IPL 2023: ಧೋನಿ ಐಪಿಎಲ್​ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸೆಹವಾಗ್; ಏನದು? - Vistara News

ಕ್ರಿಕೆಟ್

IPL 2023: ಧೋನಿ ಐಪಿಎಲ್​ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸೆಹವಾಗ್; ಏನದು?

ಎಂ.ಎಸ್​ ಧೋನಿ ಅವರು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಖಂಡಿತಾ ಆಡುವುದಿಲ್ಲ ಎಂದು ಟೀಮ್​ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಹೇಳಿದ್ದಾರೆ.

VISTARANEWS.COM


on

ms dhoni ipl
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಗುಜರಾತ್​ ತಂಡವನ್ನು ಮಣಿಸುವ ಮೂಲಕ ಎಂ.ಎಸ್​ ಧೋನಿ ಸಾರಥ್ಯದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 5ನೇ ಬಾರಿ ಐಪಿಎಲ್​ ಚಾಂಪಿಯನ್​ ಪಟ್ಟ ಅಲಂಕರಿಸಿತು. ಇದೇ ವೇಳೆ ಧೋನಿ ಅವರು ತಮ್ಮ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದರು. ಆದರೆ ಟೀಮ್​ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಅವರು​ ಧೋನಿ ಅವರ ಮುಂದಿನ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

​ಪಂದ್ಯದ ಬಳಿಕ ಮಾತನಾಡಿದ ಧೋನಿ ಅವರು ಹರ್ಷ ಭೋಗ್ಲೆ ಅವರು ಕೇಳಿದ ನಿವೃತ್ತಿಯ ಪತ್ನೆಗೆ ಉತ್ತರಿಸಿದ ಧೋನಿ, “ಉತ್ತರ ಬೇಕೇ? ಪರಿಸ್ಥಿತಿಗೆ ಅನುಗುಣವಾಗಿ, ಇದು ನನ್ನ ನಿವೃತ್ತಿಗೆ ಉತ್ತಮ ಸಮಯ. ಆದರೆ ಈ ಕಳೆದ ವರ್ಷದಲ್ಲಿ ನಾನು ಪಡೆದ ಪ್ರೀತಿ ಮತ್ತು ಮನ್ನಣೆ ನೋಡಿದರೆ, ʼಥ್ಯಾಂಕ್‌ ಯುʼ ಎಂದು ಹೇಳಿ ನಿರ್ಗಮಿಸುವುದು ಸುಲಭದ ದಾರಿ. ಆದರೆ ಇನ್ನೂ 9 ತಿಂಗಳು ಕಠಿಣವಾಗಿ ದೇಹ ದಂಡಿಸಿ, ಇನ್ನೊಂದು ಆವೃತ್ತಿಯಲ್ಲಿ ನನ್ನ ತಂಡವನ್ನು ಮುನ್ನಡೆಸಿ ಆಡುವುದು ಸೂಕ್ತ” ಎಂದು ಹೇಳುವ ಮೂಲಕ ಧೋನಿ ಅವರು ಮುಂದಿನ ಆವೃತ್ತಿಯಲ್ಲಿಯೂ ಆಡುವ ಸುಳಿವನ್ನು ನೀಡಿದ್ದಾರೆ. ಆದರೆ ಅವರು ತಂಡದಲ್ಲಿ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.

ಧೋನಿ ಅವರು ಈ ಮಾತನ್ನು ಹೇಳಿದ ತಕ್ಷಣ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಮುಂದಿನ ಆವೃತ್ತಿಯಲ್ಲಿಯೂ ತಮ್ಮ ನೆಚ್ಚಿನ ಆಟಗಾರನ ಆಟವನ್ನು ಕಣ್ತುಂಬಿಕೊಳ್ಳಬಹುದು ಎಂದು. ಆದರೆ ಧೋನಿ ಅವರು ಮುಂದಿನ ಬಾರಿ ಆಡಿದರೂ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ. ಈ ಮಾತನ್ನು ಸ್ವತಃ ಚೆನ್ನೈ ತಂಡದ ಕೋಚ್​ ಡ್ವೇನ್​ ಬ್ರಾವೊ ಕೂಡ ಹೇಳಿದ್ದಾರೆ. ಆದರೆ ವಿರೇಂದ್ರ ಸೆಹವಾಗ್​ ಮಾತ್ರ ಧೋನಿ ಎಂದಿಗೂ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“40 ವರ್ಷ ಆದರೂ ಫಿಟ್​ನೆಸ್​ ಇದ್ದರೆ ಕ್ರಿಕೆಟ್​ ಆಡುವುದು ಕಷ್ಟವಲ್ಲ. ಈ ವರ್ಷ ಧೋನಿ ಮಂಡಿ ನೋವಿನ ಗಾಯದಿಂದಾಗಿ ಹೆಚ್ಚೇನು ಬ್ಯಾಟಿಂಗ್​ ನಡೆಸಲಿಲ್ಲ. ಒಟ್ಟಾರೆ ಟೂರ್ನಿಯಲ್ಲಿ ಅವರು ಸುಮಾರು 50 ಎಸೆತಗಳನ್ನು ಎದುರಿಸಿರಬಹುದು. ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಅವರಿಗೆ ಒಪ್ಪುವುದೇ ಇಲ್ಲ. ಏಕೆಂದರೆ ಈಗಾಗಲೇ ಅವರು ಕೇವಲ ನಾಯಕತ್ವದ ಸಲುವಾಗಿ ಮಾತ್ರವೇ ಆಡುತ್ತಿದ್ದಾರೆ” ಎಂದು ಸೆಹವಾಗ್​ ಹೇಳಿದರು.

