MiG-21 Jets: ಅಭಿನಂದನ್‌ ವರ್ಧಮಾನ್‌ ಸಾಹಸದ ಮಿಗ್‌ 21 ಜೆಟ್‌ಗಳ ಹಾರಾಟ ಸ್ಥಗಿತ, ಇಲ್ಲಿದೆ ಇವುಗಳ ಪತನ ಕಥನ - Vistara News

ದೇಶ

MiG-21 Jets: ಅಭಿನಂದನ್‌ ವರ್ಧಮಾನ್‌ ಸಾಹಸದ ಮಿಗ್‌ 21 ಜೆಟ್‌ಗಳ ಹಾರಾಟ ಸ್ಥಗಿತ, ಇಲ್ಲಿದೆ ಇವುಗಳ ಪತನ ಕಥನ

MiG-21 Jets: 1960ರ ದಶಕದ ಆರಂಭದಲ್ಲಿ ದೇಶದ ವಾಯುಪಡೆಗೆ ಮಿಗ್‌-21 ಯುದ್ಧವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆದರೆ, ಕಾರ್ಯಾಚರಣೆಗಳಿಗಿಂತ, ಈ ವಿಮಾನಗಳು ಅಪಘಾತಗಳಿಂದಲೇ ದೇಶಾದ್ಯಂತ ಹೆಚ್ಚು ಸುದ್ದಿಯಾಗಿವೆ.

VISTARANEWS.COM


on

MiG 21 Jet
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತೀಯ ವಾಯುಪಡೆಯ ಮಿಗ್‌-21 ಯುದ್ಧವಿಮಾನಗಳು (MiG-21 Jets) ಕಾರ್ಯಾಚರಣೆಗಿಂತ ಅಪಘಾತಗಳಿಗೇ ಹೆಚ್ಚು ಹೆಸರುವಾಸಿಯಾಗಿವೆ. ಮೇ 8ರಂದು ರಾಜಸ್ಥಾನದಲ್ಲಿ ಮಿಗ್‌-21 ಯುದ್ಧವಿಮಾನ ಪತನವಾಗಿ ಮೂವರು ನಾಗರಿಕರು ಮೃತಪಟ್ಟ ಪ್ರಕರಣದ ಕುರಿತು ತನಿಖೆಯಾಗುತ್ತಿರುವ ಬೆನ್ನಲ್ಲೇ, ವಾಯುಪಡೆಯು ಮಿಗ್‌-21 ಯುದ್ಧವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 2019ರಲ್ಲಿ ಪುಲ್ವಾಮ ದಾಳಿ ಬಳಿಕ ಅಭಿನಂದನ್‌ ವರ್ಧಮಾನ್‌ ಅವರು ಮಿಗ್‌-21 ಯುದ್ಧವಿಮಾನದ ವಿಂಗ್‌ ಕಮಾಂಡರ್‌ ಆಗಿದ್ದರು. ಹಾಗೆಯೇ, ಪಾಕಿಸ್ತಾನದ ಯುದ್ಧವಿಮಾನವನ್ನು ಹೊಡೆದುರುಳಿಸಿ ಸಾಹಸ ಮೆರೆದಿದ್ದರು.

ಭಾರತೀಯ ವಾಯುಪಡೆಯಲ್ಲಿರುವ ಮಿಗ್‌-21 ಯುದ್ಧವಿಮಾನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಪರಿಶೀಲನೆ ಪೂರ್ಣಗೊಳಿಸುವವರೆಗೆ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಪರಿಶೀಲನೆ ಪೂರ್ಣಗೊಂಡ ನಂತರ ಅವುಗಳ ಹಾರಾಟವನ್ನು ಆರಂಭಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸಾಲು ಸಾಲಾಗಿ ವಿಮಾನಗಳ ಪತನವಾಗುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೇ 8ರಂದು ರಾಜಸ್ಥಾನದ ಹನುಮಾನ್​ಗಢ್​​ನಲ್ಲಿ ಮಿಗ್‌-21 ವಿಮಾನ ಪತನಗೊಂಡು ಮೂವರು ನಾಗರಿಕರು ಮೃತಪಟ್ಟಿದ್ದರು. ಅದೃಷ್ಟವಶಾತ್‌ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದರು. ವಿಮಾನ ಸೂರತ್​ಗಢ್​​ನಲ್ಲಿರುವ ವಾಯುನೆಲೆಯಿಂದ ಟೇಕ್​ ಆಫ್​ ಆಗಿತ್ತು. ಹೀಗೆ ಟೇಕ್​ ಆಫ್ ಆದ ಕೆಲವೇ ಹೊತ್ತಲ್ಲಿ, ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಬಗ್ಗೆ ಪೈಲೆಟ್​ ಕಂಟ್ರೋಲ್​ ರೂಮಿಗೆ ಮಾಹಿತಿಯನ್ನೂ ನೀಡಿದ್ದರು. ಆದರೆ ಬಹ್ಲೋಲ್​ ಬಳಿಯ ಮನೆಯೊಂದರ ಮೇಲೆ ಮಿಗ್​ 21 ವಿಮಾನ ಅಪ್ಪಳಿಸಿತ್ತು. ಇದಾದ ಬಳಿಕ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿತ್ತು.

