Ind vs Sa T20 | ಭಾರತ ಗೆದ್ದ ರೋಚಕ ಪಂದ್ಯದಲ್ಲಿ ಮಿಂಚಿದ ದಿನೇಶ್‌ ಕಾರ್ತಿಕ್‌ - Vistara News

ಕ್ರಿಕೆಟ್

Ind vs Sa T20 | ಭಾರತ ಗೆದ್ದ ರೋಚಕ ಪಂದ್ಯದಲ್ಲಿ ಮಿಂಚಿದ ದಿನೇಶ್‌ ಕಾರ್ತಿಕ್‌

ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದು, ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ.

VISTARANEWS.COM


on

dinesh karthik
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್‌ಕೋಟ್‌ (ಗುಜರಾತ್‌): ಭಾರತದ ಬೌಲರ್‌ಗಳು ಮಾಡಿದ ಕಮಾಲ್‌ನಿಂದ ಭಾರತವು ದಕ್ಷಿಣ ಆಫ್ರಿಕಾದ ವಿರುದ್ಧದ ಟಿ20 ಸರಣಿಯ (Ind vs Sa T20) ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್‌ ಇಂಡಿಯಾ ಭರ್ಜರಿ 82 ರನ್‌ಗಳ ಗೆಲುವು ಸಾಧಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ 2-2 ಪಂದ್ಯ ಗೆದ್ದು ಸಮವಾಗಿದೆ. ಸರಣಿಯನ್ನು ಸಮಗೊಳಿಸಿ ಭಾರತವು ಈ ಸರಣಿಯನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದಿದೆ. ಇನ್ನು 19 ಬಾಲ್‌ಗಳು ಬಾಕಿ ಇರುವಾಗಲೇ ಭಾರತವು ಗೆದ್ದಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸರಣಿಯನ್ನು ಗೆಲ್ಲಲು ಈಗ ಎರಡೂ ತಂಡಗಳೂ ಐದನೇ ಪಂದ್ಯದಲ್ಲಿ ಹೋರಾಡಲಿವೆ.

ಮೊದಲ ಇನ್ನಿಂಗ್ಸ್:‌

ಸತತವಾಗಿ ನಾಲ್ಕನೇ ಬಾರಿ ಟಾಸ್‌ ಸೋತ ಪಂತ್‌ ಪಡೆ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು. ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳ ದಾಳಿಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರು ಔಟಾದರು. ಹತ್ತನೇ ಓವರ್‌ನ ಹೊತ್ತಿಗೆ ಮೂವರು ಪೆವಿಲಿಯನ್‌ ಸೇರಿಯಾಗಿತ್ತು. ಋತುರಾಜ್‌ ಗಾಯಕ್‌ವಾಡ್‌ ಕೇವಲ 5 ರನ್‌ ಗಳಿಸಿ ಪವಿಲಿಯನ್‌ ಸೇರಿದರೆ, ಶ್ರೇಯಸ್‌ ಐಯ್ಯರ್‌ ಕೇವಲ 4 ರನ್‌ಗೆ ಔಟಾದರು. ನಂತರ ಇಶಾನ್‌ ಕಿಶನ್‌ ಹಾಗೂ ರಿಷಭ್‌ ಪಂತ್‌ ಉತ್ತಮ ಜತೆಯಾಟದ ಪ್ರಯತ್ನದಲ್ಲಿದ್ದರು. ಆದರೆ ರಿಷಭ್‌ 23 ಬಾಲ್‌ಗೆ ಕೇವಲ 17 ರನ್‌ ಬಾರಿಸಿ ಔಟಾದರು. ಕಳೆದ ಮೂರೂ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್‌ ಕಿಶನ್‌ ಕೂಡ ನಿರಾಸೆ ಮೂಡಿಸಿದ್ದರು. 26 ಎಸೆತಗಳನ್ನು ಎದುರಿಸಿದ ಅವರು 27 ರನ್‌ ಮಾತ್ರ ಬಾರಿಸಿ ವಿಕೆಟ್‌ ಒಪ್ಪಿಸಿದರು. ಪಂದ್ಯಕ್ಕೆ ನಿಜವಾಗಿಯೂ ತಿರುವು ನೀಡಿದ್ದು ಹಾರ್ದಿಕ್‌ ಪಾಂಡ್ಯ ಹಾಗೂ ದಿನೇಶ್‌ ಕಾರ್ತಿಕ್.‌

13 ಓವರ್‌ನ ಅಂತಿಮದಲ್ಲಿ ಭಾರತದ ಸ್ಕೋರ್‌: 81-4

ದಿನೇಶ್‌ ಕಾರ್ತಿಕ್‌ ಹಾಗೂ ಹಾರ್ದಿಕ ಪಾಂಡ್ಯ ಸೇರಿ ಪಿಚ್‌ನಲ್ಲಿ ಅಬ್ಬರಿಸಿದರು. ದಿನೇಶ್‌ ಅವರ ಬ್ಯಾಟಿಂಗ್‌ ರಭಸಕ್ಕೆ ದಕ್ಷಿಣ ಆಫ್ರಿಕಾ ಬೌಲರ್‌ಗಳು ಸುಸ್ತಾಗಿಬಿಟ್ಟರು! ಕೇವಲ 27 ಬಾಲ್‌ಗೆ 55 ರನ್‌ ಬಾರಿಸಿ ಅವರು ಮಿಂಚಿದರು. ಇದು ಟಿ20 ಕ್ರಿಕೆಟ್‌ ಮಾದರಿಯಲ್ಲಿ ದಿನೇಶ್‌ ಅವರ ಮೊದಲ ಅರ್ಧಶತಕ. ಅವರಿಗೆ ಸಾಥ್‌ ನೀಡಿದ್ದು ಹಾರ್ದಿಕ್‌ ಪಾಂಡ್ಯ. 31 ಎಸೆತಗಳಲ್ಲಿ ಹಾರ್ದಿಕ್‌ 46 ರನ್‌ ಬಾರಿಸಿ ಉತ್ತಮ ಪ್ರದರ್ಶನ ನೀಡಿದರು. ಇವರಿಬ್ಬರ ಅಬ್ಬರಕ್ಕೆ ಭಾರತದ ಸ್ಕೋರ್‌ 169ಕ್ಕೆ ಏರಿತು.

