Viral Video: ರೈಲ್ವೆ ನಿಲ್ದಾಣದಲ್ಲಿ ತುಂಬು ಗರ್ಭಿಣಿಯ ಪ್ರಾಣ ಕಾಪಾಡಿದ ಪೊಲೀಸ್‌ ಕಾನ್‌ಸ್ಟೆಬಲ್‌

ವೈರಲ್ ನ್ಯೂಸ್

Viral Video: ರೈಲ್ವೆ ನಿಲ್ದಾಣದಲ್ಲಿ ತುಂಬು ಗರ್ಭಿಣಿಯ ಪ್ರಾಣ ಕಾಪಾಡಿದ ಪೊಲೀಸ್‌ ಕಾನ್‌ಸ್ಟೆಬಲ್‌

Viral News: ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ಅವಸರದಿಂದಾಗಿಯೇ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಹೀಗಾಗಿ ರಕ್ಷಣಾ ಸಿಬ್ಬಂದಿಯೂ ಜಾಗೃತರಾಗಿರುವುದು ಅನಿವಾರ್ಯವೆಂಬಂತಾಗಿದೆ.

VISTARANEWS.COM


on

Viral News
ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯ ದೃಶ್ಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಝಾನ್ಸಿ: ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವವರು ಮೈಯನ್ನೆಲ್ಲ ಕಣ್ಣಾಗಿಸಿಕೊಂಡಿರಬೇಕು ಎಂಬುದಕ್ಕೆ ಪೂರಕವಾಗಿರುವ ಸನ್ನಿವೇಶ ಆಗಾಗ ಎದುರಾಗುತ್ತಿರುತ್ತದೆ. ರೈಲು ಹತ್ತುವ ಅವಸರದಲ್ಲಿ ಅದೆಷ್ಟೋ ಪ್ರಯಾಣಿಕರು ಅಪಾಯ ಮೈಮೇಲೆ ಎಳೆದುಕೊಳ್ಳುತ್ತಾರೆ. ಅವರನ್ನು ರಕ್ಷಿಸುವ ಸಲುವಾಗಿ ಈ ರಕ್ಷಣಾ ಸಿಬ್ಬಂದಿಯೂ ತಮ್ಮ ಜೀವದ ಆಸೆ ಬಿಟ್ಟು ಪ್ರಯತ್ನ ಮಾಡುತ್ತಾರೆ. ಇಂಥ ಘಟನೆಗಳು ನಡೆದ ಹಲವು ವಿಡಿಯೋಗಳನ್ನು ನೀವು ಸೋಷಿಯಲ್‌ ಮೀಡಿಯಾಗಳಲ್ಲಿ ಆಗಾಗ ನೋಡಬಹುದು.

ಅದೇ ತರಹದ ಒಂದು ಘಟನೆ ಉತ್ತರ ಪ್ರದೇಶದ ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ ಸ್ಟೇಶನ್‌ನಲ್ಲಿ ನಡೆದಿದ್ದು ಅದರ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿ ಆಯತಪ್ಪಿದ ಗರ್ಭಿಣಿಯನ್ನು ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಕಾಪಾಡಿದ್ದಾರೆ. ಇದು ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ರೈಲ್ವೆ ಸಚಿವಾಲಯ ಶೇರ್‌ ಮಾಡಿಕೊಂಡಿದ್ದಾರೆ.

