IPL 2023: ಶುಭಮನ್​ ಗಿಲ್​ ಹೊಗಳಿದ ರೋಹಿತ್​ ಶರ್ಮ; ಕಾರಣ ಇದಂತೆ - Vistara News

ಕ್ರಿಕೆಟ್

IPL 2023: ಶುಭಮನ್​ ಗಿಲ್​ ಹೊಗಳಿದ ರೋಹಿತ್​ ಶರ್ಮ; ಕಾರಣ ಇದಂತೆ

ಯುವ ಆಟಗಾರ ಶುಭಮನ್​ ಗಿಲ್​ ಅವರ ಬ್ಯಾಟಿಂಗ್​ ಮೇಲೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷೆ ಇರಿಸಿದ್ದೇವೆ ಎಂದು ನಾಯಕ ರೋಹಿತ್​ ಶರ್ಮ ಹೇಳಿದ್ದಾರೆ.

VISTARANEWS.COM


on

rohit sharma and shubman gill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಮುಂಬೈ ತಂಡ 62 ರನ್​ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿತು. ಆದೆರ ಈ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಎದುರಾಳಿ ತಂಡದ ಆಟಗಾರ ಶುಭಮನ್​ ಗಿಲ್​ ಅವರನ್ನು ಮುಂಬೈ ತಂಡದ ನಾಯಕ ರೋಹಿತ್​ ಶರ್ಮ ಅವರು ಹಾಡಿ ಹೊಗಳಿದ್ದಾರೆ.

ಪಂದ್ಯ ಮುಕ್ತಾಯಕ ಬಳಿಕ ಮತನಾಡಿದ ರೋಹಿತ್​ ಶರ್ಮ ಅವರು, ಶುಭಮನ್​ ಗಿಲ್​ ಅವರು ಈ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಮಹತ್ವದ ಪಂದ್ಯದಲ್ಲಿ ಅವರು ಯಾವುದೇ ಆತಂಕಕ್ಕೆ ಒಳಗಾಗದೆ ಶತಕ ಬಾರಿಸಿದ್ದು ನಿಜಕ್ಕೂ ಮೆಚ್ಚಲೇ ಬೇಕು. ಅವರ ಈ ಪ್ರಚಂಡ ಫಾರ್ಮ್​ ಲಂಡನ್​ನಲ್ಲಿ ನಡೆಯುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲಯೂ ಮುಂದುವರಿಯಲಿ ಎಂದು ನಾನು ಹಾರೈಸುತ್ತೇನೆ ಎಂದು ರೋಹಿತ್​ ಹೇಳಿದರು.

ಮುಂಬೈ ವಿರುದ್ಧದ ಪಂದ್ಯದಲ್ಲಿ ಚುರುಕಿನ ಬ್ಯಾಟಿಂಗ್​ ನಡೆಸಿದ ಗಿಲ್​ ಕೇವಲ 49 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಒಟ್ಟು 60 ಎಸೆತ ಎದುರಿಸಿದ ಬರೊಬ್ಬರಿ 10 ಸಿಕ್ಸರ್​ ಮತ್ತು 7 ಬೌಂಡರಿ ನೆರವಿನಿಂದ 129 ರನ್​ ಗಳಿಸಿದರು.​ ಇದು ಅವರು ಬಾರಿಸಿದ ಮೂರನೇ ಐಪಿಎಲ್​ ಶತಕವಾಗಿದೆ.

ಇದನ್ನೂ ಓದಿ WTC Final 2023: ವಿಶ್ವ ಟೆಸ್ಟ್​ಚಾಂಪಿಯನ್​​ಷಿಪ್​​ ಭಾರತ ಗೆದ್ದರೆ ಸಿಗುವ ಬಹುಮಾನ ಎಷ್ಟು? ಇಲ್ಲಿದೆ ಮಾಹಿತಿ

