ಮೇಲು-ಕೀಳು ಜಾತಿ ಎಂಬ ಹೀನ ಮನಸ್ಥಿತಿ; ದಲಿತರ ಪ್ರವೇಶ ನಿರಾಕರಿಸಿದ ದೇವಾಲಯಕ್ಕೆ ಬಿತ್ತು ಬೀಗ - Vistara News

ದೇಶ

ಮೇಲು-ಕೀಳು ಜಾತಿ ಎಂಬ ಹೀನ ಮನಸ್ಥಿತಿ; ದಲಿತರ ಪ್ರವೇಶ ನಿರಾಕರಿಸಿದ ದೇವಾಲಯಕ್ಕೆ ಬಿತ್ತು ಬೀಗ

ತಮಿಳುನಾಡಿನಲ್ಲಿ ದೇವಾಲಯ ಪ್ರವೇಶಿಸಲು ದಲಿತರಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ದಲಿತ ಕುಟುಂಬಗಳು ಭಾರಿ ಪ್ರತಿಭಟನೆ ನಡೆಸಿದ್ದವು. ಈಗ ವಿವಾದ ಬಗೆಹರಿಯದ ಕಾರಣ ದೇವಾಲಯಕ್ಕೆ ಬೀಗ ಜಡಿಯಲಾಗಿದೆ.

VISTARANEWS.COM


on

Temple Shut Down In Tamil Nadu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಭಾರತದಲ್ಲಿ ಸಮಾನತೆ, ಮೇಲು-ಕೀಳು ಜಾತಿ ಎಂಬ ಕುತ್ಸಿತ ಮನಸ್ಥಿತಿ, ಜಾತಿ ಹೆಸರಿನಲ್ಲಿ ಭೇದ-ಭಾವ ಮಾಡುವುದು ನಡೆಯುತ್ತಲೇ ಇರುತ್ತದೆ. ದೇಶವು ಶೈಕ್ಷಣಿಕ, ವೈಜ್ಞಾನಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದರೂ, ಜಾತಿ ಹೆಸರಿನಲ್ಲಿ ವಿಕ್ಷಿಪ್ತ ಮನಸ್ಸುಗಳು ಹೀನ ಮನಸ್ಥಿತಿಯನ್ನು ಪ್ರದರ್ಶಿಸುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ತಮಿಳುನಾಡಿನಲ್ಲಿ ದೇವಾಲಯವೊಂದಕ್ಕೆ ದಲಿತರು ಪ್ರವೇಶಿಸಲು ನಿರಾಕರಿಸಲಾಗಿದೆ. ಇದರಿಂದಾಗಿ ದಲಿತರು ಪ್ರತಿಭಟನೆ ನಡೆಸಿದ್ದು, ಕೊನೆಗೆ ದೇವಾಲಯಕ್ಕೆ ಬೀಗ ಜಡಿಯಲಾಗಿದೆ.

ಕೆಲ ದಿನಗಳ ಹಿಂದೆ ವೀರಣಂಪಟ್ಟಿಯಲ್ಲಿರುವ ಕಾಳಿಯಮ್ಮನ್‌ ದೇವಾಲಯವನ್ನು ಪ್ರವೇಶಿಸಲು ಪರಿಶಿಷ್ಟ ಪಂಗಡ ಸಮುದಾಯದವರಿಗೆ ನಿರಾಕರಿಸಲಾಗಿದೆ. ವೈಕಾಸಿ ಹಬ್ಬದ ಹಿನ್ನೆಲೆಯಲ್ಲಿ ದಲಿತ ಸಮುದಾಯದವರು ದೇವರ ದರ್ಶನ ಪಡೆಯಲು ಹೋದಾಗ ಜಾತಿ ಹೆಸರಿನಲ್ಲಿ ಭೇದ-ಭಾವ ಮಾಡಲಾಗಿದೆ. ಇದರಿಂದ ಕೆರಳಿದ ದಲಿತರು ದೇವಾಲಯದ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ದಲಿತ ಸಮುದಾಯದ ಸುಮಾರು 80 ಕುಟುಂಬಗಳು ಪ್ರತಿಭಟನೆ ನಡೆಸಿವೆ. ಜಾತಿಯ ಹೆಸರಿನಲ್ಲಿ ಭೇದ-ಭಾವ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ವೈಕಾಸಿ ಹಬ್ಬದ ಹಿನ್ನೆಲೆಯಲ್ಲಿ ನಮಗೆ ದೇವಾಲಯ ಪ್ರವೇಶಿಸಲು ಅನುಮತಿ ನೀಡಬೇಕು. ಇನ್ನು ಮುಂದೆ ಜಾತಿಯ ಹೆಸರಿನಲ್ಲಿ ಭೇದ-ಭಾವ ಮಾಡುವಂತಾಗಬಾರದು ಎಂದು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.

ದಲಿತ ಸಮುದಾಯದವರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಡವುರ್ ತಹಸೀಲ್ದಾರ್‌‌ ಮುನಿರಾಜ್‌ ನೇತೃತ್ವದಲ್ಲಿ ನೇತೃತ್ವದಲ್ಲಿ ದೇವಾಲಯ ಆಡಳಿತ ಮಂಡಳಿ ಹಾಗೂ ದಲಿತ ಸಮುದಾಯದವರ ಸಭೆ ನಡೆದಿದೆ. ಆದರೆ, ಸಭೆಯಲ್ಲಿ ಆಡಳಿತ ಮಂಡಳಿ ಹಾಗೂ ದಲಿತರ ಮಧ್ಯೆ ಸಹಮತ ಮೂಡದ ಕಾರಣ ದೇವಾಲಯಕ್ಕೆ ತಾತ್ಕಾಲಿಕವಾಗಿ ಬೀಗ ಜಡಿಯಲಾಗಿದೆ. ರಾಜಿ ಆಗಲು ಎರಡೂ ಕಡೆಯವರು ಒಪ್ಪದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Chitradurga News: ಹೊಳಲ್ಕೆರೆ ಬಿಜೆಪಿ ಶಾಸಕನಿಗೆ ದಲಿತ ಮುಖಂಡರ ಮುತ್ತಿಗೆ, ಹಲ್ಲೆಗೆ ಯತ್ನ

ಕಾಳಿಯಮ್ಮನ್‌ ದೇವಾಲಯವು ತಮಿಳುನಾಡಿನ ಪ್ರಮುಖ ದೇವಾಲಯವಾಗಿದೆ. ದೇವಿ ಕಾಳಿಯನ್ನು ಸುತ್ತಮುತ್ತಲಿನ ಜನ ಆರಾಧಿಸುತ್ತಾರೆ. ತಮಿಳುನಾಡಿನ ಹಲವು ಜಿಲ್ಲೆಗಳ ಭಕ್ತರ ಜತೆಗೆ ಪುದುಚೇರಿಯಿಂದಲೂ ಭಕ್ತರು ಆಗಮಿಸಿ ವೈಕಾಸಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಹಾಗಾಗಿ, ಬೇರೆ ಬೇರೆ ಜಿಲ್ಲೆಗಳು ಹಾಗೂ ಹೊರ ರಾಜ್ಯದ ಜನರು ಆಗಮಿಸುವ ಕಾರಣ ದೇವಾಲಯವು ಹೆಚ್ಚು ಪ್ರಸಿದ್ಧಿ ಪಡೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Bus Accident: ಕಂದಕಕ್ಕೆ ಉರುಳಿದ ಬಸ್‌; 9 ಜನ ಬಲಿ; 40 ಜನರಿಗೆ ಗಂಭೀರ ಗಾಯ

Bus Accident:ಜಮ್ಮು-ಕಾಶ್ಮೀರ(Jammu-Kashmir)ದ ಚೌಕಿ ಚೌರಾ ಟುಗಿ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಲಿಧಾರ್‌ ಪ್ರದೇಶದಲ್ಲಿ ಬೆಟ್ಟ ಮೇಲೆ ಚಲಿಸುತ್ತಿದ್ದ ಬಸ್‌ ಏಕಾಏಕಿ ಸ್ಕಿಡ್‌ ಆಗಿ 150 ಅಡಿ ಎತ್ತರದಿಂದ ಕೆಳಗೆ ಉರುಳಿದೆ. ಈ ಬಸ್‌ ಕುರುಕ್ಷೇತ್ರದಿಂದ ಶಿವಖೋರಿಗೆ ಪ್ರಯಾಣಿಸುತ್ತಿತ್ತು.

VISTARANEWS.COM


on

Bus accident
Koo

ಜಮ್ಮು-ಕಾಶ್ಮೀರ: ಯಾತ್ರಿಕರಿದ್ದ ಬಸ್‌(Bus)ವೊಂದು ಬೆಟ್ಟದ ಮೇಲಿನಿಂದ ಉರುಳಿ ಬಿದ್ದಿದ್ದು(Bus Accident), 9 ಜನ ಮೃತಪಟ್ಟಿದ್ದು, 40 ಜನರಿಗೆ ಗಂಭೀರ ಗಾಯಗಳಾಗಿವೆ. ಜಮ್ಮು-ಕಾಶ್ಮೀರ(Jammu-Kashmir)ದ ಚೌಕಿ ಚೌರಾ ಟುಗಿ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಲಿಧಾರ್‌ ಪ್ರದೇಶದಲ್ಲಿ ಬೆಟ್ಟ ಮೇಲೆ ಚಲಿಸುತ್ತಿದ್ದ ಬಸ್‌ ಏಕಾಏಕಿ ಸ್ಕಿಡ್‌ ಆಗಿ 150 ಅಡಿ ಎತ್ತರದಿಂದ ಕೆಳಗೆ ಉರುಳಿದೆ. ಈ ಬಸ್‌ ಕುರುಕ್ಷೇತ್ರದಿಂದ ಶಿವಖೋರಿಗೆ ಪ್ರಯಾಣಿಸುತ್ತಿತ್ತು.

