horoscope today read your daily horoscope predictions for may 16, 2023 - Vistara News

ಪ್ರಮುಖ ಸುದ್ದಿ

Horoscope Today : ಬುಧನ ವಕ್ರ ಸಂಚಾರ ಇಂದು ಅಂತ್ಯ; ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷದ ದ್ವಾದಶಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Horoscope Today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (16-05-2023)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ.
ತಿಥಿ:
ದ್ವಾದಶಿ 23:35 ವಾರ: ಮಂಗಳವಾರ
ನಕ್ಷತ್ರ: ಉತ್ತರ ಭಾದ್ರಪದ 08:13 ಯೋಗ: ಪ್ರೀತಿ 23:14
ಕರಣ: ಕೌಲವ 12:16 ಇಂದಿನ ವಿಶೇಷ: ಬುಧವಕ್ರತ್ಯಾಗ
ಅಮೃತಕಾಲ: ಬುಧವಾರ ಮುಂಜಾನೆ 05 ಗಂಟೆ 18 ನಿಮಿಷದಿಂದ 06 ಗಂಟೆ 52 ನಿಮಿಷದವರೆಗೆ.

ಸೂರ್ಯೋದಯ : 05:54 ಸೂರ್ಯಾಸ್ತ : 06:38

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ನಿಮ್ಮ ವರ್ತನೆ ಇತರರ ಮೇಲೆ ಒತ್ತಡ ಉಂಟುಮಾಡುವ ಸಾಧ್ಯತೆ. ಹಣಕಾಸು ಪ್ರಗತಿ ಉತ್ತಮ. ಧಾರ್ಮಿಕ ವ್ಯಕ್ತಿಗಳ ಭೇಟಿ, ಕ್ಷೇತ್ರ ದರ್ಶನ ಮಾಡುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ನಿಮ್ಮ ದ್ವೇಷದ ಭಾವನೆ ನಿಮ್ಮ ಮನಸ್ಸಿಗೇ ಘಾಸಿ ಮಾಡುತ್ತದೆ ಮತ್ತು ಒತ್ತಡ ಉಂಟು ಮಾಡಲಿದೆ. ಕುಟುಂಬದ ಸದಸ್ಯರೊಂದಿಗೆ ಸಮಾಧಾನದಿಂದ ವರ್ತಿಸಿ. ಇಂದು ನೀವು ಹೆಚ್ಚು ಮೌನದಿಂದ ಇರುವುದು ಒಳಿತು. ಉದ್ಯೋಗದಲ್ಲಿ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ಮಹತ್ವಾಕಾಂಕ್ಷೆಯ ಯೋಜನೆಗಳು ಸಫಲವಾಗುವವು. ಮಕ್ಕಳಿಗಾಗಿ ಖರ್ಚು ಮಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಅನಾವಶ್ಯಕವಾಗಿ ಒತ್ತಡ ತೆಗೆದುಕೊಂಡು ಜೀವನದ ಮಹತ್ವದ ವಿಷಯಗಳ ಬಗ್ಗೆ ಆಲಸ್ಯ ಮಾಡುವುದು ಬೇಡ. ಆರ್ಥಿಕವಾಗಿ ಉತ್ತಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕಟಕ: ಬಿಡುವಿಲ್ಲದ ಕೆಲಸದಿಂದ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ಪ್ರಗತಿ ಉತ್ತಮ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಮನಸ್ಸಿಗೆ ನೋವುಂಟು ಮಾಡಬಹುದು. ಆಪ್ತರೊಂದಿಗೆ ನಿಮ್ಮೆಲ್ಲ ಭಾವನೆ ಹಂಚಿಕೊಳ್ಳುವಿರಿ. ಕುಟುಂಬದ ಸದಸ್ಯರಿಂದ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಸಾಮಾಜಿಕವಾಗಿ ಇಂದು ನಿಮಗೆ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ ಪಡೆದು ಕಾರ್ಯದಲ್ಲಿ ಯಶಸ್ಸು ಪಡೆಯುವಿರಿ. ಬಹುದಿನಗಳ ಕನಸು ನನಸಾಗುವ ಸಮಯ. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ನೀವು ಸಂತೋಷದಿಂದ ಇದ್ದು, ಇತರರಿಗೂ ಸಂತಸ ಹಂಚಲು ಹವಣಿಸುವಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ಹಿಂದೆ-ಮುಂದೆ ನೋಡದೆ ಇತರರನ್ನು ಟೀಕೆ ಮಾಡುವುದು ಬೇಡ. ಉದ್ಯೋಗದಲ್ಲಿ ಹಿಡಿದ ಕಾರ್ಯ ಪೂರ್ಣಗೊಳಿಸುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ನಿಮ್ಮ ಹರಿತವಾದ ಮಾತುಗಳಿಂದ ಇತರರ ಮನಸ್ಸು ನೋಯಿಸುವುದು ಬೇಡ. ಆಲೋಚಿಸಿ ಮಾತನಾಡಿ. ಕುಟುಂಬದ ಪ್ರತಿಯೊಂದು ವಿಷಯದಲ್ಲೂ ತಪ್ಪು ಹುಡುಕುವುದು ಬೇಡ. ಇದರಿಂದ ಮನಸ್ಸು ಘಾಸಿಯಾಗುವುದು. ಆಧ್ಯಾತ್ಮದ ಹಾದಿ ದಾರಿ ತೋರಿತು. ಶ್ರೀ ಗುರು ದತ್ತಾತ್ರೇಯನನ್ನು ಆರಾಧಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುಲು ಸಮಯ ನೀಡುವಿರಿ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವಿರಿ. ಭೂಮಿ, ಆಸ್ತಿ ಖರೀದಿಗಾಗಿ ಆಲೋಚನೆ ಮಾಡುವಿರಿ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ದೀರ್ಘಕಾಲದ ಪ್ರಯಾಣ ಸಾಧ್ಯತೆ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ಹೊಸ ಕೆಲಸಗಳಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಆರೋಗ್ಯ ಉತ್ತಮ. ಉದ್ಯೋಗದಲ್ಲಿ ಇಂದು ಯಶಸ್ಸಿನ ದಿಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಕೆಲಸದ ಜಂಜಾಟದಿಂದ ಮುಕ್ತಿ ಹೇಗೆ? ಈ ವಿಡಿಯೋ ನೋಡಿ.
Horoscope Today

