IPL 2023: ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಕೆಕೆಆರ್​; ರಿಂಕು ಸಿಂಗ್​ ಪಂದ್ಯದ ಪ್ರಧಾನ ಆಕರ್ಷಣೆ - Vistara News

ಕ್ರಿಕೆಟ್

IPL 2023: ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಕೆಕೆಆರ್​; ರಿಂಕು ಸಿಂಗ್​ ಪಂದ್ಯದ ಪ್ರಧಾನ ಆಕರ್ಷಣೆ

ಇಂದು ನಡೆಯುವ ಐಪಿಎಲ್​ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ಮತ್ತು ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

VISTARANEWS.COM


on

IPL 2023: KKR eyeing hat-trick win; Rinku Singh is the main attraction of the match
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕೊತ್ತಾ: ಗೆಲುವುವಿನ ಹಳಿ ಏರಿದ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಿಂಕು ಸಿಂಗ್‌ ಅವರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದಿಂದ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿರುವ ಕೋಲ್ಕತಾ ನೈಟ್‌ರೈಡರ್ಸ್‌ ತಂಡವು ಇಂದು( ಶುಕ್ರವಾರ) ನಡೆಯುವ ಐಪಿಎಲ್‌ನ 19ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಉಭಯ ತಂಡಗಳ ಈ ಹೋರಾಟ ಈಡನ್​ ಗಾರ್ಡನ್​​ ಮೈದಾನದಲ್ಲಿ ನಡೆಯಲಿದೆ.

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಸತತ 5 ಸಿಕ್ಸರ್​ ಬಾರಿಸಿಸುವ ಮೂಲಕ ಕೆಕೆಆರ್​ಗೆ ಸ್ಮರಣೀಯ ಗೆಲುವು ತಂದುಕೊಟ್ಟ ರಿಂಕು ಸಿಂಗ್​ ಅವರು ಈ ಪಂದ್ಯದ ಪ್ರಮುಖ ಹೈಲೆಟ್​ ಆಗಿದ್ದಾರೆ. ಮತ್ತೊಮ್ಮೆ ಅವರ ಬ್ಯಾಟಿಂಗ್​ ವೈಭವವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಜತೆಗೆ ಹಿಟ್ಟರ್‌ ಆ್ಯಂಡ್ರೆ ರಸೆಲ್‌ ಮತ್ತು ನಾಯಕ ನಿತೀಶ್‌ ರಾಣಾ, ವೆಂಕಟೇಶ್​ ಅಯ್ಯರ್​ ಅವರು ಸಿಡಿದು ನಿಂತರೆ ತಂಡ ಇನ್ನಷ್ಟು ಅಪಾಯಕಾರಿ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಹೈದರಾಬಾದ್​ ಬೌಲಿಂಗ್​ ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಈ ತಂಡದ ಪ್ರಮುಖ ಬಲ ಎಂದರೆ ಅದು ಬೌಲಿಂಗ್​. ವಾಷಿಂಗ್ಟನ್‌ ಸುಂದರ್‌, ಮಾಯಾಂಕ್‌ ಮಾರ್ಕೆಂಡೆ, ಭುವನೇಶ್ವರ್‌ ಕುಮಾರ್‌, ಉಮ್ರಾನ್​ ಮಲಿಕ್​, ಟಿ. ನಟರಾಜನ್ ಮತ್ತು ಮಾರ್ಕೊ ಜಾನ್ಸೆನ್‌ ಅತ್ಯಂತ ಅಪಾಯಕಾರಿಯಾಗಿದ್ದಾರೆ. ಅದರಲ್ಲೂ ಮಾಯಾಂಕ್‌ ಮಾರ್ಕೆಂಡೆ ಕಳೆದ ಪಂದ್ಯದಲ್ಲಿ 15 ರನ್ನಿಗೆ 4 ವಿಕೆಟ್‌ ಕಿತ್ತು ಮಿಂಚಿದ್ದರು. ಸದ್ಯ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ. ಆದ್ದರಿಂದ ಕೆಕೆಆರ್​ ಎಚ್ಚರದಿಂದ ಆಡಬೇಕಿದೆ.

ಇದನ್ನೂ ಓದಿ IPL 2023: ಪಂಜಾಬ್​ಗೆ ಸೋಲು; ಐಪಿಎಲ್​​ ಅಂಕಪಟ್ಟಿ ಹೇಗಿದೆ?

