Karnataka Election Results 4 constituencies of Uttara Kannada district in hand A lotus confined to 2 constituencies Karnataka Election Results: ಉತ್ತರ ಕನ್ನಡ ಜಿಲ್ಲೆಯ 4 ಕ್ಷೇತ್ರಗಳು ಕೈ ವಶ; 2 ಕ್ಷೇತ್ರಗಳಿಗೆ ಸೀಮಿತವಾದ ಕಮಲ - Vistara News

ಉತ್ತರ ಕನ್ನಡ

Karnataka Election Results: ಉತ್ತರ ಕನ್ನಡ ಜಿಲ್ಲೆಯ 4 ಕ್ಷೇತ್ರಗಳು ಕೈ ವಶ; 2 ಕ್ಷೇತ್ರಗಳಿಗೆ ಸೀಮಿತವಾದ ಕಮಲ

Karnataka Election Results: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Election Results) ಈಗಾಗಲೇ ಪ್ರಕಟಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಕಮಲ ಅರಳಿದ್ದ ಕರಾವಳಿ ಜಿಲ್ಲೆ ಉತ್ತರ ಕನ್ನಡವನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯುವಲ್ಲಿ ಕೈಪಾಳಯ ಯಶಸ್ವಿಯಾಗಿದೆ. ಓಟ್ಟು ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

VISTARANEWS.COM


on

Uttara Kannada district winning candidates
ಉತ್ತರ ಕನ್ನಡ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವಿಜೇತ ಅಭ್ಯರ್ಥಿಗಳು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಸ್.ಎಸ್.ಸಂದೀಪ ಸಾಗರ, ವಿಸ್ತಾರ ನ್ಯೂಸ್, ಕಾರವಾರ

ಕಾರವಾರ: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Election Results) ಈಗಾಗಲೇ ಪ್ರಕಟಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಕಮಲ ಅರಳಿದ್ದ ಕರಾವಳಿ ಜಿಲ್ಲೆ ಉತ್ತರ ಕನ್ನಡವನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯುವಲ್ಲಿ ಕೈಪಾಳಯ ಯಶಸ್ವಿಯಾಗಿದೆ. ಓಟ್ಟು ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಕಳೆದ ಬಾರಿ ಯಲ್ಲಾಪುರ ಕ್ಷೇತ್ರದ ಶಿವರಾಮ ಹೆಬ್ಬಾರ್ ಬಿಜೆಪಿ ಸೇರ್ಪಡೆಯೊಂದಿಗೆ ಆರು ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಂಡಿದ್ದ ಕಾಂಗ್ರೆಸ್, ಈ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಹಿಂದೆ ಐದರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಫಲಿತಾಂಶ ಬುಡಮೇಲಾಗಿದ್ದು, ಕಾರವಾರ, ಭಟ್ಕಳ, ಶಿರಸಿ ಹಾಗೂ ಹಳಿಯಾಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದರೆ, ಕುಮಟಾ ಹಾಗೂ ಯಲ್ಲಾಪುರ ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದೆ.

ಇದನ್ನೂ ಓದಿ: IPL 2023 : ರಾಜಸ್ಥಾನ್​ ತಂಡದ ವಿರುದ್ಧ ಜಯ; ಆರ್​ಸಿಬಿಗೆ ಇನ್ನೂ ಇದೆ ಪ್ಲೇಆಫ್​ ಚಾನ್ಸ್​

ಕಾರವಾರ ವಿಧಾನಭಾ ಕ್ಷೇತ್ರ

ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಎನ್ನುವಂತೆ ಕಂಡುಬಂದಿತ್ತಾದರೂ ಕೊನೆ‌ ಕ್ಷಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಮೊದಲ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರಾದರೂ ಕೊನೆಗೆ ಕಾಂಗ್ರೆಸ್ ಸಮಬಲದ ಪೈಪೋಟಿ ನೀಡಿತ್ತು. 22 ಸುತ್ತುಗಳ ಮತ‌ ಎಣಿಕೆ ಪ್ರಕ್ರಿಯೆಯಲ್ಲಿ 14 ಸುತ್ತುಗಳವರೆಗೆ ಬಹುತೇಕ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿಯನ್ನು 15ನೇ ಸುತ್ತಿನ ವೇಳೆಗೆ ಕಾಂಗ್ರೆಸ್ ಹಿಂದಿಕ್ಕಿತ್ತು. ಕೊನೆಯ ಸುತ್ತಿನ ವೇಳೆಗೆ ಕಾಂಗ್ರೆಸ್‌ ನ ಸತೀಶ್ ಸೈಲ್ 77,445 ಮತಗಳನ್ನು ಪಡೆದುಕೊಂಡು, 75,307 ಮತಗಳನ್ನು ಪಡೆದ ಬಿಜೆಪಿ ರೂಪಾಲಿ ನಾಯ್ಕರನ್ನು 2,138 ಮತಗಳ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೆದ್ದ ಅಭ್ಯರ್ಥಿ- ಸತೀಶ್ ಸೈಲ್- ಕಾಂಗ್ರೆಸ್ -77,445
ಪ್ರತಿಸ್ಪರ್ಧಿ- ರೂಪಾಲಿ ನಾಯ್ಕ- ಬಿಜೆಪಿ- 75307
ಗೆಲುವಿನ‌ ಅಂತರ- 2,138 ಮತಗಳು