ರೈಲ್ವೆ ರಕ್ಷಣಾ ಪಡೆಯ ಪೊಲೀಸ್‌ ಕಾನ್‌ಸ್ಟೆಬಲ್‌ ನರ್ಪಾಲ್‌ ಸಿಂಗ್‌ ಶನಿವಾರ ಸಂಜೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಬರೌನಿ-ಗ್ವಾಲಿಯರ್‌ ರೈಲು ನಿಲ್ದಾಣವನ್ನು ಪ್ರವೇಶಿಸಿ ಕೆಲ ಕಾಲ ನಿಂತು ಅಲ್ಲಿಂದ ಹೊರಟಿತು. ಹೀಗೆ ರೈಲು ಚಲನೆ ಪ್ರಾರಂಭಿಸಿದ ತಕ್ಷಣ ತುಂಬು ಗರ್ಭಿಣಿಯೊಬ್ಬರು ಓಡುತ್ತ ಬಂದರು. ರೈಲು ತಪ್ಪಿ ಹೋದರೆ ಎಂಬ ಆತಂಕದಲ್ಲಿ ಓಡಿ ಬಂದು ಇನ್ನೇನು ಹತ್ತಬೇಕು ಎನ್ನುವಷ್ಟರಲ್ಲಿ ಅವರ ಕಾಲು ಎಡವಿ ಆಯತಪ್ಪಿದ್ದಾರೆ. ಅಷ್ಟರಲ್ಲಿ ನರ್ಪಾಲ್‌ ಸಿಂಗ್‌ ಓಡಿಬಂದು ಆಕೆಯನ್ನು ಹಿಡಿದುಕೊಂಡಿದ್ದಾರೆ. ಮಹಿಳೆ ಪಕ್ಕದಲ್ಲಿ, ಮಗುವನ್ನು ಎತ್ತಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬ ಕೂಡ ಆಕೆಯನ್ನು ಹಿಡಿದು ಎಳೆದಿದ್ದಾರೆ. ಗರ್ಭಿಣಿ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸ್‌ ಕಾನ್‌ಸ್ಟೆಬಲ್‌ ಸ್ವಲ್ಪವೇ ತಡ ಮಾಡಿದ್ದರೂ ಆಕೆಯ ಜೀವವೇ ಹೋಗುವ ಸಾಧ್ಯತೆ ಇತ್ತು. ಅಥವಾ ಗಂಭೀರ ಗಾಯಗೊಂಡು ಹೊಟ್ಟೆಯಲ್ಲಿರುವ ಮಗುವಿಗೂ ಅಪಾಯ ಎದುರಾಗುತ್ತಿತ್ತು. ವಿಡಿಯೋ ನೋಡಿದ ಜನರು ಆರ್‌ಪಿಎಫ್‌ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Video: ಮೈ ಜುಂ ಎನ್ನುವ ದೃಶ್ಯ; ಹಳಿ ಮೇಲೆ ಬಿದ್ದ ವೃದ್ಧನ ರಕ್ಷಣೆಗೆ ಜೀವ ಪಣಕ್ಕಿಟ್ಟ ರೈಲ್ವೆ ಉದ್ಯೋಗಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಹುಬ್ಬಳ್ಳಿಯಲ್ಲಿ ವಾರದಲ್ಲಿ ಮೂರನೇ ಬಾರಿ ವಿಮಾನ ಲ್ಯಾಂಡಿಂಗ್ ಸಮಸ್ಯೆ; ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

VISTARANEWS.COM


on

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಫ್ಲೈ 91 (Fly 91) ವಿಮಾನಯಾನ ಸಂಸ್ಥೆಯ ವಿಮಾನಗಳು ಸತತವಾಗಿ ತಾಂತ್ರಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಪ್ರಯಾಣಿಕರಲ್ಲಿ ಭೀತಿ ಮೂಡಿಸಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಇದು ಮೂರನೇ ಘಟನೆಯಾಗಿದ್ದು, ನಿನ್ನೆ ಹೈದರಾಬಾದ್‌ನಿಂದ ಬಂದ ವಿಮಾನವು ಲ್ಯಾಂಡಿಂಗ್‌ಗಾಗಿ ಸುಮಾರು 40 ನಿಮಿಷಗಳ ಕಾಲ ಆಕಾಶದಲ್ಲಿಯೇ ಸುತ್ತು ಹೊಡೆದಿದೆ. ಮಧ್ಯಾಹ್ನ 3.13ಕ್ಕೆ ಹೈದರಾಬಾದ್‌ನಿಂದ ಹೊರಟಿದ್ದ ವಿಮಾನವು ಸಂಜೆ 4.30ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದ ನೆಪವೊಡ್ಡಿ ವಿಮಾನವನ್ನು ಆಕಾಶದಲ್ಲೇ ತಡೆಹಿಡಿದ ಪರಿಣಾಮ, ಅಂತಿಮವಾಗಿ 5.09ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಈ ವಿಳಂಬದಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಪ್ರಾಣಭಯದಿಂದ ತತ್ತರಿಸುವಂತಾಯಿತು.

