Viral Video: ಮೋದಿ ಜೀ ನನ್ನ ಮಾತು ಕೇಳಿ, ಒಳ್ಳೆಯ ಶಾಲೆ ಕಟ್ಟಿಸಿಕೊಡಿ; ತನ್ನ ಸ್ಕೂಲ್​ ದುಸ್ಥಿತಿ ತೋರಿಸಿ, ಮನವಿ ಮಾಡಿದ ಕಾಶ್ಮೀರದ ಬಾಲಕಿ - Vistara News

ವೈರಲ್ ನ್ಯೂಸ್

Viral Video: ಮೋದಿ ಜೀ ನನ್ನ ಮಾತು ಕೇಳಿ, ಒಳ್ಳೆಯ ಶಾಲೆ ಕಟ್ಟಿಸಿಕೊಡಿ; ತನ್ನ ಸ್ಕೂಲ್​ ದುಸ್ಥಿತಿ ತೋರಿಸಿ, ಮನವಿ ಮಾಡಿದ ಕಾಶ್ಮೀರದ ಬಾಲಕಿ

ಮೆಟ್ಟಿಲುಗಳ ಗುಂಟ ಸಾಗಿದಾಗ ಕಾಣುವ ಎರಡು ಮುಚ್ಚಿದ ಕೊಠಡಿಗಳನ್ನು ತೋರಿಸಿ ‘ಇದರಲ್ಲಿ ಒಂದು ಪ್ರಾಂಶುಪಾಲರ ಕೊಠಡಿ ಮತ್ತು ಅಧ್ಯಾಪಕರ ಕೋಣೆ’ ಎನ್ನುತ್ತಾಳೆ. ಬಳಿಕ ಆ ಕೊಠಡಿಗಳ ಎದುರಿಗಿನ ಪಡಸಾಲೆಯನ್ನು ತೋರಿಸುತ್ತ ‘ನೋಡಿ ಇಲ್ಲೆಲ್ಲ ಎಷ್ಟು ಕೊಳಕಾಗಿದೆ ಎಂದು ಬಾಲಕಿ ಹೇಳಿದ್ದಾಳೆ.

VISTARANEWS.COM


on

Please Modi ji build A Nice School Kashmiri Girl request to PM Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಲೋಹಾಯ್​ ಮಲ್ಹಾರ್ ಎಂಬ ಗ್ರಾಮದ ಪುಟ್ಟ ಹುಡುಗಿ ಸೀರಾತ್​ ನಾಜ್​ (Seerat Naaz) ತಾನು ಓದುತ್ತಿರುವ ಶಾಲೆಯ ದುಃಸ್ಥಿತಿಯನ್ನು ವಿಡಿಯೊ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಮನವಿ ಮಾಡಿದ್ದಾಳೆ. ‘ನನ್ನ ಶಾಲೆ ಎಷ್ಟು ಕೊಳಕಾಗಿದೆ ನೋಡಿ ಮೋದಿ ಜೀ, ಈ ಕಲ್ಲು-ಮಣ್ಣು ಎದ್ದಿರುವ ನೆಲದ ಮೇಲೆ ಕುಳಿತುಕೊಂಡು ನಾವು ಪಾಠ ಆಲಿಸುವುದಾದರೂ ಹೇಗೆ?, ದಯವಿಟ್ಟು ನಮಗಾಗಿ ಒಂದು ಒಳ್ಳೆ ಶಾಲೆ ಕಟ್ಟಿಸಿಕೊಡಿ’ ಎಂದು ಪ್ರಧಾನಿಯವರ ಬಳಿ ಕೇಳಿಕೊಂಡಿದ್ದಾಳೆ. ಆ ಪುಟ್ಟ ವಿದ್ಯಾರ್ಥಿನಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ (Viral Video)ಆಗಿದೆ.

ವಿಡಿಯೊ ಪ್ರಾರಂಭಿಸುತ್ತಿದ್ದಂತೆ ‘ಮೋದಿ ಜೀ ವಂದನೆಗಳು, ಹೇಗಿದ್ದೀರಿ? ಚೆನ್ನಾಗಿದ್ದೀರಾ?’ ಎಂದು ಕೇಳುವ ಬಾಲಕಿ ನಂತರ ತನ್ನ ಹೆಸರನ್ನು ಹೇಳುತ್ತಾಳೆ. ಹಾಗೇ, ತಾನು ಯಾವ ಶಾಲೆಯಲ್ಲಿ ಓದುತ್ತಿದ್ದೇನೆ ಎಂದು ಹೇಳಿಕೊಂಡು, ‘ಮೋದಿ ಜೀ ನಿಮ್ಮ ಬಳಿ ಒಂದು ಮಾತು ಹೇಳಬೇಕಿತ್ತು. ನೀವು ಎಲ್ಲರ ಮಾತು ಕೇಳುತ್ತೀರಿ, ಇವತ್ತು ನನ್ನ ಮಾತು ಕೇಳಿ’ ಎನ್ನುತ್ತಾಳೆ. ನಂತರ ಆಕೆ ತನ್ನ ಶಾಲೆಯನ್ನು ವಿಡಿಯೊದಲ್ಲಿ ತೋರಿಸಲು ಪ್ರಾರಂಭಿಸುತ್ತಾಳೆ.

