Woman murder : ಸಂಶಯ ಪಿಶಾಚಿ ಪತಿಯ ಕ್ರೌರ್ಯಕ್ಕೆ ಬಲಿಯಾದ ಪತ್ನಿ - Vistara News

ಕ್ರೈಂ

Woman murder : ಸಂಶಯ ಪಿಶಾಚಿ ಪತಿಯ ಕ್ರೌರ್ಯಕ್ಕೆ ಬಲಿಯಾದ ಪತ್ನಿ

ಮೃತ ಶಿಲ್ಪಾಳನ್ನು ಕೊಲೆಗೈದ ಪತಿ ಸಿದ್ದು ಎಂಬಾತ. ನಿನ್ನೆ ರಾತ್ರಿ ಈತ ಪತ್ನಿಯ ನಡತೆ ಶಂಕಿಸಿ ಗಲಾಟೆ ಮಾಡಿದ್ದಾನೆ. ನಂತರ ಶಿಲ್ಪಾಗೆ ಚಾಕುವಿನಿಂದ ಇರಿದಿದ್ದಾನೆ.

VISTARANEWS.COM


on

woman murder
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯಚೂರು: ಪತ್ನಿಯ ಶೀಲ ಶಂಕಿಸಿ ಪತಿ ಆಕೆಯನ್ನು ಕೊಲೆ ಮಾಡಿದ ಘಟನೆ (murder case) ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.

ಶಿಲ್ಪಾ (27) ಪತಿಯಿಂದ ಕೊಲೆಯಾದ ಮಹಿಳೆ. ಮೃತ ಶಿಲ್ಪಾಳನ್ನು ಕೊಲೆಗೈದ ಪತಿ ಸಿದ್ದು ಎಂಬಾತ. ನಿನ್ನೆ ರಾತ್ರಿ ಈತ ಪತ್ನಿಯ ನಡತೆ ಶಂಕಿಸಿ ಗಲಾಟೆ ಮಾಡಿದ್ದಾನೆ. ನಂತರ ಶಿಲ್ಪಾಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಶಿಲ್ಪಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ಸಿದ್ದುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇರಿದು ಯುವಕನ ಕೊಲೆ

ಕಲಬುರಗಿ: ಮಾರಕಾಸ್ತ್ರಗಳಿಂದ ಇರಿದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ (Murder Case) ಮಾಡಲಾಗಿದೆ. ಕಲಬುರಗಿ ನಗರದ ಆಜಾದಪುರ್ ರಸ್ತೆಯಲ್ಲಿ ಘಟನೆ ನಡೆದಿದೆ. ಉಮೇರ್ (23) ಕೊಲೆಯಾದ ಯುವಕ. ಉಮೇರ್, ಕಲಬುರಗಿ ನಗರದ ಬಿಲಾಲಾಬಾದ್ ಕಾಲೋನಿ ನಿವಾಸಿ.

ಕಳೆದ ರಾತ್ರಿ ಹನ್ನೊಂದು ಮೂವತ್ತರ ಸಮಯದಲ್ಲಿ ಹಲ್ಲೆ ನಡೆದಿದೆ. ಚಾಕುವಿನಿಂದ ದೇಹದ ವಿವಿಧೆಡೆ ಸಿಕ್ಕಸಿಕ್ಕಂತೆ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಉಮೇರ್‌ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ‌ರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಉಮೇರ್ ಮೃತಪಟ್ಟಿದ್ದಾನೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆಸಲಾಗಿರುವ ಶಂಕೆಯಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವಕನ ಕೊಲೆ; ಈತ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಕೊಲೆಗಾರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Taliban Writing: ಗೋಡೆ ಮೇಲೆ ತಾಲಿಬಾನ್‌ ಬರಹ ಬರೆದ ಪೇದೆ ಮುನಿರಾಜು ಈಗ ಮುಸ್ಲಿಂ ಅಂತೆ!

