Viral News : ಅಮ್ಮನಿಗೆ ಬುದ್ಧಿ ಕಲಿಸಲು ಊರಿಗೇ ಬೆಂಕಿ ಇಟ್ಟ ಮಗಳು! ಇದರ ಹಿಂದಿದೆ ಅಕ್ರಮ ಸಂಬಂಧದ ಕತೆ - Vistara News

ವೈರಲ್ ನ್ಯೂಸ್

Viral News : ಅಮ್ಮನಿಗೆ ಬುದ್ಧಿ ಕಲಿಸಲು ಊರಿಗೇ ಬೆಂಕಿ ಇಟ್ಟ ಮಗಳು! ಇದರ ಹಿಂದಿದೆ ಅಕ್ರಮ ಸಂಬಂಧದ ಕತೆ

ತಾಯಿಯ ಅಕ್ರಮ ಸಂಬಂಧವನ್ನು ತಪ್ಪಿಸಬೇಕು ಎಂದು ಮಗಳು ಊರಿಗೇ ಬೆಂಕಿ ಹಚ್ಚಿದ ವಿಚಿತ್ರ ಪ್ರಕರಣ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ನಡೆದಿದೆ. ಯುವತಿಯನ್ನು (Viral News) ಬಂಧಿಸಲಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುಪತಿ: ಮಕ್ಕಳು ತಪ್ಪು ಮಾಡದಂತೆ ತಂದೆ, ತಾಯಿ ಬುದ್ಧಿ ಹೇಳುವುದು ಸಾಮಾನ್ಯ. ಆದರೆ ತಂದೆ ತಾಯಿಯೇ ತಪ್ಪು ಮಾಡಿಬಿಟ್ಟರೆ ಮಕ್ಕಳು ಅಸಹಾಯಕರಾಗಿಬಿಡುತ್ತಾರೆ. ಅದೇ ರೀತಿಯಲ್ಲಿ ತಾಯಿಯ ತಪ್ಪನ್ನು ಹೇಗಾದರೂ ಸರಿ ಮಾಡಬೇಕು ಎಂದುಕೊಂಡಿದ್ದ ಮಗಳು ಊರಿಗೇ ಬೆಂಕಿ ಇಟ್ಟ ವಿಚಿತ್ರ ಘಟನೆ (Viral News) ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಚಂದ್ರಗಿರಿ ಮಂಡಲದ ಸನಂಬತ್ಲ ಹೆಸರಿನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಊರಿನಲ್ಲಿ ಕಳೆದ ಕೆಲವು ದಿನಗಳಲ್ಲಿ ಒಟ್ಟು 12 ಬೆಂಕಿ ಅವಘಡಗಳು ನಡೆದಿವೆ. ಅದರಲ್ಲಿ 19 ವರ್ಷದ ಕೀರ್ತಿ ಹೆಸರಿನ ಯುವತಿಯ ಮನೆಯಲ್ಲೇ ಒಟ್ಟು ಮೂರು ಘಟನೆಗಳು ವರದಿಯಾಗಿವೆ. ಈ ಘಟನೆಗಳಿಂದ ಊರಿನ ಜನರೆಲ್ಲ ಊರಿನಲ್ಲೇನೋ ಸಮಸ್ಯೆಯಿದೆ ಎಂದು ಭಯ ಬಿದ್ದಿದ್ದರು. ಈ ಬಗ್ಗೆ ಪೊಲೀಸರ ಮೊರೆ ಹೋಗಲಾಗಿತ್ತು. ಪೊಲೀಸರು ಊರಿನ ಕಾವಲಿಗೆ ನಿಂತಿದ್ದರು.

ಇದನ್ನೂ ಓದಿ: Ram Charan : ಹಾಲಿವುಡ್‌ ಎಂಟ್ರಿ ಬಗ್ಗೆ ನಟ ರಾಮ್‌ ಚರಣ್‌ ಹೇಳಿದ್ದೇನು? ವಿಡಿಯೊ ವೈರಲ್‌
ಊರಿನ ಕಾವಲಿಗೆ ನಿಂತ ಪೊಲೀಸರಿಗೆ ಮೊದಲಿಗೆ ಕೀರ್ತಿಯ ಕುಟುಂಬದ ಮೇಲೆ ಅನುಮಾನ ಬಂತು. ಆಗ ಮನೆಯ ಯಜಮಾನನನ್ನು ಕರೆಸಿ ವಿಚಾರಣೆ ನಡೆಸಿದರು. ಆದರೆ ವಿಚಾರಣೆ ನಡೆಯುವ ವೇಳೆಯಲ್ಲೇ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದರಿಂದ ಅನುಮಾನ ಬೇರೆ ಕಡೆ ತಿರುಗಿತು. ಕುಟುಂಬದ ಪ್ರತಿಯೊಬ್ಬರನ್ನೂ ಕರೆಸಿ ವಿಚಾರಣೆ ನಡೆಸಲಾಯಿತು. ಕೀರ್ತಿಯನ್ನು ವಿಚಾರಣೆ ನಡೆಸಿದಾಗ ಆಕೆ ತಾನೇ ಈ ಎಲ್ಲ ಕೆಲಸಗಳನ್ನು ಮಾಡಿದ್ದಾಗಿ ಕೊನೆಗೂ ತಪ್ಪೊಪ್ಪಿಕೊಂಡಿದ್ದಾಳೆ.

