New Parliament Building New 75 Rs How can you get the coin Here are the detailsNew Parliament Building : ಹೊಸ 75 ರೂ. ನಾಣ್ಯವನ್ನು ನೀವು ಹೇಗೆ ಪಡೆಯಬಹುದು? ಇಲ್ಲಿದೆ ಡಿಟೇಲ್ಸ್

ದೇಶ

New Parliament Building : ಹೊಸ 75 ರೂ. ನಾಣ್ಯವನ್ನು ನೀವು ಹೇಗೆ ಪಡೆಯಬಹುದು? ಇಲ್ಲಿದೆ ಡಿಟೇಲ್ಸ್

New Parliament Building ಹೊಸ 75 ರೂ. ನಾಣ್ಯ ಸಾಮಾನ್ಯ ಚಲಾವಣೆಯಲ್ಲಿ ದೊರೆಯುವುದಿಲ್ಲ. ಈ ವಿಶೇಷ ನಾಭ್ಯ ಪಡೆಯುವ ವಿಧಾನದ ವಿವರ ಇಲ್ಲಿದೆ.

VISTARANEWS.COM


on

75 rupees coin
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನೂತನ ಸಂಸತ್‌ ಭವನದ ಉದ್ಘಾಟನೆಯ ಸಂದರ್ಭ ಹಣಕಾಸು ಸಚಿವಾಲಯ 75 ರೂ.ಗಳ ( Rs 75 Commemorative coin) ವಿಶೇಷ ನಾಣ್ಯದ ಬಿಡುಗಡೆಯನ್ನೂ ಘೋಷಿಸಿದೆ. (New Parliament Building) ಇಂಥ ವಿಶೇಷ ಸಂದರ್ಭಗಳಲ್ಲಿ ಸ್ಮರಣಾರ್ಥ ವಿಶೇಷ ನಾಣ್ಯ ಬಿಡುಗಡೆ ಮಾಡುವ ವಾಡಿಕೆ ಹೊಸತಲ್ಲ. ಈ ಹಿಂದೆ ಭಾರತದಲ್ಲಿ ಇಂಥ ಹಲವು ನಾಣ್ಯಗಳನ್ನು ಬಿಡುಗಡೆ ಮಾಡಲಾಗಿತ್ತು.

75 ರೂ. ನಾಣ್ಯದ ವಿವರ:

ನೂತನ 75 ರೂ.ಗಳ ನಾಣ್ಯ 36 ಗ್ರಾಂಗಳಷ್ಟಿದ್ದು, 44 ಮಿಲಿಮೀಟರ್ ವ್ಯಾಸ ಹೊಂದಿದೆ. ಅಂಚಿನಲ್ಲಿ ಉದ್ದಕ್ಕೂ 200 ಸರಪಣಿಗಳ ಮುದ್ರಣವಿರುತ್ತದೆ. ನಾಣ್ಯವು 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ಕ್ವಾಟರ್ನರಿ ಮಿಶ್ರಲೋಹವನ್ನು ಹೊಂದಿದೆ.

ನಾಣ್ಯದ ಒಂದು ಭಾಗದಲ್ಲಿ ರಾಷ್ಟ್ರೀಯ ಲಾಂಛನವಾದ ಅಶೋಕ ಸ್ತಂಭದಲ್ಲಿರುವ ಸಿಂಹಗಳ ಜೊತೆಗೆ ‘ಸತ್ಯಮೇವ ಜಯತೇ’ ಎಂಬ ವಾಕ್ಯ ನಾಣ್ಯದ ಹಿಂಭಾಗದಲ್ಲಿ ಇರಲಿದೆ. ಇಂಗ್ಲಿಷ್‌ ಹಾಗೂ ದೇವನಾಗರಿ ಲಿಪಿಯಲ್ಲಿ ಎಡ- ಬಲ ಕಡೆಗಳಲ್ಲಿ ʼಭಾರತʼ ಎಂದು ಬರೆದಿರುತ್ತದೆ. ನಾಣ್ಯದ ಮೇಲ್ಬದಿಯಲ್ಲಿ ಇಂಗ್ಲಿಷ್‌ನಲ್ಲಿ ಹಾಗೂ ಕೆಳಬದಿಯಲ್ಲಿ ದೇವನಾಗರಿ ಲಿಪಿಯಲ್ಲಿ ʼಸಂಸತ್‌ ಭವನʼ ಎಂದು ಕೆತ್ತಲಾಗಿದೆ. ನಾಣ್ಯದ ವಿನ್ಯಾಸ ಸಂವಿಧಾನದ ಮೊದಲ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ.

ಪಡೆಯುವುದು ಹೇಗೆ?