ಇದನ್ನೂ ಓದಿ: IAF MIG-21: ಮನೆಗೆ ಅಪ್ಪಳಿಸಿದ ಮಿಗ್​ 21 ಯುದ್ಧ ವಿಮಾನ; ಇಬ್ಬರು ಮಹಿಳೆಯರ ದುರ್ಮರಣ

ಮಿಗ್-‌21 ವಿಮಾನಗಳ ಪತನ ಕಥನ

ರಷ್ಯಾ ನಿರ್ಮಿತ ಮಿಗ್-‌21 ಯುದ್ಧವಿಮಾನಗಳನ್ನು ದೇಶದ ವಾಯುಪಡೆಗೆ 1960ರ ದಶಕದ ಆರಂಭದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದುವರೆಗೆ ಹೆಚ್ಚಿನ ವಿಮಾನಗಳು ಪತನಗೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ, ದೇಶದಲ್ಲಿ ಸುಮಾರು 400 ಮಿಗ್‌-21 ಯುದ್ಧವಿಮಾನಗಳು ಅಪಘಾತಕ್ಕೀಡಾಗಿವೆ. ಹಾಗೆಯೇ, 200ಕ್ಕೂ ಅಧಿಕ ಪೈಲಟ್‌ಗಳು ಹಾಗೂ 60ಕ್ಕೂ ಹೆಚ್ಚು ನಾಗರಿಕರು ವಿಮಾನಗಳ ಪತನದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ, 1963ರಲ್ಲಿ ಮಿಗ್‌-21 ಯುದ್ಧವಿಮಾನವು ದೇಶದಲ್ಲಿ ಮೊದಲ ಬಾರಿಗೆ ಪತನಗೊಂಡಿತ್ತು. ಈ ಯುದ್ಧವಿಮಾನಗಳ ಪತನಗಳ ಸಂಖ್ಯೆ ಹೆಚ್ಚಿರುವ ಕಾರಣ, ಬೇರೆ ಯುದ್ಧವಿಮಾನಗಳನ್ನು ವಾಯುಪಡೆಗೆ ಅಳವಡಿಸಿಕೊಳ್ಳಬೇಕು ಎಂಬ ವಾದಗಳು ತುಂಬ ವರ್ಷಗಳಿಂದಲೂ ಕೇಳಿಬರುತ್ತಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Narendra Modi: ಸಂಸತ್ತಲ್ಲಿ ಹಿಂದುಗಳಿಗೆ ಅವಮಾನ, ದೇವರಿಗೆ ಅಪಮಾನ, ಇದನ್ನು ಹಿಂದುಗಳು ಮರೆಯಲಾರರು ಎಂದ ಮೋದಿ

Narendra Modi: ಹಿಂದುಗಳ ಕುರಿತು ರಾಹುಲ್‌ ಗಾಂಧಿ ಅವರು ಸುಳ್ಳುಗಳನ್ನು ಹರಡಿಸುತ್ತಿದ್ದಾರೆ. ಹಿಂದುಗಳು ಹಿಂಸಾವಾದಿಗಳು ಎಂದು ಹೇಳುವ ಮೂಲಕ ಪ್ರಚೋದನೆ ನೀಡುತ್ತಿದೆ. ಇದು ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ನಾಯಕನ ಸಂಸ್ಕೃತಿ, ಇದು ನಿಮ್ಮ ವ್ಯಕ್ತಿತ್ವ, ಇವು ನಿಮ್ಮ ಕೆಟ್ಟ ವಿಚಾರಗಳು, ಹಿಂದುಗಳ ಮೇಲೆ ನೀವು ಹೊಂದಿರುವ ದ್ವೇಷ, ನಿಮ್ಮ ಚಟುವಟಿಕೆಗಳು ಹಿಂದುಗಳ ವಿರೋಧಿಯಾಗಿವೆ ಎಂದು ಸಂಸತ್‌ನಲ್ಲಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು.

