IPL 2023: What is RCB's record against Punjab? IPL 2023: ಪಂಜಾಬ್​ ವಿರುದ್ಧ ಆರ್​ಸಿಬಿ ದಾಖಲೆ ಹೇಗಿದೆ? - Vistara News IPL 2023: ಪಂಜಾಬ್​ ವಿರುದ್ಧ ಆರ್​ಸಿಬಿ ದಾಖಲೆ ಹೇಗಿದೆ?

ಕ್ರಿಕೆಟ್

IPL 2023: ಪಂಜಾಬ್​ ವಿರುದ್ಧ ಆರ್​ಸಿಬಿ ದಾಖಲೆ ಹೇಗಿದೆ?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಪಂಜಾಬ್​ ಕಿಂಗ್ಸ್​ ತಂಡಗಳು ಗುರುವಾರದ ಮೊದಲ ಐಪಿಎಲ್​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

VISTARANEWS.COM


on

IPL 2023: What is RCB's record against Punjab?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊಹಾಲಿ: ಗುರುವಾರದ ಐಪಿಎಲ್​ನ ಡಬಲ್​ ಹೆಡರ್​ನ ಮೊದಲ​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಪಂಜಾಬ್​ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳಲ್ಲಿ ಯಾರು ಬಲಿಷ್ಠರು ಮತ್ತು ದಾಖಲೆ ಹೇಗಿದೆ ಎಂಬ ಮಾಹಿತಿ ಇಂತಿದೆ.

ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 13 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ತಂಡ 17 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಪಂಜಾಬ್​ ಮುಂದಿದೆ. ಐಪಿಎಲ್​ ಇತಿಹಾಸದಲ್ಲೇ ಆರ್​ಸಿಬಿ ತಂಡ ಪಂಜಾಬ್​ ವಿರುದ್ಧ ಮಾತ್ರವೇ ಇಷ್ಟು ಸಂಖ್ಯೆಯ ಸೋಲು ಕಂಡಿದೆ. ಇನ್ನು ಕಳೆದ ಆವೃತ್ತಿಯಲ್ಲಿ ಇತ್ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಎರಡೂ ಪಂದ್ಯಗಳಲ್ಲಿಯೂ ಪಂಜಾಬ್ ಕಿಂಗ್ಸ್ ಗೆದ್ದು ಬೀಗಿತ್ತು.

ಆರ್​ಸಿಬಿ ತಂಡದ ಟಾಪ್​ ಆರ್ಡರ್​ ಬ್ಯಾಟಿಂಗ್ ಓಕೆ. ಆದರೆ ಮಧ್ಯಕ ಕ್ರಮಾಂದಲ್ಲಿ ಯಾವ ಆಟಗಾರನು ತಂಡಕ್ಕೆ ಆಸರೆಯಾಗುತ್ತಿಲ್ಲ, ಜತೆಗೆ ಮೊಹಮ್ಮದ್​ ಸಿರಾಜ್​ ಹೊರತುಪಡಿಸಿ ಉಳಿದ ಎಲ್ಲ ಬೌಲರ್​ಗಳು ದುಬಾರಿಯಾಗುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಯದೇ ಹೋದರೆ ಆರ್​ಸಿಬಿಗೆ ಗೆಲುವು ಕಷ್ಟಸಾಧ್ಯ. ಪಂಜಾಬ್​ ಕಿಂಗ್ಸ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಬಲಿಷ್ಠವಾಗಿದೆ.

ಸಂಭಾವ್ಯ ತಂಡಗಳು

ಪಂಜಾಬ್​ ಕಿಂಗ್​​: ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್(ನಾಯಕ), ಮ್ಯಾಥ್ಯೂ ಶಾರ್ಟ್, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್​, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಅರ್ಶ್‌ದೀಪ್ ಸಿಂಗ್, ಸಿಕಂದರ್ ರಜಾ, ಕಗಿಸೋ ರಬಾಡ.

ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯೇಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ / ಮೈಕಲ್ ಬ್ರೆಸ್‌ವೆಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Rajat Patidar : ರಜತ್ ಪಾಟೀದಾರ್​ ಮುಂದಿನ ಆವೃತ್ತಿಗೆ ಆರ್​ಸಿಬಿಯಲ್ಲೇ ಇರಬೇಕು; ಮಾಜಿ ಆಟಗಾರನ ಸಲಹೆ

Rajat Patidar : ರಜತ್ ಪಾಟಿದಾರ್ ಅವರ ಪ್ರತಿಭೆಯ ಬಗ್ಗೆ ಯಾವುದೇ ಸಂದೇಹವಿಲ್ಲ ಮತ್ತು ಐಪಿಎಲ್ 2024 ರಲ್ಲಿ ಬ್ಯಾಟ್​ನೊಂದಿಗೆ ಅವರ ತಡವಾಗಿ ಬೆಳಕಿಗೆ ಬಂದಿದ್ದಾರೆ. ಅವರನ್ನು ಆರ್​​ಸಿಬಿಯ ಮೌಲ್ಯಯುತ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಯ್ಕೆಯನ್ನಾಗಿ ಮಾಡುತ್ತದೆ ಎಂದು ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ.