ಫ್ಲೈ 91 ಸಂಸ್ಥೆಯ ವಿಮಾನಗಳಿಗೆ ಹುಬ್ಬಳ್ಳಿಯಲ್ಲಿ ಇಂತಹ ಸಮಸ್ಯೆ ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಏಪ್ರಿಲ್ 19 ರಂದು ಹೈದರಾಬಾದ್‌ನಿಂದ ಬರುತ್ತಿದ್ದ ಇದೇ ಸಂಸ್ಥೆಯ ವಿಮಾನವೊಂದು ವೇಗ ನಿಯಂತ್ರಣ ಕಳೆದುಕೊಂಡು ಬರೊಬ್ಬರಿ 4 ಗಂಟೆಗಳ ಕಾಲ ಆಗಸದಲ್ಲೇ ಹಾರಾಡಿ, ಕೊನೆಗೆ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ಆಗಲೂ ಹವಾಮಾನದ ಕಾರಣ ನೀಡಲಾಗಿತ್ತಾದರೂ, ತಾಂತ್ರಿಕ ದೋಷವೇ ಅಸಲಿ ಕಾರಣ ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು. ವಿಮಾನಯಾನ ಸಂಸ್ಥೆಯು ಈ ಬಗ್ಗೆ ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದಕ್ಕೆ ಪ್ರಯಾಣಿಕರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಘಟನೆ ನಡೆದ ಎರಡೇ ದಿನಗಳಲ್ಲಿ ಅಂದರೆ ಏಪ್ರಿಲ್ 21 ರಂದು ಬೆಂಗಳೂರಿನಿಂದ ಬಂದಿದ್ದ ವಿಮಾನಕ್ಕೂ ಇಂತಹುದೇ ಸ್ಥಿತಿ ಎದುರಾಗಿತ್ತು. ಈಗ ಕೇವಲ ಮೂರು ದಿನಗಳ ಅಂತರದಲ್ಲಿ ಮತ್ತೆ ಅದೇ ರೀತಿಯ ಲ್ಯಾಂಡಿಂಗ್ ಸಮಸ್ಯೆ ಉಂಟಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇತರ ವಿಮಾನ ಸಂಸ್ಥೆಗಳು ಸುಗಮವಾಗಿ ಸಂಚರಿಸುತ್ತಿರುವಾಗ ಫ್ಲೈ 91 ವಿಮಾನಗಳಿಗೆ ಮಾತ್ರ ಏಕೆ ಪದೇ ಪದೇ ಈ ತೊಂದರೆ ಆಗುತ್ತಿದೆ ಎಂಬ ಪ್ರಶ್ನೆ ಈಗ ಎದ್ದಿದೆ. ವಿಮಾನಗಳ ಫಿಟ್‌ನೆಸ್ ಹಾಗೂ ನಿರ್ವಹಣೆಯಲ್ಲಿ ಸಂಸ್ಥೆ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಪ್ರಯಾಣಿಕರಿಂದ ಈಗ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯ ಕೇಳಿಬಂದಿದೆ.

Continue Reading

Latest

ವಿಜಯ್ ಪಕ್ಷಕ್ಕೆ ಮತ ಚಲಾಯಿಸಲು ಸಾಧ್ಯವಾಗದೆ ಬಿಕ್ಕಿ ಬಿಕ್ಕಿ ಅತ್ತ ಯುವತಿ! ವಿಡಿಯೋ ವೈರಲ್

VISTARANEWS.COM


on

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಕಣ ರಂಗೇರಿದ್ದು, ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ಈ ಬಾರಿಯ ಚುನಾವಣೆಯನ್ನು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದೆ. ಇದೇ ಹೊತ್ತಲ್ಲಿ, ಮಲೇಷ್ಯಾದಿಂದ ತನ್ನ ನೆಚ್ಚಿನ ನಟನಿಗಾಗಿ ಮತ ಚಲಾಯಿಸಲು ಬಂದ ಯುವತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೆಲಸದ ನಿಮಿತ್ತ ಮಲೇಷ್ಯಾದಲ್ಲಿದ್ದ ಈ ಯುವತಿ, ಮತದಾನದ ದಿನದಂದೇ ತಾಯ್ನಾಡಿಗೆ ಬರುವ ವಿಮಾನವನ್ನು (Flight) ತಪ್ಪಿಸಿಕೊಂಡ ಕಾರಣ, ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ನಡುರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತು ವಿಜಯ್ ಬಳಿ ಕ್ಷಮೆಯಾಚಿಸಿದ್ದರು.

