Narendra Modi: ಪ್ರಧಾನಿ ಅಮೆರಿಕ ಭೇಟಿ; ಈ ಊಟಕ್ಕೆ ಮೋದಿ ಹೆಸರಿಟ್ಟು ಅಭಿಮಾನ ಮೆರೆದ ಭಾರತೀಯ - Vistara News

ದೇಶ

Narendra Modi: ಪ್ರಧಾನಿ ಅಮೆರಿಕ ಭೇಟಿ; ಈ ಊಟಕ್ಕೆ ಮೋದಿ ಹೆಸರಿಟ್ಟು ಅಭಿಮಾನ ಮೆರೆದ ಭಾರತೀಯ

Narendra Modi: ನರೇಂದ್ರ ಮೋದಿ ಅವರು ಕೆಲವೇ ದಿನಗಳಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕೂ ಮೊದಲೇ ಅನಿವಾಸಿ ಭಾರತೀಯರೊಬ್ಬರು ರೆಸ್ಟೋರೆಂಟ್‌ನಲ್ಲಿ ವಿಶೇಷ ‘ಮೋದಿಜಿ ಥಾಲಿ’ ತಯಾರಿಸಿದ್ದು, ಅದರ ಮಾಹಿತಿ ಇಲ್ಲಿದೆ ನೋಡಿ….

VISTARANEWS.COM


on

ModiJi Thali In USA
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ/ವಾಷಿಂಗ್ಟನ್‌: ಜೂನ್‌ 21ರಿಂದ 24ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂನ್‌ 22ರಂದು ಅಮೆರಿಕ ಸಂಸತ್‌ ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಶ್ವೇತಭವನದ ಸೌತ್‌ಲಾನ್‌ನಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ತುದಿಗಾಲ ಮೇಲೆ ನಿಂತಿದ್ದಾರೆ. ಇನ್ನು, ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಭಾರತ ಮೂಲಕದ ವ್ಯಕ್ತಿಯೊಬ್ಬರು ಭಾರತದ ಥಾಲಿಗೆ ‘ಮೋದಿಜಿ ಥಾಲಿ’ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.

ಕಿಚಡಿ, ರಸಗುಲ್ಲ, ಇಡ್ಲಿ, ಡೋಕ್ಲಾ, ಪಾಪಡ್‌, ಚಾಚ್‌ ಸೇರಿ ಹಲವು ತಿಂಡಿಗಳುಳ್ಳ ‘ಮೋದಿಜಿ ಥಾಲಿ’ ಎಂದು ನ್ಯೂಜೆರ್ಸಿಯಲ್ಲಿರುವ ಶೆಫ್‌ (ಬಾಣಸಿಗ) ಶ್ರೀಪಾದ್‌ ಕುಲಕರ್ಣಿ ಹೆಸರಿಟ್ಟಿದ್ದಾರೆ. ಇವರು ಈ ಕುರಿತು ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. “ಮೋದಿಜಿಯವರೇ ನಮಸ್ಕಾರ. ನ್ಯೂಜೆರ್ಸಿಯಲ್ಲಿರುವ ಎಲ್ಲ ಭಾರತೀಯರ ಬೇಡಿಕೆ ಮೇರೆಗೆ ನಿಮ್ಮ ಹೆಸರಿನಲ್ಲಿ ವಿಶೇಷ ಥಾಲಿ ಮಾಡಿದ್ದೇವೆ. ಥಾಲಿಯಲ್ಲಿ ಇಷ್ಟೆಲ್ಲ ತಿನಿಸುಗಳು ಇರಲಿವೆ” ಎಂದು ಕುಲಕರ್ಣಿ ವಿವರಿಸಿದ್ದಾರೆ.

ಹೀಗಿದೆ ಮೋದಿಜಿ ಥಾಲಿ

ಹಾಗೆಯೇ, ಇತ್ತೀಚೆಗೆ ಮೋದಿಜಿ ಥಾಲಿಗೆ ಭಾರಿ ಬೇಡಿಕೆ ಉಂಟಾಗಿದೆ ಎಂದು ತಿಳಿದುಬಂದಿದೆ. ಹೋಟೆಲ್‌ ಸಿಬ್ಬಂದಿ ಸೇರಿ ಹಲವರು ಮೋದಿಜಿ ಥಾಲಿಯ ರುಚಿ ನೋಡಿದ್ದು, ಅದು ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ. ಮೋದಿ ಅವರಿಗಾಗಿ ಮಾಡಿದ ವಿಶೇಷ ಥಾಲಿಯ ವಿಡಿಯೊ ಈಗ ವೈರಲ್‌ ಆಗಿದೆ. ಇನ್ನು ಮೋದಿ ಅವರು ಅಮೆರಿಕ ಭೇಟಿ ವೇಳೆ ಅನಿವಾಸಿ ಭಾರತೀಯರನ್ನು ಕೂಡ ಭೇಟಿಯಾಗಲಿದ್ದಾರೆ.