ಮಕರ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು. ಮುಂಗೋಪದಿಂದ ನಷ್ಟ ಸಾಧ್ಯತೆ. ಸ್ನೇಹಿತರ ಸಲಹೆ ಸಹಕಾರ ಸಿಗುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ಆಲಸ್ಯದಿಂದ ಕಾರ್ಯ ಹಾನಿ. ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಸೃಜನಾತ್ಮಕವಾಗಿ ಕೆಲಸ ಮಾಡಿ, ಯಶಸ್ಸು ಪಡೆಯುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮೀನ: ಹೊಸ ಅವಕಾಶಗಳು ಗರಿಗೆದರಲಿವೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ನಿಮ್ಮ ಹಿಂದೆ ಟೀಕೆಗಳನ್ನು ಮಾಡುವ ಜನರಿಂದ ದೂರ ಇರಿ.ದಿನ ಮಟ್ಟಿಗೆ ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಆಗುವ ಸಾಧ್ಯತೆ. ಸಂಗಾತಿಯ ಸ್ವಾರ್ಥದಿಂದ ಕುಟುಂಬದ ವಾತಾವರಣದಲ್ಲಿ ವ್ಯತ್ಯಾಸ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ : ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Public Exam: ಇನ್ನು ಮುಂದೆ ವರ್ಷಕ್ಕೆರಡು ಬಾರಿ ಬೋರ್ಡ್‌ ಪರೀಕ್ಷೆ ? ಪರಿಶೀಲನೆಗೆ ಸಿಬಿಎಸ್‌ಇಗೆ ಸೂಚನೆ

Public Exam: ಎಂಜಿನಿಯರಿಂಗ್ ಪ್ರವೇಶಕ್ಕೆ ನಡೆಯುವ ಜೆಇಇ ಪರೀಕ್ಷೆಯಂತೆ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬೋರ್ಡ್‌ ಪರೀಕ್ಷೆಗಳಿಗೆ ಹಾಜರಾಗುವ ಆಯ್ಕೆಯನ್ನು ಪಡೆಯುತ್ತಾರೆ. ಅವುಗಳಲ್ಲಿನ ಉತ್ತಮ ಅಂಕಗಳನ್ನು ಆಯ್ಕೆ ಮಾಡಲಾಗುತ್ತದೆ.

VISTARANEWS.COM


on

PU Board exam girl writing exam
Koo

ಹೊಸದಿಲ್ಲಿ: 2025–26ನೇ ಶೈಕ್ಷಣಿಕ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಪಬ್ಲಿಕ್‌ ಪರೀಕ್ಷೆಗಳನ್ನು (Public Exam, Board Exam) ನಡೆಸುವ ಸಾಧ್ಯತೆಗಳ ಕುರಿತು ಪರಿಶೀಲಿಸುವಂತೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ (ಸಿಬಿಎಸ್ಇ – CBSE) ಶಿಕ್ಷಣ ಸಚಿವಾಲಯ (Education ministry) ಸೂಚಿಸಿದೆ.

ಈ ಸಂಬಂಧ ಸಚಿವಾಲಯ ಮತ್ತು ಸಿಬಿಎಸ್ಇ ಮುಂದಿನ ತಿಂಗಳು ಶಾಲಾ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಿವೆ. ಈಗಾಗಲೇ ಸಿಬಿಎಸ್ಇ ಸೆಮಿಸ್ಟರ್ ಪದ್ಧತಿಯನ್ನು ಪರಿಚಯಿಸುವ ಯೋಜನೆಯನ್ನು ತಳ್ಳಿಹಾಕಿದೆ. ಪದವಿ ಪೂರ್ವ ತರಗತಿಗಳ ಪ್ರವೇಶದ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರದಂತೆ ಮತ್ತೊಂದು ಬೋರ್ಡ್‌ ಪರೀಕ್ಷೆ ನಡೆಸುವುದಕ್ಕೆ ಪೂರಕವಾಗಿ ಶೈಕ್ಷಣಿಕ ಕ್ಯಾಲೆಂಡರ್ ರಚಿಸುವತ್ತ ಸಿಬಿಎಸ್ಇ ಕಾರ್ಯೋನ್ಮುಖವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“2025–26ನೇ ಸಾಲಿನಿಂದ ವರ್ಷದ ಕೊನೆಯಲ್ಲಿ ಎರಡು ಆವೃತ್ತಿಗಳಲ್ಲಿ ಬೋರ್ಡ್‌ ಪರೀಕ್ಷೆ ನಡೆಸಲು ಯೋಜಿಸಲಾಗುತ್ತಿದೆ. ಇದರ ಕಾರ್ಯವಿಧಾನಗಳು ಹೇಗಿರಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ” ಎಂದು ಅವರು ಹೇಳಿದ್ದಾರೆ. ವರ್ಷಕ್ಕೆ ಎರಡು ಬೋರ್ಡ್‌ ಪರೀಕ್ಷೆಯನ್ನು 2024–25ನೇ ಸಾಲಿನಿಂದಲೇ ಪರಿಚಯಿಸುವ ಆರಂಭಿಕ ಯೋಜನೆಯನ್ನು ಶಿಕ್ಷಣ ಸಚಿವಾಲಯ ಹೊಂದಿತ್ತು. ಆದರೆ ಅದನ್ನು ಒಂದು ವರ್ಷ ಮುಂದೂಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆ ಬರೆಯುವ ಆಯ್ಕೆ ಒದಗಿಸಬೇಕು ಎಂದು ಪ್ರಸ್ತಾಪಿಸಿದೆ. ಈ ನಿಟ್ಟಿನಲ್ಲಿ ಸಿಬಿಎಸ್ಇ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಒತ್ತಡದಿಂದ ಮುಕ್ತಗೊಳಿಸಲು ಮತ್ತು ವಿದ್ಯಾರ್ಥಿಗಳಿಗೆ ಗರಿಷ್ಠ ಪ್ರಯೋಜನ ದೊರೆಯುವಂತೆ ಮಾಡಲು ಅದು ಚಿಂತಿಸುತ್ತಿದೆ.