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಪ್ರಶಸ್ತಿ ಸಮರ ಜೂನ್‌ 7 ರಿಂದ 11ರವರೆಗೆ ಲಂಡನ್​ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ವಿರಾಟ್​ ಕೊಹ್ಲಿ, ಮೊಮೊಹಮ್ಮದ್‌ ಸಿರಾಜ್‌, ಇತರ ಐಪಿಎಲ್‌ ತಂಡಗಳ ಆಟಗಾರರಾದ ಆರ್‌. ಅಶ್ವಿ‌ನ್‌, ಅಕ್ಷರ್‌ ಟೇಲ್‌, ಶಾರ್ದೂಲ್ ಠಾಕೂರ್‌, ಉಮೇಶ್‌ ಯಾದವ್‌, ಜೈದೇವ್‌ ಉನಾದ್ಕತ್‌ ಅವರು ಮೊದಲ ಬ್ಯಾಚ್​ನಲ್ಲಿ ಲಂಡನ್​ ತಲುಪಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅಂತಿಮ ಬ್ಯಾಚ್​ನಲ್ಲಿ ನಾಯಕ ರೋಹಿತ್‌ ಶರ್ಮ, ರವೀಂದ್ರ ಜಡೇಜ, ಇಶಾನ್‌ ಕಿಶನ್‌, ಶುಭಮನ್‌ ಗಿಲ್‌, ಮೊಹಮ್ಮದ್‌ ಶಮಿ, ಕೆ.ಎಸ್‌. ಭರತ್‌ ಮತ್ತು ಅಜಿಂಕ್ಯ ರಹಾನೆ ಐಪಿಎಲ್​ ಫೈನಲ್​ ಮುಗಿದ ತಕ್ಷಣವೇ ಲಂಡನ್​ಗೆ ವಿಮಾನ ಏರಲಿದ್ದಾರೆ.

ಇದನ್ನೂ ಓದಿ IPL 2023: ಶತಕ ಬಾರಿಸಿ ಸೆಹವಾಗ್​ ದಾಖಲೆ ಮುರಿದ ಶುಭಮನ್​ ಗಿಲ್​

ಫೈನಲ್​ ಪಂದ್ಯಕ್ಕೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯ್​ದೇವ್​ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್​ ಕೀಪರ್​). ಸ್ಟ್ಯಾಂಡ್‌ ಬೈ ಆಟಗಾರರು: ಋತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB vs GT: ಮಳೆ ಭೀತಿಯ ಮಧ್ಯೆ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ

RCB vS GT: ವಿರಾಟ್​ ಕೊಹ್ಲಿ ಈ ಮೈದಾನದಲ್ಲಿ ಇದುವರೆಗೆ 2924 ರನ್​ ಬಾರಿಸಿದ್ದಾರೆ. ಜತೆಗೆ ಈ ಬಾರಿಯ ಐಪಿಎಲ್​ನಲ್ಲಿಯೂ ಕೊಹ್ಲಿ ಉತ್ತಮವಾಗಿ ರನ್​ ಗಳಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಬ್ಯಾಟಿಂಗ್​ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ.

VISTARANEWS.COM


on

RCB vS GT:
Koo

ಬೆಂಗಳೂರು: ಹಲವು ಸೋಲಿನ ಬಳಿಕ ಸತತ 2 ಗೆಲುವು ಸಾಧಿಸಿ ಸಂತಸದ ಅಲೆಯಲ್ಲಿ ತೇಲುತ್ತಿರುವ ಆರ್​ಸಿಬಿ(RCB vS GT) ಹ್ಯಾಟ್ರಿಕ್​ ಗೆಲುವಿನಿ ನಿರೀಕ್ಷೆಯೊಂದಿಗೆ ನಾಳೆ(ಶನಿವಾರ) ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಆದರೆ, ಈ ಪಂದ್ಯಕ್ಕೆ ಮಳೆಯ ಭೀತಿಯೂ ಎದುರಾಗಿದೆ.

ಬೆಂಗಳೂರಿನಲ್ಲಿ ಸತತ 2 ದಿನಗಳಿಂದ ಮಳೆಯಾಗುತ್ತಿದ್ದು ಮುಂದಿನ ನಾಲ್ಕು ದಿನ ಕೂಡ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ನಾಳೆ ನಡೆಯುವ ಪಂದ್ಯಕ್ಕೆ ಮಳೆಯ ಭೀತಿ ಇದ್ದೇ ಇದೆ. ಪ್ಲೇ ಆಫ್​ಗೆ ಕ್ಷೀಣ ಅವಕಾಶ ಹೊಂದಿರುವ ಆರ್​ಸಿಬಿ ಮತ್ತು ಗುಜರಾತ್​ಗೆ ನಾಳೆ ನಡೆಯುವ ಪಂದ್ಯ ಮಹತ್ವದ್ದಾಗಿದೆ. ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳ ಪ್ಲೇ ಆಫ್​ ಮಳೆಯಲ್ಲಿ ಕೊಚ್ಚಿಹೋಗಲಿದೆ.

ಪಿಚ್​ ರಿಪೋರ್ಟ್​


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಸ್ಥಳವಾಗಿದೆ. ಇದುವರೆಗೆ ಇಲ್ಲಿ ನಡೆದ ಬಹುತೇಕ ಪಂದ್ಯಗಳು ಕೂಡ ಚೇಸಿಂಗ್​ ನಡೆಸಿದ ತಂಡವೇ ಹೆಚ್ಚು ಬಾರಿ ಗೆದ್ದಿದೆ. ಇದುವರೆಗೆ ಇಲ್ಲಿ 92 ಐಪಿಎಲ್​ ಪಂದ್ಯಗಳು ನಡೆದಿದ್ದು, 49 ಬಾರಿ ಚೇಸಿಂಗ್​ ನಡೆಸಿದ ತಂಡ ಜಯಶಾಲಿಯಾಗಿದೆ. 39 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ. ಆದರೆ ಕಳೆದ 10 ಪಂದ್ಯಗಳ ಫಲಿತಾಂಶ ನೋಡುವುದಾದರೆ 6 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ.

