IPL 2023: ಗಿಲ್​ ಶತಕದ ಕಮಾಲ್​; ಮುಂಬೈಗೆ ಬೃಹತ್​ ಮೊತ್ತದ ಗುರಿ - Vistara News

ಕ್ರಿಕೆಟ್

IPL 2023: ಗಿಲ್​ ಶತಕದ ಕಮಾಲ್​; ಮುಂಬೈಗೆ ಬೃಹತ್​ ಮೊತ್ತದ ಗುರಿ

ಶುಭಮನ್​ ಗಿಲ್​ ಅವರು ಐಪಿಎಲ್​ನ ಆವೃತ್ತಿಯೊಂದರಲ್ಲಿ 800 ರನ್​ಗಳ ಗಡಿ ದಾಟಿದ ನಾಲ್ಕನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

VISTARANEWS.COM


on

Shubman Gill century celebration
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ನ್ಯೂ ಬ್ಯಾಟಿಂಗ್​ ಸೆನ್ಸೇಷನಲ್ ಶುಭಮನ್​ ಗಿಲ್(129) ಅವರು ಬಾರಿಸಿದ ಸೊಗಸಾದ ಶತಕದ ನೆರವಿನಿಂದ ಮುಂಬೈ ವಿರುದ್ಧದ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ಬೃಹತ್​ ಮೊತ್ತ ದಾಖಲಿಸಿದೆ.

ಮಳೆಯಿಂದ ವಿಳಂಬಗೊಂಡ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 233 ರನ್​ ಗಳಿಸಿದೆ. ಎದುರಾಳಿ ಮುಂಬೈ ತಂಡ ಗೆಲುವಿಗೆ 234 ರನ್​ ಬಾರಿಸಬೇಕಿದೆ.

ಇನಿಂಗ್ಸ್​ ಆರಂಭಿಸಿದ ಶುಭಮನ್​ ಗಿಲ್​ ಮತ್ತು ವೃದ್ಧಿಮಾನ್​ ಸಾಹಾ ಅವರು ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಈ ಪರಿಣಾಮ ಪವರ್​ ಪ್ಲೇಯಲ್ಲಿ ದೊಡ್ಡ ಮೊತ್ತ ಹರಿದು ಬರಲಿಲ್ಲ. ಪವರ್​ ಪ್ಲೇ ಮುಗಿದ ತಕ್ಷಣ ಬ್ಯಾಟಿಂಗ್​ ವೇಗಕ್ಕೆ ಚುರುಕು ಮುಟ್ಟಿಸಿದ ಗಿಲ್​ ಮುಂಬೈ ಬೌಲರ್​ಗಳನ್ನು ದಂಡಿಸಿ ರನ್​ ಗಳಿಸಲು ಆರಂಭಿಸಿದರು. ಇದೇ ವೇಳೆ ಅವರು ಜೀವದಾನವೊಂದು ಪಡೆದರು. 31 ರನ್​ ಗಳಿಸಿದ್ದ ವೇಳೆ ಟಿಮ್​ ಡೇವಿಡ್​ ಅವರು ಕ್ಯಾಚ್​ ಕೈಚೆಲ್ಲಿದರು.

ಗಿಲ್​ ಅವರು ಈ ಪಂದ್ಯದಲ್ಲಿ 8 ರನ್​ ಗಳಿಸಿದ ವೇಳೆ ನೂತನ ಮೈಲುಗಲ್ಲೊಂದನ್ನು ತಲುಪಿದರು. ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರನಾಗಿ ಮೂಡಿಬಂದರು. ಈ ಮೂಲಕ ಆರ್​ಸಿಬಿಯ ನಾಯಕ ಫಾಫ್ ಡು ಪ್ಲೆಸಿಸ್​ ಅವರನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದರು. ಡು ಪ್ಲೆಸಿಸ್​ 14 ಪಂದ್ಯಗಳಿಂದ 730 ರನ್​ ಗಳಿಸಿದ್ದರು. ಇದೀಗ ಗಿಲ್​ 800ರ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹಿರಿಮೆಗೂ ಗಿಲ್​ ಪಾತ್ರರಾದರು. ವಿರಾಟ್​ ಕೊಹ್ಲಿ, ಜಾಸ್​ ಬಟ್ಲರ್​ ಮತ್ತು ಡೇವಿಡ್​ ವಾರ್ನರ್​ ಈ ಸಾಧನೆ ಮಾಡಿದ ಮೊದಲಿಗರು.

