Maha politics: ಮುಂದಿನ ಹೆಜ್ಜೆ ಇಡಲು ಎಲ್ಲರಿಗೂ ಭಯ, ಬೆಕ್ಕಿಗೆ ಘಂಟೆ ತಾವೇ ಕಟ್ತಾರಾ ರಾಜ್ಯಪಾಲರು? - Vistara News

ದೇಶ

Maha politics: ಮುಂದಿನ ಹೆಜ್ಜೆ ಇಡಲು ಎಲ್ಲರಿಗೂ ಭಯ, ಬೆಕ್ಕಿಗೆ ಘಂಟೆ ತಾವೇ ಕಟ್ತಾರಾ ರಾಜ್ಯಪಾಲರು?

Maha politics: ಮಹಾರಾಷ್ಟ್ರದಲ್ಲಿ ವೇಗವಾಗಿ ಸಾಗಿದ ರಾಜಕೀಯ ಚಟುವಟಿಕೆ ಈಗ ಸ್ವಲ್ಪ ನಿಧಾನಗತಿಗೆ ಇಳಿದಂತಿದೆ. ಶಿವಸೇನೆಯ ಎರಡೂ ಬಣಗಳು ಮತ್ತು ಬಿಜೆಪಿ ಸೇಫ್‌ ಗೇಮ್‌ನಲ್ಲಿ ನಿರತವಾಗಿವೆ. ಹಾಗಿದ್ದರೆ ಈ ಮೌನವನ್ನು ಭೇದಿಸುವವರು ಯಾರು? ರಾಜ್ಯಪಾಲರು ಆ ಕೆಲಸ ಮಾಡುತ್ತಾರಾ?

VISTARANEWS.COM


on

maharashtra politics
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಮಹಾರಾಷ್ಟ್ರ ರಾಜಕೀಯ ಅತ್ಯಂತ ಅಯೋಮಯವಾಗಿಯೇ ಮುಂದುವರಿಯುತ್ತಿದೆ (Maha politics). ಪ್ರಧಾನ ಪಾತ್ರಧಾರಿಗಳಾಗಿರುವ ಶಿವಸೇನೆಯ ಉದ್ಧವ್‌ ಠಾಕ್ರೆ ಬಣ, ಏಕನಾಥ್‌ ಶಿಂಧೆ ಬಣ, ದೇವೇಂದ್ರ ಫಡ್ನವಿಸ್‌ ಅವರ ಬಿಜೆಪಿ… ಹೀಗೆ ಪ್ರತಿಯೊಬ್ಬರೂ ಒಂದೊಂದು ಅಸ್ತ್ರಗಳನ್ನು ಹಿಡಿದುಕೊಂಡು ಕಾಯುತ್ತಿದ್ದಾರೆ. ಆದರೆ, ಯಾರೂ ಸರಕಾರ ಪತನ ಅಥವಾ ಹೊಸ ಸರಕಾರ ರಚನೆ ನಿಟ್ಟಿನಲ್ಲಿ ರಣಾಂಗಣಕ್ಕೆ ಇಳಿಯುವ ಸೂಚನೆ ಕಾಣುತ್ತಿಲ್ಲ. ಇಂಥ ಹೊತ್ತಿನಲ್ಲಿ ಸ್ವಯಂ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರೇ ಮೊದಲ ಹೆಜ್ಜೆ ಇಡುತ್ತಾರಾ? ತಾವೇ ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುತ್ತಾರಾ ಎಂಬ ಕುತೂಹಲ ಹೆಚ್ಚಾಗುತ್ತಿದೆ.

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಮತ್ತು ಅದು ನೀಡಿದ ತೀರ್ಪಿನ ಆಧಾರದಲ್ಲಿ ಒಂದು ಹಂತದಲ್ಲಿ ವಿಶ್ವಾಸ ಮತ ಯಾಚನೆ ಅಥವಾ ಅವಿಶ್ವಾಸ ಗೊತ್ತುವಳಿಗೆ ಬಹುತೇಕ ವೇದಿಕೆ ಸಿದ್ಧವಾದಂತಿದೆ. ಆದರೆ, ಎಲ್ಲಾ ಬಣಗಳು ಇನ್ನೂ ಕಾರ್ಯತಂತ್ರ ಹೆಣೆಯುವ ಪ್ರಕ್ರಿಯೆಯಲ್ಲೇ ನಿರತವಾಗಿವೆ. ಯಾರೂ ಮೊದಲ ಹೆಜ್ಜೆ ಇಡಲು ಸಿದ್ಧವಾದಂತೆ ಕಾಣುತ್ತಿದೆ. ಯಾರಾದರೂ ಮೊದಲ ಹೆಜ್ಜೆ ಇಟ್ಟರೆ ಅದಕ್ಕೆ ಕೌಂಟರ್‌ ಅಟ್ಯಾಕ್‌ ಮಾಡುವ ಇಲ್ಲವೇ ಬೆಂಬಲಕ್ಕೆ ನಿಲ್ಲುವ ಜಾಣ ನಡೆಯನ್ನು ಎಲ್ಲರೂ ಅನುಸರಿಸುವಂತೆ ಕಾಣುತ್ತಿದೆ.

೧. ಏಕನಾಥ್‌ ಶಿಂಧೆ ಬಣ ಗೊಂದಲದಲ್ಲಿ…
ಗುವಾಹಟಿಯ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ತಂಗಿರುವ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನಾ ಬಂಡಾಯ ಶಾಸಕರು ಮಹಾ ವಿಕಾಸ ಅಘಾಡಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದೆಗೆದುಕೊಳ್ಳುವುದಾಗಿ ರಾಜ್ಯಪಾಲರಿಗೆ ತಿಳಿಸಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಸ್ವತಃ ಶಿಂಧೆ ಅವರೇ ಸೋಮವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆ ಬಗ್ಗೆ ಚರ್ಚೆ ಆಗುತ್ತಿತ್ತು. ಆದರೆ, ಇನ್ನೂ ಏಕನಾಥ್‌ ಶಿಂಧೆ ಅವರು ಹೋಟೆಲ್‌ ಬಿಟ್ಟು ಕದಲಲಿಲ್ಲ. ಇದೀಗ ಬುಧವಾರ ಸಂಜೆ ಅವರು ೫೦ ಶಾಸಕರ ಜತೆ ಮುಂಬಯಿಗೆ ಬರುತ್ತಾರೆ ಎಂಬ ಮಾಹಿತಿ ಇದೆ.

೨. ಮೊದಲ ಹೆಜ್ಜೆ ಇಡಲೊಪ್ಪದ ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ ಬಣ ತಾನು ಅಲ್ಪಮತಕ್ಕೆ ಇಳಿದಿರುವುದನ್ನು ಅರ್ಥ ಮಾಡಿಕೊಂಡಿದೆಯಾದರೂ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅದು ಸರಕಾರ ಉರುಳುವುದಕ್ಕೆ ಮೊದಲು ಜನರ ಅನುಕಂಪ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿಯೇ ಸಂಜೆ ಸಂಪುಟ ಸಭೆಯನ್ನು ಕರೆದಿದೆ. ಅದರಲ್ಲಿ ಸರಕಾರಕ್ಕೆ ಏನೂ ಆಗಿಲ್ಲ ಎಂಬಂತೆ ಕೆಲವು ಜನಪ್ರಿಯ ಘೋಷಣೆಗಳನ್ನು ಪ್ರಕಟಿಸುವ ಸಾಧ್ಯತೆಯೂ ಇದೆ. ಅಂದರೆ, ಉದ್ಧವ್‌ ಠಾಕ್ರೆ ಬಣ ಯಾರಾದರೂ ಒಂದು ಹೆಜ್ಜೆ ಮುಂದಿಡಲಿ ಎಂದು ಕಾಯುತ್ತಿದೆ.

