Maha politics: ಬಂಡಾಯದ ಬಳಿಕ ಉದ್ಧವ್‌ ಸರಕಾರ ತೆಗೆದುಕೊಂಡ ನಿರ್ಣಯಗಳ ವಿವರ ಕೇಳಿದ ಗವರ್ನರ್‌ - Vistara News

ಅವಿಭಾಗೀಕೃತ

Maha politics: ಬಂಡಾಯದ ಬಳಿಕ ಉದ್ಧವ್‌ ಸರಕಾರ ತೆಗೆದುಕೊಂಡ ನಿರ್ಣಯಗಳ ವಿವರ ಕೇಳಿದ ಗವರ್ನರ್‌

Maha politics: ಮಹಾರಾಷ್ಟ್ರದಲ್ಲಿ ಬಂಡಾಯ ಚಟುವಟಿಕೆಗಳು ತೀವ್ರ ಸ್ವರೂಪದಲ್ಲಿ ಆಡಳಿತ ಯಂತ್ರ ಮಾತ್ರ ಭಾರಿ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ! ಇದರ ಹಿನ್ನೆಲೆ ಏನು ಎನ್ನುವುದ ಬಗ್ಗೆ ಈಗ ರಾಜ್ಯಪಾಲರ ಕಣ್ಣು ಬಿದ್ದಿದೆ. ಅವರೀಗ ಸರಕಾರದಿಂದ ನಿರ್ಣಯಗಳ ವಿವರ ವರದಿ ಕೇಳಿದ್ದಾರೆ.

VISTARANEWS.COM


on

Bhagat singh koshyari
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ಸರಕಾರವು ಜೂನ್‌ ೨೨ರಿಂದ ೨೪ರ ನಡುವೆ ತೆಗೆದುಕೊಂಡ ಪ್ರಮುಖ ನಿರ್ಣಯಗಳ ವಿವರ ನೀಡುವಂತೆ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಆದೇಶ ನೀಡಿದ್ದಾರೆ.

ಜೂನ್‌ ೨೦ರಂದು ರಾತ್ರಿ ಏಕನಾಥ್‌ ಶಿಂಧೆ ಅವರ ನೇತೃತ್ವದಲ್ಲಿ ಬಂಡಾಯ ಶಾಸಕರು ಸೂರತ್‌ನ ರೆಸಾರ್ಟ್‌ಗೆ ಹೊರಟು ಹೋದ ಮೇಲೆ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರಕಾರದ ಮೇಲೆ ತೂಗುಗತ್ತಿ ತೂಗುತ್ತಿದೆ. ಯಾವುದೇ ಕ್ಷಣ ಉರುಳಬಹುದು ಎಂಬ ಆತಂಕದ ನಡುವೆಯೂ ʻಸರಕಾರಿ ಕೆಲಸಗಳುʼ ಅತ್ಯಂತ ಕರಾರುವಕ್ಕಾಗಿ ನಡೆದಿವೆ ಎಂಬ ಆರೋಪ ಕೇಳಿಬಂದಿವೆ. ಅಂದರೆ, ಸರಕಾರಲ್ಲಿರುವ ಕೆಲವು ಸಚಿವರು, ಪ್ರಭಾವಿಗಳು ತಮಗೆ ಬೇಕಾದ ಕೆಲಸಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅತ್ಯಂತ ಪ್ರಮುಖ ಸರಕಾರಿ ನಿರ್ಣಯಗಳನ್ನು ಮಾಡಲಾಗಿದೆ, ಸುತ್ತೋಲೆಗಳು ಬಿಡುಗಡೆಯಾಗಿವೆ ಎಂದು ಹೇಳಲಾಗಿದೆ. ಈ ಆಪಾದನೆ ಹಿನ್ನೆಲೆಯಲ್ಲಿ ರಾಜ್ಯಪಾಲರು ಅಖಾಡ ಪ್ರವೇಶಿಸಿ ಎಲ್ಲಾ ಸರಕಾರಿ ನಿರ್ಣಯ, ಸುತ್ತೋಲೆಗಳ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಸರಕಾರಕ್ಕೆ ಸೂಚಿಸಿದ್ದಾರೆ.

ನಿಜವೆಂದರೆ, ಬಂಡಾಯ ಚಟುವಟಿಕೆ ಶುರುವಾದ ದಿನವೇ ರಾಜ್ಯಪಾಲರು ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ರಾಜಭವನಕ್ಕೆ ಮರಳಿ ಆಡಳಿತಾತ್ಮಕ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಸೋಮವಾರ. ಅವರು ಬರುತ್ತಿದ್ದಂತೆಯೇ ʻಅಲ್ಪಮತʼದ ಸರಕಾರ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂಬ ಬಗ್ಗೆ ದೂರುಗಳೂ ಬಂದಿವೆ. ಹೀಗಾಗಿ ಜೂನ್‌ ೨೨ರಿಂದ ೨೪ರ ನಡುವೆ ತೆಗೆದುಕೊಂಡ ನಿರ್ಣಯಗಳ ಮಾಹಿತಿ ಕೇಳಿದ್ದಾರೆ.

ಮಹಾರಾಷ್ಟ್ರ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರಾಗಿರುವ ಪ್ರವೀಣ್‌ ದರೇಕರ್‌ ಅವರು ರಾಜ್ಯಪಾಲರಿಗೆ ಪತ್ರ ಬರೆದು ಭಾರಿ ಅವಸರದಲ್ಲಿ ಕೆಲವೊಂದು ಸರಕಾರಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು. ಇದರ ಆಧಾರದಲ್ಲಿ ರಾಜ್ಯಪಾಲರ ಪ್ರಿನ್ಸಿಪಾಲ್‌ ಸೆಕ್ರೆಟರಿ ಆಗಿರುವ ಸಂತೋಷ್‌ ಕುಮಾರ್‌ ಅವರು ಮುಖ್ಯ ಕಾರ್ಯದರ್ಶಿ ಮನು ಕುಮಾರ್‌ ಶ್ರೀವಾಸ್ತವ ಅವರಿಗೆ ಪತ್ರ ಬರೆದಿದ್ದಾರೆ.

