Crime News: ಶೀಲ ಶಂಕಿಸಿ ಪತ್ನಿಯ ಮರ್ಮಾಂಗಕ್ಕೆ ಚೂರಿಯಿಂದ ಇರಿದ! - Vistara News

ಕ್ರೈಂ

Crime News: ಶೀಲ ಶಂಕಿಸಿ ಪತ್ನಿಯ ಮರ್ಮಾಂಗಕ್ಕೆ ಚೂರಿಯಿಂದ ಇರಿದ!

ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಜಾರ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಪತ್ನಿ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾದ (crime news) ಪತಿ ರೌಡಿಶೀಟರ್‌ ದಯಾನಂದ ಅಲಿಯಾಸ್‌ ನಂದ ಎಂಬಾತ. ನಿನ್ನೆ ರಾತ್ರಿ 9.45ರ ಸುಮಾರಿಗೆ ಘಟನೆ ನಡೆದಿದೆ.

VISTARANEWS.COM


on

dayananda rowdysheeter assaults on wife
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪತ್ನಿಯ ನಡತೆಯ ಬಗ್ಗೆ ಅನುಮಾನ ಪಟ್ಟಿರುವ ರೌಡಿಶೀಟರ್‌ ಪಾಪಿ ಗಂಡನೊಬ್ಬ ಪತ್ನಿಯ ಮರ್ಮಾಂಗಕ್ಕೇ ಚಾಕುವಿನಿಂದ ಇರಿದಿದ್ದಾನೆ.

ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಜಾರ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಪತ್ನಿ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾದ ಪತಿ ರೌಡಿಶೀಟರ್‌ ದಯಾನಂದ ಅಲಿಯಾಸ್‌ ನಂದ ಎಂಬಾತ. ನಿನ್ನೆ ರಾತ್ರಿ 9.45ರ ಸುಮಾರಿಗೆ ಘಟನೆ ನಡೆದಿದೆ.

ನೀಲಸಂದ್ರದ ಈ ಕೇಡಿ ದಯಾನಂದ, ಪ್ರಿಯಾಂಕ ಎಂಬಾಕೆಯನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಯಾವುದೋ ಅಪರಾಧ ಪ್ರಕರಣದಲ್ಲಿ ಜೈಲಿನಲ್ಲಿದ್ದ ಈತ ಮೂರು ದಿನದ ಹಿಂದೆಯಷ್ಟೇ ಪರಪ್ಪನ ಅಗ್ರಹಾರದಿಂದ ಹೊರಬಂದಿದ್ದ. ಈತ ಹಿಂದೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದಲ್ಲಿಯೂ ಜೈಲಿಗೆ ಹೋಗಿ ಬಂದಿದ್ದ. ಅದೇ ಠಾಣೆಯಲ್ಲಿ ರೌಡಿಶೀಟ್‌ ಕೂಡ ಈತನ ಹೆಸರಿನಲ್ಲಿ ಓಪನ್ ಆಗಿತ್ತು. ಇಂತಹ ದಯಾನಂದ ಪದೇ ಪದೆ ಹಲ್ಲೆ ರೀತಿಯ ಕೃತ್ಯಗಳನ್ನು ಎಸಗಿ ಜೈಲಿಗೆ ಹೋಗಿಬರುವುದಲ್ಲದೆ, ಮನೆಯಲ್ಲಿಯೂ ಪತ್ನಿಗೆ ಹಿಂಸೆ ನೀಡುತ್ತಿದ್ದ.

ಸದಾ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಈತ ಪತ್ನಿ ಮೇಲೆ ಅನುಮಾನ ಪಟ್ಟು ತಕರಾರು ತೆಗೆಯುತ್ತಿದ್ದ. ಪತ್ನಿ ಫೋನ್‌ನಲ್ಲಿ ಮಾತಾಡುತ್ತಾಳೆ ಎಂದು ಕಿರಿಕ್‌ ತೆಗೆಯುತ್ತಿದ್ದ. ಪತ್ನಿ ಕೆಲಸಕ್ಕೆ ಹೋಗುತ್ತಿದ್ದ ಸ್ಥಳದಲ್ಲಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇದೆ ಎಂದು ಅನುಮಾನ ಪಟ್ಟು ಜಗಳ ಮಾಡಿದ್ದ. ನಿನ್ನೆ ರಾತ್ರಿ ಕೂಡಾ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ದಯಾನಂದ ಮಲಗಿದ್ದ ಪತ್ನಿಯ ಜೊತೆ ಏಕಾಏಕಿ ಜಗಳ ತೆಗೆದು ಅಡುಗೆ ಕೋಣೆಯಲ್ಲಿದ್ದ ಚಾಕು ತೆಗೆದುಕೊಂಡು ಬಂದು ಮಕ್ಕಳ ಮುಂದೆಯೇ ಪತ್ನಿಯ ಹೊಟ್ಟೆ ಹಾಗೂ ಗುಪ್ತಾಂಗಕ್ಕೆ ಇರಿದಿದ್ದಾನೆ.

