Adventures Overland | ಬಸ್ಸಲ್ಲಿ ಊರಿಗ್ಯಾಕೆ ಹೋಗುವಿರಿ? ಲಂಡನ್ನಿಗೇ ಹೋಗಿ! - Vistara News

ಪ್ರಮುಖ ಸುದ್ದಿ

Adventures Overland | ಬಸ್ಸಲ್ಲಿ ಊರಿಗ್ಯಾಕೆ ಹೋಗುವಿರಿ? ಲಂಡನ್ನಿಗೇ ಹೋಗಿ!

Adventures Overland : 18 ದೇಶಗಳನ್ನು ದಾಟಿಕೊಂಡು 20,000 ಕಿ.ಮೀ ಕ್ರಮಿಸಿ ಲಂಡನ್ನಿಗೆ ಕರೆದುಕೊಂಡು ಹೋಗುತ್ತೆ ಈ ಬಸ್‌. ರಸ್ತೆಯಲ್ಲಿ ಸಾಗುತ್ತಾ ಸಾಗುತ್ತಾ, ವಿವಿಧ ದೇಶಗಳ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವ ಅಪರೂಪದ ಭಾಗ್ಯ ಇದಾಗಿದೆ.

VISTARANEWS.COM


on

Adventures Overland
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಿನ ಕಳೆದಂತೆ ಪ್ರಪಂಚ ಚಿಕ್ಕದಾಗುತ್ತಾ ಹೋಗಿದೆ. ಕ್ಷಣ ಮಾತ್ರದಲ್ಲಿ ಸುದ್ದಿ ತಿಳಿಯಬಹುದಾದ ಸಮೂಹ ಸಂವಹನಗಳು, ವೇಗವಾಗಿ ತಲುಪಬಹುದಾದ ಸಾರಿಗೆ ಸಂಪರ್ಕಗಳು ಪ್ರಪಂಚವನ್ನು ಚಿಕ್ಕದಾಗಿಸಿವೆ ಎಂಬುದು ನಿಜವಾದರೂ, ರೋಡ್‌ ಟ್ರಿಪ್‌ಗಳು ಕೊಡುವ ಮಜಾವೇ ಬೇರೆ.

ವಿಮಾನದ ಮೂಲಕ ಹಾರಿಕೊಂಡು ಗಂಟೆಗಳಲ್ಲಿ ಸಾವಿರಾರು ಕಿ.ಮೀ ತಲುಪಬಹುದಾದ ಜಾಗಗಳನ್ನು ಕಷ್ಟಪಟ್ಟು ನಿಧಾನವಾಗಿ ತಲುಪುವುದರಲ್ಲೇ ಮಜಾ ಅನುಭವಿಸುವ ಮಂದಿಯೂ ಇದ್ದಾರೆ. ಅಂಥ ಪ್ರವಾಸದಲ್ಲಿ ಆನಂದ ಕಾಣುವ ಮಂದಿ ಸುತ್ತಿ ಬಳಸಿ, ನಡೆದುಕೊಂಡೋ, ಬೈಕ್‌ ಮೂಲಕವೋ, ಕಾರಿನಲ್ಲೋ, ರೈಲಿನಲ್ಲೋ, ಬಸ್ಸಿನಲ್ಲೋ ದಿನಗಟ್ಟಲೆ ಪ್ರಯಾಣ ಮಾಡಿ ಸಂತೋಷ ಹೊಂದುತ್ತಾರೆ. ಜೀವನ ಧನ್ಯವೆಂದುಕೊಳ್ಳುತ್ತಾರೆ.

ಇದನ್ನೂ ಓದಿ | Travel tips: ಪ್ರವಾಸ ದುಡ್ಡಿದ್ದವರಿಗೆ ಮಾತ್ರವೇ ಸಾಧ್ಯವೇ?

Adventures Overland

ಪ್ರವಾಸೀ ಪ್ಯಾಕೇಜ್‌

ಇದು ಅಂಥದ್ದೇ ಒಂದು ಪ್ರವಾಸ. ಇತ್ತೀಚಿಗಿನ ದಿನಗಳಲ್ಲಿ ಭಾರೀ ಪ್ರಚಾರ ಪಡೆದ ಪ್ರವಾಸೀ ಪ್ಯಾಕೇಜ್‌ ಇದಾಗಿದೆ! ಒಂದು ಬಸ್ಸು 18 ದೇಶಗಳನ್ನು ದಾಟಿಕೊಂಡು 20,000 ಕಿ.ಮೀ ಕ್ರಮಿಸಿ ಲಂಡನ್ನಿಗೆ ಕರೆದುಕೊಂಡು ಹೋಗಿ ಬಿಟ್ಟರೆ! ಆಹಾ, ಅದಕ್ಕಿಂತ ಚಂದದ, ಅದ್ಭುತ ಪ್ರವಾಸವೊಂದು ಇನ್ನೆಲ್ಲಿ ಸಿಕ್ಕೀತು! ಇದೂ ಅದುವೇ. ಬಸ್ಸೊಂದರಲ್ಲೇ ಭಾರತದಿಂದ ಹೊರಟು 70 ದಿನಗಳಲ್ಲಿ ಲಂಡನ್‌ ತಲುಪುವ ಮಾರ್ಗವಿದು. ಇಂಥ ಪ್ರವಾಸವೊಂದು ಮುಂದಿನ ವರ್ಷ ಅಂದರೆ 2023 ಎಪ್ರಿಲ್‌ನಲ್ಲಿ ಆರಂಭವಾಗಲಿದೆ.