ಕುಮಟಾ ವಿಧಾನಸಭಾ ಕ್ಷೇತ್ರ

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿತ್ತು. ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಗೆ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ನೇರಾನೇರ ಪ್ರತಿಸ್ಪರ್ಧೆ ಒಡ್ಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿತ್ತು. ಮೊದಲ ಸುತ್ತಿನಿಂದಲೂ ಈ ಎರಡು ಪಕ್ಷಗಳ ನಡುವೆಯೇ ಹಾವು-ಏಣಿ ಆಟದಂತೆ ಮುನ್ನಡೆ, ಹಿನ್ನಡೆ ಕಂಡುಬಂದಿದ್ದು, ಆರನೇ ಸುತ್ತಿನ‌ ಬಳಿಕ ಜೆಡಿಎಸ್ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿತ್ತು. ಇವಿಎಂ ಮತಗಳ ಎಣಿಕೆಯಲ್ಲಿ ಮುಂದೆ ಇದ್ದ ಸೂರಜ್ ನಾಯ್ಕ‌ ಸೋನಿಗೆ ಕೊನೆಗೆ ಪೋಸ್ಟಲ್ ಮತಗಳ ಎಣಿಕೆಯಲ್ಲಿ ಹಿನ್ನಡೆಯುಂಟಾಗಿದ್ದು ಕೊನೆಗೆ ಕೇವಲ 673 ಮತಗಳ ಅಂತರದಲ್ಲೇ ಬಿಜೆಪಿಯ ದಿನಕರ ಶೆಟ್ಟಿಗೆ ಪ್ರಯಾಸದ ಗೆಲುವು ಲಭಿಸಿದಂತಾಗಿದೆ. ಗೆಲುವಿನ ಹೊಸ್ತಿಲಲ್ಲಿದ್ದು ತೀರಾ ಕಡಿಮೆ ಅಂತರದಲ್ಲಿ ಸೋಲು ಕಾಣುವಂತಾಗಿದ್ದು ಜೆಡಿಎಸ್ ಅಭ್ಯರ್ಥಿ ಹಾಗೂ ಬೆಂಬಲಿಗರಿಗೆ ಮರ್ಮಾಘಾತ ಉಂಟಾಗುವಂತೆ ಮಾಡಿದೆ.

ಗೆದ್ದ ಅಭ್ಯರ್ಥಿ- ದಿನಕರ ಶೆಟ್ಟಿ- ಬಿಜೆಪಿ- 59,966
ಪ್ರತಿಸ್ಪರ್ಧಿ ಸೂರಜ ನಾಯ್ಕ ಸೋನಿ- ಜೆಡಿಎಸ್- 59293
ಗೆಲುವಿನ‌ ಅಂತರ- 673 ಮತಗಳು

ಇದನ್ನೂ ಓದಿ: Karnataka Election Results: ಸಿಎಂ ಆಯ್ಕೆಗೆ ಕಸರತ್ತು; ಘೋಷಣೆ ಕೂಗಿ ಸಿದ್ದು, ಡಿಕೆಶಿ ಬೆಂಬಲಿಗರ ಹೈಡ್ರಾಮಾ

ಭಟ್ಕಳ ವಿಧಾನಸಭಾ ಕ್ಷೇತ್ರ

ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಈ ಬಾರಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಗೆಲುವು ಸಾಧಿಸಿದ್ದಾರೆ. ಕ್ಚೇತ್ರದಲ್ಲಿದ್ದ ಬಿಜೆಪಿ ವಿರೋಧಿ ಅಲೆ ಮಂಕಾಳು ವೈದ್ಯ ಗೆಲುವಿನ ಮುನ್ಸೂಚನೆ ನೀಡಿದ್ದು, ಮತ‌ಎಣಿಕೆಯಲ್ಲೂ ಆರಂಭದಿಂದಲೇ ಮುನ್ನಡೆ ಕಂಡುಬಂದಿತ್ತು. ಅದರಲ್ಲೂ ಭಟ್ಕಳ ಭಾಗದ ಮತ‌ಎಣಿಕೆ ಆರಂಭದ ವೇಳೆಗಾಗಲೇ ಮಂಕಾಳು ವೈದ್ಯ ಬಿಜೆಪಿ‌ ಅಭ್ಯರ್ಥಿಯಿಂದ 10 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ‌ಗೆ ತೀವ್ರ ಹಿನ್ನಡೆಯುಂಟಾಗಿದ್ದು ಕೊನೆಯ ಸುತ್ತಿನ‌ ಮತ‌ಎಣಿಕೆ ವೇಳೆಗೆ 1 ಲಕ್ಷ ಮತಗಳನ್ನ ಪಡೆದ ಮಂಕಾಳು ವೈದ್ಯ ಮೊದಲ ಸ್ಥಾನವನ್ನ ಭದ್ರಪಡಿಸಿಕೊಂಡಿದ್ದು, ಬಿಜೆಪಿಯ ಸುನೀಲ್ ನಾಯ್ಕ‌ ಕೊನೆಗೆ 67 ಸಾವಿರ ಮತಗಳನ್ನು ಪಡೆದು, ಬರೋಬ್ಬರಿ 32,671 ಮತಗಳ‌ ಅಂತರದಿಂದ ಸೋಲುಂಡರು.