ಕೀರ್ತಿ ಪರೀಕ್ಷೆಯಲ್ಲಿ ಫೇಲ್‌ ಆದ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದಳು. ಈ ವೇಳೆ ಆಕೆಗೆ ತನ್ನ ತಾಯಿ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಗಮನಕ್ಕೆ ಬಂತು. ಈ ಊರನ್ನು ಬಿಟ್ಟು ಹೋದರೆ ತಾಯಿ ಈ ಸಂಬಂಧದಿಂದ ದೂರವಾಗುತ್ತಾಳೆ ಎಂದು ಆಕೆ ಲೆಕ್ಕಾಚಾರ ಹಾಕಿದಳು. ಹಾಗಾಗಿ ಹೇಗಾದರೂ ಮಾಡಿ ತನ್ನ ಕುಟುಂಬವನ್ನು ಬೇರೆ ಊರಿಗೆ ಕರೆದೊಯ್ಯಬೇಕು ಎನ್ನುವ ಕಾರಣದಿಂದ ಈಗಿರುವ ಊರಿನಲ್ಲಿ ಸಮಸ್ಯೆಯಿದೆ ಎಂದು ಬಿಂಬಿಸಲು ಈ ರೀತಿ ಬೆಂಕಿ ಹಚ್ಚಲಾರಂಭಿಸಿದ್ದಳು. ತಾಯಿ ಮಲಗಿರುವಾಗ ಆಕೆಯ ಸೀರೆಗೂ ಬೆಂಕಿ ಹಚ್ಚಿ ಹೆದರಿಸಿದ್ದಳು.

ಇದನ್ನೂ ಓದಿ: Viral Video : ಸ್ಟೈಲಿಷ್‌ ಆಗಿ ಬೈಕ್‌ ರೈಡ್‌ ಹೊರಟ ನಾಯಿ! ಈ ವಿಡಿಯೊಗೆ ಮರುಳಾಗದವರಿಲ್ಲ!
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

Bike Service : ಬೈಕ್‌ ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್‌ ಪ್ರೆಶರ್‌ ಪೈಪ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟ ಪರಿಣಾಮ ಯುವಕನೊಬ್ಬ (Bengaluru News) ಮೃತಪಟ್ಟಿದ್ದಾನೆ.

VISTARANEWS.COM


on

By

Bengaluru News air pressure pipe
ಮೃತ ಯೋಗೇಶ್‌ ಹಾಗೂ ಅರೆಸ್ಟ್‌ ಆದ ಮುರಳಿ
Koo

ಬೆಂಗಳೂರು: ಸ್ನೇಹಿತರ ಹುಚ್ಚಾಟಕ್ಕೆ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಏರ್‌ ಪ್ರೆಶರ್‌ ಪೈಪ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್‌ ಆಗಿ ಯುವಕ ಮೃತಪಟ್ಟಿದ್ದಾನೆ. ಸ್ನೇಹಿತರ ಹುಡುಗಾಟದಲ್ಲಿ ಘನಘೋರ ಘಟನೆ ಬೆಂಗಳೂರಲ್ಲಿ ನಡೆದಿದೆ.

ಯೋಗಿಶ್ (28) ಮೃತ ದುರ್ದೈವಿ. ಕಳೆದ ಮಾರ್ಚ್ 25ರಂದು ಬೈಕ್‌ ರಿಪೇರಿಗಾಗಿ ಸಂಪಿಗೆಹಳ್ಳಿಯ ಸಿಎನ್‌ಸಿ (CNS) ಬೈಕ್ ಸರ್ವೀಸ್ ಸೆಂಟರ್‌ಗೆ ಯೋಗಿಶ್‌ ತೆರಳಿದ್ದ. ಅದೇ ಸರ್ವೀಸ್‌ ಸೆಂಟರ್‌ನಲ್ಲಿ ಯೋಗಿಶ್‌ ಸ್ನೇಹಿತ ಮುರುಳಿ ಎಂಬಾತ ಕೆಲಸ ಮಾಡುತ್ತಿದ್ದ.

ಇವರಿಬ್ಬರು ಒಬ್ಬರಿಗೊಬ್ಬರು ತರ್ಲೆ, ತಂಟೆ ಮಾಡಿಕೊಂಡು ಆಟವಾಡುತ್ತಿದ್ದರು. ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್ ಪ್ಲೇಶರ್ ಪೈಪ್‌ನಿಂದ ಇಬ್ಬರು ಆಟ ಆಡಲು ಮುಂದಾಗಿದ್ದರು. ಮೊದಲಿಗೆ ಮುರುಳಿ, ಯೋಗೀಶ್‌ನ ಮುಖ ಹಾಗೂ ಹೊಟ್ಟೆಗೆ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಏರ್‌ ಪ್ಲೇಶರ್‌ನಿಂದ ಗಾಳಿ ಬಿಟ್ಟಿದ್ದಾನೆ.