ವಿರಾಟ್​ ಕೊಹ್ಲಿ ಈ ಮೈದಾನದಲ್ಲಿ ಇದುವರೆಗೆ 2924 ರನ್​ ಬಾರಿಸಿದ್ದಾರೆ. ಜತೆಗೆ ಈ ಬಾರಿಯ ಐಪಿಎಲ್​ನಲ್ಲಿಯೂ ಕೊಹ್ಲಿ ಉತ್ತಮವಾಗಿ ರನ್​ ಗಳಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಬ್ಯಾಟಿಂಗ್​ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್​ಸಿಬಿಗೆ ಪ್ಲೇ ಆಫ್​ಗೆ ಹೋಗಬೇಕಿದ್ದರೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಗುಜರಾತ್​ ಅಡಗಾಲಿಕ್ಕಿತ್ತು. ಶುಭಮನ್​ ಗಿಲ್​ ಶತಕ ಬಾರಿಸಿ ಆರ್​ಸಿಬಿಗೆ ಸೋಲಿನ ರುಚಿ ತೋರಿಸಿದ್ದರು.

ಗುಜರಾತ್​ ಆಡಿದ 10 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 8 ಅಂಕ ಗಳಿಸಿ 8ನೇ ಸ್ಥಾನದಲ್ಲಿದೆ. ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಉಳಿದ 4 ಪಂದ್ಯಗಳನ್ನು ಕೂಡ ಗೆಲ್ಲಬೇಕಿದೆ. ಹೀಗಾಗಿ ಆರ್​ಸಿಬಿ ವಿರುದ್ಧದ ಪಂದ್ಯ ಗೆಲ್ಲಲೇ ಬೇಕಾದ ಒತ್ತಡ ಶುಭಮನ್​ ಗಿಲ್​ ಪಡೆಯ ಮೇಲಿದೆ.

ಇದನ್ನೂ ಓದಿ IPL 2024 : ರಾಜಸ್ಥಾನ್ ವಿರುದ್ಧ ಎಸ್​​ಆರ್​ಎಚ್​​ ತಂಡಕ್ಕೆ ರೋಚಕ 1 ರನ್ ಗೆಲುವು

ಉಭಯ ತಂಡಗಳು


ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​), ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಗುಜರಾತ್​: ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಶುಭಮನ್​ ಗಿಲ್ (ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಮೋಹಿತ್ ಶರ್ಮಾ.

Continue Reading

ಕ್ರೀಡೆ

ICC Men’s Test Team Rankings: ಅಗ್ರಸ್ಥಾನದಿಂದ ಕುಸಿತ ಕಂಡ ಭಾರತ; ವಿಶ್ವ ಚಾಂಪಿಯನ್​ ಆಸೀಸ್​ ನಂ.1

ICC Men’s Test Team Rankings: ಕಳೆದ ವರ್ಷ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಆಸ್ಟ್ರೇಲಿಯಾ 209 ರನ್‌ಗಳ ಗೆಲುವು ಸಾಧಿಸಿತ್ತು. ಇದೇ ಕಾರಣದಿಂದ ಆಸೀಸ್​ ತಂಡ ಅಗ್ರಸ್ಥಾನಕ್ಕೇರಿದೆ.

VISTARANEWS.COM


on

icc men's test team rankings
Koo

ದುಬೈ: ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಐಸಿಸಿ(ICC Men’s Test Team Rankings) ವಾರ್ಷಿಕ ಪರಿಷ್ಕರಣೆ ಮಾಡಿದ್ದು, ಈ ಮೊದಲು ಅಗ್ರಸ್ಥಾನದಲ್ಲಿದ್ದ ಭಾರತ ಒಂದು ಸ್ಥಾನಗಳ ಕುಸಿತ ಕಂಡು ಎರಡನೇ ಸ್ಥಾನಕ್ಕೆ ಜಾರಿದೆ. ಎರಡನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೇರಿದೆ. ಇಂಗ್ಲೆಂಡ್ (105), ದಕ್ಷಿಣ ಆಫ್ರಿಕಾ (103), ನ್ಯೂಜಿಲ್ಯಾಂಡ್​ (96), ಪಾಕಿಸ್ತಾನ (89), ಶ್ರೀಲಂಕಾ (83), ವೆಸ್ಟ್ ಇಂಡೀಸ್ (82) ಮತ್ತು ಬಾಂಗ್ಲಾದೇಶ (53) ಈ ಹಿಂದಿನ ಸ್ಥಾನದಲ್ಲೇ ಮುಂದುವರಿದೆ.