ಪತ್ನಿಗೆ ರಕ್ತಸ್ರಾವವಾಗಿ ಕಿರುಚಾಡುತ್ತಿದ್ದಂತೆ ಗಂಡ ಕಾಲ್ಕಿತ್ತಿದ್ದಾನೆ. ಸ್ಥಳೀಯರು 112ಗೆ ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಹೊಯ್ಸಳದ ಮೂಲಕ ಗಾಯಾಳು ಪ್ರಿಯಾಂಕಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ನಡುರಸ್ತೆಯಲ್ಲಿ ಗಂಡನಿಂದ ಚಾಕು ಇರಿತ, ಮಹಿಳೆಯ ಪ್ರಾಣ ಉಳಿಸಿದ ಪೊಲೀಸರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಹೆಣಗಳು ಬೀಳುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದಲ್ಲಿ ಮಾವನ 300 ಕೋಟಿ ರೂ. ಆಸ್ತಿಯನ್ನು ಕಬಳಿಸಲು ಸೊಸೆಯು ಒಂದು ಕೋಟಿ ರೂ. ಸುಪಾರಿ ಕೊಟ್ಟು, ಮಾವನನ್ನು ಕೊಲೆ ಮಾಡಿಸಿದ್ದಾಳೆ. ಮೊದಲು ಹಿಂಟ್‌ ಆ್ಯಂಡ್‌ ರನ್‌ ಪ್ರಕರಣ ಆಗಿದ್ದ ಇದು ಈಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ.

VISTARANEWS.COM


on

Mumbai
Koo

ಮುಂಬೈ: ಒಂದು ವಾರದ ಹಿಂದೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ನಡೆದ ಹಿಂಟ್‌ ಆ್ಯಂಡ್‌ ರನ್‌ ಕೇಸ್‌ಗೆ (Hit And Run Case) ಹೊಸದೊಂದು ಟ್ವಿಸ್ಟ್‌ ಸಿಕ್ಕಿದೆ. ಹಿಂಟ್‌ ಆ್ಯಂಡ್‌ ರನ್‌ಗೆ 82 ವರ್ಷದ ವ್ಯಕ್ತಿಯು ಕಳೆದ ವಾರ ಬಲಿಯಾಗಿದ್ದರು. ಆದರೆ, ಪೊಲೀಸ್‌ ತನಿಖೆಯ ಬಳಿಕ ಭೀಕರ ಮಾಹಿತಿಯೊಂದು ಬಯಲಾಗಿದೆ. ಮಾವನ 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಡೆಯಲು ಸೊಸೆಯೇ 1 ಕೋಟಿ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ ಎಂಬ ಸಂಗತಿಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಹೌದು, ನಾಗ್ಪುರ ಪ್ಲಾನಿಂಗ್‌ ಡಿಪಾರ್ಟ್‌ನಲ್ಲಿ ಸಹಾಯಕ ನಿರ್ದೇಶಕಿಯಾಗಿರುವ ಅರ್ಚನಾ ಮನೀಶ್‌ ಪುಟ್ಟೇವಾರ್ ಎಂಬ ಮಹಿಳೆಯು ಸುಪಾರಿ ಕೊಟ್ಟು ತಮ್ಮ ಮಾವ, 82 ವರ್ಷದ ಪುರುಷೋತ್ತಮ್‌ ಪುಟ್ಟೇವಾರ್ ಅವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಸಂಗತಿಯು ಪೊಲೀಸರ ತನಿಖೆಯಿಂದ ಬಯಲಾಗಿದೆ. “ಮಾವನ ಹತ್ಯೆಗಾಗಿ ಮಹಿಳೆಯು ಸುಪಾರಿ ಕೊಟ್ಟಿದ್ದಾರೆ. ಹಲವು ದುಷ್ಕರ್ಮಿಗಳಿಗೆ 1 ಕೋಟಿ ರೂ. ಕೊಟ್ಟ ಅವರು, ಹಳೆಯ ಕಾರು ಖರೀದಿಸಿ, ಮಾವನಿಗೆ ಡಿಕ್ಕಿ ಹೊಡೆಸಿ ಕೊಂದು ಬಿಡಿ. ಆದರೆ, ಅದು ಅಪಘಾತದ ರೀತಿ ಆಗಿರಬೇಕು ಎಂಬುದಾಗಿ ಸೂಚಿಸಿದ್ದರು” ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.