ಕೆಕೆಆರ್​ ಬ್ಯಾಟಿಂಗ್​ಗೆ ಹೋಲಿಸಿದರೆ ಹೈದರಾಬಾದ್​ನಲ್ಲಿ ಅಷ್ಟಾಗಿ ಬಲಿಷ್ಠವಾಗಿ ಕಾಣಿಸುತ್ತಿಲ್ಲ. ಹ್ಯಾರಿ ಬ್ರೂಕ್‌, ಮಾಯಾಂಕ್‌ ಅಗರ್ವಾಲ್‌, ತ್ರಿಪಾಠಿ ಮತ್ತು ಮಾರ್ಕ್ರಮ್​ ಹೊರತುಪಡಿಸಿದರೆ ಮತ್ಯಾರು ದೊಡ್ಡ ಇನಿಂಗ್ಸ್​ ಕಟ್ಟುವ ಆಟಗಾರರು ಈ ತಂಡದಲ್ಲಿ ಕಾಣಿಸುತ್ತಿಲ್ಲ.

ಪಿಚ್ ರಿಪೋರ್ಟ್

ಕೋಲ್ಕೊತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದ ಪಿಚ್​ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆಗಳಿವೆ. ಇನ್ನು ಇಲ್ಲಿ ಇಬ್ಬನಿ ಸಮಸ್ಯೆಯೂ ಕಾಡಲಿದೆ. ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ಸಂಭಾವ್ಯ ತಂಡಗಳು

ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಮ್​ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್

ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್​ ಅಯ್ಯರ್​, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್​, ಶಾರ್ದೂಲ್ ಠಾಕೂರ್, ಸುಯಶ್ ಶರ್ಮಾ, ಲಾಕಿ ಫ‌ರ್ಗ್ಯುಸನ್‌, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 Points Table: ಟೂರ್ನಿಯಿಂದ ಹೊರಬಿದ್ದ ಗುಜರಾತ್​ ಟೈಟಾನ್ಸ್​

IPL 2024 Points Table: ಇಂದು ನಡೆಯುವ ಪಂದ್ಯದಲ್ಲಿ ಡೆಲ್ಲಿ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಡೆಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದುಗೊಂಡು ತಲಾ 1 ಅಂಕ ಲಭಿಸಿದರೂ ಡೆಲ್ಲಿಗೆ ಪ್ಲೇ ಆಫ್​ ಅವಕಾಶ ಸಿಗುವುದಿಲ್ಲ.

VISTARANEWS.COM


on

IPL 2024 Points Table
Koo

ಅಹಮದಾಬಾದ್​: ಕೆಕೆಆರ್​ ವಿರುದ್ಧದ ಸೋಮವಾರದ ಐಪಿಎಲ್(IPL 2024)​ ಪಂದ್ಯ ರದ್ದು ಗೊಂಡ ಕಾರಣ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ಟೈಟಾನ್ಸ್​ ತಂಡ ಈ ಬಾರಿಯ ಟೂರ್ನಿಯಿಂದ ಅಧಿಕೃತವಾಗಿ(IPL 2024 Points Table) ಹೊರಬಿದ್ದಿದೆ. ಸತತವಾಗಿ 2 ಬಾರಿ ಫೈನಲ್​ ಪ್ರವೇಶಿಸಿ ಒಂದು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಗುಜರಾತ್​ಈ ಬಾರಿ ಲೀಗ್​ನಿಂದಲೇ ಹೊರಬಿದ್ದಿದೆ. ಸದ್ಯ ಗುಜರಾತ್​ ಸೇರಿ ಒಟ್ಟು ಮೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಉಳಿದ 2 ತಂಡಗಳೆಂದರೆ ಪಂಜಾಬ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​.

ಇಂದು ನಡೆಯುವ ಪಂದ್ಯದಲ್ಲಿ ಡೆಲ್ಲಿ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಡೆಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದುಗೊಂಡು ತಲಾ 1 ಅಂಕ ಲಭಿಸಿದರೂ ಡೆಲ್ಲಿಗೆ ಪ್ಲೇ ಆಫ್​ ಅವಕಾಶ ಸಿಗುವುದಿಲ್ಲ.