ಇದನ್ನೂ ಓದಿ: Viral Video: ಕಳ್ಳತನದ ಶಂಕೆ; ಮ್ಯಾನೇಜರ್‌ನನ್ನು ಕಂಬಕ್ಕೆ ಕಟ್ಟಿ ಹಾಕಿ, ಹೊಡೆದು ಕೊಂದೇ ಬಿಟ್ಟರು ಪಾಪಿಗಳು!

ಮೆಟ್ಟಿಲುಗಳ ಗುಂಟ ಸಾಗಿದಾಗ ಕಾಣುವ ಎರಡು ಮುಚ್ಚಿದ ಕೊಠಡಿಗಳನ್ನು ತೋರಿಸಿ ‘ಇದರಲ್ಲಿ ಒಂದು ಪ್ರಾಂಶುಪಾಲರ ಕೊಠಡಿ ಮತ್ತು ಅಧ್ಯಾಪಕರ ಕೋಣೆ’ ಎನ್ನುತ್ತಾಳೆ. ಬಳಿಕ ಆ ಕೊಠಡಿಗಳ ಎದುರಿಗಿನ ಪಡಸಾಲೆಯನ್ನು ತೋರಿಸುತ್ತ ‘ನೋಡಿ ಇಲ್ಲೆಲ್ಲ ಎಷ್ಟು ಕೊಳಕಾಗಿದೆ. ನಾವು ಈ ಕೊಳಕು ನೆಲದ ಮೇಲೆ ಕುಳಿತೇ ಪಾಠ ಕಲಿಯಬೇಕು, ಇಲ್ಲಿ ಕುಳಿತುಕೊಳ್ಳಲು ಸಾಧ್ಯವೇ?‘ ಎಂದು ಪ್ರಶ್ನಿಸುತ್ತಾಳೆ. ಮತ್ತೆ ಶಾಲೆಯ ಇಡೀ ಕಟ್ಟಡವನ್ನು ತೋರಿಸಿ ‘ಈ ಕಟ್ಟಡ ಅದೆಷ್ಟು ದೊಡ್ಡದಾಗಿದೆ ನೋಡಿ. ಆದರೆ ಏನೂ ಪ್ರಯೋಜನವಿಲ್ಲ, ಗಲೀಜಾಗಿದೆ’ ಎನ್ನುತ್ತಾಳೆ. ಅಷ್ಟಲ್ಲದೆ ಶಾಲೆಯ ಸುತ್ತಮುತ್ತಲಿನ ಪರಿಸರವನ್ನೂ ಇಂಚಿಂಚೂ ತೋರಿಸಿ, ಅಲ್ಲಿನ ದುಃಸ್ಥಿತಿಯನ್ನು ಕಣ್ಣಿಗೆ ವಿವರಿಸಿದ್ದಾಳೆ. ಶಿಥಿಲಾವಸ್ಥೆಯಲ್ಲಿರುವ ಶೌಚಗೃಹವನ್ನೂ ಆಕೆ ವಿಡಿಯೊದಲ್ಲಿ ತೋರಿಸಿದ್ದಾಳೆ.

ಮೋದಿ ಜೀ ನೀವು ನಮಗೊಂದು ಒಳ್ಳೆಯ ಶಾಲೆ ಕಟ್ಟಿಕೊಡಿ. ನಮಗೆ ಶಾಲೆಯಲ್ಲಿ ಬೆಂಚ್​ ಇಲ್ಲ. ನೆಲಕ್ಕೆ ಕುಳಿತುಕೊಂಡರೆ ಸಮವಸ್ತ್ರವೆಲ್ಲ ಕೊಳಕಾಗುತ್ತಿದೆ. ಯೂನಿಫಾರ್ಮ್​ ಹೊಸಲು ಮಾಡಿಕೊಂಡು ಹೋದರೆ ಅಮ್ಮ ಬೈಯ್ಯುತ್ತಾರೆ. ಇನ್ನು ಶೌಚಗೃಹ ಮುರಿದುಬಿದ್ದಿದ್ದರಿಂದ, ಅಲ್ಲೇ ಇರುವ ಗುಂಡಿಯಲ್ಲಿ ಮೂತ್ರವಿಸರ್ಜನೆ ಮಾಡಬೇಕು. ಹೊಸಕಟ್ಟಡಕ್ಕಾಗಿ ಪಾಯ ಅಗೆದಿದ್ದರೂ ಅದು ಮೇಲೇಳುತ್ತಿಲ್ಲ’ ಎಂದು ಆ ಬಾಲಕಿ ಅಲವತ್ತುಕೊಂಡಿದ್ದಾಳೆ. ದಯವಿಟ್ಟು ಒಂದೊಳ್ಳೆ ಶಾಲೆ ಕಟ್ಟಿಸಿಕೊಡಿ ಎಂದು ಹೇಳಿದ್ದಾಳೆ. ಇದು ಪ್ರಧಾನಿ ಮೋದಿಯವರನ್ನು ತಲುಪುತ್ತಾ? ನೋಡಬೇಕಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವೈರಲ್ ನ್ಯೂಸ್