ಇದನ್ನೂ ಓದಿ: Narendra Modi: ನಿನ್ನ ನಾಮದ ಬಲವೊಂದಿದ್ದರೆ ಸಾಕು; ಮೋದಿ ಮತ್ತೆ ವಿಶ್ವದ ನಂ 1 ಜನಪ್ರಿಯ ನಾಯಕ

ನರೇಂದ್ರ ಮೋದಿ ಅವರು ಜೂನ್‌ 22ರಂದು ಅಮೆರಿಕ ಸಂಸತ್‌ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಮೆರಿಕ ಸಂಸತ್‌ನಲ್ಲಿ ಮೋದಿ ಮಾಡುತ್ತಿರುವ ಎರಡನೇ ಭಾಷಣ ಇದಾಗಿದೆ. ಆ ಮೂಲಕ ಮೋದಿ ಅವರು ಅಮೆರಿಕ ಸಂಸತ್‌ನಲ್ಲಿ ಭಾಷಣ ಮಾಡಿದ ಭಾರತದ ಎರಡನೇ ಪ್ರಧಾನಿ ಎನಿಸಲಿದ್ದಾರೆ. ಮೋದಿ ಭಾಷಣದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಜತೆ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Lowest Margin of Wins: ಕೇವಲ 48 ಮತ ಅಂತರದ ಗೆಲುವು! ಕಡಿಮೆ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ

Lowest Margin of Wins: ಇಡೀ ದೇಶದಲ್ಲಿಯೇ ಈ ಬಾರಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರು ಶಿವಸೇನಾ (ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್. ಇವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಕೇವಲ 48 ಮತಗಳಿಂದ ಶಿವಸೇನಾ UBT ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು ಸೋಲಿಸಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

VISTARANEWS.COM


on

Lowest Margin of Wins
Koo

ನವದೆಹಲಿ: 2024 ರ ಲೋಕಸಭಾ ಚುನಾವಣೆ ಫಲಿತಾಂಶ(Lok Sabha Election 2024) ಹೊರಬಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಮುಗಿದಿದೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದವರು, ಅತಿ ಹೆಚ್ಚು ಬಾರಿ ಗೆದ್ದವರು ಹೀಗೆ ಚುನಾವಣೆ ಕುರಿತ ಇಂಟ್ರೆಸ್ಟಿಂಗ್‌ ಸುದ್ದಿಗಳನ್ನು ನೋಡಿದ್ದೇವೆ. ಹೀಗಿರುವಾಗ ಈ ಬಾರಿ ಅತ್ಯಂತ ಕಡಿಮೆ ಮತಗಳಲ್ಲಿ ಅಂದರೆ ಇನ್ನೇನು ಸೋತೆ ಬಿಟ್ರು ಅನ್ನೋವಾಗ ಗೆಲುವಿನ ನಗೆ ಬೀರಿದವರ ಬಗ್ಗೆ ತಿಳಿದುಕೊಳ್ಳಬೇಕು. ನೆಕ್‌ ಟು ನೆಕ್‌ ಫೈಟ್‌ ನೀಡಿ ಕೇವಲ ಕೆಲವೇ ಕೆಲವು ಮತಗಳ ಅಂತರದಲ್ಲಿ ಗೆದ್ದವರು(Lowest Margin of Wins) ಯಾರು ಗೊತ್ತೇ?

ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳು

ಇಡೀ ದೇಶದಲ್ಲಿಯೇ ಈ ಬಾರಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರು ಶಿವಸೇನಾ (ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್. ಇವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಕೇವಲ 48 ಮತಗಳಿಂದ ಶಿವಸೇನಾ UBT ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು ಸೋಲಿಸಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಅಂದರೆ 1989 ಮತ್ತು 1998 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅನಕಾಪಲ್ಲಿಯಿಂದ ಕೊನತ್ತಲ ರಾಮಕೃಷ್ಣ ಮತ್ತು ಬಿಹಾರದ ರಾಜಮಹಲ್‌ನಿಂದ ಸೋಮ್ ಮರಾಂಡಿ ಅವರು ಕ್ರಮವಾಗಿ ಒಂಬತ್ತು ಮತಗಳಿಂದ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಅವರ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಮತಗಳ ಅಂತರದಿಂದ ರವೀಂದ್ರ ವೈಕರ್‌ ಗೆಲುವು ಸಾಧಿಸಿದ್ದಾರೆ.

