Which teams will play in Saturday's IPL double header matches?IPL 2023 : ಶನಿವಾರದ ಐಪಿಎಲ್​ ಡಬಲ್​ ಹೆಡರ್​ ಪಂದ್ಯಗಳಲ್ಲಿ ಆಡಲಿರುವ ತಂಡಗಳು ಯಾವುವು? - Vistara News

ಕ್ರಿಕೆಟ್

IPL 2023 : ಶನಿವಾರದ ಐಪಿಎಲ್​ ಡಬಲ್​ ಹೆಡರ್​ ಪಂದ್ಯಗಳಲ್ಲಿ ಆಡಲಿರುವ ತಂಡಗಳು ಯಾವುವು?

ಐಪಿಎಲ್​ನ (IPL 2023 ) ಎರಡನೇ ಪಂದ್ಯದಲ್ಲಿ ಪಂಜಾಬ್​ ಮತ್ತು ಕೋಲ್ಕೊತಾ ಹಾಗೂ ಲಖನೌ ಹಾಗೂ ಡೆಲ್ಲಿ ತಂಡಗಳ ನಡುವೆ ಪಂದ್ಯ ನಡೆಯಲಿವೆ.

VISTARANEWS.COM


on

Which teams will play in Saturday's IPL double header matches?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಐಪಿಎಲ್​ನ 16ನೇ (IPL 2023) ಆವೃತ್ತಿಯ ಮೊದಲ ಪಂದ್ಯ ರೋಚಕವಾಗಿ ಮುಕ್ತಾಯಗೊಂಡಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಬಳಗವನ್ನು ಗುಜರಾತ್​ ಟೈಟನ್ಸ್​ ತಂಡ ಐದು ವಿಕೆಟ್​ಗಳಿಂದ ಮಣಿಸಿದೆ. ಕೊನೇ ಓವರ್​ನಲ್ಲಿ ಬೇಕಾದ 8 ರನ್​​ಗಳನ್ನು ಎರಡೇ ಎಸೆತದಲ್ಲಿ ಮಾಡಿ ಮುಗಿಸಿದೆ ಗುಜರಾತ್​ ತಂಡ. ಈ ಮೂಲಕ ಐಪಿಎಲ್​ ಟೂರ್ನಿ ರೋಚಕವಾಗಿ ಶುಭಾರಂಭಗೊಂಡಿದೆ. ಈ ಖುಷಿಯಲ್ಲಿರುವ ಅಭಿಮಾನಿಗಳಿಗೆ ಶನಿವಾರ (ಏಪ್ರಿಲ್​1) ಡಬಲ್​ ಧಮಾಕ. ವಾರಾಂತ್ಯದಲ್ಲಿ ಎರಡು ಪಂದ್ಯಗಳು ನಡೆಯಲಿದ್ದು ಪ್ರೇಕ್ಷಕರಿಗೆ ಮಧ್ಯಾಹ್ನದ ಬಳಿಕದಿಂದ ಕ್ರಿಕೆಟ್​ನ ರಸದೌತಣ ಸಿಗಲಿದೆ.

ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಹಾಗೂ ಕೋಲ್ಕೊತಾ ನೈಟ್​ ರೈಡರ್ಸ್​ ತಂಡಗಳು ಗೆಲುವಿಗಾಗಿ ಜಿದ್ದಿಗೆ ಬೀಳಲಿವೆ. ಕೋಲ್ಕತಾ ತಂಡಕ್ಕೆ ಅನನುಭವಿ ನಿತೀಶ್​ ರಾಣಾ ನಾಯಕರಾಗಿದ್ದರೆ, ಪಂಜಾಬ್​ ತಂಡಕ್ಕೆ ಗಬ್ಬರ್​ ಸಿಂಗ್ ಖ್ಯಾತಿಯ ಶಿಖರ್​ ಧವನ್​ ಕ್ಯಾಪ್ಟನ್​. ಇವರಿಬ್ಬರ ಬಳಗ ಭರ್ಜರಿ ಹೋರಾಟ ಸಂಘಟಿಸಿ ಐಪಿಎಲ್​ ಸಂಭ್ರಮಕ್ಕೆ ಕಿಚ್ಚು ಹಚ್ಚಲಿದೆ.

ಎರಡನೇ ಪಂದ್ಯದಲ್ಲಿ ಕೆ.ಎಲ್​ ರಾಹುಲ್ ನೇತೃತ್ವದ ಲಕ್ನೊ ಸೂಪರ್​ ಜೈಂಟ್ಸ್​ ಹಾಗೂ ಡೇವಿಡ್​ ವಾರ್ನರ್​ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಈ ಪಂದ್ಯವೂ ಅತ್ಯಂತ ರೋಚಕವಾಗಿ ನಡೆಯುವ ಲಕ್ಷಣಗಳಿವೆ.

