Ind vs sa t20 | ಮಹತ್ವದ ಪಂದ್ಯಕ್ಕೆ ಸಜ್ಜಾಯ್ತು ಸಿಲಿಕಾನ್‌ ಸಿಟಿ, ಟ್ರಾಫಿಕ್‌ ಜಾಮ್‌ ತಪ್ಪಿಸಲು ಪ್ಲಾನ್‌ ಏನು? - Vistara News

ಕ್ರಿಕೆಟ್

Ind vs sa t20 | ಮಹತ್ವದ ಪಂದ್ಯಕ್ಕೆ ಸಜ್ಜಾಯ್ತು ಸಿಲಿಕಾನ್‌ ಸಿಟಿ, ಟ್ರಾಫಿಕ್‌ ಜಾಮ್‌ ತಪ್ಪಿಸಲು ಪ್ಲಾನ್‌ ಏನು?

Ind vs SA T20 | ಜೂನ್‌ 19ರಂದು ಭಾರತ ಹಾಗೂ ದಕ್ಷಿಣ ಆಫ್ರಿಕ ನಡುವೆ ಐದನೇ ಟಿ20 ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಹಾಗಾಗಿ ಸುಗಮ ಸಂಚಾರಕ್ಕೆ ಯಾವೆಲ್ಲ ವ್ಯವಸ್ಥೆ ಮಾಡಲಾಗಿದೆ, ಎಲ್ಲೆಲ್ಲಿ ಟ್ರಾಫಿಕ್‌ ಜಾಮ್‌ ಆಗಬಹುದು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Ind vs SA T20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: Ind vs sa t20 | ಜೂನ್‌ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕ ಮತ್ತು ಭಾರತ ಕ್ರಿಕೆಟ್ ಕದನಕ್ಕೆ ಸಿಲಿಕಾನ್ ಸಿಟಿ ಸಿದ್ಧವಾಗಿದೆ. ಈಗಾಗಲೇ ಟಿಕೆಟ್‌ ಎಲ್ಲ ಸೋಲ್ಡ್‌ ಔಟ್‌ ಆಗಿದ್ದು, ಭಾರಿ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆಯಿದೆ. ಪಂದ್ಯಕ್ಕೆ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ನಗರದಲ್ಲಿ ಹಲವೆಡೆ ಟ್ರಾಫೀಕ್ ಜಾಮ್ ಉಂಟಾಗುವ ಸಾಧ್ಯತೆಯಿದ್ದು ಬದಲಿ ಸಂಚಾರ ಮಾರ್ಗಗಳನ್ನು ಸೂಚಿಸಲಾಗಿದೆ.

ವಾಹನ ಸವಾರರು ಬಳಸಬೇಕಾದ ಪರ್ಯಾಯ ಮಾರ್ಗಗಳ ವಿವರ:
ಸಾರ್ವಜನಿಕರು ಸಂಜೆ 4-00 ಗಂಟೆಯಿಂದ 7-00 ಗಂಟೆಯವರೆಗೆ ಮತ್ತು ರಾತ್ರಿ 10-00 ಗಂಟೆಯಿಂದ 12-00 ಗಂಟೆಯವರೆಗೆ ಕೆಳಕಂಡ ಮಾರ್ಗವನ್ನು ಬಳಸದೇ ಇರುವುದು ಸೂಕ್ತ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವ ರಸ್ತೆಗಳು:

  1. ಎಂ.ಜಿ.ರಸ್ತೆ,
  2. ಕ್ಲೀನ್ಸ್ ರಸ್ತೆ,
  3. ಕಬ್ಬನ್ ರಸ್ತೆ
  4. ಸೆಂಟ್ರಲ್ ಸ್ಟ್ರೀಟ್

ಪರ್ಯಾಯ ಮಾರ್ಗಗಳ ವಿವರ:

