Viral Photo: ಕೆಟ್ಟದಾಗಿ ವರ್ತಿಸಿದರೆ ದುಪ್ಪಟ್ಟು ಬೆಲೆಗೆ ಚಹಾ: ಚಹಾದಂಗಡಿಯ ವಿನೂತನ ಐಡಿಯಾ! - Vistara News

ವೈರಲ್ ನ್ಯೂಸ್

Viral Photo: ಕೆಟ್ಟದಾಗಿ ವರ್ತಿಸಿದರೆ ದುಪ್ಪಟ್ಟು ಬೆಲೆಗೆ ಚಹಾ: ಚಹಾದಂಗಡಿಯ ವಿನೂತನ ಐಡಿಯಾ!

ಇಂಗ್ಲೆಂಡ್‌ನ ಪ್ರಿಸ್ಟನ್‌ ಎಂಬಲ್ಲಿನ ಚಹಾದಂಗಡಿ ತನ್ನ ಅಂಗಡಿಯಲ್ಲಿ ಹೊಸತೊಂದು ನಿಯಮವನ್ನು ಜಾರಿಗೆ ತಂದಿದೆ. ಇದು ಗ್ರಾಹಕರು ತನ್ನ ಬಳಿ ಗೌರವದಿಂದ ಮಾತನಾಡಿಸಿದರೆ ಬಿಲ್‌ನಲ್ಲಿ ಡಿಸ್ಕೌಂಟ್‌ ಕೊಡುವುದಾಗಿ ಘೋಷಿಸಿದ್ದೀಗ ವೈರಲ್‌ (viral photo) ಆಗಿದೆ.

VISTARANEWS.COM


on

viral photo desi chai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇತರರಿಗೆ ಗೌರದ ಹಾಗೂ ಪ್ರೀತಿ ಕೊಡುವುದು ಯಾವತ್ತಿಗೂ ಬಹಳ ಒಳ್ಳೆಯ ಮಾನವೀಯ ಗುಣ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಪರಸ್ಪರ ಪ್ರೀತ್ಯಾದರಗಳು ವ್ಯಕ್ತಿಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ನೆರವಾಗುತ್ತದೆ. ಆದರೂ ವೃತ್ತಿಯೆಂಬುದು ಬಹಳ ಸಲ, ಗೌರವ, ಪ್ರೀತಿ ನಂಬಿಕೆಗಳ ಮಧ್ಯೆ ಗೋಡೆಗಳನ್ನಿರಿಸುತ್ತದೆ. ಯಾರ ವೃತ್ತಿ ಏನೇ ಇರಲಿ ಪರಸ್ಪರ ಪ್ರೀತಿ ಗೌರವಗಳು ಅತೀ ಮುಖ್ಯ ಎಂದು ಎಷ್ಟೇ ಹೇಳಿದರೂ ಅವು ಪುಸ್ತಕದ ಬದನೆಕಾಯಿಯಾಗಿಯೇ ಉಳಿಯುತ್ತದೆ. ಈ ನಿಟ್ಟಿನಲ್ಲಿ ಇಂಗ್ಲೆಂಡ್‌ನ ಚಹಾದಂಗಡಿಯೊಂದು ವಿನೂತನ ಹೆಜ್ಜೆಯಿರಿಸಿದೆ. ಜನರಲ್ಲಿ ಪರಸ್ಪರ ಪ್ರೀತಿ ಗೌರವಗಳನ್ನು ಹೆಚ್ಚಿಸಲು ಆ ಬಗ್ಗೆ ಅರಿವು ಮೂಡಿಸಲು ಸಣ್ಣ ಕಾಣಿಕೆಯೊಂದನ್ನು ನೀಡಲು ಮುಂದಾಗಿದೆ. ಇದು ಜನರನ್ನು ತಮ್ಮ ವ್ಯಕ್ತಿತ್ವದೆಡೆಗೊಮ್ಮೆ ತಿರುಗಿ ನೋಡುವಂತೆ ಮಾಡುವ ಕಣ್ತೆರೆಸುವ ವಿಧಾನವಾಗಿ ಕಾಣುತ್ತಿದ್ದು ಬಹುತೇಕರ ಮೆಚ್ಚುಗೆಗೆ (viral photo) ಪಾತ್ರವಾಗಿದೆ.

ಇಂಗ್ಲೆಂಡ್‌ನ ಪ್ರಿಸ್ಟನ್‌ ಎಂಬಲ್ಲಿನ ಚಹಾದಂಗಡಿ ತನ್ನ ಅಂಗಡಿಯಲ್ಲಿ ಹೊಸತೊಂದು ನಿಯಮವನ್ನು ಜಾರಿಗೆ ತಂದಿದೆ. ಇದು ಗ್ರಾಹಕರು ತನ್ನ ಬಳಿ ಗೌರವದಿಂದ ಮಾತನಾಡಿಸಿದರೆ ಬಿಲ್‌ನಲ್ಲಿ ಡಿಸ್ಕೌಂಟ್‌ ಕೊಡುವುದಾಗಿ ಘೋಷಿಸಿದೆ. ಆ ಮೂಲಕ ಇತರರನ್ನು ನೀವು ಗೌರವಿಸುವ ಮೂಲಕ ಗೌರವ ಪಡೆಯಿರಿ ಎಂಬ ನಾಣ್ಣುಡಿಯನ್ನು ನಿಜಾರ್ಥದಲ್ಲಿ ಅಳವಡಿಸಿಕೊಂಡಿದೆ.

29ರ ಹರೆಯದ ಉಸ್ಮಾನ್ ಹುಸೇನ್‌ ಎಂಬವರು ಇತ್ತೀಚೆಗೆ ಆರಂಭಿಸಿದ ಚಾಯ್‌ ಸ್ಟಾಪ್‌ ಎಂಬ ಚಹಾದಂಗಡಿಯೇ ಹೀಗೆ ತನ್ನ ವಿಶೇಷ ಐಡಿಯಾದಿಂದ ಸುದ್ದಿಯಾದ ಅಂಗಡಿ. ಈತ ತನ್ನ ಅಂಗಡಿಯ ನೋಟೀಸ್‌ ಬೋರ್ಡಿನಲ್ಲಿ ಹೀಗೊಂದು ಫಲಕ ತೂಗುಹಾಕಿದ್ದಾರೆ. ಅದರ ಪ್ರಕಾರ, “ದೇಸೀ ಚಾಯ್-‌ 5 ಯೂರೋ, ದೇಸೀ ಚಾಯ್‌ ಪ್ಲೀಸ್‌- 3 ಯೂರೋ, ಹೆಲೋ, ದೇಸೀ ಚಾಯ್‌ ಪ್ಲೀಸ್‌- 1.90 ಯೂರೋ” ಎಂದು ಬೆಲೆಯನ್ನು ನಿಗದಿ ಮಾಡಲಾಗಿದೆ.