ಎರಡು ಪರೀಕ್ಷೆಗಳನ್ನು ನಡೆಸುವಲ್ಲಿ ಕೆಲವು ಲಾಜಿಸ್ಟಿಕ್ಸ್‌ ಸವಾಲುಗಳು ಎದುರಾಗಲಿವೆ. ಇದನ್ನು ಹೇಗೆ ಎದುರಿಸುವುದು ಹಾಗೂ ದೋಷರಹಿತವಾಗಿ ಪರೀಕ್ಷೆಗಳನ್ನು ನಡೆಸುವುದು ಹೇಗೆ ಎಂಬುದರ ಕುರಿತು ಮಂಡಳಿ ಪರಿಶೀಲನೆಯಲ್ಲಿ ತೊಡಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, “ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲಾಗುವುದು. ಆದರೆ ಇದು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ. ಸಂಪೂರ್ಣ ಐಚ್ಛಿಕವಾದದ್ದು. ಎಂಜಿನಿಯರಿಂಗ್ ಪ್ರವೇಶಕ್ಕೆ ನಡೆಯುವ ಜೆಇಇ ಪರೀಕ್ಷೆಯಂತೆ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬೋರ್ಡ್‌ ಪರೀಕ್ಷೆಗಳಿಗೆ ಹಾಜರಾಗುವ ಆಯ್ಕೆಯನ್ನು ಪಡೆಯುತ್ತಾರೆ. ಅವುಗಳಲ್ಲಿನ ಉತ್ತಮ ಅಂಕಗಳನ್ನು ಆಯ್ಕೆ ಮಾಡಲಾಗುತ್ತದೆ” ಎಂದು ತಿಳಿಸಿದ್ದರು.

ಇದನ್ನೂ ಓದಿ: Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Continue Reading

ಪ್ರಮುಖ ಸುದ್ದಿ

NOTA: ಅತಿ ಹೆಚ್ಚು `ನೋಟಾ’ ಬಿದ್ದರೆ ಹೊಸ ಚುನಾವಣೆ ಮಾಡಬಹುದೇ? ಸುಪ್ರೀಂ ಪ್ರಶ್ನೆ

NOTA: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠವು, ದೇಶದಾದ್ಯಂತ ಮತದಾರರ ಜಾಗೃತಿ ಮೂಡಿಸಲು ಚುನಾವಣೆಗಳಲ್ಲಿ ನೋಟಾವನ್ನು “ಕಾಲ್ಪನಿಕ ಚುನಾವಣಾ ಅಭ್ಯರ್ಥಿ” ಎಂದು ಪರಿಗಣಿಸಬೇಕೆ ಎಂಬುದನ್ನು ಪರಿಶೀಲಿಸಲು ಸಹ ಒಪ್ಪಿಗೆ ನೀಡಿದೆ.

VISTARANEWS.COM


on

nota vote
Koo

ಹೊಸದಿಲ್ಲಿ: ʼನೋಟಾʼ (NOTA) ಆಯ್ಕೆಗೆ ಹೆಚ್ಚಿನ ಸಂಖ್ಯೆಯ ಮತಗಳು ಬಿದ್ದ ಕ್ಷೇತ್ರದಲ್ಲಿ ಹೊಸ ಚುನಾವಣೆ ನಡೆಸಬಹುದೇ ಎಂಬ ಪ್ರಶ್ನೆಯನ್ನು ಚುನಾವಣಾ ಆಯೋಗದ (Election commission of India) ಮುಂದೆ ಸುಪ್ರೀಂ ಕೋರ್ಟ್‌ (Supreme court) ಇಟ್ಟು ಉತ್ತರ ಬಯಸಿದೆ. ಮತದಾರರಿಗೆ (Voters) “ಮೇಲಿನ ಯಾವುದೂ ಅಲ್ಲ” (ನೋಟಾ) ಆಯ್ಕೆಯನ್ನು ನೀಡಿದ ಹನ್ನೊಂದು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಶುಕ್ರವಾರ ಭಾರತೀಯ ಚುನಾವಣಾ ಆಯೋಗದಿಂದ (ECI) ಪ್ರತಿಕ್ರಿಯೆ ಕೇಳಿದೆ.