ಇದನ್ನೂ ಓದಿ IPL 2023: ಚಾಂಪಿಯನ್​ ಚೆನ್ನೈ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಗೂಗಲ್‌ ಸಿಇಒ ಸುಂದರ್‌ ಪಿಚೈ

“ತಂಡದ ನಾಯಕತ್ವ ನಿಭಾಯಿಸಲು ಧೋನಿ ಮೈದಾನದಲ್ಲಿ ಇರಲೇ ಬೇಕು. ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಇರುವುದು ಫೀಲ್ಡಿಂಗ್ ಮಾಡದೆ ಬ್ಯಾಟಿಂಗ್‌ ಮಾಡುವ ಆಟಗಾರರ ಬಳಕೆ ಮಾಡಿಕೊಳ್ಳಲು. ಅಥವಾ ಬ್ಯಾಟ್‌ ಮಾಡದೆ ಕೇವಲ ಬೌಲಿಂಗ್‌ ಮಾಡಲು ಬಳಕೆ ಮಾಡಿಕೊಳ್ಳುವುದಕ್ಕೆ. ಇದು ನಾಯಕತ್ವದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನಾಯಕತ್ವವಿಲ್ಲದೆ ಧೋನಿ ಆಡುವುದು ಕಷ್ಟಕರ. ಅದರಲ್ಲೂ ಅವರು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಖಂಡಿತಾ ಆಡುವುದಿಲ್ಲ. ನನಗೆ ಅನಿಸಿದ ಪ್ರಕಾರ ಧೋನಿ ಅವರು ಮುಂದಿನ ಬಾರಿ ಚೆನ್ನೈ ತಂಡದ ಕೋಚ್​ ಅಥವಾ ಮೆಂಟರ್​ ಆಗಿ ಕರ್ತವ್ಯ ನಿರ್ವಹಿಸುವ ಸಾಧ್ಯತೆ ಅಧಿಕ” ಎಂದು ಸೆಹವಾಗ್ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ಈ ಫ್ರಾಂಚೈಸಿ ಪರ ಆಡಿದರೆ ಉತ್ತಮ ಎಂದ ಆರ್​ಸಿಬಿ ಮಾಜಿ ನಾಯಕ

IPL 2024: ಕ್ರೀಡೆಯಲ್ಲಿ ಶ್ರೇಷ್ಠ ಆಟಗಾರರು ಇತರ ಫ್ರಾಂಚೈಸಿಗಳಿಗೆ ಹೋಗಿ ಗೆಲುವು ಸಾಧಿಸಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್​ಸಿಬಿ ಗೆಲುವಿಗೆ ಪ್ರಯತ್ನಿಸುದಕ್ಕಿಂತ ಡೆಲ್ಲಿ ಪರ ಆಡಿದರೆ ಉತ್ತಮ. ಅವರಿಗೆ ದೆಹಲಿಯಲ್ಲಿ ಮನೆ ಇದೆ. ಕೊಹ್ಲಿಗೆ ಕುಟುಂಬವಿದೆ. ದೆಹಲಿಯಲ್ಲಿ ಆಡಿದರೆ, ಅವರಿಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬಹುದು. ವಿರಾಟ್ ಅವರು ದೆಹಲಿಗೆ ಏಕೆ ಆಡಬಾರದು? ಎಂದು ಕೆವಿನ್​ ಪೀಟರ್ಸನ್ ಪ್ರಶ್ನೆ ಮಾಡಿದ್ದಾರೆ.

VISTARANEWS.COM


on

IPL 202
Koo

ಬೆಂಗಳೂರು: ಕಳೆದ 17 ವರ್ಷಗಳಿಂದ ಆರ್​ಸಿಬಿ(RCB) ಪರ ನಿಷ್ಠೆಯಿಂದ ಆಡುತ್ತಿರುವ ವಿರಾಟ್​ ಕೊಹ್ಲಿ(Virat Kohli) ಮುಂದಿನ ಆವೃತ್ತಿಗೆ ತಂಡ ತೊರೆದು ಬೇರೆ ಫ್ರಾಂಚೈಸಿ ಪರ ಆಡಬೇಕೆಂದು ಆರ್​ಸಿಬಿಯ ಮಾಜಿ ನಾಯಕ ಕೆವಿನ್​ ಪೀಟರ್ಸನ್ ಸಲಹೆ ನೀಡಿದ್ದಾರೆ.