  1. ಇನ್‌ಫೆಂಟ್ರಿ ರಸ್ತೆ ಹಾಗೂ ಬಾಳೇಕುಂದ್ರಿ ವೃತ್ತದಿಂದ ಸಿ.ಟಿ.ಓ. ವೃತ್ತದ ಕಡೆಗೆ ಬರುವ ವಾಹನಗಳು ಟ್ರಾಫಿಕ್ ಹೆಡ್‌ಕ್ವಾರ್ಟರ್ ಜಂಕ್ಷನ್ ಮೂಲಕ ಇನ್‌ಫೆಂಟ್ರಿ ರಸ್ತೆಯಲ್ಲಿ ಸಂಚರಿಸಿ ಮುಂದೆ ಸಾಗಬಹುದಾಗಿದೆ.
  2. ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದ ಕಡೆಗೆ ಬರುವ ವಾಹನಗಳು ಸಿದ್ದಲಿಂಗಯ್ಯ ವೃತ್ತದಲ್ಲಿ ಬಲ ತಿರುವು ಪಡೆದು ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಮುಂದೆ ಸಾಗಬಹುದಾಗಿದೆ.
  3. ಎಂ.ಜಿ.ರಸ್ತೆಯಿಂದ ಕ್ವೀನ್ಸ್ ವೃತ್ತದ ಕಡೆಗೆ ಬರುವ ವಾಹನಗಳು ವೆಬ್ ಜಂಕ್ಷನ್ ಬಳಿ ಬಲ ತಿರುವ ಪಡೆದು ಡಿಕನ್ಸನ್ ರಸ್ತೆ ಮೂಲಕ ಮುಂದೆ ಸಾಗಬಹುದಾಗಿದೆ.
  4. ಕಬ್ಬನ್ ರಸ್ತೆ ಹಾಗೂ ಮಣಿಪಾಲ್ ಸೆಂಟರ್ ಕಡೆಯಿಂದ ಸಿ.ಟಿ.ಓ. ವೃತ್ತದ ಕಡೆಗೆ ಬರುವ ವಾಹನಗಳು ಬಿ.ಆರ್.ವಿ. ಜಂಕ್ಷನ್ ಬಳಿ ಬಲ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್, ಶಿವಾಜಿನಗರ ಬಸ್‌ ನಿಲ್ದಾಣದ ಮೂಲಕ ಮುಂದೆ ಸಾಗಬಹುದಾಗಿದೆ.

19.06.2022 ರಂದು ಮಧ್ಯಾಹ್ನ 2-00 ಗಂಟೆಯಿಂದ ರಾತ್ರಿ 12-30 ವರಗೆ ಈ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ:

  1. ಕ್ವೀನ್ಸ್‌ ರಸ್ತೆ: ಬಾಳೇಕುಂದ್ರಿ ವೃತ್ತದಿಂದ ಕ್ಲೀನ್ಸ್‌ ವೃತ್ತದವರೆಗೆ ರಸ್ತೆಯ ಎರಡೂ ಕಡೆ.
  2. ಎಂ.ಜಿ ರಸ್ತೆ: ಕ್ವೀನ್ಸ್‌ ವೃತ್ತದಿಂದ ಕಾವೇರಿ ಎಂಪೋರಿಯಂ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ.
  3. ಲಿಂಕ್ ರಸ್ತೆ: ಎಂ.ಜಿ. ರಸ್ತೆಯಿಂದ ಕಬ್ಬನ್‌ ರಸ್ತೆವರೆಗೆ.
  4. ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ.
  5. ಸೆಂಟ್ರಲ್ ಸ್ಟ್ರೀಟ್: ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ ರಸ್ತೆಯ ಎರಡೂ ಕಡೆ.
  6. ಕಬ್ಬನ್‌ ರಸ್ತೆ: ಸಿ.ಟಿ.ಓ, ವೃತ್ತದಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ.
  7. ಸೆಂಟ್ ಮಾರ್ಕ್ಸ್ ರಸ್ತೆ: ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರಗೆ.
  8. ಮ್ಯೂಸಿಯಂ ರಸ್ತೆ: ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆವರೆಗೆ.
  9. ಕಸ್ತೂರಬಾ ರಸ್ತೆ: ಕ್ವಿನ್ಸ್‌ ವೃತ್ತದಿಂದ ಹಡ್ನನ್ ವೃತ್ತದವರೆಗೆ.
  10. ಮಲ್ಯ ಆಸ್ಪತ್ರೆ ರಸ್ತೆ: ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ.
  11. ಕಬ್ಬನ್‌ಪಾರ್ಕ್ ಒಳ ಭಾಗದ ಪ್ರೆಸ್ ಕ್ಲಬ್ ಮುಂಭಾಗ ಹಾಗೂ ಬಾಲಭವನ ಫೌಂಟೇನ್ ರಸ್ತೆ.
  12. ಲ್ಯಾವೆಲ್ಲಿ ರಸ್ತೆ: ಕ್ವೀನ್ಸ್‌ ವೃತ್ತದಿಂದ ವಿಠಲ್ ಮಲ್ಯ ರಸ್ತೆಯ ಜಂಕ್ಷನ್‌ವರೆಗೆ
  13. ವಿಠಲ್ ಮಲ್ಯ ರಸ್ತೆ: ಸಿದ್ದಲಿಂಗಯ್ಯ ವೃತ್ತದಿಂದ ಬಿಷಪ್ ಕಾಟನ್ ಶಾಲೆಯವರೆಗೆ‌
  14. ಕಬ್ಬನ್ ರಸ್ತೆ: ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಬಿ.ಎಂ.ಟಿ.ಸಿ ಬಸ್‌ಗಳಿಗೆ ಮಾತ್ರ ನಿಲುಗಡೆಗೆ ಅವಕಾಶ.

