Aadhaar-PAN: ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆಗೆ ಇನ್ಮುಂದೆ ಆಧಾರ್​-ಪ್ಯಾನ್​ ಕಡ್ಡಾಯ; ಏನಿದೆ ಹೊಸ ನಿಯಮದಲ್ಲಿ? - Vistara News

ಪ್ರಮುಖ ಸುದ್ದಿ

Aadhaar-PAN: ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆಗೆ ಇನ್ಮುಂದೆ ಆಧಾರ್​-ಪ್ಯಾನ್​ ಕಡ್ಡಾಯ; ಏನಿದೆ ಹೊಸ ನಿಯಮದಲ್ಲಿ?

ಈ ಹಿಂದೆಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್​ ನಂಬರ್​ ಬೇಕಿತ್ತಾದರೂ ಕಡ್ಡಾಯವಾಗಿರಲಿಲ್ಲ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಆಧಾರ್​ -ಪ್ಯಾನ್ ಕಡ್ಡಾಯವೆಂದು ಕೇಂದ್ರ ಸರ್ಕಾರ ಮಾ.31ರಂದು ಅಧಿಸೂಚನೆ ಹೊರಡಿಸಿದೆ.

VISTARANEWS.COM


on

Aadhaar and PAN
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್​ (ಪಬ್ಲಿಕ್ ಪ್ರಾವಿಡೆಂಟ್ ಫಂಡ್ -ಸಾರ್ವಜನಿಕ ಭವಿಷ್ಯ ನಿಧಿ​), ಸುಕನ್ಯಾ ಸಮೃದ್ಧಿ ಯೋಜನೆ (SSY), ಅಂಚೆ ಕಚೇರಿ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮತ್ತು ಇನ್ನಿತರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇನ್ನು ಮುಂದೆ ಆಧಾರ್​ ಮತ್ತು ಪ್ಯಾನ್​ ನಂಬರ್​​ಗಳು (Aadhaar-PAN) ಕಡ್ಡಾಯ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾರ್ಚ್​ 31ರಂದು ಅಧಿಸೂಚನೆ ಹೊರಡಿಸಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಯ ಕೆವೈಸಿ ನಿಯಮಗಳಲ್ಲಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದರ ಒಂದು ಭಾಗವಾಗಿ ಈ ಕ್ರಮ ಜಾರಿಗೊಳಿಸಲಾಗಿದೆ.

ಈ ಹಿಂದೆಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್​ ನಂಬರ್​ ಬೇಕಿತ್ತಾದರೂ ಕಡ್ಡಾಯವಾಗಿರಲಿಲ್ಲ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಕೇಂದ್ರ ಹಣಕಾಸು ಸಚಿವಾಲಯದ ಹೊಸ ಅಧಿಸೂಚನೆ ಅನ್ವಯ, ಸರ್ಕಾರಿ ಬೆಂಬಲಿತವಾದ ಎಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಕು ಎಂದರೆ, ಅವರು ತಮ್ಮ ಆಧಾರ್ ನಂಬರ್ ಕೊಡಲೇಬೇಕಾಗುತ್ತದೆ. ಅದರಲ್ಲೂ ಈ ಯೋಜನೆಗಳಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಮಿತಿಗಿಂತಲೂ ಹೆಚ್ಚಿನ ಹಣ ಹೂಡಿಕೆ ಮಾಡಲು ಇಚ್ಛಿಸುವವರು ಪ್ಯಾನ್​ ಕಾರ್ಡ್​ ನಂಬರ್​ನ್ನೂ ಕೂಡ ಕಡ್ಡಾಯವಾಗಿ ನೀಡಬೇಕಾಗುತ್ತದೆ.

ಏನಿದು ಹೊಸ ನಿಯಮ?

1. ಪಿಪಿಎಫ್​, ಸುಕನ್ಯಾ ಸಮೃದ್ಧಿ ಯೋಜನೆ, ಅಂಚೆ ಕಚೇರಿ ಉಳಿತಾಯ ಸೇರಿ ಇಂಥ ಯಾವುದಾದರೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಈಗಾಗಲೇ ಹಣ ಹೂಡಿಕೆ ಮಾಡಿರುವವರು, ನೀವು ಸಣ್ಣ ಉಳಿತಾಯ ಯೋಜನೆಯಲ್ಲಿ ಖಾತೆ ತೆರೆಯುವಾಗ ಆಧಾರ್ ಕಾರ್ಡ್ ನಂಬರ್​ ಕೊಟ್ಟಿದ್ದೀರಾ? ಇಲ್ಲವಾ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಹಾಗೊಮ್ಮೆ ನೀವು ಹೂಡಿಕೆ ಮಾಡುವಾಗ ಆಧಾರ್ ನಂಬರ್ ಕೊಟ್ಟಿಲ್ಲದೆ ಇದ್ದಲ್ಲಿ, 2023ರ ಸೆಪ್ಟೆಂಬರ್​ 30ರೊಳಗೆ ನೀವು ಆಧಾರ್ ನಂಬರ್​ ನೀಡಬೇಕು. ಅಂದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದ್ದೀರೋ, ಅಲ್ಲಿಗೆ ಆಧಾರ್​ ಒದಗಿಸಬೇಕು. ಅದಿಲ್ಲದೆ ಇದ್ದರೆ ನಿಮ್ಮ ಹೂಡಿಕೆಯ ಖಾತೆಯನ್ನು ಅಕ್ಟೋಬರ್​ 1 ರಿಂದ ಸ್ಥಗಿತಗೊಳಿಸಲಾಗುತ್ತದೆ. ನೀವು ಆಧಾರ್ ನಂಬರ್ ಕೊಡುವವರೆಗೂ ಅದು ಮತ್ತೆ ಚಾಲ್ತಿ ರೂಪಕ್ಕೆ ಬರುವುದಿಲ್ಲ.

2. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗೆ ಪ್ಯಾನ್​ ಮತ್ತು ಆಧಾರ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಇಂದಿನಿಂದಲೇ ಅಂದರೆ ಏಪ್ರಿಲ್ 1ರಿಂದ ಪ್ರಾರಂಭವಾಗುತ್ತದೆ. ಇಂದಿನ ನಂತರ ಯಾರಾದರೂ, ಯಾವುದೇ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಅಕೌಂಟ್​ ತೆರೆಯುತ್ತೀರಿ ಎಂದಾದರೆ ಕಡ್ಡಾಯವಾಗಿ ಆಧಾರ್ ನಂಬರ್ ಕೊಡಲೇಬೇಕು. ಹಾಗೊಮ್ಮೆ, ಈಗ ನನ್ನ ಬಳಿ ಆಧಾರ್​ ನಂಬರ್ ಇಲ್ಲ. ಅದನ್ನು ಕೊಡದೆ ಅಕೌಂಟ್​ ತೆರೆಯುತ್ತೇನೆ ಎಂದರೆ ನಿಮಗೆ ಆ ಅವಕಾಶವೂ ಇದೆ. ಆದರೆ ನೀವು ಆರು ತಿಂಗಳ ಒಳೆಗೆ ಆಧಾರ್​ ನಂಬರ್ ಕೊಡಲೇಬೇಕು. ಯಾವ ದಿನಾಂಕದಂದು ನೀವು ಹೂಡಿಕೆ ಖಾತೆ ತೆರೆಯುತ್ತೀರೋ, ಆ ದಿನದಿಂದ ಪ್ರಾರಂಭವಾಗಿ 6 ತಿಂಗಳ ಒಳಗೆ ಆಧಾರ್​ ನಂಬರ್​ ಕೊಡದೆ ಇದ್ದರೆ, ಖಾತೆ ತಡೆ ಹಿಡಿಯಲ್ಪಡುತ್ತದೆ.

ಪ್ಯಾನ್​ ಕಾರ್ಡ್​ ನಿಯಮವೇನು?
ಇನ್ನುಮುಂದೆ ಯಾವುದೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಹೂಡಿಕೆ ಮಾಡುವುದಿದ್ದರೆ ಪ್ಯಾನ್​ ಕಾರ್ಡ್ ನಂಬರ್​ ಕೂಡ ಕಡ್ಡಾಯವಾಗಲಿದೆ.

ಅದರಲ್ಲಿ ಈಗಾಗಲೇ ಯಾವುದಾದರೂ ಒಂದು ಹೂಡಿಕೆ ಖಾತೆಯನ್ನು ನೀವು ಹೊಂದಿದ್ದು, 1) ಆ ಖಾತೆಯಲ್ಲಿ 50 ಸಾವಿರ ರೂ. ಹೆಚ್ಚು ಹಣ ಇದ್ದರೆ 2) ಯಾವುದೇ ಹಣಕಾಸು ವರ್ಷದಲ್ಲಿ ನಿಮ್ಮ ಹೂಡಿಕೆ ಅಕೌಂಟ್​​ಗೆ 1 ಲಕ್ಷ ರೂ.ಗೂ ಹೆಚ್ಚು ಹಣ ಕ್ರೆಡಿಟ್ ಆಗಿದ್ದರೆ ಮತ್ತು 3) ನಿಮ್ಮ ಹೂಡಿಕೆ ಖಾತೆಯಿಂದ ಒಂದು ತಿಂಗಳಲ್ಲಿ 10 ಸಾವಿರ ರೂ.ಗೂ ಹೆಚ್ಚಿನ ಹಣ ವಹಿವಾಟು ಆಗುತ್ತಿದ್ದರೆ (ಹಣ ಹಿಂಪಡೆಯುವಿಕೆ ಮತ್ತು ವರ್ಗಾವಣೆ)- ಅಂಥವರು ಇನ್ನು 2 ತಿಂಗಳಲ್ಲಿ ನಿಮ್ಮ ಖಾತೆ ಇರುವಲ್ಲಿ ಪ್ಯಾನ್ ಕಾರ್ಡ್ ನಂಬರ್ ಒದಗಿಸಬೇಕು. ಹಾಗೊಮ್ಮೆ ಪ್ಯಾನ್ ನಂಬರ್ ಕೊಡದೆ ಇದ್ದಲ್ಲಿ, ಖಾತೆ ಸ್ಥಗಿತಗೊಳ್ಳುತ್ತದೆ. ಪುನಃ ನಂಬರ್ ನೀಡಿದ ಬಳಿಕವಷ್ಟೇ ಖಾತೆ ಚಾಲ್ತಿಗೆ ಬರುತ್ತದೆ.

    ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
    ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
    Continue Reading
    Click to comment

    Leave a Reply

    Your email address will not be published. Required fields are marked *

    ಪ್ರಮುಖ ಸುದ್ದಿ

    Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

    Glenn Maxwell : ಮ್ಯಾಕ್ಸ್​ವೆಲ್​ ಗೋಲ್ಡನ್ ಡಕ್‌ ಆಗುವ ಮೂಲಕ ಮತ್ತೊಂದು ಬಾರಿ ಬೇಜವಾಬ್ದಾರಿ ಆಟವಾಡಿದರು. ಈ ವಿರುದ್ಧದ ವೈಫಲ್ಯವು ಐಪಿಎಲ್​ 2024ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮರೆಯಲಾಗದ ಅಭಿಯಾನನವಾಗಿದೆ. ಈ ಋತುವಿನ 10 ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ 28 ರ ಗರಿಷ್ಠ ಸ್ಕೋರ್‌ನೊಂದಿಗೆ ಕೇವಲ 52 ರನ್ ಗಳಿಸಿದ್ದಾರೆ. ಅವರು ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

    VISTARANEWS.COM


    on

    Glenn Maxwell
    Koo

    ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ (ಮೇ 22) ನಡೆದ ಐಪಿಎಲ್​ 2024 (IPL 2024) ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಸೋಲುಕಂಡಿತು. ಇದರೊಂದಿಗೆ ಆರ್​ಸಿಬಿಯ ಅಭಿಯಾನ ಕೊನೆಗೊಂಡಿತು. ಸೋಲಿನ ನಡುವೆಯೂ ಹೆಚ್ಚು ಚರ್ಚೆಗೆ ಒಳಗಾಗಿದ್ದು ಐಪಿಎಲ್ 2024 ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರ ಕೆಟ್ಟ ಅಭಿಯಾನ.