​ರಾಜಸ್ಥಾನ್​ ರಾಯಲ್ಸ್(Rajasthan Royals)​ ವಿರುದ್ಧ ಬುಧವಾರ ನಡೆದಿದ್ದ ಎಲಿಮಿನೇಟರ್​ ಪಂದ್ಯದಲ್ಲಿ(IPL 2024) ಆರ್​ಸಿಬಿ 4 ವಿಕೆಟ್​ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಈ ಸೋಲಿನ ಹತಾಶೆಯಲ್ಲಿ ವಿರಾಟ್​ ಕೊಹ್ಲಿ ಕಣ್ಣೀರು ಕೂಡ ಸುರಿಸಿದರು. ಅಲ್ಲದೆ ಅತ್ಯಂತ ಭಾವುಕರಾಗಿ ಕಂಡುಬಂದರು. ಇದನ್ನು ನೋಡಿದ ಅವರ ಅಭಿಮಾನಿಗಳು ಕೂಡ ಅತ್ಯಂತ ಬೇಸರಗೊಂಡಿದ್ದರು. ಇದೇ ವಿಚಾರವಾಗಿ ಮಾತನಾಡಿದ ಪೀಟರ್ಸನ್, ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ತಮ್ಮ ತವರಾದ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಬೇಕು ಎಂದು ಹೇಳಿದ್ದಾರೆ.

ಸ್ಟಾರ್​ ಸ್ಟೋರ್ಟ್ಸ್​ ಸಂದರ್ಶನದಲ್ಲಿ ಮಾತನಾಡಿದ ಪೀಟರ್ಸನ್, ಮುಂದಿನ ಆವೃತ್ತಿಗೆ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಹಲವು ಆಟಗಾರರು ತಮ್ಮ ತವರು ತಂಡದ ಪೊರ ಆಟಲು ಕಾತರಗೊಂಡಿದ್ದಾರೆ. ಕನ್ನಡಿಗ ಕೆ.ಎಲ್​ ರಾಹುಲ್​ ಕೂಡ ಆರ್​ಸಿಬಿ ಪರ ಆಡಬೇಕು, ಬೆಂಗಳೂರು ನನ್ನ ತವರು ಎಂದು ಹೇಳಿದ್ದರು. ಕೊಹ್ಲಿ ಕೂಡ ಆರ್​ಸಿಬಿ ತೊರೆದು ಡೆಲ್ಲಿ ಪರ ಆಡಿದರೆ ಉತ್ತಮ ಎಂದು ಪೀಟರ್ಸನ್​ ಹೇಳಿದ್ದಾರೆ.

“ಕ್ರೀಡೆಯಲ್ಲಿ ಶ್ರೇಷ್ಠ ಆಟಗಾರರು ಇತರ ಫ್ರಾಂಚೈಸಿಗಳಿಗೆ ಹೋಗಿ ಗೆಲುವು ಸಾಧಿಸಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್​ಸಿಬಿ ಗೆಲುವಿಗೆ ಪ್ರಯತ್ನಿಸುದಕ್ಕಿಂತ ಡೆಲ್ಲಿ ಪರ ಆಡಿದರೆ ಉತ್ತಮ. ಅವರಿಗೆ ದೆಹಲಿಯಲ್ಲಿ ಮನೆ ಇದೆ. ಕೊಹ್ಲಿಗೆ ಕುಟುಂಬವಿದೆ. ದೆಹಲಿಯಲ್ಲಿ ಆಡಿದರೆ, ಅವರಿಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬಹುದು. ವಿರಾಟ್ ಅವರು ದೆಹಲಿಗೆ ಏಕೆ ಆಡಬಾರದು? ರೊನಾಲ್ಡೊ, ಮೆಸ್ಸಿ, ಹ್ಯಾರಿ ಕೇನ್ ಅವರಂತಹ ದಿಗ್ಗಜ ಫುಟ್ಬಾಲ್​ ಆಟಗಾರರು ತಮ್ಮ ನೆಚ್ಚಿನ ಫ್ರಾಂಚೈಸಿ ತೊರೆದ ಉದಾಹರಣೆ ಇದೆ” ಎಂದು ಹೇಳುವ ಮೂಲಕ ಕೊಹ್ಲಿ ಡೆಲ್ಲಿ ಪರ ಆಡುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