ಅರ್ಚನಾ ಮನೀಶ್‌ ಪಟ್ಟೇವಾರ್‌ ಅವರು ಪತಿಯ ಕಾರಿನ ಚಾಲಕನಾಗಿರುವ ಬಾಗ್ಡೆ, ಇತರ ಆರೋಪಿಗಳಾದ ನೀರಜ್‌ ನಿಮ್ಜೆ ಹಾಗೂ ಸಚಿನ್‌ ಧಾರ್ಮಿಕ್‌ ಎಂಬುವರಿಗೆ ಹಣ ಕೊಟ್ಟು ಸಂಚು ರೂಪಿಸಿದ್ದಾರೆ. ಇವರ ಸಂಚು ಬಯಲಾದ ಬಳಿಕ ಮೂವರನ್ನು ಬಂಧಿಸಿದ ಪೊಲೀಸರು, ಭಾರತೀಯ ದಂಡ ಸಂಹಿತೆ (IPC), ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಇವರಿಂದ ಎರಡು ಕಾರು, ಮೊಬೈಲ್‌ಗಳು ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪುರುಷೋತ್ತಮ್‌ ಪುಟ್ಟೇವಾರ್‌ ಅವರ ಪತ್ನಿ ಶಕುಂತಲಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿದ್ದರು. ಇವರನ್ನು ಭೇಟಿಯಾದ ಪುರುಷೋತ್ತಮ್‌ ಪುಟ್ಟೇವಾರ್‌ ಅವರು ಮನೆಗೆ ವಾಪಸಾಗುವಾಗ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದರು. ಕಾರು ಹಿಂದಿನಿಂದ ಗುದ್ದಿತ್ತು. ಇದೊಂದು ಹಿಂಟ್‌ ಆ್ಯಂಡ್‌ ರನ್‌ ಕೇಸ್‌ ಎಂದೇ ಭಾವಿಸಲಾಗಿತ್ತು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಸೊಸೆಯೇ ಕೊಲೆಗೆ ಸಂಚು ರೂಪಿಸಿದ್ದು ಬಯಲಾಗಿದೆ. ಅರ್ಚನಾ ಅವರ ಪತಿಯು ವೃತ್ತಿಯಲ್ಲಿ ವೈದ್ಯರಾಗಿದ್ದು, ಪತ್ನಿಯ ಸಂಚು ತಿಳಿದು ಅವರಿಗೆ ಶಾಕ್‌ ಆಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Murder case : ಹಿರಿಯ ಸ್ವಾಮೀಜಿ ಕೊಂದ‌ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Continue Reading

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್‌ ರೇವಣ್ಣಗೆ ಮತ್ತೆ 6 ದಿನ ಎಸ್‌ಐಟಿ ಕಸ್ಟಡಿ

Prajwal Revanna Case: ಕಸ್ಟಡಿಗೆ ನೀಡುವಂತೆ 42ನೇ ಎಸಿಎಂಎಂ ಕೋರ್ಟ್‌ಗೆ ಎಸ್‌ಐಟಿ ಅರ್ಜಿ ಸಲ್ಲಿಸಿತ್ತು. ಹೀಗಾಗಿ ತನಿಖಾಧಿಕಾರಿಗಳ ಮನವಿಯನ್ನು ಕೋರ್ಟ್‌ ಪುರಸ್ಕರಿಸಿ, ಮಾಜಿ ಸಂಸದನನ್ನು ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಆತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಮತ್ತೆ 6 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಕಸ್ಟಡಿಗೆ ನೀಡುವಂತೆ 42ನೇ ಎಸಿಎಂಎಂ ಕೋರ್ಟ್‌ಗೆ ಎಸ್‌ಐಟಿ ಅರ್ಜಿ ಸಲ್ಲಿಸಿತ್ತು. ಮನವಿಯನ್ನು ಪುರಸ್ಕರಿಸಿರುವ ಕೋರ್ಟ್, ಪ್ರಜ್ವಲ್‌ ರೇವಣ್ಣನನ್ನು ಎಸ್‌ಐಟಿ ಕಸ್ಟಡಿಗೆ ನೀಡಲು ಸೂಚಿಸಿದೆ.