೩. ಬಿಜೆಪಿ ಅವಕಾಶ ಬಳಸಿಕೊಳ್ಳುತ್ತಾ?
ನಿಜವೆಂದರೆ, ಮಹಾರಾಷ್ಟ್ರದ ರಾಜಕೀಯ ಅಸ್ಥಿರತೆಗೆ ನಿಜವಾದ ಅಂತ್ಯ ಹಾಡಬಹುದಾದ ತಾಕತ್ತು ಇರುವುದು ಬಿಜೆಪಿ. ಆದರೆ, ಕಳೆದ ಒಂದು ವಾರದಿಂದಲೂ ಬಿಜೆಪಿ ತಂತ್ರಗಾರಿಕೆಯಲ್ಲೇ ಮುಳುಗಿದೆ ಹೊರತು ಒಂದು ಹೆಜ್ಜೆ ಮುಂದಿಟ್ಟಿಲ್ಲ. ಏಕನಾಥ್‌ ಶಿಂಧೆ ಬಣದ ಬಂಡಾಯದಿಂದ ಮಹಾ ವಿಕಾಸ ಅಘಾಡಿ ಸರಕಾರ ವಿಶ್ವಾಸ ಮತ ಕಳೆದುಕೊಂಡಿದೆ ಎಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದರೆ ಬೆಳವಣಿಗೆಗಳ ಚಹರೆಯೇ ಬದಲಾಗಿ ಹೋಗುತ್ತದೆ. ಬಹುತೇಕ ಸಂದರ್ಭದಲ್ಲಿ ಸಣ್ಣ ಸುಳಿವು ಸಿಕ್ಕಿದರೂ ಬಿಜೆಪಿ ಅಂತಹ ಕ್ರಮಕ್ಕೆ ಮುಂದಾಗಿತ್ತು. ಆದರೆ, ಇಲ್ಲಿ ಅದೂ ಅಳೆದೂ ತೂಗಿ ನೋಡುತ್ತಿದೆ. ದೇವೇಂದ್ರ ಫಡ್ನವಿಸ್‌ ಅವರು ಮಂಗಳವಾರವೂ ದಿಲ್ಲಿ ತಲುಪಿದ್ದಾರೆ. ಅದರೆ ಫಲ ಏನು ಎನ್ನುವುದು ಸ್ಪಷ್ಟವಾಗಿಲ್ಲ.

೪. ಹಾಗಿದ್ದರೆ ರಾಜ್ಯಪಾಲರು ಮುಂದಾಗ್ತಾರಾ?
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಇಷ್ಟೂ ಬೆಳವಣಿಗೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವವರು ರಾಜ್ಯಪಾಲರಾಗಿರುವ ಭಗತ್‌ ಸಿಂಗ್‌ ಕೋಶ್ಯಾರಿ. ಕೊರೊನಾದಿಂದ ಆಸ್ಪತ್ರೆ ಸೇರಿದ್ದ ಅವರು ಸೋಮವಾರದಿಂದ ಕರ್ತವ್ಯಕ್ಕೆ ಮರಳಿದ್ದಾರೆ. ಮೊದಲ ಹಂತದಲ್ಲಿ ಅವರು ಉದ್ಧವ್‌ ಠಾಕ್ರೆ ಸರಕಾರ ತೆಗೆದುಕೊಂಡ ಹಲವು ತೀರ್ಮಾನಗಳ ಬಗ್ಗೆ ವಿವರ ಕೇಳಿದ್ದಾರೆ. ಸರಕಾರ ಅತ್ಯಂತ ಅವಸರವಸರವಾಗಿ ಕೆಲವೊಂದು ಯೋಜನೆಗಳನ್ನು ಮಂಜೂರು ಮಾಡುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ವಾಸ್ತವಿಕವಾಗಿ ರಾಜ್ಯದಲ್ಲಿರುವ ಸಂಕೀರ್ಣ ರಾಜಕೀಯ ಪರಿಸ್ಥಿತಿಯ ಅರಿವು ಅವರಿಗೂ ಇದೆ. ಇದೇ ರೀತಿ ಬಿಟ್ಟರೆ ಅದು ಇನ್ನಷ್ಟು ಕಾಲ ಎಳೆಯಬಹುದು ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಉದ್ಧವ್‌ ಠಾಕ್ರೆ ಸರಕಾರ ಬಹುಮತ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸದ್ಯ ರಾಜ್ಯಪಾಲರೇ ಒಂದು ಹೆಜ್ಜೆ ಮುಂದಿಡುವ ಅನಿವಾರ್ಯತೆ ಎದುರಾಗಿದೆ. ಅವರ ಸಕ್ರಿಯ ನಡೆಗಳನ್ನು ಗಮನಿಸಿದರೆ ಶೀಘ್ರವೇ ಅವರು ಒಂದು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.


ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Narendra Modi: ಮೋದಿ ಪ್ರಮಾಣವಚನ; ಇಂದಿನ ಕಾರ್ಯಕ್ರಮ ಏನೇನು? ಹೇಗಿದೆ ಭದ್ರತೆ, ಸಿದ್ಧತೆ?

Narendra Modi: ನರೇಂದ್ರ ಮೋದಿ ಅವರು ಇಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ದೆಹಲಿಯಲ್ಲಿ ಅಭೂತಪೂರ್ವ ಸಿದ್ಧತೆಯ ಜತೆಗೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ದೇಶ-ವಿದೇಶಗಳ ಸಾವಿರಾರು ಗಣ್ಯರು ಮೋದಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಅಂದಹಾಗೆ, ಪ್ರಮಾಣವಚನದ ಶಿಷ್ಟಾಚಾರ ಹೇಗಿರುತ್ತದೆ? ಮೋದಿ ಇಂದು ಏನೆಲ್ಲ ಮಾಡಲಿದ್ದಾರೆ ಎಂಬುದರ ಸಂಕ್ಷಿಪ್ತ ಮಾಹಿತಿ ಹೀಗಿದೆ…

VISTARANEWS.COM


on

Narendra Modi
Koo

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಇಂದು (ಜೂನ್‌ 9) ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಮೂಲಕ ಜವಾಹರ ಲಾಲ್‌ ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿಯಾದ ಖ್ಯಾತಿಗೆ ಭಾಜನರಾಗಲಿದ್ದಾರೆ. ಇಂದು ಸಂಜೆ 7.15ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ಜತೆಗೆ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಹಾಗಾದರೆ, ಇಡೀ ದಿನ ಏನೆಲ್ಲ ಕಾರ್ಯಕ್ರಮ ನಡೆಯಲಿವೆ? ಮೋದಿ ಏನೆಲ್ಲ ಮಾಡಲಿದ್ದಾರೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

ಗಾಂಧೀಜಿ ಸಮಾಧಿ ಸ್ಥಳಕ್ಕೆ ಭೇಟಿ

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಮೊದಲು ಮಹಾತ್ಮ ಗಾಂಧೀಜಿ ಅವರ ಸಮಾಧಿಸ್ಥಳವಾದ ರಾಜ್‌ಘಾಟ್‌ಗೆ ತೆರಳಿ ನಮನ ಸಲ್ಲಿಸಲಿದ್ದಾರೆ. ಇದಾದ ನಂತರ ತಮ್ಮ ರಾಜಕೀಯ ಗುರುವಾದ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳವಾದ ಸದೈವ ಅಟಲ್‌ಗೆ ಭೇಟಿ ನೀಡಿ, ಅವರಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ.

ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಭವನ ಸಜ್ಜು

ಸಂಜೆ 7.15ಕ್ಕೆ ಕಾರ್ಯಕ್ರಮ

ಭಾನುವಾರ ಸಂಜೆ 7.15ಕ್ಕೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ. ಸುಮಾರು 8 ಸಾವಿರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಸಚಿವರಾಗಿ ಪ್ರಮಾಣವಚನ

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಎನ್‌ಡಿಎ ಮೈತ್ರಿಕೂಟದ ಹಲವು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಜತೆಗೆ ಟಿಡಿಪಿಯ ರಾಮ್‌ ಮೋಹನ್‌ ನಾಯ್ಡು, ಲಾಲನ್‌ ಸಿಂಗ್‌, ಸಂಜಯ್‌ ಝಾ, ಜೆಡಿಯುನ ರಾಮನಾಥ್‌ ಠಾಕೂರ್‌, ಲೋಕ ಜನ ಶಕ್ತಿ ಪಕ್ಷದ ಚಿರಾಗ್‌ ಪಾಸ್ವಾನ್‌, ಕರ್ನಾಟಕದ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೇರಿ ಹಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಗಿ ಬಂದೋಬಸ್ತ್‌

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ದೆಹಲಿಯ ಎಲ್ಲೆಡೆ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಸುಮಾರು 500 ಸಿಸಿಟಿವಿಗಳ ಕಣ್ಗಾವಲು ಇದೆ. ನೋ ಫ್ಲೈಯಿಂಗ್‌ ಜೋನ್‌ ಎಂದು ಘೋಷಿಸಿದ ಕಾರಣ ಯಾವುದೇ ಡ್ರೋನ್‌ಗಳ ಹಾರಾಟ ನಡೆಸುವಂತಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಷ್ಟ್ರಪತಿ ಭವನಕ್ಕೂ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: Mamata Banerjee: 15 ದಿನಗಳಲ್ಲೇ ಮೋದಿ ಸರ್ಕಾರ ಪತನ; ಸ್ಫೋಟಕ ಭವಿಷ್ಯ ನುಡಿದ ಮಮತಾ ಬ್ಯಾನರ್ಜಿ!