“ನನ್ನ ತಪ್ಪಿನಿಂದ ಫ್ಲೈಟ್ ಮಿಸ್ ಆಯ್ತು, ವಿಜಯ್ ಅಣ್ಣನ ಮೊದಲ ಹೆಜ್ಜೆಗೆ ಬೆಂಬಲ ನೀಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ನನ್ನ ಒಂದು ವೋಟ್‌ನಿಂದ ಏನಾಗುತ್ತೆ ಎಂದು ಕೆಲವರು ಕೇಳಬಹುದು, ಆದರೆ ‘ನಾವು ನಿಮ್ಮ ಜೊತೆ ಇದ್ದೀವಿ’ ಎಂದು ಅವರಿಗೆ ಭರವಸೆ ನೀಡುವ ದಾರಿ ಇದಾಗಿತ್ತು” ಎಂದು ಆ ಯುವತಿ ಕಣ್ಣೀರಿಡುತ್ತಾ ಹೇಳಿಕೊಂಡಿದ್ದರು. ಈ ಹೃದಯವಿದ್ರಾವಕ ವಿಡಿಯೋ ನೋಡಿ ದಳಪತಿ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದರು. ಆದರೆ ಈ ಕಥೆಗೆ ಒಂದು ಸುಖಾಂತ್ಯವಿದ್ದು, ಆ ಯುವತಿ ಕೇವಲ ಅತ್ತು ಸುಮ್ಮನಾಗದೆ, ಎಲ್ಲಾ ಅಡೆತಡೆಗಳನ್ನು ದಾಟಿ ಮತ್ತೊಂದು ವಿಮಾನದ ಮೂಲಕ ಹೇಗಾದರೂ ಮಾಡಿ ತಮಿಳುನಾಡಿಗೆ ತಲುಪಿದ್ದಾರೆ.

ಏಪ್ರಿಲ್ 22, 2026 ರಂದು ಹರಿದಾಡುತ್ತಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ, ಕಣ್ಣೀರಿಟ್ಟಿದ್ದ ಅದೇ ಯುವತಿ ಕೊನೆಗೂ ಸಮಯಕ್ಕೆ ಸರಿಯಾಗಿ ತನ್ನ ಮತಗಟ್ಟೆಗೆ ಬಂದು ಮತ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. “ಧೈರ್ಯ ಬಿಡದೆ ಮನೆಗೆ ಬಂದು ಮತ ಚಲಾಯಿಸಿದ್ದಾರೆ” ಎಂಬ ಟ್ವೀಟ್‌ಗಳು ಈಗ ಅಭಿಮಾನಿಗಳ ವಲಯದಲ್ಲಿ ಸಂಚಲನ ಮೂಡಿಸಿವೆ. ಇನ್ನುಳಿದಂತೆ ತಮಿಳುನಾಡು ಚುನಾವಣೆಯಲ್ಲಿ ನಟ ಅಜಿತ್ ಕುಮಾರ್ ಮೊದಲನೆಯವರಾಗಿ ಮತ ಚಲಾಯಿಸಿದರೆ, ನಂತರ ರಜನಿಕಾಂತ್, ತ್ರಿಷಾ, ವಿಕ್ರಮ್ ಮತ್ತು ಸೂರ್ಯ ಸೇರಿದಂತೆ ದಿಗ್ಗಜ ನಟರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾದರು.

Continue Reading

Latest

ಸಮಂತಾ ಕೇಳಿದ ಪ್ರಶ್ನೆಗೆ ದಿಗಂತ್ ಶಾಕ್! ‘ದೂದ್ ಪೇಡ’ ಅಂದ್ರೆ ಯಾರು ಎಂದಿದ್ದಕ್ಕೆ ‘ಚಾಕೊಲೇಟ್ ಹೀರೊ’ ನೀಡಿದ ರಿಯಾಕ್ಷನ್ ಹೇಗಿತ್ತು?

