Viral News : ಬಾರ್ಬಿಯಂತೆ ಕಾಣುವುದಕ್ಕಾಗಿ 90 ಲಕ್ಷ ರೂ. ಖರ್ಚು ಮಾಡಿದ ಯುವತಿ! - Vistara News

ವೈರಲ್ ನ್ಯೂಸ್

Viral News : ಬಾರ್ಬಿಯಂತೆ ಕಾಣುವುದಕ್ಕಾಗಿ 90 ಲಕ್ಷ ರೂ. ಖರ್ಚು ಮಾಡಿದ ಯುವತಿ!

ಆಸ್ಟ್ರೇಲಿಯಾದ ಹುಡುಗಿಯೊಬ್ಬಳು ಬಾರ್ಬಿಯಂತೆ ಕಾಣುವುದಕ್ಕಾಗಿ ಹಲವಾರು ಪ್ಲಾಸ್ಟಿಕ್‌ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ. ಈಗ ಇವಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾಳೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಸ್ಟ್ರೇಲಿಯಾ: ಚಂದ ಕಾಣಬೇಕು ಎಂದು ಏನೇನೋ ಸರ್ಕಸ್‌ ಮಾಡುವವರನ್ನು ನೋಡಿರುತ್ತೀರಿ. ಹೆಚ್ಚು ಹಣ ಇರುವವರು ಅದಕ್ಕೆಂದೇ ಪ್ಲಾಸ್ಟಿಕ್‌ ಸರ್ಜರಿಗಳನ್ನೂ ಮಾಡಿಸಿಕೊಂಡುಬಿಡುತ್ತಾರೆ. ಹಾಗೆಯೇ ಆಸ್ಟ್ರೇಲಿಯಾದ ಜ್ಯಾಜ್ಮಿನ್‌ ಫಾರೆಸ್ಟ್‌ ಹೆಸರಿನ ಯುವತಿ ಸುಂದರವಾಗಿ ಕಾಣಬೇಕೆಂದೇ ಸಾಕಷ್ಟು ಪ್ಲಾಸ್ಟಿಕ್‌ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ. ಅದಕ್ಕೆಂದೇ ಆಕೆ ಬರೋಬ್ಬರಿ ಒಂದು ಲಕ್ಷ ಡಾಲರ್‌ಗೂ ಅಧಿಕ ಹಣ ಸುರಿದಿದ್ದಾಳಂತೆ!

ಜ್ಯಾಜ್ಮಿನ್‌ಗೆ ಚಿಕ್ಕವಳಿದ್ದಾಗಲೇ ಚಂದ ಕಾಣುವ ಬಗ್ಗೆ ಆಸೆ ಹುಟ್ಟಿತ್ತಂತೆ. ಸುಂದರವಾಗಿರುವವರಿಗೆ ಸಮಾಜ ಹೆಚ್ಚಿನ ಬೆಲೆ ಕೊಡುತ್ತದೆ ಎನ್ನುವುದು ಅರ್ಥವಾಗಿತ್ತಂತೆ. ಅದೇ ಕಾರಣಕ್ಕೆ ಆಕೆ ಚೆನ್ನಾಗಿ ಕಾಣಬೇಕೆಂದು ಪಣ ತೊಟ್ಟಿದ್ದಾಳೆ. ತನ್ನ 18ನೇ ವಯಸ್ಸಿನಲ್ಲೇ ಸ್ತನ ಹೆಚ್ಚಾಗಿಸಿಕೊಳ್ಳುವ ಆಪರೇಷನ್‌ ಮಾಡಿಸಿಕೊಂಡಿದ್ದಾಳೆ. ಅದೇ ವರ್ಷ ಲಿಪ್‌ ಫಿಲ್ಲರ್‌ ಆಪರೇಷನ್‌ ಅನ್ನೂ ಮಾಡಿಸಿಕೊಂಡಿದ್ದಾಳೆ.

ಇದನ್ನೂ ಓದಿ: Viral News : ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಟ್ವೀಟ್‌; ಕನ್ನಡಿಗರ ಆಕ್ರೋಶಕ್ಕೆ ಡಿಲೀಟ್‌
ಇದೀಗ 25 ವರ್ಷದವಳಾಗಿರುವ ಜ್ಯಾಜ್ಮಿನ್‌ ಈಗಾಗಲೇ ಹಲವಾರು ರೀತಿಯ ಪ್ಲಾಸ್ಟಿಕ್‌ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ. ಜಾ ಲೈನ್‌ ಸರಿ ಮಾಡಿಸಿಕೊಳ್ಳುವುದು, ಹಣೆ ಚಿಕ್ಕದಾಗಿ ಮಾಡಿಸಿಕೊಳ್ಳುವುದು, ಮೂಗನ್ನು ಚಿಕ್ಕದಾಗಿ ಮಾಡಿಸಿಕೊಳ್ಳುವುದು, ಕೆನ್ನೆ ತುಂಬಿಸಿಕೊಳ್ಳುವುದು ಸೇರಿದಂತೆ ಹಲವಾರು ರೀತಿಯ ಪ್ಲಾಸ್ಟಿಕ್‌ ಸರ್ಜರಿಗಳನ್ನೂ ಮಾಡಿಸಿಕೊಂಡಿದ್ದಾರೆ.