ಮತ್ತೊಂದು ತುದಿಯಲ್ಲಿ ರನ್​ ಗಳಿಸಲು ಪರದಾಡುತ್ತಿದ್ದ ವೃದ್ಧಿಮಾನ್​ ಸಾಹಾ ಅವರು ಅನುಭವಿ ಸ್ಪಿನ್ನರ್​ ಪಿಯೂಷ್​ ಚಾವ್ಲಾ ಅವರ ಎಸೆತದಲ್ಲಿ ಮುಂದೆ ಬಂದು ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಎಡವಿ ಇಶಾನ್​ ಕಿಶನ್​ ಅವರಿಂದ ಸ್ಡಂಪ್​ ಔಟ್​ ಆದರು. ಅವರ ಗಳಿಕೆ 16 ಎಸೆತಗಳಿಂದ 18 ರನ್​. ಸಾಹಾ​ ವಿಕೆಟ್​ ಪತನದ ಬಳಿಕ ಕ್ರೀಸ್​ಗಿಳಿದ ಸಾಯಿ ಸುದರ್ಶನ್​ ಅವರು ಗಿಲ್​ ಜತೆಗೂಡಿ ಉಪಯುಕ್ತ ಇನಿಂಗ್ಸ್​ ಕಟ್ಟಿದರು. ಪರಿಣಾಮ ಗುಜರಾತ್​ 10 ಓವರ್​ ಮುಕ್ತಾಯದ ವೇಳೆಗೆ 90 ಗಡಿ ದಾಟಿ 10ರ ಸರಾಸರಿಯಲ್ಲಿ ರನ್​ ಕಲೆಹಾಕುವ ಮೂಲಕ ಆರಂಭದಲ್ಲಿ ಕಂಡಿದ್ದ ರನ್ ಬರಗಾಲವನ್ನು ಸರಿದೂಗಿಸಿತು.

ಮೂರನೇ ಶತಕ ಸಿಡಿಸಿ ಸಂಭ್ರಮಿಸಿದ ಗಿಲ್​

ಟಿಮ್​ ಡೇವಿಡ್​ ಅವರಿಂದ ಸಿಕ್ಕ ಒಂದು ಜೀವದಾನದ ಸಂಪೂರ್ಣ ಲಾಭವೆತ್ತಿದ ಶುಭಮನ್​ ಗಿಲ್​ ಶತಕ ಬಾರಿಸಿ ಸಂಭ್ರಮಿಸಿದರು. ಇದು ಅವರ ಮೂರನೇ ಐಪಿಎಲ್​ ಶತಕವಾಗಿದೆ. ಈ ಮೂರು ಶತಕವೂ ಈ ಆವೃತ್ತಿಯಲ್ಲಿಯೇ ದಾಖಲಾಗಿದ್ದು ವಿಶೇಷ. ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ಸಾಧನೆ ವಿರಾಟ್​ ಕೊಹ್ಲಿ ಮತ್ತು ಜಾಸ್​ ಬಟ್ಲರ್​ ಹೆಸರಿನಲ್ಲಿದೆ. ಉಭಯ ಆಟಗಾರರು 4 ಶತಕ ಬಾರಿಸಿದ್ದಾರೆ.

ಇದನ್ನೂ ಓದಿ IPL 2023: ಟೂರ್ನಿಯಿಂದ ಹೊರಬಿದ್ದರೂ ವಿಶೇಷ ಅವತಾರದಲ್ಲಿ ಕಾಣಿಸಿಕೊಂಡ ಆರ್​ಸಿಬಿ ನಾಯಕ

ಕೊಹ್ಲಿಯ ಶೈಲಿಯಲ್ಲೇ ಬ್ಯಾಟ್​ ಬೀಸಿದ ಗಿಲ್,​ ಮುಂಬೈ ಬೌಲರ್​ಗಳ ಮೇಲೆರಗಿ ಸಿಕ್ಸರ್​, ಬೌಂಡರಿಗಳ ಮಳೆಯನ್ನೇ ಸುರಿಸಿದರು. ಈ ಮೂಲಕ ನೆರೆದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು. ಅದರಲ್ಲೂ ಚಾವ್ಲಾ ಓವರ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸಿಕ್ಸರ್​ ಬಾರಿಸುವ ಮೂಲಕ ಚಾವ್ಲಾ ಅವರಿಗೆ ಚಳಿ ಬಿಡಿಸಿದರು. ಈ ಓವರ್​ನಲ್ಲಿ 20 ರನ್​ ಸೋರಿಕೆಯಾಯಿತು. ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದ ಸಾಯಿ ಸುದರ್ಶನ್‌ ಕೂಡ ಸಿಕ್ಕ ಅವಕಾಶದಲ್ಲಿ ಸಿಕ್ಸರ್, ಬೌಂಡರಿ ಬಾರಿಸುತ್ತಾ ಸಾಗಿ ತಂಡದ ಮೊತ್ತವನ್ನು ಹಿಗ್ಗಿಸುತ್ತಿದ್ದರು. 43 ರನ್​ ಗಳಿಸಿದ ವೇಳೆ ಅವರು ರಿಟೈರ್ಡ್ ಔಟ್ ಆದರು. ಅವರ ಈ ಇನಿಂಗ್ಸ್​ನಲ್ಲಿ 5 ಬೌಂಡರಿ ಮತ್ತಿ ಒಂದು ಸಿಕ್ಸರ್​ ಸಿಡಿಯಿತು.

