dont-insult-sachin-tendulkar-kohli-by-comparing-shubman-gill-former-coach-upset IPL 2023 : ಸಚಿನ್​, ಕೊಹ್ಲಿಗೆ ಶುಭ್​ಮನ್​ ಗಿಲ್​ ಹೋಲಿಕೆ ಮಾಡುವುದು ಅನ್ಯಾಯ; ಮಾಜಿ ಕೋಚ್ ಬೇಸರ - Vistara News

ಕ್ರಿಕೆಟ್

IPL 2023 : ಸಚಿನ್​, ಕೊಹ್ಲಿಗೆ ಶುಭ್​ಮನ್​ ಗಿಲ್​ ಹೋಲಿಕೆ ಮಾಡುವುದು ಅನ್ಯಾಯ; ಮಾಜಿ ಕೋಚ್ ಬೇಸರ

ಐಪಿಎಲ್ 2023 ರಲ್ಲಿ ಆಟದ ಕಿರು ಸ್ವರೂಪದಲ್ಲಿ ಶುಬ್ಮನ್ ಗಿಲ್ ಅವರ ಸ್ಥಾನಮಾನದ ಏರಿಕೆಯ ಬಗ್ಗೆ ಗ್ಯಾರಿ ಕರ್ಸ್ಟನ್ ವಿವರವಾಗಿ ಮಾತನಾಡಿದರು.

VISTARANEWS.COM


on

Shubhman gill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಓಪನರ್ ಶುಭ್​ಮನ್​ ಗಿಲ್ ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್​​ನ 16ನೇ ಆವೃತ್ತಿಯಲ್ಲಿ (IPL 2023) ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಋತುವಿನಲ್ಲಿ ಶುಭ್​​ಮನ್​​ ಗಿಲ್ ಮೂರು ಶತಕಗಳೊಂದಿಗೆ 890 ರನ್ ಗಳಿಸಿದ್ದಾರೆ. ಪಂದ್ಯಾವಳಿಯ. 23 ವರ್ಷದ ಆರಂಭಿಕ ಆಟಗಾರ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಶತಕ (60 ಎಸೆತಗಳಲ್ಲಿ 129 ರನ್) ಗಳಿಸಿದ್ದರು. ಅದಕ್ಕಿಂತ ಮೊದಲು ಆರ್​ಸಿಬಿ ಪರವೂ ಒಂದು ಶತಕ ಬಾರಿಸಿದ್ದರು.

ಗಿಲ್​ ಹಾಲಿ ಋತುವಿನಲ್ಲಿ ಒಟ್ಟು ಒಟ್ಟು 890 ರನ್ ಬಾರಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ವಿರಾಟ್​ ಕೊಹ್ಲಿ 2016ರಲ್ಲಿ 973 ರನ್ ಬಾರಿಸಿ ಈ ಸಾಲಿನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಕ್ರಿಕೆಟ್​ ಕ್ಷೇತ್ರದಿಂದ ದೊಡ್ಡ ಮಟ್ಟದ ಹೊಗಳಿಕೆ ಲಭಿಸಿದೆ. ಅಲ್ಲದೆ, ಸಾಕಷ್ಟು ಮಂದಿ ಅವರನ್ನು ಭಾರತ ತಂಡದ ಬ್ಯಾಟಿಂಗ್​ ಲೆಜೆಂಡ್​ಗಳಾದ ವಿರಾಟ್​ ಕೊಹ್ಲಿ ಹಾಗೂ ಸಚಿನ್​ ತೆಂಡೂಲ್ಕರ್ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. ಆದರೆ, ಯುವ ಆಟಗಾರನನ್ನು ಈಗಲೇ ದಿಗ್ಗಜ ಆಟಗಾರರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂಬುದಾಗಿ ಗುಜರಾತ್​ ತಂಡದ ಮಾರ್ಗದರ್ಶಕ (ಮೆಂಟರ್​​)​ ಗ್ಯಾರಿ ಕಸ್ಟರ್ನ್​ ಅವರು ಹೇಳಿದ್ದಾರೆ.