10 ದಿನ ಎಸ್‌ಐಟಿ ಕಸ್ಟಡಿಯಲ್ಲಿದ್ದ ಪ್ರಜ್ವಲ್‌ ರೇವಣ್ಣನನ್ನು ಜೂನ್‌ 10ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜೂನ್‌ 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲು ಸೂಚಿಸಲಾಗಿತ್ತು. ಇನ್ನೂ ವಿಚಾರಣೆ ಬಾಕಿ ಇರುವುದರಿಂದ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಮನವಿ ಮಾಡಿದ್ದರಿಂದ, ಇದೀಗ ಮತ್ತೆ 6 ದಿನಗಳ ಕಾಲ ಪ್ರಜ್ವಲ್‌ ರೇವಣ್ಣನನ್ನು ಎಸ್‌ಐಟಿ ಕಸ್ಟಡಿಗೆ ನೀಡಲು ಕೋರ್ಟ್‌ ಸಮ್ಮತಿಸಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್‌ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲಿನಲ್ಲಿ ಎರಡು ದಿನ ಕಾಲ ಕಳೆದಿದ್ದರು. ಜೈಲಿನ ಕ್ವಾರಂಟೈನ್ ಬ್ಯಾರಕ್‌ನಲ್ಲಿ ಸಾಮಾನ್ಯ ಕೈದಿಯಂತೆ ಪ್ರಜ್ವಲ್ ಇದ್ದರು. ಮಂಗಳವಾರ ರಾತ್ರಿ ಜೈಲಿನಲ್ಲಿ ನೀಡಿದ್ದ ಮುದ್ದೆ, ಚಪಾತಿ, ಅನ್ನ, ಸಾಂಬರ್‌, ಊಟ ಮಾಡಿದ್ದ ಪ್ರಜ್ವಲ್, ಬೇಗನೇ ನಿದ್ರೆಗೆ ಜಾರಿದ್ದರು. ಇಂದು ಬೆಳಗ್ಗೆ 5 ಗಂಟೆಗೆ ನಿದ್ದೆಯಿಂದ ಎದ್ದು ವಾಕಿಂಗ್ ಮಾಡಿದ್ದರು.

ಕೆಲ ಹೊತ್ತು ವಾಕಿಂಗ್ ಮಾಡಿ ಜೈಲ್ ಸಿಬ್ಬಂದಿ ಕೊಟ್ಟ ಕಾಫಿ ಕುಡಿದ ಬಳಿಕ ದಿನ ಪತ್ರಿಕೆಗಳನ್ನು ಓದಿ ಹೊರಗಿನ ವಿದ್ಯಮಾನಗಳ ಕಡೆ ಕಣ್ಣಾಡಿಸಿದರು. ಮತ್ತೆ ಜೈಲಿನ ಮೆನುವಿನಂತೆ ಪ್ರಜ್ವಲ್‌ಗೆ ಅವಲಕ್ಕಿ ಉಪ್ಪಿಟ್ಟು ನೀಡಲಾಗಿದೆ. ಹೊರಗೆ ಬಿಂದಾಸ್ ಆಗಿ ಓಡಾಡಿಕೊಂಡಿದ್ದ ಮಾಜಿ ಸಂಸದನಿಗೆ ಜೈಲುವಾಸದಲ್ಲಿ ಚಡಪಡಿಸುತ್ತಿರರುವುದು ಕಂಡುಬಂದಿದೆ.

ಇದನ್ನೂ ಓದಿ | Actor Darshan Arrested: ರೇಣುಕಾಸ್ವಾಮಿಗೆ ದರ್ಶನ್‌ ಗ್ಯಾಂಗ್‌ನಿಂದ ಕ್ರೂರ ಹಿಂಸೆ; ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಭಯಾನಕ ಡಿಟೇಲ್ಸ್‌

ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಜಾಮೀನು

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ (Rave Party) ತೆಲುಗು ನಟಿ ಹೇಮಾಗೆ (Telugu actress Hema) ಜಾಮೀನು ಮಂಜೂರಾಗಿದೆ. ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ಕೋರ್ಟ್‌, ನಟಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ನಟಿ ಹೇಮಾಳಿಂದ ಯಾವುದೇ ಮಾದಕ ವಸ್ತು ವಶಕ್ಕೆ ಪಡೆಯಲಾಗಿಲ್ಲ. ಹಲವು ದಿನಗಳ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಹೇಮಾ ಅಲಿಯಾಸ್ ಕೊಲ್ಲ ಹೇಮಾ ಪರ ವಕೀಲ ಮಹೇಶ್ ಕಿರಣ್ ಶೆಟ್ಟಿ ವಾದ ಮಂಡಿಸಿದ್ದಾರೆ. ಹೀಗಾಗಿ ನಟಿ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ತೆಲುಗು ನಟಿ ಹೇಮಾಗೆ ಬೇಲ್ ಸಿಕ್ಕಿದೂ ಇಂದು ಬಿಡುಗಡೆ ಭಾಗ್ಯವಿಲ್ಲ ಎನ್ನಲಾಗಿದೆ. ಜಾಮೀನು ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಾಳೆ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ರೇವ್‌ ಪಾರ್ಟಿ ಪ್ರಕರಣದಲ್ಲಿ (Rave Party) ವಿಚಾರಣೆಗೆ ಆಗಮಿಸಿದ್ದ ತೆಲುಗು ನಟಿ ಹೇಮಾ ಅವರನ್ನು ಜೂನ್‌ 3ರಂದು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ಸಲ್ಮಾ .ಎ.ಎಸ್ ಅವರು, ನಟಿ ಹೇಮಾ ಅವರನ್ನು ಜೂನ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದ್ದರು.

ಇದನ್ನೂ ಓದಿ | Murder Case: 300 ಕೋಟಿಯ ಆಸ್ತಿಗಾಗಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

ಮೇ 19ರಂದು ಎಲೆಕ್ಟ್ರಾನಿಕ್‌ ಸಿಟಿಯ (Electronic city) ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾಗಿದ್ದಾಗ ಅವರನ್ನು ಅಧಿಕಾರಿಗಳು ಬಂಧಿಸಿದ್ದರು.

Continue Reading

ಕರ್ನಾಟಕ

Rave Party: ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಜಾಮೀನು

Rave Party: ನಟಿ ಹೇಮಾಳಿಂದ ಯಾವುದೇ ಮಾದಕ ವಸ್ತು ವಶಕ್ಕೆ ಪಡೆಯಲಾಗಿಲ್ಲ ಎಂದು ನಟಿ ಪರ ವಕೀಲ ವಾದ ಮಂಡಿಸಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಆಗಿದೆ.

VISTARANEWS.COM


on

Rave Party
Koo

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ (Rave Party) ತೆಲುಗು ನಟಿ ಹೇಮಾಗೆ (Telugu actress Hema) ಜಾಮೀನು ಮಂಜೂರಾಗಿದೆ. ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ಕೋರ್ಟ್‌, ನಟಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ನಟಿ ಹೇಮಾಳಿಂದ ಯಾವುದೇ ಮಾದಕ ವಸ್ತು ವಶಕ್ಕೆ ಪಡೆಯಲಾಗಿಲ್ಲ. ಹಲವು ದಿನಗಳ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಹೇಮಾ ಅಲಿಯಾಸ್ ಕೊಲ್ಲ ಹೇಮಾ ಪರ ವಕೀಲ ಮಹೇಶ್ ಕಿರಣ್ ಶೆಟ್ಟಿ ವಾದ ಮಂಡಿಸಿದ್ದಾರೆ. ಹೀಗಾಗಿ ನಟಿ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ತೆಲುಗು ನಟಿ ಹೇಮಾಗೆ ಬೇಲ್ ಸಿಕ್ಕಿದೂ ಇಂದು ಬಿಡುಗಡೆ ಭಾಗ್ಯವಿಲ್ಲ ಎನ್ನಲಾಗಿದೆ. ಜಾಮೀನು ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಾಳೆ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಇದನ್ನೂ ಓದಿ | Actor Darshan: ಕೊಲೆ ಆರೋಪಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಡಿವೋರ್ಸ್‌?

ರೇವ್‌ ಪಾರ್ಟಿ ಪ್ರಕರಣದಲ್ಲಿ (Rave Party) ವಿಚಾರಣೆಗೆ ಆಗಮಿಸಿದ್ದ ತೆಲುಗು ನಟಿ ಹೇಮಾ ಅವರನ್ನು ಜೂನ್‌ 3ರಂದು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ಸಲ್ಮಾ .ಎ.ಎಸ್ ಅವರು, ನಟಿ ಹೇಮಾ ಅವರನ್ನು ಜೂನ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದ್ದರು.