ಇನ್ನು ಘಟನೆಯಲ್ಲಿ ಹತ್ತಾರು ಜನ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಜಮ್ಮುವಿನ GMC ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಕೆಲವು ಗಾಯಾಳುಗಳನ್ನು ಚೌಕಿ ಚೌರ ಆಸ್ಪತ್ರೆ ಮತ್ತು ಅಖ್ನೂರ್‌ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಝಜ್ಜರ್​ ಕೊಟ್ಲಿ ಸಮೀಪ ಇತ್ತೀಚೆಗೆ ಬಸ್​ ಪಲ್ಟಿಯಾಗಿದ್ದು , 10 ಜನರು ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 75 ಪ್ರಯಾಣಿಕರನ್ನು ಹೊತ್ತ ಬಸ್​, ಪಂಜಾಬ್​ನ ಅಮೃತ್​ಸರ್​​ದಿಂದ ಕಾತ್ರಾಕ್ಕೆ ಹೋಗುತ್ತಿತ್ತು. ಕೊಟ್ಲಿ ಬಳಿ ಈ ಬಸ್​ ಕಂದಕಕ್ಕೆ ಉರುಳಿಬಿದ್ದಿತ್ತು. ಸೇತುವೆ ಮೇಲಿಂದ ಬಿದ್ದಿದ್ದು, ಬಸ್​ ಜಖಂ ಆಗಿದೆ. ಕಾತ್ರಾಕ್ಕೆ ಹೊರಟಿದ್ದ ಈ ಬಸ್​ನಲ್ಲಿ ಅನೇಕರು ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲಿದ್ದ ಭಕ್ತರೇ ಇದ್ದರು. ಬಹುತೇಕರು ಬಿಹಾರದವರು ಇದ್ದರು. ಆದರೆ ಕಾತ್ರಾ ಇರುವ ರಿಯಾಸಿ ಜಿಲ್ಲೆಯಿಂದ 15 ಕಿಮೀ ದೂರದಲ್ಲಿ, ಕೋಟ್ಲಿ ಬಳಿ ಅಪಘಾತಕ್ಕೀಡಾಗಿತ್ತು.

Continue Reading

ದೇಶ

RBI Balance Sheet: ಪಾಕಿಸ್ತಾನದ ಜಿಡಿಪಿಗಿಂತ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಎರಡೂವರೆ ಪಟ್ಟು ಹೆಚ್ಚು; ಹೀಗಿದೆ ವರದಿ

RBI Balance Sheet: ಪಾಕಿಸ್ತಾನದ ಒಟ್ಟು ಜಿಡಿಪಿ ಮೌಲ್ಯವು 338 ಬಿಲಿಯನ್‌ ಡಾಲರ್‌ (ಸುಮಾರು 28 ಲಕ್ಷ ಕೋಟಿ ರೂ.) ಇದೆ. ಆದರೆ, ಭಾರತದ ಕೇಂದ್ರೀಯ ಬ್ಯಾಂಕ್‌ನ ಬ್ಯಾಲೆನ್ಸ್‌ ಶೀಟೇ ಪಾಕಿಸ್ತಾನದ ಜಿಡಿಪಿಗಿಂತ ಎರಡೂವರೆ ಪಟ್ಟು ಜಾಸ್ತಿ ಇದೆ. 2023ರ ಹಣಕಾಸು ವರ್ಷದಲ್ಲಿ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯವು 63.44 ಲಕ್ಷ ಕೋಟಿ ರೂ. ಆಗಿತ್ತು.