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​139319 (+1.428)
ರಾಜಸ್ಥಾನ್​ ರಾಯಲ್ಸ್​​​128416 (+0.349)
ಚೆನ್ನೈ​​137614 (+0.528)
ಹೈದರಾಬಾದ್​127514 (+0.406)
ಆರ್​ಸಿಬಿ136712 (+0.387)
ಡೆಲ್ಲಿ136712 (-0.482)
ಲಕ್ನೋ126612 (-0.769)
ಗುಜರಾತ್​135711 (-1.063)
ಮುಂಬೈ13498 (-0.271)
ಪಂಜಾಬ್​​12488 (-0.423)

ಪಂದ್ಯವು ಟಾಸ್​ ಸೇರಿದಂತೆ ಒಂದೇ ಒಂದು ಎಸೆತ ಕಾಣದೇ ರದ್ದಾಯಿತು. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.

ಇದನ್ನೂ ಓದಿ IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

ಗುಜರಾತ್​ಗೆ ನಿರಾಶಾದಾಯಕ ಅಭಿಯಾನ

ಗುಜರಾತ್​ ಟೈಟಾನ್ಸ್ ಪ್ಲೇಆಫ್​ನಲ್ಲಿ ಸ್ಥಾನ ಪಡೆಯುವ ರೇಸ್​​ನಿಂದ ಹೊರಗುಳಿದಿದೆ. ಹಾರ್ದಿಕ್ ಪಾಂಡ್ಯ ನಿರ್ಗಮನ ಮತ್ತು ಮೊಹಮ್ಮದ್ ಶಮಿ ಗಾಯಗೊಂಡ ನಂತರ ಜಿಟಿಗೆ ಉತ್ತಮ ಅನುಕೂಲಗಳು ಸಿಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶ ಆ ತಂಡಕ್ಕೆ ಇತ್ತು. ಆದರೆ, ಮಳೆ ಅವರ ಭರವಸೆಗಳನ್ನು ಭಗ್ನಗೊಳಿಸಿತು.

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

IPL 2024: ಜೋಸ್ ಬಟ್ಲರ್ ಈಗಾಗಲೇ ರಾಜಸ್ಥಾನ್​​ ತಂಡ ತೊರೆದಿದ್ದಾರೆ. ಈ ಬೆಳವಣಿಗೆಯ 2008 ರ ಚಾಂಪಿಯನ್ಸ್​ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ಬಟ್ಲರ್ 39.88ರ ಸರಾಸರಿಯಲ್ಲಿ 359 ರನ್ ಗಳಿಸಿದ್ದಾರೆ. ಅವರ ಒಂದು ಶತಕವು ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ದಾಖಲಿಸಲು ರಾಯಲ್ಸ್​ಗೆ ಸಹಾಯ ಮಾಡಿದೆ.

VISTARANEWS.COM


on

IPL 2024
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ಕೆ (IPL 2024) ಇಂಗ್ಲೆಂಡ್ ಕ್ರಿಕೆಟಿಗರು ವಿದಾಯ ಹೇಳಲು ಪ್ರಾರಂಭಿಸಿದ್ದಾರೆ. ಮೇ 22ರಿಂದ ಆರಂಭವಾಗಲಿರುವ 4 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್​ ತಂಡ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಈ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ತಯಾರಿ ನಡೆಸಲು ಇಂಗ್ಲಿಷ್ ಕ್ರಿಕೆಟಿಗರು ಐಪಿಎಲ್ ಅನ್ನು ಬೇಗನೆ ತೊರೆಯುತ್ತಾರೆ ಎಂದು ಈ ಹಿಂದೆ ತಿಳಿದುಬಂದಿತ್ತು. ಇದೀಗ ಅವರೆಲ್ಲರೂ ಹೊರಟಿದ್ದಾರೆ.

ಜೋಸ್ ಬಟ್ಲರ್ ಈಗಾಗಲೇ ರಾಜಸ್ಥಾನ್​​ ತಂಡ ತೊರೆದಿದ್ದಾರೆ. ಈ ಬೆಳವಣಿಗೆಯ 2008 ರ ಚಾಂಪಿಯನ್ಸ್​ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ಬಟ್ಲರ್ 39.88ರ ಸರಾಸರಿಯಲ್ಲಿ 359 ರನ್ ಗಳಿಸಿದ್ದಾರೆ. ಅವರ ಒಂದು ಶತಕವು ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ದಾಖಲಿಸಲು ರಾಯಲ್ಸ್​ಗೆ ಸಹಾಯ ಮಾಡಿದೆ.