ಇದನ್ನೂ ಓದಿ: Kalaburagi News : ರಾತ್ರಿ ಹೊತ್ತಲ್ಲಿ ಕಲಬುರಗಿ ಕೇಂದ್ರಿಯ ವಿವಿಯಲ್ಲಿ ಶಂಕಾಸ್ಪದ ಡ್ರೋನ್‌ ಹಾರಾಟ!

ಈ ವೇಳೆ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಯೋಗೇಶ್‌ ಹೊಟ್ಟೆ ಊದಿಕೊಂಡು ಕರುಳು ಬ್ಲಾಸ್ಟ್ ಆಗಿದೆ. ತಕ್ಷಣ ಯೋಗೀಶ್ ನರಳಾಟ ಕಂಡು ಮುರುಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್‌ ಮೃತಪಟ್ಟಿದ್ದಾನೆ.

ಸದ್ಯ ಮೃತ ಯೋಗೇಶ್‌ ಪೋಷಕರು ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುರಳಿಯನ್ನು ಬಂಧಿಸಿದ್ದಾರೆ.

ಘಟನೆ ಸಂಬಂಧ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ. ಮೃತ ಯೋಗೇಶ್ ಮೂಲತಃ ವಿಜಯಪುರದವನು. ಡೆಲವರಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡು ಥಣಿಸಂದ್ರದಲ್ಲಿ ವಾಸವಿದ್ದ. ಮೊನ್ನೆ ಸಂಜೆ ಬೈಕ್ ಸರ್ವೀಸ್ ಮಾಡಿಸಲು ಹೋಗಿದ್ದ. ಮುರುಳಿ ಕೂಡ ಅದೇ ಬೈಕ್‌ ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ.

ಇಬ್ಬರು ಸ್ನೇಹಿತರಾಗಿದ್ದ ಕಾರಣ ಆಟ ಆಡಲು ಹೋಗಿ ಘಟನೆ ಸಂಭವಿಸಿದೆ. ಮೊದಲಿಗೆ ಮುರುಳಿ ಮುಖ ಹಾಗೂ ಎದೆಗೆ ಗಾಳಿ ಬಿಟ್ಟಿದ್ದಾನೆ. ಬಳಿಕ ಹಿಂಬದಿಯಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಈ ವೇಳೆ ಹೊಟ್ಟೆ ಒಮ್ಮೆಲೆ ಊದಿಕೊಂಡು ಯೋಗೇಶ್‌ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವಿವರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

IPL 2024: ಇಲ್ಲಿ ಕೇವಲ 5 ರೂ.ಗೆ ಟಿಕೆಟ್​ ಪಡೆದು ಐಪಿಎಲ್​ ಪಂದ್ಯ ವೀಕ್ಷಿಸಬಹುದು

IPL 2024: ಪಂದ್ಯದ ಟಿಕೆಟ್​ ಬೆಲೆ 15 ಸಾವಿರ ಇದ್ದರೂ ಕೂಡ ಈ ಅಭಿಮಾನಿಗಳು 5 ರೂ. ನೀಡಿ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ.

VISTARANEWS.COM


on

Chepauk Railway Station
Koo

ಚೆನ್ನೈ: ಐಪಿಎಲ್(IPL 2024)​ ಪಂದ್ಯ ನೋಡಲು ಟಿಕೆಟ್​ಗಳಿಗಾಗಿ ಅಭಿಮಾನಿಗಳು ಹರ ಸಾಹಸ ಪಡುತ್ತಾರೆ. ಎಷ್ಟೇ ಲಕ್ಷ ಮೊತ್ತವನ್ನಾದರೂ ನೀಡಿ ಪಂದ್ಯವನ್ನು ನೋಡ ಬಯಸುತ್ತಾರೆ. ಆದರೆ, ಇಲ್ಲೊಂದು ಕಡೆ ಕೇವಲ 5 ರೂ. ನೀಡಿ ಯಾವುದೇ ಪಂದ್ಯವನ್ನು ಕೂಡ ವೀಕ್ಷಿಸಬಹುದು. ಅರೆ, ಇದು ಹೇಗೆ ಸಾಧ್ಯ ಎಂದುಕೊಂಡಿದ್ದೀರಾ ಈ ಇನ್ಟ್ರೆಸ್ಟಿಂಗ್ ಸೋರಿಯ ಮಾಹಿತಿ ಇಲ್ಲಿದೆ.

