Manipur Violence: ಮಣಿಪುರ ಉದ್ವಿಗ್ನ; ಕೇಂದ್ರ ಸಚಿವ ರಂಜನ್‌ ಸಿಂಗ್‌ ಮನೆ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ - Vistara News

ದೇಶ

Manipur Violence: ಮಣಿಪುರ ಉದ್ವಿಗ್ನ; ಕೇಂದ್ರ ಸಚಿವ ರಂಜನ್‌ ಸಿಂಗ್‌ ಮನೆ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ

Manipur Violence: ಇಂಫಾಲದಲ್ಲಿರುವ ಆರ್‌.ಕೆ. ರಂಜನ್‌ ಸಿಂಗ್‌ ಅವರ ನಿವಾಸಕ್ಕೆ ದುಷ್ಕರ್ಮಿಗಳು ಗುರುವಾರ ರಾತ್ರಿ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಪೆಟ್ರೋಲ್‌ ಬಾಂಬ್‌ ಎಸೆದ ಕಾರಣ ಮನೆ ಅಗ್ನಿಗಾಹುತಿಯಾಗಿದೆ.

VISTARANEWS.COM


on

Manipur Violence: Minister RK Ranjan Singh's house set on fire
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂಫಾಲ: ಮಣಿಪುರ ಹೊತ್ತಿ ಉರಿಯುತ್ತಿದೆ. ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೊಡುವ ವಿಚಾರದ ಕಾರಣಕ್ಕೆ ಭುಗಿಲೆದ್ದಿರುವ ಸಂಘರ್ಷವು (Manipur Violence) ಹಿಂಸಾಚಾರಕ್ಕೆ ತಿರುಗಿದೆ. ಸಿಕ್ಕ ಸಿಕ್ಕ ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚುವುದು, ಹಲ್ಲೆ ನಡೆಸುವುದು ಸೇರಿ ಹಲವು ರೀತಿಯಲ್ಲಿ ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಹಿಂಸಾಚಾರದ ಬಿಸಿ ಜನಪ್ರತಿನಿಧಿಗಳಿಗೂ ತಾಕಿದ್ದು, ಮಣಿಪುರ ರಾಜ್ಯ ಸಚಿವೆ ನೆಮ್ಚಾ ಕಿಪ್ಗೆನ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಬೆನ್ನಲ್ಲೇ, ದುಷ್ಕರ್ಮಿಗಳು ಕೇಂದ್ರ ಸಚಿವ ಆರ್‌.ಕೆ. ರಂಜನ್ ಸಿಂಗ್‌ ಅವರ ಮನೆಗೂ ಬೆಂಕಿ ಹಚ್ಚಿದ್ದಾರೆ.

ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಆರ್‌.ಕೆ.‌ ರಂಜನ್ ಸಿಂಗ್‌ ಅವರ ಇಂಫಾಲದಲ್ಲಿರುವ ನಿವಾಸಕ್ಕೆ ಗುರುವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸಚಿವರ ನಿವಾಸಕ್ಕೆ ಒಂಬತ್ತು ಸೆಕ್ಯುರಿಟಿ ಎಸ್ಕಾರ್ಟ್‌ ಸಿಬ್ಬಂದಿ, ಐವರು ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಎಂಟು ಹೆಚ್ಚುವರಿ ಗಾರ್ಡ್‌ಗಳು ಇದ್ದರೂ ದುಷ್ಕರ್ಮಿಗಳು ಸಚಿವರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಇಂಫಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದಂತಾಗಿದೆ.

ಹೊತ್ತಿ ಉರಿದ ಮನೆ

“ಗುರುವಾರ ರಾತ್ರಿ ನೂರಾರು ಜನ ಏಕಕಾಲಕ್ಕೆ ಮನೆಗೆ ನುಗ್ಗಿದರು. ಅವರು ಎಲ್ಲ ಕಡೆಯಿಂದಲೂ ಪೆಟ್ರೋಲ್‌ ಬಾಂಬ್‌ ಎಸೆದರು. ಮನೆಯ ಪ್ರಮುಖ ಗೇಟ್‌ ಸೇರಿ ಸುತ್ತಲೂ ನೆರೆದಿದ್ದ ಜನ ಪೆಟ್ರೋಲ್‌ ಬಾಂಬ್‌ ಎಸೆದರು. ಇದರಿಂದಾಗಿ ಎಷ್ಟು ಭದ್ರತಾ ಸಿಬ್ಬಂದಿ ಇದ್ದರೂ ಜನರನ್ನು ತಡೆಯಲು ಆಗಲಿಲ್ಲ. ಹಾಗಾಗಿ, ಮನೆ ಹೊತ್ತಿ ಉರಿಯುವಂತಾಯಿತು” ಎಂದು ಎಸ್ಕಾರ್ಟ್‌ ಕಮಾಂಡರ್‌ ಎಲ್‌. ದಿನೇಶ್ವರ್‌ ಸಿಂಗ್‌ ಮಾಹಿತಿ ನೀಡಿದರು. ಆದಾಗ್ಯೂ, ಮನೆಯಲ್ಲಿದ್ದ ಯಾರಿಗೂ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.

ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನ ಮಣಿಪುರಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ಸಮಿತಿಯನ್ನೂ ರಚಿಸಲಾಗಿದೆ. ಅಲ್ಲಿ ರಾಜ್ಯ ಪೊಲೀಸರು, ಕೇಂದ್ರ ಸಶಸ್ತ್ರ ಪಡೆಗಳು, ಮಿಲಿಟರಿ ಸಿಬ್ಬಂದಿ ಬಿಗಿ ಬಂದೋಬಸ್ತ್​ ಮಾಡಿದ್ದಾರೆ. ಅಷ್ಟಾದರೂ ಪ್ರತಿಭಟನೆ ನಿಲ್ಲುತ್ತಿಲ್ಲ. ಒಂದು ಸಲ ತಹಬದಿಗೆ ಬಂದಂತೆ ಕಂಡರೂ ಮತ್ತೆಮತ್ತೆ ಅಲ್ಲಲ್ಲಿ ಹಿಂಸಾಚಾರ ನಡೆಯುತ್ತಿದೆ.