ಈ 75 ರೂ.ಗಳ ವಿಶೇಷ ನಾಣ್ಯ ಸಾಮಾನ್ಯ ಚಲಾವಣೆಯಲ್ಲಿ ಇರುವುದಿಲ್ಲ. ಇಂಥ ನಾಣ್ಯಗಳು ಸೀಮಿತ ಅವಧಿಗೆ ದೊರೆಯುತ್ತವೆ. ಮುಂಬಯಿ, ಕೋಲ್ಕತಾ, ಹೈದರಾಬಾದ್‌ ಮತ್ತು ನೋಯ್ಡಾದಲ್ಲಿನ ಸರ್ಕಾರಿ ನೋಟು ಮುದ್ರಣಾಲಯಗಳಲ್ಲಿ (ಟಂಕಸಾಲೆ) ಟಂಕಿಸುತ್ತಾರೆ. ವಿಶೇಷ ನಾಣ್ಯಗಳನ್ನು ಸಾಮಾನ್ಯವಾಗಿ ನಾಣ್ಯ ಸಂಗ್ರಹಾಸಕ್ತರು ಖರೀದಿಸುತ್ತಾರೆ. ಕೋಲ್ಕತಾ ಮಿಂಟ್‌, ಮುಂಬಯಿ ಮಿಂಟ್‌, ಹೈದರಾಬಾದ್‌ ಮಿಂಟ್‌ ( Kolkata Mint, Mumbai Mint, Hyderabad Mint ವೆಬ್‌ ಸೈಟ್‌ಗಳಲ್ಲಿ ಸಂಪರ್ಕಿಸಿ ನಾಣ್ಯ ಖರೀದಿಸಬಹುದು. ಈ ನಾಣ್ಯಗಳ ಬುಕಿಂಗ್‌ ಅನ್ನು 3- 6 ತಿಂಗಳು ಮೊದಲೇ ಆರಂಭಿಸುತ್ತಾರೆ. ಜನ ನೇರವಾಗಿ ಈ ಕೇಂದ್ರಗಳಿಗೆ ತೆರಳಿ ಪಡೆಯಬಹುದು. ಒಂದಕ್ಕಿಂತ ಹೆಚ್ಚು ನಾಣ್ಯ ಖರೀದಿಸುವುದಿದ್ದರೆ ಪ್ಯಾನ್‌ ಕಾರ್ಡ್‌ ನೀಡಬೇಕಾಗುತ್ತದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಉತ್ತಮ ಆಸನ ವ್ಯವಸ್ಥೆ ಸೇರಿ ಸಕಲ ಸೌಕರ್ಯಗಳಿರುವ ನೂತನ ಸಂಸತ್‌ ಭವನದ ನಿರ್ಮಾಣಕ್ಕೆ ದೇಶದ ಹತ್ತಾರು ಭಾಗಗಳಿಂದ ಕಲ್ಲು, ಮಾರ್ಬಲ್‌ ಸೇರಿ ಹಲವು ವಸ್ತುಗಳನ್ನು ಬಳಸಲಾಗಿದೆ. ಆಯಾ ಪ್ರಾದೇಶಿಕ ಗಣ್ಯರ ಫೋಟೊಗಳು, ಸಂದೇಶಗಳನ್ನೂ ಸಂಸತ್‌ ಭವನದಲ್ಲಿ ಕೆತ್ತಲಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಸಂಸತ್‌ ಭವನದಲ್ಲಿ ಬಸವಣ್ಣನವರ ಫೋಟೊ, ಅವರ ವಚನವನ್ನು ಕನ್ನಡದಲ್ಲಿ ಕೆತ್ತಲಾಗಿದೆ. ಆ ಮೂಲಕ ಪ್ರಾದೇಶಿಕ ವೈವಿಧ್ಯತೆಗೂ ಆದ್ಯತೆ ನೀಡಲಾಗಿದೆ.

ಇದನ್ನೂ ಓದಿ: 75 Years To NCC: ಎನ್‌ಸಿಸಿಗೆ 75ನೇ ವಾರ್ಷಿಕೋತ್ಸವ, 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Exit poll 2024: ಮೂರು ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಸೀಟು 400 ದಾಟಲಿದೆ!

Exit poll 2024:ಮೂರು ಸಮೀಕ್ಷಾ ವರದಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400 ಟಾರ್ಗೆಟ್‌ ದಾಟಲಿದೆ ಎಂಬುದು ಬಯಲಾಗಿದೆ. ಇಂಡಿಯಾ ಟಿವಿ ನೀಡಿರುವ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 371-401 ಹಾಗೂ ಇಂಡಿಯಾ ಒಕ್ಕೂಟ 109-139 ಸ್ಥಾನಗಳನ್ನು ಗಳಿಸಲಿವೆ. ಆಕ್ಸಿಸ್ ಮೈ ಇಂಡಿಯಾ ನಡೆಸಿರುವ ಸಮೀಕ್ಷೆಯಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ. ಈ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಒಟ್ಟು 543 ಸಂಸದೀಯ ಸ್ಥಾನಗಳಲ್ಲಿ ಎನ್‌ಡಿಎ 361 ರಿಂದ 401 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೇ ಚಾಣಾಕ್ಯ ವರದಿ ಪ್ರಕಾರವೂ ಎನ್ಡಿಎಗೆ 400ಕ್ಕೂ ಅಧಿಕ ಸ್ಥಾನಗಳು ದೊರೆಯಲಿದೆ.

VISTARANEWS.COM


on

Exit Poll 2024
Koo

ನವದೆಹಲಿ: ಲೋಕಸಭಾ ಚುನಾವಣಾ(Lok Sabha Election 2024) ಕೊನೆಗೊಂಡಿದ್ದು, ಎಕ್ಸಿಟ್‌ ಪೋಲ್‌(Exit Poll 2024) ಫಲಿತಾಂಶವೂ ಹೊರಬಿದ್ದಾಗಿದೆ. ಚುನಾವಣೆಗೂ ಮುನ್ನ ಅಬ್‌ ಕೀ ಬಾರ್‌ 400 ಪಾರ್‌(400 ಕ್ಕೂ ಅಧಿಕ ಸೀಟು) ಅಂತಾ ಹೇಳುತ್ತಲೇ ಬಂದಿರುವ ಬಿಜೆಪಿ ಕನಸು ನನಸಾಗುವುದು ಬಹುತೇಕ ಖಚಿತವಾಗಿದೆ. ಅದಕ್ಕೆ ಪೂರಕ ಎಂಬಂತೆ ನಿನ್ನೆ ಹೊರಬಿದ್ದಿರುವ ಎಕ್ಸಿಟ್‌ ಪೋಲ್‌ ಫಲಿತಾಂಶಗಳಲ್ಲಿ ಮೂರು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ 400ಕ್ಕೂ ಅಧಿಕ ಸೀಟ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.