ಕೇವಲ ದೇಸೀ ಚಾಯ್‌ ಎಂದು ಆರ್ಡರ್‌ ಕೊಟ್ಟು ಕನಿಷ್ಟ ಮರ್ಯಾದೆಯನ್ನೂ ಕೊಡದೆ, ತಂದು ಕೊಡುವವನೆಡೆಗೊಂದು ಕನಿಷ್ಟ ಮುಗುಳ್ನಗೆಯನ್ನೂ ಬೀರದೆ ಚಹಾ ಕುಡಿವವನ ಸೊಕ್ಕಿಗೆ ೫ ಯೂರೋ ನಿಗದಿ ಮಾಡಿದ್ದರೆ, ʻದೇಸೀ ಚಾಯ್‌ ಪ್ಲೀಸ್‌ʼ ಎಂದು ಸಾಧಾರಣವಾಗಿ ಮಾತಾಡಿಸುವ ಗ್ರಾಹಕನಿಗೆ ೩ ಯೂರೋ ಹಾಗೂ, ಬಹಳ ಚಂದಕ್ಕೆ, ʻಹಲೋʼ ಹೇಳಿ, ಆಮೇಲೆ ʻದೇಸೀ ಚಾಯ್‌ ಪ್ಲೀಸ್‌ʼ ಎನ್ನುವ ಪ್ರೀತ್ಯಾದರಗಳನ್ನು ತೋರುವ ಮಂದಿಗೆ ೧.೯೦ ಯೂರೋ ಎಂಬುದೇ ಇಲ್ಲಿ ತೂಗುಹಾಕಲಾದ ಒಕ್ಕಣೆ. ಆ ಮೂಲಕ ನಾವು ಹೇಗೆ ಮಾತಾಡಬೇಕು, ಸಾಮಾಜಿಕವಾಗಿ ಎಲ್ಲರನ್ನೂ ಹೇಗೆ ಪ್ರೀತಿ ವಿಶ್ವಾಸ ಗೌರವದಿಂದ ಕಾಣಬೇಕು ಎಂಬ ಸಂದೇಶವನ್ನು ಇದು ಮೌನವಾಗಿಯೇ ದಾಟಿಸುತ್ತಿದೆ.

ವಿಶೇಷವೆಂದರೆ, ಈ ಬೋರ್ಡು ನೋಡಿಯೋ ಏನೋ, ಈವರೆಗೆ ಈ ಚಹಾದಂಗಡಿಗೆ ದರ್ಪದಿಂದ ಚಹಾ ಆರ್ಡರು ಮಾಡಿ ಕೂತಿಲ್ಲ. ಎಲ್ಲರೂ ಚಹಾದಂಗಡಿ ಮಾಲಿಕ ಬಯಸುವಂತೆಯೇ, ʻಹಲೋ, ದೇಸೀ ಚಾಯ್‌ ಪ್ಲೀಸ್‌ʼ ಎಂದು ಚಂದಕ್ಕೇ ಮಾತನಾಡಿಸಿದ್ದಾರೆ. ಕೇವಲ ಧನಾತ್ಮಕ ಪರಿಸರ ಮಾತ್ರ ನಾವಿಲ್ಲಿ ಬಯಸುತ್ತೇವೆ ಎನ್ನುವ ಈ ಅಂಗಡಿ ಮಾಲಿಕ, ತನ್ನ ನಿಲುವನ್ನು, ಸಮಾಜದಲ್ಲಿ ಎಲ್ಲರೂ ಪ್ರತಿಯೊಬ್ಬರ ವೃತ್ತಿಗೆ ಗೌರವ ಕೊಟ್ಟು ಗೌರವ ಪಡೆಯಬೇಕೆನ್ನುವ ಗುಣವನ್ನು ತಣ್ಣಗೆ ಹೇಳಿದ್ದಾರೆ.

ಇದನ್ನೂ ಓದಿ: Viral video: ಪ್ರವಾಸಿಗರ ವಾಹನ ಅಡ್ಡಗಟ್ಟಿ ನಿಂತ ಆನೆ; ಗಣಪತಿ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟನಾ ಗಜರಾಜ!

ಆರಂಭದಲ್ಲಿ ಬಹಳ ಕೆಟ್ಟದಾಗಿ ವರ್ತಿಸುವ ಗ್ರಾಹಕರು ಅಂಗಡಿಗೆ ಬರುತ್ತಿದ್ದರು. ಇದರಿಂದ ಕೆಲಸ ಮಾಡಲು ಚೈತನ್ಯ ಸಿಗುವುದಿಲ್ಲ. ಕೆಲಸ ಮಾಡುವಲ್ಲಿ ಉತ್ತಮ ವಾತಾವರಣವಿದ್ದರೆ ಮಾತ್ರ ಪ್ರತಿಯೊಬ್ಬರಿಗೂ ಕೆಲಸದಲ್ಲಿ ಶ್ರದ್ಧೆ ಪ್ರೀತಿ ಬರುತ್ತದೆ. ಪ್ರೀತಿ ಗೌರವದಿಂದ ಮಾತಾಡಿ ಎಂದು ಬಾಯಿ ಮಾತಲ್ಲಿ ಹೇಳಿದರೆ ಜಗಳವಾಗುತ್ತಿತ್ತು. ಇಂಥ ವಾತಾವರಣ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೇ ಈ ಐಡಿಯಾ ಮಾಡಿದ್ದೇನೆ. ಇದಾದ ಮೇಲೆ ಒಬ್ಬರೂ ಕೆಟ್ಟದಾಗಿ ಇಲ್ಲಿ ವರ್ತಿಸಿಲ್ಲ. ಪ್ರೀತಿ, ಗೌರವ ಕೊಟ್ಟು ತೆಗೆದುಕೊಳ್ಳಬೇಕು ಎಂಬುದಷ್ಟೇ ಸತ್ಯ. ಅದನ್ನು ಈ ಮೂಲಕ ವಿನೂತನವಾಗಿ ಹೇಳಿದ್ದೇನೆ ಅಷ್ಟೇ ಎಂದವರು ಹೇಳಿದ್ದಾರೆ.