ಈ ವನ್‌ ವೇ ಪ್ರವಾಸ ಗೈಡ್‌ಗಳನ್ನೂ, ಸ್ಥಳೀಯ ಪ್ರವಾಸ, ಹೊಟೇಲ್‌, ವಿಸಾ, ಊಟ ತಿಂಡಿಗಳ ವೆಚ್ಚ ಎಲ್ಲವನ್ನೂ ಒಳಗೊಂಡಿದೆ. ಭಾರತದಿಂದ ಹೊರಡಲಿರುವ ಈ ಬಸ್ಸು ಥಾಯ್ಲೆಂಡ್‌, ಲಾವೋಸ್‌, ಮಯನ್ಮಾರ್‌, ಚೀನಾ, ಕಜಕಿಸ್ತಾನ್‌, ರಷ್ಯಾ, ಕಿರ್ಗಿಸ್ತಾನ್‌, ಲತ್ವಿಯಾ, ಉಜ್ಬೇಕಿಸ್ತಾನ್‌, ಲಿತುವೇನಿಯಾ, ಜರ್ಮನಿ, ಪೋಲೆಂಡ್‌, ನೆದರ್‌ಲ್ಯಾಂಡ್‌, ಝೆಕ್‌ ರಿಪಬ್ಲಿಕ್‌, ಬೆಲ್ಜಿಯಂ, ಫ್ರಾನ್ಸ್‌ ದಾಟಿಕೊಂಡು ಲಂಡನ್‌ ತಲುಪಲಿದೆ.

ಇದನ್ನೂ ಓದಿ | Rain travel: ಮಳೆಯಲಿ ಜೊತೆಯಲಿ ಇಲ್ಲಿಗೆ ಪ್ರವಾಸ ಮಾಡಿ!

ಈ ಇಡೀ ಪ್ರಯಾಣಕ್ಕೆ 15 ಲಕ್ಷ ರುಪಾಯಿಗಳ ವೆಚ್ಚ ತಗುಲಲಿದೆ. ಕೋವಿಡ್‌ ಕಾರಣದಿಂದ ಈ ಪ್ರವಾಸ ತಡವಾಗಿದ್ದು, ಹಲವು ದೇಶಗಳಲ್ಲಿ ಕೋವಿಡ್‌ ಕುರಿತು ಇದ್ದ ನಿರ್ಬಂಧಗಳಿಂದಾಗಿಯೇ ಮತ್ತಷ್ಟು ತಡವಾಗಿತ್ತು.

ಬ್ರಿಟಿಷ್‌ ಕಂಪನಿ ಪ್ರಯಾಣ ಶುರು ಮಾಡಿತ್ತು

1957ರಲ್ಲಿ ಕೋಲ್ಕತ್ತಾ- ಲಂಡನ್‌ ಬಸ್‌ ಪ್ರಯಾಣವನ್ನು ಬ್ರಿಟಿಷ್‌ ಕಂಪನಿಯೊಂದು ಆರಂಭಿಸಿತ್ತು. ಆಗ ಇದರ ವೆಚ್ಚ ಭಾರತದಿಂದ ಲಂಡನ್‌ಗೆ 85 ಪೌಂಡ್‌ ಹಾಗೂ ಲಂಡನ್‌ ನಿಂದ ಭಾರತಕ್ಕೆ ಮರಳಿ 65 ಪೌಂಡ್‌ ತಗುಲಿತ್ತು. ಆಗ ಈ ಬಸ್‌ ಫ್ರಾನ್ಸ್‌, ಇಟಲಿ, ಯುಗೋಸ್ಲಾವಿಯಾ, ಬಲ್ಗೇರಿಯಾ, ಟರ್ಕಿ, ಇರಾನ್‌ ಹಾಗೂ ಪಾಕಿಸ್ತಾನಗಳ ಮೂಲಕ ಭಾರತಕ್ಕೆ ಬಂದಿತ್ತು. ಇದರ ನಂತರ ಸಾಕಷ್ಟು ಮಂದಿ ಇಂಥದ್ದೇ ಪ್ರವಾಸದಿಂದ ಸ್ಪೂರ್ತಿಗೊಂಡು ಕಾರುಗಳಲ್ಲಿ, ಹಾಗೂ ಇತರ ಸಾರಿಗೆಗಳ ಮೂಲಕ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿದ, ಲೋಕ ಸುತ್ತಿದ ಉದಾಹರಣೆಗಳಿವೆ. ಈಗಲೂ ಇವೆ. ಮನುಷ್ಯನ ಮೂಲತಃ ಅಲೆಮಾರಿ ಸ್ವಭಾವ ಆತನನ್ನು ಪದೇ ಪದೇ ಇಂತಹ ಸಾಹಸಗಳನ್ನು ಮಾಡುವಂತೆ ಪ್ರೇರೇಪಿಸುತ್ತಲೇ ಇರುತ್ತದೆ ಎಂಬುದಕ್ಕೆ ಇದೇ ಉದಾಹರಣೆಯಾಗಿದೆ.

