prerane spiritual column by sadhguru jaggi vasudev about Unique Culture of IndiaPrerane : ನಮ್ಮ ದೇವರುಗಳು ಆಯುಧ ಹಿಡಿದಿರುವುದಾದರೂ ಏಕೆ? - Vistara News

ಧಾರ್ಮಿಕ

Prerane : ನಮ್ಮ ದೇವರುಗಳು ಆಯುಧ ಹಿಡಿದಿರುವುದಾದರೂ ಏಕೆ?

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೆಮ್ಮದಿ ಎಂಬುದು ಹೊರಗಡೆ ಸಂಭವಿಸುವ ವಿಷಯವಾಗಿಲ್ಲ. ಅದು ಒಳಗಡೆಯೇ ನಡೆಯುವ ಪ್ರಕ್ರಿಯೆಯೆಂದೇ ಮೊದಲಿನಿಂದಲೂ ಭಾವಿಸಲಾಗಿದೆ. ಹೀಗಾಗಿ ದೇವರುಗಳು ಹಿಡಿದಿರುವ ಆಯುಧಗಳಿಗೂ ವಿಶೇಷ ಅರ್ಥವಿದೆ ಎನ್ನುತ್ತಾರೆ ಸದ್ಗುರು. ಅವರ ವಿಶೇಷ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿದೆ.

VISTARANEWS.COM


on

goddess with weapons
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Sadhguru

ಸದ್ಗುರು ಜಗ್ಗಿ ವಾಸುದೇವ್‌
ನಮ್ಮ ಸಂಸ್ಕೃತಿಯಲ್ಲಿ ದೇವರುಗಳು ಇಷ್ಟೊಂದು ಆಯುಧಗಳನ್ನು ಹಿಡಿದು ನಿಂತಿರುವುದೇಕೆ ಎಂದು ಒಬ್ಬರು ನನ್ನನ್ನು ಕೇಳಿದರು. ಇದು ತೀವ್ರವಾದಿಗಳನ್ನು ಪ್ರೋತ್ಸಾಹಿಸುವ ಸಂಸ್ಕೃತಿಯಿರಬಹುದೇ ಎಂಬುದು ಅವರ ಸಂದೇಹ. ಪ್ರಪಂಚದಲ್ಲಿರುವವರೆಲ್ಲರೂ ಜಾಗೃತಮನಸ್ಕರಾಗಿ ಜೀವನ ನಡೆಸಿದರೆ ಆಯುಧಗಳೇ ಬೇಕಾಗುವುದಿಲ್ಲ. ಆದರೆ, ಆಯುಧಗಳ ಅಗತ್ಯವಿಲ್ಲವೆಂದು ಹೇಳುವಂಥ ಸ್ಥಿತಿಗೆ ಪ್ರಪಂಚವು ಇನ್ನೂ ಸಿದ್ಧವಾಗಿಲ್ಲವಲ್ಲ!

ಇಂದಿನ ಯಶಸ್ವಿ ದೇಶಗಳೆಲ್ಲವೂ ಆಯುಧಗಳ ತಯಾರಿಕೆಯಲ್ಲಿ ಮುಳುಗಿವೆ. ಪ್ರಪಂಚದ ಅತಿ ದೊಡ್ಡ ವ್ಯಾಪಾರವೆಂದರೆ ಆಯುಧಗಳ ತಯಾರಿಕೆ ಮತ್ತು ಅವುಗಳ ಮಾರಾಟವಾಗಿದೆ. ಯಾವುದೇ ದೇಶದ ಸರ್ಕಾರ ಆಯುಧಗಳಿಗಾಗಿ ಬಹು ದೊಡ್ಡ ಮೊತ್ತವನ್ನು ಮೀಸಲಾಗಿಡುವುದು ಏಕೆ? ನಿಮ್ಮ ಬಳಿ ಆಯುಧಗಳಿದ್ದರೆ ನೆರೆಯ ದೇಶ ನಿಮ್ಮನ್ನು ನೆಮ್ಮದಿಯಾಗಿರಲು ಬಿಡುತ್ತದೆ. ನೀವು ನಿರಾಯುಧರಾಗಿದ್ದರೆ ಎಲ್ಲರೂ ನಿಮ್ಮನ್ನು ಆಕ್ರಮಿಸಿ ನಿಮ್ಮನ್ನು ಬೀದಿಪಾಲು ಮಾಡುತ್ತಾರೆ.

ಹಾಗಾದರೆ ನಮ್ಮ ಸಂಸ್ಕೃತಿ ದಮನಕಾರಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದೆಯೇ?

ಇಲ್ಲ, ಅದೇ ದೇವರುಗಳು ಬೇರೆ ಕೈಗಳಲ್ಲಿ ತಾವರೆ ಹೂಗಳನ್ನು, ಆಶೀರ್ವಾದದ ಮುದ್ರೆಗಳನ್ನು ಧರಿಸಿಕೊಂಡಿರುವುದನ್ನು ನೋಡಿಲ್ಲವೆ? ನಮ್ಮ ದೇವರುಗಳು ನಿಗ್ರಹ ಮತ್ತು ಅನುಗ್ರಹ ಸಂಕೇತಗಳನ್ನು ಧರಿಸಿದ್ದಾರೆ.

ಲಿಡಿಯಾ ದೇಶದ ರಾಜ ಕ್ರೋಸಸ್, ಪಾರಸಿಕರ ದೇಶವನ್ನು ಆಕ್ರಮಿಸಲು ತೀರ್ಮಾನಿಸಿದ. ದೈವಸನ್ನಿಧಿಯಲ್ಲಿ ಭವಿಷ್ಯವನ್ನು ಕೇಳಿದ. ನಿನ್ನಿಂದ ಒಂದು ಮಹಾ ಸಾಮ್ರಾಜ್ಯ ಅಳಿಸಿಹೋಗುತ್ತದೆ ಎಂದು ದೈವವಾಣಿ ನುಡಿಯಿತು. ಸಂಪೂರ್ಣ ನಂಬಿಕೆಯಿಂದ ಪರ್ಷಿಯಾದ ಮೇಲೆ ದಂಡೆತ್ತಿ ಹೋದವನು ತೀವ್ರವಾದ ಸೋಲನ್ನು ಅನುಭವಿಸಿದ. ದೈವಸನ್ನಿಧಿಗೆ ಮತ್ತೆ ಬಂದು, ದೈವವಾಣಿ ಸುಳ್ಳಾಯಿತಲ್ಲ? ಎಂದು ಕೋಪದಿಂದ ಕೇಳಿದ. ಸುಳ್ಳಾಗಲಿಲ್ಲ. ನಾಶವಾದದ್ದು ಲಿಡಿಯಾ ಎಂಬ ನಿನ್ನ ಮಹಾಸಾಮ್ರಾಜ್ಯ ಎಂದು ಮಾರುತ್ತರ ಬಂದಿತು.

ದೈವಗಳಿಗೆ ರೂಪುಕೊಟ್ಟು ಪ್ರತಿಷ್ಠಾಪಿಸಿದ ಪರಿಣಾಮವಾಗಿ ದೊರೆಯುವ ಅನೇಕ ಸಂಗತಿಗಳು ತಪ್ಪಾಗಿ ಗ್ರಹಿಕೆಯಾದರೆ ಇಂಥ ಎಡವಟ್ಟುಗಳು ಸಂಭವಿಸುತ್ತವೆ.

prerane

ದೈವರ ಕೈಗಳಲ್ಲಿರುವ ತಾವರೆ ಜೀವನದ ಒಂದು ಅತ್ಯಂತ ಮಹತ್ವಪೂರ್ಣ ಅಂಶವನ್ನು ಸೂಚಿಸುತ್ತದೆ. ಜೀವನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ನಮ್ಮ ದೇವರುಗಳು ಉಗ್ರವಾದವನ್ನು ಬೋಧಿಸುವಂತಹವು ಎಂದು ಹೇಳುವುದು ಮೂರ್ಖತನ.

ನಿಮ್ಮ ದೃಷ್ಟಿಯಲ್ಲಿ ನೆಮ್ಮದಿಯಾಗಿರುವುದು ಯಾವುದೂ ನಿಜವಾಗಿ ನೆಮ್ಮದಿಯಾಗಿರುವುದಿಲ್ಲ. ಭೂಮಿಯ ಒಳಗೆ ಹೊಕ್ಕು ನೋಡಿ. ಬೇರುಗಳು, ಮಣ್ಣು ಮತ್ತಿತರ ಜೀವರಾಶಿಗಳ ನಡುವೆ ಅಲ್ಲಿ ದೊಡ್ಡದೊಂದು ಯುದ್ಧ ನಡೆಯುತ್ತಿದೆ. ಕ್ಷಣಕ್ಷಣವೂ ಅಲ್ಲಿ ಲಕ್ಷಾಂತರ ಜೀವರಾಶಿಗಳು ಸಾಯುತ್ತಿರುತ್ತವೆ. ಲಕ್ಷಗಟ್ಟಲೆ ಹೊಸ ಜೀವಿಗಳು ಸೃಷ್ಟಿಯಾಗುತ್ತಿರುತ್ತವೆ. ಆಳವಾಗಿ ಯೋಚಿಸಿದರೆ ಉಗ್ರಗಾಮಿತ್ವವೆಂಬುದು ಜೀವನವಲ್ಲ. ನೆಮ್ಮದಿ ಎಂಬುದೂ ಜೀವನವಲ್ಲ. ಅದು ತಿಳಿದುಕೊಳ್ಳಲಾಗದ ಅನೇಕ ಸಂಗತಿಗಳ ಮಿಶ್ರಣ.

