IPL 2023 : ಡೆಲ್ಲಿ ವಿರುದ್ಧ ಟಾಸ್ ಗೆದ್ದ ಹೈದರಾಬಾದ್​ ತಂಡದಿಂದ ಬ್ಯಾಟಿಂಗ್ ಆಯ್ಕೆ - Vistara News

ಕ್ರಿಕೆಟ್

IPL 2023 : ಡೆಲ್ಲಿ ವಿರುದ್ಧ ಟಾಸ್ ಗೆದ್ದ ಹೈದರಾಬಾದ್​ ತಂಡದಿಂದ ಬ್ಯಾಟಿಂಗ್ ಆಯ್ಕೆ

ಎಸ್​ಆರ್​ಎಚ್ ಹಾಗೂ ಡೆಲ್ಲಿ ತಂಡಗಳು ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಕ್ರಮವಾಗಿ 9 ಹಾಗೂ 10ನೇ ಸ್ಥಾನವನ್ನು ಪಡೆದುಕೊಂಡಿದೆ.

VISTARANEWS.COM


on

Hyderabad won the toss and elected to bat against Delhi Daredevils
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಐಪಿಎಲ್​ 16ನೇ ಆವೃತ್ತಿಯ 40ನೇ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಸನ್​ ರೈಸರ್ಸ್ ಹೈದರಾಬಾದ್ ತಂಡ ಮೊದಲಿಗೆ ಬ್ಯಾಟಿಂಗ್​ ಮಾಡುವುದಾಗಿ ಹೇಳಿದೆ. ಹೀಗಾಗಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ಫೀಲ್ಡಿಂಗ್ ಮಾಡಿ ಪ್ರವಾಸಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಬೇಕಾಗಿದೆ. ಸನ್​ ರೈಸರ್ಸ್ ಹೈದರಾಬಾದ್​​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಹಾಲಿ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಕ್ರಮವಾಗಿ 9 ಹಾಗೂ 10ನೇ ಸ್ಥಾನವನ್ನು ಪಡೆದುಕೊಂಡಿದೆ. ಡೆಲ್ಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ಆಯೋಜನೆಗೊಂಡಿದೆ.

ನಾವು ಬ್ಯಾಟಿಂಗ್ ಮೊದಲು ಮಾಡಲಿದ್ದೇವೆ. ಪಿಚ್ ಒಣಗಿರುವಂತೆ ಕಾಣುತ್ತಿದೆ. ಸ್ಥಳೀಯ ವಾತಾವರಣದ ಪ್ರಕಾರ ರಾತ್ರಿ ಇಬ್ಬನಿ ಬೀಳದು. ಹೀಗಾಗಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತವನ್ನು ಕಲೆಹಾಕುತ್ತೇವೆ ಎಂದು. ಎಲ್ಲಾ ಪ್ರಯೋಗಗಳು ಮುಗಿದಿದ್ದು. ಫಲಿತಾಂಶಗಳನ್ನು ಪಡೆಯುವ ಸಮಯ ಇದ. ನಮ್ಮ ತಂಡದ ಆಟಗಾರರಿಗೆ ಸಾಮರ್ಥ್ಯ ಪ್ರದರ್ಶಿಸುವ ಸಮಯ. ತಂಡದಲ್ಲಿ ವಾಷಿಂಗ್ಟನ್​ ಸುಂದರ್​ ಇಲ್ಲದಿರುವುದು ದೊಡ್ಡ ನಷ್ಟ. ಈ ಸ್ಥಾನ ಭದ್ರಡಿಸಲು ಬೇರೆಯವರಿಗೆ ಅವಕಾಶ ಇದೆ. ನಮ್ಮ ಬ್ಯಾಟಿಂಗ್ ಕಳಪೆಯಾಗಿದೆ. ಇದುವರೆಗೆ ದೊಡ್ಡ ಮೊತ್ತ ಗಳಿಸಿಲ್ಲ. ಅಕೇಲ್​ ಹೊಸೈನ್​ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂದು ಟಾಸ್​ ಗೆದ್ದಿರುವ ಎಸ್​ಆರ್​​​ಎಚ್ ತಂಡದ ನಾಯಕ ಏಡೆನ್ ಮಾರ್ಕ್ರಮ್​ ಹೇಳಿದ್ದಾರೆ.