Taliban Writing: ತಾನು ಪೊಲೀಸ್‌ ಕೆಲಸ ಪಡೆಯಲು ದರ್ಗಾಕ್ಕೆ ಹರಕೆ ಹೊತ್ತಿರುವುದಾಗಿ, ಕೆಲಸ ಸಿಕ್ಕಿದ ಬಳಿಕ ಸಂಪೂರ್ಣ ಮುಸ್ಲಿಂ ಆಗಿರುವುದಾಗಿ ಹುಚ್ಚಾಟ ನಡೆಸಿದ ಪೊಲೀಸ್‌ ಪೇದೆ ಮುನಿರಾಜು ಹೇಳಿಕೊಂಡಿದ್ದಾನೆ. ಆತ ಈಗ ಜೈಲುಪಾಲಾಗಿದ್ದಾನೆ.

VISTARANEWS.COM


on

taliban writing muniraju
Koo

ಆನೇಕಲ್: ಆನೆಕಲ್‌ನಲ್ಲಿ (Anekal news) ತನ್ನ ಮನೆಯ ಕಾಂಪೌಂಡ್ ಮೇಲೆ ಹುಚ್ಚುಚ್ಚಾಗಿ ದೇಶದ್ರೋಹಿ, ಪ್ರಚೋದನಾತ್ಮಕ ಬರಹ (Taliban Writing) ಬರೆದಿರುವ ಪೊಲೀಸ್ ಪೇದೆ, ತಾನೀಗ ಮುಸ್ಲಿಂ ಧರ್ಮದ ಕಟ್ಟರ್‌ ಅನುಯಾಯಿ ಎಂದು ಹೇಳಿಕೊಂಡಿದ್ದಾನೆ. ಈತನನ್ನು ಪೊಲೀಸರು ವಶಕ್ಕೆ ಪಡೆದು (Crime news) ತನಿಖೆ ನಡೆಸುತ್ತಿದ್ದಾರೆ.‌ ಇದರ ಹಿಂದೆ ಮತಾಂತರ (conversion) ಆಯಾಮವೂ ಇದೆಯೇ ಎಂಬುದೂ ತನಿಖೆ ಆಗಬೇಕಾಗಿದೆ ಎಂದುಗ್ರಾಮಸ್ಥರು ಹೇಳಿದ್ದಾರೆ.

ತಾನು ಪೊಲೀಸ್‌ ಕೆಲಸ ಪಡೆಯಲು ದರ್ಗಾಕ್ಕೆ ಹರಕೆ ಹೊತ್ತಿರುವುದಾಗಿ, ಕೆಲಸ ಸಿಕ್ಕಿದ ಬಳಿಕ ಸಂಪೂರ್ಣ ಮುಸ್ಲಿಂ ಆಗಿರುವುದಾಗಿ ಹುಚ್ಚಾಟ ನಡೆಸಿದ ಪೊಲೀಸ್‌ ಪೇದೆ ಮುನಿರಾಜು ಹೇಳಿಕೊಂಡಿದ್ದಾನೆ. ಆತ ಈಗ ಜೈಲುಪಾಲಾಗಿದ್ದಾನೆ. ಈ ಘಟನೆ ಸೂರ್ಯಸಿಟಿ ಠಾಣಾ ವ್ಯಾಪ್ತಿಯ ಬಂಡಾಪುರದಲ್ಲಿ ನಡೆದಿದೆ. ಗ್ರಾಮಸ್ಥರಿಂದ ವಿಷಯ ತಿಳಿದು ಆರೋಪಿ ಮುನಿರಾಜುನನ್ನು ಬಂಧಿಸಲು ಪೊಲೀಸರು ಮುಂದಾದಾಗ, ಬಂಧಿಸಲು ಬಂದ ಪೊಲೀಸರಿಗೆ “ನನ್ನನ್ನು ಕರೆದೊಯ್ಯಲು ಬಂದು ದೊಡ್ಡ ತಪ್ಪು ಮಾಡುತ್ತಿದ್ದೀರಿ. ನನ್ನ ಕೈಯನ್ನು ಮುಟ್ಟಬೇಡಿ. ಬಿಡಿ” ಎಂದು ಈತ ಅವಾಜ್ ಹಾಕಿದ್ದಾನೆ.