“ನಾನು ಇದ್ದಂತೇ ಇದ್ದಿದ್ದರೆ ಜನರು ನನಗೆ ಹೆಚ್ಚಿನ ಬೆಲೆ ಕೊಡುತ್ತಿರಲಿಲ್ಲ. ಈ ಪ್ಲಾಸ್ಟಿಕ್‌ ಸರ್ಜರಿಗಳಿಂದಾಗಿ ನನ್ನ ರೂಪವೇ ಬದಲಾಗಿದೆ. ಅಲ್ಲದೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ನನಗೆ ಹೆಚ್ಚಿನ ಬೆಲೆ ಕೊಡುತ್ತಿದ್ದಾರೆ. ನನಗೂ ಕೂಡ ಹೆಚ್ಚಿನ ಆತ್ಮವಿಶ್ವಾಸ ಬಂದಿದೆ. ಇನ್ನೂ ಹಲವಾರು ಪ್ಲಾಸ್ಟಿಕ್‌ ಸರ್ಜರಿಗಳನ್ನು ನಾನು ಮಾಡಿಸಿಕೊಳ್ಳಬೇಕಿದೆ. ಅವೆಲ್ಲವೂ ನನ್ನ ಡ್ರೀಮ್‌ ಪ್ಲಾಸ್ಟಿಕ್‌ ಸರ್ಜರಿಗಳಾಗಿವೆ” ಎನ್ನುತ್ತಾರೆ ಜ್ಯಾಜ್ಮಿನ್‌.

ಇದನ್ನೂ ಓದಿ: Viral Video: ಕಾರು-ಫ್ಲೈಟ್​​ ಬಿಟ್ಟು, ರಾತ್ರಿ ಟ್ರಕ್​​ನಲ್ಲಿ ಚಂಡಿಗಢಕ್ಕೆ ಹೋದ ರಾಹುಲ್ ಗಾಂಧಿ
ಅಂದ ಹಾಗೆ ಈ ರೀತಿ ಸೌಂದರ್ಯಕ್ಕಾಗಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳುವವರು ಇವರು ಮೊದಲೇನಲ್ಲ. ಈ ರೀತಿ ಹಲವಾರು ಮಂದಿ ದೇಹಕ್ಕೆ ಪ್ಲಾಸ್ಟಿಕ್‌ ಸರ್ಜರಿಗಳನ್ನು ಮಾಡಿಸಿಕೊಂಡು ಚಂದ ಕಾಣುವ ಪ್ರಯತ್ನ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೈಂ

Road rage: BMW ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಪುಂಡರ ಅಟ್ಟಹಾಸ, ಇಲ್ಲಿದೆ ವಿಡಿಯೋ

Road rage:ತನ್ನ ಕುಟುಂಬದೊಂದಿಗೆ ಮಹಿಳೆ ಚಲಾಯಿಸುತ್ತಿದ್ದ ಕಾರನ್ನು ಚೇಸ್‌ ಮಾಡಿಕೊಂಡು ಬಂದಿದ್ದ ಕಿಡಿಗೇಡಿಗಳು ಏಕಾಏಕಿ ಕಾರನ್ನು ಅಡ್ಡಗಟ್ಟಿ ಬಿಯರ್‌ ಬಾಟಲಿಗಳಿಂದ ದಾಳಿ ನಡೆಸಿದ್ದರು. ಸಂತ್ರಸ್ತರು ಈ ಘಟನೆ ಬಗ್ಗೆ ಕೇಸ್‌ ದಾಖಲಿಸಲು ನಿರಾಕರಿಸಿದ್ದು, ವೈರಲ್‌ ಆಗಿರುವ ವಿಡಿಯೋದ ಆರೋದ ಆಧಾರದಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್‌ ಆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ

VISTARANEWS.COM


on

Road rage
Koo

ಉತ್ತರಪ್ರದೇಶ: ನಡುರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಹಲ್ಲೆಗೆ(Road rage) ಯತ್ನಿಸಿರುವ ಘಟನೆಯೊಂದು ಉತ್ತರಪ್ರದೇಶದ ನೋಯ್ಡಾ(Noida)ದಲ್ಲಿ ನಡೆದಿದೆ. BMW ಕಾರಿನಲ್ಲಿ ದಂಪತಿ ಇದ್ದ ಇದ್ದ ಕಾರನ್ನು ಚೇಸ್‌ ಮಾಡಿದ್ದ ಪುಂಡರು ಅಡ್ಡಗಟ್ಟಿ ಪುಂಡಾಟ ಮೆರೆದಿದ್ದಾರೆ. ಘಟನೆ ಸಂಪೂರ್ಣ ದೃಶ್ಯ ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಮೇ 2ರಂದು ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral video) ಆಗುತ್ತಿದು, ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ:

ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರನ್ನು ಏವರ್‌ ಟೇಕ್‌ ಮಾಡಿದ BMW ಕಾರೊಂದು ಏಕಾಏಕಿ ಅಡ್ಡಗಟ್ಟಿತ್ತು. ಅದರಿಂದ ಕೆಲವು ಯುವಕರು ಕೆಳಗಿಳಿದು ಏಕಾಏಕಿ ಕಾರಿನತ್ತ ಬಾಟಲ್‌ಗಳನ್ನು ಎಸೆಯಲು ಶುರುಮಾಡಿದ್ದರು. ಇದರಿಂದ ಭೀತಿಗೊಂಡ ಸಂತ್ರಸ್ತ ಕುಟುಂಬ ಕಾರನ್ನು ಹಿಂದಕ್ಕೆ ತೆಗೆದುಕೊಂಡು ಟರ್ನ್‌ ಮಾಡಿ ವೇಗವಾಗಿ ಕಾರು ಚಲಾಯಿಸಿ ಪಾರಾಗಿದ್ದಾರೆ. ಈ ದೃಶ್ಯ ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೊಲೀಸರು ಹೇಳೋದೇನು?

