Basava Jayanti 2023 What you ought to know about renowned philosopher BasaveshwaraBasava Jayanti 2023 : ಜಗದ ಜ್ಯೋತಿ, ವಿಶ್ವಗುರು ಶ್ರೀ ಬಸವೇಶ್ವರರು - Vistara News

ಧಾರ್ಮಿಕ

Basava Jayanti 2023 : ಜಗದ ಜ್ಯೋತಿ, ವಿಶ್ವಗುರು ಶ್ರೀ ಬಸವೇಶ್ವರರು

ಮನುಕುಲದ ಸರ್ವರಂಗದ ಸ್ವಾತಂತ್ರ್ಯಕ್ಕಾಗಿ ಆತ್ಮನೈವೇದ್ಯವನ್ನು ಮಾಡಿ ಜಗದ ಜ್ಯೋತಿಯಾದವರು ಶ್ರೀ ಬಸವೇಶ್ವರರು. ಇಂದು ಅವರ ಜಯಂತಿ (Basava Jayanti 2023). ತನ್ನಿಮಿತ್ತ ಶ್ರೀ ಬಸವೇಶ್ವರರ ಜೀವನದ ಸಂಕ್ಷಿಪ್ತ ಪರಿಚಯ ಮಾಡಿಕೊಡುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Basava Jayanti 2023 What you ought to know about renowned philosopher Basaveshwara
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
 Basava Jayanti 2023 What you ought to know about renowned philosopher Basaveshwara

ಶ್ರೀ ಮ.ನಿ.ಪ್ರ. ಪ್ರಭು ಚನ್ನಬಸವ ಸ್ವಾಮೀಜಿ
ಜಂಗಮಲಿಂಗಕ್ಷೇತ್ರ, ಶ್ರೀಮೋಟಗಿಮಠ, ಅಥಣಿ.

ಆಯತದಲ್ಲಿ ಪೂರ್ವಾಚಾರಿಯ ಕಂಡೆ
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ
ಸನ್ನಿಹಿತದಲ್ಲಿ ಪೂರ್ವಾಚಾರಿಯ ಕಂಡೆ
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎಂಬೆನು

-ಅಲ್ಲಮಪ್ರಭು ದೇವರು

ಬಸವರಾಜಾ ನಿನ್ನ ಗುಣಂಗಳಂ ಬಣ್ಣಿಸಲೆಮ್ಮಳವಲ್ಲ;
ಈಶನ ಮೀಸಲಪ್ಪ ಭಕ್ತ ನಿನಗೆಣೆಯಿಲ್ಲ, ಪಡಿಯಿಲ್ಲ?
ಪಾಸಟಿಯಾವಂ?
ಪಾಷಂಡಿ ಭೂಮಿಯೊಳು ಶಿವಭಕ್ತಿಯನಾರಂಭಿಸಿ, ಸಾಮರ್ಥ್ಯಂ ಬಿತ್ತಿ
ಪ್ರತ್ಯಕ್ಷಂಗಳಂ ಬೆಳೆದು, ಗಣಪರ್ವಂಗಳಂ ಸುಫಲಂ ಮಾಡಲೆಂದು
ಬಂದ ಕಾರಣಿಕ ಬಸವಾ, ನಿನ್ನ ದೆಸೆಯಿಂದೆಮ್ಮ ಭಕ್ತಿ ಬಣ್ಣವೇರಿತು

-ಹರಿಹರ

ಬಸವ ಶರಣೆನೆ ಭವವಡಗುವುದು
ಬಸವ ಶರಣೆನೆ ಕೀರ್ತಿಯೆಸೆಯುವುದು
ಬಸವ ಶರಣೆನೆ ದುಸ್ಥಿತಿಗಳತ್ತತ್ತಲೋಡುವುವು
ಬಸವ ಶರಣೆನೆ ಸೌಖ್ಯಮೊದಗುಂ
ಬಸವ ಶರಣೆನೆ ಭಾಗ್ಯವಪ್ಪುಗು
ಬಸವ ಶರಣೆನೆ ಕಾಮಿತೋನ್ನತ ಸಿದ್ಧಿ ಸಿದ್ಧಿಸುಗು

-ಭೀಮಕವಿ

ಬಸವಂ ಭಕ್ತಿಗೆ ಮೂಲಂ
ಬಸವA ಕಾಲಂಗೆಕಾಲನನುಪಮಶೀಲಂ
ಬಸವA ಜಂಗಮಲೋಲಂ
ಬಸವಾ ರಕ್ಷಿಪುದೆನ್ನ ಸಂಗನಬಸವಾ

-ಪಾಲ್ಕುರಿಕೆ ಸೋಮನಾಥ

ಹನ್ನೆರಡನೇಯ ಶತಾಬ್ದಿಯ ಸ್ವರ್ಣೋಧ್ಯಾಯದ ಸಮಾನತೆಯ ಶಿಖರಸೂರ್ಯ ವಿಶ್ವಗುರು ಬಸವಣ್ಣನವರು. ವಿಶ್ವಕ್ಕೆ ಸಂಸತ್ತನ್ನು ಕೊಟ್ಟ ಪ್ರಥಮ ಪಿತಾಮಹ, ವಚನಾಂದೋಲನದ ಪ್ರಥಮ ನೇತಾರ, ನಾಡಿಗೆ ಇಷ್ಟಲಿಂಗ ಕೊಟ್ಟ ಪ್ರಥಮ ಹರಿಕಾರ, ಮಹಾಮಾನವತಾವಾದಿ.

ಕಲ್ಯಾಣವೆಂಬ ಪ್ರಣತಿಯಲ್ಲಿ ಬಹುಬೆಲೆ ಬಾಳುವ ಭಕ್ತಿರಸವೆಂಬ ತೈಲವನ್ನೆರೆದು ಬೆಳ್ಳಂಬೆಳಕಾಗಿ ಶಿವನ ಪ್ರಕಾಶದಂತೆ ತೊಳಗಿ ಬೆಳಗಿದ ವಿಶ್ವವಿಭೂತಿ ಬಸವಣ್ಣನವರು ಮುತ್ತಿನಹಾರದಂತೆ ನುಡಿದು, ಲಿಂಗಮೆಚ್ಚಿ ಅಹುದು ಎಂಬಂತೆ ನಡೆದು, ಸಾರ್ವಕಾಲಿಕವೂ ಶಾಶ್ವತವೂ ಆದ ವಿಶ್ವತತ್ವಗಳನ್ನು ಸಾರಿದವರು. ಇಂಗಳೇಶ್ವರದ ಮಂಗಳಮೂರ್ತಿಯಾದ ಇವರು ಶಿವಾನುಭವದ ಸಾಕಾರಮೂರ್ತಿಯಾಗಿ ಜಂಗಮ ಶಿವಶಾಸನದಂತೆ ಬಾಳಿದವರು. ದೇಶ-ಕಾಲ-ಜಾತಿ-ಕುಲ-ಮತಗಳ ಮಾನವ ನಿರ್ಮಿತ ಸಂಕುಚಿತ ಸೀಮಾರೇಖೆಯನ್ನು ಸೀಮೋಲ್ಲಂಘನಗೈದು ಕಾಯಕ ತತ್ವದ ತಾರಕ ಮಂತ್ರವನ್ನು ಉಪದೇಶಿಸಿ ದಕ್ಷಿಣ ಭಾರತದಲ್ಲಿ ಮೊದಲ ಸ್ವತಂತ್ರ ಕನ್ನಡ ಧರ್ಮವನ್ನು ಕೊಟ್ಟವರು ಬಸವಣ್ಣನವರು. ‘ಲಿಂಗಾಯತ ಧರ್ಮ’ ಬಸವಣ್ಣನವರು ನೀಡಿದ ಮೊದಲ ಪ್ರಜಾಸತ್ತಾತ್ಮಕ ಧರ್ಮವಾಗಿದೆ.ಇದರ ನೇತಾರ ಶ್ರೀ ಬಸವಣ್ಣ.

ದಲಿತೋದ್ಧಾರಕ, ಮಹಿಳಾ ಸ್ವಾತಂತ್ರ್ಯ ನೀಡಿದ ಸಮತಾವಾದಿ, ವಚನಕಾರ ಸಮಾಜೋಧಾರ್ಮಿಕ ಚಳುವಳಿಯ ವಿಶ್ವಚೇತನ ಶ್ರೀ ಬಸವಣ್ಣನವರು. ಅರ್ಥರ್ ಮೈಲ್ಸ್ ಹೇಳುವಂತೆ, ‘ಭಾರತದ ಮೊಟ್ಟ ಮೊದಲ ಸ್ವತಂತ್ರ ವಿಚಾರವಾದಿ ಬಸವಣ್ಣ’ ಎಂದು ಬಣ್ಣಿಸುತ್ತಾರೆ.ಬಸವಣ್ಣನವರು ಹೊಸದೊಂದು ಧರ್ಮ ನೀಡಿದರು.