ವಿಚಾರಣೆ ವೇಳೆ ತಾನು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲಸಕ್ಕೆ ಸೇರುವ ಮುನ್ನಾ ಒಂದು ದರ್ಗಾಕ್ಕೆ ಹೋಗಿ ಹರಕೆ ಮಾಡಿಕೊಂಡಿದ್ದೆ. ನನಗೆ ಪೊಲೀಸ್ ಉದ್ಯೋಗ ಸಿಕ್ಕಿದ್ದು, ಅಂದಿನಿಂದಲೇ ನಾನು ಮುಸ್ಲಿಂ ಧರ್ಮದ ಅನುಯಾಯಿಯಾದೆ ಎಂದು ಹೇಳಿಕೆ ನೀಡಿದ್ದಾನೆ. ತಾನೇ ತನ್ನ ಕೈಯಿಂದ ಮನೆ ಗೋಡೆ, ಕಾಂಪೌಂಡ್ ಹಾಗೂ ಗೇಟ್ ಮತ್ತು ಸುತ್ತಲಿನ ಗೋಡೆ ಮೇಲೆ ಬರೆದಿರುವುದಾಗಿ ತಿಳಿಸಿದ್ದಾನೆ. ಈ ಬರಹಗಳು ಸಮಾಜದ ಶಾಂತಿ ಕದಡುವಂತಿವೆ. ಜವಾಬ್ದಾರಿಯುತ ಪೊಲೀಸನಾಗಿ ಹೀಗೆ ಬರೆಯಬಹುದೇ ಎಂಬ ಪ್ರಶ್ನೆಗೆ, ತಾನು ಮಾಡಿರುವುದು ಸರಿ. ಪಶ್ಚಾತ್ತಾಪವಿಲ್ಲ ಎಂದಿದ್ದಾನೆ.

ಇಸ್ಲಾಂ, ಥರ್ಡ್ ವರ್ಲ್ಡ್ ವಾರ್, ತಾಲಿಬಾನ್ ಇಂಡಿಯಾ ಹೆಡ್ ಬಿ ಕೇರ್ ಫುಲ್ (Taliban india head be careful) ಸಲಾಂ ಇಸ್ಲಾಂ, ಸೇರಿದಂತೆ ಆತಂಕ ಸೃಷ್ಟಿಸುವ ಹಲವು ರೀತಿಯ ಗೋಡೆ ಬರಹಗಳು ಕಂಡು ಬಂದಿದೆ. ಇಡೀ ಮನೆಯ ಗೋಡೆ ತುಂಬೆಲ್ಲಾ ದೇಶ ವಿರೋಧಿ ಬರಹಗಳಿದ್ದು, ಗೇಟ್‌ನ ಒಂದು ಬದಿಯಲ್ಲಿ ರಾಜೀವ್ ಗಾಂಧಿ ಎಂದೂ ಬರೆದಿದೆ. ಈ ಪ್ರಚೋದನಾತ್ಮಕ ಬರಹಗಳು ದೇಶದ್ರೋಹಿ ಕೃತ್ಯ ಎಂದು ಕೆಲವು ಗ್ರಾಮಸ್ಥರು ಆಪಾದಿಸಿದ್ದಾರೆ.

ಪಾಕಿಸ್ತಾನ ಬಾವುಟ ಹಾರಿಸಿದ್ದ!

ಕಾನ್‌ಸ್ಟೇಬಲ್‌ ಮುನಿರಾಜು ನಶೆಯಲ್ಲಿ ಇಂತಹ ಕೃತ್ಯವೆಸಗಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ, ಈತ ಬೆಂಗಳೂರಿನ ವಿಲ್ಸನ್ ಗಾರ್ಡನ್ ಮತ್ತು ಬಾಣಸವಾಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕಳೆದ ಮೂರು ತಿಂಗಳಿಂದ ಕರ್ತವ್ಯಕ್ಕೆ ಚಕ್ಕರ್ ಹೊಡೆದಿದ್ದಾನೆ. ಸದಾ ಪಾನಮತ್ತನಾಗಿ ಹುಚ್ಚನಂತೆ ವರ್ತಿಸುವ ಈತ ಮೂರು ತಿಂಗಳ ಹಿಂದೆ ಮನೆಯ ಮೇಲೆ ಪಾಕಿಸ್ತಾನ ಬಾವುಟ ಹಾರಿಸಿದ್ದ ಎನ್ನಲಾಗಿದೆ. ಇತ್ತೀಚೆಗೆ ಗ್ರಾಮದಲ್ಲಿ ಗೂಂಡಾ ರೀತಿ ವರ್ತನೆ ಮಾಡುತ್ತಾ ಲಾಂಗು ಮಚ್ಚು ಹಿಡಿದು ಜನರನ್ನು ಹೆದರಿಸುತ್ತಿದ್ದ. ಈ ಹಿಂದೆಯೂ ಇದೇ ರೀತಿ ಬರಹಗಳನ್ನು ಬರೆದಿದ್ದು, ಗ್ರಾಮಸ್ಥರು ಎಚ್ಚರಿಸಿ ತೆರವುಗೊಳಿಸಿದ್ದರು. ಮತ್ತೆ ಇಂತಹ ದೇಶದ್ರೋಹಿ ಬರಹಗಳನ್ನು ಬರೆದಿದ್ದಾನೆ.