ಈ ಹಿಂದೆ ಭಾರತದ ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ ಕರ್ಸ್ಟನ್ ಅವರು ಹಿರಿಯ ಆಟಗಾರರಿಗೆ ಗಿಲ್​ ಅವರನ್ನು ಹೋಲಿಕೆ ಮಾಡುವುದು ಅನ್ಯಾಯ ಎಂದು ಹೇಳಿದ್ದಾರೆ. ಆದರೆ, ಗಿಲ್​ಗೆ ಎಲ್ಲ ಸ್ವರೂಪದ ಕ್ರಿಕೆಟ್​ನಲ್ಲಿ ಉತ್ತಮ ಆಟಗಾರನಾಗುವ ಅವಕಾಶಗಳು ಇವೆ ಎಂದು ಹೇಳಿದ್ದಾರೆ.

ಗಿಲ್​ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗುವುದು ನಿಶ್ಚಿತ. ಆದರೆ, ಈಗಷ್ಟೇ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿರುವ ಅವರನ್ನು ಸಚಿನ್ ಮತ್ತು ವಿರಾಟ್​​ಗೆ ಹೋಲಿಸುವುದು ಅನ್ಯಾಯವಾಗುತ್ತದೆ” ಎಂದು ಕರ್ಸ್ಟನ್ ಕ್ರಿಕ್​ಬಜ್​ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ : Team India : ಐಪಿಎಲ್​ ಬಳಿಕ ಈಗ ಭಾರತ ಕ್ರಿಕೆಟ್​ ತಂಡ ಯಾವೆಲ್ಲ ಟೂರ್ನಿಯಲ್ಲಿ ಆಡಲಿದೆ?

ಭಾರತ ಕ್ರಿಕೆಟ್​ ತಂಡಕ್ಕೆ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಯಶಸ್ವಿಯಾಗಿ ಆಡುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂಬದಾಗಿಯೂ ಗಿಲ್​ ಹೇಳಿದರು. ಇದೇ ವೇಳೆ ಅವರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಗಿಲ್​ ಫಾರ್ಮ್ ಉಳಿಯಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಕ್ಕೂ ಸಕಾರಾತ್ಮಕ ಉತ್ತರ ನೀಡಿದ್ದಾರೆ.

ಶುಭ್​ಮನ್​ ಎಲ್ಲಾ ಮಾದರಿಯ ಕ್ರಿಕೆಟ್​​ನಲ್ಲಿ ಭಾರ ತಂಡದ ಶ್ರೇಷ್ಠ ಆಟಗಾರನಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಯಾವುದೇ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ. ಅದನ್ನು ಅವರು ಹೇಗೆ ಬಳಸುತ್ತಾರೆ ಮತ್ತು ಹೇಗೆ ಪ್ರಗತಿ ಸಾಧಿಸುತ್ತಾರೆ ಎಂಬುದು ಅವರು ದೀರ್ಘಕಾಲೀನ ಯಶಸ್ಸನ್ನು ನಿರ್ಧರಿಸುತ್ತದೆ. ಎಂದು ಭಾರತದ ಮಾಜಿ ಕೋಚ್​​ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Viral News: ಕ್ರಿಕೆಟ್‌ ಆಡುವಾಗ ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ದಾರುಣ ಸಾವು; ವಿಡಿಯೊ ಇದೆ

Viral News: ಪುಣೆಯಲ್ಲಿ ಕ್ರಿಕೆಟ್​ ಅಭ್ಯಾಸ ಆಡುತ್ತಿದ್ದ ವೇಳೆ ಚೆಂಡು ತನ್ನ ಖಾಸಗಿ(Ball hit boy’s private part) ಭಾಗಕ್ಕೆ ಬಡಿದು 11 ವರ್ಷದ(11-year-old ) ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಈ ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ(viral news).