ಗೆದ್ದ ಅಭ್ಯರ್ಥಿ ಮಂಕಾಳು ವೈದ್ಯ- ಕಾಂಗ್ರೆಸ್- 1,00442
ಪ್ರತಿಸ್ಪರ್ಧಿ- ಸುನೀಲ್ ನಾಯ್ಕ- ಬಿಜೆಪಿ- 67,771
ಗೆಲುವಿನ ಅಂತರ- 32,671 ಮತಗಳು

ಶಿರಸಿ ವಿಧಾನಸಭಾ ಕ್ಷೇತ್ರ

ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿಯ ಸೋಲಿಲ್ಲದ ಸರದಾರನಿಗೆ ಈ ಬಾರಿ ಸೋಲುಣಿಸಿದ್ದು ಒಂದೆಡೆಯಾದರೆ, ಸತತ ಸೋಲುಗಳನ್ನೇ ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಗೆಲುವನ್ನು ಸಾಧಿಸಿ ಅಚ್ಚರಿಯ ದಾಖಲೆ ಬರೆದಿದ್ದಾರೆ. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸತತ 6 ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದರು. ಏಳನೇ ಬಾರಿಯೂ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಗೇರಿಯವರಿಗೆ ಕ್ಷೇತ್ರದ ಮತದಾರರು ಶಾಕ್ ನೀಡಿದ್ದಾರೆ. ಮತಎಣಿಕೆ ಆರಂಭದಿಂದಲೂ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ ಕಾಯ್ದುಕೊಂಡಿದ್ದರು. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಕೊಂಚ ಮತಗಳ ಅಂತರದಲ್ಲೇ ಕಾಗೇರಿಯನ್ನ ಹಿಂಬಾಲಿಸಿಕೊಂಡು ಬಂದಿದ್ದು, ಅಂತಿಮ ಮೂರು ಸುತ್ತಿನ ಮತಎಣಿಕೆಯಲ್ಲಿ ಬಿಜೆಪಿ ಹಿಂದಿಕ್ಕಿ ಕಾಂಗ್ರೆಸ್ ಮುನ್ನಡೆ ಸಾಧಿಸಿತು. ಇದರೊಂದಿಗೆ 8,712 ಮತಗಳ ಅಂತರದೊಂದಿಗೆ ಭೀಮಣ್ಣ ನಾಯ್ಕ ಗೆಲುವಿನ ನಗೆ ಬೀರಿದ್ದು, ಬಿಜೆಪಿಯ ಕಾಗೇರಿ ಅವರಿಗೆ ಮರ್ಮಾಘಾತ ನೀಡಿತು.

ಗೆದ್ದ ಅಭ್ಯರ್ಥಿ- ಭೀಮಣ್ಣ ನಾಯ್ಕ- ಕಾಂಗ್ರೆಸ್- 76,887
ಪ್ರತಿಸ್ಪರ್ಧಿ- ವಿಶ್ವೇಶ್ವರ ಹೆಗಡೆ ಕಾಗೇರಿ- ಬಿಜೆಪಿ- 68,175
ಗೆಲುವಿನ ಅಂತರ- 8,712 ಮತಗಳು

ಇದನ್ನೂ ಓದಿ: Karnataka Election: ಕರ್ನಾಟಕ ಸೇರಿ ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ?