ಕ್ರಿಕೆಟ್ ಪ್ರೇಕ್ಷಕರಿಗೆ ವಾಹನ ನಿಲುಗಡೆ ಸ್ಥಳಗಳ ವಿವರ

19.06.2022 ರಂದು ಮಧ್ಯಾಹ್ನ 3-00 ಗಂಟೆಯಿಂದ ರಾತ್ರಿ 12-30 ಗಂಟೆವರೆಗೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುತ್ತದೆ.

  • 1) ಪಂದ್ಯ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರ ವಾಹನಗಳನ್ನು ಮಲ್ಯ ಆಸ್ಪತ್ರೆ ರಸ್ತೆಯ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಮ್ಯೂಸಿಯಂ ರಸ್ತೆಯ ಸೆಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಆವರಣ ಮತ್ತು ಯು.ಬಿ. ಸಿಟಿ ಆವರಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
  • 2) ಶಿವಾಜಿನಗರ ಬಸ್‌ ನಿಲ್ದಾಣದ 1ನೇ ಮಹಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
  • 3) ಕೆ.ಎಸ್.ಸಿ.ಎ. ಸದಸ್ಯರ ವಾಹನಗಳನ್ನು ಬೌರಿಂಗ್ ಇನ್ಸಿಟ್ಯೂಟ್ ರಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಭಾರತ- ದಕ್ಷಿಣ ಆಫ್ರಿಕಾ T20 Match: ಜೂನ್‌ 19ರಂದು ರಾತ್ರಿ 1 ಗಂಟೆವರೆಗೂ ಓಡಾಡಲಿದೆ ನಮ್ಮ ಮೆಟ್ರೊ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Virat Kohli: ಕೊಹ್ಲಿ ಕ್ಲಾಸ್ ಪ್ಲೇಯರ್, ಫೈನಲ್​ನಲ್ಲಿ ಆಡುತ್ತಾರೆ ಎಂದು ಬೆಂಬಲ ಸೂಚಿಸಿದ ನಾಯಕ ರೋಹಿತ್​

Virat Kohli: ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ 9 ರನ್​ಗೆ ವಿಕೆಟ್​ ಕಳೆದುಕೊಂಡ ಕೊಹ್ಲಿ ಇದೇ ಬೇಸರದಲ್ಲಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಕುಳಿತು ತನ್ನ ಬ್ಯಾಟಿಂಗ್​ ಬಗ್ಗೆ ಚಿಂತಿಸಿ ಕಣ್ಣೀರು ಸುರಿಸಿದರು. ಈ ವೇಳೆ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಬಂದು ಕೊಹ್ಲಿಯನ್ನು ಸಂತೈಸಿದರು. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Virat Kohli
Koo

ಪ್ರೊವಿಡೆನ್ಸ್‌: ಈ ಬಾರಿಯ ಐಪಿಎಲ್‌ನಲ್ಲಿ ರನ್‌ ಪ್ರವಾಹ ಹರಿಸಿದ ವಿರಾಟ್‌ ಕೊಹ್ಲಿ(Virat Kohli) ಅವರು ಹಾಲಿ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿನ್ನೂ(T20 World Cup 2024) ಗುಣಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. ಸಹಜವಾಗಿಯೇ ಇದು ಅಗ್ರ ಕ್ರಮಾಂಕದ ಮೇಲೆ ಒತ್ತಡ ತರುತ್ತಿದೆ. ಇಂಗ್ಲೆಂಡ್​ ವಿರುದ್ಧದ ಸೆಮಿ ಫೈನಲ್​ ಪಂದ್ಯದಲ್ಲಿಯೂ ಕೊಹ್ಲಿ ಒಂದಂಕಿಗೆ ಸೀಮಿತರಾಗಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಆದರೆ, ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಪಂದ್ಯದ ಬಳಿಕ ವಿರಾಟ್​ ಕೊಹ್ಲಿಯ ಬ್ಯಾಟಿಂಗ್​ ವೈಫಲ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೋಹಿತ್​, ಖಂಡಿತವಾಗಿಯೂ ವಿರಾಟ್ ಓರ್ವ ಕ್ಲಾಸ್ ಪ್ಲೇಯರ್, ಅವರೊಬ್ಬ ಬಿಗ್ ಮ್ಯಾಚ್ ಪ್ಲೇಯರ್. ಪ್ರತಿಯೊಬ್ಬ ಆಟಗಾರನು ತನ್ನ ವೃತ್ತಿಜೀವನದಲ್ಲಿ ಏರಿಳಿತ ಕಾಣುವುದು ಸಹಜ. ಆದರೆ, ಕೊಹ್ಲಿ ವಿಷಯದಲ್ಲಿ ಫಾರ್ಮ್ ದೊಡ್ಡ ವಿಷಯವಲ್ಲ. ಅವರು ಫೈನಲ್‌ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ನನಗೆ ನಂಬಿಕೆ ಇದೆ ಫೈನಲ್​ನಲ್ಲಿ ಅವರು ಶ್ರೇಷ್ಠ ಬ್ಯಾಟಿಂಗ್​ ತೋರುವ ಮೂಲಕ ಎಲ್ಲ ಟೀಕೆಗಳಿಗೂ ಬ್ಯಾಟ್​ನಿಂದಲೇ ಉತ್ತರಿಸಲಿದ್ದಾರೆ ಎಂದು ಹೇಳುವ ಮೂಲಕ ಕೊಹ್ಲಿಗೆ ಬಂಬಲ ಸೂಚಿಸಿದರು.