VISTARANEWS.COM


on

Rajat Patidar
Koo

ಬೆಂಗಳೂರು: ರಜತ್ ಪಾಟೀದಾರ್ (Rajat Patidar) ಆರ್​ಸಿಬಿ ಪರ ಕಳೆದ ಕೆಲವು ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ. ಅವರ ಅರ್ಧ ಶತಕಗಳು ತಂಡವನ್ನು ನಿರಂತರವಾಗಿ ಗೆಲ್ಲಿಸುತ್ತಿವೆ. ಆದರೆ, ಮುಂದಿನ ವರ್ಷ ನಡೆಯುವ ಐಪಿಎಲ್​ಗೆ ಮೊದಲು ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಕೆಲವೊಂದಿಷ್ಟು ಆಟಗಾರರನ್ನು ಮಾತ್ರ ಉಳಿಸಿ ಉಳಿದವರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ವೇಳೆ ಪಾಟೀದಾರ್ ಕೈಬಿಡಬಾರದು ಎಂಬುದಾಗಿ ನ್ಯೂಜಿಲೆಂಡ್​ನ ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್ ಸಲಹೆ ಕೊಟ್ಟಿದ್ದಾರೆ. ಮುಂದಿನ ಋತುವಿಗೆ ಎರಡು ತಿಂಗಳ ಮೊದಲು ನಡೆಯಲಿರುವ ಮೆಗಾ ಹರಾಜಿಗೆ ಮುಂಚಿತವಾಗಿ ರಜತ್ ಪಾಟಿದಾರ್ ಅವರನ್ನು ಬಿಡುಗಡೆ ಮಾಡುವ ಅಪಾಯ ತೆಗೆದುಕೊಳ್ಳಬೇಡಿ ಎಂದು ಸ್ಟೈರಿಸ್ ಬೆಂಗಳೂರು ಮೂಲದ ಫ್ರಾಂಚೈಸಿಗೆ ಹೇಳಿದ್ದಾರೆ.

ರಜತ್ ಪಾಟಿದಾರ್ ಅವರ ಪ್ರತಿಭೆಯ ಬಗ್ಗೆ ಯಾವುದೇ ಸಂದೇಹವಿಲ್ಲ ಮತ್ತು ಐಪಿಎಲ್ 2024 ರಲ್ಲಿ ಬ್ಯಾಟ್​ನೊಂದಿಗೆ ಅವರ ತಡವಾಗಿ ಬೆಳಕಿಗೆ ಬಂದಿದ್ದಾರೆ. ಅವರನ್ನು ಆರ್​​ಸಿಬಿಯ ಮೌಲ್ಯಯುತ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಯ್ಕೆಯನ್ನಾಗಿ ಮಾಡುತ್ತದೆ ಎಂದು ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ. ಈ ಋತುವಿನಲ್ಲಿ ಆರ್​ಸಿಬಿಯ ಗೆಲುವಿನಲ್ಲಿ ಪಾಟೀದಾರ್ ನಿರ್ಣಾಯಕ ಭಾಗವಾಗಿದ್ದಾರೆ, ಏಕೆಂದರೆ ಮಹಾರಾಷ್ಟ್ರದ ಬ್ಯಾಟರ್​​ ಭರ್ಜರಿ ಹಿಟ್ಟಿಂಗ್ ಫಾರ್ಮ್​ನಲ್ಲಿದ್ದಾರೆ.

“ರಜತ್ ಪಾಟಿದಾರ್ ಅವರು ಅಗಾಧವಾಗಿ ಬೆಳೆದಿದ್ದಾರೆ. ಹೇಗಾದರೂ ಅವನಲ್ಲಿರುವ ಪ್ರತಿಭೆ ನಮಗೆ ತಿಳಿದಿತ್ತು. ಆದರೆ, ನಾನು ಆರ್​ಸಿಬಿಯ ಉಸ್ತುವಾರಿ ವಹಿಸಿದ್ದರೆ ಮತ್ತು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ನನಗೆ ಅವಕಾಶ ನೀಡಿದ್ದರೆ ಅವರನ್ನು ಉಳಿಸಿಕೊಳ್ಳುವೆ ಎಂದು ಎಂದು ಸ್ಟೈರಿಸ್ ಗುರುವಾರ ಜಿಯೋ ಸಿನೆಮಾಗೆ ತಿಳಿಸಿದರು.

“ರಜತ್ ಪಾಟಿದಾರ್ ಈ ನಾಲ್ವರಲ್ಲಿ ಒಬ್ಬರು. ಅವನ ಸುತ್ತಲಿನ ದೊಡ್ಡ ಹೆಸರುಗಳಲ್ಲಿ ಒಂದಾದ ಎಲ್ಲಾ ದೊಡ್ಡ ಹೆಸರುಗಳ ಬಗ್ಗೆ ಕೇಳಿ ಬರುತ್ತವೆ. ಆದರೆ, ನಾನು ಉಳಿಸಿಕೊಳ್ಳುವ ಹೆಸರುಗಳಲ್ಲಿ ಅವರು ಒಬ್ಬರು. ಅವರನ್ನು ಬಿಟ್ಟುಕೊಟ್ಟು ಹಿಂದಕ್ಕೆ ತಳ್ಳುವ ಅಪಾಯ ಇಲ್ಲ. ಅವರು ಪ್ರತಿ ವರ್ಷ ಉತ್ತಮವಾಗಿ ಆಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ, “ಎಂದು ಸ್ಟೈರಿಸ್​ ಹೇಳಿದ್ದಾರೆ.