ಬಿರುಸಿನ ಬ್ಯಾಟಿಂಗ್​ ಮೂಲಕ 150 ರನ್​ಗಳತ್ತ ಮುನ್ನುಗ್ಗುತ್ತಿದ್ದ ಗಿಲ್​ ಅವರನ್ನು ಅಂತಿಮವಾಗಿ ಕಳೆದ ಲಕ್ನೋ ವಿರುದ್ಧದ ಪಂದ್ಯದ ಹೀರೊ ಆಕಾಶ್​ ಮಧ್ವಾಲ್​ ಕಟ್ಟಿ ಹಾಕಿದರು. 60 ಎಸೆತ ಎದುರಿಸಿದ ಗಿಲ್​ ಬರೊಬ್ಬರಿ 10 ಸಿಕ್ಸರ್​ ಮತ್ತು 7 ಬೌಂಡರಿ ನೆರವಿನಿಂದ 129 ರನ್​ ಗಳಿಸಿದರು.​ ಅಂತಿಮ ಹಂತದಲ್ಲಿ ಪಾಂಡ್ಯ ಅಜೇಯ 28 ರನ್​ ಸಿಡಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಧೋನಿ ಡಕ್​ಔಟ್ ಆಗುವಾಗ ಜೋರಾಗಿ ನಕ್ಕ ಪ್ರೀತಿ ಜಿಂಟಾ; ಇಲ್ಲಿದೆ ವಿಡಿಯೊ

IPL 2024: ಪಂದ್ಯದಲ್ಲಿ ಎಂಎಸ್ ಧೋನಿ, ಪಿಬಿಕೆಎಸ್ ವಿರುದ್ಧದ 19 ನೇ ಓವರ್​ನಲ್ಲಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಪ್ರವೇಶಿಸಿದರು. ಆದರೆ, ಹರ್ಷಲ್ ಪಟೇಲ್ ಅವರನ್ನು ಗೋಲ್ಡನ್ ಡಕ್​ಗೆ ಔಟ್ ಮಾಡಿದರು. ಹರ್ಷಲ್ ಪಟೇಲ್ ಅವರ ನಿಧಾನಗತಿಯ ಯಾರ್ಕರ್​​ ಎಸೆತಕ್ಕೆ ಧೋನಿ ಮೋಸಹೋದರು. ಅವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಚೆಂಡು ಅವನ ಆಫ್-ಸ್ಟಂಪ್ ಗೆ ಅಪ್ಪಳಿಸಿತು.

VISTARANEWS.COM


on

IPL 2024
Koo

ಧರ್ಮಶಾಲಾ: ಇಲ್ಲಿ ಭಾನುವಾರ ನಡೆದ ಐಪಿಎಲ್​ ಪಂದ್ಯದಲ್ಲಿ (IPL 2024) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) 28 ರನ್​ಗಳ ನಿರ್ಣಾಯಕ ಗೆಲುವು ಸಾಧಿಸಿದೆ. ಚೆಪಾಕ್​​ನಲ್ಲಿ ಸಿಎಸ್​ಕೆ ವಿರುದ್ಧದ ಗೆಲುವು ಸೇರಿದಂತೆ ಸತತ ಎರಡು ಪಂದ್ಯಗಳನ್ನು ಗೆದ್ದರೂ, ಪಿಬಿಕೆಎಸ್ ತನ್ನ ಆವೇಗವನ್ನು ಉಳಿಸಿಕೊಳ್ಳಲು ವಿಫಲವಾಯಿತು ಮತ್ತು 169/9 ಗುರಿಯನ್ನು ಬೆನ್ನಟ್ಟುವಾಗ 139/9 ಕ್ಕೆ ಸೀಮಿತಗೊಂಡಿತು.

