Agniveer Recruitment: ಅಗ್ನಿವೀರ್ ನೇಮಕಾತಿಯ ಪ್ರವೇಶ ಪರೀಕ್ಷೆಗೆ 2.5 ಲಕ್ಷ ಅಭ್ಯರ್ಥಿಗಳು ಹಾಜರ್ - Vistara News

ದೇಶ

Agniveer Recruitment: ಅಗ್ನಿವೀರ್ ನೇಮಕಾತಿಯ ಪ್ರವೇಶ ಪರೀಕ್ಷೆಗೆ 2.5 ಲಕ್ಷ ಅಭ್ಯರ್ಥಿಗಳು ಹಾಜರ್

Agniveer Recruitment: ಏ.17ರಿಂದ 21ರವರೆಗೆ ಅಗ್ನಿವೀರ್ ನೇಮಕಾತಿಗೆ ಕಂಪ್ಯೂಟರ್ ಆಧರಿತ ಪ್ರವೇಶ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಸುಮಾರು 2.5 ಲಕ್ಷ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ.

VISTARANEWS.COM


on

Agniveer Recruitment: Over 2.5 lakh candidates will take CEE exam
ಸಾಂದರ್ಭಿಕ ಚಿತ್ರ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ನವದೆಹಲಿ: ಏಪ್ರಿಲ್ 17, ಸೋಮವಾರದಿಂದ ಏ.26ವರೆಗೊ ನಡೆಯಲಿರುವ ಕಂಪ್ಯೂಟರ್ ಆಧರಿತ ಅಗ್ನಿವೀರ್ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆ(CEE)ಗೆ ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯುಗಳ ಸುಮಾರು 2.5 ಲಕ್ಷ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ(Agniveer Recruitment).

ಅಗ್ನಿವೀರ್ ನೇಮಕಾತಿಯನ್ನು ಪರಿಷ್ಕರಿಸಲಾಗಿದೆ. ಅರ್ಜಿ ಹಾಕಿದ ಎಲ್ಲ ಅಭ್ಯರ್ಥಿಗಳು ಮೊದಲು ಸಿಇಇ ಬರೆಯಬೇಕಾಗುತ್ತದೆ. ಇದರಲ್ಲಿ ಆಯ್ಕೆಯಾದವರವನ್ನು ಫಿಜಿಕಲ್ ಮತ್ತು ಮೆಡಿಕಲ್ ಪರೀಕ್ಷೆಗಳಿಗೆ ಆಹ್ವಾನಿಸಲಾಗುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.

ಜಾಯಿನ್ ಇಂಡಿಯನ್ ಆರ್ಮಿ(JIA) ಜಾಲತಾಣ ಮೂಲಕ ಅಗ್ನಿವೀರ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆಯನ್ನು ಫೆಬ್ರವರಿ 16ರಿಂದ ಮಾರ್ಚ್‌ 15ರವರೆಗೆ ನಡೆಸಲಾಗಿತ್ತು. ಇನ್ನೂ ಹೆಚ್ಚಿನ ಪಾರದರ್ಶಕತೆಯನ್ನು ತರುವುದಕ್ಕಾಗಿ ಜೆಐಎ ಜಾಲತಾಣವನ್ನು ಈಗ ಡಿಜಿಲಾಕರ್‌ ಜತೆ ಲಿಂಕ್ ಮಾಡಲಾಗಿದೆ.