2024 ರಲ್ಲಿ ಸ್ಪಿನ್-ಸ್ಲೇಯರ್

ಆರ್​ಸಿಬಿ ಹಲವು ವರ್ಷಗಳಿಂದ ರಜತ್ ಪಾಟಿದಾರ್ ಮೇಲೆ ಸಾಕಷ್ಟು ನಂಬಿಕೆಯನ್ನು ತೋರಿಸಿದೆ. ಐಪಿಎಲ್ 2022 ರಲ್ಲಿ ಶತಕ ಸೇರಿದಂತೆ 333 ರನ್ ಗಳಿಸುವ ಮೂಲಕ 30 ವರ್ಷದ ರಜತ್​ ಐಪಿಎಲ್​​ನಲ್ಲಿ ಹೆಸರು ಮಾಡಿದ್ದಾರೆ. ಆದಾಗ್ಯೂ, ಗಾಯದಿಂದಾಗಿ ಅವರು ಐಪಿಎಲ್ 2023 ಋತುವನ್ನು ಕೊನೆಯಲ್ಲಿ ತಪ್ಪಿಸಿಕೊಂಡರು. ಆದರೆ ಅವರನ್ನು 2024 ರ ಋತುವಿಗೆ ಫ್ರಾಂಚೈಸಿ ಉಳಿಸಿಕೊಂಡಿದೆ.

ಇದನ್ನೂ ಓದಿ: IPL 2024: ಸಿಎಸ್​​ಕೆ ಮಾಜಿ ಆಟಗಾರನಾಗಿದ್ದರೂ ಈ ಸಲ ಕೊಹ್ಲಿ ಗೆಲ್ಲಲಿ ಎಂದ ಸುರೇಶ್​ ರೈನಾ!

ವರ್ಷದ ಆರಂಭದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಮಿಂಚಲು ಹೆಣಗಾಡುತ್ತಿದ್ದ ಪಾಟೀದಾರ್, ಐಪಿಎಲ್ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅವರು ತಮ್ಮ ಕೊನೆಯ ಐದು ಇನ್ನಿಂಗ್ಸ್​ಗಳಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ, ಇದು ಆರ್​ಸಿಬಿ ಸತತ 5 ಪಂದ್ಯಗಳ ಗೆಲುವಿನ ಓಟದ ನಿರ್ಣಾಯಕ ಭಾಗವಾಗಿದೆ.

ಗ್ಲೆನ್ ಮ್ಯಾಕ್ಸ್ವೆಲ್ ಹೆಣಗಾಡುತ್ತಿರುವ ಹಾಳಿ ಋತುವಿನಲ್ಲಿ ರಜತ್ ಸ್ಪಿನ್ ವಿರುದ್ಧ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆರ್​​ಸಿಬಿ ಪರ ಮಧ್ಯಮ ಓವರ್​ಗಳಲ್ಲಿ ಪ್ರಭಾವಶಾಲಿ ಆಟಗಾರ ಎಂದು ಸಾಬೀತುಪಡಿಸಿದ್ದಾರೆ. ಪಾಟಿದಾರ್ ಐಪಿಎಲ್ 2024 ರಲ್ಲಿ ಸ್ಪಿನ್ ವಿರುದ್ಧ 20 ಸಿಕ್ಸರ್​ಗಳನ್ನು ಗಳಿಸಿದ್ದಾರೆ ಮತ್ತು ಸ್ಪಿನ್ನರ್​ಗಳ ವಿರುದ್ಧ 224.69 ರನ್ ಗಳಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಐಪಿಎಲ್ 2024 ರ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ರಜತ್ ಪಾಟಿದಾರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಬೇಕೆಂದು ಆರ್​ಸಿಬಿ ಬಯಸಿದೆ. ಪ್ಲೇಆಫ್​ ಪ್ರವೇಶಿಸಲು ಆರ್​ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವಿಗಿಂತ ಕಡಿಮೆಯಿಲ್ಲ.

Continue Reading

ಕ್ರಿಕೆಟ್

IPL 2024: ಸಿಎಸ್​​ಕೆ ಮಾಜಿ ಆಟಗಾರನಾಗಿದ್ದರೂ ಈ ಸಲ ಕೊಹ್ಲಿ ಗೆಲ್ಲಲಿ ಎಂದ ಸುರೇಶ್​ ರೈನಾ!