ರಾಷ್ಟ್ರಕವಿ ಕುವೆಂಪು ಹೀಗೆ ಹೇಳುತ್ತಾರೆ;
ಕಾರ್ತಿಕದ ಕತ್ತಲಲಿ ಆಕಾಶ ದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿದಿಕ್ಕಾಗಿ
ಎಂಟು ಶತಮಾನಗಳ ಹಿಂದೆ
ಅಗ್ನಿ ಖಡ್ಗವನಾಂತ ಓ ಅಧ್ಯಾತ್ಮ ಕ್ರಾಂತಿವೀರ,
ದೇವದಯೆಯೊಂದು ಹೇ ಧೀರಾವತಾರ,
ಶ್ರೀ ಬಸವೇಶ್ವರಾ!
ಜಾತಿ ಪದ್ಧತಿಯ ಹೋಮಕೂಪಕ್ಕೆ
ಬಿದ್ದು, ವೈದಿಕರ ಯಜ್ಞ ತಾಪಕ್ಕೆ
ಬಲಿವೋದ ದಲಿತ ಜೀವರನೆತ್ತಿಮತಿ ವಿಚಾರಕ್ಕೆ
ಕಾಯಕದ ದಿವ್ಯತತ್ತ್ವ ದಾಸುಕ್ಷೇಮ ಧರ್ಮನಾಶಕ್ಕೆ
ನಡೆಸಿದ ಮಹಾತ್ಮನೆ ನಿನಗೆ ನಮೋ ನಮಃ|
ಇಂದಿಗೂ ನಾವು ನಿನ್ನೆತ್ತರಕೆ ಏಳಲಾರದೆ ಅಯ್ಯಾ
ಮತದ ಉಸುಬಿಗೆ ಸಿಲುಕಿ ತತ್ತರಿಸುತಿಹೆವಯ್ಯ!
ಬಾರಯ್ಯ ಕೈ ಹಿಡಿದೆತ್ತಿ ಬದುಕಿಸು ನಮ್ಮನೆಳೆದು
ವರ್ಣಾಶ್ರಮದ ಹೆಸರ ಹೊಲೆಗೆಸರ ವಂಚನೆಯ ಹೊಂಡದಿಂದೆ!
ಭಕ್ತಿ ಗಂಗೆಯನೆರೆದು
ಭಾಗವತ ಶಕ್ತಿಯಂ ಕರೆದು
ಮತ ಮೌಢ್ಯದ ಜ್ಞಾನಕಂಪವನು ತೊಳೆದು
ರುಚಿಗೊಳಿಸು ವಿಜ್ಞಾನ ವೇದಾಂತ ತೀರ್ಥದಿಂದೆ

ಚಾರಿತ್ರಿಕ ಯುಗಪುರುಷ ಬಸವಣ್ಣನವರ ಕುರಿತು ಮೂಡಿಬಂದಷ್ಟು ಪುರಾಣಗಳು ಕಾವ್ಯಗಳು ಚರಿತ್ರೆಗಳು ವಚನಗಳು ಮತ್ತಾವ ವ್ಯಕ್ತಿಗಳ ಕುರಿತು ಬಂದಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಶಂಭು ಶಿವನಾಗಿ ದರ್ಶನವಿತ್ತರೆ; ದ್ವಿತೀಯ ಶಂಭುವಾಗಿ ಭುವಿಯ ಬೆಳಗಿದ ಭಾಗ್ಯವಿಧಾತ ಬಸವಣ್ಣನವರು.

ಬಸವಣ್ಣನವರ ಕುರಿತು ಕಾವ್ಯಗಳು

ಅರ್ಜುನವಾಡದ ಶಾಸನ ಬಸವಣ್ಣನವರನ್ನು ಚಾರಿತ್ರಿಕ ವ್ಯಕ್ತಿಯೆಂದು ಸಾಬೀತು ಮಾಡಿದರೆ, ಬಸವಣ್ಣನವರನ್ನು ಕುರಿತು ಮೊಟ್ಟ ಮೊದಲ ಕೃತಿ ಹೊರಬಂದದ್ದು ಹರಿಹರನಿಂದ. ಹರಿಹರನ ಬಸವರಾಜ ದೇವರ ರಗಳೆ ಮೊದಲ ಕೃತಿಯೆಂಬ ಕೀರ್ತಿಗೆ ಪಾತ್ರವಾಗಿದೆ. ತದನಂತರ ಪಾಲ್ಕುರಿಕೆ ಸೋಮನಾಥನು ತೆಲುಗು ಭಾಷೆಯಲ್ಲಿ ಬಸವ ಪುರಾಣವನ್ನು ರಚಿಸಿದನು. ಈ ಕೃತಿಯನ್ನು ಆಧರಿಸಿ ಭೀಮಕವಿ ಕನ್ನಡದಲ್ಲಿ ಬಸವ ಪುರಾಣವನ್ನು ಅನುವಾದಿಸಿದನು. ಸಿಂಗಿರಾಜನ ‘ಅಮಲ ಬಸವರಾಜ ಚಾರಿತ್ರ’, ಷಡಕ್ಷರದೇವನ ‘ಬಸವರಾಜ ವಿಜಯಂ’ ಮೊದಲಾದ ಕೃತಿಗಳು ಬಸವಣ್ಣನವರ ಘನವ್ಯಕ್ತಿತ್ವವನ್ನು ಲೋಕಕ್ಕೆ ಸಾರುವ ಅಮೂಲ್ಯ ಆಕರಗಳಾಗಿವೆ.

ಭುವನ ಭಾಗ್ಯೋದಯ!

ಐತಿಹಾಸಿಕ ನಗರಿ ವಿಜಯಪುರ ಜಿಲ್ಲೆಯ ಬಾಗೇವಾಡಿ ಬಸವಣ್ಣನವರ ಉದಯದಿಂದ ಅದು ‘ಬಸವನ ಬಾಗೇವಾಡಿ’ಯಾಯಿತು. ಇಲ್ಲಿ ಸುಪ್ರಸಿದ್ಧ ಅಗ್ರಹಾರವಿತ್ತು. ಹೆಚ್ಚಾಗಿ ಶೈವಬ್ರಾಹ್ಮಣರು ವಾಸವಾಗಿದ್ದರು. ಈ ಅಗ್ರಹಾರದ ಅಧಿಪತಿ ಮಂಡಿಗೆಯ ಮಾದಿರಾಜ.ಕಮ್ಮೆಕುಲದ ವಂಶಸ್ಥನಾದ ಮಾದರಸ ಮತ್ತು ಮಾದಲಾಂಬಿಕೆಯರು ಆದರ್ಶ ದಂಪತಿಗಳು.ಮಾದಲಾಂಬಿಕೆಯವರ ತವರುಮನೆ ಇಂಗಳೇಶ್ವರ. ಇಂತಹ ದಂಪತಿಗಳ ಪುಣ್ಯೋದರದಿಂದ ಕ್ರಿ.ಶ.1131 ರಲ್ಲಿ ಅವತರಿಸಿದ ಅರಿವ ಮಹಾಮೂರ್ತಿ ಶ್ರೀ ಬಸವಣ್ಣನವರು.

ಬಸವಣ್ಣನ ಸಹೋದರ ದೇವರಾಜು, ಅಕ್ಕ ನಾಗಲಾಂಬಿಕೆ.ಕಿರಿಯ ಪುತ್ರನೇ ಬಸವಣ್ಣ. ಹುಟ್ಟುತ್ತಲೇ ಕೆಳವರ್ಗದ ಬಂಧುವಿನ ಬಂಧನ ಬಗೆಹರಿಸಿದ ಪರಮಾವತಾರಿ. ಮುಂದೆ ಬಾಗೇವಾಡಿಯಲ್ಲಿ ಬಸವಣ್ಣ ಬೆಳೆಯತೊಡಗಿದ. ವಯಸ್ಸಿಗೆ ಮೀರಿದ ಕುತೂಹಲ, ಅಪರೂಪದ ಜಾಣ್ಮೆ, ಎಚ್ಚೆತ್ತ ಚೇತನ; ಆಗಲೇ ಎಚ್ಚರಿಕೆಯ ಜೀವನ ಅರಿತಿದ್ದ ಸೂಕ್ಷ್ಮಗ್ರಾಹಿ! ಬ್ರಾಹ್ಮಣ ಪದ್ಧತಿಯಂತೆ ಬಸವಣ್ಣನಿಗೆ ಎಂಟನೆಯ ವಯಸ್ಸಿಗೆ ‘ಉಪನಯನ’ ನೆರವೇರಿಸಲು ಸಿದ್ಧತೆಗೆ ಸನ್ನದ್ಧರಾದರು. ಅಕ್ಕಳಿಗೂ ಈ ಉಪನಯನ ಮಾಡಿಸಿರಿ, ಅಂದಾಗ ಮಾತ್ರ ನಾನೂ ಉಪನಯನ ಮಾಡಿಕೊಳ್ಳುತ್ತೇನೆ ಎಂದ. ಕರ್ಮಲತೆಯಂತಿದ್ದ ‘ಉಪನಯನ’ ವೈದಿಕಾಚರಣೆಗಳು ಬೇಡವಾಗಿದ್ದವು. ಹಠ ಹಿಡಿಯುತ್ತಾನೆ.

ಕೂಡಲ ಸಂಗಮದೆಡೆಗೆ…

ಬಸವಣ್ಣನ ಮಾತಿಗೆ ಸಹಮತ ಸಿಗದಾದಾಗ ಈ ಸಂಪ್ರದಾಯವಾದಿಗಳ ಸಹವಾಸವೇ ಸಾಕು ಎಂದು ಮನೆಯ ಬಿಟ್ಟು ಹೊರಟನು. ಕೂಡಲಸಂಗಮಕ್ಕೆ ಬರುತ್ತಾನೆ. ಕೂಡಲಸಂಗಮವು ಆ ಕಾಲದಲ್ಲಿ ಒಂದು ದೊಡ್ಡ ವಿದ್ಯಾಕೇಂದ್ರವಾಗಿತ್ತು. ತಮ್ಮ ಮನೆ ಬಿಟ್ಟು, ಬಂಧು ಬಳಗ ಬಿಟ್ಟು ಹೊರಟಾಗ ಒಡಹುಟ್ಟಿದ ಅಕ್ಕ ನಾಗಲಾಂಬಿಕೆ ತಮ್ಮನೊಂದಿಗೆ ಹೊರಟು ನಿಲ್ಲುತ್ತಾಳೆ. ಆತನನ್ನೆ ಹಿಂಬಾಲಿಸುತ್ತಾಳೆ.

ಈ ವೇಳೆಗೆ ಅಕ್ಕ ನಾಗಲಾಂಬಿಕೆಗೆ ಶಿವಸ್ವಾಮಿ ಅವರೊಂದಿಗೆ ವಿವಾಹವಾಗಿತ್ತು. ಬೆನ್ನ ಹಿಂದಿನ ನೆರಳಿನಂತೆ ಬಸವಣ್ಣನವರಿಗೆ ಬೆಂಗಾವಲಾಗಿ ನಿಂತ ‘ಶಕ್ತಿಗಂಗೋತ್ರಿ’ ಅಕ್ಕನಾಗಲಾಂಬಿಕಾತಾಯಿ. ಕೂಡಲಸಂಗಮ ಕ್ಷೇತ್ರದೊಳಗೆ ಅಪರೂಪದ ಗುರುಕುಲದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಬಸವಣ್ಣ ಅಲ್ಲಿ ವಿದ್ಯಾರ್ಜನೆ ಪೂರೈಸಿದನು. ಪುಟಕ್ಕಿಟ್ಟ ಚಿನ್ನವಾದನು. ಸಾಧನೆಯ ಅರಿವಿನ ಮೂರ್ತಿಯಾದನು. ಸಂಸ್ಕೃತ, ಹಳೆಗನ್ನಡ ಭಾಷೆಗಳು ಪರವಶವಾದವು. ಸಂಗಮದ ಸಾಧನಾ ರಂಗದಲ್ಲಿ ಸಂಪ್ರದಾಯ, ವೈಚಾರಿಕತೆ, ಮಾನವತೆ ಹೀಗೆ ಅನೇಕ ಮಹತ್ವದ ವಿಷಯಗಳು ಬಸವಣ್ಣನಿಗೆ ಗೋಚರಿಸತೊಡಗಿದವು.ವಯಸ್ಸು ಪ್ರೌಢಾವಸ್ಥೆಗೆ ಬಂದಿತು.