ಪಂಜಾಬ್​ vs ಕೋಲ್ಕೊತಾ ತಂಡಗಳ ಬಲಾಬಲ

ಶಿಖರ್​ ಧವನ್​ ನಾಯಕತ್ವದ ಪಂಜಾಬ್​ ಕಿಂಗ್ಸ್ ತಂಡ ಯುವ ಆಟಗಾರರನ್ನೇ ಹೊಂದಿದೆ. ಕಳೆದ ಬಾರಿ ಪಂಜಾಬ್​ ತಂಡಕ್ಕೆ ಕನ್ನಡಿಗ ಮಯಾಂಕ್​ ಅಗರ್ವಾಲ್​ ನಾಯಕರಾಗಿದ್ದರು. ಈ ಬಾರಿ ಶಿಖರ್​ ಧವನ್​ಗೆ ಹೊಣೆಗಾರಿಕೆ ವಹಿಸಲಾಗಿದೆ. ಭಾರತ ಏಕ ದಿನ ತಂಡದ ನಾಯಕತ್ವ ವಹಿಸಿ ಅಭ್ಯಾಸ ಹೊಂದಿರುವ ಅವರು ಈ ಪಂದ್ಯದಲ್ಲಿ ಮತ್ತೊಂದು ಬಾರಿ ತಮ್ಮ ನಾಯಕತ್ವದ ಪಟ್ಟುಗಳನ್ನು ಪ್ರದರ್ಶಿಸಲಿದ್ದಾರೆ. ಶಾರುಖ್​ ಖಾನ್​, ಭಾನುಕಾ ರಾಜಪಕ್ಷ, ಸಿಕಂದರ್​ ರಾಜಾ. ಸ್ಯಾಮ್​ ಕರ್ರನ್​, ರಿಶಿ ಧವನ್​, ರಾಹುಲ್​ ಚಾಹರ್ ಹಾಗೂ ವೇಗಿ ಅರ್ಶ್​ದೀಪ್​ ಸಿಂಗ್ ಈ ತಂಡದ ಬಲಶಾಲಿ ಆಟಗಾರರು. ಅತ್ತ ಕೆಕೆಆರ್​ ತಂಡಕ್ಕೆ ಸವಾಲು ಹೆಚ್ಚಿದೆ. ಕಾಯಂ ನಾಯಕರ ಕೊರತೆಯಲ್ಲಿ ವೆಂಕಟೇಶ್​ ಅಯ್ಯರ್​, ಆ್ಯಂಡ್ರೆ ರಸೆಲ್, ಸುನೀಲ್​ ನರೈನ್​, ಶಾರ್ದುಲ್ ಠಾಕೂರ್​, ವರುಣ್ ಚಕ್ರವರ್ತಿ, ರಮನುಲ್ಲಾ ಗುರ್ಬಜ್​, ಲಾಕಿ ಫರ್ಗ್ಯೂಸನ್​, ಉಮೇಶ್​ ಯಾದವರ್ ಅವರ ಶಕ್ತಿಯನ್ನು ಬಳಸಿಕೊಂಡು ಗೆಲ್ಲಬೇಕಾಗಿದೆ.

ಪಂದ್ಯದ ಸ್ಥಳ : ಪಂಜಾಬ್​ ಕ್ರಿಕೆಟ್​ ಅಸೋಸಿಯೇಷನ್​ ಸ್ಟೇಡಿಯಮ್​ ಮೊಹಾಲಿ

ಸಮಯ: ಮಧ್ಯಾಹ್ನ 3.30

ಲಕ್ನೊ vs ಡೆಲ್ಲಿ

ಲಕ್ನೊ ಸೂಪರ್​ ಜೈಂಟ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳ ನಡುವಿನ ಪಂದ್ಯ ಹೆಚ್ಚು ರೋಚಕವಾಗಿ ನಡೆಯುವ ಸಾಧ್ಯತೆಗಳಿವೆ. ಉಭಯ ತಂಡಗಳಲ್ಲಿ ಸ್ಟಾರ್​ ಆಟಗಾರರ ದಂಡೇ ಇದೆ. ಲಖನೌ ತಂಡದಲ್ಲಿ ಕ್ವಿಂಟನ್ ಡಿಕಾಕ್​, ನಿಕೋಲಸ್ ಪೂರನ್, ಮಾರ್ಕ ಸ್ಟೋಯ್ನಿಸ್​, ಆಯುಶ್​ ಬದೋನಿ, ಕೃಣಾಲ್ ಪಾಂಡ್ಯ, ದೀಪಕ್ ಹೂಡ, ಜಯದೇವ್ ಉನಾದ್ಕಟ್, ಆವೇಶ್ ಖಾನ್, ರವಿ ಬಿಷ್ಟೋಯಿ, ಅಮಿತ್ ಮಿಶ್ರಾ ಹೀಗೆ ಅನೇಕ ಆಯ್ಕೆಗಳಿವೆ. ಇತ್ತ ಡೆಲ್ಲಿ ತಂಡದಲ್ಲಿ ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್​, ಸರ್ಫರಾಜ್ ಖಾನ್, ರೋವ್ಮನ್​ ಪೊವೆಲ್​, ಪಿಲಿಪ್ ಸಾಲ್ಟ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ, ಕುಲ್ದೀಪ್ ಯಾದವ್ ತಂಡದಲಿದ್ದಾರೆ.

ಸ್ಥಳ: ಏಕನಾ ಕ್ರಿಕೆಟ್​ ಸ್ಟೇಡಿಯಮ್​, ಲಖನೌ

ಸಮಯ : ಸಂಜೆ 7.30

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Women’s T20 World Cup: ವಿಶ್ವಕಪ್​ ನಡೆಸಲು ಸೇನೆಯ ನೆರವು ಕೇಳಿದ ಬಾಂಗ್ಲಾ ಕ್ರಿಕೆಟ್​ ಮಂಡಳಿ

Women’s T20 World Cup:ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಸೇನಾ ಮುಖ್ಯಸ್ಥ ಜನರಲ್‌ ವಕಾರ್‌ ಜಮಾನ್‌ ಅವರಿಗೆ ಪತ್ರ ಬರೆದಿದ್ದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿದೆ.

VISTARANEWS.COM


on

Women’s T20 World Cup
Koo

ಢಾಕಾ: ಬಹುನಿರೀಕ್ಷಿತ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ(Women’s T20 World Cup) ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ಆತಿಥ್ಯದಲ್ಲಿ ನಡೆಯಲಿದೆ. ಆದರೆ, ಬಾಂಗ್ಲಾದೇಶದಲ್ಲಿ(bangladesh violence)  ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಅಲ್ಲಿನ ನಾಗರೀಕರು ನಡೆಸುತ್ತಿರುವ ಪ್ರತಿಭಟನೆ, ಗಲಭೆಗಳು ಹಿಂಸಾತ್ಮಕ ರೂಪ ತಳೆದ ಕಾರಣ ಶೇಕ್ ಹಸೀನಾ‌ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಕಳೆದ ಸೋಮವಾರ (ಆ.04) ಭಾರತಕ್ಕೆ ಪಲಾಯನ ಮಾಡಿದ್ದರು. ಹೊಸ ಸರ್ಕಾರ ರಚನೆಯಾಗಿದ್ದರೂ ಕೂಡ ಹಿಂಸಾತ್ಮಕ ಘಟನೆಗಳು ಇನ್ನೂ ನಡೆಯುತ್ತಲೇ ಇದೆ. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (Bangladesh Cricket Board) ಸೇನೆಯ ನೆರವು ಕೋರಿದೆ.

ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಸೇನಾ ಮುಖ್ಯಸ್ಥ ಜನರಲ್‌ ವಕಾರ್‌ ಜಮಾನ್‌ ಅವರಿಗೆ ಪತ್ರ ಬರೆದಿದ್ದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿದೆ. ಐಸಿಸಿ ಕೂಡ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದೊಮ್ಮೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸದೇ ಹೋದರೆ, ಭದ್ರತಾ ಕಾರಣದಿಂದ ಟೂರ್ನಿಯನ್ನು ಬಾಂಗ್ಲಾದೇಶದಿಂದ ಬೇರೆ ದೇಶಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಟೂರ್ನಿ ಸ್ಥಳಾಂತರಗೊಂಡರೆ ಭಾರತದಲ್ಲಿ ನಡೆಯಲಿದೆ ಎನ್ನಲಾಗಿದೆ. ಸದ್ಯ ಸೇನೆ ಢಾಕಾದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

ಇದನ್ನೂ ಓದಿ ICC Women’s T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಶ್ರೀಲಂಕಾ

ಹಿಂಸಾತ್ಮಕ ಪ್ರತಿಭಟನೆ ಏಕೆ?

ಬಾಂಗ್ಲಾದೇಶದಲ್ಲಿ ಮೀಸಲಾತಿ ಕಾರಣಕ್ಕಾಗಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ. 1971ರಲ್ಲಿ ನಡೆದ ಬಾಂಗ್ಲಾದೇಶ ಹೋರಾಟದಲ್ಲಿ ಭಾಗಿಯಾದವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಮೀಸಲಾತಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಕೆಲ ದಿನಗಳ ಹಿಂದೆಯೂ ನಡೆದ ಹಿಂಸಾತ್ಮಕ ಹೋರಾಟದಲ್ಲಿ ನೂರಾರು ಜನ ಮೃತಪಟ್ಟಿದ್ದರು.

ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೇಳುತ್ತಲೇ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌, ಶೇ.30ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿತ್ತು. ಆದರೆ, ಸಂಪೂರ್ಣವಾಗಿ ಮೀಸಲಾತಿಯನ್ನು ರದ್ದುಗೊಳಿಸುವ ಬದಲು ಶೇ.5ರಷ್ಟು ಮೀಸಲಾತಿ ಮುಂದುವರಿಸಿದೆ. ಸಂಪೂರ್ಣವಾಗಿ ಮೀಸಲಾತಿ ರದ್ದುಗೊಳಿಸಬೇಕು ಎಂದು ಜನರ ಆಗ್ರಹವಾಗಿದ್ದು, ಇದಕ್ಕಾಗಿ ಪ್ರತಿಭಟನೆ ಆರಂಭವಾಗಿದೆ. ಪ್ರತಿಭಟನೆಗೆ ಪ್ರತಿಪಕ್ಷಗಳೂ ಬೆಂಬಲ ನೀಡಿದ್ದು, ಶೇಖ್‌ ಹಸೀನಾ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಅದರಂತೆ, ಶೇಖ್‌ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ.

ಹಿಂದೂಗಳ ಮೇಲೆ ದಾಳಿ

ಶೇಕ್‌ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ ಬಳಿಕ ನಡೆದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕನಿಷ್ಠ 45 ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಹೀಗಾಗಿ ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎನ್ನಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

Continue Reading

ಪ್ರಮುಖ ಸುದ್ದಿ

Narendra Modi Stadium : ಗುಜರಾತ್​ಗೆ ಸಡ್ಡು; ತಮಿಳುನಾಡಿನಲ್ಲಿ ನಿರ್ಮಾಣವಾಗಲಿದೆ ನರೇಂದ್ರ ಮೋದಿ ಸ್ಟೇಡಿಯಮ್​​ಗಿಂತ ದೊಡ್ಡ ಕ್ರಿಕೆಟ್​ ಸೌಲಭ್ಯ

Narendra Modi Stadium : ಸ್ಟೇಡಿಯಮ್ ನಿರ್ಮಾಣಕ್ಕೆ ಮೂರು ಅಂತಿಗೊಳಿಸಲಾಗಿದೆ. ಸಚಿವರು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಕೊಯಮತ್ತೂರಿನ ಒಂಡಿಪುದೂರ್ ಪ್ರದೇಶವನ್ನು ಈಗ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಆಯ್ಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಸ್ಥಳದ ನಿರ್ಮಾಣಕ್ಕಾಗಿ ವಿವರವಾದ ಯೋಜನಾ ವರದಿ ತಯಾರಿಸಲು ತಮಿಳುನಾಡು ಸರ್ಕಾರ ಟೆಂಡರ್ ನೀಡಿದೆ.