20 ಓವರ್‌ಗೆ ಭಾರತದ ಸ್ಕೋರ್: 169-‌6

ಎರಡನೇ ಇನ್ನಿಂಗ್ಸ್:‌

ಸುಲಭದ ಟಾರ್ಗೆಟ್‌ ನಿರೀಕ್ಷೆಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಟಾರ್ಗೆಟ್‌ ಒಂದು ಶಾಕ್‌ ನೀಡಿತ್ತು. ಬವುಮಾ ಹಾಗೂ ಡಿ ಕಾಕ್‌ ಒಳ್ಳೆಯ ಆಟವನ್ನು ಆಡುವ ಭರವಸೆಯಲ್ಲಿದ್ದರು. ಎರಡನೇ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಎಸೆತಕ್ಕೆ ಡಿ ಕಾಕ್‌ ಎರಡು ಫೋರ್‌ ಕೂಡ ಹೊಡೆದಿದ್ದರು. ಆದರೆ 14 ರನ್‌ ಗಳಿಸಿದ ಡಿ ಕಾಕ್‌ 5ನೇ ಓವರ್‌ನಲ್ಲಿ ರನೌಟ್‌ ಆದರು. ಭುವನೇಶ್ವರ್‌ ಕುಮಾರ್‌ ಎಸೆದ ಬೌನ್ಸರ್‌ನಿಂದ ಬವುಮಾ ಅವರಿಗೆ ಪೆಟ್ಟಾದ ಕಾರಣದಿಂದ ಅವರು ನಿವೃತ್ತಿ ಹೊಂದಬೇಕಾಯಿತು. ಪ್ರಟೋರಿಯಸ್‌ ಒಂದೇ ಒಂದು ರನ್‌ ಗಳಿಸದೇ ಅವೇಶ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ಕಳೆದ ಪಂದ್ಯದಂತೆಯೇ ಈ ಬಾರಿಯೂ ಡೇವಿಡ್‌ ಮಿಲ್ಲರ್‌ ವಿಕೆಟನ್ನು ಹರ್ಷಲ್‌ ಪಟೇಲ್‌ ಪಡೆದರು.

13 ಓವರ್‌ಗೆ ದಕ್ಷಿಣ ಆಫ್ರಿಕ ತಂಡದ ಸ್ಕೋರ್: 73-5

ಅವೆಶ್‌ ಖಾನ್‌ ಅವರು ಈ ಬಾರಿ ಅದ್ಭುತವಾಗಿ ಬೌಲಿಂಗ್‌ ಮಾಡಿದರು. ನಾಲ್ಕು ಓವರ್‌ನಲ್ಲಿ ಕೇವಲ 18 ರನ್‌ ನೀಡಿ ನಾಲ್ಕು ವಿಕೆಟ್‌ ಪಡೆದು ಮಿಂಚಿದರು. ಈ ಪಂದ್ಯದಲ್ಲಿ ಕೆಲವು ಅದ್ಭುತ ಬೌನ್ಸರ್‌ಗಳು ಬ್ಯಾಟರ್‌ಗಳಿಗೆ ರನ್‌ ಹೊಡೆಯಲು ಪರದಾಡುವಂತಾಯಿತು. ಭಾರತದ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡವನ್ನು ಅತ್ಯಂತ ಕಡಿಮೆ ಸ್ಕೋರ್‌ಗೆ ಆಲೌಟ್‌ ಮಾಡಿ ಮೆಚ್ಚುಗೆಗೆ ಪಾತ್ರರಾದರು.

16.5 ಓವರ್‌ಗೆ ಕೇವಲ 87 ರನ್‌ಗೆ ಆಲೌಟ್‌ ಆದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ಟಿ20ಯ ಒಟ್ಟು 19 ಪಂದ್ಯಗಳು ನಡೆದಿದ್ದು, ಭಾರತ 9 ಪಂದ್ಯಗಳಲ್ಲಿ ಗೆದ್ದಿದ್ದರೆ ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಗೆದ್ದಿದೆ. ಜೂನ್‌ 19 ರಂದು ಬೆಂಗಳೂರಿನಲ್ಲಿ ಈ ಸರಣಿಯ ಕೊನೆಯ ಪಂದ್ಯ ನಡೆಯಲಿದ್ದು, ಇದರಲ್ಲಿ ಟೀಮ್‌ ಇಂಡಿಯಾ ಗೆದ್ದರೆ ಭಾರತ ಸರಣಿ ಗೆದ್ದಂತಾಗಲಿದೆ ಮತ್ತು ಭಾರತವೂ 10 ಪಂದ್ಯಗಳಲ್ಲಿ ಗೆದ್ದಂತಾಗಲಿದೆ.