ಇಂಡಿಯಾ ನ್ಯೂಸ್ ಡೈನಾಮಿಕ್ಸ್ ಸಮೀಕ್ಷಾ ವರದಿ ಎನ್‌ಡಿಎ 371,ಇಂಡಿಯಾ ಮೈತ್ರಿ 125 ಇತರರು 47 ಸ್ಥಾನಗಳನ್ನು ಪಡೆದರೆ, ಜನ್ ಕಿ ಬಾತ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 377, ಇಂಡಿಯಾ ಒಕ್ಕೂಟ 151, ಇತರರು 15, ಎನ್‌ಡಿಟಿವಿ ಇಂಡಿಯಾ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 365, ಇಂಡಿಯಾ ಒಕ್ಕೂಟ 142, ಇತರರು 36, ನ್ಯೂಸ್ ನೇಷನ್ ಸಮೀಕ್ಷಾ ವರದಿ ಪ್ರಕಾರ, ಎನ್‌ಡಿಎ 342-378, ಇಂಡಿಯಾ ಒಕ್ಕೂಟ 153-169, ಇತರರು 21-23, ರಿಪ್ಲಬಿಕ್ ಭಾರ್ ಮ್ಯಾಟ್ರಿಜ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 353-368, ಇಂಡಿಯಾ ಒಕ್ಕೂಟ 118-133, ಇತರರು 43-48 ಸ್ಥಾನಗಳನ್ನು ಗಳಿಸಲಿದೆ. ಇನ್ನು ಪಿಮಾರ್ಕ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 359, ಇಂಡಿಯಾ ಒಕ್ಕೂಟ 154, ಇತರರು 30 ಕ್ಷೇತ್ರಗಳಲ್ಲಿ ಗೆಲ್ಲಲಿದೆ.

ಇನ್ನು ನ್ಯೂಸ್ 18 ಮೆಗಾ ಎಕ್ಸಿಟ್ ಪೋಲ್ ಪ್ರಕಾರ, ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 23-26 ಸ್ಥಾನ ಬರಲಿದೆ. ಕಾಂಗ್ರೆಸ್ ಕೇವಲ 3-7 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಗೆಲುವು ದಾಖಲಿಸಬಹುದು ಎಂದು ಹೇಳಿದೆ. ರಿಪಬ್ಲಿಕ್ ಟೀವಿ ಸಮೀಕ್ಷೆ ಪ್ರಕಾರ ಬಿಜೆಪಿ ಜೆಡಿಎಸ್ 22, ಕಾಂಗ್ರೆಸ್ 6 ಸ್ಥಾನ ಗೆಲ್ಲಲಿವೆ. ಇಂಡಿಯಾ ಟುಡೇ, ಎಬಿಪಿ ನ್ಯೂಸ್ ಎರಡೂಸಮೀಕ್ಷೆಗಳುಎನ್‌ಡಿಗೆ 23-25,ಕಾಂಗ್ರೆಸ್ ಗೆ 3-5 ಸ್ಥಾನ ನೀಡಿವೆ.

ಸಕ್ಸಸ್‌ ಆಗುತ್ತಾ ಬಿಜೆಪಿಯ 400 ಟಾರ್ಗೆಟ್‌?

ಇನ್ನು ಮೂರು ಸಮೀಕ್ಷಾ ವರದಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400 ಟಾರ್ಗೆಟ್‌ ದಾಟಲಿದೆ ಎಂಬುದು ಬಯಲಾಗಿದೆ. ಇಂಡಿಯಾ ಟಿವಿ ನೀಡಿರುವ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 371-401 ಹಾಗೂ ಇಂಡಿಯಾ ಒಕ್ಕೂಟ 109-139 ಸ್ಥಾನಗಳನ್ನು ಗಳಿಸಲಿವೆ. ಆಕ್ಸಿಸ್ ಮೈ ಇಂಡಿಯಾ ನಡೆಸಿರುವ ಸಮೀಕ್ಷೆಯಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ. ಈ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಒಟ್ಟು 543 ಸಂಸದೀಯ ಸ್ಥಾನಗಳಲ್ಲಿ ಎನ್‌ಡಿಎ 361 ರಿಂದ 401 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೇ ಚಾಣಾಕ್ಯ ವರದಿ ಪ್ರಕಾರವೂ ಎನ್ಡಿಎಗೆ 400ಕ್ಕೂ ಅಧಿಕ ಸ್ಥಾನಗಳು ದೊರೆಯಲಿದೆ.

ಹಿಂದೊಮ್ಮೆ ನಡೆದಿತ್ತು ಚಾರ್‌ ಸೌ ಪಾರ್‌

ದೇಶದ ಚುನಾವಣಾ ಇತಿಹಾಸದಲ್ಲಿ ಕೇವಲ ಒಂದೇ ಒಂದು ಬಾರಿ ಪಕ್ಷವೊಂದು 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿ ಪ್ರಚಂಡ ಗೆಲುವು ಸಾಧಸಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 541 ಸ್ಥಾನಗಳಲ್ಲಿ 414 ಸ್ಥಾನಗಳನ್ನು ಗಳಿಸಿತು. ಇದು ಕಾಂಗ್ರೆಸ್‌ನ ಐತಿಹಾಸಿಕ ಗೆಲವಾಗಿತ್ತು. ಇದೀಗ ಈ ಬಾರಿ ಎನ್‌ಡಿಎ ಮತ್ತೊಮ್ಮೆ ಈ ಇತಿಹಾಸ ಬರೆಯುತ್ತದೋ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ:Exit Poll 2024 : ಟಿಎಂಸಿಯ ಭದ್ರಕೋಟೆಗೆ ಕಮಲ ಪಕ್ಷದ ಲಗ್ಗೆ; ಮಮತಾ ಬ್ಯಾನರ್ಜಿಗೆ ಮುಖಭಂಗ?

Continue Reading

ದೇಶ

Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಸಿಕ್ಕಿಂನಲ್ಲಿ ಕ್ಲೀನ್‌ ಸ್ವೀಪ್‌ನತ್ತ SKM

Assembly Election Results 2024: ಸಿಕ್ಕಿಂನ 32 ಸ್ಥಾನಗಳಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆಗಳು ಆರಂಭವಾಗಿವೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಖಾತೆ ತೆರಯುವಲ್ಲಿ ವಿಫಲವಾಗಿದೆ. ಇನ್ನು ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಕ್ಲೀನ್‌ ಸ್ವೀಪ್‌ ಮಾಡೋದ್ರಲ್ಲಿ ಡೌಟೇ ಇಲ್ಲ.