VISTARANEWS.COM


on

viral news
Koo

ಪುಣೆ: ಸ್ನೇಹಿತರೊಂದಿಗೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ವೇಳೆ ಚೆಂಡು ತನ್ನ ಖಾಸಗಿ(Ball hit boy’s private part) ಭಾಗಕ್ಕೆ ಬಡಿದು 11 ವರ್ಷದ(11-year-old ) ಬಾಲಕ ಮೃತಪಟ್ಟಿರುವ ದಾರುಣ ಘಟನೆಯೊಂದು ಪುಣೆಯಲ್ಲಿ ನಡೆದಿದೆ. ಈ ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ(viral news). ಮೃತಪಟ್ಟ ಬಾಲಕನನ್ನು ಶೌರ್ಯ(Shaurya ) ಎಂದು ಗುರಿತಿಸಲಾಗಿದೆ.

ಬೌಲಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್‌ಮನ್ ಹೊಡೆದ ಚೆಂಡು ನೇರವಾಗಿ ಶೌರ್ಯನ ಖಾಸಗಿ ಭಾಗಕ್ಕೆ ಬಡಿದಿದೆ. ನೋವಿನಿಂದ ನರಳಿದ ಆತ ತಕ್ಷಣ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನ ಸ್ನೇಹಿತರು ಆರೈಕೆ ಮಾಡಿದರೂ ಕೂಡ ಯಾವುದೇ ಸ್ಪಂದನೆ ನೀಡದ ಕಾರಣ ಶೌರ್ಯನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆತ ಈ ಮೊದಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಚೆಂಡಿನ ಬಲವಾದ ಹೊಡೆತಕ್ಕೆ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೆಲ ತಿಂಗಳ ಹಿಂದಷ್ಟೇ ಕ್ರಿಕೆಟ್ ಪಂದ್ಯದ ವೇಳೆ ತಲೆಗೆ ಚೆಂಡು ಬಡಿದು 52 ವರ್ಷದ ಕ್ರಿಕೆಟಿಗ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿತ್ತು. ಒಂದೇ ಮೈದಾನದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದ ವೇಳೆ ಮತ್ತೊಂದು ಪಂದ್ಯದ ಕ್ರಿಕೆಟ್ ಚೆಂಡು ತಲೆಗೆ ಬಡಿದು ಕ್ರಿಕೆಟಿಗ ಮೃತಪಟ್ಟಿದ್ದ. ಉದ್ಯಮಿ ಜಯೇಶ್ ಚುನ್ನಿಲಾಲ್ ಸಾವ್ಲಾ ಮೃತಪಟ್ಟ ಕ್ರಿಕೆಟಿಗ.

ಮಾಟುಂಗಾದ ದಾಡ್ಕರ್ ಮೈದಾನದಲ್ಲಿ ನಡೆಯುತ್ತಿದ್ದ ಕಚ್ಚಿ ವೀಸಾ ಓಸ್ವಾಲ್ ವಿಕಾಸ್ ಹಿರಿಯರ ಲೆಜೆಂಡ್ ಕಪ್ ಟಿ20 ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿತ್ತು. ಸ್ಥಳಾವಕಾಶದ ಕೊರತೆ ಮತ್ತು ಸಮಯದ ಅಭಾವದಿಂದಾಗಿ ಒಂದೇ ಮೈದಾನದಲ್ಲಿ ಎರಡು ಪಂದ್ಯಗಳನ್ನು ಏಕಕಾಲದಲ್ಲಿ ಆಯೋಜಿಸಲಾಗಿತ್ತು. ಪಕ್ಕದ ಪಿಚ್‌ ನಿಂದ ಬಂದ ಚೆಂಡು ವ್ಯಕ್ತಿಯ ತಲೆಗೆ ಬಡಿದಿದಿತ್ತು. ಮೃತ ವ್ಯಕ್ತಿ ಪಕ್ಕದ ಪಿಚ್​ನಲ್ಲಿ ಆಡುತ್ತಿದ್ದ ಬ್ಯಾಟರ್​ನ ಕಡೆಗೆ ಬೆನ್ನು ಹಾಕಿ ಫೀಲ್ಡಿಂಗ್ ಮಾಡುತ್ತಿದ್ದರು, ಆದ್ದರಿಂದ ಚೆಂಡು ಅವರ ಕಡೆಗೆ ಬರುವುದನ್ನು ನೋಡಲು ಸಾಧ್ಯವಾಗಿರಲಿಲ್ಲ. ನೇರವಾಗಿ ಬಂದ ಚೆಂಡು ಸಾವ್ಲಾ ತಲೆಗೆ ಬಡಿದಿತ್ತು.