ಕಲ್ಯಾಣ ಮಹೋತ್ಸವ

ತಾಯಿ ಮಾದಲಾಂಬಿಕೆಯ ಅಣ್ಣ ಬಲದೇವರು ಕಳಚೂರಿ ವಂಶದ ಬಿಜ್ಜಳ ಮಹಾರಾಜನ ದಂಡನಾಯಕರಾಗಿದ್ದರು. ಬಲದೇವ ಬಸವಣ್ಣನ ಸೋದರಮಾವ; ಬಸವಣ್ಣನ ಕೀರ್ತಿ ಅದಾಗಲೆ ಕಲ್ಯಾಣ ತಲುಪಿತ್ತು.ಬಸವಣ್ಣನನ್ನು ಅರಸಿ ಕೂಡಲಸಂಗಮಕ್ಕೆ ಬಂದ ಬಲದೇವ ಮಂತ್ರಿ ಬಸವಣ್ಣನನ್ನು ನೋಡಿ ಸಂತಸಗೊಂಡ. ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿಸಲು ಮುಂದಾದ. ಅಕ್ಕ ಹಾಗೂ ಬಲದೇವರು ಸೇರಿ ಬಸವಣ್ಣನನ್ನು ಒಪ್ಪಿಸಿ ಗಂಗಾಂಬಿಕೆಯೊಂದಿಗೆ ಕಲ್ಯಾಣ ಮಹೋತ್ಸವವನ್ನು ನೆರವೇರಿಸಿದರು. ಮಂಗಳವೇಡೆಯಲ್ಲಿ ಅಕ್ಕನಾಗಲಾಂಬಿಕೆ ಪತಿ ಶಿವದೇವರು, ತಮ್ಮ ಬಸವಣ್ಣನವರು ನೆಲೆ ನಿಂತರು.

ಬಿಜ್ಜಳ ಮಹಾರಾಜನ ಮತ್ತೋರ್ವ ದಂಡನಾಯಕನಾಗಿದ್ದನು ಸಿದ್ಧರಸ. ರಾಜಕರ‍್ಯಗಳಲ್ಲಿ ತೊಡಗಿದಾಗ ಅಚಾತರ‍್ಯದಿಂದ ಸಿದ್ಧರಸ ದಂಪತಿಗಳು ಕಾಲವಾದರು. ಅವರಿಗೆ ಓರ್ವ ಮಗಳಿದ್ದಳು. ಬಾಲ್ಯದಿಂದಲೂ ಅವಳನ್ನು ಸಾಕಿ ಸಲುಹಿದವರು ಬಿಜ್ಜಳ ಮಹಾರಾಜರು. ಅವಳೇ ಶ್ರೀ ನೀಲಾಂಬಿಕೆ.ಬಸವಣ್ಣನ ವಿನಯ, ವಿದ್ವತ್ತು. ಪ್ರೌಢಿಮೆ ಅರಿತು ಮಹಾರಾಜರು ಗಂಗಾಂಬಿಕೆಯೊಂದಿಗೆ ನೀಲಾಂಬಿಕೆಯನ್ನೂ ಕೊಟ್ಟು ವಿವಾಹ ಮಾಡಿದರು. ಬಸವಣ್ಣನವರು ಗಂಗಾಂಬಿಕೆ ಮತ್ತು ನೀಲಾಂಬಿಕೆಯರ ಬಾಳಿನ ಆದರ್ಶ ಪತಿದೇವರಾದರು.

ಪ್ರಧಾನ ಮಂತ್ರಿ ಪಟ್ಟ

ಭಗವದವತಾರವೇ ಮೈವೆತ್ತು ಬಂದ ಬಸವಣ್ಣ, ಜನಮಾನಸದ ಏಳ್ಗೆಗಾಗಿಯೇ ಅವತರಿಸಿದ ಮನುಕುಲೋದ್ಧಾರಿ! ಅಪಾರ ಅಧ್ಯಯನ, ಆರ್ಥಿಕ ಸೂಕ್ಷ್ಮತೆ, ಆಡಳಿತ ಪ್ರಜ್ಞೆ, ಸಮಾಜ ಸಂವೇದನೆ, ಸಾಹಿತ್ಯ ಆಲೋಚನೆ ಹೀಗೆ ಎಲ್ಲ ವ್ಯಕ್ತಿತ್ವಗಳ ಸಂಗಮವಾಗಿದ್ದರು! ಓರ್ವ ಪರಿಪೂರ್ಣ ಜಂಗಮರಾಗಿದ್ದರು. ಪೂರ್ವದ ಚಾಲುಕ್ಯರು ಅಡಗಿಸಿಟ್ಟಿದ್ದ ಅರವತ್ತಾರು ಕೋಟಿ ಹೊನ್ನಿನ ಸ್ಥಳವನ್ನು ಪರಿಶೀಲಿಸಿ ಹೇಳಿದರು.

ಬಸವಣ್ಣನವರ ಬೆಳವಣಿಗೆಯನ್ನು ಅರಿತ ಬಿಜ್ಜಳ ಮಹಾರಾಜನು ಬಲದೇವರಸರ ಮಂತ್ರಿಪದವಿಯನ್ನು ಬಸವಣ್ಣನವರಿಗೆ ನೀಡಿದರು.ಯಾವ ಪದವಿ ಪ್ರಶಸ್ತಿಗಳಿಗೆ ಮನಸೋಲದ ಬಸವಣ್ಣ ನಾಡವರ ಏಳ್ಗೆಗಾಗಿ ಸೇವೆ ಎಂದು ಒಪ್ಪಿಕೊಂಡರು. ಬಿಜ್ಜಳ ಮಹಾರಾಜನ ಪ್ರಧಾನ ಮಂತ್ರಿಯಾಗಿ ಆರ್ಥಿಕ, ಸಾಮಾಜಿಕ ಎಲ್ಲ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿದರು. ಇದರಿಂದ ಸಂತಸಗೊಂಡ ಬಿಜ್ಜಳ ಮಹಾರಾಜ ಇವರನ್ನು ಕಲ್ಯಾಣದ ಮಹಾಪ್ರಧಾನಿಯನ್ನಾಗಿ ಮಾಡಿದರು. ಬಸವಣ್ಣನವರಿಂದ ರಾಜ್ಯವು ಸುಭಿಕ್ಷೆಯಿಂದ ಕಂಗೊಳಿಸತೊಡಗಿತು.

ಮಹಾಮನೆಯ ಮೌಕ್ತಿಕದಚ್ಚು

 Basava Jayanti 2023 What you ought to know about renowned philosopher Basaveshwara

ಕಲ್ಯಾಣದಲ್ಲಿ ಬಸವಣ್ಣನವರು ಮಾಡಿದ ಕ್ರಾಂತಿಕಾರಿ ಕೆಲಸಗಳ ಜೊತೆಗೆ ಜನಸಾಮಾನ್ಯರಿಗೂ ಧರ್ಮ ತತ್ವ ಸಿದ್ಧಾಂತಗಳ ಅರಿವು ಆಗಬೇಕು.ಅವರಲ್ಲಿ ವೈಚಾರಿಕ ಪ್ರಜ್ಞೆ ಮೂಡಬೇಕು. ಸಮಾನತೆ-ಕಾಯಕ-ದಾಸೋಹ ತತ್ವಗಳು ಅನುಷ್ಠಾನಕ್ಕೆ ಬರಬೇಕೆಂದು ಬಸವಣ್ಣನವರು ಬಯಸಿದರು. ಅದಕ್ಕಾಗಿ ‘ಅನುಭವ ಮಂಟಪ’ ಮಹಾಮನೆಯನ್ನು ನಿರ್ಮಿಸಿದರು. ಇಷ್ಟಲಿಂಗದ ಅನುಸಂಧಾನ, ವಚನ ರಚನೆ ಮೊದಲಾದ ಕಾರ್ಯಗಳ ಜೊತೆಗೆ ಶತಶತಮಾನಗಳಿಂದ ಅಸ್ಪೃಶ್ಯತೆಯ ಕಳಂಕದಿಂದ ಬದುಕುತ್ತಿದ್ದ ಜನರ ನೋವಿಗೆ ಸ್ಪಂದಿಸಿದರು.ಅವರ ಬಾಳಿನಲ್ಲಿ ಬೆಳಕು ಮೂಡಿಸಿದರು.

ಬಸವಣ್ಣನವರ ಈ ಕೀರ್ತಿ ವಾರ್ತೆಯನ್ನು ಕೇಳಿ ದೇಶ ವಿದೇಶದಿಂದ ಜನರು ಕಲ್ಯಾಣಕ್ಕೆ ಆಗಮಿಸಿದರು.ಕಾಶ್ಮೀರದ ಅರಸು ಮಾರಯ್ಯ ತನ್ನ ಅರಸೊತ್ತಿಗೆಯನ್ನೇ ಧಿಕ್ಕರಿಸಿ ಕಲ್ಯಾಣಕ್ಕೆ ಬಂದ. ಮಹಾರಾಷ್ಟ್ರ, ಒರಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕಂದಹಾರ (ಇಂದಿನ ಅಫಘಾನಿಸ್ತಾನ) ಮೊದಲಾದ ಕಡೆಗಳಿಂದ ಕಾಯಕಜೀವಿಗಳು ಕಲ್ಯಾಣಪುರ ಪ್ರವೇಶಿಸಿದರು. ಕಲ್ಯಾಣದಲ್ಲಿ ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರು ನೆಲೆ ನಿಂತರು. ಅವರಿಗೆಲ್ಲ ಬಸವಣ್ಣನವರ ಮಹಾಮನೆಯಲ್ಲಿ ನಿತ್ಯ ಪ್ರಸಾದ ವ್ಯವಸ್ಥೆಯಾಯಿತು.ಇವರೆಲ್ಲರ ಸಹಕಾರದಿಂದ ಬಸವಣ್ಣನವರು ‘ಅನುಭವ ಮಂಟಪ’ ಎಂಬ ಸಂಸತ್ತನ್ನು ನಿರ್ಮಿಸಿದರು. ಶೂನ್ಯಪೀಠವನ್ನು ಸ್ಥಾಪಿಸಿದರು.