ಇದನ್ನೂ ಓದಿ: Ind vs Sa T20 | ಸತತ 4 ನೇ ಬಾರಿ ಟಾಸ್‌ ಗೆದ್ದ ದ.ಆಫ್ರಿಕಾ, ಮಹತ್ವದ ಪಂದ್ಯದಲ್ಲಿ ಮೊದಲು ಭಾರತದ ಬ್ಯಾಟಿಂಗ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Gully Cricket Vibes: ಗಲ್ಲಿ ಕ್ರಿಕೆಟ್​ನಂತೆ ಚೆಂಡು ಹುಡುಕಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Gully cricket vibes:ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕೊಹ್ಲಿ ಬಾಂಗ್ಲಾ ವಿರುದ್ಧ ತುಸು ಚೇತರಿಕೆಯ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಜತೆಗೆ ದಾಖಲೆಯೊಂದನ್ನು ಕೂಡ ತಮ್ಮ ಹೆಸರಿಗೆ ಬರೆದರು. 37 ರನ್‌ ಮಾಡಿದ ಕೊಹ್ಲಿ ವಿಶ್ವಕಪ್​ ಟೂರ್ನಿಯಲ್ಲಿ (ಟಿ20 ಮತ್ತು ಏಕದಿನ) 3 ಸಾವಿರ ರನ್‌ ಪೂರೈಸಿದ ಮೊದಲ ಕ್ರಿಕೆಟಿಗನೆನಿಸಿದರು.

VISTARANEWS.COM


on

Gully cricket vibes
Koo

ಆ್ಯಂಟಿಗುವಾ: ಶನಿವಾರ ರಾತ್ರಿ ನಡೆದ ಬಾಂಗ್ಲಾದೇಶ(India vs Bangladesh) ವಿರುದ್ಧದ ಸೂಪರ್‌-8 ಪಂದ್ಯದಲ್ಲಿ ಭಾರತ 50 ರನ್ ಗಳ ಅಮೋಘ ಜಯ ಸಾಧಿಸಿ ಸೆಮಿಫೈನಲ್​ ಸನಿಹಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಗಲ್ಲಿ ಕ್ರಿಕೆಟ್​ನಲ್ಲಿ(‘Gully cricket vibes) ಚೆಂಡನ್ನು ಹುಡುಕಿದಂತೆ ಸ್ಟೇಡಿಯಂನ ಸ್ಟ್ಯಾಂಡ್​ವೊಂದರ ಒಳಗಡೆ ನುಗ್ಗಿ ಚೆಂಡು ಹುಡುಕುತ್ತಿರುವ ವಿಡಿಯೊವೊಂದು ವೈರಲ್(viral video)​ ಆಗಿದೆ.


ಬಾಂಗ್ಲಾದೇಶ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಈ ಘಟನೆ ಸಂಭವಿಸಿದೆ. ಸಿಕ್ಸರ್​ಗೆ ಚಿಮ್ಮಿದ ಚೆಂಡು ಬೌಂಡರಿ ಲೈನ್​ನ ಹೊರ ಭಾಗದಲ್ಲಿ ಇರಿಸಲಾಗಿದ್ದ ಸ್ಟ್ಯಾಂಡ್​ ಒಂದರ ಕೆಳ ಭಾಗಕ್ಕೆ ಹೋಯಿತು. ಬೌಂಡರಿ ಲೈನ್​ ಬಳಿ ಫೀಲ್ಡಿಂಗ್​ ನಡೆಸುತ್ತಿದ್ದ ವಿರಾಟ್​ ಕೊಹ್ಲಿ ಅವರು ಚೆಂಡನ್ನು ತೆಗೆಯಲು ಈ ಸ್ಟ್ಯಾಂಡ್​ ಒಳಗಡೆ ನುಗ್ಗಿ ಕೊನೆಗೂ ಚೆಂಡನ್ನು ಹೊರ ತೆಗೆದಿದ್ದಾರೆ. ಕೊಹ್ಲಿಯ ಈ ಸರಳತೆಗೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೆಲ ನೆಟ್ಟಿಗರು ಗಲ್ಲಿ ಕ್ರಿಕೆಟ್​ನ ನೆನೆಪು ಮತ್ತೆ ಮರುಕಳಿಸಿದ್ದಕ್ಕೆ ಧನ್ಯವಾದಗಳು ಕೊಹ್ಲಿ ಸರ್​…ಎಂದು ಕಮೆಂಟ್​ ಮಾಡಿದ್ದಾರೆ.

ದಾಖಲೆ ಬರೆದ ಕೊಹ್ಲಿ


ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕೊಹ್ಲಿ ಬಾಂಗ್ಲಾ ವಿರುದ್ಧ ತುಸು ಚೇತರಿಕೆಯ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಜತೆಗೆ ದಾಖಲೆಯೊಂದನ್ನು ಕೂಡ ತಮ್ಮ ಹೆಸರಿಗೆ ಬರೆದರು. 37 ರನ್‌ ಮಾಡಿದ ಕೊಹ್ಲಿ ವಿಶ್ವಕಪ್​ ಟೂರ್ನಿಯಲ್ಲಿ (ಟಿ20 ಮತ್ತು ಏಕದಿನ) 3 ಸಾವಿರ ರನ್‌ ಪೂರೈಸಿದ ಮೊದಲ ಕ್ರಿಕೆಟಿಗನೆನಿಸಿದರು. ಕಳೆದ ಹಲವು ವರ್ಷಗಳಿಂದ ವಿರಾಟ್ ಕೊಹ್ಲಿ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಬೆನ್ನೆಲುಬಾಗಿದ್ದಾರೆ.

ಇದನ್ನೂ ಓದಿ Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

ಐಸಿಸಿ ಸೀಮಿತ ಓವರ್​ಗಳ ಕ್ರಿಕೆಟ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 3500 ರನ್ ಪೂರೈಸಿದ್ದಾರೆ. ರೋಹಿತ್ ಶರ್ಮಾ 3107 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 2942 ರನ್ ಗಳಿಸಿ ಮೂರನೇ ಸ್ಥಾನ ಪಡೆದರೆ, ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಕ್ರಮವಾಗಿ 2876 ಮತ್ತು 2858 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. 