VISTARANEWS.COM


on

Narendra Modi
Koo

ನವದೆಹಲಿ: ಹಿಂದುಗಳು ಹಾಗೂ ಹಿಂದುತ್ವದ ಕುರಿತು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಂಸತ್‌ನಲ್ಲಿ ಮಾಡಿದ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಸಭೆಯಲ್ಲಿ (Lok Sabha) ತಿರುಗೇಟು ನೀಡಿದರು. “ಹಿಂದುತ್ವವನ್ನು, ಹಿಂದುಗಳನ್ನು ಅವಮಾನಿಸುವುದೇ ಕಾಂಗ್ರೆಸ್‌ ಉದ್ದೇಶವಾಗಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ ನಾಯಕರೊಬ್ಬರು ಸಂಸತ್‌ನಲ್ಲಿ ಹಿಂದುಗಳ ಕುರಿತು ಮಾತನಾಡಿದ್ದಾರೆ. ಇದನ್ನು ಇಡೀ ದೇಶವೇ ನೋಡಿದೆ” ಎಂದು ಟೀಕಿಸಿದರು.

“ಸ್ವಾಮಿ ವಿವೇಕಾನಂದರು ಯಾವ ಧರ್ಮದ ಕುರಿತು ಅಭಿಮಾನದಿಂದ ಹೇಳಿದ್ದರೋ, ಯಾವ ಧರ್ಮದ ಮಹತ್ವ, ಸಹಿಷ್ಣುತೆಯನ್ನು ಜಗತ್ತಿಗೇ ತಿಳಿಸಿದ್ದರೋ, ಅದೇ ಧರ್ಮದವರು ನಾವು. ಹಿಂದು ಧರ್ಮವು ಎಂದಿಗೂ ದ್ವೇಷ, ಹಿಂಸೆಯನ್ನು ಪ್ರಚೋದಿಸಿಲ್ಲ. ಬಿಜೆಪಿಯು ಇಂತಹ ಧರ್ಮದಲ್ಲಿ ನಂಬಿಕೆ ಇರಿಸಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್‌ ಹಿಂದುಗಳನ್ನು ಅವಮಾನಿಸುತ್ತಿದೆ. ಹಿಂದುಗಳು ಕಾಂಗ್ರೆಸ್‌ನ ಈ ಷಡ್ಯಂತ್ರವನ್ನು ತಿಳಿಯಬೇಕು. ದೇಶದಲ್ಲಿ ಹಿಂದುಗಳು ಕಾಂಗ್ರೆಸ್‌ ಬಗ್ಗೆ ಎಚ್ಚರದಿಂದ ಇರಬೇಕು” ಎಂದು ಹೇಳಿದರು.

“ಹಿಂದುಗಳ ಕುರಿತು ರಾಹುಲ್‌ ಗಾಂಧಿ ಅವರು ಸುಳ್ಳುಗಳನ್ನು ಹರಡಿಸುತ್ತಿದ್ದಾರೆ. ಹಿಂದುಗಳು ಹಿಂಸಾವಾದಿಗಳು ಎಂದು ಹೇಳುವ ಮೂಲಕ ಪ್ರಚೋದನೆ ನೀಡುತ್ತಿದೆ. ಇದು ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ನಾಯಕನ ಸಂಸ್ಕೃತಿ, ಇದು ನಿಮ್ಮ ವ್ಯಕ್ತಿತ್ವ, ಇವು ನಿಮ್ಮ ಕೆಟ್ಟ ವಿಚಾರಗಳು, ಹಿಂದುಗಳ ಮೇಲೆ ನೀವು ಹೊಂದಿರುವ ದ್ವೇಷ, ನಿಮ್ಮ ಚಟುವಟಿಕೆಗಳು ಹಿಂದುಗಳ ವಿರೋಧಿಯಾಗಿವೆ. ಇದನ್ನು ಹಿಂದುಗಳು ಗಮನಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ರಾಹುಲ್‌ ಗಾಂಧಿ ಹೇಳಿದ್ದೇನು?