ಈ ಪೀಠಕ್ಕೆ ಕೆಳವರ್ಗದ ಮಹಾಜ್ಞಾನಿ ಅಲ್ಲಮನನ್ನು ಅಧ್ಯಕ್ಷನನ್ನಾಗಿ ಮಾಡಿ ಸಮಾನತೆಯ ಕ್ರಾಂತಿಗೆ ನಾಂದಿ ಹಾಡಿದರು. 770 ಅಮರಗಣಂಗಳು ಸಂಸದರಂತೆ ಕಾರ್ಯ ನಿರ್ವಹಿಸಿದರು. ಆಧ್ಯಾತ್ಮಿಕ ಸಾಮ್ರಾಜ್ಯವೇ ನಿರ್ಮಾಣವಾಯಿತು. ಕಲ್ಯಾಣ ಕೈಲಾಸವಾಯಿತು.

ಕಾಯಕಜೀವಿಗಳ ಸಂಘಟನೆ

‘ಆರಂಭ ಮಾಡುವೆ ಗುರುಪೂಜೆಗೆಂದು’ ಎಂದು ಭಾವಿಸಿದ್ದ ಬಸವಣ್ಣನವರು ಕಲ್ಯಾಣ ರಾಜ್ಯದಲ್ಲಿ ಪ್ರತಿಯೊಬ್ಬರೂ ಕಾಯಕ ಮಾಡಿಯೇ ಪ್ರಸಾದ ಮಾಡಬೇಕೆಂದು ಆದೇಶ ನೀಡಿದರು. ಕಸ ಹೊಡೆಯುವುದರಿಂದ-ಕಲಶದವರೆಗೆ, ಪತ್ರಿ ಎತ್ತುವುದರಿಂದ ಹಿಡಿದು ಪಾದರಕ್ಷೆಯ ತಯಾರಿಸುವವರೆಗೆ, ಎಲ್ಲರೂ ನಿತ್ಯ ಕಾಯಕದಲ್ಲಿ ನಿರತರಾದರು. ಕಲ್ಯಾಣ ಎನ್ನುವುದು ಕೇವಲ ಒಂದು ಪುರವಾಗಿ, ಪ್ರದೇಶವಾಗಿ ಉಳಿಯಲಿಲ್ಲ. ಅದು ಕಲ್ಯಾಣ ರಾಜ್ಯವಾಯಿತು. 19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಹೇಳಿದ್ದು ಕಾಯಕ ಜೀವಿಗಳ ಸಂಘಟನೆಯನ್ನು, 12ನೇ ಶತಮಾನದಲ್ಲಿ ಸಂಘಟನೆ ಮಾಡಿ ಪ್ರತಿಯೊಬ್ಬ ಶರಣರಿಗೆ ಕಾಯಕವೇ ಕೈಲಾಸವಾಯಿತು.

ದಾಸೋಹವೇ ಪ್ರಾಣಜೀವಾಳ

ಕಾಯಕದಿಂದ ಬಂದದ್ದನ್ನು ಕೂಡಿಡದೆ ಅದನ್ನು ಸಮಾಜಕ್ಕೆ ಬಳಸಬೇಕು ಎನ್ನುವ ದೈವೀಭಾವವೇ ದಾಸೋಹ. ಹಸಿದವರಿಗೆ, ನೊಂದವರಿಗೆ, ನಿರಾಶ್ರಿತರಿಗೆ ಉಣಿಸಿ ಉಣ್ಣುವ ಶರಣಾಗತಿ ಭಾವವೇ ಅದಾಗಿದೆ. ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ’ ಎಂದು ಬಸವಣ್ಣನವರು ಕೇಳಿಕೊಂಡರು.ಕಲ್ಯಾಣದ ಮಹಾಮಾರ್ಗದಲ್ಲಿ ಎಲ್ಲರೂ ನೀಡುವವರೇ ಇದ್ದರು. ‘ಬೇಡುವವರಿಲ್ಲದೆ ಬಡವನಾದೆ’ ಎಂದರು ಬಸವಣ್ಣನವರು.

ಅನುಭವ ಮಂಟಪ

ವಿಶ್ವದ ಎಲ್ಲ ಅನುಭಾವಿಗಳು, ಕಾಯಕಜೀವಿಗಳು ಸಂಗಮಗೊಂಡ ಅವಿಮುಕ್ತ ಕ್ಷೇತ್ರವೇ ಅನುಭವ ಮಂಟಪ! ವಿಶ್ವದ ಪ್ರಥಮ ಸಂಸತ್ತನ್ನು ನಿರ್ಮಿಸಿದ ನಿರ್ಮಾತೃ ಬಸವಣ್ಣನವರು. ಪ್ರತಿಯೊಬ್ಬರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಸಮಾನತೆಯಿಂದ ಬದುಕಬೇಕೆಂಬ ಆಶಯದ ಆಡುಂಬೊಲ ಈ ಅನುಭವ ಮಂಟಪ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಭಾವಜೀವಿಗಳು ಬಸವಣ್ಣನವರ ಕೀರ್ತಿವಾರ್ತೆಗಳನ್ನು ಕೇಳಿ ಅನುಭವ ಮಂಟಪಕ್ಕೆ ಬಂದರು.

ವೈರಾಗ್ಯನಿಧಿ ಅಲ್ಲಮ ಪ್ರಭುದೇವರು ಇದರ ಅಧ್ಯಕ್ಷರಾದರು. ಶಾಂತರಸರು ವಚನ ಭಂಡಾರಿಯಾದರು. ಎಲ್ಲ ಶರಣ ಸಮೂಹ ಅನುಭವ ಮಂಟಪದ ಕರ್ಣಧಾರತ್ವ ವಹಿಸಿಕೊಂಡರು. ಪ್ರಜಾಪ್ರಭುತ್ವದ ಪ್ರತೀಕದಂತಿದ್ದ ಅನುಭಾವಿಗಳ ಒಡ್ಡೋಲಗವದು.ಅಲ್ಲಿ ಪ್ರಧಾನವಾದುದು ಕುಲವಲ್ಲ ಶೀಲ. ಉಚ್ಚನೀಚ ಭಾವದ ಕೊಚ್ಚೆ, ಜಾತಿಭೇದದ ದುರ್ಗಂಧ ಅಲ್ಲಿ ಇರಲಿಲ್ಲ. ಹೀಗೆ ಸದಾಚಾರ ಸದ್ಭಕ್ತಿಗಳೇ ಸೋಪಾನವಾಗಿದ್ದ ಈ ಶಿವಾನುಭವ ಮಂಟಪದ ಸದಸ್ಯರೆಲ್ಲ ಸಮಾನವಾಗಿ ಸವಿದರು. ಸಾನುಕಂಪದ ದ್ಯೋತಕವಾದ ಈ ಅನುಭವ ಮಂಟಪದಲ್ಲಿ ವರ್ಣಸಂಕರ ಭಾವನೆಯನ್ನು ಸೂತಕವೆಂದು ದೂರೀಕರಿಸಿ ಸರ್ವಸಮಾನತೆಯ ಸೋದರಭಾವನೆಯಿಂದ ಅದರೊಳಕ್ಕೆ ಬರಲು ಎಲ್ಲರಿಗೂ ಸ್ವಾಗತ ನೀಡಿದರು.

ದಶದಿಕ್ಕಿಗೂ ಅದರ ಹೆಚ್ಚಳದ ಹಿರಿಮೆ ಹಬ್ಬಿತು. ಆಂಧ್ರ, ತಮಿಳುನಾಡು, ಸೌರಾಷ್ಟ್ರದಿಗಳಿಂದ ಮುಮುಕ್ಷಗಳನೇಕರು ಅಲ್ಲಿಗೆ ಆಕರ್ಷಿತರಾದರು. ಇದರ ಶ್ರೇಯಸ್ಸಿನ ಬಹುಪಾಲು ಬಸವಣ್ಣನವರಿಗೆ ಸಲ್ಲುತ್ತದೆ. ಸಂಪ್ರದಾಯಬದ್ಧವಾಗಿ ಬಂದಿದ್ದ ವರ್ಣಭೇದದ ವಜ್ರ ಭಿತ್ತಿಯನ್ನು ಶಿಥಿಲಗೊಳಿಸಿ, ತಪ್ಪುಭಾವನೆಯನ್ನು ತೊರೆದು ವರ್ಗಭೇದವನ್ನು ತೊಡೆದು, ಅಡುಗೆಯ ಮನೆಗಷ್ಟೇ ಸೀಮಿತವಾಗಿದ್ದ ಸ್ತ್ರೀಯರಿಗೆ ಅನುಭವ ಮಂಟಪದಲ್ಲಿಯೂ ಸಮಾನ ಸ್ಥಾನವನ್ನಿತ್ತು ಅಂದಿನ ಸಮಾಜದಲ್ಲಿ ಅಪೂರ್ವವಾದ ಒಂದು ಪ್ರೇಮ ಪ್ರಭಾವಳಿಯನ್ನು ನಿರ್ಮಿಸಿದ ಕೀರ್ತಿ ಬಸವಣ್ಣನವರದು.

ಕರ್ತಾರನ ಕಮ್ಮಟ!