Continue Reading

ದೇಶ

Narendra Modi: 3ನೇ ಬಾರಿ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ; ಇಲ್ಲಿದೆ ಬಾಲ್ಯದಿಂದ ವಿಶ್ವಗುರುತನಕದ ಜೀವನ ಚಿತ್ರಣ

Narendra Modi: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟವು ಸಾರ್ವತ್ರಿಕ ಚುನಾವಣೆಯಲ್ಲಿ 292 ಸೀಟುಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹುಮತ ಪಡೆದಿದ್ದು, ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವ ಮೂಲಕ ಹ್ಯಾಟ್ರಿಕ್ ಸಾಧಿಸಲಿದ್ದಾರೆ. ಕಾಂಗ್ರೆಸ್‌ ಅಲೆ, ರಾಹುಲ್‌ ಗಾಂಧಿ ಯಾತ್ರೆ, ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಮಧ್ಯೆಯೂ ಎನ್‌ಡಿಎ ಬಹುಮತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದೆಲ್ಲದರ ಮಧ್ಯೆ, ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಹೊತ್ತಿನಲ್ಲಿ ನರೇಂದ್ರ ಮೋದಿ ಅವರ ವೈಯಕ್ತಿಕ ಜೀವನ, ರಾಜಕೀಯಗಾಥೆ ಇಲ್ಲಿದೆ.

VISTARANEWS.COM


on

Narendra Modi
Koo

ನವದೆಹಲಿ: ಜವಾಹರ ಲಾಲ್‌ ನೆಹರು, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಪಿ.ವಿ.ನರಸಿಂಹರಾವ್‌, ಅಟಲ್‌ ಬಿಹಾರಿ ವಾಜಪೇಯಿ, ಸೋನಿಯಾ ಗಾಂಧಿ… ಹೀಗೆ, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಹಲವು ನಾಯಕರು ದೇಶವನ್ನೇ ಆವರಿಸಿಕೊಂಡಿದ್ದಾರೆ. ಹೀಗೆ, 21ನೇ ಶತಮಾನದಲ್ಲಿ ಇಡೀ ದೇಶವನ್ನೇ ಆವರಿಸಿಕೊಂಡ, ಟೀಕೆ-ವಿರೋಧದ ಮಧ್ಯೆಯೂ ದೇಶದ ಜನರನ್ನು ಮೋಡಿ ಮಾಡಿದ ನಾಯಕ ಎಂದರೆ ಅದು ನರೇಂದ್ರ ದಾಮೋದರ ದಾಸ್‌ ಮೋದಿ ಹಾಗೂ ನರೇಂದ್ರ ದಾಮೋದರ ದಾಸ್‌ ಮೋದಿ ಮಾತ್ರ. ಇಂತಹ ನರೇಂದ್ರ ಮೋದಿ (Narendra Modi) ಅವರೀಗ ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ (Prime Minister) ಇಂದು (ಜೂನ್‌ 9) ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ನಾಯಕರ ಪೈಪೋಟಿಯ ಮಧ್ಯೆಯೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಸಾಧಿಸಿದೆ ಎಂದರೆ, ಅದಕ್ಕೆ ಮೋದಿ ಅವರ ನಾಯಕತ್ವವೇ ನಿರ್ಣಾಯಕವಾಗಿದೆ. ಇದೇ ಕಾರಣಕ್ಕಾಗಿ 10 ವರ್ಷದ ಬಳಿಕ ಮೈತ್ರಿ ಸರ್ಕಾರ ರಚನೆಯಾಗುತ್ತಿದ್ದರೂ ಮೋದಿ ಅವರೇ ಅವಿರೋಧವಾಗಿ ಪ್ರಧಾನಿಯಾಗುತ್ತಿದ್ದಾರೆ. ಹಾಗಾದರೆ, ನರೇಂದ್ರ ಮೋದಿ ಅವರ ಹಿನ್ನೆಲೆ ಏನು? ಅವರು ರಾಜಕೀಯಕ್ಕೆ ಧುಮುಕಿದ್ದು ಹೇಗೆ? ದೇಶದ ನಾಯಕರಾಗಿ ಅವರು ಹೊರಹೊಮ್ಮಿದ್ದು ಹೇಗೆ? ಇಡೀ ದೇಶವನ್ನು ಆವರಿಸಿಕೊಂಡಿದ್ದು ಹೇಗೆ? ಅವರು ತೆಗೆದುಕೊಂಡ ಪ್ರಮುಖ ತೀರ್ಮಾನಗಳು ಯಾವವು ಎಂಬುದರ ಮೇಲಿನ ಇಣುಕು ನೋಟ ಇಲ್ಲಿದೆ…

ನರೇಂದ್ರ ಮೋದಿ ಬಾಲ್ಯ

ನರೇಂದ್ರ ಮೋದಿ ಅವರು ಗುಜರಾತ್‌ನ ಮೆಹ್ಸಾನ ಜಿಲ್ಲೆಯ ವಡ್ನಗರದಲ್ಲಿ 1950ರ ಸೆಪ್ಟೆಂಬರ್‌ 17ರಂದು ಜನಿಸಿದರು. ದಾಮೋದರ ದಾಸ್‌ ಹಾಗೂ ಹೀರಾಬೆನ್‌ ಅವರು ಮೋದಿ ಅವರ ತಂದೆ-ತಾಯಿ. ನರೇಂದ್ರ ಮೋದಿ ಅವರು ದಾಮೋದರ ದಾಸ್‌ ದಂಪತಿಗೆ ಮೂರನೇ ಮಗನಾಗಿ ಜನಿಸಿದರು. ಸೋಮ ಮೋದಿ ಪಂಕಜ್‌ ಮೋದಿ, ಪ್ರಹ್ಲಾದ್‌ ಮೋದಿ, ವಾಸಂತಿಬೆನ್‌ ಹಸ್ಮುಖ್‌ಲಾಲ್‌ ಮೋದಿ ಹಾಗೂ ಅರವಿಂದ್‌ ಮೋದಿ ಅವರು ಇವರ ಸಹೋದರ ಹಾಗೂ ಸಹೋದರಿ ಆಗಿದ್ದಾರೆ. ಇಡೀ ಕುಟುಂಬವು 40 ಅಡಿ ಉದ್ದ ಹಾಗೂ 12 ಅಡಿ ಅಗಲದ ಮನೆಯಲ್ಲೇ ವಾಸಿಸುತ್ತಿತ್ತು. ಇದು ಇವರ ಬಡತನವನ್ನು ತೋರಿಸುತ್ತಿತ್ತು. ಮೋದಿ ಅವರ ತಂದೆಯು ಸ್ಥಳೀಯ ರೈಲು ನಿಲ್ದಾಣದಲ್ಲಿ ಪುಟ್ಟದೊಂದು ಟೀ ಅಂಗಡಿ ಇಟ್ಟುಕೊಂಡಿದ್ದರು. ಮೋದಿ ಅವರೂ ಬಾಲ್ಯದಲ್ಲಿ ಓದಿನ ಜತೆಗೆ ತಂದೆಯ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಓದು, ಚರ್ಚೆ, ಈಜಿನಲ್ಲಿ ನಿಪುಣರಾಗಿದ್ದ ಮೋದಿ ಅವರು ಹೆಚ್ಚು ಗೆಳೆಯರನ್ನು ಕೂಡ ಹೊಂದಿದ್ದರು.

ನರೇಂದ್ರ ಮೋದಿ ಅವರಿಗೆ 8ನೇ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್‌ನ ಪರಿಚಯವಾಯಿತು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಅವರನ್ನು ಆಕರ್ಷಿಸಿದವು. 17ನೇ ವಯಸ್ಸಿನಲ್ಲೇ ಮನೆ ತೊರೆದ ಮೋದಿ, ಹಿಮಾಲಯ, ರಿಷಿಕೇಶ ಸೇರಿ ದೇಶದ ಹಲವು ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದರು. ಇದಾದ ಬಳಿಕ, 1972ರಲ್ಲಿ ಅವರು ಆರ್‌ಎಸ್‌ಎಸ್‌ ಸೇರ್ಪಡೆಯಾಗಿ, ಇಡೀ ಜೀವನವನ್ನು ಅವರು ಸೇವೆಗೆ ಮುಡಿಪಾಗಿಡುವ ತೀರ್ಮಾನ ಮಾಡಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ, 1982ರಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರಾಗಿ ನೇಮಕ, 1987ರಲ್ಲಿ ಗುಜರಾತ್‌ ಬಿಜೆಪಿ ಸಂಘಟನಾ ಕಾರ್ಯದರ್ಶಿ, ಅಯೊಧ್ಯೆ ರಥಯಾತ್ರೆಯಲ್ಲಿ ಭಾಗಿಯಾಗಿ, 1995ರಲ್ಲಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ದೆಹಲಿಗೆ ತೆರಳಿದರು. 1998ರಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾದರು. ಅಷ್ಟೊತ್ತಿಗಾಗಲೇ ಅವರಿಗೆ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ.ಅಡ್ವಾಣಿಯವರ ಸಖ್ಯ ಬೆಳೆದಿತ್ತು.