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ 9 ರನ್​ಗೆ ವಿಕೆಟ್​ ಕಳೆದುಕೊಂಡ ಕೊಹ್ಲಿ ಇದೇ ಬೇಸರದಲ್ಲಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಕುಳಿತು ತನ್ನ ಬ್ಯಾಟಿಂಗ್​ ಬಗ್ಗೆ ಚಿಂತಿಸಿ ಕಣ್ಣೀರು ಸುರಿಸಿದರು. ಈ ವೇಳೆ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಬಂದು ಕೊಹ್ಲಿಯನ್ನು ಸಂತೈಸಿದರು. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ Rohit Sharma: ಕೊಹ್ಲಿ, ಧೋನಿ ಬಳಿಕ ನಾಯಕನಾಗಿ ವಿಶೇಷ ದಾಖಲೆ ಬರೆದ ರೋಹಿತ್​

2014, 2016, 2022ರಲ್ಲಿ ಭಾರತ ಆಡಿದ ಎಲ್ಲ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅರ್ಥಶತಕ ಬಾರಿಸಿ ಮಿಂಚಿದ್ದರು. ಆದರೆ, ಈ ಬಾರಿ ಒಂದಂಕಿಗೆ ಸೀಮಿತರಾದರು. ಜತೆಗೆ ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕೊಹ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಂತಾಯಿತು. ಇಂಗ್ಲೆಂಡ್​ ವಿರುದ್ಧ 9 ಎಸೆತಗಳಲ್ಲಿ 9 ರನ್​ ಬಾರಿಸಿ ಟಾಪ್ಲಿ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಆಡಿದ 7 ಪಂದ್ಯಗಳ ಪೈಕಿ 2 ಪಂದ್ಯದಲ್ಲಿ ಶೂನ್ಯ ಸುತ್ತಿದ್ದಾರೆ. ಒಟ್ಟಾರೆ ಅವರ ಗಳಿಕೆ 75 ರನ್​.

ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್​ ಬಾಲ್​ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್​ ಕಂಡಿರುವುದು. ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಲ್ಲ ಎಂದು ಹೇಳಲಾಗಿತ್ತು. ಇದು ಕೂಡ ಅವರ ಬ್ಯಾಟಿಂಗ್​ ಹಿನ್ನಡೆಗೆ ಕಾಣವಾಗಿರಬಹುದು.

Continue Reading

ಕ್ರೀಡೆ

D. K. Shivakumar: ಫೈನಲ್​ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿದ ಡಿಸಿಎಂ ಶಿವಕುಮಾರ್‌

D. K. Shivakumar: ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್(India vs England Semi Final 2)​ ತಂಡವನ್ನು 68 ರನ್​ಗಳಿಂದ ಮಣಿಸಿ ಫೈನಲ್​ ಪ್ರವೇಶಿಸಿದ ಭಾರತ ತಂಡಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌(D. K. Shivakumar) ಶುಭ ಹಾರೈಸಿದ್ದಾರೆ.

VISTARANEWS.COM


on

D. K. Shivakumar
Koo

ಬೆಂಗಳೂರು: ಹಾಲಿ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್(India vs England Semi Final 2)​ ತಂಡವನ್ನು 68 ರನ್​ಗಳಿಂದ ಮಣಿಸಿ ಫೈನಲ್​ ಪ್ರವೇಶಿಸಿದ ಭಾರತ ತಂಡಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌(D. K. Shivakumar) ಶುಭ ಹಾರೈಸಿದ್ದಾರೆ. ಜತೆಗೆ ಟೀಮ್​ ಇಂಡಿಯಾದ(team india) ಸಾಧನೆಯನ್ನು ಕೊಂಡಾಡಿದ್ದಾರೆ.

“ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಟೀಂ ಇಂಡಿಯಾ ಆಟಗಾರರ ಗಮನಾರ್ಹ ಪ್ರದರ್ಶನಕ್ಕೆ ಅಭಿನಂದನೆಗಳು!. ಟೂರ್ನಿಯುದ್ದಕ್ಕೂ ನೀವು ತೋರಿದ ಸಂಘಟಿತ ಪ್ರದರ್ಶನೇ ಈ ಯಶಸ್ಸಿಗೆ ಕಾರಣ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿಯೂ ಇದೇ ಸ್ಫೂರ್ತಿಯಿಂದ ಆಡುವ ಮೂಲಕ ಚಾಂಪಿಯನ್​ ಪಟ್ಟ ಅಲಂಕರಿಸುವಂತಾಗಲಿ. ಫೈನಲ್‌ ಪಂದ್ಯಕ್ಕೆ ಶುಭ ಹಾರೈಸುತ್ತೇನೆ” ಎಂದು ಭಾರತ ತಂಡ ಫೋಟೊ ಹಂಚಿಕೊಂಡು ಟ್ವೀಟ್​ ಮಾಡಿದ್ದಾರೆ.

ಗುರುವಾರ ತಡರಾತ್ರಿ ಗಯಾನದ ಪ್ರೊವಿಡೆನ್ಸ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ರೋಹಿತ್​ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 171 ರನ್​ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡು 16.4 ಓವರ್​ಗಳಲ್ಲಿ 103 ರನ್​ಗೆ ಸರ್ವಪತನ ಕಂಡಿತು.

ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಸೇಡನ್ನು ತೀರಿಸಿಕೊಂಡಿತು. ಅಂದು ಅಡಿಲೇಡ್‌ ಓವಲ್‌ನಲ್ಲಿ ನಡೆದಿದ್ದ ಸೆಮಿ ಪಂದ್ಯದಲ್ಲಿ ಇಂಗ್ಲೆಂಡ್‌ 10 ವಿಕೆಟ್‌ಗಳಿಂದ ಭರ್ಜರಿಯಾಗಿ ರೋಹಿತ್‌ ಪಡೆಯನ್ನು ಮಗುಚಿ ಫೈನಲ್​ ಪ್ರವೇಶಿಸಿತ್ತು. ಈ ಬಾರಿ ಭಾರತ ತಂಡ ಇಂಗ್ಲೆಂಡ್​ ಮಣಿಸಿ ಫೈನಲ್​ ಪ್ರವೇಶಿಸಿತು. ಅಲ್ಲಿಗೆ ಲೆಕ್ಕ ಚುಕ್ತಾ ಗೊಂಡಿತು. ಶನಿವಾರ ಬಾರ್ಬಡೋಸ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ. ಕೂಟದ ಅಜೇಯ ತಂಡಗಳ ನಡುವಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ IND vs ENG Semi Final: ಇಂಗ್ಲೆಂಡ್​ ಮಣಿಸಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

ಡಿಕೆಶಿ ಮುಖ್ಯಮಂತ್ರಿ ಮಾಡಿ ಎಂದು ಸಿಎಂಗೆ ಒತ್ತಾಯಿಸಿದ ಚಂದ್ರಶೇಖರ ಸ್ವಾಮೀಜಿ


ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಿಎಂ ಮಾಡಿ ಎಂದು ಸ್ವಾಮೀಜಿಯೊಬ್ಬರು ಸಿಎಂ ಸಿದ್ದರಾಮಯ್ಯ (CM Siddaramaiah) ಮುಂದೆ ವೇದಿಕೆಯ ಮೇಲೆಯೇ ಬೇಡಿಕೆ ಇಟ್ಟ ಪ್ರಸಂಗ ನಿನ್ನೆ(ಗುರುವಾರ) ನಡೆದ ಕೆಂಪೇಗೌಡ ಜಯಂತಿ (Kempegowda Jayanthi) ಕಾರ್ಯಕ್ರಮದಲ್ಲಿ ನಡೆದಿದೆ. ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ (Chandrashekhara swamiji) ಅವರು ಸಿದ್ದರಾಮಯ್ಯ ಅವರಿಗೆ ವೇದಿಕೆಯಲ್ಲೇ ಬಹಿರಂಗವಾಗಿ ಈ ಬೇಡಿಕೆಯನ್ನು ಇಟ್ಟಿದ್ದಾರೆ.

ಎಲ್ಲರೂ ಮುಖ್ಯಮಂತ್ರಿಗಳಾಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿಕೆ ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಡಿಕೆಶಿ ಸಿಎಂ ಆಗುವ ಕುರಿತು ಮತ್ತು ಹೊಸ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಕುರಿತು ಕಾಂಗ್ರೆಸ್‌ ನಾಯಕರೊಳಗೇ ಬಣ ರಾಜಕೀಯ ನಡೆಯುತ್ತಿದೆ. ಹಲವಾರು ಕಾಂಗ್ರೆಸ್‌ ನಾಯಕರು, ಇನ್ನಷ್ಟು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ವಾದ ಮುಂದಿಟ್ಟಿದ್ದಾರೆ. ಇದೀಗ, ಒಕ್ಕಲಿಗರೊಬ್ಬರು ಸಿಎಂ ಆಗಬೇಕು ಎಂದು ಒಕ್ಕಲಿಗ ಸ್ವಾಮೀಜಿಗಳೇ ಹೇಳುವ ಮೂಲಕ ಈ ಬಣ ರಾಜಕೀಯಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.

