Maha politics: ಅಸ್ವಾಭಾವಿಕ ಮೈತ್ರಿ ಸರಕಾರಕ್ಕೆ ಉಳಿಗಾಲವಿಲ್ಲ, ಕರ್ನಾಟಕದ ಬಳಿಕ ಈಗ ಮಹಾರಾಷ್ಟ್ರ ಮಾದರಿ! - Vistara News

ದೇಶ

Maha politics: ಅಸ್ವಾಭಾವಿಕ ಮೈತ್ರಿ ಸರಕಾರಕ್ಕೆ ಉಳಿಗಾಲವಿಲ್ಲ, ಕರ್ನಾಟಕದ ಬಳಿಕ ಈಗ ಮಹಾರಾಷ್ಟ್ರ ಮಾದರಿ!

ರಾಜಕೀಯದಲ್ಲಿ ಅಸ್ವಾಭಾವಿಕ, ಅನೈಸರ್ಗಿಕ ಸಂಬಂಧಗಳು ಹುಟ್ಟುವುದು ಸಹಜ. ಆದರೆ, ಅದನ್ನು ದೀರ್ಘ ಕಾಲ ಕಾಪಾಡಿಕೊಳ್ಳುವುದು ಅಪಾಯಕಾರಿ. ಅದು ಒಂದು ಪಕ್ಷದ ಅಸ್ತಿತ್ವವನ್ನೇ ನಾಶ ಮಾಡಿಬಿಡುತ್ತದೆ. ಶಿವಸೇನೆಗೆ ಅಂಥದೊಂದು ಅಪಾಯವಿತ್ತು. ಆದರೆ, ಉದ್ಧವ್‌ ಠಾಕ್ರೆಗೆ ಅದು ಅರ್ಥವಾಗಲಿಲ್ಲ. ಅಸ್ವಾಭಾವಿಕ ಸಂಬಂಧಕ್ಕೆ ಡೈವೋರ್ಸ್‌ ಕೊಡುವುದನ್ನು ಮರೆತು ಸಂಬಂಧದ ಸಂಭ್ರಮದಲ್ಲೇ ಅವರು ಮುಳುಗಿಹೋದರು.

VISTARANEWS.COM


on

Maharastra political crisis: Shinde-Thackrey faction dispute transferred to Supreme Court extended bench
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಅದು ಐದು ವರ್ಷ ಉಳಿಯಬೇಕಾದ ಸರಕಾರ ಆಗಿರಲೇ ಇಲ್ಲ. ಇವತ್ತಲ್ಲ ನಾಳೆ, ಒಂದಲ್ಲ ಒಂದು ಕಾರಣಕ್ಕೆ ಅದು ಉರುಳಿ ಹೋಗಲೇಬೇಕಿತ್ತು. ಆದರೆ, ಅದನ್ನು ಜನನಿಬಿಡ ಪ್ರದೇಶದಲ್ಲಿರುವ ದೊಡ್ಡ ಕಟ್ಟಡವೊಂದನ್ನು ಅತ್ಯಂತ ಜತನದಿಂದ ಉರುಳಿಸುತ್ತಾರಲ್ಲ. ಆ ರೀತಿ ಯಾರಿಗೂ ಗೊತ್ತಾಗದಂತೆ ನೆಲಸಮ ಮಾಡಲು ಹಲವು ಅವಕಾಶಗಳಿದ್ದವು. ಆದರೆ, ಇಲ್ಲಿ ಬುಲ್ಡೋಜರ್‌ ತಂದು ಗುದ್ದಿಸಿ ಪುಡಿ ಮಾಡಲಾಗಿದೆ. ಕೆಲವರಿಗೆ ಗಾಯಗಳೂ ಆಗಿವೆ!

jds analysis

ರಾಜಕಾರಣದಲ್ಲಿ ಕೆಲವೊಮ್ಮೆ ಅಧಿಕಾರಕ್ಕಾಗಿ ಅಸಹಜ, ಅಸ್ವಾಭಾವಿಕ ಮೈತ್ರಿಗಳು ಅತ್ಯಂತ ಸಹಜ. ಆದರೆ, ಈಗೀಗ ಜೀವನಪೂರ್ತಿ ಜತೆಯಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿ ಮದುವೆಯಾದ ಸಂಬಂಧಗಳೇ ಉಳಿಯುವುದಿಲ್ಲ. ಹಾಗಿರುವಾಗ ಅವಸರಕ್ಕೆ ಸೃಷ್ಟಿಯಾದ ರಾಜಕೀಯ ಸಂಬಂಧಗಳಿಗೆ ದೀರ್ಘ ಕಾಲ ಜೋತು ಬೀಳುವ ಅನಿವಾರ್ಯತೆ ಇರುವುದಿಲ್ಲ. ಹಾಗೆ ಜೋತು ಬೀಳುವುದು ಕೂಡಾ ಅಪಾಯಕಾರಿಯೆ.