ಯಲ್ಲಾಪುರ ವಿಧಾನಸಭಾ ಕ್ಷೇತ್ರ

ಕಳೆದ ಮೂರು ಅವಧಿಯಿಂದಲೂ ಶಿವರಾಮ ಹೆಬ್ಬಾರ್ ಅವರ ಗೆಲುವಿಗೆ ಸಾಕ್ಷಿಯಾಗಿರುವ ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಈ ಬಾರಿಯೂ ಸಹ ಹೆಬ್ಬಾರ್ ಗೆಲುವಿನ ನಗೆ ಬೀರಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಶಿವರಾಮ ಹೆಬ್ಬಾರ್ ಕಳೆದ 2018ರ ಚುನಾವಣೆ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಸಚಿವರ ಹುದ್ದೆ ಅಲಂಕರಿಸಿದ್ದರು. ಈ ಬಾರಿ ಎರಡನೇಯ ಅವಧಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ವಿ,ಎಸ್.ಪಾಟೀಲ್ ತೀವ್ರ ಪೈಪೋಟಿ ನೀಡುವ ಮೂಲಕ ಸೆಡ್ಡು ಹೊಡೆದಿದ್ದರು. 15ನೇ ಸುತ್ತಿನ ಮತಎಣಿಕೆ ವೇಳೆಗೆ ಕಾಂಗ್ರೆಸ್ ಒಮ್ಮೆ ಮುನ್ನಡೆ ಸಾಧಿಸಿತಾದರೂ, ಮುಂದಿನ ಸುತ್ತಿನಲ್ಲೇ ಮುನ್ನಡೆ ಕಾಯ್ದುಕೊಂಡ ಶಿವರಾಮ ಹೆಬ್ಬಾರ್ ಕೊನೆಗೆ 4,004 ಮತಗಳ ಅಂತರದಿಂದ ಸತತ ನಾಲ್ಕನೇ ಬಾರಿಗೆ ವಿಜಯದ ಮಾಲೆಯನ್ನ ತಮ್ಮ ಕೊರಳಿಗೆ ಧರಿಸಿದರು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ವಿಧಾನಸಭೆಗೆ ಪ್ರವೇಶ ಪಡೆದರು.

ಗೆದ್ದ ಅಭ್ಯರ್ಥಿ- ಶಿವರಾಮ ಹೆಬ್ಬಾರ್- ಬಿಜೆಪಿ- 74,699
ಪ್ರತಿಸ್ಪರ್ಧಿ – ವಿ.ಎಸ್.ಪಾಟೀಲ್- ಕಾಂಗ್ರೆಸ್ -70,695
ಗೆಲುವಿನ ಅಂತರ- 4,004 ಮತಗಳು

ಹಳಿಯಾಳ ವಿಧಾನಸಭಾ ಕ್ಷೇತ್ರ

ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ರಾಜ್ಯದಲ್ಲೇ ದಾಖಲೆ ಎನ್ನುವಂತೆ 9ನೇ ಬಾರಿಗೆ ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ ಗೆಲುವು ಸಾಧಿಸಿ ತಮ್ಮ ವಿರೋಧಿಗಳಿಗೆ ಸೆಡ್ಡು ಹೊಡೆದಿದ್ದಾರೆ. ಕಾಂಗ್ರೆಸ್‌ನಿಂದ ಈ ಹಿಂದೆ ಎರಡು ಭಾರಿ ವಿಧಾನಪರಿಷತ್ ಸದಸ್ಯರಾಗಿದ್ದ ಎಸ್.ಎಲ್.ಘೋಟ್ನೇಕರ್ ಕೊನೆಯ ಕ್ಷಣದಲ್ಲಿ ಪಕ್ಷ ತೊರೆದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ತೀವ್ರ ಪೈಪೋಟಿ ನಿರೀಕ್ಷೆ ಮೂಡಿಸಿದ್ದರು. ಜೊತೆಗೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಸಹ ದೇಶಪಾಂಡೆಯವರನ್ನೇ ಟಾರ್ಗೆಟ್ ಮಾಡಿದ್ದ ಪರಿಣಾಮ ಈ ಬಾರಿ ಹಳಿಯಾಳ ಕ್ಷೇತ್ರ ತ್ರಿಕೋನ ಸ್ಪರ್ಧೆಯ ಕುತೂಹಲ ಮೂಡಿಸಿತ್ತು. ಆರಂಭದಿಂದ 12ನೇ ಸುತ್ತಿನ ಮತಎಣಿಕೆವರೆಗೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಗೆಲುವಿನ ನಿರೀಕ್ಷೆ ಮೂಡಿಸಿತ್ತಾದರೂ 14ನೇ ಸುತ್ತಿನ ಬಳಿಕ ಆರಂಭವಾದ ಆರ್‌ವಿಡಿ ನಾಗಾಲೋಟ ಬಿಜೆಪಿ ಅಭ್ಯರ್ಥಿಯನ್ನ ಹಿಂದಿಕ್ಕುವಲ್ಲಿ ಯಶಸ್ವಿಯಾಗಿತ್ತು. ಜೆಡಿಎಸ್ ಅಭ್ಯರ್ಥಿ 28 ಸಾವಿರ ಮತಗಳನ್ನ ಪಡೆದರೂ ಸಹ 57 ಸಾವಿರ ಮತಗಳನ್ನ ತಮ್ಮದಾಗಿಸಿಕೊಳ್ಳುವ ಮೂಲಕ ಆರ್.ವಿ.ದೇಶಪಾಂಡೆ ಗೆಲುವಿನ ಹೊಸ್ತಿಲು ಏರಿದ್ದು, ಬಿಜೆಪಿ ಅಭ್ಯರ್ಥಿ 53 ಸಾವಿರ ಮತಗಳಿಗೇ ತಮ್ಮ ಓಟ ನಿಲ್ಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ 3,623 ಮತಗಳ ಅಂತರದ ಗೆಲುವನ್ನು ತಂದುಕೊಡುವಂತಾಯಿತು.