ಪಂದ್ಯದಲ್ಲಿ ಎಂಎಸ್ ಧೋನಿ, ಪಿಬಿಕೆಎಸ್ ವಿರುದ್ಧದ 19 ನೇ ಓವರ್​ನಲ್ಲಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಪ್ರವೇಶಿಸಿದರು. ಆದರೆ, ಹರ್ಷಲ್ ಪಟೇಲ್ ಅವರನ್ನು ಗೋಲ್ಡನ್ ಡಕ್​ಗೆ ಔಟ್ ಮಾಡಿದರು. ಹರ್ಷಲ್ ಪಟೇಲ್ ಅವರ ನಿಧಾನಗತಿಯ ಯಾರ್ಕರ್​​ ಎಸೆತಕ್ಕೆ ಧೋನಿ ಮೋಸಹೋದರು. ಅವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಚೆಂಡು ಅವನ ಆಫ್-ಸ್ಟಂಪ್ ಗೆ ಅಪ್ಪಳಿಸಿತು.

ಎಂ.ಎಸ್.ಧೋನಿ ಗೋಲ್ಡನ್ ಡಕ್ ಔಟ್ ಆದ ನಂತರ, ಧರ್ಮಶಾಲಾದಲ್ಲಿ ಪ್ರೇಕ್ಷಕರು ಮೌನವಾದರು. ಆದಾಗ್ಯೂ, ಪಿಬಿಕೆಎಸ್ ಸಹ ಮಾಲೀಕರಾದ ಪ್ರೀತಿ ಜಿಂಟಾ ಸ್ಟ್ಯಾಂಡ್​ಗಳಲ್ಲಿ ಕುಳಿತು ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಅವರು ಮುಗುಳ್ನಕ್ಕು ಹರ್ಷಲ್ ಅವರ ಪ್ರಯತ್ನಗಳಿಗೆ ಚಪ್ಪಾಳೆ ತಟ್ಟಿದರು.

ಧೋನಿಯ ಕ್ಲೀನ್​ ಬೌಲ್ಡ್​ ಕಂಡು ಬೇಸರಗೊಂಡ ಅಭಿಮಾನಿಗಳು; ವಿಡಿಯೊ ವೈರಲ್​

ಧರ್ಮಶಾಲಾ: ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ಭಾನುವಾರ ನಡೆದ ಪಂಜಾಬ್​ ಕಿಂಗ್ಸ್(Punjab Kings)​ ವಿರುದ್ಧದ ಐಪಿಎಲ್(IPL 2024)​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ 28 ರನ್​ಗಳ ಗೆಲುವು ಸಾಧಿಸಿತು. ಆದರೆ, ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ(MS Dhoni) ಮೊದಲ ಎಸೆತದಲ್ಲೇ ಕ್ಲೀನ್​ ಬೌಲ್ಡ್​ ಆಗಿ ಗೋಲ್ಡನ್​ ಡಕ್​(Dhoni golden duck) ಸಂಕಟಕ್ಕೆ ಸಿಲುಕಿದರು. ಇದನ್ನು ಕಂಡು ಅವರ ಅಭಿಮಾನಿಗಳು ಭಾರೀ ನಿರಾಸೆಗೊಂಡರು. ಇದರ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ: Jasprit Bumrah : ಪತ್ನಿ ಸಂಜನಾಗೆ ರೊಮ್ಯಾಂಟಿಕ್​​ ಬರ್ತ್​ಡೇ ವಿಶಸ್​ ಹೇಳಿದ ಜಸ್​ಪ್ರಿತ್​ ಬುಮ್ರಾ

ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಶೂನ್ಯಕ್ಕೆ ಔಟ್​ ಆಗುವ ಮೂಲಕ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಧೋನಿ ಔಟಾಗುತ್ತಿದ್ದಂತೆ ಅವರ ಅಭಿಮಾನಿಗಳು ಬೇಸರದಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತರ. ಈ ವಿಡಿಯೊ ವೈರಲ್​ ಆಗುತ್ತಿದೆ.

ಚೆನ್ನೈ ಬ್ಯಾಟಿಂಗ್​ ಇನಿಂಗ್ಸ್​ನ 19ನೇ ಓವರ್​ನಲ್ಲಿ ಧೋನಿ ಅವರು ಹರ್ಷಲ್​ ಪಟೇಲ್​ ಎಸೆದ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಆದರೆ ಕೀಪಿಂಗ್​ನಲ್ಲಿ ಧೋನಿ ಒಂದು ಸೊಗಸಾದ ಕ್ಯಾಚ್​ ಹಿಡಿದು ಮಿಂಚಿದರು. ಜಿತೇಶ್​ ಶರ್ಮ ಅವರ ಕ್ಯಾಚ್​ ಇದಾಗಿತ್ತು.