ನೂತನ ಶ್ರೇಯಾಂಕ ಪಟ್ಟಿ ಪ್ರಕಾರ ಆಸ್ಟ್ರೇಲಿಯಾ 124 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಭಾರತ 120 ಅಂಕದೊಂದಿದೆ 2ನೇ ಸ್ಥಾನಿಯಾಗಿದೆ. ಕಳೆದ ವರ್ಷ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಆಸ್ಟ್ರೇಲಿಯಾ 209 ರನ್‌ಗಳ ಗೆಲುವು ಸಾಧಿಸಿತ್ತು. ಇದೇ ಕಾರಣದಿಂದ ಆಸೀಸ್​ ತಂಡ ಅಗ್ರಸ್ಥಾನಕ್ಕೇರಿದೆ. ಈ ನೂತನ ಶ್ರೇಯಾಂಕಗಳ ನವೀಕರಣವು ಮೇ 2021 ರ ನಂತರ ತಂಡಗಳ ಪ್ರದರ್ಶನಗಳನ್ನು ಪರಿಗಣಿಸುತ್ತದೆ.


ಟಾಪ್​ 10 ತಂಡಗಳು


1.ಆಸ್ಟ್ರೇಲಿಯಾ- 30 ಪಂದ್ಯ, 124 ರೇಟಿಂಗ್​ ಅಂಕ

2. ಭಾರತ-26 ಪಂದ್ಯ, 120 ರೇಟಿಂಗ್​ ಅಂಕ

3. ಇಂಗ್ಲೆಂಡ್​- 30 ಪಂದ್ಯ, 105 ರೇಟಿಂಗ್​ ಅಂಕ

4. ದಕ್ಷಿಣ ಆಫ್ರಿಕಾ-18 ಪಂದ್ಯ, 103 ರೇಟಿಂಗ್​ ಅಂಕ

5. ನ್ಯೂಜಿಲ್ಯಾಂಡ್​-22 ಪಂದ್ಯ, 96 ರೇಟಿಂಗ್​ ಅಂಕ

6. ಪಾಕಿಸ್ತಾನ-17 ಪಂದ್ಯ, 89 ರೇಟಿಂಗ್​ ಅಂಕ

7. ಶ್ರೀಲಂಕಾ-18 ಪಂದ್ಯ, 83 ರೇಟಿಂಗ್​ ಅಂಕ

8. ವೆಸ್ಟ್​ ಇಂಡೀಸ್​-19 ಪಂದ್ಯ, 82 ರೇಟಿಂಗ್​ ಅಂಕ

9. ಬಾಂಗ್ಲಾದೇಶ-17 ಪಂದ್ಯ, 53 ರೇಟಿಂಗ್​ ಅಂಕ

10. ಜಿಂಬಾಬ್ವೆ-2 ಪಂದ್ಯ, 23 ರೇಟಿಂಗ್​ ಅಂಕ

ಇದನ್ನೂ ಓದಿ IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

ಅಗ್ರಸ್ಥಾನದಲ್ಲೇ ಮುಂದುವರಿದ ಸೂರ್ಯ


ಬುಧವಾರ ಪ್ರಕಟಗೊಂಡಿದ್ದ ಐಸಿಸಿ ನೂತನ ಟಿ20(T20 Rankings) ಬ್ಯಾಟಿಂಗ್​ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(babar azam) ಒಂದು ಸ್ಥಾನಗಳ ಪ್ರಗತಿ ಸಾಧಿಸಿದ್ದರು. ಟೀಮ್​ ಇಂಡಿಯಾದ ಸೂರ್ಯಕುಮಾರ್​ ಯಾದವ್(861 ರೇಟಿಂಗ್​ ಅಂಕ)​ ತಮ್ಮ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