ಮನೆಯಲ್ಲಿ ತಂದೆ ತಾಯಿ ಮತ್ತು ಪತ್ನಿಯ ಮಾತನ್ನೂ ಕೇಳದೆ ಅವರ ಮೇಲೆಯೇ ಹಲ್ಲೆ ಮಾಡುತ್ತಿದ್ದ. ಕುಡಿತದ ಚಟಕ್ಕೆ ಬಿದ್ದ ಮತ್ತಿನಲ್ಲಿ ದೇಶ ವಿರೋಧಿ ಬರಹಗಳನ್ನು ಬರೆದಿದ್ದ ಎನ್ನಲಾಗಿದೆ. ಮದುವೆ ಆದ ಬಳಿಕ ತಾನು ತಾಲಿಬಾನ್‌ಗೆ ಸೇರಿಕೊಂಡಿದ್ದಾಗಿ ತಿಳಿಸಿ ಅಲ್ಲಾ ಎಂದು ಕೂಗುತ್ತಿದ್ದ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Self Harming : ಇಬ್ಬರು ಮಕ್ಕಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ತಾನೂ ಆಹುತಿಯಾದ ತಾಯಿ

Continue Reading

ಕರ್ನಾಟಕ

Murder Case: ಹೆಂಡ್ತಿ ಬಿಟ್ಟು ಹೋಗುತ್ತಾಳೆಂದು ಕತ್ತು ಸೀಳಿ ಕೊಂದ ಪತಿರಾಯ!

Murder Case: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ಕೊಲೆ ನಡೆದಿದೆ. ವಿಚ್ಛೇದನ ಪಡೆದು ದೂರವಾಗುತ್ತಾಳೆ ಎಂದು ಪತ್ನಿಯ ಕತ್ತು ಸೀಳಿ ಪತಿ ಕೊಲೆ ಮಾಡಿದ್ದಾನೆ.

VISTARANEWS.COM


on

Murder Case
Koo

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಪತಿ ಕೊಲೆ ಮಾಡಿರುವ ಘಟನೆ (Murder Case) ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ನಡೆದಿದೆ. ಹೆಂಡ್ತಿ ತನ್ನನ್ನು ಬಿಟ್ಟು ಬೇರೆಯಾಗುತ್ತಾಳೆ ಎಂದು ಬೇಸರದಿಂದ ಪತಿ ಚಾಕು ಇರಿದು ಕೊಲೆ ಮಾಡಿದ್ದಾನೆ.

ಶಿಯಾಪತ್ ಉನ್ನಿಸ ಕೊಲೆಯಾದ ಮಹಿಳೆ. ನೂರುಲ್ಲಾ ಪತ್ನಿಯ ಕೊಲೆ ಮಾಡಿದ ಗಂಡ. ಆರೋಪಿ ನೂರುಲ್ಲಾನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಗಂಡ-ಹೆಂಡತಿ ವಿಚ್ಛೇದನ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಕಳೆದ ಐದು ದಿನಗಳಿಂದ ಹೆಂಡತಿಯಿಂದ ಗಂಡ ದೂರವಿದ್ದ. ಸೋಮವಾರ ಹೆಂಡತಿ ಉನ್ನೀಸಾ ಮನೆ ಖಾಲಿ ಮಾಡುತ್ತಿದ್ದಳು. ಈ ವೇಳೆ ಏಕಾಏಕಿ ಗಂಡ ಬಂದು ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶ್ಚಿತಾರ್ಥವಾಗಿದ್ದ ಯುವತಿಯ ಶವ ಅನುಮಾನಾಸ್ಪದವಾಗಿ ಪತ್ತೆ