ಹೀಗೆ ಮಾಡುವುದಕ್ಕೆ ಅಮೆರಿಕದ ಕೆಫೆಯೊಂದು ಮಾಡಿದ್ದ ಫೇಸ್‌ಬುಕ್‌ ಪೋಸ್ಟ್‌ ಕಾರಣ ಎಂದು ವಿವರಿಸಿರುವ ಅವರು. ಬಹಳ ಕಾಲ ಅದನ್ನು ಸೇವ್‌ ಮಾಡಿ ಇಟ್ಟಿದ್ದೆ. ಕೊನೆಗೂ ಪ್ರಯೋಗ ಮಾಡಲು ನಿರ್ಧರಿಸಿದೆ. ನಿರ್ಧಾರ ಉತ್ತಮ ಫಲ ಕೊಟ್ಟಿದೆ ಎಂದವರು ವಿವರಿಸಿದ್ದಾರೆ.

ಇದನ್ನೂ ಓದಿ: Viral Video : ಮದುಮಗಳಿಂದ ಸಾಮಿ ಸಾಮಿ ಡ್ಯಾನ್ಸ್‌; ವೈರಲ್‌ ಆಯ್ತು ವಿಡಿಯೊ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

Viral Video: ಇಲ್ಲಿ ಸಿಗೋದು ಡಿಸೇಲ್ ಪರಾಠಾ!

Viral Video: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ ಜನಪ್ರಿಯ ಭಾರತೀಯ ಉಪಾಹಾರ ಖಾದ್ಯವಾದ ಪರಾಠವನ್ನು ತಯಾರಿಸಲು ಡಿಸೇಲ್ ಹಾಕಿರುವುದನ್ನು ತೋರಿಸಲಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

VISTARANEWS.COM


on

By

Viral Video
Koo

ಬೀದಿ ಬದಿ ಆಹಾರದಲ್ಲಿ (street food) ಸಿಗುವ ರುಚಿ ಬೇರೆ ಯಾವ ದೊಡ್ಡ ರೆಸ್ಟೋರೆಂಟ್ ಗಳಲ್ಲೂ ಸಿಗುವುದಿಲ್ಲ. ಬೀದಿ ಬದಿ ಆಹಾರವನ್ನು ಇಷ್ಟ ಪಡುವ ಒಂದು ವರ್ಗವೇ ಇದೆ. ಹೀಗಾಗಿ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇರುತ್ತದೆ. ಆದರೆ ಆರೋಗ್ಯ (health) ಕಾಪಾಡಲು, ಆಹಾರದ ಸುರಕ್ಷತೆ (Food safety), ಸ್ವಚ್ಛತೆ (clean) ಬಗ್ಗೆ ಗಮನ ಕೊಡುವವರು ಬೀದಿಬದಿ ವ್ಯಾಪಾರಿಗಳು ಯಾವ ರೀತಿ ಆಹಾರ ತಯಾರಿಸುತ್ತಾರೆ ಎಂಬುದನ್ನು ನೋಡಿ ತಿನ್ನುವುದು ಒಳ್ಳೆಯದು.

ಆರೋಗ್ಯದ ವಿಷಯದಲ್ಲಿ ಹೆಚ್ಚಿನವರು ಜಾಗ್ರತರಾಗಿರಬೇಕು. ಸ್ಥಿರವಾದ ಕೊಲೆಸ್ಟ್ರಾಲ್ ಮಟ್ಟ ಮತ್ತು ನಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ನಾವು ಹೆಚ್ಚಾಗಿ ಎಣ್ಣೆಯುಕ್ತ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಆದರೆ ಇಲ್ಲೊಂದು ವೈರಲ್ ವಿಡಿಯೋ (Viral Video) ಮಾತ್ರ ಭಯ ಹುಟ್ಟಿಸುತ್ತದೆ. ಬೀದಿ ಬದಿಯ ಆಹಾರ ಬೇಡವೇ ಬೇಡ ಎನ್ನುವಂತೆ ಮಾಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ ಜನಪ್ರಿಯ ಭಾರತೀಯ ಉಪಹಾರ ಖಾದ್ಯವಾದ ಪರಾಠವನ್ನು ತಯಾರಿಸಲು ಡಿಸೇಲ್ ಹಾಕಿರುವುದನ್ನು ತೋರಿಸಲಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆತ ಪರಾಠಾ ತಯಾರಿಸಲು ಡಿಸೇಲ್ ಬಳಕೆ ಮಾಡಿರುವುದನ್ನು ವ್ಯಕ್ತಿಯೊಬ್ಬ ಆತನಿಗೆ ಗೊತ್ತಾಗದಂತೆ ಕೆಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.


ಡಿಸೇಲ್ ನಲ್ಲಿ ತಯಾರಿಸಿದ ಪರಾಠಾವನ್ನು ಗ್ರಾಹಕರಿಗೆ ಬಡಿಸುವ ಆತ “ಎಸ್ಕೊ ಖಕ್ರ್ ಕಚೋರಿ ಕಾ ಟೇಸ್ಟ್ ಆತಾ ಹೈ (ಇದು ಕಚೋರಿಯಂತೆ ರುಚಿಯಾಗಿದೆ) ಎನ್ನುತ್ತಾನೆ. ಪರಾಠಾವನ್ನು ಹುರಿಯಲು ಟಿನ್ ಕ್ಯಾನ್‌ನಿಂದ ಡೀಸೆಲ್ ಸುರಿಯುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.