Viral News: ಅವಳಿ-ತ್ರಿವಳಿ ಅಲ್ಲ.. ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

Viral News:ಇಲ್ಲೊಬ್ಬ ತಾಯಿ ಐದು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿರುವ ಘಟನೆ ವರದಿಯಾಗಿದೆ. ಈ ಅಪರೂಪದಲ್ಲಿ ಅಪರೂಪವಾದ ಘಟನೆ ನಡೆದಿದ್ದು ಬಿಹಾರದಲ್ಲಿ. ಇಲ್ಲಿನ ಕೃಷ್ಣಗಂಜ್‌ ಜಿಲ್ಲೆಯ ಪೋತಿಹಾ ತಾಲೂಕಿನಲ್ಲಿರುವ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಮಹಿಳೆಗೆ ಹೆರಿಗೆಯಾಗಿದೆ. ಇನ್ನು ಜನಿಸಿದ ಎಲ್ಲಾ ಐದು ಮಕ್ಕಳ ಹೆಣ್ಣು ಮಕ್ಕಳಾಗಿದ್ದು, ಮಹಿಳೆಗೆ ಸುಖ ಪ್ರಸವ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಮಕ್ಕಳನ್ನು ವೈದ್ಯರು ನಿಗಾದಲ್ಲಿಟ್ಟಿದ್ದಾರೆ.

VISTARANEWS.COM


on

Viral News
Koo

ನವದೆಹಲಿ: ಮಗುವೊಂದು ಹುಟ್ಟಿತೆಂದರೆ ಒಂದು ಮನೆಯಲ್ಲಿ, ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ. ಅದೇ ಅವಳಿ ಜವಳಿ ಮಕ್ಕಳು ಹುಟ್ಟಿತೆಂದರೆ ಆ ಖುಷಿ ಇನ್ನು ಡಬಲ್‌ ಆಗುತ್ತದೆ. ಕೆಲವೊಂದು ಸಂದರ್ಭದಲ್ಲಿ ತಾಯಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆಗಳು ಬಹಳಷ್ಟು ಸರಿ ನಡೆದಿದೆ. ಇನ್ನೂ ಮುಂದುವರೆದು ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ ಘಟನೆಗಳೂ ನಡೆದಿದ್ದಿದೆ. ಆದರೆ ಇಲ್ಲೊಬ್ಬ ತಾಯಿ ಐದು ಮಕ್ಕಳಿಗೆ(Five babies) ಏಕಕಾಲದಲ್ಲಿ ಜನ್ಮ ನೀಡಿರುವ ಘಟನೆ(Viral News) ವರದಿಯಾಗಿದೆ.

ಈ ಅಪರೂಪದಲ್ಲಿ ಅಪರೂಪವಾದ ಘಟನೆ ನಡೆದಿದ್ದು ಬಿಹಾರದಲ್ಲಿ. ಇಲ್ಲಿನ ಕೃಷ್ಣಗಂಜ್‌ ಜಿಲ್ಲೆಯ ಪೋತಿಹಾ ತಾಲೂಕಿನಲ್ಲಿರುವ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಮಹಿಳೆಗೆ ಹೆರಿಗೆಯಾಗಿದೆ. ಇನ್ನು ಜನಿಸಿದ ಎಲ್ಲಾ ಐದು ಮಕ್ಕಳ ಹೆಣ್ಣು ಮಕ್ಕಳಾಗಿದ್ದು, ಮಹಿಳೆಗೆ ಸುಖ ಪ್ರಸವ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಮಕ್ಕಳನ್ನು ವೈದ್ಯರು ನಿಗಾದಲ್ಲಿಟ್ಟಿದ್ದಾರೆ.

ಇನ್ನು 2021ರಲ್ಲಿ ಮೊರಾಕೋದಲ್ಲಿ ಮಹಿಳೆಯೊಬ್ಬಳು ಏಕಕಾಲದಲ್ಲಿ ಒಂಬತ್ತು ಮಕ್ಕಳಿಗೆ ಜನ್ಮ ನೀಡಿ ಇಡೀ ಪ್ರಪಂಚದ ಮಂದಿಯನ್ನು ಬೆಸ್ತು ಬೀಳಿಸಿದ್ದಳು. ಈ ಕುರಿತು ಅಧಿಕೃತವಾಗಿ ತಿಳಿಸಿರುವ ಮೊರಕೊ ಸರ್ಕಾರ, ಇದೊಂದು ಅಪರೂಪದಲ್ಲಿಯೇ ಅಪರೂಪ ಘಟನೆಯಾಗಿದೆ. ಒಂಭತ್ತು ಮಕ್ಕಳು ಕೂಡ ಆರೋಗ್ಯವಾಗಿದ್ದಾವೆ ಎಂದು ತಿಳಿಸಿದ್ದು, ಇದರಲ್ಲಿ ಐದು ಮಕ್ಕಳು ಹೆಣ್ಣಾಗಿದ್ದು, ನಾಲ್ಕು ಮಕ್ಕಳು ಗಂಡಾಗಿದ್ದವು.