ಹೌದು, ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂ ಬಳಿ ರೈಲ್ವೇ ನಿಲ್ದಾಣವಿದೆ(Chepauk Railway Station ). ಈ ನಿಲ್ದಾಣದ ಕಿಟಕಿಯಿಂದ ಇಣುಕಿದರೆ ನೇರವಾಗಿ ಸ್ಟೇಡಿಯಂ ಕಾಣಿಸುತ್ತದೆ. ಹೀಗಾಗಿ ಪಂದ್ಯಗಳನ್ನು ಸುಲಭವಾಗಿ ವೀಕ್ಷಿಸಬಹುದಾಗಿ. ಇದಕ್ಕೆ ಸಾಕ್ಷಿ ಎಂಬಂತೆ ಮಾರ್ಚ್​ 22ರಂದು ನಡೆದ ಐಪಿಎಲ್​ನ ಉದ್ಘಾಟನ ಪಂದ್ಯವಾದ ಆರ್​ಸಿಬಿ(RCB vs CSK) ಮತ್ತು ಚೆನ್ನೈ ನಡುವಣ ಪಂದ್ಯವೇ ಸಾಕ್ಷಿ. ಚೆನ್ನೈ ಅಭಿಮಾನಿಗಳು ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ ಟಿಕೆಟ್ 5 ರೂ. ನೀಡಿ ಇಡೀ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ. ಪಂದ್ಯದ ಟಿಕೆಟ್​ ಬೆಲೆ 15 ಸಾವಿರ ಇದ್ದರೂ ಕೂಡ ಈ ಅಭಿಮಾನಿಗಳು 5 ರೂ. ನೀಡಿ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ಮತ್ತೊಂದು ಹೊಸ ಪ್ರಯೋಗ ನಡೆಸಲು ಮುಂದಾದ ಬಿಸಿಸಿಐ

ಗುಜರಾತ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ


ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ63 ರನ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಭರ್ಜರಿಯಾಗಿ ಬ್ಯಾಟ್ ಬೀಸಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಗುಜರಾತ್ ತಂಡ ತನ್ನೆಲ್ಲಾ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 143 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ಗುಜರಾತ್​ ತಂಡ ಹೆಚ್ಚು ದಿಟ್ಟತನ ತೋರಲಿಲ್ಲ. ಚೆನ್ನೈನ ಸಂಘಟಿತ ಬೌಲಿಂಗ್ ಸಾಮರ್ಥ್ಯಕ್ಕೆ ಬೆದರಿ ನಿಯಮಿತವಾಗಿ ವಿಕೆಟ್​ ಕಳೆದುಕೊಂಡಿತು. ವೃದ್ಧಿಮಾನ್ ಸಾಹ 21 ರನ್ ಬಾರಿಸಿದರೆ, ಶುಬ್ಮನ್​ ಗಿಲ್​ ಮತ್ತೊಮ್ಮೆ ವೈಫಲ್ ಎದುರಿಸಿ 8 ರನ್​ಗೆ ಔಟಾದರು. ಸಾಯಿ ಸುದರ್ಶನ್ 37 ರನ್ ಬಾರಿಸಿದರು. ವಿಜಯ ಶಂಕರ್ 12 ರನ್ ಬಾರಿಸಿ ಧೋನಿ ಹಿಡಿದ ಅದ್ಬುತ ಕ್ಯಾಚ್​ಗೆ ಬಲಿಯಾದರು.

ಚೆನ್ನೈ ಪರ ಎಡಗೈ ಬ್ಯಾಟರ್ ಶಿವಂ ದುಬೆ ಮತ್ತೊಮ್ಮೆ ಮಿಂಚಿದರು. ಚೆನ್ನೈ ಸ್ಟೇಡಿಯಮ್​ನ ಎಲ್ಲ ಕಡೆಗೆ ಬೌಂಡರಿ ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಗಮನ ಸೆಳದರು. ಅವರು ಔಟಾಗುವ ಮೊದಲು 23 ಎಸೆತಗಳಿಗೆ 51 ರನ್ ಬಾರಿಸಿದರು. ಅವರ ಅಬ್ಬರದಿಂದಾಗಿ ಚೆನ್ನೈ ಸ್ಕೋರ್ ಬೋರ್ಡ್​ ಬೆಳೆಯಿತು. ಇದು ಹಾಲಿ ಆವೃತ್ತಿಯ ದುಬೆ ಪಾಲಿನ ಸತತ ಎರಡು ಅರ್ಧ ಶತಕ. ಈ ಮೂಲಕ ಅವರು ಮುಂಬರುವ ಟಿ20 ವಿಶ್ವ ಕಪ್​​ ತಂಡದ ಬಾಗಿಲು ಬಡಿದರು. ಡ್ಯಾರಿಲ್ ಮಿಚೆಲ್​ 20 ಎಸೆತಕ್ಕೆ 24 ರನ್ ಬಾರಿಸಿದರೆ, ಯುವ ಬ್ಯಾಟರ್ ಸಮೀರ್ ರಿಜ್ವಿ 6 ಎಸೆತಕ್ಕೆ 14 ರನ್ ಬಾರಿಸಿ ಗಮನ ಸೆಳೆದರು.

Continue Reading

ಕರ್ನಾಟಕ

Ticket to lovebirds: ಸಾರಿಗೆ ಬಸ್ಸಲ್ಲಿ ಅಜ್ಜಿ-ಮೊಮ್ಮಗಳಿಗೆ ಉಚಿತ ಪ್ರಯಾಣ; 4 ಲವ್ ಬರ್ಡ್ಸ್‌ಗೆ 444 ರೂ. ಟಿಕೆಟ್!

Ticket to lovebirds: ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಅಜ್ಜಿ-ಮೊಮ್ಮಗಳಿಗೆ ಉಚಿತ ಟಿಕೆಟ್‌ ಸಿಕ್ಕಿದ್ದರೆ, ಅವರ ಜತೆಗಿದ್ದ 4 ಲವ್‌ ಬರ್ಡ್ಸ್‌ಗೆ ಬರೋಬ್ಬರಿ 444 ರೂ. ಟಿಕೆಟ್‌ ನೀಡಲಾಗಿದೆ.