ಕ್ಯಾನ್ಸರ್‌ಗೆ ನಿಜವಾದ ಪಾಕವಿಧಾನ (ಪೆಟ್ರೋಲ್ ಡೀಸೆಲ್ ವಾಲಾ ಪರಾಠ) ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ. ಚಂಡೀಗಢದ ಬಬ್ಲು ಧಾಬಾ: ಈ ಡೀಸೆಲ್-ಫ್ರೈಡ್ ಪರಾಠವನ್ನು ಎಲ್ಲಿ ತಯಾರಿಸಲಾಗುತ್ತದೆ ಎಂಬುದನ್ನು ಈ ವಿಡಿಯೋ ಬಹಿರಂಗಪಡಿಸುತ್ತದೆ.
ಆನ್ ಲೈನ್ ನಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ನನ್ನ ಹೊಸ ಅನಾರೋಗ್ಯಕರ ಅಡುಗೆ ಎಣ್ಣೆಗಳ ಪಟ್ಟಿ ಡಿಸೇಲ್ ಪೆಟ್ರೋಲ್ ಬೀಜದ ಎಣ್ಣೆಗಳು ಎಂದು ಬಳಕೆದಾರನೊಬ್ಬ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರೆ, ಇನ್ನೊಬ್ಬ ಅವನು ಶೀಘ್ರದಲ್ಲೇ ಫೆರಾರಿಯನ್ನು ಖರೀದಿಸುತ್ತಾನೆ ಮತ್ತು ಅವನ ಗ್ರಾಹಕರು ಶೀಘ್ರದಲ್ಲೇ ತಮ್ಮ ಮನೆ ಮತ್ತು ಕಾರುಗಳನ್ನು ಮಾರಾಟ ಮಾಡಲಿದ್ದಾರೆ ಕ್ಯಾನ್ಸರ್ ಚಿಕಿತ್ಸೆಗಾಗಿ ಎಂದು ಹೇಳಿದ್ದಾನೆ.

ಮತ್ತೊಬ್ಬರು ಕನಿಷ್ಠ ಅವರು ತಲೆಯ ಮೇಲೆ ಕ್ಯಾಪ್ ಧರಿಸಿದ್ದರು. ಆದ್ದರಿಂದ ಕ್ಯಾನ್ಸರ್ ಪರಾಠದಲ್ಲಿ ಕೂದಲು ಇಲ್ಲ ಹೇಳಿದ್ದು, ಡಿಸೇಲ್ ಬಳಕೆಯ ಬಗ್ಗೆ ಹಲವರು ಸಂದೇಹ ವ್ಯಕ್ತಪಡಿಸಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ಹೊತ್ತಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದು ಬಹುಶಃ ಕೇವಲ ಹಳೆಯ ಎಣ್ಣೆ. ಡಿಸೇಲ್ ಸುಮಾರು 200ಸಿಗೆ ಬೆಂಕಿಯನ್ನು ಹಿಡಿಯುತ್ತದೆ. ಅಡುಗೆ ಮಾಡುವಾಗ ಥಾವಾ ತಾಪಮಾನವು ಸುಲಭವಾಗಿ 250- 300ಸಿ ತಲುಪುತ್ತದೆ. ಆ ದ್ರವವು ಬೆಂಕಿಯನ್ನು ಹಿಡಿಯದಿದ್ದರೆ ಅದು ಕೇವಲ ಎಣ್ಣೆ ಎಂದು ಅರ್ಥ ಎಂದು ಮತ್ತೊಬ್ಬರು ಹೇಳಿದ್ದು, ಇದು ಡೀಸೆಲ್‌ನಂತೆ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

ಇದು ಖಂಡಿತವಾಗಿಯೂ ಆರೋಗ್ಯಕರವಲ್ಲ. ಆದರೆ ಇದು ಡಿಸೇಲ್ ಕೂಡ ಅಲ್ಲ.. ಎಂದು ಮತ್ತೊಬ್ಬರು ಹೇಳಿದ್ದಾರೆ.
ಭಾರತದಲ್ಲಿ ಬೀದಿ ಆಹಾರಗಳಿಗೆ ಯಾವುದೇ ರೀತಿಯ ಆಹಾರ ಸುರಕ್ಷತಾ ನಿಯಮಗಳು ಇಲ್ಲವೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

Continue Reading

ದಾವಣಗೆರೆ

Davanagere News : ಇಳಿ ವಯಸ್ಸಿನಲ್ಲಿ ಕೂಡಿ ಬಂದ ಕಂಕಣ ಭಾಗ್ಯ; ದೂರಾಯಿತು ಒಂಟಿತನ

Davanagere News : ಇತ್ತೀಚೆಗೆ ಯುವಜನತೆ ಮದುವೆಗೆ ವರ ಸಿಗುತ್ತಿಲ್ಲ, ವಧು ಸಿಗುತ್ತಿಲ್ಲ ಅಂತ ಪೆಚಾಡುತ್ತಿದ್ದರೆ, ಇತ್ತ ದಾವಣಗೆರೆಯಲ್ಲಿ ಇಳಿ ವಯಸ್ಸಿನಲ್ಲಿ (Marriage at an early age) ಕಂಕಣ ಭಾಗ್ಯ ಕೂಡಿ ಬಂದಿದ್ದು, ಜೋಡಿಯ ಒಂಟಿತನವು ದೂರಾಗಿದೆ. ಕುಟುಂಬಸ್ಥರ ಸಮ್ಮುಖದಲ್ಲೇ ಸರಳ ಮದುವೆ ಕಾರ್ಯವು ನೆರವೇರಿದೆ.

VISTARANEWS.COM


on

By

Davanagere News Marriage at an early age
Koo

ದಾವಣಗೆರೆ: ಆ ಗ್ರಾಮದಲ್ಲಿ ನಡೆದ ಮದುವೆಯು (Marriage) ಸಂಭ್ರಮದೊಂದಿಗೆ ವಿಶೇಷವಾಗಿಯೂ ಇತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರನಿಗೆ 61 ಆದರೆ ವಧುವಿಗೆ 56 ವರ್ಷ.. ಈ ಹಿರಿಯರ ಮದುವೆಗೆ ಕುಟುಂಬಸ್ಥರು ಸೇರಿ ಗ್ರಾಮಸ್ಥರು ಸಾಕ್ಷಿಯಾಗಿದ್ದರು. ಇಳಿ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದ್ದು, ಕೊನೆಗಾಲದಲ್ಲಿ ಆಸರೆಯಾಗಿರಲು ಇಳಿ ವಯಸ್ಸಿನ ‌ವಧು-ವರ (Marriage at an early age) ಒಂದಾಗಿದ್ದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಈ ವಿಶೇಷ ಮದುವೆ ನಡೆದಿದೆ. 56 ವರ್ಷದ ರುಕ್ಮಿಣಿ ಹಾಗೂ 61 ವರ್ಷದ ನಿವೃತ್ತ ಶಿಕ್ಷಕ ನಾಗರಾಜ್‌ ಎಂಬುವವರು ಸತಿಪತಿಗಳಾದ ಜೋಡಿ.