IPL 2024 : ಆರ್​ಸಿಬಿ ಮತ್ತು ಸಿಎಸ್ಕೆ ನಡುವಿನ ಮಾಡು ಇಲ್ಲವೇ ಮಡಿ ಐಪಿಎಲ್ 2024 ರ ಪ್ರಮುಖ ಪಂದ್ಯಕ್ಕೆ ಮುಂಚಿತವಾಗಿ ರೈನಾ ಕೊಹ್ಲಿಗೆ ಶುಭ ಹಾರೈಸಿದ್ದಾರೆ. ಎರಡೂ ತಂಡಗಳ ಅರ್ಹತಾ ಅವಕಾಶಗಳು ಅಪಾಯದಲ್ಲಿರುವುದರಿಂದ ಎರಡೂ ಫ್ರಾಂಚೈಸಿಗಳ ಅಭಿಮಾನಿಗಳು ಉಸಿರು ಬಿಗಿಹಿಡಿದು ಪಂದ್ಯವನ್ನು ವೀಕ್ಷಿಸಲಿದ್ದಾರೆ. ಫಲಿತಾಂಶವೂ ಅಷ್ಟೇ ರೋಮಾಂಚಕಾರಿಯಾಗಿರಲಿದೆ.

VISTARANEWS.COM


on

IPL 2024
Koo

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೇ 18ರಂದು ನಡೆಯಲಿರುವ ಸಿಎಸ್​ಕೆ ಹಾಗೂ ಆರ್​ಸಿಬಿ ನಡುವಿನ ಐಪಿಎಲ್​ 17ನೇ ಆವೃತ್ತಿಯ (IPL 2024) ಪಂದ್ಯದಲ್ಲಿ ವಿರಾಟ್​ ಕೊಹ್ಲಿಗೆ (Virat kohli) ಜಯವಾಗಲಿದೆ ಎಂದು ಚೆನ್ನೈ ತಂಡ ಮಾಜಿ ಆಟಗಾರ ಸುರೇಶ್​ ರೈನಾ (Suresh Raina) ಶುಭ ಹಾರೈಸಿದ್ದಾರೆ. ಆರ್​ಸಿಬಿ ಮತ್ತು ಸಿಎಸ್ಕೆ ನಡುವಿನ ಮಾಡು ಇಲ್ಲವೇ ಮಡಿ ಐಪಿಎಲ್ 2024 ರ ಪ್ರಮುಖ ಪಂದ್ಯಕ್ಕೆ ಮುಂಚಿತವಾಗಿ ರೈನಾ ಕೊಹ್ಲಿಗೆ ಶುಭ ಹಾರೈಸಿದ್ದಾರೆ. ಎರಡೂ ತಂಡಗಳ ಅರ್ಹತಾ ಅವಕಾಶಗಳು ಅಪಾಯದಲ್ಲಿರುವುದರಿಂದ ಎರಡೂ ಫ್ರಾಂಚೈಸಿಗಳ ಅಭಿಮಾನಿಗಳು ಉಸಿರು ಬಿಗಿಹಿಡಿದು ಪಂದ್ಯವನ್ನು ವೀಕ್ಷಿಸಲಿದ್ದಾರೆ. ಫಲಿತಾಂಶವೂ ಅಷ್ಟೇ ರೋಮಾಂಚಕಾರಿಯಾಗಿರಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ತರಬೇತಿ ಮಾಡುತ್ತಿದ್ದ ಕೊಹ್ಲಿ ಅವರೊಂದಿಗಿನ ಚಿತ್ರವನ್ನು ರೈನಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಐಪಿಎಲ್ 2024 ರ ಪ್ರಸಾರ ಕರ್ತವ್ಯಗಳಿಗಾಗಿ ರೈನಾ ಕ್ರೀಡಾಂಗಣದಲ್ಲಿ ಹಾಜರಿದ್ದರು ಮತ್ತು ಫಾರ್ಮಲ್​ ಉಡುಪು ಧರಿಸಿದ್ದರು. ರೈನಾ ತಮ್ಮ ‘ಸಹೋದರ’ ಕೊಹ್ಲಿಯನ್ನು ಭೇಟಿಯಾದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

“ನಿನ್ನನ್ನು ನೋಡಿದ್ದಕ್ಕೆ ಸಂತೋಷವಾಗಿದೆ, @imVkohli ಸಹೋದರ. ಯಾವಾಗಲೂ ಶುಭ ಹಾರೈಕೆಗಳು!” ರೈನಾ ಅವರ ಶೀರ್ಷಿಕೆ ಹೀಗಿತ್ತು.

ಬ್ಲಾಕ್​ಬಸ್ಟರರ್​ ರಿವರ್ಸ್ ಪಂದ್ಯದಲ್ಲಿ ಕೊಹ್ಲಿ ರೈನಾ ಅವರ ಮಾಜಿ ಫ್ರಾಂಚೈಸಿ ಸಿಎಸ್​ಕೆ ವಿರುದ್ಧ ಸೆಣಸಲಿದ್ದಾರೆ. ಇದೆಲ್ಲವೂ ಎಲ್ಲಿಂದ ಪ್ರಾರಂಭವಾಯಿತು ಎಂಬುದು ಕುತೂಹಲಕರ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ಭರ್ಜರಿ ಗೆಲುವು ಸಾಧಿಸಿದ ನಂತರ, ಎರಡು ತಂಡಗಳು ಪ್ಲೇಆಫ್ ಸ್ಥಾನಕ್ಕಾಗಿ ಹೋರಾಡಲಿವೆ.