Adventures Overland

ಇದೀಗ 46 ವರ್ಷಗಳ ನಂತರ ಮತ್ತೆ ಆರಂಭವಾಗಿದೆ. ಅಡ್ವೆಂಚರ್‌ ಓವರ್‌ಲ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಈ ಪ್ರವಾಸವನ್ನು ಆಯೋಜಿಸಿದೆ. ರಸ್ತೆಯಲ್ಲಿ ಸಾಗುತ್ತಾ ಸಾಗುತ್ತಾ, ವಿವಿಧ ದೇಶಗಳ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವ ಅಪರೂಪದ ಭಾಗ್ಯ ಇದಾಗಿದೆ.

ಅಭೂತಪೂರ್ವ ಪಯಣ

ಈ ಪ್ರಯಾಣದಲ್ಲಿ ಮಯನ್ಮಾರಿನ ಪಗೋಡಾಗಳು, ಚೈನಾದ ಮಹಾಗೋಡೆ,‌ ಉಜ್ಬೇಕಿಸ್ತಾನದ ಬುಕಾರಾ, ತಾಷ್ಕೆಂಟ್ ನಗರಗಳು, ಕಜಕಿಸ್ತಾನದಲ್ಲಿ ಕ್ಯಾಸ್ಪಿಯನ್‌ ಸಮುದ್ರದಲ್ಲಿ ಕ್ರೂಸ್‌ ಮತ್ತಿತರ ಪ್ರವಾಸೀ ಆಕರ್ಷಣೆಗಳನ್ನು ಹೊಂದಿದೆ. ಈ ಬಸ್‌ ಪ್ರಯಾಣ ಲಂಡನ್‌ ತಲುಪಿದ ಮೇಲೆ ಒಂದು ತಿಂಗಳ ಬ್ರೇಕ್‌ ನಂತರ ಲಂಡನ್‌ನಿಂದ ಭಾರತಕ್ಕೆ ಮರಳಿ ಹೊರಡಲಿದೆ. ಮರಳುವ ಮಾರ್ಗ ಹೋದ ರಸ್ತೆಯೇ ಆಗಿರಲಿದೆ. ಭಾರತ -ಲಂಡನ್‌ ಬಸ್‌ ಪ್ರಯಾಣದ ಪ್ರತಿಯೊಂದು ದಿನವೂ ಜೀವನದ ಅತ್ಯಪೂರ್ವ ಮರೆಯದ ಗಳಿಗೆಗಳಾಗಿ ಉಳಿಯಲಿದ್ದು. ಜೀವಿತಾವಧಿಯಲ್ಲಿ ಅನುಭವಿಸಬಹುದಾದ ಅಭೂತಪೂರ್ವ ಪಯಣಗಳಲ್ಲಿ ಒಂದಾಗಿದೆ.

ಇದನ್ನೂ ಓದಿ | ಕಬಿನಿ ಕಾಡಿನ ಭೋಗೇಶ್ವರ ಇನ್ನು ನೆನಪು ಮಾತ್ರ, ಹಿರಿಯಜ್ಜನ ಕಳೆದುಕೊಂಡ ದು:ಖದಲ್ಲಿ ಪ್ರವಾಸಿಗರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Modi 3.0 Cabinet: ಅಮಿತ್‌ ಶಾಗೆ ಮತ್ತೆ ಗೃಹ ಖಾತೆ; ಇಲ್ಲಿದೆ ಮೋದಿ ಸಂಪುಟ ಸಚಿವರು ಮತ್ತು ಖಾತೆ ಪಟ್ಟಿ

Modi 3.0 Cabinet: ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಯಾರಿಗೆ ಯಾವ ಖಾತೆ ನೀಡಲಾಗಿದೆ? ಯಾರಿಗೆ ಸಂಪುಟ ದರ್ಜೆ? ಯಾರಿಗೆ ರಾಜ್ಯ ಖಾತೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Modi 3.0 Cabinet
Koo

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ (Portfolios) ಮಾಡಿದ್ದಾರೆ. ನರೇಂದ್ರ ಮೋದಿ ಅವರು ಮಹತ್ವದ ಖಾತೆಗಳನ್ನು ಬಿಜೆಪಿ ಸಚಿವರಿಗೇ ನೀಡಿದ್ದಾರೆ. ಕೇಂದ್ರ ಗೃಹ ಖಾತೆಯನ್ನು ಅಮಿತ್‌ ಶಾ ಅವರೇ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾಗೂ ಭೂಸಾರಿಗೆ ಖಾತೆಗಳನ್ನು ನಿತಿನ್‌ ಗಡ್ಕರಿ ಅವರೇ ಮುಂದುರಿಸಿಕೊಂಡು ಹೋಗಲಿದ್ದಾರೆ. ನರೇಂದ್ರ ಮೋದಿ ಅವರು ಯಾರಿಗೆ ಯಾವ ಖಾತೆ ನೀಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ಹೀಗಿದೆ ಸಂಪುಟ ದರ್ಜೆ ಸಚಿವರ ಪಟ್ಟಿ ಹಾಗೂ ಅವರ ಖಾತೆಗಳು