ಶಾಲಾ‌ ಶಿಕ್ಷಕರಾಗಿ ನಿವೃತ್ತಿ ‌ಹೊಂದಿದ್ದ ನಾಗರಾಜ್, ಪತ್ನಿಯನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು. ಇತ್ತ ರುಕ್ಮಿಣಿ ಮದುವೆಯಾಗದೇ ತವರು ಮನೆಯಲ್ಲೇ ಆಶ್ರಯ ಪಡೆದಿದ್ದರು. ಒಂಟಿ ಜೀವಕ್ಕೆ ಜೋಡಿಯೊಂದು ಬೇಕೆಂದು ಹಂಬಲಿಸಿದ್ದ ನಾಗರಾಜ್‌ ಅವರು ಒಬ್ಬಂಟಿಯಾಗಿದ್ದ ರುಕ್ಮಿಣಿಯವರ ಕೈಹಿಡಿದಿದ್ದಾರೆ.

ಇನ್ನೂ ಇವರಿಬ್ಬರ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಮುದ್ರೆ ಒತ್ತಿದ್ದಾರೆ. ಕುಂಬಳೂರು ಗ್ರಾಮದ ದೇವಸ್ಥಾನದಲ್ಲಿ ಎರಡು ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನೆರವೇರಿದೆ.

Davanagere News Marriage at an early age

ಇದನ್ನೂ ಓದಿ: Metro Penalty: ಮೆಟ್ರೊ ಸ್ಟೇಷನ್‌ನಲ್ಲಿ ಗರ್ಲ್‌ ಫ್ರೆಂಡ್‌ಗೆ ಕಾಯುತ್ತ ಕೂತರೆ ಬೀಳುತ್ತೆ 50 ರೂ. ದಂಡ!

Abdu Rozik: ತನಗಿಂತ ತುಂಬಾ ಎತ್ತರದ ಹುಡುಗಿ ಜತೆ ಬಿಗ್‌ ಬಾಸ್‌ ಸ್ಪರ್ಧಿಯ ಮದುವೆ!

ಸಾಮಾಜಿಕ ಜಾಲತಾಣದಲ್ಲಿ (social media) ಸಕ್ರಿಯರಾಗಿರುವ ಮತ್ತು ಬಿಗ್ ಬಾಸ್ 16 (Bigg Boss 16) ಖ್ಯಾತಿಯ ಅಬ್ದು ರೋಝಿಕ್ (Abdu Rozik) ಇತ್ತೀಚೆಗಷ್ಟೇ ಅಮಿರಾ ಅವರೊಂದಿಗೆ ಮದುವೆ ನಿಶ್ಚಿತಾರ್ಥವನ್ನು (engagement) ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಮುಂದಿನ ಜುಲೈನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಬಾಲಿವುಡ್ ನಟ (Bollywood actor) ಸಲ್ಮಾನ್ ಖಾನ್ (Salman Khan) ಪಾಲ್ಗೊಳ್ಳಲಿದ್ದಾರೆ ಎಂದು ಅಬ್ದು ತಿಳಿಸಿದ್ದಾರೆ.

20 ವರ್ಷದ ಗಾಯಕ (singer) ಅಬ್ದು ರೋಝಿಕ್ ಅವರು ಅಮೀರಾ ಅವರನ್ನು ಆಹಾರ ಉತ್ಸವದಲ್ಲಿ ಭೇಟಿಯಾಗಿದ್ದರು. ಮೊದಲ ನೋಟದಲ್ಲೇ ಇಬ್ಬರಿಗೂ ಪ್ರೀತಿಯಾಗಿತ್ತು ಎಂದು ಅಬ್ದು ತಿಳಿಸಿದರು.

ಅಬ್ದು ಅವರ ನಿಶ್ಚಿತಾರ್ಥವು ಯಾವುದೇ ಪ್ರಚಾರವಲ್ಲ ಎಂದು ಅಬ್ದು ಸ್ಪಷ್ಟಪಡಿಸಿದ್ದು, ನನ್ನಂತಹ ಸಣ್ಣ ವ್ಯಕ್ತಿ ಪ್ರೀತಿಯನ್ನು ಕಂಡುಕೊಂಡಿದ್ದಾನೆ ಎಂದು ಜನರು ನಂಬಲು ಕಷ್ಟವಾಗಬಹುದು ಎಂದು ತಿಳಿಸಿದರು.
ಅಮೀರಾಗಿಂತ ಚಿಕ್ಕವನಾಗಿರುವ ತನ್ನ ಎತ್ತರದ ವ್ಯತ್ಯಾಸವು ನಮ್ಮ ಪ್ರೀತಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಹೇಳಿದರು.


ಅಬ್ದು ಅವರು 115 ಸೆಂ ಮತ್ತು ಅಮೀರಾ 155 ಸೆಂ.ಮೀ. ಎತ್ತರವಿದ್ದಾರೆ. ಅವರಿಬ್ಬರೂ ಕಡಿಮೆ ಎತ್ತರದಿಂದಾಗಿ ತಮ್ಮ ಸಂಗಾತಿಯನ್ನು ಹುಡುಕುವ ಬಗ್ಗೆ ಚಿಂತಿತರಾಗಿದ್ದರು. ಆದರೆ ಅಮೀರಾ ಅವರನ್ನು ಭೇಟಿ ಮಾಡಿದ್ದಕ್ಕಾಗಿ ಕೃತಜ್ಞರಾಗಿರುತ್ತೇನೆ. ಅಮೀರಾ ತನಗಿಂತ ಎತ್ತರವಾಗಿದ್ದರೂ ಅದು ನಮ್ಮ ಸಂಬಂಧದ ನಡುವೆ ಎಂದಿಗೂ ಬಂದಿಲ್ಲ ಎಂದು ತಿಳಿಸಿದರು.


