಉಳಿದ ಆಟಗಾರರು ಬ್ಯಾಟಿಂಗ್​ ವೈಫಲ್ಯ ಕಂಡರು. ಒಬ್ಬರೇ ಆಡಿ ಪಂದ್ಯವನ್ನು ಗೆಲ್ಲಿಸುವುದು ಕಷ್ಟ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಸಹ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

Continue Reading

ಕ್ರೀಡೆ

IND vs SL 3rd ODI: 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಏಕದಿನ ಸರಣಿ ಶ್ರೀಲಂಕಾ ಮಡಿಲಿಗೆ

IND vs SL 3rd ODI: ಮೊದಲ ಪಂದ್ಯ ರೋಚಕ ಟೈ ಆದರೆ, ಎರಡನೇ ಪಂದ್ಯದಲ್ಲಿ ಭಾರತವು 32 ರನ್‌ಗಳಿಂದ ಸೋಲನುಭವಿಸಿತ್ತು. ಈಗ ಮೂರನೇ ಪಂದ್ಯವನ್ನೂ ಸೋಲುವ ಮೂಲಕ ಭಾರತ ತಂಡವು ಏಕದಿನ ಸರಣಿಯನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿದೆ. ಶ್ರೀಲಂಕಾ ತಂಡವು ಭಾರತದ ವಿರುದ್ಧ 27 ವರ್ಷಗಳ ಬಳಿಕ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದ ದಾಖಲೆ ಬರೆಯಿತು.

VISTARANEWS.COM


on

IND vs SL 3rd ODI
Koo

ಕೊಲೊಂಬೊ: ಟಿ-20 ವಿಶ್ವಕಪ್‌, ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಗೆಲುವಿನ ಅತ್ಯುತ್ಸಾಹದಲ್ಲಿದ್ದ ಭಾರತ ತಂಡಕ್ಕೆ ಶ್ರೀಲಂಕಾ ತಂಡವು ಏಕದಿನ ಸರಣಿಯಲ್ಲಿ (IND vs SL 3rd ODI) ಆಘಾತ ನೀಡಿದೆ. ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ಬಳಗವನ್ನು 110 ರನ್‌ಗಳಿಂದ ಮಣಿಸುವ ಮೂಲಕ ಶ್ರೀಲಂಕಾ 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದ ದಾಖಲೆ ಬರೆಯಿತು.

ಶ್ರೀಲಂಕಾ ನೀಡಿದ 249 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್‌ ಶರ್ಮಾ (35) ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾವೊಬ್ಬ ಆಟಗಾರನೂ ನೆಲಕಚ್ಚಿ ಆಡಲಿಲ್ಲ. ವಿರಾಟ್‌ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದರು. ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌ ಕೂಡ ಭಾರತ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲಿಲ್ಲ. ಶುಭಮನ್‌ ಗಿಲ್‌ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಇದರಿಂದಾಗಿ ಭಾರತ ಮೂರನೇ ಪಂದ್ಯವನ್ನು ಸೋತು, ಸರಣಿ ಬಿಟ್ಟುಕೊಡಬೇಕಾಯಿತು.