ಮೇ 19ರಂದು ಎಲೆಕ್ಟ್ರಾನಿಕ್‌ ಸಿಟಿಯ (Electronic city) ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾಗಿದ್ದಾಗ ಅವರನ್ನು ಅಧಿಕಾರಿಗಳು ಬಂಧಿಸಿದ್ದರು.

ಇದನ್ನೂ ಓದಿ | Actor Darshan: ಲಾರಿಗೆ ತಲೆಯನ್ನು ಬಡಿದು ಸಿನಿಮಾ ಶೈಲಿಯಲ್ಲೇ ರೇಣುಕಾ ಸ್ವಾಮಿ ಕೊಲೆ ಮಾಡಿದ್ದ ದರ್ಶನ್ ಗ್ಯಾಂಗ್​!

ರೇವ್ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ (Telugu actress Hema) ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್‌ ಮಾಡಿದ್ದರು. ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾದಾಗ ಅವರನ್ನು ಬಂಧಿಸಲಾಗಿತ್ತು.

Continue Reading

ಸ್ಯಾಂಡಲ್ ವುಡ್

Actor Darshan: ಕೊಲೆ ಆರೋಪಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಡಿವೋರ್ಸ್‌?

Actor Darshan: ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮಿ ಈ ಹಿಂದೆ ಸಾಕಷ್ಟು ಬಾರಿ ಸೋಷಿಯಲ್​ ಮೀಡಿಯಾ ವಾರ್ ನಡೆಸಿದ್ದರು. ಪವಿತ್ರಾ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದರು. ದರ್ಶನ್​ ಕೊಲೆ ಆರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದ ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ.

VISTARANEWS.COM


on

Actor Darshan wife Vijayalakshmi will get divorce
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಅರೆಸ್ಟ್ (Actor Darshan Arrested) ಆಗಿದ್ದರೂ ಅವರ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಪವಿತ್ರಾ ಗೌಡ ವಿಚಾರದಲ್ಲಿ ಆಗಾಗ ಸೋಶಿಯಲ್ ಮೀಡಿಯಾಗಳ ಮೂಲಕ ಯುದ್ಧ ಸಾರುತ್ತಿದ್ದ ವಿಜಯಲಕ್ಷ್ಮಿ ಅವರು ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಿರುವಾಗಲೇ ವಿಜಯಲಕ್ಷ್ಮಿ ಅವರು ದರ್ಶನ್‌ ಜತೆಗಿದ್ದ ಇನ್​ಸ್ಟಾಗ್ರಾಮ್​ ಪ್ರೊಫೈಲ್‌​ ಫೋಟೊ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ. ಇದೀಗ ವಿಜಯಲಕ್ಷ್ಮಿ ವಿಚ್ಛೇದನ ಪಡೆಯುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕೌಟುಂಬಿಕ ಕಲಹದಲ್ಲಿ ʼದಾಸʼ

ದರ್ಶನ್‌ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇನ್ನು ಕೌಟುಂಬಿಕ ಕಲಹದಲ್ಲಿಯೂ 28 ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ದರು. 2011ರಲ್ಲಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಮಾರಣಾಂತಿಕ ಹಲ್ಲೆ ಮಾಡಿದ್ದರು. 2016ರಲ್ಲಿ ಮತ್ತೊಮ್ಮೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದ ಘಟನೆಯೂ ನಡೆದಿತ್ತು. ಮಗನನ್ನು ಹತ್ಯೆ ಮಾಡುವುದಾಗಿಯೂ ದರ್ಶನ್‌ ಬೆದರಿಸುವುದಾಗಿ ಕೇಳಿ ಬಂದಿತ್ತು. ಮಾತ್ರವಲ್ಲ ವಿಜಯಲಕ್ಷ್ಮಿ ಅವರಿಗೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದರು. ಅಂಬರೀಶ್ ಮಧ್ಯಪ್ರವೇಶದಿಂದ ವಿಜಯಲಕ್ಷ್ಮಿ ಎಲ್ಲವನ್ನೂ ಮರೆತು ರಾಜಿ ಸಂಧಾನಕ್ಕೆ ಒಪ್ಪಿದ್ದರು.