  • ಅಮಿತ್ ಶಾ (ಬಿಜೆಪಿ- ಗುಜರಾತ್)- ಗೃಹ ಖಾತೆ
  • ರಾಜನಾಥ್ ಸಿಂಗ್ (ಬಿಜೆಪಿ- ಉತ್ತರ ಪ್ರದೇಶ)- ರಕ್ಷಣಾ ಖಾತೆ
  • ನಿತಿನ್ ಗಡ್ಕರಿ (ಬಿಜೆಪಿ- ಮಹಾರಾಷ್ಟ್ರ)- ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸಾರಿಗೆ
  • ಜೆ.ಪಿ.ನಡ್ಡಾ (ಬಿಜೆಪಿ- ಹಿಮಾಚಲ ಪ್ರದೇಶ)- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ- ಮಧ್ಯಪ್ರದೇಶ )-‌ ಕೃಷಿ‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
  • ನಿರ್ಮಲಾ ಸೀತಾರಾಮನ್ (ರಾಜ್ಯಸಭೆ ಬಿಜೆಪಿ ಸದಸ್ಯೆ)- ಹಣಕಾಸು
  • ಎಸ್.ಜೈ ಶಂಕರ್ (ರಾಜ್ಯಸಭೆ ಬಿಜೆಪಿ ಸದಸ್ಯ)- ವಿದೇಶಾಂಗ ವ್ಯವಹಾರಗಳ ಖಾತೆ
  • ಮನೋಹರ ಲಾಲ್‌ ಖಟ್ಟರ್‌ (ಬಿಜೆಪಿ- ಹರಿಯಾಣ)- ಇಂಧನ‌ ಮತ್ತು ವಸತಿ
  • ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌- ಕರ್ನಾಟಕ)- ಉಕ್ಕು ಮತ್ತು ಬೃಹತ್‌ ಕೈಗಾರಿಕೆ
  • ಪಿಯೂಷ್‌ ಗೋಯಲ್‌ (ಬಿಜೆಪಿ- ಮಹಾರಾಷ್ಟ್ರ )- ವಾಣಿಜ್ಯ
  • ಧರ್ಮೇಂದ್ರ ಪ್ರಧಾನ್ (ಬಿಜೆಪಿ- ಒಡಿಶಾ): ಶಿಕ್ಷಣ‌, ಮಾನವ ಸಂಪನ್ಮೂಲ
  • ಜಿತನ್ ರಾಮ್ ಮಾಂಝಿ (ಎಚ್‌ಎಎಂ- ಬಿಹಾರ)- ಸಣ್ಣ ಮತ್ತು ಮಧ್ಯಮ ಕೈಗಾರಿಕೆ
  • ರಾಜೀವ್‌ ರಂಜನ್‌ ಸಿಂಗ್‌ (ಲಲನ್‌ ಸಿಂಗ್-ಜೆಡಿಯು-ಬಿಹಾರ)
  • ಸರ್ಬಾನಂದ ಸೋನೊವಾಲ್‌‌ (ಬಿಜೆಪಿ- ಅಸ್ಸಾಂ): ಬಂದರು, ಜಲಸಾರಿಗೆ
  • ರಾಮ್‌ ಮೋಹನ್‌ ನಾಯ್ಡು (ಟಿಡಿಪಿ-ಆಂಧ್ರಪ್ರದೇಶ)- ನಾಗರಿಕ ವಿಮಾನಯಾನ
  • ಪ್ರಲ್ಹಾದ್‌ ಜೋಶಿ (ಬಿಜೆಪಿ- ಕರ್ನಾಟಕ): ಆಹಾರ ಮತ್ತು ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ
  • ಡಾ.ವೀರೇಂದ್ರ ಕುಮಾರ್ (ಬಿಜೆಪಿ-ಮಧ್ಯಪ್ರದೇಶ)- ಸಾಮಾಜಿಕ ನ್ಯಾಯ
  • ಜುವೆಲ್‌ ಒರಾಮ್‌ (ಬಿಜೆಪಿ- ಒಡಿಶಾ)- ಬುಡಕಟ್ಟು
  • ಗಿರಿರಾಜ್‌ ಸಿಂಗ್‌ (ಬಿಜೆಪಿ-ಬಿಹಾರ) -‌ ಜವಳಿ
  • ಅಶ್ವಿನಿ ವೈಷ್ಣವ್‌ (ಬಿಜೆಪಿ-ರಾಜಸ್ಥಾನ-ರಾಜ್ಯಸಭೆ ಸದಸ್ಯ) – ರೈಲ್ವೆ ಮತ್ತು ಮಾಹಿತಿ ಪ್ರಸಾರ
  • ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ-ಮಧ್ಯಪ್ರದೇಶ)- ಟೆಲಿಕಾಮ್
  • ಭೂಪೇಂದ್ರ ಯಾದವ್‌ (ಬಿಜೆಪಿ-ರಾಜಸ್ಥಾನ)- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
  • ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ- ರಾಜಸ್ಥಾನ): ಪ್ರವಾಸೋದ್ಯಮ ಮತ್ತು ಸಂಸ್ಕೃತಿ
  • ಅನ್ನಪೂರ್ಣ ದೇವಿ (ಬಿಜೆಪಿ-ಜಾರ್ಖಂಡ್)-ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಕಿರಣ್‌ ರಿಜಿಜು (ಬಿಜೆಪಿ- ಅರುಣಾಚಲ ಪ್ರದೇಶ)-‌ ಸಂಸದೀಯ ವ್ಯವಹಾರ
  • ಹರ್ದೀಪ್ ಸಿಂಗ್ ಪುರಿ (ರಾಜ್ಯಸಭೆ ಬಿಜೆಪಿ ಸದಸ್ಯ-ಪಂಜಾಬ್)- ಪೆಟ್ರೋಲಿಯಂ
  • ಡಾ.ಮನ್ಸುಖ್‌ ಮಂಡಾವೀಯ (ಬಿಜೆಪಿ-ಗುಜರಾತ್)‌: ಕಾರ್ಮಿಕ ಮತ್ತು ಉದ್ಯೋಗ
  • ಜಿ.ಕಿಶನ್‌ ರೆಡ್ಡಿ (ಬಿಜೆಪಿ-ತೆಲಂಗಾಣ)- ಕಲ್ಲಿದ್ದಿಲು ಮತ್ತು ಗಣಿಗಾರಿಕೆ
  • ಚಿರಾಗ್‌ ಪಾಸ್ವಾನ್‌ (ಎಲ್‌ಜೆಪಿ-ಬಿಹಾರ)-‌ ಆಹಾರ ಸಂಸ್ಕರಣೆ
  • ಸಿ.ಆರ್‌.ಪಾಟೀಲ್‌ (ಬಿಜೆಪಿ-ಗುಜರಾತ್)-ಜಲಶಕ್ತಿ (ಜಲಸಂಪನ್ಮೂಲ)