ಮಹಾರಾಷ್ಟ್ರದಲ್ಲಿ ಆಗಿದ್ದು ಅದೇ

2019ರ ಅಕ್ಟೋಬರ್‌ 21ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಶಿವಸೇನೆ ನಿಚ್ಚಳ ಬಹುಮತವನ್ನೇ ಪಡೆದಿತ್ತು. 152 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 106 ಸ್ಥಾನಗಳಲ್ಲಿ ಗೆದ್ದಿದ್ದರೆ, 121 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದ ಶಿವಸೇನೆ 56 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಅತ್ಯಂತ ಸಹಜವಾಗಿ ಬಿಜೆಪಿ ಮುಂದಾಳುತ್ವದಲ್ಲಿ ಸರಕಾರ ರಚನೆಗೆ ಬೇಕಾದ ಶಕ್ತಿ (ಮ್ಯಾಜಿಕ್‌ ನಂ. 145) ಜಮೆಯಾಗಿತ್ತು. ಆದರೆ, ಅಧಿಕಾರ ಹಂಚಿಕೆಯ ವಿಚಾರದಲ್ಲಿ ಹುಟ್ಟಿದ ಜಗಳದಿಂದಾಗಿ ಸರಕಾರವೇ ರಚನೆಯಾಗದೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಒಂದು ತಿಂಗಳ ರಾಷ್ಟ್ರಪತಿ ಆಡಳಿತದ ಬಳಿಕವೂ ಬಿಕ್ಕಟ್ಟು ಬಗೆಹರಿಯದೆ ಇದ್ದಾಗ ಅದಕ್ಕೊಂದು ಜರ್ಕ್‌ ಕೊಟ್ಟಿದ್ದು ದೇವೇಂದ್ರ ಫಡ್ನವಿಸ್‌. ಮಾಜಿ ಮುಖ್ಯಮಂತ್ರಿ ಫಡ್ನವಿಸ್‌ ಅವರು ಎನ್‌ಸಿಪಿಯನ್ನು ಒಡೆದು ಅಜಿತ್‌ ಪವಾರ್‌ ಅವರ ಟೀಮ್‌ನ ಬೆಂಬಲ ಪಡೆದು ನವೆಂಬರ್‌ 23ರಂದು ರಾತ್ರೋರಾತ್ರಿ ಸರಕಾರವನ್ನು ರಚಿಸಿದರು. ರಾಜ್ಯಪಾಲರ ಸಹಾಯ ಹಸ್ತ, ಕೇಂದ್ರ ಸರಕಾರದ ಕೃಪಾಕಟಾಕ್ಷದ ನೆರವಿನಿಂದ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಾಯಿತು. ಅಲ್ಲಿಯವರೆಗೆ ನಿದ್ದೆಯಲ್ಲಿದ್ದ ಎ‌ನ್‌ಸಿಪಿ ಬೆಚ್ಚಿ ಬಿದ್ದಿತು. ಬಂಧುವೇ ಆಗಿರುವ ಅಜಿತ್‌ ಪವಾರ್‌ ಮೋಸ ಮಾಡಿದರು ಎಂದು ಶರದ್‌ ಪವಾರ್‌ ಅಲವತ್ತುಕೊಂಡರು. ನಿಜವೆಂದರೆ, ಅಜಿತ್‌ ಮೋಸ ಮಾಡಿದ್ದು ತಮಗಲ್ಲ ಬಿಜೆಪಿಗೆ ಎಂದು ಗೊತ್ತಾಗಿದ್ದು ನವೆಂಬರ್‌ 26ರಂದು! ಸರಕಾರ ರಚನೆಗೆ ಬೆಂಬಲ ನೀಡುವುದಾಗಿ ಬಿಜೆಪಿಗೆ ಎಂದು ಯೊಂದಿಗೆ ಸೇರಿಕೊಂಡ ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯೇ ಆದರು. ತನ್ನ ಮೇಲಿದ್ದ 20,000 ಕೋಟಿ ರೂ.ಗಳ ಹಗರಣದಲ್ಲಿ ರಾತ್ರೋ ರಾತ್ರಿ ಕ್ಲೀನ್‌ ಚಿಟ್‌ ಪಡೆದು ಪರಿಶುದ್ಧರಾದರು. ಮೂರೇ ದಿನದ ಅಂತರದಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ದೇವೇಂದ್ರ ಫಡ್ನವಿಸ್‌ಗೆ ಕೈ ಕೊಟ್ಟು ಮರಳಿ ಎನ್‌ಸಿಪಿ ಸೇರಿಕೊಂಡರು. ಫಡ್ನವಿಸ್‌ ಸರಕಾರ ಉರುಳಿತು.