“ಹಿಂದೂ ಧರ್ಮ ಹಾಗೂ ನಮ್ಮ ಅನೇಕ ಹಿಂದೂ ಮಹಾಪುರುಷರು ಅಹಿಂಸೆಯನ್ನು ಪ್ರತಿಪಾದಿಸುತ್ತಾರೆ. ಜೀಸಸ್‌ ಕ್ರೈಸ್ಟ್‌ ಕೂಡ ಅಹಿಂಸೆಯನ್ನೇ ಪ್ರತಿಪಾದಿಸುತ್ತಾನೆ. ಸ್ವತಃ ಕೈಯಲ್ಲಿ ತ್ರಿಶೂಲ ಹಿಡಿದಿರುವ ಮಹಾಶಿವನೂ ಅಹಿಂಸೆಯನ್ನೇ ಹೇಳುತ್ತಾನೆ. ಆದರೆ ದಿನದ 24 ಗಂಟೆ ಹಿಂದೂಗಳೆಂದು ಹೇಳುತ್ತಾ ತಿರುಗಾಡುವವರು ಹಿಂಸೆ, ಶತ್ರುತ್ವ, ಅಸತ್ಯವನ್ನೇ ಹೇಳುತ್ತಿದ್ದಾರೆ. ನೀವು ಹಿಂದೂಗಳೇ ಅಲ್ಲ” ಎಂದು ರಾಹುಲ್‌ ಗಾಂಧಿ ಸಂಸತ್‌ನಲ್ಲಿ ಹೇಳಿದ್ದರು.

ಇದನ್ನೂ ಓದಿ: Narendra Modi: ರಾಹುಲ್‌ ಗಾಂಧಿಯನ್ನು ‘ಬಾಲ ಬುದ್ಧಿಯವನು’‌ ಎಂದ ಮೋದಿ; ಅವರು ಹೇಳಿದ ‘ಸೈಕಲ್‌ ಕತೆ’ಯೂ ಇಲ್ಲಿದೆ!

Continue Reading

ಪ್ರಮುಖ ಸುದ್ದಿ

NEET PG exam : ಮೋಸ ತಡೆಯಲು ಕ್ರಮ; ನೀಟ್ ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ತಯಾರಿ!

NEET PG exam:

VISTARANEWS.COM


on

NEET PG exam
Koo

ಬೆಂಗಳೂರು: ನೀಟ್ ಪಿಜಿ ಪರೀಕ್ಷೆಯ ಬಗ್ಗೆ ಚರ್ಚಿಸಲು ಗೃಹ ಸಚಿವಾಲಯದ ಐ 4 ಸಿ ವಿಭಾಗದಲ್ಲಿ ಸೈಬರ್ ಸೆಲ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆದಿದ್ದು, ಪರೀಕ್ಷಾ ಮೋಸ ತಪ್ಪಿಸಲು ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವ ನಿರ್ಧಾರಕ್ಕೆ ಬರಲಾಗಿದೆ. ವಿವಿಧ ಸರ್ಕಾರಿ ಸಂಸ್ಥೆಗಳು ಸಂಭಾವ್ಯ ಲೋಪದೋಷಗಳನ್ನು ಮೌಲ್ಯಮಾಪನ ಮಾಡಲಾಗುತ್ತಿದ್ದು ಆಗಿರುವ ಅಕ್ರಮಗಳ ಕುರಿತ ತನಿಖೆ ಬಹುತೇಕ ಪೂರ್ಣಗೊಂಡಿದೆ. ಸಭೆಯ ಮೂಲಗಳ ಪ್ರಕಾರ ಪರೀಕ್ಷೆ ಒಂದು ತಿಂಗಳೊಳಗೆ ನಡೆಸುವ ಸಾಧ್ಯತೆಯಿದೆ.

ನೀಟ್ ಪಿಜಿ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಈ ವಾರದ ಅಂತ್ಯದ ವೇಳೆಗೆ ಘೋಷಿಸುವ ನಿರೀಕ್ಷೆಯಿದೆ, ಪರೀಕ್ಷೆಗಳನ್ನು ಆಗಸ್ಟ್​​ನಲ್ಲಿ ನಡೆಸುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಇಸ್ರೋದ ಮಾಜಿ ಅಧಿಕಾರಿ ಡಾ.ರಾಧಾಕೃಷ್ಣನ್ ನೇತೃತ್ವದ ತಜ್ಞರ ಸಮಿತಿಗೆ ಪರೀಕ್ಷೆ ನಡೆಸುವ ಹೊಣೆಗಾರಿಕೆ ವಹಿಸಲಾಗಿದೆ. ನೀಟ್ ಪಿಜಿ ನಡೆಸುವ ಜವಾಬ್ದಾರಿಯನ್ನು ಹೊಂದಿರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್​ಟಿಎ ) ಪ್ರಸ್ತುತ ಹೊಸ ದಿನಾಂಕಗಳನ್ನು ಅಂತಿಮಗೊಳಿಸುವ ಮೊದಲು ಈ ಪರಿಶೀಲನಾ ಸಮಿತಿಯ ಅನುಮೋದನೆಗಾಗಿ ಕಾಯುತ್ತಿದೆ.

ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಪರೀಕ್ಷೆಯ ಸಮಗ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಜೂನ್ 23 ರಂದು ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.

ನೀಟ್ ಪಿಜಿ ಪರೀಕ್ಷೆ 2024 ರ ಹೊಸ ಮಾಹಿತಿಗಳೇನು?

ಗೃಹ ಸಚಿವಾಲಯದ ಐ 4 ಸಿ ವಿಭಾಗದಲ್ಲಿ ಮಹತ್ವದ ಸಭೆ ನಡೆದಿದೆ ಸೈಬರ್ ಸೆಲ್​​ನ ಅಧಿಕಾರಿಗಳನ್ನು ಒಳಗೊಂಡಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಭದ್ರತೆ ಖಚಿತಪಡಿಸಿಕೊಳ್ಳಲು ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಅಂತಿಮಗೊಳಿಸಲಾಗುವುದು ಮೊದಲ ನಿರ್ಧಾರವಾಗಿದೆ.

ಇದನ್ನೂ ಓದಿ: Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

ಯಾವುದೇ ಸಂಭಾವ್ಯ ಲೋಪದೋಷಗಳು ಅಥವಾ ನ್ಯೂನತೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸರ್ಕಾರ ವಿವಿಧ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದೆ. ಗೃಹ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯವು ಇಡೀ ಪ್ರಕ್ರಿಯೆಯ ಸಮಗ್ರ ಮೌಲ್ಯಮಾಪನ ನಡೆಸಲಿದೆ.

ಹಿಂದಿನ ಅಕ್ರಮಗಳ ಕುರಿತ ತನಿಖೆ ಅಂತಿಮ ಹಂತದಲ್ಲಿದೆ, ಅದರ ವರದಿ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ.

Continue Reading

ದೇಶ

Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ

Narendra Modi: ಕಾಂಗ್ರೆಸ್‌ ಎಂದಿಗೂ ರಾಜಕೀಯ ಸ್ವಾರ್ಥಕ್ಕಾಗಿ ಷಡ್ಯಂತ್ರ, ಕೀಳು ರಾಜಕೀಯ ಮಾಡಿದೆ. ಇದೇ ಕಾರಣದಿಂದಾಗಿ ಸೀತಾರಾಮ್‌ ಕೇಸರಿ ಅವರಿಗೆ ಕಾಂಗ್ರೆಸ್‌ ಮೋಸ ಮಾಡಿತು. ಇತಿಹಾಸದುದ್ದಕ್ಕೂ ಕಾಂಗ್ರೆಸ್‌ ತನ್ನ ಲಾಭಕ್ಕೋಸ್ಕರ ಕೆಲಸ ಮಾಡಿತೇ ಹೊರತು, ದೇಶದ ಏಳಿಗೆಗೆ ದುಡಿಯಲಿಲ್ಲ ಎಂದು ಸಂಸತ್‌ನಲ್ಲಿ ಕಾಂಗ್ರೆಸ್‌ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

VISTARANEWS.COM


on

Narendra Modi
Koo

ನವದೆಹಲಿ: ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ (Lok Sabha) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದರು. ದೇಶದ ಅಭಿವೃದ್ಧಿ, ವಿಕಸಿತ ಭಾರತದ ಕಲ್ಪನೆಯ ಜತೆಗೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. “ದೇಶದ ಮಹಾನ್‌ ವ್ಯಕ್ತಿಗಳಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ. ಅದರಲ್ಲೂ, ಸ್ವಾತಂತ್ರ್ಯದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ಜವಾಹರ ಲಾಲ್‌ ನೆಹರು (Jawaharlal Nehru) ಅವರು ಷಡ್ಯಂತ್ರದಿಂದ ಸೋಲಿಸಿದರು” ಎಂದು ದೂರಿದರು.