ಇದನ್ನೂ ಓದಿ Gadag News: ಮುಂಡರಗಿ ಬಳಿ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರ ಸಾವು

ಹೃದಯಾಘಾತದಿಂದ ಮೈದಾನದಲ್ಲೇ ಮೃತಪಟ್ಟ ಇಂಜಿನಿಯರ್


ಕ್ರಿಕೆಟ್ ಆಡುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾಫ್ಟ್ ವೇರ್ ಇಂಜಿನಿಯರ್ ಮೈದಾನದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ಕಳೆದ ಡಿಸೆಂಬರ್​ನಲ್ಲಿ ನೋಯ್ಡಾದಲ್ಲಿ ಸಂಭವಿಸಿತ್ತು. ವಿಕಾಸ್ ಅವರು ಸ್ಟ್ರೈಕ್​ನಲ್ಲಿದ್ದ ಸಹ ಬ್ಯಾಟರ್​ ಜತೆ ಮಾತುಕತೆ ನಡೆಸಿ ಹಿಂದಿರುಗುವ ವೇಳೆ ಹಠಾತ್​ ಆಗಿ ಪಿಚ್​ನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.

Continue Reading

ಕ್ರಿಕೆಟ್

MS Dhoni: ಧೋನಿಯ ಕ್ಲೀನ್​ ಬೌಲ್ಡ್​ ಕಂಡು ಬೇಸರಗೊಂಡ ಅಭಿಮಾನಿಗಳು; ವಿಡಿಯೊ ವೈರಲ್​

MS Dhoni: ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿಯ ನಿರ್ಧಾರಕ್ಕೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಕೆ ವ್ಯಕ್ತಪಡಿಸಿದ್ದಾರೆ. ಧೋನಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಕ್ಕಿಂತ ಚೆನ್ನೈ ಅವರ ಬದಲಿಗೆ ಮತ್ತೊಬ್ಬ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

VISTARANEWS.COM


on

MS Dhoni
Koo

ಧರ್ಮಶಾಲಾ: ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ ಭಾನುವಾರ ನಡೆದ ಪಂಜಾಬ್​ ಕಿಂಗ್ಸ್(Punjab Kings)​ ವಿರುದ್ಧದ ಐಪಿಎಲ್(IPL 2024)​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ 28 ರನ್​ಗಳ ಗೆಲುವು ಸಾಧಿಸಿತು. ಆದರೆ, ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ(MS Dhoni) ಮೊದಲ ಎಸೆತದಲ್ಲೇ ಕ್ಲೀನ್​ ಬೌಲ್ಡ್​ ಆಗಿ ಗೋಲ್ಡನ್​ ಡಕ್​(Dhoni golden duck) ಸಂಕಟಕ್ಕೆ ಸಿಲುಕಿದರು. ಇದನ್ನು ಕಂಡು ಅವರ ಅಭಿಮಾನಿಗಳು ಭಾರೀ ನಿರಾಸೆಗೊಂಡರು. ಇದರ ವಿಡಿಯೊ ವೈರಲ್​ ಆಗಿದೆ.

ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಶೂನ್ಯಕ್ಕೆ ಔಟ್​ ಆಗುವ ಮೂಲಕ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಧೋನಿ ಔಟಾಗುತ್ತಿದ್ದಂತೆ ಅವರ ಅಭಿಮಾನಿಗಳು ಬೇಸರದಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತರ. ಈ ವಿಡಿಯೊ ವೈರಲ್​ ಆಗುತ್ತಿದೆ.