ಇನ್ನು ಎರಡನೇ ಸ್ಥಾನದಲ್ಲಿರುವವರು ಕೇರಳದ ಅಟ್ಟಿಂಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಡೂರ್ ಪ್ರಕಾಶ್. ಈ ಚುನಾವಣೆಯಲ್ಲಿ, 684 ಮತಗಳಿಂದ ಜಯಗಳಿಸಿದ್ದಾರೆ. ಜೈಪುರ ಗ್ರಾಮಾಂತರದಿಂದ ಬಿಜೆಪಿಯ ರಾವ್ ರಾಜೇಂದ್ರ ಸಿಂಗ್ (1,615 ಮತಗಳು) ಮತ್ತು ಛತ್ತೀಸ್‌ಗಢದ ಕಂಕೇರ್‌ನಿಂದ ಅವರ ಪಕ್ಷದ ಸಹೋದ್ಯೋಗಿ ಬ್ರೋಜರಾಜ್ ನಾಗ್ (1,884 ಮತಗಳು) 2,000 ಮತಗಳಿಗಿಂತ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಲ್ಲಿ ಪಟ್ಟಿಗೆ ಸೇರಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದ ಇತರ ಅಭ್ಯರ್ಥಿಗಳೆಂದರೆ ಉತ್ತರ ಪ್ರದೇಶದ ಫರೂಕಾಬಾದ್‌ನಿಂದ ಬಿಜೆಪಿಯ ಮುಖೇಶ್ ರಜಪೂತ್ (2,678 ಮತಗಳು), ಬಿಜೆಪಿಯ ಪ್ರವೀಣ್ ಪಟೇಲ್ ಫುಲ್ಪುರ (4,332 ಮತಗಳು), ಪಂಜಾಬ್‌ನ ಫಿರೋಜ್‌ಪುರದಿಂದ ಕಾಂಗ್ರೆಸ್‌ನ ಶೇರ್ ಸಿಂಗ್ ಘುಬಯಾ (3,242 ಮತಗಳು). ಮತಗಳು), ಚಂಡೀಗಢದಿಂದ ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ (2,504 ಮತಗಳು), ಲಕ್ಷದ್ವೀಪದಿಂದ ಕಾಂಗ್ರೆಸ್‌ನ ಮುಹಮ್ಮದ್ ಹಮ್ದುಲ್ಲಾ ಸಯೀದ್ (2,647 ಮತಗಳು) ಮತ್ತು ಉತ್ತರ ಪ್ರದೇಶದ ಧೌರಾಹ್ರಾದಿಂದ ಸಮಾಜವಾದಿ ಪಕ್ಷದ ಆನಂದ್ ಭದೌರಿಯಾ (4,449 ಮತಗಳು).

ಉತ್ತರ ಪ್ರದೇಶದ ಬನ್ಸ್‌ಗಾಂವ್‌ನಿಂದ ಬಿಜೆಪಿಯ ಕಮಲೇಶ್ ಪಾಸ್ವಾನ್ 3,150 ಮತಗಳ ಅಂತರದಿಂದ, ಬಿಷ್ಣುಪುರದಿಂದ ಕೇಸರಿ ಪಕ್ಷದ ಸೌಮಿತ್ರಾ ಖಾನ್ 5,567 ಮತಗಳಿಂದ, ತೆಲಂಗಾಣದ ಮಹಬೂಬ್‌ನಗರದಿಂದ ಅದರ ಅಭ್ಯರ್ಥಿ ಅರುಣಾ ಡಿಕೆ 4,500 ಮತಗಳಿಂದ ಗೆದ್ದಿದ್ದಾರೆ. ಸಮಾಜವಾದಿ ಪಕ್ಷದ ಅಜೇಂದ್ರ ಸಿಂಗ್ ಲೋಧಿ ಅವರು ಉತ್ತರ ಪ್ರದೇಶದ ಹಮೀರ್‌ಪುರದಿಂದ 2,629 ಮತಗಳಿಂದ ಗೆದ್ದಿದ್ದರೆ, ಸೇಲಂಪುರದಿಂದ ಅದರ ಅಭ್ಯರ್ಥಿ ರಾಮಶಂಕರ್ ರಾಜ್‌ಭರ್ 3,573 ಮತಗಳಿಂದ ಜಯಗಳಿಸಿದ್ದಾರೆ.