VISTARANEWS.COM


on

ticket to Love birds
Koo

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಯಿಂದ (Shakti scheme) ಕೋಟ್ಯಂತರ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಯೋಜನೆ ಆರಂಭವಾದ ಮೇಲೆ ಸದ್ದಿಲ್ಲದೆ ಸಾರಿಗೆ ನಿಗಮಗಳು ಟಿಕೆಟ್‌ ದರ ಏರಿಕೆ ಮಾಡುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈ ನಡುವೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದ ಅಜ್ಜಿ-ಮೊಮ್ಮಗಳಿಗೆ ಉಚಿತ ಟಿಕೆಟ್‌ ಸಿಕ್ಕಿದ್ದರೆ, ಅವರ ಜತೆಗಿದ್ದ 4 ಲವ್‌ ಬರ್ಡ್ಸ್‌ಗೆ ಬರೋಬ್ಬರಿ 444 ರೂ. ಟಿಕೆಟ್‌ (Ticket to lovebirds) ನೀಡಿರುವುದು ಕಂಡುಬಂದಿದೆ.

ಪಂಜರದಲ್ಲಿ ನಾಲ್ಕು ಲವ್ ಬರ್ಡ್‌ಗಳನ್ನು ತೆಗೆದುಕೊಂಡು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದ ಅಜ್ಜಿ-ಮೊಮ್ಮಗಳು, ಆಧಾರ್‌ ಕಾರ್ಡ್‌ ತೋರಿಸಿದ್ದರಿಂದ ಅವರಿಗೆ ಕಂಡಕ್ಟರ್‌ ಉಚಿತ ಪ್ರಯಾಣದ ಟಿಕೆಟ್‌ ನೀಡಿದ್ದಾರೆ. ಆದರೆ, 4 ಪುಟ್ಟ ಹಕ್ಕಿಗಳಿಗೆ 444 ರೂಪಾಯಿ ಟಿಕೆಟ್ ನೀಡಲಾಗಿದೆ. ಹಕ್ಕಿಗಳನ್ನು ಮಕ್ಕಳೆಂದು ಪರಿಗಣಿಸಿ ಪ್ರತಿ ಹಕ್ಕಿಗೆ 111 ರೂ.ಗಳಂತೆ ಒಟ್ಟು 444 ರೂ. ಮೌಲ್ಯದ ಟಿಕೆಟ್‌ ಕೊಡಲಾಗಿದೆ. ಸದ್ಯ ಈ ಟಿಕೆಟ್‌ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ | Holi 2024 : ಹೋಳಿ ಸಂಭ್ರಮದ ವೇಳೆ ಚಲಿಸುವ ಸ್ಕೂಟರ್​ನಲ್ಲಿ ಹೆಣ್ಣು ಮಕ್ಕಳ ಪೋಲಿಯಾಟ; ಇಲ್ಲಿದೆ ವಿಡಿಯೊ

Arun Yogiraj: ಇನ್ನೊಂದು ʼಬಾಲಕ ರಾಮʼ ಮೂರ್ತಿಯೊಂದಿಗೆ ಕಾಣಿಸಿಕೊಂಡ ಶಿಲ್ಪಿ ಅರುಣ್‌ ಯೋಗಿರಾಜ್‌, ಏನಿದರ ವಿಶೇಷ?

balak ram ayodhya arun yogiraj

ಬೆಂಗಳೂರು: ಅಯೋಧ್ಯೆ ರಾಮಮಂದಿರಕ್ಕಾಗಿ (Ayodhya Ram Mandir) ರಾಮಲಲ್ಲಾ (Ram Lalla) ವಿಗ್ರಹವನ್ನು ರಚಿಸಿದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ʼಬಾಲಕ ರಾಮʼ ದೇವರ (Balak ram) ಚಿಕಣಿ ರೂಪವನ್ನು ಕೂಡ ರಚಿಸಿದ್ದಾರೆ. ಈ ವಿಷಯವನ್ನು ಅವರು ಎಕ್ಸ್‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೈಸೂರು ಮೂಲದ ಕಲಾವಿದ ಅರುಣ್‌ ಯೋಗಿರಾಜ್‌ (Arun Yogiraj) ತಾವು ಅಯೋಧ್ಯೆಯಲ್ಲಿ ಬಿಡುವಿನ ವೇಳೆಯಲ್ಲಿ ʻಚಿಕ್ಕ ರಾಮಲಲ್ಲಾ ಮೂರ್ತಿ’ಯನ್ನು ಕೆತ್ತಿರುವುದಾಗಿ ಹಂಚಿಕೊಂಡಿದ್ದಾರೆ. “ರಾಮ ಲಲ್ಲಾನ ಮುಖ್ಯ ಮೂರ್ತಿಯನ್ನು ಆಯ್ಕೆ ಮಾಡಿದ ನಂತರ ನಾನು ಅಯೋಧ್ಯೆಯಲ್ಲಿ ನನ್ನ ಬಿಡುವಿನ ವೇಳೆಯಲ್ಲಿ ಮತ್ತೊಂದು ಸಣ್ಣ ರಾಮ್ ಲಲ್ಲಾ ಮೂರ್ತಿಯನ್ನು ಕಲ್ಲಿನಲ್ಲಿ ಕೆತ್ತಿದ್ದೇನೆ” ಎಂದು ಯೋಗಿರಾಜ್ ಎಕ್ಸ್‌ನಲ್ಲಿ ಪ್ರಕಟಿಸಿದ್ದು, ಕೈಯಲ್ಲಿ ಅವರು ಈ ವಿಗ್ರಹವನ್ನು ಹಿಡಿದಿರುವ ಪೋಸ್ಟ್‌ ವೈರಲ್ ಆಗಿದೆ.