ರಾಜ್ಯ ಖಾತೆ ಸಚಿವರು

  • ವಿ. ಸೋಮಣ್ಣ: ಜಲಶಕ್ತಿ ಮತ್ತು ರೈಲ್ವೆ
  • ಶೋಭಾ ಕರಂದ್ಲಾಜೆ: ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ
  • ತೋಖನ್‌ ಸಾಹು (ಬಿಜೆಪಿ-ಛತ್ತೀಸ್‌ಗಢ)- ವಸತಿ ಮತ್ತು ನಗರಾಭಿವೃದ್ಧಿ
  • ಸುರೇಶ್‌ ಗೋಪಿ (ಬಿಜೆಪಿ-ಕೇರಳ)- ಸಂಸ್ಕೃತಿ ಮತ್ತು ಪ್ರವಾಸೋದ್ಯಮ
  • ಹರ್ಷ ಮಲ್ಹೋತ್ರಾ (ಬಿಜೆಪಿ-ದೆಹಲಿ)- ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸಾರಿಗೆ

ಯಾರಿಗೆ ಯಾವ ಖಾತೆಯ ಪಟ್ಟಿ ಇಲ್ಲಿದೆ

ಇದನ್ನೂ ಓದಿ: Modi 3.0 Cabinet: ಮೊದಲ ಸಂಪುಟ ಸಭೆಯಲ್ಲೇ ಮೋದಿ ಸಿಕ್ಸರ್;‌ ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

Continue Reading

ಕರ್ನಾಟಕ

Modi 3.0 Cabinet: ಜೋಶಿಗೆ ಆಹಾರ, ಎಚ್‌ಡಿಕೆಗೆ ಬೃಹತ್ ಕೈಗಾರಿಕೆ‌, ನಿರ್ಮಲಾಗೆ ವಿತ್ತ, ಸೋಮಣ್ಣಗೆ ಡಬಲ್‌ ಖುಷಿ, ಶೋಭಾಗೆ MSME

Modi 3.0 Cabinet: ಮೋದಿ 3.0 ಸಚಿವ ಸಂಪುಟದಲ್ಲಿ ರಾಜ್ಯದ ಐವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Koo

ಬೆಂಗಳೂರು: ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ (Modi 3.0 Cabinet) ರಾಜ್ಯದ ಐವರಿಗೆ ಸಚಿವ ಸ್ಥಾನ ಸಿಕ್ಕಿದೆ. ಪ್ರಲ್ಹಾದ್‌ ಜೋಶಿ, ಎಚ್‌.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದರೆ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಖಾತೆ ನೀಡಲಾಗಿದೆ.