ಮೋದಿ ರಾಜಕೀಯಕ್ಕೆ ಧುಮುಕಿದ್ದು ಹೇಗೆ?

ಗುಜರಾತ್‌ ರಾಜಕಾರಣವನ್ನು ಅವಲೋಕಿಸಿದರೆ, 1995ರಲ್ಲಿ ಬಿಜೆಪಿಯ ಜನಪ್ರಿಯ ಮತ್ತು ಹಿರಿಯ ನಾಯಕ ಕೇಶುಭಾಯ್‌ ಪಟೇಲ್‌ ಮುಖ್ಯಮಂತ್ರಿಯಾಗಿದ್ದರು. 1998-2001ರ ತನಕ ಮತ್ತೊಮ್ಮೆ ಅವರೇ ಸಿಎಂ ಆಗಿದ್ದರು. ಅವರ ಉತ್ತರಾಧಿಕಾರಿಯಾಗಿ ರಾಜ್ಯದ ಮುಖ್ಯಮಂತ್ರಿಯಾದವರೇ ನರೇಂದ್ರ ಮೋದಿ. ಕೇಶುಭಾಯಿ ಪಟೇಲ್‌ ಅವರಿಗೆ ರಾಜಕೀಯ ಅಸ್ಥಿರತೆ, ಶಂಕರ್‌ ಸಿಂಘ್‌ ವಘೇಲರ ಬಂಡಾಯದ ಪರಿಣಾಮ ಒಂದು ಕಡೆ ಸವಾಲುಗಳು ಎದುರಾಗಿದ್ದವು. ಮತ್ತೊಂದು ಕಡೆ 2001ರಲ್ಲಿ ಗುಜರಾತ್‌ನ ಭುಜ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪ ರಾಜಕೀಯದ ಚಿತ್ರಣವನ್ನೇ ಬದಲಿಸಿತು. ದುರ್ಬಲ ಆಡಳಿತ ಕೇಶುಭಾಯಿ ಪಟೇಲರ ರಾಜಕೀಯ ಜೀವನವನ್ನೂ ಕ್ಷೀಣಿಸಿತು. ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಗುಜರಾತ್‌ನಲ್ಲಿ ಪಕ್ಷದ ವರ್ಚಸ್ಸು ವೃದ್ಧಿಸಲು ಹೊಸ ನಾಯಕತ್ವದ ಹುಡುಕಾಟ ನಡೆಸಿದರು. ಈ ಅನ್ವೇಷಣೆಯಲ್ಲಿ ಸಿಕ್ಕಿದ ಉತ್ತರ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ! ಪ್ರಧಾನಿ ವಾಜಪೇಯಿ ಅವರ ಬುಲಾವ್‌ ಮೇರೆಗೆ ಅವರ ನಿವಾಸಕ್ಕೆ ತೆರಳಿದ ಮೋದಿಯವರಿಗೆ ಅಚ್ಚರಿ ಕಾದಿತ್ತು. ದೆಹಲಿಯಿಂದ ಗುಜರಾತ್‌ಗೆ ತೆರಳಿ ಮುಖ್ಯಮಂತ್ರಿಯಾಗುವಂತೆ ವಾಜಪೇಯಿ ಸೂಚಿಸಿದ್ದರು. ಆದರೆ ಆಗಲೇ ಪಕ್ಷದ ಸಂಘಟನಾ ಕೌಶಲದಲ್ಲಿ ತಮ್ಮ ಛಾಪು ಮೂಡಿಸಿದ್ದ ಮೋದಿಯವರು ಸರ್ಕಾರವನ್ನೂ ನಡೆಸಬಲ್ಲರು ಎಂಬ ನಂಬಿಕೆ ವಾಜಪೇಯಿ ಅವರಲ್ಲಿತ್ತು. ಅದರಂತೆ ಮೋದಿ ಅವರು 2001ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.2002ರ ಬಳಿಕ ಪಟೇಲ್‌ ಬಿಜೆಪಿಯಿಂದ ನಿರ್ಗಮಿಸಿದರು. ಅಲ್ಲಿಂದ ಗುಜರಾತ್‌ನಲ್ಲಿ ಮೋದಿ ಅವರ ಯುಗಾರಂಭವಾಯಿತು.

ಮೊದಲ ಪ್ರಯತ್ನದಲ್ಲೇ ಶಾಸಕ, ಆಗಲೂ ಇತ್ತು ಜನಪ್ರಿಯತೆ

2002ರ ಫೆಬ್ರವರಿ 24ರಂದು ನರೇಂದ್ರ ಮೋದಿ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. ರಾಜ್‌ಕೋಟ್‌-2 ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು. ರಾಜ್‌ಕೋಟ್‌-2 ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದಾಗ ಮೋದಿ ಅವರು ಮೊದಲ ಬಾರಿ ಸ್ಪರ್ಧಿಸಿದ್ದರು. ಅವರು 14,728 ಮತಗಳಿಂದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದ್ದರು. ಚುನಾವಣೆ ಗೆಲುವಿನ ಬಳಿಕ ಅವರು ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಿದ್ದರು. ಆಗಲೂ, ಜನ ಮೋದಿ ಅವರೆಂದರೆ ಮುಗಿಬೀಳುತ್ತಿದ್ದರು. ಹಿರಿಯ ಮಹಿಳೆಯರು ಕೂಡ ಬಂದು ಅವರಿಗೆ ಹಾರ ಹಾಕಿ ಹೋಗುತ್ತಿದ್ದರು. “ಗುಜರಾತ್‌ನ ಸಿಂಹ ಬಂತು” ಎಂಬುದಾಗಿ ಘೋಷಣೆ ಮಾಡಿದ್ದರು. ಇದಕ್ಕೂ ಮೊದಲು ಅಂದರೆ, 2001ರಲ್ಲಿಯೇ ಮೋದಿ ಗುಜರಾತ್‌ ಸಿಎಂ ಆಗಿದ್ದರು. ಸಿಎಂ ಗಾದಿಗೇರಿದ ಬಳಿಕ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಗುಜರಾತ್‌ನಲ್ಲಿ 2001ರ ಜನವರಿ 26ರ ಗಣರಾಜ್ಯೋತ್ಸವದಂದು ಸಂಭವಿಸಿದ ಭೀಕರ ಭೂಕಂಪದಲ್ಲಿ 13 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಲಕ್ಷಾಂತರ ಮಂದಿ ಗಾಯಗೊಂಡಿದ್ದರು. ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದ ಬಳಿಕ ಪರಿಹಾರ, ಪುನರ್ವಸತಿ ಕಾರ್ಯಾಚರಣೆಯ ಜವಾಬ್ದಾರಿ ನರೇಂದ್ರ ಮೋದಿಯವರಿಗಿತ್ತು. ನಂತರದ ವರ್ಷಗಳಲ್ಲಿ ಕಛ್‌ ವಲಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಯಿತು. ಭೂಕಂಪದ ಸಂದರ್ಭದಲ್ಲಿ ಮೋದಿ ಅವರು ಮುಂದೆ ನಿಂತು ಅಧಿಕಾರಿಗಳು, ಶಾಸಕರನ್ನು ಪರಿಹಾರ ಕಾರ್ಯಕ್ಕೆ ನಿಯೋಜಿಸಿದ್ದು, ಆಡಳಿತ, ಕಾರ್ಯವೈಖರಿಯಲ್ಲಿ ಬದಲಾವಣೆ ತಂದಿದ್ದು ಪ್ರಮುಖವಾಗಿತ್ತು.