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ಹಾರ್ದಿಕ್‌ ಪಾಂಡ್ಯ ಅವರ ಅಜೇಯ ಅರ್ಧ ಶತಕದ ನೆರವಿನಿಂದ 5 ವಿಕೆಟಿಗೆ 196 ರನ್‌ ಪೇರಿಸಿತು. ದೊಡ್ಡ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಸತತ 2 ಸೋಲು ಕಂಡ ಬಾಂಗ್ಲಾದೇಶದ ಸೆಮಿಫೈನಲ್​ ಹಾದಿ ಬಹುತೇಕ ಅಂತ್ಯ ಕಂಡಿತು.

ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದರು. ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತ ಪಾಂಡ್ಯ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ ಒಳಗೊಂಡಿತು.

Continue Reading

ಪ್ರಮುಖ ಸುದ್ದಿ

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Virat Kohli: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 36 ರನ್ ಬಾರಿಸಿ ಔಟಾಗುವ ಮೊದಲು ಈ ವಿಶೇಷ ಸಾಧನೆ ಮಾಡಿದ್ದಾರೆ. ಅದೇನೆಂದರೆ ಅವರು ಐಸಿಸಿ ಆಯೋಜಿಸುವ ಸೀಮಿತ ಓವರ್​ಗಳ (ಏಕದಿನ ಹಾಗೂ ಟಿ20) ಟೂರ್ನಿಗಳಲ್ಲಿ 3500 ರನ್​ಗಳನ್ನು ಬಾರಿಸಿದ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿರುವುದು ಇನ್ನೂ ವಿಶೇಷ.

VISTARANEWS.COM


on

Virat kohli
Koo

ಬೆಂಗಳೂರು: ವೆಸ್ಟ್​ ಇಂಡೀಸ್​ನ ಆಂಟಿಗುವಾದಲ್ಲಿ ನಡೆದ ಟಿ20 ವಿಶ್ವ ಕಪ್​ನ ಸೂಪರ್ 8 ಪಂದ್ಯದಲ್ಲಿ ಭಾರತ ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC Tournament) ಟೂರ್ನಮೆಂಟ್ ಗಳ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 36 ರನ್ ಬಾರಿಸಿ ಔಟಾಗುವ ಮೊದಲು ಈ ವಿಶೇಷ ಸಾಧನೆ ಮಾಡಿದ್ದಾರೆ. ಅದೇನೆಂದರೆ ಅವರು ಐಸಿಸಿ ಆಯೋಜಿಸುವ ಸೀಮಿತ ಓವರ್​ಗಳ (ಏಕದಿನ ಹಾಗೂ ಟಿ20) ಟೂರ್ನಿಗಳಲ್ಲಿ 3500 ರನ್​ಗಳನ್ನು ಬಾರಿಸಿದ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿರುವುದು ಇನ್ನೂ ವಿಶೇಷ.

ಹಾಲಿ ಟಿ20 ವಿಶ್ವಕಪ್ 2024ರಲ್ಲಿ ಫಾರ್ಮ್​ ಕಂಡುಕೊಳ್ಳದ ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧ ಸಕಾರಾತ್ಮಕ ಇನ್ನಿಂಗ್ಸ್ ಆಡಿದ್ದಾರೆ. ಸೂಪರ್ 8 ಹಂತದ ಎರಡನೇ ಪಂದ್ಯದ ತಮ್ಮ ಇನ್ನಿಂಗ್ಸ್​ನಲ್ಲಿ ಕೆಲವು ಅದ್ಭುತ ಶಾಟ್​ಗಳನ್ನು ಹೊಡೆದು ರಂಜಿಸಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ವಿರಾಟ್​ ಬ್ಯಾಟ್ ನಿಂದ ಮಿಂಚಿದ್ದರು. ರೋಹಿತ್ ಶರ್ಮಾ ಜತೆ 39 ರನ್ ಮತ್ತು ರಿಷಭ್ ಪಂತ್ (36) ಅವರೊಂದಿಗೆ 32 ರನ್ ಗಳ ಪಾಲುದಾರಿಕೆ ನೀಡಿದ್ದಾರೆ. ಇದು ಭಾರತಕ್ಕೆಬೃಹತ್ ಮೊತ್ತ ಪೇರಿಸಲು ನೆರವಾಯಿತು.

ಐಸಿಸಿ ಟೂರ್ನಿಯಲ್ಲಿ ಅದ್ಭುತ ಆಟಗಾರ

ಕಳೆದ ಹಲವು ವರ್ಷಗಳಿಂದ ವಿರಾಟ್ ಕೊಹ್ಲಿ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಬೆನ್ನೆಲುಬಾಗಿದ್ದಾರೆ. ಅಂತೆಯೇ ಬಾಂಗ್ಲಾ ವಿರುದ್ಧ 28 ಎಸೆತಗಳಲ್ಲಿ 37 ರನ್ ಗಳಿಸಿದರು. ಅವರು 132 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅವರ ಇನ್ನಿಂಗ್ಸ್​ನಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್​ಗಳು ಸೇರಿಕೊಂಡಿವೆ. ಅಂತೆಯೇ ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕದ ನೆರವಿನಿಂದ ಭಾರತ 196 ರನ್​ಗಳ ಬೃಹತ್ ಮೊತ್ತ ಪೇರಿಸಿ, ಬಾಂಗ್ಲಾವನ್ನು 50 ರನ್​ಗಳಿಂದ ಸೋಲಿಸಿದೆ.