Continue Reading

ಪ್ರಮುಖ ಸುದ್ದಿ

Jasprit Bumrah : ಪತ್ನಿ ಸಂಜನಾಗೆ ರೊಮ್ಯಾಂಟಿಕ್​​ ಬರ್ತ್​ಡೇ ವಿಶಸ್​ ಹೇಳಿದ ಜಸ್​ಪ್ರಿತ್​ ಬುಮ್ರಾ

Jasprit Bumrah: ನನ್ನವಳಿಗೆ ಜನ್ಮದಿನದ ಶುಭಾಶಯಗಳು, ನನ್ನನ್ನು ಪೂರ್ಣಗೊಳಿಸಿದವರು ನೀವು. ನಿಮ್ಮ ಪಕ್ಕದಲ್ಲಿ ಈ ಜಗತ್ತು ಅದ್ಭುತ ಸ್ಥಳವಾಗಿದೆ. ಅಂಗದ್ ಮತ್ತು ನಾನು ನಮ್ಮಿಂದ ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದಿದ್ದೇವೆ. ನಿಮಗೆ ಜನ್ಮದಿನದ ಶುಭಕಾಮನೆಗಳು ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Jasprit Bumrah
Koo

ಬೆಂಗಳೂರು: ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ತಮ್ಮ ಪತ್ನಿ ಸಂಜನಾ ಗಣೇಶನ್ (Sanjana Ganesan) ಅವರ ಹುಟ್ಟುಹಬ್ಬದ (Happy Birthday) ಪ್ರಯುಕ್ತ ರೊಮ್ಯಾಂಟಿಕ್​​ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಹೆಂಡತಿಗಾಗಿ ರೊಮ್ಯಾಂಟಿಕ್ ಹುಟ್ಟುಹಬ್ಬದ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ಪತ್ನಿ ಹಾಗೂ ಮಗನ ಕುರಿತು ಹೊಗಳಿಕೆಯ ಮಾತನ್ನು ಆಡಿದ್ದಾರೆ.

ಬೌಲರ್ ಪತ್ನಿಗಾಗಿ ಹಾಕಿರುವ ಹುಟ್ಟುಹಬ್ಬದ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿತ್ತು. ಪೋಸ್ಟ್​ನಲ್ಲಿ ಬುಮ್ರಾ ಸಂಜನಾಗೆ ತಮ್ಮ ಪ್ರೀತಿ ಮತ್ತು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ನನ್ನವಳಿಗೆ ಜನ್ಮದಿನದ ಶುಭಾಶಯಗಳು, ನನ್ನನ್ನು ಪೂರ್ಣಗೊಳಿಸಿದವರು ನೀವು. ನಿಮ್ಮ ಪಕ್ಕದಲ್ಲಿ ಈ ಜಗತ್ತು ಅದ್ಭುತ ಸ್ಥಳವಾಗಿದೆ. ಅಂಗದ್ ಮತ್ತು ನಾನು ನಮ್ಮಿಂದ ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದಿದ್ದೇವೆ. ನಿಮಗೆ ಜನ್ಮದಿನದ ಶುಭಕಾಮನೆಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pakistan Cricket: ಟಿ20 ವಿಶ್ವಕಪ್​ ಗೆದ್ದರೆ ಪಾಕ್​ ಆಟಗಾರರಿಗೆ ಸಿಗಲಿದೆ ಭಾರೀ ಬಹುಮಾನ ಮೊತ್ತ

ಸಂಜನಾ ಗಣೇಶನ್ ಪ್ರಸಿದ್ಧ ಟಿವಿ ನಿರೂಪಕರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಗಮನಾರ್ಹ ಆ್ಯಂಕರಿಂಗ್​ ಕೌಶಲ್ಯದಿಂದ ಖ್ಯಾತಿಯನ್ನು ಮತ್ತು ಹೆಸರನ್ನು ಗಳಿಸಿದ್ದಾರೆ. ಈ ಜೋಡಿ 2013-14ರ ಐಪಿಎಲ್ ಋತುವಿನಲ್ಲಿ ಸಂದರ್ಶನವೊಂದರಲ್ಲಿ ಪರಸ್ಪರ ಭೇಟಿಯಾಗಿದ್ದರು. ಆ ಬಳಿಕದಿಂದ ಪ್ರೀತಿಸಲು ಆರಂಭಿಸಿದ್ದರು.

ಈ ಜೋಡಿ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು ಅಂತೆಯೇ ಮಾರ್ಚ್ 15, 2021 ರಂದು ಗೋವಾದಲ್ಲಿ ಭವ್ಯ ಮತ್ತು ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ದಂಪತಿ ಆಗಸ್ಟ್ 2023 ರಲ್ಲಿ ಮೊದಲ ಮಗುವನ್ನು ಸ್ವಾಗತಿಸಿದೆ.