ಪಶ್ಚಿಮ ಬಂಗಾಳದ ಅರಾಂಬಾಗ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್‌ನ ಮಿತಾಲಿ ಬಾಗ್ 6,399 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಕಾಂಗ್ರೆಸ್‌ನ ಮಾಣಿಕ್ಕಂ ಟ್ಯಾಗೋರ್ ತಮಿಳುನಾಡಿನ ವಿರುದುನಗರದಿಂದ 4,633 ಮತಗಳಿಂದ ಮುನ್ನಡೆಯಲ್ಲಿದ್ದರೆ, ಮಹಾರಾಷ್ಟದ ಧುಲೆಯಲ್ಲಿ ಗ್ರ್ಯಾಂಡ್ ಓಲ್ಡ್ ಪಕ್ಷದ ಬಚ್ಚವ್ ಶೋಭಾ ದಿನೇಶ್ 3,831 ಮತಗಳಿಂದ ಮುಂದಿದ್ದಾರೆ.

ಇದನ್ನೂ ಓದಿ:Bangalore Central Election Result 2024 : ಪಿ.ಸಿ ಮೋಹನ್​ ಮರ್ಯಾದೆ ಉಳಿಸಿದ ಮಹದೇವರಪುರ ಕ್ಷೇತ್ರ!

Continue Reading

ರಾಜಕೀಯ

Lok Sabha Election 2024: ಹಿಂದೂಗಳಿಗೆ ಬುದ್ಧಿ ಇದ್ದಿದ್ದರೆ ಬಿಜೆಪಿ ಇಷ್ಟು ಹಿನ್ನಡೆ ಕಾಣುತ್ತಿರಲಿಲ್ಲ! ವಿಡಿಯೊ ವೈರಲ್‌

ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶವು (Lok Sabha Election 2024) ಎನ್ ಡಿಎಗೆ ಗೆಲುವು ತಂದು ಕೊಟ್ಟಿದ್ದರೂ ಅದು ಸರ್ಕಾರ ರಚನೆಗೆ ಟಿಡಿಪಿ ಮತ್ತು ಜೆಡಿ (ಯು) ಅನ್ನು ಅವಲಂಬಿಸಬೇಕಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370ನೇ ವಿಧಿ ರದ್ದು ಅನ್ನು ಲೆಕ್ಕಿಸದೆ ನಾವು ಎನ್ ಡಿಎ ಮೈತ್ರಿಕೂಟಕ್ಕೆ 400+ ಗೆಲುವು ತಂದುಕೊಡಲು ವಿಫಲರಾಗಿದ್ದೇವೆ. ಇದು ಹಿಂದೂಗಳಿಗೆ ನಾಚಿಗೇಡಿನ ವಿಚಾರ ಎಂದು ವ್ಯಕ್ತಿಯೊಬ್ಬರು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

By

Lok Sabha Election 2024
Koo

ನರೇಂದ್ರ ಮೋದಿ (Narendra Modi) ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ (NDA) ದೇಶಾದ್ಯಂತ 293 ಲೋಕಸಭಾ ಸ್ಥಾನಗಳನ್ನು (Lok Sabha Election 2024) ಗೆಲ್ಲುವ ಮೂಲಕ ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರಲು ಸಜ್ಜಾಗಿದೆ. ಆದರೂ ಭಾರತೀಯ ಜನತಾ ಪಕ್ಷವು (BJP) ಬಹುಮತದ ಕೊರತೆಯನ್ನು ಅನುಭವಿಸಿದೆ. 240 ಸ್ಥಾನಗಳು ತನ್ನದಾದರೂ ಸರ್ಕಾರ ರಚಿಸಲು ಬೇಕಾದ 272 ಸ್ಥಾನಗಳನ್ನು ಪಡೆಯಲು ಟಿಡಿಪಿ (TDP) ಮತ್ತು ಜೆಡಿ ಯು (JDU) ನಂತಹ ಮೈತ್ರಿ ಪಾಲುದಾರರೊಂದಿಗೆ ಅದು ಹೆಚ್ಚು ಅವಲಂಬಿತವಾಗಿದೆ.