ಐಸಿಸಿ ಸೀಮಿತ ಓವರ್ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ರನ್ ದಾಖಲೆ

ಐಸಿಸಿ ಸೀಮಿತ ಓವರ್​ಗಳ ಕ್ರಿಕೆಟ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 3500 ರನ್ ಪೂರೈಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ 2024ರಲ್ಲಿ ರಲ್ಲಿ ಭಾರತವು ಇನ್ನೂ ಕೆಲವು ಪಂದ್ಯಗಳನ್ನು ಆಡಲಿದೆ. ಹೀಗಾಗಿ ಅವರ ರನ್​ ಗಳಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಅಂದ ಹಾಗೆ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳ ಇತಿಹಾಸದಲ್ಲಿ ನಾಯಕ ರೋಹಿತ್ ಶರ್ಮಾ 3107 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

ಕ್ರಿಸ್ ಗೇಲ್ 2942 ರನ್ ಗಳಿಸಿ ಮೂರನೇ ಸ್ಥಾನ ಪಡೆದರೆ, ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಕ್ರಮವಾಗಿ 2876 ಮತ್ತು 2858 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ (2719) ಮತ್ತು ಡೇವಿಡ್ ವಾರ್ನರ್ (2590) ಐಸಿಸಿ ಟೂರ್ನಿಗಳಲ್ಲಿ (ವೈಟ್ಬಾ ಲ್) ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಪಟ್ಟಿ ಇಲ್ಲಿದೆ

  • 3500 ರನ್​​ – ವಿರಾಟ್ ಕೊಹ್ಲಿ
  • 3107 ರನ್​​ – ರೋಹಿತ್ ಶರ್ಮಾ
  • 2942 ರನ್​​ – ಕ್ರಿಸ್ ಗೇಲ್
  • 2876 ರನ್​​ – ಕುಮಾರ ಸಂಗಕ್ಕಾರ
  • 2858 ರನ್​​ – ಮಹೇಲಾ ಜಯವರ್ಧನೆ
  • 2719 ರನ್​​- ಸಚಿನ್ ತೆಂಡೂಲ್ಕರ್
  • 2590 ರನ್​​ – ಡೇವಿಡ್ ವಾರ್ನರ್
Continue Reading

ಪ್ರಮುಖ ಸುದ್ದಿ

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

T20 World Cup 2024 : ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಆಹ್ವಾನ ಪಡೆದು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 146 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

T20 world cup 2024
Koo

ಆಂಟಿಗುವಾ: ಸಾಂಘಿಕ ಪ್ರದರ್ಶನ ನೀಡಿದ ಭಾರತ ತಂಡ ಟಿ20 ವಿಶ್ವ ಕಪ್ (T20 World Cup 2024)​ ಸೂಪರ್ 8 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ 50 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಈ ಪ್ರಮುಖ ಹಂತದಲ್ಲಿ ಸತತ ಎರಡನೇ ಗೆಲುವು ತನ್ನದಾಗಿಸಿಕೊಂಡಿದ್ದು ಸೆಮಿಫೈನಲ್ ಪ್ರವೇಶ ಬಹುತೇಕ ನಿಶ್ಚಿತವಾಗಿದೆ. ಭಾರತ ತಂಡ ಈಗ ಎ ಗುಂಪಿನ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದೆ. 27 ಎಸೆತಗಳಲ್ಲಿ ಅರ್ಧಶತಕ (50 ರನ್​) ಬಾರಿಸಿದ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ 3 ವಿಕೆಟ್​ ಕಬಳಿಸಿದ ಕುಲ್ದೀಪ್ ಯಾದವ್​ ಗೆಲುವಿನ ರೂವಾರಿಗಳೆನಿಸಿಕೊಂಡರು.

ಆಂಟಿಗುವಾದ ವಿವಿಎನ್​ ರಿಚರ್ಡ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಆಹ್ವಾನ ಪಡೆದು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 146 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡದ ಗೆಲುವಿನ ಅಭಿಯಾನ ಮುಂದುವರಿಯಿತು. ಬೌಲಿಂಗ್ ಸ್ನೇಹಿ ಪಿಚ್​ನಲ್ಲಿ ಭರ್ಜರಿ ರನ್​ ಬಾರಿಸುವ ಜತೆಗೆ ಸಂಘಟಿತ ಬೌಲಿಂಗ್ ನಡೆಸಿದ ಭಾರತ ಅರ್ಹವಾಗಿ ಗೆಲುವು ದಾಖಲಿಸಿತು.

ಪಾಂಡ್ಯ ಅಬ್ಬರದ ಬ್ಯಾಟಿಂಗ್​

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ 11 ಎಸೆತಕ್ಕೆ 23 ರನ್ (3 ಫೋರ್​, 1 ಸಿಕ್ಸರ್​) ಬಾರಿಸಿದರೆ ವಿರಾಟ್​ ಕೊಹ್ಲಿ 27 ಎಸೆತಕ್ಕೆ 37 ರನ್ (1 ಫೋರ್​, 3 ಸಿಕ್ಸರ್​)​ ಕೊಡುಗೆ ಕೊಟ್ಟರು. ಆದರೆ, 39 ರನ್​ಗಳಿಗೆ ಮೊದಲ ವಿಕೆಟ್​ ನಷ್ಟವಾದ ಕಾರಣ ಭಾರತದ ಬ್ಯಾಟಿಂಗ್​ ಮೇಲೆ ಒತ್ತಡ ಬಿತ್ತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್ ಪಂತ್ ಮತ್ತೊಮ್ಮೆ ಅಬ್ಬರಿಸಿ 24 ಎಸೆತಗಳಿಗೆ 36 ರನ್ ಕೊಡುಗೆ ಕೊಟ್ಟರು. ಅವರ ಇನಿಂಗ್ಸ್​​ನಲ್ಲಿ 4 ಫೋರ್ ಹಾಗೂ 2 ಸಿಕ್ಸರ್​ಗಳಿದ್ದವು. ಆದರೆ ವಿರಾಟ್ ಔಟಾದ ಬಳಿಕ ಆಡಲು ಬಂದ ಸೂರ್ಯಕುಮಾರ್ ಯಾದವ್​ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿ ಸಿಡಿಯುವ ವಿಶ್ವಾಸ ಮೂಡಿಸಿದರೂ ನಂತರದ ಎಸೆತದಲ್ಲೇ ಔಟಾದರು.