VISTARANEWS.COM


on

RBI Balance Sheet
Koo

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ತನ್ನ ವಾರ್ಷಿಕ ಹಣಕಾಸು ವರದಿ ಬಿಡುಗಡೆ ಮಾಡಿದೆ. 2024ರ ಮಾರ್ಚ್‌ 31ಕ್ಕೆ ಅಂತ್ಯವಾದ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ (ಹಣಕಾಸು ವರದಿ) ಕಳೆದ ಹಣಕಾಸು ವರ್ಷಕ್ಕಿಂತ ಶೇ.11ರಷ್ಟು ಏರಿಕೆಯಾಗಿದೆ. ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ (RBI Balance Sheet) ಈಗ 70.48 ಲಕ್ಷ ಕೋಟಿ ರೂ. ಮೌಲ್ಯಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯವು ಪಾಕಿಸ್ತಾನದ ಒಟ್ಟು ಜಿಡಿಪಿಯ (Pakistan GDP) ಎರಡೂವರೆ ಪಟ್ಟು ಜಾಸ್ತಿ ಇದೆ ಎಂದು ತಿಳಿದುಬಂದಿದೆ. ಇದು ಭಾರತದ ಕೇಂದ್ರೀಯ ಬ್ಯಾಂಕ್‌ನ ಆರ್ಥಿಕ ಸುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ವರದಿ ಪ್ರಕಾರ, ಪಾಕಿಸ್ತಾನದ ಒಟ್ಟು ಜಿಡಿಪಿ ಮೌಲ್ಯವು 338 ಬಿಲಿಯನ್‌ ಡಾಲರ್‌ (ಸುಮಾರು 28 ಲಕ್ಷ ಕೋಟಿ ರೂ.) ಇದೆ. ಆದರೆ, ಭಾರತದ ಕೇಂದ್ರೀಯ ಬ್ಯಾಂಕ್‌ನ ಬ್ಯಾಲೆನ್ಸ್‌ ಶೀಟೇ ಪಾಕಿಸ್ತಾನದ ಜಿಡಿಪಿಗಿಂತ ಎರಡೂವರೆ ಪಟ್ಟು ಜಾಸ್ತಿ ಇದೆ. 2023ರ ಹಣಕಾಸು ವರ್ಷದಲ್ಲಿ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯವು 63.44 ಲಕ್ಷ ಕೋಟಿ ರೂ. ಆಗಿತ್ತು. ಅಷ್ಟೇ ಅಲ್ಲ, ಬಾಂಗ್ಲಾದೇಶದ ಒಟ್ಟು ಜಿಡಿಪಿ ಮೌಲ್ಯಕ್ಕಿಂತಲೂ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯ ಜಾಸ್ತಿ ಇದೆ ಎಂದು ತಿಳಿದುಬಂದಿದೆ.

ಟಿಸಿಎಸ್‌ ಮಹತ್ವದ ಮೈಲುಗಲ್ಲು

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (TCS) ಮಹತ್ವದ ಮೈಲುಗಲ್ಲು ಸಾಧಿಸಿದೆ. ಟಿಸಿಎಸ್‌ನ ಬ್ಯಾಲೆನ್ಸ್‌ ಶೀಟ್‌ 15 ಲಕ್ಷ ಕೋಟಿ ರೂ. ಆಗಿದೆ. ಇದು ದೇಶದಲ್ಲೇ ಆರ್‌ಬಿಐ ನಂತರ ಬೃಹತ್‌ ಮೊತ್ತದ ಬ್ಯಾಲೆನ್ಸ್‌ ಶೀಟ್‌ ಹೊಂದಿರುವ ಕಂಪನಿ ಎನಿಸಿದೆ. ಪಾಕಿಸ್ತಾನದ ಒಟ್ಟು ಜಿಡಿಪಿಯ ಅರ್ಧದಷ್ಟು ಮೌಲ್ಯವನ್ನು ಟಿಸಿಎಸ್‌ ಬ್ಯಾಲೆನ್ಸ್‌ ಶೀಟ್‌ ಹೊಂದಿದೆ ಎಂಬುದು ಗಮನಾರ್ಹವಾಗಿದೆ. ಉಗ್ರವಾದದ ಪೋಷಣೆ, ಚೀನಾ ಯೋಜನೆಗಳಿಗೆ ಹಣ ವಿನಿಯೋಗ, ಅಸಮರ್ಥ ನಾಯಕತ್ವ, ವಿತ್ತೀಯ ಸುಧಾರಣೆಗಳ ಕೊರತೆಯಿಂದಾಗಿ ಪಾಕಿಸ್ತಾನವು ದಿವಾಳಿಯಾಗಿದೆ.

ಬ್ಯಾಲೆನ್ಸ್‌ ಶೀಟ್‌ ಎಂದರೇನು?

ನಿರ್ದಿಷ್ಟ ಸಮಯದಲ್ಲಿ ಯಾವುದೇ ಕಂಪನಿಯು ತನ್ನ ಸ್ವತ್ತುಗಳು, ಷೇರುದಾರರ ಈಕ್ವಿಟಿಯ ಒಂದು ವರದಿ ಅಥವಾ ಸ್ಟೇಟ್‌ಮೆಂಟ್‌ ಆಗಿದೆ. ಹೂಡಿಕೆದಾರರಿಗೆ ಸಿಗುತ್ತಿರುವ ಲಾಭ (Returns) ಹಾಗೂ ಕಂಪನಿಯ ಬಂಡವಾಳದ ಸ್ಥಿತಿಗತಿಯನ್ನು ಬ್ಯಾಲೆನ್ಸ್‌ ಶೀಟ್‌ ವಿವರಿಸುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಯಾವುದೇ ಸಂಸ್ಥೆ ಅಥವಾ ಕಂಪನಿಯ ಹಣಕಾಸು ವಹಿವಾಟು, ಆಸ್ತಿಯ ಮೌಲ್ಯ, ಷೇರುಗಳ ಏರಿಳಿತದ ಲೆಕ್ಕಾಚಾರವಾಗಿದೆ. ಇದು ಆ ಕಂಪನಿಯ ಸುಸ್ಥಿತಿ ಅಥವಾ ದುಸ್ಥಿತಿಯನ್ನು ತಿಳಿಸುತ್ತದೆ.

ಇದನ್ನೂ ಓದಿ: RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ.‌ ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!