ಅದ್ಧೂರಿಯಾಗಿ ರಾಮ ಮಂದಿರ ನಿರ್ಮಿಸಿದರೂ ಅಯೋಧ್ಯೆಯಲ್ಲೇ ಬಿಜೆಪಿ ಸೋತಿದೆ. ಸ್ವತಃ ಮೋದಿಯೇ ವಾರಾಣಸಿಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದಾರೆ. ಈ ಕುರಿತು ಆನ್‌ಲೈನ್‌ನಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ವ್ಯಕ್ತಿಯೊಬ್ಬರು ಚುನಾವಣಾ ಫಲಿತಾಂಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಅವರು ಹೇಳಿರುವುದು ಹೀಗೆ: ಈ ಚುನಾವಣೆಯ ದುರಂತ ನೋಡಿ. ಬಿಜೆಪಿ ಕೇವಲ 240 ಸ್ಥಾನಗಳನ್ನು ಪಡೆದುಕೊಂಡಿದೆ. ಇದು ಎಲ್ಲಾ ಹಿಂದೂಗಳಿಗೆ ಅವಮಾನಕರ ಸುದ್ದಿಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿದ್ದ ಆರ್ಟಿಕಲ್ 370ನೇ ವಿಧಿಯನ್ನು ರದ್ದುಗೊಳಿಸಿದರೂ, ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಲಾಗಿದ್ದರೂ ಬಿಜೆಪಿಗೆ ನಾವು 400+ ಗಡಿ ದಾಟಲು ಸಹಕರಿಸಲಿಲ್ಲ. ಈ ಚುನಾವಣಾ ಫಲಿತಾಂಶ ಹಿಂದೂಗಳಿಗೆ ಕಪಾಳಮೋಕ್ಷ ಮಾಡಿದಂತಿದೆ ಎಂದು ಹೇಳಿದ್ದಾರೆ.

ಇಂಡಿಯಾ ಬ್ಲಾಕ್‌ನ ಕಾಂಗ್ರೆಸ್, ಆಪ್, ಸಮಾಜವಾದಿ ಪಕ್ಷ (ಎಸ್‌ಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಒಳಗೊಂಡ ಒಕ್ಕೂಟವು ಒಟ್ಟಾಗಿ 232 ಸ್ಥಾನಗಳನ್ನು ಗೆದ್ದಿವೆ. ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದುಕೊಂಡಿತು. ಸಮಾಜವಾದಿ ಪಕ್ಷ ಗಮನಾರ್ಹ ಪ್ರದರ್ಶನವನ್ನು ನೀಡಿದೆ. 2019ರಲ್ಲಿ 5 ಸ್ಥಾನಗಳಿಂದ ಉತ್ತರ ಪ್ರದೇಶದಲ್ಲಿ 37 ಸ್ಥಾನಗಳಿಗೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 29 ಸ್ಥಾನಗಳನ್ನು ಗೆದ್ದಿದ್ದರೆ, ಡಿಎಂಕೆ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್ ಸಿಪಿ 7 ಸ್ಥಾನಗಳನ್ನು ಗೆದ್ದುಕೊಂಡಿತು, ಶಿವಸೇನೆ ಉದ್ಧವ್ ಠಾಕ್ರೆ ಬಣ 9 ಸ್ಥಾನಗಳನ್ನು ಪಡೆದುಕೊಂಡಿತು, ಬಿಹಾರದ 4 ಕ್ಷೇತ್ರಗಳಲ್ಲಿ ಆರ್ ಜೆಡಿ ಮುನ್ನಡೆ ಸಾಧಿಸಿತು ಮತ್ತು ಆಪ್ ಮತ್ತು ಜೆಎಂಎಂ ಎರಡೂ ತಲಾ 3 ಸ್ಥಾನಗಳನ್ನು ಗೆದ್ದವು.

ಬಿಜೆಪಿಯ ಒಟ್ಟಾರೆ ವಿಜಯದ ಹೊರತಾಗಿಯೂ ಪಕ್ಷದ ಕಾರ್ಯಕ್ಷಮತೆಯು 2019ರ ಅದರ 303 ಸ್ಥಾನಗಳಿಂದ ಗಮನಾರ್ಹ ಕುಸಿತವನ್ನು ಕಂಡಿದೆ. ಕಳೆದ ಬಾರಿಗಿಂತ 63 ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ ಸ್ವಂತವಾಗಿ 370 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿತ್ತು. ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ವಿಶ್ವಾಸವಿತ್ತು.


ಎಕ್ಸಿಟ್ ಪೋಲ್ ಮುನ್ನೋಟಗಳಿಗೆ ವ್ಯತಿರಿಕ್ತವಾಗಿ, ದಕ್ಷಿಣದಲ್ಲಿ ಗಮನಾರ್ಹ ಲಾಭ ಗಳಿಸುವ ಭರವಸೆಯ ಹೊರತಾಗಿಯೂ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ.
ಚುನಾವಣಾ ಫಲಿತಾಂಶಗಳು ಭಾರತದಲ್ಲಿ ಬದಲಾಗುತ್ತಿರುವ ರಾಜಕೀಯ ಸನ್ನಿವೇಶವನ್ನು ಎತ್ತಿ ತೋರಿಸಿವೆ.