ವಿರಾಟ್​ ಕೊಹ್ಲಿ ಮಾತ್ರ ಚೊಚ್ಚಲ ಆವೃತ್ತಿಯ ಐಪಿಎಲ್​ನಿಂದ ಇದುವರೆಗಿನ ಐಪಿಎಲ್​ ತನಕ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರನಾಗಿದ್ದಾರೆ. ಚೆನ್ನೈ ತಂಡ 2 ವರ್ಷ ಬ್ಯಾನ್​ ಆಗದಿದ್ದರೆ ಧೋನಿ ಕೂಡ ಈ ಹಿರಿಮೆಗೆ ಪಾತ್ರರಾಗುತ್ತಿದ್ದರು. ವಿರಾಟ್​ ಕೊಹ್ಲಿ 252 ಐಪಿಎಲ್​ ಪಂದ್ಯಗಳನ್ನಾಡಿ 8,004 ರನ್​ ಬಾರಿಸಿದ್ದಾರೆ. ಇದರಲ್ಲಿ 8 ಶತಕ ಮತ್ತು 55 ಅರ್ಧಶತಕ ಗಳಿಸಿದ್ದಾರೆ.

ಈ ಆವೃತ್ತಿಯಲ್ಲಿ ಕೊಹ್ಲಿ 15 ಪಂದ್ಯಗಳಿಂದ 741 ರನ್​ ಬಾರಿಸಿ ಸದ್ಯ ಆರೆಂಜ್​ ಕ್ಯಾಪ್​ ಹೋಲ್ಡರ್​ ಆಗಿದ್ದಾರೆ. 38 ಸಿಕ್ಸರ್​ ಮತ್ತು 62 ಬೌಂಡರಿ ಬಾರಿಸಿದ್ದಾರೆ. ಎಮಿನೇಟರ್​ ಪಂದ್ಯದಲ್ಲಿಯೂ ಕೊಹ್ಲಿ ತಂಡದ ಗೆಲುವಿಗಾಗಿ ಮೈದಾನದ ಮೂಲೆ ಮೂಲೆಗೂ ಚಿರತೆ ವೇಗದಲ್ಲಿ ಓಡಿ ಬೌಂಡರಿ ತಡೆಯುವ ಕಾರ್ಯ ಮಾಡಿದ್ದರು. ಆದದೆ ಅದೃಷ್ಟ ನೆಟ್ಟಗಿರದ ಕಾರಣ ಅಂತಿಮವಾಗಿ ಸೋಲು ಕಾಣಬೇಕಾಯಿತು.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ನಲ್ಲಿ ಸಂಜುಗಿಂತ ಪಂತ್​ ಬೆಸ್ಟ್​ ಎಂದ ಯುವರಾಜ್

T20 World Cup 2024: ಸಂಜು ಸ್ಯಾಮ್ಸನ್‌ಗಿಂತ(sanju samson) ರಿಷಭ್​ ಪಂತ್(Rishabh Pant) ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಎಡಗೈ ಆಟಗಾರ, ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲುವ ಬೃಹತ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಹಿಂದೆಯೂ ಕೂಡ ಭಾರತಕ್ಕೆ ಸ್ಮರಣೀಯ ಇನಿಂಗ್ಸ್​ ಆಡಿ ಗೆಲುವು ತಂದುಕೊಟ್ಟಿದ್ದಾರೆ. ಟಿ20 ವಿಶ್ವಕಪ್​ನಲ್ಲಿಯೂ ಅವರು ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಯುವರಾಜ್​ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

T20 World Cup 2024
Koo

ಮುಂಬಯಿ: ಟಿ20 ವಿಶ್ವಕಪ್​ ಟೂರ್ನಿಗೆ(T20 World Cup 2024) ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರನ್ನು ಆಡಿದರೆ ಉತ್ತಮ ಎಂದು ಹಲವು ಮಾಜಿ ಆಟಗಾರರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್​ ಸಿಂಗ್(Yuvraj Singh) ಕೂಡ ಯಾರನ್ನು ಆಡಿಸಿದರೆ ಉತ್ತಮ ಎಂದು ಹೇಳಿದ್ದಾರೆ.​​

​ಐಸಿಸಿ​ ಸಂದರ್ಶವೊಂದರಲ್ಲಿ ಮಾತನಾಡಿದ ಯುವರಾಜ್​ ಸಿಂಗ್​, “ನಾನು ಸಂಜು ಸ್ಯಾಮ್ಸನ್‌ಗಿಂತ(sanju samson) ರಿಷಭ್​ ಪಂತ್(Rishabh Pant) ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಎಡಗೈ ಆಟಗಾರ, ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲುವ ಬೃಹತ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಹಿಂದೆಯೂ ಕೂಡ ಭಾರತಕ್ಕೆ ಸ್ಮರಣೀಯ ಇನಿಂಗ್ಸ್​ ಆಡಿ ಗೆಲುವು ತಂದುಕೊಟ್ಟಿದ್ದಾರೆ. ಟಿ20 ವಿಶ್ವಕಪ್​ನಲ್ಲಿಯೂ ಅವರು ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಹೇಳಿದರು.