ಡೆಲ್ಲಿ ತಂಡದ ನಾಯಕ ಡೇವಿಡ್​ ವಾರ್ನರ್ ಮಾತನಾಡಿ, ನಾವು ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗಿದೆ. ನಾವು ಪವರ್​ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದೇವೆ. ಈ ಬಾರಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಬೇಕಾಗಿದೆ. ನಾವು ಮೊದಲ 6 ಓವರ್ ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಬೇಕಾಗಿತ್ತು. ತಂಡಕ್ಕೆ ಪ್ರಿಯಮ್ ಗರ್ಗ್​ ಪದಾರ್ಪಣೆ ಮಾಡುತ್ತಿದ್ದು, ಅಮನ್​ ಖಾನ್ ಆಡುತ್ತಿಲ್ಲ ಎಂದು ಹೇಳಿದ್ದಾರೆ.

ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್ : ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ , ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ಅಕ್ಷರ್ ಪಟೇಲ್, ರಿಪಾಲ್ ಪಟೇಲ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ, ಮುಖೇಶ್ ಕುಮಾರ್.

ಸನ್​ರೈಸರ್ಸ್​ ಹೈದರಾಬಾದ್​: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಅಕೀಲ್ ಹುಸೇನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Pakistan Cricket: ಬಾಡಿಗೆ ಫ್ಲಡ್‌ಲೈಟ್‌ ಅಳವಡಿಸಿ ಚಾಂಪಿಯನ್‌ ಟ್ರೋಫಿ ನಡೆಸಲು ಮುಂದಾದ ಪಾಕಿಸ್ತಾನ

Pakistan Cricket:ಕೆಲವು ತಿಂಗಳ ಹಿಂದೆ ಲಾಹೋರ್​ ಕ್ರಿಕೆಟ್​ ಮೈದಾನದಲ್ಲಿ ಬೆಳೆದಿದ್ದ ಭಾರೀ ಗಾತ್ರದ ಹುಲ್ಲುಗಳನ್ನು ಕಟಾವು ಮಾಡುತ್ತಿರುವ ವಿಡಿಯೊ ವೈರಲ್​ ಆಗಿತ್ತು.

VISTARANEWS.COM


on

Pakistan Cricket
Koo

ಕರಾಚಿ: ಮುಂದಿನ ವರ್ಷ ನಡೆಯುವ ಚಾಂಪಿಯನ್‌ ಟ್ರೋಫಿಗಾಗಿ(champions trophy 2025) ಎಲ್ಲ ಸಿದ್ಧತೆ ಆರಂಭಿಸಿದ್ದೇವೆ ಎಂದು ಕಟು ಸತ್ಯ ಮರೆಮಾಚಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನ ಕ್ರಿಕೆಟ್(Pakistan Cricket)​ ಮಂಡಳಿಯ ಪರಿಸ್ಥಿತಿ ಕಂಡು ಇದೀಗ ನಗುವಂತಾಗಿದೆ. ಹೌದು, ತನ್ನ ಕ್ರೀಡಾಂಗಣಗಳನ್ನು ಸಿದ್ಧಪಡಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (Pakistan Cricket Board), ಕರಾಚಿ ಹಾಗೂ ಲಾಹೋರ್‌ ಕ್ರೀಡಾಂಗಣಗಳಿಗೆ ಫ್ಲಡ್‌ಲೈಟ್‌ಗಳನ್ನು ಬಾಡಿಗೆಗೆ ಪಡೆಯಲಿದೆ ಎಂದು ತಿಳಿದುಬಂದಿದೆ.