ಪೊಲೀಸರ ಮಾಹಿತಿ ಪ್ರಕಾರ ಈ ಘಟನೆ IFSವಿಲ್ಲಾದ ಎದುರು ಇರುವ ನಾಲೆಡ್ಜ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ ಸಮೀಪ ನಡೆದಿದೆ. ತನ್ನ ಕುಟುಂಬದೊಂದಿಗೆ ಮಹಿಳೆ ಚಲಾಯಿಸುತ್ತಿದ್ದ ಕಾರನ್ನು ಚೇಸ್‌ ಮಾಡಿಕೊಂಡು ಬಂದಿದ್ದ ಕಿಡಿಗೇಡಿಗಳು ಏಕಾಏಕಿ ಕಾರನ್ನು ಅಡ್ಡಗಟ್ಟಿ ಬಿಯರ್‌ ಬಾಟಲಿಗಳಿಂದ ದಾಳಿ ನಡೆಸಿದ್ದರು. ಸಂತ್ರಸ್ತರು ಈ ಘಟನೆ ಬಗ್ಗೆ ಕೇಸ್‌ ದಾಖಲಿಸಲು ನಿರಾಕರಿಸಿದ್ದು, ವೈರಲ್‌ ಆಗಿರುವ ವಿಡಿಯೋದ ಆರೋದ ಆಧಾರದಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್‌ ಆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಹೆಚ್ಚುವರಿ ಡೆಪ್ಯೂಟಿ ಪೊಲೀಸ್‌ ಕಮಿಷನರ್‌ ಅಶೋಕ್‌ ಕುಮಾರ್‌ ಶರ್ಮಾ ಹೇಳಿದ್ದಾರೆ.

ತಿಂಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇಂತಹದ್ದೇ ಒಂದು ಪ್ರಕರಣ ದಾಖಲಾಗಿತ್ತು. ಸರ್ಜಾಪುರ ರಸ್ತೆಯಲ್ಲಿ ಮಾರ್ಚ್‌ 29ರ ರಾತ್ರಿ 10:40ರ ಸುಮಾರಿಗೆ ಕಾರಿನಲ್ಲಿ ‌ಪ್ರಯಾಣಿಸುತ್ತಿದ್ದ ದಂಪತಿಗಳನ್ನು ಅಡ್ಡಗಟ್ಟಿ ಬೈಕ್ ಸವಾರನೊಬ್ಬ ಕಿರಿಕ್ ಮಾಡಿದ್ದ. ಓವರ್‌ಟೇಕ್ (overtake) ಮಾಡುವ ವಿಚಾರಕ್ಕೆ ಗಲಾಟೆಯಾಗಿ ಕಿರಿಕ್ ಮಾಡಿದ್ದಾನೆ ಎನ್ನಲಾಗಿದೆ. ಓವರ್‌ಟೇಕ್‌ ವಿಚಾರದಲ್ಲಿ ತಗಾದೆ ಸೃಷ್ಟಿಯಾಗಿದ್ದು, ಯುವಕ ಕಾರಿನ ಹಿಂಬದಿಯಿಂದ ಸುಮಾರು 2 ಕಿಲೋಮೀಟರ್‌ನಷ್ಟು ಅಟ್ಟಿಸಿಕೊಂಡು ಬಂದಿದ್ದಾನೆ. ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದಾಗ ಅದಕ್ಕೆ ಅಡ್ಡ ಬಂದು ನಿಲ್ಲಿಸಿ ಧಮಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕಾರಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದು, ಮಹಿಳೆ ಭಯದಿಂದ ಚೀರಿಕೊಂಡಿದ್ದಾರೆ. ನಂತರ ದಂಪತಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ದಂಪತಿ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದರು.

ಇದನ್ನೂ ಓದಿ:Lok Sabha Election 2024: ಮೂರನೇ ಹಂತದ ಮತದಾನ ಆರಂಭ; ಇಂದು ವೋಟು ಮಾಡಲಿದ್ದಾರೆ ಮೋದಿ, ಅಮಿತ್‌ ಶಾ

ಅದಕ್ಕೂ ಮುನ್ನ ರಾತ್ರಿ ಸಮಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಯುವತಿಯರನ್ನು ಬೈಕ್‌ನಲ್ಲಿ ಚೇಸ್‌ ಮಾಡಿಕೊಂಡು ಬಂದು ಪುಂಡರು ಕಿರುಕುಳ ನೀಡಿದ್ದರು. ದಾರಿಯುದ್ದಕ್ಕೂ ಚೇಸ್ ಮಾಡಿದ್ದಲ್ಲದೇ ಬೈಕ್‌ ಮೂಲಕ ಕಾರನ್ನು ಸುತ್ತುವರಿದು ಟಾರ್ಚರ್ ನೀಡಿದ್ದರು. ಕಿಡಿಗೇಡಿಗಳು ಮಡಿವಾಳ, ಸೆಂಟ್ ಜಾನ್ಸ್ ಅಲ್ಲಿಂದ ಕೋರಮಂಗಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದರಿಂದ ಆತಂಕಗೊಂಡ ಮಹಿಳೆಯರು ಸಹಾಯಕ್ಕಾಗಿ ಕೂಡಲೇ 112ಗೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್‌ ಆದ ಪೊಲೀಸರು ಯುವತಿಯರು ಇದ್ದ ಜಾಗಕ್ಕೆ ಬಂದಿದ್ದಾರೆ. ಪೊಲೀಸರನ್ನು ಕಂಡೊಡನೆ ಪುಂಡರು ಎಸ್ಕೇಪ್ ಆಗಿದ್ದರು.