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್​ ಪಂತ್​ ಅವರು 14 ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಈ ಬಾರಿಯ ಐಪಿಎಲ್​ ಮೂಲಕ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ದರು. ಪಂತ್​ ದೀರ್ಘಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರೂ ಕೂಡ ಅವರ ಪ್ರದರ್ಶನದಲ್ಲಿ ಯಾವುದೇ ವ್ಯತ್ಯಾಸ ಮಾತ್ರ ಕಂಡುಬಂದಿರಲಿಲ್ಲ. ಹಳೆಯ ಫಾರ್ಮ್​ನಂತೆ ಪ್ರದರ್ಶನ ತೋರಿದ್ದರು. ಹೀಗಾಗಿ ಯುವರಾಜ್​ ಕೂಡ ಪಂತ್​ರನ್ನು ಟಿ20ಯಲ್ಲಿ ಆಡಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ T20 World Cup 2024: ಇನ್ನೆರಡು ದಿನದಲ್ಲಿ ಮಿನಿ ವಿಶ್ವಕಪ್​ ಸಮರಕ್ಕೆ ರೋಹಿತ್​, ಕೊಹ್ಲಿ ಸೇರಿ ಮೊದಲ ಬ್ಯಾಚ್​ ನ್ಯೂಯಾರ್ಕ್​ಗೆ ಪ್ರಯಾಣ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

Continue Reading

ಕ್ರೀಡೆ

Viral Video: ಔಟಾದ ಸಿಟ್ಟಿನಲ್ಲಿ ಡಗೌಟ್​​ ಸ್ಟ್ಯಾಂಡ್​ಗೆ ಕೈ ಬಡಿದ ಯಶಸ್ವಿ ಜೈಸ್ವಾಲ್

Viral Video: ಚೇಸಿಂಗ್​ ವೇಳೆ ಜೈಸ್ವಾಲ್​ ಉತ್ತಮವಾಗಿ ಬ್ಯಾಟಿಂಗ್​ ನಡೆಸುತ್ತಿದ್ದರು. 45 ರನ್​ ಗಳಿಸಿದ್ದ ವೇಳೆ ರಿವರ್ಸ್​ ಸ್ವೀಪ್​ ಮಾಡುವ ಯತ್ನಕ್ಕೆ ಕೈ ಹಾಕಿ ಇದರಲ್ಲಿ ವಿಫಲವಾಗಿ ಕ್ಯಾಚ್​ಗೆ ಬಲಿಯಾದರು. ಒಂದೆಡೆ ಅರ್ಧಶತಕ ತಪ್ಪಿದ ಮತ್ತು ತಂಡಕ್ಕೆ ಹಿನ್ನಡೆಯಾದ ಸಿಟ್ಟಿನಲ್ಲಿ ಡ್ರೆಸ್ಸಿಂಗ್​ ರೂಮ್​ಗೆ ತೆರಳುವ ವೇಳೆ ಜೈಸ್ವಾಲ್ ಡಗೌಟ್​ನ ಸ್ಟ್ಯಾಂಡ್​​ನ ಬೇಲಿಗೆ ತಮ್ಮ ಕೈಯನ್ನು ಜೋರಾಗಿ ಬಡಿದಿದ್ದಾರೆ.

VISTARANEWS.COM


on

viral video
Koo

ಅಹಮದಾಬಾದ್​: ಆರ್​ಸಿಬಿ(RCB) ವಿರುದ್ಧ ನಿನ್ನೆ(ಬುಧವಾರ) ನಡೆದ ಐಪಿಎಲ್​ನ(IPL 2024) ಎಲಿಮಿನೇಟರ್(​RCB vs RR Eliminator) ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್(Rajasthan Royals)​ ತಂಡ ನಾಲ್ಕು ವಿಕೆಟ್​ಗಳ ಗೆಲುವು ಸಾಧಿಸಿ ಕ್ವಾಲಿಫೈಯರ್​ ಹಂತಕ್ಕೆ ತೇರ್ಗಡೆಗೊಂಡಿತು. ಆದರೆ, ಇದೇ ಪಂದ್ಯದಲ್ಲಿ ಔಟಾದ ಹತಾಶೆಯಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal)​ ತಾಳ್ಮೆ ಕಳೆದುಕೊಂಡ(Yashasvi Jaiswal Loses Cool) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ.

