Virat kohli and wife anushka Sharma participated in puma event Virat Kohli : ಕಾರ್ಯಕ್ರಮದ ವೇದಿಕೆಯಲ್ಲೇ ಪತ್ನಿ ಅನುಷ್ಕಾ ಜತೆ ವಾಗ್ವಾದ ನಡೆಸಿದ ವಿರಾಟ್​ ಕೊಹ್ಲಿ! - Vistara News

ಕ್ರಿಕೆಟ್

Virat Kohli : ಕಾರ್ಯಕ್ರಮದ ವೇದಿಕೆಯಲ್ಲೇ ಪತ್ನಿ ಅನುಷ್ಕಾ ಜತೆ ವಾಗ್ವಾದ ನಡೆಸಿದ ವಿರಾಟ್​ ಕೊಹ್ಲಿ!

ಪೂಮಾ ಕಂಪನಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರಾಟ್​ ಕೊಹ್ಲಿಯ ಮೈದಾನದಲ್ಲಿನ ವರ್ತನೆಯನ್ನು ಪತ್ನಿ ಅನುಷ್ಕಾ ತೋರಿಸಿಕೊಟ್ಟರು.

VISTARANEWS.COM


on

Virat kohli and wife anushka Sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮೈದಾನದ ಹೊರಗೆ ಹಾಗೂ ಒಳಗೆ ಅಭಿಮಾನಿಗಲ ಪಾಲಿನ ನೆಚ್ಚಿನ ಕ್ರಿಕೆಟಿಗ. ಅವರು ಎಲ್ಲೇ ಇದ್ದರೂ ಟಾಕ್​ ಆಫ್​ ದಿ ಟೌನ್​ ಎನಿಸಿಕೊಳ್ಳುತ್ತಾರೆ. ಅವರು ಕ್ರಿಕೆಟ್​ ಆಡುವಾಗ, ಪತ್ನಿಯೊಂದಿಗೆ ಪ್ರವಾಸದಲ್ಲಿದ್ದಾಗ, ಜಾಹೀರಾತು ಕಾರ್ಯಕ್ರಮಗಳಲ್ಲಿದ್ದಾಗ ಅವರಾಡುವ ಪ್ರತಿಯೊಂದು ಮಾತುಗಳಿಗೂ ಅಭಿಮಾನಿಗಳು ತಲೆದೂಗುತ್ತಾರೆ. ಇದೇ ಕಾರಣಕ್ಕೆ ವಿರಾಟ್​ ಕೊಹ್ಲಿ ಏಷ್ಯಾದಲ್ಲಿಯೇ ಅತಿ ಹೆಚ್ಚು ಇನ್​ಸ್ಟಾಗ್ರಾಮ್​ ಫಾಲೋಯರ್​ಗಳನ್ನು ಹೊಂದಿರುವ ಆಟಗಾರ ಎನಿಸಿದ್ದು. ಕೆಲವು ದಿನಗಳ ಹಿಂದೆ ಅವರ ಪಾಲೋಯರ್​ಗಳ ಸಂಖ್ಯೆ 25 ಕೋಟಿ ದಾಟಿದೆ. ಈ ಮೂಲಕ ಇಷ್ಟೊಂದು ಅಭಿಮಾನಿಗಳನ್ನು ಹೊಂದಿರುವ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವೆಲ್ಲದರ ನಡುವೆ ವಿರಾಟ್​ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರು ಪೂಮಾ ಕಂಪನಿಯ ಕಾರ್ಯಕ್ರಮದಲ್ಲಿ ಪರಸ್ಪರ ತಮಾಷೆಗಾಗಿ ಜಗಳವಾಡಿದ್ದು ಸುದ್ದಿಯಾಗಿದೆ. ಈ ವಿಡಿಯೊ ಎಲ್ಲೆಡೆ ವೈರಲ್​ ಆಗಿದೆ.

ಸ್ಟಾರ್ ದಂಪತಿ ಕಳೆದ ತಿಂಗಳು ಪೂಮಾದ ‘ಲೆಟ್ ಥೆರ್ ಬಿ ಸ್ಪೋರ್ಟ್ಸ್’ ಅಭಿಯಾನದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ತಮ್ಮ ಅಭಿಮಾನಿಗಳೊಂದಿಗೆ ಚಿಟ್​ಚಾಟ್​ ನಡೆಸಿದರು. ಕೆಲವೊಂದು ವಿನೋದಗಳಲ್ಲೂ ಪಾಲ್ಗೊಂಡರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಅಭಿಮಾನಿಗಳು ಅವುಗಳನ್ನು ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದಾರೆ. ವೀಡಿಯೊದಲ್ಲಿ ಅನುಷ್ಕಾ ಶರ್ಮಾ ಅವರು ವಿರಾಟ್​ ಕೊಹ್ಲಿ ಮೈದಾನದಲ್ಲಿ ಯಾವ ರೀತಿ ಆಕ್ರಮಣಕಾರಿ ಭಾವ ತೋರುತ್ತಾರೆ ಎಂದು ಗೇಲಿ ಮಾಡಿದ್ದಾರೆ. ವಿರಾಟ್​ ಕೊಹ್ಲಿ ಎದುರಾಳಿ ತಂಡದ ವಿಕೆಟ್ ಪತನಗೊಂಡಾಗ ಬೌಲರ್​ಗಿಂತ ಹೆಚ್ಚು ಸಂಭ್ರಮಿಸುತ್ತಾರೆ ಎಂಬುದಾಗಿಯೂ ಅನುಷ್ಕಾ ಹೇಳುತ್ತಾರೆ.