“ದೇಶದ ಮಹಾನ್‌ ವ್ಯಕ್ತಿಗಳಿಗೆ, ಗಣ್ಯರಿಗೆ, ಧೀಮಂತ ನಾಯಕರಿಗೆ ಕಾಂಗ್ರೆಸ್‌ ಅವಮಾನ, ಮೋಸ ಮಾಡಿದೆ. ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಷಡ್ಯಂತ್ರದಿಂದ ಸೋಲಿಸಿತು. ಅಷ್ಟೇ ಅಲ್ಲ, ಜಗಜೀವನ್‌ ರಾಮ್‌ ಅವರು ಪ್ರಧಾನಿಯಾಗುವುದನ್ನು ಇಂದಿರಾ ಗಾಂಧಿ ಅವರು ತಪ್ಪಿಸಿದರು. ಜಗಜೀವನ್‌ ರಾಮ್‌ ಅವರು ಪ್ರಧಾನಿಯಾಗಬಾರದು ಎಂಬುದಾಗಿ ಇಂದಿರಾ ಗಾಂಧಿ ಅವರು ಬರೆದ ಪತ್ರದ ಬಗ್ಗೆ ಪುಸ್ತಕವೊಂದರಲ್ಲಿ ಉಲ್ಲೇಖಿಸಲಾಗಿದೆ” ಎಂದು ಮೋದಿ ತಿಳಿಸಿದರು.

“ಕಾಂಗ್ರೆಸ್‌ ಎಂದಿಗೂ ರಾಜಕೀಯ ಸ್ವಾರ್ಥಕ್ಕಾಗಿ ಷಡ್ಯಂತ್ರ, ಕೀಳು ರಾಜಕೀಯ ಮಾಡಿದೆ. ಇದೇ ಕಾರಣದಿಂದಾಗಿ ಸೀತಾರಾಮ್‌ ಕೇಸರಿ ಅವರಿಗೆ ಕಾಂಗ್ರೆಸ್‌ ಮೋಸ ಮಾಡಿತು. ಇತಿಹಾಸದುದ್ದಕ್ಕೂ ಕಾಂಗ್ರೆಸ್‌ ತನ್ನ ಲಾಭಕ್ಕೋಸ್ಕರ ಕೆಲಸ ಮಾಡಿತೇ ಹೊರತು, ದೇಶದ ಏಳಿಗೆಗೆ ದುಡಿಯಲಿಲ್ಲ. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ ಸೈನಿಕರ ಬಗ್ಗೆಯೂ ಅನುಮಾನದಿಂದ ಮಾತನಾಡುವ ಮೂಲಕ ಯೋಧರಿಗೆ ಅವಮಾನ ಮಾಡಿದೆ” ಎಂದು ಟೀಕಿಸಿದರು.

“ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್‌ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್‌ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ” ಎಂದು ಮೋದಿ ಗುಡುಗಿದರು.

ನೂತನ ಸಂಸದರಿಗೆ ಅಭಿನಂದನೆ

ನೂತನ ಸಂಸದರಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ಸಂಸತ್‌ಗೆ ಮೊದಲ ಬಾರಿ ಆಯ್ಕೆಯಾಗಿರುವ ನೂತನ ಸಂಸದರಿಗೆ ಅಭಿನಂದನೆಗಳು. ನೂತನ ಸಂಸದರು ಸದನದ ನಿಯಮಗಳನ್ನು, ಶಿಷ್ಟಾಚಾರಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಅನುಭವಿ ಸಂಸದರಂತೆ ವರ್ತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನೂತನ ಸಂಸದರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಂಡಿರುವುದು ಕೂಡ ಸಕಾರಾತ್ಮಕ ಸಂಗತಿಯಾಗಿದೆ.

ಇದನ್ನೂ ಓದಿ: Narendra Modi: ರಾಹುಲ್‌ ಗಾಂಧಿಯನ್ನು ‘ಬಾಲ ಬುದ್ಧಿಯವನು’‌ ಎಂದ ಮೋದಿ; ಅವರು ಹೇಳಿದ ‘ಸೈಕಲ್‌ ಕತೆ’ಯೂ ಇಲ್ಲಿದೆ!