ಆವಿಷ್ಕ ಫರ್ನಾಂಡೋ ಭರ್ಜರಿ ಬ್ಯಾಟಿಂಗ್

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ, ಭರ್ಜರಿ ಆರಂಭ ಪಡೆಯಿತು. ಪಥುಮ್‌ ನಿಸಂಕಾ (45), ಆವಿಷ್ಕ ಫರ್ನಾಂಡೋ (96) ಹಾಗೂ ಕುಶಾಲ್‌ ಮೆಂಡಿಸ್‌ (59) ರನ್‌ಗಳ ನೆರವಿನಿಂದ ಒಂದು ಹಂತದಲ್ಲಿ ಶ್ರೀಲಂಕಾ 3 ವಿಕೆಟ್‌ಗೆ 183 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬೃಹತ್‌ ಮೊತ್ತ ಪೇರಿಸುವ ಸಾಧ್ಯತೆಯೂ ಇತ್ತು. ಆದರೆ, ನಂತರ ಬಂದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿ ವಿಕೆಟ್‌ ಒಪ್ಪಿಸಿದ ಕಾರಣ ಶ್ರೀಲಂಕಾ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಪರ ರಿಯಾನ್‌ ಪರಾಗ್‌ 3 ವಿಕೆಟ್‌ ಕಬಳಿಸಿದರೆ, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಕುಲದೀಪ್‌ ಯಾದವ್‌ ಅವರು ತಲಾ ಒಂದು ವಿಕೆಟ್‌ ಪಡೆದರು. ಮೊದಲ ಪಂದ್ಯ ರೋಚಕ ಟೈ ಆದರೆ, ಎರಡನೇ ಪಂದ್ಯದಲ್ಲಿ ಭಾರತವು 32 ರನ್‌ಗಳಿಂದ ಸೋಲನುಭವಿಸಿತ್ತು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ 50 ಓವರ್‌ಗಳಲ್ಲಿ 248/7

(ಆವಿಷ್ಕ ಫರ್ನಾಂಡೋ 96, ಕುಶಾಲ್‌ ಮೆಂಡಿಸ್‌ 59, ರಿಯಾನ್‌ ಪರಾಗ್‌ 54/3)

ಭಾರತ ಓವರ್‌ಗಳಲ್ಲಿ 130ಕ್ಕೆ ಆಲೌಟ್‌

(ರೋಹಿತ್‌ ಶರ್ಮಾ 35, ರಿಯಾನ್‌ ಪರಾಗ್‌ 30, ದುನಿತ್‌ ವೆಲ್ಲಲಾಗೆ 27/5)

ಇದನ್ನೂ ಓದಿ: Chuttamalle Song: ‘ಮಾನಿಕೆ ಮಾಗೆ ಹಿತೆ’ ಹಾಡಿನ ಟ್ಯೂನ್‌ ಕದ್ರಾ ಅನಿರುದ್ಧ ರವಿಚಂದರ್? ಶ್ರೀಲಂಕಾ ಕಂಪೋಸರ್‌ ಹೇಳೋದೇನು?

Continue Reading

ಕ್ರೀಡೆ

IND vs SL 3rd ODI: ಇಂದು ಅಂತಿಮ ಏಕದಿನ ಪಂದ್ಯ; ಭಾರತ ಆಡುವ ಬಳಗದಲ್ಲಿ ಮೂರು ಬದಲಾವಣೆ ಖಚಿತ

IND vs SL 3rd ODI: ಮೂಲಗಳ ಪ್ರಕಾರ ಕೆ.ಎಲ್​ ರಾಹುಲ್​, ಶಿವಂ ದುಬೆ ಮತ್ತು ಮೊಹಮ್ಮದ್​ ಸಿರಾಜ್​ ಅವರನ್ನು ಈ ಪಂದ್ಯದಿಂದ ಕೈ ಬಿಟ್ಟು ಇವರ ಸ್ಥಾನಕ್ಕೆ ರಿಷಭ್​ ಪಂತ್​, ಹರ್ಷಿತ್​ ರಾಣಾ ಮತ್ತು ರಿಯಾನ್​ ಪರಾಗ್​ ಅವರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿದುಬಂದಿದೆ

VISTARANEWS.COM


on

IND vs SL 3rd ODI
Koo

ಕೊಲಂಬೊ: ಪ್ರವಾಸಿ ಭಾರತ ಮತ್ತು ಆತಿಥೇಯ ಶ್ರೀಲಂಕಾ(IND vs SL 3rd ODI) ವಿರುದ್ಧದ ಅಂತಿಮ ಏಕದಿನ ಪಂದ್ಯ ಇಂದು ಆರ್​.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿ ಸೋಲಿನ ಭೀತಿಯಲ್ಲಿರುವ ಭಾರತಕ್ಕೆ ಈ ಅಪಮಾನದಿಂದ ಪಾರಾಗಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಹೀಗಾಗಿ ಈ ಪಂದ್ಯವನ್ನು ಹೈವೋಲ್ಟೇಜ್ ಪಂದ್ಯ ಎಂದು ನಿರೀಕ್ಷಿಸಲಾಗಿದೆ. ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಕನಿಷ್ಠ ಮೂರು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಕೆ.ಎಲ್​ ರಾಹುಲ್​, ಶಿವಂ ದುಬೆ ಮತ್ತು ಮೊಹಮ್ಮದ್​ ಸಿರಾಜ್​ ಅವರನ್ನು ಈ ಪಂದ್ಯದಿಂದ ಕೈ ಬಿಟ್ಟು ಇವರ ಸ್ಥಾನಕ್ಕೆ ರಿಷಭ್​ ಪಂತ್​, ಹರ್ಷಿತ್​ ರಾಣಾ ಮತ್ತು ರಿಯಾನ್​ ಪರಾಗ್​ ಅವರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿದುಬಂದಿದೆ. ರಾಹುಲ್​ ಕಳೆದ ದ್ವಿತೀಯ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಮೊದಲ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಇದೀಗ ಸರಣಿ ಸೋಲಿನ ಭೀತಿಯಲ್ಲಿರುವ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಎದುರಾಳಿ ಬೌಲರ್​ಗಳ ಲೆಕ್ಕಾಚಾರವನ್ನು ಬುಡಮೇಲು ಮಾಡುವಂತಹ ಪಂತ್​ ಅವರನ್ನು ಕಣಕ್ಕಿಳಿಸಲು ತಂಡ ಬಯಸಿದೆ ಎನ್ನಲಾಗಿದೆ.

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನ ಪಿಚ್​ ಸಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಅವರ ಬದಲಿಗೆ ಸ್ಪಿನ್​ ಆಲ್​ರೌಂಡರ್​ ಆಗಿರುವ ರಿಯಾನ್ ಪರಾಗ್ ಸ್ಥಾನ ಪಡೆಯಬಹುದು. ಟಿ20 ಸರಣಿಯಲ್ಲಿ ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಪರಾಗ್​ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಇವರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ.

ಇದನ್ನೂ ಓದಿ IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

ಪಿಚ್ ರಿಪೋರ್ಟ್

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇದುವರೆಗೆ 150 ಏಕದಿನ ಪಂದ್ಯಗಳು ನಡೆದಿವೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚು ಬಾರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 80 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡಿದ ತಂಡ ಕೇವಲ 59 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಸ್ಪಿನ್ನರ್​ಗಳು ಪ್ರಭಾವ ಬೀರಿದ್ದರು. ಹೀಗಾಗಿ ಎರಡನೇ ಏಕದಿನ ಪಂದ್ಯದಲ್ಲಿಯೂ ಸ್ಪಿನ್​ ಬೌಲರ್​ಗಳು ಪ್ರಾಬಲ್ಯ ತೋರುವ ನಿರೀಕ್ಷೆ ಇದೆ. ಪಂದ್ಯ ಸಾಗಿದಂತೆ ಈ ಪಿಚ್​ ಅತ್ಯಂತ ತಿರುವ ಪಡೆದುಕೊಳ್ಳಲಿದೆ. ಬ್ಯಾಟಿಂಗ್​ ನಡೆಸುವುದೇ ಒಂದು ಸವಾಲಾಗಿರಲಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ಆಯ್ದುಕೊಳ್ಳಬಹುದು.

ಸಂಭಾವ್ಯ ತಂಡಗಳು

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್​ ಪಂತ್​ (ವಿಕೀ), ರಿಯಾನ್​ ಪರಾಗ್​, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೀ), ಸದೀರ ಸಮರವಿಕ್ರಮ, ಚರಿತ್ ಅಸಲಂಕ (ನಾಯಕ), ಕಾಮಿಂದು ಮೆಂಡಿಸ್, ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಅಕಿಲ ದನಂಜಯ, ಅಸಿತ ಫೆರ್ನಾಂಡೋ, ಜೆಫ್ರಿ ವಂಡರ್ಸೆ.