ಚೆನ್ನೈ ಬ್ಯಾಟಿಂಗ್​ ಇನಿಂಗ್ಸ್​ನ 19ನೇ ಓವರ್​ನಲ್ಲಿ ಧೋನಿ ಅವರು ಹರ್ಷಲ್​ ಪಟೇಲ್​ ಎಸೆದ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಆದರೆ ಕೀಪಿಂಗ್​ನಲ್ಲಿ ಧೋನಿ ಒಂದು ಸೊಗಸಾದ ಕ್ಯಾಚ್​ ಹಿಡಿದು ಮಿಂಚಿದರು. ಜಿತೇಶ್​ ಶರ್ಮ ಅವರ ಕ್ಯಾಚ್​ ಇದಾಗಿತ್ತು.

ಇದನ್ನೂ ಓದಿ IPL 2024 Points Table: ರಾಜಸ್ಥಾನ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

ಹರ್ಭಜನ್​ ಟೀಕೆ


ಈ ಪಂದ್ಯದಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿಯ ನಿರ್ಧಾರಕ್ಕೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಕೆ ವ್ಯಕ್ತಪಡಿಸಿದ್ದಾರೆ. ಧೋನಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಕ್ಕಿಂತ ಚೆನ್ನೈ ಅವರ ಬದಲಿಗೆ ಮತ್ತೊಬ್ಬ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌, ಸತತವಾಗಿ ವಿಕೆಟ್‌ ಕಳೆದುಕೊಂಡು ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

Continue Reading

ಕ್ರೀಡೆ

ICC Women’s T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಶ್ರೀಲಂಕಾ

ICC Women’s T20 World Cup 2024: ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ಗೆ(ICC Women’s T20 World Cup 2024) ಶ್ರೀಲಂಕಾ(Sri Lanka Women’s T20) ಎರಡನೇ ಕ್ವಾಲಿಫೈಯರ್ ತಂಡವಾಗಿ ಅರ್ಹತೆ ಪಡೆದಿದೆ. ಎರಡನೇ ಸೆಮಿಫೈನಲ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ 15 ರನ್​ ಅಂತರದಿಂದ ಗೆಲುವು ಸಾಧಿಸಿ ಅರ್ಹತೆ ಪಡೆದುಕೊಂಡಿತು.

VISTARANEWS.COM


on

ICC Women’s T20 World Cup 2024
Koo

ದುಬೈ: ಅಕ್ಟೋಬರ್ 3 ರಿಂದ 20 ರವರೆಗೆ ಬಾಂಗ್ಲಾದೇಶದಲ್ಲಿ ನಡೆಯಲಿರುವ ಈ ವರ್ಷದ ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ಗೆ(ICC Women’s T20 World Cup 2024) ಶ್ರೀಲಂಕಾ(Sri Lanka Women’s T20) ಎರಡನೇ ಕ್ವಾಲಿಫೈಯರ್ ತಂಡವಾಗಿ ಅರ್ಹತೆ ಪಡೆದಿದೆ. ಸ್ಕಾಟ್ಲೆಂಡ್‌ ಮೊದಲ ಕ್ವಾಲಿಫೈಯರ್ ತಂಡವಾಗಿದೆ. ಆತಿಥೇಯ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಜತೆ ಶ್ರೀಲಂಕಾ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಎರಡನೇ ಸೆಮಿಫೈನಲ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಕಣಕ್ಕಿಳಿದ್ದ ಲಂಕಾ ತಂಡ ಗೆಲುವು ಸಾಧಿಸುವ ಮೂಲಕ ಪ್ರಧಾನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಮೊದಲು ಬ್ಯಾಟಿಂಗ್​ ನಡೆಸಿದ ಲಂಕಾ 6 ವಿಕೆಟ್​ಗೆ 149 ರನ್​ ಬಾರಿಸಿತು. ಈ ಮೊತ್ತವನ್ನು ದಿಟ್ಟವಾಗಿ ಒಂದು ಹಂತದ ವರೆಗೆ ಬೆನ್ನಟ್ಟಿಕೊಂಡು ಹೋದ ಯುಎಇ 7 ವಿಕೆಟ್​ಗೆ 134 ರನ್​ ಗಳಿಸಿ 15 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು.