ಇದನ್ನೂ ಓದಿ: Nitish Reddy : ಐಪಿಎಲ್​ನಲ್ಲಿ ಮಿಂಚಿದ ಈ ಆಟಗಾರನಿಗೆ ಎಪಿಎಲ್​ನಲ್ಲಿ ಸಿಕ್ಕಿತು ಭರ್ಜರಿ ದುಡ್ಡು

ಸಿಎಸ್ಕೆ ಸೋತರೆ ಇದು ಎಂಎಸ್ ಧೋನಿಯ ಕೊನೆಯ ಪಂದ್ಯವಾಗಬಹುದು. ಆದಾಗ್ಯೂ, ಸೂಪರ್ ಕಿಂಗ್ಸ್ ತಮ್ಮ ಪ್ರಭಾವಶಾಲಿ ಹೆಡ್-ಟು-ಹೆಡ್ ದಾಖಲೆಯಿಂದಾಗಿ ಸಾಕಷ್ಟು ಆತ್ಮವಿಶ್ವಾಸದೊಂದಿಗೆ ಪಂದ್ಯಕ್ಕೆ ಇಳಿಯಲಿದೆ. ರೆಡ್ ಆರ್ಮಿ ವಿರುದ್ಧ ಧೋನಿ 35 ಪಂದ್ಯಗಳಲ್ಲಿ 140.77 ಸ್ಟ್ರೈಕ್ ರೇಟ್ನಲ್ಲಿ 839 ರನ್ ಗಳಿಸಿದ್ದಾರೆ. ಸಿಎಸ್ಕೆ ವಿರುದ್ಧ 32 ಪಂದ್ಯಗಳನ್ನಾಡಿರುವ ಕೊಹ್ಲಿ 1006 ರನ್ ಗಳಿಸಿದ್ದಾರೆ.

ಮಳೆ ಆಟವನ್ನು ಹಾಳುಮಾಡುತ್ತದೆಯೇ?

ಬದಲಾದ ಹವಾಮಾನವು ಆರ್​ಸಿಬಿ ಅಭಿಮಾನಿಗಳ ಭರವಸೆ ಹಾಳುಮಾಡುವ ಸಾಧ್ಯತೆಗಳಿವೆ. ನಗರದಲ್ಲಿ ದಿನವಿಡೀ ಭಾರಿ ಮಳೆಯಾಗುವ ನಿರೀಕ್ಷೆಯಿದೆ. weather.com ಪ್ರಕಾರ, ಮೇ 18 ರಂದು ಹಗಲಿನಲ್ಲಿ 73% ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ, ಇದು ಸಂಜೆ 6 ರ ಸುಮಾರಿಗೆ 80% ಕ್ಕೆ ಏರುವ ನಿರೀಕ್ಷೆಯಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇದು ಪಂದ್ಯ ಪೂರ್ಣಗೊಳ್ಳುವ ಸಾಧ್ಯತೆಗಳಿಗೆ ಮತ್ತಷ್ಟು ಅಡ್ಡಿಯಾಗಿದೆ. ಹವಾಮಾನ ಪರಿಸ್ಥಿತಿಗಳು ಆರ್​ಸಿಬಿಗೆ ಅನುಕೂಲಕರವಾಗಿಲ್ಲದಿದ್ದರೂ, ಮೈದಾನದ ಒಳಚರಂಡಿ ವ್ಯವಸ್ಥೆಯು ಮಳೆ ನಿಂತ 20 ನಿಮಿಷದಲ್ಲಿ ಪಂದ್ಯ ಆರಂಭಕ್ಕೆ ಅನುವು ಮಾಡಿಕೊಡುತ್ತದೆ.

Continue Reading

Latest

Nitish Reddy : ಐಪಿಎಲ್​ನಲ್ಲಿ ಮಿಂಚಿದ ಈ ಆಟಗಾರನಿಗೆ ಎಪಿಎಲ್​ನಲ್ಲಿ ಸಿಕ್ಕಿತು ಭರ್ಜರಿ ದುಡ್ಡು

Nitish Reddy : ಯುವ ಆಟಗಾರನ ಪ್ರತಿಕ್ರಿಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನಿತೀಶ್ ಕುಮಾರ್ ರೆಡ್ಡಿ ಅವರನ್ನು ಎಸ್​ಆರ್​ಎಚ್​ 20 ಲಕ್ಷ ರೂ.ಗೆ ಖರೀದಿಸಿತ್ತು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಆರು ತಂಡಗಳ ಪಂದ್ಯಾವಳಿಯಾದ ಆಂಧ್ರ ಪ್ರೀಮಿಯರ್ ಲೀಗ್​​ನಲ್ಲಿ ದಾಖಲೆಯ ಬಿಡ್​ನೊಂದಿಗೆ ಅವರು ಹೆಚ್ಚುಕಡಿಮೆ ಅಷ್ಟೇ ಮೊತ್ತ ಗಳಿಸಿದ್ದಾರೆ.