    ಆರ್​​ಸಿಬಿ ತನ್ನ ಹಿಂದಿನ ಲೀಗ್​ ಹಂತದ ಆರು ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ ನಂತರ ಎಲಿಮಿನೇಟರ್​ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಮತ್ತೊಂದೆಡೆ, ರಾಜಸ್ಥಾನ್​ ತನ್ನ ಹಿಂದಿನ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿತ್ತು. ಮೇ ತಿಂಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಹೀಗಾಗಿ ಆರ್​​ಸಿಬಿ ಫೇವರಿಟ್​ ಆಗಿತ್ತು. ಆದಾಗ್ಯೂ, ಸಂಜು ಸ್ಯಾಮ್ಸನ್ ನೇತೃತ್ವದ ಆರ್‌ಸಿಬಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಎರಡನೇ ಕ್ವಾಲಿಫೈಯರ್‌ನಲ್ಲಿ ತಮ್ಮ ಸ್ಥಾನ ಕಾಯ್ದಿರಿಸಿತು.

    ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 172 ರನ್ ಗಳಿಸಿತು. ಆರ್​ಸಿಬಿ ಬ್ಯಾಟರ್‌ಗಳು ಉತ್ತಮ ಆರಂಭ ಪಡೆದರೂ ಅವರಲ್ಲಿ ಯಾರೂ ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲಿಲ್ಲ. ರಜತ್ ಪಾಟಿದಾರ್ 34 ರನ್ ಗಳಿಸಿದ್ದೇ ಗರಿಷ್ಠ. ಉತ್ತರವಾಗಿ, ಆರ್​ಆರ್​ 19 ಓವರ್‌ಗಳಲ್ಲಿ ಮೊತ್ತವನ್ನು ಬೆನ್ನಟ್ಟಿ ಎರಡನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನೊಂದಿಗಿನ ಹಣಾಹಣಿಯನ್ನು ನಿಕ್ಕಿ ಮಾಡಿಕೊಂಡಿತು.

    ಆರ್​ಸಿಬಿ ತಂಡ ತಮ್ಮ ಅಭಿಯಾನವನ್ನು ಪರಿವರ್ತಿಸಿದ ರೀತಿ ಮತ್ತು ಎಲ್ಲಾ ಅಡೆತಡೆಗಳನ್ನು ಮೀರಿ ಪ್ಲೇಆಫ್‌ಗೆ ಅರ್ಹತೆ ಗಳಿಸಿದ್ದಕ್ಕಾಗಿ ಹಲವಾರು ಕಡೆಗಳಿಂದ ಪ್ರಶಂಸೆ ಪಡೆಯುತ್ತಿದ್ದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಎಲ್ಲೆಡೆಯಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಅವರಿಗೆ ಕೊಟ್ಟಿರುವ ಕೋಟ್ಯಂತರ ರೂಪಾಯಿ ವಾಪಸ್​ ಪಡೆಯಿರಿ ಎಂಬುದಾಗಿ ಒತ್ತಾಯ ಕೇಳಿ ಬಂದಿದೆ.

    ಎಲಿಮಿನೇಟರ್‌ನಲ್ಲಿ ಆರ್​ಆರ್​ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯನ್ ಆಟಗಾರನಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶ ಇತ್ತು. ಆದರೆ ಅವರು ಗೋಲ್ಡನ್ ಡಕ್‌ ಆಗುವ ಮೂಲಕ ಮತ್ತೊಂದು ಬಾರಿ ಬೇಜವಾಬ್ದಾರಿ ಆಟವಾಡಿದರು. ಈ ವಿರುದ್ಧದ ವೈಫಲ್ಯವು ಐಪಿಎಲ್​ 2024ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮರೆಯಲಾಗದ ಅಭಿಯಾನನವಾಗಿದೆ. ಈ ಋತುವಿನ 10 ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ 28 ರ ಗರಿಷ್ಠ ಸ್ಕೋರ್‌ನೊಂದಿಗೆ ಕೇವಲ 52 ರನ್ ಗಳಿಸಿದ್ದಾರೆ. ಅವರು ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

    ಮನೋಜ್ ತಿವಾರಿ ವಾಗ್ದಾಳಿ

    ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಆರ್ ವಿರುದ್ಧ ಭಾರತದ ಮಾಜಿ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಋತುವಿನಲ್ಲಿ ಮ್ಯಾಕ್ಸ್‌ವೆಲ್ ಅವರ ಪ್ರದರ್ಶನವನ್ನು ತಿವಾರಿ ತೀವ್ರವಾಗಿ ಟೀಕಿಸಿದ್ದಲ್ಲದೆ, ಫ್ರಾಂಚೈಸಿಗೆ ಅವರ ಬದ್ಧತೆ ಏನೆಂದು ಪ್ರಶ್ನಿಸಿದ್ದಾರೆ.

    ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಆರ್‌ಸಿಬಿಗೆ ಅದೇ ಪ್ರದರ್ಶನವನ್ನು ಪುನರಾವರ್ತಿಸುವುದಿಲ್ಲ ಯಾಕೆ ಎಂದು ತಿವಾರಿ ಪ್ರಶ್ನಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಮಗೆ ತುಂಬಾ ಅನುಭವವಿದೆ. ನೀವು ಆಸ್ಟ್ರೇಲಿಯಾ ಪರ ಆಡಿದಾಗ ನೀವು ತುಂಬಾ ಉತ್ತಮ ಪ್ರದರ್ಶನ ನೀಡುತ್ತೀರಿ. ಆದರೆ ನೀವು ಐಪಿಎಲ್‌ಗೆ ಬಂದ ತಕ್ಷಣ ಏನಾಗುತ್ತೋ ಗೊತ್ತಿಲ್ಲ. ಅವರಿಗೆ ಆಸಕ್ತಿಯಿರುವುದಿಲ್ಲ ಎಂದು ತಿವಾರಿ ಹೇಳಿದ್ದಾರೆ.

    ಮ್ಯಾಕ್ಸ್​​ವೆಲ್ ಆಡದಿದ್ದರೂ ಪರ್ವಾಗಿಲ್ಲ. ಅವರ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿದೆ. ಚೆಕ್ ಅವರಿಗೆ ತಲುಪುತ್ತದೆ. ಅವರು ರಾತ್ರಿಯಲ್ಲಿ ಗೆಟ್-ಟುಗೆದರ್ ಮಾಡುತ್ತಾರೆ. ನಗುತ್ತಾರೆ ಮತ್ತು ಫೋಟೋಗಳನ್ನು ಕ್ಲಿಕ್ ಮಾಡಿಸಿಕೊಳ್ಳುತ್ತಾರೆ ಎಂದು ತಿವಾರಿ ಕ್ರಿಕ್‌ಬಜ್‌ಗೆ ಮಾತನಾಡುತ್ತಾ ಆರೋಪಿಸಿದ್ದಾರೆ.