ಈಗಾಗಲೇ ಟೂರ್ನಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. ಭಾನುವಾರ ಐಸಿಸಿ ಈ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಟೂರ್ನಮೆಂಟ್‌ನಲ್ಲಿ ಪ್ರತಿ ತಂಡವು ನಾಲ್ಕು ಗುಂಪು ಪಂದ್ಯಗಳನ್ನು ಆಡುತ್ತದೆ, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದೆ. ಸೆಮಿಫೈನಲ್​ ಪಂದ್ಯಗಳು ಅಕ್ಟೋಬರ್ 17 ಮತ್ತು 18 ರಂದು ನಡೆಯಲಿದೆ. ಫೈನಲ್​ ಪಂದ್ಯ ಅಕ್ಟೋಬರ್​ 20 ರಂದು ಢಾಕಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 23 ಪಂದ್ಯಗಳನ್ನು ಆಡಲಾಗುತ್ತದೆ. 19 ದಿನ ಪಂದ್ಯಾವಳಿ ಸಾಗಲಿದೆ. ಢಾಕಾ ಮತ್ತು ಸಿಲ್ಹೆಟ್‌ನಲ್ಲಿ ಪಂದ್ಯಗಳು ನಡೆಯಲಿವೆ. ಲೀಗ್​ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನವಿಲ್ಲ. ಕೇಲವ ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಯಾಗಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿದೆ. ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ಈ ಪಂದ್ಯ ಅಕ್ಟೋಬರ್​ 3 ರಂದು ನಡೆಯಲಿದೆ. ಎಲ್ಲಾ ಗುಂಪು ಪಂದ್ಯಗಳು ಸಿಲ್ಹೆಟ್‌ನಲ್ಲಿ ನಡೆಯಲಿದೆ. ಭಾರತವು ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್​ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ.

Continue Reading

ಕ್ರೀಡೆ

Rohit Sharma: ಐಪಿಎಲ್​ನಿಂದ ಹೊರಗುಳಿಯಲಿದ್ದಾರೆ ರೋಹಿತ್​ ಶರ್ಮ!

Rohit Sharma: ರೋಹಿತ್​ ಶರ್ಮ ಈ ಬಾರಿಯ ಐಪಿಎಲ್​ನಲ್ಲಿ ಅಷ್ಟಾಗಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿಲ್ಲ. ಆಡಿದ 11 ಇನಿಂಗ್ಸ್​ಗಳಿಂದ ಕೇವಲ 326 ರನ್​ ಮಾತ್ರ ಗಳಿಸಿದ್ದಾರೆ. ಅವರ ಈ ಬ್ಯಾಟಿಂಗ್​ ವೈಫಲ್ಯಕ್ಕೆ ನಾಯಕತ್ವ ಬದಲಾವಣೆಯೂ ಕೂಡ ಕಾರಣವಾಗಿರಬಹುದು

VISTARANEWS.COM


on

Rohit Sharma
Koo

ಮುಂಬಯಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಟಿ20 ವಿಶ್ವಕಪ್​ಗೆ ಮುನ್ನೆಚ್ಚರಿಕಾ ಕ್ರಮವಾಗಿ ಬೆನ್ನು ನೋವಿನಿಂದ ಬಳಲುತ್ತಿರುವ ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಇನ್ನುಳಿದ ಮೂರು ಐಪಿಎಲ್​(IPL 2024) ಪಂದ್ಯಗಳಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಇಂದು ನಡೆಯುವ ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ಎದುರಿನ ಪಂದ್ಯದಲ್ಲಿಯೂ ರೋಹಿತ್​ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.