ಭಾರತ ಮೌಢ್ಯದ ಮನೆ, ಕಂದಾಚಾರದ ಕೊಂಪೆ. ಕಲ್ಲು ನಾಗರಿಗೆ ಹಾಲೆರೆವ, ಉಣ್ಣದ ಲಿಂಗಕ್ಕೆ ಬೋನ ಹಿಡಿವ, ನೀರು ಕಂಡಲ್ಲಿ ಮುಳುಗುವ, ಮರ ಸಿಕ್ಕಲ್ಲಿ ಸುತ್ತುವ, ಮಡಕೆ ದೈವ, ಮೊರದೈವ ಎಂದು ನೂರೆಂಟು ಗತಿಗೆಟ್ಟ ದೈವಂಗಳನ್ನು ಪೂಜಿಸುವ, ಹೆಜ್ಜೆಗೊಂದು ಶಕುನ, ಬಿದ್ದರೊಂದು ಶಾಸ್ತ್ರ ಕೇಳುವ ಮೌಢ್ಯಕ್ಕೆ ಒಲಿದು, ಸಹಜತೆಯನ್ನು ಮರೆತವರೇ ಬಹಳ. ಇವರಿಗೆ ನಡೆನುಡಿಯಲ್ಲಿ ಮಡಿಯಾಗಿರುವುದನ್ನು ಕಲಿಸಿದರು ಬಸವಣ್ಣನವರು.
ಧರ್ಮ ಎಂಬುದು ಒಂದು ಜೀವನವಿಧಾನ. ಬಸವಣ್ಣನಲ್ಲಿ ಶ್ರೇಷ್ಠ ಮಾನವತೆ ನಿಜವಾದ ಧರ್ಮ. ಅಂತಹ ಧರ್ಮವನ್ನು ಅಪ್ಪಿದ, ಜಾತೀಯತೆಯನ್ನು ದ್ವೇಷಿಸಿದ. ಅದೇ ರೀತಿ ದೈವದ ಅಸ್ತಿತ್ವವನ್ನು ಒಪ್ಪಿದ, ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸಿದ.

ಅವನು ದೇವರನ್ನು ಕಂಡಿದ್ದು ಕಲ್ಲಿನಲ್ಲಿ ಅಲ್ಲ, ಮಣ್ಣಿನಲ್ಲಿ ಅಲ್ಲ, ಪ್ರತಿಯೊಬ್ಬ ಮಾನವನ ಹೃದಯದಲ್ಲಿ. ಪಕ್ಕದವರನ್ನು ಪ್ರೀತಿಸಿದರೆ ದೇವದೇವನನ್ನೂ ಪೂಜಿಸಿದಂತೆ ಎಂಬ ಭಾವನೆ ಸದ್ಭಾವನೆಯನ್ನು ಬಿತ್ತಿದ. ಮನುಷ್ಯ ಮನುಷ್ಯರ ನಡುವೆ ಸೌಹಾರ್ದದ ಸೂತ್ರವೇ ಹರಿದು ಹೋಗಿ ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ದ್ವೀಪವಾಗಿರುವ ಈ ದಿನಗಳಲ್ಲಿ ಬಸವಣ್ಣನವರು ತುಂಬಾ ಪ್ರಸ್ತುತರಾಗುತ್ತಾರೆ.ಅವರ ವಿಶ್ವಪ್ರೇಮ ವಿಶ್ವಮೈತ್ರಿ ಅನ್ಯಾದೃಶ್ಯವಾದವುಗಳು.

ಬಸವಣ್ಣನವರ ಬದುಕಿನಲ್ಲಿ ನಡೆದ ಅಪರೂಪದ ಘಟನೆಗಳಿವು…

  • ಬಿಜ್ಜಳನ ಭಂಡಾರಿ, ಪ್ರಧಾನ ಮಂತ್ರಿಯಾಗಿದ್ದರೂ ಬಸವಣ್ಣನವರು ಮಾತ್ರ ತುಂಬಾ ಸರಳ, ಸತ್ಯ ಶುದ್ಧವಾಗಿಯೇ ಬದುಕುತ್ತಿದ್ದರು. ಮಹಾಮನೆಯಲ್ಲಿ ಇರುವಾಗ ಅವರು ಕುಳಿತುಕೊಳ್ಳುವ ಬರೆಹದ ಮಂಚದ ಮುಂದೆ ಎರಡು ದೀಪಗಳು ಇರುತ್ತಿದ್ದವು. ರಾಜ್ಯದ ಮಂತ್ರಿಯಾಗಿ ಬರೆಯುವಾಗ ಮಹಾರಾಜನ ದೀಪ ಹಚ್ಚುತ್ತಿದ್ದರು, ಉಳಿದ ಸಮಯ ತಾವು ವಚನ ರಚನೆ ಮಾಡುವಾಗ ತಮ್ಮ ಮಹಾಮನೆಯ ದೀಪ ಬೆಳಗುತ್ತಿದ್ದರು. ಅಂದರೆ; ವೃತ್ತಿಧರ್ಮವನ್ನು ಶುದ್ಧತೆಯಿಂದ ಪರಿಪಾಲಿಸುತ್ತಿದ್ದರು.
  • ಮಹಾಮನೆಯೊಳಗೆ ಬಸವಣ್ಣನವರು ನೀಲಾಂಬಿಕೆಯವರೊAದಿಗೆ ಮಲಗಿದಾಗ ರಾತ್ರಿ ಕಳ್ಳ ಬಂದು ಅಮ್ಮನವರ ಬಂಗಾರದ ಆಭರಣಗಳನ್ನು ಕಿತ್ತುಕೊಳ್ಳುತ್ತಾನೆ. ಆಗ ಅಮ್ಮ ಕಳ್ಳ ಕಳ್ಳ ಎಂದು ಕೂಗುತ್ತಾರೆ. ತಕ್ಷಣ ಎಚ್ಚರಗೊಂಡ ಅಣ್ಣನವರು ಜಂಗಮವೇಷಧಾರಿಗಳನ್ನು ನೋಡಿ, ‘ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದರೆ ತೆಗೆದು ಕೊಡು ಆಭರಣ, ಎನ್ನಯ್ಯನ ಕೈ ನೋವಾದೀತು’ ಎನ್ನುತ್ತಾರೆ. ಕಳ್ಳನಲ್ಲಿಯೂ ಕೂಡಲಸಂಗನನ್ನು ಕಂಡ ಮಹಾ ವ್ಯಕ್ತಿತ್ವ ಅವರದು.
  • ಮಹಾಮನೆಯ ಮುಂದೆ ಕಟ್ಟಿರುವ ಆಕಳುಗಳನ್ನು ರಾತ್ರಿ ಕಳ್ಳರು ಕದ್ದು ಒಯ್ಯುತ್ತಾರೆ. ಕರುಗಳು ಮಾತ್ರ ಮನೆ ಮುಂದೆ ಒಂಟಿಯಾಗಿರುತ್ತವೆ. ಸೇವಕರನ್ನು ಕರೆದು ಹೇಳುತ್ತಾರೆ ‘ಆಕಳ ಕಳ್ಳರು ಕೊಂಡೊಯ್ದರೆನ್ನದಿರಿಂಭೋ…ಅಲ್ಲಿ ಉಂಬರೂ ಸಂಗ, ಇಲ್ಲಿ ಉಂಬರೂ ಸಂಗ, ಕೂಡಲಸಂಗಮದೇವ ಏಕೋಭಾವ’ ಅದಕ್ಕಾಗಿ ಕರುಗಳನ್ನು ಆಕಳುಗಳು ಇದ್ದ ಜಾಗಕ್ಕೆ ಕಳುಹಿಸಿ ಎನ್ನುತ್ತಾರೆ.
  • ಒಂದು ದಿನ ಅನುಭವ ಮಂಟಪಕ್ಕೆ ಬಸವಣ್ಣನವರು ಹೋಗಲು ಆಗಲಿಲ್ಲ. ಪ್ರಭುದೇವರು ಹಡಪದ ಅಪ್ಪಣ್ಣನವರ ಮೂಲಕ ಬರುವಂತೆ ಸಂದೇಶ ಕಳಿಸುತ್ತಾರೆ. ಆಗ ‘ಒಂದು ಅರಿವೆಯಲ್ಲಿ…ಇರುವೆ ಹಾಕಿ’ ಕಳಿಸುತ್ತಾರೆ. ಪ್ರಭುದೇವರು ದಿವ್ಯದೃಷ್ಟಿಯಿಂದ ಗಮನಿಸಿ ಸಂದೇಶ ನೀಡುತ್ತಾರೆ. ‘ನಾನು ನಿಮ್ಮ ಅರಿವಿನಲ್ಲಿ ಇರುವೆ’ ಎಂದು ತಿಳಿಸಿದ್ದಾರೆ ಅಣ್ಣನವರು ಎಂದು ಪ್ರಚುರಪಡಿಸಿದರಂತೆ.
  • ಶರಣು ಹೇಳಿದ ಹರಳಯ್ಯನವರಿಗೆ ‘ಶರಣು ಶರಣಾರ್ಥಿ’ ಹೇಳುತ್ತಾರೆ ಬಸವಣ್ಣನವರು. ಒಂದು ಶರಣು ಹೆಚ್ಚಾಯಿತೆಂದು ಹರಳಯ್ಯ ಕಲ್ಯಾಣಮ್ಮನವರು ತಮ್ಮ ತೊಡೆ ಚರ್ಮ ತೆಗೆದು ಪಾದರಕ್ಷೆ ಮಾಡಿ ತರುತ್ತಾರೆ. ಅವುಗಳನ್ನು ಕಂಡ ಬಸವಣ್ಣನವರು ‘ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು’ ಇವು ಕೂಡಲಸಂಗಮದೇವರು ಧರಿಸುವ ಪಾದರಕ್ಷೆ ಎಂದು ತಲೆಯ ಮೇಲೆ ಹೊತ್ತುಕೊಳ್ಳುತ್ತಾರೆ.
  • 12ನೇ ಶತಮಾನದವರಿಗೆ ಸಾಕ್ಷಿ ಆಣೆ ಪ್ರಮಾಣ ಮಾಡಲು ವೇದಗಳನ್ನು ಬಳಸುತ್ತಿದ್ದರು. ಆದರೆ ಬಸವಣ್ಣನವರು ‘ನಿಮ್ಮ ಪಾದವೇ ಸಾಕ್ಷಿ, ಎನ್ನ ಮನವೇ ಸಾಕ್ಷಿ’ ಎಂದು ಸಾರಿದರು.
  • ಕಾಯಕ-ದಾಸೋಹ-ಸಮಾನತೆ-ಅರಿವು-ಆಚಾರ ಎಂಬ ಪಂಚಸೂತ್ರ ಗಳನ್ನು ಮೊಟ್ಟಮೊದಲು ಲೋಕದ ಜನತೆಗೆ ನೀಡಿದ ಮಹಾಮಾನವತಾವಾದಿ ಬಸವಣ್ಣನವರು.
  • ಒಮ್ಮೆ ಅನುಭವ ಮಂಟಪದಲ್ಲಿ ಪ್ರಭುದೇವರು ‘ಬಸವ ಬಾರೈ ಮರ್ತ್ಯಲೋಕದೊಳಗೆ ಮತ್ತೆ ಭಕ್ತರುಂಟೆ? ಎಂದಾಗ, ‘ಮತ್ತಾರು ಇಲ್ಲ ನಾನೊಬ್ಬನೆ ಭಕ್ತ’ ಎನ್ನುತ್ತಾರೆ. ಇವರ ಮಾತು ಕೇಳಿ ಅನುಭವ ಮಂಟಪವೇ ಆಶ್ಚರ್ಯ ಪಡುತ್ತದೆ.ಮುಂದುವರಿದು ಬಸವಣ್ಣನವರು ಹೇಳುತ್ತಾರೆ. ಮತ್ತಾರು ಇಲ್ಲ ನಾನೊಬ್ಬನೇ ಭಕ್ತ, ‘ಉಳಿದವರೆಲ್ಲ ಜಂಗಮಲಿಂಗ ಸ್ವರೂಪಿಗಳೆಂದು’ ಹೇಳಿದಾಗ ಶರಣರೆಲ್ಲ ಬಸವಣ್ಣನವರ ಈ ಕಿಂಕರತ್ವಕ್ಕೆ ಮಾರುಹೋಗುತ್ತಾರೆ.
  • ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ, ಮೃದು ವಚನವೇ ಸಕಲ ಜಪಂಗಳಯ್ಯ, ಮೃದು ವಚನವೇ ಸಕಲ ತಪಂಗಳಯ್ಯ ಸದುವಿನಯವೇ ಸದಾಶಿವನ ಒಲುಮೆ ಎಂದು ಹೇಳಿ ಮನುಷ್ಯನಿಗೆ ಮೌಲ್ಯಗಳ ಅರಿವು ಮೂಡಿಸುತ್ತಾರೆ.