ಇದನ್ನೂ ಓದಿ: Actor Darshan: ದರ್ಶನ್ ಮೇಲೆ ಮತ್ತೊಂದು ಗಂಭೀರ ಆರೋಪ; ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ, ಬಾಡೂಟ, ಎಣ್ಣೆ ಪಾರ್ಟಿ!

ಇದಾದ ಬಳಿಕ ದರ್ಶನ್‌ ಕುಡಿದು ಬಂದು ವಿಜಯಲಕ್ಷ್ಮಿ ವಿರುದ್ಧ ಕೂಗಾಡಿರುವ ಆಡಿಯೊ ವೈರಲ್‌ ಆಗಿತ್ತು. ಸ್ವತಃ ವಿಜಯಲಕ್ಷ್ಮಿ ಅವರೇ ಆಡಿಯೊ ಸುಳ್ಳು ಎಂದು ಹೇಳಿಕೆ ನೀಡಿದ್ದರು. ಹೀಗೆ ಸಿಹಿ-ಕಹಿ ಜೀವನ ನಡೆಸುತ್ತಿದ್ದ ದಂಪತಿ ಮಧ್ಯೆ ಮತ್ತೆ ಬಿರುಗಾಳಿಯಂತೆ ಬಂದಿದ್ದು ಪವಿತ್ರಾ ಗೌಡ.

ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದ ದರ್ಶನ್‌

ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ನಟ ದರ್ಶನ್‌ ಸ್ನೇಹಿತರು ಹುಟ್ಟುಹಬ್ಬವನ್ನು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದರು. ಪಾರ್ಟಿಯೊಂದರಲ್ಲಿ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಮಸ್ತ್‌ ಡಾನ್ಸ್ ‌ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಿರ್ಮಾಪಕ ಉಮಾಪತಿ ಗೌಡ ಹಾಗೂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಪದಗಳ ಬಳಕೆ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಗಳು ಸೇರಿ ವಿವಿಧ ಸಂಘಗಳು, ನಟನ ವಿರುದ್ಧ ಅಸಮಾಧಾನ ಹೊರಹಾಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದವು. ಆದರೆ, ವಿವಾದಗಳಿಗೆ ಸೊಪ್ಪು ಹಾಕದ ದರ್ಶನ್‌, ಪಾರ್ಟಿಯೊಂದರಲ್ಲಿ ಭಾಗಿಯಾಗಿ ಪತ್ನಿ ಜತೆ ಕುಣಿದು ಕುಪ್ಪಳಿಸಿದ್ದರು.

ಪವಿತ್ರಾ ಗೌಡ ಜತೆ ವಾರ್‌

ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮಿ ಈ ಹಿಂದೆ ಸಾಕಷ್ಟು ಬಾರಿ ಸೋಷಿಯಲ್​ ಮೀಡಿಯಾ ವಾರ್ ನಡೆಸಿದ್ದರು. ಪವಿತ್ರಾ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದರು. ದರ್ಶನ್​ ಕೊಲೆ ಆರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದ ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ. ಕೆಲ ತಿಂಗಳ ಹಿಂದೆ ಪವಿತ್ರಾ ಗೌಡ ಅವರು ದರ್ಶನ್ ಜತೆ ಇರೋ ಫೋಟೋ ಹಂಚಿಕೊಂಡಿದ್ದರು. ‘10 ವರ್ಷಗಳ ಸಂಬಂಧ’ ಎಂದು ಟ್ಯಾಗ್​ಲೈನ್ ನೀಡಿದ್ದರು. ಇದನ್ನು ವಿಜಯಲಕ್ಷ್ಮಿ ಖಂಡಿಸಿದ್ದರು. ಇದೀಗ ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್ ಸೇರಿ ಎಲ್ಲರನ್ನೂ ವಿಜಯಲಕ್ಷ್ಮಿ ಅನ್​ಫಾಲೋ ಮಾಡಿದ್ದಾರೆ. ಈ ಮೊದಲು ಅವರು ದರ್ಶನ್​ನ ಫಾಲೋ ಮಾಡುತ್ತಿದ್ದರು. ಇನ್ನು, ಇನ್​ಸ್ಟಾಗ್ರಾಮ್ ಡಿಪಿಯನ್ನು ಕೂಡ ತೆಗೆದು ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇದೀಗ ಪವಿತ್ರಾ ಗೌಡ ವಿಚಾರವಾಗಿಯೇ ದರ್ಶನ್‌ ಜೈಲು ಸೇರಿದ್ದಾರೆ. ಇನ್ನು ದರ್ಶನ್‌ ಜೈಲು ಸೇರುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ವಿಜಯಲಕ್ಷ್ಮಿ ಅವರು ದರ್ಶನ್‌ ಅವರನ್ನು ಅನ್‌ಫಾಲೋ ಮಾಡಿ, ಡಿಪಿ ಕೂಡ ಡಿಲಿಟ್‌ ಮಾಡಿದ್ದಾರೆ.ವೈವಾಹಿಕ ಜೀವನದಲ್ಲಿ ಪದೇ ಪದೇ ಬೇಸತ್ತು ವಿಜಯಲಕ್ಷ್ಮಿ ವಿಚ್ಛೇದನ ಪಡೆಯುವ ಗಂಭೀರ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ.