VISTARANEWS.COM


on

Nitish Kumar Reddy
Koo

ನವದೆಹಲಿ: ಆಂಧ್ರ ಪ್ರೀಮಿಯರ್ ಲೀಗ್ (APL) ನಲ್ಲಿ ಸನ್​ರೈಸರ್ಸ್​ ಹೈದರಬಾದ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ (Nitish Reddy) ಭರ್ಜರಿ ಮೊತ್ತವನ್ನು ಪಡೆದಿದ್ದಾರೆ. ಈ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ನಿತೀಶ್​ ಈಗ ಈ ಟಿ20 ಲೀಗ್​ನ ಹರಾಜಿನ ಮೂರು ಆವೃತ್ತಿಗಳ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದ ಹಾಗೆ 20 ವರ್ಷದ ಆಟಗಾರನನ್ನು ಗೋದಾವರಿ ಟೈಟಾನ್ಸ್ ತಂಡ 15.6 ಲಕ್ಷ ರೂ.ಗೆ ಖರೀದಿಸಿದೆ. ಹೈದರಾಬಾದ್​​ನ ಹೋಟೆಲ್ ಕೊಠಡಿಯಿಂದ ಎಪಿಎಲ್ 2024 ಹರಾಜನ್ನು ವೀಕ್ಷಿಸುತ್ತಿದ್ದ ನಿತೀಶ್​​ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್​ನಲ್ಲಿ (IPL 2024) ಅವರು ಎಸ್​ಆರ್​ಎಚ್ ತಂಡದ ಆಟಗಾರ.

ನಿತೀಶ್ ಕುಮಾರ್ ರೆಡ್ಡಿ ಅವರು ಹೋಟೆಲ್ ಕೋಣೆಯಲ್ಲಿ ಸಂಭ್ರಮಿಸುತ್ತಿರುವುದನ್ನು ಅವರ ಸಹ ಆಟಗಾರರೊಬ್ಬರು ಚಿತ್ರೀಕರಿಸಿದ್ದಾರೆ. ಯುವ ಆಟಗಾರನ ಪ್ರತಿಕ್ರಿಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನಿತೀಶ್ ಕುಮಾರ್ ರೆಡ್ಡಿ ಅವರನ್ನು ಎಸ್​ಆರ್​ಎಚ್​ 20 ಲಕ್ಷ ರೂ.ಗೆ ಖರೀದಿಸಿತ್ತು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಆರು ತಂಡಗಳ ಪಂದ್ಯಾವಳಿಯಾದ ಆಂಧ್ರ ಪ್ರೀಮಿಯರ್ ಲೀಗ್​​ನಲ್ಲಿ ದಾಖಲೆಯ ಬಿಡ್​ನೊಂದಿಗೆ ಅವರು ಹೆಚ್ಚುಕಡಿಮೆ ಅಷ್ಟೇ ಮೊತ್ತ ಗಳಿಸಿದ್ದಾರೆ.

ಐಪಿಎಲ್ 2024 ರಲ್ಲಿ ಸನ್​ರೈಸರ್ಸ್​ ಜೊತೆಗಿನ ನಿತೀಶ್ ಅವರ ಯಶಸ್ಸು ಗುರುವಾರ ನಡೆದ ಆಂಧ್ರ ಟಿ 20 ಲೀಗ್ ಹರಾಜಿನಲ್ಲಿ ಪ್ರತಿಫಲನಗೊಂಡಿತು. ಗೋದಾವರಿ ಟೈಟಾನ್ಸ್ ತಂಡದ ಖಜಾನೆ ಒಡೆದ ಅವರು ಗರಿಷ್ಠ ಮೊತ್ತವನ್ನು ಪಡೆದರು.

ಸನ್ರೈಸರ್ಸ್​ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ನಿತೀಶ್ 239 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅವರರನ್ನು ತಂಡ ಆಧಾರಸ್ತಂಭವೆಂದು ಹೇಳಲಾಗಿದೆ. ಮಯಾಂಕ್ ಅಗರ್ವಾಲ್ ಗಾಯದ ನಂತರ ಅವಕಾಶ ಪಡೆದ ನಿತೀಶ್, 150 ಕ್ಕೂ ಹೆಚ್ಚು ರನ್ ಗಳಿಸುವ ಜತೆಗೆ 3 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: Sunil Chhetri: ಭಾರತದ ಫುಟ್ಬಾಲ್‌ ಮಾಂತ್ರಿಕ ಸುನೀಲ್ ಚೆಟ್ರಿ ಕುರಿತ 8 ಕುತೂಹಲಕರ ಸಂಗತಿಗಳಿವು!

19 ವರ್ಷದೊಳಗಿನವರ ಮಟ್ಟದಲ್ಲಿ ಭಾರತ ಬಿ ಪರ ಆಡಿದ ನಿತೀಶ್ ಕುಮಾರ್ ರೆಡ್ಡಿ 17 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 566 ರನ್ ಮತ್ತು 22 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, 36.63 ಸರಾಸರಿಯಲ್ಲಿ 403 ರನ್ ಗಳಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ ಅವರ ಪ್ರದರ್ಶನವು ನಿತೀಶ್ ಅವರ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ. ಅಲ್ಲಿ ಅವರು ಪ್ರಾಥಮಿಕವಾಗಿ ಬೌಲಿಂಗ್ ಆಲ್ರೌಂಡರ್ ಆಗಿ ಆಡಿದರು ಮತ್ತು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಗಮನಾರ್ಹ ಕೊಡುಗೆ ನೀಡಿದರು. 2023 ರ ಋತುವಿನಲ್ಲಿ, ನಿತೀಶ್ 18.76 ಸರಾಸರಿಯಲ್ಲಿ 25 ವಿಕೆಟ್​​ಗಳನ್ನು ಪಡೆದರು ಮತ್ತು 36.60 ಸರಾಸರಿಯಲ್ಲಿ 366 ರನ್ ಗಳಿಸಿದ್ದಾರೆ.