ದೇವೇಂದ್ರ ಫಡ್ನವಿಸ್‌

1984ರಲ್ಲಿ ಜತೆಯಾದ ಬಳಿಕ  ಬಿಜೆಪಿ- ಶಿವಸೇನೆ ಹಲವು ಬಾರಿ ಜತೆಗೂಡಿ ಸರಕಾರ ರಚಿಸಿದರೂ ಬಿಜೆಪಿ ಹಿರಿಯಣ್ಣನಾಗಿ  ಅಧಿಕಾರ ನಡೆಸಿದ್ದು 2014ರಲ್ಲಿ. ಅದಾದ ಬಳಿಕ ಶಿವಸೇನೆಗೆ ಬಿಜೆಪಿಯ ಮುಂದೆ ತಾನು ಮಂಕಾಗಬಹುದೆಂಬ ಆತಂಕ ಸೃಷ್ಟಿಯಾಗಲು ಶುರುವಾಗಿತ್ತು. ಅದೇ ಕಾರಣಕ್ಕೆ 2019ರ ಚುನಾವಣೆಯಲ್ಲಿ ಗೆದ್ದರೂ ಅಧಿಕಾರ ಹಂಚಿಕೆಯೇ ಕಗ್ಗಂಟಾಯಿತು.

ಹುಟ್ಟಿಕೊಂಡಿತು ಹೊಸ ಮೈತ್ರಿ!

ತನ್ನನ್ನು ಕಡೆಗಣಿಸುತ್ತಿರುವ ಬಿಜೆಪಿಗೆ ಪಾಠ ಕಲಿಸಲೇಬೇಕೆಂಬ ಹಠದಲ್ಲಿ ಶಿವಸೇನೆ ಯಾರೂ ನಂಬಲು ಸಾಧ್ಯವೇ ಇಲ್ಲದ ಮೈತ್ರಿಯೊಂದಕ್ಕೆ ಮುಂದಾಯಿತು. ತಾನು ಬದುಕಿನುದ್ದಕ್ಕೂ ಪ್ರತಿ ಹೆಜ್ಜೆಯಲ್ಲೂ ವಿರೋಧಿಸಿಕೊಂಡು ಬಂದಿದ್ದ, ಸಾಕಷ್ಟು ದಬ್ಬಾಳಿಕೆ, ದೌರ್ಜನ್ಯಗಳಿಗೆ ಕಾರಣವೂ ಆಗಿದ್ದ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಅಚ್ಚರಿಯ ಹೆಜ್ಜೆ ಇಟ್ಟಿತು. ನಿಜವೆಂದರೆ, ಇಂಥಹುದೊಂದು ಪ್ರಸ್ತಾಪವನ್ನು ತಂದಿಟ್ಟಿದ್ದು ಶರದ್‌ ಪವಾರ್‌. ಇಂಥಹುದೊಂದು ಮೈತ್ರಿ ಸಾಧ್ಯವೆಂದು ಕಾಂಗ್ರೆಸ್‌ನ್ನು ಮನವೊಲಿಸಿ ಶಿವಸೇನೆಯ ಮುಂದೆ ಉಡುಗೊರೆಯ ತಟ್ಟೆ ಇಟ್ಟರು. ಹಲವು ವರ್ಷಗಳಿಂದ ಅಧಿಕಾರವಿಲ್ಲದೆ ಕಂಗಾಲಾಗಿದ್ದ ಕಾಂಗ್ರೆಸ್‌ ಮತ್ತು ಎನ್‌ಸಿಪಿಗೂ ಇಂಥಹುದೊಂದು ಅವಕಾಶ ಬೇಕಿತ್ತು. ಶಿವಸೇನೆ ಒಪ್ಪಿದ್ದು ಅದಕ್ಕೆ ಖುಷಿಯಾಯಿತು. ರಾಜಕಾರಣದಲ್ಲಿ ಹೀಗೂ ಆಗಬಹುದೇ ಎಂಬ ಸೋಜಿಗ ದೇಶಕ್ಕೂ ಆಯಿತು. ನಿಜವೆಂದರೆ  ಉದ್ಧವ್‌ ಠಾಕ್ರೆ ನೇತೃತ್ವದಲ್ಲಿ ಶಿವಸೇನೆಯು ಬಿಜೆಪಿಗಿಂತಲೂ ಚೆನ್ನಾಗಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗೇ ಬೆರೆತುಕೊಂಡಿತು! ಈ ಮೈತ್ರಿ ಹೇಗಿತ್ತೆಂದರೆ ಮುಂದಿನ ಚುನಾವಣೆಗಳಲ್ಲಿ ಈ ಮೂರೂ ಪಕ್ಷಗಳು ಜತೆಗೂಡಿಯೇ ಸ್ಪರ್ಧೆ ಮಾಡಿಬಿಡಬಹುದೇ ಎಂಬಷ್ಟು ಆತ್ಮೀಯತೆ ಬೆಳೆದಿತ್ತು.