ಪಾಕಿಸ್ತಾನದಲ್ಲೂ ಇಂತಹದ್ದೇ ಅಪರೂಪದ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ಒಂದೇ ಹೆರಿಗೆಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ್ದರು. ಏಪ್ರಿಲ್ 19 ರಂದು ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ ಮಹಾತಾಯಿ 6 ಮಕ್ಕಳಿಗೆ ( ಜನ್ಮ ನೀಡಿರುವುದನ್ನ ಪಾಕಿಸ್ತಾನದ ಡಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಆರು ಮಕ್ಕಳಲ್ಲಿ ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ:Crude Bomb: ಚೆಂಡೆಂದು ಭಾವಿಸಿ ಬಾಂಬ್‌ ಜೊತೆ ಮಕ್ಕಳ ಆಟ; ಪಶ್ಚಿಮ ಬಂಗಾಳದಲ್ಲಿ ಭಾರೀ ಸ್ಫೋಟ

ಹೆಚ್ಚು ಮಕ್ಕಳು ಹುಟ್ಟಲು ಕಾರಣವೇನು?

ವೀರ್ಯವು ಮೊಟ್ಟೆಯೊಂದಿಗೆ ಒಂದುಗೂಡಿದಾಗ ಸಾಮಾನ್ಯವಾಗಿ ಭ್ರೂಣವು ರೂಪುಗೊಳ್ಳುತ್ತದೆ. ಆದರೆ ಕೆಲವೊಮ್ಮೆ ಅವುಗಳನ್ನು ಎರಡಕ್ಕಿಂತ ಹೆಚ್ಚು ಭ್ರೂಣಗಳು ರೂಪುಗೊಂಡಾಗ ಅವಳಿ ಮಕ್ಕಳು ಹುಟ್ಟುತ್ತಾರೆ. ಕೆಲವು ಸಂದರ್ಭಗಳಲ್ಲಿ, ಅಂಡಾಣು ಗರ್ಭಾಶಯವನ್ನು ತಲುಪುವ ಮೊದಲು ಬೇರ್ಪಡುತ್ತದೆ, ಆಗ ಅವಳಿಗಳಿಗೆ ಜನ್ಮ ನೀಡುತ್ತಾರೆ. ಅಥವಾ ವಿಭಿನ್ನ ವೀರ್ಯವು ವಿಭಿನ್ನ ಮೊಟ್ಟೆಗಳೊಂದಿಗೆ ಒಂದಾದಾಗ ಈ ರೀತಿಯ ಅಪರೂಪದ ಘಟನೆ ಸಂಭವಿಸುತ್ತದೆ.ಆ ಸಮಯದಲ್ಲಿಯೇ ಮೊಟ್ಟೆಗಳು ಎರಡಕ್ಕಿಂತ ಹೆಚ್ಚು ವಿಭಜನೆಗೊಂಡು ಗರ್ಭಾಶಯದೊಳಗೆ ಹೋಗುತ್ತವೆ. ಬಹಳ ವಿರಳವಾಗಿ ಅವರು ಆರು ಭಾಗಗಳಾಗಿ ವಿಭಜಿಸುತ್ತವೆ. ಆಗ ಮಾತ್ರ ಒಂದು ಗರ್ಭದಲ್ಲಿ ಆರು ಶಿಶುಗಳು ಜನಿಸುತ್ತವೆ. ಇದು ಅಪರೂಪ ಆದರೆ ತುಂಬಾ ಅಪಾಯಕಾರಿ. ಕೆಲವೊಮ್ಮೆ ತಾಯಿ ಸಾಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಹುಟ್ಟುವುದು ಸಾಮಾನ್ಯವಾಗಿದೆ.


Continue Reading

ವೈರಲ್ ನ್ಯೂಸ್

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

Boat Capsizes: ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹಕ್ಕೆ ತುತ್ತಾಗಿ ಒಂದೇ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿತ್ತು. ಈ ವೇಳೆ ಒಂದು ದೋಣಿ ಮುಗುಚಿದೆ ಎನ್ನಲಾಗಿದೆ. ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಜಲಾವೃತಗೊಂಡಿದ್ದ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಬಳಿಕ ಮಗುಚಿ ಬೀಳುತ್ತಿರುವ ಭಯಾನಕ ದೃಶ್ಯವನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Boat Capsize
Koo

ಬ್ರೆಜಿಲ್‌: ಭೀಕರ ಪ್ರವಾಹದ ರಭಸಕ್ಕೆ ದೋಣಿಯೊಂದು ಮಗುಚಿರುವ ಘಟನೆ (Boat Capsizes) ಬ್ರೆಜಿಲ್‌(Brazil)ನಲ್ಲಿ ನಡೆದಿದೆ. ಭಾರೀ ಮಳೆಯಿಂದ ಪ್ರವಾಹ ಸ್ಥಿತಿ(Flood situation) ಎದುರಿಸುತ್ತಿರುವ ಬ್ರೆಜಿಲ್‌ನಲ್ಲಿ ನೂರಾರು ಜನರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಜಲಾವೃತಗೊಂಡಿದ್ದ ಸೇತುವೆಯಿಂದ ಕೆಳಗೆ ಬಿದ್ದಿದೆ. ಪರಿಣಾಮವಾಗಿ ಮಳೆಯಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 56ಕ್ಕೆ ಏರಿಕೆಯಾಗಿದ್ದು, 74 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು 67 ಮಂದಿ ಕಣ್ಮರೆಯಾಗಿದ್ದಾರೆ ಬ್ರೆಜಿಲ್‌ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಭೀಕರ ದುರ್ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗುತ್ತಿದೆ.

ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹಕ್ಕೆ ತುತ್ತಾಗಿ ಒಂದೇ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿತ್ತು. ಈ ವೇಳೆ ಒಂದು ದೋಣಿ ಮುಗುಚಿದೆ ಎನ್ನಲಾಗಿದೆ. ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಜಲಾವೃತಗೊಂಡಿದ್ದ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಬಳಿಕ ಮಗುಚಿ ಬೀಳುತ್ತಿರುವ ಭಯಾನಕ ದೃಶ್ಯವನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಬ್ರೆಜಿಲ್‌ನಲ್ಲಿ ಕಳೆದ ಅನೇಕ ದಿನಗಳಿಂದ ಎಡೆಬಿಡದೇ ಮಳೆಯಾಗುತ್ತಿದ್ದು, ಭೂಕುಸಿತ, ಪ್ರವಾಹಕ್ಕೆ ಸಿಲುಕಿ ಜನ ತತ್ತರಿಸಿದ್ದಾರೆ.

ಇನ್ನು ನಾಲ್ಕು ತಿಂಗಳ ಹಿಂದೆ ಇಂತಹದ್ದೇ ಒಂದು ದುರಂತ ನಡೆದಿತ್ತು. ಗುಜರಾತ್‌ನ ವಡೋದಾರದ ಹರಿಣಿ ಸರೋವರದಲ್ಲಿ ಬೋಟ್ ಮಗುಚಿ 13 ಶಾಲಾ ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಮೃತಪಟ್ಟ ಘಟನೆ ನಡೆದಿತ್ತು.

ಇದನ್ನೂ ಓದಿ:Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

ಕಳೆದ ವಾರ ಕಾರವಾರದಲ್ಲೂ ಅರಬ್ಬೀ ಸಮುದ್ರದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಒಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 4 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿತ್ತು. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಾದೇವ ಖಾರ್ವಿ ಎಂಬವರ ಮಾಲಕತ್ವದ ಓಂ ಮಹಾಗಣಪತಿ ಹೆಸರಿನ ಬೋಟ್ ಮುಳುಗಡೆಯಾಗಿತ್ತು. ಬೆಳಿಗ್ಗೆ 5 ಗಂಟೆಯ ವೇಳೆಗೆ 4 ಮಂದಿ ಮೀನುಗಾರರು ಈ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅರಬ್ಬೀ ಸಮದ್ರದಲ್ಲಿ ಕಾಣಿಸಿಕೊಂಡ ಭಾರೀ ಗಾಳಿ ಮಳೆಗೆ ಬೋಟ್ ಪಲ್ಟಿಯಾಗಿದೆ. ಸ್ಥಳದಲ್ಲಿದ್ದ ಇನ್ನೊಂದು ಬೋಟ್‌ನವರಿಂದ ಮೀನುಗಾರರ ರಕ್ಷಣೆ ಮಾಡಲಾಗಿದೆ. ಬೋಟ್ ದುರ್ಘಟನೆಯಿಂದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿತ್ತು.

Continue Reading

ವೈರಲ್ ನ್ಯೂಸ್

Viral News: ಕಾಳಿಂಗ ಸರ್ಪವನ್ನು ಈ ಕುಟುಂಬ ಹೇಗೆ ಪೂಜಿಸುತ್ತಿದೆ ನೋಡಿ!

Viral News: ಸಾಮಾನ್ಯವಾಗಿ ನಗರ ಪಂಚಮಿ ದಿನ ಎಲ್ಲರೂ ನಾಗ ದೇವರನ್ನು ಪೂಜಿಸುತ್ತಾರೆ. ಕೆಲವರು ನಿಜವಾದ ನಾಗನಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಾರೆ. ಆದರೆ ಇಲ್ಲೊಂದು ಕುಟುಂಬ ಅತ್ಯಂತ ವಿಷಪೂರಿತ ಕಾಳಿಂಗ ಸರ್ಪಕ್ಕೆ ಪೂಜೆ ಸಲ್ಲಿಸಿ ಧೈರ್ಯ ತೋರಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