VISTARANEWS.COM


on

ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೊ ದಿಗಂತ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಈಗ ಭರ್ತಿ 20 ವರ್ಷಗಳಾಗಿವೆ. 2006ರಲ್ಲಿ ‘ಮಿಸ್ ಕ್ಯಾಲಿಫೋರ್ನಿಯಾ’ ಮೂಲಕ ಆರಂಭವಾದ ಇವರ ಸಿನಿ ಪಯಣ ಇಂದು ‘ರುದ್ರ ಕಾಲ’ ಎಂಬ ವಿಭಿನ್ನ ಸಬ್ಜೆಕ್ಟ್‌ನ ಸಿನಿಮಾವರೆಗೆ ಬಂದು ನಿಂತಿದೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ಅನ್ನು ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅನಾವರಣಗೊಳಿಸಿದ್ದರು. ಈ ವೇಳೆ ನಡೆದ ಒಂದು ತಮಾಷೆಯ ಪ್ರಸಂಗದ ಬಗ್ಗೆ ದಿಗಂತ್ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಪೋಸ್ಟರ್ ಲಾಂಚ್ ಆದ ಮೇಲೆ ಯೂಟ್ಯೂಬ್ ಕಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಸತತವಾಗಿ ‘ದೂದ್ ಪೇಡ’ ಎಂದು ಕರೆಯುತ್ತಿರುವುದನ್ನು ನೋಡಿ ಸಮಂತಾ ಅವರು ಆಶ್ಚರ್ಯಚಕಿತರಾಗಿ ದಿಗಂತ್ ಅವರನ್ನೇ ಪ್ರಶ್ನೆ ಮಾಡಿದ್ದರಂತೆ!

“ಯಾರಿದು ದೂದ್ ಪೇಡ? ಕಮೆಂಟ್ಸ್‌ನಲ್ಲಿ ಯಾಕೆ ಈ ರೀತಿ ಬರೆಯುತ್ತಿದ್ದಾರೆ?” ಎಂದು ಸಮಂತಾ ಕುತೂಹಲದಿಂದ ದಿಗಂತ್ ಅವರನ್ನು ಕೇಳಿದ್ದಾರೆ. ಇದಕ್ಕೆ ಮುಗುಳ್ನಕ್ಕ ದಿಗಂತ್, “ಇದು ನನಗಿರುವ ಬಿರುದು, ‘ಗಾಳಿಪಟ’ ಸಿನಿಮಾದ ನಂತರ ಕನ್ನಡಿಗರು ಪ್ರೀತಿಯಿಂದ ನನ್ನನ್ನು ದೂದ್ ಪೇಡ ಎಂದು ಕರೆಯುತ್ತಾರೆ” ಎಂದು ವಿವರಿಸಿದ್ದಾರೆ. ಸಮಂತಾ ಅವರ ಈ ಮುಗ್ಧ ಪ್ರಶ್ನೆಗೆ ದಿಗಂತ್ ಒಂದು ಕ್ಷಣ ಶಾಕ್ ಆದರೂ, ನಂತರ ತಮ್ಮ ಹೆಸರಿನ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟು ನಗೆ ಬೀರಿದ್ದಾರೆ. ಸಮಂತಾ ಅವರು ದಿಗಂತ್ ಅವರ ಹೊಸ ಚಿತ್ರತಂಡಕ್ಕೆ ಶುಭ ಹಾರೈಸಿದ್ದಲ್ಲದೆ, ನಟನ ವೃತ್ತಿಜೀವನದ 20 ವರ್ಷಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

ತಮ್ಮ 20 ವರ್ಷಗಳ ಸುದೀರ್ಘ ಪಯಣದ ಬಗ್ಗೆ ಮಾತನಾಡಿದ ದಿಗಂತ್, “ಹಿಂತಿರುಗಿ ನೋಡಿದಾಗ ಒಂದಷ್ಟು ಏಳು-ಬೀಳುಗಳು, ಒಳ್ಳೆಯ ಅನುಭವಗಳು ಸಿಕ್ಕಿವೆ. ‘ರುದ್ರ ಕಾಲ’ ಸಿನಿಮಾದ ಕಥೆ ಇವತ್ತಿನ ಟ್ರೆಂಡ್‌ಗೆ ತಕ್ಕಂತಿದ್ದು, ದೈವಶಕ್ತಿಯ ಎಳೆಯನ್ನು ಹೊಂದಿದೆ. ನಿರ್ದೇಶಕರ ಪ್ರತಿಭೆ ಮತ್ತು ವಿಭಿನ್ನ ಸಬ್ಜೆಕ್ಟ್ ನನ್ನನ್ನು ಈ ಸಿನಿಮಾ ಒಪ್ಪಿಕೊಳ್ಳುವಂತೆ ಮಾಡಿತು” ಎಂದು ಹೇಳಿದ್ದಾರೆ. ಸದ್ಯ ಸಮಂತಾ ಮತ್ತು ದಿಗಂತ್ ನಡುವಿನ ಈ ‘ದೂದ್ ಪೇಡ’ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ

Continue Reading

Latest

ಸ್ಟೇಜ್ ಪರ್ಫಾರ್ಮೆನ್ಸ್ ವೇಳೆ ಲಿಪ್‌ಸಿಂಕ್‌ ಮಾಡಿದ ‘ಧುರಂಧರ್‌’ ಗಾಯಕಿ: ನೆಟ್ಟಿಗರು ಫುಲ್ ಗರಂ!

VISTARANEWS.COM


on

ಖ್ಯಾತ ಪಂಜಾಬಿ ಗಾಯಕಿ ಜಾಸ್ಮಿನ್ ಸ್ಯಾಂಡ್ಲಸ್ (Jasmine Sandlas) ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಮತ್ತು ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾದ ಹಾಡುಗಳ ಮೂಲಕ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಗಾಯಕಿಯ ಅಸಲಿ ಬಣ್ಣ ಲೈವ್ ಕಾರ್ಯಕ್ರಮವೊಂದರಲ್ಲಿ ಬಯಲಾಗಿದೆ. ಏಪ್ರಿಲ್ 19ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಜಾಸ್ಮಿನ್ ಅವರು ಲೈವ್ ಆಗಿ ಹಾಡುವ ಬದಲು ‘ಲಿಪ್ ಸಿಂಕ್’ (Lip Sync) ಮಾಡುವ ಮೂಲಕ ಪ್ರೇಕ್ಷಕರಿಗೆ ಮೋಸ ಮಾಡಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ಕಾರ್ಯಕ್ರಮದ ವೇಳೆ ಜಾಸ್ಮಿನ್ ತಮ್ಮ ಹಿಟ್ ಹಾಡು ‘ಶರಾರತ್’ ಹಾಡುತ್ತಾ ವೇದಿಕೆಯ ಮೇಲೆ ಅತಿರೇಕದ ವರ್ತನೆ ತೋರಿದ್ದಾರೆ. ಹಾಡಿನ ಮಧ್ಯೆ ಹಠಾತ್ತನೆ ಮೈಮೇಲೆ ನೀರು ಸುರಿದುಕೊಂಡು, ವಿಚಿತ್ರವಾಗಿ ಸ್ಟೆಪ್ ಹಾಕುತ್ತಾ ಪ್ರೇಕ್ಷಕರನ್ನು ರಂಜಿಸಲು ಯತ್ನಿಸಿದ್ದಾರೆ. ಆದರೆ, ಇದೇ ವೇಳೆ ಅವರು ಮೈಕ್ ಅನ್ನು ಬಾಯಿಯಿಂದ ದೂರವಿಟ್ಟು ಕೆಳಗೆ ಇಳಿಸಿದರೂ ಹಿನ್ನೆಲೆಯಲ್ಲಿ ಹಾಡು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಕೇಳಿಬರುತ್ತಿತ್ತು. ಇದನ್ನು ಗಮನಿಸಿದ ನೆಟ್ಟಿಗರು, ‘ಲೈವ್ ಕಾನ್ಸರ್ಟ್ ಹೆಸರಿನಲ್ಲಿ ಈಕೆ ಮಾಡುತ್ತಿರುವುದು ಕೇವಲ ಓವರ್ ಆ್ಯಕ್ಟಿಂಗ್ ಅಷ್ಟೇ’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗಾಯಕಿಯ ವಿರುದ್ಧ ಸಮರ ಸಾರಿದ್ದಾರೆ. “ಲೈವ್ ಕಾನ್ಸರ್ಟ್ ಟಿಕೆಟ್ ಪಡೆದು ಜನರನ್ನು ವಂಚಿಸುತ್ತಿದ್ದಾರೆ” ಎಂದು ಕೆಲವರು ದೂರಿದರೆ, “ಕೇವಲ ಎರಡು ಹಾಡು ಹಿಟ್ ಆದ ತಕ್ಷಣ ಇವರಿಗೆ ಅಹಂಕಾರ ನೆತ್ತಿಗೇರಿದೆ” ಎಂದು ಮಗದೊಬ್ಬರು ಕಿಡಿಕಾರಿದ್ದಾರೆ. ಗಾಯಕಿಯನ್ನು ಹಾಡಲು ಕರೆಸಿದ್ದಾರೋ ಅಥವಾ ನಟನೆ ಮಾಡಲೋ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿವೆ. ಇಷ್ಟೆಲ್ಲಾ ವಿವಾದ ಮತ್ತು ಟೀಕೆಗಳು ಕೇಳಿಬರುತ್ತಿದ್ದರೂ, ಜಾಸ್ಮಿನ್ ಸ್ಯಾಂಡ್ಲಸ್ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಅಭಿಮಾನಿಗಳು ಅವರ ಪರವಾಗಿ ಬ್ಯಾಟ್ ಬೀಸುತ್ತಿದ್ದರೂ, ವಿಡಿಯೋ ಸಾಕ್ಷಿ ಮಾತ್ರ ಅವರ ಕಳ್ಳಾಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