ಬಾಬರ್​ ನ್ಯೂಜಿಲ್ಯಾಂಡ್​ ವಿರುದ್ಧದ ತವರಿನ ಟಿ20 ಪಂದ್ಯದಲ್ಲಿ ಆಡಿದ ನಾಲ್ಕು ಇನಿಂಗ್ಸ್​ಗಳಿಂದ ಒಂದು ಅರ್ಧಶತಕ ಮತ್ತು ಒಳಗೊಂಡಂತೆ ಒಟ್ಟು 125 ರನ್​ ಬಾರಿಸಿದ್ದರು. ಇದು ಬ್ಯಾಟರ್‌ಗಳಿಗಾಗಿ ನವೀಕರಿಸಿದ ಟಿ20 ಶ್ರೇಯಾಂಕಗಳ ಪಟ್ಟಿಯಲ್ಲಿ ಬಾಬರ್ ಒಂದು ಸ್ಥಾನವನ್ನು ಸುಧಾರಿಸಲು ನೆರವಾಯಿತು. ಬಾಬರ್​ 10 ರೇಟಿಂಗ್​ ಅಂಗಳ ಪ್ರಗತಿಯೊಂದಿಗೆ ಸದ್ಯ 763 ರೇಟಿಂಗ್​ ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಸರಿ ಸುಮಾರು ಒಂದು ವರ್ಷಕ್ಕಿಂತಲೂ ಅಧಿಕವಾಗಿ ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(suryakumar yadav) ಈ ಬಾರಿಯೂ ಅಗ್ರಸ್ಥಾನದಲ್ಲೇ ಮುಂದುವರಿಸಿದ್ದಾರೆ. ಆಸೀಸ್​ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅವರು ತಮ್ಮ ಚೊಚ್ಚಲ ನಾಯಕತ್ವದಲ್ಲ ಭಾರತಕ್ಕೆ ಟಿ20 ಸರಣಿಯನ್ನು ಗೆದ್ದು ಕೊಟ್ಟ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಗಾಯಗೊಂಡು ಬಳಿಕ ಯಾವುದೇ ಸರಣಿ ಆಡಿಲ್ಲ. ಇದೇ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಕಪ್​ ಮೂಲಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಲಿದ್ದಾರೆ.

Continue Reading

ಕ್ರೀಡೆ

Devon Thomas: ಟಿ20 ವಿಶ್ವಕಪ್​ಗೂ ಮುನ್ನ ವಿಂಡೀಸ್​ ಬ್ಯಾಟರ್​ಗೆ 5 ವರ್ಷ ನಿಷೇಧ ಹೇರಿದ ಐಸಿಸಿ

Devon Thomas: ವಿಂಡೀಸ್​ ಪರ 2009 ರಿಂದ 2022 ರವರೆಗೆ ಮೂರು ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಥಾಮಸ್ ಒಟ್ಟು 34(1 ಟೆಸ್ಟ್​, 21 ಏಕದಿನ, 12 ಟಿ20) ಪಂದ್ಯಗಳನ್ನು ಆಡಿ 320 ರನ್​ ಗಳಿಸಿದ್ದಾರೆ. 2022ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧ ಕೊನೆಯ ಬಾರಿ ಟೆಸ್ಟ್​ ಮತ್ತು ಏಕದಿನ ಪಂದ್ಯಗಳನ್ನಾಡಿದ್ದರು.

VISTARANEWS.COM


on

Devon Thomas
Koo

ದುಬೈ: ವೆಸ್ಟ್​ ಇಂಡೀಸ್​(West Indies) ತಂಡದ ಡೆವೊನ್ ಥಾಮಸ್(Devon Thomas) ಅವರನ್ನು ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ಭ್ರಷ್ಟಾಚಾರ ವಿರೋಧಿ ನಿಯಮಗಳ ಏಳು ಉಲ್ಲಂಘನೆಗಳನ್ನು ಒಪ್ಪಿಕೊಂಡ ಬಳಿಕ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ICC) ಈ ನಿರ್ಧಾರ ಕೈಗೊಂಡಿದೆ. ಈ ಶಿಕ್ಷೆಯು ಒಂದು ವರ್ಷ ಪೂರ್ವಾನ್ವಯವಾಗಿದೆ ಎಂದು ಪರಿಗಣಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.

ವಿಂಡೀಸ್​ ಪರ 2009 ರಿಂದ 2022 ರವರೆಗೆ ಮೂರು ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಥಾಮಸ್ ಒಟ್ಟು 34(1 ಟೆಸ್ಟ್​, 21 ಏಕದಿನ, 12 ಟಿ20) ಪಂದ್ಯಗಳನ್ನು ಆಡಿ 320 ರನ್​ ಗಳಿಸಿದ್ದಾರೆ. 2022ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧ ಕೊನೆಯ ಬಾರಿ ಟೆಸ್ಟ್​ ಮತ್ತು ಏಕದಿನ ಪಂದ್ಯಗಳನ್ನಾಡಿದ್ದರು.