ಇದನ್ನೂ ಓದಿ: ಮಣಿಪುರ ಸಚಿವೆ ಮನೆಗೂ ಬೆಂಕಿ ಇಟ್ಟ ಪ್ರತಿಭಟನಾಕಾರರು; ರಾಜ್ಯವನ್ನು ‘ಉರಿ’ಸುತ್ತಿದ್ದಾರೆ ಮೈತೈ-ಕುಕಿಗಳು

ಮಂಗಳವಾರ ಖಾಮೇನ್​ಲೋಕ್​ ಏರಿಯಾದಲ್ಲಿ ಹೊಸದಾಗಿ ಫೈರಿಂಗ್ ನಡೆದಿತ್ತು. 9 ಮಂದಿ ಮೃತಪಟ್ಟು, 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಷ್ಟೇ ಅಲ್ಲ, ಗಲಭೆಕೋರರು ಆ ಹಳ್ಳಿಯ ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಇದುವರೆಗೆ 100 ಕ್ಕೂ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ, 300ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ. ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಬಂಡುಕೋರರ ಅಟ್ಟಹಾಸ ಮುಂದುವರಿದಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Lok Sabha Election 2024

Modi 3.0 Cabinet: ಎನ್‌ಡಿಎ ಸರ್ಕಾರದಲ್ಲಿ ರಾಜ್ಯದಿಂದ ಇವರಿಗೆಲ್ಲ ಸಚಿವ ಸ್ಥಾನ ಫಿಕ್ಸ್?‌

Modi 3.0 Cabinet: ಇಂದು (ಜೂನ್‌ 9) ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತು ಕೇಳಿ ಬರುತ್ತಿದೆ. ಮೋದಿ ಅವರ ಜತೆ ಕ್ಯಾಬಿನೆಟ್ ದರ್ಜೆಯ ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯದಿಂದ ಸಂಸದರೂ ಈ ಪಟ್ಟಿಗೆ ಸೇರುವುದು ಖಚಿತ. 4+1 ಫಾರ್ಮುಲಾದ ಪ್ರಕಾರ ಒಟ್ಟು ಐವರು ಮೋದಿ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆ ಇದೆ.

VISTARANEWS.COM


on

Modi 3.0 Cabinet
Koo

ಬೆಂಗಳೂರು: ಬಹುಮತದೊಂದಿಗೆ ಎನ್‌ಡಿಎ (NDA) ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಇಂದು (ಜೂನ್‌ 9) ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್‌ಡಿಎ ಬಯಸಿದೆ ಎನ್ನಲಾಗಿದೆ. ಹಾಗಾದರೆ ಸಚಿವ ಸ್ಥಾನದ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿ ಇಲ್ಲಿದೆ (Modi 3.0 Cabinet).

ಮೋದಿ ಅವರ ಜತೆ ಕ್ಯಾಬಿನೆಟ್ ದರ್ಜೆಯ ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯದಿಂದ ಸಂಸದರೂ ಈ ಪಟ್ಟಿಗೆ ಸೇರುವುದು ಖಚಿತ. 4+1 ಫಾರ್ಮುಲಾದ ಪ್ರಕಾರ ಒಟ್ಟು ಐವರು ಮೋದಿ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆ ಇದೆ. ಮಾಜಿ ಸಿಎಂ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗುವುದು ಪಕ್ಕಾ ಎನ್ನಲಾಗಿದೆ. ಇವರ ಜತೆಗೆ ಪ್ರಹ್ಲಾದ ಜೋಶಿ ಅವರಿಗೂ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗಲಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರೂ ಸಚಿವರಾಗಿ ಮುಂದುವರಿಯಲಿದ್ದು, ಕರ್ನಾಟಕದ ಕೋಟಾದಲ್ಲಿ ಸಚಿವ ಸ್ಥಾನ ಫಿಕ್ಸ್ ಎನ್ನುವ ಮಾತು ಕೇಳಿ ಬಂದಿದೆ. ಇನ್ನೊಂದು ಒಂದು ಸ್ಥಾನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಡಾ.ಮಂಜುನಾಥ್ ಅವರಿಗೆ ಲಭಿಸುವ ಸಾಧ್ಯತೆ ಇದೆ.

ಮತ್ತೊಂದು ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿದೆ. ಬಹುತೇಕ ಮಾಜಿ ಸಿಎಂ ಬಸವರಾಜ ಬೊಮ್ಮಯಿ ಅವರಿಗೆ ಇದು ಒಲಿಯುವ ಸಾಧ್ಯತೆ ಇದೆ. ಈ ನಡುವೆ ನಾಲ್ಕು ಬಾರಿ ಸಂಸದರಾಗಿರುವ ಬಿ.ವೈ.ವಿಜಯೇಂದ್ರ ಅವರಿಂದಲೂ ಸಚಿವ ಸ್ಥಾನ ಪಡೆಯುವ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ. ಇನ್ನೂ ಒಂದು ಸ್ಥಾನ ಹೆಚ್ಚು ಸಿಕ್ಕಿದರೆ ಬಹುತೇಕ ದಲಿತ ಕೋಟಾದಲ್ಲಿ ಗೋವಿಂದ ಕಾರಜೋಳ ಇಲ್ಲವೇ ರಮೇಶ್ ಜಿಗಜಿಣಿಗೆ ಲಕ್ ಹೊಡೆಯಲಿದೆ ಎನ್ನುವ ಚರ್ಚೆಯೂ ಆರಂಭವಾಗಿದೆ.

ಇನ್ನು ಹಿರಿಯ ನಾಯಕರಾದ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ ಮತ್ತು ಡಾ.ಸುಧಾಕರ್‌ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇಲ್ಲ. ಹೀಗಾಗಿ ಸದ್ಯ ಯಾರೆಲ್ಲ ಸಚಿವರಾಗುತ್ತಾರೆ ಎನ್ನುವ ಕುತೂಹಲ ಮುಂದುವರಿದಿದೆ.