ಭಾರತೀಯ ಸಂಸ್ಕೃತಿಯಲ್ಲಿ ನೆಮ್ಮದಿ ಎಂಬುದು ಹೊರಗಡೆ ಸಂಭವಿಸುವ ವಿಷಯವಾಗಿಲ್ಲ. ಅದು ಒಳಗಡೆಯೇ ನಡೆಯುವ ಪ್ರಕ್ರಿಯೆಯೆಂದೇ ಮೊದಲಿನಿಂದಲೂ ಭಾವಿಸಲಾಗಿದೆ. ಈ ಕಾರಣದಿಂದ ಅನ್ವೇಷಣೆಯನ್ನು ಅಂತರಂಗದೆಡೆಗೆ ತಿರುಗಿಸಿದರು. ಹೊರಜಗತ್ತಿನಲ್ಲಿ ನೆಮ್ಮದಿಯಿಂದ ಇರುವುದಾಗಲಿ, ಯುದ್ಧದಲ್ಲಿ ತೊಡಗಿರುವುದಾಗಲಿ ನಿಮ್ಮ ಕೈಯಲಿಲ್ಲ. ಜೀವನವು ಎಲ್ಲ ಅಂಶಗಳನ್ನೂ ಒಳಗೊಂಡಿದೆ. ಆದರೆ ಒಳಜಗತ್ತಿನಲ್ಲಿ ಸದಾ ನೆಮ್ಮದಿಯಿಂದ ಇರುವುದು ನಿಮ್ಮ ಕೈಯಲ್ಲಿಯೇ ಇದೆ.

ಈ ಭೂಮಿಯಲ್ಲಿರುವ ಜೀವರಾಶಿಗಳ ಪಾಲಿಗೆ ಪ್ರಕೃತಿಯು ಋತುಗಳನ್ನು ಕಲ್ಪಿಸಿತು. ಸಸ್ಯಗಳು ನಿರ್ದಿಷ್ಟ ಕಾಲದಲ್ಲಿ ಹೂ ಬಿಡುತ್ತವೆ, ಮತ್ತೊಂದು ಋತುವಿನಲ್ಲಿ ಎಲೆಗಳು ಉದುರುತ್ತವೆ. ಮೃಗಗಳಿಗೂ ಹಾಗೆಯೇ. ಯಾವಾಗ ಅದರ ಸಂಗಾತಿಯನ್ನು ಕೂಡಬೇಕೆಂಬುದು ಅವುಗಳಿಗೆ ನಿಗದಿತವಾಗಿದೆ. ಪಕ್ಷಿಗಳೂ ನಿರ್ದಿಷ್ಟ ಕಾಲಗಳಲ್ಲಿ ತಮ್ಮ ಸ್ಥಳವನ್ನು ಬದಲಾಯಿಸುವುದನ್ನು ತಪ್ಪಿಸುವುದಿಲ್ಲ.

ಮನುಷ್ಯರಿಗೆ ಮಾತ್ರ ನಿರ್ದಿಷ್ಟ ಋತುಗಳನ್ನು ನಿಗದಿಪಡಿಸಿಲ್ಲ. ಬುದ್ಧಿವಂತಿಕೆಯಿಂದ ಕ್ರಿಯಾಶೀಲನಾಗಿ ನಿಮ್ಮ ಕಾಲಗಳನ್ನು ನೀವೇ ನಿರ್ಣಯಿಸಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಪ್ರಕೃತಿಯು ನಿಮಗಿತ್ತಿದೆ. ನೆಮ್ಮದಿಯಾಗಿರುವುದು, ಆನಂದವಾಗಿರುವುದು ನಿಮ್ಮ ವಶದಲ್ಲಿಯೇ ಇದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಯಾರಾದರೊಬ್ಬರು 365 ದಿನಗಳೂ ಅವರ ಪಾಲಿಗೆ ವಸಂತ ಋತುವಾಗಿಯೇ ಇರಬೇಕೆಂದು ಬಯಸಿದರೆ ಹಾಗೆಯೇ ಇರುವುದೂ ಸಾಧ್ಯ. ಆದರೆ, ಇಲ್ಲಿ ಅನೇಕರು ಚಳಿಗಾಲದಲ್ಲಿ ಮರಗಟ್ಟಿದವರಂತೆ ಎಲ್ಲ ಋತುಗಳಲ್ಲಿಯೂ ಮರಗಟ್ಟಿರುತ್ತಾರೆ. ಗೋರಿಗಳ ಪಕ್ಕದಲ್ಲಿ ಬಾಳುವಂತೆ, ಹೃದಯವನ್ನು ಮರಗಟ್ಟಿಸಿಕೊಂಡು, ಎಲ್ಲ ಅನಿಸಿಕೆಗಳೂ ಮರಗಟ್ಟಿಹೋದಂತೆ ಜೀವಿಸುತ್ತಾರೆ. ಇಲ್ಲಿ ಯಾರೂ ಯಾರಿಗಿಂತಲೂ ಮೇಲಿನವರೂ ಇಲ್ಲ, ಕೆಳಗಿನವರೂ ಇಲ್ಲ. ಎಲ್ಲರ ಕಣ್ಣುತಪ್ಪಿಸಿ ಯಾರೊಬ್ಬರೂ ತಮ್ಮಷ್ಟಕ್ಕೆ ಒಂಟಿಯಾಗಿ ಬದುಕಲು ಸಾಧ್ಯವಿಲ್ಲವೆಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು.

ಈ ತಿಳುವಳಿಕೆಯೊಂದಿಗೆ ಜೀವನವನ್ನು ನೋಡತೊಡಗಿದರೆ ಆಯುಧಗಳ ಅಗತ್ಯವೇ ಇರುವುದಿಲ್ಲ. ಕೆಲವರು ನಮ್ಮ ಪುರಾಣಕಥೆಗಳ, ದೇವತೆಗಳ ಬಗ್ಗೆ ಪೂರ್ಣಜ್ಞಾನವಿಲ್ಲದೆ ತಮಗೆ ಅರ್ಥವಾದಂತೆ ವಿವರಣೆ ಕೊಡುತ್ತ ಬಂದರು. ಹಲವೆಡೆ ಅನವಶ್ಯಕವಾದ ತಿದ್ದುಪಡಿ ತಂದರು. ಅದನ್ನು ಸರಿಪಡಿಸುವುದು ಈ ತಲೆಮಾರಿನ ಶ್ರದ್ಧಾಪೂರ್ವಕ ಕರ್ತವ್ಯ.

ಪ್ರಾಯಶಃ ಮನುಷ್ಯರು ತಮ್ಮ ಸ್ವಾತಂತ್ರ್ಯವನ್ನು ಎಲ್ಲಕ್ಕಿಂತಲೂ ಮಿಗಿಲಾಗಿ ಬಯಸುತ್ತಾರೆ. ಇದು ಬೇರೆಲ್ಲಿಂದಲೋ, ಪಾಶ್ಚಿಮಾತ್ಯರಿಂದ ಅಥವಾ ಬೇರೆ ದೇಶಗಳಿಂದ ನಮ್ಮಲ್ಲಿಗೆ ಬಂದ ತತ್ತ್ವವಲ್ಲ. ಅವರು ಇದನ್ನು ಕುರಿತು ಕಲ್ಪನೆ ಮಾಡುವುದಕ್ಕಿಂತ ಹಲವು ಸಾವಿರ ವರ್ಷಗಳಿಗೂ ಮುಂಚೆಯೇ, “ಮುಕ್ತಿ” ಎಂಬ ಕಲ್ಪನೆಯ ಸ್ವಾತಂತ್ರ್ಯವನ್ನು ಕುರಿತು ಗಮನ ನೀಡುವಲ್ಲಿ ಭಾರತೀಯ ಸಂಸ್ಕೃತಿ ಮುಂಚೂಣಿಯಲ್ಲಿದೆ. ಇದಕ್ಕಿಂತ ಮಹತ್ವಪೂರ್ಣವಾದ ಸಂಸ್ಕೃತಿ ಬೇರೊಂದಿಲ್ಲ.