Continue Reading
Advertisement
Tungabhadra Dam
ಪ್ರಮುಖ ಸುದ್ದಿ4 mins ago

Tungabhadra Dam : ಅಬ್ಬರದ ಮಳೆ; ವಿಶ್ವ ವಿಖ್ಯಾತಿಯ ತುಂಗಭದ್ರಾ ಡ್ಯಾಮ್​​ನಲ್ಲಿ​ ಹೆಚ್ಚಿದ ಒಳ ಹರಿವು

Doda Terror Attacks
ದೇಶ14 mins ago

Doda Terror Attacks: ಶಂಕಿತ ನಾಲ್ವರು ಭಯೋತ್ಪಾದಕರ ರೇಖಾಚಿತ್ರ ಬಿಡುಗಡೆ; ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ

Increasing interest of foreigners in learning astrology says Dr Navinashastri Puranika
ಧಾರವಾಡ17 mins ago

Dharwad News: ಜ್ಯೋತಿರ್ವಿಜ್ಞಾನ ಕಲಿಕೆಯಲ್ಲಿ ವಿದೇಶಿಯರ ಆಸಕ್ತಿ ಹೆಚ್ಚಳ: ಡಾ. ನವೀನಶಾಸ್ತ್ರಿ ಪುರಾಣಿಕ

Bhubaneswar Tour
Latest20 mins ago

Bhubaneswar Tour: ಭುವನೇಶ್ವರಕ್ಕೆ ಪ್ರವಾಸ ಮಾಡಿದಾಗ ಏನೆಲ್ಲ ನೋಡಬಹುದು?

Richest MP's
ರಾಜಕೀಯ23 mins ago

Richest MP’s: ಇವರೇ ನೋಡಿ, ಟಾಪ್ 10 ಶ್ರೀಮಂತ ಸಂಸದರು! ಇವರ ಆಸ್ತಿ ಎಷ್ಟು?

Actor Darshan Arrested
ಪ್ರಮುಖ ಸುದ್ದಿ27 mins ago

Actor Darshan Arrested : ಪದೇ ಪದೆ ಕ್ರಿಮಿನಲ್ ಚಟುವಟಿಕೆ; ನಟ ದರ್ಶನ್​ ರೌಡಿ ಪಟ್ಟಿಗೆ ಸೇರ್ಪಡೆ?

IND vs USA
ಕ್ರೀಡೆ29 mins ago

IND vs USA: ಭಾರತಕ್ಕೆ 5​ ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?

Himachal tour
ಲೈಫ್‌ಸ್ಟೈಲ್38 mins ago

Himachal Tour: ರೋಮಾಂಚನ ಉಂಟುಮಾಡುವ ಹಿಮಾಚಲ ಪ್ರದೇಶದ ಡಾಲ್ ಹೌಸಿ ಗಿರಿಧಾಮ!

Coconut in Worship
ಧಾರ್ಮಿಕ40 mins ago

Coconut in Worship: ಪೂಜೆ, ಶುಭ ಕಾರ್ಯಗಳಲ್ಲಿ ತೆಂಗಿನಕಾಯಿ ಬಳಸುವುದೇಕೆ ಗೊತ್ತಿದೆಯೆ?

Baba Vanga Predictions
ಭವಿಷ್ಯ54 mins ago

Baba Vanga Predictions: ಪ್ರಪಂಚದ ಅಂತ್ಯ ಯಾವಾಗ? ಈ ವರ್ಷ ಏನೇನಾಗಲಿವೆ? ಬಾಬಾ ವಂಗಾ ಭವಿಷ್ಯ ಹೀಗಿದೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