ರಾಯಲ್ಸ್ ‘ಎಕ್ಸ್’ ನಲ್ಲಿ ಒಂದು ಪೋಸ್ಟ್ ಮಾಡಿದ್ದು, ಅದರಲ್ಲಿ ಬಟ್ಲರ್ ತಂಡವನ್ನು ತೊರೆಯುತ್ತಿರುವುದು ಕಂಡುಬಂದಿದೆ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ, ಜೋಸ್ ಭಾಯ್!” ಎಂದು ಬರೆಯಲಾಗಿದೆ. ಬಟ್ಲರ್ ಅನುಪಸ್ಥಿತಿಯಲ್ಲಿ, ರಾಜಸ್ಥಾನ್ ತಂಡವು ​ 190 ಟಿ 20 ಪಂದ್ಯಗಳಲ್ಲಿ 1 ಶತಕ ಮತ್ತು 34 ಅರ್ಧಶತಕಗಳೊಂದಿಗೆ 4734 ರನ್ ಗಳಿಸಿರುವ ಟಾಮ್ ಕೊಹ್ಲರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ.

ರಾಯಲ್ಸ್ ಇನ್ನೂ ಪ್ಲೇಆಫ್​ನಲ್ಲಿ ತನ್ನ ಸ್ಥಾನ ಕಾಯ್ದಿರಿಸಿಲ್ಲ. ಸಂಜು ಸ್ಯಾಮ್ಸನ್ ಪಡೆ ಆಡಿರುವ ಮೊದಲ 9 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋತಿದೆ.

ಆರ್​ಸಿಬಿ ತೊರೆದ ಜಾಕ್ಸ್, ಟಾಪ್ಲೆ


ಆಟಗಾರರು ಬಿಟ್ಟು ಹೋಗುತ್ತಿರುವ ಮತ್ತೊಂದು ತಂಡ ಆರ್​ಸಿಬಿ. ಇಲ್ಲಿನ ಇಬ್ಬರು ಇಂಗ್ಲಿಷ್ ತಾರೆಯರು ಹೊರಗುಳಿದಿದ್ದಾರೆ. 12 ಅಂಕಗಳು ಮತ್ತು +0.387 ನೆಟ್ ರನ್ ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಚಾಲೆಂಜರ್ಸ್ ಪ್ಲೇ ಆಫ್​ಗೆ ಪ್ರವೇಶಿಸಲು ಬಹಳ ದೂರವಿಲ್ಲ.

ಇದನ್ನೂ ಓದಿ: IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಋತುರಾಜ್ ಗಾಯಕ್ವಾಡ್ ಅವರ ಸಿಎಸ್​ಕೆ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ವಿಲ್ ಜಾಕ್ಸ್ ಮತ್ತು ರೀಸ್ ಟಾಪ್ಲೆ ಅವರ ಸೇವೆ ಲಭ್ಯವಿರುವುದಿಲ್ಲ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್​ಸಿಬಿ ಸತತ 5 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಸೆ ಜೀವಂತವಾಗಿರಿಸಿದೆ.

ಲಿಯಾಮ್ ಲಿವಿಂಗ್​ಸ್ಟನ್​ ಕೂಡ ನಿರ್ಗಮಿಸಿದ್ದಾರೆ. ಆದರೂ ಪಿಬಿಕೆಎಸ್ ಈಗಾಗಲೇ ಸ್ಪರ್ಧೆಯಿಂದ ಹೊರಗುಳಿದಿರುವುದರಿಂದ ಇದು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ.

Continue Reading

ಪ್ರಮುಖ ಸುದ್ದಿ

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

IPL 2024: ಪಂದ್ಯವು ಟಾಸ್​ ಸೇರಿದಂತೆ ಒಂದೇ ಒಂದು ಎಸೆತ ಕಾಣದೇ ರದ್ದಾಯಿತು. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.

VISTARANEWS.COM


on

IPL 2024
Koo

ಅಹಮದಾಬಾದ್​​: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಗುಜರಾತ್​ ಜೈಂಟ್ಸ್​ ಮತ್ತು ಕೋಲ್ಕೊತಾ ನೈಟ್​ ರೈಡರ್ಸ್​ ನಡುವಿನ ಪಂದ್ಯ ರದ್ದಾಗಿದೆ. ಇದು ಹಾಲಿ ಆವೃತ್ತಿಯಲ್ಲಿ ಮಳೆಯಿಂದ ರದ್ದಾಗಿರುವ ಮೊದಲ ಪಂದ್ಯವಾಗಿದೆ. ಹೀಗಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಯಿತು. ಈ ಫಲಿತಾಂಶದಿಂದಾಗಿ ಜಿಟಿ ತಂಡದ ಪ್ಲೇಆಫ್​ ಅವಕಾಶ ಅಂತ್ಯವಾಯಿತು. ಇದೇ ವೇಳೆ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಅಗ್ರ 2 ರಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಪಂದ್ಯವು ಟಾಸ್​ ಸೇರಿದಂತೆ ಒಂದೇ ಒಂದು ಎಸೆತ ಕಾಣದೇ ರದ್ದಾಯಿತು. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.