ಇದನ್ನೂ ಓದಿ: Karnataka Election 2023 : ಮುಖ್ಯಮಂತ್ರಿ ಆಯ್ಕೆಗೆ ಸಿಎಲ್‌ಪಿ ಸಭೆ ಶುರು; ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗಲಿ ಎಂದ ಆದಿಚುಂಚನಗಿರಿ ಶ್ರೀ

ಗೆದ್ದ ಅಭ್ಯರ್ಥಿ- ಆರ್.ವಿ.ದೇಶಪಾಂಡೆ- ಕಾಂಗ್ರೆಸ್- 57,240
ಪ್ರತಿಸ್ಪರ್ಧಿ – ಸುನೀಲ್ ಹೆಗಡೆ- ಬಿಜೆಪಿ -53,671
ಗೆಲುವಿನ ಅಂತರ- 3,623 ಮತಗಳು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Lok Sabha Election 2024: ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಬಿಜೆಪಿಗೆ ಅಧಿಕ ಬಹುಮತ ನಿಶ್ಚಿತ: ಹರಿಪ್ರಕಾಶ್‌ ಕೋಣೆಮನೆ

Lok Sabha Election 2024: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಹಾಗೂ ಮಂಡಲ ಪ್ರಮುಖರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಯಲ್ಲಾಪುರ ಪಟ್ಟಣದಾದ್ಯಂತ ಬುಧವಾರ ಮನೆ ಮನೆ ಪ್ರಚಾರ ನಡೆಸಿದರು.

VISTARANEWS.COM


on

BJP State Spokesperson Hariprakash konemane and leaders Election Campaign for BJP Candidate Vishweshwar Hegde Kageri in Yallapura
Koo

ಯಲ್ಲಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಹಾಗೂ ಮಂಡಲ ಪ್ರಮುಖರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಯಲ್ಲಾಪುರ ಪಟ್ಟಣದಾದ್ಯಂತ ಬುಧವಾರ ಮನೆ ಮನೆ ಪ್ರಚಾರ (Lok Sabha Election 2024) ನಡೆಸಿದರು.

ಮಹಾಸಂಪರ್ಕ ಅಭಿಯಾನದ ಅಂಗವಾಗಿ ಪಟ್ಟಣದ ಅಂಗಡಿಗಳು, ಸಂತೆ ಮಾರುಕಟ್ಟೆ, ರಿಕ್ಷಾ ನಿಲ್ದಾಣ ಹಾಗೂ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರ ಪ್ರಚಾರ ನಡೆಸಲಾಯಿತು.

ಇದನ್ನೂ ಓದಿ: Karnataka Weather : ಮಳೆಗಾಗಿ ಕಪ್ಪೆಗಳಿಗೆ ಮದುವೆ; ಶಾಖದ ಹೊಡೆತಕ್ಕೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ಈ ವೇಳೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಮಾತನಾಡಿ, ಎಲ್ಲರ ಬಾಯಲ್ಲಿ ‘ಮೋದಿ ಮತ್ತೊಮ್ಮೆ’ ಘೋಷಣೆ ಮೊಳಗುತ್ತಿದೆ. ಎಲ್ಲ ಕಡೆಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದ್ದು ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗಿಂತ ಹೆಚ್ಚು ಬಹುಮತ ಪಡೆದು ಗೆಲ್ಲುವುದು ನಿಶ್ಚಿತ. ಅದರಲ್ಲಿಯೂ ಯಲ್ಲಾಪುರ-ಮುಂಡಗೋಡ ಕ್ಷೇತ್ರದಿಂದ ಅತ್ಯಧಿಕ ಬಹುಮತ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಉಮೇಶ ಭಾಗ್ವತ್, ಜಿ.ಎನ್. ಗಾಂವ್ಕರ್, ಗಣಪತಿ ಮಾನಿಗದ್ದೆ, ರಾಘವೇಂದ್ರ ಭಟ್ಟ ಹಾಸಣಗಿ, ರಾಮು ನಾಯ್ಕ, ಸೋಮೇಶ್ವರ ನಾಯ್ಕ, ರಾಜೇಶ್ ಭಟ್ಟ, ಶ್ರೀನಿವಾಸ ಭಟ್ಟ ಹಾಗೂ ಕಾರ್ಯಕರ್ತರು, ಇತರರು ಪಾಲ್ಗೊಂಡಿದ್ದರು.

Continue Reading

ಮಳೆ

Karnataka Weather : ಮಳೆಗಾಗಿ ಕಪ್ಪೆಗಳಿಗೆ ಮದುವೆ; ಶಾಖದ ಹೊಡೆತಕ್ಕೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Karnataka weather Forecast : ಮಳೆಗಾಗಿ (Rain News) ಕಸರತ್ತು ಶುರುವಾಗಿದ್ದು ಮೈಸೂರಲ್ಲಿ ಕಪ್ಪೆಗಳಿಗೆ ಮದುವೆ ಮಾಡಲಾಗಿದೆ. ತೊಪ್ಪೆಯಾಗುವಂತೆ ಮಳೆ ಹೊಯ್ಯಲೆಂದು ಕಪ್ಪೆಗಳ ಕಟ್ಟಿಕೊಂಡು ಬಂದು ಗ್ರಾಮಸ್ಥರು ತಾಳಿ ಕಟ್ಟಿಸಿದ್ದಾರೆ. ಇತ್ತ 6 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಪ್ಪಳಿಸಲಿದ್ದು, ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದೆ.