Continue Reading

ದೇಶ

ತಮ್ಮ ಬಗ್ಗೆ ಟ್ರೋಲ್‌ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?

ಯಾವಾಗ ಮಮತಾ ಬ್ಯಾನರ್ಜಿ ಅವರ ಟ್ರೋಲ್‌ ವಿಡಿಯೊ ಅಪ್‌ಲೋಡ್‌ ಮಾಡಿದ ಇಬ್ಬರಿಗೆ ನೋಟಿಸ್‌ ನೀಡಲಾಯಿತೋ, ಆಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಯಿತು. ನಾನು ಕೂಡ ಈ ವಿಡಿಯೊ ಅಪ್‌ಲೋಡ್‌ ಮಾಡಿದ್ದೇನೆ, ನನ್ನ ವಿಳಾಸ ಇದು, ನನಗೂ ನೋಟಿಸ್‌ ಕಳುಹಿಸಿ ಎಂದು ಬಿಜೆಪಿ ನಾಯಕರು ಸೇರಿ ಹಲವರು ಮಮತಾ ಬ್ಯಾನರ್ಜಿ ಅವರ ಟ್ರೋಲ್‌ ವಿಡಿಯೊವನ್ನು ಹಂಚಿಕೊಂಡರು. ಇದೇ ವೇಳೆ ಮೋದಿ ಅವರು ತಮ್ಮ ಬಗ್ಗೆ ಮಾಡಲಾದ ಟ್ರೋಲ್‌ ವಿಡಿಯೊವನ್ನು ಇಷ್ಟಪಟ್ಟಿದ್ದಾರೆ.

VISTARANEWS.COM


on

PM Narendra Modi
Koo

ನವದೆಹಲಿ: ಸೋಷಿಯಲ್‌ ಮೀಡಿಯಾ ಜಮಾನದಲ್ಲಿ ಗಣ್ಯರ ಕುರಿತು ಟ್ರೋಲ್‌ (Troll) ಮಾಡುವುದು, ಮೀಮ್‌ಗಳ (Meme) ಮೂಲಕ ಅವರ ಕಾಲೆಳೆಯುವುದು ಸಾಮಾನ್ಯ. ವಿಡಿಯೊ ಅಥವಾ ರೀಲ್ಸ್‌ ನೋಡಿ, ನಕ್ಕು, ಮುಂದೆ ಹೋಗುವಂತಹ ಟ್ರೋಲ್‌ಗಳು ವೈರಲ್‌ (Viral Video) ಆಗುತ್ತವೆ. ಆದರೆ, ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಮೂಲಕ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಟ್ರೋಲ್‌ ಮಾಡಿದ್ದಕ್ಕೆ ಇಬ್ಬರು ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಪಶ್ಚಿಮ ಬಂಗಾಳ ಪೊಲೀಸರು ನೋಟಿಸ್‌ ನೀಡಿದ್ದಾರೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ತಮ್ಮ ಬಗ್ಗೆ ಮಾಡಿದ ಟ್ರೋಲ್‌ ವಿಡಿಯೊವನ್ನು ಮೆಚ್ಚಿಕೊಂಡಿದ್ದಾರೆ.

ಸಾವಿರಾರು ಜನರ ಮಧ್ಯೆ ವ್ಯಕ್ತಿಯೊಬ್ಬ ಅತ್ಯುತ್ಸಾಹದಿಂದ ಬಂದು ಡಾನ್ಸ್‌ ಮಾಡುತ್ತಾನೆ. ಆ ವ್ಯಕ್ತಿಯ ಬದಲಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಬಳಸಿ ಮೋದಿ ಅವರು ಡಾನ್ಸ್‌ ಮಾಡುವಂತೆ ಎಡಿಟ್‌ ಮಾಡಲಾಗಿದೆ. ಈ ಟ್ರೋಲ್‌ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ ವ್ಯಕ್ತಿಯೊಬ್ಬ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ. “ಸರ್ವಾಧಿಕಾರಿ ನರೇಂದ್ರ ಮೋದಿ ಅವರು ಈ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದಕ್ಕೆ ನನ್ನನ್ನು ಬಂಧಿಸಲಿಕ್ಕಿಲ್ಲ” ಎಂದು ಕ್ರಿಪ್ಟಿಕ್‌ ಆಗಿ ಪೋಸ್ಟ್‌ ಮಾಡಿದ್ದಾನೆ. ಆದರೆ, ಆ ವಿಡಿಯೊವನ್ನೇ ಶೇರ್‌ ಮಾಡಿದ ಮೋದಿ, ಅದನ್ನು ಮೆಚ್ಚಿಕೊಂಡಿದ್ದಾರೆ.