ನಿಜವಾದ ಸ್ವಾತಂತ್ರ್ಯವೆಂದರೆ ರಾಜಕೀಯ ಸ್ವಾತಂತ್ರ್ಯವಲ್ಲ; ಆರ್ಥಿಕ ಸ್ವಾತಂತ್ರ್ಯವೂ ಅಲ್ಲ. ನಿಜವಾಗಿ ನಮಗೆ ಬೇಕಾಗಿರುವುದು ಆಂತರಿಕ ಸ್ವಾತಂತ್ರ್ಯ. ಬೇರಾವ ಸಂಸ್ಕೃತಿಯಲ್ಲಿಯೂ ಇಂತಹ ಒಂದು ಉದ್ದೇಶವಿದ್ದಂತಿಲ್ಲ. ನಮ್ಮ ಸ್ವಾತಂತ್ರ್ಯದ ಮುಖ್ಯ ದೃಷ್ಟಿಯೇ ಮನುಷ್ಯನ ಅಂತಿಮ ತೀರ್ಮಾನದ ಸ್ವಾತಂತ್ರ್ಯ. ನಮ್ಮ ಹುಟ್ಟು ಮತ್ತು ಅಸ್ತಿತ್ವಗಳನ್ನೂ ಮೀರಿದ ಒಂದು ಸ್ವತಂತ್ರ ಸ್ಥಿತಿ ಇದು.

ಇದನ್ನು ನಾವು ಮುಕ್ತಿ ಹೊಂದುವುದು ಎಂದು ಕರೆಯುತ್ತೇವೆ. ಅಗತ್ಯವಾದರೆ ದೇವರನ್ನು ಮುಂದಿಟ್ಟುಕೊಂಡು ಇದನ್ನು ಪಡೆಯಬಹುದು. ಬೇಡವೆಂದರೆ, ದೇವರಿಲ್ಲದಿದ್ದರೂ ಅದನ್ನು ಪಡೆಯಬಹುದು. ಇವೆರಡೂ ಸಾಧ್ಯತೆಗಳಿವೆ, ಇಂತಹ ಎರಡು ಮಾರ್ಗಗಳಿಂದಲೂ ಮುಕ್ತಿಯನ್ನು ಪಡೆಯುವ ಅವಕಾಶವನ್ನು ಪ್ರಪಂಚದ ಮತ್ತಾವುದೇ ಸಂಸ್ಕೃತಿ ರೂಪಿಸಿಲ್ಲ.

ನಿಮ್ಮ ಕುಟುಂಬ, ನಿಮ್ಮ ಉದ್ಯೋಗ, ನಿಮ್ಮ ಓದು, ಯಾವುದೇ ಆದರೂ ಸರಿಯೇ, ಅದು ನಮ್ಮ ಮುಕ್ತಿಯ ಪರಿಕಲ್ಪನೆಗೆ ಸರಿಹೊಂದುವಂತಹ ಸಂಸ್ಕೃತಿಯನ್ನು ಪ್ರಾಚೀನರು ರೂಪಿಸಿದರು. ಸ್ವತಂತ್ರ ಭಾರತಕ್ಕೆ ಇರುವುದು ಕೇವಲ ಎಪ್ಪದೈದು ವರ್ಷಗಳ ಪರಂಪರೆ ಮಾತ್ರ. ಆದರೆ ನಮ್ಮ ಸಂಸ್ಕೃತಿಯ ದೃಷ್ಟಿಯಲ್ಲಿ ಅವು ಹಲವು ಸಾವಿರ ವರ್ಷಗಳು ಬಿಗಿಯಾದ ಕಟ್ಟುಪಾಡುಗಳಿಂದ ಬಂಧಿತವಾಗಿದೆ. ಇಂತಹ ಪ್ರಾಚೀನ ಪರಂಪರೆ ಭಾರತಕ್ಕೊಂದು ಮಹತ್ವವನ್ನು ತಂದುಕೊಟ್ಟಿದೆ.

sadhguru and spirituality

ಇಂದಿನ ಯುವಕರಲ್ಲಿರುವ ಹುಮ್ಮಸ್ಸು ನೋಡಿದರೆ, ವೀಸಾ ದೊರೆತರೆ, ಅರ್ಧದಷ್ಟು ಜನ ಈಜಿಕೊಂಡೇ ಅಮೆರಿಕಕ್ಕೆ ಹೋಗಿಬಿಡುವಂತೆ ಕಂಡುಬರುತ್ತದೆ. ಭಾರತೀಯತೆ ಎಂಬುದನ್ನು, ಅದರಲ್ಲಿರುವ ಮಹತ್ವವನ್ನು ನಮ್ಮ ಯುವಕರಿಗೆ ಯಾರೂ ಸರಿಯಾಗಿ ತಿಳಿಸದೇ ಹೋದುದರಿಂದ ಬೇರೆಡೆ ಅವರ ದೃಷ್ಟಿ ಹರಿಯಿತು.

ನಮ್ಮ ಸಂಸ್ಕೃತಿಯನ್ನು ಕುರಿತು ಮುಖ್ಯವಾಗಿ ಹಿರಿಯರು, ಪೋಷಕರು ಆಳವಾಗಿ ಅರ್ಥ ಮಾಡಿಕೊಳ್ಳಬೇಕು. ಅನಂತರ ಉತ್ತಮ ಮಟ್ಟದ ಸರಕಾರಗಳನ್ನು ನಿರ್ಮಿಸಿಕೊಳ್ಳಬೇಕು. ಅನಂತರ ಇಂದಿನ ಯುವ ಜನಾಂಗಕ್ಕೆ ಅದನ್ನು ಮನವರಿಕೆ ಮಾಡಿಕೊಡಬೇಕು.

ಬೇರೆ ಸಂಸ್ಕೃತಿಗಳಿಗೆ ಮಾರುಹೋಗಬೇಡಿರೆಂದು ನಮ್ಮ ಯುವಕರಿಗೆ ಕೂಗಿ ಹೇಳುವುದಕ್ಕೆ ಬದಲಾಗಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು, ಸತ್ತ್ವವನ್ನು ಅವರಿಗೆ ಅರ್ಥವಾಗುವಂತೆ, ಕಣ್ಣಿಗೆ ಕಟ್ಟುವಂತೆ ನಾವು ತೋರಿಸಿಕೊಡಬೇಕು.

ಇದನ್ನೂ ಓದಿ : Prerane : ಆಧ್ಯಾತ್ಮಿಕ ಮಾರ್ಗದಲ್ಲಿ ಪುರಾಣ ಗ್ರಂಥಗಳಿಗೆ ಮಹತ್ವವಿದೆಯೇ?

ನಮ್ಮ ದೇಶ ವರ್ಣರಂಜಿತವಾದದ್ದು, ವಿಸ್ಮಯಕರವಾದದ್ದು, ಗೊಂದಲಮಯವಾದದ್ದು; ಇಂತಹುದನ್ನು ಪ್ರಪಂಚದಲ್ಲಿ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ; ಒಂದು ಊರಿಗೂ ಇನ್ನೊಂದು ಊರಿಗೂ ಬದಲಾವಣೆಯಿರುವುದು ಮಾತ್ರವಲ್ಲ; ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಹೋದರೆ ಸಾಕು, ಅನೇಕ ವ್ಯತ್ಯಾಸಗಳು ಕಂಡುಬರುತ್ತವೆ. ಒಂದೇ ಬಡಾವಣೆಯಲ್ಲಿ ಪಕ್ಕದ ಮನೆಗೆ ಹೋಗಿ ನೋಡಿದರೂ ಅವರು ಮಾತನಾಡುವ ಭಾಷೆ ಬೇರೆ, ಪೂಜಿಸುವ ದೇವರು ಬೇರೆ, ಅವರು ಸೇವಿಸುವ ಆಹಾರ ಬೇರೆ, ಅವರ ಉಡುಗೆತೊಡುಗೆಗಳು, ಆಚಾರ ವಿಚಾರಗಳು ಸಾಕಷ್ಟು ವಿಭಿನ್ನವಾಗಿ ಕಂಡುಬರುತ್ತವೆ.

ಆದರೆ, ನಮ್ಮ ಸಂಸ್ಕೃತಿಯ ಸಾಮುದಾಯಿಕ ಸೂತ್ರ ನಮ್ಮೆಲ್ಲರನ್ನೂ ಒಂದಾಗಿ ಹಿಡಿದಿಟ್ಟಿದೆ. ಆ ಸೂತ್ರದ ಎಳೆಯನ್ನು ತುಂಡರಿಸದಂತೆ ನೋಡಿಕೊಳ್ಳುವುದು ನಮಗೆ ಬಹಳ ಮುಖ್ಯ.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ನೆಮ್ಮದಿಯಿಂದ ನಿದ್ದೆ ಮಾಡಬೇಕೆ? ಈ ವಾಸ್ತು ನಿಯಮ ಪಾಲಿಸಿ

ಮನೆಯ ವಾಸ್ತು ಪ್ರಕಾರ (Vastu Tips) ಸರಿಯಾದ ದಿಕ್ಕು ದೇಹ, ಮನಸ್ಸಿನ ವಿಶ್ರಾಂತಿ ಮತ್ತು ನಿದ್ರೆಗೆ ಬಹುಮುಖ್ಯ ಅಂಶವಾಗಿರುತ್ತದೆ. ಇದು ದೈಹಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ತಲೆಯನ್ನು ದಕ್ಷಿಣ ಅಥವಾ ಪೂರ್ವಕ್ಕೆ ಮಲಗಲು ನೀವು ಆರಿಸಿಕೊಂಡರೂ ದೇಹದ ಸಂಕೇತಗಳನ್ನು ಆಲಿಸುವುದು ಬಹುಮುಖ್ಯವಾಗುತ್ತದೆ.