ಭಾರತೀಯ ಸೇನೆಯ ಪುಣೆ ನೇಮಕಾತಿ ವಿಭಾಗದಲ್ಲಿ ಸುಮಾರು 2.5 ಲಕ್ಷ ಅಭ್ಯರ್ಥಿಗಳು ಕಂಪ್ಯೂಟರ್ ಆಧರಿತ ಪರೀಕ್ಷೆಯನ್ನು ಮಹಾರಾಷ್ಟ್ರದ 35, ಗೋವಾದಲ್ಲಿ ಒಂದು, ಗುಜರಾತ್‌ನಲ್ಲಿ 12 ಕೇಂದ್ರಗಳಲ್ಲಿ ತೆಗೆದುಕೊಳ್ಳುತ್ತಿದ್ದಾರೆ. 2.5 ಲಕ್ಷ ಅಭ್ಯರ್ಥಿಗಳ ಪೈಕಿ 1.4 ಲಕ್ಷ ಅಭ್ಯರ್ಥಿಗಳು ಮಹಾರಾಷ್ಟ್ರದವರಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ 176 ಕಡೆ ಆನ್‌ಲೈನ್ ಸಿಇಇ ನಡೆಸಲಾಗುತ್ತಿದೆ. ಅಭ್ಯರ್ಥಿಗಳ ಐದು ಪರೀಕ್ಷಾ ಕೇಂದ್ರಗಳ ಆಯ್ಕೆಯನ್ನು ನೀಡಲಾಗುತ್ತದೆ. ಆ ಐದು ಕೇಂದ್ರಗಳ ಪೈಕಿ ಒಂದು ಕಡೆ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತದೆ. ಆನ್‌ಲೈನ್ ಸಿಇಇಗೆ 500 ಪ್ರವೇಶ ಶುಲ್ಕವಿದ್ದು, ಈ ಪೈಕಿ 250 ರೂ. ಸೇನೆಯೇ ಭರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿವೀರ್ ಆನ್‌ಲೈನ್ ಸಿಇಇ ವೇಳಾ ಪಟ್ಟಿ ಹೀಗಿದೆ…

ಏಪ್ರಿಲ್ 17 ಮತ್ತು 21 ರಂದು ಸೈನಿಕರ ಸಾಮಾನ್ಯ ಡ್ಯೂಟಿ. ಏಪ್ರಿಲ್ 24ರಂದು ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ವುಮೆನ್ ಮಿಲಿಟರಿ ಪೊಲೀಸ್ ಮತ್ತು ಟ್ರೇಡ್ಸ್‌ಮನ್, ಏಪ್ರಿಲ್ 25ರಂದು ಟೆಕ್ನಿಕಲ್, ನರ್ಸಿಂಗ್ ಅಸಿಸ್ಟಂಟ್ ಮತ್ತು ನರ್ಸಿಂಗ್ ಅಸಿಸ್ಟಂಟ್ ವೆಟರ್ನರಿ ಅಗ್ನಿವೀರ್ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಏಪ್ರಿಲ್ 26ರಂದು ಧಾರ್ಮಿಕ ಬೋಧಕರು, ಕಿರಿಯ ಅಧಿಕಾರಿ, ಫಾರ್ಮಾಸಿಸ್ಟ್, ಹವಾಲ್ದಾರ್ ಸರ್ವೇಯರ್‌ಗಾಗಿ ಪರೀಕ್ಷೆ ನಡೆಯಲಿದೆ.

ಅಗ್ನಿಪಥ ಯೋಜನೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಅಗ್ನಿಪಥ ಯೋಜನೆಯ (Agnipath scheme) ಸಿಂಧುತ್ವವನ್ನು ಎತ್ತಿ ಹಿಡಿದಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ ವಜಾ ಮಾಡಿದೆ. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಗ್ನಿಪಥವು ಸಿಂಧುತ್ವವನ್ನು ಹೊಂದಿದ್ದು, ನಿರಂಕುಶವಾಗಿಲ್ಲ ಎಂದು ಹೇಳಿದೆ. ಅಲ್ಲದೇ, ಅಗ್ನಿಪಥ್ ಯೋಜನೆಯನ್ನು ಪರಿಚಯಿಸುವ ಮೊದಲು ರಕ್ಷಣಾ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿಯ ಹಕ್ಕನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಹೇಳಿತು.

ಇದನ್ನೂ ಓದಿ : Agniveer Recruitment: ಅಗ್ನಿವೀರ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ, ಏನಿದು?