ಗೋಧ್ರಾ ಹಿಂಸಾಚಾರ

ಗುಜರಾತ್‌ ಸಿಎಂ ಆಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಆರಂಭಿಕ ವರ್ಷಗಳು ಕಲ್ಲು ಮುಳ್ಳಿನ ದುರ್ಗಮ ಹಾದಿಯಾಗಿತ್ತು. ಭೀಕರ ಭೂಕಂಪನದಿಂದ ರಾಜ್ಯ ತತ್ತರಿಸಿತ್ತು. ಲಕ್ಷಾಂತರ ನಿರಾಶ್ರಿತರ ಪುನರ್ವಸತಿಯ ಬೃಹತ್‌ ಸವಾಲು ಎದುರಿತ್ತು. ದುರದೃಷ್ಟವಶಾತ್‌ 2002ರ ಫೆಬ್ರವರಿ-ಮಾರ್ಚ್‌ ಅವಧಿಯಲ್ಲಿ ಗೋಧ್ರಾದಲ್ಲಿ ನಡೆದ ಘೋರ ನರಮೇಧ, ನಂತರ ಇಡೀ ರಾಜ್ಯವನ್ನು ಪ್ರಕ್ಷುಬ್ಧವಾಗಿಸಿದ ಕೋಮು ಗಲಭೆ, ನರೇಂದ್ರ ಮೋದಿಯವರಿಗೆ ಅಗ್ನಿ ಪರೀಕ್ಷೆಯಾಗಿತ್ತು. ಇದೇ ಸಂದರ್ಭ ಮೋದಿ ವಿರೋಧಿಗಳ ಗ್ಯಾಂಗ್‌ ಅವರ ವಿರುದ್ಧ ನಿರಂತರ ಷಡ್ಯಂತ್ರಗಳನ್ನು ನಡೆಸಿತು. ಮೋದಿಯವರೇ ಈ ಎಲ್ಲ ಗಲಭೆಗಳ ಸೂತ್ರಧಾರ ಎಂದು ಬಿಂಬಿಸಿತು. ಇಪ್ಪತ್ತು ವರ್ಷಗಳ ಕಾಲ ಈ ಗ್ಯಾಂಗ್‌ ಮೋದಿ ವಿರುದ್ಧ ಮಸಲತ್ತು ನಡೆಸಿದರೂ, ಅಂತಿಮವಾಗಿ ಸುಪ್ರೀಂಕೋರ್ಟ್‌, ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿತು. ಗೋಧ್ರಾ ಗಲಭೆಯಲ್ಲಿ ಮೋದಿಯವರದ್ದು ಯಾವುದೇ ತಪ್ಪಿಲ್ಲ ಎಂದ ಸುಪ್ರೀಂಕೋರ್ಟ್‌, ಮೋದಿ ವಿರುದ್ಧ ನಡೆದ 16 ವರ್ಷಗಳ ಷಡ್ಯಂತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಹಾಗೂ ತಪ್ಪಿತಸ್ಥರನ್ನು ಕಟಕಟೆಗೆ ತಂದು ನಿಲ್ಲಿಸಬೇಕು ಎಂದೂ ಆದೇಶಿಸಿತು. ಹೀಗಾಗಿ ಇದು ಐತಿಹಾಸಿಕ ಮಹತ್ವದ ತೀರ್ಪುಗಳಲ್ಲೊಂದು.

ಗುಜರಾತ್‌ ಅಭಿವೃದ್ಧಿಗೆ ಆದ್ಯತೆ

ಗುಜರಾತ್‌ನ ಅಭಿವೃದ್ಧಿಗೆ ಸಂಬಂಧಿಸಿ ಮೋದಿಯವರ ಯೋಜನೆಗಳು ಹಲವು. ಅವುಗಳ ಪೈಕಿ ನರ್ಮದಾ ಅಣೆಕಟ್ಟೆ ಯೋಜನೆಯನ್ನು ಪೂರ್ಣಗೊಳಿಸಿರುವುದೂ ಒಂದು. ದಕ್ಷಿಣ ಗುಜರಾತ್‌ನಿಂದ ಸೌರಾಷ್ಟ್ರಕ್ಕೆ ನರ್ಮದೆಯ ನೀರನ್ನು ತಂದು ನೀರಾವರಿ ಕಲ್ಪಿಸುವ ಯೋಜನೆಯ ವಿರುದ್ಧ ಮೇಧಾ ಪಾಟ್ಕರ್‌ ಮತ್ತಿತರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಆದರೆ ಸರ್ದಾರ್‌ ಸರೋವರ್‌ ಯೋಜನೆ ಇವತ್ತು 18.45 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ವ್ಯವಸ್ಥೆ ನೀಡಿದೆ. 9,490 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಿದೆ. ಪ್ರವಾಹದಿಂದ ರಕ್ಷಣೆ ಕೊಟ್ಟಿದೆ. ಕೃಷಿ ಉತ್ಪಾದನೆಯ ಹೆಚ್ಚಳಕ್ಕೆ ಪುಷ್ಟಿ ನೀಡಿದೆ. ಮೋದಿಯವರು ಗುಜರಾತ್‌ ಸಿಎಂ ಆಗಿದ್ದ ಅವಧಿಯಲ್ಲಿ ಎಂಟು ವರ್ಷಗಳ ಕಾಲ ರಾಜ್ಯ ಎರಡಂಕಿಯ ಆರ್ಥಿಕ ಬೆಳವಣಿಗೆ ದಾಖಲಿಸಿ ದೇಶದ ಗಮನ ಸೆಳೆದಿತ್ತು. ತ್ವರಿತ ಅಭಿವೃದ್ಧಿಗೆ ಗುಜರಾತ್‌ ಮಾದರಿಯಾಗಿತ್ತು. ಟಾಟಾ ನ್ಯಾನೋ ಕಾರು ಉತ್ಪಾದನೆ ಘಟಕವನ್ನು ಮೋದಿ ಗುಜರಾತ್‌ಗೆ ತೆಗೆದುಕೊಂಡು ಹೋದರು. ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ರಾಜ್ಯಕ್ಕೆ ಹೂಡಿಕೆ ಹರಿದಬರುವಂತೆ ಮಾಡಿದರು. ಇದೇ ಕಾರಣಕ್ಕಾಗಿ ಅವರು, 2002, 2007 ಹಾಗೂ 2012ರಲ್ಲಿ ನಡೆದ ಗುಜರಾತ್‌ ವಿಧಾನಸಭೆ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರು. ದೇಶಾದ್ಯಂತ ಗುಜರಾತ್‌ ಮಾಡೆಲ್‌ ಅಭಿವೃದ್ಧಿ ಹೆಸರಾಯಿತು.

2014ರಲ್ಲಿ ಬಿಜೆಪಿಗೆ ಬಹುಮತ, ಮೋದಿಗೆ ಬಹುಪರಾಕ್

ಪ್ರಧಾನಿ ನರೇಂದ್ರ ಮೋದಿಯವರ ಅಭೂತಪೂರ್ವ ಯಶಸ್ಸು, ಜನಪ್ರಿಯತೆಗೆ ಅವರೇ ವಿವರಿಸಬೇಕಿಲ್ಲ. 2014 ಮತ್ತು 2019ರ ಲೋಕಸಭೆ ಚುನಾವಣೆಯ ಫಲಿತಾಂಶದ ಅಂಕಿ ಅಂಶಗಳೇ ಸಾಕು. 2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು‌ ಚುನಾವಣೆಯಲ್ಲಿ ಮೂರು ದಶಕಗಳ ಸಮ್ಮಿಶ್ರ ಸರ್ಕಾರಗಳ ಜಂಜಾಟಕ್ಕೆ ತೆರೆ ಎಳೆದರು. 284 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಇತಿಹಾಸ ಸೃಷ್ಟಿಸಿತು. 31% ಮತಗಳು ಲಭಿಸಿದವು. 2019ರಲ್ಲಿ ಮೋದಿ ಸರ್ಕಾರ ಮತ್ತಷ್ಟು ಪ್ರಬಲವಾಗಿತ್ತು. ಶೇ.37.3ರಷ್ಟು ಮತಗಳು ಮತ್ತು 303 ಕ್ಷೇತ್ರಗಳಲ್ಲಿ ಗೆಲುವಿನ ಫಲಿತಾಂಶ ಬಂದಿತು. ಇದರೊಂದಿಗೆ ಅತಿ ಹೆಚ್ಚು ಕಾಲ ಪ್ರಧಾನಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ರಾಜಕಾರಣಿಯೂ ಆದರು.

ಕಳೆದ 2014ರಿಂದೀಚೆಗೆ ಬಿಜೆಪಿ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿನ ಚುನಾವಣೆಗಳಲ್ಲಿ ಸೋತಿದ್ದು ಕಡಿಮೆ, ಗೆಲುವು ಸಾಧಿಸಿದ್ದೇ ಹೆಚ್ಚು. ಬಿಜೆಪಿಯ ಹಿಂದುತ್ವ ಮತ್ತು ಅಭಿವೃದ್ಧಿ ರಾಜಕಾರಣದ ಹಿಂದೆ ನರೇಂದ್ರ ಮೋದಿಯವರ ವರ್ಚಸ್ಸು ಕೆಲಸ ಮಾಡಿದೆ. ಸದಸ್ಯತ್ವದ ದೃಷ್ಟಿಯಿಂದ ಬಿಜೆಪಿ ವಿಶ್ವದ ದೊಡ್ಡ ಪಕ್ಷವೆಂದು ಹೇಳಿಕೊಂಡಿದೆ. ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವೇ ಇಲ್ಲ ಎಂಬ ಮಾತು ಹಿಂದೊಮ್ಮೆ ಇತ್ತು ಎಂದರೆ ಮುಂದಿನ ಪೀಳಿಗೆಗೆ ನಂಬಲೂ ಕಷ್ಟವಾಗಬಹುದು ಎಂಬ ಸ್ಥಿತಿಗೆ ಕಾಂಗ್ರೆಸ್‌ ಈಗ ತಲುಪಿದೆ. ಪ್ರತಿಪಕ್ಷ ಮಾನ್ಯತೆ ಪಡೆಯಲೂ ಪರದಾಡುವ ಸ್ಥಿತಿ. ಬಿಜೆಪಿ ಈ ಪರಿಯಲ್ಲಿ ಕಾಂಗ್ರೆಸ್‌ ರಾಜಕಾರಣಕ್ಕೆ ಪರ್ಯಾಯವಾಗಿ ಬೆಳೆಯಲಿದೆ ಎಂದು 10 ವರ್ಷಗಳ ಹಿಂದೆ ಯಾವೊಬ್ಬ ರಾಜಕೀಯ ಪಂಡಿತರೂ ಭವಿಷ್ಯ ನುಡಿದಿರಲಿಲ್ಲ.

