Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ! - Vistara News

ಲೈಫ್‌ಸ್ಟೈಲ್

Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!

ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲಾಗದೇ ಇರುವುದಕ್ಕೆ ಹಲವು ಕಾರಣಗಳು ಇರುತ್ತವೆ. ಅದನ್ನು ಮೀರುವುದೂ ನಮ್ಮ ಕೈಯಲ್ಲೇ ಇದೆ. ಅದು ಹೇಗೆ? ಕೆಲವು ಸೂತ್ರಗಳು ಇಲ್ಲಿವೆ.

VISTARANEWS.COM


on

happy life
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
  • ರಾಧಿಕಾ ವಿಟ್ಲ

ಏನಾದರೂ ಸಾಧಿಸಲು ಆಸೆಯಿದೆ, ಆದರೆ ಸಾಧ್ಯವಾಗುತ್ತಿಲ್ಲ. ಗೊತ್ತುಗುರಿಯಿಲ್ಲದಂತೆ ದೇಶ ಸುತ್ತುವುದು, ತನ್ನದೇ ಒಂದು ಬ್ಯುಸಿನೆಸ್‌ಆರಂಭಿಸುವುದು, ಹೊಸ ಹೇರ್‌ಸ್ಟೈಲೊಂದನ್ನು ಟ್ರೈ ಮಾಡುವುದು, ತೀರಾ ತೊಂದರೆ ಕೊಡುತ್ತಿರುವ ಒಂದು ಕೆಟ್ಟ ಸಂಬಂಧದಿಂದ ಎದ್ದು ಹೊರ ನಡೆಯುವುದು… ಹೀಗೆ ಹತ್ತು ಹಲವು ಮಾಡಬೇಕೆಂದುಕೊಳ್ಳುವ ಕಾರ್ಯಗಳು ಪ್ರತಿಯೊಬ್ಬರ ಮನದಲ್ಲೂ ಇದ್ದೇ ಇರುತ್ತದೆ. ಆದರೆ, ಕೊನೆಯವರೆಗೂ ಮನಸ್ಸು ಮಾಡುವುದೇ ಇಲ್ಲ. ಕಷ್ಟವಾದರೂ ಹೊಂದಿಕೊಂಡು ಜೀವನ ನಡೆಸುವುದು, ಸುತ್ತಾಡಬೇಕೆಂದರೂ ಅದುಮಿಟ್ಟುಕೊಂಡು ಏಕತಾನತೆಯಲ್ಲಿ ದಿನದೂಡುವುದು, ಯಾವುದೇ ಹೊಸತನ್ನು ಪ್ರಯತ್ನಿಸಲು ಯೋಚಿಸಿದರೂ ʻಅರೆ, ವಯಸ್ಸಾಯ್ತು, ಜನ ಏನೆಂದುಕೊಂಡಾರುʼ ಎಂದು ತಳ್ಳಿಹಾಕುವುದು ಬಹುತೇಕರಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ.

1.. ಎಂಟು ಗಂಟೆಗಳಷ್ಟು ಚಂದ ನಿದ್ದೆ ಮಾಡಿದರೂ, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರದಿದ್ದರೂ, ಮಧ್ಯಾಹ್ನವಾಗುವ ಮೊದಲೇ ಸುಸ್ತಾಗಿಬಿಡುವುದು ಅಥವಾ ಕೆಲಸದಲ್ಲಿ ಉತ್ಸಾಹವೇ ನಿಂತು ಹೋಗಿದೆ ಅಂತ ನಿಮಗನಿಸಿದರೆ, ಖಂಡಿತ ನಿಮಗೇನೋ ಹೊಸತನದ ಅಗತ್ಯವಿದೆ ಎಂದರ್ಥ. ನಿಮಗೆ ಬದುಕಿನಲ್ಲಿ ಉತ್ಸಾಹ ತುಂಬುವ ಲವಲವಿಕೆಯಿಂದಿರುವ ಹೊಸ ಮಾರ್ಗ ಕಂಡುಕೊಳ್ಳುವ ಅವಶ್ಯಕತೆ ಇದೆ ಎಂದರ್ಥ.

2. ನೀವು ನಿಮ್ಮ ಕನಸನ್ನು ನನಸಾಗಿಸುವ ಕಡೆ ಪ್ರಯತ್ನ ಮಾಡುತ್ತಿಲ್ಲವಾದರೆ, ಪ್ರತಿ ಬಾರಿಯೂ ಅಂದುಕೊಂಡದ್ದನ್ನು ಮಾಡುವ ಯೋಚನೆಯನ್ನು ಮುಂದೂಡುತ್ತಲೇ ಇದ್ದರೆ ನಿಮಗೆ ನೀವು ಸೋತು ಹೋಗುವ ಭಯವಿದೆ ಎಂದೇ ಅರ್ಥ. ಅಂದುಕೊಂಡದ್ದನ್ನು ಮಾಡದೇ ಇದ್ದರೆ ಸೋಲುವ ಭಯವೇ ಇಲ್ಲ ಎಂಬುದು ನಿಜವೇ ಆದರೂ ಅಂದುಕೊಂಡದ್ದನ್ನು ಮಾಡದೇ ಇರುವುದು ನೀವು ನಿಮಗೇ ಮಾಡಿಕೊಳ್ಳುವ ಮೋಸ. ಸರಿಯಾದ ಸಮಯ ಬರಲಿ ಎಂದು ಕಾಯುವುದೂ ಪಲಾಯನವಾದವೇ.

3. ತಾನು ಅಂದುಕೊಂಡದ್ದನ್ನು ಸಾಧಿಸಲಾಗದೇ ಇದ್ದುದಕ್ಕೆ ಇತರರನ್ನು ದೂಷಿಸುವುದು. ಪ್ರತಿ ಸಾಧಕನೂ ತನ್ನ ಸಾಧನೆಯ ಹಾದಿಯಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ನೋಡಿರುತ್ತಾನೆ/ಳೆ. ಹಲವಾರು ಅವಮಾನಗಳನ್ನು ಸಹಿಸಿರುತ್ತಾನೆ/ಳೆ. ಆದರೆ ಇವೆಲ್ಲ ಅವರನ್ನು ವಿಚಲಿತಗೊಳಿಸಿರುವುದಿಲ್ಲ. ಕಷ್ಟದ ದಿನಗಳು ಸುಖದ ಹಾದಿಯನ್ನು ತೋರಿಸಿಯೇ ತೋರಿಸುತ್ತದೆ. ಮಾಡಲೇಬೇಕೆಂಬ ಛಲ ಎಲ್ಲ ಕಷ್ಟಗಳನ್ನು ಮೀರಿ ನಿಲ್ಲುವಂತೆ ಮಾಡುತ್ತದೆ. ಆದರೆ, ತನ್ನ ಕೈಲಾಗದೇ ಇದ್ದುದಕ್ಕೆ ಪರಿಸ್ಥಿತಿಯನ್ನು ದೂರುವುದೂ ಕೂಡಾ ಪಲಾಯನವಾದವೇ.

4. ನಿಮಗೆ ನಿಮ್ಮ ಮೇಲೆಯೇ ಧೈರ್ಯವಿರುವುದಿಲ್ಲ. ಬೇರೆಯವರು ಮಾಡಿದ್ದು ಸುಲಭವಾಗಿ ಕಾಣುತ್ತದೆ. ನಮಗೆ ನಮ್ಮ ಸಾಧನೆಯ ಹಾದಿ ಮಾತ್ರ ಕಷ್ಟವಾಗಿ ಕಾಣುತ್ತದೆ. ನಿಜವಾಗಿ ನೋಡಿದರೆ, ಮಾಡಿಯೇ ತೀರುತ್ತೇನೆ ಎಂಬ ಧೈರ್ಯ ನಿಮಗಿರುವುದಿಲ್ಲ. ನಾನು ಮಾಡಬಲ್ಲೆ ಎಂಬ ಏಕಾಗ್ರ ಧ್ಯಾನವಷ್ಟೇ ಮುಂದೆ ಕೊಂಡೊಯ್ಯಬಲ್ಲದು.