Continue Reading

ಕ್ರೈಂ

Chhota Rajan: ಹೊಟೇಲ್‌ ಉದ್ಯಮಿ ಹತ್ಯೆ ಕೇಸ್‌; ಗ್ಯಾಂಗ್‌ಸ್ಟರ್‌ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

Chhota Rajan:ಮುಂಬೈಯ ಗಾಮ್‌ದೇವಿಯ ಗೋಲ್ಡನ್‌ ಕ್ರೌನ್‌ ಹೊಟೇಲ್‌ ಮಾಲೀಕರಾಗಿದ್ದ ಜಯಾ ಶೆಟ್ಟಿ ಅವರಿಗೆ ಛೋಟಾ ರಾಜನ್‌ ಗ್ಯಾಂಗ್‌ನಿಂದ ಹಣಕ್ಕಾಗಿ ಬೇಡಿಕೆ ಇಟ್ಟು ಆಗಾಗ ಕರೆ ಬರುತ್ತಿತ್ತು. ಇದಾದ ಬಳಿಕ ಕಲವೇ ದಿನಗಳಲ್ಲಿ ಅಂದರೆ ಮೇ 4, 2001ರಂದು ಹೊಟೇಲ್‌ ಒಳಗಡೆಯೇ ಜಯಾ ಶೆಟ್ಟಿ ಅವರನ್ನು ಛೋಟಾ ರಾಜನ್‌ ಗ್ಯಾಂಗ್‌ನ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

VISTARANEWS.COM


on

Chhota Rajan
Koo

ಮುಂಬೈ: ಹೊಟೇಲ್‌ ಉದ್ಯಮಿ ಜಯಾ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌, ಭೂಗತ ಪಾತಕಿ ಛೋಟಾ ರಾಜನ್‌(Chhota Rajan)ನನ್ನು ಅಪರಾಧಿ ಎಂದು ಮುಂಬೈ ಕೋರ್ಟ್‌(Mumbai court) ಘೋಷಿಸಿದೆ. 2001ರಲ್ಲಿ ನಡೆದ ಜಯಾ ಶೆಟ್ಟಿ ಕೊಲೆ ಪ್ರಕರಣದ ಅಂತಿಮ ತೀರ್ಪು ಇಂದು ಹೊರಬಿದ್ದಿದ್ದು, ರಾಜನ್‌ನನ್ನು ದೋಷಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ಘೋಷಿಸಿದೆ. ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ(MCOCA) ಕೇಸ್‌ಗಳ ವಿಚಾರಣೆ ನಡೆಸುವ ಮುಂಬೈ ವಿಶೇಷ ಕೋರ್ಟ್‌ ನ್ಯಾಯಾಧೀಶ ಎ ಎಂ ಪಾಟೀಲ್‌ ರಾಜನ್‌ನನ್ನು ಅಪರಾಧಿ ಎಂದು ಘೋಷಿಸಿದ್ದಾರೆ.

ಜಯಾ ಶೆಟ್ಟಿ ಯಾರು?

ಮುಂಬೈಯ ಗಾಮ್‌ದೇವಿಯ ಗೋಲ್ಡನ್‌ ಕ್ರೌನ್‌ ಹೊಟೇಲ್‌ ಮಾಲೀಕರಾಗಿದ್ದ ಜಯಾ ಶೆಟ್ಟಿ ಅವರಿಗೆ ಛೋಟಾ ರಾಜನ್‌ ಗ್ಯಾಂಗ್‌ನಿಂದ ಹಣಕ್ಕಾಗಿ ಬೇಡಿಕೆ ಇಟ್ಟು ಆಗಾಗ ಕರೆ ಬರುತ್ತಿತ್ತು. ಇದಾದ ಬಳಿಕ ಕಲವೇ ದಿನಗಳಲ್ಲಿ ಅಂದರೆ ಮೇ 4, 2001ರಂದು ಹೊಟೇಲ್‌ ಒಳಗಡೆಯೇ ಜಯಾ ಶೆಟ್ಟಿ ಅವರನ್ನು ಛೋಟಾ ರಾಜನ್‌ ಗ್ಯಾಂಗ್‌ನ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಜಯಾ ಅವರಿಗೆ ಬೆದರಿಕೆ ಬರುತ್ತಿದ್ದಂತೆ ಮುಂಬೈ ಪೊಲೀಸರು ಅವರಿಗೆ ಭಾರೀ ಭದ್ರತೆ ಒದಗಿಸಿದ್ದರು. 2000ನೇ ಇಸವಿ ನವೆಂಬರ್ ತಿಂಗಳಿನಿಂದ ಛೋಟಾ ರಾಜನ್‌ ಬೆದರಿಕೆ ಕರೆಯಿಂದ ಪೊಲೀಸರಿಗೆ ದೂರು ನೀಡಿದ್ದ ಜಯಾ ಶೆಟ್ಟಿ, 2001ರ ಮಾರ್ಚ್ ಅಂತ್ಯದಲ್ಲಿ ಭದ್ರತೆ ಹಿಂತೆಗೆದುಕೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಪೊಲೀಸ್ ಭದ್ರತೆ ಬಳಿಕ ಛೋಟಾ ರಾಜನ್‌ ದೂರವಾಣಿ ಕರೆ ಮಾಡಿ ಬೆದರಿಸುವ ಪ್ರಯತ್ನ ಮಾಡಿರಲಿಲ್ಲ. ಹೀಗಾಗಿ ಛೋಟಾ ರಾಜನ್‌ ತಮ್ಮ ತಂಟೆಗೆ ಬರುವುದಿಲ್ಲ ಎಂದು, ಪೊಲೀಸ್ ಭದ್ರತೆ ವಾಪಸ್ ಪಡೆಯಲು ಪೊಲೀಸರಿಗೆ ಮನವಿ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ 2015 ಅಕ್ಟೋಬರ್‌ನಲ್ಲಿ ಚೋಟಾ ರಾಜನ್‌ ಇಂಡೋನೇಷ್ಯಾದಿಂದ ಭಾರತಕ್ಕೆ ಗಡಿಪಾರಾಗುತ್ತಿದ್ದಂತೆ ಆತನನ್ನು ಅರೆಸ್ಟ್‌ ಮಾಡಿ ದಿಲ್ಲಿಯ ತಿಹಾರ್‌ ಜೈಲಿಗೆ ಕಳುಹಿಸಲಾಗಿತ್ತು. ಇನ್ನು ಘಟನೆ ನಡೆದ ಸಂದರ್ಭದಲ್ಲೇ ಹೊಟೇಲ್‌ನ ಮ್ಯಾನೇಜರ್‌ ಮತ್ತು ನೌಕರರು ಸೇರಿಕೊಂಡು ಇಬ್ಬರು ಶೂಟರ್‌ಗಳನ್ನು ಅರೆಸ್ಟ್‌ ಮಾಡಿದ್ದಾರೆ.