    ಇದನ್ನೂ ಓದಿ: IPL 2024: ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ಈ ಫ್ರಾಂಚೈಸಿ ಪರ ಆಡಿದರೆ ಉತ್ತಮ ಎಂದ ಆರ್​ಸಿಬಿ ಮಾಜಿ ನಾಯಕ

    ಆರ್‌ಸಿಬಿ ಆರಂಭದಲ್ಲಿ ಉತ್ತಮವಾಗಿ ಪ್ರದರ್ಶನ ನೀಡದೇ ಹೋದಾಗ ನಾವು ಇಲ್ಲಿ ಕುಳಿತು ವಿಶ್ಲೇಷಿಸುತ್ತಿದ್ದೆವು. ಆದರೆ, ಕೊನೆಯಲ್ಲಿ, ಅವರು ಆರು ಗೆಲುವ ಕಂಡರು. ಅದಕ್ಕಾಗಿ ಅವರು ಸಂತೋಷಪಡಬಹುದು. ಆದರೂ ಅಂತಿಮ ಫಲಿತಾಂಶವು ಟ್ರೋಫಿಯಾಗಿರುತ್ತದೆ. ಹೀಗಾಗಿ ತಂಡದಲ್ಲಿ ಸಮಸ್ಯೆ ಇದೆ, ”ಎಂದು ತಿವಾರಿ ಹೇಳಿದ್ದಾರೆ.

    ಮ್ಯಾಕ್ಸ್‌ವೆಲ್ ಮುಂಬರುವ ಟಿ20 ವಿಶ್ವಕಪ್ 2024ರಲ್ಲಿ ಆಸ್ಟ್ರೇಲಿಯಾ ತಂಡದ ಪರವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ಕಾದು ನೋಡಬೇಕು.

    Continue Reading

    ಸಿನಿಮಾ

    ‘ಸ್ಟಾರ್‌’ ಸಿನಿಮಾಗಳಿಲ್ಲದ ಕಾರಣ ಚಿತ್ರಮಂದಿರಗಳ ಬಂದ್‌ಗೆ ಚಿಂತನೆ;‌ ನಿರ್ಮಾಪಕರಿಂದ ಭಾರಿ ಆಕ್ರೋಶ!

    ಐಪಿಎಲ್‌ ಅಬ್ಬರ, ಲೋಕಸಭೆ ಚುನಾವಣೆ ಭರಾಟೆ ಸೇರಿ ಹಲವು ಕಾರಣಗಳಿಂದ ಆಂಧ್ರಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿತ್ತು. ಇದೇ ರೀತಿ ಕರ್ನಾಟಕದಲ್ಲೂ ತಾತ್ಕಾಲಿಕವಾಗಿ ಸಿಂಗ್‌ ಸ್ಕ್ರೀನ್‌ ಥಿಯೇಟರ್‌ಗಳನ್ನು ಬಂದ್ ಮಾಡಬೇಕು ಎಂಬ ಚಿಂತನೆ ನಡೆದಿತ್ತು. ಆದರೆ, ಇದಕ್ಕೆ ಸ್ಯಾಂಡಲ್‌ವುಡ್‌ ನಿರ್ಮಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ.

    VISTARANEWS.COM


    on

    Theatre
    Koo

    ಬೆಂಗಳೂರು: ಐಪಿಎಲ್‌ (IPL), ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಒಂದು ತಿಂಗಳು ಚಿತ್ರಮಂದಿರಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿತ್ತು. ಇದರಂತೆ, ಐಪಿಎಲ್‌, ಚುನಾವಣೆ ಜತೆಗೆ ಸ್ಟಾರ್‌ ನಟರ ಸಿನಿಮಾಗಳ ಬಿಡುಗಡೆ ಇಲ್ಲದ ಕಾರಣ ಕರ್ನಾಟಕದಲ್ಲೂ (Karnataka) ಒಂದು ತಿಂಗಳು ಚಿತ್ರಮಂದಿರಗಳನ್ನು ಮುಚ್ಚಬೇಕು ಎಂಬ ಚಿಂತನೆ ನಡೆದಿದೆ. ಇದರ ಬೆನ್ನಲ್ಲೇ, ಫಿಲಂ ಚೇಂಬರ್‌ನಲ್ಲಿ (Film Chamber) ನಿರ್ಮಾಪಕರ ಸಭೆ ನಡೆದಿದ್ದು, ಥಿಯೇಟರ್‌ಗಳನ್ನು (Theatres) ಮುಚ್ಚುವ ಚಿಂತನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ಫಿಲಂ ಚೇಂಬರ್‌ ಅಧ್ಯಕ್ಷ ಎನ್‌.ಎಂ.ಸುರೇಶ್‌ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆದಿದೆ. “ಕನ್ನಡ ಚಿತ್ರರಂಗದ ಕುರಿತು ಇಷ್ಟು ದಿನಗಳಲ್ಲಿ ಈಗ ಸಭೆಯಾಗುತ್ತಿರುವುದು ಒಳ್ಳೆಯ ವಿಚಾರ. ತೆಲಂಗಾಣದ ಪರಿಸ್ಥಿತಿ ನಮ್ಮ ಗಮನಕ್ಕಿದೆ. ಆದರೆ, ಕರ್ನಾಟಕದಲ್ಲಿ ಚಿತ್ರಮಂದಿರಗಳನ್ನು ಬಂದ್‌ ಮಾಡುವುದು ಸರಿಯಲ್ಲ. ತಾತ್ಕಾಲಿಕವಾಗಿ ಸಿಂಗ್‌ ಸ್ಕ್ರೀನ್‌ ಥಿಯೇಟರ್‌ಗಳನ್ನು ಬಂದ್‌ ಮಾಡಿದರೆ ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತದೆ. ಪ್ರದರ್ಶಕರು, ವಿತರಕರು ಹಾಗೂ ನಿರ್ಮಾಪಕರು ಸದ್ಯಕ್ಕೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳಿಗೆ ರಿಲೀಸ್ ಪ್ಲಾನ್ ಮಾಡಲು ಆಗುತ್ತಿಲ್ಲ. ಸ್ಟಾರ್ ಚಿತ್ರಗಳು ಹೆಚ್ಚಾಗುವುದು ಮುಂದೆಯೂ ಅಸಾಧ್ಯ ಎಂಬಂತಿದೆ. ಥಿಯೇಟರ್‌ಗಳನ್ನು ಮುಚ್ಚಿದರೆ ಮುಂದಾಗುವ ಪರಿಣಾಮಗಳ ಬಗ್ಗೆಯೂ ಗಮನ ಇರಬೇಕು. ಹಾಗಾಗಿ, ಚಿತ್ರಮಂದಿರಗಳನ್ನು ಮುಚ್ಚಬಾರದು” ಎಂದು ನಿರ್ಮಾಪಕರು ಆಗ್ರಹಿಸಿದರು.