5. ಯೋಚನೆ ಬಹಳ ಮಾಡುತ್ತೀರಿ, ಆದರೆ ಕೆಲಸ ಮಾಡುವುದು ಸ್ವಲ್ಪವೇ. ಮಾಡಬೇಕೆಂದುಕೊಂಡ ಕಾರ್ಯಗಳ ಕಲ್ಪನೆಯಲ್ಲೇ ಸಮಯ ದೂಡುವುದು, ಸರಿಯಾದ ಸಮಯ ಬಂದೇ ಇಲ್ಲವೆಂಬಂತೆ ಸ್ವಲ್ಪವೇ ಮಾಡುವುದು ಕೂಡಾ ನೀವು ಸಾಧಿಸಲಾಗದೇ ಇರುವುದಕ್ಕೆ ಮೂಲ ಕಾರಣ.

6. ಒಂದಲ್ಲ ಒಂದು ದಿನ ಮಾಡುತ್ತೇನೆ ಅಂದುಕೊಳ್ಳುವುದು. ಆದರೆ, ಬಾಲ್‌ನಿಮ್ಮ ಕಾಲ ಬಳಿಯೇ ಇದ್ದರೂ ಸ್ವಪ್ರಯತ್ನದಿಂದ ಶಕ್ತಿಯನ್ನೆಲ್ಲ ಹಾಕಿ ಒದೆಯದೇ ಇರುವುದು!

ಇದನ್ನೂ ಓದಿ: World Motorcycle Day | ಬೈಕೆಂಬ ಭಾವಗೀತೆ! ನೆನಪುಗಳ ಗಂಟು, ಅಳಿಸಲಾಗದ ಪ್ರೀತಿ ನಂಟು

7. ಇತರರನ್ನು ದ್ವೇಷಿಸುವುದು. ಇತರರ ಮನೆ, ಅವರ ಜೀವನ ಶೈಲಿ, ಅವರ ಸಾಧನೆ, ಅವರ ಹಣ, ಸಂಬಂಧಗಳು ಎಲ್ಲವೂ ನಿಮಗೆ ಅಸೂಯೆ ಹುಟ್ಟಿಸುವುದು. ಅವರಿಗೆ ಇದೆಲ್ಲ ಸಾಧ್ಯವಾಗಿದ್ದು ಅವರ ಅದೃಷ್ಟದಿಂದ, ಅತಿಯಾದ ಆಸೆಬುರುಕುತನದಿಂದ ಎಂದು ಸಮಜಾಯಿಶಿ ಕೊಟ್ಟುಕೊಳ್ಳುವುದು. ಅವರಲ್ಲಿರುವ ಯಾವುದೂ ನಿಮ್ಮಲ್ಲಿ ಇಲ್ಲ ಎಂದಾದಾಗ ಯಶಸ್ಸು ನಿಮ್ಮಲ್ಲಿಲ್ಲ ಎಂಬುದೇ ಇಂತಹ ಯೋಚನೆಗೆ ಕಾರಣವಾಗುತ್ತದೆ. ಇತರರ ಯಶಸ್ಸನ್ನೂ ಖುಷಿಯಿಂದಲೇ ಸಂಭ್ರಮಿಸಿ.

8. ಬದುಕಿಗೆ ಇಷ್ಟು ಸಾಕು ಎಂಬ ನಿರಾಶಾವಾದಿತನ. ಸೇಫ್‌ಆಗಿ ಬದುಕಿನ ಆಟ ಆಡಿ ಮುಗಿಸುವುದು ಬೇಕೋ, ಹಠದಿಂದ ವಿಜಯಮಾಲೆ ಬೇಕೇ ಬೇಕು ಎಂದು ಆಡುವುದು ಬೇಕೋ ನಿರ್ಧರಿಸಿಕೊಳ್ಳಿ. ಆಟದಲ್ಲಿ ಸೋಲೂ ಇರಬಹುದು, ಆದರೆ, ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯಬೇಡಿ.

9. ತನ್ನೊಂದಿಗೇ ಹಿಂದಿನ ಬೆಂಚ್‌ನಲ್ಲಿ ಕೂತು ಓದಿದ ಹುಡುಗ ಕೋಟ್ಯಾಧೀಶನಾದನೆಂದೋ, ಸಾಧಾರಣ ರೂಪಿನ ಹುಡುಗಿಗೆ ಅಸಾಮಾನ್ಯ ಹುಡುಗ ಸಿಕ್ಕನೆಂದೋ ಅಸೂಯೆ ಪಡುವುದು. ನಿಮಗೆ ಸಿಕ್ಕಿದ ಖುಷಿಗಳನ್ನು ಆಸ್ವಾದಿಸುತ್ತಾ ಇತರರ ಖುಷಿಯಲ್ಲೂ ಪಾಲ್ಗೊಳ್ಳುವ ಮನಸ್ಥಿತಿ ಬೆಳೆಸಿಕೊಂಡು ಅದನ್ನು ಸ್ಪೂರ್ತಿಯಾಗಿ ಬದಲಾಯಿಸಿಕೊಳ್ಳಬೇಕು.

10. ಒಳ್ಳೆಯ ಊಟ, ಗುಂಡು ಪಾರ್ಟಿ, ಟಿವಿ… ಇವಿಷ್ಟೇ ಪ್ರತಿದಿನದ ಖುಷಿಯ ಕ್ಷಣಗಳು ಎಂಬಲ್ಲಿಗೆ ನೀವು ಸೀಮಿತರಾದಿರಿ ಎಂದಾದರೆ ನೀವು ಬೆಳವಣಿಗೆಯತ್ತ ಮನಸ್ಸು ಮಾಡುತ್ತಿಲ್ಲ ಎಂದಷ್ಟೇ ಅರ್ಥ. ಯಾವಾಗಲಾದರೊಮ್ಮೆ ಇವೆಲ್ಲ ಖುಷಿಯೇ ನಿಜವಾದರೂ, ಇವಿಷ್ಟನ್ನೇ ನಿಮ್ಮನ್ನು ಆಳಲು ಬಿಟ್ಟರೆ ನಿಮಗೆ ನಿಜವಾಗಿ ಬೇಕಾಗಿರುವುದಾದರೂ ಏನು ಎಂಬ ಪ್ರಶ್ನೆ ಅಂತಿಮವಾಗಿ ಹಾಗೆಯೇ ಉಳಿದುಬಿಡುತ್ತದೆ.