ಎಂಐ ಮತ್ತು ಪಿಬಿಕೆಎಸ್ ನಂತರ ಟೈಟಾನ್ಸ್ ಸ್ಪರ್ಧೆಯಿಂದ ಹೊರಗುಳಿದ ಮೂರನೇ ತಂಡವಾಗಿದೆ. ಏತನ್ಮಧ್ಯೆ, ನೈಟ್ಸ್ 13 ಪಂದ್ಯಗಳಲ್ಲಿ 9 ರಲ್ಲಿ ಗೆಲುವು ಸಾಧಿಸಿ 19 ಅಂಕಗಳೊಂದಿಗೆ +1.428 ನೆಟ್ ರನ್ ರೇಟ್​ನೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದೆ. 2012 ಮತ್ತು 2014ರಲ್ಲಿ ಕೆಕೆಆರ್ ಅಗ್ರ 2ರಲ್ಲಿ ಸ್ಥಾನ ಪಡೆದಿತ್ತು. ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ಮೇ 19 ರ ಭಾನುವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ರಾಯಲ್ಸ್ ತಂಡವನ್ನು ಸೋಲಿಸಿದರೆ ಈ ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಗೌತಮ್ ಗಂಭೀರ್ ಕೆಕೆಆರ್​​ಗೆ ಮರಳಿದ ಕಾರಣ ತಂಡಕ್ಕೆ ಭಾರೀ ಅನುಕೂಲಗಳು ಆಗಿವೆ.

ಗುಜರಾತ್​ಗೆ ನಿರಾಶಾದಾಯಕ ಅಭಿಯಾನ

ಗುಜರಾತ್​ ಟೈಟಾನ್ಸ್ ಪ್ಲೇಆಫ್​ನಲ್ಲಿ ಸ್ಥಾನ ಪಡೆಯುವ ರೇಸ್​​ನಿಂದ ಹೊರಗುಳಿದಿದೆ. ಹಾರ್ದಿಕ್ ಪಾಂಡ್ಯ ನಿರ್ಗಮನ ಮತ್ತು ಮೊಹಮ್ಮದ್ ಶಮಿ ಗಾಯಗೊಂಡ ನಂತರ ಜಿಟಿಗೆ ಉತ್ತಮ ಅನುಕೂಲಗಳು ಸಿಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶ ಆ ತಂಡಕ್ಕೆ ಇತ್ತು. ಆದರೆ, ಮಳೆ ಅವರ ಭರವಸೆಗಳನ್ನು ಭಗ್ನಗೊಳಿಸಿತು.

ಇದನ್ನೂ ಓದಿ: IPL 2024: ಮಾಲೀಕನ ಜತೆ ಜಗಳ, ತಂಡದ ಬಸ್​ ಬಿಟ್ಟು ಸ್ವಂತ ಖರ್ಚಲ್ಲಿ ಪ್ರಯಾಣ

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೇ 16 ರಂದು ನಡೆಯಲಿರುವ ಪಂದ್ಯದಲ್ಲಿ ಶುಭ್ಮನ್ ಗಿಲ್ ಪಡೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. 2022ರಲ್ಲಿ, ಜಿಟಿ ತಮ್ಮ ಮೊದಲ ಪ್ರವೇಶದಲ್ಲಿ ಪ್ರಶಸ್ತಿ ಗೆದ್ದಿತ್ತು. 2023ರಲ್ಲಿ ಸಿಎಸ್​ಕೆ ತಂಡವನ್ನು ಮಣಿಸುವಲ್ಲಿ ವಿಫಲವಾದ ಬಳಿಕ ರನ್ನರ್ ಅಪ್ ಸ್ಥಾನ ಪಡೆದಿತ್ತು. ಆದರೆ ಈ ಋತುವಿನಲ್ಲಿ ಗಿಲ್ ಒತ್ತಡದ ನಡುವೆ ನಾಯಕತ್ವ ಹಾಗೂ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡಿದ್ದರು.