ರಾಯಚೂರು: ತಾಲೂಕಿನ ಯರಮರಸ್ ಬಳಿಯ ದಂಡ್ ಗ್ರಾಮದಲ್ಲಿ ಇತ್ತೀಚೆಗೆ ನಿಶ್ಚಿತಾರ್ಥವಾಗಿದ್ದ ಯುವತಿಯ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಸುನೀತಾ (26) ಎಂಬ ಯುವತಿಯ ಶವ ಬೆಡ್ ರೂಮ್‌ನಲ್ಲಿ ರಕ್ತ ಸಿಕ್ತವಾಗಿ ಪತ್ತೆಯಾಗಿದೆ.

ಮೃತ ಯುವತಿ ದೇಹದ‌ ಮೇಲೆ ಚಾಕುವಿನಿಂದ ಹಲ್ಲೆ ಗುರುತು ಪತ್ತೆಯಾಗಿದ್ದು, ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಕೊಂಡಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಮನೆಯವರ ಮದುವೆ‌ ಪ್ರಸ್ತಾಪಕ್ಕೆ‌ ಯುವತಿ ಮನನೊಂದಿದ್ದಳು. ಜತೆಗೆ ತಾಯಿ‌, ಅಣ್ಣನ ಜತೆ ಮನಸ್ತಾಪ ಇತ್ತು. ಇದೇ ಕಾರಣಕ್ಕೆ ಎಷ್ಟೋ ಬಾರಿ ಯುವತಿ ಮನೆ ಬಿಟ್ಟು ಹೋಗಿದ್ದಳಂತೆ. ಮದುವೆ ಪ್ರಸ್ತಾಪದಿಂದ ಮಾನಸಿಕ‌ ಸ್ಥಿಮಿತ ಕಳೆದುಕೊಂಡಿದ್ದ ಸುನೀತಾ, ಏ.26ರಂದು ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಮತ್ತು ಅಣ್ಣ ಹೇಳಿದ್ದಾರೆ.

ಆದರೆ, ತಂಗಿಯ ಮರಣದ ಬಗ್ಗೆ ಸಂಶಯ ವ್ಯಕ್ತ ಪಡಿಸಿ ಅಕ್ಕ ದೂರು ದಾಖಲು ಮಾಡಿದ್ದಾಳೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

Continue Reading

ಕರ್ನಾಟಕ

Murder Case: ದ್ವಿತೀಯ ಪಿಯುಸಿಯಲ್ಲಿ ಮಾರ್ಕ್ಸ್‌ ಕಡಿಮೆ ಬಂದಿದ್ದಕ್ಕೆ ಚಾಕು ಇರಿದು ಮಗಳನ್ನೇ ಕೊಂದ ತಾಯಿ!

Murder Case: ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪರಸ್ಪರ ಚಾಕು ಇರಿದುಕೊಂಡಿದ್ದರಿಂದ ಮಗಳು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

VISTARANEWS.COM


on

Murder Case
Koo

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗಳ ನಡುವೆ ನಡೆದ ಜಗಳ ಕೊಲೆಯಲ್ಲಿ (Murder Case) ಅಂತ್ಯವಾಗಿರುವುದು ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಪರಸ್ಪರ ಚಾಕು ಇರಿದುಕೊಂಡಿದ್ದರಿಂದ ಮಗಳು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಹಿತಿ(18) ಕೊಲೆಯಾದ ಯುವತಿ. ಪದ್ಮಜಾ (60) ಮಗಳನ್ನು ಕೊಲೆಗೈದ ತಾಯಿ. ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮಗಳನ್ನು ತಾಯಿ ಪ್ರಶ್ನೆ ಮಾಡಿದ್ದಾಳೆ. ಈ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಸೋಮವಾರ ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಸಂಜೆ ಚಾಕುವಿನಿಂದ ಪರಸ್ಪರ ಇರಿದು ಕೊಂಡಿದ್ದರಿಂದ ಮಂಗಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. ತಾಯಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಇಬ್ಬರು ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ

ಹೆತ್ತ ತಾಯಿಯ ಮೇಲೆಯೇ ಮಗ ಹಲ್ಲೆ; ಅನ್ನ, ನೀರು ಕೊಡದೆ ಹಿಂಸೆ

ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಹೆತ್ತ ಮಕ್ಕಳಿಗೆ ಚಿತ್ರ ಹಿಂಸೆ ಕೊಟ್ಟಿರೋದನ್ನು ನೋಡಿದ್ದೆವು. ಆದರೆ ಈಗ ಹೆತ್ತ ತಾಯಿಯನ್ನೇ ಹೊಡೆಯುವ ಮೂಲಕ ಮಗ ಅಮಾನವೀಯವಾಗಿ ನಡೆದುಕೊಂಡಿರುವುದು ಕಂಡುಬಂದಿದೆ.