ಕಳೆದ ಕೆಕೆಆರ್​ ವಿರುದ್ಧದ ಪಂದ್ಯದ ವೇಳೆ ರೋಹಿತ್​ಗೆ ಸಣ್ಣ ಮಟ್ಟಿನ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆ ಪಂದ್ಯದಲ್ಲಿ ಕೇವಲ ಇಂಪ್ಯಾಕ್ಟ್‌ ಆಟಗಾರನಾಗಿ ಬ್ಯಾಟಿಂಗ್​ ಮಾತ್ರ ಮಾಡಿದ್ದರು. ಫೀಲ್ಡಿಂಗ್​ ಮಾಡಿರಲಿಲ್ಲ. ರೋಹಿತ್‌ ಗಾಯದ ಬಗ್ಗೆ ಪಂದ್ಯ ಮುಕ್ತಾಯದ ಬಳಿಕ ತಂಡದ ಹಿರಿಯ ಸ್ಪಿನ್ನರ್‌ ಚಾವ್ಲಾ ಮಾಹಿತಿ ನೀಡಿದ್ದರು. ಬೆನ್ನು ನೋವು ಸಣ್ಣ ಪ್ರಮಾಣದ್ದಾಗಿದ್ದು ಯಾವುದೇ ಆತಂಕ ಪಡಬೇಕಿಲ್ಲ ಎಂದಿದ್ದರು.

ರೋಹಿತ್​ ಶರ್ಮ ಈ ಬಾರಿಯ ಐಪಿಎಲ್​ನಲ್ಲಿ ಅಷ್ಟಾಗಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿಲ್ಲ. ಆಡಿದ 11 ಇನಿಂಗ್ಸ್​ಗಳಿಂದ ಕೇವಲ 326 ರನ್​ ಮಾತ್ರ ಗಳಿಸಿದ್ದಾರೆ. ಅವರ ಈ ಬ್ಯಾಟಿಂಗ್​ ವೈಫಲ್ಯಕ್ಕೆ ನಾಯಕತ್ವ ಬದಲಾವಣೆಯೂ ಕೂಡ ಕಾರಣವಾಗಿರಬಹುದು. 5 ಬಾರಿ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದರೂ ಏಕಾಏಕಿ ತಂಡದ ನಾಯಕತ್ವದಿಂದ ಕೆಳಗಿಳಿಸಿದ ಅಸಮಾಧಾನವೂ ಇರಬಹುದು. ಮುಂದಿನ ಆವೃತ್ತಿಯಲ್ಲಿ ಮುಂಬೈ ತೊರೆದು ಬೇರೆ ತಂಡದ ಪರ ಆಡಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಸಂಘಟಿತ ಪ್ರದರ್ಶನ ತೋರದೇ ಹೋದಲ್ಲಿ ಈ ಪಂದ್ಯದಲ್ಲಿಯೂ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ನೂತನ ನಾಯಕ ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್​ ಯಾದವ್​, ಇಶಾನ್​ ಕಿಶನ್​, ಟಿಮ್​ ಡೇವಿಡ್​ ಹೀಗೆ ಘಟಾನುಘಟಿ ಆಟಗಾರರು ಪ್ರತಿ ಪಂದ್ಯದಲ್ಲಿಯೂ ಘೋರ ವೈಫಲ್ಯ ಎದುರಿಸುತ್ತಿದ್ದಾರೆ. ಬೌಲಿಂಗ್​ನಲ್ಲಿ ಜಸ್​ಪ್ರೀತ್​ ಬುಮ್ರಾ ಹೊರತುಪಡಿಸಿದ ಉಳಿದೆಲ್ಲರು ಲೆಕ್ಕಭರ್ತಿಗೆ ಆಡಿದಂತೆ ಆಡುತ್ತಿದ್ದಾರೆ.