ಇದನ್ನೂ ಓದಿ: Narendra Modi: ‌ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ

ಎನ್‌ಡಿಎ ಮೈತ್ರಿಕೂಟದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ (ಜೂನ್‌ 7) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಬೆಂಬಲ ನೀಡಿರುವ ಪತ್ರದೊಂದಿಗೆ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾದ ಅವರು ಹಕ್ಕು ಮಂಡಿಸಿದ್ದಾರೆ. ಇನ್ನು ಸತತ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿ ಅವರಿಗೆ ದ್ರೌಪದಿ ಮುರ್ಮು ಅವರು ಸಕ್ಕರೆ ಮಿಶ್ರಣ ಆಗಿರುವ ಮೊಸರನ್ನು ತಿನ್ನಿಸಿ, ಶುಭ ಕೋರಿದ್ದಾರೆ.

Continue Reading

ದೇಶ

Modi 3.0 Cabinet: ಮೋದಿ ಪ್ರಮಾಣವಚನ; ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿ ಸಾಧ್ಯತೆ

Modi 3.0 Cabinet: ಇನ್ನು ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾದ ತೃಣಮೂಲಕ ಕಾಂಗ್ರೆಸ್‌ ಪ್ರಧಾನಿ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ರಾಜ್ಯಸಭಾ ಪ್ರತಿಪಕ್ಷ ನಾಯಕನಾಗಿ ಖರ್ಗೆ ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.

VISTARANEWS.COM


on

Modi 3.0 Cabinet
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯ ಫಲಿತಾಂಶ ಹೊರಬಿದ್ದಿದ್ದು, ಸ್ಪಷ್ಟ ಬಹುಮತದ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಮೂರನೇ ಬಾರಿ ಗದ್ದುಗೆ ಏರಲಿರುವ ನರೇಂದ್ರ ಮೋದಿ (Narendra Modi) ಇಂದು (ಜೂನ್‌ 9) ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ (Modi 3.0 Cabinet). ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳ ನಾಯಕರು ಭಾಗಿಯಾಗಲಿದ್ದಾರೆ. ಇದೀಗ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಕೂಡ ಬಾಗಿಯಾಗಲಿದ್ದಾರೆ ಎಂಬ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ.

ಇನ್ನು ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾದ ತೃಣಮೂಲಕ ಕಾಂಗ್ರೆಸ್‌ ಪ್ರಧಾನಿ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ರಾಜ್ಯಸಭಾ ಪ್ರತಿಪಕ್ಷ ನಾಯಕನಾಗಿ ಖರ್ಗೆ ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಏಳು ವಿದೇಶಿ ನಾಯಕರು ಸೇರಿದಂತೆ ಒಟ್ಟು 8,000 ಗಣ್ಯರು ಉಪಸ್ಥಿತರಿರಲಿದ್ದಾರೆ. ಇನ್ನು ಗಣ್ಯರಲ್ಲಿ ವಿವಿಧ ವೃತ್ತಿಪರರು, ಸಾಂಸ್ಕೃತಿಕ ಕಲಾವಿದರು ಸೇರಿದ್ದಾರೆ. ಸಂಜೆ 7:31ರ ಹೊತ್ತಿಗೆ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಮೊದಲು ಮಹಾತ್ಮ ಗಾಂಧೀಜಿ ಅವರ ಸಮಾಧಿಸ್ಥಳವಾದ ರಾಜ್‌ಘಾಟ್‌ಗೆ ತೆರಳಿ ನಮನ ಸಲ್ಲಿಸಲಿದ್ದಾರೆ. ಇದಾದ ನಂತರ ತಮ್ಮ ರಾಜಕೀಯ ಗುರುವಾದ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳವಾದ ಸದೈವ ಅಟಲ್‌ಗೆ ಭೇಟಿ ನೀಡಿ, ಅವರಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ.

7 ವಿದೇಶಿ ನಾಯಕರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Narendra Modi: ‌ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ

ಸದ್ಯ ಯಾರಿಗೆಲ್ಲ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ದೊರೆಯಲಿದೆ ಎನ್ನುವ ಚರ್ಚೆ ಆರಂಭವಾಗಿದೆ. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಎನ್‌ಡಿಎ ಮೈತ್ರಿಕೂಟದ ಹಲವು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಜತೆಗೆ ಟಿಡಿಪಿಯ ರಾಮ್‌ ಮೋಹನ್‌ ನಾಯ್ಡು, ಲಾಲನ್‌ ಸಿಂಗ್‌, ಸಂಜಯ್‌ ಝಾ, ಜೆಡಿಯುನ ರಾಮನಾಥ್‌ ಠಾಕೂರ್‌, ಲೋಕ ಜನ ಶಕ್ತಿ ಪಕ್ಷದ ಚಿರಾಗ್‌ ಪಾಸ್ವಾನ್‌, ಕರ್ನಾಟಕದ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೇರಿ ಹಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ಮನರಂಜನೆಯ ಮಹಾ ದೊರೆ, ಕನಸುಗಾರನ ನಿರ್ಗಮನ

ರಾಜಮಾರ್ಗ ಅಂಕಣ: ಹಳ್ಳಿಯ ಬಡ ಕುಟುಂಬವೊಂದರಿಂದ ಬಂದು, ಯಾವುದೇ ಗಾಡ್ ಫಾದರ್ ಇಲ್ಲದೆ ಕೋಟಿಗಟ್ಟಲೆ ಮೌಲ್ಯದ ಮನರಂನಾ ಸಾಮ್ರಾಜ್ಯವನ್ನು ಸೃಷ್ಟಿಸಿದ ಧೀಮಂತ ರಾಮೋಜಿ ರಾವ್.‌ ಹೈದರಾಬಾದ್‌ನ ಫಿಲಂ ಸಿಟಿ ಅವರ ಕರ್ತೃತ್ವ ಶಕ್ತಿಯ ದ್ಯೋತಕ.

VISTARANEWS.COM


on

ರಾಜಮಾರ್ಗ ಅಂಕಣ ramoji rao
Koo

ಒಬ್ಬ ವ್ಯಕ್ತಿ – ನೂರಾರು ಸಂಸ್ಥೆಗಳು, ಅವರು ರಾಮೋಜಿ ರಾವ್

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಜಗತ್ತಿನ ಅತೀ ದೊಡ್ಡ ಫಿಲಂ ಸಿಟಿ (Film City) ಕಟ್ಟಿದವರು ಅವರು. ಹೆಸರು ರಾಮೋಜಿ ರಾವ್ (Ramoji Rao).