    ಸ್ಟಾರ್‌ ನಟರ ಜತೆ ಚರ್ಚೆಗೆ ನಿರ್ಧಾರ

    ಕರ್ನಾಟಕದಲ್ಲಿ ಸ್ಟಾರ್‌ ನಟರ ಸಿನಿಮಾಗಳ ಬಿಡುಗಡೆಯಾಗದಿರುವ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಯಿತು. ಇದರಿಂದ ಕನ್ನಡ ಚಿತ್ರರಂಗ ದಯನೀಯ ಸ್ಥಿತಿಗೆ ತಲುಪುವ ಕುರಿತು ಕೂಡ ಅಭಿಪ್ರಾಯ ವ್ಯಕ್ತವಾಯಿತು. ಸ್ಟಾರ್‌ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡುವಂತೆ ಮನವಿ ಮಾಡಲು ಕೂಡ ನಿರ್ಧರಿಸಲಾಯಿತು. ಚಿತ್ರರಂಗದ ಉಳಿವು, ಮುಂದಿನ ದಿನಗಳಲ್ಲಿ ಮಾಡಬೇಕಾದ ಬದಲಾವಣೆಗಳು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

    ಬಂದ್‌ ನಿರ್ಧಾರ ನಿಲ್ಲ ಎಂದ ಎನ್.ಎಂ.ಸುರೇಶ್‌

    ಸಭೆಯ ಬಳಿಕ ಮಾತನಾಡಿದ ಎನ್‌.ಎಂ.ಸುರೇಶ್‌, “ಕರ್ನಾಟಕದಲ್ಲಿ ಥಿಯೇಟರ್‌ಗಳನ್ನು ಮುಚ್ಚುವ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕನ್ನಡ ಚಿತ್ರರಂಗದ ಸಮಸ್ಯೆಗಳ ಕುರಿತು ಚರ್ಚಿಸಿದ್ದೇವೆ. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಟಿಕೆಟ್ ರೇಟ್ ಕಡಿಮೆ ಮಾಡುವುದು, ಯುಎಫ್ಒ, ಕ್ಯೂಬ್ ರೇಟ್ ಕಡಿಮೆ ಮಾಡುವ ಕುರಿತು ಸರ್ಕಾರಕ್ಕೆ ಕೋರಿಕೆ ಸಲ್ಲಿಸುತ್ತೇವೆ. ಕೇರಳದಲ್ಲಿ ಸರ್ಕಾರದ್ದೇ ಸ್ವಂತ ಒಟಿಟಿ ವ್ಯವಸ್ಥೆ ಇದೆ. ಇದು ಕರ್ನಾಟಕದಲ್ಲೂ ಜಾರಿಗೆ ಬರಬೇಕು. ಕಲಾವಿದರು ಕೂಡ ಸಹಕಾರ ನೀಡಬೇಕು. ಮೂರ್ನಾಲ್ಕು ದಿನದಲ್ಲಿ ಸ್ಟಾರ್‌ ನಟರ ಜತೆ ಸಭೆ ನಡೆಸಲಾಗುತ್ತದೆ” ಎಂದು ತಿಳಿಸಿದರು.

    ಫಿಲಂ ಚೇಂಬರ್ ಅಧ್ಯಕ್ಷ ಎನ್. ಎಂ. ಸುರೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟಗರು, UI ಚಿತ್ರಗಳ ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಕಬ್ಜ ಖ್ಯಾತಿಯ ಆರ್. ಚಂದ್ರು, ಜಯಣ್ಣ, ತರುಣ್ ಶಿವಪ್ಪ, ಲಹರಿ ವೇಲು, ಹೊಂಬಾಳೆ ಫಿಲಮ್ಸ್‌ ಪ್ರತಿನಿಧಿ ಚಿದಾನಂದ್ ಸೇರಿ ಹಲವು ನಿರ್ಮಾಕರು ಭಾಗವಹಿಸಿದರು. ಐಪಿಎಲ್‌ ಅಬ್ಬರ, ಲೋಕಸಭೆ ಚುನಾವಣೆ ಭರಾಟೆ ಸೇರಿ ಹಲವು ಕಾರಣಗಳಿಂದ ಆಂಧ್ರಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿತ್ತು. ಇದೇ ರೀತಿ ಕರ್ನಾಟಕದಲ್ಲೂ ತಾತ್ಕಾಲಿಕವಾಗಿ ಸಿಂಗ್‌ ಸ್ಕ್ರೀನ್‌ ಥಿಯೇಟರ್‌ಗಳನ್ನು ಬಂದ್ ಮಾಡಬೇಕು ಎಂಬ ಚಿಂತನೆ ನಡೆದಿತ್ತು.

    ಇದನ್ನೂ ಓದಿ: Blink Movie: ಹಾಫ್ ಸೆಂಚುರಿ ಬಾರಿಸಿದ ʻಬ್ಲಿಂಕ್ ʼ ಸಿನಿಮಾ; ಒಟಿಟಿಯಲ್ಲಿಯೂ ʻಬಹುಪರಾಕ್ʼ!