ಚಂದ್ರಮ್ಮ (75) ಹಲ್ಲೆಗೊಳಗಾದವರು. ಮುನಿರತ್ನ (45) ಹಲ್ಲೆ ಮಾಡಿದ ಮಗ. ಕತ್ತರಿಗುಪ್ಪೆಯ ಶ್ರೀನಿವಾಸ ನಗರದಲ್ಲಿ ಘಟನೆ ನಡೆದಿದೆ. ಒಂದು ವರ್ಷದಿಂದ ಮನೆಯ ಹೊರಗಡೆ ತಾಯಿ ಮಲಗಿಸುತ್ತಿದ್ದ ಮಗ, ಆಕೆಗೆ ಸರಿಯಾಗಿ ಊಟ ಕೂಡ ನೀಡದೆ ಹಿಂಸೆ ನೀಡುತ್ತಿದ್ದ. ಕಾರಣ ಕೇಳಿದರೆ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿರುವ ಕಾರಣ ಹೊರಗೆ ಮಲಗಿಸುತ್ತಿರುವುದಾಗಿ ಮಗ ಹೇಳಿದ್ದಾನೆ.

ಇವರು ತಿರುಪತಿ ಮೂಲದವರಾಗಿದ್ದು, ಮುನಿರತ್ನ ತನ್ನ ಮದುವೆಗೂ ಮುನ್ನ ತಾಯಿಯನ್ನು ಅಡುಗೆ ಮಾಡಲು ಮನೆಗೆ ಕರೆತಂದಿದ್ದ. ಮದುವೆಯಾದ ಬಳಿಕ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಬೆಂಗಳೂರಿನ ಕತ್ತರಿಗುಪ್ಪೆಯ ಶ್ರೀನಿವಾಸ ನಗರಕ್ಕೆ ಬಂದು 2 ವರ್ಷವಾಗಿದೆ. ಸೊಸೆ ಸ್ವಂತ ತಾಯಿಯಂತೆ ನೋಡಿಕೊಳ್ಳುತ್ತಿದ್ದಳು. ಆದರೆ ಮಗ ತಾಯಿಗೆ ಚಿತ್ರ ಹಿಂಸೆ ನೀಡುತ್ತಿದ್ದ. ಹೀಗಾಗಿ ಮನೆಯ ಅಂಗಳದಲ್ಲಿ ತಾಯಿ ಇರುತ್ತಿದ್ದಳು.

ಇದನ್ನೂ ಓದಿ | Stab wound: ಗರ್ಲ್‌ಫ್ರೆಂಡ್‌ನ ಚುಚ್ಚಿ ಕೊಲ್ಲೋ ಮುನ್ನ ಗೂಗಲ್‌ ಸರ್ಚ್‌ ಮಾಡಿದ್ದ ಹಂತಕ!

ಸೊಸೆ ತಾಯಿಯನ್ನು ನೋಡಿಕೊಳ್ಳುತ್ತಿದ್ದಳು ಎನ್ನುವ ಕಾರಣಕ್ಕೆ ಹೆಂಡತಿಯ ಜತೆಗೂ ಜಗಳವಾಡುತ್ತಿದ್ದ. 2 ದಿನದ ಹಿಂದೆ ಹೆಂಡತಿ ಜಗಳವಾಡಿ ತವರುಮನೆಗೆ ಹೋಗಿದ್ದಳು. ಹೀಗಾಗಿ ತಾಯಿ ಚಂದ್ರಮ್ಮನ ಮೇಲೆ ಮಗ ಹಲ್ಲೆ ಮಾಡಿದ್ದಾನೆ, 2 ದಿನದಿಂದ ತಾಯಿಗೆ ಅನ್ನ, ನೀರು ನೀಡಿಲ್ಲ. ನಶೆಯಲ್ಲಿ ಇಲ್ಲದ ಸಮಯದಲ್ಲೂ ಇದೆ ಸ್ಥಿತಿಯಲ್ಲಿ ಮುನಿರತ್ನ ಇರುತ್ತಿದ್ದ ಎನ್ನಲಾಗಿದೆ.