ಹಾಗೆಯೇ, ಭಾರತೀಯ ವಾಯು ಪಡೆಯಲ್ಲಿ ಅಗ್ನಿಪಥ ಯೋಜನೆಯನ್ನು ಪರಿಚಯಿಸುವ ಮುಂಚಿನ ನೇಮಕಾತಿಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 17ಕ್ಕೆ ನಿಗದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಜಸ್ಟೀಸ್ ಪಿ ಎಸ್ ನರಸಿಂಹ ಮತ್ತು ಜಸ್ಟೀಸ್ ಜೆ ಬಿ ಪರ್ದಿವಾಲಾ ಅವರಿದ್ದ ಪೀಠವು ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದಾಖಲಾಗಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ನಡೆಸಿತು. ಈ ವಿಷಯದಲ್ಲಿ ನಾವು(ಕೋರ್ಟ್) ಮಧ್ಯಪ್ರವೇಶಿಸಬೇಕಾದ ಅಗತ್ಯವಿಲ್ಲ. ಇದು ಸಾರ್ವಜನಿಕ ಉದ್ಯೋಗಕ್ಕೆ ಸಂಬಂಧಿಸಿದ ವಿಷಯವಾಗಿ ಹೊರತು ಒಪ್ಪಂದದಲ್ಲ ಎಂದು ಸಿಜೆಐ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಪಶ್ಚಿಮ ಬಂಗಾಳದಲ್ಲಿ ಕೇಸರಿ, ತಮಿಳುನಾಡಲ್ಲಿ ದಳಪತಿ, ಕೇರಳಂನಲ್ಲಿ ಕಾಂಗ್ರೆಸ್‌ ದರ್ಬಾರ್‌