ನೋಟಾ ಬಟನ್ ಇವಿಎಂಗಳಲ್ಲಿ ಅಭ್ಯರ್ಥಿಗಳ ಪಟ್ಟಿಯ ಅತ್ಯಂತ ಕೆಳಭಾಗದಲ್ಲಿರುತ್ತದೆ. ಪ್ರಸ್ತುತ, ಒಂದು ಕ್ಷೇತ್ರದಲ್ಲಿ ನೋಟಾ ಹೆಚ್ಚು ಮತಗಳನ್ನು ಗಳಿಸಿದರೆ ಎರಡನೇ ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠವು, ದೇಶದಾದ್ಯಂತ ಮತದಾರರ ಜಾಗೃತಿ ಮೂಡಿಸಲು ಚುನಾವಣೆಗಳಲ್ಲಿ ನೋಟಾವನ್ನು “ಕಾಲ್ಪನಿಕ ಚುನಾವಣಾ ಅಭ್ಯರ್ಥಿ” ಎಂದು ಪರಿಗಣಿಸಬೇಕೆ ಎಂಬುದನ್ನು ಪರಿಶೀಲಿಸಲು ಸಹ ಒಪ್ಪಿಗೆ ನೀಡಿದೆ.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ನೋಟಾಗೆ ಗರಿಷ್ಠ ಮತಗಳನ್ನು ಪಡೆದ, ಮತದಾರರಿಂದ ತಿರಸ್ಕೃತಗೊಂಡ ಅಭ್ಯರ್ಥಿಗಳನ್ನು ಹೊಸ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿಸಬಾರದು ಎಂಬ ಅರ್ಜಿದಾರರ ಮನವಿಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು.

“ನಾವು ಅದನ್ನು ಹೇಗೆ ಮಾಡಲು ಸಾಧ್ಯ? ಅದು ಶಾಸಕಾಂಗದ ಆಯ್ಕೆ. ನಾವು ಅಂತಹ ಆದೇಶ ನೀಡಲು ಸಾಧ್ಯವಿಲ್ಲ ಎಂದು ನಾವು ಭಾವಿಸುತ್ತೇವೆ” ಎಂದು ಈ ವಿಷಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ಶಿವ ಖೇರಾ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರಿಗೆ ನ್ಯಾಯಪೀಠ ಹೇಳಿದೆ. ಖೇರಾ ದೆಹಲಿ ಮೂಲದ ಸ್ಫೂರ್ತಿ ಭಾಷಣಕಾರ ಮತ್ತು ಲೇಖಕ.

2013ರಲ್ಲಿ ನೋಟಾವನ್ನು ಪರಿಚಯಿಸಿದ್ದು, ಪ್ರಜಾಪ್ರಭುತ್ವದಲ್ಲಿ ಮತದಾರರ ಆಯ್ಕೆಯನ್ನು ಉತ್ತಮಗೊಳಿಸುವ ಸುಪ್ರೀಂ ಕೋರ್ಟ್‌ನ ಉದ್ದೇಶವನ್ನು ಮುಂದುವರಿಸುವ ಗುರಿಯನ್ನು ಅರ್ಜಿಯು ಹೊಂದಿದೆ ಎಂದು ಶಂಕರನಾರಾಯಣನ್ ಒತ್ತಿ ಹೇಳಿದರು. “ಸೂರತ್‌ನಲ್ಲಿ ಮತ ಚಲಾಯಿಸದೇ ಒಬ್ಬ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಯಿತು. ಏಕೆಂದರೆ ಕಣದಲ್ಲಿ ಬೇರೆ ಅಭ್ಯರ್ಥಿ ಇರಲಿಲ್ಲ. ಮತದಾರರಿಗೆ ಆಯ್ಕೆ ಇರಲಿಲ್ಲ,” ಎಂದು ಅವರು ವಾದಿಸಿದರು.

ಮೇ 7ರಂದು ಮೂರನೆ ಹಂತದ ಮತದಾನ ನಡೆಯಲಿರುವ ಹದಿನೈದು ದಿನಗಳ ಮೊದಲು ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿ ಮುಖೇಶ್ ದಲಾಲ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಖೇರಾ ಅವರ ಅರ್ಜಿಯನ್ನು ಪರಿಶೀಲಿಸಲು ಸಮ್ಮತಿಸಿದ ಪೀಠ, ಇಸಿಐಗೆ ನೋಟಿಸ್ ಜಾರಿ ಮಾಡಿದೆ.