ಉದ್ಧವ್‌ ಠಾಕ್ರೆಗೆ ಶರದ್‌ ಪವಾರ್‌ ಬೆಂಬಲ

 ಆದರೆ ತಳಮಟ್ಟದಲ್ಲಿ ಹಾಗಿರಲಿಲ್ಲ!
ಮೈತ್ರಿ ಸರಕಾರ ಎನ್ನುವುದು ರಾಜಕಾರಣಿಗಳು ತಮ್ಮ ಅಧಿಕಾರಕ್ಕಾಗಿ ಮಾಡಿಕೊಳ್ಳುವ ತಾತ್ಕಾಲಿಕ ವ್ಯವಸ್ಥೆ. ಆದರೆ, ತಳಮಟ್ಟದಲ್ಲಿ ಈ ಬಂಧ ಬೆಸೆಯುವುದು ಅಷ್ಟು ಸುಲಭವಲ್ಲ. ಈ ನಡುವೆ, ಕೆಲವೊಂದು ಸ್ಥಳೀಯ ಚುನಾವಣೆಗಳನ್ನು ಕಾಂಗ್ರೆಸ್‌-ಎನ್‌ಸಿಪಿ- ಶಿವಸೇನೆ ಜತೆಗೂಡಿ ಎದುರಿಸಿದವರಾದರೂ ಹೀಗೇ ಅದರೆ ಮುಂದೊಂದು ದಿನ ಶಿವಸೇನೆಯ ಅಸ್ತಿತ್ವವೇ ನಾಶವಾಗಬಹುದು ಎಂಬ ಆತಂಕ ಕಾರ್ಯಕರ್ತರಲ್ಲಿ ಹುಟ್ಟಿಕೊಂಡಿತ್ತು. ಅದನ್ನು ಚೆನ್ನಾಗಿ ಗ್ರಹಿಸಿದ್ದು ಉದ್ಧವ್‌ ಠಾಕ್ರೆ ಅಲ್ಲ, ಏಕನಾಥ್‌ ಶಿಂಧೆ!