ನಿನ್ನೆ ಹೈದರಾಬಾದ್ (Hyderabad) ನಗರದಿಂದ ಬಂದ ಒಂದು ಶಾಕಿಂಗ್ ನ್ಯೂಸ್ ಭಾರತದ ಕೋಟಿ ಕೋಟಿ ಸಿನೆಮಾ ಅಭಿಮಾನಿಗಳನ್ನು ತಲ್ಲಣ ಮಾಡಿ ಹೋಯಿತು. ಅದು ರಾಮೋಜಿ ರಾವ್ ಅವರ ನಿರ್ಗಮನ.

ನನ್ನ ತರಬೇತಿ ಮತ್ತು ಭಾಷಣಗಳಲ್ಲಿ ಅತೀ ಹೆಚ್ಚು ಉಲ್ಲೇಖ ಪಡೆದ ಒಬ್ಬ ಲೆಜೆಂಡ್ ಇದ್ದರೆ ಅದು ರಾಮೋಜಿ ರಾವ್. ಅವರನ್ನು ಅವರದ್ದೇ ಸ್ಟುಡಿಯೋದಲ್ಲಿ ಭೇಟಿ ಮಾಡಿದ ಕ್ಷಣಗಳು ನನಗೆ ಪ್ರೇರಣಾದಾಯಕ. ಅವರು ತನ್ನ 87 ವರ್ಷಗಳ ಬದುಕಿನಲ್ಲಿ ಹುಟ್ಟು ಹಾಕಿದ್ದು ನೂರಾರು ಸಂಸ್ಥೆಗಳನ್ನು. ಅವರು ಬಿಟ್ಟು ಹೋದ ಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವೇ ಇಲ್ಲ.

ಶೂನ್ಯದಿಂದ ಆರಂಭ

ಆಂಧ್ರಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಒಂದು ಕೃಷಿಕ ಕುಟುಂಬದಿಂದ ಬಂದವರು ರಾಮೋಜಿ ರಾವ್. ಓದಿದ್ದು ವಿಜ್ಞಾನ ಪದವಿ. ಬಾಲ್ಯದಲ್ಲಿ ಹೈದರಾಬಾದನ ಗಲ್ಲಿಗಳಲ್ಲಿ ಬೈಸಿಕಲ್ ಹಿಂದೆ ಉಪ್ಪಿನಕಾಯಿ ಭರಣಿಗಳನ್ನು ಕಟ್ಟಿಕೊಂಡು ಮನೆಮನೆಗೆ ಮಾರಿ ಒಂದಿಷ್ಟು ದುಡ್ಡು ಸಂಪಾದನೆ ಮಾಡಿದ ಅನುಭವ ಅವರದ್ದು. ಮುಂದೆ ಅದೇ ವ್ಯವಹಾರವು ‘ಪ್ರಿಯಾ ಉಪ್ಪಿನಕಾಯಿ ‘ ಎಂಬ ಉದ್ಯಮದ ರೂಪವನ್ನು ತಾಳಿತು. ಅವರು ಕೈ ಹಾಕಿದ ಪ್ರತೀ ಒಂದು ಕ್ಷೇತ್ರವನ್ನೂ ಉದ್ಯಮವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ರಿಸ್ಕ್ ತೆಗೆದುಕೊಳ್ಳುವ ಶಕ್ತಿ, ಪಕ್ಕಾ ವ್ಯವಹಾರ ಪ್ರಜ್ಞೆ, ಮಾರ್ಕೆಟಿಂಗ್ ಕೌಶಲಗಳು, ಶಿಸ್ತಿನ ಜೀವನ ಕ್ರಮ ಮುಂದೆ ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು. ಮುಂದೆ ರಮಾದೇವಿ ಎಂಬವರನ್ನು ಮದುವೆ ಆದ ನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ.

ಮಾರ್ಗದರ್ಶಿ ಚಿಟ್ ಫಂಡ್ ಸ್ಥಾಪನೆ

ಆಂಧ್ರಪ್ರದೇಶದ ಬ್ಯಾಂಕಿಂಗ್ ಸೆಕ್ಟರಗೆ ಸವಾಲಾಗಿ 1962ರಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಎಂಬ ಹಣಕಾಸು ಸಂಸ್ಥೆಯನ್ನು ಅವರು ಆರಂಭ ಮಾಡಿದರು. ಒಂದೊಂದು ರೂಪಾಯಿಯನ್ನೂ ಜಾಗ್ರತೆಯಿಂದ ಬಳಸುವ ಅವರ ಜಾಣ್ಮೆಯು ಆ ಸಂಸ್ಥೆಯನ್ನು ದಕ್ಷಿಣ ಭಾರತದ ಮಹೋನ್ನತ ಹಣಕಾಸು ಸಂಸ್ಥೆಯಾಗಿ ಮಾಡಿತು. ಇಂದು ಅದು ನೂರಾರು ಶಾಖೆಗಳ ಮೂಲಕ 10,000 ಕೋಟಿ ರೂ.
ಬಂಡವಾಳದ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಮಾಧ್ಯಮದ ದೈತ್ಯ – ಈ ನಾಡು ಪತ್ರಿಕೆ