ಇದನ್ನೂ ಓದಿ IPL 2024 Points Table: ರಾಜಸ್ಥಾನ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

ಯಾರೂ ಕೂಡ ತಂಡಕ್ಕಾಗಿ ಹಾಗೂ ಉತ್ಸಾಹ ಭರಿತವಾಗಿ ಆಡುತ್ತಿಲ್ಲ. 11 ಪಂದ್ಯಗಳಿಂದ ಕೇವಲ 3 ಗೆಲುವು ಸಾಧಿಸಿ 6 ಅಂಕದೊಂದಿಗೆ ಕೊನೆಯ ಸ್ಥಾನಿಯಾಗಿದೆ. ಕಳೆದ 16 ಆವೃತ್ತಿಯ ಐಪಿಎಲ್​ ಟೂರ್ನಿಯನ್ನು ನೋಡುವುದಾದರೆ ಮುಂಬೈ ಈ ಸ್ಥಿತಿ ತಲುಪಿದ್ದು ಇದೇ ಮೊದಲು.

ಸನ್​ರೈಸರ್ಸ್​ ಹೈದರಾಬಾದ್​ಗೆ ಇದು ಮಹತ್ವದ ಪಂದ್ಯ. ಸದ್ಯ 12 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ಕಮಿನ್ಸ್​ ಪಡೆ ಕಳೆದ ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್​ ಅಂತರದಿಂದ ಗೆದ್ದು ಬೀಗಿತ್ತು. ಹೀಗಾಗಿ ತಂಡಕ್ಕೆ ಲಕ್​ ಕೂಡ ಇದೆ. ಹೆಡ್​ ಮತ್ತು ಅಭಿಷೇಕ್​ ಶರ್ಮಾ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರಲಿದೆ. ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್​ ಲೈನ್​ ಅಪ್​ ಬಲಿಷ್ಠವಾಗಿದೆ. ಮಾರ್ಕ್ರಮ್​, ಕ್ಲಾಸೆನ್​ ನಿತೇಶ್​ ರೆಡ್ಡಿ, ಅಬ್ದುಲ್​ ಸಮದ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

Continue Reading
Advertisement
Puttakkana makkalu sahana dead
ಕಿರುತೆರೆ5 mins ago

Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

Rekha Jhunjhunwala
ವಾಣಿಜ್ಯ7 mins ago

Rekha Jhunjhunwala: ಷೇರು ಮಾರುಕಟ್ಟೆಯಲ್ಲಿ ರೇಖಾ ಜುಂಜುನ್‌ವಾಲಾಗೆ 805 ಕೋಟಿ ರೂ. ನಷ್ಟ; ಕಾರಣವೇನು?

viral news
ಕ್ರಿಕೆಟ್23 mins ago

Viral News: ಕ್ರಿಕೆಟ್‌ ಆಡುವಾಗ ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ದಾರುಣ ಸಾವು; ವಿಡಿಯೊ ಇದೆ

Sunita Williams
ವಿದೇಶ38 mins ago

Sunita Williams: 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸುನೀತಾ ವಿಲಿಯಮ್ಸ್‌ ಸಜ್ಜು

Namma Metro
ಬೆಂಗಳೂರು52 mins ago

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

Prajwal Revanna Case Who leaked the pen drive Devaraje Gowda gives evidence to SIT
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್‌ ತಡೆಯಾಜ್ಞೆ

ICSE Results 202
ಶಿಕ್ಷಣ1 hour ago

CISCE Results 2024: ಸಿಐಎಸ್‌ಸಿಇಯ 10 & 12ನೇ ತರಗತಿಯ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ

MS Dhoni
ಕ್ರಿಕೆಟ್2 hours ago

MS Dhoni: ಧೋನಿಯ ಕ್ಲೀನ್​ ಬೌಲ್ಡ್​ ಕಂಡು ಬೇಸರಗೊಂಡ ಅಭಿಮಾನಿಗಳು; ವಿಡಿಯೊ ವೈರಲ್​

Viral News
ವೈರಲ್ ನ್ಯೂಸ್2 hours ago

Viral News: ಅವಳಿ-ತ್ರಿವಳಿ ಅಲ್ಲ.. ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

Kanyakumari Tour
ಪ್ರವಾಸ2 hours ago

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ19 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ20 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ21 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