10 ವರ್ಷದಲ್ಲಿ ಮೋದಿ ಸಾಧನೆಗಳು

ಮೂಲ ಸೌಕರ್ಯ ಅಭಿವೃದ್ಧಿ

ಗ್ರಾಮಗಳಲ್ಲಿ ಮನೆ ಮನೆಗಳಲ್ಲಿ ಶೌಚಾಲಯ ನಿರ್ಮಾಣದಿಂದ ಹಿಡಿದು ಸಾಮಾನ್ಯ ಜನರೂ ವಿಮಾನದಲ್ಲಿ ಪ್ರಯಾಣಿಸುವ ಉಡಾನ್‌ ಯೋಜನೆತನಕ ಮೋದಿ ಆಡಳಿತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಿದೆ. ದೇಶಾದ್ಯಂತ 11.72 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. 3.5 ಕೋಟಿ ಮನೆ ನಿರ್ಮಾಣ, ಉಜ್ವಲ ಯೋಜನೆ ಅಡಿಯಲ್ಲಿ 9.6 ಕೋಟಿ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಉಡಾನ್‌ ಯೋಜನೆ ಅಡಿಯಲ್ಲಿ ದೇಶಾದ್ಯಂತ ಇದ್ದ 74 ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 141ಕ್ಕೆ ಏರಿಸಲಾಗಿದೆ. ಜನಧನ್‌ ಯೋಜನೆ ಮೂಲಕ 50 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ರೈಲು ನಿಲ್ದಾಣಗಳನ್ನು ಅತ್ಯಾಧುನೀಕರಣ ಮಾಡಲಾಗಿದೆ. ರೈಲುಗಳಲ್ಲಿ ಜೈವಿಕ ಶೌಚಾಲಯಗಳ ಅಳವಡಿಕೆ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ದೇಶದ ನರನಾಡಿಗಳಂತೆ ಕಾಣುತ್ತಿವೆ.

ಡಿಜಿಟಲ್‌ ಇಂಡಿಯಾ ಮೇನಿಯಾ

ನರೇಂದ್ರ ಮೋದಿ ಅವರು ಕಂಡ ಡಿಜಿಟಲ್‌ ಇಂಡಿಯಾ ಕನಸು ಬಹುತೇಕ ನನಸಾಗಿದೆ. ಮೊದಲೆಲ್ಲ ಯಾರಿಗಾದರೂ ಹಣ ಕಳುಹಿಸಬೇಕು ಎಂದರೆ ನೆಟ್‌ ಬ್ಯಾಂಕಿಂಗ್‌ ಮೊರೆ ಹೋಗಬೇಕಿತ್ತು. ಇಲ್ಲವೇ, ಬ್ಯಾಂಕ್‌ನಲ್ಲಿ ಕ್ಯೂ ನಿಂತು ಎನ್‌ಇಎಫ್‌ಟಿ (NEFT) ಮಾಡಬೇಕಿತ್ತು. ಆದರೆ, ಡಿಜಿಟಲ್‌ ಇಂಡಿಯಾ ಅಭಿಯಾನವು ಯಶಸ್ವಿಯಾಗಿದ್ದು, ಈಗ ಯುಪಿಐ ಮೂಲಕ ಕ್ಷಣಮಾತ್ರದಲ್ಲಿ ಹಣ ಕಳುಹಿಸಬಹುದಾಗಿದೆ. ಡಿಜಿಟಲ್‌ ಆರ್ಥಿಕತೆ ಸೃಷ್ಟಿಯಾಗಿದೆ. ಗ್ರಾಮದ ಗೂಡಂಗಡಿಗಳಿಂದ ಹಿಡಿದು ನಗರಗಳಲ್ಲಿ ತರಕಾರಿ ಮಾರುವವರೂ ಈಗ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ ಇಟ್ಟುಕೊಂಡಿದ್ದಾರೆ. ಸದ್ಯ, ಶೇ. 75ರಷ್ಟು ಚಿಲ್ಲರೆ ವ್ಯಾಪಾರವು ಯುಪಿಐ ಮೂಲಕವೇ ಆಗುತ್ತಿದೆ. ಕೋಟ್ಯಂತರ ಜನ, ಲಕ್ಷಾಂತರ ಕೋಟಿ ರೂಪಾಯಿಯನ್ನು ಯುಪಿಐ ಮೂಲಕವೇ ವರ್ಗಾವಣೆ ಮಾಡುತ್ತಿದ್ದಾರೆ. ಯುಪಿಐ ವ್ಯವಸ್ಥೆಯನ್ನು ಬೇರೆ ದೇಶಗಳೂ ಅಳವಡಿಸಿಕೊಂಡಿವೆ.

Digital Payment

370ನೇ ವಿಧಿ ರದ್ದು

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿರುವುದು ನರೇಂದ್ರ ಮೋದಿ ಸರ್ಕಾರದ ದಿಟ್ಟ ತೀರ್ಮಾನಗಳಲ್ಲಿ ಒಂದಾಗಿದೆ. ಉಗ್ರರ ತಾಣವಾಗಿದ್ದ, ಪ್ರತ್ಯೇಕವಾದಿಗಳ ಗೂಡಾಗಿದ್ದ, ಕಲ್ಲು ತೂರಾಟಗಾರರ ಪ್ರಯೋಗ ತಾಣವಾಗಿದ್ದ ಕಾಶ್ಮೀರದಲ್ಲಿ ಈಗ ಜಿ-20 ಸಭೆ ನಡೆಯುವಂತಾಗಿದ್ದರೆ ಅದಕ್ಕೆ 370ನೇ ವಿಧಿ ರದ್ದುಗೊಳಿಸಿದ್ದೇ ಕಾರಣವಾಗಿದೆ. 2019ರ ಆಗಸ್ಟ್‌ 5ರಂದು 370ನೇ ವಿಧಿ ರದ್ದು ಬಳಿಕ ಉಗ್ರರ ಉಪಟಳ ನಿಲ್ಲದಿದ್ದರೂ ಪ್ರತ್ಯೇಕವಾದಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಕಾಶ್ಮೀರದಲ್ಲಿ ವಿದೇಶಿ ಗಣ್ಯರು ಬಂದು ಶಾಪಿಂಗ್‌ ಮಾಡುವಂತಾಗಿದೆ. ಆದರೂ, ಕೇಂದ್ರ ಸರ್ಕಾರವು ಕಾಶ್ಮೀರ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಹಿನ್ನಡೆ ಅನುಭವಿಸಿದ್ದು, ಅದರ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕೊನೆಯ ಹಂತಕ್ಕೆ ಬಂದಿದ್ದು, ಇದನ್ನು ಸುಗಮವಾಗಿ ಕೈಗೊಂಡ ಕೀರ್ತಿ, ಬಿಜೆಪಿ ನೀಡಿದ ಭರವಸೆಯನ್ನು ಈಡೇರಿಸಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ಪರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ದೇಶಾದ್ಯಂತ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಂಡಿದ್ದು, ಸುಗಮವಾಗಿ ರಾಮಮಂದಿರ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿದ್ದು ಕೇಂದ್ರ ಸರ್ಕಾರದ ಸಾಧನೆಯಾಗಿದೆ. ಅಷ್ಟೇ ಅಲ್ಲ, 2024ರ ಜನವರಿಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೆ ಸರ್ಕಾರ ಸಿದ್ಧವಾಗಿದೆ. ಹಾಗೆಯೇ, ಸುಪ್ರೀಂ ಕೋರ್ಟ್‌ ಆದೇಶದಂತೆ ಮಸೀದಿ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ.

PM Narendra Modi

ಕೊರೊನಾ ಸಂದರ್ಭದಲ್ಲಿ ಉಚಿತವಾಗಿ ಆಹಾರ ಧಾನ್ಯ ವಿತರಣೆ

ಕೊರೊನಾ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ದೇಶದ ಕೋಟ್ಯಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾಗ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಮೂಲಕ (PMGKAY) ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಿದ್ದು ಕೂಡ ಕೇಂದ್ರದ ಸಾಧನೆಯಾಗಿದೆ. ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುವ ಮೂಲಕ ಜನರ ನೆರವಿಗೆ ಕೇಂದ್ರ ಸರ್ಕಾರ ನಿಂತಿದ್ದು ಸ್ಮರಣೀಯ.