ಇದನ್ನೂ ಓದಿ: T20 World Cup 2024 : ವೆಸ್ಟ್​ ಇಂಡೀಸ್​​ನಲ್ಲಿ ಹಲಾಲ್​ ಮಾಂಸದೂಟ ಸಿಗದ್ದಕ್ಕೆ ತಾವೇ ಅಡುಗೆ ಮಾಡಿಕೊಳ್ಳುತ್ತಿರುವ ಅಫಘಾನಿಸ್ತಾನದ ಕ್ರಿಕೆಟಿಗರು !

ಒಂದು ಹಂತದಲ್ಲಿ ಭಾರತ ತಂಡ 108 ರನ್​ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ವೇಳೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದುಬೆ 24 ಎಸೆತಕ್ಕೆ 34 ರನ್ ಗಳಿಸಿದರೆ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮೂಲಕ 50 ರನ್​ ಕೊಡುಗೆ ಕೊಟ್ಟರು. ಇವರಿಬ್ಬರ ಆಟದಿಂದ ಭಾರತದ ಬ್ಯಾಟಿಂಗ್ ಶಕ್ತಿ ಚೇತರಿಸಿಕೊಂಡು ಬೌಲಿಂಗ್ ಸ್ನೇಹಿ ಈ ಸ್ಟೇಡಿಯಮ್​ನಲ್ಲಿ ಗೆಲುವಿನ ಮೊತ್ತನ್ನೇ ಪರಿಸಿತು.

ಕುಲ್ದೀಪ್​ ಭರ್ಜರಿ ಬೌಲಿಂಗ್​

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಬಾಂಗ್ಲಾದೇಶ ತಂಡ ಭರ್ಜರಿ ವಿಶ್ವಾಸ ವ್ಯಕ್ತಪಡಿಸಿತು. ಅದರೆ, ಭಾರತೀಯ ಬೌಲರ್​ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಹಾರ್ದಿಕ್ ಪಾಂಡ್ಯ ಆರಂಭಿಕ ಬ್ಯಾಟರ್​ ಲಿಟನ್ ದಾಸ್ ಅವರನ್ನು 13 ರನ್ ಗೆ ಔಟ್ ಮಾಡಿದರು. ಆದರೆ, ತಂಜಿದ್ ಹಸನ್​ (29 ರನ್​) ಹಾಗೂ ನಜ್ಮುಲ್ ಹೊಸೈನ್​ (40 ರನ್​) ಇನಿಂಗ್ಸ್​ ಕಟ್ಟಲು ಆರಂಭಿಸಿದರು. ಈ ವೇಳೆ ದಾಳಿಗಿಳಿದ ಕುಲ್ದೀಪ್ ಯಾದವ್​ ತಂಜಿದ್​, ತೌಹಿದ್ ಹೃದೋಯ್​ (4 ರನ್​) , ಹಾಗೂ ಶಕಿಬ್ ಅಲ್​ ಹಸನ್​ (11 ರನ್​) ವಿಕೆಟ್​ ಕಿತ್ತರು. ಈ ವೇಳೆ ಬಾಂಗ್ಲಾ ತಂಡದ ಬಲ ಕುಸಿಯಿತು. ಭಾರತದ ಬೌಲರ್​ಗಳಿಗೆ ಬೆದರಿಕೆ ಹುಟ್ಟಿಸಿದ್ದ ನಜ್ಮುಲ್ ಬುಮ್ರಾ ಎಸೆತಕ್ಕೆ ಔಟಾದರು. ಜೇಕರ್ ಅಲಿ ಅರ್ಶ್​ದೀಪ್​ಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಆಡಲು ಬಂದ ರಶಿದ್ ಹೊಸೈನ್​ 10 ಎಸೆತಕ್ಕೆ 24 ರನ್ ಬಾರಿಸಿ ಬುಮ್ರಾಗೆ ವಿಕೆಟ್​ ಕೊಟ್ಟರು. ಮಹಮ್ಮದುಲ್ಲಾ 13 ರನ್​ಗಳಿಗೆ ತಮ್ಮ ಆಟ ಮುಗಿಸಿದರು.

ಭಾರತ ಪರ ಕುಲ್ದೀಪ್​ 3 ವಿಕೆಟ್​, ಬುಮ್ರಾ 2 ವಿಕೆಟ್​, ಅರ್ಶ್​ದೀಪ್​ 2 ವಿಕೆಟ್ ಹಾಗೂ ಪಾಂಡ್ಯ 1 ವಿಕೆಟ್​ ತಮ್ಮದಾಗಿಸಿಕೊಂಡರು.

Continue Reading

ಪ್ರಮುಖ ಸುದ್ದಿ

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತ ವಿಕೆಟ್​ ನಷ್ಟವಿಲ್ಲದೆ 100 ರನ್​; ಭವಿಷ್ಯ ನುಡಿದ ಬ್ರಿಯಾನ್ ಲಾರಾ

T20 World Cup 2024 : ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ವೈಫಲ್ಯ ಕೊನೆಯಾಗಲಿದೆ. ಅವರು ರನ್​ ಗಳಿಸಲಿದ್ದಾರೆ ಎಂಬುದು ಲಾರಾ ಅವರ ಭವಿಷ್ಯವಾಣಿಯಾಗಿದೆ. 2024 ರ ಟಿ 20 ವಿಶ್ವಕಪ್​ನಲ್ಲಿ ಭಾರತ ತಂಡದ ಇಬ್ಬರು ದಿಗ್ಗಜರ ಫಾರ್ಮ್ ದೊಡ್ಡ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