ʻಕಳೆದ ಮೂರು ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ಕೆಲವೊಂದು ಅವಸರದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಜೂನ್‌ ೨೨, ೨೩ ಮತ್ತು ೨೪ರಂದು ತೆಗೆದುಕೊಳ್ಳಲಾದ ಎಲ್ಲ ಸರಕಾರಿ ನಿರ್ಣಯಗಳು, ಸುತ್ತೋಲೆಗಳ ಪೂರ್ಣ ವಿವರಗಳನ್ನು ಕೊಡಿ. ಈ ನಿರ್ಣಯ ತೆಗೆದುಕೊಳ್ಳಲು ಕಾರಣವಾದ ಉದ್ದೇಶಗಳನ್ನು ಕೂಡಾ ವಿವರಿಸಿ. ಸಂವಿಧಾನದ ೧೬೭ನೇ ವಿಧಿಯಡಿ ಬರುವ ಅಧಿಕಾರವನ್ನು ಬಳಸಿಕೊಂಡು ರಾಜ್ಯಪಾಲರು ಈ ಮಾಹಿತಿಯನ್ನು ಕೇಳುತ್ತಿದ್ದಾರೆ ಎಂದು ರಾಜ್ಯಪಾಲರ ಕಚೇರಿಯಿಂದ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ದರೇಕರ್‌ ಹೇಳಿದ್ದೇನು?
ರಾಜ್ಯದಲ್ಲಿರುವ ಮಹಾ ವಿಕಾಸ ಅಘಾಡಿ ಸರಕಾರ ಕೆಲವೊಂದು ಯೋಜನೆ, ಸ್ಕೀಂಗಳು ಮತ್ತು ಗುತ್ತಿಗೆಗಳಿಗೆ ಸಂಬಂಧಿಸಿ ಅವಸರದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಸರಕಾರದ ಈ ನಡೆ ಸಂಶಯಾಸ್ಪದವಾಗಿದೆ. ಒಂದ ಹಿಂದೆ ಒಂದರಂತೆ ತೆಗೆದುಕೊಳ್ಳುತ್ತಿರುವ ಈ ನಿರ್ಧಾರಗಳ ಬಗ್ಗೆ ಗಮನ ಹರಿಸಿ ತಮ್ತು ಸರಕಾರ ತೆಗೆದುಕೊಂಡಿರುವ ಎಲ್ಲ ತೀರ್ಮಾನಗಳನ್ನು ಹಿಂದಕ್ಕೆ ಪಡೆಯುವಂತೆ ಆದೇಶಿಸಿ ಎಂದು ಮೇಲ್ಮನೆಯ ಪ್ರತಿಪಕ್ಷ ನಾಯಕ ಪ್ರವೀಣ್‌ ದರೇಕರ್‌ ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಸರಕಾರದಿಂದ ಸಮರ್ಥನೆ
ಸರಕಾರದ ಅವಸರದ ನಡುವೆ ಆಗಲೇ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಸಾರ್ವಜನಿಕವಾಗಿ ಇದನ್ನು ಪ್ರಶ್ನಿಸಲಾಗಿತ್ತು. ಆಗೆಲ್ಲ ಮಹಾ ವಿಕಾಸ ಆಘಾಡಿ ಸರಕಾರದ ಮಂತ್ರಿಗಳು ʻಶಿಂಧೆ ಬಣ ಗುವಾಹಟಿಗೆ ಹೋದ ಮಾತ್ರಕ್ಕೆ ಸರಕಾರ ಬಿದ್ದು ಹೋಗಿಲ್ಲ. ಸರಕಾರ ಎಂದಿನಂತೆ ಚಟುವಟಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಮರ್ಥಿಸಿದ್ದರು. ಅಂದರೆ ದೊಡ್ಡ ಪ್ರಮಾಣದ ಗುತ್ತಿಗೆ ಮತ್ತಿತರ ಯೋಜನೆಗಳಿಗೆ ಈ ಅವಧಿಯಲ್ಲಿ ಅನುಮತಿ ಮಂಜೂರು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ| maha politics: ಶಿಂಧೆ ಟೀಮ್‌ಗೆ ಸುಪ್ರೀಂ ರಿಲೀಫ್‌, ವಿಚಾರಣೆ ಜುಲೈ 11ಕ್ಕೆ ಮುಂದೂಡಿಕೆ, ಅಲ್ಲಿವರೆಗೆ 16 ಶಾಸಕರು ಸೇಫ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಗೋಡೆಗಳ ಮೇಲೆ ತೂಗು ಹಾಕುವ ಚಿತ್ರಗಳಿಗೂ ಪ್ರಮುಖ ನಿಯಮಗಳು ಮತ್ತು ಸಲಹೆಗಳನ್ನು ವಾಸ್ತು ಶಾಸ್ತ್ರದಲ್ಲಿ (Vastu Tips) ನೀಡಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಬಹುದು ಮತ್ತು ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಬಹುದು.

VISTARANEWS.COM


on

By

Vastu Tips
Koo

ಮನೆಯಲ್ಲಿ (home) ಪ್ರತಿಯೊಂದು ವಸ್ತುವನ್ನು ಇಡಲೂ ವಾಸ್ತು (Vastu Tips) ನಿಯಮವಿದೆ. ಯಾಕೆಂದರೆ ಮನೆಯೊಳಗಿರುವ ಪ್ರತಿಯೊಂದು ವಸ್ತುವಿನಲ್ಲೂ ಜೀವಕಳೆ ತುಂಬುತ್ತದೆ ಮತ್ತು ಶಕ್ತಿಯ ಕೇಂದ್ರವಾಗಿಸುತ್ತದೆ. ಗೋಡೆಯಲ್ಲಿ (wall) ತೂಗು ಹಾಕುವ ಚಿತ್ರಗಳನ್ನು (Picture) ಇಡುವಾಗಲೂ ವಾಸ್ತು ನಿಯಮವನ್ನು ಪಾಲಿಸಬೇಕು. ಯಾಕೆಂದರೆ ಗೋಡೆಗಳ ಮೇಲೆ ಇಡುವ ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಕೇವಲ ಮನೆಯ ಸೌಂದರ್ಯವನ್ನು ಮಾತ್ರ ಹೆಚ್ಚಿಸುವುದಿಲ್ಲ ಸಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪ್ರವಹಿಸುವಂತೆ ಮಾಡುತ್ತದೆ. ಎಲ್ಲೆಂದರಲ್ಲಿ ಅಳವಡಿಸಿದರೆ ನಕಾರಾತ್ಮಕತೆ ಹೆಚ್ಚುತ್ತದೆ.