    Continue Reading

    ಕ್ರೈಂ

    Medical negligence: ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವು ಕೇಸ್‌; 30 ಲಕ್ಷ ರೂ. ಕಟ್ಟಿಸಿಕೊಳ್ಳದೆ ಮೃತದೇಹ ಹಸ್ತಾಂತರ

    Medical negligence: ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಲೌಡ್‌ನೈನ್‌ ಆಸ್ಪತ್ರೆಯ ವಿರುದ್ಧ ಆಕೆಯ ಪತಿ ಕೇಶವ್ ಮತ್ತು ಕುಟುಂಬಸ್ಥರು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.‌ ಕ್ಲೌಡ್‌ನೈನ್‌ ಆಸ್ಪತ್ರೆ ನಿರ್ಲಕ್ಷ್ಯದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜನನಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿದ್ದಾರೆ. ದೂರು ದಾಖಲಾದ ನಂತರ 2 ವೈದ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚನೆ ಮಾಡಲಾಗುವುದು. ಈ ಸಮಿತಿ ನೀಡುವ ವರದಿ ಆಧಾರದ ಮೇಲೆ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

    VISTARANEWS.COM


    on

    Medical negligence death case due to doctor negligence Dead body handed over without paying 30 lakh rupees
    Koo

    ಬೆಂಗಳೂರು: ಅವಳಿ ಮಕ್ಕಳಿಗೆ ಜನ್ಮ ನೀಡಿದ ಬೆನ್ನಲ್ಲೇ ವೈದ್ಯರ ನಿರ್ಲಕ್ಷ್ಯದಿಂದ (Medical negligence) ತಾಯಿ (Mother Dies) ಮೃತಪಟ್ಟಿದ್ದಾರೆನ್ನಲಾದ ಕೇಸ್‌ಗೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಣಿಪಾಲ್‌ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಬಿಲ್‌ ಪಾವತಿ ಮಾಡದೆಯೇ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಈ ಬಗ್ಗೆ ವಿಸ್ತಾರ ನ್ಯೂಸ್‌ ವರದಿಗೆ ಆಡಳಿತ ಮಂಡಳಿ ಸ್ಪಂದಿಸಿದೆ.

    ಕ್ಲೌಡ್‌ನೈನ್‌ (CloudNine) ಆಸ್ಪತ್ರೆಯ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಜನನಿ (33) ಮೃತ ಬಾಣಂತಿಯಾಗಿದ್ದಾರೆ. ಇವರನ್ನು ನಗರದ ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಅವಧಿಪೂರ್ವ ಹೆರಿಗೆಯಾದ ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಣಂತಿ ಮೃತಪಟ್ಟಿದ್ದಾರೆ. ಇದಕ್ಕೆ ಕ್ಲೌಡ್‌ನೈನ್‌ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.

    ಕ್ಲೌಡ್‌ನೈನ್‌ (CloudNine) ಆಸ್ಪತ್ರೆಯಲ್ಲಿ ಐವಿಎಫ್‌ ಮೂಲಕ ಜನನಿ ಮತ್ತು ಕೇಶವ್ ದಂಪತಿ ಮಕ್ಕಳನ್ನು ಪಡೆದಿದ್ದರು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮೇ 2ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗಾಗಿ ದಂಪತಿ ಹೆರಿಗೆ ಪ್ಯಾಕೇಜ್ ಮಾಡಿಸಿದ್ದರು. ಜನನಿಗೆ ಅವಧಿ ಪೂರ್ವ (7.5 ತಿಂಗಳಿಗೆ) ಹೆರಿಗೆ ಆಗಿತ್ತು. ನಂತರ ಆಕೆಗೆ ಜಾಂಡೀಸ್ ಇದೆ, ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರು, ಪರಿಸ್ಥಿತಿ ಗಂಭೀರವಾಗಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ಬುಧವಾರ ಬೆಳಗ್ಗೆ ಜನನಿ ಸಾವನ್ನಪ್ಪಿದ್ದರು. ಆದರೆ, ಈ ವೇಳೆ ಅವರ ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಯಲ್ಲಿ 30 ಲಕ್ಷ ರೂಪಾಯಿ ಬಿಲ್‌ ಆಗಿದೆ ಎನ್ನಲಾಗಿದೆ.

    ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 30 ಲಕ್ಷ ಬಿಲ್‌ ಆಗಿದ್ದು, ಈ ಬಿಲ್ ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಆದರೆ, ಕ್ಲೌಡ್‌ನೈನ್‌ ಆಸ್ಪತ್ರೆಯವರ ನಿರ್ಲಕ್ಷ್ಯಕ್ಕೆ ಜನನಿ ಸಾವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಲ್ ಅನ್ನು CloudNine ಆಸ್ಪತ್ರೆಯೇ ಪಾವತಿಸಬೇಕೆಂದು ಪಟ್ಟು ಹಿಡಿದಿದ್ದರು. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಜೆ.ಬಿ.ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು.

    ಮೃತ ಜನನಿ ಪತಿ ಕೇಶವ್‌ ಪ್ರತಿಕ್ರಿಯಿಸಿ, ಕಳೆದ ತಿಂಗಳು ಪರೀಕ್ಷೆಗೆ ಬಂದಾಗ ವೈದ್ಯರು ಕೆಲವು ಮಾತ್ರೆಗಳನ್ನು ಕೊಟ್ಟಿದ್ದರು. ನಂತರ ನನ್ನ ಹೆಂಡತಿಗೆ ಕಾಲು ಊತ ಸೇರಿ ಆರೋಗ್ಯದಲ್ಲಿ ಕೆಲ ಸಮಸ್ಯೆ ಕಂಡುಬಂತು. ಮೇ 2ರಂದು ತಾರಿಖು ಬೆಳಗ್ಗೆ ಚಿಕಿತ್ಸೆಗೆ ಬಂದಿದ್ದೆವು, ಅಂದು ಎರಡು ಮಗು ಡೆಲಿವರಿ ಆಯ್ತು. ಆವತ್ತು ಬೆಳಗ್ಗೆ 11 ಗಂಟೆಗೆ ಹೆಂಡತಿಯನ್ನು ಮಾತನಾಡಿಸಿದಾಗ ಚೆನ್ನಾಗಿದ್ದಳು. ಇದ್ದಕ್ಕಿದ್ದಂತೆ ಸೀರಿಯಸ್ ಆಗಿದೆ ಎಂದರು. ನಂತರ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದರು. ಈಗ ಪೇಮೆಂಟ್ ಮಾಡಿದರೆ ಮಾತ್ರ ನನ್ನ ಹೆಂಡತಿ ಮೃತದೇಹ ಸಿಗುತ್ತೆ ಎನ್ನುತ್ತಿದ್ದಾರೆ. 11 ಲಕ್ಷದ ಮೆಡಿಸಿನ್ ತಂದಿದ್ದೆ. 30 ಲಕ್ಷ ಬಿಲ್ ಆಗಿದೆ. ಇವರು ಮಾಡಿದ ತಪ್ಪಿನಿಂದ ನಮಗೆ ಸಮಸ್ಯೆ ಆಗಿದೆ ಎಂದು ಹೇಳಿದ್ದರು.

    ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ಹೆರಿಗೆಗೆ 1 ಲಕ್ಷ 30 ಸಾವಿರ ಪ್ಯಾಕೇಜ್ ಇತ್ತು. ಇಲ್ಲೂ 25 ಲಕ್ಷ ಬಿಲ್ ಆಗಿದೆ, ಮಣಿಪಾಲ್‌ ಆಸ್ಪತ್ರೆಯಲ್ಲೂ 30 ಲಕ್ಷ ಬಿಲ್ ಆಗಿದೆ. ಇವರ ಎಡವಟ್ಟಿನಿಂದ ಅಲ್ಲಿ ಹಣ ಕಟ್ಟಿ ಮೃತದೇಹ ತರಬೇಕಾದ ಪರಿಸ್ಥಿತಿ ಬಂದಿದೆ. ಈಗ ತಪ್ಪು ನೀವು ಮಾಡಿದ್ದು, ನೀವೇ ಪರಿಹಾರ ನೀಡಬೇಕು ಎಂದು ಕೇಳಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ವಿಸ್ತಾರ ನ್ಯೂಸ್‌ ವಿಸ್ತೃತವಾಗಿ ವರದಿ ಮಾಡಿತ್ತು.

    ಇದನ್ನೂ ಓದಿ | Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

    ವಿಸ್ತಾರ ನ್ಯೂಸ್ ಸುದ್ದಿಗೆ ಕಡೆಗೂ ಮಣಿಪಾಲ್‌ ಆಡಳಿತ ಮಂಡಳಿಯವರು ಮಣಿದಿದ್ದು, ಜನನಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಬಿಲ್ ಪಾವತಿ ಬದಿಗಿಟ್ಟು ಮೃತದೇಹವನ್ನು ಹಸ್ತಾಂತರ ಮಾಡಿ ಮಾನವೀಯತೆ ಮರೆದಿದ್ದಾರೆ. ಆದರೆ, ಈ ಬಾಕಿ ಹಣವನ್ನು ನಂತರದಲ್ಲಿ ಪಾವತಿ ಮಾಡಬೇಕೇ? ಯಾರು ಮಾಡಬೇಕು ಎಂಬ ಬಗ್ಗೆ ಇನ್ನೂ ವಿವರಗಳು ತಿಳಿದು ಬಂದಿಲ್ಲ.

    ಕ್ಲೌಡ್‌ನೈನ್‌ ಆಸ್ಪತ್ರೆ ವಿರುದ್ಧ ದೂರು

    ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಲೌಡ್‌ನೈನ್‌ ಆಸ್ಪತ್ರೆಯ ವಿರುದ್ಧ ಆಕೆಯ ಪತಿ ಕೇಶವ್ ಮತ್ತು ಕುಟುಂಬಸ್ಥರು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.‌ ಕ್ಲೌಡ್‌ನೈನ್‌ ಆಸ್ಪತ್ರೆ ನಿರ್ಲಕ್ಷ್ಯದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜನನಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿದ್ದಾರೆ.

    ತನಿಖೆಗೆ ತಂಡ ರಚನೆ

    ಈ ಪ್ರಕರಣ ಸಂಬಂಧ ತನಿಖೆಗೆ ಜಿಲ್ಲಾ ಆರೋಗ್ಯಾಧಿಕಾರಿ ತಂಡ ರಚನೆ ಮಾಡಿದ್ದಾರೆ. ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಜಂಟಿ ನಿರ್ದೇಶಕರು -1 ಡಾ. ಮಮತಾ, ಡಾ. ಸಿರಾಜುದ್ದಿನ್ ಮದಿನ್, ಆರ್ ಸಿ ಎಚ್ ನೇತೃತ್ವದ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ. ಸಾವಿಗೆ ನಿಖರ ಕಾರಣವೇನೆಂದು ಪತ್ತೆ ಹಚ್ಚಲು ಸೂಚನೆ ನೀಡಲಾಗಿದೆ.

    Continue Reading

    ದೇಶ

    Chemical Factory: ಕೆಮಿಕಲ್‌ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; ನಾಲ್ವರ ಸಾವು, 25 ಮಂದಿಗೆ ಗಾಯ

    Chemical Factory: ಥಾಣೆ ಜಿಲ್ಲೆಯಲ್ಲಿರುವ ಅಮುದನ್‌ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಕೆಲವೇ ನಿಮಿಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಅಗ್ನಿ ನಂದಿಸುತ್ತಿದ್ದಾರೆ. ಇನ್ನು ಎನ್‌ಡಿಆರ್‌ಎಫ್‌ ಸೇರಿ ಹಲವು ರಕ್ಷಣಾ ಸಿಬ್ಬಂದಿಯನ್ನು ಜನರ ರಕ್ಷಣೆಗೆ ನಿಯೋಜಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದುವರೆಗೆ 8 ಮಂದಿಯನ್ನು ರಕ್ಷಿಸಲಾಗಿದೆ

    VISTARANEWS.COM


    on

    Chemical Factory
    Koo

    ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ (Chemical Factory) ಭೀಕರ ಸ್ಫೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದು, ಇನ್ನೂ ರಕ್ಷಣಾ ಕಾರ್ಯಾಚರಣೆ (Rescue Operation) ಮುಂದುವರಿದಿದೆ ಎಂದು ತಿಳಿದುಬಂದಿದೆ. ದೊಂಬಿವಿಲಿ ಬಳಿಯ ಎಂಐಡಿಸಿ ಫೇಸ್‌ 2ರಲ್ಲಿರುವ ಕಾರ್ಖಾನೆಯಲ್ಲಿ ಕಾರ್ಮಿಕರು ಗುರುವಾರ (ಮೇ 23) ಮಧ್ಯಾಹ್ನ ಕೆಲಸ ಮಾಡುವಾಗಲೇ ಬಾಯ್ಲರ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದಾದ ಕ್ಷಣಮಾತ್ರದಲ್ಲೇ ಭೀಕರ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