T20 world cup
Koo

ಆಂಟಿಗುವಾ: ಟಿ20 ವಿಶ್ವ ಕಪ್​ನಲ್ಲಿ (T20 World Cup 2024) ಭಾರತ ತಂಡ ವಿಶ್ವಾಸದಿಂದ ಮುನ್ನುಗ್ಗುತ್ತಿದೆ. ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಜೂನ್ 22ರಂದು ಬಾಂಗ್ಲಾದೇಶ ವಿರುದ್ಧದ ಭಾರತದ (IND vs BAN) ಸೂಪರ್ 8 ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯ ಹೆಚ್ಚು ಕುತೂಹಲ ಮೂಡಿಸಿದೆ. ಭಾರತ ಗೆದ್ದರೆ ನೇರವಾಗಿ ಸೆಮಿಫೈನಲ್​ ಪ್ರವೇಶ ಮಾಡಲಿದೆ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್​ ತಂಡದ ದಂತಕತೆ ಬ್ರಿಯಾನ್ ಲಾರಾ ಪಂದ್ಯದ ಕುರಿತು ದಿಟ್ಟ ಭವಿಷ್ಯ ನುಡಿದಿದ್ದಾರೆ. ಭಾರತವು ಯಾವುದೇ ವಿಕೆಟ್ ಕಳೆದುಕೊಳ್ಳದೆ ನೂರು ರನ್ ಗಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ವೈಫಲ್ಯ ಕೊನೆಯಾಗಲಿದೆ. ಅವರು ರನ್​ ಗಳಿಸಲಿದ್ದಾರೆ ಎಂಬುದು ಲಾರಾ ಅವರ ಭವಿಷ್ಯವಾಣಿಯಾಗಿದೆ. 2024 ರ ಟಿ 20 ವಿಶ್ವಕಪ್​ನಲ್ಲಿ ಭಾರತ ತಂಡದ ಇಬ್ಬರು ದಿಗ್ಗಜರ ಫಾರ್ಮ್ ದೊಡ್ಡ ಚರ್ಚೆಗೆ ಕಾರಣವಾಗಿದೆ. ಭಾರತದ ಅಜೇಯ 4 ಪಂದ್ಯಗಳ ಗೆಲುವಿನ ಹೊರತಾಗಿಯೂ, ರೋಹಿತ್ ಮತ್ತು ಕೊಹ್ಲಿ ಇನ್ನೂ ಬ್ಯಾಟಿಂಗ್​ನಲ್ಲಿ ಮಿಂಚಿಲ್ಲ ಎಂಬುದೇ ಚಿಂತೆಯಾಗಿದೆ.

ರೋಹಿತ್ ನಾಲ್ಕು ಇನ್ನಿಂಗ್ಸ್​​ಗಳಲ್ಲಿ 111.76 ಸ್ಟ್ರೈಕ್ ರೇಟ್​ನಲ್ಲಿ 19.00 ಸರಾಸರಿಯಲ್ಲಿ ಕೇವಲ 76 ರನ್ ಗಳಿಸಿದ್ದರೆ, ಕೊಹ್ಲಿ 7.25 ಸರಾಸರಿಯಲ್ಲಿ 29 ರನ್ ಗಳಿಸಿದ್ದಾರೆ. ಆದಾಗ್ಯೂ ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್ ಅವರಂಥ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಮತ್ತು ಬೌಲರ್​​ಗಳ ಸಾಂಘಿಕ ಪ್ರಯತ್ನದೊಂದಿಗೆ ಗೆಲುವು ಕಾಣುತ್ತಿದೆ.

ಇದನ್ನೂ ಓದಿ: T20 World Cup 2024 : ವೆಸ್ಟ್​ ಇಂಡೀಸ್​​ನಲ್ಲಿ ಹಲಾಲ್​ ಮಾಂಸದೂಟ ಸಿಗದ್ದಕ್ಕೆ ತಾವೇ ಅಡುಗೆ ಮಾಡಿಕೊಳ್ಳುತ್ತಿರುವ ಅಫಘಾನಿಸ್ತಾನದ ಕ್ರಿಕೆಟಿಗರು !

ಪಂದ್ಯಾವಳಿಯ ಸೆಮಿಫೈನಲ್ ಕಡೆಗೆ ಭಾರತ ತಂಡ ಮುನ್ನುಗ್ಗುತ್ತಿರುವ ರೀತಿಗೆ ಲಾರಾ ಪ್ರಭಾವಿತರಾಗಿದ್ದಾರೆ. ಬಾಂಗ್ಲಾದೇಶವು ಭಾರತಕ್ಕೆ ಸೆಡ್ಡು ಹೊಡೆಯಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಕೊಹ್ಲಿ ಮತ್ತು ರೋಹಿತ್ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಬಗ್ಗೆ ಜಾಗರೂಕರಾಗಿರುವುದು ಉತ್ತಮ ಎಂದು ಸಲಹೆ ಕೊಟ್ಟಿದ್ದಾರೆ.

ಸೂಪರ್​ 8 ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿದರೆ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸುವುದು ಖಚಿತ. ಅವರು 2ನೇ ಬ್ಯಾಟಿಂಗ್ ಮಾಡಿದರೂ 100 ರನ್ ಗಳಿಸಲಿದ್ದಾರೆ. ಭಾರತ ತಂಡ ತುಂಬಾ ಬಲಿಷ್ಠವಾಗಿದೆ. ಈ ಸಮಯದಲ್ಲಿ ಪ್ರತಿ ತಂಡವನ್ನು ಸೋಲಿಸುತ್ತಿದ್ದಾರೆ. ಆದರೆ ಆರಂಭಿಕ ಪಾಲುದಾರಿಕೆ ಬಗ್ಗೆ ಭಾರತವು ತುಂಬಾ ಕಾಳಜಿಯಾಗಿದೆ. ಆದರೆ ಬಾಂಗ್ಲಾದೇಶವು ಬೆದರಿಕೆಯಾಗುವುದಿಲ್ಲ, “ಎಂದು ಲಾರಾ ಹೇಳಿದ್ದಾರೆ.