VISTARANEWS.COM


on

ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಗೆ ಬೀರಿದೆ. ತಮಿಳುನಾಡಿನಲ್ಲಿ ಟಿವಿಕೆ ಅಚ್ಚರಿ ಮೂಡಿಸಿದ್ದು, ಅಧಿಕಾರದ ಸನಿಹದಲ್ಲಿದೆ. ಕೇರಳಂ ಸೋಲಿನೊಂದಿಗೆ ಭಾರತದಲ್ಲಿ ಎಡರಂಗದ ಅಧಿಕಾರ ಕೊನೆಗೊಂಡಿದೆ. ಮಲೆಯಾಳಿಗಳ ರಾಜ್ಯದಲ್ಲಿ ಹತ್ತು ವರ್ಷಗಳ ಬಳಿಕ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಬಂದಿದೆ.
ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಮಮತಾ ಆಡಳಿತವನ್ನು ಬಿಜೆಪಿ ಕೊನೆಗಾಣಿಸಿದೆ. ಪಶ್ಚಿಮ ಬಂಗಾಳ ಗೆಲುವಿಗಾಗಿ ಹಠವಿಡಿದ ಬಿಜೆಪಿ ಕೊನೆಗೂ ಯಶ ಸಾಧಿಸಿದೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳ ಅಸೆಂಬ್ಲಿಯಲ್ಲಿ, ಬಿಜೆಪಿ ಮೂರನೇ ಎರಡು ಭಾಗದಷ್ಟು ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್‌, ಎಡರಂಗ ತಲಾ ಎರಡು ಸೀಟುಗಳಿಗೆ ತೃಪ್ತಿಪಡಬೇಕಾಗಿದೆ. ಇದು ಬಿಜೆಪಿಯ ಅತಿದೊಡ್ಡ ಗೆಲುವಾಗಿದೆ.
ನಟ ವಿಜಯ್‌ ಸುನಾಮಿಗೆ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಕೊಚ್ಚಿ ಹೋಗಿದೆ. ಸ್ಟಾಲಿನ್‌, ಉದಯನಿಧಿ ಸ್ಟಾಲಿನ್‌ ಸೇರಿದಂತೆ ಘಟಾನುಘಟಿ ನಾಯಕರು ನೆಲಕಚ್ಚಿದ್ದಾರೆ. ನಟ ವಿಜಯ್‌ ನೇತೃತ್ವದ ಟಿವಿಕೆ ತನ್ನ ಚೊಚ್ಚಲ ಚುನಾವಣೆಯಲ್ಲೇ ಅಧಿಕಾರಕ್ಕೆ ಹತ್ತಿರದಲ್ಲಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಕ್ಷೇತ್ರಗಳನ್ನು ಗೆದ್ದಿದೆ. ಡಿಎಂಕೆ 79 ಮತ್ತು ಎಐಎಡಿಎಂಕೆ 54 ಕಡೆ ಗೆಲುವು ದಾಖಲಿಸಿವೆ. ದ್ರಾವಿಡ ನಾಡಲ್ಲಿ ನಟ ವಿಜಯ್‌ ಇತಿಹಾಸ ಸೃಷ್ಟಿಸಿದ್ದಾರೆ.
ಇನ್ನು ಕೇರಳಂನಲ್ಲಿ ಆಡಳಿತ ವಿರೋಧಿ ಅಲೆಗೆ ಆಡಳಿತಾರೂಢ ಲೆಫ್ಟ್‌ ಡೆಮಾಕ್ರಾಟಿಕ್‌ ಫ್ರಂಟ್‌ ನೆಲಕಚ್ಚಿದೆ. ಕೇರಳಂ ಫಲಿತಾಂಶ ಮಾತ್ರ ಕಾಂಗ್ರೆಸ್‌ ಖುಷಿಗೆ ಕಾರಣವಾಗಿದೆ. 140 ಸದಸ್ಯ ಬಲದ ವಿಧಾನಸಭೆಯಲ್ಲಿ ಯುಡಿಎಫ್‌ 100 ಕ್ಷೇತ್ರಗಳನ್ನು ಗೆದ್ದಿದೆ. ಎಲ್‌ಡಿಎಫ್‌ 35ಕ್ಕೆ ಸ್ಥಾನಗಳಿಗೆ ಸೀಮಿತವಾಗಿದೆ. ಇದರೊಂದಿಗೆ ದೇಶದಲ್ಲಿ ಎಡರಂಗದ ಆಡಳಿತ ಅಂತ್ಯವಾಗಿದೆ.
ಅಸ್ಸಾಂನಲ್ಲಿ ಬಿಜೆಪಿ ಗೆಲುವಿನ ಹ್ಯಾಟ್ರಿಕ್‌ ಬಾರಿಸಿದೆ. ಹಿಮಂತ ಬಿಸ್ವ ಶರ್ಮಾ ನಾಯಕತ್ವದ ಮುಂದೆ ಗೌರವ್‌ ಗೊಗೊಯಿ ನೇತೃತ್ವದ ಕಾಂಗ್ರೆಸ್‌ ಹೀನಾಯವಾಗಿ ಸೋತಿದೆ. 126 ಸದಸ್ಯ ಬಲದ ಅಸ್ಸಾಂ ಅಸೆಂಬ್ಲಿಯಲ್ಲಿ ಬಿಜೆಪಿ 102 ಸ್ಥಾನಗಳಲ್ಲಿ ಜಯಭೇರಿ ದಾಖಲಿಸಿದೆ. ಕಾಂಗ್ರೆಸ್‌ 21 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ಇನ್ನು ಪುದುಚೇರಿಯಲ್ಲಿ ಎನ್‌ಡಿಎ ಅಧಿಕಾರ ಉಳಿಸಿಕೊಂಡಿದೆ. 30 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಎನ್‌ಡಿಎ 18 ಸ್ಥಾನಗಳನ್ನು ಗೆದ್ದಿದೆ. ಡಿಎಂಕೆ ಮೈತ್ರಿಕೂಟ 7 ಹಾಗೂ ಟಿವಿಕೆಯ ಮೂವರು ಗೆಲುವಿನ ನಗೆ ಬೀರಿದ್ದಾರೆ.