ಇದನ್ನೂ ಓದಿ: Happiness: ಈ ಪುಟ್ಟ ದ್ವೀಪದ ಜನ ಸದಾ ಸಂತೋಷವಾಗಿರ್ತಾರೆ, ಯಾಕೆ ಗೊತ್ತೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

 Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Ayushman Bharat Yojana: ಆಯುಷ್ಮಾನ್ ಭಾರತ್ ಯೋಜನೆಯು ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯತ್ತ ಮಹತ್ವದ ಹೆಜ್ಜೆ. ದುರ್ಬಲ ಕುಟುಂಬಗಳಿಗೆ ಹೆಚ್ಚು ಅಗತ್ಯವಿರುವ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ. ಇದರ ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ, ಇದರಿಂದ ಸಿಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Ayushman Bharat Yojana
Koo

ಲಕ್ಷಾಂತರ ಭಾರತೀಯರಿಗೆ (indian) ಆರೋಗ್ಯ (health) ಸೇವೆಯನ್ನು (service) ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಪ್ರಯೋಜನ ಪಡೆಯುವುದು ಇನ್ನೂ ಹಲವಾರು ಮಂದಿಗೆ ಸವಾಲಾಗಿ ಪರಿಣಮಿಸಿದೆ. 2018ರಲ್ಲಿ ಜಾರಿಯಾಗಿರುವ ಆಯುಷ್ಮಾನ್ ಯೋಜನೆ ಇನ್ನೂ ಹಲವು ಮಂದಿಗೆ ಸರಿಯಾಗಿ ಅರ್ಥವೇ ಆಗಿಲ್ಲ. ಇದರಿಂದ ಸಾಕಷ್ಟು ಪರಿಣಾಮಕಾರಿಯಾಗಿ ಎಲ್ಲರನ್ನು ತಲುಪುವುದು ಸಾಧ್ಯವಾಗಿಲ್ಲ. ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯವಾದ ದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ಸವಾಲಾಗಿದೆ. ಇದನ್ನು ಗುರುತಿಸಿ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿತು. ಆಯುಷ್ಮಾನ್ ಭಾರತ್ ಯೋಜನೆಯು ಏನನ್ನು ಒಳಗೊಳ್ಳುತ್ತದೆ, ಆಯುಷ್ಮಾನ್ ಕಾರ್ಡ್ ಸೇರಿದಂತೆ ಅದರ ಪ್ರಯೋಜನಗಳಿಗಾಗಿ ಹೇಗೆ ನೋಂದಾಯಿಸಿಕೊಳ್ಳುವುದು ಎಂಬುದರ ಮಾಹಿತಿ ಇಲ್ಲಿದೆ.


ಏನಿದು ಆಯುಷ್ಮಾನ್ ಭಾರತ್ ಯೋಜನೆ?

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದು ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರವು ಪರಿಚಯಿಸಿದ ಪ್ರಮುಖ ಆರೋಗ್ಯ ಯೋಜನೆಯಾಗಿದೆ. ದುರಂತದ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ, ಅರ್ಹ ಫಲಾನುಭವಿಗಳು ನಿಗದಿತ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಮೊತ್ತದವರೆಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದು.

ಇದನ್ನೂ ಓದಿ: ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ನೋಂದಣಿ ಹೇಗೆ?

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಾಯಿಸಲು ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ.

ಅರ್ಹತೆಯನ್ನು ಪರಿಶೀಲಿಸಿ

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಣಿ ನಡೆಸುವ ಮೊದಲು ಆಯುಷ್ಮಾನ್ ಭಾರತ್ ಯೋಜನೆ ಪಡೆಯುವ ಅರ್ಹತೆ ನಿಮಗಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಇದು ಪ್ರಾಥಮಿಕವಾಗಿ ಸಾಮಾಜಿಕ ಆರ್ಥಿಕ ಅಂಶಗಳು ಮತ್ತು ಮನೆಯ ಆದಾಯವನ್ನು ಆಧರಿಸಿರುತ್ತದೆ.


ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರ

ಆಯುಷ್ಮಾನ್ ಭಾರತ್ ಯೋಜನೆಗಾಗಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಾಮಾನ್ಯ ಸೇವಾ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಪ್ರದೇಶದಲ್ಲಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರಗಳನ್ನು ಪತ್ತೆ ಮಾಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಲ್ಲಿಗೆ ಭೇಟಿ ಮಾಡಿ.

ಅಗತ್ಯ ದಾಖಲೆಗಳನ್ನು ಒದಗಿಸಿ

ನೋಂದಣಿ ಪ್ರಕ್ರಿಯೆಯಲ್ಲಿ ನಿಮ್ಮ ಅರ್ಹತೆಯನ್ನು ಸ್ಥಾಪಿಸಲು ನೀವು ಕೆಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇವುಗಳು ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಆದಾಯ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.

ಸಂಪೂರ್ಣ ನೋಂದಣಿ ಅರ್ಜಿ

ಒದಗಿಸಿದ ಮಾಹಿತಿಯ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಸೇವಾ ಕೇಂದ್ರದಲ್ಲಿ ಒದಗಿಸಲಾದ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ. ನಿಮ್ಮ ಕುಟುಂಬದ ಸದಸ್ಯರು, ಆದಾಯ ಮತ್ತು ಇತರ ಸಂಬಂಧಿತ ಮಾಹಿತಿಯ ಕುರಿತು ವಿವರಗಳನ್ನು ಒದಗಿಸಿ.

ಪರಿಶೀಲನೆ ಪ್ರಕ್ರಿಯೆ

ನೋಂದಣಿ ಫಾರ್ಮ್ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ ಅಧಿಕಾರಿಗಳು ಆಯುಷ್ಮಾನ್ ಭಾರತ್ ಯೋಜನೆಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸುತ್ತಾರೆ. ಈ ಪರಿಶೀಲನಾ ಪ್ರಕ್ರಿಯೆಯು ಸರ್ಕಾರಿ ಡೇಟಾಬೇಸ್‌ಗಳೊಂದಿಗೆ ಒದಗಿಸಲಾದ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡುವುದನ್ನು ಒಳಗೊಂಡಿರುತ್ತದೆ.

ಆಯುಷ್ಮಾನ್ ಕಾರ್ಡ್ ಸ್ವೀಕರಿಸಿ

ಅರ್ಹತೆಯ ಯಶಸ್ವಿ ಪರಿಶೀಲನೆಯ ಅನಂತರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುವ ಆಯುಷ್ಮಾನ್ ಕಾರ್ಡ್ ಅನ್ನು ನಿಮಗೆ ನೀಡಲಾಗುತ್ತದೆ. ಈ ಕಾರ್ಡ್ ಯೋಜನೆಯಲ್ಲಿ ನಿಮ್ಮ ದಾಖಲಾತಿಗೆ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಅನುಮತಿ ನೀಡುತ್ತದೆ.

doctor

ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಿ

ಆಯುಷ್ಮಾನ್ ಕಾರ್ಡ್‌ನೊಂದಿಗೆ ನೀವು ಇದೀಗ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಯಾವುದೇ ಎಂಪನೆಲ್ ಮಾಡಲಾದ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದು. ನಗದು ರಹಿತ ಚಿಕಿತ್ಸಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ಕಾರ್ಡ್ ಅನ್ನು ಆಸ್ಪತ್ರೆಯ ಸ್ವಾಗತ ವಿಭಾಗದಲ್ಲಿ ನೀಡಿ.

ಪ್ರಯೋಜನಗಳು ಏನೇನು?

ಆಯುಷ್ಮಾನ್ ಕಾರ್ಡ್‌ ಹೊಂದಿರುವುದರಿಂದ ಪ್ರಮುಖ ಪ್ರಯೋಜನಗಳು ಇಂತಿವೆ.

ದುರ್ಬಲ ಕುಟುಂಬಗಳಿಗೆ ರಕ್ಷಣೆ

ಆಯುಷ್ಮಾನ್ ಭಾರತ್ ಯೋಜನೆಯು ಭಾರತದಾದ್ಯಂತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೆಚ್ಚಿನ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕ ರಕ್ಷಣೆ ನೀಡುತ್ತದೆ.

ನಗದು ರಹಿತ ಚಿಕಿತ್ಸೆ

ಯೋಜನೆಯ ಫಲಾನುಭವಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ನಿಗದಿತ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.

ವ್ಯಾಪಕ ಆಸ್ಪತ್ರೆ ನೆಟ್‌ವರ್ಕ್

ಅಯುಷ್ಮಾನ್ ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳನ್ನು ಒಳಗೊಂಡಂತೆ ನಿಗದಿತ ಆಸ್ಪತ್ರೆಗಳ ವ್ಯಾಪಕ ಜಾಲವನ್ನು ಹೊಂದಿದೆ. ಇದು ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸಹಕರಿಸುತ್ತದೆ.