ಮನೆಯ ಗೋಡೆಗಳ ಮೇಲೆ ತೂಗು ಹಾಕುವ ಚಿತ್ರ, ಸರಿಯಾದ ದಿಕ್ಕು ಮತ್ತು ನಿರ್ದಿಷ್ ಬಣ್ಣದದ್ದರೆ ಮಾತ್ರ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಉಳಿಯುತ್ತದೆ ಎನ್ನುತ್ತದೆ ವಾಸ್ತು.

ಉತ್ತರ ದಿಕ್ಕು

ಸಂಪತ್ತಿನ ದೇವರು ಕುಬೇರ ಈ ದಿಕ್ಕಿನಲ್ಲಿ ವಾಸಿಸುತ್ತಾನೆ. ಹಚ್ಚ ಹಸಿರಿನ ಮರಗಳು, ಸಸ್ಯವರ್ಗ ಮತ್ತು ನೀರಿನ ಮೂಲಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ.

ಪೂರ್ವ ದಿಕ್ಕು

ಈ ದಿಕ್ಕನ್ನು ಉದಯಿಸುತ್ತಿರುವ ಸೂರ್ಯನ ದಿಕ್ಕು ಎಂದು ಪರಿಗಣಿಸಲಾಗಿದೆ. ಭಗವಾನ್ ಸೂರ್ಯ, ಸಂತರು ಅಥವಾ ಸೂರ್ಯೋದಯದ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಪ್ರಯೋಜನಕಾರಿ. ಈ ಚಿತ್ರಗಳು ಮನೆಯಲ್ಲಿ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತರುತ್ತವೆ.

ದಕ್ಷಿಣ ದಿಕ್ಕು

ಪೂರ್ವಜರು ಮತ್ತು ಧರ್ಮಗ್ರಂಥಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇರಿಸಬಹುದು. ದೆವ್ವ, ಆತ್ಮ ಅಥವಾ ನಕಾರಾತ್ಮಕ ಶಕ್ತಿಯ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಕೆಂಪು, ಚಿನ್ನದ ಅಥವಾ ಕಿತ್ತಳೆ ಬಣ್ಣದ ಚಿತ್ರಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಪಶ್ಚಿಮ ದಿಕ್ಕು

ಈ ದಿಕ್ಕು ನೀರಿನ ಅಂಶದಿಂದ ಪ್ರಭಾವಿತವಾಗಿರುತ್ತದೆ. ಈ ದಿಕ್ಕಿನಲ್ಲಿ ನೀರು, ಸಮುದ್ರ, ನದಿ ಅಥವಾ ಕಾರಂಜಿ ಚಿತ್ರಗಳನ್ನು ಹಾಕುವುದು ಮಾನಸಿಕ ಶಾಂತಿ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.


ಫೋಟೋಗಳು ಹೇಗಿರಬೇಕು?

ದೇವರು, ದೇವತೆಗಳು ಮತ್ತು ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಮನೆಯಲ್ಲಿ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಕುಟುಂಬದಲ್ಲಿ ಶಾಂತಿ ಮತ್ತು ಭಕ್ತಿಯನ್ನು ಉತ್ತೇಜಿಸುತ್ತವೆ.

ಹಚ್ಚ ಹಸಿರಿನ ಮರ, ಹೂವುಗಳು, ಪರ್ವತ, ನದಿಗಳು ಮುಂತಾದ ಸುಂದರವಾದ ನೈಸರ್ಗಿಕ ದೃಶ್ಯಗಳ ಚಿತ್ರಗಳನ್ನು ಹಾಕುವುದು ಮನಸ್ಸಿನಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

ಕುಟುಂಬ ಸದಸ್ಯರ ಗುಂಪು ಫೋಟೋಗಳನ್ನು ಅಥವಾ ಸಂತೋಷದ ಕುಟುಂಬ ಕ್ಷಣಗಳ ಚಿತ್ರಗಳನ್ನು ಹಾಕುವುದು ಕುಟುಂಬದಲ್ಲಿ ಪ್ರೀತಿ ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಏರುತ್ತಿರುವ ಸೂರ್ಯ, ಚಾಲನೆಯಲ್ಲಿರುವ ಕುದುರೆಗಳು, ಹಾರುವ ಪಕ್ಷಿಗಳು ಮುಂತಾದ ಶಕ್ತಿಯುತ ಮತ್ತು ಸ್ಪೂರ್ತಿದಾಯಕ ಚಿತ್ರಗಳನ್ನು ಇಡುವುದರಿಂದ ಮನೆಯವರಲ್ಲಿ ಶಕ್ತಿ ಮತ್ತು ಸ್ಫೂರ್ತಿ ನೀಡುತ್ತದೆ.

ಯಾವ ಎತ್ತರದಲ್ಲಿ ಇಡಬೇಕು?

ಚಿತ್ರಗಳನ್ನು ಸುಲಭವಾಗಿ ಗೋಚರಿಸುವಂತಹ ಎತ್ತರದಲ್ಲಿ ಗೋಡೆಯ ಮೇಲೆ ಇಡಬೇಕು ಮತ್ತು ಅವುಗಳನ್ನು ನೋಡುವಲ್ಲಿ ಯಾರೂ ಅನಾನುಕೂಲವಾಗಬಾರದು. ಚಿತ್ರಗಳನ್ನು ಮುಖ್ಯ ಬಾಗಿಲಿನ ಮುಂದೆ ಅಥವಾ ನೇರವಾಗಿ ಹಾಸಿಗೆಯ ಮುಂದೆ ಇಡುವುದನ್ನು ತಪ್ಪಿಸಬೇಕು. ಧಾರ್ಮಿಕ ಅಥವಾ ಕುಟುಂಬದ ಚಿತ್ರಗಳನ್ನು ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಇಡಬಾರದು.