Continue Reading

Latest

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

VISTARANEWS.COM


on

ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಸಾಧ್ಯತೆ, ಪಶ್ಚಿಮ ಬಂಗಾಳದಲ್ಲಿ ದೀದಿಗೆ ಸಮಬಲದ ಟಕ್ಕರ್‌, ತಮಿಳುನಾಡು-ಕೇರಳಂನಲ್ಲಿ ವೋಟ್‌ ಶೇರ್‌ ಹೆಚ್ಚಳ – ಪಂಚ ರಾಜ್ಯಗಳ ಎಕ್ಸಿಟ್‌ ಪೋಲ್‌ನಲ್ಲಿ ಬಿಜೆಪಿ ಕುರಿತ ಈ ಸಮೀಕ್ಷೆ ನಿಜವಾದರೆ ಅದು ಮತ್ತೊಮ್ಮೆ ಮೋದಿ ಮ್ಯಾಜಿಕ್‌ ಎಂದೇ ಹೇಳಬಹುದು.
ಪಂಚ ರಾಜ್ಯಗಳ ಚುನಾವಣಾ ಸನ್ನಿವೇಶವೇ ಮೋದಿ ನೇತೃತ್ವದ ಬಿಜೆಪಿಗೆ ಒಂದು ಸವಾಲಾಗಿತ್ತು. ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಪ್ರಧಾನಿ ಮೋದಿಯವರಿಗೆ ಅತಿದೊಡ್ಡ ಸವಾಲು ಸೃಷ್ಟಿಸಿತ್ತು. ಏಕಾಏಕಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ, ಹೊಟೇಲು-ಇತರ ಉದ್ಯಮಗಳಿಗೆ ಕಮರ್ಶಿಯಲ್‌ ಗ್ಯಾಸ್‌ ಪೂರೈಕೆ ಬುಡಮೇಲು, ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ. ಇವೆಲ್ಲಾ ಚುನಾವಣೆಯ ಮುಖ್ಯ ವಿಷಯಗಳಾಗಿದ್ದವು. ಹರಿಯಾಣ, ಮಹಾರಾಷ್ಟ್ರ, ದೆಹಲಿ, ಬಿಹಾರ ಗೆಲುವಿನ ನಂತರ ಅಸ್ಸಾಂ, ಪುದುಚೇರಿ, ಮುಖ್ಯವಾಗಿ ಪಶ್ಚಿಮ ಬಂಗಾಳವನ್ನು ಗೆಲ್ಲಲ್ಲೇ ಬೇಕಾದ ಹಠಕ್ಕೆ ಬಿಜೆಪಿ ಬಿದ್ದಿತ್ತು. ಈ ಗೆಲುವಿಗೆ ಬಿಜೆಪಿ ಅವಲಂಬಿಸಿದ್ದು ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು. ಸಂಕಷ್ಟದ ಕಾಲದಲ್ಲಿ ಮೋದಿ ಸರ್ಕಾರ ನಿರ್ವಹಿಸಿದ ರೀತಿ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಗೃಹ ಬಳಕೆ ಗ್ಯಾಸ್‌ ಪೂರೈಕೆ ವ್ಯತ್ಯಯವಾಗಲು ಮೋದಿ ಸರ್ಕಾರ ಬಿಡಲಿಲ್ಲ. ಬಹುತೇಕ ದೇಶಗಳು ಪೆಟ್ರೋಲ್‌, ಡೀಸೆಲ್‌ ಬೆಲೆ ಶೇಕಡಾ 20ರಿಂದ 30 ರಷ್ಟು ಏರಿಕೆ ಮಾಡಿದರೂ, ಮೋದಿ ಸರ್ಕಾರ ಸಾಧಾರಣ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಸಲಿಲ್ಲ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ನೇರ ಜನರ ಮೇಲೆ ಬೀಳಲು ಮೋದಿ ಸರ್ಕಾರ ಬಿಡಲಿಲ್ಲ.
ಪ.ಬಂಗಾಳ ಗೆದ್ದರೆ ಅತಿ ದೊಡ್ಡ ಸಾಧನೆ:
ದೀದಿ ನಾಡನ್ನು ಗೆಲ್ಲಲು ಬಿಜೆಪಿ ಕಳೆದ 15 ವರ್ಷಗಳಿಂದ ಶಕ್ತಿ ಮೀರಿ ಶ್ರಮಿಸುತ್ತಿದೆ. ಈ ಸಲ, ದೀದಿ ನಾಡಲ್ಲಿ ಮೋದಿ ಹವಾ ಸೃಷ್ಟಿಯಾಗಿದೆ ಎಂದೇ ಎಕ್ಸಿಟ್‌ ಪೋಲ್‌ಗಳು ಹೇಳುತ್ತಿವೆ. ಬಂಗಾಳವನ್ನು ಗೆದ್ದರೆ ಬಿಜೆಪಿಯ ದಿಗ್ವಿಜಯದ ಪಟ್ಟಿಯಲ್ಲೊಂದು ಮೈಲಿಗಲ್ಲು. ಮೋದಿ ಜನಪ್ರಿಯತೆ ಕಡಿಮೆಯಾಗಿಲ್ಲ, ಬದಲಿಗೆ ಇನ್ನಷ್ಟು ಗಟ್ಟಿಯಾಗುತ್ತಿದೆ ಎನ್ನುವುದರ ಸೂಚಕ.
ಇನ್ನು ಪುದುಚೇರಿ, ತಮಿಳುನಾಡು, ಕೇರಳಂನಲ್ಲೂ ಮೋದಿ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿರೋದು ಎಕ್ಸಿಟ್‌ ಪೋಲ್‌ ದತ್ತಾಂಶಗಳು ಹೇಳುತ್ತಿವೆ. ತಮಿಳುನಾಡು, ಕೇರಳಂನಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಗಳು ಇಲ್ಲದೇ ಹೋದರೂ ಕೂಡಾ, ಬಿಜೆಪಿಯ ಮತ ಪ್ರಮಾಣ ಏರಿಕೆಯಾಗಿದೆ ಎನ್ನುತ್ತಿವೆ ಸಮೀಕ್ಷೆಗಳು.
ಹಾಗೇ ನೋಡಿದರೆ, ಜಾಗತಿಕ ಮಟ್ಟದಲ್ಲಿ ಮೋದಿ ಅತಿ ಜನಪ್ರಿಯ ವ್ಯಕ್ತಿ. ಮಾರ್ಚ್‌ 2026ರ ಅವಧಿಯಲ್ಲಿ ಮೋದಿ ಅಪ್ರೂವಲ್‌ ರೇಟ್‌ ಶೇ 70ರಷ್ಟಿತ್ತು. ವಿಶ್ವದ ಜನಪ್ರಿಯ ನಾಯಕರ ಸಾಲಿನಲ್ಲಿ ಪ್ರಧಾನಿ ಮೋದಿಯೇ ಮೊದಲಿಗರಾಗಿದ್ದಾರೆ.