ಕರಾಚಿ ಹಾಗೂ ಲಾಹೋರ್‌ನಲ್ಲಿ ಈಗಾಗಲೇ ಇರುವ ಫ್ಲಡ್‌ಲೈಟ್‌ಗಳು ಹಳೆಯದಾಗಿವೆ. ಹೀಗಾಗಿ ಅಲ್ಲಿನ ಫ್ಲಡ್‌ಲೈಟ್‌ಗಳನ್ನು ಹಣ ಉಳಿತಾಯಕ್ಕಾಗಿ ಕ್ವೆಟ್ಟಾ ಹಾಗೂ ರಾವಲ್ಪಿಂಡಿ ಕ್ರೀಡಾಂಗಣಗಳಿಗೆ ಸ್ಥಳಾಂತರ ಮಾಡಿ, ಕರಾಚಿ ಹಾಗೂ ಲಾಹೋರ್‌ಗೆ ಬೇಕಾದ ಫ್ಲಡ್‌ಲೈಟ್‌ಗಳನ್ನು ಬಾಡಿಗೆಗೆ ಪಡೆಯಲು ಪಿಸಿಬಿ ಈಗಾಗಲೇ ಟೆಂಡರ್‌ ಕೂಡಾ ಆಹ್ವಾನಿಸಿದೆ ಎನ್ನಲಾಗಿದೆ. ಈ ವಿಚಾರ ತಿಳಿದ ನೆಟ್ಟಿಗರು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಲಾಹೋರ್​ ಕ್ರಿಕೆಟ್​ ಮೈದಾನದಲ್ಲಿ ಬೆಳೆದಿದ್ದ ಭಾರೀ ಗಾತ್ರದ ಹುಲ್ಲುಗಳನ್ನು ಕಟಾವು ಮಾಡುತ್ತಿರುವ ವಿಡಿಯೊ ವೈರಲ್​ ಆಗಿತ್ತು. ಎಷ್ಟೇ ದಯನೀಯ ಪರಿಸ್ಥಿತಿಯ ಇದ್ದರೂ ಕೂಡ ಪಾಕ್​ ಬಡಾಯಿ ಕೊಚ್ಚಿಕೊಳ್ಳುತ್ತಿರುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.

ಚಾಂಪಿಯನ್ಸ್ ಟ್ರೋಫಿಯಲ್ಲಿ(ICC Champions Trophy) ಭಾರತ(champions trophy ind vs pak) ತಂಡ ಪಾಲ್ಗೊಳ್ಳಲಿದೆಯಾ? ಇಲ್ಲವಾ? ಎಂಬ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದುವರೆಗೂ ಈ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಭಾರತ ಮತ್ತು ಪಾಕ್​ ನಡುವಣ ಪಂದ್ಯ ಮಾರ್ಚ್ 1 ರಂದು ಲಾಹೋರ್​ನಲ್ಲಿ ನಡೆಯಬೇಕಿದೆ.

ಇದನ್ನೂ ಓದಿ Pakistan Cricket Team: ಪಾಕಿಸ್ತಾನ ಕ್ರಿಕೆಟಿಗರ ವೇತನ ಕಡಿತಕ್ಕೆ ಮುಂದಾದ ಪಾಕ್​ ಕ್ರಿಕೆಟ್ ಮಂಡಳಿ

ಒಂದೊಮ್ಮೆ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದೆ. ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್ ಮತ್ತು ಬೇಡಿಕೆ​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪಿಸಿಬಿಯ ಮನವಿಗೆ ಐಸಿಸಿ ಸ್ಪಂದಿಸಿದ್ದು, ಹೈಬ್ರಿಡ್​ ಮಾದರಿಯ ಪಂದ್ಯಗಳಿಗೆ ಐಸಿಸಿ ಅನುಮತಿಸಿಲ್ಲ ಎಂದು ವರದಿಯಾಗಿದೆ. ಈ ವಿಚಾವಾಗಿ ಈಗಾಗಲೇ ಬಿಸಿಸಿಐ ಜತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಭಾರತ ಚಾಂಪಿಯನ್ಸ್​ ಟ್ರೋಫಿ ಆಡುವ ಬಗ್ಗೆ ನಿರ್ಧಾರವಾಗಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