ರೋಹಿತ್ ಹಲವು ವರ್ಷಗಳಿಂದ ಎಡಗೈ ಬೌಲರ್​ಗಳ ವಿರುದ್ಧ ಸಾಕಷ್ಟು ಹೋರಾಟ ನಡೆಸಿದ್ದಾರೆ. ಟಿ 20 ವಿಶ್ವಕಪ್ 2024 ರಲ್ಲಿ ಎಡಗೈ ವೇಗದ ಬೌಲರ್ ವಿರುದ್ಧ ಆರಂಭಿಕ ಬ್ಯಾಟರ್​​ ಎಲ್ಲಾ 4 ಬಾರಿ ಔಟ್ ಆಗಿದ್ದಾರೆ. ಈ ಬಾರಿ ಬಾಂಗ್ಲಾದೇಶ ವಿರುದ್ಧದ ಸವಾಲನ್ನು ಜಯಿಸಲು ಎದುರು ನೋಡುತ್ತಿದ್ದಾರೆ.

ಫಾರ್ಮ್​​ ಮರಳುತ್ತಾರಾ ರೋಹಿತ್-ಕೊಹ್ಲಿ ಜೋಡಿ

ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಫಾರ್ಮ್ ಭಾರತಕ್ಕೆ ಆತಂಕಕಾರಿಯಾಗಬಾರದು ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ. ಬಾಂಗ್ಲಾದೇಶದ ವಿರುದ್ಧ ರನ್ ಗಳಿಸಲು ಆರಂಭಿಕ ಜೋಡಿಯನ್ನು ಬೆಂಬಲಿಸಿದ್ದಾರೆ.

ಭಾರತ ತಂಡವು ಉತ್ತಮ ಆರಂಭಿಕ ಜತೆಯಾಟವನ್ನು ನಿರೀಕ್ಷಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ. ಈ ವಿಶ್ವಕಪ್​​ನಲ್ಲಿ ಪಿಚ್​ಗಳ ಸ್ಥಿತಿಯಿಂದಾಗಿ ಯಾವುದೇ ತಂಡವು ಹೆಚ್ಚು ಪ್ರಾಬಲ್ಯ ಹೊಂದಿಲ್ಲ. ಭಾರತವು ಆರಂಭಿಕ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾದರೆ ಭಾರತವೇ ಉತ್ತಮ ತಂಡ ಎಂದು ಹೇಳಿದ್ದಾರೆ.

Continue Reading
Advertisement
Actor Darshan Judicial Custody Jailer Gave UTP Number
ಸ್ಯಾಂಡಲ್ ವುಡ್18 seconds ago

Actor Darshan: ಪರಪ್ಪನ ಅಗ್ರಹಾರದಲ್ಲಿ ʻದಾಸʼ; ʻಡಿʼಬಾಸ್‌ ಕೈದಿ ನಂಬರ್‌ 6106!

viral video
Latest1 min ago

Viral Video: ತಲೆ ಮೇಲೆ ಎರಡು ಗ್ಯಾಸ್ ಸಿಲಿಂಡರ್, ಅದರ ಮೇಲೆ ಬಿಂದಿಗೆ! ಅಬ್ಬಾ ಎಂಥ ಅದ್ಭುತ!

Gully cricket vibes
ಕ್ರೀಡೆ6 mins ago

Gully Cricket Vibes: ಗಲ್ಲಿ ಕ್ರಿಕೆಟ್​ನಂತೆ ಚೆಂಡು ಹುಡುಕಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Share Market Scam
ಕ್ರೈಂ16 mins ago

Share Market Scam: ಮುಖೇಶ್ ಅಂಬಾನಿ ಡೀಪ್ ಫೇಕ್‌! 7 ಲಕ್ಷ ರೂ. ಕಳೆದುಕೊಂಡ ವೈದ್ಯೆ

Tharun Sudhir sonal monteiro will get marriage
ಸಿನಿಮಾ18 mins ago

Tharun Sudhir: ಸೋನಲ್ ಜತೆ `ತರುಣ್ ಸುಧೀರ್‌’ಗೆ ಕೂಡಿಬಂತು ಕಂಕಣಭಾಗ್ಯ?

Rushikonda Palace Issue
ದೇಶ31 mins ago

Rushikonda Palace: 500 ಕೋಟಿಯ ಋಷಿಕೊಂಡ ಅರಮನೆ; 12 ಬೆಡ್‌ರೂಮ್‌, ವಾಶ್‌ರೂಮ್‌ ಒಂದು ಮನೆಯಷ್ಟು!

Sumit Nagal
ಕ್ರೀಡೆ38 mins ago

Paris Olympics 2024: ಅಧಿಕೃತವಾಗಿ ಪ್ಯಾರಿಸ್​ ಒಲಿಂಪಿಕ್ಸ್ ಟಿಕೆಟ್​ ಪಡೆದ ಸುಮಿತ್‌ ನಗಾಲ್‌

Suraj Revanna Case
ಕರ್ನಾಟಕ54 mins ago

Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಸೂರಜ್‌ ರೇವಣ್ಣ ಅರೆಸ್ಟ್‌

Doodle V3 E-Cycle
ಆಟೋಮೊಬೈಲ್1 hour ago

Doodle V3 E-Cycle: ‘ಕಲ್ಕಿ 2898 ಎಡಿ’ನಿಂದ ಪ್ರೇರಿತವಾದ ಇ-ಸೈಕಲ್ ಮಾರುಕಟ್ಟೆಗೆ

Suraj Revanna Case
ಕರ್ನಾಟಕ1 hour ago

Suraj Revanna Case:  ಸಲಿಂಗ ಕಾಮ ಆರೋಪ; ಸಂತ್ರಸ್ತನ ವೈದ್ಯಕೀಯ ಪರೀಕ್ಷೆ ಬಳಿಕ ಇಂದೇ ಅರೆಸ್ಟ್‌ ಆಗ್ತರಾ ಸೂರಜ್‌ ರೇವಣ್ಣ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