Continue Reading

Latest

ಮತಯಂತ್ರದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌? ಚುನಾವಣಾ ಅಕ್ರಮ ಆರೋಪಿಸಿ ಕೇಸರಿ ಪಡೆ ಆಕ್ರೋಶ

VISTARANEWS.COM


on

ಮತಯಂತ್ರದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌? ಚುನಾವಣಾ ಅಕ್ರಮ ಆರೋಪಿಸಿ ಕೇಸರಿ ಪಡೆ ಆಕ್ರೋಶ

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ದೊಡ್ಡ ವಿವಾದ ಸೃಷ್ಟಿಯಾಗಿದೆ. ಹಲವಾರು ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ (EVM) ಮೇಲಿರುವ ಬಿಜೆಪಿಯ ‘ಕಮಲ’ ಚಿಹ್ನೆಯ ಬಟನ್ ಅನ್ನು ಟೇಪ್‌ನಿಂದ ಮುಚ್ಚಲಾಗಿದೆ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ವಿಡಿಯೋ ಸಹಿತ ಆರೋಪಿಸಿದ್ದಾರೆ. ಇದರಿಂದ ಮತದಾರರಿಗೆ ತೊಂದರೆಯಾಗಿದ್ದು, ಅಂತಹ ಮತಗಟ್ಟೆಗಳಲ್ಲಿ ಕೂಡಲೇ ಮರುಮತದಾನ ನಡೆಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಘಟನೆಯ ಬೆನ್ನಲ್ಲೇ ನಿರ್ಲಕ್ಷ್ಯ ತೋರಿದ ಐವರು ಪೊಲೀಸ್ ಅಧಿಕಾರಿಗಳನ್ನು ಆಯೋಗ ಅಮಾನತುಗೊಳಿಸಿದೆ.