VISTARANEWS.COM


on

By

karnataka weather Forecast
Koo

ಮೈಸೂರು/ಬೆಂಗಳೂರು: ಮಳೆ ಆಗದೆ ನೀರಿಗಾಗಿ ಎಲ್ಲಿಲ್ಲದ ಸಂಕಷ್ಟ ಎದುರಾಗುತ್ತಿದ್ದು, ಜನರು ಮಳೆಗಾಗಿ ದೇವರಲ್ಲಿ ಮೊರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದೊಂದು ಕಡೆ ಒಂದೊಂದು ಸಂಪ್ರದಾಯಗಳೂ ಚಾಲ್ತಿಯಲ್ಲಿವೆ. ಈಗ ಮೈಸೂರಿನ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ. ಮಳೆ ಬಾರದಿರುವ ಸಂಕಟದ (Karnataka Weather Forecast) ಮಧ್ಯೆ ಮಳೆ ಬರಲಿ (Rain News), ವರುಣ ದೇವ ಸಂತುಷ್ಟಗೊಳ್ಳಲಿ, ದಿನವೂ ಮೈ ತೊಪ್ಪೆಯಾಗುವಷ್ಟು ಮಳೆ ಸುರಿಯಲಿ, ಕೃಷಿ ಚಟುವಟಿಕೆಗೆ ತೊಂದರೆಯಾಗದಿರಲಿ, ಭೂತಾಯಿಗೆ ಬೇಕಾಗುವಷ್ಟು ಮಳೆ ಸುರಿಯಲಿ, ಅಂತರ್ಜಲ ಪೂರ್ಣಗೊಳ್ಳಲಿ, ನದಿ, ಹಳ್ಳಕೊಳ್ಳಗಳು ತುಂಬಿಕೊಳ್ಳಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಬಿಸಿಲಿನ ಬೇಗೆಗೆ ತತ್ತರಿಸಿದ ಜನರು ಮಳೆ ಸುರಿಯುವಂತೆ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದರು. ಗ್ರಾಮದ ಬೀದಿ ಬೀದಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಿ ತಮಟೆ ಬಾರಿಸಿದ್ದಾರೆ. ಹುಯ್ಯೋ ಹುಯ್ಯೋ ಮಳೆರಾಯ ಬಾಳೆ ತೋಟಕ್ಕೆ ನೀರಿಲ್ಲ ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ: Prajwal Revanna Case: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

ಮುಂದುವರಿಯಲಿದೆ ಒಣಹವೆ

ರಾಜ್ಯಾದ್ಯಂತ ಇನ್ನೆರಡು ದಿನಗಳು ಒಣಹವೆ ಇರುವ ಸಾಧ್ಯತೆ ಇದೆ. ಏ.2-3ರಂದು ಶುಷ್ಕ ವಾತಾವರಣ ಇದ್ದರೆ, ಏಪ್ರಿಲ್‌ 4ರಂದು ಚಾಮರಾಜನಗರದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಶಾಖದ ಅಲೆಯ ಎಚ್ಚರಿಕೆ

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಿರುತ್ತದೆ.

ರಾತ್ರಿ ಬೆಚ್ಚನೆಯ ವಾತಾವರಣ

ಮುಂದಿನ 5 ದಿನಗಳವರೆಗೆ ಕರ್ನಾಟಕದ ಉತ್ತರ ಒಳಭಾಗದಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮೇ 5ರಂದು ಉತ್ತರ ಕನ್ನಡ ಬಿಸಿ ಮತ್ತು ಆರ್ದ್ರತೆಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ.

6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Drowned In water : ತಾಯಿ- ಮಗಳು ಸೇರಿ ನಾಲ್ವರು ನೀರುಪಾಲು

Drowned In water : ರಾಯಚೂರಿನಲ್ಲಿ ಬಟ್ಟೆ ತೊಳೆಯಲು ಕಾಲುವೆಗೆ ಇಳಿದ ಯುವಕರಿಬ್ಬರು ನೀರುಪಾಲಾದರೆ, ಕಾರವಾರದಲ್ಲಿ ಕಪ್ಪೆಚಿಪ್ಪು ತೆಗೆಯುವ ವೇಳೆ ತಾಯಿ-ಮಗಳು ನೀರಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾರೆ.