VISTARANEWS.COM


on

Narendra Modi Stadium
Koo

ಬೆಂಗಳೂರು: ಇತ್ತೀಚಿನ ಬೆಳವಣಿಗೆಯೊಂದರ ಪ್ರಕಾರ ತಮಿಳುನಾಡು ರಾಜ್ಯ ಸರ್ಕಾರವು ಕೊಯಮತ್ತೂರಿನಲ್ಲಿ ಅಂತಾರಾಷ್ಟ್ರೀಯ ಸೌಲಭ್ಯಗಳೊಂದಿಗೆ ಹೊಸ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಯೋಜನೆ ರೂಪಿಸಿದೆ. . ಇತ್ತೀಚಿನ ಸುದ್ದಿ ವರದಿಗಳ ಪ್ರಕಾರ, ತಮಿಳುನಾಡು ರಾಜ್ಯ ಸರ್ಕಾರವು ದೇಶದ ಅತಿ ಹೆಚ್ಚು ಆಸನಗಳು ಇರುವ ಕ್ರೀಡಾಂಗಣವನ್ನು ನಿರ್ಮಿಸಲು ಯೋಜಿಸುತ್ತಿದೆ. ಇದು ಗುಜರಾತ್​ನ ಅಹಮದಾಬಾದ್ ನಗರದಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸೌಲಭ್ಯವಾಗಿರುವ ನರೇಂದ್ರ ಮೋದಿ ಸ್ಟೇಡಿಯಮ್​ಗಿಂತಲೂ (Narendra Modi Stadium) ದೊಡ್ಡದಾಗಿರಲಿದೆ. ಈ ಮೂಲಕ ಗುಜರಾತ್​ಗೆ ಕ್ರಿಕೆಟ್​ನಲ್ಲಿ ಸಡ್ಡು ಹೊಡೆಯಲು ದಕ್ಷಿಣದ ರಾಜ್ಯ ತಮಿಳುನಾಡು ಮುಂದಾಗಿದೆ.

ಸಂಸತ್ತಿನ ಚುನಾವಣೆಯ ಸಮಯದಲ್ಲಿ ಕೊಯಮತ್ತೂರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭರವಸೆ ನೀಡಿದ್ದರು ಎಂದು ರಾಜ್ಯ ಕೈಗಾರಿಕಾ ಸಚಿವ ಟಿಆರ್​ಬಿ ರಾಜಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದರು. ಈ ಪ್ರದೇಶದಲ್ಲಿ ಕ್ರಿಕೆಟ್ ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಬಯಸಿದೆ ಎಂದು ಅವರು ಹೇಳಿದ್ದರು.

ಉದಯನಿಧಿ ಸ್ಟಾಲಿನ್ ಭರವಸೆ

ರಾಜ್ಯ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರು ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಸೂಕ್ತ ಸ್ಥಳವನ್ನು ಕಂಡುಹಿಡಿಯುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದ ನಂತರ ಈ ಕ್ರೀಡಾಂಗಣವು ತಮಿಳುನಾಡಿನ ಎರಡನೇ ಅಂತರರಾಷ್ಟ್ರೀಯ ಗುಣಮಟ್ಟದ ಸ್ಥಳವಾಗಲಿದೆ ಎಂದು ಉದಯನಿಧಿ ಹೇಳಿದ್ದಾರೆ.

ಕ್ರೀಡಾ ಪ್ರೇಮಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕೊಯಮತ್ತೂರಿನಲ್ಲಿ ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣವನ್ನು ಸ್ಥಾಪಿಸಲು ನಾವು ಮುಂದಾಗಿದ್ದೇವೆ. ನಮ್ಮ ಸಚಿವ ಟಿಆರ್​ಬಿ ರಾಜಾ ಅವರು ಹೇಳಿದಂತೆ ಈ ಕ್ರೀಡಾಂಗಣವು ಚೆನ್ನೈನ ಅಪ್ರತಿಮ ಎಂಎಸಿ ಕ್ರೀಡಾಂಗಣದ ನಂತರ ತಮಿಳುನಾಡಿನ ಎರಡನೇ ಅತಿ ದೊಡ್ಡ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ತಾಣವಾಗಲಿದೆ. ನಮ್ಮ ಸರ್ಕಾರ ತಮಿಳುನಾಡಿನಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬದ್ಧರಾಗಿದೆ ” ಎಂದು ಬರೆದುಕೊಂಡಿದ್ದಾರೆ.

ಸ್ಟೇಡಿಯಮ್ ನಿರ್ಮಾಣಕ್ಕೆ ಮೂರು ಅಂತಿಗೊಳಿಸಲಾಗಿದೆ. ಸಚಿವರು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಕೊಯಮತ್ತೂರಿನ ಒಂಡಿಪುದೂರ್ ಪ್ರದೇಶವನ್ನು ಈಗ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಆಯ್ಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಸ್ಥಳದ ನಿರ್ಮಾಣಕ್ಕಾಗಿ ವಿವರವಾದ ಯೋಜನಾ ವರದಿ ತಯಾರಿಸಲು ತಮಿಳುನಾಡು ಸರ್ಕಾರ ಟೆಂಡರ್ ನೀಡಿದೆ.

ವಿಶ್ವದಲ್ಲೇ ಅತಿ ಹೆಚ್ಚು ಆಸನ ಸಾಮರ್ಥ್ಯದ ಕ್ರೀಡಾಂಗಣ

ಹೊಸ ಕ್ರಿಕೆಟ್ ಕ್ರೀಡಾಂಗಣವನ್ನು ಕೊಯಮತ್ತೂರು ನಗರದಿಂದ 16 ಕಿ.ಮೀ ದೂರದಲ್ಲಿ ನಿರ್ಮಾಣಗೊಳ್ಳಲಿದೆ. ವಿಐಪಿ ಮತ್ತು ಕಾರ್ಪೊರೇಟ್ ಸೌಲಭ್ಯಗಳು, ಆಟಗಾರರ ಲಾಂಜ್, ಮಾಧ್ಯಮ ಕೇಂದ್ರ, ಸಾರ್ವಜನಿಕ ಕೆಫೆಟೇರಿಯಾಗಳು ಮತ್ತು ರೆಸ್ಟೋರೆಂಟ್​ಗಳು, ವೀಕ್ಷಣಾ ಗ್ಯಾಲರಿಗಳು ಮತ್ತು ಕ್ರಿಕೆಟ್ ವಸ್ತುಸಂಗ್ರಹಾಲಯದಂತಹ ಉನ್ನತ ಶ್ರೇಣಿಯ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ತಮಿಳುನಾಡು ಚೆನ್ನೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನ ತವರು ಸ್ಥಳವಾದ ಚೆಪಾಕ್ ಭಾರತದ ಎರಡನೇ ಹಳೆಯ ಕ್ರೀಡಾಂಗಣವಾಗಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವಾಗಿದ್ದರೆ, ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ಆಯಾಮಗಳ ದೃಷ್ಟಿಯಿಂದ ದೊಡ್ಡದಾಗಿದೆ.