ಇದನ್ನೂ ಓದಿ: Vastu Tips: ವೈವಾಹಿಕ ಜೀವನ ಸುಖಮಯವಾಗಿರಲು ಈ ವಾಸ್ತು ನಿಯಮ ಅನುಸರಿಸಿ

ಫೋಟೋಗಳ ಬಣ್ಣ ಏನು?

ವರ್ಣಚಿತ್ರಗಳಲ್ಲಿ ಬಳಸುವ ಬಣ್ಣಗಳಿಗೆ ಗಮನ ಕೊಡುವುದು ಸಹ ಮುಖ್ಯವಾಗಿದೆ. ನೀಲಿ, ಹಸಿರು, ಹಳದಿ ಮುಂತಾದ ಬೆಳಕು ಮತ್ತು ಹಿತವಾದ ಬಣ್ಣಗಳು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತವೆ. ಕೆಂಪು, ಕಪ್ಪು ಮತ್ತು ಕಂದು ಬಣ್ಣಗಳಂತಹ ಗಾಢ ಮತ್ತು ಹೆಚ್ಚು ಉತ್ತೇಜಕ ಬಣ್ಣಗಳನ್ನು ಮಿತವಾಗಿ ಬಳಸಬೇಕು.

ಫೋಟೋಗಳನ್ನು ಹೇಗೆ ಇರಿಸಬೇಕು?

ಚಿತ್ರಗಳನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿಡಬೇಕು. ಧೂಳು, ಕೊಳಕು ಮತ್ತು ಹಾನಿಗೊಳಗಾದ ಚಿತ್ರಗಳು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು.

Continue Reading

ವೈರಲ್ ನ್ಯೂಸ್

Viral Video: ಮದುವೆಗೂ ಮೊದಲು ವಧುವನ್ನು ಕಿಡ್ನ್ಯಾಪ್‌ ಮಾಡಲೇಬೇಕು! ಇದು ಈ ಜನಾಂಗದ ಕಡ್ಡಾಯ ನಿಯಮ!

ಮದುವೆಗೂ ಮುನ್ನ ಹಿಂಬಾ ಬುಡಕಟ್ಟಿನ ಸಂಪ್ರದಾಯದಲ್ಲಿ ವಧುವನ್ನು ಅಪಹರಿಸಿ ನೂರು ದಿನಗಳ ಕಾಲ ಕೆಂಪು ಮಣ್ಣಿನ ಲೇಪನ ಮಾಡಲಾಗುತ್ತದೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ವಿವಾಹ ವಿಧಿವಿಧಾನಗಳು (Wedding Rituals) ವಿಶ್ವದ ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆಯಾಗಿರುತ್ತದೆ. ಅದರಲ್ಲೂ ಕೆಲವೊಂದು ಚಿತ್ರವಿಚಿತ್ರ ಆಚರಣೆಗಳೂ ಇವೆ. ಅದರಲ್ಲಿ ನಮಿಬಿಯಾದ (Namibia) ಅರೆ ಅಲೆಮಾರಿ ಬುಡಕಟ್ಟು (tribe) ಜನಾಂಗವಾದ ಹಿಂಬಾದ (himba) ಈ ವಿವಾಹ ಆಚರಣೆಯು ಸೇರಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋಗಳು ವೈರಲ್ (Viral Video) ಆಗಿ ಚರ್ಚೆಗೆ ಕಾರಣವಾಗಿದೆ.

ಹಿಂಬಾವನ್ನು ನಮೀಬಿಯಾದ ಕೊನೆಯ ಅರೆ ಅಲೆಮಾರಿ ಬುಡಕಟ್ಟು ಜನಾಂಗ ಎಂದು ಪರಿಗಣಿಸಲಾಗಿದೆ. ಸುಮಾರು 50,000 ಜನಸಂಖ್ಯೆಯನ್ನು ಹೊಂದಿರುವ ಇವರು ಇಲ್ಲಿನ ಸ್ಥಳೀಯ ಜನರು. ಅವರಿಗೆ ಸ್ವಂತ ಮನೆಗಳಿದ್ದರೂ ಮಳೆ ಅಥವಾ ನೀರಿನ ಕೊರತೆಯಿಂದಾಗಿ ಅಲೆಮಾರಿಗಳಂತೆ ಜೀವನ ನಡೆಸುತ್ತಾರೆ. ಹೀಗಾಗಿ ಇವರನ್ನು ಅರೆ ಅಲೆಮಾರಿ ಎಂದು ಕರೆಯಲಾಗುತ್ತದೆ. ಈ ಬುಡಕಟ್ಟು ಜನ ತಮ್ಮ ವಿಚಿತ್ರ ವಿವಾಹ ಪದ್ಧತಿಗಳಿಂದಾಗಿ ಆಗಾಗ್ಗೆ ಎಲ್ಲರ ಗಮನ ಸೆಳೆಯುತ್ತಾರೆ.

ವಧುವಿನ ಅಪಹರಣ

ಹಿಂಬಾ ಬುಡಕಟ್ಟಿನಲ್ಲಿ ಮದುವೆಗೆ ಮೊದಲು ವಧುವನ್ನು ಅಪಹರಿಸಲಾಗುತ್ತದೆ. ಆಕೆಯನ್ನು 100 ದಿನಗಳ ಕಾಲ ಹೆಚ್ಚಿನ ಭದ್ರತೆಯ ಕೋಣೆಯಲ್ಲಿ ಇರಿಸಲಾಗುತ್ತದೆ. ಆ ಸಮಯದಲ್ಲಿ ಕೆಂಪು ಮಣ್ಣನ್ನು ಅವಳ ಸಂಪೂರ್ಣ ದೇಹಕ್ಕೆ ಲೇಪಿಸಲಾಗುತ್ತದೆ. ಇದೀಗ ಅಂತಹ ವಿಡಿಯೋ ವೈರಲ್ ಆಗಿದೆ. ಹಿಂಬಾ ಬುಡಕಟ್ಟಿನಲ್ಲಿ ಮದುವೆಯ ಸಂಪ್ರದಾಯದಲ್ಲಿ ವಧುವಿನ ಅಪಹರಣ ಮತ್ತು ಅವಳಿಗೆ ಕೆಂಪು ಮಣ್ಣನ್ನು ಹೊದಿಸುವುದನ್ನು ಒಳಗೊಂಡಿರುತ್ತದೆ.