VISTARANEWS.COM


on

By

Drowned in water in raichur and karwar
Koo

ರಾಯಚೂರು/ ಕಾರವಾರ: ಪ್ರತ್ಯೇಕ ಕಡೆಗಳಲ್ಲಿ ನೀರಲ್ಲಿ ಮುಳುಗಿ ನಾಲ್ವರು ಮೃತಪಟ್ಟಿರುವ (Drowned In water) ದಾರುಣ ಘಟನೆ ನಡೆದಿದೆ. ಜಾತ್ರೆ ನಿಮಿತ್ತ ಪಾಲಕರೊಂದಿಗೆ ಬಟ್ಟೆ ತೊಳೆಯಲು ಹೋಗಿ ಯುವಕರಿಬ್ಬರು ನೀರುಪಾಲಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಸವಸಾಗರ ಜಲಾಶಯದ ಕಾಲುವೆಯಲ್ಲಿ ಘಟನೆ ನಡೆದಿದೆ.

ಲಕ್ಕಣ್ಣ (22), ಬಸವಂತ (25) ಮೃತ ದುರ್ದೈವಿಗಳು. ಲಿಂಗಸ್ಗೂರು ತಾ. ಬೆಂಡೋಣಿ ಗ್ರಾಮದ ನಿವಾಸಿಗಳಾದ ಇವರಿಬ್ಬರು, ಬಟ್ಟೆ ತೊಳೆಯಲು ಹೋಗಿದ್ದಾರೆ. ಮೊದಲು ಓರ್ವ ಯುವಕ ಕಾಲು ಜಾರಿ ನೀರಿಗೆ ಬಿದ್ದಿದ್ದ. ಈ ವೇಳೆ ಆತನ ಕಾಪಾಡಲು ಮತ್ತೋರ್ವ ಯುವಕ ನೀರಿಗೆ ಧುಮುಕಿದ್ದಾನೆ. ಆದರೆ ಈಜು ಬಾರದೆ ಕಾಲುವೆಯಲ್ಲೇ ಯುವಕರಿಬ್ಬರು ದುರ್ಮರಣ ಹೊಂದಿದ್ದಾರೆ.

Drowned in water in Raichur and Karwar
ಮೃತ ದುರ್ದೈವಿ ಯುವಕರು

ಇನ್ನು ಅಲ್ಲೆ ಇದ್ದ ಸ್ಥಳೀಯರು ರಕ್ಷಣೆಗೆ ಮುಂದಾದರೂ ಆದರೆ ಅಷ್ಟರಲ್ಲಿ ಯುವಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಕಾಲುವೆಯಲ್ಲಿದ್ದ ಯುವಕರಿಬ್ಬರ ಮೃತದೇಹಗಳನ್ನು ಸ್ಥಳೀಯರೇ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Medical Negligence : ಸಕಾಲಕ್ಕೆ ಸಿಗದ ಚಿಕಿತ್ಸೆ; ಹೆರಿಗೆಗೂ ಮೊದಲೇ ತಾಯಿ-ಮಗು ಸಾವು

ನದಿಯಲ್ಲಿ ಮುಳುಗಿ ತಾಯಿ-ಮಗಳು ಸಾವು

ನದಿಯಲ್ಲಿ ಮುಳುಗಿ ತಾಯಿ‌- ಮಗಳು ಇಬ್ಬರೂ ಮೃತಪಟ್ಟಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ್‌ನಲ್ಲಿ ಘಟನೆ ನಡೆದಿದೆ. ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಾಗ ನೀರಿನಲ್ಲಿ ಮುಳುಗಿ ರೇಣುಕಾ ಹಾಗೂ ಸುಜಾತ ಎಂಬುವವರು ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಮೃತದೇಹಗಳನ್ನು ದಡಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಾರವಾರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Honnavar News: ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು: ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Honnavar News: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶ್ರೀ ಸ್ವರ್ಣವಲ್ಲಿ ರಾಮ ಕ್ಷತ್ರಿಯ ಪರಿಷದ್ ಹಾಗೂ ರಾಮಕ್ಷತ್ರಿಯ ಸಂಘದಿಂದ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