ಇದನ್ನೂ ಓದಿ:Paris Olympics 2024 : ವಿನೇಶ್ ಫೋಗಟ್​ ಬೆಳ್ಳಿ ಪದಕದ ಮನವಿ ತೀರ್ಪು ಭಾನುವಾರಕ್ಕೆ ಮುಂದೂಡಿಕೆ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಹೊಸ ಕ್ರೀಡಾಂಗಣಕ್ಕೆ ಮಾದರಿಗಳಾಗಿ ಇಲಾಖೆ ಶಿಫಾರಸು ಮಾಡಿದೆ. ಆಟಗಾರರು ಮತ್ತು ತರಬೇತುದಾರರಿಗೆ ಸಂಶೋಧನೆ ಮತ್ತು ಪುನರ್ವಸತಿ ಸೌಲಭ್ಯಗಳು, ಉತ್ತಮ ಗುಣಮಟ್ಟದ ಮಾಧ್ಯಮ, ಆಡಳಿತಾತ್ಮಕ ಮತ್ತು ಸಾರ್ವಜನಿಕ ಸೌಲಭ್ಯಗಳು ಸೇರಿದಂತೆ ಸುಧಾರಿತ ವಿನ್ಯಾಸ ಪರಿಕಲ್ಪನೆಗಳನ್ನು ಸಂಯೋಜಿಸುವ ಕೆಲಸವನ್ನು ಬಿಡ್​​ದಾರರಿಗೆ ವಹಿಸಲಾಗಿದೆ.

Continue Reading

ಕ್ರೀಡೆ

Jitesh Sharma : ಟೆಕಿ ಜತೆ ಎಂಗೇಜ್ಮೆಂಟ್​ ಮಾಡಿಕೊಂಡ ಜಿತೇಶ್ ಶರ್ಮಾ

Jitesh Sharma : ಲಿಂಕ್ಡ್ಇನ್ ಪ್ರಕಾರ, ಶಲಾಕಾ ಅವರು ಬದ್ನೇರ್​ನ ಪ್ರೊಫೆಸರ್ ರಾಮ್ ಮೇಘೆ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್​ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್​ ನಲ್ಲಿ ಬಿಇ ಪೂರ್ಣಗೊಳಿಸಿದರು. ನಂತರ ಅವರು ಯಶವಂತರಾವ್ ಚವಾಣ್ ಕಾಲೇಜ್ ಆಫ್ ಎಂಜಿನಿಯರಿಂಗ್ (ವೈಸಿಸಿಇ) ನಿಂದ ವಿಎಲ್ಎಸ್ಐ ವಿನ್ಯಾಸದಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ (M.Tech) ಪಡೆದಿದ್ದಾರೆ.

VISTARANEWS.COM


on

Jitesh Sharma
Koo

ಬೆಂಗಳೂರು : ಪಂಜಾಬ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಜಿತೇಶ್ ಶರ್ಮಾ (Jitesh Sharma) ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಅವರು ಶಲಾಕಾ ಮಕೇಶ್ವರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶುಕ್ರವಾರ ಇನ್ಸ್ಟಾಗ್ರಾಮ್​​ನಲ್ಲಿ ಅವರು ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಎಂಜಿನಿಯರಿಂಗ್ ಪದವೀಧರೆಯಾಗಿರುವ ನಾಗ್ಪುರ ಮೂಲದ ಶಲಾಕಾ ಮಾಕೇಶ್ವರ್ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಶಲಾಕಾ ಅವರು ಗ್ಲೋಬಲ್ ಲಾಜಿಕ್​ನಲ್ಲಿ ಲಸೀನಿಯರ್ ಟೆಸ್ಟ್ ಎಂಜಿನಿಯರ್ ಮತ್ತು ಅಡ್ವೆಂಟ್ ಸಾಫ್ಟ್ ವೇರ್ ಪ್ರೈವೇಟ್ ಲಿಮಿಟೆಡ್​​ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಲಿಂಕ್ಡ್ಇನ್ ಪ್ರಕಾರ, ಶಲಾಕಾ ಅವರು ಬದ್ನೇರ್​ನ ಪ್ರೊಫೆಸರ್ ರಾಮ್ ಮೇಘೆ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್​ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್​ ನಲ್ಲಿ ಬಿಇ ಪೂರ್ಣಗೊಳಿಸಿದರು. ನಂತರ ಅವರು ಯಶವಂತರಾವ್ ಚವಾಣ್ ಕಾಲೇಜ್ ಆಫ್ ಎಂಜಿನಿಯರಿಂಗ್ (ವೈಸಿಸಿಇ) ನಿಂದ ವಿಎಲ್ಎಸ್ಐ ವಿನ್ಯಾಸದಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ (M.Tech) ಪಡೆದಿದ್ದಾರೆ.

ಮಾಹಿತಿ ನೀಡಿದ ಜಿತೇಶ್ ಶರ್ಮಾ

ಜಿತೇಶ್ ಶರ್ಮಾ ಅವರು ಶಲಾಕಾ ಮಾಕೇಶ್ವರ್ ಅವರೊಂದಿಗಿನ ನಿಶ್ಚಿತಾರ್ಥದ ಫೋಟೋಗಳನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಜಿತೇಶ್ ಕಪ್ಪು ಪ್ಯಾಂಟ್ ಮತ್ತು ಬೂದು ಬಣ್ಣದ ಶರ್ಟ್ ಧರಿಸಿದ್ದರೆ, ಶಲಾಕಾ ಸಾಂಪ್ರದಾಯಿಕ ಸೀರೆ ಧರಿಸಿದ್ದರು. ಇಬ್ಬರು ಹೂವಿನ ಹಾರಗಳನ್ನು ಹಾಕಿಕೊಂಡಿದ್ದರು. ಆಗಸ್ಟ್ 8ರಂದು ಅವರ ನಿಶ್ಚಿತಾರ್ಥದ ಪೋಸ್ಟ್ ಬಹಿರಂಗಪಡಿಸಿದ್ದಾರೆ.