ಹೀಗೆ ಅವಳನ್ನು ಅಪಹರಿಸುವಾಗ ವಧು ಹೊಸ ಬಟ್ಟೆ ಮತ್ತು ದುಬಾರಿ ಆಭರಣಗಳೊಂದಿಗೆ ಅಲಂಕರಿಸಲ್ಪಡುತ್ತಾಳೆ. ಈ ಸಮಯದಲ್ಲಿ ಅವಳು ಧರಿಸುವ ಕೆಲವು ವಿಶೇಷ ಉಡುಪುಗಳು ಒಕೋರಿ ಎಂದು ಕರೆಯಲ್ಪಡುವ ಚರ್ಮದ ಶಿರಸ್ತ್ರಾಣವಾಗಿದೆ. ಇದು ಸಾಮಾನ್ಯವಾಗಿ ವಧುವಿನ ತಾಯಿಯಿಂದ ಸಿಗುವ ಉಡುಗೊರೆಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಹಿಂಬಾ ಬುಡಕಟ್ಟಿನ ಹುಡುಗಿಯೊಬ್ಬಳು ತನ್ನ ದೇಹದಾದ್ಯಂತ ಕೆಂಪು ಮಣ್ಣನ್ನು ಲೇಪಿಸಿಕೊಂಡು ಕುಳಿತಿದ್ದಾಳೆ. ಕಾಲ್ಬೆರಳಿನಿಂದ ಕೂದಲಿನವರೆಗೆ, ಹುಡುಗಿ ಕೆಂಪು ಮಣ್ಣಿನಲ್ಲಿಮುಚ್ಚಲ್ಪಟ್ಟಿರುತ್ತಾಳೆ.
ಘಾನಾದ ಫ್ರಾಫಾ ಬುಡಕಟ್ಟು ಕೂಡ ಈ ಪದ್ಧತಿಯನ್ನು ಅನುಸರಿಸುತ್ತದೆ.

ಈ ಕುರಿತು ಕಾಮೆಂಟ್ ಮಾಡಿರುವ ಒಬ್ಬರು, ಹುಡುಗಿಯನ್ನು 100 ದಿನಗಳ ಕಾಲ ಕೆಂಪು ಮಣ್ಣಿನಲ್ಲಿ ಮುಚ್ಚಲು ಏನಾದರೂ ವೈಜ್ಞಾನಿಕ ಕಾರಣವಿದೆಯೇ ಎಂದು ಪ್ರಶ್ನಿಸಿದ್ದಾರೆ.


ಮದುವೆ ಮತ್ತು ಮಧುಚಂದ್ರದ ಮೊದಲು ಅವಳ ಚರ್ಮವನ್ನು ನಯಗೊಳಿಸುವುದಕ್ಕಾಗಿ ಮತ್ತು ಅವಳ ದೇಹವನ್ನು ಸ್ವಚ್ಛ ಗೊಳಿಸುವುದಕ್ಕಾಗಿ ಈ ರೀತಿ ಮಾಡುತ್ತಾರೆಯೇ ಎಂಬುದನ್ನು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಹೆಚ್ಚಿನ ಸಂಪ್ರದಾಯ, ಪದ್ಧತಿ ಮತ್ತು ಆಚರಣೆಗಳು ವೈಜ್ಞಾನಿಕ ಮಹತ್ವವನ್ನು ಹೊಂದಿವೆ ಮತ್ತು ಜನರು ಅದನ್ನು ಅನುಸರಿಸುವಂತೆ ಮಾಡಲು ಧಾರ್ಮಿಕ ನಂಬಿಕೆಗಳಿಗೆ ಸೇರಿಸಲಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ

Continue Reading

ರಾಜಕೀಯ

Gali Janardana Reddy : ಗಣಿ ಧಣಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಮಡಿಲಿಗೆ, ಕಲ್ಯಾಣದಲ್ಲಿ ಲಾಭ ನಿರೀಕ್ಷೆ

Gali Janardhana Reddy : ಗಾಲಿ ಜನಾರ್ದನ ರೆಡ್ಡಿ ಅವರು ಮರಳಿ ಬಿಜೆಪಿ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಲಾಭವಾಗುವ ನಿರೀಕ್ಷೆ ಇದೆ.

VISTARANEWS.COM


on

Gali Janarhana Reddy
Koo

ಬೆಂಗಳೂರು: ಬಿಜೆಪಿ ಮೇಲೆ ಮುನಿಸಿಕೊಂಡು ಕಳೆದ ವಿಧಾನಸಭಾ ಚುನಾವಣೆಯ (Assembly Election 2023) ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya pragati Party) ಸ್ಥಾಪನೆ ಮಾ‌ಡಿ ಸಡ್ಡು ಹೊಡೆದಿದ್ದ ಗಾಲಿ ಜನಾರ್ದನ ರೆಡ್ಡಿ (Gali Janardana Reddy) ಅವರು ಕಮಲ ಪಾಳಯಕ್ಕೆ ಮರಳಿದ್ದಾರೆ (Janardhana Reddy rejoins Congress). ಫೆಬ್ರವರಿ 27ರಂದು ನಡೆದು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದ ಅವರು ಲೋಕಸಭಾ ಚುನಾವಣೆಗೆ (Lok Sabha Election 2024) ಮುನ್ನ ಬಿಜೆಪಿಗೆ ಬಲ ತುಂಬಿದ್ದಾರೆ. ಅವರ ಮರು ಸೇರ್ಪಡೆಯಿಂದ ಬಿಜೆಪಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಟಿ. ಜಾನ್‌ ಅವರ ಪುತ್ರ ಥಾಮಸ್‌ ಜಾನ್‌ ಅವರು ಪಕ್ಷ ಸೇರಿದರು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಹಿರಿಯ ನಾಯಕ ಸಿ.ಟಿ. ರವಿ, ಸಂಸದ ಪಿ.ಸಿ. ಮೋಹನ್‌, ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಸಂಸದ ದೇವೇಂದ್ರಪ್ಪ ಅವರು ಭಾಗಿಯಾಗಿದ್ದಾರೆ. ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಅಪಾರ ಬೆಂಬಲಿಗರು ಪಕ್ಷ ಸೇರಿದರು. ಬಿ.ವೈ ವಿಜಯೇಂದ್ರ ಹಾಗೂ ಯಡಿಯೂರಪ್ಪ. ಅವರು ನಾಯಕರು ಮತ್ತು ಹಿಂಬಾಲಕರನ್ನು ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಪಕ್ಷಕ್ಕೆ ಸ್ವಾಗತ ಮಾಡಿದರು.