ಇದೇ ವೇಳೆ, ಚುನಾವಣಾ ಅಧಿಕಾರಿ ಅಜಯ್ ಪಾಲ್ ಶರ್ಮಾ ಮತ್ತು ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ನಡುವೆ ಭಾರಿ ಮಾತಿನ ಚಕಮಕಿ ನಡೆದಿದೆ. “ಮತದಾರರಿಗೆ ಬೆದರಿಕೆ ಹಾಕಿದರೆ ಅಳಬೇಡಿ, ಕಠಿಣ ಕ್ರಮ ಜರುಗಿಸುತ್ತೇವೆ” ಎಂದು ಅಧಿಕಾರಿ ಎಚ್ಚರಿಕೆ ನೀಡಿದರೆ, “ನೀವು ಸಿಂಗಮ್ ಆದರೆ ನಾನು ಪುಷ್ಪ, ಯಾವುದಕ್ಕೂ ಬಗ್ಗಲ್ಲ” ಎಂದು ಅಭ್ಯರ್ಥಿ ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರ ಭದ್ರಕೋಟೆಯಾದ ಈ ಕ್ಷೇತ್ರದಲ್ಲಿ ಇಂತಹ ಅಕ್ರಮದ ಆರೋಪ ಕೇಳಿಬಂದಿರುವುದು ಭಾರಿ ಸಂಚಲನ ಮೂಡಿಸಿದೆ.

Continue Reading

Latest

ಹಣ ಪಡೆಯಲು ಬ್ಯಾಂಕಿಗೆ ಸಹೋದರಿಯ ಅಸ್ಥಿಪಂಜರವನ್ನೇ ತಂದ ವ್ಯಕ್ತಿ!

VISTARANEWS.COM


on

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಮಾನವೀಯತೆ ಮರೆತ ಬ್ಯಾಂಕ್ ಸಿಬ್ಬಂದಿಯ ನಡೆಗೆ ಇಡೀ ದೇಶವೇ ಮರುಗುವಂತಾಗಿದೆ. ಮೃತ ಸಹೋದರಿಯ ಹೆಸರಿನಲ್ಲಿದ್ದ ಠೇವಣಿ ಹಣವನ್ನು ಹಿಂಪಡೆಯಲು ಹೋದ ಜೀತು ಮುಂಡಾ ಎಂಬ ಅನಕ್ಷರಸ್ಥ ಬುಡಕಟ್ಟು ವ್ಯಕ್ತಿಗೆ, ಬ್ಯಾಂಕ್ ಸಿಬ್ಬಂದಿ ಪದೇ ಪದೇ “ಖಾತೆದಾರಳನ್ನು ಕರೆತನ್ನಿ” ಎಂದು ಕಿರುಕುಳ ನೀಡಿದ್ದಾರೆ. ಆಕೆ ನಿಧನಳಾಗಿದ್ದಾಳೆ ಎಂದು ಹೇಳಿದರೂ ಕೇಳದ ಸಿಬ್ಬಂದಿಯ ವರ್ತನೆಯಿಂದ ಹತಾಶರಾದ ಜೀತು, ಸಾವಿನ ಪುರಾವೆ ತೋರಿಸಲು ಸಮಾಧಿಯನ್ನು ಅಗೆದು ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕಿಗೆ ಹೊತ್ತು ತಂದಿದ್ದಾರೆ.