ಈ ಸಣ್ಣ ವಿಗ್ರಹವು ಮೂಲ ವಿಗ್ರಹದ ಕಪ್ಪು ಕಲ್ಲಿಗಿಂತ ಭಿನ್ನವಾದ, ತುಸು ಬಿಳುಪಾದ ಕಲ್ಲಿನಲ್ಲಿ ಕೆತ್ತಲ್ಪಟ್ಟಿದೆ. ಆದರೆ ʼಬಾಲಕ ರಾಮ’ನ ಶಿಲ್ಪದ ಪಡಿಯಚ್ಚಿನಂತಿದೆ. ಮೂಲ ಮೂರ್ತಿಯ ಎಲ್ಲ ಲಕ್ಷಣಗಳು ಇದರಲ್ಲೂ ಇವೆ. ಆದರೆ ಇದನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳಬಹುದು.

ಕಳೆದ ತಿಂಗಳು ಅಯೋಧ್ಯೆಯ ದೇವಾಲಯದ ಗರ್ಭಗುಡಿಯೊಳಗೆ ಎಂಟು ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ಇರಿಸಲಾಗಿರುವ ಬಾಲಕ ರಾಮ ವಿಗ್ರಹದ ಕಣ್ಣುಗಳನ್ನು ಕೆತ್ತಲು ಬಳಸಿದ ವಿಶೇಷ ಉಪಕರಣಗಳ ಚಿತ್ರವನ್ನು ಅರುಣ್‌ ಯೋಗಿರಾಜ್‌ ಹಂಚಿಕೊಂಡಿದ್ದರು. “ನಾನು ಅಯೋಧ್ಯೆಯ ರಾಮ ಲಲ್ಲಾನ ದಿವ್ಯ ಕಣ್ಣುಗಳನ್ನು (ನೇತ್ರೋನ್ಮೀಲನ) ಕೆತ್ತಿದ ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆ” ಎಂದು ಅವುಗಳ ಚಿತ್ರವನ್ನು ಹಂಚಿಕೊಳ್ಳುವಾಗ ಯೋಗಿರಾಜ್ ಬರೆದಿದ್ದರು,

ಅರುಣ್‌ ಯೋಗಿರಾಜ್ ಮೈಸೂರಿನವರು ಹಾಗೂ ತಮ್ಮ ಕುಟುಂಬದಲ್ಲಿ ಐದನೇ ತಲೆಮಾರಿನ ಶಿಲ್ಪಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದು, ಖಾಸಗಿ ಕಂಪನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಆರು ತಿಂಗಳ ಕಾಲ ಕೆಲಸ ಮಾಡಿ ಬಳಿಕ ಶಿಲ್ಪರಚನೆಗೆ ಮರಳಿದ್ದರು.

ಯೋಗಿರಾಜ್ ಅವರು ಈ ಹಿಂದೆ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾಗಿರುವ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ವಿಗ್ರಹ, ದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾದ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೆತ್ತಿದ್ದರು. ಮೈಸೂರು ಜಿಲ್ಲೆಯ ಚುಂಚನಕಟ್ಟೆಯಲ್ಲಿ 21 ಅಡಿ ಎತ್ತರದ ಹನುಮಾನ್ ಪ್ರತಿಮೆ, 15 ಅಡಿ ಎತ್ತರದ ಡಾ.ಬಿ. ಆರ್ ಅಂಬೇಡ್ಕರ್ ಪ್ರತಿಮೆ, ಮೈಸೂರಿನಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲಾ ಪ್ರತಿಮೆ, ಆರು ಅಡಿ ಎತ್ತರದ ಏಕಶಿಲಾ ನಂದಿ, ಆರು ಅಡಿ ಎತ್ತರದ ಬನಶಂಕರಿ ದೇವಿ ಹಾಗೂ ಮೈಸೂರು ರಾಜ ಜಯಚಾಮರಾಜೇಂದ್ರ ಒಡೆಯರ್ ಅವರ 4.5 ಅಡಿ ಎತ್ತರದ ಬಿಳಿ ಅಮೃತ ಶಿಲಾ ಪ್ರತಿಮೆ ಅವರು ಕೆತ್ತಿದ ವಿಗ್ರಹಗಳಲ್ಲಿ ಕೆಲವು.