ದೇಶದ ಗಡಿ ಭದ್ರ, ಉಗ್ರರಿಗೆ ತಿರುಗೇಟು

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಗಡಿಗಳು ಮತ್ತಷ್ಟು ಭದ್ರವಾಗಿವೆ. ಉಗ್ರರ ದಾಳಿಗಳು ಬಹುತೇಕವಾಗಿ ನಿಂತುಹೋಗಿವೆ. 2016ರಲ್ಲಿ ಪಾಕಿಸ್ತಾನದ ಉಗ್ರರು ಜಮ್ಮು-ಕಾಶ್ಮೀರದ ಉರಿ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌, 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಬಾಲಾಕೋಟ್‌ ವಾಯುದಾಳಿ ಮೂಲಕ ಪಾಕಿಸ್ತಾನದ ಉಗ್ರ ಚಟುವಟಿಕೆಗಳಿಗೆ ಪ್ರತ್ಯುತ್ತರ ನೀಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ, ಕಲ್ಲು ತೂರಾಟ, ಪ್ರತ್ಯೇಕವಾದಿಗಳನ್ನು ಹೆಡೆಮುರಿಕಟ್ಟಿದ್ದು ಮೋದಿ ಸರ್ಕಾರದ ದಿಟ್ಟ ನಿರ್ಧಾರವಾಗಿದೆ.

ಎಲ್ಲರಿಗೂ ಲಸಿಕೆ ವಿತರಣೆ

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶೀಯವಾಗಿ ಕೊರೊನಾ ನಿರೋಧಕ ಲಸಿಕೆ ಉತ್ಪಾದನೆ ಜತೆಗೆ ದೇಶಾದ್ಯಂತ ಕೋಟ್ಯಂತರ ಜನರಿಗೆ ವಿತರಣೆ ಮಾಡಿದ್ದು, ಎರಡು ಲಾಕ್‌ಡೌನ್‌ ಮಾಡಿಯೂ ಆರ್ಥಿಕತೆ ದಿವಾಳಿಯಾಗದಂತೆ ನೋಡಿಕೊಂಡಿದ್ದು, ಆಮ್ಲಜನಕ ಕೊರತೆ, ವೈದ್ಯಕೀಯ ಮೂಲ ಸೌಕರ್ಯಗಳ ಕೊರತೆ ಮಧ್ಯೆಯೂ ಕೊರೊನಾ ನಿರ್ವಹಣೆ ಮಾಡಿದ್ದು ಮೋದಿ ಸರ್ಕಾರದ ಸಾಧನೆ ಎಂಬುದರಲ್ಲಿ ಎರಡು ಮಾತಿಲ್ಲ. ಕೊರೊನಾ ನಿರೋಧಕ ಲಸಿಕೆಯ 200 ಕೋಟಿಗೂ ಅಧಿಕ ಡೋಸ್‌ ವಿತರಣೆ ಮಾಡಿದ್ದು, ಬೇರೆ ರಾಷ್ಟ್ರಗಳಿಗೂ ಲಸಿಕೆ ರವಾನೆ ಮಾಡಿದ್ದು ಸಾಧನೆಯಾಗಿದೆ.

ರೈತರ ಖಾತೆಯಲ್ಲಿ ಕಾಂಚಾಣ ಝಣಝಣ

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ರೈತರಿಗೆ ವರ್ಷದಲ್ಲಿ ತಲಾ 2 ಸಾವಿರ ರೂ. ನಂತೆ ಮೂರು ಬಾರಿ 6 ಸಾವಿರ ರೂ. ನೀಡುವ ಮೂಲಕ ಕೇಂದ್ರ ಸರ್ಕಾರ ನೀಡಿದ ಭರವಸೆಯನ್ನು ಉಳಿಸಿಕೊಂಡಿದೆ. ಇದರಿಂದ ದೇಶದ ಕೋಟ್ಯಂತರ ರೈತರ ಖಾತೆಗೆ ಹಣ ಜಮೆಯಾಗುತ್ತಿದ್ದು, ಯೋಜನೆ ಜಾರಿಯಲ್ಲಿ ಎಲ್ಲೂ ಲೋಪವಾಗದಂತೆ ಕೇಂದ್ರ ಸರ್ಕಾರ ನೋಡಿಕೊಂಡಿದೆ.

ವಿದೇಶಗಳಿಂದ ಭಾರತೀಯರ ರಕ್ಷಣೆ

ಮೋದಿ ಸರ್ಕಾರವು ಎರಡನೇ ಅವಧಿಯ ವೇಳೆ, ಬೇರೆ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರನ್ನು ರಕ್ಷಿಸುವಲ್ಲಿ ಬೇರೆ ರಾಷ್ಟ್ರಗಳಿಗೂ ಮಾದರಿ ಎನಿಸಿದೆ. ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಉಪಟಳ ಆರಂಭವಾದಾಗ ಕೇಂದ್ರ ಸರ್ಕಾರವು 700 ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ. ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ ಆರಂಭಿಸಿದಾಗ 23 ಸಾವಿರ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬಂದಿದೆ. ಅಷ್ಟೇ ಏಕೆ, ಕೆಲ ದಿನಗಳ ಹಿಂದೆಯೇ ಸುಡಾನ್‌ನಲ್ಲಿ ಆಂತರಿಕ ಸಂಘರ್ಷ ಉಂಟಾದಾಗ, ‘ಆಪರೇಷನ್‌ ಕಾವೇರಿ’ ಮೂಲಕ ಕನ್ನಡಿಗರೂ ಸೇರಿ ನೂರಾರು ಭಾರತೀಯರನ್ನು ಸರ್ಕಾರ ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ.

ದೇಶದಲ್ಲಿ ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಮೂಲಕ ಅವರು ನೆಹರು ಅವರ ದಾಖಲೆಯನ್ನು ಮುರಿಯಲು ಮತ್ತೊಂದು ಹೆಜ್ಜೆ ಮುಂದಿಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

Continue Reading

ಪ್ರಮುಖ ಸುದ್ದಿ

Kisan Samman Nidhi: ರೈತರಿಗೆ ಗುಡ್‌ ನ್ಯೂಸ್;‌ ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ, ಇನ್ನು ಸಿಗೋದು 8 ಸಾವಿರ ರೂ.!

Kisan Samman Nidhi: ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆದ ವೇಳೆ ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಿಸಾನ್‌ ಸಮ್ಮಾನ್‌ ನಿಧಿಯ ಮೊತ್ತವನ್ನು ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ರಾಜ್ಯ ಸರ್ಕಾರವೀಗ ಕಿಸಾನ್‌ ಸಮ್ಮಾನ್‌ ನಿಧಿಯನ್ನು ಹೆಚ್ಚಿಸಿದೆ. ಈ ಕುರಿತು ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮೂಲಕ ಮಾಹಿತಿ ನೀಡಿದ್ದಾರೆ.

VISTARANEWS.COM


on

Kisan Samman Nidhi
Koo

ಜೈಪುರ: ರಾಜಸ್ಥಾನದ ರೈತರಿಗೆ (Rajasthan Farmers) ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ (PM Kisan Samman Nidhi Scheme) ಅಡಿಯಲ್ಲಿ ವಾರ್ಷಿಕವಾಗಿ ರೈತರಿಗೆ ನೀಡುವ 6 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರವು 8 ಸಾವಿರ ರೂ.ಗೆ ಏರಿಕೆ ಮಾಡಿದೆ. ಕಿಸಾನ್‌ ಸಮ್ಮಾನ್‌ ನಿಧಿಗೆ ರಾಜ್ಯ ಸರ್ಕಾರವೂ 2 ಸಾವಿರ ರೂ. ಸೇರಿಸಿರುವ ಕಾರಣ ರಾಜ್ಯದ ರೈತರು ವರ್ಷಕ್ಕೆ 8 ಸಾವಿರ ರೂ. ಪಡೆಯಲಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ (Bhajanlal Sharma) ಘೋಷಣೆ ಮಾಡಿದ್ದಾರೆ.

“ಅನ್ನದಾತರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯವಾಗಿದ್ದು, ರಾಜ್ಯ ಸರ್ಕಾರವು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ ಮೊತ್ತವನ್ನು 2 ಸಾವಿರ ರೂ. ಹೆಚ್ಚಿಸಿದೆ. ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ಬದಲು ಇನ್ನು 8 ಸಾವಿರ ರೂ. ಜಮೆಯಾಗಲಿದೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಭಜನ್‌ಲಾಲ್‌ ಶರ್ಮಾ ಪೋಸ್ಟ್‌ ಮಾಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆದ ವೇಳೆ ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಿಸಾನ್‌ ಸಮ್ಮಾನ್‌ ನಿಧಿಯ ಮೊತ್ತವನ್ನು ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ರಾಜ್ಯ ಸರ್ಕಾರವೀಗ ಕಿಸಾನ್‌ ಸಮ್ಮಾನ್‌ ನಿಧಿಯನ್ನು ಹೆಚ್ಚಿಸಿದೆ.