VISTARANEWS.COM


on

By

Vastu Tips
Koo

ಆಧುನಿಕ ಜೀವನಶೈಲಿಯಿಂದಾಗಿ (modern life) ಕೆಲವರಿಗೆ ಸರಿಯಾದ ನಿದ್ದೆಯನ್ನು (sleep) ಮಾಡುವುದು ಸಾಧ್ಯವಿಲ್ಲ ಎನ್ನುವಂತಾಗಿದೆ. ಇದರಿಂದ ದೇಹಾರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ (Vastu Tips) ಪ್ರಕಾರ ನಮ್ಮ ವಾಸ ಸ್ಥಳಗಳ ವಿನ್ಯಾಸ ಮತ್ತು ದೃಷ್ಟಿಕೋನವು ನಮ್ಮ ನಿದ್ರೆಯ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ.

ವಾಸ್ತು ಶಾಸ್ತ್ರವು ಪ್ರಾಚೀನ ಭಾರತೀಯ ವಿಜ್ಞಾನವಾಗಿದ್ದು ಅದು ಸಾವಿರಾರು ವರ್ಷಗಳ ಹಿಂದಿನದು. ಇದು ಸಾಮರಸ್ಯ, ಸಮತೋಲನ ಮತ್ತು ಕಾಸ್ಮಿಕ್ ಶಕ್ತಿಯ ತತ್ತ್ವಗಳನ್ನು ಆಧರಿಸಿದೆ. ವಾಸ್ತು ಪ್ರಕಾರ ಮನೆಗಳು ಸೇರಿದಂತೆ ಪ್ರತಿಯೊಂದು ಜೀವಂತ ಮತ್ತು ನಿರ್ಜೀವ ಘಟಕವು ಐದು ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಅದು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಬಾಹ್ಯಾಕಾಶ. ನಿರ್ದಿಷ್ಟ ತತ್ತ್ವಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ನಮ್ಮ ವಾಸದ ಸ್ಥಳಗಳಲ್ಲಿನ ಅಂಶಗಳನ್ನು ಜೋಡಿಸುವ ಮೂಲಕ ನಾವು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಪರಿಸರವನ್ನು ರಚಿಸಬಹುದು.

ಮನೆಯ ವಾಸ್ತುವಿನ ತತ್ತ್ವಗಳನ್ನು ಅರ್ಥಮಾಡಿಕೊಂಡು ಮಲಗುವ ಪ್ರದೇಶವನ್ನು ಸರಿಯಾದ ದಿಕ್ಕಿನಲ್ಲಿ ಜೋಡಿಸುವ ಮೂಲಕ ಮನೆಗಳಲ್ಲಿ ಶಕ್ತಿಯ ಹರಿವನ್ನು ಹೆಚ್ಚಿಸಬಹುದು. ಇದರಿಂದ ಆಳವಾದ ವಿಶ್ರಾಂತಿ ಮತ್ತು ನವ ಯೌವನ ಪಡೆಯಬಹುದು.

ನಿದ್ರೆಗೆ ಸರಿಯಾದ ದಿಕ್ಕು

ನಾವು ಮಲಗುವ ದಿಕ್ಕು ನಮ್ಮ ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ವೈಯಕ್ತಿಕ ಆದ್ಯತೆಗಳು ಮತ್ತು ಸಂದರ್ಭಗಳು ಬದಲಾಗಬಹುದಾದರೂ ಕೆಲವು ನಿರ್ದೇಶನಗಳನ್ನು ಸಾಮಾನ್ಯವಾಗಿ ಶಾಂತ ನಿದ್ರೆಗೆ ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗುತ್ತದೆ.

ದಕ್ಷಿಣ ಅಥವಾ ಪೂರ್ವದಲ್ಲಿ ತಲೆಯನ್ನು ಇಟ್ಟು ಮಲಗುವುದು ವಾಸ್ತು ಶಾಸ್ತ್ರದ ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕುಗಳು ಭೂಮಿಯ ನೈಸರ್ಗಿಕ ಕಾಂತೀಯ ಕ್ಷೇತ್ರದೊಂದಿಗೆ ಹೊಂದಿಕೆಯಾಗುತ್ತವೆ. ಆಳವಾದ ವಿಶ್ರಾಂತಿ ಮತ್ತು ಪುನರ್ಯೌವನಗೊಳಿಸುವಿಕೆಯನ್ನು ಇದು ಉತ್ತೇಜಿಸುತ್ತದೆ. ಈ ದಿಕ್ಕುಗಳಲ್ಲಿ ಮಲಗುವುದು ಮಾನಸಿಕ ಸ್ಪಷ್ಟತೆ, ಏಕಾಗ್ರತೆ ಮತ್ತು ಆಧ್ಯಾತ್ಮಿಕ ಅರಿವನ್ನು ಹೆಚ್ಚಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಉತ್ತರಕ್ಕೆ ತಲೆಯಿಟ್ಟು ಮಲಗುವುದನ್ನು ಸರಿಯಲ್ಲ. ಯಾಕೆಂದರೆ ಇದು ದೇಹದ ನೈಸರ್ಗಿಕ ಕಾಂತೀಯ ಜೋಡಣೆಯನ್ನು ಅಡ್ಡಿಪಡಿಸುತ್ತದೆ. ಇದರಿಂದ ನಿದ್ರೆ, ದುಃಸ್ವಪ್ನಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಸಿಗೆಯ ತಲೆ ಹಲಗೆಯನ್ನು ಉತ್ತರದ ಗೋಡೆಯ ವಿರುದ್ಧ ಇಡುವುದನ್ನು ಅಥವಾ ಉತ್ತರಾಭಿಮುಖ ಸ್ಥಾನದಲ್ಲಿ ಮಲಗುವುದನ್ನು ತಪ್ಪಿಸುವುದು ಸೂಕ್ತ.

ದಕ್ಷಿಣ ಮತ್ತು ಪೂರ್ವ ದಿಕ್ಕುಗಳನ್ನು ಸಾಮಾನ್ಯವಾಗಿ ವಾಸ್ತು ಶಾಸ್ತ್ರದ ಪ್ರಕಾರ ನಿದ್ರೆಗೆ ಶಿಫಾರಸು ಮಾಡಲಾಗುತ್ತದೆ. ನಿಮ್ಮ ಮಲಗುವ ಪ್ರದೇಶಕ್ಕೆ ಸರಿಯಾದ ದಿಕ್ಕನ್ನು ನಿರ್ಧರಿಸುವಾಗ ವೈಯಕ್ತಿಕ ಅಂಶಗಳು ಮತ್ತು ಆದ್ಯತೆಗಳನ್ನು ಪರಿಗಣಿಸುವುದು ಅತ್ಯಗತ್ಯ. ವಯಸ್ಸು, ಆರೋಗ್ಯ ಪರಿಸ್ಥಿತಿಗಳು ಮತ್ತು ವೈಯಕ್ತಿಕ ಶಕ್ತಿಯ ಮಾದರಿಗಳಂತಹ ಅಂಶಗಳು ಉತ್ತಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ದೇಹದ ಸಂಕೇತಗಳನ್ನು ಆಲಿಸಿ ಮತ್ತು ಆರಾಮ ಮತ್ತು ಯೋಗಕ್ಷೇಮವನ್ನು ಗರಿಷ್ಠಗೊಳಿಸಲು ಮಲಗುವ ವ್ಯವಸ್ಥೆಯನ್ನು ಸರಿಹೊಂದಿಸಿ.

ಉತ್ತಮ ನಿದ್ರೆಗಾಗಿ ಹೀಗೆ ಮಾಡಿ


ಮಲಗುವ ಕೋಣೆ ಸ್ವಚ್ಛ ಸುಂದರವಾಗಿರಲಿ

ಮಲಗುವ ಕೋಣೆಯಲ್ಲಿ ಅಸ್ತವ್ಯಸ್ತವಾಗಿದ್ದರೆ ವಿಶ್ರಾಂತಿ ಮತ್ತು ನೆಮ್ಮದಿಗೆ ಭಂಗವಾಗುವುದು. ನಿದ್ರಿಸಲು ಅನುಕೂಲಕರವಾದ ಪ್ರಶಾಂತ ಮತ್ತು ಶಾಂತಿಯುತ ಸ್ಥಳದೊಂದಿಗೆ ಸ್ವಚ್ಛ, ಸುಂದರವಾಗಿರುವುದು ಕೂಡ ಅಷ್ಟೇ ಮುಖ್ಯ. ಅನಗತ್ಯ ಹೆಚ್ಚುವರಿ ಪೀಠೋಪಕರಣಗಳು, ಬಟ್ಟೆ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಒಳಗೊಂಡಂತೆ ಮಲಗುವ ಕೋಣೆಯಲ್ಲಿರುವ ಅನಗತ್ಯ ವಸ್ತುಗಳನ್ನು ಅಲ್ಲಿಂದ ಹೊರ ತೆಗೆಯಿರಿ.