Continue Reading
Advertisement
Latest7 minutes ago

ಆರ್‌ಸಿಬಿ ಪ್ಲೇಯಿಂಗ್ 11 ಅಪ್‌ಡೇಟ್: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಡೌಟ್?

Latest53 minutes ago

ಬಿಗಿ ಭದ್ರತೆಯ ನಡುವೆಯೂ ಟ್ರಂಪ್ ಪಾರ್ಟಿಗೆ ಅತಿಥಿಯಂತೆ ಬಂದಿದ್ದ ದಾಳಿಕೋರ! ಸೀಕ್ರೆಟ್ ಸರ್ವಿಸ್ ಕಣ್ಣು ತಪ್ಪಿಸಿದ್ದು ಹೇಗೆ?

ಕರ್ನಾಟಕ2 hours ago

ಹುಬ್ಬಳ್ಳಿಯಲ್ಲಿ ವಾರದಲ್ಲಿ ಮೂರನೇ ಬಾರಿ ವಿಮಾನ ಲ್ಯಾಂಡಿಂಗ್ ಸಮಸ್ಯೆ; ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

Latest2 hours ago

ದೆಹಲಿ ಏರ್‌ಪೋರ್ಟ್‌ನಲ್ಲಿ ಅಪಘಾತ: ಟೇಕಾಫ್ ಆಗುವಾಗ ಸ್ವಿಸ್ ಏರ್ ವಿಮಾನದ ಎಂಜಿನ್‌ನಲ್ಲಿ ಬೆಂಕಿ; ಆರು ಮಂದಿಗೆ ಗಾಯ!

Latest20 hours ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ

Latest20 hours ago

ಟೆಹರಾನ್‌ನಲ್ಲಿ ವಿಮಾನ ಹಾರಾಟ ಪುನರಾರಂಭ: ಪಾಕ್‌ಗೆ ಆಗಮಿಸಿದ ಇರಾನ್‌ ನಿಯೋಗ: ಯುದ್ಧದ ಅಂತ್ಯದ ಮುನ್ಸೂಚನೆಯೇ ?

Latest21 hours ago

ಪರಮಾಣು ಶಸ್ತ್ರಾಸ್ತ್ರಗಳು ಶಾಂತಿಯ ಉದ್ದೇಶಕ್ಕೆ ಬಳಕೆಯಾಗಲಿ: ವಿಶ್ವಸಂಸ್ಥೆ ಕಳಕಳಿ

Latest22 hours ago

ರಾಜಕುಮಾರ್‌ ಸಮಾಧಿಗೆ ಭೂಮಿ: ವಿವಾದ ಹುಟ್ಟು ಹಾಕಿದ ನಟ ಚೇತನ್‌ ವಿರುದ್ಧ ಅಭಿಮಾನಿಗಳ ಆಕ್ರೋಶ; ದೂರು ದಾಖಲು

Latest22 hours ago

ಯೋಗೇಶ್‌ ಗೌಡ ಕೊಲೆ ಪ್ರಕರಣ: ಅನರ್ಹತೆ ಭೀತಿ; ಶಿಕ್ಷೆ ರದ್ದುಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಶಾಸಕ ವಿನಯ್‌ ಕುಲಕರ್ಣಿ

Latest23 hours ago

ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸಬೇಡಿ, ಅವರೂ ಬುದ್ದಿವಂತರು; ಬಿಜೆಪಿ ಮುಖಂಡರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