Ayushman Card

ಆಯುಷ್ಮಾನ್ ಕಾರ್ಡಗೆ ಅಗತ್ಯವಿರುವ ದಾಖಲೆಗಳು

1. ನಿವಾಸದ ಗುರುತು ಪತ್ರ
2. ವಯಸ್ಸು ಮತ್ತು ಗುರುತಿನ ಪುರಾವೆ- ಉದಾಹರಣೆಗೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್
3. ಜಾತಿ ಪ್ರಮಾಣಪತ್ರ
4. ಸಂಪರ್ಕ ಮಾಹಿತಿ- ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ
5. ಆದಾಯ ಪ್ರಮಾಣ ಪತ್ರ
6. ಪ್ರಸ್ತುತ ಕುಟುಂಬದ ಸ್ಥಿತಿಯನ್ನು ಸೂಚಿಸುವ ದಾಖಲೆಗಳು

Continue Reading

ವಾಣಿಜ್ಯ

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

Donkey milk: ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ. ಗುಜರಾತ್‌ನಲ್ಲಿ ಧೀರೇನ್ ಸೋಲಂಕಿ ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ಕತ್ತೆ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌? ಇದರ ಹಿನ್ನೆಲೆ ಏನು? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

donkey milk
Koo

ಹಾಲು (milk) ಮಾರಾಟ ಮಾಡಿ ತಿಂಗಳಿಗೊಂದು ಎಷ್ಟು ಆದಾಯ ಗಳಿಸಬಹುದು? ಅಬ್ಬಬ್ಬಾ ಎಂದರೆ 10 ಸಾವಿರ ರೂ. ಗಡಿ ದಾಟಿದರೆ ಬಹುದೊಡ್ಡದು. ಆದರೆ ಇಲ್ಲೊಬ್ಬರು ಹಾಲು ಮಾರಾಟದಿಂದಲೇ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ ಇವರು ಮಾರುತ್ತಿರುವ ಹಾಲು ಹಸುವಿನದಲ್ಲ (cow) ಕತ್ತೆಯದ್ದು (Donkey milk).

ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ (white gold). ಗುಜರಾತ್‌ನಲ್ಲಿ (gujarat) ಧೀರೇನ್ ಸೋಲಂಕಿ ( Dhiren Solanki) ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಪಟಾನ್ ಜಿಲ್ಲೆಯಲ್ಲಿ 42 ಕತ್ತೆಗಳಿರುವ ಫಾರ್ಮ್ ಹೊಂದಿರುವ ಧೀರೇನ್ ಸೋಲಂಕಿ, ದಕ್ಷಿಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಬೆಲೆಬಾಳುವ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Tech Mahindra: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಸುಮಾರು ಎಂಟು ತಿಂಗಳ ಹಿಂದೆ ಕೇವಲ 20 ಕತ್ತೆಗಳೊಂದಿಗೆ 22 ಲಕ್ಷ ರೂ.ಗಳ ಆರಂಭಿಕ ಹೂಡಿಕೆ ಮಾಡಿರುವ ಸೋಲಂಕಿ ಈಗ ಕೋಟ್ಯಂತರ ಮೌಲ್ಯದ ಹಾಲು ವ್ಯಾಪಾರ ನಡೆಸುತ್ತಿದ್ದಾರೆ.

ಪ್ರಾರಂಭದಲ್ಲಿ ಸವಾಲು

ಗುಜರಾತ್‌ ನಲ್ಲಿ ಕತ್ತೆ ಹಾಲಿಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ಪ್ರಾರಂಭಿಸಿದ ಐದು ತಿಂಗಳು ಸೋಲಂಕಿ ಅವರು ತುಂಬಾ ಕಷ್ಟ ಪಟ್ಟಿದ್ದರು. ಅದರ ಅನಂತರ ಅವರು ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿನ ಹೆಚ್ಚಿನ ಅಗತ್ಯತೆ ಇರುವಲ್ಲಿ ತಮ್ಮ ವ್ಯಾಪ್ತಿಯನ್ನು ಬೆಳೆಸುವ ನಿರ್ಧಾರವನ್ನು ಮಾಡಿದರು.

ಪ್ರಸ್ತುತ ಅವರು ಕತ್ತೆ ಹಾಲನ್ನು ಹೆಚ್ಚಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಒದಗಿಸುತ್ತಿದ್ದಾರೆ. ಅವರ ಕೆಲವು ಗ್ರಾಹಕರು ಕತ್ತೆಗಳ ಹಾಲನ್ನು ಬಳಸುವ ಸೌಂದರ್ಯವರ್ಧಕ ಸಂಸ್ಥೆಗಳಾಗಿವೆ.


ಲೀಟರ್‌ಗೆ 5ರಿಂದ 7 ಸಾವಿರ ರೂ.

ಸೋಲಂಕಿ ಪ್ರಕಾರ ಕತ್ತೆ ಹಾಲು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 5,000 ರಿಂದ 7,000 ರೂ. ಗೆ ಮಾರಾಟವಾಗುತ್ತಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಲೀಟರ್‌ಗೆ 65 ರೂ. ಗೆ ಮಾರಾಟವಾಗುತ್ತದೆ. ಹಾಲಿನ ತಾಜಾತನವನ್ನು ಕಾಪಾಡಲು ರೆಫ್ರಿಜರೇಟರ್‌ಗಳಲ್ಲಿ ಇರಿಸಲಾಗುತ್ತದೆ.

ದುಬಾರಿಯಾಗಲು ಕಾರಣ

ಕತ್ತೆಯ ಹಾಲಿನ ಬಗ್ಗೆ ಜನಪ್ರಿಯತೆ ಈಗಷ್ಟೇ ಬೆಳೆಯುತ್ತಿದೆ. ಬಹುತೇಕ ಫಾರ್ಮ್‌ಗಳು ಚಿಕ್ಕದಾಗಿದ್ದು, ಐದರಿಂದ 30 ಹಾಲು ಕರೆಯುವ ಕತ್ತೆಗಳನ್ನು ಒಳಗೊಂಡಿರುತ್ತದೆ. ಪ್ರತಿ ದಿನವೂ ಸರಿಸುಮಾರು ನಾಲ್ಕು ಕಪ್ ಅಂದರೆ ಒಂದು ಲೀಟರ್ ಹಾಲನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಹೀಗಾಗಿ ಹಾಲು ಸ್ವಲ್ಪ ದುಬಾರಿಯಾಗಿದೆ ಮತ್ತು ಪಡೆಯುವುದು ಕಷ್ಟವಾಗುತ್ತದೆ.

ಕತ್ತೆ ಹಾಲಿನ ಪ್ರಯೋಜನಗಳು

ಕತ್ತೆ ಹಾಲಿನ ಬಳಕೆ ಸುಮಾರು 10 ಸಾವಿರ ವರ್ಷಗಳಿಂದಲೂ ಇದೆ. ಅದರ ಪೌಷ್ಟಿಕಾಂಶ ದಿಂದಾಗಿ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ.

ಕತ್ತೆ ಹಾಲಿನ ಇತಿಹಾಸ

ಹಿಂದಿನ ಕಾಲದಲ್ಲಿ ಶಿಶುಗಳ ಆಹಾರಕ್ಕಾಗಿ ಕತ್ತೆ ಹಾಲನ್ನು ಬಳಸುವುದು ಸಾಮಾನ್ಯವಾಗಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕೂಡ ಅದನ್ನು ಇಷ್ಟಪಟ್ಟಿದ್ದಳು. ಅವಳು ತನ್ನ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು. ದಂತಕಥೆಯ ಪ್ರಕಾರ ಅವಳಿಗೆ ನಿತ್ಯ ಅಗತ್ಯವಾದ ಹಾಲು ಒದಗಿಸಲು ಸುಮಾರು 700 ಕತ್ತೆಗಳು ಬೇಕಾಗಿದ್ದವು ಎನ್ನಲಾಗುತ್ತದೆ.