ಕೆಲವು ದಿನಗಳ ಹಿಂದೆ ಅಬ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ಅಮೀರಾ ಅವರ ಮುಖವನ್ನು ಬಹಿರಂಗಪಡಿಸಲಿಲ್ಲ, ಆದರೆ ಹೃದಯದ ಆಕಾರದ ವಜ್ರದ ಉಂಗುರದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸುದ್ದಿಯನ್ನು ಹಂಚಿಕೊಂಡ ಅವರು, “ಜುಲೈ 7 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸುವುದಾಗಿ ಹೇಳಿದ್ದು, ನನ್ನನ್ನು ಗೌರವಿಸುವ ಪ್ರೀತಿಯನ್ನು ಪಡೆಯುವ ಅದೃಷ್ಟಶಾಲಿ ಎಂದು ನಾನು ನನ್ನ ಜೀವನದಲ್ಲಿ ಎಂದಿಗೂ ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ಛೇ..ಇವನೆಂಥಾ ಪಾಪಿ..! ನಾಯಿ ಮೇಲೆ ಪದೇ ಪದೇ ಹಲ್ಲೆ ನಡೆಸಿ ವಿಕೃತಿ

Viral Video:ಗೋಲ್ಡನ್‌ ರಿಟ್ರೀವರ್‌ ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವ ವ್ಯಕ್ತಿಯೊಬ್ಬ ಲಿಫ್ಟ್‌ನಲ್ಲಿ ನಾಯಿಯ ಮುಖಕ್ಕೆ ಪದೇ ಪದೇ ಕೈಯಲ್ಲಿದ್ದ ಕೋಲಿನಂತಹ ಸಾಧನದಿಂದ ಹೊಡೆದಿದ್ದಾರೆ. ಬಳಿಕ ಕೈಯಿಂದಲೂ ನಾಯಿ ಬೆನ್ನಿಗೂ ಏಟು ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ನಾಯಿಯ ಮಾಲೀಕರು ಯಾವುದೇ ದೂರು ನೀಡಿಲ್ಲ. ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಆತ ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿಲ್ಲ.

VISTARANEWS.COM


on

Viral Video
Koo

ಗುರುಗ್ರಾಮ: ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವ ಕೆಲಸದವನು ಅದರ ಮೇಲೆ ಮಾರಣಾಂತಿಕ ಹಲ್ಲೆ(Thrashing pet) ನಡೆಸಿರುವ ಘಟನೆ ಗುರುಗ್ರಾಮ(Gurugram)ದಲ್ಲಿ ನಡೆದಿದೆ. ಅಪಾರ್ಟ್‌ಮೆಂಟ್‌ನ ಲಿಫ್ಟ್‌ವೊಂದರಲ್ಲಿ ಈ ಭೀಕರ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಕಿಡಿಗೇಡಿಯ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.

ಆರ್ಚಿಡ್‌ ಗಾರ್ಡನ್ಸ್‌ ಸೊಸೈಟಿಯ ಸೆಕ್ಟರ್‌ 54ರಲ್ಲಿ ಈ ಘಟನೆ ನಡೆದಿದ್ದು, ಗೋಲ್ಡನ್‌ ರಿಟ್ರೀವರ್‌ ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವ ವ್ಯಕ್ತಿಯೊಬ್ಬ ಲಿಫ್ಟ್‌ನಲ್ಲಿ ನಾಯಿಯ ಮುಖಕ್ಕೆ ಪದೇ ಪದೇ ಕೈಯಲ್ಲಿದ್ದ ಕೋಲಿನಂತಹ ಸಾಧನದಿಂದ ಹೊಡೆದಿದ್ದಾರೆ. ಬಳಿಕ ಕೈಯಿಂದಲೂ ನಾಯಿ ಬೆನ್ನಿಗೂ ಏಟು ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ನಾಯಿಯ ಮಾಲೀಕರು ಯಾವುದೇ ದೂರು ನೀಡಿಲ್ಲ. ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಆತ ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ:Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

ಇಂತಹದ್ದೇ ಒಂದು ಘಟನೆ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದಿತ್ತು. ನಾಯಿ ಬೊಗಳಿದ್ದಕ್ಕೆ ನೆರೆಮನೆಯ ವ್ಯಕ್ತಿಯೊಬ್ಬ ನಾಯಿ ಹಾಗೂ ಅದರ ಮಾಲೀಕನಿಗೆ ಕಬ್ಬಿಣದ ರಾಡ್​ನಿಂದ ಹೊಡೆದ ಆಘಾತಕಾರಿ ಘಟನೆ ದೆಹಲಿಯ ಪಶ್ಚಿಮ ವಿಹಾರ್​ ಪ್ರದೇಶದಲ್ಲಿ ನಡೆದಿತ್ತು. ಪಶ್ಚಿಮ ವಿಹಾರ್ ಏರಿಯಾದಲ್ಲಿರುವ ನಿವಾಸಿಯೊಬ್ಬರು ನಾಯಿಯನ್ನು ಸಾಕಿದ್ದರು. ಅದೇ ಏರಿಯಾದಲ್ಲಿದ್ದ ಪಕ್ಕದ ಮನೆಯ ವ್ಯಕ್ತಿಯೊಬ್ಬ ನಾಯಿ ಬೊಗಳುತ್ತೆ ಎಂಬ ಕಾರಣಕ್ಕೆ ನೇರವಾಗಿ ಬಂದು ನಾಯಿಯ ತಲೆಗೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದಾನೆ. ಈ ವೇಳೆ ತಡೆಯಲು ಬಂದ ನಾಯಿಯ ಮಾಲೀಕನಿಗೂ ರಾಡ್​ನಿಂದ ಹೊಡೆದಿದ್ದಾನೆ. ಇನ್ನು ರಾಡ್​ನಿಂದ ಗಂಭೀರ ಗಾಯಗೊಂಡ ನಾಯಿ ಹಾಗೂ ಆತನ ಮಾಲೀಕ ನೆಲದ ಮೇಲೆ ಕುಸಿದು ಬಿದ್ದಿದ್ದರು.. ತಕ್ಷಣವೇ ಮತ್ತೊಬ್ಬ ಇದನ್ನು ತಡೆಯಲು ಬಂದಿದ್ದಾನೆ. ತುಂಬಾ ಸಮಯದವರೆಗೂ ಗಲಾಟೆ ನಡೆದಿದೆ. ಈ ವೇಳೆ ತಡೆಯಲು ಬಂದ ಮತ್ತೊಬ್ಬ ವ್ಯಕ್ತಿಯ ತಲೆಗೂ ಗಂಭೀರವಾಗಿ ಹಲ್ಲೆ ಮಾಡಿದ್ದ.