ಕ್ರಾಂತಿಕಾರಿ, ಸಮಾನತೆಯ ಸೇನಾನಿಯಾಗಿದ್ದ ಬಸವಣ್ಣನವರ ವಿಚಾರ ಧಾರೆಗಳು ಸಂಪ್ರದಾಯವಾದಿಗಳನ್ನು ಕೆರಳಿಸಿದವು. ಮಧುವರಸ ಮತ್ತು ಹರಳಯ್ಯ ನವರು ಬಂಧುಗಳಾಗಲು ಪ್ರೇರಣೆ ನೀಡಿದರು. ಜಾತಿ ಸಂಕರ ಕಿತ್ತೊಗೆಯಲು ಇರುವ ಮಾರ್ಗವೆಂದರೆ ಪರಸ್ಪರ ವಿವಾಹ ಕರ‍್ಯ ನೆರವೇರಬೇಕು ಎನ್ನುವ ಜ್ಯೋತಿತತ್ವ ಅವರದ್ದಾಗಿತ್ತು. ಬ್ರಾಹ್ಮಣ್ಯದ ಮಧುವರಸನ ಮಗಳು ಲಾವಣ್ಯ, ಹರಳಯ್ಯನವರ ಮಗ ಶೀಲವಂತ ಇಬ್ಬರಿಗೂ ಕಲ್ಯಾಣ (ವಿವಾಹ) ನೆರವೇರಿಸಿದರು.

ರಾಜ್ಯವನ್ನು ದುರುಪಯೋಗ ಮಾಡಿ ಧರ್ಮ ಹಾಳು ಮಾಡುತ್ತಿದ್ದಾರೆ ಬಸವಣ್ಣನವರು ಎಂದು ಬಿಜ್ಜಳ ಮಹಾರಾಜನಿಗೆ ದೂರು ನೀಡಿದರು. ಕೊಂಡಿ ಮಂಚಣ್ಣಾದಿಗಳು ಬಹುದೊಡ್ಡ ರಾಜಕೀಯ ಕುತಂತ್ರ ಸಂಚು ರೂಪಿಸಿದರು.ಇದನ್ನು ತಲೆಗೆ ತುಂಬಿಕೊಂಡ ರಾಜ ಬಿಜ್ಜಳ ಹರಳಯ್ಯ-ಮಧುವರಸರಿಗೆ ಮರಣದಂಡನೆ ವಿಧಿಸಿದನು. ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿದನು. ಈ ವಿಷಯ ಕೇಳಿ ಶರಣರು ಗಣಾಚಾರಿಗಳಾದರು. ಕಲ್ಯಾಣ ನಾಡು ಅಲ್ಲೋಲ ಕಲ್ಲೋಲವಾಯಿತು. ಒಂದೆಡೆ ರಾಜ ಬಿಜ್ಜಳನ ಹತ್ಯೆಯಾಯಿತು. ಶರಣರಿಗೆ ಎಳೆಹೂಟೆ ಶಿಕ್ಷೆಯಾಯಿತು. ಕಲ್ಯಾಣಕ್ರಾಂತಿಯಾಯಿತು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಧಾರ್ಮಿಕ ಮತಾಂಧತೆಯ ಅಟ್ಟಹಾಸ ಅರಿತ ಶರಣರು ಕಲ್ಯಾಣದಿಂದ ಹತ್ತು ಹಲವು ಕಡೆ ಚೆಲ್ಲುವರಿದರು. ಬಸವಣ್ಣನವರು ಕೂಡಲ ಸಂಗಮದೆಡೆಗೆ, ಪ್ರಭುದೇವರು ಶ್ರೀಶೈಲಕ್ಕೆ, ಚೆನ್ನಬಸವಣ್ಣನವರು ಉಳವಿಗೆ ವಚನ ತಾಡೋಲೆಗಳನ್ನು ಬೆನ್ನಿಗೆ ಕಟ್ಟಿಕೊಂಡು ‘ವಚನ ಸಂಗ್ರಹ’ ಕಾಯಕದೊಳಗೆ ತೊಡಗಿದರು. ನೂರೊಂದು ಕ್ಷೇತ್ರಗಳಿಗೆ ಶರಣರು ಪಾದ ಬೆಳೆಸಿದರು. ಇತ್ತ ಏಕಾಂಗಿಯಾಗಿ ಗುರು ಬಸವಣ್ಣನವರು ತಮ್ಮ ಲೋಕಸೇವಾಕಾರ್ಯಗಳನ್ನು ಪೂರೈಸಿ ಶ್ರಾವಣ ಶುದ್ಧ ಪಂಚಮಿ ದಿನ ಕೂಡಲಸಂಗಮದೊಳಗೆ ಲಿಂಗಯ್ಯನೊಂದಿಗೆ ಬೆರೆತು ಮಹಾಲಿಂಗದೊಳಗೆ ಬಯಲಾದರು. ಸಮರಸಗೊಂಡರು.

ಇದನ್ನೂ ಓದಿ : ತಾತಯ್ಯ ತತ್ವಾಮೃತಂ : ಬಸವಣ್ಣನಂತೆ ತಾತಯ್ಯ ಕೂಡ ದೇಹವೇ ದೇಗುಲ ಎಂದಿದ್ದಾರೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್‌ ಮಾಡಿ

Tirupati Temple: ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

VISTARANEWS.COM


on

Tirupathi Temple
Koo

ತಿರುಪತಿ: ದೇಶದ ಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ ತಿರುಪತಿ ದೇವಸ್ಥಾನ(Tirupati Temple)ಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌. ಆಗಸ್ಟ್ ತಿಂಗಳ ದರ್ಶನ ಟಿಕೆಟ್ ವೇಳಾಪಟ್ಟಿಯನ್ನು ತಿರುಪತಿ ತಿರುಮಲ ದೇವಸ್ಥಾನ (TTD) ಬಿಡುಗಡೆ ಮಾಡಿದೆ. ಹೀಗಾಗಿ ಆಗಸ್ಟ್‌ನಲ್ಲಿ ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಈ ಪಟ್ಟಿಯನ್ನು ಗಮನಿಸಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾವನ್ನು ಮೇ 18ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್‌ಗಾಗಿ ಭಕ್ತರು ಮೇ 20ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಟಿಕೆಟ್ ಪಡೆದವರು ಮೇ 20ರಿಂದ ಮೇ 22ರವರೆಗೆ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.

ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15ರಿಂದ 17ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಸುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕರ ಸೇವೆ, ವಾರ್ಷಿಕ ಪವಿತ್ರೋತ್ಸವ ಸೇವಾ ಟಿಕೆಟ್‌ಗಳನ್ನು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಾತ್ರವಲ್ಲ ತಿರುಮಲ ಶ್ರೀವಾರಿ ವರ್ಚುವಲ್ ಸೇವೆಗಳಿಗೆ ಸಂಬಂಧಿಸಿದ ಆಗಸ್ಟ್ ತಿಂಗಳ ಕೋಟಾ ಮತ್ತು ಅವುಗಳ ಸ್ಲಾಟ್‌ಗಳನ್ನು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯ. ಜತೆಗೆ ಆಗಸ್ಟ್‌ನ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಮೇ 23ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಚೇತನರು, ವೃದ್ಧರಿಗಾಗಿ ವಿಶೇಷ ಕೋಟಾ

ವೃದ್ಧರು, ವಿಶೇಷ ಚೇತನರು ಮತ್ತು ದೀರ್ಘಕಾಲದ ಕಾಯಿಲೆ ಇರುವವರಿಗೆ ನೀಡಲಾಗುವ ಆಗಸ್ಟ್‌ನ ಉಚಿತ ವಿಶೇಷ ದರ್ಶನ ಟಿಕೆಟ್‌ಗಳು ಮೇ 23ರಂದು ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್‌ನಲ್ಲಿ ಲಭಿಸಲಿದೆ. ಮೇ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆಗಸ್ಟ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪ್ರಕಟಿಸಲಿದೆ. ಜತೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ರೂಮ್ ಕೋಟಾವನ್ನು ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ

  • ತಿರುಮಲ ತಿರುಪತಿ ದೇವಸ್ಥಾನಗಳ ದರ್ಶನ ಟಿಕೆಟ್ ಬುಕ್ ಮಾಡಲು, ಟಿಟಿಡಿಯ ಅಧಿಕೃತ ಆನ್‌ಲೈನ್ ಬುಕಿಂಗ್ ವೆಬ್‌ಸೈಟ್‌ https://ttdevasthanams.ap.gov.inಗೆ ಭೇಟಿ ನೀಡಿ.
  • ದರ್ಶನ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಮೊಬೈಲ್‌ ನಂಬರ್‌ ನೀಡಿ ಲಾಗಿನ್‌ ಆಗಿ.
  • ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ.
  • ಆಲ್‌ನೈಲ್‌ ಮೂಲಕ ಟಿಕೆಟ್‌ ಮೊತ್ತವನ್ನು ಪಾವತಿಸಿ.
  • ನಿಮ್ಮ ಟಿಕೆಟ್‌ ಬುಕ್‌ ಆಗಿರುವ ಬಗ್ಗೆ ಮಾಹಿತಿ ಎಸ್‌ಎಂಎಸ್‌ ಮೂಲಕ ನಿಮಗೆ ರವಾನೆಯಾಗುತ್ತದೆ.

ಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಜನದಟ್ಟಣೆ ನಿಭಾಯಿಸುವ ಸಲಹೆ ನೀಡಿದ ತಿರುಪತಿಯ ಎಂಜಿನಿಯರ್‌ಗಳ ತಂಡ

Continue Reading

ಧಾರ್ಮಿಕ

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

ಶ್ರೀ ಶಂಕರರು (Shankara Jayanti 2024) ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡಿದ್ದರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತಿದ್ದರು. ಸಂನ್ಯಾಸಕ್ಕೆ ತಾಯಿಯ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಆಗ ತಾಯಿ ಒಪ್ಪಲೇಬೇಕಾಯಿತು.

VISTARANEWS.COM


on

Shankara Jayanti 2024
Koo

ಶಂಕರಾಚಾರ್ಯರು (Shankara Jayanti 2024) ಜೀವಿಸಿದ್ದು ಕೇವಲ 32 ವರ್ಷ. ಆದರೆ ಅವರು ಸಾಧಿಸಿದ್ದು ಅಪಾರ. ಹಿಂದೂ ಧರ್ಮದ ಏಳಿಗೆಗೆ ಅವರ ಕೊಡುಗೆ ಅಮೂಲ್ಯ. ಶಂಕರರ ಬದುಕಿನ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ.

Adi Shankaracharya Jayanti
  1. ಶ್ರೀ ಶಂಕರರು ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತರು. ಸಾಮಾನ್ಯರಿಗೆ ಒಂದು ವೇದವನ್ನು ಅರ್ಥ ಮಾಡಿಕೊಳ್ಳಲೇ ಹತ್ತಾರು ವರ್ಷಗಳು ಬೇಕು.
  2. ಶಂಕರಾಚಾರ್ಯರು ಜನಿಸಿದ್ದು ಕೇರಳ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆಯನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸಿದರು. ಅವರು ಸಂನ್ಯಾಸ ಸ್ವೀಕರಿಸಲು ಒಂದು ಪುಟ್ಟ ಪವಾಡವನ್ನೇ ಮಾಡಬೇಕಾಯಿತು. ಸಂನ್ಯಾಸಕ್ಕೆ ತಾಯಿ ಆರ್ಯಾಂಬೆಯವರ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ತಾಯಿ ಒಪ್ಪಿದರು.
  3. ಹದಿನಾರು ವರ್ಷ ಪ್ರಾಯ ಆಗುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
  4. ಭಾರತದಾದ್ಯಂತ ‘ದಿಗ್ವಿಜಯ ಯಾತ್ರೆʼ ಕೈಗೊಂಡರು. ವೇದವಿರೋಧಿಗಳನ್ನು ವಾಗ್ವಾದಕ್ಕೆ ಕರೆದರು. ಏಕಾಂಗಿಯಾಗಿ ಚರ್ಚೆ, ವಿಚಾರಮಂಡನೆ, ವಾದಗಳ‌ ಮೂಲಕ ಬ್ರಹ್ಮವಾದಕ್ಕೆ ಎಳೆತಂದರು. ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ವೈದಿಕತೆಗೆ ತಂದರು.
  5. ಆರು ಮತಗಳನ್ನು ಖಂಡಿಸಿ ತಮ್ಮ ಮತವನ್ನು ಸ್ಥಾಪಿಸಿದ ಪರಿಣಾಮ ಅವರನ್ನು ‘ಷಣ್ಮತ ಖಂಡನಾಚಾರ್ಯ’ ಮತ್ತು ಷಣ್ಮತ ಪ್ರತಿಷ್ಠಾಪನಾಚಾರ್ಯ’ ಎಂದು ಕರೆಯಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
  6. ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಮಠಗಳ ಪರಿಕಲ್ಪನೆಯನ್ನು ತಂದರು. ಮಠ ಮತ್ತು ಯತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಆಶಯ ಅವರದಾಗಿತ್ತು. ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ, ಕಂಚಿಯ ಕಾಮಕೋಟಿಗಳಲ್ಲಿವೆ.
  7. ಸೂರ್ಯ- ಗಣಪತಿ- ಅಂಬಿಕಾ- ಶಿವ- ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸಲಾಗುತ್ತದೆ.
  8. ಮೂವತ್ತೆರಡು ವರ್ಷಗಳಲ್ಲಿ ಹಲವು ಮನುಷ್ಯರು ಸೇರಿ ಹಲವು ಜನ್ಮಗಳಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದರು. ಭಾಷ್ಯಗಳನ್ನು ಹೊರತುಪಡಿಸಿ ನೂರಾರು ಸ್ತೋತ್ರ – ಸಾಹಿತ್ಯಗಳನ್ನು ರಚಿಸಿದರು.
  9. ಮೂರು ಸೂತ್ರಗಳಲ್ಲಿ ಶ್ರೀ ಶಂಕರರ ಉಪದೇಶವನ್ನು ಸೂತ್ರೀಕರಿಸಬಹುದು- “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಮತ್ತು ಜೀವಶ್ಶಿವೋಹಂʼ (ಜೀವನೇ ಶಿವ) ಎಂಬುದು ಅದ್ವೈತ ತತ್ವದ ಮೂಲ ಮಂತ್ರಗಳು. ಇದಲ್ಲದೇ ಪರಮಾತ್ಮ ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
Continue Reading

ಪ್ರಮುಖ ಸುದ್ದಿ

PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

PM Narendra Modi: ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ ಎಂದು ಮೋದಿ ಹೇಳಿದ್ದಾರೆ.

VISTARANEWS.COM


on

pm narendra modi basava jayanti 2024
Koo

ಹೊಸದಿಲ್ಲಿ: ಭಕ್ತಿ ಭಂಡಾರಿ, ಸಮಾಜ ಸುಧಾರಕ, ವಚನ ಚಳವಳಿಯ ಆದ್ಯ ಪೂಜ್ಯ ಶ್ರೀ ಬಸವೇಶ್ವರ ಜಯಂತಿ (Basava Jayanti 2024) ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪಠ್ಯ ಸಂದೇಶ ಹಾಗೂ ವಿಡಿಯೋ ಸಂದೇಶಗಳೆರಡನ್ನೂ ಅವರು ನೀಡಿದ್ದಾರೆ.

“ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

“ಭಗವಾನ್‌ ಬಸವೇಶ್ವರರ ಸಂದೇಶ ಹಾಗೂ ಅವರ ವಚನಗಳು ನನಗೆ ಹೊಸಹೊಸದಾಗಿ ಕಲಿಸುತ್ತಲೇ ಇರುತ್ತವೆ. ನಾವು ಅವರಿಂದ ಅವರ ದೈವೀಯ ಗುಣವನ್ನೂ ಕಲಿಯಬಹುದು; ಜೊತೆಗೆ ಅವರು ಉತ್ತಮ ಆಡಳಿತಗಾರ, ಸುಧಾರಕನೂ ಹೌದು. ಸಮಾಜ ಸುಧಾರಣೆಯ ಅವರ ಬದುಕು ನಮಗೆ ಪ್ರೇರಣೆಯಾಗುವಂಥದು. ಬಸವಣ್ಣನವರ ವಚನಗಳು ಹಾಗೂ ಸಂದೇಶಗಳು ಆಧ್ಯಾತ್ಮಿಕವೂ ಹೌದು, ಬದುಕಿನ ಪ್ರಾಯೋಗಿಕ ಮಾರ್ಗದರ್ಶಕ ಸೂತ್ರಗಳೂ ಹೌದು” ಎಂದು ಅವರು ಕೊಂಡಾಡಿದ್ದಾರೆ.

“ಅವರ ಉಪದೇಶಗಳು ನಮಗೆ ಉತ್ತಮ ಮಾನವರಾಗುವುದನ್ನು ಕಲಿಸುತ್ತವೆ. ಇನ್ನಷ್ಟು ದಯಾಳು, ಅಧಿಕ ಉದಾರಿ, ಹೆಚ್ಚಿನ ಮಾನವೀಯ ಸಂವೇದನೆಗಳನ್ನು ನಮ್ಮಲ್ಲಿ ತುಂಬುತ್ತದೆ. ಶತಮಾನಗಳಷ್ಟು ಮೊದಲೇ ಬಸವೇಶ್ವರರು ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ಮಹತ್ವದ ಸಂಗತಿಗಳ ಬಗ್ಗೆ ಸಮಾಜಕ್ಕೆ ಬೋಧಿಸಿದ್ದರು. ನಾವು ಅವರ ವಚನಗಳು- ಆದರ್ಶಗಳನ್ನು ಜಾಗತಿಕವಾಗಿ ಪಸರಿಸಬೇಕು. ಜಗತ್ತನ್ನು ಆ ಮೂಲಕ ಇನ್ನಷ್ಟು ಸುಂದರಗೊಳಿಸೋಣ. ಈ ಶುಭಸಂದರ್ಭದಲ್ಲಿ ನಿಮಗೆಲ್ಲರಿಗೂ ಶುಭಕಾಮನೆಗಳು” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Continue Reading

ಪ್ರಮುಖ ಸುದ್ದಿ

Akshaya Tritiya 2024: ಇಂದು ಏನೇನು ಖರೀದಿಸಬಹುದು? ಚಿನ್ನ- ಬೆಳ್ಳಿ ಏಕೆ ಖರೀದಿಸಬೇಕು?