ಐಪಿಎಲ್ 2024ರಲ್ಲಿ ಜಸ್ಪ್ರೀತ್ ಬುಮ್ರಾ ಪ್ರದರ್ಶನ


ಕ್ರಿಕೆಟ್ ರಂಗದಲ್ಲಿ, ಜಸ್ಪ್ರೀತ್ ಬುಮ್ರಾ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಉನ್ನತ ಮಟ್ಟದ ಫಾರ್ಮ್​​ನಲ್ಲಿದ್ದಾರೆ. ಅವರು 11 ಪಂದ್ಯಗಳಲ್ಲಿ 6.25 ಎಕಾನಮಿಯಲ್ಲಿ 17 ವಿಕೆಟ್​​ಗಳನ್ನು ಪಡೆದಿದ್ದಾರೆ. ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಸೋತಿದೆ. ಆದಾಗ್ಯೂ, ಬುಮ್ರಾ ಅವರ ಪ್ರಸ್ತುತ ಫಾರ್ಮ್ ಟಿ 20 ವಿಶ್ವಕಪ್ 2024 ರಲ್ಲಿ ಮೆನ್ ಇನ್ ಬ್ಲೂಗೆ ಉತ್ತಮ ಸೂಚನೆಯಾಗಿದೆ. ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯವನ್ನು ಮೇ 6, 2024 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ

ಮುಂಬಯಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ಇದೀಗ ಜೆರ್ಸಿಯ(India’s T20 World Cup Jersey) ಫೋಟೊ ವೈರಲ್​ ಆಗಿದೆ. ಹೊಸ ಜೆರ್ಸಿಯ ಫೋಟೊವನ್ನು ಟಾಟಾ ಐಪಿಎಲ್​ ಕಾಮೆಂಟ್ರಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಜತೆಗೆ ಇದೇ ಜೆರ್ಸಿಯಲ್ಲಿ ಭಾರತ ಟಿ20 ವಿಶ್ವಕಪ್​ ಆಡಲಿದೆ ಎಂದು ಬರೆದುಕೊಂಡಿದೆ.

ವೈರಲ್​ ಆಗಿರುವ ಟೀಮ್​ ಇಂಡಿಯಾದ ಜೆರ್ಸಿ ನೀಲಿ ಮತ್ತು ಕೇಸರಿ ಬಣ್ಣದ ಮಿಶ್ರಿತ ಕಂಡುಬಂದಿದೆ. ಜತೆಗೆ ಬಿಳಿ ಬಣ್ಣದ ಎರಡು ಗೆರೆಗಳಿವೆ. ಈ ಜೆರ್ಸಿಗಳನ್ನು ಶಾಫ್​ ಒಂದರಲ್ಲಿ ಮಾರಾಟಕ್ಕಿಟ್ಟಂತೆ ಕಾಣುತ್ತದೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

Continue Reading

ಕ್ರೀಡೆ

India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

India’s T20 World Cup Jersey: ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ

VISTARANEWS.COM


on

India's T20 World Cup Jersey
Koo

ಮುಂಬಯಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ಇದೀಗ ಜೆರ್ಸಿಯ(India’s T20 World Cup Jersey) ಫೋಟೊ ವೈರಲ್​ ಆಗಿದೆ. ಹೊಸ ಜೆರ್ಸಿಯ ಫೋಟೊವನ್ನು ಟಾಟಾ ಐಪಿಎಲ್​ ಕಾಮೆಂಟ್ರಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಜತೆಗೆ ಇದೇ ಜೆರ್ಸಿಯಲ್ಲಿ ಭಾರತ ಟಿ20 ವಿಶ್ವಕಪ್​ ಆಡಲಿದೆ ಎಂದು ಬರೆದುಕೊಂಡಿದೆ.

ವೈರಲ್​ ಆಗಿರುವ ಟೀಮ್​ ಇಂಡಿಯಾದ ಜೆರ್ಸಿ ನೀಲಿ ಮತ್ತು ಕೇಸರಿ ಬಣ್ಣದ ಮಿಶ್ರಿತ ಕಂಡುಬಂದಿದೆ. ಜತೆಗೆ ಬಿಳಿ ಬಣ್ಣದ ಎರಡು ಗೆರೆಗಳಿವೆ. ಈ ಜೆರ್ಸಿಗಳನ್ನು ಶಾಫ್​ ಒಂದರಲ್ಲಿ ಮಾರಾಟಕ್ಕಿಟ್ಟಂತೆ ಕಾಣುತ್ತದೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಸ್ವರೂಪ ಬದಲು

ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ
Continue Reading

ಕ್ರೀಡೆ

Pakistan Cricket: ಟಿ20 ವಿಶ್ವಕಪ್​ ಗೆದ್ದರೆ ಪಾಕ್​ ಆಟಗಾರರಿಗೆ ಸಿಗಲಿದೆ ಭಾರೀ ಬಹುಮಾನ ಮೊತ್ತ