VISTARANEWS.COM


on

Assembly Election Results 2024:
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯಷ್ಟೇ ಅರುಣಾಚಲ ಪ್ರದೇಶ(Aruchal Pradesh) ಮತ್ತು ಸಿಕ್ಕಿಂ(Sikkim) ವಿಧಾನಸಭೆ ಚುನಾವಣೆ(Assembly Election Results 2024)ಗಳೂ ದೇಶದ ಗಮನ ಸೆಳೆದಿತ್ತು. ಇದೀಗ, ಈ ಎರಡು ರಾಜ್ಯಗಳ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯುತ್ತಿದ್ದು, ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷ ಧೂಳೆಬ್ಬಿಸುವ ಲಕ್ಷಣ ದಟ್ಟವಾಗಿದ್ದು, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವಿಗೆ ಸಜ್ಜಾಗಿದೆ. ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಈಗ ಹೊಸ ಇತಿಹಾಸ ನಿರ್ಮಿಸುತ್ತಿದ್ದು, ಬರೋಬ್ಬರಿ 36 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಸಿಕ್ಕಿಂನಲ್ಲಿ ಅಧಿಕಾರದಲ್ಲಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, 32 ಸ್ಥಾನಗಳ ಪೈಕಿ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಸಿಕ್ಕಿಂನಲ್ಲಿ ಸಂಭ್ರಮಾಚರಣೆ

ಸಿಕ್ಕಿಂನ 32 ಸ್ಥಾನಗಳಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆಗಳು ಆರಂಭವಾಗಿವೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಖಾತೆ ತೆರಯುವಲ್ಲಿ ವಿಫಲವಾಗಿದೆ. ಇನ್ನು ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಕ್ಲೀನ್‌ ಸ್ವೀಪ್‌ ಮಾಡೋದ್ರಲ್ಲಿ ಡೌಟೇ ಇಲ್ಲ.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಮತ್ತೆ ಗದ್ದುಗೆ

ಅರುಣಾಚಲ ಪ್ರದೇಶದಲ್ಲಿ 60 ಕ್ಷೇತ್ರದಲ್ಲಿ 50 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ. ಈಗಾಗಲೇ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದು, 33 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮಿತ್ರ ಪಕ್ಷ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಎಂಟು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್‌ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಮತ್ತೆ ಪೆಮಾ ಖಂಡು ಮುಖ್ಯಮಂತ್ರಿಯಾಗಿ ಗದ್ದುಗೆ ಏರುವುದು ಖಚಿತವಾಗಿದೆ.

ಅವಿರೋಧ ಆಯ್ಕೆ ಆದ ಬಿಜೆಪಿ ಶಾಸಕರು ಯಾರು?

ಮುಕ್ತೋ ಕ್ಷೇತ್ರದಲ್ಲಿ ಪೇಮಾ ಖಂಡು, ಬೊಮ್ಡಿಲದಲ್ಲಿ ಡೊಂಗ್ರು ಸಿಯೊಂಗ್ಜು, ಚೌಕಂನಲ್ಲಿ ಚೌನಾ ಮೇ ಹಯುಲಿಯಾಂಗ್‌ನಲ್ಲಿ ದಸಾಂಗ್ಲು ಪುಲ್, ಇಟಾನಗರದಲ್ಲಿ ಟೆಚಿ ಕಾಸೊ, ರೋಯಿಂಗ್‌ದಲ್ಲಿ ಮುಚ್ಚು ಮಿಥಿ, ಸಾಗಲೀ ಕ್ಷೇತ್ರದಲ್ಲಿ ರತು ಟೆಚಿ, ತಾಲಿ ಕ್ಷೇತ್ರದಲ್ಲಿ ಜಿಕ್ಕೆ ಟಾಕೊ, ತಾಲಿಹಾದಲ್ಲಿ ನ್ಯಾತೋ ದುಕಮ್ ಜಿರೋ, ಹಾಪೋಲಿ ಕ್ಷೇತ್ರದಲ್ಲಿ ಹಗೆ ಅಪ್ಪಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಅರುಣಾಚಲ ಪ್ರದೇಶ & ಸಿಕ್ಕಿಂನಲ್ಲಿ ಮ್ಯಾಜಿಕ್‌ ನಂಬರ್‌ ಎಷ್ಟು?

ರಾಜ್ಯದಲ್ಲಿ ಸರ್ಕಾರ ರಚಿಸಲು ಪ್ರತಿ ಪಕ್ಷ ಅಥವಾ ಯಾವುದೇ ಒಕ್ಕೂಟವು ವಿಧಾನಸಭೆಯಲ್ಲಿ ಬಹುಮತದ ಅಂಕವನ್ನು ತಲುಪಬೇಕು. ಪ್ರತಿ ರಾಜ್ಯ ಅಸೆಂಬ್ಲಿಯಲ್ಲಿನ ಬಹುಮತದ ಗುರುತು ನಿರ್ದಿಷ್ಟ ರಾಜ್ಯದ ವಿಧಾನಸಭೆಯಲ್ಲಿನ ಒಟ್ಟು ಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ರಾಜ್ಯದಲ್ಲಿ ಬಹುಮತವು ಒಟ್ಟು ಅಸೆಂಬ್ಲಿ ಸ್ಥಾನಗಳ ಅರ್ಧಕ್ಕಿಂತ ಹೆಚ್ಚಿನ ಸ್ಥಾನವಾಗಿದೆ. ಅರುಣಾಚಲ ಪ್ರದೇಶ ವಿಧಾನಸಭೆಯು 60 ಸ್ಥಾನಗಳನ್ನು ಹೊಂದಿದ್ದು, 31 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರ ರಚಿಸಲಿದೆ.ಸಿಕ್ಕಿಂ ಅಸೆಂಬ್ಲಿ 32 ಸ್ಥಾನಗಳನ್ನು ಹೊಂದಿದ್ದು, ಸರ್ಕಾರ ರಚಿಸಲು 17 ಸ್ಥಾನಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಸುಮಾರು 2000 ಜನ ಅಧಿಕಾರಿಗಳ ತಂಡದಿಂದ ಮತ ಏಣಿಕೆ ಕಾರ್ಯ ಅರುಣಾಚಲದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ:Assembly Election Results 2024: ಇಂದು ಅರುಣಾಚಲ ಪ್ರದೇಶ & ಸಿಕ್ಕಿಂ ರಿಸಲ್ಟ್‌; 10 ಅಭ್ಯರ್ಥಿಗಳು ಅವಿರೋಧ ಆಯ್ಕೆ