VISTARANEWS.COM


on

By

Viral News
Koo

ದೂರದಿಂದಲೇ ಹಾವನ್ನು (cobra) ನೋಡಿದರೂ ಸಾಕು ಕೆಲವರಂತೂ ಎದ್ದು ಬಿದ್ದು ಓಡುತ್ತಾರೆ. ಇನ್ನು ಕೆಲವರು ಸ್ವಲ್ಪ ಧೈರ್ಯವಂತರಾದರೆ ಯಾವ ಹಾವು ಎಂದು ಸ್ವಲ್ಪ ಹತ್ತಿರ ಹೋಗಿ ಪರಿಶೀಲಿಸುತ್ತಾರೆ. ಆದರೆ ಅದನ್ನು ಮುಟ್ಟುವ ಧೈರ್ಯ ಮಾತ್ರ ಯಾರಿಗೂ ಇರುವುದಿಲ್ಲ. ಅದಕ್ಕಾಗಿ ಉರಗ ತಜ್ಞರು ಅಥವಾ ಹಾವು ಹಿಡಿಯುವುದರಲ್ಲಿ ಪರಿಣಿತರಾಗಿರುವವರೇ ಬರಬೇಕು. ಆದರೆ ಇಲ್ಲೊಂದು ಕುಟುಂಬ ಮಾತ್ರ ನಿಜವಾದ ಕಾಳಿಂಗ ಹಾವನ್ನು (balck cobra) ಪೂಜಿಸಿ ಸಾಮಾಜಿಕ ಜಾಲತಾಣದಲ್ಲಿ (Viral News) ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ನಗರ ಪಂಚಮಿ ದಿನ ಎಲ್ಲರೂ ನಾಗ ದೇವರನ್ನು ಪೂಜಿಸುತ್ತಾರೆ. ಕೆಲವರು ನಿಜವಾದ ನಾಗನಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಾರೆ. ಆದರೆ ಇಲ್ಲೊಂದು ಕುಟುಂಬ ಕಪ್ಪು ನಾಗರಹಾವು ಅತ್ಯಂತ ವಿಷಪೂರಿತ ಕಾಳಿಂಗ ಸರ್ಪಕ್ಕೆ ಪೂಜೆ ಸಲ್ಲಿಸಿ ಧೈರ್ಯ ತೋರಿದ್ದಾರೆ. ವಿವಿಧ ಧಾರ್ಮಿಕ ವಿಧಿ ವಿಧಾನದ ವೇಳೆ ಹಾವಿನ ಮೇಲೆ ಹಾಲು ಸುರಿಯುತ್ತಿದ್ದಾಗ ವ್ಯಕ್ತಿಯನ್ನು ಕಚ್ಚಲು ಹಾವು ಪ್ರಯತ್ನಿಸಿದೆ. ಆದರೆ ಆಶ್ಚರ್ಯವೆಂದರೆ ಇದು ಆ ವ್ಯಕ್ತಿಯನ್ನು ಕೊಂಚವೂ ವಿಚಲಿತಗೊಳಿಸಲಿಲ್ಲ. ಬದಲಿಗೆ ನೆರೆದಿದ್ದವರನ್ನೆಲ್ಲ ನಗುವಂತೆ ಮಾಡಿದೆ.

ಎದುರಿನ ತಟ್ಟೆಯಲ್ಲಿ ಕಾಳಿಂಗ ಹಾವು ಇದ್ದರೂ ಕೊಂಚವೂ ವಿಚಲಿತರಾಗದ ಕುಟುಂಬವು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಚಕರು ಸೂಚಿಸಿದಂತೆ ಮನೆ ಮಂದಿಯೆಲ್ಲ ಸೇರಿ ಹಾವಿನ ಎದುರು ಕುಳಿತು ಪೂಜೆ ಸಲ್ಲಿಸಿದರು. ಈ ದೃಶ್ಯಗಳು ಕೆಮರಾದಲ್ಲಿ ಸೆರೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವ ಈ ವಿಡಿಯೋ ಅನೇಕ ನೆಟ್ಟಿಗರನ್ನು ಬೆರಗುಗೊಳ್ಳುವಂತೆ ಮಾಡಿದೆ. ಹಾವಿನ ಬಗ್ಗೆ ಅಸಡ್ಡೆಯ ವರ್ತನೆಗೆ ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆದರೆ ವಿಡಿಯೋ ನೋಡಿದ ವೀಕ್ಷಕರು ಅಪಾಯದ ನಡುವೆಯೂ ಕುಟುಂಬಕ್ಕೆ ಯಾವುದೇ ಭಯವಾಗದೇ ಇರುವುದು ಆಶ್ಚರ್ಯ ಮೂಡಿಸಿದೆ.

ಇನ್ ಸ್ಟಾ ಗ್ರಾಮ್ ನಲ್ಲಿ ಓಂಕಾರ್ ಸನಾತನಿ ಎಂಬಾತ ಹಂಚಿ ಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಮಂದಿ ನೋಡಿದ್ದಾರೆ. ಈ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಉಂಟು ಮಾಡಿದೆ.

4 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿರುವ ಈ ವಿಡಿಯೋ ಗೆ “ಐಸಿ ಪೂಜಾ ಕರ್ನೆ ವಾಲೆ ಕೋ 21 ಟೋಪೋನ್ ಕಿ ಸಲಾಮಿ” ಎಂದು ಶೀರ್ಷಿಕೆ ನೀಡಲಾಗಿದೆ.