Continue Reading

ಕರ್ನಾಟಕ

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಇಬ್ಬರು ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ

Rameshwaram Cafe Blast: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣದ ಆರೋಪಿಗಳಾದ ಅಬ್ದುಲ್ ಮತೀ‌ನ್ ತಾಹ ಮತ್ತು ಮುಸಾವೀರ್ ಹುಸೇನ್‌ಗೆ ಎನ್.ಐ.ಎ ವಿಶೇಷ ನ್ಯಾಯಾಲಯ 2 ವಾರ ನ್ಯಾಯಾಂಗ ಬಂಧನ ವಿಧಿಸಿದೆ.

VISTARANEWS.COM


on

Rameshwaram Cafe blast
Koo

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣದ (Rameshwaram Cafe Blast) ಇಬ್ಬರು ಆರೋಪಿಗಳಿಗೆ ಎನ್.ಐ.ಎ ವಿಶೇಷ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಎನ್‌ಐಎ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಶಂಕಿತ ಉಗ್ರರನ್ನು ಎನ್.ಐ.ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ ಹಿನ್ನೆಲೆ ಆರೋಪಿಗಳಾದ ಅಬ್ದುಲ್ ಮತೀ‌ನ್ ತಾಹ ಮತ್ತು ಮುಸಾವೀರ್ ಹುಸೇನ್‌ಗೆ ಎರಡು ವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಏಪ್ರಿಲ್ 12ರಂದು ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಇಬ್ಬರು ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಆರೋಪಿಗಳ ಕಸ್ಟಡಿ ಅವಧಿ ಅಂತ್ಯವಾದ ಬಳಿಕ ಪುನಃ 7 ದಿನ ಕಸ್ಟಡಿಗೆ ಪಡೆಯಲಾಗಿತ್ತು. ಇದೀಗ ಸೋಮವಾರ ಎನ್‌ಐಎ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ | Hassan Pen Drive Case: ಪ್ರಜ್ವಲ್‌ ಪ್ರಕರಣಕ್ಕೆ ಅಚ್ಚರಿಯ ತಿರುವು; ಅವರು ಹಾಗೆ ಮಾಡಿಯೇ ಇಲ್ಲ ಎಂದ ದೂರುದಾರೆಯ ಅತ್ತೆ!

ಮಾರ್ಚ್ 1ರಂದು ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರಸಹಿತ 9 ಜನರು ಗಾಯಗೊಂಡಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸಲಾಗಿತ್ತು. ಪ್ರಕರಣ ಸಂಬಂಧ ಹಲವೆಡೆ ಶೋಧ ನಡೆಸಿದ್ದ ಎನ್​ಐಎ ಅಧಿಕಾರಿಗಳು ಸುಮಾರು 40 ದಿನಗಳ ಬಳಿಕ ಕೋಲ್ಕೊತಾದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು.

ಸುಪ್ರೀಂ ಆದೇಶದಂತೆ ಕೋರ್ಟ್‌ಗೆ ಶರಣಾದ ಮುರುಘಾ ಶ್ರೀ; ಮತ್ತೆ 1 ತಿಂಗಳು ಜೈಲು

Murugha Seer

ಚಿತ್ರದುರ್ಗ: ಸುಪ್ರೀಂ ಕೋರ್ಟ್‌ ಆದೇಶದಂತೆ ಮುರುಘಾ ಶರಣರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಪೋಕ್ಸೊ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಶ್ರೀಗಳಿಗೆ (Murugha Seer) ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ಏ.23ರಂದು ರದ್ದು ಮಾಡಿ, ಶರಣಾಗತಿಯಾಗುವಂತೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಚಿತ್ರದುರ್ಗ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಸೋಮವಾರ ಶರಣಾಗಿದ್ದಾರೆ. ಅವರಿಗೆ ಮೇ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ಎಸ್.ಎನ್.ಕಲ್ಕಣಿ ಆದೇಶ ನೀಡಿದ್ದಾರೆ.