Akshaya Tritiya 2024: ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

VISTARANEWS.COM


on

Akshaya Tritiya 2024
Koo

ಅಕ್ಷಯ ತೃತೀಯ (Akshaya Tritiya 2024) ಅಂದರೆ ಚಿನ್ನ- ಬೆಳ್ಳಿ (gold, silver) ಖರೀದಿಸಬೇಕು ಎಂಬುದು ಸಾಮಾನ್ಯ ನಂಬಿಕೆ. ಆದರೆ ಇದು ಮಾತ್ರವಲ್ಲ. ಸಂಪತ್ತು ಎಂದು ಕರೆಸಿಕೊಳ್ಳುವ ಯಾವುದನ್ನೇ ಆದರೂ ಇಂದು ನೀವು ಖರೀದಿಸಬಹುದು ಅಥವಾ ಹೊಂದಬಹುದು. ಅದರಿಂದ ಆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ. ಈ ಹಿಂದಿನ ಕಾಲದಲ್ಲಿ ಕೃಷಿಪ್ರಧಾನ ಸಮಾಜದಲ್ಲಿ ಅಕ್ಕಿ ರಾಗಿ ಗೋಧಿಯಂಥ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುತ್ತಿದ್ದರು.

ಹಿಂದೂಗಳಿಗೆ ಸಂಪತ್ತಿನ ಪುಣ್ಯ ಫಲ ನೀಡುವ ಹಬ್ಬ. ಅಕ್ಷಯ ತೃತೀಯದಂದು (Akshaya Tritiya 2024) ಶುಭ, ಅಶುಭ ಮುಹೂರ್ತಗಳನ್ನು ನೋಡದೇ ಯಾವುದೇ ಕಾರ್ಯವನ್ನು ಪ್ರಾರಂಭಿಸಬಹುದು ಎಂಬ ಮಾತಿದೆ. ಉತ್ತರ ಭಾರತದಲ್ಲಿ ಅಖಾ ತೀಜ್ ಎಂದೂ ಕರೆಯಲ್ಪಡುವ ಈ ಮಂಗಳಕರ ದಿನ ಅಪಾರ ಪ್ರಾಮುಖ್ಯತೆ ಹೊಂದಿದೆ. ಈ ದಿನದಂದು ಪ್ರಾರಂಭಿಸಿದ ಯಾವುದೇ ಕಾರ್ಯ ಯಾವಾಗಲೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆ. ಖರೀದಿಸಿದ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ.

ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭದ ಸಂಕೇತವಾಗಿದೆ. ಅಕ್ಷಯ ತೃತೀಯದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ವಾಡಿಕೆ. ಅಕ್ಷಯ ತೃತೀಯವನ್ನು ಭಾರತ ಮತ್ತು ನೇಪಾಳದ ಅನೇಕ ಪ್ರದೇಶಗಳಲ್ಲಿ ಹಿಂದೂಗಳು ಮತ್ತು ಜೈನರು ಹೊಸ ಉದ್ಯಮಗಳು, ಮದುವೆಗಳು, ದಾನ, ಮತ್ತು ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಮಂಗಳಕರವೆಂದು ಪರಿಗಣಿಸುತ್ತಾರೆ. ಅಂದು ಚಿನ್ನ, ಬೆಳ್ಳಿ, ವಾಹನ ಖರೀದಿಸಿ ತಂದರೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹಲವರು ನಂಬುತ್ತಾರೆ.

ಸಂಸ್ಕೃತದಲ್ಲಿ ಅಕ್ಷಯ ಪದವು “ಅಭ್ಯುದಯ, ಭರವಸೆ, ಸಂತೋಷ, ಯಶಸ್ಸು” ಎಂಬ ಅರ್ಥದಲ್ಲಿ “ಎಂದಿಗೂ ಕಡಿಮೆಯಾಗುವುದಿಲ್ಲ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಗ್ರಹಗಳ ಅತ್ಯುತ್ತಮ ನೆಲೆಯಲ್ಲಿರುತ್ತಾರೆ ಎಂದು ನಂಬಲಾಗಿದೆ.

ಅಕ್ಷಯ ತೃತೀಯ ಆಚರಣೆಯ ಇತಿಹಾಸದ ಪ್ರಕಾರ ಅಕ್ಷಯ ತೃತೀಯ ದಿನದಂದು ನಾಲ್ಕು ಯುಗಗಳಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ಅಕ್ಷಯ ತೃತೀಯ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ. ಹೀಗಾಗಿ ಭಕ್ತರು ಅಕ್ಷಯ ತೃತೀಯವನ್ನು ಪರಶುರಾಮನ ಜನ್ಮ ದಿನವಾಗಿ ಆಚರಿಸುತ್ತಾರೆ. ಅಕ್ಷಯ ತೃತೀಯದ ಆಚರಣೆಗಳು ಅಕ್ಷಯ ತೃತೀಯದಂದು ಭಕ್ತರು ಪವಿತ್ರ ಸ್ನಾನ ಮಾಡುವ ಮೂಲಕ ಮತ್ತು ಹಳದಿ ವೇಷಭೂಷಣದಲ್ಲಿ ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದರೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಈ ದಿನ ವಿಶೇಷವಾಗಿ ವಿಷ್ಣು ಸಹಸ್ರನಾಮ ಮತ್ತು ವಿಷ್ಣು ಚಾಲೀಸಾದ ಪಠಣಗಳೊಂದಿಗೆ ಭಗವಾನ್ ವಿಷ್ಣುವಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ಚಿನ್ನ, ಬೆಳ್ಳಿ ಏಕೆ ಖರೀದಿಸಬೇಕು?

ದಂತಕಥೆಯ ಪ್ರಕಾರ, ಅಕ್ಷಯ ತೃತೀಯದಲ್ಲಿ, ಸಂಪತ್ತಿನ ದೇವತೆಯಾದ ಕುಬೇರನು ಭಗವಾನ್ ಶಿವ ಮತ್ತು ಬ್ರಹ್ಮನಿಂದ ಆಶೀರ್ವಾದವನ್ನು ಪಡೆದನು, ಅಲಕಾಪುರಿ ಎಂದು ಕರೆಯಲ್ಪಡುವ ಲೋಕವನ್ನು ಸ್ವಾಧೀನಪಡಿಸಿಕೊಂಡ. ಪರಿಣಾಮವಾಗಿ, ಈ ದಿನ ಕುಬೇರನ ಹೆಸರಿನಲ್ಲಿ ಚಿನ್ನದ ಆಭರಣಗಳು ಮತ್ತು ಆಸ್ತಿಗಳನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೊಸ ವ್ಯಾಪಾರ, ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನು ಈ ವಿಶೇಷ ದಿನದಂದು ಪ್ರಾರಂಭಿಸಲಾಗುತ್ತದೆ. ಉದ್ಯಮಿಗಳು ಮುಂದಿನ ಆರ್ಥಿಕ ವರ್ಷಕ್ಕೆ ಹೊಸ ಆಡಿಟ್ ಪುಸ್ತಕವನ್ನು ಪ್ರಾರಂಭಿಸುವ ಮೊದಲು ಅಕ್ಷಯ ತೃತೀಯ ದಿನದಂದು ಗಣೇಶ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಇದನ್ನು ಹಲ್ಖಾತಾ ಎಂದು ಕರೆಯುತ್ತಾರೆ.

ಇದಲ್ಲದೇ ಅಕ್ಕಿ ಕೊಳ್ಳುವವರು, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವವರು, ಯಾವುದೇ ರೀತಿಯ ಹೊಸ ವಸ್ತುಗಳು ಅಥವಾ ಪಾತ್ರೆಗಳನ್ನು ಖರೀದಿಸುವವರು- ದೇವಸ್ಥಾನಗಳಿಗೆ ಭೇಟಿ ನೀಡುವವರು, ಬಡವರಿಗೆ ಅನ್ನದಾನ ಅಥವಾ ವಿಶೇಷ ಕೊಡುಗೆಗಳನ್ನು ನೀಡುವವರು ಅಥವಾ ಬಡ ಮಕ್ಕಳಿಗೆ ಅವರ ಶಿಕ್ಷಣ ಶುಲ್ಕಕ್ಕಾಗಿ ಸಹಾಯ ಮಾಡುವವರಿಗೂ ಈ ದಿನ ಶುಭಕರ. ಹೀಗಾಗಿ ಚಿನ್ನ ಬೆಳ್ಳಿಗೆ ಸೀಮಿತವಾಗದೆ, ಧಾನ್ಯಗಳನ್ನು ಕೂಡ ಖರೀದಿಸಬಹುದು. ಬಡವರಿಗೆ ದಾನ ಮಾಡುವುದರಿಂದಲೂ ನಿಮ್ಮ ಸಂಪತ್ತು ಅಕ್ಷಯವಾಗುತ್ತದೆ.

ಇದನ್ನೂ ಓದಿ: Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

Continue Reading
Advertisement
Lok Sabha Election
ದೇಶ3 mins ago

Lok Sabha Election: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ನಾಳೆ ಮತದಾನ; ಕಣದಲ್ಲಿರುವ ಪ್ರಮುಖರು ಯಾರು?

Neha Murder Case
ಕರ್ನಾಟಕ8 mins ago

Neha Murder Case: ನೇಹಾ ಕೊಲೆ ಪ್ರಕರಣ; ಚಾರ್ಜ್‌ಶೀಟ್ ಸಲ್ಲಿಸಲು ಸಿಐಡಿ ತಯಾರಿ

Prajwal Revanna Case Will Not Be Handed Over To CBI Says Cm Siddaramaiah
Lok Sabha Election 202430 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್;‌ ಸಿಬಿಐಗೆ ಏಕೆ ಕೊಡಲ್ಲ ಎಂದು ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

Drowned in water
ಚಿಕ್ಕಬಳ್ಳಾಪುರ32 mins ago

Drowned in water : ಕೆರೆಯಲ್ಲಿ ಈಜುವ ಸವಾಲು; ಜೋಶ್‌ನಲ್ಲಿ ನೀರಿಗೆ ಇಳಿದ ಟೆಕ್ಕಿ ಮೃತ್ಯು

PoK
ಪ್ರಮುಖ ಸುದ್ದಿ35 mins ago

PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

Pig Kidney
ವಿದೇಶ39 mins ago

Pig Kidney: ಹಂದಿಯ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

Arvind Kejriwal
ದೇಶ2 hours ago

Arvind Kejriwal: ಚೀನಾದಿಂದ ಭಾರತದ ನೆಲ ವಾಪಸ್‌ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Road Accident
ಕ್ರೈಂ3 hours ago

Road Accident : ತಂದೆ ಜತೆಗೆ ಕಾರ್‌ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು ಅಪ್ಪಚ್ಚಿ

Ram Charan get mobbed by fans during public appearances
ಸಿನಿಮಾ3 hours ago

Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ4 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ11 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

ಟ್ರೆಂಡಿಂಗ್‌