ಘಟನೆ ನಡೆದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಇನ್ನು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ನಾಯಿ ಹಾಗೂ ಅದರ ಮಾಲೀಕರನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ಸಂಬಂಧ ನಾಯಿಯ ಮಾಲೀಕ ರಕ್ಷಿತ್ ಎಂಬುವವರು ಪಶ್ಚಿಮ ವಿಹಾರ್​ ಪೊಲೀಸ್​ ಠಾಣೆಯಲ್ಲಿ ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ದೂರು ನೀಡಿದ್ದರು. ದೂರಿನನ್ವಯ ಹಲ್ಲೆ ಮಾಡಿದ ವ್ಯಕ್ತಿ ಮೇಲೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Continue Reading

ದೇಶ

Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

Viral News:ಕಳೆದ ತಿಂಗಳು ಹೈದರಾಬಾದ್‌ನಿಂದ ದಿಲ್ಲಿಗೆ ವಿಮಾನಯಾನ ನಡೆಸುತ್ತಿದ್ದ ಮಹಿಳೆಯ ಬ್ಯಾಗ್‌ನಿಂದ 7ಲಕ್ಷ ಮೌಲ್ಯದ ಚಿನ್ನ ಕಳುವಾಗಿತ್ತು. ಇದಾದ ಬೆನ್ನಲ್ಲೇ ಅಮೆರಿಕ ಮೂಲಕದ ವ್ಯಕ್ತಿಯೊಬ್ಬ ಕೂಡ ತನ್ನ ಬ್ಯಾಗ್‌ನಲ್ಲಿದ್ದ 20ಲಕ್ಷ ರೂ. ಕಳುವಾಗಿದೆ ಎಂದು ದೂರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ದಿಲ್ಲಿ, ಅಮೃತಸರ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾಜೇಶ್‌ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಆತನನ್ನು ಅರೆಸ್ಟ್‌ ಮಾಡಿದಾಗ ಈತನ ಕೈಚಳಕದ ಬಗ್ಗೆ ಮಾಹಿತಿ ಹೊರಬಿದ್ದಿದೆ.

VISTARANEWS.COM


on

Viral News
Koo

ನವದೆಹಲಿ: ಈತ ಒಂದೇ ವರ್ಷದಲ್ಲಿ 200 ವಿಮಾನ(200 Flights) ಗಳನ್ನು ಹತ್ತಿ ಇಳಿದಿದ್ದಾನೆ. ಸಾವಿರಾರು ಕಿಲೋಮೀಟರ್‌ ವಿಮಾನದಲ್ಲೇ ದೇಶದೊಳಗೆ ಪ್ರಯಾಣ ಬೆಳೆಸಿದ್ದಾನೆ. ಸುಮಾರು ನೂರಕ್ಕೂ ಅಧಿಕ ದಿನಗಳ ಕಾಲ ವಿಮಾನಯಾನವನ್ನೇ ಮಾಡಿದ್ದಾನೆ. ಅಬ್ಬಾ.. ಹಾಗಾದ್ರೆ ಈತ ದೊಡ್ಡ ಉದ್ಯಮಿ ಅಥವಾ ಟ್ರಾವೆಲರ್ ಆಗಿರಲೇಬೇಕು ಎಂದು ನಾವು ಭಾವಿಸಿದರೆ ಅದು ನಮ್ಮ ತಪ್ಪು ಕಲ್ಪನೆ. ಈತ ವಿಮಾನ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡಿ ದೋಚುವ ಹೈ ಟೆಕ್‌ ಕಳ್ಳ(Viral News) ವಿಮಾನದಲ್ಲೇ ಪ್ರಯಾಣಿಸುವ ಈತ ಕಳ್ಳತನವೇ ಈತನ ಫುಲ್‌ ಟೈಂ ಜಾಬ್‌ ಆಗಿದೆ. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು ರಾಜೇಶ್‌ ಕಪೂರ್‌(Rajesh Kapoor) ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ದಿಲ್ಲಿಯ ಪಹಾರ್‌ಗಂಜ್‌ ಇಂದ ಅರೆಸ್ಟ್‌ ಮಾಡಲಾಗಿದೆ.

ಖತರ್ನಾಕ್‌ ಕಳ್ಳ ಬಲೆಗೆ ಬಿದ್ದಿದ್ದು ಹೇಗೆ?

ಕಳೆದ ತಿಂಗಳು ಹೈದರಾಬಾದ್‌ನಿಂದ ದಿಲ್ಲಿಗೆ ವಿಮಾನಯಾನ ನಡೆಸುತ್ತಿದ್ದ ಮಹಿಳೆಯ ಬ್ಯಾಗ್‌ನಿಂದ 7ಲಕ್ಷ ಮೌಲ್ಯದ ಚಿನ್ನ ಕಳುವಾಗಿತ್ತು. ಇದಾದ ಬೆನ್ನಲ್ಲೇ ಅಮೆರಿಕ ಮೂಲಕದ ವ್ಯಕ್ತಿಯೊಬ್ಬ ಕೂಡ ತನ್ನ ಬ್ಯಾಗ್‌ನಲ್ಲಿದ್ದ 20ಲಕ್ಷ ರೂ. ಕಳುವಾಗಿದೆ ಎಂದು ದೂರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ದಿಲ್ಲಿ, ಅಮೃತಸರ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾಜೇಶ್‌ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಆತನನ್ನು ಅರೆಸ್ಟ್‌ ಮಾಡಿದಾಗ ಈತನ ಕೈಚಳಕದ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಕಳ್ಳತನ ಹೇಗೆ ಮಾಡುತ್ತಿದ್ದ?