ಬಣ್ಣಗಳು

ಶಾಂತ ಮತ್ತು ವಿಶ್ರಾಂತಿಯ ಅರ್ಥವನ್ನು ಉತ್ತೇಜಿಸಲು ಮಲಗುವ ಕೋಣೆ ಅಲಂಕಾರದಲ್ಲಿ ಮೃದುವಾದ ನೀಲಿ, ಹಸಿರು ಮತ್ತು ನ್ಯೂಟ್ರಲ್‌ಗಳಂತಹ ಹಿತವಾದ ಬಣ್ಣಗಳನ್ನು ಸೇರಿಸಿ. ಉತ್ತೇಜಕ ಅಥವಾ ಅತಿಯಾದ ರೋಮಾಂಚಕ ಬಣ್ಣಗಳನ್ನು ತಪ್ಪಿಸಿ. ಯಾಕೆಂದರೆ ಇದು ನಿದ್ರೆಗೆ ಅಡ್ಡಿಯಾಗಬಹುದು. ವಿಶ್ರಾಂತಿ ಮತ್ತು ನವ ಯೌವನವನ್ನು ಉತ್ತೇಜಿಸುವ ಸೌಮ್ಯವಾದ ವರ್ಣಗಳನ್ನು ಆರಿಸಿಕೊಳ್ಳಿ.

ನೈಸರ್ಗಿಕ ಬೆಳಕಿಗೆ ಆದ್ಯತೆ ನೀಡಿ

ಹಗಲಿನಲ್ಲಿ ಸೂರ್ಯನ ಬೆಳಕು, ರಾತ್ರಿಯಲ್ಲಿ ಕೃತಕ ಬೆಳಕಿನ ಮೂಲಗಳನ್ನು ಕಡಿಮೆ ಮಾಡುವ ಮೂಲಕ ಮಲಗುವ ಕೋಣೆಯಲ್ಲಿ ನೈಸರ್ಗಿಕ ಬೆಳಕನ್ನು ಹೆಚ್ಚಿಸಿ. ನೈಸರ್ಗಿಕ ಬೆಳಕು ದೇಹದ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಆರೋಗ್ಯಕರ ನಿದ್ರೆ-ಎಚ್ಚರ ಚಕ್ರಗಳನ್ನು ಉತ್ತೇಜಿಸುತ್ತದೆ. ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಸಮತೋಲನ ಇರಲಿ

ವಾಸ್ತು ತತ್ತ್ವಗಳ ಪ್ರಕಾರ ಮಲಗುವ ಕೋಣೆಯಲ್ಲಿ ಸುಗಮ ಶಕ್ತಿಯ ಹರಿವು ಮತ್ತು ಸಮತೋಲನವನ್ನು ಸುಗಮಗೊಳಿಸಲು ಪೀಠೋಪಕರಣಗಳು ಮತ್ತು ಅಲಂಕಾರಗಳನ್ನು ಸರಿಯಾಗಿ ಜೋಡಿಸಿ. ಹಾಸಿಗೆಯ ಬಳಿ ಚೂಪಾದ ಅಥವಾ ಮೊನಚಾದ ವಸ್ತುಗಳನ್ನು ಇರಿಸುವುದನ್ನು ತಪ್ಪಿಸಿ.

ಇದನ್ನೂ ಓದಿ: Vastu Tips: ಸಣ್ಣ ವಾಸ್ತು ದೋಷವೇ ಕುಟುಂಬದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು!

ಶಾಂತ ವಾತಾವರಣ

ಮಲಗುವ ಕೋಣೆಯಲ್ಲಿ ಹಿತವಾದ ಬೆಳಕು, ಆರಾಮದಾಯಕವಾದ ಹಾಸಿಗೆ ಮತ್ತು ಶಾಂತವಾದ ಸುವಾಸನೆಯೊಂದಿಗೆ ಶಾಂತ ವಾತಾವರಣವನ್ನು ರಚಿಸುವ ಮೂಲಕ ಶಾಂತ ನಿದ್ರೆಗೆ ಸೂಕ್ತವಾಗುವಂತೆ ಹೊಂದಿಸಿ. ಭೂಮಿಯೊಂದಿಗೆ ಸಾಮರಸ್ಯ ಮತ್ತು ಸಂಪರ್ಕದ ಭಾವನೆಯನ್ನು ಉಂಟುಮಾಡಲು ಸಸ್ಯ, ನೈಸರ್ಗಿಕ ಬಟ್ಟೆ ಮತ್ತು ಸಾವಯವ ವಸ್ತುಗಳನ್ನು ಸಂಯೋಜಿಸಿ.

Continue Reading

ಧಾರ್ಮಿಕ

Vastu Tips: ಸಣ್ಣ ವಾಸ್ತು ದೋಷವೇ ಕುಟುಂಬದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು!

ಸಣ್ಣಪುಟ್ಟ ವಾಸ್ತು ದೋಷಗಳು ಮನೆ ಮಂದಿಯ ಸುಖ, ಶಾಂತಿ, ನೆಮ್ಮದಿಯನ್ನು ಮಾತ್ರವಲ್ಲ ಆರೋಗ್ಯವನ್ನು ಕೆಡಿಸುತ್ತದೆ. ಹೀಗಾಗಿ ಮನೆಯ ಒಳಾಂಗಣ, ಹೊರಾಂಗಣದ ಸಣ್ಣ ಪುಟ್ಟ ವಸ್ತುಗಳ ವಿಚಾರದಲ್ಲೂ ವಾಸ್ತು ನಿಯಮಗಳನ್ನು (Vastu Tips) ಅನುಸರಿಸಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಆ ನಿಯಮಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Vastu Tips
Koo

ವ್ಯಕ್ತಿಯ ಜೀವನದಲ್ಲಿ (life) ಅನೇಕ ಸಮಸ್ಯೆಗಳು (problems) ಸಣ್ಣಪುಟ್ಟ ವಾಸ್ತು ದೋಷಗಳಿಂದ (Vastu Tips) ಉಂಟಾಗುತ್ತವೆ. ಮನೆಯವರಲ್ಲಿ ಮನಸ್ತಾಪಗಳು, ಕುಟುಂಬ (family) ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು, ಆರೋಗ್ಯ ಸಮಸ್ಯೆಗಳು (health issues) ಕಾಡುತ್ತವೆ. ವಾಸ್ತುವಿಗೆ ಸಂಬಂಧಿಸಿದ ತಪ್ಪುಗಳನ್ನು ಮಾಡುವ ವ್ಯಕ್ತಿಗಳು ಮಾನಸಿಕ ಮತ್ತು ದೈಹಿಕ ಯಾತನೆ ಅನುಭವಿಸುತ್ತಾರೆ. ಆದ್ದರಿಂದ ಮನೆಯಲ್ಲಿ ಪ್ರತಿಯೊಂದು ವಿಚಾರದಲ್ಲೂ ವಾಸ್ತು ನಿಯಮಗಳನ್ನು ಅನುಸರಿಸುವುದು ಉತ್ತಮ.

ನಿರ್ದಿಷ್ಟ ವಿಷಯಗಳ ಬಗ್ಗೆ ಉತ್ತಮ ಕಾಳಜಿ ವಹಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನುನಡೆಸಬಹುದು. ಅಲ್ಲದೇ ಮನೆಯ ಹಲವಾರು ಸಮಸ್ಯೆಗಳನ್ನು ಸರಿಪಡಿಸಬಹುದು.

ಹಳೆಯ ವಸ್ತುಗಳು ಬೇಡ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ತುಂಬಾ ಹಳೆಯ ಮತ್ತು ನಿಷ್ಪ್ರಯೋಜಕ ವಸ್ತುಗಳನ್ನು ಸಂಗ್ರಹಿಸಬಾರದು. ಇವುಗಳನ್ನು ಮಲಗುವ ಕೋಣೆಗಳಲ್ಲಿ ಇಡಬಾರದು. ಒಂದು ವೇಳೆ ಇಟ್ಟರೆ ಇದರಿಂದ ಆರೋಗ್ಯ ಕೆಡುತ್ತದೆ.

ದೇವರ ಪ್ರತಿಮೆ

ಮಲಗುವ ಕೋಣೆಯಲ್ಲಿ ದೇವರ ಪ್ರತಿಮೆ ಅಥವಾ ಚಿತ್ರವನ್ನು ಇಡಬಾರದು. ಅದು ದುರದೃಷ್ಟಕರವೆಂದು ಪರಿಗಣಿಸಲಾಗಿದೆ.