ಚೋಟಾ ರಾಜನ್‌ ಯಾರು?

ಚೋಟಾ ರಾಜನ್‌ನ ನಿಜವಾದ ಹೆಸರು ರಾಜೇಂದ್ರ ಸದಾಶಿವ ನಿಕಲ್ಜೆ . 2001ರಲ್ಲಿ ಛೋಟಾ ರಾಜನ್‌ ಹಾವಳಿ ಜೋರಾಗಿತ್ತು. ಮುಂಬೈನ ಉದ್ಯಮಿಗಳಿಂದ ಕೋಟಿ ಕೋಟಿ ರೂಪಾಯಿ ಸುಲಿಗೆ ಮಾಡೋದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದ.

ಇದನ್ನೂ ಓದಿ:Madhu Chopra: ಮಗಳು-ಅಳಿಯನ ವಯಸ್ಸಿನ ಅಂತರ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಹೇಳಿದ್ದೇನು?

ಇತ್ತೀಚೆಗೆ ಛೋಟಾ ರಾಜನ್‌ ಆಪ್ತ ಪ್ರಸಾದ್​ ಪೂಜಾರಿಯನ್ನು 20 ವರ್ಷಗಳ ಬಳಿಕ ಚೀನಾವು ಮುಂಬೈಗೆ ಗಡಿಪಾರು ಮಾಡಿತ್ತು. ಪ್ರಸಾದ್ ಪೂಜಾರಿ ಅಲಿಯಾಸ್ ಸುಭಾಷ್ ವಿಠ್ಠಲ್ ನನ್ನು ಚೀನಾದಿಂದ ಮುಂಬೈಗೆ ಗಡಿಪಾರು ಮಾಡಿದ್ದು, ಈತ ಛೋಟಾ ರಾಜನ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದು, ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Continue Reading

ತಂತ್ರಜ್ಞಾನ

Agnikul Cosmos: ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿದ ಸ್ಟಾರ್ಟ್ ಅಪ್ ಕಂಪನಿ ಅಗ್ನಿಕುಲ್ ಕಾಸ್ಮೋಸ್; ಮೋದಿ ಅಭಿನಂದನೆ

Agnikul Cosmos: ಚೆನ್ನೈ ಮೂಲದ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್ ಅಪ್ ಅಗ್ನಿಕುಲ್ ಕಾಸ್ಮೋಸ್ ಅಗ್ನಿಬಾನ್ ಎಸ್‌ಒಆರ್‌ಟಿಇಡಿ ಎಂಬ ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಐತಿಹಾಸಿಕ ಸಾಧನೆಗೆ ಇಸ್ರೋ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

VISTARANEWS.COM


on

Agnikul Cosmos
Koo

ಚೆನ್ನೈ: ಚೆನ್ನೈ ಮೂಲದ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್ ಅಪ್ ಅಗ್ನಿಕುಲ್ ಕಾಸ್ಮೋಸ್ (Agnikul Cosmos) ಇಂದು (ಮೇ 30) ಅಗ್ನಿಬಾನ್ ಎಸ್‌ಒಆರ್‌ಟಿಇಡಿ (Suborbital Tech Demonstrator) ಎಂಬ ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಸಂಬಂಧ ಇಸ್ರೋ (Indian Space Research Organisation) ಸಂತಸ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿನಂದನೆ ತಿಳಿಸಿದೆ.‌