ಹಿಂದೂ ಧರ್ಮದಲ್ಲಿ ಹಾವುಗಳನ್ನು ಪೂಜಿಸುವುದರಿಂದ ಹಾವು ಕಡಿತ, ಅನಾರೋಗ್ಯ ಮತ್ತು ಕೆಟ್ಟ ಶಕ್ತಿಗಳಂತಹ ಅಪಾಯಗಳಿಂದ ರಕ್ಷಣೆ ಸಿಗುತ್ತದೆ ಎಂದು ಭಾವಿಸಲಾಗುತ್ತದೆ. ಸಮೃದ್ಧಿ, ಸಂತಾನ ಭಾಗ್ಯಕ್ಕಾಗಿ ಜನರು ಹಾವುಗಳನ್ನು ಪೂಜಿಸುತ್ತಾರೆ.

ಇದನ್ನೂ ಓದಿ: Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್‌ ಫಿದಾ!

ಭಾರತದಾದ್ಯಂತ ವಿವಿಧ ಹಬ್ಬಗಳು ಮತ್ತು ಸಮಾರಂಭಗಳು ನಾಗ ದೇವರನ್ನು ಪೂಜಿಸಲಾಗುತ್ತದೆ. ನಾಗ ಪಂಚಮಿಯು ಹಾವಿನ ಪೂಜೆಗೆ ಮೀಸಲಾದ ಹಬ್ಬವಾಗಿದೆ. ನಾಗ ಪಂಚಮಿಯ ಸಮಯದಲ್ಲಿ ಆರಾಧಕರು ಹಾವಿನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ, ಹಾಲು, ಹೂವುಗಳು, ಹಣ್ಣುಗಳು ಮತ್ತು ಇತರ ಉಡುಗೊರೆಗಳನ್ನು ನಾಗನಿಗೆ ಭಕ್ತಿ ಭಾವದಿಂದ ಅರ್ಪಿಸಲಾಗುತ್ತದೆ.

Continue Reading

ವೈರಲ್ ನ್ಯೂಸ್

Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್‌ ಫಿದಾ!

Vicky Pedia: ʻಆ ದಿನಗಳುʼ ಸಿನಿಮಾದ ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲ್ಲಿ ಹಾಡಿನ ಟ್ಯೂನ್‌ ಬಳಸಿಕೊಂಡು ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದೀಗ ತಂಡದ ಕ್ರಿಯೇಟಿವಿಟಿ ಲೆವಲ್‌ಗೆ ನೋಡುಗರು ಫಿದಾ ಆಗಿದ್ದಾರೆ. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ ಧರಿಸಿ ಈ ರೀತಿಯ ಕ್ರಿಯೇಟಿವ್‌ ರೀಲ್ಸ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ.

VISTARANEWS.COM


on

Vicky Pedia New reels about heat in Karnataka
Koo

ಬೆಂಗಳೂರು: ರಾಜ್ಯದಲ್ಲಿ ಅಲ್ಲಲ್ಲಿ ಸುರಿಯುತ್ತಿದ್ದ ಮಳೆಯು, ಕಳೆದ ನಾಲ್ಕೈದು ದಿನಗಳಿಂದ ಕಣ್ಮರೆಯಾಗಿದ್ದರಿಂದ ಹಲವೆಡೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ.  ಹೀಗಿರುವಾಗ ಇದೇ ಟಾಪಿಕ್‌ ಇಟ್ಟುಕೊಂಡು ವಿಕಾಸ್ ವಿಕ್ಕಿಪಿಡಿಯ (Vicky Pedia) ತಂಡ ಹೊಸ ರೀಲ್ಸ್‌ವೊಂದು ಶೇರ್‌ ಮಾಡಿಕೊಂಡಿದೆ. ʻಆ ದಿನಗಳುʼ ಸಿನಿಮಾದ ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲ್ಲಿ ಹಾಡಿನ ಟ್ಯೂನ್‌ ಬಳಸಿಕೊಂಡು ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದೀಗ ತಂಡದ ಕ್ರಿಯೇಟಿವಿಟಿ ಲೆವಲ್‌ಗೆ ನೋಡುಗರು ಫಿದಾ ಆಗಿದ್ದಾರೆ.

“ಬಿಸಿ ಗಾಳಿ ಬಿಸಿ ಗಾಳಿ ಸಹಿ ಹಾಕಿದೆ ಬಿಸಿಲಿನಲಿ..
BURN ಆಯ್ತು
Sweat ಆಯ್ತು
ಕೈ ಕಾಲು HEATನಲಿ
ಸೂರ್ಯ ಬಂದರೆ ಸಾಕು ದಿನವೂ ಬೆವರಲೇ ಬೇಕು
ನೀರು ಖಾಲಿ ಆಗೈತೆ..ತುಂಬಸೋಣ ಬಾ..ʼʼಎಂದು ರೀಲ್ಸ್‌ ಶೇರ್‌ ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ʻʻಅಷ್ಟು ಬಿಸಿಲು ಇದ್ರೂ ಶಾಲು ಬೇಕಾʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಹಂಸಲೇಖ ಅವ್ರು ಹಿಂಗ್ ಬರ್ಯಲ್ಲ ಗುರುʼʼ ಎಂದು ಕಮೆಂಟ್‌ ಮಾಡಿದ್ದಾರೆ.