ದಿಲ್ಲಿ ಡೆಪ್ಯೂಟಿ ಪೊಲೀಸ್‌ ಕಮಿಷನರ್‌ ಉಷಾ ರಂಗ್ರಾಣಿ ಪ್ರತಿಕ್ರಿಯಿಸಿದ್ದು, ರಾಜೇಶ್‌ ವಿಚಾರಣೆ ವೇಳೆ ತನ್ನ ಕುಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಅವರು ಹೇಗೆ ಕಳ್ಳತನ ಮಾಡುತ್ತಿದ್ದ, ಹೇಗೆ ಎಸ್ಕೇಪ್‌ ಆಗುತ್ತಿದ್ದ ಎಂಬ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಿದರು. ಅವರು ಹೇಳುವ ಪ್ರಕಾರ ಆತ ಕನೆಕ್ಟಿಂಗ್‌ ಫ್ಲೈಟ್ಸ್‌ ಅಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡುತ್ತಿದ್ದ. ಆ ಮಹಿಳೆ ಏಪ್ರಿಲ್‌ನಲ್ಲಿ ಹೈದರಾಬಾದ್‌ನಿಂದ ದಿಲ್ಲಿಗೆ ಬಂದು, ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಳು. ಅದೇ ರೀತಿ ಅಮೆರಿಕ ಮೂಲದ ಆ ವ್ಯಕ್ತಿಯೂ ಅಮೃತಸರದಿಂದ ದಿಲ್ಲಿಗೆ ಬಂದು ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ. ಇಂತವರನ್ನೇ ಗುರಿಯನ್ನಾಗಿಸಿಕೊಳ್ಳುವ ರಾಜೇಶ್‌, ಪ್ರಯಾಣಿಕರ ಚಲನವಲನ, ವರ್ತನೆ ಮೇಲೆ ತೀವ್ರ ನಿಗಾ ಇರಿಸಿಕೊಳ್ಳುತ್ತಾನೆ. ಅವರ ಬ್ಯಾಗ್‌ ಮೇಲಿರುವ ಸ್ಲಿಪ್‌ನಿಂದಾಗಿ ಅವನಿಗೆ ಅವರ ಬ್ಯಾಗ್‌ನಲ್ಲಿ ಏನಿದೆ ಎಂಬುದು ತಿಳಿಯುತ್ತಿತ್ತು. ಬೋರ್ಡಿಂಗ್‌ ಗೇಟ್‌ ಬಳಿ ಈತ ಅವರ ಜೊತೆ ಮಾತುಕತೆ ನಡೆಸುತ್ತಾನೆ. ಇದಾದ ಬಳಿಕ ವಿಮಾನದಲ್ಲಿ ತನ್ನ ಸೀಟು ಬಲಿಸಿಕೊಡುವಂತೆ ವಿಮಾನ ಸಿಬ್ಬಂದಿಯನ್ನು ಕೇಳುತ್ತಾನೆ. ಹೇಗಾದರೂ ಮಾಡಿ ತಾನು ಟಾರ್ಗೆಟ್‌ ಮಾಡಿರುವ ವ್ಯಕ್ತಿಯ ಪಕ್ಕವೇ ಸೀಟು ಸಿಗುವಂತೆ ಮಾಡುತ್ತಾನೆ. ಆಗ ತನ್ನ ಕೈಚಳಕ ತೋರಿಸಿ ಚಿನ್ನ, ನಗದು ದೋಚಿದ್ದಾನೆ.

ಇದನ್ನೂ ಓದಿ: Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಿಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬಹುತೇಕ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಕದಿಯುತ್ತಿದ್ದ ಈತ ಪಹಾರ್‌ಗಂಜ್‌ನಲ್ಲಿ ಸ್ವಂತ ಗೆಸ್ಟ್‌ ಹೌಸ್‌ವೊಂದನ್ನು ಹೊಂದಿದ್ದಾನೆ. ಅಲ್ಲದೇ ಮನಿ ಎಕ್ಸ್‌ಚೇಂಜ್‌ ಉದ್ಯಮ ಮತ್ತು ಮೊಬೈಲ್‌ ಅಂಗಡಿಗಳನ್ನು ಈತ ಹೊಂದಿದ್ದಾನೆ ಎನ್ನಲಾಗಿದೆ. ಇನ್ನು ತಾನು ಕದ್ದ ಚಿನ್ನಾಭರಣಗಳನ್ನು ಸ್ಥಳೀಯ ಚಿನ್ನದ ಅಂಗಡಿ ಮಾಲೀಕ ಶರದ್‌ ಜೈನ್‌ಗೆ ಮಾರುತ್ತಿದ್ದ ಎನ್ನಲಾಗಿದೆ.

Continue Reading
Advertisement
Viral Video
Latest2 mins ago

Viral Video: ಇಲ್ಲಿ ಸಿಗೋದು ಡಿಸೇಲ್ ಪರಾಠಾ!

Love Failure
ಬೆಂಗಳೂರು ಗ್ರಾಮಾಂತರ3 mins ago

Love Failure : ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

HD Revanna Bail I am not happy that Revanna has been released says HD Kumaraswamy
ರಾಜಕೀಯ23 mins ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

Bomb threat
ದೇಶ25 mins ago

Bomb Threat: ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮೂಲಕ ಸಂದೇಶ ರವಾನೆ

T20 World Cup 2024
ಕ್ರಿಕೆಟ್29 mins ago

T20 World Cup 2024: ನೆದರ್ಲೆಂಡ್ಸ್‌ ಟಿ20 ವಿಶ್ವಕಪ್ ತಂಡದಲ್ಲಿ ಮೂವರು ಭಾರತೀಯ ಆಟಗಾರರಿಗೆ ಸ್ಥಾನ

Davanagere News Marriage at an early age
ದಾವಣಗೆರೆ30 mins ago

Davanagere News : ಇಳಿ ವಯಸ್ಸಿನಲ್ಲಿ ಕೂಡಿ ಬಂದ ಕಂಕಣ ಭಾಗ್ಯ; ದೂರಾಯಿತು ಒಂಟಿತನ

Ramayana Movie
ಸಿನಿಮಾ31 mins ago

Ramayana Movie: ದೇಶದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ ʼರಾಮಾಯಣʼ; ಬಜೆಟ್‌ ನಿಮ್ಮ ಊಹೆಗೂ ನಿಲುಕದ್ದು

gold rate today
ಚಿನ್ನದ ದರ40 mins ago

Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

pm narendra modi nomination varanasi
ಪ್ರಮುಖ ಸುದ್ದಿ1 hour ago

PM Narendra Modi: ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಅನುಮೋದಿಸುವ ನಾಲ್ವರು ಯಾರು?

karnataka Rain Effected
ಬೆಂಗಳೂರು1 hour ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail I am not happy that Revanna has been released says HD Kumaraswamy
ರಾಜಕೀಯ23 mins ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 hour ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ8 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ18 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ18 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ19 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ19 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ20 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