ಈ ವಿಚಿತ್ರ ಮತ್ತು ಆಘಾತಕಾರಿ ಘಟನೆಯಿಂದ ಎಚ್ಚೆತ್ತ ಪೊಲೀಸರು ಹಾಗೂ ಸ್ಥಳೀಯ ಆಡಳಿತವು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಜೀತು ಮುಂಡಾ ಅವರ ಸಹೋದರಿಯ ಖಾತೆಯಲ್ಲಿದ್ದ ನಾಮಿನಿ ಕೂಡ ಈಗಾಗಲೇ ಮೃತಪಟ್ಟಿದ್ದು, ಕಾನೂನಿನ ಪ್ರಕಾರ ಜೀತು ಅವರೇ ಈ ಹಣಕ್ಕೆ ಏಕೈಕ ಹಕ್ಕುದಾರರಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮೃತ ವ್ಯಕ್ತಿಯ ಖಾತೆಯಿಂದ ಹಣ ಹಿಂಪಡೆಯುವ ಸರಳ ನಿಯಮಗಳನ್ನು ವಿವರಿಸುವಲ್ಲಿ ವಿಫಲರಾಗಿ, ಒಬ್ಬ ಅಮಾಯಕ ವ್ಯಕ್ತಿಯನ್ನು ಇಂತಹ ದಾರುಣ ಸ್ಥಿತಿಗೆ ತಳ್ಳಿದ್ದು ನಿಜಕ್ಕೂ ದುರದೃಷ್ಟಕರ.

ಸದ್ಯ ಪೊಲೀಸರ ಸಮ್ಮುಖದಲ್ಲಿ ಅಸ್ಥಿಪಂಜರವನ್ನು ಮರು ಅಂತ್ಯಕ್ರಿಯೆ ಮಾಡಲಾಗಿದ್ದು, ಜೀತು ಮುಂಡಾ ಅವರಿಗೆ ಬರಬೇಕಾದ ಹಣವನ್ನು ಶೀಘ್ರವಾಗಿ ವಿತರಿಸುವಂತೆ ಜಿಲ್ಲಾಡಳಿತವು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಘಟನೆಯು ಸರ್ಕಾರಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಮಾನ್ಯ ಜನರಿಗೆ, ಅದರಲ್ಲೂ ವಿಶೇಷವಾಗಿ ಅನಕ್ಷರಸ್ಥರಿಗೆ ಸಿಗಬೇಕಾದ ಕನಿಷ್ಠ ಗೌರವ ಮತ್ತು ಮಾರ್ಗದರ್ಶನದ ಕೊರತೆಯನ್ನು ಎತ್ತಿ ತೋರಿಸಿದೆ.

Continue Reading
Advertisement
Latest1 hour ago

ಪಶ್ಚಿಮ ಬಂಗಾಳದಲ್ಲಿ ಕೇಸರಿ, ತಮಿಳುನಾಡಲ್ಲಿ ದಳಪತಿ, ಕೇರಳಂನಲ್ಲಿ ಕಾಂಗ್ರೆಸ್‌ ದರ್ಬಾರ್‌

Latest2 hours ago

ಕೇರಳಂ: ಯುಡಿಎಫ್‌ ಗೆಲುವಿನ ಹಿಂದಿನ ಏಳು ರಣತಂತ್ರ!

Latest2 hours ago

ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ

Latest3 hours ago

ಬಾಗಲಕೋಟೆಯಲ್ಲಿ ಕಾಂಗ್ರೆಸ್‌‌‌ನ ಉಮೇಶ್‌ ಮೇಟಿ ಭರ್ಜರಿ ಗೆಲುವು

Latest5 hours ago

ದ್ರಾವಿಡ ನಾಡಲ್ಲಿ ʼದಳಪತಿʼ ಯುಗಾರಂಭ

Rakshit Shetty Richard Anthony Produce By Hombale
Live News11 hours ago

ಪಂಚರಾಜ್ಯ ವಿಧಾನಸಭಾ ಚುನಾವಣೆ , ಕರ್ನಾಟಕ ಉಪಚುನಾವಣೆ ಫಲಿತಾಂಶದ ಕ್ಷಣಕ್ಷಣದ ಅಪ್‌ಡೇಟ್‌

Latest1 day ago

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

Latest2 days ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

Latest2 days ago

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

Latest3 days ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