Continue Reading

ಗ್ಯಾಜೆಟ್ಸ್

WhatsApp Features: ವಾಟ್ಸ್ ಆ್ಯಪ್ ನಲ್ಲಿರುವ ಈ 7 ವಿಶೇಷ ಫೀಚರ್ ಗಳ ಬಗ್ಗೆ ಗೊತ್ತೇ? ನೀವೂ ಬಳಸಿ

ಸಂದೇಶ ಕಳುಹಿಸುವಲ್ಲಿ ಬಹುತೇಕ ಮಂದಿಯ ಮೆಚ್ಚಿನ ಆಪ್ ಎನಿಸಿರುವ ವಾಟ್ಸ್ ಆಪ್ ನಲ್ಲಿ (WhatsApp Features) ಹಲವು ವೈಶಿಷ್ಟ್ಯಗಳಿವೆ. ಇದನ್ನು ಹೆಚ್ಚಿನವರು ಬಳಸಿರಲಿಕ್ಕಿಲ್ಲ. ಆದರೆ ಇವುಗಳಿಂದ ಹೊಸ ಅನುಭವವಂತೂ ಸಿಗುವುದು. ಸಾಕಷ್ಟು ಪ್ರಯೋಜನಕಾರಿಯಾಗಿರುವ ಇದನ್ನು ಉಪಯೋಗಿಸಿಕೊಳ್ಳಲು ಸೆಟ್ಟಿಂಗ್ ನಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು ಅಷ್ಟೇ. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

WhatsApp Features
Koo

ಸಂದೇಶಗಳನ್ನು (messaging) ಕಳುಹಿಸುವ ಆ್ಯಪ್ ಗಳ (Apps) ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ವಾಟ್ಸ್ ಆ್ಯಪ್ (WhatsApp Features) ಅನ್ನು ವಿಶ್ವದಾದ್ಯಂತ ಕೋಟ್ಯಂತರ ಜನರು ಬಳಸುತ್ತಿದ್ದಾರೆ. ನಿರಂತರ ಹೊಸತನವನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಈ ಆಪ್ ಗ್ರಾಹಕ ಸ್ನೇಹಿ ಎಂದೆನಿಸಿಕೊಂಡಿದೆ.

ಕೇವಲ ಸಂದೇಶ ಕಳುಹಿಸಲು, ಕರೆ ಮಾಡಲು, ಸ್ಟೇಟಸ್ ಹಂಚಿಕೊಳ್ಳಲು ಸೀಮಿತ ಎಂದೆನಿಸುವ ವಾಟ್ಸ್ ಆಪ್ ನಲ್ಲಿ ಇನ್ನೂ ಹಲವಾರು ವೈಶಿಷ್ಟ್ಯಗಳಿವೆ. ಇದರ ಇಂಟರ್ಫೇಸ್ ಅಡಿಯಲ್ಲಿ ಹಲವು ‘ಗುಪ್ತ ರತ್ನ’ಗಳಿವೆ. ಇದು ನಿಮ್ಮ ಊಹೆಗೂ ಮೀರಿ ವಾಟ್ಸ್ ಆಪ್ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. ಅವುಗಳು ಯಾವುದು ಎಂಬ ವಿವರ ಇಲ್ಲಿದೆ.

ಟೋನ್ ಸೆಟ್ಟಿಂಗ್

ಮೆಸೇಜ್ ಸ್ವೀಕರಿಸುವಾಗ ಸಾಮಾನ್ಯ ಟೋನ್ ನಿಂದ ಬೇಸತ್ತಿದ್ದೀರೆ ವೈಯಕ್ತಿಕ ಸಂಪರ್ಕ ಅಥವಾ ಗುಂಪುಗಳಿಗಾಗಿ ಟೋನ್ ಗಳನ್ನು ಸೆಟ್ ಮಾಡಲು ವಾಟ್ಸ್ ಆಪ್ ಅನುಮತಿಸುತ್ತದೆ. ಚಾಟ್ ಅನ್ನು ಸರಳವಾಗಿ ತೆರೆದು, ಸಂಪರ್ಕದ ಹೆಸರು ಅಥವಾ ಗುಂಪಿನ ಶೀರ್ಷಿಕೆಯ ಮೇಲೆ ಟ್ಯಾಪ್ ಮಾಡಿ. “ಕಸ್ಟಮ್ ನೋಟಿಫಿಕೇಶನ್ ” ಆಯ್ಕೆ ಮಾಡಿ ಮತ್ತು ಆದ್ಯತೆಯ ಟೋನ್ ಅನ್ನು ಸೆಟ್ ಮಾಡಿ. ಈಗ ಪರದೆಯನ್ನು ನೋಡದೆಯೇ ಯಾರು ನಿಮಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬುದನ್ನು ತಕ್ಷಣ ತಿಳಿದುಕೊಳ್ಳಬಹುದು.

ಸುಲಭ ಪ್ರವೇಶಕ್ಕಾಗಿ ಸ್ಟಾರ್

ಚಾಟ್‌ ಗಳು ಸಾಕಷ್ಟು ಇದ್ದಾಗ ಪ್ರಮುಖ ಸಂದೇಶ ಮಧ್ಯೆ ಕಳೆದು ಹೋಗುತ್ತದೆ. ಅಗತ್ಯವಿದ್ದಾಗ ಎಷ್ಟು ಹುಡುಕಿದರೂ ಸಿಗುವುದಿಲ್ಲ. WhatsApp ನ “Starred Messages” ವೈಶಿಷ್ಟ್ಯದಲ್ಲಿ ಸ್ಕ್ರೋಲಿಂಗ್‌ಗೆ ವಿದಾಯ ಹೇಳಿ. ಸಂದೇಶವನ್ನು ದೀರ್ಘವಾಗಿ ಒತ್ತಿ ಸ್ಟಾರ್ ಐಕಾನ್ ಅನ್ನು ಟ್ಯಾಪ್ ಮಾಡಿ. ಅನಂತರ ಸುಲಭವಾಗಿ ಈ ಸಂದೇಶಗಳನ್ನು ಮರುಪಡೆಯಲು ನಕ್ಷತ್ರ ಹಾಕಿದ ಸಂದೇಶಗಳ ಫೋಲ್ಡರ್‌ ನಲ್ಲಿ ಅದನ್ನು ಉಳಿಸಲಾಗುತ್ತದೆ.