ಮೋದಿ ಅವರ ನಾಯಕತ್ವ ಮೆಚ್ಚಿ ಬಂದಿದ್ದಾರೆ ಎಂದ ವಿಜಯೇಂದ್ರ

ಗಾಲಿ ಜನಾರ್ದನ ರೆಡ್ಡಿ ಅವರು ಮರಳಿ ಪಕ್ಷಕ್ಕೆ ಬಂದಿರುವುದು ಬಹಳ ಸಂತೋಷದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಗಾಲಿ ಜನಾರ್ದನ ರೆಡ್ಡಿ ಅವರು, ತಾವೇ ಕಟ್ಟಿದ ಪಕ್ಷವನ್ನು ವಿಸರ್ಜನೆ ಮಾಡಿ ಬಿಜೆಪಿಯೊಂದಿಗೆ ವಿಲೀನ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಶಕ್ತಿ ಬಂದಂತಾಗಿದೆ. ಮೋದಿ ಅವರ ನಾಯಕತ್ವ ಮೆಚ್ಚಿ ಮರು ಸೇರ್ಪಡೆ ಆಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

Gali Janarhana Reddy1
ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದೊಂದಿಗೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ʻʻಲೋಕಸಭೆಯಲ್ಲಿ 28 ಕ್ಷೇತ್ರ ಗೆಲ್ಲುವ ಗುರಿ ಇದೆ. ದಿನೇದಿನೆ ಮೋದಿ ಅವರ ಪರ ವಾತಾವರಣ ಹೆಚ್ಚುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸಲಿದೆ‌ʼʼ ಎಂದು ಹೇಳಿದ್ದಾರೆ.

ಬೆಳಗ್ಗೆ ಹೋಗಿ ಮಧ್ಯಾಹ್ನ ಮರಳಿ ಬಂದ ಹಾಗೆ ಅನಿಸ್ತಿದೆ ಎಂದ Gali Janardana Reddy

ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡುತ್ತಿದ್ದೇನೆ. ನನ್ನ ಕಷ್ಟದ ಕಾಲದಲ್ಲಿ ನನ್ನ ಬೆನ್ನಿಗೆ ನಿಂತ ಎಲ್ಲಾ ಕಾರ್ಯಕರ್ತರಿಗೂ ವಂದನೆ ಸಲ್ಲಿಸ್ತೇನೆ. ನಾವೆಲ್ಲರೂ ಸೇರಿ ಬಿಜೆಪಿಗೆ ಸೇರ್ಪಡೆ ಆಗಿದ್ದೇವೆ ಎಂದು ಹೇಳಿದರು.

ʻʻದೇಶದ ಸರ್ವತೋಮುಖ ಅಭಿವೃದ್ಧಿಗೆ, ವಿಶ್ವಗುರುವಿನಂತೆ ಕೆಲಸ‌ ಮಾಡಿರುವ ಮೋದಿ ಅವರಿಗೆ ವಂದನೆಗಳು. ಅಮಿತ್ ಶಾ ಅವರು ನನ್ನನ್ನು ದೆಹಲಿಗೆ ಆಹ್ವಾನಿಸಿ, ಬಾಹ್ಯ ಬೆಂಬಲ ಬೇಡ. ಬಿಜೆಪಿಗೆ ಬಂದು ಕೆಲಸ ಮಾಡಿ ಅಂತ ಆಹ್ವಾನ ನೀಡಿದರು. ಅವರ ಆಹ್ವಾನ ಸ್ವೀಕರಿಸಿ ಬಂದಿದ್ದೇನೆ. ಇದು ನನ್ನ ಪೂರ್ವ ಜನ್ಮದ ಪುಣ್ಯʼʼ ಎಂದು ಜನಾರ್ದನ ರೆಡ್ಡಿ ಹೇಳಿದರು.

ಬಿ.ಎಸ್‌. ಯಡಿಯೂರಪ್ಪ ಅವರು ನನಗೆ ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಿಜೆಪಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಯಡಿಯೂರಪ್ಪ ಅವರು ಸಿಎಂ‌ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಈಗ ಅವರ ಸುಪುತ್ರ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಆಗಿದ್ದಾರೆ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರೋದು ನನ್ನ ಪುಣ್ಯ. ವಿಜಯೇಂದ್ರ ನೇತೃತ್ವದಲ್ಲಿ ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ಕೆಲಸ ಮಾಡುತ್ತೇವೆ ಎಂದು ಹೇಳಿದರು.

ʻʻಎಲ್ಲಾ ಏಳುಬೀಳುಗಳನ್ನು ನೋಡಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ನನ್ನ ಮನೆಗೆ ವಾಪಸ್ ಬಂದಿರೋ ಖುಷಿ ಇದೆ. ಕೆಲವು ಕಾರಣದಿಂದ ಹೊರಗೆ ಹೋಗಿದ್ದೆ. 13 ವರ್ಷಗಳ ಬಳಿಕ ವಾಪಸ್ ಬಂದಿದ್ದೇನೆ ಅನಿಸುತ್ತಿಲ್ಲ. ಬೆಳಗ್ಗೆ ಹೋಗಿ, ಮಧ್ಯಾಹ್ನ ಬಂದಿದ್ದೇನೆ ಅನಿಸುತ್ತಿದೆʼʼ ಎಂದು ಜನಾರ್ದನ ರೆಡ್ಡಿ ಹೇಳಿದರು.

ಇದನ್ನೂ ಓದಿ : Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್‌ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?