ನೋಟಾ ಮತ ತಟಸ್ಥವಾದುದು. ಯಾವುದೇ ಸಂಖ್ಯಾ ಮೌಲ್ಯವನ್ನು ಹೊಂದಿಲ್ಲ. ನೋಟಾ ಆಯ್ಕೆಯ ಶೂನ್ಯ ಸಂಖ್ಯಾತ್ಮಕ ಮೌಲ್ಯದ ಹೊರತಾಗಿಯೂ, 2013ರ ಸುಪ್ರೀಂ ಕೋರ್ಟ್ ತೀರ್ಪು “ಇದು ರಾಜಕೀಯ ಪಕ್ಷಗಳನ್ನು ಸಮರ್ಥ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಒತ್ತಾಯಿಸುತ್ತದೆ” ಎಂದು ಹೇಳಿದೆ. 2013ರ ತೀರ್ಪು ಹೇಳುವಂತೆ, “ನೋಟಾ ಮತದಾನವು ಚುನಾವಣೆಯಲ್ಲಿ ವ್ಯವಸ್ಥಿತ ಬದಲಾವಣೆಗೆ ಕಾರಣವಾಗುತ್ತದೆ ಮತ್ತು ರಾಜಕೀಯ ಪಕ್ಷಗಳು ಶುದ್ಧ ಅಭ್ಯರ್ಥಿಗಳನ್ನು ಹಾಕಲು ಒತ್ತಾಯಿಸುತ್ತದೆ. ಮತದಾನದ ಹಕ್ಕು ಶಾಸನಬದ್ಧ ಹಕ್ಕಾಗಿದ್ದರೆ, ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕು ಸಂವಿಧಾನದ ಅಡಿಯಲ್ಲಿ ಭಾಷಣ ಮತ್ತು ಅಭಿವ್ಯಕ್ತಿಯ ಮೂಲಭೂತ ಹಕ್ಕು,” ಎಂದಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ನೋಟಾ 6,50,000ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದೆ. ಇದು ಒಟ್ಟು ಮತದ 1.06%. 17ನೇ ಲೋಕಸಭೆಗೆ ಸ್ಪರ್ಧಿಸಿದ 36 ಪಕ್ಷಗಳ ಪೈಕಿ ಹದಿನೈದು ರಾಜಕೀಯ ಪಕ್ಷಗಳು ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿವೆ. ಈ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿವೆ.

2021ರಲ್ಲಿ, ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ಇದೇ ರೀತಿಯ ಅರ್ಜಿಯನ್ನು ಒಪ್ಪಿಕೊಂಡಿತ್ತು. “ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಸಬಲೀಕರಣಗೊಳಿಸಲು” ಮತ್ತು “ರಾಜಕೀಯ ಪಕ್ಷಗಳು ಹೆಚ್ಚು ಉತ್ತಮ ಆಯ್ಕೆಯನ್ನು ನೀಡಲು ಪ್ರೋತ್ಸಾಹಿಸಲು” ಕೋರಿತು. ಉಪಾಧ್ಯಾಯ ಅವರ ಅರ್ಜಿಯು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ಇದನ್ನೂ ಓದಿ: Election Commission: ಥೀಮ್‌ ಸಾಂಗ್‌ನಲ್ಲಿ ‘ಜೈ ಭವಾನಿ’ ಪದ ಬಳಕೆ; ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ನೋಟಿಸ್‌

Continue Reading

Lok Sabha Election 2024

Lok Sabha Election 2024: 2ನೇ ಹಂತದ ಮತದಾನ, ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ?

Lok Sabha Election 2024: ಏಪ್ರಿಲ್​​ 26ರಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಲೋಕ ಸಭಾ ಚುನಾವಣೆಯ (Lok Sabha Election) ಎರಡನೇ ಹಂತದ ಮತದಾನವು ಶಾಂತಿಯುತವಾಗಿ ನಡೆಯಿತು. ಒಟ್ಟು 88 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಸಂಜೆ 7 ಗಂಟೆಯ ವೇಳೆಗೆ ಅಂದಾಜು 60.96% ಮತದಾನವನ್ನು ದಾಖಲಿಸಿದೆ ಎಂದು ಚುನಾವಣಾ ಆಯೋಗ ಹೇಳಿದೆ.

VISTARANEWS.COM


on

lok sabha election 2024 voting
Koo

ಹೊಸದಿಲ್ಲಿ: ನಿನ್ನೆ (ಏಪ್ರಿಲ್‌ 26) ಲೋಕಸಭೆ ಚುನಾವಣೆ (Lok Sabha Election 2024) ಎರಡನೇ ಹಂತದ ಮತದಾನ (voting) ನಡೆಯಿತು. ಇದರಲ್ಲಿ ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಮತ್ತು ಯಾವ ರಾಜ್ಯಗಳಲ್ಲಿ ಅತಿ ಕಡಿಮೆ ಮತದಾನವಾಗಿದೆ ಎಂಬ ಮಾಹಿತಿ ಇಲ್ಲಿದೆ. ತ್ರಿಪುರಾದಲ್ಲಿ ಅತಿ ಹೆಚ್ಚು ಅಂದಾಜು 77.94% ಮತದಾನವಾಗಿದೆ.

ನಂತರ ಮಣಿಪುರ (76.46%), ಛತ್ತೀಸ್‌ಗಢ (72.51%), ಪಶ್ಚಿಮ ಬಂಗಾಳ (71.84%), ಅಸ್ಸಾಂ (70.68%), ಕರ್ನಾಟಕದಲ್ಲಿ 69.23%, J&K (67.22%), ಮತ್ತು ಕೇರಳ (64.99%) ಮತದಾನ ದಾಖಲಿಸಿವೆ. ಉತ್ತರ ಪ್ರದೇಶದಲ್ಲಿ ಅತಿ ಕಡಿಮೆ ಅಂದಾಜು ಮತದಾನವಾಗಿದೆ (53.02%). ರಾಜಸ್ಥಾನದಲ್ಲಿ 59.69%, ಮಧ್ಯಪ್ರದೇಶದಲ್ಲಿ 55.19%, ಮಹಾರಾಷ್ಟ್ರ 53.71% ಮತ್ತು ಬಿಹಾರ 53.60% ಮತದಾನವಾಗಿದೆ.