ತಮ್ಮ ವಿಭಿನ್ನ ಕಾಮಿಡಿ ವಿಡಿಯೊಗಳಿಂದ ವಿಡಿಯೊ ಕ್ರಿಯೇಟರ್ ವಿಕಾಸ್ ( ವಿಕ್ಕಿ ಪೀಡಿಯಾ) (Vicky Pedia) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ʻನಾನು ನಂದಿನಿʼ ಹಾಡಿಗೆ ರೀಲ್ಸ್‌ ಮಾಡಿ ಸಖತ್‌ ಫೇಮಸ್‌ ಆಗಿದ್ದರು. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ ಧರಿಸಿ ಈ ರೀತಿಯ ಕ್ರಿಯೇಟಿವ್‌ ರೀಲ್ಸ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇದನ್ನೂ ಓದಿ: Vicky Pedia: ಕರ್ನಾಟಕದಲ್ಲಿ ಬರಗಾಲ: ʻಓ ನಲ್ಲ ನೀರಿಲ್ಲʼ ಎಂದ ವಿಕಾಸ್ ವಿಕ್ಕಿಪಿಡಿಯ!

ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ಭಾಷಣ ಟ್ರಾನ್ಸ್‌ಲೇಟ್‌ ವಿಡಿಯೊ ಅಣಕ ಮಾಡಿ ಇವರು ಸಾಕಷ್ಟು ಫೇಮಸ್ ಆಗಿದ್ದರು. ಚುನಾವಣಾ ಸಮಯದಲ್ಲಿ ರಾಷ್ಟ್ರಮಟ್ಟದ ನಾಯಕರ ಹಿಂದಿ ಭಾಷೆಯ ಭಾಷಣವನ್ನು ಸಖತ್‌ ಆಗಿ ಕಾಮಿಡಿಯಾಗಿ ಅಣುಕಿಸಿದ್ದರು.

ಮೇ 8 ರಿಂದ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಲ್ಲಿ ಮೇ 8 ರಿಂದ ಮೇ 10ರವರೆಗೆ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ. ಇನ್ನು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೇ 9ರಿಂದ ಮುಂದಿನ ಎರಡು ದಿನ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ವರದಿಯಾಗಿದೆ.

Continue Reading
Advertisement
Viral News
ವೈರಲ್ ನ್ಯೂಸ್3 mins ago

Viral News: ಅವಳಿ-ತ್ರಿವಳಿ ಅಲ್ಲ.. ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

Kanyakumari Tour
ಪ್ರವಾಸ3 mins ago

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

Cauvery Theatre bengaluru another single screen close
ಸಿನಿಮಾ14 mins ago

Cauvery Theatre: ಬೆಂಗಳೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ʻಕಾವೇರಿʼ ಥಿಯೇಟರ್! ಮುಂದೇನು?

Bomb Threat
ದೇಶ18 mins ago

Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

Lok Sabha Elections-2024
Lok Sabha Election 202425 mins ago

Lok Sabha Election 2024: ಘಟಾನುಘಟಿಗಳ ಸ್ಪರ್ಧೆ; ಮೇ 7ರ ಮೂರನೇ ಹಂತದ ಪೈಪೋಟಿಯ ಚಿತ್ರಣ ಇಲ್ಲಿದೆ

ICC Women’s T20 World Cup 2024
ಕ್ರೀಡೆ26 mins ago

ICC Women’s T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಶ್ರೀಲಂಕಾ

Road Accident
ಕ್ರೈಂ27 mins ago

Road Accident : ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತ್ಯು; 30ಕ್ಕೂ ಹೆಚ್ಚು ಮಂದಿಗೆ ಗಾಯ

Prajwal Revanna Case HD Revanna asks NO to sign voluntary statement in kidnapping case
ಕ್ರೈಂ29 mins ago

Prajwal Revanna Case: ಅಪಹರಣ ಕೇಸ್‌ನಲ್ಲಿ ಸ್ವ-ಇಚ್ಚಾ ಹೇಳಿಕೆಗೆ ಸಹಿ ಹಾಕಲು NO ಎಂದ ಎಚ್‌.ಡಿ. ರೇವಣ್ಣ!

Crude Bomb
ದೇಶ39 mins ago

Crude Bomb: ಚೆಂಡೆಂದು ಭಾವಿಸಿ ಬಾಂಬ್‌ ಜೊತೆ ಮಕ್ಕಳ ಆಟ; ಪಶ್ಚಿಮ ಬಂಗಾಳದಲ್ಲಿ ಭಾರೀ ಸ್ಫೋಟ

Shine Shetty follows diet and fitness
ಕಿರುತೆರೆ48 mins ago

Shine Shetty: ಸಖತ್‌ ಫಿಟ್‌ ಆದ ‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ17 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ19 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ19 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