ಒಂದು ಉದ್ಯಮದಲ್ಲಿ ಬಂದ ಲಾಭವನ್ನು ಇನ್ನೊಂದು ಉದ್ಯಮದಲ್ಲಿ ತೊಡಗಿಸುವುದು ರಾಮೋಜಿ ರಾವ್ ಅವರ ಪಾಲಿಸಿ. ಸಾಲ ಮಾಡಿ ಬಿಸಿನೆಸ್ ಮಾಡಬಾರದು ಎಂದವರು ಹೇಳುತ್ತಿದ್ದರು. 1974ರಲ್ಲಿ ಅವರು ಆಂಧ್ರಪ್ರದೇಶದಲ್ಲಿ ʼಈ ನಾಡು’ (Eenadu news paper) ಎಂಬ ದಿನಪತ್ರಿಕೆಯನ್ನು ಆರಂಭ ಮಾಡಿದರು. ಅವರು ಪತ್ರಿಕೋದ್ಯಮದ ಯಾವ ಪಾಠವನ್ನೂ ಕಲಿತಿರಲಿಲ್ಲ. ಆದರೆ ಜನರಿಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಕೆಲವೇ ವರ್ಷಗಳಲ್ಲಿ ಅದು ತೆಲುಗಿನ ನಂಬರ್ ಒನ್ ಪತ್ರಿಕೆ ಆಗಿ ಬೆಳೆಯಿತು. ಅದೀಗ 23 ಪುರವಣಿಗಳನ್ನು ಹೊಂದಿದ್ದು ಲಕ್ಷಾಂತರ ಓದುಗರನ್ನು ತಲುಪುತ್ತಿದೆ. ಎಲ್ಲಾ ಕಡೆಗಳಲ್ಲಿ ಮಿಂಚಿದ್ದು ರಾಮೋಜಿ ರಾವ್ ಅವರ ವ್ಯವಹಾರ ಕುಶಲತೆ ಮತ್ತು ದಣಿವರಿಯದ ದುಡಿಮೆ.

ರಾಜಮಾರ್ಗ ಅಂಕಣ ramoji rao 2

ನೂರಾರು ಸಂಸ್ಥೆಗಳು ಮತ್ತು ಉದ್ಯಮಗಳು

ಅವರು ಮಹಾ ಶಿಸ್ತಿನ ಮನುಷ್ಯ. ದಿನವೂ 18 ಘಂಟೆಗಳ ದುಡಿತ. ಒಂದು ನಿಮಿಷ ವ್ಯರ್ಥ ಮಾಡುವುದು ಅವರಿಗೆ ಇಷ್ಟ ಆಗುವುದಿಲ್ಲ. ಹರಟೆ, ಗಾಸಿಪ್ಸ್ ಇಲ್ಲವೇ ಇಲ್ಲ. ನೆಗೆಟಿವ್ ವ್ಯಕ್ತಿಗಳನ್ನು ಹತ್ತಿರ ಸೇರಿಸಿಕೊಳ್ಳುವುದೇ ಇಲ್ಲ. ಪರಿಣಾಮವಾಗಿ ಅವರು ಒಬ್ಬ ಯಶಸ್ವೀ ಉದ್ಯಮಿಯಾಗಿ ಎಮರ್ಜ್ ಆದರು. ಅವರ ಪತ್ನಿ ರಮಾದೇವಿ ಗಂಡನ ಬಲಗೈ ಆಗಿ ನಿಂತು ವ್ಯವಹಾರವನ್ನು ಬೆಳೆಸಿದರು. ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ರಮಾದೇವಿ ಶಿಕ್ಷಣ ಸಂಸ್ಥೆಗಳು, ಕಲಾಂಜಲಿ ಶಾಪಿಂಗ್ ಮಾಲ್ಸ್, ಪ್ರಿಯಾ ಉಪ್ಪಿನಕಾಯಿ …..ಹೀಗೆ ಅವರು ನೂರಾರು ಉದ್ಯಮಗಳನ್ನು ಸ್ಥಾಪನೆ ಮಾಡಿದರು. ಎಲ್ಲವನ್ನೂ ಗೆಲ್ಲಿಸಿದರು.

ರಾಮೋಜಿ ಫಿಲ್ಮ್ ಸಿಟಿ – ಇದು ಮ್ಯಾಗ್ನಮೋಪಸ್!

ರಾಜಮಾರ್ಗ ಅಂಕಣ ramoji rao

ರಾಮೋಜಿ ರಾವ್ ಅವರನ್ನು ಇಂದು ನಾವು ಅಗತ್ಯವಾಗಿ ನೆನಪಿಸಿಕೊಳ್ಳಬೇಕಾದದ್ದು ಈ ಫಿಲ್ಮ್ ಸ್ಟುಡಿಯೋ ಮೂಲಕ. ಹೈದರಾಬಾದ್ ನಗರದ ಹೃದಯ ಭಾಗದಲ್ಲಿ 1666 ಎಕರೆ ಜಾಗವನ್ನು ಅವರು ಖರೀದಿಸಿ ಅದರಲ್ಲಿ ತನ್ನ ಎಲ್ಲ ಕನಸುಗಳನ್ನು ಧಾರೆ ಎರೆದರು. ಎತ್ತರವಾದ ಪರ್ವತಗಳು, ಧುಮ್ಮಿಕ್ಕುವ ಜಲಪಾತಗಳು, ವಿಸ್ತಾರವಾದ ಬೀದಿಗಳು, ಹಸಿರು ಹೊದ್ದು ಮಲಗಿದ ಮೈದಾನಗಳು, ದಟ್ಟವಾದ ಅರಣ್ಯಗಳು, ಅರಮನೆಗಳು, ದೇಗುಲಗಳು ಕೋಟೆಗಳು…..ಹೀಗೆ ಎಲ್ಲವನ್ನೂ ಕೃತಕವಾಗಿ ನಿರ್ಮಿಸಿದರು. ಒಂದು ಚಿತ್ರ ನಿರ್ಮಾಣಕ್ಕೆ ಏನೆಲ್ಲ ಬೇಕೋ (ಹೊರಾಂಗಣ, ಒಳಾಂಗಣ, ಬೆಳಕು, ಸ್ಟುಡಿಯೋ, ಚಿತ್ರೀಕರಣ ಘಟಕ, ಟೆಕ್ನಿಕಲ್ ಸ್ಟಾಫ್) ಎಲ್ಲವನ್ನೂ ಒದಗಿಸಿದರು. ಒಬ್ಬ ನಿರ್ಮಾಪಕ ಮತ್ತು ನಿರ್ದೇಶಕ ದುಡ್ಡು ಮತ್ತು ಸ್ಟೋರಿ ತೆಗೆದುಕೊಂಡು ಅಲ್ಲಿಗೆ ಬಂದರೆ ಇಡೀ ಸಿನಿಮಾ ಶೂಟ್ ಮಾಡಿ, ಎಡಿಟಿಂಗ್ ಮಾಡಿ, ಮ್ಯೂಸಿಕ್, ಕಲರಿಂಗ್, VFX ಮುಗಿಸಿ ಸಿನಿಮಾ ತೆಗೆದುಕೊಂಡು ಹೋಗುವ ವ್ಯವಸ್ಥೆ ಅಲ್ಲಿ ಅವರು ಮಾಡಿದರು!