ಏಪ್ರಿಲ್ 23, 2023 ರಂದು ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂಥ ಸಂದರ್ಭವನ್ನು ವಿರಾಟ್​ ಕೊಹ್ಲಿ ಪಂದ್ಯದ ನಡುವೆ ಸ್ಲೆಜಿಂಗ್ ಮಾಡಲೂ ವಿರಾಟ್​ ಕೊಹ್ಲಿ ಯಾವ ರೀತಿ ಬಳಸುತ್ತಾರೆ ಎಂಬುದನ್ನೂ ಅನುಷ್ಕಾ ಶರ್ಮಾ ತೋರಿಸಿದ್ದಾರೆ.

“ಆಜ್ ತೋ ರನ್ ಬನಾ ಲೇ ಕೊಹ್ಲಿ (ಇಂದು ಏಪ್ರಿಲ್ 24, ಕನಿಷ್ಠ ಅಷ್ಟಾದೂ ರನ್ ಗಳಿಸು ಕೊಹ್ಲಿ) ಎಂದು ಅನುಷ್ಕಾ ಸ್ಲೆಜ್​ ಮಾಡುತ್ತಾರೆ. ಆದರೆ ಇದಕ್ಕೆ ವಿರಾಟ್​ ಕೂಡ ಪ್ರತ್ಯುತ್ತರ ನೀಡುತ್ತಾರೆ. ಕಳೆದ ಮೂರು ತಿಂಗಳಿಂದ ಆಡಿರುವ ಪಂದ್ಯಗಳಿಗಿಂತ ಹೆಚ್ಚು ನಾನು ಆಡಿದ್ದೇನೆ ಎಂದು ಹೇಳುತ್ತಾರೆ. (ಅನುಷ್ಕಾ ಶರ್ಮಾ ಅವರು ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್​ ಜೂಲನ್​ ಗೋಸ್ವಾಮಿ ಅವರ ಜೀವನ ಕತೆಯನ್ನು ಆಧರಿಸಿದ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಆಡಿದ್ದೇನೆ ಎಂಬುದೇ ವಿರಾಟ್​ ಕೊಹ್ಲಿಯ ಮಾತಿನ ಅರ್ಥ.

ಇದನ್ನೂ ಓದಿ : IPL 2023: ತಂಡವನ್ನು ಸೋಲಿಸಿದರೂ ಎದುರಾಳಿ ತಂಡದ ಆಟಗಾರನಿಗೆ ಜೆರ್ಸಿ ನೀಡಿ ಗೌರವಿಸಿದ ವಿರಾಟ್​ ಕೊಹ್ಲಿ

ವಿರಾಟ್ ಕೊಹ್ಲಿ ಹಾಲಿ ಐಪಿಎಲ್​ ಋತುವಿನ ಒಂದೆರಡು ವೈಫಲ್ಯಗಳನ್ನು ಕಂಡಿದ್ದರೂ, ಉಳಿದಂತೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಟಿ20 ಮಾದರಿಯ ಅದ್ಭುತ ಫಾರ್ಮ್ನಲ್ಲಿದ್ದಾರೆ ಅವರು. ಐಪಿಎಲ್​ನ 14 ಇನಿಂಗ್ಸ್​​ಗಳಲ್ಲಿ 53ರ ಸರಾಸರಿಯಂತೆ ಮತ್ತು 140 ಸ್ಟ್ರೈಕ್​ರೇಟ್​ನಲ್ಲಿ 639 ರನ್ ಗಳಿಸಿದ್ದಾರೆ. ಅವರು ಈ ಋತುವಿನ ಲೀಗ್​ನ ಹಂತದಲ್ಲಿ ಗರಿಷ್ಠ ರನ್​ ಗಳಿಸಿದವರ ಪಟ್ಟಿಯಲ್ಲಿ ಮೂರನೆಯವರು. ಆರ್​ಸಿಬಿ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಫಾಫ್ ಡು ಪ್ಲೆಸಿಸ್ ಮೊದಲ ಸ್ಥಾನ ಪಡೆದಿದ್ದಾರೆ.