Gali Janardana Reddy ಅಜ್ಞಾತವಾಸ ಮುಗಿಸಿ ಮರಳಿದ ಶ್ರೀರಾಮ ಎಂದ ಶ್ರೀರಾಮುಲು

ಜನಾರ್ದನ ರೆಡ್ಡಿ ಅವರ ಪಕ್ಷ ಮರು ಸೇರ್ಪಡೆಯಿಂದ ಅವರ ಗೆಳೆಯ ಹಾಗೂ ಬಳ್ಳಾರಿ‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು, ಜನಾರ್ದನ ರೆಡ್ಡಿ ಅವರು ರಾಜಕೀಯ ಅಜ್ಞಾತವಾಸ ಮುಗಿಸಿ ಬಿಜೆಪಿಗೆ ವಾಪಸು ಬರ್ತಿದ್ದಾರೆ. ಅವರು ಬಿಜೆಪಿಗೆ ಬರುವುದರಿಂದ ರಾಜಕೀಯವಾಗಿ ನಮಗೆ ಲಾಭ ಆಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ನಮಗೆ ಲಾಭ ಆಗಲಿದೆ. ನಮಗೆ ಈ ಬೆಳವಣಿಗೆ ಹೆಚ್ಚು ಶಕ್ತಿ ತಂದಿದೆ. ರಾಷ್ಟ್ರೀಯ ನಾಯಕರು ರೆಡ್ಡಿ ಬಿಜೆಪಿಗೆ ಬರಲು ಕಾರಣರಾಗಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪಿಎಂ ಮಾಡಲು ಈ ನಿರ್ಧಾರ ಎಂದು ಹೇಳಿದರು ಶ್ರೀರಾಮುಲು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಬೆಳವಣಿಗೆ ಆಗಿದ್ದರೆ ಲಾಭ ಆಗುತ್ತಿತ್ತು. ಎಲ್ಲವೂ ರಾಷ್ಟ್ರೀಯ ನಾಯಕರ ಇಚ್ಛೆಯಂತೆ ಆಗುತ್ತಿದೆ ಎಂದು ಶ್ರೀರಾಮುಲು ಹೇಳಿದರು.

Gali Janardana Reddy ಸೇರ್ಪಡೆಯಿಂದ ಬಿಜೆಪಿಗೆ ಏನು ಲಾಭ?

ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೆ ಬಿಜೆಪಿ ಸೇರುವುದರಿಂದ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಕಮಲ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ.

ಅದರಲ್ಲೂ ಮುಖ್ಯವಾಗಿ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರಿಗೆ ಸಾಕಷ್ಟು ಲಾಭವಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಂತೆ ಬಿಜೆಪಿ ಮತಗಳು ವಿಭಜನೆ ಆಗೋದು ತಪ್ಪಲಿದೆ.

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಪ್ರಭಾವಿ ನಾಯಕರ ಕೊರತೆಯನ್ನು ರೆಡ್ಡಿ ಸೇರ್ಪಡೆ ನೀಗಲಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ಅನಿವಾರ್ಯವಾದರೆ ರೆಡ್ಡಿ ತಂತ್ರಗಳು ಬಿಜೆಪಿಗೆ ಅನುಕೂಲವಾಗಲಿದೆ. ಯಾಕೆಂದರೆ, ಇಂಥ ತಂತ್ರಗಳನ್ನು ರೂಪಿಸುವಲ್ಲಿ ರೆಡ್ಡಿ ಅವರು ನಿಪುಣರಾಗಿದ್ದಾರೆ.

Continue Reading

ಬೆಂಗಳೂರು

Arun Yogiraj : ರಾಮ್‌ ಲಲ್ಲಾನ ಎಂದೂ ನೋಡದ ಚಿತ್ರ ತೋರಿಸಿದ ಶಿಲ್ಪಿ ಅರುಣ್‌ ಯೋಗಿರಾಜ್‌; ಎಷ್ಟು ಮುದ್ದಾಗಿದೆ ನೋಡಿ…

Arun Yogiraj : ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಒಂದು ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಎಂದೂ ಕಾಣದ ಮುಗ್ಧ ಮುಖದ ರಾಮ ಕಾಣಿಸುತ್ತಾನೆ.

VISTARANEWS.COM


on

Arun Yogiraj at work time
Koo

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ (Sri Rama Mandir) ವಿರಾಜಮಾನನಾಗಿರುವ ಶ್ರೀ ರಾಮ ಲಲ್ಲಾನ (Ram lalla) ಸುಂದರ ಮೂರ್ತಿಯನ್ನು ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ. ಕಳೆದ ಜನವರಿ 22ರಂದು ದೇವರ ಪ್ರಾಣಪ್ರತಿಷ್ಠೆ (Rama Pranaprathishte) ನಡೆದಿದ್ದು, ಅಂದು ಮೊದಲ ಬಾರಿಗೆ ಅಲಂಕೃತ ಶ್ರೀ ರಾಮನನ್ನು ನೋಡಿದ ಜನರು ಭಗವಂತನೇ ಧರೆಗಿಳಿದಂತೆ ಕಾಣುತ್ತಿದೆ ಎಂದು ಖುಷಿಪಟ್ಟಿದ್ದರು. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರ ಭಕ್ತಿ ಮತ್ತು ಕೈಚಳಕದಿಂದ ಮೂಡಿ ಸುಂದರ ಶಿಲ್ಪ ಕಲಾಕೃತಿಯನ್ನು ಕಳೆದ 33 ದಿನಗಳಲ್ಲಿ ಒಟ್ಟು ಒಂದು ಕೋಟಿ ಜನ ನೋಡಿ ಭಾವುಕರಾಗಿದ್ದಾರೆ. ಇದರ ನಡುವೆಯೇ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಇದುವರೆಗೂ ಯಾರೂ ನೋಡಿರದ ಅಪರೂಪದ ಚಿತ್ರವೊಂದನ್ನು ‌ ತೆರೆದಿಟ್ಟಿದ್ದಾರೆ.