ಶಿವಸೇನೆ ತನ್ನ ಸಹಜ, ಸ್ವಾಭಾವಿಕ ಸ್ನೇಹಿತ, ಬಾಳ್‌ ಠಾಕ್ರೆ ಅವರ ಹಿಂದುತ್ವ ಸಿದ್ಧಾಂತಕ್ಕೆ ಬದ್ಧವಾದ ಬಿಜೆಪಿಯನ್ನು ಬಿಟ್ಟು ಕಡುವೈರಿಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆ ಅನೈತಿಕ ಮೈತ್ರಿ ಮಾಡಿಕೊಂಡ ಅಧಿಕಾರ ರಾಜಕಾರಣ ಆಂತರಿಕವಾಗಿ ಶಿವಸೈನಿಕರನ್ನು ಘಾಸಿಗೊಳಿಸಿತ್ತು. ಹೀಗಾಗಿ ಶಿವಸೇನೆ ಈ ಮೈತ್ರಿಯನ್ನು ಆದಷ್ಟು ಬೇಗ ಕಡಿದುಕೊಳ್ಳಬೇಕು ಎನ್ನುವ ಒತ್ತಡ ಒಳಗೊಳಗೆ ಹೆಚ್ಚಿತ್ತು. ಆದರೆ, ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತ ಬಾಳ್‌ ಠಾಕ್ರೆ ಅವರಿಗೆ ಇದ್ಯಾವುದೂ ಕೇಳಿಸಲೇ ಇಲ್ಲ. ಜೀವನದಲ್ಲಿ ಮೊದಲ ಬಾರಿ ಸಿಕ್ಕಿದ ಅಧಿಕಾರದ ರುಚಿಯೋ, ಅಧಿಕಾರದಲ್ಲಿ ಕಳೆದುಹೋದ ಪರಿಯೋ ಅಂತೂ ಶಾಸಕರ ಒಳ ಕುದಿಯೂ ಅವರಿಗೆ ಅರ್ಥವಾಗಲಿಲ್ಲ. ಆದರೆ, ಬಾಳ್ ಠಾಕ್ರೆ ಕಾಲದಿಂದಲೂ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಜನದನಿಗೆ ಕಿವಿಗೊಟ್ಟಿದ್ದ ಶಿಂಧೆಗೆ ನೆಲದ ನಾಡಿಯ ಅರಿವಿತ್ತು. ಹಾಗಾಗಿಯೇ ಅವರು ಶಿವಸೇನೆಯ ಮೂಲವಾದ ಹಿಂದುತ್ವದ ಅಸ್ಮಿತೆಯನ್ನು ಆಧಾರವಾಗಿಟ್ಟು ಒಳಗೊಳಗೆ ಬಲೆ ನೇಯ್ದರು!

ಈ ಕೆಲಸ ಉದ್ಧವ್‌ ಠಾಕ್ರೆಯೇ ಮಾಡಬೇಕಿತ್ತು!
ನಿಜವೆಂದರೆ ರಾಜಕಾರಣದಲ್ಲಿ ಅಸ್ವಾಭಾವಿಕವಾದ ಮೈತ್ರಿಗಳು, ರಾಜಕೀಯ ಅನಿವಾರ್ಯತೆಗಾಗಿ ಹುಟ್ಟಿಕೊಂಡ ವಿರೋಧಿ ಸಿದ್ಧಾಂತಗಳ ಕೂಟ ಹೆಚ್ಚು ಕಾಲ ಬಾಳುವುದು ಕೆಲವು ಪಕ್ಷಗಳಿಗೆ ಅಪಾಯಕಾರಿಯೇ. ಅದರಲ್ಲೂ ಶಿವಸೇನೆಯಂಥ ಹಿಂದುತ್ವವೇ ಜೀವಾಳವಾಗಿರುವ ಪಕ್ಷಗಳು ದೀರ್ಘ ಕಾಲ ಪರಮ ವಿರೋಧಿ ಧೋರಣೆಯ ಕಾಂಗ್ರೆಸ್‌ ಮತ್ತು ಎನ್‌ಸಿಪಿಗಳ ಜತೆ ಮೈತ್ರಿ ಮಾಡಿಕೊಳ್ಳುವುದು ಸೇನೆಯ ಅಸ್ತಿತ್ವಕ್ಕೇ ಅಪಾಯಕಾರಿ. ಇದಕ್ಕೆ ಕಾರಣಗಳು ಹಲವು.