ಅದರ ಪರಿಣಾಮವಾಗಿ ಭಾರತದ ಸಾವಿರಾರು ಸಿನೆಮಾಗಳು ಅಲ್ಲಿ ನಿರ್ಮಾಣವಾದವು. ಬಾಹುಬಲಿ ( ಭಾಗ 1 ಮತ್ತು 2), ಕೆಜಿಎಫ್ ( ಭಾಗ 1 ಮತ್ತು 2), ಕ್ರಿಶ್, ರಾಜಕುಮಾರ ಮೊದಲಾದ ಮಹೋನ್ನತ ಸಿನೆಮಾಗಳು ಶೂಟಿಂಗ್ ಆದದ್ದು ಇದೇ ಸ್ಟುಡಿಯೋ ಒಳಗೆ! ನೂರಾರು ತೆಲುಗು, ಕನ್ನಡ, ಹಿಂದೀ ಧಾರಾವಾಹಿಗಳು ಅಲ್ಲಿ ಹುಟ್ಟು ಪಡೆದವು.

ರಾಮೋಜಿ ರಾವ್ ಅವರೇ ʼಉಷಾಕಿರಣ ಮೂವೀಸ್’ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪನೆ ಮಾಡಿ ನೂರಾರು ತೆಲುಗು, ತಮಿಳು, ಹಿಂದಿ, ಕನ್ನಡ ಸಿನಿಮಾಗಳನ್ನು ನಿರ್ಮಿಸಿದರು. ಸಿನೆಮಾ ಹಂಚಿಕೆ ಮಾಡಿದರು. ಆ ಸ್ಟುಡಿಯೋವನ್ನು ಒಂದು ಪ್ರವಾಸೀ ತಾಣವಾಗಿ ಕೂಡ ಅಭಿವೃದ್ಧಿ ಪಡಿಸಿದರು. ಈಗ ವರ್ಷಕ್ಕೆ ಕನಿಷ್ಟ ಒಂದು ಕೋಟಿ ಪ್ರವಾಸಿಗರು ಅಲ್ಲಿ ಭೇಟಿ ಕೊಡುತ್ತಿದ್ದಾರೆ.

ವರ್ಷದ 365 ದಿನವೂ ಸಿನೆಮಾ ಚಟುವಟಿಕೆ ಹೊಂದಿರುವ ಸ್ಟುಡಿಯೋ ಅದು. ಜೊತೆಗೆ ಅದು ಹಾಲಿವುಡ್ ಮೀರಿದ ವೈಭವವನ್ನು ಹೊಂದಿದೆ. ರಾಮೋಜಿ ಫಿಲ್ಮ್ ಸ್ಟುಡಿಯೋ ಇಂದು ಜಗತ್ತಿನ ಅತೀ ದೊಡ್ಡ ಫಿಲ್ಮ್ ಸ್ಟುಡಿಯೋ ಎಂದು ಗಿನ್ನೆಸ್ ದಾಖಲೆ ಮಾಡಿದೆ!

ಮನರಂಜನೆಯ ಮಹಾ ದೊರೆ!

ಎಂಬತ್ತರ ದಶಕದಲ್ಲಿ ಭಾರತದಲ್ಲಿ ದೂರದರ್ಶನ ಎಂಬ ಒಂದೇ ಟಿವಿ ಚಾನೆಲ್ ಇತ್ತು. ಮನರಂಜನೆಗಾಗಿ ಮೀಸಲಾದ ಯಾವುದೇ ಟಿವಿ ಚಾನೆಲ್ ಇರಲಿಲ್ಲ. ಈ ಕೊರತೆಯನ್ನು ಮನಗಂಡ ರಾಮೋಜಿ ರಾವ್ ʼಈ ಟಿವಿ’ ಎಂಬ ಮಹಾ ಟಿವಿ ಚಾನೆಲ್ ಆರಂಭ ಮಾಡಿದರು. ಅದರಲ್ಲಿ ಸಮೃದ್ಧವಾದ ಮನರಂಜನೆ, ಧಾರಾವಾಹಿ, ಸಂಗೀತ, ನೃತ್ಯ, ರಿಯಾಲಿಟಿ ಶೋಗಳನ್ನು ಹೆಣೆದರು. ಅದು ಅತ್ಯಂತ ಜನಪ್ರಿಯವಾಯಿತು. ಇಂದು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿಯಲ್ಲಿ ಈ ಟಿವಿ ವಾಹಿನಿ ಇದೆ. ರಾಮೋಜಿ ರಾವ್ ಈ ಟಿವಿಯನ್ನು ಬಾನೆತ್ತರಕ್ಕೆ ಬೆಳೆಸಿದರು.

ರಾಜಕೀಯ ಪ್ರವೇಶ – ತೆಲುಗು ದೇಶಂ ಪಕ್ಷದ ಮಾರ್ಗದರ್ಶಕ

ಇಂದು ಅವರ ಉದ್ಯಮಗಳ ಮುಖಬೆಲೆಯು 37,583 ಕೋಟಿ ರೂಪಾಯಿ ಎಂದು ಅಂದಾಜು! ಶೂನ್ಯದಿಂದ ಆರಂಭ ಮಾಡಿ ಇಷ್ಟು ಎತ್ತರಕ್ಕೆ ಏರಿದ ಇನ್ನೊಬ್ಬ ಉದ್ಯಮಿ ನಮಗೆ ಭಾರತದಲ್ಲಿ ದೊರೆಯುವುದಿಲ್ಲ. ಅದೂ ಯಾವುದೇ ಗಾಡ್ ಫಾದರ್ ಇಲ್ಲದೆ! ಅವರು ಕಟ್ಟಿದ ಒಂದು ಉದ್ಯಮವೂ ನಷ್ಟ ಕಂಡಿಲ್ಲ ಅನ್ನೋದು ಅವರ ದುಡಿಮೆಗೆ ಒಂದು ತುರಾಯಿ.