ಕತ್ತೆ ಹಾಲು ಮುಖದ ಚರ್ಮದಿಂದ ಸುಕ್ಕುಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದು ಮತ್ತು ಬಿಳಿಯನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ರೋಮನ್ ಚಕ್ರವರ್ತಿ ನೀರೋನ ಹೆಂಡತಿ ಪೊಪ್ಪಿಯಾ ಸ್ನಾನಕ್ಕೂ ಸಹ ಕತ್ತೆ ಬಳಸುತ್ತಿದ್ದಳು. ಈ ಕಾರಣಕ್ಕಾಗಿ, ಅವಳು ಪ್ರಯಾಣ ಮಾಡುವಾಗ ಕತ್ತೆಗಳ ಹಿಂಡುಗಳನ್ನು ಜೊತೆಗೆ ಕೊಂಡೊಯ್ಯುತ್ತಿದ್ದಳು.

ಕತ್ತೆ ಹಾಲಿನ ವಿಶೇಷತೆ

ಕತ್ತೆ ಹಾಲು ಹಸುವಿನ ಹಾಲು ಮತ್ತು ಮಾನವ ಎದೆ ಹಾಲು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಪ್ರೋಟೀನ್ ಜೊತೆಗೆ ಇದು ಜೀವಸತ್ವ, ವಿಶೇಷವಾಗಿ ವಿಟಮಿನ್ ಡಿ ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಕತ್ತೆ ಹಾಲು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಇವುಗಳಲ್ಲಿ ಹೆಚ್ಚಿನವು ಕಾರ್ಬೋಹೈಡ್ರೇಟ್‌ಗಳಿಂದ ಲ್ಯಾಕ್ಟೋಸ್ ಹಾಲಿನಲ್ಲಿರುವ ಸಕ್ಕರೆಯ ರೂಪದಲ್ಲಿರುತ್ತದೆ.

ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿಯನ್ನು ಹೊಂದಿರುವ ಅನೇಕ ಜನರು ಕತ್ತೆ ಹಾಲನ್ನು ಅದರ ಕಡಿಮೆ ಕ್ಯಾಸೀನ್ ಮಟ್ಟದಿಂದ ಸೇವಿಸಬಹುದು. ಏಕೆಂದರೆ ಕತ್ತೆ ಹಾಲು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ.


ಕತ್ತೆ ಹಾಲಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದು, ಬಲವಾದ ಮೂಳೆಗಳಿಗೆ ಅಗತ್ಯವಾದ ಖನಿಜಾಂಶವನ್ನು ಇದು ಒಳಗೊಂಡಿದೆ.

2010ರ ಪ್ರಯೋಗಾಲಯದ ಅಧ್ಯಯನದ ಪ್ರಕಾರ ಕತ್ತೆ ಹಾಲು ಸೈಟೊಕಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್‌ಗಳಾಗಿವೆ. ಹಾಲು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಜೀವಕೋಶಗಳಿಗೆ ಕಾರಣವಾಗುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ.

Continue Reading

ಆರೋಗ್ಯ

Baking Soda Benefits: ಅಡುಗೆ ಸೋಡಾದಿಂದ ಎಷ್ಟೊಂದು ಪ್ರಯೋಜನಗಳಿವೆ ನೋಡಿ!

ಸೋಡಿಯಂ ಬೈಕಾರ್ಬೋನೇಟ್‌ ಎಂಬ ರಾಸಾಯನಿಕ ನಾಮಧೇಯವನ್ನು ಹೊಂದಿರುವ ಈ ಬೇಕಿಂಗ್‌ ಸೋಡಾ ಕೇವಲ ಬೇಕಿಂಗ್‌ಗೆ ಮಾತ್ರವಲ್ಲದೆ, ಸಾಕಷ್ಟು ಅಡುಗೆಗಳಲ್ಲೂ, ಅವಸರದ ತಿಂಡಿಗಳಲ್ಲೂ ಬಳಕೆಯಾಗುತ್ತದೆ. ಆದರೆ ಇವಿಷ್ಟೇ ಅಲ್ಲದೆ, ಕೀಟದ ಕಡಿತದಿಂದ ಹಿಡಿತು ಮನೆಯ ಮೂಲೆಗಳ ಕ್ಲೀನಿಂಗ್‌ವರೆಗೆ ಬೇಕಿಂಗ್‌ ಸೋಡಾ ಹಲವು ಉಪಯೋಗಗಳನ್ನೂ (Baking Soda Benefits) ಹೊಂದಿದೆ.

VISTARANEWS.COM


on

Baking Soda Benefits
Koo

ಬೇಕಿಂಗ್‌ನಲ್ಲಿ ಆಸಕ್ತಿ ಇರುವ ಎಲ್ಲರ ಮನೆಗಳಲ್ಲೂ ಖಂಡಿತವಾಗಿಯೂ ಅಡುಗೆ ಕೋಣೆಯಲ್ಲಿರುವ ಸಾಮಾನ್ಯ ವಸ್ತು ಎಂದರೆ ಅದರು ಬೇಕಿಂಗ್‌ ಸೋಡಾ. ಸೋಡಿಯಂ ಬೈಕಾರ್ಬೋನೇಟ್‌ ಎಂಬ ರಾಸಾಯನಿಕ ನಾಮಧೇಯವನ್ನು ಹೊಂದಿರುವ ಈ ಬೇಕಿಂಗ್‌ ಸೋಡಾ ಕೇವಲ ಬೇಕಿಂಗ್‌ಗೆ ಮಾತ್ರವಲ್ಲದೆ, ಸಾಕಷ್ಟು ಅಡುಗೆಗಳಲ್ಲೂ, ಅವಸರದ ತಿಂಡಿಗಳಲ್ಲೂ ಬಳಕೆಯಾಗುತ್ತದೆ. ಆದರೆ ಇವಿಷ್ಟೇ ಅಲ್ಲದೆ, ಕೀಟದ ಕಡಿತದಿಂದ ಹಿಡಿತು ಮನೆಯ ಮೂಲೆಗಳ ಕ್ಲೀನಿಂಗ್‌ವರೆಗೆ ಬೇಕಿಂಗ್‌ ಸೋಡಾ ಹಲವು ಉಪಯೋಗಗಳನ್ನೂ ಹೊಂದಿದೆ. ಹಾಗೆ ನೋಡಿದರೆ, ಮನೆಯ ಹಲವು ವಿಷಯಗಳಿಗೆ ಬೇಕಿಂಗ್‌ ಸೋಡಾ ತುರ್ತಾಗಿ ಉಪಯೋಗವಾಗಬಲ್ಲ ಒಂದು ಆಪದ್ಭಾಂಧವ. ಬನ್ನಿ, ಅಡುಗೆಯಲ್ಲದೆ, ಬೇಕಿಂಗ್‌ ಸೋಡಾದ ಕೆಲವು ಅದ್ಭುತ ಉಪಯೋಗಗಳನ್ನು (Baking Soda Benefits) ತಿಳಿಯೋಣ ಬನ್ನಿ.

toothpaste

ಟೂತ್‌ಪೇಸ್ಟ್‌ಗೆ ಪರ್ಯಾಯ!