ʼʼಅಗ್ನಿಬಾನ್‌ ಸಾರ್ಟೆಡ್ 01 (Agnibaan SOrTeD) ಮಿಷನ್‌ ಅನ್ನು ತಮ್ಮ ಉಡಾವಣಾ ಪ್ಯಾಡ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಅಗ್ನಿಕುಲ್‌ ಕಾಸ್ಮೋಸ್‌ಗೆ ಅಭಿನಂದನೆಗಳು. ಅರೆ-ಕ್ರಯೋಜೆನಿಕ್‌ ಲಿಕ್ವಿಡ್‌ ಎಂಜಿನ್‌ನ ಮೊದಲ ನಿಯಂತ್ರಿತ ಹಾರಾಟವು ಪ್ರಮುಖ ಮೈಲಿಗಲ್ಲು ಎನಿಸಿಕೊಂಡಿದೆʼʼ ಎಂದು ಇಸ್ರೋ ತಿಳಿಸಿದೆ. ಐಐಟಿ ಮದ್ರಾಸ್‌ನ ಪ್ರಾಧ್ಯಾಪಕ ಮತ್ತು ಅಗ್ನಿಕುಲ್‌ನ ಮಾರ್ಗದರ್ಶಕ ಸತ್ಯ ಆರ್. ಚಕ್ರವರ್ತಿ ಕೂಡ ಶ್ರೀಹರಿಕೋಟಾದಿಂದ ಉಡಾವಣೆ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

“ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ-ಶಾರ್‌(SDSC-SHAR)ನಿಂದ ಭಾರತದ ಮೊದಲ ಮತ್ತು ಏಕೈಕ ಖಾಸಗಿ ಲಾಂಚ್‌ ಪ್ಯಾಡ್‌ನಿಂದ ಅಗ್ನಿಬಾನ್ ಸಾರ್ಟೆಡ್‌ ಮಿಷನ್ 01 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ಈ ರಾಕೆಟ್‌ ವಿಶ್ವದ ಮೊದಲ ಸಿಂಗಲ್ ಪೀಸ್ 3 ಡಿ ಮುದ್ರಿತ ಎಂಜಿನ್‌ನಿಂದ ಚಾಲಿತವಾಗಿದೆ ಮತ್ತು ಇದು ಸೆಮಿ ಕ್ರಯೋ ಎಂಜಿನ್ ಹೊಂದಿರುವ ಭಾರತದ ಮೊದಲ ಹಾರಾಟ ಎನಿಸಿಕೊಂಡಿದೆ” ಎಂದು ಅಗ್ನಿಕುಲ್‌ ತಿಳಿಸಿದೆ.

ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

ಇತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಈ ಅಭೂತಪೂರ್ವ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಎಕ್ಸ್‌ ಮೂಲಕ ಅಭಿನಂದನೆ ತಿಳಿಸಿದ ಅವರು, “ಇಡೀ ರಾಷ್ಟ್ರವೇ ಹೆಮ್ಮೆ ಪಡುವಂತಹ ಗಮನಾರ್ಹ ಸಾಧನೆ. ವಿಶ್ವದ ಮೊದಲ ಸಿಂಗಲ್-ಪೀಸ್ 3ಡಿ ಮುದ್ರಿತ ಅರೆ-ಕ್ರಯೋಜೆನಿಕ್ ಎಂಜಿನ್‌ನಿಂದ ಚಾಲಿತ ಅಗ್ನಿಬಾನ್ ರಾಕೆಟ್‌ನ ಯಶಸ್ವಿ ಉಡಾವಣೆ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ಮಹತ್ವದ ಕೊಡುಗೆಯಾಗಿದೆ ಮತ್ತು ನಮ್ಮ ಯುವ ಶಕ್ತಿಯ ಗಮನಾರ್ಹ ಜಾಣ್ಮೆಗೆ ಸಾಕ್ಷಿಯಾಗಿದೆ. ಅಗ್ನಿಕುಲ್ ಕಾಸ್ಮೋಸ್ ತಂಡಕ್ಕೆ, ಅವರ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು” ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Chandrayaan 4: ಚಂದ್ರಯಾನ 4ಕ್ಕೆ ಇಸ್ರೋ ಸಜ್ಜು; ಚಂದ್ರನ ವಿಶೇಷ ಸ್ಥಳದಲ್ಲಿ ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್!