Continue Reading

ಕ್ರೀಡೆ

Rohit Sharma: ಕೊಹ್ಲಿ, ಧೋನಿ ಬಳಿಕ ನಾಯಕನಾಗಿ ವಿಶೇಷ ದಾಖಲೆ ಬರೆದ ರೋಹಿತ್​

Rohit Sharma: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ ಅವರು 37 ರನ್​ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 5 ಸಾವಿರ ರನ್​ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು.

VISTARANEWS.COM


on

Rohit Sharma
Koo

ಪ್ರೊವಿಡೆನ್ಸ್‌: ಇಂಗ್ಲೆಂಡ್​ ವಿರುದ್ಧ ನಡೆದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಅರ್ಥಶತಕ ಬಾರಿಸಿದ ಟೀಮ್​ ಇಂಡಿಯಾ ಕಪ್ತಾನ ರೋಹಿತ್​ ಶರ್ಮ(Rohit Sharma) ಅವರು ವಿರಾಟ್​ ಕೊಹ್ಲಿ(Virat Kohli), ಮಹೇಂದ್ರ ಸಿಂಗ್​ ಧೋನಿ(MS Dhoni) ಜತೆಗಿನ ದಾಖಲೆಯೊಂದರ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಗುರುವಾರ ತಡರಾತ್ರಿ ಪ್ರೊವಿಡೆನ್ಸ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ರೋಹಿತ್​ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 171 ರನ್​ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡು 16.4 ಓವರ್​ಗಳಲ್ಲಿ 103 ರನ್​ಗೆ ಸರ್ವಪತನ ಕಂಡಿತು.

ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ ಅವರು 37 ರನ್​ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 5 ಸಾವಿರ ರನ್​ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು. ವಿರಾಟ್​ ಕೊಹ್ಲಿ(12883) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್​(11207) ದ್ವಿತೀಯ ಸ್ಥಾನಿಯಾಗಿದ್ದಾರೆ.  

ಇದನ್ನೂ ಓದಿ Rohit Sharma: ತಂಡ ಫೈನಲ್​ ಪ್ರವೇಶಿಸಿದ ಖುಷಿಯಲ್ಲಿ ಕಣ್ಣೀರು ಹಾಕಿದ ರೋಹಿತ್​; ವಿಡಿಯೊ ವೈರಲ್​

5 ರನ್​ ಗಳಿಸಿದ್ದ ವೇಳೆ ಫಿಲ್ ಸಾಲ್ಟ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದ ರೋಹಿತ್, ಇದರ ಸಂಪೂರ್ಣ ಲಾಭವೆತ್ತಿದರು. 33 ಎಸೆತಗಳಿಂದ ಅರ್ಧಶತಕ ಬಾರಿಸಿ ಮಿಂಚಿದರು. ಇದು ರೋಹಿತ್​ ಅವರ 32ನೇ ಅಂತಾರಾಷ್ಟ್ರೀಯ ಟಿ20 ಅರ್ಧಶತಕ. ಅಂತಿಮವಾಗಿ 6 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 57 ರನ್​ ಗಳಿಸಿ ಆದೀಲ್​ ರಶೀದ್​ ಓವರ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು.

ಭಾರತ ಪರ 5 ಸಾವಿರ ರನ್​ ಗಳಿಸಿದ ನಾಯಕರು


ವಿರಾಟ್​ ಕೊಹ್ಲಿ-12,883 ರನ್​

ಮಹೇಂದ್ರ ಸಿಂಗ್​ ಧೋನಿ-11,207 ರನ್​

ಮೊಹಮ್ಮದ್​ ಅಜರುದ್ದೀನ್​-8,095 ರನ್​

ಸೌರವ್​ ಗಂಗೂಲಿ-7,643 ರನ್​

ರೋಹಿತ್​ ಶರ್ಮ-5,033* ರನ್​

ಜಯವರ್ಧನೆ ದಾಖಲೆ ಪತನ

ರೋಹಿತ್ ಈ ಪಂದ್ಯದಲ್ಲಿ​ 4 ಬೌಂಡರಿ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್​ ಕ್ರಿಕೆಟ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಹೆಸರಿನಲ್ಲಿತ್ತು. ಜಯವರ್ಧನೆ 111 ಬೌಂಡರಿ ಬಾರಿಸಿದ್ದರು. ಈ ದಾಖಲೆಯನ್ನು ರೋಹಿತ್​ ಹಿಂದಿಕ್ಕಿದ್ದಾರೆ. ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ರೋಹಿತ್​ ಅವರ ಬೌಂಡರಿಗಳ ಸಂಖ್ಯೆ 91 ಇತ್ತು. ಸದ್ಯ ರೋಹಿತ್​ ಅವರ ಬೌಂಡರಿಗಳ ಸಂಖ್ಯೆ 113*ಕ್ಕೆ ಏರಿಕೆಯಾಗಿದೆ. ಫೈನಲ್​ ಪಂದ್ಯವನ್ನು ಆಡಲಿರುವ ಕಾರಣ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು.