ಇಷ್ಟೆಲ್ಲ ಸಾಧನೆ ಮಾಡಿದ ನಂತರ ರಾಜಕೀಯಕ್ಕೆ ಬಾರದಿದ್ದರೆ ಹೇಗೆ? ಎಂಬತ್ತರ ದಶಕದಲ್ಲಿ ತೆಲುಗು ಲೆಜೆಂಡ್ ನಟ NTR ತೆಲುಗು ದೇಶಂ (Telugu Desam party) ಪಕ್ಷವನ್ನು ಸ್ಥಾಪನೆ ಮಾಡಿದಾಗ ಆ ಪಕ್ಷದ ಮೆಂಟರ್ ಆಗಿ ನಿಂತವರು ರಾಮೋಜಿ ರಾವ್. ಹಲವು ಬಾರಿ ಅವರ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಅಧಿಕಾರದ ಆಸೆ ಮಾಡದೇ ತೆರೆಯ ಮರೆಯಲ್ಲಿ ನಿಂತರು. ಕಿಂಗ್ ಮೇಕರ್ ಆದರು. ಸಾಯುವ ತನಕವೂ ತೆಲುಗು ದೇಶಂ ಪಕ್ಷದ ನಾಯಕರಲ್ಲಿ ಒಬ್ಬರಾಗಿ ಅದನ್ನು ಸ್ವಾಭಿಮಾನಿ ಪಕ್ಷವಾಗಿ ಬೆಳೆಸಿದರು.

ಪದ್ಮವಿಭೂಷಣ ಸೇರಿದಂತೆ ನೂರಾರು ಪ್ರಶಸ್ತಿಗಳು

ಭಾರತದ ಎರಡನೇ ಅತೀ ದೊಡ್ಡ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ ಸೇರಿದಂತೆ, ಸಿನೆಮಾ ನಿರ್ಮಾಣಕ್ಕೆ ರಾಷ್ಟ್ರ ಪ್ರಶಸ್ತಿ, ತೆಲುಗಿನ ಗೌರವದ ನಂದಿ ಪ್ರಶಸ್ತಿ, ಹತ್ತಾರು ಫಿಲಂ ಫೇರ್ ಪ್ರಶಸ್ತಿಗಳು ಅವರಿಗೆ ದೊರೆತಿವೆ. ಅವರೊಬ್ಬ ಶಿಸ್ತಿನ ಮನುಷ್ಯ. ಪ್ರಚಾರದಿಂದ ದೂರ ಉಳಿದ ಕಾಯಕ ಯೋಗಿ. ಯಾವಾಗಲೂ ಬಿಳಿ ಬಟ್ಟೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ನಗುಮುಖದ ವ್ಯಕ್ತಿತ್ವ.

ನಿನ್ನೆ (ಜೂನ್ 8) ಅವರ ನಿರ್ಗಮನದಿಂದ ಭಾರತದ ಅತೀ ಶ್ರೇಷ್ಟವಾದ ಉದ್ಯಮಿ, ಸಿನೆಮಾ ನಿರ್ಮಾಪಕ, ಜಗತ್ತಿನ ಅತೀ ದೊಡ್ಡ ಸ್ಟುಡಿಯೋ ಸ್ಥಾಪಕ, ಈ ಟಿವಿ, ಈ ನಾಡು ಸಂಸ್ಥಾಪಕ, ಮಹೋನ್ನತ ಮನೋರಂಜನಾ ದೊರೆ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

Continue Reading

Lok Sabha Election 2024

Modi 3.0 Cabinet: ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಪೇಜಾವರ ಶ್ರೀ

Modi 3.0 Cabinet: ಮೂರನೇ ಬಾರಿ ಗದ್ದುಗೆ ಏರಲಿರುವ ನರೇಂದ್ರ ಮೋದಿ ಇಂದು (ಜೂನ್‌ 9) ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರೂ ಭಾಗವಹಿಸಲಿದ್ದು, ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಶನಿವಾರ ಕಿರಿಯ ಪೇಜಾವರ ಶ್ರೀಗಳಿಗೆ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಆಹ್ವಾನ ಲಭಿಸಿತ್ತು. ತಡರಾತ್ರಿ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಆಹ್ವಾನಿಸಲಾಗಿತ್ತು. ಹೀಗಾಗಿ ಇಂದು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿದ್ದಾರೆ.

VISTARANEWS.COM


on

Modi 3.0 Cabinet
Koo

ಉಡುಪಿ: ಲೋಕಸಭೆ ಚುನಾವಣೆ(Lok Sabha Election 2024)ಯ ಫಲಿತಾಂಶ ಹೊರಬಿದ್ದಿದ್ದು, ಸ್ಪಷ್ಟ ಬಹುಮತದ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಮೂರನೇ ಬಾರಿ ಗದ್ದುಗೆ ಏರಲಿರುವ ನರೇಂದ್ರ ಮೋದಿ (Narendra Modi) ಇಂದು (ಜೂನ್‌ 9) ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ (Modi 3.0 Cabinet). ಈ ಕಾರ್ಯಕ್ರಮದಲ್ಲಿ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwa Prasanna Swamiji) ಅವರೂ ಭಾಗವಹಿಸಲಿದ್ದು, ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ಶನಿವಾರ ಕಿರಿಯ ಪೇಜಾವರ ಶ್ರೀಗಳಿಗೆ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಆಹ್ವಾನ ಲಭಿಸಿತ್ತು. ತಡರಾತ್ರಿ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಆಹ್ವಾನಿಸಲಾಗಿತ್ತು. ಹೀಗಾಗಿ ಇಂದು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 11.30ಕ್ಕೆ ಹೊರಡಲಿರುವ ವಿಮಾನದಲ್ಲಿ ಶ್ರೀಗಳು ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೇಜಾವರ ಶ್ರೀಗಳು ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್​ನ ಸದಸ್ಯರಾಗಿದ್ದಾರೆ. ದೇಗುಲ ನಿರ್ಮಾಣ ಕಾರ್ಯ ಹಾಗೂ ಯೋಜನೆಯಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ. ಅವರು ಜನವರಿಯಲ್ಲಿ ನಡೆದ ಪ್ರಾಣ ಪ್ರತಿಷ್ಠೆ ಹಾಗೂ ದೇಗುಲದ ಧಾರ್ಮಿಕ ವಿಧಿ, ವಿಧಾನಗಳಲ್ಲೂ ಮಾರ್ಗದರ್ಶನ ನೀಡಿದ್ದರು.