ಏಪ್ರಿಲ್​​ 26ರಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಲೋಕ ಸಭಾ ಚುನಾವಣೆಯ (Lok Sabha Election) ಎರಡನೇ ಹಂತದ ಮತದಾನವು ಶಾಂತಿಯುತವಾಗಿ ನಡೆಯಿತು. ಒಟ್ಟು 88 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಸಂಜೆ 7 ಗಂಟೆಯ ವೇಳೆಗೆ ಅಂದಾಜು 60.96% ಮತದಾನವನ್ನು ದಾಖಲಿಸಿದೆ ಎಂದು ಚುನಾವಣಾ ಆಯೋಗ ಹೇಳಿದೆ. 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮತದಾರರು ಬಿಸಿ ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ ತಮ್ಮ ಮತಗಟ್ಟೆಯಲ್ಲಿ ಉತ್ಸಾಹದಿಂದ ಮತ ಚಲಾಯಿಸಿದರು. ನವವಿವಾಹಿತರಿಂದ ಹಿಡಿದು ಹಿರಿಯ ನಾಗರಿಕರವರೆಗೆ, ಬುಡಕಟ್ಟು ಜನಾಂಗದವರಿಂದ ಐಟಿ ವೃತ್ತಿಪರರು, ಅಂಗವಿಕಲರು, ಮಹಿಳೆಯರು ಮತ್ತು ಯುವಕರು ಎಲ್ಲರೂ ತಮ್ಮ ಮತ ಚಲಾಯಿಸಿದರು. 2024ರ ಲೋಕಸಭಾ ಚುನಾವಣೆಗೆ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಪೂರ್ಣಗೊಂಡಿದೆ.

ತ್ರಿಪುರಾದ ಏಕೈಕ ಕ್ಷೇತ್ರದಲ್ಲಿ ಶೇ.77.93, ಛತ್ತೀಸ್ ಗಢದ ಮೂರು ಕ್ಷೇತ್ರಗಳಲ್ಲಿ ಶೇ.72.13 ಹಾಗೂ ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಲ್ಲಿ ಶೇ.71.84ರಷ್ಟು ಮತದಾನವಾಗಿದೆ. ಮಣಿಪುರದ 13 ಮತಗಟ್ಟೆಗಳಲ್ಲಿ ಶೇ.76.06ರಷ್ಟು ಮತದಾನವಾಗಿದ್ದರೆ, ಅಸ್ಸಾಂನ ಮತಗಟ್ಟೆಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ.70.66ರಷ್ಟು ಮತದಾನವಾಗಿದೆ. ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶೇ.53.51ರಷ್ಟು ಮತದಾನವಾಗಿದೆ.

ಬಿಹಾರದಲ್ಲಿ ಮತದಾನದ ಶೇಕಡಾವಾರು ಮೊದಲ ಹಂತಕ್ಕಿಂತ ಹೆಚ್ಚಾಗಿದ್ದರೆ, ಇದು ಉತ್ತರ ಪ್ರದೇಶಕ್ಕಿಂತ 53.03% ಹೆಚ್ಚಾಗಿದೆ. ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ 52.74% ಮತದಾನ ದಾಖಲಾಗಿದೆ. ಎರಡನೇ ಹಂತದಲ್ಲಿ ಮತದಾನ ನಡೆದ ರಾಜಸ್ಥಾನದ 13 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಸರಾಸರಿ ಶೇಕಡಾ 59.19 ರಷ್ಟು ಮತದಾನವಾಗಿತ್ತು. ಕೆಲವು ಘಟನೆಗಳ ಹೊರತಾಗಿಯೂ, ಮತದಾನವು ಶಾಂತಿಯುತವಾಗಿ ನಡೆಯಿತು.

ಮಧ್ಯಪ್ರದೇಶದ ಆರು ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಕನಿಷ್ಠ 54.83% ಮತದಾನವಾಗಿದೆ. ಕರ್ನಾಟಕದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಎರಡನೇ ಹಂತದಲ್ಲಿ ಮತದಾನ ನಡೆದಿದೆ. ಕರ್ನಾಟಕ 69. 23 ಶೇಕಡಾ ಮತದಾನವಾಗಿದೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ನಿನ್ನೆ ನಡೆದಿತ್ತು. ಶುಕ್ರವಾರ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ನಾಗರಿಕರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ದಕ್ಷಿಣ ಕರ್ನಾಟಕದ ಉಡುಪಿ – ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು – ಕೊಡಗು, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆದಿತ್ತು.