ಮೋದಿ ಪ್ರತಿಕ್ರಿಯಿಸಿದ್ದು ಹೀಗೆ…

“ನಿಮ್ಮಂತೆ, ನಾನು ಕೂಡ ನಾನೇ ನೃತ್ಯ ಮಾಡಿದಂತೆ ಬಿಂಬಿಸಿರುವ ವಿಡಿಯೊವನ್ನು ನೋಡಿ ಎಂಜಾಯ್‌ ಮಾಡಿದ್ದೇನೆ. ಇಂತಹ ಕ್ರಿಯೇಟಿವಿಯಿಂದ ಕೂಡಿರುವ ಟ್ರೋಲ್‌ಗಳು ಚುನಾವಣೆ ಕಣವನ್ನು ಮತ್ತಷ್ಟು ರಂಗೇರಿಸುವಂತೆ ಮಾಡಿವೆ” ಎಂದು ಹೇಳುವ ಮೂಲಕ ನರೇಂದ್ರ ಮೋದಿ ಅವರು ತಮ್ಮ ಬಗ್ಗೆ ಮಾಡಿದ ಟ್ರೋಲ್‌ಅನ್ನು ಕೂಡ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರ ಸಕಾರಾತ್ಮಕ ಮನೋಭಾವ, ಮೀಮರ್‌ಗಳನ್ನು ಕೂಡ ಹೊಗಳುವ ರೀತಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೋಲ್‌ ಸಹಿಸದ ದೀದಿ

ನರೇಂದ್ರ ಮೋದಿ ಅವರು ಡಾನ್ಸ್‌ ಮಾಡುವ ರೀತಿ ಬಿಂಬಿಸಿದ ರೀತಿಯೇ ಮಮತಾ ಬ್ಯಾನರ್ಜಿ ಅವರ ಟ್ರೋಲ್‌ ವಿಡಿಯೊವನ್ನು ಮೊದಲು ಹಂಚಿಕೊಳ್ಳಲಾಗಿತ್ತು. ತಮಾಷೆಗಾಗಿ ಮಾಡಿದ ವಿಡಿಯೊ ಕಂಡ ಪಶ್ಚಿಮ ಬಂಗಾಳ ಪೊಲೀಸರು, ಪೋಸ್ಟ್‌ ಮಾಡಿದ ಇಬ್ಬರಿಗೆ ಕಠಿಣ ಕ್ರಮದ ಎಚ್ಚರಿಕೆ ಜತೆಗೆ ನೋಟಿಸ್‌ ನೀಡಿದ್ದಾರೆ.

ಯಾವಾಗ ಟ್ರೋಲ್‌ ವಿಡಿಯೊ ಅಪ್‌ಲೋಡ್‌ ಮಾಡಿದ ಇಬ್ಬರಿಗೆ ನೋಟಿಸ್‌ ನೀಡಲಾಯಿತೋ, ಆಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಯಿತು. ನಾನು ಕೂಡ ಈ ವಿಡಿಯೊ ಅಪ್‌ಲೋಡ್‌ ಮಾಡಿದ್ದೇನೆ, ನನ್ನ ವಿಳಾಸ ಇದು, ನನಗೂ ನೋಟಿಸ್‌ ಕಳುಹಿಸಿ ಎಂದು ಬಿಜೆಪಿ ನಾಯಕರು ಸೇರಿ ಹಲವರು ಮಮತಾ ಬ್ಯಾನರ್ಜಿ ಅವರ ಟ್ರೋಲ್‌ ವಿಡಿಯೊವನ್ನು ಹಂಚಿಕೊಂಡರು. ಆ ಮೂಲಕ ಮಮತಾ ಬ್ಯಾನರ್ಜಿ ಅವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: Trinamool Congress: ಮಮತಾ ಬ್ಯಾನರ್ಜಿಯನ್ನು ಅರೆಸ್ಟ್‌ ಮಾಡಿ; ಟಿಎಂಸಿ ಉಗ್ರ ಸಂಘಟನೆ ಎಂದು ಘೋಷಿಸಿ-ಬಿಜೆಪಿ ಆಗ್ರಹ

Continue Reading

ಪ್ರಮುಖ ಸುದ್ದಿ

Anand Mahindra: ತಂದೆ ಸಾವಿನ ಬಳಿಕ ಕಷ್ಟದಲ್ಲಿದ್ದ ಬಾಲಕನ ಶಿಕ್ಷಣಕ್ಕೆ ಆನಂದ್‌ ಮಹೀಂದ್ರಾ ನೆರವು!

Anand Mahindra: ದೆಹಲಿಯಲ್ಲಿ ಜಸ್‌ಪ್ರೀತ್‌ ಎಂಬ ಬಾಲಕನು ತನ್ನ ತಂದೆ ತೀರಿಕೊಂಡ ಬಳಿಕ ಕುಟುಂಬಕ್ಕೆ ನೆರವಾಗಲಿ ಎಂದು ಶಾಲೆ ಬಿಟ್ಟು, ಬೀದಿ ಬದಿ ಊಟ, ತಿಂಡಿಯ ಅಂಗಡಿ ಇಟ್ಟುಕೊಂಡಿದ್ದ. ಈ ವಿಡಿಯೊ ವೈರಲ್‌ ಆಗುತ್ತಲೇ ಆತನ ನೆರವಿಗೆ ಧಾವಿಸುವ ಮೂಲಕ ಆನಂದ್‌ ಮಹೀಂದ್ರಾ ಮಾನವೀಯತೆ ಮೆರೆದಿದ್ದಾರೆ. ಬಾಲಕನ ಶಿಕ್ಷಣಕ್ಕೆ ನೆರವು ನೀಡಲಾಗುವುದು ಎಂದು ಆನಂದ್‌ ಮಹೀಂದ್ರಾ ಘೋಷಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Anand Mahindra
Koo

ನವದೆಹಲಿ: ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರಾ (Anand Mahindra) ಅವರು ಉದ್ಯಮಿಯಾಗಿ, ಸ್ಫೂರ್ತಿದಾಯಕ ಮಾತುಗಳಿಂದ ಜನರಿಗೆ ಪ್ರೇರೇಪಣೆ ನೀಡುವ ಜತೆಗೆ ಸಮಾಜಮುಖಿ ಕಾರ್ಯಗಳಿಂದಲೂ ಖ್ಯಾತಿ ಗಳಿಸಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸಿದವರು, ಕಷ್ಟದಲ್ಲಿರುವವರು ಸೇರಿ ಹಲವರಿಗೆ ಅವರು ಆಗಾಗ ಸಹಾಯ ಮಾಡುತ್ತಲೇ ಇರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ (Delhi) ತಂದೆ ತೀರಿಕೊಂಡ ಬಳಿಕ ಶಿಕ್ಷಣ ತೊರೆದು, ಬೀದಿ ಬದಿ ಗೂಡಂಗಡಿ ಇಟ್ಟಿದ್ದ ಬಾಲಕನಿಗೆ ಆನಂದ್‌ ಮಹೀಂದ್ರಾ ನೆರವಿನ ಹಸ್ತ ಚಾಚಿದ್ದಾರೆ.