Continue Reading

ಕ್ರೀಡೆ

Robin Uthappa: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಬಿನ್ ಉತ್ತಪ್ಪಗೆ ಬಿಗ್ ರಿಲೀಫ್; ಜಾಮೀನು ರಹಿತ ವಾರೆಂಟ್​ಗೆ ಹೈಕೋರ್ಟ್ ತಡೆ

Robin Uthappa: ಉತ್ತಪ್ಪ ಅವರು 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2006 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್‌ ಉತ್ತಪ್ಪ, 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್‌ ಗಳನ್ನು ಗಳಿಸಿದ್ದಾರೆ.

VISTARANEWS.COM


on

Robin Uthappa
Koo

ಮುಂಬಯಿ: ಚೆಕ್ ಬೌನ್ಸ್ ಪ್ರಕರಣದಲ್ಲಿ(Robin Uthappa cheque bounce case) ಟೀಮ್​ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ರಾಬಿನ್​ ಉತ್ತಪ್ಪ(Robin Uthappa) ಅವರಿಗೆ ಮ್ಯಾಜಿಸ್ಟ್ರೇಟ್ ನೀಡಿದ್ದ ಜಾಮೀನು ರಹಿತ ವಾರೆಂಟ್​ಗೆ ಮುಂಬೈ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ಅವರು ನಿರಾಳರಾಗಿದ್ದಾರೆ. ಉತ್ತಪ್ಪ ವಿರುದ್ಧದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.

ನ್ಯಾಯಮೂರ್ತಿ ನೀಲಾ ಘೋಖಲೆ ನೇತೃತ್ವದ ಪೀಠ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಉತ್ತಪ್ಪ ಪರ ವಕೀಲರು ಸೆಪ್ಟೆಂಬರ್ 6ರೊಳಗೆ ವಿಚಾರಣೆಗೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧದ ಜಾಮೀನು ರಹಿತ ಬಂಧನ ವಾರೆಂಟ್​​ಗೆ ತಡೆ ನೀಡಲಾಗಿದೆ.

ರಾಬಿನ್ ಉತ್ತಪ್ಪ ಮಧ್ಯವರ್ತಿ ಕಂಪನಿ ಮೂಲಕ ಸೆನಾಟರ್ ಪ್ರವೇಟ್ ಲಿಮಿಟೆಡ್ ಕಂಪನಿ ಜತೆ ಉಡುಪುಗಳ ರಾಯಭಾರಿಯಾಗಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕಂಪನಿ ಜತೆ ಉತ್ತಪ್ಪ ಸಂಬಂಧ ಕಡಿದುಕೊಂಡಿದ್ದರು. ಆದರೆ, ಆ ಬಳಿಕ ನಡೆದ ಪತ್ರ ವ್ಯವಹಾರಗಳು ಉತ್ತಪ್ಪ ಗಮನಕ್ಕೆ ಬಂದಿರಲಿಲ್ಲ. ಸಮನ್ಸ್ ಮತ್ತು ವಾರಂಟ್‌ಗಳು ಸೆಂಟಾರಸ್‌ನ ನೋಂದಾಯಿತ ಕಚೇರಿಗೆ ಹೋಗುತ್ತಿದ್ದವು. ಹೀಗಾಗಿ ಉತ್ತಪ್ಪ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಉತ್ತಪ್ಪ ಅವರು ಏಪ್ರಿಲ್ 28, 2024 ರಂದು ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕರೆ ಮಾಡಿದಾಗ ಮಾತ್ರ ಬಾಕಿ ಇರುವ ಘೋಷಣೆ ಮತ್ತು ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದು ತಿಳಿದುಕೊಂಡಿದ್ದಾರೆ.