Pakistan Cricket: ಟಿ20 ವಿಶ್ವಕಪ್(ICC T20 World Cup 2024)​ ಟೂರ್ನಿಗೆ ಪಾಕಿಸ್ತಾನ(Pakistan Cricket) ಇದುವರೆಗೂ ತನ್ನ ತಂಡ ಪ್ರಕಟಿಸದಿದ್ದರೂ ಕೂಡ ವಿಶ್ವಕಪ್​ ಗೆದ್ದರೆ ತಂಡದ ಸದಸ್ಯರಿಗೆ ತಲಾ 83 ಲಕ್ಷ ರೂ. ಬಹುಮಾನ ನೀಡುವುದಾಗಿ ಪಿಸಿಬಿ(PCB) ಮುಖ್ಯಸ್ಥ ಮೊಹ್ಸೀನ್‌ ನಖ್ವಿ(Mohsin Naqvi) ಘೋಷಣೆ ಮಾಡಿದ್ದಾರೆ.

VISTARANEWS.COM


on

Pakistan Cricket
Koo

ಕರಾಚಿ: ಬಹುನಿರೀಕ್ಷಿತ ಟಿ20 ವಿಶ್ವಕಪ್(ICC T20 World Cup 2024)​ ಟೂರ್ನಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಟೂರ್ನಿಗಾಗಿ ಬಹುತೇಕ ತಂಡಗಳು ಕಠಿಣ ತಯಾರಿ ನಡೆಸುತ್ತಿವೆ. ಜತೆಗೆ 15 ಸದಸ್ಯರ ಬಲಿಷ್ಠ ಸಂಭಾವ್ಯ ತಂಡಗಳನ್ನು ಕೂಡ ಪ್ರಕಟಿಸಿವೆ. ಆದರೆ ಪಾಕಿಸ್ತಾನ(Pakistan Cricket) ಇದುವರೆಗೂ ತನ್ನ ತಂಡ ಪ್ರಕಟಿಸದಿದ್ದರೂ ಕೂಡ ವಿಶ್ವಕಪ್​ ಗೆದ್ದರೆ ತಂಡದ ಸದಸ್ಯರಿಗೆ ತಲಾ 83 ಲಕ್ಷ ರೂ. ಬಹುಮಾನ ನೀಡುವುದಾಗಿ ಪಿಸಿಬಿ(PCB) ಮುಖ್ಯಸ್ಥ ಮೊಹ್ಸೀನ್‌ ನಖ್ವಿ(Mohsin Naqvi) ಘೋಷಣೆ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧಕಾರಿಗಳೊಂದಿಗೆ 2 ಗಂಟೆಗಳ ಕಾಲ ಸಭೆ ನಡೆಸಿದ ನಖ್ವಿ, ಈ ಬಹುಮಾನ ಮೊತ್ತವನ್ನು ಘೋಷಣೆ ಮಾಡಿದೆ. ಈ ಘೋಷಣೆಯನ್ನು ಕಂಡು ಅನೇಕ ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಹೈರಾಣವಾಗಿರುವ ಮಧ್ಯೆ ಇದೆಲ್ಲ ಬೇಕಿತ್ತಾ ಎಂದು ಕಾಲೆಳೆದಿದ್ದಾರೆ. ಪಾಕಿಸ್ತಾನ ತಂಡ ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ಆಡಿದ ಬಳಿಕ ತನ್ನ ವಿಶ್ವಕಪ್​ ತಂಡವನ್ನು ಪ್ರಕಟಿಸಲಿದೆ.

“ಎದುರಾಳಿ ಯಾರೇ ಆಗಿರಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಒಂದು ತಂಡವಾಗಿ ಆಟವಾಡಿ” ಎಂದು ನಖ್ವಿ ಪಾಕಿಸ್ತಾನ ತಂಡದ ಆಟಗಾರರನ್ನು ಹುರಿದುಂಬಿಸಿದ್ದಾರೆ. ಇವರ ನೇತೃತ್ವದಲ್ಲೇ ಇತ್ತೀಚೆಗೆ ಪಾಕಿಸ್ತಾನ ಆಟಗಾರರಿಗೆ ಫಿಟ್​ನೆಸ್​ ಕಾಯ್ದುಕೊಳ್ಳುವ ಸಲುವಾಗಿ ಸೈನ್ಯದಲ್ಲಿ ಕಠಿಣ ತರಬೇತಿ ನೀಡಲಾಗಿತ್ತು.

ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮಾರ್ಗದರ್ಶನದಲ್ಲಿ ಪಾಕಿಸ್ತಾನ ಈ ಬಾರಿ ಟಿ20 ವಿಶ್ವಕಪ್​ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ.

ಇದನ್ನೂ ಓದಿ Pakistan Cricket: ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್ ಪಾಕ್​ ತಂಡಕ್ಕೆ ನೂತನ ಕೋಚ್​

ನ್ಯೂಯಾರ್ಕ್‌ನಲ್ಲಿ ಪಂದ್ಯ

ಇತ್ತಂಡಗಳ ನಡುವಣ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಅಣಿಯಾಗಲಿದೆ. ಈ ಪಂದ್ಯಕ್ಕಾಗಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲಾಗುತ್ತಿದೆ. ಅಲ್ಲದೆ ಭಾರತದ ಬಹುತೇಕ ಲೀಗ್​ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದೆ.

ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್​ ಅಂತರದ ಹೀನಾಯ ಸೋಲಾಗಿತ್ತು.

Continue Reading
Advertisement
Woman
ಪ್ರಮುಖ ಸುದ್ದಿ3 mins ago

ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

IPL 2024
ಪ್ರಮುಖ ಸುದ್ದಿ4 mins ago

IPL 2024 : ಧೋನಿ ಡಕ್​ಔಟ್ ಆಗುವಾಗ ಜೋರಾಗಿ ನಕ್ಕ ಪ್ರೀತಿ ಜಿಂಟಾ; ಇಲ್ಲಿದೆ ವಿಡಿಯೊ

couple came to Gangavathi from Dubai to vote
ಕರ್ನಾಟಕ7 mins ago

Lok Sabha Election 2024: ಮತದಾನ ಮಾಡಲು ದುಬೈನಿಂದ ಗಂಗಾವತಿಗೆ ಆಗಮಿಸಿದ ದಂಪತಿ

Lok Sabha Election-2024
ದೇಶ12 mins ago

Lok Sabha Election 2024: ಗುಜರಾತ್‌ನಲ್ಲಿ ಶೇ.10ಕ್ಕಿಂತ ಹೆಚ್ಚು ಮುಸ್ಲಿಮರಿದ್ದರೂ ಕಾಂಗ್ರೆಸ್ ಒಬ್ಬ ಮುಸ್ಲಿಮನಿಗೂ ಟಿಕೆಟ್‌ ಕೊಟ್ಟಿಲ್ಲ!

marriage cancel in kodagu
ಕೊಡಗು28 mins ago

Marriage Cancel : ಸಿಹಿ ತಿಂಡಿ ಕಿರಿಕ್‌ಗೆ ಮದುವೆ ಮುರಿದ ವರ; ಹೋಗೊಲೋ ಎಂದಳು ವಧು!

Jasprit Bumrah
ಪ್ರಮುಖ ಸುದ್ದಿ29 mins ago

Jasprit Bumrah : ಪತ್ನಿ ಸಂಜನಾಗೆ ರೊಮ್ಯಾಂಟಿಕ್​​ ಬರ್ತ್​ಡೇ ವಿಶಸ್​ ಹೇಳಿದ ಜಸ್​ಪ್ರಿತ್​ ಬುಮ್ರಾ

Chinese Scientists
ವಿಜ್ಞಾನ36 mins ago

Chinese Scientists: ಇನ್ನು ಮನುಷ್ಯರು 130 ವರ್ಷ ಬದುಕಬಹುದು! ಚೀನಾ ವಿಜ್ಞಾನಿಗಳ ಸಂಶೋಧನೆ

Ranchi Cash
ದೇಶ38 mins ago

12 ತಾಸು, 6 ಮಷೀನ್‌ಗಳಿಂದ 30 ಕೋಟಿ ರೂ. ಎಣಿಕೆ; ಕಾಂಗ್ರೆಸ್‌ ಮುಖಂಡನ ಪಿಎ ಮನೆಯಲ್ಲಿ ಹಣದ ರಾಶಿ!

Weight Loss Tips kannada
ಲೈಫ್‌ಸ್ಟೈಲ್43 mins ago

Weight Loss Tips Kannada: ಈ ಐದರಲ್ಲಿ ಒಂದು ಜ್ಯೂಸ್‌ ಕುಡಿಯುತ್ತಿದ್ದರೂ ಸಾಕು, ನಿಮ್ಮ ದೇಹ ತೂಕ ಇಳಿಯುತ್ತದೆ!

Laborer died by falling tree in Somawarpet
ಕೊಡಗು44 mins ago

Kodagu News: ಸೋಮವಾರಪೇಟೆಯಲ್ಲಿ ಮರ ಬಿದ್ದು ಕಾರ್ಮಿಕ ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ22 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ24 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ4 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ5 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