ಇದನ್ನೂ ಓದಿ: Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

Continue Reading

ಭವಿಷ್ಯ

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ ತದಿಗೆ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಶನಿವಾರವೂ ಧನಸ್ಸು ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುವ ದಿನವಿದು. ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಕಾಣಲಿದ್ದಿರಿ. ಉತ್ಸಾಹದ ಭರದಲ್ಲಿ ಆಶ್ವಾಸನೆ ನೀಡುವುದು ಅಪಾಯ ತರುವ ಸಾಧ್ಯತೆಗಳು ಹೆಚ್ಚು, ಎಚ್ಚರಿಕೆಯಿಂದ ಇರಿ. ಮಿಥುನ ರಾಶಿಯವರು ಹತಾಶೆಯ ಭಾವನೆಯಿಂದ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಲಾಭ ಸಿಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜತೆ ವಾದಗಳಿಗೆ ಕಾರಣವಾಗಬಹುದಾದ ವಿವಾದಾತ್ಮಕ ವಿಷಯಗಳನ್ನು ತಪ್ಪಿಸಿ, ಎಚ್ಚರಿಕೆಯಿಂದ ಮಾತನಾಡಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (27-04-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ.
ತಿಥಿ: ತದಿಗೆ 08:17 07:45 ವಾರ: ಶನಿವಾರ
ನಕ್ಷತ್ರ: ಜ್ಯೇಷ್ಟ 28:27 ಯೋಗ: ಪರಿಘ 27:22
ಕರಣ: ಗರಜ 07:45 ಅಮೃತಕಾಲ: ರಾತ್ರಿ 07:22 ರಿಂದ 09:01
ದಿನದ ವಿಶೇಷ: ಸಂಕಷ್ಟಹರ ಚತುರ್ಥಿ, ಸಂಗಮೇಶ್ವರ ರಥೋತ್ಸವ

ಸೂರ್ಯೋದಯ : 06:01   ಸೂರ್ಯಾಸ್ತ : 06:34

ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ
6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುವ ದಿನವಿದು. ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಕಾಣಲಿದ್ದಿರಿ. ಉತ್ಸಾಹದ ಭರದಲ್ಲಿ ಆಶ್ವಾಸನೆ ನೀಡುವುದು ಅಪಾಯ ತರುವ ಸಾಧ್ಯತೆಗಳು ಹೆಚ್ಚು, ಎಚ್ಚರಿಕೆಯಿಂದ ಇರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಮಧ್ಯಮ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಹೂಡಿಕೆ ವ್ಯವಹಾರದ ಕುರಿತು ಆಲೋಚನೆ ಮಾಡುವಿರಿ. ವ್ಯಾಪಾರ ವ್ಯವಹಾರದ ಕುರಿತಾಗಿ ಬೆಳೆಸಿದ ಪ್ರಯಾಣ ಲಾಭ ತಂದುಕೊಡಲಿದೆ. ಉದ್ಯೋಗಿಗಳಿಗೆ ಮೆಚ್ಚುಗೆ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 6

Horoscope Today

ಮಿಥುನ: ಹತಾಶೆಯ ಭಾವನೆಯಿಂದ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಲಾಭ ಸಿಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜತೆ ವಾದಗಳಿಗೆ ಕಾರಣವಾಗಬಹುದಾದ ವಿವಾದಾತ್ಮಕ ವಿಷಯಗಳನ್ನು ತಪ್ಪಿಸಿ, ಎಚ್ಚರಿಕೆಯಿಂದ ಮಾತನಾಡಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಸದೃಢವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಕಟಕ: ಮಾನಸಿಕವಾಗಿ ದೈಹಿಕವಾಗಿ ಆರೋಗ್ಯ ಪರಿಪೂರ್ಣವಾಗಿರಲಿದೆ. ಹರ್ಷ ತುಂಬಿದ ಮನಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಹಳೆಯ ಬಾಕಿ ಮರುಪಾವತಿ ಮಾಡುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯಮಿಗಳಿಗೆ ಒಳ್ಳೆಯ ದಿನ. ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಪ್ರವಾಸ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಸಿಂಹ: ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಭವಿಷ್ಯದ ಹೂಡಿಕೆ ವ್ಯವಹಾರದ ಕುರಿತಾಗಿ ಆಲೋಚನೆ ಮಾಡುವಿರಿ. ನಿಮ್ಮ ಹಿಂದೆ ನಿಮಗೆ ಆಗದವರು ಪಿತೂರಿ ನಡೆಸುವ ಸಾಧ್ಯತೆ ಅಂತವರಿಂದ ಎಚ್ಚರಿಕೆ ಇರಲಿ. ದಿಢೀರ್‌ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಕನ್ಯಾ: ಸೃಜನಾತ್ಮಕ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಯಶಸ್ವಿ ದಿನ. ಭೂಮಿ ಸಂಬಂಧ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ದಿನಕ್ಕಿಂತ ಹೆಚ್ಚಿನ ಸಂತೋಷ ಸಿಗಲಿದೆ. ಆರ್ಥಿಕ ಚಟುವಟಿಕೆಗೆ ಗರಿಗೆದರಲಿದೆ. ದಿನದ ಕೊನೆಯಲ್ಲಿ ಕೌಟುಂಬಿಕ ಕಲಹಗಳು ನಡೆಯುವ ಸಾಧ್ಯತೆ, ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಒತ್ತಡ ತುಂಬಿದ ವಾತಾವರಣ ಇರಲಿದೆ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವವರಿಗೆ ದಿನದ ಮಟ್ಟಿಗೆ ಹೆಚ್ಚಿನ ಲಾಭ ಸಿಗಲಿದೆ. ಕುಟುಂಬ ಸಹಿತರಾಗಿ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಆರ್ಥಿಕವಾಗಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಸಂತೋಷದ ಸಂಗತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅಗತ್ಯ ವಸ್ತುಗಳ ಖರೀದಿಯಿಂದ ಆರ್ಥಿಕವಾಗಿ ಸಾಧಾರಣವಾಗಿರಲಿದೆ. ಅಮೂಲ್ಯ ವಸ್ತುಗಳ ಬಗ್ಗೆ ಜಾಗೃತಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಧನಸ್ಸು: ಕೆಲವು ಪ್ರಮುಖ ನಿರ್ಧಾರಗಳು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಅದರ ಹೊರತಾಗಿ ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರ ಮಾತುಗಳು ನಿಮ್ಮನ್ನು ಘಾಸಿಗೊಳಿಸಬಹುದು.
ಆರೋಗ್ಯದ ಕುರಿತು ಕಾಳಜಿ ಇರಲಿ.ಉದ್ಯೋಗಿಗಳಿಗೆ ಮಿಶ್ರ ಫಲ.ಆರ್ಥಿಕ ಪ್ರಗತಿ ಸಾಧಾರಣ.
ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 5