VISTARANEWS.COM


on

Honnavar News
Koo

ಹೊನ್ನಾವರ: ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ದೊರೆತಾಗ, ಆ ಮಗು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ಹಾಗೆಯೇ ಉಪನಯನವನ್ನು ಕೂಡ ಚಿಕ್ಕ ವಯಸ್ಸಿನಲ್ಲಿ ಮಾಡುವುದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಅದೇ ರೀತಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ, ಸಂಸ್ಕಾರಯುತ ಸಮಾಜ ನಿರ್ಮಾಣದ ಜವಾಬ್ದಾರಿ ಕೂಡ ಪಾಲಕರ ಮೇಲಿದೆ ಎನ್ನುವುದನ್ನು ಅರಿಯಬೇಕಾಗಿದೆ ಎಂದು ಸ್ವರ್ಣವಲ್ಲೀ ಮಠದ ಮಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದಲ್ಲಿ ಹೊನ್ನಾವರದ ಶ್ರೀ ಸ್ವರ್ಣವಲ್ಲಿ ರಾಮ ಕ್ಷತ್ರಿಯ ಪರಿಷದ್ ಹಾಗೂ ಅಡಕಾರದ ರಾಮಕ್ಷತ್ರಿಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆ, ರಾಮರಕ್ಷಾ ಸ್ತೋತ್ರ ಮತ್ತು ರಾಮ ತಾರಕ ಮಂತ್ರಗಳ ಪಠಣ ಮಾಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ರೂಢಿಸಿದಾಗ ಮಕ್ಕಳಲ್ಲಿ ಆಧ್ಯಾತ್ಮಿಕ ಒಲವು ಮೂಡಲು ಸಾಧ್ಯ. ಈ ಆಧ್ಯಾತ್ಮಿಕ ಒಲವು ಸಂಸ್ಕಾರಯುತ ಮನುಷ್ಯನನ್ನು ನಿರ್ಮಾಣ ಮಾಡುತ್ತದೆ ಎಂದರು. ಇದೇ ವೇಳೆ ಪ್ರತಿವರ್ಷ ದಂಪತಿಗಳ ಶಿಬಿರ, ಯೋಗ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ರಾಮಕ್ಷತ್ರಿಯ ಪರಿಷದ್‌ನ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಮಾತನಾಡಿ, ಸ್ವರ್ಣವಲ್ಲೀ ಮಠಾಧೀಶರ ಮಾರ್ಗದರ್ಶನದಲ್ಲಿ ರಾಮಕ್ಷತ್ರಿಯ ಪರಿಷದ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳ ಮೂಲಕ ಸಂಘಟಿತರಾಗೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಮಕ್ಷತ್ರಿಯ ಸಮಾಜದ 33 ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು. ಪ್ರಾರಂಭದಲ್ಲಿ ಸೀತಾರಾಮ ನಾಯ್ಕ ಹಳದಿಪೂರ ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಮೋದ ನಾಯ್ಕ ಸ್ವಾಗತಿಸಿದರು. ಅಡಕಾರ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ರಾಮದಾಸ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ ಸಾಳೇಹಿತ್ತಲ್ ಐದು ವರ್ಷಗಳ ವರದಿ ವಾಚಿಸಿದರು. ರವಿ ನಾಯ್ಕ ನಿರೂಪಿಸಿದರು. ಮಹೇಶ ನಾಯ್ಕ ವಂದಿಸಿದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ವೇದಿಕೆಯಲ್ಲಿ ಪರಿಷದ್‌ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಮತ್ತು ಶ್ರೀನಿವಾಸ ನಾಯ್ಕ ಮುಂಬಯಿ ಇವರಿಗೆ ಅಡಕಾರ ಸಂಘದಿಂದ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸಿಲ್ಕ್ಸ್ ಇದರ ಮಾಲಿಕರಾದ ರತ್ನಾಕರ ನಾಯ್ಕರವರು 33 ವಟುಗಳಿಗೆ ವಿಶೇಷ ಉಡುಗೊರೆಯೊಂದಿಗೆ ಗೌರವಿಸಿದರು.

Continue Reading
Advertisement
Dina Bhavishya
ಭವಿಷ್ಯ16 mins ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

Benefits of Tender Coconut
ಆರೋಗ್ಯ16 mins ago

Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

Bhajanotsava
ಬೆಂಗಳೂರು3 hours ago

Bhajanotsava: ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವ ಸಂಪನ್ನ

Shata Chandika Yaga
ಚಿಕ್ಕಬಳ್ಳಾಪುರ5 hours ago

ಚಿಕ್ಕಬಳ್ಳಾಪುರದ ವಾಯುದೇವ, ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

Prajwal Revanna Case
ಕರ್ನಾಟಕ5 hours ago

Prajwal Revanna Case: ಸಂಸದ ಪ್ರಜ್ವಲ್ ರೇವಣ್ಣ ಗೆಸ್ಟ್ ಹೌಸ್‌ನಲ್ಲಿಲ್ಲ ಸಿಸಿ ಕ್ಯಾಮೆರಾ?; ಹಲವು ಅನುಮಾನ

Danesh Palyani
ವಿದೇಶ5 hours ago

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Bangalore University
ಕರ್ನಾಟಕ6 hours ago

Bangalore University: ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

Prajwal Revanna
ಕರ್ನಾಟಕ6 hours ago

Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

CSK vs PBKS
ಕ್ರೀಡೆ6 hours ago

CSK vs PBKS: ಚೆನ್ನೈಗೆ ತವರಿನಲ್ಲೇ ಆಘಾತವಿಕ್ಕಿ ಪ್ಲೇ ಆಫ್​ ಆಸೆ ಜೀವಂತವಿರಿಸಿದ ಪಂಜಾಬ್​

Neha Murder Case
ಕರ್ನಾಟಕ6 hours ago

Neha Murder Case: ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ: ಅಮಿತ್‌ ಶಾಗೆ ನೇಹಾ ತಂದೆ ಮನವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ16 mins ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