ಕರ್ನಾಟಕದ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮತ್ತೆ ಹಣಕಾಸು ಖಾತೆ ನೀಡಲಾಗಿದ್ದು, ಕಳೆದ ಬಾರಿ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಪ್ರಲ್ಹಾದ್‌ ಜೋಶಿ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ರಕ್ಷಣೆ, ಮರು ಬಳಕೆ ಇಂಧನ ಖಾತೆ ನೀಡಲಾಗಿದೆ. ಇನ್ನು ಮಂಡ್ಯ ಸಂಸದ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಿಕ್ಕಿದೆ. ಬೆಂ.ಉತ್ತರ ಕ್ಷೇತ್ರ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ, ತುಮಕೂರು ಸಂಸದ ವಿ.ಸೋಮಣ್ಣ ಅವರಿಗೆ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ನೀಡಲಾಗಿದೆ.

ಯಾರಿಗೆ ಯಾವ ಖಾತೆ?

1.ನಿರ್ಮಲಾ ಸೀತಾರಾಮನ್‌– ಹಣಕಾಸು ಖಾತೆ (ಸಂಪುಟ ದರ್ಜೆ)
2.ಪ್ರಲ್ಹಾದ್‌ ಜೋಶಿ– ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ರಕ್ಷಣೆ, ಮರು ಬಳಕೆ ಇಂಧನ (ಸಂಪುಟ ದರ್ಜೆ)
3.ಎಚ್‌.ಡಿ.ಕುಮಾರಸ್ವಾಮಿ– ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ (ಸಂಪುಟ ದರ್ಜೆ)
4.ಶೋಭಾ ಕರಂದ್ಲಾಜೆ– ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ರಾಜ್ಯ ಖಾತೆ)
5. ವಿ.ಸೋಮಣ್ಣ- ಜಲಶಕ್ತಿ ಹಾಗೂ ರೈಲ್ವೆ ಖಾತೆ (ರಾಜ್ಯ ಖಾತೆ)

ಎನ್‌ಡಿಎ ಮೈತ್ರಿಕೂಟದ 30 ಸಂಸದರು ಕ್ಯಾಬಿನೆಟ್‌ ದರ್ಜೆಯ ಸ್ಥಾನ ನೀಡಲಾಗಿದೆ. ಹಾಗೆಯೇ ಐವರಿಗೆ ಸ್ವತಂತ್ರ ನಿರ್ವಹಣೆ ಮತ್ತು ‌36 ಸಂಸದರನ್ನು ರಾಜ್ಯ ಸಹಾಯಕ ಸಚಿವರನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ | Modi 3.0 Cabinet: ಮೊದಲ ಸಂಪುಟ ಸಭೆಯಲ್ಲೇ ಮೋದಿ ಸಿಕ್ಸರ್;‌ ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

Continue Reading

ಪ್ರಮುಖ ಸುದ್ದಿ

Modi 3.0 Cabinet: ಮೊದಲ ಸಂಪುಟ ಸಭೆಯಲ್ಲೇ ಮೋದಿ ಸಿಕ್ಸರ್;‌ ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

Modi 3.0 Cabinet: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿಯೇ ಸಂಪುಟ ಸಭೆ ನಡೆದಿದ್ದು, 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 31 ರಾಜ್ಯ ಖಾತೆ ಸಚಿವರು ಪಾಲ್ಗೊಂಡಿದ್ದರು. ಮೊದಲ ಸಂಪುಟ ಸಭೆಯಲ್ಲಿಯೇ ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದಕ್ಕೆ ಎಲ್ಲ ಸಚಿವರು ಸಹಮತ ಸೂಚಿಸಿದರು.

VISTARANEWS.COM


on

Modi 3.0 Cabinet
Koo

ನವದೆಹಲಿ: ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ (Narendra Modi) ಅವರು ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದು, ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ತೀರ್ಮಾನವನ್ನು ಮೊದಲ ಸಂಪುಟ ಸಭೆಯಲ್ಲಿ (Modi 3.0 Cabinet) ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ (Pradhan Mantri Awas Yojana-PMAY) ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿಯೇ ಸಂಪುಟ ಸಭೆ ನಡೆದಿದ್ದು, 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 31 ರಾಜ್ಯ ಖಾತೆ ಸಚಿವರು ಪಾಲ್ಗೊಂಡಿದ್ದರು. ಮೊದಲ ಸಂಪುಟ ಸಭೆಯಲ್ಲಿಯೇ ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದಕ್ಕೆ ಎಲ್ಲ ಸಚಿವರು ಸಹಮತ ಸೂಚಿಸಿದರು. ಇದರೊಂದಿಗೆ ಮೊದಲ ಸಂಪುಟ ಸಭೆಯಲ್ಲಿಯೇ ಬಡವರಿಗೆ ಅನುಕೂಲವಾಗುವ ತೀರ್ಮಾನ ತೆಗೆದುಕೊಂಡಂತಾಗಿದೆ.

ಏನಿದು ಯೋಜನೆ? ಹೇಗೆ ಅನುಕೂಲ?