ಹಿಡನ್ ಚಾಟ್ ಆರ್ಕೈವ್

ಕೆಲವು ಚಾಟ್‌ಗಳನ್ನು ಮರೆ ಮಾಚಬೇಕಾದರೆ WhatsApp ನ “ಆರ್ಕೈವ್ ಚಾಟ್” ವೈಶಿಷ್ಟ್ಯವು ಸಂಭಾಷಣೆಗಳನ್ನು ಅಳಿಸದೆಯೇ ಗೌಪ್ಯವಾಗಿ ಇಡುತ್ತದೆ. ಚಾಟ್‌ನಲ್ಲಿ ಎಡಕ್ಕೆ ಸ್ವೈಪ್ ಮಾಡಿ, “ಆರ್ಕೈವ್” ಟ್ಯಾಪ್ ಮಾಡಿ ಮತ್ತು ಅದು ನಿಮ್ಮ ಮುಖ್ಯ ಚಾಟ್ ಪಟ್ಟಿಯಿಂದ ಕಣ್ಮರೆಯಾಗುತ್ತದೆ. ನಿಮ್ಮ ಖಾಸಗಿ ಸಂಭಾಷಣೆಗಳನ್ನು ಖಾಸಗಿಯಾಗಿ ಇರಿಸುತ್ತದೆ. ಆರ್ಕೈವ್ ಮಾಡಿದ ಚಾಟ್‌ಗಳನ್ನು ಪ್ರವೇಶಿಸಲು, ನಿಮ್ಮ ಚಾಟ್ ಪಟ್ಟಿಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ ಅಥವಾ ಅವುಗಳನ್ನು ಹುಡುಕಿ.

ಗ್ರೂಪ್ ಚಾಟ್‌ ಗಳ ಮ್ಯೂಟ್

ಗ್ರೂಪ್ ಚಾಟ್‌ಗಳು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತದೆ. ಯಾಕೆಂದರೆ ಇದರಲ್ಲಿ ಸಾಕಷ್ಟು ಸಂದೇಶಗಳು ನಿರಂತರವಾಗಿ ಬರುತ್ತಿರುತ್ತದೆ. ಇಂತಹ ಗುಂಪುಗಳನ್ನು ಮ್ಯೂಟ್ ಮಾಡಲು WhatsApp ಅನುಮತಿಸುತ್ತದೆ. ಗುಂಪು ಚಾಟ್ ತೆರೆಯಿರಿ ಗುಂಪಿನ ಹೆಸರಿನ ಮೇಲೆ ಟ್ಯಾಪ್ ಮಾಡಿ, “ಅಧಿಸೂಚನೆಗಳನ್ನು ಮ್ಯೂಟ್ ಮಾಡಿ” ಆಯ್ಕೆ ಮಾಡಿ ಮತ್ತು ಬಯಸಿದ ಅವಧಿಯನ್ನು ಸೆಟ್ ಮಾಡಿಕೊಳ್ಳಿ. ಇದರಲ್ಲಿ 8 ಗಂಟೆಗಳು, 1 ವಾರ ಅಥವಾ 1 ವರ್ಷ ಮ್ಯೂಟ್ ಮಾಡುವ ಅವಕಾಶವಿರುತ್ತದೆ.

ಬ್ಲೂ ಟಿಕ್ ಇಲ್ಲದೆ ಸಂದೇಶಗಳನ್ನು ಓದಿ

ಬ್ಲೂ ಟಿಕ್‌ಗಳು ಸಂದೇಶ ಓದಿದ್ದಾರೆ ಎನ್ನುವ ಕುರುಹು ಕೊಡುತ್ತದೆ. ಇದು ಕೆಲವರಿಗೆ ಆತಂಕವನ್ನು ಉಂಟುಮಾಡಬಹುದು. ಸಂದೇಶಗಳನ್ನು ಓದಿ ರಿಪ್ಲೈ ಮಾಡಿಲ್ಲ ಎನ್ನುವ ಬೇಸರವನ್ನು ಮಾಡಬಹುದು. ಆದರೆ ಬ್ಲೂ ಟಿಕ್ ಇಲ್ಲದೆಯೂ ನೀವು ಅಜ್ಞಾತವಾಗಿ ಸಂದೇಶಗಳನ್ನು ಓದಬಹುದು. ಇದಕ್ಕಾಗಿ ಸೆಟ್ಟಿಂಗ್‌ಗಳು- ಖಾತೆ- ಗೌಪ್ಯತೆಗೆ ಹೋಗುವ ಮೂಲಕ ರೀಡ್ ರಿಸಿಪ್ಟ್ ಅನ್ನು ನಿಷ್ಕ್ರಿಯಗೊಳಿಸಿ.

ಇದನ್ನೂ ಓದಿ: WhatsApp Update : ವಾಯ್ಸ್ ನೋಟ್ ಅವಧಿ ಹೆಚ್ಚಿಸಲಿದೆ ವಾಟ್ಸ್ಆ್ಯಪ್; ವಿಸ್ತರಣೆ ಅವಧಿ ಎಷ್ಟು ಗೊತ್ತೇ?