Horoscope Today

ಮಕರ: ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ.ಅದರಲ್ಲಿಯೂ ಗರ್ಭಿಣಿಯರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಅನಾವಶ್ಯಕ ಖರ್ಚುಗಳಿಂದ ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಸಂಬಂಧ ಪಡದೆ ಇರುವ ವಿಷಯದ ಕುರಿತು ಮೂಗು ತೂರಿಸುವುದು ಬೇಡ. ಟೀಕೆಗಳನ್ನು ಎದಿರಿಸಬೇಕಾದಿತು, ಎಚ್ಚರಿಕೆ ಇರಲಿ. ಉದ್ಯೋಗಿಗಳಿಗೆ ಒತ್ತಡ.ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕುಂಭ: ವಿವಾದಾತ್ಮಕ ವಿಷಯಗಳಿಂದ ದೂರ ಇರಿ. ಮಾತಿನಲ್ಲಿ ಹಿಡಿತವಿರಲಿ. ತಮ್ಮ ಬಳಿ ಯಾರಾದರೂ ಹಣದ ಸಹಾಯ ಬೇಡುವ ಸಾಧ್ಯತೆ ಇದೆ, ಆಲೋಚಿಸಿ ಹೆಜ್ಜೆ ಇಡಿ.ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಮೀನ: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆ ಮಾರ್ಗಸೂಚಿಯಾಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಸದೃಢವಾಗಿರಲಿದೆ. ಉದ್ಯೋಗಿಗಳಿಗೆ ಅಭದ್ರತೆಯ ಭಾವನೆ ಕಾಡಲಿದೆ. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Anupama Parameswaran Paradha next
ಟಾಲಿವುಡ್20 mins ago

Anupama Parameswaran: ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ ಅನೌನ್ಸ್‌: ನಟಿಯ ಲುಕ್‌ಗೆ ಫ್ಯಾನ್ಸ್‌ ಫಿದಾ!

PU Board exam girl writing exam
ಪ್ರಮುಖ ಸುದ್ದಿ41 mins ago

Public Exam: ಇನ್ನು ಮುಂದೆ ವರ್ಷಕ್ಕೆರಡು ಬಾರಿ ಬೋರ್ಡ್‌ ಪರೀಕ್ಷೆ ? ಪರಿಶೀಲನೆಗೆ ಸಿಬಿಎಸ್‌ಇಗೆ ಸೂಚನೆ

ಕ್ರೈಂ1 hour ago

Child Welfare commission: ಅಕ್ರಮವಾಗಿ ಸಾಗಿಸುತ್ತಿದ್ದ 95 ಮುಸ್ಲಿಂ ಮಕ್ಕಳ ರಕ್ಷಣೆ

jai sriram slogan viral news
ವೈರಲ್ ನ್ಯೂಸ್1 hour ago

Jai SriRam Slogan: ಉತ್ತರಪತ್ರಿಕೆಯಲ್ಲಿ `ಜೈ ಶ್ರೀರಾಮ್’ ಬರೆದ ವಿದ್ಯಾರ್ಥಿಗಳು ಪಾಸ್;‌ ಪ್ರಾಧ್ಯಾಪಕರು ವಜಾ!

Ayushman Bharat Yojana
ಆರೋಗ್ಯ2 hours ago

 Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Sushant Singh Rajput
ಬಾಲಿವುಡ್2 hours ago

Sushant Singh Rajput: ಸುಶಾಂತ್‌ ಸಿಂಗ್‌ ಸಾವಿಗೆ ನ್ಯಾಯಕ್ಕಾಗಿ ಆನ್‌ಲೈನ್ ಅಭಿಯಾನ ಶುರು ಮಾಡಿದ ಸಹೋದರಿ!

donkey milk
ವಾಣಿಜ್ಯ2 hours ago

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

ವಿದೇಶ2 hours ago

US Sanction: ಭಾರತೀಯ ಮೂಲದ 3 ಕಂಪನಿಗಳಿಗೆ ಅಮೆರಿಕ ನಿರ್ಬಂಧ

Kalki 2898 AD to release on this date
ಟಾಲಿವುಡ್2 hours ago

Kalki 2898 AD: ಪ್ರಭಾಸ್, ದೀಪಿಕಾ, ಅಮಿತಾಭ್‌ ಮುಖ್ಯಭೂಮಿಕೆಯ ʻಕಲ್ಕಿ 2898 ADʼ ರಿಲೀಸ್‌ ಡೇಟ್‌ ಅನೌನ್ಸ್‌!

nota vote
ಪ್ರಮುಖ ಸುದ್ದಿ3 hours ago

NOTA: ಅತಿ ಹೆಚ್ಚು `ನೋಟಾ’ ಬಿದ್ದರೆ ಹೊಸ ಚುನಾವಣೆ ಮಾಡಬಹುದೇ? ಸುಪ್ರೀಂ ಪ್ರಶ್ನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ23 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202423 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202424 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

ಟ್ರೆಂಡಿಂಗ್‌