ಮನೆಯಲ್ಲಿ ಟೂತ್‌ಪೇಸ್ಟ್‌ ಖಾಲಿಯಾಗಿದೆಯಾ? ತಂದಿಡಲು ಮರೆತೇಬಿಟ್ಟಿರೋ? ಹಾಗಿದ್ದರೆ ಇಲ್ಲಿ ನಿಮ್ಮ ಆಪದ್ಭಾಂಧವ ಇದೇ ಬೇಕಿಂಗ್‌ ಸೋಡಾ. ಹೌದು. ಸ್ವಲ್ಪ ಬೇಕಿಂಗ್‌ ಸೋಡಾವನ್ನು ಅರ್ಧ ಚಮಚ ತೆಂಗಿನೆಣ್ಣೆಯೊಂದಿಗೆ ಕಲಸಿಕೊಂಡು ಪೇಸ್ಟ್‌ನ ಹಾಗೆ ಮಾಡಿ ಹಲ್ಲುಜ್ಜಿ. ಹಲ್ಲು ಪಳಪಳನೆ ಹೊಳೆಯುವುದಷ್ಟೇ ಅಲ್ಲ, ಅಲ್ಲ ಕೊಳೆಯೂ ಹಲ್ಲಿನಿಂದ ಹೊರಟುಹೋಗಿ ಹಲ್ಲು ಸ್ವಚ್ಛವಾಗುತ್ತದೆ. ಬಾಯಿಯೂ ಸ್ವಚ್ಛವಾಗುತ್ತದೆ. ಆದರೆ, ಇದನ್ನೇ ನಿತ್ಯವೂ ಮಾಡಬೇಡಿ. ಇದು ವಸಡನ್ನು ಹಾಳು ಮಾಡಬಹುದು. ಅಪರೂಪಕ್ಕೊಮ್ಮೆ ಹಲ್ಲನ್ನು ಫಳಫಳಿಸಲು ಬಳಸಬಹುದು.

ವಾಸನೆ ಹೀರಿಕೊಳ್ಳುವ ಗುಣ

ಬೇಕಿಂಗ್‌ ಸೋಡಾ ಕೆಟ್ಟ ವಾಸನೆಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ನಿಮ್ಮ ಬಳಿ ಡಿಯೋಡೆರೆಂಟ್‌ ಖಾಲಿಯಾಗಿದೆ ಎಂದರೆ, ನಿಮ್ಮ ಕಂಕುಳದ ದುರ್ಗಂಧವನ್ನು ಹೋಗಲಾಡಿಸಲು ಈ ಬೇಕಿಂಗ್‌ ಸೋಡಾ ಸಹಾಯ ಮಾಡುತ್ತದೆ. ತುರ್ತು ಸಂದರ್ಭಗಳಲ್ಲಿ ಬೇಕಿಂಗ್‌ ಸೋಡಾವನ್ನು ನಿಮ್ಮ ಕಂಕುಳಕ್ಕೆ ಹಚ್ಚಿಕೊಂಡರೆ, ಕೆಟ್ಟ ದುರ್ಗಂಧವನ್ನು ಅದು ಹೀರಿಕೊಂಡು ನೀವು ಮುಜುಗರಕ್ಕೊಳಗಾಗುವುದನ್ನು ತಪ್ಪಿಸುತ್ತದೆ. ಕೇವಲ ಕಂಕುಳದ ದುರ್ಗಂಧ ಮಾತ್ರವಲ್ಲ, ಶೂ, ಚಪ್ಪಲಿ, ಸಾಕ್ಸ್‌ ಫ್ರಿಡ್ಜ್‌, ಮೈಕ್ರೋವೇವ್‌, ಡ್ರಾವರ್‌ಗಳು ಹೀಗೆ ನಿಮ್ಮ ಬಳಕೆಯ ಯಾವುದೇ ವಸ್ತು ದುರ್ಗಂಧ ಬೀರುತ್ತಿದ್ದರೆ ಸ್ವಚ್ಛಗೊಳಿಸಲು, ದಿಢೀರ್‌ ಮುಕ್ತಿ ಹೊಂದಲು ಈ ಬೇಕಿಂಗ್‌ ಸೋಡಾ ನಿಮ್ಮ ನೆರವಿಗೆ ಬರುತ್ತದೆ. ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿಕೊಂಡು ಅದಕ್ಕೆ ಬೇಕಿಂಗ್‌ ಸೋಡಾ ಬೆರೆಸಿ ನೀವು ಈ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಬಹುದು.

Acidity Problem

ಅಸಿಡಿಟಿಗೆ ಮದ್ದು

ಅಸಿಡಿಟಿ ಅಥವಾ ಗ್ಯಾಸ್‌ನಿಂದಾಗಿ ಎದೆಯುರಿ, ಹೊಟ್ಟೆಯುಬ್ಬರದಂತಹ ಸಮಸ್ಯೆಯೇ? ಹಾಗಾದರೆ, ತಕ್ಷಣಕ್ಕೆ ನಿಮಗೆ ಸಹಾಯ ಬರುವ ವಸ್ತುಗಳ ಪೈಕಿ ಬೇಕಿಂಗ್‌ ಸೋಡಾವೂ ಒಂದು. ಹೊಟ್ಟೆಯಲ್ಲಿರುವ ಹೆಚ್ಚುವರಿ ಗ್ಯಾಸ್‌ ಅನ್ನು ಸಮತೋಲನಗೊಳಿಸುವಲ್ಲಿ ಈ ಬೇಕಿಂಗ್‌ ಸೋಡಾ ಅಥವಾ ಸೋಡಿಯಂ ಬೈಕಾರ್ಬೋನೇಟ್‌ ನೆರವಾಗುತ್ತದೆ.

ಅಂಟು ನಿವಾರಣೆಗೆ ಸೂಕ್ತ

ಎಣ್ಣೆಯುಕ್ತ ಅಂಟಾದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಕಷ್ಟಪಡುತ್ತಿದ್ದೀರಾ? ಹಾಗಿದ್ದರೆ, ಬೇಕಿಂಗ್‌ ಸೋಡಾ ನಿಮ್ಮ ಸಹಾಯಕ್ಕಿದೆ. ಎಣ್ಣೆ ನಿಮ್ಮ ಕಾರ್ಪೆಟ್‌/ಸೋಫಾ ಮೇಲೆ ಚೆಲ್ಲಿದರೆ, ಅಥವಾ ಬಟ್ಟೆ ಮೇಲೆ ಚೆಲ್ಲಿಕೊಂಡರೆ, ಅಥವಾ ಯಾವುದೇ ಎಣ್ಣೆ ಕಲೆಯಾದರೂ ಅದನ್ನು ಬೇಕಿಂಗ್‌ ಸೋಡಾ ಆ ಜಾಗಕ್ಕೆ ಹಾಕುವ ಮೂಲಕ ಸ್ವಚ್ಛಗೊಳಿಸಬಹುದು. ಬೇಕಿಂಗ್‌ ಸೋಡಾಕ್ಕೆ ಎಣ್ಣೆಯನ್ನು ಹೀರಿಕೊಳ್ಳುವ ಗುಣವಿದೆ.

ನೆಲ ಸ್ವಚ್ಛಗೊಳಿಸಲು

ನೆಲವನ್ನು ಸ್ವಚ್ಛಗೊಳಿಸಲು ಬೇಕಿಂಗ್‌ ಸೋಡಾ ಅತ್ಯಂತ ಒಳ್ಳೆಯ ಕ್ಲೀನರ್‌ನಂತೆ ವರ್ತಿಸುತ್ತದೆ. ಸ್ವಲ್ಪವೇ ಸ್ವಲ್ಪ ಬೇಕಿಂಗ್‌ ಸೋಡಾವನ್ನು ಬಿಸಿನೀರಿನೊಂದಿಗೆ ಸೇರಿಸಿ ಒರೆಸಿದರೆ ನೆಲ ಸ್ವಚ್ಛವಾಗುತ್ತದೆ.