Continue Reading

ಕ್ರಿಕೆಟ್

Viral Video: ವಿಚ್ಛೇದನ ಕೇಸ್​ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ ಎಂದ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ

Viral Video: ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 30 ಪ್ರತಿಶತದಷ್ಟು ಹೆಚ್ಚಳವಾಗಿದೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದೇ ಇದಕ್ಕೆ ಪ್ರಮುಖ ಕಾರಣ ಎಂದು ಪಾಕಿಸ್ತಾನ ಮಾಜಿ ನಾಯಕ ಸಯೀದ್ ಅನ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

VISTARANEWS.COM


on

viral video
Koo

ಕರಾಚಿ: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಕೇಸ್​ ಹೆಚ್ಚಳವಾಗಲು(Rising divorce rate) ಪ್ರಮುಖ ಕಾರಣ ಏನೆಂಬುದನ್ನು ಪಾಕಿಸ್ತಾನ ಮಾಜಿ ಆಟಗಾರ ಮತ್ತು ನಾಯಕ ಸಯೀದ್ ಅನ್ವರ್(Saeed Anwar) ವಿವರಿಸಿದ್ದಾರೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದೇ ವಿಚ್ಛೇದನ ಹೆಚ್ಚಳಕ್ಕೆ ಕಾರಣ ಎಂದು ಹೇಳಿದ್ದಾರೆ. ಅವರು ನೀಡಿರುವ ಈ ಹೇಳಿಕೆ ಇದೀಗ ಭಾರೀ ವಿವಾದ ಮತ್ತು ವೈರಲ್(Viral Video) ಆಗಿದೆ.

ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 30 ಪ್ರತಿಶತದಷ್ಟು ಹೆಚ್ಚಳವಾಗಿದೆ. ಮಹಿಳೆಯರ ದುಡಿಯಲು ಆರಂಭಿಸಿದ ಕಾರಣ ಅವರು ಕೂಡ ಆರ್ಥಿಕವಾಗಿ ಸಧೃಡವಾಗಿದ್ದಾರೆ. ಹೀಗಾಗಿ ಅವರು ಮನೆಯ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾರೆ. ಬೈಗುಳ ಕೇಳಿ ನರಕದಲ್ಲಿ ಜೀವನ ಮಾಡುವುದಕ್ಕಿಂತ, ನಾನೇ ಸಂಪಾದಿಸಬಲ್ಲೆ. ನಾನು ಸ್ವಂತವಾಗಿ ಸಂಸಾರ ನಡೆಸಬಲ್ಲೆ ಎಂಬ ಬಲವಾದ ನಂಬಿಕೆ ಬರುತ್ತದೆ. ಇದೇ ಕಾರಣದಿಂದ ವಿಚ್ಛೇದನ ಪ್ರಮಾಣ ಹೆಚ್ಚಾಗಿದೆ ಎಂದು ಅನ್ವರ್ ಹೇಳಿದರು.

“1.05 ನಿಮಿಷಗಳ ವಿಡಿಯೊದಲ್ಲಿ ಮಾತನಾಡಿದ ಅನ್ವರ್, ನಾನು ಜಗತ್ತಿನ ಹಲವು ರಾಷ್ಟ್ರಗಳಿಗೆ ಪ್ರಯಾಣಿಸಿದ್ದೇನೆ. ನಾನು ಈಗಷ್ಟೇ ಆಸ್ಟ್ರೇಲಿಯಾ, ಯುರೋಪ್‍ನಿಂದ ಹಿಂತಿರುಗುತ್ತಿದ್ದೇನೆ. ಅಲ್ಲಿ ಯುವಕರು ನರಳುತ್ತಿದ್ದಾರೆ. ಕುಟುಂಬಗಳು ಕೆಟ್ಟ ಸ್ಥಿತಿಯಲ್ಲಿವೆ. ದಂಪತಿಗಳು ಜಗಳವಾಡುತ್ತಿದ್ದಾರೆ. ವ್ಯವಹಾರದ ಸ್ಥಿತಿ ತುಂಬಾ ಕೆಟ್ಟದಾಗಿದೆ. ನ್ಯೂಜಿಲ್ಯಾಂಡ್​ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆಟಗಾರ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅನ್ವರ್ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಅನ್ವರ್ ಹೇಳಿಕೆಗೆ ಅನೇಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಮೂಲಭೂತವಾಗಿ ನೀವು ಮಹಿಳೆಯರನ್ನು ಗುಲಾಮರನ್ನಾಗಿ ಮಾಡಬೇಕೆಂದು ಹೇಳುತ್ತಿದ್ದೀರಿ. ಮಹಿಳೆಯರಿಗೂ ರೆಕ್ಕೆಗಳನ್ನು ಬಿಚ್ಚಿ ಹಾರಾಡುವ ಅಕಾಶ ನೀಡಬೇಕು. ಆದರೆ ನೀವು ಅವರನ್ನು ಸಾಕುಪ್ರಾಣಿಗಳಂತೆ ಪುರುಷರಿಗೆ ಸೇವೆ ಸಲ್ಲಿಸಬೇಕೆಂಬ ಮನಸ್ಥಿತಿ ಹೊಂದಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