5ನೇ ಪ್ರಯತ್ನ

ಇದು ಅಗ್ನಿಕುಲ್ ಕಾಸ್ಮೋಸ್ ನಡೆಸಿದ 5ನೇ ಪ್ರಯತ್ನವಾಗಿತ್ತು. ಈ ಹಿಂದೆ ರಾಕೆಟ್‌ ಉಡಾವಣೆ ಮಾಡಲು 4 ಬಾರಿ ಪ್ರಯತ್ನ ನಡೆದಿತ್ತಾದರೂ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಯಿಂದ ರದ್ದುಗೊಳಿಸಲಾಗಿತ್ತು. 575 ಕೆಜಿ ತೂಕ ಮತ್ತು 6.2 ಮೀಟರ್ ಉದ್ದದ ರಾಕೆಟ್ ಶ್ರೀಹರಿಕೋಟಾದಿಂದ ಬಂಗಾಳ ಕೊಲ್ಲಿಗೆ ಯಶಸ್ವಿಯಾಗಿ ಹಾರಾಟ ನಡೆಸಿತು. ʼʼಅಗ್ನಿಬಾನ್ ಸಾರ್ಟೆಡ್‌ ಅರೆ-ಕ್ರಯೋಜೆನಿಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ವಾಣಿಜ್ಯಿಕವಾಗಿ ಲಭ್ಯವಿರುವ ವಾಯುಯಾನ ಟರ್ಬೈನ್ ಇಂಧನವನ್ನು, ಮುಖ್ಯವಾಗಿ ಸೀಮೆಎಣ್ಣೆ ಮತ್ತು ವೈದ್ಯಕೀಯ ದರ್ಜೆಯ ದ್ರವ ಆಮ್ಲಜನಕವನ್ನು ಬಳಸುತ್ತದೆʼʼ ಎಂದು ಅಗ್ನಿಕುಲ್ ಕಾಸ್ಮೋಸ್ ಪ್ರೈವೇಟ್ ಲಿಮಿಟೆಡ್‌ನ ಸಹ ಸಂಸ್ಥಾಪಕ ಮೊಯಿನ್ ಎಸ್‌ಪಿಎಂ ತಿಳಿಸಿದ್ದಾರೆ.

Continue Reading
Advertisement
Rishabh Pant
ಕ್ರೀಡೆ6 mins ago

Rishabh Pant: ದೇವರ ಕೃಪೆಯಿಂದ ಮತ್ತೆ ಟೀಮ್​ ಇಂಡಿಯಾ ಜೆರ್ಸಿ ಧರಿಸುವಂತಾಯಿತು ಎಂದು ಭಾವುಕರಾದ ರಿಷಭ್​ ಪಂತ್

IAS Exam
ಕರ್ನಾಟಕ11 mins ago

IAS Exam : ಯುಪಿಎಸ್ ಸಿ ಪರೀಕ್ಷಾ ಅಭ್ಯರ್ಥಿಗಳಿಗೆ ಉಚಿತ ತರಬೇತಿ

Kamal Haasan indian 2 second song out
ಕಾಲಿವುಡ್14 mins ago

Kamal Haasan: ‘ಇಂಡಿಯನ್-2’ ಸಿನಿಮಾದ ಎರಡನೇ ಹಾಡು ರಿಲೀಸ್!

Bus accident
ದೇಶ26 mins ago

Bus Accident: ಕಂದಕಕ್ಕೆ ಉರುಳಿದ ಬಸ್‌; 9 ಜನ ಬಲಿ; 40 ಜನರಿಗೆ ಗಂಭೀರ ಗಾಯ

Money Guide
ಮನಿ-ಗೈಡ್28 mins ago

Money Guide: ಹಣ ಪಾವತಿ ಅಂಗಳಕ್ಕೆ ಕಾಲಿಡಲು ಅದಾನಿ ಗ್ರೂಪ್‌ ಸಜ್ಜು; ಗೂಗಲ್‌ ಪೇ, ಫೋನ್‌ ಪೇಗೆ ಪ್ರಬಲ ಪೈಪೋಟಿ?

DK Shivakumar
ಕರ್ನಾಟಕ32 mins ago

DK Shivakumar: ಸಿಎಂ, ನನ್ನ ಮೇಲೆ ಶತ್ರು ಭೈರವಿ ಯಾಗ ನಡೆಯುತ್ತಿದೆ; ಡಿಕೆಶಿ ಹೊಸ ಬಾಂಬ್

Food Poisoning
ಬೆಳಗಾವಿ33 mins ago

Food Poisoning : ಜಾತ್ರೆಲಿ ಪ್ರಸಾದ ಸೇವಿಸಿದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

IPL 2024
ಕ್ರೀಡೆ41 mins ago

IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

Kannada New Movie Dasappa Kannada Movie Trailer
ಸ್ಯಾಂಡಲ್ ವುಡ್53 mins ago

Kannada New Movie: ʻತಿಥಿʼ ಚಿತ್ರದ ಖ್ಯಾತಿಯ ತಮ್ಮಣ್ಣ ಅಭಿನಯದ ʻದಾಸಪ್ಪʼ ಸಿನಿಮಾ ಟ್ರೈಲರ್‌ ಔಟ್‌!

T20 World Cup 2024
ಕ್ರೀಡೆ53 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಫೀಲ್ಡರ್​ಗಳಿವರು…

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ3 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