ಕೊಹ್ಲಿಯ ಅತ್ಯುತ್ತಮ ಫಾರ್ಮ್ ಹೊರತಾಗಿಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್​ ಪ್ರವೇಶಿಸಲು ವಿಫಲವಾಯಿತು. ಆಡಿದ ಹದಿನಾಲ್ಕು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಏಳರಲ್ಲಿ ಸೋತು ಹದಿನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ಜೂನ್ 7 ರಂದು ಲಂಡನ್​ನ ಓವಲ್​ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​​ಗೆ ಅವರೀಗ ತಯಾರಿ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virat- Anushka: ಕೊಹ್ಲಿ ಮಾಡಿದ ರನೌಟ್​ ಕಂಡು ಆಶ್ಚರ್ಯ ಚಕಿತರಾದ ಅನುಷ್ಕಾ

Virat- Anushka: ಎರಡನೇ ಮಗುವಾದ ಬಳಿಕ ಅನುಷ್ಕಾ ಇದುವರೆಗೂ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ವಿರಾಟ್​ ಕೊಹ್ಲಿಗೆ(Virat Kohli) ಸ್ಫೂರ್ತಿ ನೀಡಲೆಂದೇ ಐಪಿಎಲ್​ನ ದ್ವಿತಿಯಾರ್ಧದ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರು ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಪತಿಗೆ ಚಿಯರ್ ಅಪ್ ಮಾಡಿದ್ದಾರೆ.

VISTARANEWS.COM


on

Virat- Anushka
Koo

ಬೆಂಗಳೂರು: ಶನಿವಾರ ನಡೆದ ಗುಜರಾತ್​ ಟೈಟಾನ್ಸ್​ ವಿರುದ್ಧದ ಪಂದ್ಯದ ಆರ್​ಸಿಬಿ 4 ವಿಕೆಟ್​ ಅಂತರದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat- Anushka) ಅವರು ಎದುರಾಳಿ ತಂಡದ ಆಟಗಾರ ಶಾರೂಖ್​ ಖಾನ್​ ಅವರನ್ನು ಮಿಂಚಿನ ಎಸೆತದ ಮೂಲಕ ರನೌಟ್​ ಮಾಡಿ ಗಮನಸೆಳೆದರು. ಬುಲೆಟ್​ ಚಿಮ್ಮಿದ ವೇಗದಲ್ಲಿ ರನೌಟ್​ ಮಾಡಿದ್ದನ್ನು ಕಂಡು ಪತ್ನಿ ಅನುಷ್ಕಾ(Anushka Sharma) ದಂಗಾಗಿದ್ದಾರೆ. ಇದರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video)​ ಆಗಿದೆ.


ಆರಂಭಿಕ ಆಘಾತ ಕಂಡಿದ್ದ ಗುಜರಾತ್​ಗೆ ಶಾರೂಖ್​ ಖಾನ್​ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್​ ಮೂಲಕ ಆಸರೆಯಾಗಿದ್ದರು. 24 ಎಸೆತಗಳಿಂದ 37 ರನ್​ ಗಳಿಸಿ ನಾನ್​ಸ್ಟ್ರೈಕ್​ನಲ್ಲಿದ್ದ ಶಾರೂಖ್ ಇಲ್ಲದ ರನ್​ ಕದಿಯಲು ಯತ್ನಿಸಿದ ವೇಳೆ ಚಿರತೆ ವೇಗದಲ್ಲಿ ಫೀಲ್ಡಿಂಗ್​ ನಡೆಸಿ ಕೊಹ್ಲಿ ಚೆಂಡನ್ನು ನೇರವಾಗಿ ವಿಕೆಟ್​ಗೆ ಎಸೆದು ರನೌಟ್​ ಮಾಡಿದರು. ಒಂದೊಮ್ಮೆ ಕೊಹ್ಲಿ ಈ ರನೌಟ್​ ಮಾಡದಿದ್ದರೆ ಶಾರೂಖ್​ ಆರ್​ಸಿಬಿಗೆ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆಯೂ ಇತ್ತು.

ಎರಡನೇ ಮಗುವಾದ ಬಳಿಕ ಅನುಷ್ಕಾ ಇದುವರೆಗೂ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ವಿರಾಟ್​ ಕೊಹ್ಲಿಗೆ(Virat Kohli) ಸ್ಫೂರ್ತಿ ನೀಡಲೆಂದೇ ಐಪಿಎಲ್​ನ ದ್ವಿತಿಯಾರ್ಧದ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರು ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಪತಿಗೆ ಚಿಯರ್ ಅಪ್ ಮಾಡಿದ್ದಾರೆ. ಹಿಂದೆ ಅನೇಕ ಬಾರಿ ಅನುಷ್ಕಾ ಮೈದಾನದಲ್ಲಿದ್ದು, ಪತಿ ಕೊಹ್ಲಿಗೆ ಚಿಯರ್ ಅಪ್ ಮಾಡಿದ್ದರು. ಕಳೆದ ಬಾರಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯೂ ಬಹುತೇಖ ಪಂದ್ಯಗಳಲ್ಲಿ ಅನುಷ್ಕಾ ಅವರು ಕೊಹ್ಲಿಗೆ ಹುರಿದುಂಬಿಸಿದ ಫೋಟೊ ಮತ್ತು ವಿಡಿಯೊಗಳು ವೈರಲ್​ ಆಗಿತ್ತು.