ಪೋಕ್ಸೋ ಕೇಸ್ ವಿಚಾರಣೆ ಮುಗಿದು ತೀರ್ಪು ಬರುವವರೆಗೂ ಮುರುಘಾ ಶ್ರೀಗಳನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿ, ಒಂದು ವಾರದೊಳಗೆ ಶರಣಾಗತಿ ಆಗುವಂತೆ ಶ್ರೀಗಳಿಗೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಅವರನ್ನು ಪೊಲೀಸರು ಜೈಲಿಗೆ ಕರೆದೊಯ್ಯಲಿದ್ದಾರೆ.

2022 ಆಗಸ್ಟ್‌ 31 ರಂದು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್‌ 1ರಂದು ಶ್ರೀಗಳ ಬಂಧನವಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದ, ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಿದ್ದರಿಂದ ಇದೀಗ ಶ್ರೀಗಳು ಮತ್ತೆ ಜೈಲು ಸೇರುವಂತಾಗಿದೆ.

ಇದನ್ನೂ ಓದಿ | Car Accident: ಮಾದಾವರ ಟೋಲ್‌ಗೇಟ್ ಬಳಿ ಕಾರು ಅಪಘಾತ ಪ್ರಕರಣ; ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಸಾವು

ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸಲು ಚಿತ್ರದುರ್ಗದ ಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಈಗಾಗಲೇ ಸೂಚನೆ ನೀಡಿದ್ದು, ಸಾಕ್ಷ್ಯಗಳ ವಿಚಾರಣೆ ಮುಗಿಯುವ ತನಕ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರಬೇಕು ಎಂದು ತಿಳಿಸಿತ್ತು.

Continue Reading
Advertisement
taliban writing muniraju
ಕ್ರೈಂ3 mins ago

Taliban Writing: ಗೋಡೆ ಮೇಲೆ ತಾಲಿಬಾನ್‌ ಬರಹ ಬರೆದ ಪೇದೆ ಮುನಿರಾಜು ಈಗ ಮುಸ್ಲಿಂ ಅಂತೆ!

IPL 2024 Points Table
ಕ್ರೀಡೆ11 mins ago

IPL 2024 Points Table: ಡೆಲ್ಲಿ ಕ್ಯಾಪಿಟಲ್ಸ್​ ಸೋಲಿನ ಬಳಿಕ ಹೀಗಿದೆ ಅಂಕಪಟ್ಟಿ

Rohit Sharma Birthday
ಕ್ರೀಡೆ36 mins ago

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

road accident anekal
ಬೆಂಗಳೂರು ಗ್ರಾಮಾಂತರ42 mins ago

Road Accident: ಪಂಚರ್‌ ಹಾಕುತ್ತಿದ್ದ ಲಾರಿ ಚಾಲಕ ಬೈಕ್‌ ಡಿಕ್ಕಿಯಾಗಿ ಸಾವು, ಹಿಟ್‌ ಆ್ಯಂಡ್‌ ರನ್‌ನಲ್ಲಿ ಯುವಕ ಮೃತ

Baba Ramdev
ದೇಶ47 mins ago

Patanjali Case: ಪತಂಜಲಿಗೆ ಮತ್ತೆ ಸಂಕಷ್ಟ; ಬ್ಯಾನ್‌ ಆಗುತ್ತಾ ಈ ಉತ್ಪನ್ನಗಳು?

CET exam 2024
ಪ್ರಮುಖ ಸುದ್ದಿ1 hour ago

CET Exam: ಸಿಇಟಿ ಕೀ ಉತ್ತರಗಳು ಪ್ರಕಟ, ಪಠ್ಯೇತರ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

Covishield Vaccine
ಪ್ರಮುಖ ಸುದ್ದಿ1 hour ago

Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ದೇಶ2 hours ago

Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

Ayushman Bharat Diwas
ಆರೋಗ್ಯ2 hours ago

Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

Onion Benefits
ಆರೋಗ್ಯ2 hours ago

Onion Benefits: ಬೇಸಿಗೆಯಲ್ಲಿ ಆಗಾಗ ಹಸಿ ಈರುಳ್ಳಿ ತಿನ್ನಲೇಬೇಕು ಯಾಕೆ ಗೊತ್ತೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ4 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202420 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202421 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