34 ವರ್ಷದ ಥಾಮಸ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಲಂಕಾ ಪ್ರೀಮಿಯರ್ ಲೀಗ್ ಮತ್ತು ಅಬುಧಾಬಿ ಟಿ10 ಎಂಬ ಮೂರು ಪ್ರತ್ಯೇಕ ಪಂದ್ಯಾವಳಿಗಳಲ್ಲಿ ಅಪರಾಧಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಶ್ರೀಲಂಕಾ ಮೂಲದ ಪಂದ್ಯಾವಳಿಯಲ್ಲಿ ಮ್ಯಾಚ್-ಫಿಕ್ಸಿಂಗ್ ಯತ್ನಗಳಲ್ಲಿ ಭಾಗಿಯಾಗಲು ಸಂಚು ರೂಪಿಸಿದ್ದಕ್ಕಾಗಿ ತಾನು ತಪ್ಪಿತಸ್ಥನೆಂದು ಒಪ್ಪಿಕೊಂಡಿರುವುದು ತಿಳಿದುಬಂದಿದೆ.

ಸ್ಯಾಮುಯೆಲ್ಸ್​ಗೆ 6 ವರ್ಷ ನಿಷೇಧ

ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವೆಸ್ಟ್ ಇಂಡೀಸ್​ ತಂಡದ ಮಾಜಿ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್(Marlon Samuels) ಅವರನ್ನು ಆರು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಕಳೆದ ವರ್ಷ ನಿಷೇಧಿಸಿತ್ತು.

2016ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ಸ್ಯಾಮುಯೆಲ್ಸ್ ಪ್ರಧಾನ ಪಾತ್ರವಹಿಸಿದ್ದರು. ಬೌಲಿಂಗ್ ಮತ್ತು ಬ್ಯಾಟಿಂಗ್​ ಸಾಹಸದಿಂದ ವಿಂಡೀಸ್​ ಕಪ್​ ಗೆದ್ದಿತ್ತು. ಇದೀಗ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಅವರನ್ನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ಸ್ಯಾಮುಯೆಲ್ಸ್ ವಿರುದ್ಧ ಸೆಪ್ಟೆಂಬರ್ 2021 ರಲ್ಲಿ ಒಟ್ಟು ನಾಲ್ಕು ಆರೋಪಗಳನ್ನು ಹೊರಿಸಲಾಗಿತ್ತು. ಈ ವರ್ಷದ ಆಗಸ್ಟ್​ನಲ್ಲಿ ಅಪರಾಧಗಳಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದಿದೆ. ಹೀಗಾಗಿ ಅವರಿಗೆ 6 ವರ್ಷಗಳ ಕಾಲ ಕ್ರಿಕೆಟ್​ ನಿಷೇಧ ಹೇರಲಾಗಿತ್ತು.

ಇದನ್ನೂ ಓದಿ IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

2020ರಲ್ಲಿ ಸ್ಯಾಮುಯೆಲ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ನಿವೃತ್ತಿ ಘೋಷಿಸಿದ ಬಳಿಕ ಅವರು ಬೇರೆ ದೇಶಗಳಲ್ಲಿ ನಡೆಯುವ ಲೀಗ್​ ಕ್ರಿಕೆಟ್​ಗಳಲ್ಲಿ ಆಟ ಮುಂದುವರಿಸಿದ್ದರು. 43 ವರ್ಷದ ಸ್ಯಾಮುಯೆಲ್ಸ್ ಅವರು 11,000 ಅಂತಾರಾಷ್ಟ್ರೀಯ ರನ್​ಗಳನ್ನು ಗಳಿಸಿದ್ದಾರೆ. ವಿಂಡೀಸ್​ ಪರ 207 ಏಕದಿನ ಪಂದ್ಯಗಳನ್ನು ಆಡಿದ ಅವರು 75.12 ಸ್ಟ್ರೈಕ್​ರೇಟ್​ನಲ್ಲಿ 5606 ರನ್​ ಬಾರಿಸಿದ್ದಾರೆ. ಇದರಲ್ಲಿ 10 ಶತಕ ಮತ್ತು 30 ಅಧರ್ಶತಕ ಒಳಗೊಂಡಿದೆ. 133 ರನ್​ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 89 ವಿಕೆಟ್​ ಕೂಡ ಪಡೆದಿದ್ದಾರೆ. ಇನ್ನು 71 ಟೆಸ್ಟ್​ ಪಂದ್ಯಗಳಿಂದ 3917, ರನ್​ 7 ಶತಕ, 1 ದ್ವಿಶತಕ ಮತ್ತು 24 ಅರ್ಧಶತಕ ಬಾರಿಸಿದ್ದಾರೆ. 41 ವಿಕೆಟ್​ ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ 67 ಪಂದ್ಯ ಆಡಿ 1611 ರನ್​ ಮತ್ತು 22 ವಿಕೆಟ್​ ಉರುಳಿಸಿದ್ದಾರೆ.