ಚೇಸಿಂಗ್​ ವೇಳೆ ಜೈಸ್ವಾಲ್​ ಉತ್ತಮವಾಗಿ ಬ್ಯಾಟಿಂಗ್​ ನಡೆಸುತ್ತಿದ್ದರು. 45 ರನ್​ ಗಳಿಸಿದ್ದ ವೇಳೆ ರಿವರ್ಸ್​ ಸ್ವೀಪ್​ ಮಾಡುವ ಯತ್ನಕ್ಕೆ ಕೈ ಹಾಕಿ ಇದರಲ್ಲಿ ವಿಫಲವಾಗಿ ಕ್ಯಾಚ್​ಗೆ ಬಲಿಯಾದರು. ಒಂದೆಡೆ ಅರ್ಧಶತಕ ತಪ್ಪಿದ ಮತ್ತು ತಂಡಕ್ಕೆ ಹಿನ್ನಡೆಯಾದ ಸಿಟ್ಟಿನಲ್ಲಿ ಡ್ರೆಸ್ಸಿಂಗ್​ ರೂಮ್​ಗೆ ತೆರಳುವ ವೇಳೆ ಜೈಸ್ವಾಲ್ ಡಗೌಟ್​ನ ಸ್ಟ್ಯಾಂಡ್​​ನ ಬೇಲಿಗೆ ತಮ್ಮ ಕೈಯನ್ನು ಜೋರಾಗಿ ಬಡಿದಿದ್ದಾರೆ. ಅಲ್ಲದೆ ಜೋರಾಗಿ ಕಿರುಚಾಟ ಕೂಡ ನಡೆಸಿದ್ದಾರೆ. ಇದರ ವಿಡಿಯೊ ವೈರಲ್​ ಆಗಿದ್ದು ನೆಟ್ಟಿಗರು ಈ ರೀತಿಯ ವರ್ತನೆ ಸರಿಯಲ್ಲ ಎಂದು ಬುದ್ಧಿಮಾತು ಹೇಳಿದ್ದಾರೆ.

ಕಳೆದ ವರ್ಷದ ಐಪಿಎಲ್​ ಟೂರ್ನಿಯಲ್ಲಿ ಜೈಸ್ವಾಲ್​ 14 ಪಂದ್ಯ ಆಡಿ 625 ರನ್ ಗಳಿಸಿದ್ದರು. ಆದರೆ ಈ ಆವೃತ್ತಿಯಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಿಲ್ಲ. ಮುಂಬೈ ವಿರುದ್ಧದ ಪಂದ್ಯದಲ್ಲಿ ತಕವೊಂದನ್ನು ಬಾರಿಸಿದ್ದು ಬಿಟ್ಟರೆ ಇವರ ಬ್ಯಾಟ್​ನಿಂದ ದೊಡ್ಡ ಇನಿಂಗ್ಸ್​ ಕಂಡುಬಂದಿಲ್ಲ. ಮುಂದಿನ ತಿಂಗಳು ನಡೆಯುವ ಟಿ20 ವಿಶ್ವಕಪ್​ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಜೈಸ್ವಾಲ್​ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ 8 ವಿಕೆಟಿಗೆ 172 ರನ್‌ ಗಳಿಸಿತು. ರಾಜಸ್ಥಾನ್‌ 19 ಓವರ್‌ಗಳಲ್ಲಿ 6 ವಿಕೆಟಿಗೆ 174 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಚೇಸಿಂಗ್​ ವೇಳೆ ರಾಜಸ್ಥಾನ್‌ ಬಿರುಸಿನ ಆಡವಾಡಿತು. ಜೈಸ್ವಾಲ್‌ (45)-ಕ್ಯಾಡ್‌ಮೋರ್‌ (20) ಮೊದಲ ವಿಕೆಟ್​ಗೆ 46 ರನ್‌ ಜತೆಯಾಟ ನಿಭಾಯಿಸಿದರು. ಆ ಬಳಿಕ ಜೈಸ್ವಾಲ್‌-ಸ್ಯಾಮ್ಸನ್‌ ಜತೆಗೂಡಿ 35 ರನ್‌ ಕಲೆಹಾಕಿದರು. 112ಕ್ಕೆ 4 ವಿಕೆಟ್‌ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್‌-ಹೆಟ್‌ಮೈರ್‌ ಸಿಡಿದು ನಿಂತು 45 ರನ್‌ ಜತೆಯಾಟ ನಿಭಾಯಿಸಿ ಆರ್‌ಸಿಬಿಗೆ ಸೋಲುಣಿಸಿದರು. ಮೂರು ಓವರ್​ ತನಕ ಉತ್ತಮ ಲಯದಲ್ಲಿದ್ದ ಕ್ಯಾಮರೂನ್​ ಗ್ರೀನ್​ ನಾಲ್ಕನೇ ಓವರ್​ನಲ್ಲಿ ದುಬಾರಿಯಾದರು. ಹೆಟ್‌ಮೈರ್‌ ಈ ಓವರ್​ನಲ್ಲಿ ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಬಿಸಿ ಮುಟ್ಟಿಸಿದರು.

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್​​ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್​ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್​ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್​ನಲ್ಲಿ ಅನಗತ್ಯವಾಗಿ ವಿಕೆಟ್​ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್​ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್​ಔಟ್​ ಚಾನ್ಸ್​ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.