ಅಚ್ಚುಕಟ್ಟಾಗಿರಲಿ

ಮಲಗುವ ಕೋಣೆಯನ್ನು ಅಚ್ಚುಕಟ್ಟಾಗಿ ಇರುವಂತೆ ವಿಶೇಷ ಗಮನ ನೀಡಬೇಕು. ಅಸ್ತವ್ಯಸ್ತವಾಗಿರುವ ಮಲಗುವ ಕೋಣೆಗಳಿಂದ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

ಆಹಾರ ಸೇವನೆ

ಮನೆಯಲ್ಲಿ ಆಹಾರ ಸೇವನೆ ಮಾಡುವಾಗ ಅಥವಾ ಏನನ್ನಾದರೂ ತಿನ್ನುವಾಗ ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡು ತಿನ್ನಬೇಕು.

ನಲ್ಲಿ ನೀರು

ಮನೆಯಲ್ಲಿ ಒಡೆದ ನಲ್ಲಿಯನ್ನು ಆದಷ್ಟು ಬೇಗ ಸರಿಪಡಿಸಿ. ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿರುವುದು ದುರದೃಷ್ಟಕರ ಎಂದು ಹೇಳಲಾಗುತ್ತದೆ.

ಮಲಗುವ ದಿಕ್ಕು

ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗ್ಗುತ್ತದೆ.


ಕಸ ಸಂಗ್ರಹ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮೆಟ್ಟಿಲುಗಳ ಕೆಳಗೆ ಹೆಚ್ಚಿನ ಪ್ರಮಾಣದ ಕಸವನ್ನು ಸಂಗ್ರಹಿಸಲು ಬಿಡಬಾರದು. ಇದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಓದುವ ದಿಕ್ಕು

ಮಕ್ಕಳು ಓದುವಾಗ ಯಾವಾಗಲು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಬೇಕು. ಇದರಿಂದ ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿರುತ್ತದೆ.

ಇದನ್ನೂ ಓದಿ: Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಮರ, ಸಸ್ಯಗಳು

ಅತ್ಯುತ್ತಮ ಆರೋಗ್ಯಕ್ಕಾಗಿ, ಮನೆಯ ಸುತ್ತಮುತ್ತ ಮರ ಮತ್ತು ಸಸ್ಯಗಳನ್ನು ಬೆಳೆಸಿ. ಇದು ಕುಟುಂಬದ ಎಲ್ಲರನ್ನು ಸಂತೋಷವಾಗಿರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ.

ಕಿಟಕಿ, ಬಾಗಿಲು

ಮನೆಯೊಳಗೇ ಉತ್ತಮ ಶಕ್ತಿಯನ್ನು ಸ್ವಾಗತಿಸಲು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಸಮಯದವರೆಗೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ.

Continue Reading

ಧಾರ್ಮಿಕ

Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಗೋಡೆಗಳ ಮೇಲೆ ತೂಗು ಹಾಕುವ ಚಿತ್ರಗಳಿಗೂ ಪ್ರಮುಖ ನಿಯಮಗಳು ಮತ್ತು ಸಲಹೆಗಳನ್ನು ವಾಸ್ತು ಶಾಸ್ತ್ರದಲ್ಲಿ (Vastu Tips) ನೀಡಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಬಹುದು ಮತ್ತು ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಬಹುದು.

VISTARANEWS.COM


on

By

Vastu Tips
Koo

ಮನೆಯಲ್ಲಿ (home) ಪ್ರತಿಯೊಂದು ವಸ್ತುವನ್ನು ಇಡಲೂ ವಾಸ್ತು (Vastu Tips) ನಿಯಮವಿದೆ. ಯಾಕೆಂದರೆ ಮನೆಯೊಳಗಿರುವ ಪ್ರತಿಯೊಂದು ವಸ್ತುವಿನಲ್ಲೂ ಜೀವಕಳೆ ತುಂಬುತ್ತದೆ ಮತ್ತು ಶಕ್ತಿಯ ಕೇಂದ್ರವಾಗಿಸುತ್ತದೆ. ಗೋಡೆಯಲ್ಲಿ (wall) ತೂಗು ಹಾಕುವ ಚಿತ್ರಗಳನ್ನು (Picture) ಇಡುವಾಗಲೂ ವಾಸ್ತು ನಿಯಮವನ್ನು ಪಾಲಿಸಬೇಕು. ಯಾಕೆಂದರೆ ಗೋಡೆಗಳ ಮೇಲೆ ಇಡುವ ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಕೇವಲ ಮನೆಯ ಸೌಂದರ್ಯವನ್ನು ಮಾತ್ರ ಹೆಚ್ಚಿಸುವುದಿಲ್ಲ ಸಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪ್ರವಹಿಸುವಂತೆ ಮಾಡುತ್ತದೆ. ಎಲ್ಲೆಂದರಲ್ಲಿ ಅಳವಡಿಸಿದರೆ ನಕಾರಾತ್ಮಕತೆ ಹೆಚ್ಚುತ್ತದೆ.

ಮನೆಯ ಗೋಡೆಗಳ ಮೇಲೆ ತೂಗು ಹಾಕುವ ಚಿತ್ರ, ಸರಿಯಾದ ದಿಕ್ಕು ಮತ್ತು ನಿರ್ದಿಷ್ ಬಣ್ಣದದ್ದರೆ ಮಾತ್ರ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಉಳಿಯುತ್ತದೆ ಎನ್ನುತ್ತದೆ ವಾಸ್ತು.

ಉತ್ತರ ದಿಕ್ಕು

ಸಂಪತ್ತಿನ ದೇವರು ಕುಬೇರ ಈ ದಿಕ್ಕಿನಲ್ಲಿ ವಾಸಿಸುತ್ತಾನೆ. ಹಚ್ಚ ಹಸಿರಿನ ಮರಗಳು, ಸಸ್ಯವರ್ಗ ಮತ್ತು ನೀರಿನ ಮೂಲಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ.

ಪೂರ್ವ ದಿಕ್ಕು

ಈ ದಿಕ್ಕನ್ನು ಉದಯಿಸುತ್ತಿರುವ ಸೂರ್ಯನ ದಿಕ್ಕು ಎಂದು ಪರಿಗಣಿಸಲಾಗಿದೆ. ಭಗವಾನ್ ಸೂರ್ಯ, ಸಂತರು ಅಥವಾ ಸೂರ್ಯೋದಯದ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಪ್ರಯೋಜನಕಾರಿ. ಈ ಚಿತ್ರಗಳು ಮನೆಯಲ್ಲಿ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತರುತ್ತವೆ.

ದಕ್ಷಿಣ ದಿಕ್ಕು

ಪೂರ್ವಜರು ಮತ್ತು ಧರ್ಮಗ್ರಂಥಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇರಿಸಬಹುದು. ದೆವ್ವ, ಆತ್ಮ ಅಥವಾ ನಕಾರಾತ್ಮಕ ಶಕ್ತಿಯ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಕೆಂಪು, ಚಿನ್ನದ ಅಥವಾ ಕಿತ್ತಳೆ ಬಣ್ಣದ ಚಿತ್ರಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಪಶ್ಚಿಮ ದಿಕ್ಕು

ಈ ದಿಕ್ಕು ನೀರಿನ ಅಂಶದಿಂದ ಪ್ರಭಾವಿತವಾಗಿರುತ್ತದೆ. ಈ ದಿಕ್ಕಿನಲ್ಲಿ ನೀರು, ಸಮುದ್ರ, ನದಿ ಅಥವಾ ಕಾರಂಜಿ ಚಿತ್ರಗಳನ್ನು ಹಾಕುವುದು ಮಾನಸಿಕ ಶಾಂತಿ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.


ಫೋಟೋಗಳು ಹೇಗಿರಬೇಕು?

ದೇವರು, ದೇವತೆಗಳು ಮತ್ತು ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಮನೆಯಲ್ಲಿ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಕುಟುಂಬದಲ್ಲಿ ಶಾಂತಿ ಮತ್ತು ಭಕ್ತಿಯನ್ನು ಉತ್ತೇಜಿಸುತ್ತವೆ.

ಹಚ್ಚ ಹಸಿರಿನ ಮರ, ಹೂವುಗಳು, ಪರ್ವತ, ನದಿಗಳು ಮುಂತಾದ ಸುಂದರವಾದ ನೈಸರ್ಗಿಕ ದೃಶ್ಯಗಳ ಚಿತ್ರಗಳನ್ನು ಹಾಕುವುದು ಮನಸ್ಸಿನಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

ಕುಟುಂಬ ಸದಸ್ಯರ ಗುಂಪು ಫೋಟೋಗಳನ್ನು ಅಥವಾ ಸಂತೋಷದ ಕುಟುಂಬ ಕ್ಷಣಗಳ ಚಿತ್ರಗಳನ್ನು ಹಾಕುವುದು ಕುಟುಂಬದಲ್ಲಿ ಪ್ರೀತಿ ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಏರುತ್ತಿರುವ ಸೂರ್ಯ, ಚಾಲನೆಯಲ್ಲಿರುವ ಕುದುರೆಗಳು, ಹಾರುವ ಪಕ್ಷಿಗಳು ಮುಂತಾದ ಶಕ್ತಿಯುತ ಮತ್ತು ಸ್ಪೂರ್ತಿದಾಯಕ ಚಿತ್ರಗಳನ್ನು ಇಡುವುದರಿಂದ ಮನೆಯವರಲ್ಲಿ ಶಕ್ತಿ ಮತ್ತು ಸ್ಫೂರ್ತಿ ನೀಡುತ್ತದೆ.