Continue Reading

ಕರ್ನಾಟಕ

HD Kumaraswamy: ಮೋದಿ ಬಯಸಿದ್ರೆ ಮಂತ್ರಿಯಾಗಲು ರೆಡಿ; ಮನದಾಸೆ ತೆರೆದಿಟ್ಟ ಕುಮಾರಸ್ವಾಮಿ!

HD Kumaraswamy: ಎನ್‌ಡಿಎ ಸಭೆಯ ಬಳಿಕ ಬೆಂಗಳೂರಿಗೆ ತೆರಳುವ ಮೊದಲು ಎಚ್‌.ಡಿ.ಕುಮಾರಸ್ವಾಮಿ ಅವರು ಮಾತನಾಡಿದರು. “ಎನ್‌ಡಿಎ ಮಿತ್ರಪಕ್ಷಗಳ ಸಭೆ ನಡೆಯಿತು. ನರೇಂದ್ರ ಮೋದಿ ಅವರ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ಹಾಗೊಂದು ವೇಳೆ, ನರೇಂದ್ರ ಮೋದಿ ಅವರು ಬಯಸಿದರೆ ನಾನು ಸಚಿವನಾಗಿ ಕಾರ್ಯನಿರ್ವಹಿಸಲು ಸಿದ್ಧನಿದ್ದೇನೆ” ಎಂಬುದಾಗಿ ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

VISTARANEWS.COM


on

HD Kumaraswamy
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ 292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಳಿಕ ನವದೆಹಲಿಯಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಮಿತ್ರಪಕ್ಷಗಳ (NDA Meeting) ಸಭೆ ನಡೆದಿದೆ. ಸಭೆಯಲ್ಲಿ ಭಾಗವಹಿಸಿದ ಎಲ್ಲ ಪಕ್ಷಗಳ ನಾಯಕರು ನರೇಂದ್ರ ಮೋದಿ (Narendra Modi) ಅವರನ್ನು ಪ್ರಧಾನಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಒಂದು ಸಾಲಿನ ನಿರ್ಣಯಕ್ಕೂ ಅಂಗೀಕಾರ ಹಾಕಿದ್ದಾರೆ. ಇದರೊಂದಿಗೆ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತವಾಗಿದೆ. ಇದರ ಬೆನ್ನಲ್ಲೇ, “ನಾನೂ ಮಂತ್ರಿಯಾಗಲು ರೆಡಿ” ಎಂಬುದಾಗಿ ಎನ್‌ಡಿಎ ಸಭೆಯ ಬಳಿಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಮನದಾಸೆಯನ್ನು ಬಿಚ್ಚಿಟ್ಟಿದ್ದಾರೆ.

ಎನ್‌ಡಿಎ ಸಭೆಯ ಬಳಿಕ ಬೆಂಗಳೂರಿಗೆ ತೆರಳುವ ಮೊದಲು ಎಚ್‌.ಡಿ.ಕುಮಾರಸ್ವಾಮಿ ಅವರು ಮಾತನಾಡಿದರು. “ಎನ್‌ಡಿಎ ಮಿತ್ರಪಕ್ಷಗಳ ಸಭೆ ನಡೆಯಿತು. ನರೇಂದ್ರ ಮೋದಿ ಅವರ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ಹಾಗೊಂದು ವೇಳೆ, ನರೇಂದ್ರ ಮೋದಿ ಅವರು ಬಯಸಿದರೆ ನಾನು ಸಚಿವನಾಗಿ ಕಾರ್ಯನಿರ್ವಹಿಸಲು ಸಿದ್ಧನಿದ್ದೇನೆ” ಎಂಬುದಾಗಿ ಅವರು ಹೇಳಿದರು. ಕರ್ನಾಟಕದಲ್ಲಿ ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಮಾಡಿಕೊಂಡಿರುವುದರಿಂದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಕೂಡ ಸಹಕಾರಿಯಾಗಿದೆ. ಹಾಗಾಗಿ, ಕುಮಾರಸ್ವಾಮಿ ಅವರಿಗೆ ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ಮೋದಿಗೆ ಎಲ್ಲರ ಬೆಂಬಲ

ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಎಲ್ಲ ಪಕ್ಷಗಳ ನಾಯಕರು ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿದರು. ಮೈತ್ರಿಕೂಟದ ಸರ್ಕಾರ ರಚನೆಗೆ ಕುರಿತು ತೆಗೆದುಕೊಂಡ ಒಂದು ಸಾಲಿನ ನಿರ್ಣಯಕ್ಕೆ ಎಲ್ಲರೂ ಸಹಿ ಹಾಕಿದರು. ಖಾತೆ ಹಂಚಿಕೆ, ಯಾವ ಖಾತೆ ಯಾರಿಗೆ ನೀಡಬೇಕು ಎಂಬುದರ ಕುರಿತು ಆಮೇಲೆ ನೋಡಿಕೊಳ್ಳೋಣ. ಮೊದಲು ಸರ್ಕಾರ ರಚನೆಯಾಗಲಿ ಎಂಬುದಾಗಿ ಎಲ್ಲ ನಾಯಕರು ಮೋದಿ ಅವರಿಗೆ ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ತೆಗೆದುಕೊಂಡ ನಿರ್ಣಯ

‌ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯಿತು. ತೆಲುಗುದೇಶಂ ಪಕ್ಷದ (TDP), ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Narendra Modi: ಜೂನ್‌ 8 ಅಲ್ಲ, ಜೂನ್‌ 7ರಂದು ಸಂಜೆ 5ಕ್ಕೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ!

Continue Reading

ದೇಶ

Narendra Modi: ಜೂನ್‌ 7ರಂದು ಸಂಜೆ 5ಕ್ಕೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ?

Narendra Modi: ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಜೆಡಿಯು, ಟಿಡಿಪಿ, ಶಿವಸೇನೆ ಹಾಗೂ ಎಲ್‌ಜೆಪಿ ಪಕ್ಷಗಳ ಪಾತ್ರ ನಿರ್ಣಾಯಕವಾಗಿರುವ ಕಾರಣ ಆಯಾ ಪಕ್ಷಗಳ ನಾಯಕರು ಮಹತ್ವದ ಖಾತೆ, ಹುದ್ದೆ ಸೇರಿ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಕೂಡ ಕೇಂದ್ರದಲ್ಲಿ ಒಂದು ಖಾತೆಗೆ ಬೇಡಿಕೆ ಇಟ್ಟಿದ್ದು, ಅವರು ಕೃಷಿ ಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) 292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಎನ್‌ಡಿಎ (NDA) ಮೈತ್ರಿಕೂಟವು ಸರ್ಕಾರ ರಚಿಸಲು ಸಜ್ಜಾಗಿದೆ. ಎನ್‌ಡಿಎ ಮಿತ್ರಪಕ್ಷಗಳ ಜತೆ ನರೇಂದ್ರ ಮೋದಿ (Narendra Modi) ಅವರು ಸಭೆ ನಡೆಸಿದ್ದು, ನರೇಂದ್ರ ಮೋದಿ ಅವರಿಗೆ ನಿತೀಶ್‌ ಕುಮಾರ್‌, ಚಂದ್ರಬಾಬು ನಾಯ್ಡು ಸೇರಿ ಹಲವು ನಾಯಕರು ಬೆಂಬಲ ಪತ್ರ ನೀಡಿದ್ದಾರೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರು ಜೂನ್‌ 7ರಂದು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಎನ್‌ಡಿಎ ಸಭೆಯಲ್ಲಿ ಎಲ್ಲ ಮಿತ್ರಪಕ್ಷಗಳು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಜೂನ್‌ 7ರಂದು ಸಂಜೆ 5 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೋದಿ ಅವರ ಜತೆಗೆ ಸಚಿವರಾಗಿ 21 ಸಂಸದರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಜೂನ್‌ 8ರಂದು ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈಗ ಒಂದು ದಿನ ಮುಂಚಿತವಾಗಿ ಅಂದರೆ ಶುಕ್ರವಾರವೇ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಎನ್‌ಡಿಎ ಸಭೆಯಲ್ಲಿಯೇ ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

‌ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯಿತು. ತೆಲುಗುದೇಶಂ ಪಕ್ಷದ (TDP), ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ನಿತೀಶ್‌ ಕುಮಾರ್‌ ಅವರ ಪಕ್ಷವು 16, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು 12, ಏಕನಾಥ್‌ ಶಿಂಧೆ ಬಣದ ಶಿವಸೇನೆ 7 ಹಾಗೂ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿಯು 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಿಂದಾಗಿ, ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆಗೆ ಇವರ ಪಾತ್ರವು ನಿರ್ಣಾಯಕವಾಗಿದೆ. ಹಾಗಾಗಿ, ಮೋದಿ ಹಾಗೂ ಅಮಿತ್‌ ಶಾ ಅವರು ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಿ, ಸರ್ಕಾರ ರಚಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲ ಪಕ್ಷಗಳು ಬೆಂಬಲ ಪತ್ರಗಳನ್ನು ನೀಡಿದ್ದು, ಸರ್ಕಾರ ರಚಿಸಲು ಹಕ್ಕು ಮಂಡಿಸಲಾಗುತ್ತದೆ.

ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಜೆಡಿಯು, ಟಿಡಿಪಿ, ಶಿವಸೇನೆ ಹಾಗೂ ಎಲ್‌ಜೆಪಿ ಪಕ್ಷಗಳ ಪಾತ್ರ ನಿರ್ಣಾಯಕವಾಗಿರುವ ಕಾರಣ ಆಯಾ ಪಕ್ಷಗಳ ನಾಯಕರು ಮಹತ್ವದ ಖಾತೆ, ಹುದ್ದೆ ಸೇರಿ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಕೂಡ ಕೇಂದ್ರದಲ್ಲಿ ಒಂದು ಖಾತೆಗೆ ಬೇಡಿಕೆ ಇಟ್ಟಿದ್ದು, ಅವರು ಕೃಷಿ ಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: NDA Meeting: ಎನ್‌ಡಿಎಗೆ ಮೋದಿಯೇ ಸಾರಥಿ ಎಂದು ಸಭೆ ತೀರ್ಮಾನ; ಶೀಘ್ರವೇ ಸರ್ಕಾರ ರಚಿಸಲು ಹಕ್ಕುಮಂಡನೆ

Continue Reading
Advertisement
India vs Ireland
ಕ್ರೀಡೆ12 mins ago

India vs Ireland: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಭಾರತ; ರೋಹಿತ್​ ಜತೆ ಕೊಹ್ಲಿ ಇನಿಂಗ್ಸ್​ ಆರಂಭ

Water Supply Cut
ಕರ್ನಾಟಕ17 mins ago

Water Supply Cut: ಬೆಂಗಳೂರಿನಲ್ಲಿ ಇನ್ನೆರಡು ದಿನ ಕಾವೇರಿ ನೀರು ಪೂರೈಕೆಯಿಲ್ಲ!

Lowest Margin of Wins
ದೇಶ27 mins ago

Lowest Margin of Wins: ಕೇವಲ 48 ಮತ ಅಂತರದ ಗೆಲುವು! ಕಡಿಮೆ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ

Rahul Dravid
ಕ್ರೀಡೆ45 mins ago

Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

Drowned in Water young man drowned in tungabhadra river and died
ಕರ್ನಾಟಕ51 mins ago

Drowned in Water: ನದಿಗೆ ಬಿದ್ದವನು ಬದುಕಿದ, ರಕ್ಷಿಸಲು ಹೋದವನು ಸತ್ತ

Operation London Cafe movie will be released very soon
ಕರ್ನಾಟಕ59 mins ago

Kannada New Movie: ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ‘ಆಪರೇಷನ್ ಲಂಡನ್ ಕೆಫೆ’!

Lok Sabha Election 2024
ರಾಜಕೀಯ1 hour ago

Lok Sabha Election 2024: ಹಿಂದೂಗಳಿಗೆ ಬುದ್ಧಿ ಇದ್ದಿದ್ದರೆ ಬಿಜೆಪಿ ಇಷ್ಟು ಹಿನ್ನಡೆ ಕಾಣುತ್ತಿರಲಿಲ್ಲ! ವಿಡಿಯೊ ವೈರಲ್‌

HD Kumaraswamy
ಕರ್ನಾಟಕ1 hour ago

HD Kumaraswamy: ಮೋದಿ ಬಯಸಿದ್ರೆ ಮಂತ್ರಿಯಾಗಲು ರೆಡಿ; ಮನದಾಸೆ ತೆರೆದಿಟ್ಟ ಕುಮಾರಸ್ವಾಮಿ!

Star Street Fashion
ಫ್ಯಾಷನ್1 hour ago

Star Street Fashion: ಬೆಂಗಳೂರಿನ ರಸ್ತೆಯಲ್ಲಿ ಕಾಂತಾರ ಬೆಡಗಿಯ ಹೈ ಸ್ಟ್ರೀಟ್‌ ಫ್ಯಾಷನ್‌!

Narendra Modi
ದೇಶ2 hours ago

Narendra Modi: ಜೂನ್‌ 7ರಂದು ಸಂಜೆ 5ಕ್ಕೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