ಚಾಟ್‌ಗಳಿಗಾಗಿ ವೈಯಕ್ತಿಕ ವಾಲ್‌ಪೇಪರ್‌

ವೈಯಕ್ತಿಕ ಸಂಭಾಷಣೆಗಳಿಗಾಗಿ ಕಸ್ಟಮ್ ವಾಲ್‌ಪೇಪರ್‌ಗಳನ್ನು ಹೊಂದಿಸುವ ಮೂಲಕ ನಿಮ್ಮ ಚಾಟ್‌ಗಳಿಗೆ ವೈಯಕ್ತಿಕ ಸ್ಪರ್ಶವನ್ನು ನೀಡಬಹುದು. ಚಾಟ್ ತೆರೆಯಿರಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ, “ವಾಲ್‌ಪೇಪರ್” ಆಯ್ಕೆ ಮಾಡಿ ಮತ್ತು WhatsApp ನ ಅಂತರ್ನಿರ್ಮಿತ ಆಯ್ಕೆಗಳಿಂದ ಆಯ್ಕೆ ಮಾಡಿ ಅಥವಾ ಸ್ವಂತ ಹಿನ್ನೆಲೆ ಚಿತ್ರವನ್ನು ಹೊಂದಿಸಿ. ಇದು ನಿಮ್ಮ ಚಾಟ್‌ ಗಳಿಗೆ ವಿಶೇಷತೆಯನ್ನು ಒದಗಿಸುತ್ತದೆ.

ಬ್ರಾಡ್‌ಕಾಸ್ಟ್ ಪಟ್ಟಿಗಳು

ಒಂದೇ ಸಂದೇಶವನ್ನು ಅನೇಕ ಸಂಪರ್ಕಗಳಿಗೆ ಕಳುಹಿಸುವುದು ಬೇಸರದ ಸಂಗತಿಯಾಗಿದೆ. ಆದರೆ WhatsApp ನ ಪ್ರಸಾರ ಪಟ್ಟಿ ಈ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡುವ ಮೂಲಕ ಪ್ರಸಾರ ಪಟ್ಟಿಯನ್ನು ರಚಿಸಿ, “ಹೊಸ ಪ್ರಸಾರ” ಆಯ್ಕೆ ಮಾಡಿ ಮತ್ತು ನಿಮ್ಮ ಸಂಪರ್ಕ ಪಟ್ಟಿಯಿಂದ ಸ್ವೀಕರಿಸುವವರನ್ನು ಆಯ್ಕೆ ಮಾಡಿ. ಈಗ, ಗುಂಪು ಚಾಟ್‌ನೊಂದಿಗೆ ಪ್ರತಿಯೊಬ್ಬರ ಇನ್‌ಬಾಕ್ಸ್‌ಗಳನ್ನು ಅಸ್ತವ್ಯಸ್ತಗೊಳಿಸದೆ ಸಾಮೂಹಿಕ ಸಂದೇಶಗಳನ್ನು ಕಳುಹಿಸಬಹುದು.

Continue Reading

ದೇಶ

Arvind Kejriwal: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಇಂದು ಮತ್ತೆ ತಿಹಾರ್‌ ಜೈಲಿಗೆ

Arvind Kejriwal:ಅರವಿಂದ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ವಿಚಾರಣೆ ಜೂ.5ರಂದು ದಿಲ್ಲಿ ಕೋರ್ಟ್‌ನಲ್ಲಿ ನಡೆಯಲಿದೆ. ಇಂದು ಅವರು ಜೈಲಿಗೆ ಮರಳಲೇಬೇಕಿದೆ. ನಿನ್ನೆಯಷ್ಟೇ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ನಾನು ಶರಣಾಗಲು ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಮನೆಯಿಂದ ಹೊರಡುತ್ತೇನೆ. ಈ ಬಾರಿ ಅವರು ನನಗೆ ಹೆಚ್ಚು ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಅದಕ್ಕೆ ನಾನು ತಲೆಬಾಗುವುದಿಲ್ಲ” ಎಂದು ಅವರು ಹೇಳಿದರು. ದೆಹಲಿಯ ಜನರಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳು ಅವರ ಅನುಪಸ್ಥಿತಿಯಲ್ಲಿಯೂ ಮುಂದುವರಿಯುತ್ತವೆ ಎಂದು ಭರವಸೆ ನೀಡಿದರು.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನೂರಾರು ಕೋಟಿ ರೂ. ಹಗರಣ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಮಧ್ಯಂತರ ಜಾಮೀನು ಅವಧಿ ನಿನ್ನೆಗೆ ಪೂರ್ಣಗೊಂಡಿದ್ದು, ಇಂದು ಅವರು ಮತ್ತೆ ತಿಹಾರ್‌ ಜೈಲಿಗೆ ಮರಳಲಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೋರ್ಟ್‌ ಈ ಹಿಂದೆ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಚುನಾವಣೆ ಪೂರ್ಣಗೊಂಡ ಮರುದಿನವೇ ಜೈಲಿಗೆ ಮರಳುವಂತೆ ಕೋರ್ಟ್‌ ಹೇಳಿತ್ತು.

ಇನ್ನು ಅರವಿಂದ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ವಿಚಾರಣೆ ಜೂ.5ರಂದು ದಿಲ್ಲಿ ಕೋರ್ಟ್‌ನಲ್ಲಿ ನಡೆಯಲಿದೆ. ಇಂದು ಅವರು ಜೈಲಿಗೆ ಮರಳಲೇಬೇಕಿದೆ. ನಿನ್ನೆಯಷ್ಟೇ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ನಾನು ಶರಣಾಗಲು ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಮನೆಯಿಂದ ಹೊರಡುತ್ತೇನೆ. ಈ ಬಾರಿ ಅವರು ನನಗೆ ಹೆಚ್ಚು ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಅದಕ್ಕೆ ನಾನು ತಲೆಬಾಗುವುದಿಲ್ಲ” ಎಂದು ಅವರು ಹೇಳಿದರು. ದೆಹಲಿಯ ಜನರಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳು ಅವರ ಅನುಪಸ್ಥಿತಿಯಲ್ಲಿಯೂ ಮುಂದುವರಿಯುತ್ತವೆ ಎಂದು ಭರವಸೆ ನೀಡಿದರು.

ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿ, ಜೈಲಿನಲ್ಲಿ ನಿಮ್ಮ ಬಗ್ಗೆ ನಾನು ತುಂಬಾ ಚಿಂತೆ ಮಾಡುತ್ತೇನೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಕೂಡ ಸಂತೋಷವಾಗಿರುತ್ತಾರೆ. ನಾನು ಖಂಡಿತವಾಗಿಯೂ ನಿಮ್ಮ ನಡುವೆ ಇರುವುದಿಲ್ಲ, ಆದರೆ ನಿಮ್ಮ ಎಲ್ಲಾ ಕೆಲಸಗಳು ಮುಂದುವರಿಯುತ್ತವೆ. ಹಿಂದಿರುಗಿದ ನಂತರ ನಾನು ಪ್ರತಿ ತಾಯಿ ಮತ್ತು ಸಹೋದರಿಗೆ ಪ್ರತಿ ತಿಂಗಳು 1000 ರೂ.ಗಳನ್ನು ನೀಡಲು ಪ್ರಾರಂಭಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ವೈದ್ಯಕೀಯ ಪರೀಕ್ಷೆಗಳಿಗಾಗಿ ಅವರ ಮಧ್ಯಂತರ ಜಾಮೀನನ್ನು ಏಳು ದಿನಗಳವರೆಗೆ ವಿಸ್ತರಿಸುವ ಮನವಿಯನ್ನು ತುರ್ತಾಗಿ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ನಿರಾಕರಿಸಿದ ನಂತರ ಎಎಪಿ ಮುಖ್ಯಸ್ಥರು ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರವಿಂದ್ ಕೇಜ್ರಿವಾಲ್ ಅವರು ವಿಚಾರಣಾ ನ್ಯಾಯಾಲಯದಿಂದ ನಿಯಮಿತ ಜಾಮೀನು ಪಡೆಯುವ ಆಯ್ಕೆಯನ್ನು ಹೊಂದಿರುವುದರಿಂದ ಅವರ ಮನವಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೈಕೋರ್ಟ್​ ಹೇಳಿತ್ತು.

ಹೆಚ್ಚಿನ ಕೀಟೋನ್ ಮಟ್ಟ ಹೆಚ್ಚಳದಿಂದಾಗಿ ತೂಕ ನಷ್ಟ ದಿಂದಾಗಿ ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಕೇಜ್ರಿವಾಲ್ ತಮ್ಮ ಮಧ್ಯಂತರ ಜಾಮೀನು ವಿಸ್ತರಣೆ ಕೋರಿದ್ದರು. ಈ ರೋಗಲಕ್ಷಣಗಳು ಮೂತ್ರಪಿಂಡದ ಸಮಸ್ಯೆಗಳು, ಗಂಭೀರ ಹೃದಯದ ಪರಿಸ್ಥಿತಿಗಳು ಅಥವಾ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಆಪ್​ ವಕೀಲರು ವಾದಿಸಿದ್ದರು.

ಇದನ್ನೂ ಓದಿ: Assembly Election Results 2024: ಇಂದು ಅರುಣಾಚಲ ಪ್ರದೇಶ & ಸಿಕ್ಕಿಂ ರಿಸಲ್ಟ್‌; 10 ಅಭ್ಯರ್ಥಿಗಳು ಅವಿರೋಧ ಆಯ್ಕೆ

Continue Reading
Advertisement
Drowned in water
ಚಿಕ್ಕಬಳ್ಳಾಪುರ16 mins ago

Drowned in Water : ನೀರಿನಲ್ಲಿ ಮುಳುಗಿ ಮುಂಬೈ ಮೂಲದ ಇಬ್ಬರು ಬಾಲಕಿಯರು ಸಾವು

Virat Kohli
ಕ್ರೀಡೆ17 mins ago

Virat Kohli: ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ

Exit Poll 2024
ದೇಶ24 mins ago

Exit poll 2024: ಮೂರು ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಸೀಟು 400 ದಾಟಲಿದೆ!

Karnataka Rain
ಮಳೆ45 mins ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Bhavani Revanna hide Not Present For SIT Questioning At Home
ಕರ್ನಾಟಕ48 mins ago

Bhavani Revanna: ಭವಾನಿ ರೇವಣ್ಣ ಕಣ್ಣಾಮುಚ್ಚಾಲೆ ಆಟ; ಎಸ್ ಐ ಟಿಗೆ ಅರೆಸ್ಟ್ ಮಾಡಿ ಜೈಲಿಗಟ್ಟುವ ಹಠ!

IND vs PAK
ಕ್ರಿಕೆಟ್55 mins ago

IND vs PAK: ಇಂಡೋ-ಪಾಕ್​ ಹೈವೋಲ್ಟೇಜ್​ ಟಿ20 ಪಂದ್ಯ ವೀಕ್ಷಿಸಲು ಅಭಿಮಾನಿಗಳ ಹಿಂದೇಟು; ಇನ್ನೂ ಮಾರಾಟವಾಗಿಲ್ಲ ಟಿಕೆಟ್​

Foeticide Case Foeticide another Case in Bagalkot
ಬಾಗಲಕೋಟೆ1 hour ago

Foeticide Case: ಬಾಗಲಕೋಟೆಯಲ್ಲಿ ಮತ್ತೊಂದು ಭ್ರೂಣ ಹತ್ಯೆ: ಗಾಢ ನಿದ್ರೆಯಲ್ಲಿದ್ದಾರಾ ಅಧಿಕಾರಿಗಳು?

Healthy Sandwich Spread
ಆರೋಗ್ಯ2 hours ago

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

Taiwan Athletics Open
ಕ್ರೀಡೆ2 hours ago

Taiwan Athletics Open: ತೈವಾನ್‌ ಓಪನ್​ನಲ್ಲಿ ಚಿನ್ನ ಗೆದ್ದ ಕನ್ನಡಿಗ ಡಿ.ಪಿ. ಮನು

Assembly Election Results 2024:
ದೇಶ2 hours ago

Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಸಿಕ್ಕಿಂನಲ್ಲಿ ಕ್ಲೀನ್‌ ಸ್ವೀಪ್‌ನತ್ತ SKM

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ45 mins ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು19 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