Continue Reading
Advertisement
Duniya Vijay Bheema Movie Release today
ಸ್ಯಾಂಡಲ್ ವುಡ್8 mins ago

Duniya Vijay: ರಾಜ್ಯಾದ್ಯಂತ `ಭೀಮ’ ಸಿನಿಮಾ ರಿಲೀಸ್; ಬ್ಲಾಕ್‌ ಕೋಬ್ರಾಗೆ ಭರ್ಜರಿ ವೆಲ್‌ಕಮ್‌ ಮಾಡಿದ ಫ್ಯಾನ್ಸ್‌!

gold rate today
ವಾಣಿಜ್ಯ11 mins ago

Gold Rate Today: ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಹೀಗಿದೆ

UGCET 2024
ಬೆಂಗಳೂರು17 mins ago

UGCET 2024: ಯುಜಿಸಿಇಟಿ ಮೊದಲ ಅಣಕು ಸೀಟು ಹಂಚಿಕೆ ಫಲಿತಾಂಶ ಇಂದು ಸಂಜೆ 6 ಗಂಟೆಗೆ ಪ್ರಕಟ

dengue fever death bangalore
ಬೆಂಗಳೂರು18 mins ago

Dengue Fever: ಡೆಂಗ್ಯುವಿಗೆ ಬೆಂಗಳೂರಿನಲ್ಲಿ ಹೆಡ್‌ ಕಾನ್ಸ್‌ಟೇಬಲ್‌ ಬಲಿ, 11ಕ್ಕೇರಿದ ಸಾವಿನ ಸಂಖ್ಯೆ

Paris Olympics
ಕ್ರೀಡೆ42 mins ago

Paris Olympics: ಚೊಚ್ಚಲ ಪ್ರಯತ್ನದಲ್ಲೇ ಒಲಿಂಪಿಕ್ಸ್​ ಪದಕ ಗೆಲ್ಲಲು ಸಜ್ಜಾದ ಅಮನ್‌ ಸೆಹ್ರಾವತ್‌

CM Siddaramaiah
ಪ್ರಮುಖ ಸುದ್ದಿ59 mins ago

CM Siddaramaiah: ಇಂದು ಮೈಸೂರಿನಲ್ಲಿ ಜನಾಂದೋಲನ ಸಮಾವೇಶ: ದೋಸ್ತಿಗಳ ವಿರುದ್ಧ ಅಬ್ಬರಿಸಲಿದೆ ಸಿದ್ದರಾಮಯ್ಯ ಪಡೆ, ʼಸಂಚುʼ ಕೃತಿ ಬಿಡುಗಡೆ

Kannada Serials TRP Demand increased for Ramachari serial Amritdhare is not even in the top 5
ಕಿರುತೆರೆ1 hour ago

Kannada Serials TRP: ʻರಾಮಾಚಾರಿʼ ಧಾರಾವಾಹಿಗೆ ಹೆಚ್ಚಾಯ್ತು ಡಿಮ್ಯಾಂಡ್‌; ಟಾಪ್‌ 5ನಲ್ಲೂ ಇಲ್ಲ ʻಅಮೃತಧಾರೆʼ!

Bangladesh Unrest
ವಿದೇಶ1 hour ago

Bangladesh Unrest: ಬಾಂಗ್ಲಾ ದಂಗೆ ಹಿಂದೆ ಇದ್ಯಾ ಪಾಕ್‌ ISI ಕೈವಾಡ? ಶೇಖ್‌ ಹಸೀನಾ ಪುತ್ರ ಹೇಳಿದಿಷ್ಟು!

Rahul Gandhi
ದೇಶ1 hour ago

Rahul Gandhi: ಸಂಸತ್‌‌ನಲ್ಲಿ ವಕ್ಫ್ ಚರ್ಚೆ ವೇಳೆ ನಿದ್ದೆ ಮಾಡುತ್ತಿದ್ದ ರಾಹುಲ್ ಗಾಂಧಿ! ವಿಡಿಯೊ ವೈರಲ್

Vinesh Phogat
ಕ್ರೀಡೆ1 hour ago

Vinesh Phogat: ವಿನೇಶ್​ರನ್ನು ಪ.ಬಂಗಾಳ ಸಿಎಂ ಮಾಡಿ; ಭಾರತ ರತ್ನ ಕೊಡಿ ಎಂದ ಟಿಎಂಸಿ ನಾಯಕನಿಗೆ ಸವಾಲ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ17 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ19 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ20 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