ಭಾರತದ ಹೊಸ ಟಿ 20 ಐ ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಕ್ರಿಕೆಟಿಗರು ಜಿತೇಶ್ ಶರ್ಮಾ ಮತ್ತು ಶಲಾಕಾ ಮಾಕೇಶ್ವರ್ ಅವರ ನಿಶ್ಚಿತಾರ್ಥಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಸಹೋದರ ಮತ್ತು ಅತ್ತಿಗೆ ಇಬ್ಬರಿಗೂ ಅಭಿನಂದನೆಗಳು ಎಂದು ಸೂರ್ಯಕುಮಾರ್ ಬರೆದಿದ್ದಾರೆ.

ಇದನ್ನೂ ಓದಿ: Paris Olympics 2024 : ನಾಳೆ ಪ್ಯಾರಿಸ್​ ಒಲಿಂಪಿಕ್ಸ್​ ಸಮಾರೋಪ; ಎಲ್ಲಿ ಕಾರ್ಯಕ್ರಮ? ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಎಲ್ಲ ವಿವರ

“ಕ್ಲಬ್​​ಗೆ ಅಭಿನಂದನೆ ಮತ್ತು ಸ್ವಾಗತ” ಎಂದು ಋತುರಾಜ್ ಗಾಯಕ್ವಾಡ್ ಪ್ರತಿಕ್ರಿಯಿಸಿದ್ದಾರೆ. “ನಿಮ್ಮಿಬ್ಬರಿಗೂ ಅಭಿನಂದನೆಗಳು” ಎಂದು ಶಿವಂ ದುಬೆ ಬರೆದಿದ್ದಾರೆ. ವಾಷಿಂಗ್ಟನ್ ಸುಂದರ್, ಮೊಹ್ಸಿನ್ ಖಾನ್ ಮತ್ತು ಪಂಜಾಬ್ ಕಿಂಗ್ಸ್​​​ ಮಾಜಿ ಕೋಚ್ ವಾಸಿಮ್ ಜಾಫರ್ ಸೇರಿದಂತೆ ಭಾರತೀಯ ಕ್ರಿಕೆಟಿಗರು ಜಿತೇಶ್ ಶರ್ಮಾ ಅವರ ನಿಶ್ಚಿತಾರ್ಥಕ್ಕೆ ಶುಭಾಶಯ ಸಲ್ಲಿಸಿದ್ದಾರೆ.

ಟಿ20 ವಿಶ್ವಕಪ್ 2024: ಭಾರತ ತಂಡದಲ್ಲಿ ಜಿತೇಶ್ ಶರ್ಮಾ ಸ್ಥಾನ

ಜಿತೇಶ್ ಶರ್ಮಾ ಭಾರತ ಪರ 9 ಟಿ20 ಪಂದ್ಯಗಳನ್ನಾಡಿದ್ದಾರೆ. ಬಲಗೈ ಬ್ಯಾಟ್ಸ್ಮನ್ 147.05 ಸ್ಟ್ರೈಕ್ ರೇಟ್​​ನಲ್ಲಿ 100 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಐ ಸರಣಿಯಲ್ಲಿ ಅವರು ಎರಡು ಪಂದ್ಯಗಳನ್ನು ಆಡಿದ್ದರು ಆದರೆ ಪ್ರಭಾವ ಬೀರಲು ಹೆಣಗಾಡಿದರು. ಐಪಿಎಲ್ 2024 ರಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ ಕಳಪೆ ಪ್ರದರ್ಶನ ನೀಡಿದ್ದರು.

ಐಪಿಎಲ್ 2024 ರ ಋತುವಿನಲ್ಲಿ 30 ವರ್ಷದ ಬ್ಯಾಟ್ಸ್ಮನ್ 14 ಪಂದ್ಯಗಳಲ್ಲಿ 131.69 ಸ್ಟ್ರೈಕ್ ರೇಟ್ನಲ್ಲಿ 187 ರನ್ ಗಳಿಸಿದ್ದಾರೆ. ಅವರ ಪ್ರದರ್ಶನವು 2024 ರ ಟಿ 20 ವಿಶ್ವಕಪ್ಗೆ ಆಯ್ಕೆದಾರರ ಗಮನವನ್ನು ಸೆಳೆಯಲಿಲ್ಲ, ಅಲ್ಲಿ ಟೀಮ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿತು. ಜಿತೇಶ್ ಈಗ ಮುಂದಿನ ಐಪಿಎಲ್ ಋತುವಿನಲ್ಲಿ ಪ್ರಭಾವ ಬೀರುವ ಮತ್ತು ರಾಷ್ಟ್ರೀಯ ತಂಡಕ್ಕೆ ಮರಳುವ ಗುರಿ ಹೊಂದಿದ್ದಾರೆ.

ಮುಂಬರುವ ದೇಶೀಯ ಕ್ರಿಕೆಟ್ನಲ್ಲಿ ಜಿತೇಶ್ ಶರ್ಮಾ ವಿದರ್ಭ ಪರ ಆಡುವ ನಿರೀಕ್ಷೆಯಿದೆ. ವಿಶ್ವಕಪ್ ತಂಡದಿಂದ ಹೊರಗುಳಿದ ನಂತರ ಅವರು ತಮ್ಮನ್ನು ಸಾಬೀತುಪಡಿಸಲು ಬಯಸುತ್ತಾರೆ. ಐಪಿಎಲ್ ಋತುವಿನ ಮಂದಗತಿಯ ನಂತರ ಪಂಜಾಬ್ ಕಿಂಗ್ಸ್ ಅವರನ್ನು ಉಳಿಸಿಕೊಳ್ಳುತ್ತದೆಯೇ ಎಂಬುದು ಅನಿಶ್ಚಿತವಾಗಿದೆ.