ಇದನ್ನೂ ಓದಿ Viral Video: ಉತ್ತಪ್ಪಮ್‌ ಮೇಲೆ ಮೂಡಿದ ಕಲಾಕೃತಿ; ತಿನ್ನಲು ಮನಸ್ಸೇ ಬರದು ಎಂದ ನೆಟ್ಟಿಗರು

ನಂತರ ಉತ್ತಪ್ಪ ಜಾಮೀನು ರಹಿತ ವಾರೆಂಟ್ ರದ್ದುಗೊಳಿಸುವಂತೆ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ ಅವರ ವಿನಂತಿಯನ್ನು ತಿರಸ್ಕರಿಸಲಾಗಿತ್ತು. ಸದ್ಯ ಉತ್ತಪ್ಪ ಜಾಮೀನು ರಹಿತ ಬಂಧನ ವಾರೆಂಟ್​​ನಿಂದ ಮುಕ್ತರಾಗಿದ್ದಾರೆ.

ಉತ್ತಪ್ಪ ಅವರು 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2006 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್‌ ಉತ್ತಪ್ಪ, 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್‌ ಗಳನ್ನು ಗಳಿಸಿದ್ದಾರೆ. 86 ಅವರ ಸರ್ವಾಧಿಕ ರನ್.‌ 2007 ರ ಟಿ-20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದ ಉತ್ತಪ್ಪ ಪಾಕಿಸ್ತಾನ ವಿರುದ್ಧದ ಸಮಬಲಗೊಂಡ ಪಂದ್ಯದಲ್ಲಿ ಬಾಲ್‌ ಶೂಟೌಟ್​ನಲ್ಲಿ ಗೆಲ್ಲಲು ಪ್ರಧಾನ ಪಾತ್ರ ವಹಿಸಿದ್ದರು. 13 ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನಾಡಿರುವ ಅವರು, 118.01 ಸ್ಟ್ರೈಕ್‌ ರೇಟ್‌ ನೊಂದಿಗೆ 249 ರನ್‌ ಗಳಿಸಿದ್ದಾರೆ.

2015 ರಲ್ಲಿ ಕೊನೆಯ ಬಾರಿ ಜಿಂಬಾಬ್ಬೆ ವಿರುದ್ಧದ ಏಕದಿನ ಹಾಗೂ ಟಿ-20 ಯನ್ನು ಆಡಿದ್ದರು. ಐಪಿಎಲ್‌ ನಲ್ಲಿ ಮಂಬಯಿ, ಆರ್‌ ಸಿಬಿ, ಕೆಕೆಆರ್‌, ರಾಜಸ್ಥಾನ್‌ ರಾಯಲ್ಸ್‌, ಸಿಎಸ್‌ ಕೆ ಪರವಾಗಿ ಆಡಿದ್ದರು. ಐಪಿಎಲ್‌ ನಲ್ಲಿ 205 ಪಂದ್ಯವನ್ನಾಡಿ ಒಟ್ಟು 4952 ರನ್‌ ಗಳಿಸಿದ್ದಾರೆ.

Continue Reading

ಕ್ರೀಡೆ

ICC Women’s T20 World Cup: ಮಹಿಳಾ ಟಿ20 ವಿಶ್ವಕಪ್‌ ಆತಿಥ್ಯಕ್ಕೆ ಮುಂದಾದ ಜಿಂಬಾಬ್ವೆ

ICC Women’s T20 World Cup: ಕ್ರಿಕ್ ​ಇನ್ಫೋ ವರದಿಯ ಪ್ರಕಾರ ಜಿಂಬಾಬ್ವೆ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯ ಆತಿಥ್ಯವಹಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂದು ತಿಳಿಸಿದೆ.