Dish washing

ತಳ ಹಿಡಿದ ಪಾತ್ರೆ ಸ್ವಚ್ಛತೆಗೆ

ತಳಹಿಡಿದ ಪಾತ್ರೆಗಳನ್ನು ತೊಳೆಯುವುದು ತಲೆನೋವಿನ ಕೆಲಸವೇ? ಹಾಗಿದ್ದರೆ ಅಲ್ಲಿಯೂ ಈ ಬೇಕಿಂಗ್‌ ಸೋಡಾ ನೆರವಿಗೆ ಬರುತ್ತದೆ. ಸ್ವಲ್ಪ ಬೇಕಿಂಗ್‌ ಸೋಡಾವನ್ನು ಪಾತ್ರೆಗೆ ಹಾಕಿ ಬಿಸಿ ನೀರನ್ನು ಹಾಕಿಟ್ಟು ಅದಕ್ಕೆ ಸ್ವಲ್ಪ ಡಿಶ್‌ವಾಶರ್‌ ಲಿಕ್ವಿಡ್‌ ಹಾಕಿಟ್ಟು ಸ್ವಲ್ಪ ಹೊತ್ತು ನೆನೆಯಲು ಬಿಟ್ಟು ನಂತರ ತೊಳೆದರೆ ಕಪ್ಪಗಾದ ಪಾತ್ರೆಗಳು ಲಕಲಕನೆ ಹೊಳೆಯುತ್ತವೆ.

ಸೌಂದರ್ಯ ಸಾಧನ

ಬೇಕಿಂಗ್‌ ಸೋಡಾವನ್ನು ಸೌಂದರ್ಯ ಸಾಧನವಾಗಿಯೂ ಬಳಸಬಹುದು. ಬೇಕಿಂಗ್‌ ಸೋಡಾ ಅತ್ಯುತ್ತಮ ಎಕ್ಸ್‌ಫಾಲಿಯೇಟರ್‌ ಆಗಿಯೂ ವರ್ತಿಸುತ್ತದೆ. ಮುಖದ ಚರ್ಮದ ಡೆಡ್‌ ಸ್ಕಿನ್‌ ತೆಗೆದು ಹಾಕಲು ಸ್ಕ್ರಬ್‌ ಮಾಡಲು ಬೇಕಿಂಗ್‌ ಸೋಡಾ ಬಳಸಿ ತಾಜಾ ಹೊಳಪಾದ ಚರ್ಮ ಪಡೆಯಬಹುದು.

ಹಿಮ್ಮಡಿಯ ಸಮಸ್ಯೆಗೆ ಪರಿಹಾರ

ಕಾಲಿನ ಚರ್ಮವನ್ನು ನಾವು ಅತ್ಯಂತ ಕಡೆಗಣಿಸುತ್ತೇವೆ. ಬಿರುಸಾದ, ಒಡೆಯುವ ಹಿಮ್ಮಡಿಯ ಸಮಸ್ಯೆಗಳೂ ಸೇರಿದಂತೆ ಕಾಲಿನ ಚರ್ಮ ಕೊಳೆಯುಕ್ತವಾಗಿರುತ್ತದೆ. ಬೇಕಿಂಗ್‌ ಸೋಡಾವನ್ನು ಕಾಲಿಗೂ ಎಕ್ಸ್‌ಫಾಲಿಯೇಟರ್‌ ಆಗಿ ಬಳಸುವ ಮೂಲಕ ಕಾಲಿನ ಚರ್ಮವನ್ನು ಹೊಳೆಯುವಂತೆ ಮಾಡಬಹುದು. ಕೊಳೆ ತೊಲಗಿಸಿ, ನುಣುಪಾದ ಬಿರುಕುಗಳಿಂದ ಮುಕ್ತವಾಗಿರುವಂತೆ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

Continue Reading

ಫ್ಯಾಷನ್

Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ

ಬೇಸಿಗೆಯ ಫ್ಯಾಷನ್‌ ಫೋಟೋಶೂಟ್‌ಗಳಲ್ಲಿ ಇದೀಗ ಫ್ಲವರ್‌ ಕ್ರೌನ್‌ಗಳ (Flower Crown Trend) ಕಾರುಬಾರು. ಮಾಡೆಲ್‌ಗಳು ಮಾತ್ರವಲ್ಲ, ಸಾಮಾನ್ಯ ಹುಡುಗಿಯರು ಕೂಡ ಈ ಟ್ರೆಂಡ್‌ಗೆ ಫಿದಾ ಆಗಿದ್ದಾರೆ. ಈ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ವಿವರ.

VISTARANEWS.COM


on

Flower Crown Trend
Koo

ಶೀಲಾ ಸಿ, ಶೆಟ್ಟಿ, ಬೆಂಗಳೂರು

ಬಣ್ಣಬಣ್ಣದ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ ಆಗತೊಡಗಿದ್ದಾರೆ. ಅದು ಯಾಕಾಗಿ ಎಂದುಕೊಂಡಿದ್ದೀರಾ! ಬೇಸಿಗೆಯ ಫ್ಯಾಷನ್‌ ಫೋಟೋಶೂಟ್‌ ಇದೀಗ ಕಾಮನ್‌ ಆಗಿದೆ. ಇದಕ್ಕೆ ಪೂರಕ ಎಂಬಂತೆ, ಸಮ್ಮರ್‌ ಔಟ್‌ಫಿಟ್‌ಗಳು ಟ್ರೆಂಡಿಯಾಗಿದ್ದು, ಇವುಗಳನ್ನು ಹೊರತು ಪಡಿಸಿದರೇ, ಆಕ್ಸೆಸರೀಸ್‌ ವಿಭಾಗದಲ್ಲಿ ಮನಮೋಹಕ ಫ್ಲವರ್‌ ಕ್ರೌನ್‌ಗಳು (Flower Crown Trend) ಕಾಣಿಸಿಕೊಳ್ಳತೊಡಗಿವೆ. ಮಾಡೆಲ್‌ಗಳು ಮಾತ್ರವಲ್ಲ, ಸಾಮಾನ್ಯ ಫ್ಯಾಷನ್‌ ಪ್ರಿಯ ಹುಡುಗಿಯರು ಇವುಗಳ ಪ್ರಯೋಗ ಮಾಡಲಾರಂಭಿಸಿದ್ದು, ಪರಿಣಾಮ, ಫ್ಯಾಷನ್‌ ಫೋಟೋಶೂಟ್‌ಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಆಕರ್ಷಕ ಕಲರ್‌ಫುಲ್‌ ಹೂಗಳನ್ನು ಹೆಡ್‌ ಬ್ಯಾಂಡ್‌ನಂತೆ ಪೋಣಿಸಿ ನೆತ್ತಿ ಮೇಲೆ ಧರಿಸಿರುವ ಇಲ್ಲವೇ ಆರ್ಟಿಫಿಶಿಯಲ್‌ ಹೂವುಗಳಿಂದ ಸಿದ್ಧಪಡಿಸಿದ ಫ್ಲೋರಲ್‌ ಹೆಡ್‌ಬ್ಯಾಂಡ್‌ ಶೈಲಿಯವು, ಮಿನಿ ಫ್ಲವರ್‌ಗಳಿರುವ ಹೆಡ್‌ಬ್ಯಾಂಡ್‌ಗಳು ಟ್ರೆಂಡಿಯಾಗಿವೆ. ಇವನ್ನು ಚಿತ್ರ-ವಿಚಿತ್ರವಾಗಿ ಧರಿಸಿರುವ ಮಾಡೆಲ್‌ಗಳ ಫೋಟೋಗಳು ಬ್ಯೂಟಿ ಬ್ಲಾಗರ್ಸ್‌ ಹಾಗೂ ಇನ್‌ಪ್ಲೂಯೆನ್ಸರ್ ಖಾತೆಗಳಲ್ಲಿ ಹರಿದಾಡುತ್ತಿವೆ.