ಸಿದ್ಧತೆ ಪೂರ್ಣ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಏಳು ವಿದೇಶಿ ನಾಯಕರು ಸೇರಿದಂತೆ ಒಟ್ಟು 8,000 ಗಣ್ಯರು ಉಪಸ್ಥಿತರಿರಲಿದ್ದಾರೆ. ಇನ್ನು ಗಣ್ಯರಲ್ಲಿ ವಿವಿಧ ವೃತ್ತಿಪರರು, ಸಾಂಸ್ಕೃತಿಕ ಕಲಾವಿದರು ಸೇರಿದ್ದಾರೆ. ಸಂಜೆ 7:31ರ ಹೊತ್ತಿಗೆ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಮೊದಲು ಮಹಾತ್ಮ ಗಾಂಧೀಜಿ ಅವರ ಸಮಾಧಿಸ್ಥಳವಾದ ರಾಜ್‌ಘಾಟ್‌ಗೆ ತೆರಳಿ ನಮನ ಸಲ್ಲಿಸಲಿದ್ದಾರೆ. ಇದಾದ ನಂತರ ತಮ್ಮ ರಾಜಕೀಯ ಗುರುವಾದ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳವಾದ ಸದೈವ ಅಟಲ್‌ಗೆ ಭೇಟಿ ನೀಡಿ, ಅವರಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ.

7 ವಿದೇಶಿ ನಾಯಕರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Modi 3.0 Cabinet: ಮೋದಿ 3ನೇ ಅವಧಿಯಲ್ಲಿ ಯಾರಿಗೆಲ್ಲ ಮಂತ್ರಿ ಭಾಗ್ಯ? ರೇಸ್‌ನಲ್ಲಿ ಯಾರಿದ್ದಾರೆ? ಇಲ್ಲಿದೆ ಪಟ್ಟಿ

ಸದ್ಯ ಯಾರಿಗೆಲ್ಲ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ದೊರೆಯಲಿದೆ ಎನ್ನುವ ಚರ್ಚೆ ಆರಂಭವಾಗಿದೆ. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಎನ್‌ಡಿಎ ಮೈತ್ರಿಕೂಟದ ಹಲವು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಜತೆಗೆ ಟಿಡಿಪಿಯ ರಾಮ್‌ ಮೋಹನ್‌ ನಾಯ್ಡು, ಲಾಲನ್‌ ಸಿಂಗ್‌, ಸಂಜಯ್‌ ಝಾ, ಜೆಡಿಯುನ ರಾಮನಾಥ್‌ ಠಾಕೂರ್‌, ಲೋಕ ಜನ ಶಕ್ತಿ ಪಕ್ಷದ ಚಿರಾಗ್‌ ಪಾಸ್ವಾನ್‌, ಕರ್ನಾಟಕದ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೇರಿ ಹಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

Continue Reading
Advertisement
ಸೈಬರ್‌ ಸೇಫ್ಟಿ ಅಂಕಣ cyber safety column 2
ಅಂಕಣ18 mins ago

ಸೈಬರ್‌ ಸೇಫ್ಟಿ ಅಂಕಣ: ಭಾರತದ ಭವಿಷ್ಯಕ್ಕೆ ಬ್ಲಾಕ್‌ಚೈನ್‌ನ ಬೆನ್ನೆಲುಬು

Modi 3.0 Cabinet
Lok Sabha Election 202420 mins ago

Modi 3.0 Cabinet: ಎನ್‌ಡಿಎ ಸರ್ಕಾರದಲ್ಲಿ ರಾಜ್ಯದಿಂದ ಇವರಿಗೆಲ್ಲ ಸಚಿವ ಸ್ಥಾನ ಫಿಕ್ಸ್?‌

Pawan Kalyan Thammudu Re release
ಟಾಲಿವುಡ್31 mins ago

Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!

IND vs PAK
ಕ್ರೀಡೆ35 mins ago

IND vs PAK: ಇಂದು ಪಾಕ್​ ವಿರುದ್ಧ ಆಡಲಿದ್ದಾರಾ ಟೀಮ್​ ಇಂಡಿಯಾ ನಾಯಕ ರೋಹಿತ್​?

Modi 3.0 Cabinet
ದೇಶ36 mins ago

Modi 3.0 Cabinet: ಮೋದಿ ಪ್ರಮಾಣವಚನ; ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿ ಸಾಧ್ಯತೆ

ರಾಜಮಾರ್ಗ ಅಂಕಣ ramoji rao
ಅಂಕಣ36 mins ago

ರಾಜಮಾರ್ಗ ಅಂಕಣ: ಮನರಂಜನೆಯ ಮಹಾ ದೊರೆ, ಕನಸುಗಾರನ ನಿರ್ಗಮನ

WI vs UGA
ಕ್ರೀಡೆ1 hour ago

WI vs UGA: ಉಂಗಾಡ ವಿರುದ್ಧ 134 ರನ್​ಗಳ ಭರ್ಜರಿ ಗೆಲುವು ಸಾಧಿಸಿದ ವಿಂಡೀಸ್​

Modi 3.0 Cabinet
Lok Sabha Election 20241 hour ago

Modi 3.0 Cabinet: ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಪೇಜಾವರ ಶ್ರೀ

Israel-Hamas Conflict
ವಿದೇಶ1 hour ago

Israel-Hamas Conflict: ಹಮಾಸ್‌ ಉಗ್ರರ ಸೆರೆಯಲ್ಲಿದ್ದ ನಾಲ್ವರ ರಕ್ಷಣೆ; 265 ದಿನಗಳ ನರಕಯಾತನೆ ಬಳಿಕ ತಾಯ್ನಾಡಿಗೆ ವಾಪಾಸ್‌

Uttarakaanda Movie in bhavana menon
ಸ್ಯಾಂಡಲ್ ವುಡ್2 hours ago

Uttarakaanda Movie: ‘ಉತ್ತರಕಾಂಡ’ದ ವೀರವ್ವ ಪಾತ್ರದಲ್ಲಿ ಭಾವನಾ‌ ಮೆನನ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