ಇದನ್ನೂ ಓದಿ: Arun Yogiraj : ರಾಮ್‌ ಲಲ್ಲಾನ ಎಂದೂ ನೋಡದ ಚಿತ್ರ ತೋರಿಸಿದ ಶಿಲ್ಪಿ ಅರುಣ್‌ ಯೋಗಿರಾಜ್‌; ಎಷ್ಟು ಮುದ್ದಾಗಿದೆ ನೋಡಿ…

ಮೈಸೂರು ವಿಶ್ವವಿದ್ಯಾನಿಲಯದ ಭೂ ವಿಜ್ಞಾನ ವಿಭಾಗದ ಯುಜಿಸಿ- ಎಮೆರಿಟಸ್ ಪ್ರಾಧ್ಯಾಪಕರ ಪ್ರಕಾರ, ಈಗ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯನ್ನು ಅಲಂಕರಿಸಿರುವ, ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹದ ಮೂಲ ಶಿಲೆ ಮುನ್ನೂರು ಕೋಟಿ ವರ್ಷಗಳ ಹಿಂದಿನದಾಗಿದೆ.

Continue Reading

ಕರ್ನಾಟಕ

ವಿಜಯೇಂದ್ರ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ; 5-6 ನಾಯಕರ ಜೇಬಿಂದ ಲಕ್ಷಾಂತರ ರೂ. ಕಳವು!

ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆದಿದ್ದು, ನೂರಾರು ಕಾರ್ಯಕರ್ತರು ಸೇರಿದ್ದರು. ಕಾರ್ಯಕ್ರಮದ ವೇಳೆಯೇ ಕಳ್ಳರು ಬಿಜೆಪಿ ನಾಯಕರ ಜೇಬಿನಿಂದ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದಾರೆ.

VISTARANEWS.COM


on

BJP Leader
Koo

ಮಡಿಕೇರಿ: ಯಾವುದೇ ಪಕ್ಷಗಳ ಸಮಾವೇಶ, ರ‍್ಯಾಲಿಗಳು ಎಂದರೆ ಸಾವಿರಾರು ಜನ ಸೇರುತ್ತಾರೆ. ಕಾರ್ಯಕರ್ತರು, ನಾಯಕರ ಅಭಿಮಾನಿಗಳು ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸುತ್ತಾರೆ. ಆದರೆ, ಇಂತಹ ಕಾರ್ಯಕ್ರಮಗಳಲ್ಲೂ ಜೇಬುಗಳ್ಳತನ ನಡೆಯುತ್ತವೆ, ಮಾಜಿ ಶಾಸಕರ ಜೇಬಿನಿಂದಲೇ ಲಕ್ಷಾಂತರ ರೂಪಾಯಿ ಎಗರಿಸುತ್ತಾರೆ ಎಂಬುದು ಈಗ ಸಾಬೀತಾಗಿದೆ. ಹೌದು, ಮಡಿಕೇರಿಯಲ್ಲಿ (Madikeri) ನಡೆದ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಭಾಗವಹಿಸಿದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಸೇರಿ ಹಲವು ನಾಯಕರ ಜೇಬುಗಳಿಗೆ ಖದೀಮರು ಕತ್ತರಿ ಹಾಕಿದ ಘಟನೆ ನಡೆದಿದೆ.

ಮಡಿಕೇರಿಯ ಕ್ರಿಸ್ಟಲ್‌ ಕೋರ್ಟ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆದಿದೆ. ನೂರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬಿ.ವೈ.ವಿಜಯೇಂದ್ರ ಅವರೂ ಪಾಲ್ಗೊಂಡು, ಲೋಕಸಭೆ ಚುನಾವಣೆ ಸಿದ್ಧತೆ, ಪಕ್ಷದ ಕಾರ್ಯಕರ್ತರ ಪರಿಶ್ರಮ, ಚುನಾವಣಾ ಪ್ರಚಾರ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು. ಇದೇ ವೇಳೆ, ಖದೀಮರು ಮಾಜಿ ಶಾಸಕ ಅಪ್ಪಚ್ಚು ರಂಜನ್‌ ಸೇರಿ ಹಲವು ನಾಯಕರ ಜೇಬಿನಿಂದ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದಾರೆ.

ಯಾರ ಜೇಬಿಂದ ಎಷ್ಟು ಕಳ್ಳತನ?

ಮಾಜಿ ಶಾಸಕ ಅಪ್ಪಚ್ಚು ರಂಜನ್‌ ಅವರ ಜೇಬಿನಲ್ಲಿದ್ದ ಪರ್ಸ್‌ ಎಗರಿಸಿದ್ದು, ಅದರಲ್ಲಿ 20 ಸಾವಿರ ರೂ. ಇತ್ತು ಎಂಬುದಾಗಿ ಅವರೇ ಹೇಳಿದ್ದಾರೆ. ಇನ್ನು ಮಾಜಿ ಸ್ಪೀಕರ್‌ ಕೆ.ಜಿ. ಬೋಪಯ್ಯ ಅವರ ಜೇಬಿನಿಂದ 13 ಸಾವಿರ ರೂ., ಗುತ್ತಿಗೆದಾರರೊಬ್ಬರ ಜೇಬಿನಿಂದ 50 ಸಾವಿರ ರೂ. ಹಾಗೂ ಬಿಜೆಪಿ ಮುಖಂಡರೊಬ್ಬರ ಜೇಬಿನಿಂದ 25 ಸಾವಿರ ರೂ. ಎಗರಿಸಲಾಗಿದೆ. ಕಾರ್ಯಕ್ರಮದಲ್ಲಿ ನೂರಾರು ಜನ ಪಾಲ್ಗೊಂಡ ಕಾರಣ ನಾಯಕರು ಗಡಿಬಿಡಿಯಲ್ಲಿದ್ದರು. ಅವರು ಬಿಡುವಿಲ್ಲದ ಕೆಲಸದಲ್ಲೂ ತೊಡಗಿದ್ದರು. ಇದೇ ಸಂದರ್ಭವನ್ನು ನೋಡಿಕೊಂಡ ಕಳ್ಳರು ಕೈಚಳಕ ತೋರಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಯದುವೀರ್‌ ವಿರುದ್ಧ ಒಂದೇ ಒಂದು ಟೀಕೆ ಮಾಡದ ಸಿದ್ದರಾಮಯ್ಯ; ಏಕಿಷ್ಟು ಸಾಫ್ಟ್‌ ಕಾರ್ನರ್?