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಸ್ವಂತ ಮನೆ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್‌ ಯೋಜನೆ ಜಾರಿಗೆ ತಂದಿದೆ. ಯೋಜನೆ ಅಡಿಯಲ್ಲಿ ಫಲಾನುಭವಿಗಳು ಬಯಲು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು 1.20 ಲಕ್ಷ ರೂ. ನೀಡಲಾಗುತ್ತದೆ. ಇನ್ನು ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು 1.30 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸುಮಾರು 4.21 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ.

ಭಾನುವಾರ ಸಂಜೆ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ‘ಪಿಎಂ ಕಿಸಾನ್ ನಿಧಿ’ ಬಿಡುಗಡೆಯ ಕಡತಕ್ಕೆ ಸಹಿ ಹಾಕಿದರು. ಇದು ಅವರು ಮೂರನೇ ಅವಧಿಯಲ್ಲಿ ಸಹಿ ಹಾಕಿದ ಮೊದಲ ಫೈಲ್​. ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಕಡತಕ್ಕೆ ಅವರು ಸಹಿ ಹಾಕಿದರು. ಇದು 9.3 ಕೋಟಿ ರೈತರಿಗೆ ಪ್ರಯೋಜನ ನೀಡುವ ಸುಮಾರು 20,000 ಕೋಟಿ ರೂ. ಬಿಡುಗಡೆಯಾಗಲಿದೆ.

ಇದನ್ನೂ ಓದಿ: Tshering Tobgay: ಮೋದಿ ನನ್ನ ಗುರು, ದೊಡ್ಡಣ್ಣ;‌ ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೋಬ್ಗೆ ಬಹುಪರಾಕ್!

Continue Reading

ದೇಶ

Suresh Gopi: ಸಚಿವ ಸ್ಥಾನಕ್ಕೆ ಬಿಜೆಪಿಯ ಸುರೇಶ್‌ ಗೋಪಿ ರಾಜೀನಾಮೆ; ಮಹತ್ವದ ಸ್ಪಷ್ಟನೆ ಕೊಟ್ಟ ಸಂಸದ

Suresh Gopi: ಎಡರಂಗದ ಭದ್ರಕೋಟೆಯಾಗಿದ್ದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುರೇಶ್ ಗೋಪಿ ಅವರು ಸಿಪಿಐನ ವಿ.ಎಸ್.ಸುನಿಲ್ ಕುಮಾರ್ ಅವರನ್ನು 74,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇವರು ಭಾನುವಾರ ಕೇಂದ್ರ ಖಾತೆ ಸಹಾಯಕ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ

VISTARANEWS.COM


on

Suresh Gopi
Koo

ತಿರುವನಂತಪುರಂ: ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್‌ ಗೋಪಿ (Suresh Gopi) ಅವರು ಕೇಂದ್ರ ಸಚಿವ ಸ್ಥಾನಕ್ಕೆ (Central Minister) ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸಚಿವನಾಗಿ ಇರುವುದಕ್ಕಿಂತ, ಸಂಸದನಾಗಿ ಕೆಲಸ ಮಾಡಲು ಅವರು ಬಯಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ, ಸುರೇಶ್‌ ಗೋಪಿ ಅವರು ಮಹತ್ವದ ಸ್ಪಷ್ಟನೆ ನೀಡಿದ್ದು, “ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎನ್ನುವ ವರದಿಗಳು ಶುದ್ಧ ಸುಳ್ಳು” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

“ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ/ ಆದರೆ, ಇದು ಶುದ್ಧ ಸುಳ್ಳು. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇರಳದ ಏಳಿಗೆಗೆ ಶ್ರಮಿಸುತ್ತೇನೆ” ಎಂಬುದಾಗಿ ಸುರೇಶ್‌ ಗೋಪಿ ಅವರು ಪೋಸ್ಟ್‌ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಮೋದಿ 3.0 ಕ್ಯಾಬಿನೆಟ್​ನಲ್ಲಿ ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಸುರೇಶ್ ಗೋಪಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುದ್ದೆಯಿಂದ ಮುಕ್ತರಾಗಲು ಮತ್ತು ತ್ರಿಶೂರ್ ಜನರಿಗಾಗಿ ಸಂಸದರಾಗಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ. ನಟ-ರಾಜಕಾರಣಿ ಸುರೇಶ್ ಗೋಪಿ ಅವರು ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅವುಗಳನ್ನು ಮುಗಿಸಲೇಬೇಕು ಎಂದು ಹೇಳಿದ್ದಾರೆ ಎಂಬುದಾಗಿ ವರದಿಯಾಗಿತ್ತು.