Continue Reading

ಕ್ರಿಕೆಟ್

Rohit Sharma: ತಂಡ ಫೈನಲ್​ ಪ್ರವೇಶಿಸಿದ ಖುಷಿಯಲ್ಲಿ ಕಣ್ಣೀರು ಹಾಕಿದ ರೋಹಿತ್​; ವಿಡಿಯೊ ವೈರಲ್​

Rohit Sharma: ಪ್ರೊವಿಡೆನ್ಸ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ರೋಹಿತ್​ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 171 ರನ್​ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡು 16.4 ಓವರ್​ಗಳಲ್ಲಿ 103 ರನ್​ಗೆ ಸರ್ವಪತನ ಕಂಡಿತು.

VISTARANEWS.COM


on

Koo

ಪ್ರೊವಿಡೆನ್ಸ್‌: ಮಳೆಯಿಂದ ಅಡಚಣೆಯಾದ ಗುರುವಾರ ತಡರಾತ್ರಿ ನಡೆದ ಟಿ20 ವಿಶ್ವಕಪ್​ನ ದ್ವಿತೀಯ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್​ ತಂಡವನ್ನು 68 ರನ್​ಗಳಿಂದ ಬಗ್ಗುಬಡಿದು ಫೈನಲ್​ ಪ್ರವೇಶಿಸಿತು. ತಂಡ ಫೈನಲ್​ ಪ್ರವೇಶಿಸುತ್ತಿದ್ದಂತೆ ನಾಯಕ ರೋಹಿತ್​ ಶರ್ಮ(Rohit Sharma) ಅವರು ಈ ಸಂತಸದಲ್ಲಿ ಆನಂದಭಾಷ್ಪ ಸುರಿಸಿದರು. ಈ ವಿಡಿಯೊ ವೈರಲ್​ ಆಗಿದೆ.

2007ರಿಂದ ಎಲ್ಲ ಟಿ20 ವಿಶ್ವಕಪ್ ಆಡಿರುವ ರೋಹಿತ್​ ಶರ್ಮ ತಮ್ಮ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ತಂಡ ಫೈನಲ್​ ಪ್ರವೇಶಿಸಿತು. ಜತೆಗೆ 10 ವರ್ಷಗಳ ಬಳಿಕ ಭಾರತ ತಂಡ ಈ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿತು. ಈ ಎಲ್ಲ ಖುಷಿಯಿಂದ ರೋಹಿತ್​ ಕಣ್ಣೀರು ಸುರಿಸಿದರು. ರೋಹಿತ್​ ಕಣ್ಣೀರು ಹಾಕುತ್ತಿದ್ದ ವೇಳೆ ಸಹ ಆಟಗಾರ ವಿರಾಟ್​ ಬೆನ್ನು ತಟ್ಟಿ ಬೆಂಬಲ ಸೂಚಿಸಿದ್ದು ಕೂಡ ಈ ವಿಡಿಯೊದಲ್ಲಿ ನೋಡಬಹುದಾಗಿದೆ. ರೋಹಿತ್​ ಅವರಿಗೆ ಈ ಬಾರಿಯ ಟಿ20 ವಿಶ್ವಕಪ್​ ಬಹುತೇಕ ವಿದಾಯದ ಟೂರ್ನಿಯಾಗಿದೆ. ಅಂತಿಮ ಹಂತದ ಅವಕಾಶದಲ್ಲಿ ಕಪ್​ ಗೆಲ್ಲಲಿದ್ದಾರಾ ಎಂದು ಕಾದು ನೋಡಬೇಕಿದೆ. ಶನಿವಾರ ಬಾರ್ಬಡೋಸ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ. ಕೂಟದ ಅಜೇಯ ತಂಡಗಳ ನಡುವಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

ದಾಖಲೆ ಬರೆದ ರೋಹಿತ್​


ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ(111 ಬೌಂಡರಿ) ಹೆಸರಿನಲ್ಲಿತ್ತು. 37 ರನ್​ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 5 ಸಾವಿರ ರನ್​ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು. ವಿರಾಟ್​ ಕೊಹ್ಲಿ(12883) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್​(11207) ದ್ವಿತೀಯ ಸ್ಥಾನಿಯಾಗಿದ್ದಾರೆ.  