Continue Reading

ಪ್ರಮುಖ ಸುದ್ದಿ

Smriti Mandhana : ವಿರಾಟ್​ ಕೊಹ್ಲಿ ಜತೆ ನನ್ನನ್ನು ಹೋಲಿಕೆ ಮಾಡಬೇಡಿ; ಸ್ಮೃತಿ ಮಂದಾನ ಮನವಿ

Smriti Mandhana : ಮಂದಾನ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕ್ರಮವಾಗಿ ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ. ಅವರಿಬ್ಬರ ಅದೇ ಜರ್ಸಿ ಸಂಖ್ಯೆ 18 . ಅನೇಕ ಅಭಿಮಾನಿಗಳು ಮತ್ತು ತಜ್ಞರು ಸ್ಮೃತಿಯನ್ನು ಕೊಹ್ಲಿಗೆ ಹೋಲಿಕೆ ಮಾಡುತ್ತಲೇ ಇದ್ದಾರೆ. ಅವರಿಬ್ಬರೂ ಒಂದೇ ರೀತಿಯ ವರ್ತನೆ ಮತ್ತು ಶೈಲಿಯನ್ನೂ ಹೊಂದಿದ್ದಾರೆ. ಆಟದ ಬಗ್ಗೆ ಭಾವೋದ್ರಿಕ್ತರಾಗುತ್ತಾರೆ.

VISTARANEWS.COM


on

Smriti Mandhana
Koo

ನವದೆಹಲಿ: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಜತೆ ತನ್ನನ್ನು ಹೋಲಿಕೆ ಮಾಡಬಾರದಾಗಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ (Smriti Mandhana) ಮನವಿ ಮಾಡಿದ್ದಾರೆ. ತಾವು ಧರಿಸುವ ನಂ.18 ಜರ್ಸಿಯ ಆಧಾರದ ಮೇಲೆ ಜನರು ಅವಳನ್ನು ಅವನೊಂದಿಗೆ ಹೋಲಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂದಾನ ಅವರನ್ನು ಭಾರತೀಯ ಕ್ರಿಕೆಟ್​ನ ರಾಣಿ ಎಂದು ಕರೆಯಲಾಗುತ್ತದೆ. ಏಕೆಂದರೆ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರು.

ವಿರಾಟ್ ಕೊಹ್ಲಿ ಅವರು ಕ್ರಿಕೆಟ್​ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾಗಿರುವುದರಿಂದ ಅವರಿಗೆ ಯಾವುದೇ ಹೋಲಿಕೆ ಇಲ್ಲ. ಸಚಿನ್ ತೆಂಡೂಲ್ಕರ್ ಮತ್ತು ವಿವಿಯನ್ ರಿಚರ್ಡ್ಸ್ ಅವರಂತೆಯೇ ಅವರು ಪ್ರತ್ಯೇಕ ಕ್ರಿಕೆಟ್ ಅಧ್ಯಾಯ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ.

ಮಂದಾನ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕ್ರಮವಾಗಿ ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ. ಅವರಿಬ್ಬರ ಅದೇ ಜರ್ಸಿ ಸಂಖ್ಯೆ 18 . ಅನೇಕ ಅಭಿಮಾನಿಗಳು ಮತ್ತು ತಜ್ಞರು ಸ್ಮೃತಿಯನ್ನು ಕೊಹ್ಲಿಗೆ ಹೋಲಿಕೆ ಮಾಡುತ್ತಲೇ ಇದ್ದಾರೆ. ಅವರಿಬ್ಬರೂ ಒಂದೇ ರೀತಿಯ ವರ್ತನೆ ಮತ್ತು ಶೈಲಿಯನ್ನೂ ಹೊಂದಿದ್ದಾರೆ. ಆಟದ ಬಗ್ಗೆ ಭಾವೋದ್ರಿಕ್ತರಾಗುತ್ತಾರೆ.

ಸ್ಮೃತಿ ಮಂದಾನ ಅವರು ಹೋಲಿಕೆಗಳನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಯನ್ನು ಶ್ರೇಷ್ಠ ಆಟಗಾರ ಎಂದು ಕರೆದ ಅವರು, ಅವರು ಸಾಕಷ್ಟು ಸಾಧನೆ ಮಾಡಿರುವುದರಿಂದ ಜನರು ನನ್ನನ್ನು ಕೊಹ್ಲಿ ಎಂದು ಕರೆಯುವುದು ಆಧಾರರಹಿತ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ. ಅವರು ತಮ್ಮ ವೃತ್ತಿಜೀವನದಲ್ಲಿ ಭಾರತೀಯ ಕ್ರಿಕೆಟ್​ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ. ನಾನು ಹೋಲಿಕೆಗಳನ್ನು ಇಷ್ಟಪಡುವುದಿಲ್ಲ, ನಾನು ನಂ.18 ಜರ್ಸಿ ಧರಿಸಿದ್ದೇನೆ ಎಂಬ ಕಾರಣಕ್ಕೆ ಅವನನ್ನು ನನ್ನೊಂದಿಗೆ ಹೋಲಿಸಬೇಡಿ ಎಂದು ಮಂದಾನ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.

2024ರ ಟಿ20 ವಿಶ್ವಕಪ್​ಲ್ಲಿ ಕಣಕ್ಕಿಳಿಯಲಿದ್ದಾರೆ ಸ್ಮೃತಿ

ಕಳೆದ ಕೆಲವು ತಿಂಗಳುಗಳಿಂದ ಸ್ಮೃತಿ ಮಂದಾನ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬ್ಯಾಟರ್​ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡಕ್ಕಾಗಿ ನಿರಂತರ ರನ್​ಗಳನ್ನು ಗಳಿಸುತ್ತಿದ್ದಾರೆ. ವೈಟ್-ಬಾಲ್ ಮತ್ತು ರೆಡ್-ಬಾಲ್ ಕ್ರಿಕೆಟ್​​ನಲ್ಲಿ ತಂಡದ ಪ್ರಾಬಲ್ಯಕ್ಕೆ ಅವರೂ ಕಾರಣ.