ಸಂಸದನಾಗಿ ಕೆಲಸ ಮಾಡುವುದು ನನ್ನ ಗುರಿ. ನಾನು ಏನನ್ನೂ ಕೇಳಲಿಲ್ಲ. ನನಗೆ ಈ ಹುದ್ದೆ ಅಗತ್ಯವಿಲ್ಲ ಎಂದು ನಾನು ಹೇಳಿದ್ದೆ. ನಾನು ಶೀಘ್ರದಲ್ಲೇ ಹುದ್ದೆಯಿಂದ ಮುಕ್ತನಾಗುತ್ತೇನೆ ಎಂದು ನಾನು ಭಾವಿಸುತ್ತೇನೆ. ತ್ರಿಶೂರ್ ಮತದಾರರಿಗೆ ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಅದು ತಿಳಿದಿದೆ ಮತ್ತು ಸಂಸದನಾಗಿ ನಾನು ಅವರಿಗಾಗಿ ಕಾರ್ಯನಿರ್ವಹಿಸುತ್ತೇನೆ. ನಾನು ನನ್ನ ಚಲನಚಿತ್ರಗಳನ್ನು ಮುಗಿಸಬೇಕು ಎಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ದೆಹಲಿಯಲ್ಲಿ ಹೇಳಿದ್ದಾರೆ ಎಂಬ ವರದಿಗಳು ಕೇಳಿಬಂದಿದ್ದವು.

ಎಡರಂಗದ ಭದ್ರಕೋಟೆಯಾಗಿದ್ದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುರೇಶ್ ಗೋಪಿ ಅವರು ಸಿಪಿಐನ ವಿ.ಎಸ್.ಸುನಿಲ್ ಕುಮಾರ್ ಅವರನ್ನು 74,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕೆ ಮುರಳೀಧರನ್ ಅವರನ್ನು ಕಣಕ್ಕಿಳಿಸಿತ್ತು. 2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಸುರೇಶ್ ಗೋಪಿ ‘ತ್ರಿಶೂರ್​ಗೆ ಕೇಂದ್ರ ಸಚಿವ ಸ್ಥಾನ, ಮೋದಿಯವರ ಗ್ಯಾರಂಟಿ’ ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Suresh Gopi: ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿರುವ ಸುರೇಶ್‌ ಗೋಪಿ ಜೀವನದಲ್ಲಿ ನಡೆದಿತ್ತೊಂದು ಘೋರ ದುರಂತ

Continue Reading
Advertisement
Modi 3.0 Cabinet
ದೇಶ6 mins ago

Modi 3.0 Cabinet: ಅಮಿತ್‌ ಶಾಗೆ ಮತ್ತೆ ಗೃಹ ಖಾತೆ; ಇಲ್ಲಿದೆ ಮೋದಿ ಸಂಪುಟ ಸಚಿವರು ಮತ್ತು ಖಾತೆ ಪಟ್ಟಿ

ಕರ್ನಾಟಕ10 mins ago

Modi 3.0 Cabinet: ಜೋಶಿಗೆ ಆಹಾರ, ಎಚ್‌ಡಿಕೆಗೆ ಬೃಹತ್ ಕೈಗಾರಿಕೆ‌, ನಿರ್ಮಲಾಗೆ ವಿತ್ತ, ಸೋಮಣ್ಣಗೆ ಡಬಲ್‌ ಖುಷಿ, ಶೋಭಾಗೆ MSME

Sowing seed distribution in Shira by MLA TB Jayachandra
ತುಮಕೂರು21 mins ago

Shira News: ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಶಾಸಕ ಟಿ.ಬಿ.ಜಯಚಂದ್ರ

World Environment Day celebration in Banavasi
ಉತ್ತರ ಕನ್ನಡ23 mins ago

Banavasi News: ಬನವಾಸಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Vinay Kulkarni
ಕರ್ನಾಟಕ1 hour ago

Vinay Kulkarni: ವಿನಯ್ ಕುಲಕರ್ಣಿಗೆ ತೀವ್ರ ಹಿನ್ನಡೆ; ಸಿಬಿಐ ವಿಶೇಷ ಕೋರ್ಟ್‌ನ ತೀರ್ಪು ಎತ್ತಿ ಹಿಡಿದ ಸುಪ್ರೀಂ

Modi 3.0 Cabinet
ಪ್ರಮುಖ ಸುದ್ದಿ1 hour ago

Modi 3.0 Cabinet: ಮೊದಲ ಸಂಪುಟ ಸಭೆಯಲ್ಲೇ ಮೋದಿ ಸಿಕ್ಸರ್;‌ ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

Students Fashion
ಫ್ಯಾಷನ್2 hours ago

Students Fashion: ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್!

Suresh Gopi
ದೇಶ2 hours ago

Suresh Gopi: ಸಚಿವ ಸ್ಥಾನಕ್ಕೆ ಬಿಜೆಪಿಯ ಸುರೇಶ್‌ ಗೋಪಿ ರಾಜೀನಾಮೆ; ಮಹತ್ವದ ಸ್ಪಷ್ಟನೆ ಕೊಟ್ಟ ಸಂಸದ

Medical student commits suicide in Bengaluru
ಬೆಂಗಳೂರು2 hours ago

Medical Student : ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿ ನೇಣಿಗೆ ಶರಣು

Shivaraj Kumar
ಕರ್ನಾಟಕ2 hours ago

Shivaraj Kumar: ನನ್ನ ಹೆಂಡತಿ ಗೆಲ್ಲಲಿ ಎಂದು ಆಸೆ ಪಟ್ಟಿದ್ದು ತಪ್ಪಾ?: ನಟ ಶಿವರಾಜ್‌ ಕುಮಾರ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ4 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ7 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