Continue Reading

ಕ್ರೀಡೆ

MS Dhoni: ಈಡೇರಿದ ಶತಾಯುಷಿ ಅಭಿಮಾನಿಯ ಆಸೆ; ಧೋನಿ ಭೇಟಿಯಾಗಿ ವಿಶೇಷ ಉಡುಗೊರೆ ಪಡೆದ ರಾಮದಾಸ್

MS Dhoni: ಧೋನಿಯ(MS Dhoni) ಅಪಟ್ಟ ಅಭಿಮಾನಿಯಾಗಿರುವ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಕೊನೆಗೂ ತಮ್ಮ ಬಯಕೆಯಂತೆ ಧೋನಿ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಧೋನಿ ಈ ಶತಾಯುಷಿ ಅಭಿಮಾನಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

VISTARANEWS.COM


on

MS Dhoni
Koo

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಹಾಗೂ ಮಹೇಂದ್ರ ಸಿಂಗ್​ ಧೋನಿಯ(MS Dhoni) ಅಪಟ್ಟ ಅಭಿಮಾನಿಯಾಗಿರುವ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಕೊನೆಗೂ ತಮ್ಮ ಬಯಕೆಯಂತೆ ಧೋನಿ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಧೋನಿ ಈ ಶತಾಯುಷಿ ಅಭಿಮಾನಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಕೆಲವು ದಿನಗಳ ಹಿಂದೆ ಎಸ್ ರಾಮದಾಸ್ ಅವರು ಮಗನ ಬಳಿ ಮಾತನಾಡುವ ವೇಳೆ, ಚೆನ್ನೈ ಸೂಪರ್ ಕಿಂಗ್ಸ್​ನ ಪಂದ್ಯ ಮತ್ತು ಧೋನಿಯನ್ನು ನೋಡಲು ರಾಜಧಾನಿ ದೆಹಲಿಯವರೆಗೂ ನಡೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದ್ದರು. ಧೋನಿಯನ್ನು ಮತ್ತು ಚೆನ್ನೈ ಪಂದ್ಯವನ್ನು ನೋಡುವ ಅಪ್ಪನ ಈ ಬಯಕೆಯನ್ನು ಈಡೇರಿಸುವುದಾಗಿ ಮಗ ಮಾತು ಕೊಟ್ಟಿದ್ದರು. ಚೆನ್ನೈನಲ್ಲಿ ನಡೆಯುವ ಪಂದ್ಯದ ಟಿಕೆಟ್​ ಖರೀದಿಸಿ ಪಂದ್ಯ ತೋರಿಸುತ್ತೇನೆ ಎಂದು ಹೇಳಿದ್ದರು. ಕೊಟ್ಟ ಮಾತಿನಂತೆ ಮಗ ಅಪ್ಪನಿಗೆ ಚೆಪಾಕ್​ನಲ್ಲಿ ನಡೆದ ಚೆನ್ನೈ ಮತ್ತು ಪಂಜಾಬ್​ ವಿರುದ್ಧದ ಪಂದ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ.

ಪಂದ್ಯ ಮುಕ್ತಾಯಕ ಬಳಿಕ ಈ ವಿಶೇಷ ಅಭಿಮಾನೊಯನ್ನು ಧೋನಿ ಡ್ರೆಸ್ಸಿಂಗ್​ ರೋಮ್​ನಲ್ಲಿ ಭೇಟಿಯಾಗಿದ್ದಾರೆ. ಧೋನಿ ತಮ್ಮ ಜೆರ್ಸಿಯಲ್ಲಿ “ನಿಮ್ಮ ಈ ಬೆಂಬಲಕ್ಕೆ ಧನ್ಯವಾದಗಳು ತಾತ” ಎಂದು ಬರೆದು ತಮ್ಮ ಹಸ್ತಾಕ್ಷರ ಹಾಕಿ ಜೆರ್ಸಿಯನ್ನು ರಾಮದಾಸ್​ಗೆ ನೀಡಿದ್ದಾರೆ. ಇದೇ ವೇಳೆ ರಾಮದಾಸ್ ನಿಮ್ಮನ್ನು ನೋಡಿ ತುಂಬಾ ಖಷಿಯಾಯಿತು. ನೀವೊಬ್ಬರು ಗ್ರೇಟ್​ ಕ್ರಿಕೆಟರ್​ ಎಂದು ಹಾರೈಸಿದರು. ರಾಮ್​ದಾಸ್​ ಜತೆ ಅರ ಪತ್ನಿಯೂ ಜತೆಗಿದ್ದರು. ಚೆನ್ನೈ ಫ್ರಾಂಚೈಸಿ ವತಿಯಿಂದ ರಾಮದಾಸ್ 103 ಎಂದು ಬರೆದ ಚೆನ್ನೈ ತಂಡದ ಜೆರ್ಸಿಯನ್ನು ವಿಶೇಷ ಉಡುಗೊರೆಯಾಗಿ ನೀಡಲಾಯಿತು.