“ಮಹಿಳೆಯರು ಕೆಲಸ ಮಾಡಲು ಮತ್ತು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಸುರಕ್ಷಿತ ವಾತಾವರಣವನ್ನು ಕೇಳುವ ಬದಲು, ಅವರು ಮಹಿಳೆಯರನ್ನು ಮನೆಯಲ್ಲಿಯೇ ಇರಲು ಕೇಳುತ್ತಿದ್ದಾರೆ. ಸಿದ್ಧಾಂತದಲ್ಲಿ ಏನೋ ತಪ್ಪಾಗಿದೆ” ಎಂದು ಮತ್ತೊಬ್ಬ ಮಹಿಳೆ ಕಮೆಂಟ್​ ಮಾಡಿದ್ದಾರೆ. “ ಜಗತ್ತು ಮತಾಂತರಗೊಳ್ಳಬೇಕೆಂದು ಬಯಸುವ ನಿಮ್ಮಿಂದ ಇನ್ನೇನು ನಿರೀಕ್ಷಿಸಬಹುದು. “ಇದು ಮಹಿಳೆಯರಿಗೆ ತುಂಬಾ ಅವಮಾನಕರವಾಗಿದೆ” ಹೀಗೆ ಹಲವು ಮಹಿಳೇಯರು ಅನ್ವರ್​ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading
Advertisement
Shah Rukh Khan
ದೇಶ19 mins ago

ಶಾರುಖ್‌ ಖಾನ್‌ ಜಾಹೀರಾತು ನೋಡಿ ಗುಟ್ಕಾ ತಿಂದ ಮಕ್ಕಳು; ನಟ ಸಾಯಲ್ಲ, ನಾವು ಸಾಯ್ತೀವಾ ಅಂದರು!

Rajat Patidar
ಪ್ರಮುಖ ಸುದ್ದಿ27 mins ago

Rajat Patidar : ರಜತ್ ಪಾಟೀದಾರ್​ ಮುಂದಿನ ಆವೃತ್ತಿಗೆ ಆರ್​ಸಿಬಿಯಲ್ಲೇ ಇರಬೇಕು; ಮಾಜಿ ಆಟಗಾರನ ಸಲಹೆ

ASI who was injured in a road accident died in kunigal
ಕರ್ನಾಟಕ37 mins ago

Road Accident: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಎಎಸ್‌ಐ ಚಿಕಿತ್ಸೆ ಫಲಿಸದೆ ಸಾವು

IPL 2024
ಕ್ರಿಕೆಟ್47 mins ago

IPL 2024: ಸಿಎಸ್​​ಕೆ ಮಾಜಿ ಆಟಗಾರನಾಗಿದ್ದರೂ ಈ ಸಲ ಕೊಹ್ಲಿ ಗೆಲ್ಲಲಿ ಎಂದ ಸುರೇಶ್​ ರೈನಾ!

Prajwal Revanna Case KR Nagar victim kidnapping case Satish sent to judicial custody
ಕ್ರೈಂ49 mins ago

Prajwal Revanna Case: ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್;‌ 2, 6ನೇ ಆರೋಪಿಗಿಲ್ಲ ಬಿಡುಗಡೆ ಭಾಗ್ಯ! ಸತೀಶ್‌ಗೆ ನ್ಯಾಯಾಂಗ ಬಂಧನ

Pay attention to childrens safety during holidays Minister Lakshmi Hebbalkar appeals to parents
ಬೆಳಗಾವಿ55 mins ago

Lakshmi Hebbalkar: ರಜೆಯಲ್ಲಿ ಮಕ್ಕಳ ಸುರಕ್ಷತೆಗೆ ಗಮನ ನೀಡಿ; ಪಾಲಕರಿಗೆ ಹೆಬ್ಬಾಳ್ಕರ್ ಮನವಿ

Four Digit PIN
ತಂತ್ರಜ್ಞಾನ1 hour ago

Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!

Nitish Kumar Reddy
Latest1 hour ago

Nitish Reddy : ಐಪಿಎಲ್​ನಲ್ಲಿ ಮಿಂಚಿದ ಈ ಆಟಗಾರನಿಗೆ ಎಪಿಎಲ್​ನಲ್ಲಿ ಸಿಕ್ಕಿತು ಭರ್ಜರಿ ದುಡ್ಡು

Medicine Price
ದೇಶ1 hour ago

Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

Belagavi News Masked man stabs TC and four others for asking them to show tickets on train
ಕ್ರೈಂ1 hour ago

Belagavi News: ರೈಲಲ್ಲಿ ಟಿಕೆಟ್‌ ತೋರಿಸು ಎಂದಿದ್ದಕ್ಕೆ ಟಿಸಿ ಸೇರಿ ನಾಲ್ವರಿಗೆ ಚಾಕು ಇರಿದ ಮುಸುಕುಧಾರಿ; ಒಬ್ಬ ಸಾವು, ನಾಲ್ವರು ಗಂಭೀರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ4 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ7 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು10 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

ಟ್ರೆಂಡಿಂಗ್‌