ಹೌದು, ಜಸ್‌ಪ್ರೀತ್‌ ಎಂಬ ಬಾಲಕನು ತನ್ನ ತಂದೆ ತೀರಿಕೊಂಡ ಬಳಿಕ ಕುಟುಂಬಕ್ಕೆ ನೆರವಾಗಲಿ ಎಂದು ಶಾಲೆ ಬಿಟ್ಟು, ಬೀದಿ ಬದಿ ಊಟ, ತಿಂಡಿಯ ಅಂಗಡಿ ಇಟ್ಟುಕೊಂಡಿದ್ದ. ಈ ವಿಡಿಯೊ ವೈರಲ್‌ ಆಗುತ್ತಲೇ ಆತನ ನೆರವಿಗೆ ಧಾವಿಸುವ ಮೂಲಕ ಆನಂದ್‌ ಮಹೀಂದ್ರಾ ಮಾನವೀಯತೆ ಮೆರೆದಿದ್ದಾರೆ. “ಧೈರ್ಯಕ್ಕೆ ಇನ್ನೊಂದು ಹೆಸರೇ ಜಸ್‌ಪ್ರೀತ್.‌ ಆದರೆ, ಈತನ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು. ಈತ ದೆಹಲಿಯ ತಿಲಕ್‌ ನಗರದಲ್ಲಿ ಇದ್ದಾನೆ ಎಂದು ಅನಿಸುತ್ತಿದೆ. ಯಾರಿಗಾದರೂ ಈತನ ಕಾಂಟ್ಯಾಕ್ಟ್‌ ನಂಬರ್‌ ಸಿಕ್ಕರೆ ನನಗೆ ಕೊಡಿ. ಈತನ ಶಿಕ್ಷಣಕ್ಕೆ ಮಹೀಂದ್ರಾ ಫೌಂಡೇಷನ್‌ ಸಹಾಯ ಮಾಡಲಿದೆ” ಎಂದು ಬಾಲಕನ ವಿಡಿಯೊ ಸಮೇತ ಆನಂದ್‌ ಮಹೀಂದ್ರಾ ಅವರು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದಲ್ಲಿ ಕೆಲ ದಿನಗಳ ಹಿಂದಷ್ಟೇ ಅಮೆಜಾನ್‌ನ ಅಲೆಕ್ಸಾ (Alexa) ವಾಯ್ಸ್‌ ಅಸಿಸ್ಟಂಟ್‌ ಬಳಸಿ ಮಂಗಗಳ ದಾಳಿಯಿಂದ ತನ್ನನ್ನು ಹಾಗೂ ತನ್ನ ಅಕ್ಕನ ಮಗಳನ್ನು ರಕ್ಷಿಸಿದ 13 ವರ್ಷದ ಚಾಣಾಕ್ಷ ಬಾಲಕಿಗೆ ಈಗ ಆನಂದ್‌ ಮಹೀಂದ್ರಾ ಅವರು ಉದ್ಯೋಗ ನೀಡುವ ಆಫರ್‌ ಕೊಟ್ಟಿದ್ದರು. ತಂತ್ರಜ್ಞಾನವನ್ನು ಬಳಸಿ ಮಂಗಗಳಿಂದ ಬಚಾವಾದ 13 ವರ್ಷದ ಬಾಲಕಿ ನಿಕಿತಾಗೆ ಉದ್ಯೋಗ ಕೊಡುವ ಕುರಿತು ಆನಂದ್‌ ಮಹೀಂದ್ರಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. “ಆಧುನಿಕ ಕಾಲದಲ್ಲಿ ನಾವು ತಂತ್ರಜ್ಞಾನದ ಗುಲಾಮರಾಗುತ್ತೇವೋ ಎಂಬ ಆತಂಕ ಕಾಡುತ್ತಿದೆ. ಆದರೆ, ಈ ಬಾಲಕಿಯು ಜಗತ್ತಿನಲ್ಲಿ ಮನುಷ್ಯನ ದಕ್ಷತೆಯನ್ನು ತಂತ್ರಜ್ಞಾನವು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾಳೆ” ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