Continue Reading

ಪ್ರಮುಖ ಸುದ್ದಿ

Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

Super Computers : ಇದು ಚಿಪ್ ವಿನ್ಯಾಸದಲ್ಲಿ ಭಾರತದದ ಮಹತ್ವದ ಸಾಧನೆಯಾಗಿದೆ. ಇದು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ದೇಶೀಯ ಮಟ್ಟದ ಅಭಿವೃದ್ಧಿಯಲ್ಲಿ ಭಾರತದ ಸಾಮರ್ಥ್ಯ ಪ್ರದರ್ಶಿಸುತ್ತದೆ. ಉದ್ಯಮದ ಸಹಭಾಗಿತ್ವದಲ್ಲಿ ಕನ್ಸೋರ್ಟಿಯಾ ಮೋಡ್​​ನಲ್ಲಿ ಈ ಉದ್ಯಮಗಳು ಪ್ರಸ್ತುತ ಅಗತ್ಯ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಿಕ ವಿಭಾಗಗಳ (ಎಚ್ಒಡಿ) ಮುಖ್ಯಸ್ಥ ಮುಖ್ಯಸ್ಥ ಡಾ.ಪ್ರವೀಣ್ ಕುಮಾರ್ ಎಸ್ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

Super Computers
Koo

ಹೊಸದಿಲ್ಲಿ: ಮೇಕ್ ಇನ್ ಇಂಡಿಯಾದ ಭಾಗವಾಗಿ ಎಯುಎಂ ಎಂದು ಕರೆಯಲ್ಪಡುವ ದೇಶೀಯ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (ಎಚ್​​ಪಿಸಿ) ಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸಲ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸೂಪರ್ ಕಂಪ್ಯೂಟಿಂಗ್​ನಲ್ಲಿ (Super Computers) ಜಾಗತಿಕ ನಾಯಕನಾಗುವ ಗುರಿ ಹೊಂದಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ಹೇಳಿದ್ದಾರೆ. ದೇಶೀಯವಾಗಿ ನಿರ್ಮಿಸಲಾಗುವ ಎಚ್​ಪಿಸಿ ಚಿಪ್​​ನ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಸೆಂಟರ್ ಫಾರ್ ಡೆವಲಪ್​ಮೆಂಟ್​ ಆಫ್ ಅಡ್ವಾನ್ಸ್​ಡ್​ ಕಂಪ್ಯೂಟಿಂಗ್ (ಸಿ-ಡ್ಯಾಕ್) ಮಾಸ್ಚಿಪ್ ಟೆಕ್ನಾಲಜೀಸ್ ಮತ್ತು ಸೋಷಿಯೋನೆಕ್ಸ್ಟ್ ಇಂಕ್​ ಜತೆ ಪಾಲುದಾರಿಕೆಗಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಎಚ್​​ಪಿಸಿ ಪ್ರೊಸೆಸರ್ ಆರ್ಮ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಮತ್ತು ಟಿಎಸ್ ಎಂಸಿಯ (ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ) 5 ಎನ್ಎಂ ತಂತ್ರಜ್ಞಾನದಂತೆ ರಚಿಸಲಾಗಿದೆ.

ಇದು ಚಿಪ್ ವಿನ್ಯಾಸದಲ್ಲಿ ಭಾರತದದ ಮಹತ್ವದ ಸಾಧನೆಯಾಗಿದೆ. ಇದು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ದೇಶೀಯ ಮಟ್ಟದ ಅಭಿವೃದ್ಧಿಯಲ್ಲಿ ಭಾರತದ ಸಾಮರ್ಥ್ಯ ಪ್ರದರ್ಶಿಸುತ್ತದೆ. ಉದ್ಯಮದ ಸಹಭಾಗಿತ್ವದಲ್ಲಿ ಕನ್ಸೋರ್ಟಿಯಾ ಮೋಡ್​​ನಲ್ಲಿ ಈ ಉದ್ಯಮಗಳು ಪ್ರಸ್ತುತ ಅಗತ್ಯ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಿಕ ವಿಭಾಗಗಳ (ಎಚ್ಒಡಿ) ಮುಖ್ಯಸ್ಥ ಮುಖ್ಯಸ್ಥ ಡಾ.ಪ್ರವೀಣ್ ಕುಮಾರ್ ಎಸ್ ಅಭಿಪ್ರಾಯಪಟ್ಟಿದ್ದಾರೆ.

ಸಿ-ಡ್ಯಾಕ್ ಎಯುಎಂ ಎಂಬ ಸ್ಥಳೀಯ ಎಚ್​ಪಿಡಿ ಪ್ರೊಸೆಸರ್ ಅನ್ನು ವಿನ್ಯಾಸಗೊಳಿಸುತ್ತಿದೆ. ಭಾರತೀಯ ಸ್ಟಾರ್ಟ್ಅಪ್ ಕೀನ್ಹೆಡ್ಸ್ ಟೆಕ್ನಾಲಜೀಸ್ ಈ ಯೋಜನೆಯ ನಿರ್ವಹಣಾ ಸಲಹೆಗಾರರಾಗಿ (ಪಿಎಂಸಿ) ತೊಡಗಿಸಿಕೊಂಡಿದೆ.