Continue Reading

ಕ್ರೀಡೆ

Muhammad Waseem : ಇತಿಹಾಸ ಸೃಷ್ಟಿಸಿದ ಯುಎಇ ಕ್ರಿಕೆಟ್​ ತಂಡದ ನಾಯಕ ವಸೀಮ್​

Muhammad Waseem : ಒಮಾನ್​​ನಲ್ಲಿ ನಡೆದ ಎಸಿಸಿ ಪ್ರೀಮಿಯರ್ ಕಪ್​ನಲ್ಲಿ ಯುಎಇಯ ಯಶಸ್ಸಿನಲ್ಲಿ ವಸೀಮ್ ಪ್ರಮುಖ ಪಾತ್ರ ವಹಿಸಿದ್ದರು. ಕುವೈತ್ ವಿರುದ್ಧ ಡಕ್ ಔಟ್ ನೊಂದಿಗೆ ಅಭಿಯಾನ ಆರಂಭಿಸಿದ ವಸೀಮ್, ಬಹ್ರೇನ್ ವಿರುದ್ಧ 65 ರನ್ ಗಳಿಸಿ ಪುಟಿದೆದ್ದರು. ನಂತರ ಅವರು ಒಮಾನ್ ಮತ್ತು ಕಾಂಬೋಡಿಯಾ ವಿರುದ್ಧ ಕ್ರಮವಾಗಿ 45 ಮತ್ತು 48 ರನ್ ಗಳಿಸಿದ್ದರು.

VISTARANEWS.COM


on

Muhammad Waseem
Koo

ಬೆಂಗಳೂರು: ಯುಎಇ ನಾಯಕ ಮುಹಮ್ಮದ್ ವಸೀಮ್ (Muhammad Waseem) ಪ್ರತಿಷ್ಠಿತ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ತಮ್ಮ ದೇಶದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಪ್ರಿಲ್ ನಲ್ಲಿ ಬ್ಯಾಟ್ ನೊಂದಿಗೆ ಸಮೃದ್ಧ ಓಟವನ್ನು ಆನಂದಿಸಿದ ನಂತರ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಸೀಮ್ ಅವರಲ್ಲದೆ, ಪಾಕಿಸ್ತಾನದ ಸ್ಟಾರ್ ಆಟಗಾರ ಶಾಹೀನ್ ಅಫ್ರಿದಿ ಮತ್ತು ನಮೀಬಿಯಾದ ಗೆರ್ಹಾರ್ಡ್ ಎರಾಸ್ಮಸ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಅವರಿಬ್ಬರನ್ನು ವಸೀಮ್ ಸೋಲಿಸಿ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದರು.

ಒಮಾನ್​​ನಲ್ಲಿ ನಡೆದ ಎಸಿಸಿ ಪ್ರೀಮಿಯರ್ ಕಪ್​ನಲ್ಲಿ ಯುಎಇಯ ಯಶಸ್ಸಿನಲ್ಲಿ ವಸೀಮ್ ಪ್ರಮುಖ ಪಾತ್ರ ವಹಿಸಿದ್ದರು. ಕುವೈತ್ ವಿರುದ್ಧ ಡಕ್ ಔಟ್ ನೊಂದಿಗೆ ಅಭಿಯಾನ ಆರಂಭಿಸಿದ ವಸೀಮ್, ಬಹ್ರೇನ್ ವಿರುದ್ಧ 65 ರನ್ ಗಳಿಸಿ ಪುಟಿದೆದ್ದರು. ನಂತರ ಅವರು ಒಮಾನ್ ಮತ್ತು ಕಾಂಬೋಡಿಯಾ ವಿರುದ್ಧ ಕ್ರಮವಾಗಿ 45 ಮತ್ತು 48 ರನ್ ಗಳಿಸಿದ್ದರು.

ಬಲಗೈ ಬ್ಯಾಟರ್​ ನೇಪಾಳ ವಿರುದ್ಧ ಆಡಲು ವಿಫಲರಾದರು ಮತ್ತು ಒಮಾನ್ ವಿರುದ್ಧದ ಫೈನಲ್​ನಲ್ಲಿ ಪಂದ್ಯ ವಿಜೇತ ಶತಕವನ್ನು ಹೊಡೆದಿದ್ದರು. ವಸೀಮ್ 44.83ರ ಸರಾಸರಿಯಲ್ಲಿ 269 ರನ್ ಗಳಿಸಿದ್ದರು. ಪಂದ್ಯಾವಳಿಯಲ್ಲಿ ಅವರ ಉತ್ತಮ ಓಟಕ್ಕೆ ಈಗ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ನೀಡಲಾಗಿದೆ.