Continue Reading

ಕ್ರೀಡೆ

SRH vs RR: ರಾಜಸ್ಥಾನ್​-ಹೈದರಾಬಾದ್​ ಐಪಿಎಲ್​ ದಾಖಲೆ, ಹವಾಮಾನ ವರದಿ ಹೇಗಿದೆ?

SRH vs RR: ಉಭಯ ತಂಡಗಳು ಇದುವರೆಗಿನ ಐಪಿಎಲ್ ಪಂದ್ಯದಲ್ಲಿ ಒಟ್ಟು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್​ 10, ರಾಜಸ್ಥಾನ್​ 9 ಪಂದ್ಯಗಳನ್ನು ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹೈದರಾಬಾದ್​ ಬಲಿಷ್ಠವಾಗಿದೆ. ಜತೆಗೆ ಈ ಬಾರಿ ತಂಡ ಬಲಿಷ್ಠವಾಗಿಯೂ ಗೋಚರಿಸಿದೆ.

VISTARANEWS.COM


on

SRH vs RR
Koo

ಚೆನ್ನೈ: ಐಪಿಎಲ್​ನ ದ್ವಿತೀಯ ಕ್ವಾಲಿಫೈಯರ್(SRH vs RR Qualifier 2)​ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ(MA Chidambaram Stadium, Chennai) ನಾಳೆ(ಶುಕ್ರವಾರ) ನಡೆಯುವ ಈ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್(SRH vs RR)​ ಮತ್ತು ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ತಂಡಗಳು ಕಾದಾಟ ನಡೆಸಲಿವೆ. ಗೆದ್ದವರು ಮೇ 26ರಂದು ನಡೆಯುವ ಫೈನಲ್​ನಲ್ಲಿ ಕೆಕೆಆರ್​ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. ರಾಜಸ್ಥಾನ್(Rajasthan Royals) ಮತ್ತು ಹೈದರಾಬಾದ್​ ತಂಡದ ನಾಕೌಟ್​/ಪ್ಲೇ ಆಫ್​ ಸಾಧನೆಯ ಇಣುಕು ನೋಡ ಇಂತಿದೆ.

ಲೀಗ್​ನಲ್ಲಿ 1 ರನ್​ ಗೆಲುವು


ಈ ಬಾರಿಯ ಲೀಗ್​ನಲ್ಲಿ ಇತ್ತಂಡಗಳು ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಅತ್ಯಂತ ರೋಚವಾಗಿ ಸಾಗಿದ ಈ ಪಂದ್ಯವನ್ನು ಸನ್​ರೈಸರ್ಸ್​ ಹೈದರಾಬಾದ್​ 1 ರನ್​ ಅಂತರದಿಂದ ಗೆದ್ದು ಬೀಗಿತ್ತು. ಭುನೇಶ್ವರ್​ ಕುಮಾರ್​ ಅವರು ಅಂತಿಮ ಎಸೆತದಲ್ಲಿ ರೋಮ್ಮನ್​ ಪೋವೆಲ್​ ಅವರನ್ನು ಎಲ್​ಬಿಡ್ಲ್ಯು ಮಾಡುವ ಮೂಲಕ ಈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಸೋಲಿಗೆ ರಾಜಸ್ಥಾನ್​ ಕ್ವಾಲಿಫೈಯರ್​ ಪಂದ್ಯದಲ್ಲಿ ಸೇಡು ತೀರಿಸಲು ಪಣ ತೊಟ್ಟಿದೆ.

ರಾಜಸ್ಥಾನ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2008ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಚಾಂಪಿಯನ್​

2013ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2015ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2018ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 2ನೇ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

ಬಲಾಬಲ


ಉಭಯ ತಂಡಗಳು ಇದುವರೆಗಿನ ಐಪಿಎಲ್ ಪಂದ್ಯದಲ್ಲಿ ಒಟ್ಟು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್​ 10, ರಾಜಸ್ಥಾನ್​ 9 ಪಂದ್ಯಗಳನ್ನು ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹೈದರಾಬಾದ್​ ಬಲಿಷ್ಠವಾಗಿದೆ. ಜತೆಗೆ ಈ ಬಾರಿ ತಂಡ ಬಲಿಷ್ಠವಾಗಿಯೂ ಗೋಚರಿಸಿದೆ.

ಹೈದರಾಬಾದ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2013ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಎಲಿಮಿನೇಟರ್​ನಲ್ಲಿ ಸೋಲು