ಕಳ್ಳತನದ ಕುರಿತು ಮಾತನಾಡಿದ ಮಾಜಿ ಶಾಸಕ ಅಪ್ಪಚ್ಚು ರಂಜನ್‌, “ಕಾರ್ಯಕ್ರಮದಲ್ಲಿ ನನ್ನ ಜೇಬಿನಿಂದ ಪರ್ಸ್‌ ಕಳ್ಳತನ ಮಾಡಲಾಗಿದೆ. ಅದರಲ್ಲಿ ಸುಮಾರು 20 ಸಾವಿರ ರೂ. ಇತ್ತು. ಹಣ ಹೋದರೆ ಹೋಗಲಿ, ಕಾರ್ಡ್‌, ದಾಖಲೆಗಳು ಸಿಕ್ಕರೆ ಸಾಕು” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇನ್ನು, ಈ ಕುರಿತು ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಹಿರಿಯ ನಾಯಕ ಎಸ್‌.ಜಿ.ಮೇದಪ್ಪ ಅವರ ಪರ್ಸ್‌ ಕೂಡ ಕಳ್ಳತನ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Side Effects Of Pillow
ಆರೋಗ್ಯ6 mins ago

Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

Naveen Polishetty
ಸಿನಿಮಾ10 mins ago

Naveen Polishetty: ಅಮೆರಿಕದಲ್ಲಿ ಬೈಕ್‌ ಅಪಘಾತ; ಅನುಷ್ಕಾ ಶೆಟ್ಟಿ ಜತೆ ತೆರೆ ಹಂಚಿಕೊಂಡಿದ್ದ ನಟನಿಗೆ ಗಾಯ

Hardik Pandya
ಕ್ರೀಡೆ26 mins ago

Hardik Pandya : ಹೈದರಾಬಾದ್​ನಲ್ಲೂ ಪಾಂಡ್ಯಗೆ ಕಾಟ ಕೊಟ್ಟ ಕ್ರಿಕೆಟ್​ ಪ್ರೇಕ್ಷಕರು

money guide
ಮನಿ-ಗೈಡ್36 mins ago

Money Guide: ಗಮನಿಸಿ; ಏ. 1ರಿಂದ ಬದಲಾಗುತ್ತವೆ ಈ ಎಲ್ಲ ಹಣಕಾಸು ನಿಯಮಗಳು

IPL 2024-CSKRCB
ಕ್ರೀಡೆ48 mins ago

IPL 2024 : ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ- ಆರ್​ಸಿಬಿ ಮ್ಯಾಚ್​!

Prithviraj Sukumaran
ಸಿನಿಮಾ59 mins ago

Prithviraj Sukumaran: ಪೃಥ್ವಿರಾಜ್ ಸುಕುಮಾರನ್‌ ಅಭಿನಯದ ‘ಆಡುಜೀವಿತಂ’ ಚಿತ್ರಕ್ಕೆ ಪ್ರೇಕ್ಷಕರು ಫಿದಾ!

Lok Sabha Election 2024 DK Shivakumar Suresh assetsworth Rs 598 crore and 259.19 crore Increase in 5 years
Lok Sabha Election 20241 hour ago

Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

Summer Fashion
ಫ್ಯಾಷನ್1 hour ago

Summer Fashion: ಸಮ್ಮರ್‌ ಸೀಸನ್‌ನಲ್ಲಿ ಸಿಂಪಲ್‌ ಸ್ಲಿವ್‌ಲೆಸ್‌ ಗೌನ್‌ಗಳ ಹಂಗಾಮ!

job alert
ಉದ್ಯೋಗ1 hour ago

Job Alert: ಗುಡ್‌ನ್ಯೂಸ್‌; 93 ಬ್ಯಾಂಕ್‌ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

Aditi Rao Hydari engaged to Siddharth
ಟಾಲಿವುಡ್1 hour ago

Aditi Rao Hydari: ಎಂಗೇಜ್‌ ಆಗಿರುವ ಫೋಟೊ ಶೇರ್‌ ಮಾಡಿದ ಅದಿತಿ ರಾವ್ ಹೈದರಿ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20244 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20246 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ13 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