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದ ಬಗ್ಗೆ ಸಂತಸ ವ್ಯಕ್ತಪಡಿಸಿದ ಮುಹಮ್ಮದ್ ವಸೀಮ್, ಇದು ಉದಯೋನ್ಮುಖ ಕ್ರಿಕೆಟ್ ತಂಡಗಳ ಆಟಗಾರರಿಗೆ ದೊಡ್ಡ ಪ್ರೇರಣೆಯಾಗಲಿದೆ ಎಂದು ಹೇಳಿದರು. ಏಷ್ಯಾ ಕಪ್​​ನಲ್ಲಿ ಮುಂದಿನ ಆವೃತ್ತಿಯ ಮೇಲೆ ಕಣ್ಣಿಟ್ಟಿರುವ ಅವರು ಎಸಿಸಿ ಪ್ರೀಮಿಯರ್ ಕಪ್​ನಲ್ಲಿ ಯುಎಇಯನ್ನು ಮುಂಚೂಣಿಯಿಂದ ಮುನ್ನಡೆಸಲು ಸಾಧ್ಯವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ರೋಮಾಂಚನ ಎಂದ ವಸೀಮ್​

ಐಸಿಸಿ ತಿಂಗಳ ಪುರುಷ ಆಟಗಾರ ಪ್ರಶಸ್ತಿಯನ್ನು ಗೆದ್ದಿರುವುದು ದೊಡ್ಡ ಗೌರವವಾಗಿದೆ. ವಿಶ್ವದಾದ್ಯಂತದ ಪ್ರಶಸ್ತಿ ವಿಜೇತರ ವಿಶಿಷ್ಟ ಪಟ್ಟಿಗೆ ಸೇರಲು ನಾನು ರೋಮಾಂಚನಗೊಂಡಿದ್ದೇನೆ ಎಂದು ವಸೀಮ್ ಹೇಳಿದರು.

ಈ ಪ್ರಶಸ್ತಿಯು ಆಟಗಾರರಿಗೆ ವಿಶೇಷವಾಗಿ ಯುಎಇಯಂತಹ ಉದಯೋನ್ಮುಖ ಕ್ರಿಕೆಟ್ ತಂಡಗಳ ಆಟಗಾರರಿಗೆ ದೊಡ್ಡ ಪ್ರೇರಣೆ. ನಮ್ಮ ಗುರಿ ಮುಂದಿನ ವರ್ಷದ ಏಷ್ಯಾ ಕಪ್​​ಗೆ ಅರ್ಹತೆ ಪಡೆಯುವುದು ಮತ್ತು ನನ್ನ ತಂಡ ಮತ್ತು ಪಂದ್ಯಾವಳಿಯಲ್ಲಿ ಅವರ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ವೈಯಕ್ತಿಕ ಮಟ್ಟದಲ್ಲಿ, ವಿಶೇಷವಾಗಿ ಫೈನಲ್​ನಲ್ಲಿ ನಾನು ತಂಡವನ್ನು ಮುಂಚೂಣಿಯಿಂದ ಮುನ್ನಡೆಸಿದ್ದೇನೆ ಎಂದು ನನಗೆ ಸಂತೋಷವಾಗಿದೆ. ದೊಡ್ಡ ಪಂದ್ಯದಲ್ಲಿ ಶತಕ ಗಳಿಸುವುದು ನಿಜಕ್ಕೂ ವಿಶೇಷ ಕ್ಷಣವಾಗಿದೆ, ವಿಶೇಷವಾಗಿ ಅದು ತಂಡಕ್ಕೆ ಗೆಲುವಿಗೆ ಸಹಾಯ ಮಾಡಿದಾಗ. ಏಷ್ಯಾಕಪ್ಗಾಗಿ ನಮ್ಮ ಸಿದ್ಧತೆಗಳನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಯುಎಇ ಕ್ರಿಕೆಟ್ನ ಈ ರೋಮಾಂಚಕಾರಿ ಸಮಯದಲ್ಲಿ ಬ್ಯಾಟ್ನೊಂದಿಗೆ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸುವುದು ಮತ್ತು ಮಾದರಿಯಾಗಿ ಮುನ್ನಡೆಸುವುದು ನನ್ನ ಗುರಿಯಾಗಿದೆ, “ಎಂದು ಅವರು ಹೇಳಿದರು.