2016ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಚಾಂಪಿಯನ್‌

2017ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಎಲಿಮಿನೇಟರ್​ನಲ್ಲಿ ಸೋಲು

2018ರಲ್ಲಿ ಮೊದಲ ಸ್ಥಾನ. ರನ್ನರ್ ಅಪ್‌

2019ರಲ್ಲಿ 4ನೇ ಸ್ಥಾನ. ಎಲಿಮಿನೇಟರ್​ನಲ್ಲಿ ಸೋಲು

2020ರಲ್ಲಿ 3ನೇ ಸ್ಥಾನ. ಕ್ವಾಲಿಫೈಯರ್‌-2ನಲ್ಲಿ ಸೋಲು

ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

ಹವಾಮಾನ ವರದಿ


ಪಂದ್ಯ ಚೆನ್ನೈಯಲ್ಲಿ ನಡೆಯುವ ಕಾರಣ ಪಂದ್ಯಕ್ಕೆ ಮಳೆ ಭೀತಿ ಇದ್ದೇ ಇದೆ. ಈಗಾಗಲೇ ತಮಿಳುನಾಡಿನಲ್ಲಿ ವರುಣನ ಆರ್ಭಟದಿಂದ ಕೆಲವು ಪ್ರದೇಶಗಳು ವಿಪರೀತ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಂದೊಮ್ಮೆ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದರೆ 120 ನಿಮಿಷಗಳ (2 ಗಂಟೆ) ಅವಧಿಗೆ ಪಂದ್ಯವನ್ನು ವಿಸ್ತರಿಸಬಹುದಾಗಿದೆ. ಆಗ 9.40ಕ್ಕೆ ಪಂದ್ಯ ಆರಂಭವಾಗುವುದಿದ್ದರೂ ಓವರ್‌ಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ. ಸ್ಪಷ್ಟ ಫ‌ಲಿತಾಂಶಕ್ಕೆ ತಲಾ 5 ಓವರ್‌ಗಳ ಆಟ ನಡೆಯಬೇಕಿದೆ. ಹೆಚ್ಚುವರಿ ಅವಧಿಯಲ್ಲೂ ಇದು ಸಾಧ್ಯವಾಗದೇ ಹೋದರೆ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮೇಲಿದ್ದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ. ಇದರ ಲಾಭ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಸಿಗಲಿದೆ. ಹೈದರಾಬಾದ್​ ತಂಡ ಲೀಗ್​ ಹಂತದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು.

Continue Reading
Advertisement
Chemical Factory
ದೇಶ3 mins ago

Chemical Factory: ಕೆಮಿಕಲ್‌ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; ನಾಲ್ವರ ಸಾವು, 25 ಮಂದಿಗೆ ಗಾಯ

Star Holiday Fashion
ಫ್ಯಾಷನ್11 mins ago

Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Prajwal Revanna Case Surrender Now Devegowda warning to Prajwal
ರಾಜಕೀಯ15 mins ago

Prajwal Revanna Case: ತಾಳ್ಮೆ ಪರೀಕ್ಷಿಸಬೇಡ, ಈಗಲೇ ಬಂದು ಶರಣಾಗು; ಪ್ರಜ್ವಲ್‌ಗೆ ದೇವೇಗೌಡರ ವಾರ್ನಿಂಗ್‌

IPL 202
ಕ್ರೀಡೆ15 mins ago

IPL 2024: ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ಈ ಫ್ರಾಂಚೈಸಿ ಪರ ಆಡಿದರೆ ಉತ್ತಮ ಎಂದ ಆರ್​ಸಿಬಿ ಮಾಜಿ ನಾಯಕ

2024 Maruti Swift
ಆಟೋಮೊಬೈಲ್22 mins ago

2024 Maruti Swift : ಹಲವಾರು ಆ್ಯಕ್ಸೆಸರಿ ಪ್ಯಾಕ್​ನೊಂದಿಗೆ ಬಂದಿದೆ ಮಾರುತಿ ಸ್ವಿಫ್ಟ್​​ ಎಪಿಕ್​

West Bengal Violence
ದೇಶ40 mins ago

West Bengal Violence: ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ; ಪೊಲೀಸರಿಂದ ಲಾಠಿಚಾರ್ಜ್‌

Narendra Modi
ದೇಶ54 mins ago

Narendra Modi: ಪಾಕ್‌ ʼಬಂಡವಾಳʼ ಏನೆಂದು ಅಲ್ಲಿಗೇ ಹೋಗಿ ನೋಡಿ ಬಂದಿರುವೆ; ಕಾಂಗ್ರೆಸ್‌ ‘ಬಾಂಬ್’‌ ಹೇಳಿಕೆಗೆ ಮೋದಿ ಟಾಂಗ್!

Money Guide
ಮನಿ-ಗೈಡ್57 mins ago

Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಸಂಜುಗಿಂತ ಪಂತ್​ ಬೆಸ್ಟ್​ ಎಂದ ಯುವರಾಜ್

ayodhya ram mandir 1
ಪ್ರಮುಖ ಸುದ್ದಿ1 hour ago

Ayodhya Ram Mandir: ಅಯೋಧ್ಯೆ ಶ್ರೀ ರಾಮನಿಗೆ ಬೆಳ್ಳಿಯ ಬಿಲ್ಲು- ಬಾಣ; ಪೂಜಿಸಿ ಕಳಿಸಿಕೊಟ್ಟ ಶೃಂಗೇರಿ ಶ್ರೀಗಳು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ12 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