“ಬಾಲಕಿಯ ಕ್ಷಿಪ್ರ ಯೋಚನಾಶಕ್ತಿಯು ಅತ್ಯದ್ಭುತವಾಗಿದೆ. ಅನಿರೀಕ್ಷಿತ ಜಗತ್ತಿನಲ್ಲಿ ಹೇಗೆ ಯೋಚಿಸಬೇಕು, ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಈಕೆಯು ಸಾಬೀತುಪಡಿಸಿದ್ದಾಳೆ. ಈ ಬಾಲಕಿಯು ಶಿಕ್ಷಣ ಮುಗಿಸಿ, ಕಾರ್ಪೊರೇಟ್‌ ಜಗತ್ತಿಗೆ ಕಾಲಿಡಲು ತೀರ್ಮಾನಿಸಿದರೆ, ಮಹೀಂದ್ರಾ ಕಂಪನಿಯಲ್ಲಿ ಅವಳಿಗೊಂದು ಕುರ್ಚಿ ಕಾಯುತ್ತಿರುತ್ತದೆ” ಎಂಬುದಾಗಿ ಆನಂದ್‌ ಮಹೀಂದ್ರಾ ಅವರು ನಿಕಿತಾಗೆ ಉದ್ಯೋಗದ ಆಫರ್‌ ನೀಡಿದ್ದಾರೆ. ಆನಂದ್‌ ಮಹೀಂದ್ರಾ ಅವರ ಕುರಿತೂ ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಇದನ್ನೂ ಓದಿ: Anand Mahindra: ಸರ್ಫರಾಜ್ ಖಾನ್ ತಂದೆಗೆ ಥಾರ್ ಎಸ್‌ಯುವಿ ಗಿಫ್ಟ್​ ಕೊಟ್ಟ ಮಹೀಂದ್ರಾ

Continue Reading

ಪ್ರಮುಖ ಸುದ್ದಿ

ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

ಮೆಹರ್‌ ಜಹಾನ್‌ ಹಾಗೂ ಮನ್ನಾನ್‌ ಜೈದಿಯು 2023ರ ನವೆಂಬರ್‌ನಲ್ಲಿ ಮದುವೆಯಾಗಿದ್ದಾರೆ. ಮೆಹರ್‌ ಜಹಾನ್‌ಗೆ ಕುಡಿತದ ಚಟ ಇರುವ, ಆಗಾಗ ಸಿಗರೇಟು ಸೇದುವ ಚಟ ಇರುವುದು ಮನ್ನಾನ್‌ ಜೈದಿಗೆ ಗೊತ್ತಾಗಿದೆ. ಪತ್ನಿಯ ಚಟಗಳ ಕುರಿತು ಅರಿತುಕೊಂಡ ಮನ್ನಾನ್‌ ಜೈದಿಯು ನಾಲ್ಕು ಮಾತು ಬೈದಿದ್ದಾನೆ. ಇಷ್ಟಕ್ಕೇ ಆಕೆಯು, ಗಂಡನಿಗೆ ಇನ್ನಿಲ್ಲದ ಕಿರುಕುಳ ನೀಡಿ, ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.

VISTARANEWS.COM


on

Woman
Koo

ಲಖನೌ: ರಾತ್ರಿ ಗಂಡ ಕುಡಿದು ಮನೆಗೆ ಬಂದರೆ ಹೆಂಡತಿಗೆ ಕೋಪ ಬಂದೇ ಬರುತ್ತದೆ. ಆಗ ಅವರು ಬೈಯುತ್ತಾರೆ, ಊಟ ಕೊಡಲ್ಲ, ನಾನೇ ಸತ್ತುಹೋಗುತ್ತೇನೆ ಎಂದು ಹೆದರಿಸುತ್ತಾರೆ. ಆತನ ನಶೆ ಇಳಿದ ಮೇಲೆ ಸಂಬಂಧಿಕರನ್ನು ಕರೆಸಿ ಬುದ್ಧಿವಾದ ಹೇಳುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯೊಬ್ಬರು ತಾವೇ ಮದ್ಯಪಾನ ಮಾಡಿ, ಪತಿ ಗಂಡನ ಗುಪ್ತಾಂಗವನ್ನೇ ಸುಟ್ಟು, ಅದನ್ನು ಕತ್ತರಿಸಲು ಯತ್ನಿಸಿದ್ದಾರೆ. ಈ ಭೀಕರ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಹೌದು, ಅಮ್ರೋಹ ಜಿಲ್ಲೆಯ ಚಾಕ್‌ ಮೆಹೂದ್‌ ಗ್ರಾಮದಲ್ಲಿ ಮೆಹರ್‌ ಜಹಾನ್‌ ಎಂಬ 30 ವರ್ಷದ ಮಹಿಳೆಯು ಪತಿ ಮನ್ನಾನ್‌ ಜೈದಿಯ ಗುಪ್ತಾಂಗ ಸುಟ್ಟು, ಕತ್ತರಿಸಲು ಯತ್ನಿಸಿದ್ದಾರೆ. ದಿನವಿಡೀ ದುಡಿದು ಮನೆಗೆ ಬಂದ ಗಂಡನಿಗೆ ಮಹಿಳೆಯು ಹಾಲಿನಲ್ಲಿ ಮತ್ತು ಬರುವ ಅಂಶವನ್ನು ಸೇರಿಸಿ, ಆತ ನಶೆಗೆ ಜಾರುತ್ತಲೇ ಕೈ ಕಾಲು ಕಟ್ಟಿಹಾಕಿದ್ದಾರೆ. ಕೈ ಕಾಲು ಕಟ್ಟಿ, ಆತನ ಗುಪ್ತಾಂಗವನ್ನು ಸಿಗರೇಟಿನಿಂದ ಸುಟ್ಟ ಬಳಿಕವೇ ಮನ್ನಾನ್‌ ಜೈದಿಗೆ ಎಚ್ಚರವಾಗಿದೆ. ಇನ್ನೇನು ಗುಪ್ತಾಂಗ ಕತ್ತರಿಸಬೇಕು ಎನ್ನುವಷ್ಟರಲ್ಲೇ ಆತನು ಕೂಗಾಡಿದ್ದಾನೆ. ಬಳಿಕ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೆಹರ್‌ ಜಹಾನ್‌ನನ್ನು ಬಂಧಿಸಿದ್ದಾರೆ.