VISTARANEWS.COM


on

ICC Women's T20 World Cup
Koo

ಮುಂಬಯಿ: ಬಾಂಗ್ಲಾದೇಶದಲ್ಲಿ(bangladesh violence)  ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಅಲ್ಲಿನ ನಾಗರೀಕರು ನಡೆಸುತ್ತಿರುವ ಪ್ರತಿಭಟನೆ, ಗಲಭೆಗಳಿಂದ ಸಂಭವಿಸಿರುವ ಬಿಕ್ಕಟ್ಟಿನಿಂದಾಗಿ ಮುಂಬರುವ ಮಹಿಳಾ ಟಿ20 ವಿಶ್ವಕಪ್‌(ICC Women’s T20 World Cup) ಪಂದ್ಯಾವಳಿಯನ್ನು ಆಯೋಜಿಸಲು ಐಸಿಸಿ ಪರ್ಯಾಯ ಸ್ಥಳವನ್ನು ಹುಡುಕುತ್ತಿದ್ದ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಈ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ಜಿಂಬಾಬ್ವೆ ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಕ್ರಿಕ್ ​ಇನ್ಫೋ ವರದಿಯ ಪ್ರಕಾರ ಜಿಂಬಾಬ್ವೆ ಟೂರ್ನಿಯ ಆತಿಥ್ಯವಹಿಸಿಕೊಳ್ಳಲು ತಮ್ಮ ಆಸಕ್ತಿಯನ್ನು ಐಸಿಸಿಗೆ ವ್ಯಕ್ತಪಡಿಸಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಗುರುವಾರವಷ್ಟೇ ಮಾಧ್ಯಮವೊಂದರ ಜತೆ ಮಾತನಾಡಿದ್ದ ಜಯ್‌ ಶಾ, “ಮಹಿಳಾ ಟಿ20 ವಿಶ್ವಕಪ್‌ ಆಯೋಜನೆಗೆ ಐಸಿಸಿ ನಮ್ಮನ್ನು ಸಂಪರ್ಕಿಸಬಹುದು. ಆದರೆ ನಾನು ಇದನ್ನು ನಿರಾಕರಿಸುತ್ತೇನೆ ಎಂದಿದ್ದರು. 

ಕೆಲ ದಿನಗಳ ಹಿಂದೆ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಸೇನಾ ಮುಖ್ಯಸ್ಥ ಜನರಲ್‌ ವಕಾರ್‌ ಜಮಾನ್‌ ಅವರಿಗೆ ಪತ್ರ ಬರೆದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿತ್ತು. ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವಂತೆ ಕಾಣುತ್ತಿಲ್ಲ ಹೀಗಾಗಿ ಐಸಿಸಿ ಪರ್ಯಾಯ ಸ್ಥಳದ ಹುಡುಕಾಟ ನಡೆಸುತ್ತಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಈ ಟೂರ್ನಿ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಬೇಕು.

ಶೇಕ್‌ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ ಬಳಿಕ ನಡೆದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕನಿಷ್ಠ 45 ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಹೀಗಾಗಿ ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎನ್ನಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

Continue Reading

ಕ್ರಿಕೆಟ್

MS Dhoni Fans: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಹಳೆಯ ಐಪಿಎಲ್​ ನಿಯಮ ಜಾರಿಗೆ ಮುಂದಾದ ಬಿಸಿಸಿಐ

MS Dhoni Fans: ಅನ್‌ಕ್ಯಾಪ್ಡ್ ಆಟಗಾರನಿಗೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ನೀಡಲಿದೆ. ಈ ನಿಯಮ ಜಾರಿಗೆ ಬಂದರೆ ಧೋನಿ ಇದೇ ಮೊತ್ತದಲ್ಲಿ ಚೆನ್ನೈಗಾಗಿ ಆಡುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇದೇ ಮೊತ್ತಕ್ಕೆ ಚೆನ್ನೈ ತಂಡ ಧೋನಿಯನ್ನು ಮತ್ತೆ ರೀಟೈನ್​ ಮಾಡಿಕೊಳ್ಳಬಹುದು

VISTARANEWS.COM


on

MS Dhoni Fans
Koo

ಮುಂಬಯಿ: 18ನೇ ಆವೃತ್ತಿಯ ಐಪಿಎಲ್(Indian Premier League)​ ವಿಚಾರದಲ್ಲಿ ದಿನಕ್ಕೊಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿವೆ. ಇದೀಗ ಈ ಪಟ್ಟಿಗೆ ಹೊಸದೊಂದು ವಿಚಾರ ಸೇರ್ಪಡೆಗೊಂಡಿದೆ. ವರದಿಯೊಂದರ ಪ್ರಕಾರ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ.