ಯಾವ ಎತ್ತರದಲ್ಲಿ ಇಡಬೇಕು?

ಚಿತ್ರಗಳನ್ನು ಸುಲಭವಾಗಿ ಗೋಚರಿಸುವಂತಹ ಎತ್ತರದಲ್ಲಿ ಗೋಡೆಯ ಮೇಲೆ ಇಡಬೇಕು ಮತ್ತು ಅವುಗಳನ್ನು ನೋಡುವಲ್ಲಿ ಯಾರೂ ಅನಾನುಕೂಲವಾಗಬಾರದು. ಚಿತ್ರಗಳನ್ನು ಮುಖ್ಯ ಬಾಗಿಲಿನ ಮುಂದೆ ಅಥವಾ ನೇರವಾಗಿ ಹಾಸಿಗೆಯ ಮುಂದೆ ಇಡುವುದನ್ನು ತಪ್ಪಿಸಬೇಕು. ಧಾರ್ಮಿಕ ಅಥವಾ ಕುಟುಂಬದ ಚಿತ್ರಗಳನ್ನು ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಇಡಬಾರದು.

ಇದನ್ನೂ ಓದಿ: Vastu Tips: ವೈವಾಹಿಕ ಜೀವನ ಸುಖಮಯವಾಗಿರಲು ಈ ವಾಸ್ತು ನಿಯಮ ಅನುಸರಿಸಿ

ಫೋಟೋಗಳ ಬಣ್ಣ ಏನು?

ವರ್ಣಚಿತ್ರಗಳಲ್ಲಿ ಬಳಸುವ ಬಣ್ಣಗಳಿಗೆ ಗಮನ ಕೊಡುವುದು ಸಹ ಮುಖ್ಯವಾಗಿದೆ. ನೀಲಿ, ಹಸಿರು, ಹಳದಿ ಮುಂತಾದ ಬೆಳಕು ಮತ್ತು ಹಿತವಾದ ಬಣ್ಣಗಳು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತವೆ. ಕೆಂಪು, ಕಪ್ಪು ಮತ್ತು ಕಂದು ಬಣ್ಣಗಳಂತಹ ಗಾಢ ಮತ್ತು ಹೆಚ್ಚು ಉತ್ತೇಜಕ ಬಣ್ಣಗಳನ್ನು ಮಿತವಾಗಿ ಬಳಸಬೇಕು.

ಫೋಟೋಗಳನ್ನು ಹೇಗೆ ಇರಿಸಬೇಕು?

ಚಿತ್ರಗಳನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿಡಬೇಕು. ಧೂಳು, ಕೊಳಕು ಮತ್ತು ಹಾನಿಗೊಳಗಾದ ಚಿತ್ರಗಳು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು.

Continue Reading

ಮೈಸೂರು

Mysore News: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ; ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

Mysore News: ಮೈಸೂರಿನ ಜೆಪಿ ನಗರದ ವಿಠಲಧಾಮದ ಭವ್ಯ ವೇದಿಕೆಯಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠ ಆಯೋಜನೆ ಮಾಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಶುಕ್ರವಾರದ ವಿದ್ವತ್ ಸಭೆಯಲ್ಲಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

VISTARANEWS.COM


on

All achievements in life are easy if there is Guru's grace says Sri Satyatmatirtha Swamiji
Koo

ಮೈಸೂರು: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ (Mysore News) ತಿಳಿಸಿದರು.

ಜೆಪಿ ನಗರದ ವಿಠಲಧಾಮದ ಭವ್ಯ ವೇದಿಕೆಯಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠ ಆಯೋಜನೆ ಮಾಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಶುಕ್ರವಾರದ ವಿದ್ವತ್ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳು ಶ್ರಮ ವಹಿಸಿ ಅಧ್ಯಯನ ಮಾಡಿರುವುದು ಒಂದೆಡೆಯಾದರೆ ಅವರಲ್ಲಿ ಧೈರ್ಯ, ಸದಾಚಾರ, ಸಂಸ್ಕಾರ, ನೈತಿಕತೆ ಮತ್ತು ಜೀವನ ಕ್ರಮದ ಮಾರ್ಗವನ್ನು ಕಲಿಯುವುದು ಗುರುವಿನ ಅನುಸರಣೆಯಿಂದ ಮಾತ್ರ. ಈ ನಿಟ್ಟಿನಲ್ಲಿ ಇಂದು ಸುಧಾಮಂಗಳ ಮಾಡುತ್ತಿರುವ ವಿದ್ಯಾರ್ಥಿಗಳಾದ ಸೌಮಿತ್ರಿ, ಸುಘೋಷ, ಪ್ರಣವ ಮತ್ತು ಹೊನ್ನಾಳಿ ಆಯಾಚಿತ ಶ್ರೀಶ ಆಚಾರ್ಯರು ಪಂಡಿತರು ಮತ್ತು ವಿದ್ವಾಂಸರು ಮೆಚ್ಚುವಂತಹ ಮುಕ್ತ ಪರೀಕ್ಷೆ ನೀಡಿದ್ದಾರೆ. ಅವರಿಗೆ ಉನ್ನತೋನ್ನತ ಪ್ರಗತಿ ಆಗಲಿ ಎಂದು ಸತ್ಯಾತ್ಮ ಶ್ರೀಗಳು ಆಶೀರ್ವಾದ ಪೂರ್ವಕವಾಗಿ ಹೇಳಿದರು.

ಇದನ್ನೂ ಓದಿ: World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು ಮಾತನಾಡಿ, ಶ್ರೀ ವಿದ್ಯಾಶ್ರೀಶ ತೀರ್ಥರು ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಮೂಲಕ ಯುವ-ನವ ವಿದ್ವಾಂಸರನ್ನು ತರಬೇತುಗೊಳಿಸಿ ಸಮಾಜಕ್ಕೆ ಮಹತ್ವದ ಕೊಡುಗೆಯನ್ನಾಗಿ ನೀಡುತ್ತಿದ್ದಾರೆ. ಅವರ ಸೇವೆ ಮಹತ್ತರವಾಗಿದೆ. ವಿದ್ಯಾರ್ಥಿಗಳು ಪಂಡಿತರಾಗಿ ಭಾರತೀಯ ಸನಾತನ ಪರಂಪರೆಯ ಪ್ರತೀಕವೂ ಆಗಿ ದೇಶದ ಸಂಸ್ಕೃತಿಯನ್ನು ಮುನ್ನಡೆಸುವಂತಾಗಲಿ ಎಂದು ತಿಳಿಸಿದರು.

ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯರು ಮಾತನಾಡಿ, ಪೇಜಾವರ ಶ್ರೀ ವಿಶ್ವೇಶ ತೀರ್ಥರು ನಮ್ಮ ವಿದ್ಯಾಪೀಠಕ್ಕೆ ಪ್ರಪ್ರಥಮವಾಗಿ ಸ್ಪೂರ್ತಿ ಮತ್ತು ಚೈತನ್ಯ ನೀಡಿದವರು ಎಂದು ಸ್ಮರಿಸಿದರು.

ಕಳೆದ ಎಂಟು ವರ್ಷಗಳ ಹಿಂದೆ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠ ತಿರುಮಕೂಡಲು ಕ್ಷೇತ್ರದಲ್ಲಿ ಆರಂಭವಾದಾಗ ಸ್ವತಃ ನನ್ನ ತಾಯಿಯವರೇ ಎಲ್ಲ ಮಕ್ಕಳಿಗೂ ಅಡುಗೆ ಮಾಡಿ ಕೈ ತುತ್ತು ಹಾಕಿ ಬೆಳೆಸಿದರು. ವಿದ್ಯಾರ್ಥಿಗಳ ಸಮಗ್ರ ಕ್ಷೇಮ ಪಾಲನೆಯಲ್ಲಿ ಪ್ರತಿನಿತ್ಯವೂ ನೂರಾರು ಸಮಸ್ಯೆ ಎದುರಾದರು ಅವೆಲ್ಲವೂ ಗುರುಗಳ ಪರಮ ಅನುಗ್ರಹದಿಂದ ನಿವಾರಣೆಯಾಗಿ ಇಂದು ನಾಲ್ವರು ಪಂಡಿತರಾಗುವ ಮಟ್ಟದವರೆಗೆ ಸಂಸ್ಥೆ ಬೆಳೆದಿದೆ. ಇವುಗಳ ಹಿಂದೆ ಸೋಸಲ ಶ್ರೀ ವಿದ್ಯಾಶ್ರೀಶ ತೀರ್ಥರ ಪರಿಶ್ರಮ ಅಗಾಧವಾಗಿದೆ ಎಂದರು.