ಕುಡಿತದ ಚಟ ಇರುವ ಮೆಹರ್‌

ಮೂಲಗಳ ಪ್ರಕಾರ, ಮೆಹರ್‌ ಜಹಾನ್‌ ಹಾಗೂ ಮನ್ನಾನ್‌ ಜೈದಿಯು 2023ರ ನವೆಂಬರ್‌ನಲ್ಲಿ ಮದುವೆಯಾಗಿದ್ದಾರೆ. ಮೆಹರ್‌ ಜಹಾನ್‌ಗೆ ಕುಡಿತದ ಚಟ ಇರುವ, ಆಗಾಗ ಸಿಗರೇಟು ಸೇದುವ ಚಟ ಇರುವುದು ಮನ್ನಾನ್‌ ಜೈದಿಗೆ ಗೊತ್ತಾಗಿದೆ. ಪತ್ನಿಯ ಚಟಗಳ ಕುರಿತು ಅರಿತುಕೊಂಡ ಮನ್ನಾನ್‌ ಜೈದಿಯು ನಾಲ್ಕು ಮಾತು ಬೈದಿದ್ದಾನೆ. ನಿನ್ನ ತಂದೆ-ತಾಯಿಗೆ ಹೇಳುತ್ತೇನೆ ಎಂದಿದ್ದಾರೆ. ಇದರಿಂದಾಗಿ ಕುಪಿತಗೊಂಡ ಮೆಹರ್‌ ಜಹಾನ್‌, ಗಂಡನನ್ನು ಕಟ್ಟಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಕುಡಿದ ನಶೆಯಲ್ಲಿಯೇ ಮಹಿಳೆಯು ಗಂಡನಿಗೆ ಕಿರುಕುಳ ಕೊಟ್ಟಿದ್ದಾರೆ ಎನ್ನಲಾಗಿದೆ. ವೈರಲ್‌ ಆದ ವಿಡಿಯೊದ ಪ್ರಕಾರ, ಪತ್ನಿಯು ಸಿಗರೇಟಿನಿಂದ ಸುಡುತ್ತಲೇ ಸಹಾಯಕ್ಕಾಗಿ ಅಂಗಲಾಚಿದ ಧ್ವನಿಯು ಕೇಳಿಸಿದೆ. ನನ್ನ ಪಾಡಿಗೆ ನಾನು ಮದ್ಯಪಾನ ಮಾಡಿಕೊಂಡು, ಸಿಗರೇಟು ಸೇದಿಕೊಂಡು ಇರುತ್ತೇನೆ. ಇದರ ಕುರಿತು ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ ಎಂಬುದಾಗಿ ಮಹಿಳೆಯು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ, ಮನ್ನಾನ್‌ ಜೈದಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Police Officer: ಮರಳು ಮಾಫಿಯಾ ತಡೆಯಲು ಹೋದ ಎಎಸ್‌ಐ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ!

Continue Reading
Advertisement
Road rage
ಕ್ರೈಂ2 mins ago

Road rage: BMW ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಪುಂಡರ ಅಟ್ಟಹಾಸ, ಇಲ್ಲಿದೆ ವಿಡಿಯೋ

Lok Sabha Election 2024
Lok Sabha Election 202421 mins ago

Lok Sabha Election 2024: ಮೂರನೇ ಹಂತದ ಮತದಾನ ಆರಂಭ; ಇಂದು ವೋಟು ಮಾಡಲಿದ್ದಾರೆ ಮೋದಿ, ಅಮಿತ್‌ ಶಾ

rajamarga column voting 1
ಪ್ರಮುಖ ಸುದ್ದಿ34 mins ago

ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

Summer Food Tips
ಆಹಾರ/ಅಡುಗೆ1 hour ago

Summer Food Tips: ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಸರಳ ಆಹಾರಗಳಿವು!

lok sabha election 2025 voting
Lok Sabha Election 20241 hour ago

Lok Sabha Election 2024 Live news: ರಾಜ್ಯದಲ್ಲಿ ಎರಡನೇ ಹಂತದ ಮತದಾನ ಆರಂಭ

Lok Sabha Election
ಪ್ರಮುಖ ಸುದ್ದಿ2 hours ago

Lok Sabha Election : ಇಂದು 2ನೇ ಹಂತದ ವೋಟಿಂಗ್​; ನಿಮ್ಮ ‘ಮತ’ ಕಳವಾದರೆ ಹೀಗೆ ಮಾಡಿ..

karnataka weather Forecast
ಮಳೆ2 hours ago

karnataka Weather : ಇಂದು ಮಳೆಗೂ ಮುನ್ನವೇ ವೋಟ್‌ ಹಾಕಿಬಿಡಿ; ಸಂಜೆಗೆ ಭಾರಿ ವರ್ಷಧಾರೆ

Lok Sabha Election
ಪ್ರಮುಖ ಸುದ್ದಿ2 hours ago

Lok Sabha Election 2024: ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ; ಅದೃಷ್ಟ ಪರೀಕ್ಷೆಗಿಳಿದ 227 ಅಭ್ಯರ್ಥಿಗಳು

Lok Sabha Election-2024
ಕರ್ನಾಟಕ2 hours ago

ಇಂದು 2ನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

SSLC exam results to be announced soon
ಕರ್ನಾಟಕ2 hours ago

SSLC Exam Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೀಘ್ರ; ಇಲ್ಲಿದೆ ಮಹತ್ವದ ಮಾಹಿತಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ13 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ14 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ14 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