ಇದನ್ನೂ ಓದಿ IPL 2024: ಇಂದು ಐಪಿಎಲ್​ನಲ್ಲಿ ಡಬಲ್​ ಹೆಡರ್​ ಪಂದ್ಯ; ಮೊದಲ ಪಂದ್ಯ ಯಾವುದು?

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 27 ಎಸೆತಗಳಿಂದ 4 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 42 ರನ್​ ಬಾರಿಸಿದರು. ಇದೇ ವೇಳೆ ಮತ್ತೆ ಆರೆಂಜ್​ ಕ್ಯಾಪ್​ ತನ್ನದಾಗಿಸಿಕೊಂಡರು. ಸದ್ಯ ಕೊಹ್ಲಿ 542 ರನ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ನಡೆಯುವ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಋತುರಾಜ್​ ಗಾಯಕ್ವಾಡ್(509)​ 34 ರನ್​ ಬಾರಿಸಿದರೆ ಈ ಕ್ಯಾಪ್ ಗಾಯಕ್ವಾಡ್ ಪಾಲಾಗಲಿದೆ.

​ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.

Continue Reading

ಕ್ರೀಡೆ

IPL 2024: ಇಂದು ಐಪಿಎಲ್​ನಲ್ಲಿ ಡಬಲ್​ ಹೆಡರ್​ ಪಂದ್ಯ; ಮೊದಲ ಪಂದ್ಯ ಯಾವುದು?

IPL 2024: ಪಂಜಾಬ್​-ಚೆನ್ನೈ(PBKS vs CSK) ಮೊದಲ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೆಣಸಾಟಕ್ಕೆ ಇಳಿಯಲಿವೆ. ಇದು ಈ ಆವೃತ್ತಿಯಲ್ಲಿ ಇಲ್ಲಿ ನಡೆಯುವ ಮೊದಲ ಐಪಿಎಲ್(IPL 2024)​ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲೇ 7 ವಿಕೆಟ್​ ಸೋಲಿಗೆ ಪಂಜಾಬ್​ಗೆ ಅವರ ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವುದು ಹಾಲಿ ಚಾಂಪಿಯನ್‌ ಗುರಿಯಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ಭಾನುವಾರದ ಐಪಿಎಲ್​ನಲ್ಲಿ(IPL 2024) ಡಬಲ್​ ಹೆಡರ್​ ಪಂದ್ಯಗಳು ನಡೆಯಲಿವೆ. ಪಂಜಾಬ್​ ಕಿಂಗ್ಸ್(Punjab Kings)​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಹಗಲು ಪಂದ್ಯದಲ್ಲಿ ಮುಖಾಮುಖಿಯಾದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ಮತ್ತು ಕೆಕೆಆರ್(Kolkata Knight Riders)​ ಸೆಣಸಾಟ ನಡೆಸಲಿವೆ. ಎಲ್ಲ ನಾಲ್ಕು ತಂಡಗಳಿಗೂ ಪ್ಲೇ ಆಫ್​ ಪ್ರವೇಶದ ನಿಟ್ಟಿನಲ್ಲಿ ಇದು ಮಹತ್ವದ ಪಂದ್ಯವಾಗಿದೆ. ಹೀಗಾಗಿ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಅಧಿಕವಾಗಿದೆ.

ಬ್ಯಾಟಲ್​ ಆಫ್​ ದಿ ಕಿಂಗ್ಸ್​ಗೆ ಚೆನ್ನೈ-ಪಂಜಾಬ್​ ರೆಡಿ


ಪಂಜಾಬ್​-ಚೆನ್ನೈ(PBKS vs CSK) ಮೊದಲ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೆಣಸಾಟಕ್ಕೆ ಇಳಿಯಲಿವೆ. ಇದು ಈ ಆವೃತ್ತಿಯಲ್ಲಿ ಇಲ್ಲಿ ನಡೆಯುವ ಮೊದಲ ಐಪಿಎಲ್(IPL 2024)​ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲೇ 7 ವಿಕೆಟ್​ ಸೋಲಿಗೆ ಪಂಜಾಬ್​ಗೆ ಅವರ ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವುದು ಹಾಲಿ ಚಾಂಪಿಯನ್‌ ಗುರಿಯಾಗಿದೆ.

ಚೆನ್ನೈ(Chennai Super Kings) ತಂಡ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನದ ಮೂಲಕ ಸತತ ಗೆಲುವು ಸಾಧಿಸಿತ್ತು. ಆದರೆ ಈಗ ಹಿಂದಿನ ಲಯ ಕಳೆದುಕೊಂಡಿದ್ದು ತವರಿನಲ್ಲೇ ಸೋಲಿನ ಅವಮಾನಕ್ಕೆ ಸಿಲುಕಿದೆ. ಬಾಂಗ್ಲಾ ಎಡಗೈ ವೇಗಿ ಮುಸ್ತಫಿಜುರ್​ ರೆಹಮಾನ್​ ಕೂಡ ಟಿ20 ವಿಶ್ವಕಪ್​ಗೆ ಸಿದ್ಧತೆ ನಡೆಸುವ ಸಲುವಾಗಿ ತಂಡ ತೊರೆದಿದ್ದಾರೆ. ಶಾರ್ದೂಲ್​ ಠಾಕೂರ್​ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ದೀಪಕ್ ಚಹಾರ್, ರಿಚರ್ಡ್ ಗ್ಲೀಸನ್ ಕೂಡ ದುಬಾರಿಯಾಗುತ್ತಿದ್ದಾರೆ. ಜಡೇಜಾ ಕೂಡ ಸ್ಪಿನ್​ ಮಾಡುತಿಲ್ಲ. ಸದ್ಯಕ್ಕೆ ಪತಿರಾಣ ಮಾತ್ರ ಘಾತಕ ಬೌಲಿಂಗ್​ ನಡೆಸುತ್ತಿದ್ದಾರೆ.