ಇದು ಕೆಲಸ ಪ್ರಗತಿಯಲ್ಲಿದ್ದ ಕಾಲದ ಚಿತ್ರ. ನಮಗೆ ಮೂರ್ತಿಯ ಆಯ ಅಳತೆಗಳ ಬಗ್ಗೆ ಧೈರ್ಯದ ಭಾವನೆ ಇತ್ತು. ಆದರೆ, ರಾಮ್‌ ಲಲ್ಲಾನನ್ನು ನಮ್ಮ ಸೂಕ್ಷ್ಮ ಸ್ಪರ್ಶದಿಂದ ಮೂಡಿಸಿದಾಗ ಅಂತಿಮ ಫಲಿತಾಂಶ ಅದ್ಭುತವಾಗಿ ಮೂಡಿಬಂತು ಎಂದಿದ್ದಾರೆ ಅರುಣ್‌ ಯೋಗಿರಾಜ್‌.

ಟ್ವಿಟರ್‌ನಲ್ಲಿ ತಾವು‌ ಮೂರ್ತಿ ಕೆತ್ತನೆ ಮಾಡುತ್ತಿರುವ ಚಿತ್ರವನ್ನು ಪ್ರಕಟಿಸಿರುವ ಅವರು, ರಾಮನ ಮುದ್ದಾದ ಮುಖವನ್ನು ಕೈಯಲ್ಲಿ ಹಿಡಿದಿದ್ದಾರೆ.

ಈ ಚಿತ್ರವನ್ನು ಟ್ವಿಟರ್‌ನಲ್ಲಿ ಐದು ಲಕ್ಷದ 40 ಸಾವಿರ ಜನರು ವೀಕ್ಷಿಸಿದ್ದಾರೆ. ಅದ್ಭುತ ಕಲಾಕೃತಿ ಎಂದು ಹಾಡಿ ಹೊಗಳಿಸಿದ್ದಾರೆ. ಇದು ಮೈಸೂರು ಜಿಲ್ಲೆಯಲ್ಲಿ ಸಿಕ್ಕಿದ ಕೃಷ್ಣ ಶಿಲೆಯಲ್ಲಿ ಕೆತ್ತಿದ ಶಿಲ್ಪವಾಗಿದ್ದು, ಭಾರಿ ಜನಾಕರ್ಷಣೆಯನ್ನು ಪಡೆದಿದೆ.

ಇದನ್ನೂ ಓದಿ : Pandit Pacha Saab | ಶ್ರೀರಾಮ ಕೋಟಿ ಬರೆದಿದ್ದ ಮುಸ್ಲಿಂ ಪಂಡಿತ ವಿಧಿವಶ

ರಾಮ ಲಲ್ಲಾ, ರಾಮ ಜನ್ಮಭೂಮಿ ಚಿತ್ರವಿರುವ ನಾಣ್ಯ ಬಿಡುಗಡೆ

ಈ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಮ ಲಲ್ಲಾ ಮತ್ತು ರಾಮ ಮಂದಿರದ ಚಿತ್ರವಿರುವ ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

Continue Reading
Advertisement
Renuka swamy Murder case
ಬೆಂಗಳೂರು8 mins ago

Renuka Swamy Murder : ನಟ ದರ್ಶನ್ ಹಲ್ಲೆ ಮಾಡುವುದನ್ನು ವಿಡಿಯೊ ಮಾಡಿದ್ದ ಮೂವರು ಅರೆಸ್ಟ್‌; ಸಿಕ್ಕೇ ಬಿಡ್ತಾ ದೊಡ್ಡ ಸಾಕ್ಷಿ!

International Yoga Day 2024
ಫ್ಯಾಷನ್18 mins ago

International Yoga Day 2024: ಯೋಗಾಭ್ಯಾಸಕ್ಕೆ ಪುರುಷರ ಉಡುಗೆಗಳು ಹೀಗಿರಬೇಕು

Amithab Bacchan
Latest32 mins ago

Amithab Bacchan :14ನೇ ವರ್ಷಕ್ಕೆ ಕಾಲಿಟ್ಟ ʼರಾವಣ್ʼ ಚಿತ್ರ; ಮಗನನ್ನು ಹೊಗಳಿ ಸೊಸೆಯನ್ನು ನಿರ್ಲಕ್ಷಿಸಿದ ಅಮಿತಾಭ್!

BCCI
ಕ್ರೀಡೆ33 mins ago

BCCI: ಟೀಮ್​ ಇಂಡಿಯಾದ ತವರಿನ ಕ್ರಿಕೆಟ್​ ಸರಣಿಯ ವೇಳಾಪಟ್ಟಿ ಪ್ರಕಟ

Amitabh Bachchan touched Aswini Dutt feet
ಬಾಲಿವುಡ್36 mins ago

Amitabh Bachchan: ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದ ಅಮಿತಾಭ್‌; ʻಬಿಗ್‌ ಬಿʼ ಕೊಂಡಾಡಿದ ರಾಮ್ ಗೋಪಾಲ್ ವರ್ಮಾ!

Citroen C3 Aircross
ಪ್ರಮುಖ ಸುದ್ದಿ41 mins ago

Citroen C3 Aircross : ಧೋನಿ ಹೆಸರಿನಲ್ಲಿ ಬಿಡುಗಡೆಯಾಗಿದೆ ಈ ಕಾರು, ಕೇವಲ 100 ಕಾರಷ್ಟೇ ಉತ್ಪಾದನೆ

Mysuru News
ಮೈಸೂರು43 mins ago

Mysuru News : ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ

Yuva spoorthi samvaada programme on June 22 in Shivamogga
ಕರ್ನಾಟಕ48 mins ago

Shivamogga News: ಶಿವಮೊಗ್ಗದಲ್ಲಿ ಜೂ.22ರಂದು ಯುವ ಸ್ಫೂರ್ತಿ ಸಂವಾದ ಕಾರ್ಯಕ್ರಮ

IIT Bombay
Latest1 hour ago

IIT Bombay: ಹಿಂದೂ ದೇವರ ಅವಹೇಳನಕಾರಿ ನಾಟಕ; ಐಐಟಿ ವಿದ್ಯಾರ್ಥಿಗಳಿಗೆ ದಂಡ

Manish Pandey
ಕ್ರೀಡೆ1 hour ago

Manish Pandey: ಕ್ರಿಕೆಟಿಗ ಮನೀಷ್​ ಪಾಂಡೆ ದಾಂಪತ್ಯದಲ್ಲಿ ಬಿರುಕು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ6 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