ಅಷ್ಟೇ ಅಲ್ಲ, ರಾಜಸ್ಥಾನದಲ್ಲಿ ಕಳೆದ ಐದು ವರ್ಷದಲ್ಲಿ ನಡೆದ ನೇಮಕಾತಿಗಳ ಕುರಿತು ತನಿಖೆಗೂ ಮುಖ್ಯಮಂತ್ರಿ ಆದೇಶಿಸಿದ್ದಾರೆ. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಕುರಿತು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ನೇಮಕಾತಿ ಅಕ್ರಮ, ಭ್ರಷ್ಟಾಚಾರದ ಕುರಿತು ತನಿಖೆಯಾಗಬೇಕು ಎಂದು ಆಗ ಅಸ್ತಿತ್ವದಲ್ಲಿದ್ದ ತಮ್ಮದೇ ಸರ್ಕಾರಕ್ಕೆ ಆಗ್ರಹಿಸಿದ್ದರು.

3 ಕಂತುಗಳಲ್ಲಿ ಕೇಂದ್ರ ಸರ್ಕಾರ ಪಾವತಿ

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಈ ಯೋಜನೆ ನೆರವಾಗುತ್ತಿದೆ. ಕೇಂದ್ರ ಸರ್ಕಾರವು 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಬೇಕಿದ್ದು, ಇದುವರೆಗೆ ದಿನಾಂಕ ನಿಗದಿ ಮಾಡಿಲ್ಲ.

ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್‌ www.pmkisan.gov.inಗೆ ಭೇಟಿ ನೀಡಿ.
ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್‌ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
‘Get report’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌ 155261 ಮತ್ತು 011-24300606 ಅನ್ನು ಸಂಪರ್ಕಿಸಿ.

ಇದನ್ನೂ ಓದಿ: Money Guide: ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಜಮೆ ಯಾವಾಗ?

Continue Reading

ದೇಶ

ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

ಛತ್ತೀಸ್‌ಗಢದ ಬಲರಾಮ್‌ಪುರದಲ್ಲಿ ದುರ್ಗೇಶ್‌ ಪಾಂಡೆ ಎಂಬ 30 ವರ್ಷದ ವ್ಯಕ್ತಿಯು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತ ಪಡೆದ ಹಿನ್ನೆಲೆಯಲ್ಲಿ ದೇವಾಲಯ ತೆರಳಿ, ಕಾಳಿ ದೇವಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಬೆರಳು ಕತ್ತರಿಸಿಕೊಂಡ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವ ಉಂಟಾದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಲೂ ಆತ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

VISTARANEWS.COM


on

Narendra Modi
Koo

ರಾಯ್‌ಪುರ: ಜಗತ್ತಿನಲ್ಲೇ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ಅನುಯಾಯಿಗಳು, ಹಿಂಬಾಲಕರು ಭಾರತದಲ್ಲಿಯೇ ಇರಬಹುದೇನೋ! ಅದರಲ್ಲೂ, ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ, ಆರಾಧಿಸುವ, ಅವರ ಪರವಾಗಿ ವಾದ ಮಾಡುವ, ಸಮಯ ಬಂದರೆ ಜಗಳಕ್ಕೂ ನಿಲ್ಲುವ ‘ಭಕ್ತರು’ ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಛತ್ತೀಸ್‌ಗಢದಲ್ಲಿ (Chhattisgarh) ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ದೇವರಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಆ ಮೂಲಕ ಆತ ಅಭಿಮಾನ ಮೆರೆದಿದ್ದಾನೆ.

ಹೌದು, ಛತ್ತೀಸ್‌ಗಢದ ಬಲರಾಮ್‌ಪುರದಲ್ಲಿ ದುರ್ಗೇಶ್‌ ಪಾಂಡೆ ಎಂಬ 30 ವರ್ಷದ ವ್ಯಕ್ತಿಯು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತ ಪಡೆದ ಹಿನ್ನೆಲೆಯಲ್ಲಿ ದೇವಾಲಯ ತೆರಳಿ, ಕಾಳಿ ದೇವಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂನ್‌ 4ರಂದೇ ಆತನು ಕಾಳಿ ದೇವಸ್ಥಾನಕ್ಕೆ ತೆರಳಿ, ತನ್ನ ಎಡಗೈ ಬೆರಳನ್ನು ಕತ್ತರಿಸಿ ದೇವತೆಗೆ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 290 ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರ ಖುಷಿ ತಾಳದೆ ಆತ ಬೆರಳು ಕತ್ತರಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾನೆ ಎಂದು ತಿಳಿದುಬಂದಿದೆ.

Lok Sabha Election 2024 PM Narendra Modi roadshow on April 14 route map is ready

ದೇವಸ್ಥಾನದಲ್ಲಿ ಬೆರಳು ಕತ್ತರಿಸಿಕೊಂಡ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿದೆ. ಇದರಿಂದ ಆತಂಕಕ್ಕೀಡಾದ ಕುಟುಂಬಸ್ಥರು ವ್ಯಕ್ತಿಯನ್ನು ಸಮಾರಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಕೂಡಲೇ ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಹೋಗಿ ಎಂದು ಸೂಚಿಸಿದ್ದಾರೆ. ಅದರಂತೆ, ದುರ್ಗೇಶ್‌ ಪಾಂಡೆ ಅವರನ್ನು ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ರಕ್ತಸ್ರಾವವನ್ನು ನಿಲ್ಲಿಸಿದ್ದಾರೆ. ಸದ್ಯ, ದುರ್ಗೇಶ್‌ ಪಾಂಡೆ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ನಾಳೆ ಮೋದಿ ಪ್ರಮಾಣವಚನ

ನರೇಂದ್ರ ಮೋದಿ ಅವರು ಭಾನುವಾರ (ಜೂನ್‌ 9) ಸಂಜೆ 7.15ಕ್ಕೆ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Mamata Banerjee: 15 ದಿನಗಳಲ್ಲೇ ಮೋದಿ ಸರ್ಕಾರ ಪತನ; ಸ್ಫೋಟಕ ಭವಿಷ್ಯ ನುಡಿದ ಮಮತಾ ಬ್ಯಾನರ್ಜಿ!

Continue Reading
Advertisement
Narendra Modi
ದೇಶ2 seconds ago

Narendra Modi: ಮೋದಿ ಪ್ರಮಾಣವಚನ; ಇಂದಿನ ಕಾರ್ಯಕ್ರಮ ಏನೇನು? ಹೇಗಿದೆ ಭದ್ರತೆ, ಸಿದ್ಧತೆ?

Narendra Modi
ದೇಶ30 mins ago

Narendra Modi: 3ನೇ ಬಾರಿ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ; ಇಲ್ಲಿದೆ ಬಾಲ್ಯದಿಂದ ವಿಶ್ವಗುರುತನಕದ ಜೀವನ ಚಿತ್ರಣ

5:2 Diet
ಆರೋಗ್ಯ31 mins ago

5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

IND vs PAK
ಕ್ರೀಡೆ1 hour ago

IND vs PAK: ಇಂದು ಇಂಡೋ-ಪಾಕ್​ ರೋಚಕ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಭಾರತ

Dina Bhavishya
ಭವಿಷ್ಯ2 hours ago

Dina Bhavishya : ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಇರಲಿ ಎಚ್ಚರಿಕೆ

NED vs RSA
T20 ವಿಶ್ವಕಪ್7 hours ago

NED vs RSA: ಹೋರಾಡಿ ಸೋತ ನೆದರ್ಲೆಂಡ್ಸ್​; ಹರಿಣ ಪಡೆಗೆ ಪ್ರಯಾಸದ ಗೆಲುವು

Karnataka police
ಕರ್ನಾಟಕ9 hours ago

Davanagere News: ದಾವಣಗೆರೆಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ; ನಾಲ್ವರ ಬಂಧನ

French Open Final 2024
ಪ್ರಮುಖ ಸುದ್ದಿ9 hours ago

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

Govt Employees
ಕರ್ನಾಟಕ9 hours ago

Govt Employees: ಪ್ರತಿ ಸೋಮವಾರ ಕೇಂದ್ರ ಕಚೇರಿಗಳಿಗೆ ಅಧಿಕಾರಿ, ನೌಕರರ ಹಾಜರು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Kisan Samman Nidhi
ಪ್ರಮುಖ ಸುದ್ದಿ9 hours ago

Kisan Samman Nidhi: ರೈತರಿಗೆ ಗುಡ್‌ ನ್ಯೂಸ್;‌ ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ, ಇನ್ನು ಸಿಗೋದು 8 ಸಾವಿರ ರೂ.!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