ಇದನ್ನೂ ಓದಿ IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ಪಂಜಾಬ್​(Punjab Kings) ತಂಡದಲ್ಲಿ ಅನುಭವಿಗಳಾದ ಕಗಿಸೊ ರಬಾಡ, ಅರ್ಶ್​ದೀಪ್​ ಸಿಂಗ್​, ಹರ್ಷಲ್​ ಪಟೇಲ್ ಅವರಂತಹ ಘಾತಕ ಬೌಲರ್​​ ಇದ್ದರೂ ಕೂಡ ಇವರಿಂದ ಇದುವರೆಗೆ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡುಬಂದಿಲ್ಲ.​ ಪಂಜಾಬ್​ ಗೆದ್ದಿರುವುದು ಬ್ಯಾಟಿಂಗ್​ ಬಲದಿಂದ. ಹೀಗಾಗಿ ಈ ಪಂದ್ಯದಲ್ಲಿಯೂ ಪಂಜಾಬ್​ ಬ್ಯಾಟಿಂಗ್​ ಬಲವನ್ನೇ ನಂಬಿದೆ. ಕಳೆದೊಂದು ವರ್ಷದಿಂದ ತೀವ್ರ ಬ್ಯಾಟಿಂಗ್​ ಬರ ಎದುರಿಸಿದ್ದ ಜಾನಿ ಬೇರ್​ಸ್ಟೋ ಪ್ರಚಂಡ ಫಾರ್ಮ್​ಗೆ ಮರಳಿದ್ದಾರೆ. ಇದು ಪಂಜಾಬ್​ಗೆ ಆನೆ ಬಲ ಬಂದಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್​ ಸಿಂಗ್​ ಮತ್ತು ಅಶುತೋಷ್ ಶರ್ಮಾ ಸಿಡಿಲಬ್ಬರ ಬ್ಯಾಟಿಂಗ್​ ಮೂಲಕ ತಂಡಕ್ಕೆ ನೆರವಾಗಬಲ್ಲರು. ಒಟ್ಟಾರೆಯಾಗಿ ಪಂಜಾಬ್​ಗೆ ಬ್ಯಾಟಿಂಗ್​ಗೇ ಮುಖ್ಯ ಬಲವಾಗಿದೆ.

ಲಕ್ನೋ ಸವಾಲು ಗೆದ್ದೀತೇ ಕೆಕೆಆರ್​


ದಿನದ ಮತ್ತೊಂದು ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಕೆಕೆಆರ್​ ಮುಖಾಮುಖಿಯಾಗಲಿವೆ. ರಾಹುಲ್​ ಪಡೆಗೆ ಇದು ತವರಿನ ಪಂದ್ಯವಾಗಿದೆ. ಸದ್ಯ ಅಂಕಪಟ್ಟಿಯಲ್ಲಿ ಕೆಕೆಆರ್​ 2ನೇ ಸ್ಥಾನಿಯಾಗಿದ್ದರೆ, ಲಕ್ನೋ 3ನೇ ಸ್ಥಾನದಲ್ಲಿದೆ. ಶರವೇಗದ ಎಸೆತಗಾರ ಮಾಯಾಂಕ್​ ಯಾದವ್​ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಲಕ್ನೋ ಬೌಲಿಂಗ್​ ವಿಭಾಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೆಕೆಆರ್​ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ.

Continue Reading

ಕ್ರೀಡೆ

Virat Kohli: ಟಿ20ಯಲ್ಲಿ ದಾಖಲೆ ಬರೆದ ಕೊಹ್ಲಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

Virat Kohli: ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 27 ಎಸೆತಗಳಿಂದ 4 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 42 ರನ್​ ಬಾರಿಸಿದರು. ಇದೇ ವೇಳೆ ಮತ್ತೆ ಆರೆಂಜ್​ ಕ್ಯಾಪ್​ ತನ್ನದಾಗಿಸಿಕೊಂಡರು. ಸದ್ಯ ಕೊಹ್ಲಿ 542 ರನ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ನಡೆಯುವ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಋತುರಾಜ್​ ಗಾಯಕ್ವಾಡ್(509)​ 34 ರನ್​ ಬಾರಿಸಿದರೆ ಈ ಕ್ಯಾಪ್ ಗಾಯಕ್ವಾಡ್ ಪಾಲಾಗಲಿದೆ.