Flower Crown

ಏನಿದು ಫ್ಲವರ್‌ ಕ್ರೌನ್‌ ಕಾನ್ಸೆಪ್ಟ್‌?

ಫೇಸ್‌ ಆರ್ಟ್‌ನೊಂದಿಗೆ ಹೇರ್‌ಸ್ಟೈಲ್‌ ವಿನ್ಯಾಸಕ್ಕೂ ಅಂತರಾಷ್ಟ್ರೀಯ ರ್ಯಾಂಪ್‌ ಹಾಗೂ ಫೋಟೋಶೂಟ್‌ಗಳಲ್ಲಿ ಪ್ರಾಮುಖ್ಯತೆ ನೀಡಲಾಗುತ್ತದೆ. ಕೆಲವು ಕಾನ್ಸೆಪ್ಟ್‌ನಲ್ಲಿ ನೋಡಲು ಫೇರಿಟೇಲ್‌ ಕಥೆಯ ಪಾತ್ರದಂತೆ ಮಾಡೆಲ್‌ಗಳನ್ನು ಬಿಂಬಿಸಲಾಗುತ್ತದೆ. ಉಡುಪಿನ ವರ್ಣದಿಂದಿಡಿದು ಒಂದೊಂದು ಆಕ್ಸೆಸರೀಸನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮೊದಲೆಲ್ಲಾ ಕ್ರಿಸ್ಟಲ್‌ ಹೆಡ್‌ಬ್ಯಾಂಡ್‌ಗಳನ್ನು ಹೆಚ್ಚು ಬಳಸಲಾಗುತ್ತಿತ್ತು. ಇದೀಗ ಫ್ಲೋರಲ್‌ ಹೆಡ್‌ ಬ್ಯಾಂಡ್‌ಗಳು ಅದರಲ್ಲೂ ದೊಡ್ಡ ಹೂವುಗಳನ್ನು ಹೊಂದಿರುವಂತಹ ಫ್ಲವರ್‌ ಕ್ರೌನ್‌ಗಳನ್ನು ಇದಕ್ಕಾಗಿ ಬಳಸಲಾಗುತ್ತಿದೆ. ಇವು ಕ್ರಿಯೆಟಿವಿಟಿಯ ಸಂಕೇತ ಎನ್ನುತ್ತಾರೆ ಅಂತರಾಷ್ಟ್ರೀಯ ಮಟ್ಟದ ಶೋಗಳಲ್ಲಿ ವಾಕ್ ಮಾಡಿರುವ ಮಾಡೆಲ್‌ ಜೆನಿಫರ್‌. ಅಲ್ಲಿನ ರ್ಯಾಂಪ್‌ಗಳಲ್ಲಿ ಹಾಗೂ ಫೋಟೋ ಶೂಗಳಲ್ಲಿ ಇವನ್ನು ಹೈಲೈಟ್‌ ಮಾಡಲಾಗುತ್ತದೆ. ಹಾಗಾಗಿ ಆಗಾಗ್ಗೆ ಈ ಟ್ರೆಂಡ್‌ ಹೊಸ ರೂಪದೊಂದಿಗೆ ಮರುಕಳಿಸುತ್ತಲೇ ಇರುತ್ತದೆ ಎನ್ನುತ್ತಾರೆ.

flower crown lover

ಫ್ಲವರ್‌ ಕ್ರೌನ್‌ ಪ್ರಿಯರಿಗಾಗಿ

  • ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವ ಮುನ್ನ ಫ್ಲವರ್‌ ಕ್ರೌನ್‌ ಸರಿಯಾಗಿ ಫಿಟ್‌ ಆಗಿ ಕಾಣುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
  • ಟ್ರೆಂಡ್‌ನಲ್ಲಿರುವ ಹೂಗಳ ಕ್ರೌನ್‌ ಆಯ್ಕೆ ಮಾಡಿ.
  • ಮೇಕಪ್‌ ಇದಕ್ಕೆ ಸೂಟ್‌ ಆಗುವಂತಿರಬೇಕು.
  • ಇತರೇ ಆಕ್ಸೆಸರೀಸ್‌ ಕೂಡ ಮ್ಯಾಚ್‌ ಆಗಬೇಕು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Actress Saree Fashion: ಟ್ರೆಂಡಿ ಸನ್‌ ಶೇಡ್‌ ಸೀರೆಯಲ್ಲಿ ನಟಿ ತೇಜಸ್ವಿನಿ ಶರ್ಮಾ ಸಮ್ಮರ್‌ ಲುಕ್‌

Continue Reading
Advertisement
ಕರ್ನಾಟಕ5 mins ago

Parkinson’s disease: ಪಾರ್ಕಿನ್ಸನ್ ರೋಗಿಗಳಲ್ಲಿ ಡಿಬಿಎಸ್ ಚಿಕಿತ್ಸೆಗಾಗಿ ಹೊಸ ತಂತ್ರಜ್ಞಾನ- ಇದು ದೇಶದಲ್ಲೇ ಮೊದಲು

Drought Relief
ಕರ್ನಾಟಕ9 mins ago

Drought Relief: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

IRCTC Jyotirlinga Yatra
ಪ್ರವಾಸ10 mins ago

IRCTC Jyotirlinga Yatra: ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ವೀಕ್ಷಣೆ ಪ್ರವಾಸ; ದರ ವಿವರ ಇಲ್ಲಿದೆ

Viral Video
ವೈರಲ್ ನ್ಯೂಸ್11 mins ago

Fact Check: ಓವೈಸಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮಹಿಳೆ ಅಲ್ಲವೆ?

Road Accident in kalaburagi
ಕಲಬುರಗಿ13 mins ago

Road Accident : ಲಾರಿ- ಬೈಕ್‌ ಅಪಘಾತ; ಪತ್ನಿ ಕಣ್ಣೇದುರೇ ಒದ್ದಾಡಿ ಪ್ರಾಣಬಿಟ್ಟ ಪತಿ

food poisoning raichur news
ಕ್ರೈಂ14 mins ago

Food Poisoning: ಹಾಸ್ಟೆಲ್‌ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥ

Anupama Parameswaran Paradha next
ಟಾಲಿವುಡ್38 mins ago

Anupama Parameswaran: ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ ಅನೌನ್ಸ್‌: ನಟಿಯ ಲುಕ್‌ಗೆ ಫ್ಯಾನ್ಸ್‌ ಫಿದಾ!

PU Board exam girl writing exam
ಪ್ರಮುಖ ಸುದ್ದಿ59 mins ago

Public Exam: ಇನ್ನು ಮುಂದೆ ವರ್ಷಕ್ಕೆರಡು ಬಾರಿ ಬೋರ್ಡ್‌ ಪರೀಕ್ಷೆ ? ಪರಿಶೀಲನೆಗೆ ಸಿಬಿಎಸ್‌ಇಗೆ ಸೂಚನೆ

ಕ್ರೈಂ1 hour ago

Child Welfare commission: ಅಕ್ರಮವಾಗಿ ಸಾಗಿಸುತ್ತಿದ್ದ 95 ಮುಸ್ಲಿಂ ಮಕ್ಕಳ ರಕ್ಷಣೆ

jai sriram slogan viral news
ವೈರಲ್ ನ್ಯೂಸ್2 hours ago

Jai SriRam Slogan: ಉತ್ತರಪತ್ರಿಕೆಯಲ್ಲಿ `ಜೈ ಶ್ರೀರಾಮ್’ ಬರೆದ ವಿದ್ಯಾರ್ಥಿಗಳು ಪಾಸ್;‌ ಪ್ರಾಧ್ಯಾಪಕರು ವಜಾ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ23 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202424 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

ಟ್ರೆಂಡಿಂಗ್‌