ಇದನ್ನೂ ಓದಿ: Narendra Modi: ದೇಶದ ಜನ ನಮ್ಮನ್ನು ಮೂರನೇ ಬಾರಿ ಗೆಲ್ಲಿಸಿದ್ದಾರೆ, ಕಾಂಗ್ರೆಸ್‌ಗೆ ನೂರು ಸ್ಥಾನ ಗೆಲ್ಲುವ ಯೋಗ್ಯತೆಯೂ ಇಲ್ಲ; ರಾಹುಲ್‌ಗೆ ಮೋದಿ ಗೇಲಿ

.”ಸರ್ವರ್ ನೋಡ್​ಗಳು , ಇಂಟರ್​ಕನೆಕ್ಟ್​ಗಳು ಮತ್ತು ಸಿಸ್ಟಮ್ ಸಾಫ್ಟ್​ವೇರ್​ ಸ್ಟ್ಯಾಕ್​​ನೊಂದಿಗೆ ನಮ್ಮ ಸ್ವದೇಶಿಕರಣ ಪ್ರಯತ್ನಗಳು ಶೇಕಡಾ 50 ಕ್ಕಿಂತ ಸಾಗಿದೆ. ಈಗ ಸಂಪೂರ್ಣ ಸ್ವದೇಶೀಕರಣಕ್ಕಾಗಿ, ನಾವು ದೇಶೀಯ ಎಚ್​​ಪಿಸಿ ಪ್ರೊಸೆಸರ್ ಎಯುಎಂ ಅನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ” ಎಂದು ಕೃಷ್ಣನ್ ಹೇಳಿದ್ದಾರೆ.

Continue Reading
Advertisement
Narendra Modi
ಪ್ರಮುಖ ಸುದ್ದಿ13 mins ago

Narendra Modi: ಸಂಸತ್ತಲ್ಲಿ ಹಿಂದುಗಳಿಗೆ ಅವಮಾನ, ದೇವರಿಗೆ ಅಪಮಾನ, ಇದನ್ನು ಹಿಂದುಗಳು ಮರೆಯಲಾರರು ಎಂದ ಮೋದಿ

NEET PG exam
ಪ್ರಮುಖ ಸುದ್ದಿ15 mins ago

NEET PG exam : ಮೋಸ ತಡೆಯಲು ಕ್ರಮ; ನೀಟ್ ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ತಯಾರಿ!

Viral Video
Latest19 mins ago

Eknath Shinde: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ

Rainy Season Tourism
ಪ್ರವಾಸ30 mins ago

Rainy Season Tourism: ಮಳೆಗಾಲದ ಪ್ರವಾಸ ಮಾಡುವ ಮುನ್ನ ಈ 10 ಎಚ್ಚರಿಕೆಗಳನ್ನು ಪಾಲಿಸಿ

Viral News
Latest31 mins ago

Viral News: ಇಬ್ಬರು ಪತ್ನಿಯರು ಸೇರಿ ಗಂಡನಿಗೆ ಮೂರನೇ ಮದುವೆ ಮಾಡಿಸಿದರು! ವೆಡ್ಡಿಂಗ್‌ ಕಾರ್ಡ್‌ ನೋಡಿ!

Narendra Modi
ದೇಶ36 mins ago

Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ

Pourakarmikas
ಕರ್ನಾಟಕ39 mins ago

Pourakarmikas: ಪೌರ ಕಾರ್ಮಿಕರಿಗೆ ಗುಡ್‌ ನ್ಯೂಸ್; ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ

Super Computers
ಪ್ರಮುಖ ಸುದ್ದಿ41 mins ago

Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

sandalwood theft
ಕ್ರೈಂ44 mins ago

Sandalwood theft : ಶ್ರೀಗಂಧ ಕದಿಯಲು ಬಂದವನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ

Narendra Modi
ದೇಶ52 mins ago

Narendra Modi: ರಾಹುಲ್‌ ಗಾಂಧಿಯನ್ನು ‘ಬಾಲ ಬುದ್ಧಿಯವನು’‌ ಎಂದ ಮೋದಿ; ಅವರು ಹೇಳಿದ ‘ಸೈಕಲ್‌ ಕತೆ’ಯೂ ಇಲ್ಲಿದೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