VISTARANEWS.COM


on

Virat Kohli
Koo

ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ(Royal Challengers Bengaluru) ಸ್ಟಾರ್​ ಆಟಗಾರ, ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ದಾಖಲೆಯೊಂದನ್ನು ಬರೆದಿದ್ದಾರೆ. 6 ರನ್​ ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದ ಮೊದಲ ಭಾರತೀಯ ಎನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಮೋಹಿತ್​ ಶರ್ಮ ಎಸೆದ ಇನಿಂಗ್ಸ್​ನ ಮೊದಲ ಓವರ್​ನ ದ್ವಿತೀಯ ಎಸೆತವನ್ನು ಸಿಕ್ಸರ್​ಗೆ ಬಡಿದಟ್ಟುವ ಮೂಲಕ ​ ವಿರಾಟ್​ ಕೊಹ್ಲಿ ರನ್​ ಖಾತೆ ತೆರೆದರು. ಜತೆಗೆ ಈ ರನ್​ ಮೂಲಕ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದರು. ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ವಿಂಡೀಸ್​ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 14562 ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಶೊಯೆಬ್ ಮಲಿಕ್ (13360) ದ್ವಿತೀಯ, ವೆಸ್ಟ್ ಇಂಡೀಸ್​ನ ಕೀರನ್ ಪೊಲಾರ್ಡ್(12900) ತೃತೀಯ ಸ್ಥಾನದಲ್ಲಿದ್ದಾರೆ. ಕೊಹ್ಲಿ 12536* ರನ್​ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 370 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 134.00 ಸ್ಟ್ರೈಕ್​ ರೇಟ್​ನಲ್ಲಿ 12536* ರನ್ ಕಲೆಹಾಕಿದ್ದಾರೆ. ಈ ವೇಳೆ 9 ಶತಕ ಹಾಗೂ 95 ಅರ್ಧಶತಕಗಳನ್ನು ಸಿಡಿಸಿದ್ದಾರೆ. 1122 ಬೌಂಡರಿ ಮತ್ತು 395 ಸಿಕ್ಸರ್​ಗಳು ಇವರ ಬ್ಯಾಟ್​ನಿಂದ ಹೊರಹೊಮ್ಮಿದೆ.

ಇದನ್ನೂ ಓದಿ IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 27 ಎಸೆತಗಳಿಂದ 4 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 42 ರನ್​ ಬಾರಿಸಿದರು. ಇದೇ ವೇಳೆ ಮತ್ತೆ ಆರೆಂಜ್​ ಕ್ಯಾಪ್​ ತನ್ನದಾಗಿಸಿಕೊಂಡರು. ಸದ್ಯ ಕೊಹ್ಲಿ 542 ರನ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ನಡೆಯುವ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಋತುರಾಜ್​ ಗಾಯಕ್ವಾಡ್(509)​ 34 ರನ್​ ಬಾರಿಸಿದರೆ ಈ ಕ್ಯಾಪ್ ಗಾಯಕ್ವಾಡ್ ಪಾಲಾಗಲಿದೆ.

​ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.

Continue Reading

ಕ್ರೀಡೆ

IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

IPL 2024: ಆರ್​ಸಿಬಿ ಮುಂದಿನ ಪಂದ್ಯವನ್ನು ಮೇ 9ರಂದು ಪಂಜಾಬ್​ ಕಿಂಗ್ಸ್​ ವಿರುದ್ಧ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಸೋತರೆ ಆರ್​ಸಿಬಿ ಪ್ಲೇ ಆಫ್​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಜತೆಗೆ ಆ ಬಳಿಕದ 2 ಪಂದ್ಯಗಳು ಕೇವಲ ಔಪಚಾರಿಕ ಪಂದ್ಯವಾಗಲಿದೆ.

VISTARANEWS.COM


on

IPL 2024
Koo

ಬೆಂಗಳೂರು: ಯುದ್ದ ಮುಗಿದ ಬಳಿಕ ಕೋಟೆಯ ಬಾಗಿಲು ಮುಚ್ಚಿದಂತಾಗಿದೆ ಆರ್​ಸಿಬಿಯ(Royal Challengers Bengaluru) ಸದ್ಯದ ಸ್ಥಿತಿ. ಹೌದು, ಆರಂಭಿಕ ಹಂತದಲ್ಲಿ ಸತತವಾಗಿ ಸೋಲು ಕಂಡು ಪ್ಲೇ ಆಫ್​ನ ಕ್ಷೀಣ ಅವಕಾಶ ಇರುವಾಗ ಇದೀಗ ಸತತವಾಗಿ ಗೆಲುವು ಸಾಧಿಸುತ್ತಿದೆ. ಇದುವರೆಗೂ ಕೊನೆಯ(IPL 2024) ಸ್ಥಾನಿಯಾಗಿದ್ದ ಆರ್​ಸಿಬಿ ಹ್ಯಾಟ್ರಿಕ್​ ಗೆಲುವಿನೊಂದಿಗೆ ಇದೀಗ 7ನೇ ಸ್ಥಾನಕ್ಕೇರಿದೆ. ಸದ್ಯಕ್ಕೆ ಆರ್​ಸಿಬಿಯ ಪ್ಲೇ ಆಫ್​ ಬಾಗಿಲು ಇನ್ನೂ ಮುಚ್ಚಿಲ್ಲ. ಇನ್ನೂ ಕೂಡ ಆರ್​ಸಿಬಿಗೆ ಅವಕಾಶವಿದೆ. ತಂಡದ ಪ್ಲೇ ಆಫ್​ ಲೆಕ್ಕಾಚಾರ(RCB Playoffs calculation) ಹೇಗಿದೆ ಎಂಬ ಮಾಹಿತಿ ಇಂತಿದೆ.

ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ಮತ್ತು ಪವಾಡವೊಂದು ನಡೆದರೆ ಆರ್​ಸಿಬಿಗೆ ಪ್ಲೇ ಆಫ್​ ಟಿಕೆಟ್ ಖಚಿತವಾಗಿ​ ಸಿಗಲಿದೆ. ಈಗಾಗಲೇ 11 ಪಂದ್ಯ ಆಡಿದ್ದು, 4 ಪಂದ್ಯ ಗೆದ್ದು, 7 ಪಂದ್ಯದಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 8 ಅಂಕ ಸಂಪಾದಿಸಿ 7ನೇ ಸ್ಥಾನದಲ್ಲಿದೆ. ಆರ್​ಸಿಬಿಗೆ ಇನ್ನು ಮೂರು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಉಳಿದಿರುವ ಈ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ 14 ಅಂಕ ಲಭಿಸಲಿದೆ. ಆದರೂ ಕೂಡ ಪ್ಲೇ ಆಫ್ ಟಿಕೆಟ್​ ಖಚಿತಗೊಳ್ಳುವುದಿಲ್ಲ. ಇದು ಖಚಿತಗೊಳ್ಳಬೇಕಿದ್ದರೆ, ಆರ್​ಸಿಬಿಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಕನಿಷ್ಠ 4ನೇ ಸ್ಥಾನಿಯಾಗಿ ಪ್ಲೇ ಆಫ್ ಗೇರುವ ಸಣ್ಣ ಅವಕಾಶವೊಂದಿದೆ. ಉಳಿದ 3 ಪಂದ್ಯಗಳ ಪೈಕಿ 1 ಪಂದ್ಯವನ್ನು ಆರ್​ಸಿಬಿ ತವರಿನಲ್ಲಿ ಆಡಲಿದೆ. ಇದು ಹಾಲಿ ಚಾಂಪಿಯನ್​ ಚೆನ್ನೈ ವಿರುದ್ಧ.

16 ಅಂಕ ಗಳಿಸಿರುವ ರಾಜಸ್ಥಾನ್​ ತಂಡಕ್ಕೆ ಪ್ಲೇ ಆಫ್​ ಸ್ಥಾನ ಬಹುತೇಕ ಖಚಿತಗೊಂಡಂತಿದೆ. ಅದಲ್ಲದೆ ರಾಜಸ್ಥಾನ್​ಗೆ ಇನ್ನೂ ಕೂಡ 4 ಪಂದ್ಯಗಳು ಬಾಕಿ ಇದೆ. ಇದರಲ್ಲಿ 1 ಪಂದ್ಯ ಗೆದ್ದರೂ ಸಾಕು. ಉಳಿದಿರುವ ಮೂರು ಸ್ಥಾನಗಳಿಗೆ 5 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಕೆಕೆಆರ್​ 14 ಅಂಕ ಪಡೆದು 2ನೇ ಸ್ಥಾನಿಯಾಗಿದೆ. ಕೆಕೆಆರ್​ಗೂ ಇನ್ನು 4 ಪಂದ್ಯ ಬಾಕಿ ಉಳಿದಿವೆ. ಲಕ್ನೋ 12 ಅಂಕದೊಂದಿಗೆ ಮೂರನೇ ಸ್ಥಾನಿಯಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಕೆಕೆಆರ್​ ಮತ್ತು ಲಕ್ನೋ ಮುಖಾಮುಖಿಯಾಗಲಿವೆ. ಇಲ್ಲಿ ಒಂದು ತಂಡಕ್ಕೆ ಸೋಲು ಖಚಿತ. ಲಕ್ನೋ ಗೆದ್ದರೆ ಆರ್​ಸಿಬಿಗೆ ನಷ್ಟವಾಗಲಿದೆ. ಇನ್ನೊಂದು ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್​ ಆಡಲಿವೆ. ಇಲ್ಲಿ ಚೆನ್ನೈ ಗೆದ್ದರೆ 12 ಅಂಕ ಆಗಲಿವೆ. ಹೈದರಾಬಾದ್​ 12 ಅಂಕದೊಂದಿಗೆ ಸದ್ಯ ಮೂರನೇ ಸ್ಥಾನಿಯಾಗಿದೆ. ಹೀಗಾಗಿ ಈ ಎಲ್ಲ 5 ತಂಡಗಳ ಪೈಕಿ ಕನಿಷ್ಠ ಮೂರು ತಂಡಗಳು ಉಳಿದ ಲೀಗ್​ ಪಂದ್ಯಗಳಲ್ಲಿ ಸೋಲು ಕಂಡರೆ, 14 ಅಂಕದ ಗಡಿ ದಾಟಲು ವಿಫಲರಾದರೆ ಆಗ ಆರ್​ಸಿಬಿಗೆ ಪ್ಲೇ ಆಫ್​ ಅವಕಾಶ ಸಿಗಲಿದೆ. ಒಟ್ಟಾರೆ ಆರ್​ಸಿಬಿಗೆ ಗೆಲುವಿನ ಜತೆಗೆ ಅದೃಷ್ಟ ಕೂಡ ಕೈ ಹಿಡಿಯಬೇಕಿದೆ.