ಇದನ್ನೂ ಓದಿ IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

ಬ್ರಿಟಿಷ್ ಮಿಲಿಟರಿಯ ಸೈನ್ಯದ ಭಾಗವಾಗಿದ್ದ ರಾಮದಾಸ್ ಕ್ರಿಕೆಟ್ ಆಡಲು ಹೆದರುತ್ತಿದ್ದರಂತೆ. ಆದರೆ ಸಿಎಸ್‌ಕೆ ಜರ್ಸಿ ಧರಿಸಿ ಟಿವಿ ಮುಂದೆ ಕುಳಿತು ಐಪಿಎಲ್ ಆಟವನ್ನು ನೋಡಲು ಇಷ್ಟಪಡುತ್ತೇನೆ. ಒಮ್ಮೆಯಾದರೂ ಧೋನಿಯನ್ನು ಭೇಟಿಯಾಗಬೇಕು ಎಂದು ಹೇಳಿದ್ದ ವಿಡಿಯೊವನ್ನು ಕೂಡ ಚೆನ್ನೈ ಫ್ರಾಂಚೈಸಿ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿತ್ತು.

ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

Continue Reading
Advertisement
Bengaluru Rains
ಮಳೆ6 mins ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Smrithi Irani
ರಾಜಕೀಯ9 mins ago

Smirthi Irani: ಅಮೇಥಿಯಲ್ಲಿ ಕಾಂಗ್ರೆಸ್‌ ಸೋಲನ್ನು ಒಪ್ಪಿಕೊಂಡಿದೆ; ಸ್ಮೃತಿ ಇರಾನಿ ವ್ಯಂಗ್ಯ

Prajwal Revanna Case Who leaked the pen drive Devaraje Gowda gives evidence to SIT
ಕ್ರೈಂ11 mins ago

Prajwal Revanna Case: ಪೆನ್‌ಡ್ರೈವ್‌ ಲೀಕ್‌ ಮಾಡಿದ್ದು ಯಾರು? ಎಸ್‌ಐಟಿಗೆ ಸಾಕ್ಷಿ ಕೊಟ್ಟ ದೇವರಾಜೇಗೌಡ!

RCB vS GT:
ಕ್ರೀಡೆ15 mins ago

RCB vs GT: ಮಳೆ ಭೀತಿಯ ಮಧ್ಯೆ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ

English Alphabet
ಬೆಂಗಳೂರು20 mins ago

English Alphabet: ಇಂಗ್ಲಿಷ್‌ನಲ್ಲಿ ಹೊಸ ಅಕ್ಷರ ವಿನ್ಯಾಸಕ್ಕಾಗಿ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ ವಿದ್ಯಾರ್ಥಿಗಳ ಪ್ರಯತ್ನ

Crime News
ಕ್ರೈಂ22 mins ago

Crime News: ಪತ್ನಿಯ ಪ್ರಿಯಕರನ ದ್ವೇಷಕ್ಕೆ ಬಲಿಯಾಯ್ತು ಎರಡು ಜೀವ; ಪಾರ್ಸಲ್‌ ಬಾಂಬ್‌ ಸ್ಫೋಟಕ್ಕೆ ಅಪ್ಪ-ಮಗಳು ಸಾವು

Viral News
ವೈರಲ್ ನ್ಯೂಸ್45 mins ago

Viral News: 17 ವರ್ಷದ ಯುವತಿ ಎರಡು ಬಾರಿ ಗರ್ಭಿಣಿ; ಪೋಷಕರು ಸೇರಿ 16 ಜನರ ವಿರುದ್ಧ ಕೇಸ್‌

Gratuity
ದೇಶ55 mins ago

Gratuity: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಗ್ರಾಚ್ಯುಟಿ, ಶಿಕ್ಷಣ ಭತ್ಯೆ ಶೀಘ್ರವೇ 25% ಹೆಚ್ಚಳ!

Prajwal Revanna Case I was raped at gunpoint JDS women leader files complaint against Prajwal
ಹಾಸನ56 mins ago

Prajwal Revanna Case‌: ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್‌? ಎಫ್‌ಐಆರ್‌ನಲ್ಲಿದೆ ಇಂಚಿಂಚು ಡಿಟೇಲ್ಸ್!

icc men's test team rankings
ಕ್ರೀಡೆ1 hour ago

ICC Men’s Test Team Rankings: ಅಗ್ರಸ್ಥಾನದಿಂದ ಕುಸಿತ ಕಂಡ ಭಾರತ; ವಿಶ್ವ ಚಾಂಪಿಯನ್​ ಆಸೀಸ್​ ನಂ.1

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ6 mins ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ11 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ21 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