ವಿದ್ಯಾಪೀಠದ ವ್ಯವಸ್ಥಾಪಕ ಟ್ರಸ್ಟಿ ಶೇಷಗಿರಿ ಆಚಾರ್ಯ ಮಾತನಾಡಿ, ಸುಧಾ ಪರೀಕ್ಷೆ ಎಂಬುದು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ, ವಿದ್ವಾಂಸರೂ ತಮ್ಮನ್ನು ತಾವು ಸರಿಪಡಿಸಿಕೊಳ್ಳಲು, ಜ್ಞಾನದ ಶಾಖೆಯನ್ನು ಉನ್ನತೀಕರಿಸಿಕೊಳ್ಳಲು ಮಹೋನ್ನತವಾದ ವೇದಿಕೆಯಾಗಿದೆ ಎಂದರು.

ಇದನ್ನೂ ಒದಿ: Cyber Crime: ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ

ಸುಧಾ ಪರೀಕ್ಷೆ ಎದುರಿಸಿ, ವಿದ್ವಾಂಸರ ಪ್ರಶಂಸೆಗೆ ಭಾಜನರಾದ ಆಯಾಚಿತ ಶ್ರೀ ಶ ಮತ್ತು ಸುಘೋಷ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆಯಾಚಿತ ಶ್ರೀ ಶ ಮಾತನಾಡಿ, ಬಡತನದ ಬೇಗೆಯಲ್ಲಿ ನಾನು ಇದ್ದರೂ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರೂ ಸೋಸಲೆ ಶ್ರೀಗಳು ನನ್ನನ್ನು ಕೈಹಿಡಿದು ಅನ್ನ, ಆಹಾರವನ್ನು ನೀಡಿ ವಿದ್ಯಾದಾನ ಮಾಡಿದರು. ಕಳೆದ ವರ್ಷ ನನ್ನ ಸಹೋದರಿಯ ವಿವಾಹ ಸಂದರ್ಭದಲ್ಲಿಯೂ ನಮ್ಮ ಬಡತನವನ್ನು ಕಂಡು ಸಂಪೂರ್ಣ ವಿವಾಹದ ಜವಾಬ್ದಾರಿಯನ್ನು ಮಠದಿಂದಲೇ ನಿರ್ವಹಿಸಿದ್ದನ್ನು ಜೀವನದಲ್ಲಿ ಮರೆಯಲಾಗದು ಎಂದು ತಿಳಿಸಿದರು.

ಪ್ರಣವ ಆಚಾರ್ಯ ಮಾತನಾಡಿ, ನಮ್ಮ ಪರೀಕ್ಷೆ ಮತ್ತು ಯಶಸ್ವಿಗಾಗಿ ಹಗಲು ಇರುಳು ಶ್ರಮಿಸಿದ ಉಪನ್ಯಾಸಕರು ಮತ್ತು ಪಂಡಿತರನ್ನು ಸ್ಮರಿಸಿಕೊಂಡರು. ಹಿರಿಯರ ಅನುಗ್ರಹದಿಂದಲೇ ನಮ್ಮ ಉನ್ನತಿ ಸಾಧ್ಯವಾಗಿದೆ ಎಂದು ಧನ್ಯತೆ ಸಮರ್ಪಿಸಿದರು.

ಹಿರಿಯ ವಿದ್ವಾಂಸ ಎ.ವಿ. ನಾಗಸಂಪಿಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಮಠ ಆಯೋಜಿಸಿದ್ದ ವಿಶೇಷ ಪ್ರದರ್ಶಿನಿ ಗಮನ ಸೆಳೆಯಿತು. ರಾಮಾಯಣ, ಮಹಾಭಾರತ ಶ್ರೀಮನ್ ನ್ಯಾಯ ಸುಧಾ, ವ್ಯಾಸತ್ರಗಳು, ವೇದಗಳು ಮತ್ತು ಉಪನಿಷತ್ತಿನ ವರ್ಣ ಚಿತ್ರಗಳು ವೀಕ್ಷಕರ ಗಮನಸೆಳೆದವು. ಸಂಜೆ ವಿವಿಧ ಭಜನಾ ಮಂಡಳಿಗಳು ನಾದಸ್ವರ ವೇದಘೋಷದೊಂದಿಗೆ ಶೋಭಾ ಯಾತ್ರೆ ಸಂಪನ್ನಗೊಂಡಿತು.

ಶ್ರೀ ವ್ಯಾಸರಾಜರಿಗೆ ಸಾಂಪ್ರದಾಯಿಕವಾಗಿ ದರ್ಬಾರ್ ಸಮರ್ಪಿಸಲಾಯಿತು. ವಿವಿಧ ಪೀಠಾಧೀಶರು ವ್ಯಾಸರಾಜರಿಗೆ ರತ್ನದ ಅಭಿಷೇಕ ಸಮರ್ಪಣೆ ಮಾಡಿದರು.

ಇದನ್ನೂ ಓದಿ: Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಶಸ್ತಿ ಪ್ರದಾನ

ವಿವಿಧ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕೆ.ಎಸ್. ಗುರುರಾಜ, ಎಚ್.ಆರ್. ನಾಗೇಂದ್ರ ಮತ್ತು ಎ.ಆರ್. ರಘುರಾಮ ಅವರಿಗೆ ಶ್ರೀಮಠದ ರಘುನಾಥ ತೀರ್ಥ ಅನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

Continue Reading
Advertisement
Physical Abuse
ಮೈಸೂರು9 mins ago

Physical Abuse : ಪಿಕ್‌ ಅಪ್, ಡ್ರಾಪ್ ನೆಪದಲ್ಲಿ ಸಲುಗೆ; ಅಂಕಲ್ ಗಾಳಕ್ಕೆ ಸಿಲುಕಿದ ಬಾಲಕಿಯ ನರಳಾಟ

Election Commission
ಪ್ರಮುಖ ಸುದ್ದಿ14 mins ago

Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

bhavani revanna prajwal revanna case
ಪ್ರಮುಖ ಸುದ್ದಿ16 mins ago

Prajwal Revanna Case: ಎಸ್‌ಐಟಿಯಿಂದ ಪ್ರಜ್ವಲ್‌ ರೇವಣ್ಣ ಕೋಣೆ ತಲಾಶ್‌, ಭವಾನಿ ತುಳಸಿ ಪೂಜೆ! ಅಲ್ಲೇ ಇದ್ದರೂ ಮುಖಾಮುಖಿಯಾಗದ ಅಮ್ಮ- ಮಗ

Niveditha Gowda Chandan Shetty Joint Pressmeet For The First Time
ಕಿರುತೆರೆ33 mins ago

Niveditha Gowda : ಡಿವೋರ್ಸ್‌ ಬಳಿಕ ಒಟ್ಟಾಗಿ ಸುದ್ದಿಗೋಷ್ಠಿ ಕರೆದ ಚಂದನ್-ನಿವೇದಿತಾ!

Narendra Modi 3.0
ಪ್ರಮುಖ ಸುದ್ದಿ41 mins ago

Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

8th Pay Commission
ರಾಜಕೀಯ46 mins ago

8th Pay Commission: ಭಾರಿ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು

Physical Abuse
ಕ್ರೈಂ47 mins ago

Physical Abuse : ನಗ್ನ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್‌; ಮರ್ಯಾದೆಗೆ ಅಂಜಿದ ತಂದೆ ಬಳಿಕ ಮಗಳು ಮೃತ್ಯು, ಮತ್ತಿಬ್ಬರ ಸ್ಥಿತಿ ಗಂಭೀರ

Sonakshi Sinha to marry boyfriend Zaheer Iqbal on June 23
ಬಾಲಿವುಡ್58 mins ago

Sonakshi Sinha: ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಸೋನಾಕ್ಷಿ ಸಿನ್ಹಾ ಅದ್ಧೂರಿ ಮದುವೆ?

Reasi Terror Attack
ದೇಶ1 hour ago

Reasi Terror Attack : ಜಮ್ಮು – ಕಾಶ್ಮೀರ ಬಸ್ ದಾಳಿಯ ಹೊಣೆ ಹೊತ್ತುಕೊಂಡ ಪಾಕ್ ಲಷ್ಕರ್ ಬೆಂಬಲಿತ ಉಗ್ರ ಸಂಘಟನೆ

Viral Video
ವೈರಲ್ ನ್ಯೂಸ್2 hours ago

Viral Video: ಮೆಕ್ಕಾದಲ್ಲಿ ಬುರ್ಖಾಧಾರಿ ಮಹಿಳೆಯ ಡ್ಯಾನ್ಸ್! ಮುಸ್ಲಿಂ ಸಮುದಾಯದ ಆಕ್ರೋಶ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