ಇದನ್ನೂ ಓದಿ IPL 2024 Points Table: 7ನೇ ಸ್ಥಾನಕ್ಕೇರಿದ ಆರ್​ಸಿಬಿ; ಮುಂಬೈಗೆ ಕೊನೆಯ ಸ್ಥಾನ

ಆರ್​ಸಿಬಿ ಮುಂದಿನ ಪಂದ್ಯವನ್ನು ಮೇ 9ರಂದು ಪಂಜಾಬ್​ ಕಿಂಗ್ಸ್​ ವಿರುದ್ಧ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಸೋತರೆ ಆರ್​ಸಿಬಿ ಪ್ಲೇ ಆಫ್​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಜತೆಗೆ ಆ ಬಳಿಕದ 2 ಪಂದ್ಯಗಳು ಕೇವಲ ಔಪಚಾರಿಕ ಪಂದ್ಯವಾಗಲಿದೆ.

Continue Reading
Advertisement
Gold Rate
ಕರ್ನಾಟಕ11 mins ago

Gold Rate Today: ಯಥಾಸ್ಥಿತಿ ಕಾಪಾಡಿಕೊಂಡ ಚಿನ್ನ- ಬೆಳ್ಳಿಯ ದರ; 22, 24 ಕ್ಯಾರಟ್‌ ದರಗಳು ಇಲ್ಲಿವೆ

Virat- Anushka
ಕ್ರೀಡೆ11 mins ago

Virat- Anushka: ಕೊಹ್ಲಿ ಮಾಡಿದ ರನೌಟ್​ ಕಂಡು ಆಶ್ಚರ್ಯ ಚಕಿತರಾದ ಅನುಷ್ಕಾ

Jyotika Trolled For Claiming Online Private Voting
ಕಾಲಿವುಡ್19 mins ago

Jyotika Trolled: ಆನ್​ಲೈನ್​ ಮೂಲಕ ವೋಟ್ ಮಾಡಿದ್ದಾರಂತೆ ಜ್ಯೋತಿಕಾ! ಟ್ರೋಲ್‌ ಆದ ಸೂರ್ಯ ಪತ್ನಿ!

Prajwal Revanna Case
ಕರ್ನಾಟಕ20 mins ago

Prajwal Revanna Case: ಹಾಸನ ಸಂಸದರ ನಿವಾಸವನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು

murder case In karwar
ಉತ್ತರ ಕನ್ನಡ22 mins ago

Murder case : ಪತಿ ಮೇಲಿನ ಸಿಟ್ಟಿಗೆ ಮೂಕ ಮಗುವನ್ನೇ ಕಾಲುವೆಗೆ ಎಸೆದಳು; ಮೊಸಳೆ ಬಾಯಲ್ಲಿತ್ತು ಮೃತದೇಹ!

Nijjar Killing
ದೇಶ44 mins ago

Nijjar Killing: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಪ್ರಕರಣದ ಮೂವರ ಬಂಧನ; ಭಾರತದ ಪ್ರತಿಕ್ರಿಯೆ ಏನು?

Bhavya Gowda shares her experiences during shooting
ಕಿರುತೆರೆ1 hour ago

Bhavya Gowda: ಡ್ರಿಪ್ಸ್‌ ಹಾಕಿದ್ದರೂ ಶೂಟಿಂಗ್‌ಗೆ ಬರಲೇ ಬೇಕು ಅಂದ್ರು ಎಂದ ʻಗೀತಾ ಧಾರಾವಾಹಿʼ ನಟಿ ಭವ್ಯಾ ಗೌಡ!

IPL 2024
ಕ್ರೀಡೆ1 hour ago

IPL 2024: ಇಂದು ಐಪಿಎಲ್​ನಲ್ಲಿ ಡಬಲ್​ ಹೆಡರ್​ ಪಂದ್ಯ; ಮೊದಲ ಪಂದ್ಯ ಯಾವುದು?

Kangana Ranaut
ರಾಜಕೀಯ2 hours ago

Kangana Ranaut: ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾನೆ ಎಂದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್! ವಿಡಿಯೊ ನೋಡಿ

Virat Kohli
ಕ್ರೀಡೆ2 hours ago

Virat Kohli: ಟಿ20ಯಲ್ಲಿ ದಾಖಲೆ ಬರೆದ ಕೊಹ್ಲಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