    ಅಮುದನ್‌ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಕೆಲವೇ ನಿಮಿಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಅಗ್ನಿ ನಂದಿಸುತ್ತಿದ್ದಾರೆ. ಇನ್ನು ಎನ್‌ಡಿಆರ್‌ಎಫ್‌ ಸೇರಿ ಹಲವು ರಕ್ಷಣಾ ಸಿಬ್ಬಂದಿಯನ್ನು ಜನರ ರಕ್ಷಣೆಗೆ ನಿಯೋಜಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದುವರೆಗೆ 8 ಮಂದಿಯನ್ನು ರಕ್ಷಿಸಲಾಗಿದೆ ಎಂಬುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಕೆಲ ತಿಂಗಳ ಹಿಂದಷ್ಟೇ ತಮಿಳುನಾಡಿನ ವಿರುದ್ಧುನಗರ ಜಿಲ್ಲೆಯಲ್ಲಿರುವ ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿ 11 ಜನ ಮೃತಪಟ್ಟಿದ್ದರು. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿರುದ್ಧುನಗರ ಜಿಲ್ಲೆಯ ವೆಂಬಕೊಟ್ಟಾಯಿ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ (ಫೆಬ್ರವರಿ 17) ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರೂ ಅಷ್ಟೊತ್ತಿಗಾಗಲೇ ಹಲವು ಜನ ಮೃತಪಟ್ಟಿದ್ದರು ಎಂದು ತಿಳಿದುಬಂದಿತ್ತು.

    ಉತ್ತರ ಪ್ರದೇಶದ ಕೌಶಂಭಿ ಜಿಲ್ಲೆಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲೂ ಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟಿದ್ದರು. ದುರಂತದಲ್ಲಿ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಸ್ಫೋಟ ಸಂಭವಿಸುತ್ತಲೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಪ್ರಯತ್ನ ಮಾಡಿದರೂ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಲು ಆಗಿರಲಿಲ್ಲ. ನೂರಾರು ಮಂದಿ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗಲೇ ಸ್ಫೋಟ ಸಂಭವಿಸಿತ್ತು.

    ಇದನ್ನೂ ಓದಿ: Fireworks Blast : ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 8 ಮಂದಿಯ ದುರ್ಮರಣ

    Continue Reading
    Advertisement
    Glenn Maxwell
    ಪ್ರಮುಖ ಸುದ್ದಿ7 mins ago

    Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

    Theatre
    ಸಿನಿಮಾ9 mins ago

    ‘ಸ್ಟಾರ್‌’ ಸಿನಿಮಾಗಳಿಲ್ಲದ ಕಾರಣ ಚಿತ್ರಮಂದಿರಗಳ ಬಂದ್‌ಗೆ ಚಿಂತನೆ;‌ ನಿರ್ಮಾಪಕರಿಂದ ಭಾರಿ ಆಕ್ರೋಶ!

    Dengue Fever
    ಆರೋಗ್ಯ12 mins ago

    Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

    Star Gown Fashion
    ಫ್ಯಾಷನ್27 mins ago

    Star Gown Fashion: ಕೇಪ್‌ ಗೌನ್‌ನಲ್ಲಿ ತ್ರಿಲೋಕ ಸುಂದರಿಯಂತೆ ಕಂಡ ನಟಿ ನಮ್ರತಾ ಗೌಡ!

    Accident Case
    ಚಿಕ್ಕಮಗಳೂರು29 mins ago

    Accident Case : ಇಳಿಜಾರಿನಲ್ಲಿ ತಪ್ಪಿದ ಕಂಟ್ರೋಲ್‌; ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕ ಮೃತ್ಯು

    Jagannath Puri Temple
    ಪ್ರವಾಸ39 mins ago

    Jagannath Puri Temple: ಪುರಿ ಜಗನ್ನಾಥ ದೇವಸ್ಥಾನದ 7 ಅಚ್ಚರಿಯ ಸಂಗತಿಗಳಿವು!

    Medical negligence death case due to doctor negligence Dead body handed over without paying 30 lakh rupees
    ಕ್ರೈಂ40 mins ago

    Medical negligence: ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವು ಕೇಸ್‌; 30 ಲಕ್ಷ ರೂ. ಕಟ್ಟಿಸಿಕೊಳ್ಳದೆ ಮೃತದೇಹ ಹಸ್ತಾಂತರ

    Chardham Yatra
    ಪ್ರವಾಸ41 mins ago

    Chardham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡಲು ಬಯಸಿದ್ದೀರಾ? ನಿಮಗೆ ಬೇಕಾದ ಮಾಹಿತಿ ಇಲ್ಲಿದೆ

    Nissan Magnite GEZA CVT
    ಆಟೋಮೊಬೈಲ್46 mins ago

    Magnite GEZA CVT : ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ನಿಸ್ಸಾನ್

    Mouth Sleeping
    ಆರೋಗ್ಯ57 mins ago

    Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

    Sharmitha Gowda in bikini
    ಕಿರುತೆರೆ8 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ7 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ7 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ6 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ8 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ7 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ5 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ6 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    dina bhavishya read your daily horoscope predictions for May 23 2024
    ಭವಿಷ್ಯ13 hours ago

    Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

    Karnataka Weather Forecast
    ಮಳೆ1 day ago

    Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

    Karnataka Rain
    ಮಳೆ2 days ago

    Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

    Love Case Father throws hot water on man who loved his daughter for coming home
    ಕೊಡಗು2 days ago

    Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

    Contaminated Water
    ಮೈಸೂರು2 days ago

    Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

    Karnataka Rain
    ಮಳೆ3 days ago

    Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

    Karnataka Rain
    ಮಳೆ4 days ago

    Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

    Karnataka rain
    ಮಳೆ4 days ago

    Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

    Karnataka Rain
    ಮಳೆ4 days ago

    Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

    Prajwal Revanna Case JDS calls CD Shivakumar pen drive gang
    ರಾಜಕೀಯ6 days ago

    Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

    ಟ್ರೆಂಡಿಂಗ್‌