ಸ್ಮೃತಿ ಮಂದಾನ 2024ರ ಟಿ20 ವಿಶ್ವಕಪ್​​ನಲ್ಲಿ ಆಡಲಿದ್ದಾರೆ. ಬ್ಯಾಟ್ಸ್ಮನ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್​ ಫಾರ್ಮ್ ಮುಂದುವರಿಸಲು ಉತ್ಸುಕರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಮಾಡುತ್ತಿರುವ ಪ್ರದರ್ಶನವನ್ನು ಮುಂದುವರಿಸಿದರೆ, ಭಾರತವು ಪ್ರಶಸ್ತಿ ಗೆಲ್ಲಬಹುದು.

ಇದನ್ನೂ ಓದಿ: Saina Nehwal : ನನ್ನ ಸ್ಮ್ಯಾಶ್​ ತಡೆಯಲು ಬುಮ್ರಾಗೆ ಸಾಧ್ಯವಿಲ್ಲ; ಕ್ರಿಕೆಟ್​ಗೆ ಹೆಚ್ಚು ಆದ್ಯತೆ ಬಗ್ಗೆ ತಕರಾರು ಎತ್ತಿದ ಸೈನಾ ನೆಹ್ವಾಲ್​

ಅಕ್ಟೋಬರ್ 3 ರಿಂದ 20 ರವರೆಗೆ ಏಷ್ಯನ್ ಕೌಂಟಿಯಲ್ಲಿ ಪಂದ್ಯಾವಳಿ ನಡೆಯಲಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯು 18 ದಿನಗಳ ಕಾಲ ನಡೆಯಲಿದ್ದು, 10 ತಂಡಗಳು ಬಾಂಗ್ಲಾದೇಶದ ಎರಡು ಸ್ಥಳಗಳಲ್ಲಿ 23 ಪಂದ್ಯಗಳನ್ನು ಆಡಲಿವೆ.

Continue Reading
Advertisement
Police Firing
ಕ್ರೈಂ13 mins ago

Police Firing: ಪೊಲೀಸರ ಮೇಲೆ ದಾಳಿ ನಡೆಸಿದ ರೌಡಿ ಕಾಲಿಗೆ ಗುಂಡೇಟು

Bangladesh Unrest
ವಿದೇಶ13 mins ago

Bangladesh Unrest: ಹಿಂದೂಗಳ ಮೇಲಿನ ದಾಳಿ ಖಂಡಿಸಿ ಬಾಂಗ್ಲಾದೇಶದಲ್ಲಿ ಭಾರೀ ಪ್ರತಿಭಟನೆ; ಅಮೆರಿಕ, ಯುಕೆಯಲ್ಲೂ ಧರಣಿ

Tharun Sudhir wedding live video is here
ಸ್ಯಾಂಡಲ್ ವುಡ್34 mins ago

Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮದ ಲೈವ್‌ ವಿಡಿಯೊ ಇಲ್ಲಿದೆ ನೋಡಿ!

Shiva Rajkumar Bhairathi Ranagal Title Song Geetha SRK
ಸ್ಯಾಂಡಲ್ ವುಡ್51 mins ago

Shiva Rajkumar: ʻಭೈರತಿ ರಣಗಲ್ʼ ಟೈಟಲ್ ಸಾಂಗ್ ಔಟ್‌; ಸೆಪ್ಟೆಂಬರ್‌ನಲ್ಲಿ ತೆರೆಗೆ!

Women’s T20 World Cup
ಕ್ರೀಡೆ58 mins ago

Women’s T20 World Cup: ವಿಶ್ವಕಪ್​ ನಡೆಸಲು ಸೇನೆಯ ನೆರವು ಕೇಳಿದ ಬಾಂಗ್ಲಾ ಕ್ರಿಕೆಟ್​ ಮಂಡಳಿ

Jr NTR luxury watch at Hyderabad event
South Cinema1 hour ago

Jr NTR: ಸಿನಿಮಾ ಮುಹೂರ್ತದಲ್ಲಿ ಜ್ಯೂ. ಎನ್​ಟಿಆರ್ ಧರಿಸಿದ ವಾಚ್ ಬೆಲೆ ಕೇಳಿದರೆ ನೀವು ಬೆರಗಾಗೋದು ಖಚಿತ​!

Police Firing
ಕ್ರೈಂ1 hour ago

Police Firing: ಸಕ್ಕರೆನಾಡು ಮಂಡ್ಯದಲ್ಲಿ ಬೆಳ್ಳಂಬೆಳಿಗ್ಗೆಯೇ ಗುಂಡಿನ ಸದ್ದು; ಕೊಲೆ ಆರೋಪಿ ಕಾಲಿಗೆ ಫೈರಿಂಗ್‌

Kejriwal Bungalow Case
ದೇಶ1 hour ago

Kejriwal Bungalow Case: ಕೇಜ್ರಿವಾಲ್‌ ಬಂಗಲೆ ನವೀಕರಣ ಅಕ್ರಮ; ಮೂವರು ಇಂಜಿನಿಯರ್‌ಗಳು ಸಸ್ಪೆಂಡ್‌

ಕ್ರೀಡೆ1 hour ago

Paris Olympics: ಒಂದೇ ವಾರಕ್ಕೆ ಬಣ್ಣ ಕಳೆದುಕೊಂಡ ​ಒಲಿಂಪಿಕ್ಸ್​ ಪದಕ!

Cyber Crime
ಕ್ರೈಂ2 hours ago

Cyber Crime: ಆನ್‌ಲೈನ್‌ ಹೂಡಿಕೆ ಹೆಸರಲ್ಲಿ ವಂಚನೆ; 1.53 ಕೋಟಿ ರೂ. ಕಳೆದುಕೊಂಡ ಟೆಕ್ಕಿ ದಂಪತಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ7 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