ಮಹಿಳಾ ವಿಭಾಗದಲ್ಲಿ ಹೇಲಿ ಮ್ಯಾಥ್ಯೂಸ್

ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ ಮತ್ತು ಶ್ರೀಲಂಕಾದ ನಾಯಕಿ ಚಾಮರಿ ಅಟ್ಟಪಟ್ಟು ಅವರಿಂದ ಸ್ಪರ್ಧೆಯನ್ನು ಸೋಲಿಸಿದ ವೆಸ್ಟ್ ಇಂಡೀಸ್ ಸ್ಟಾರ್ ಹೇಲಿ ಮ್ಯಾಥ್ಯೂಸ್ ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮ್ಯಾಥ್ಯೂಸ್ ಮೂರನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಇದನ್ನೂ ಓದಿ: IPL 2024: ಮಾಲೀಕನ ಜತೆ ಜಗಳ, ತಂಡದ ಬಸ್​ ಬಿಟ್ಟು ಸ್ವಂತ ಖರ್ಚಲ್ಲಿ ಪ್ರಯಾಣಿಸಿದ ಕೆ. ಎಲ್​ ರಾಹುಲ್​

ಪ್ರಶಸ್ತಿ ಗೆದ್ದಿರುವುದಕ್ಕೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ಪ್ರದರ್ಶನಗಳು ತಂಡದ ಯಶಸ್ಸಿಗೆ ಕಾರಣವಾದವು ಮತ್ತು ನಾಯಕನಾಗಿ ಅದು ನನಗೆ ಅತ್ಯಂತ ಮುಖ್ಯವಾದ ವಿಷಯವಾಗಿದೆ ಎಂದು ಮ್ಯಾಥ್ಯೂಸ್ ಹೇಳಿದರು.

ಏಪ್ರಿಲ್​​ನಲ್ಲಿ ಮ್ಯಾಥ್ಯೂಸ್ ಪಾಕಿಸ್ತಾನ ವಿರುದ್ಧ ಮೂರು ಟಿ 20 ಮತ್ತು ಅನೇಕ ಏಕದಿನ ಪಂದ್ಯಗಳನ್ನು ಆಡಿದ್ದರು. ಏಕದಿನ ಪಂದ್ಯಗಳಲ್ಲಿ ಅವರು ಎರಡು ಶತಕಗಳ ಸಹಾಯದಿಂದ 325 ರನ್ ಗಳಿಸಿದ್ದಾರೆ ಮತ್ತು ಆರು ವಿಕೆಟ್​ಗಳನ್ನು ಪಡೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಮ್ಯಾಥ್ಯೂಸ್ 126 ರನ್ ಹಾಗೂ 6 ವಿಕೆಟ್ ಕಬಳಿಸಿದ್ದಾರೆ.

Continue Reading
Advertisement
IPL 2024 Points Table
ಕ್ರೀಡೆ6 mins ago

IPL 2024 Points Table: ಟೂರ್ನಿಯಿಂದ ಹೊರಬಿದ್ದ ಗುಜರಾತ್​ ಟೈಟಾನ್ಸ್​

jayanagar murder case
ಕ್ರೈಂ10 mins ago

Murder Case: ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಕೊಲೆ

Viral News
ದೇಶ46 mins ago

Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

HD Revanna Bail
ಪ್ರಮುಖ ಸುದ್ದಿ58 mins ago

HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!

Kalki 2898 AD
ಸಿನಿಮಾ59 mins ago

Kalki 2898 AD: ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

mumbai hoarding collapse
ಪ್ರಮುಖ ಸುದ್ದಿ2 hours ago

Hoarding Collapse: ಹೋರ್ಡಿಂಗ್‌ ಕುಸಿತದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿಕೆ, ಇನ್ನಷ್ಟು ಜನ ಅದರಡಿಯಲ್ಲಿ

Vertigo Problem
ಆರೋಗ್ಯ2 hours ago

Vertigo Problem: ನಿಮಗೆ ಇದ್ದಕ್ಕಿದ್ದಂತೆ ತಲೆ ಸುತ್ತುತ್ತಿದೆಯೆ? ಈ ವಿಷಯ ತಿಳಿದುಕೊಂಡಿರಿ

king dasharatha dhavala dharini
ಅಂಕಣ2 hours ago

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

karnataka weather Forecast
ಮಳೆ2 hours ago

Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಿಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Food Tips Kannada
ಆಹಾರ/ಅಡುಗೆ3 hours ago

Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ14 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ14 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ15 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ15 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ15 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ22 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