ಮೊದಲ ಸೀಸನ್‌ನಿಂದ ಜಾರಿಯಲ್ಲಿದ್ದ ಈ ನಿಯಮವನ್ನು 2021ರಲ್ಲಿ ರದ್ದುಗೊಳಿಸಲಾಗಿತ್ತು. ಕಳೆದ ತಿಂಗಳು ಮುಂಬೈಯಲ್ಲಿ ನಡೆದಿದ್ದ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಮತ್ತು ಬಿಸಿಸಿಐ ನಡುವಿನ ಸಭೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಆಡಳಿತವು ಈ ನಿಯಮವನ್ನು ಹಿಂದಿರುಗಿಸುವಂತೆ ಒತ್ತಾಯಿಸಿತ್ತು. ಇದೀಗ ಬಿಸಿಸಿಐ ಮತ್ತೆ ಈ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ ಎನ್ನಲಾಗಿದೆ. ಹೀಗಾದರೆ ಧೋನಿ(MS Dhoni) ಮುಂದಿನ ಬಾರಿಯೂ ಐಪಿಎಲ್​ ಆಡುವುದು ಖಚಿತ ಎನ್ನಲಾಗಿದೆ. ಅಲ್ಲದೆ ಈ ನಿಯಮ ಜಾರಿಗೊಳ್ಳಲಿದೆ ಎನ್ನುವಾಗಲೇ ಧೋನಿ ಅಭಿಮಾನಿಗಳು(MS Dhoni Fans) ಸಂತಸಗೊಂಡಿದ್ದಾರೆ.

ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಅನ್‌ಕ್ಯಾಪ್ಡ್ ಆಟಗಾರನಿಗೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ನೀಡಲಿದೆ. ಈ ನಿಯಮ ಜಾರಿಗೆ ಬಂದರೆ ಧೋನಿ ಇದೇ ಮೊತ್ತದಲ್ಲಿ ಚೆನ್ನೈಗಾಗಿ ಆಡುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇದೇ ಮೊತ್ತಕ್ಕೆ ಚೆನ್ನೈ ತಂಡ ಧೋನಿಯನ್ನು ಮತ್ತೆ ರೀಟೈನ್​ ಮಾಡಿಕೊಳ್ಳಬಹುದು. 2022ರ ಮೆಗಾ ಹರಾಜಿನ ಮೊದಲು, ಚೆನ್ನೈ 12 ಕೋಟಿಗೆ ಧೋನಿಯನ್ನು ತಂಡದಲ್ಲಿ ಉಳಿಸಿಕೊಂಡಿತ್ತು. “ಧೋನಿ ಅನ್‌ಕ್ಯಾಪ್ಡ್ ಆಟಗಾರನಾಗಿ ಆಡುತ್ತಾರಾ? ಇದೊಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ” ಎಂದು ಆರ್​.ಅಶ್ವಿನ್​ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

ಈ ಬಾರಿ ರೈಟ್​ ಟು ಮ್ಯಾಚ್​(ಆರ್​ಟಿಎಂ) ಕಾರ್ಡ್​ ಪದ್ಧತಿಯನ್ನೂ ಮತ್ತೆ ತರಲಾಗುವುದು ಎಂದು ವರದಿಯಾಗಿದೆ. ಆರ್​ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್​ನಲ್ಲಿ ಇದುವರೆಗೆ ವಿರಾಟ್​ ಕೊಹ್ಲಿ (ಆರ್​ಸಿಬಿ), ಜಸ್​ಪ್ರೀತ್​ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.

ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ

Continue Reading
Advertisement
Saif Ali Khan introduced as kushti expert Bhaira
ಕಾಲಿವುಡ್1 min ago

Devara Movie: ʻಭೈರʼ ಪಾತ್ರದಲ್ಲಿ ಅಬ್ಬರಿಸಿದ ಸೈಫ್ ಅಲಿ ಖಾನ್ ; ʻದೇವರʼ ಹೊಸ ಟೀಸರ್‌ ಔಟ್‌!

Kolkata Doctor Murder Case
ದೇಶ3 mins ago

Kolkata Doctor Murder Case: ಕರ್ತವ್ಯಕ್ಕೆ ಹಾಜರಾಗಲು ಪ್ರತಿಭಟನಾನಿರತ ವೈದ್ಯರಲ್ಲಿ ಕೇಂದ್ರದ ಮನವಿ

CM Siddaramaiah Ashok
ಪ್ರಮುಖ ಸುದ್ದಿ14 mins ago

CM Siddaramaiah: ರಾಜ್ಯಪಾಲರ ಆದೇಶ ಬಿಜೆಪಿ ಪಾದಯಾತ್ರೆಗೆ ದೊರೆತ ಯಶಸ್ಸು, ಮುಡಾ ತನಿಖೆ ಸಿಬಿಐಗೆ ಕೊಡಲಿ: ಆರ್‌. ಅಶೋಕ್

sexual abuse
ಕ್ರೈಂ19 mins ago

sexual abuse: ಪ್ರತಿ ಗಂಟೆಗೆ ನಡೆಯುವ 4 ಅತ್ಯಾಚಾರದಲ್ಲಿ 3 ಪ್ರಕರಣಗಳ ಆರೋಪಿಗಳು ಪರಿಚಿತರೇ! ಆಘಾತಕಾರಿ ಅಂಕಿಅಂಶ

Bajrang Punia
ಕ್ರೀಡೆ37 mins ago

Bajrang Punia: ತ್ರಿವರ್ಣ ಧ್ವಜದ ಪೋಸ್ಟರ್​ ಮೇಲೆ ಕಾಲಿಟ್ಟ ಬಜರಂಗ್ ಪೂನಿಯಾ; ವಿಡಿಯೊ ವೈರಲ್

DK Shivakumar and CM Siddaramaiah
ಪ್ರಮುಖ ಸುದ್ದಿ37 mins ago

CM Siddaramaiah: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೀತಾರಾ? ಡಿಕೆ ಶಿವಕುಮಾರ್ ಏನಂದ್ರು?

cm siddaramaiah 1
ಪ್ರಮುಖ ಸುದ್ದಿ41 mins ago

CM Siddaramaiah: ಸರ್ಕಾರಿ ನೌಕರರ ಹಿತಾಸಕ್ತಿ ಕಾಯಲು ನಾನು ಸದಾ ಸಿದ್ಧ: ಸಿಎಂ ಸಿದ್ದರಾಮಯ್ಯ

Bengaluru Power Cut
ಬೆಂಗಳೂರು45 mins ago

Bengaluru Power Cut: ಗಮನಿಸಿ… ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.18ರಂದು ಕರೆಂಟ್‌ ಇರಲ್ಲ

Viral Video
Latest47 mins ago

Viral Video: 12 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆಯಾದ 62ರ ಮುದುಕ! ಹೃದಯ ಕರಗಿಸುತ್ತದೆ ಈ ವಿಡಿಯೊ

Amrutha Prem gave sweet news on Varamahalakshmi festival!
ಸ್ಯಾಂಡಲ್ ವುಡ್54 mins ago

Amrutha Prem: ವರಮಹಾಲಕ್ಷ್ಮೀ ಹಬ್ಬದಂದೇ ಸಿಹಿ ಸುದ್ದಿ ಕೊಟ್ಟ ಅಮೃತಾ ಪ್ರೇಮ್!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