ಸೇಡು ತೀರಿಸಿಕೊಂಡ ಭಾರತ


ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಸೇಡನ್ನು ತೀರಿಸಿಕೊಂಡಿತು. ಅಂದು ಅಡಿಲೇಡ್‌ ಓವಲ್‌ನಲ್ಲಿ ನಡೆದಿದ್ದ ಸೆಮಿ ಪಂದ್ಯದಲ್ಲಿ ಇಂಗ್ಲೆಂಡ್‌ 10 ವಿಕೆಟ್‌ಗಳಿಂದ ಭರ್ಜರಿಯಾಗಿ ರೋಹಿತ್‌ ಪಡೆಯನ್ನು ಮಗುಚಿ ಫೈನಲ್​ ಪ್ರವೇಶಿಸಿತ್ತು. ಈ ಬಾರಿ ಭಾರತ ತಂಡ ಇಂಗ್ಲೆಂಡ್​ ಮಣಿಸಿ ಫೈನಲ್​ ಪ್ರವೇಶಿಸಿತು. ಅಲ್ಲಿಗೆ ಲೆಕ್ಕ ಚುಕ್ತಾ ಗೊಂಡಿತು.

ಇಲ್ಲಿನ ಪ್ರೊವಿಡೆನ್ಸ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ರೋಹಿತ್​ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 171 ರನ್​ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡು 16.4 ಓವರ್​ಗಳಲ್ಲಿ 103 ರನ್​ಗೆ ಸರ್ವಪತನ ಕಂಡಿತು.

Continue Reading
Advertisement
Actor Darshan fans starts sticker trend mobile cover 6106
ಸ್ಯಾಂಡಲ್ ವುಡ್25 mins ago

Actor Darshan: ‘ಕೈದಿ ನಂ. 6106…ನಮ್ದೇ ದರ್ಬಾರುʼ ಅಂದ್ರು ಫ್ಯಾನ್ಸ್‌; ಮೊಬೈಲ್ ಕವರ್, ಆಟೋ, ಬೈಕ್‌ಗಳಲ್ಲಿ ಸ್ಟಿಕ್ಟರ್ ಟ್ರೆಂಡ್!

Valmiki Corporation Scam
ಕ್ರೈಂ28 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಸಿಬಿಐನಿಂದ ಬಂಧನ ಆತಂಕದಲ್ಲಿ ಮಾಜಿ ಸಚಿವ ನಾಗೇಂದ್ರ

Virat Kohli
ಕ್ರಿಕೆಟ್35 mins ago

Virat Kohli: ಕೊಹ್ಲಿ ಕ್ಲಾಸ್ ಪ್ಲೇಯರ್, ಫೈನಲ್​ನಲ್ಲಿ ಆಡುತ್ತಾರೆ ಎಂದು ಬೆಂಬಲ ಸೂಚಿಸಿದ ನಾಯಕ ರೋಹಿತ್​

karnataka Rain
ಮಳೆ36 mins ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Viral Video
Latest37 mins ago

Viral Video: ನಡುರಸ್ತೆಯಲ್ಲಿ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ!

Viral Video
Latest40 mins ago

Viral Video: ನೋಡುಗರ ಕಣ್ಮನ ಸೆಳೆಯುತ್ತಿದೆ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ

Actor Darshan support by singer dr shamitha malnad
ಸ್ಯಾಂಡಲ್ ವುಡ್1 hour ago

Actor Darshan: ಆರಡಿ ದೇಹವ ಮೂರಡಿ ಬಗ್ಗಿಸಿ ನಮ್ಮೊಂದಿಗೆ ವಿನಯದಿ ಮಾತನಾಡಿದ ದರ್ಶನ್‌ ಅಣ್ಣ ಎಂದ ಖ್ಯಾತ ಗಾಯಕಿ!

airtel price hike
ಪ್ರಮುಖ ಸುದ್ದಿ1 hour ago

Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 21% ದರ ಏರಿಕೆ

murder Case in Kalaburagi
ಕಲಬುರಗಿ1 hour ago

Murder case : ಗಾಣಗಾಪುರ ದತ್ತನ ದರ್ಶನಕ್ಕೆ ಆಗಮಿಸಿದ ಭಕ್ತನ ಬರ್ಬರ ಹತ್ಯೆ

Actor Darshan special appeal to the fans
ಸ್ಯಾಂಡಲ್ ವುಡ್1 hour ago

Actor Darshan: ಪರಪ್ಪನ ಅಗ್ರಹಾರದಿಂದಲೇ ಅಭಿಮಾನಿಗಳ ಬಳಿ ದರ್ಶನ್‌ ವಿಶೇಷ ಮನವಿ; ಏನದು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ36 mins ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ17 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ19 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು20 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ24 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಟ್ರೆಂಡಿಂಗ್‌