ಒಂದೊಮ್ಮೆ ಮಹಾ ವಿಕಾಸ ಅಘಾಡಿ ಸರಕಾರ ಐದು ವರ್ಷ ಪೂರ್ಣಗೊಳಿಸಿದರೆ ಮುಂದಿನ ಚುನಾವಣೆಯನ್ನು ಶಿವಸೇನೆ ಹೇಗೆ ಎದುರಿಸುತ್ತದೆ ಎನ್ನುವುದು ದೊಡ್ಡ ಪ್ರಶ್ನೆ. ಮೈತ್ರಿಯನ್ನು ಮುಂದುವರಿಸಿದರೆ ಈ ಮೂರೂ ಪಕ್ಷಗಳು ಹೇಗೆ ಸೀಟು ಹಂಚಿಕೆ ಮಾಡಿಕೊಳ್ಳುತ್ತವೆ? ಶಿವಸೇನೆ ಕಳೆದ ಬಾರಿ ಸ್ಪರ್ಧಿಸಿದ್ದ 121 ಕ್ಷೇತ್ರಗಳಲ್ಲಿ ಪ್ರತಿಯೊಂದರಲ್ಲೂ ಕಾಂಗ್ರೆಸ್‌, ಎನ್‌ಸಿಪಿ ಸಮಾನ ಶತ್ರು. ಹಾಗಿರುವಾಗ ಮುಂದಿನ ಚುನಾವಣೆಯಲ್ಲಿ ಅದು ಕಾಂಗ್ರೆಸ್‌ ಪರವೋ, ಎನ್‌ಸಿಪಿ ಪರವೋ ಹೇಗೆ ಮತ ಯಾಚನೆ ಮಾಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಕತ್ತಿ, ದೊಣ್ಣೆ ಹಿಡಿದು ಬಡಿದಾಡುವ ಶಿವಸೇನೆ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಶಿವಸೇನೆ ಸ್ಪರ್ಧಿಸದೆ ಇದ್ದರೆ ಕಾಂಗ್ರೆಸ್‌, ಇಲ್ಲವೇ ಎನ್‌ಸಿಪಿಗೆ ಹೇಗೆ ಮತ ಹಾಕುತ್ತಾರೆ? ಆಗ ಅವರು ಸಹಜವಾಗಿಯೇ ಹಿಂದುತ್ವದ ಪ್ರಬಲ ಆರಾಧಕ ಬಿಜೆಪಿಯತ್ತ ಸಾಗುವುದು ನಿಶ್ಚಿತ. ಹೀಗಾಗಿ ಶಿವಸೇನೆಗೆ ತನ್ನ ಕೇಡರ್‌ ಬೇಸನ್ನು ಉಳಿಸಿಕೊಳ್ಳಲು ಎನ್‌ಸಿಪಿ, ಕಾಂಗ್ರೆಸ್‌ ಜತೆಗಿನ ಮೈತ್ರಿ ಮುರಿದುಕೊಳ್ಳುವುದು ಅನಿವಾರ್ಯವೇ ಆಗಿರುತ್ತದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅರಿವಿತ್ತು!

ಕರ್ನಾಟಕದಲ್ಲಿ 2018ರಲ್ಲಿ ಚುನಾವಣೆ ಜೋಶ್‌ನಲ್ಲಿ ಕಾಂಗ್ರೆಸ್‌ ಅವಸರಕ್ಕೆ ಬಿದ್ದು ಅಧಿಕಾರಕ್ಕಾಗಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿತ್ತು.  ಆ ಕ್ಷಣಕ್ಕೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಅದರ ಪ್ಲ್ಯಾನ್‌ ರಾಷ್ಟ್ರ ಮಟ್ಟದಲ್ಲೂ ಪ್ರಶಂಸೆಗೆ ಒಳಗಾಗಿತ್ತು. ಆದರೆ, ಇದರಿಂದ ಪಕ್ಷದ ಮೇಲೆ ದೀರ್ಘಕಾಲೀನವಾಗಿ ಆಗಬಹುದಾದ ಪರಿಣಾಮಗಳ ಬಗ್ಗೆ ಸಿದ್ಧರಾಮಯ್ಯರಂಥ ನಾಯಕರಿಗೆ ಸ್ಪಷ್ಟವಾದ ಅರಿವು ಇತ್ತು. ಹೀಗಾಗಿ ಅಧಿಕಾರದಲ್ಲಿ ಜತೆಯಾಗಿದ್ದರೂ ಕಾರಣ ಸಿಕ್ಕಿದಾಗಲೆಲ್ಲ ತಾವು ಬೇರೆ ಬೇರೆ ಎನ್ನುವುದನ್ನು ನಿರೂಪಿಸುತ್ತಲೇ ಹೋದರು. ಕೊನೆಗೆ ಸರಕಾರದ ಪತನಕ್ಕೂ ನಾನಾ ಕಾರಣಗಳು ಜತೆಗೂಡಿದವು. ಅಂತಿಮವಾಗಿ ಸರಕಾರ ಉರುಳಿದ್ದು ನಿಜಾರ್ಥದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡಕ್ಕೂ ಲಾಭದಾಯಕ ಬೆಳವಣಿಗೆಯೇ.

ಎಚ್‌.ಡಿ. ಕುಮಾರಸ್ವಾಮಿ ಅವರು ಜೀನಾಮೆ ನೀಡಿ ನಿರ್ಗಮಿಸುತ್ತಿರುವ ಕ್ಷಣ

ಯಾಕೆಂದರೆ, ಪರಸ್ಪರ ಎದುರಾಳಿಗಳಾಗೇ ನಿಂತು ಹೋರಾಡಿ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಪಕ್ಷಗಳು ದೀರ್ಘ ಕಾಲ ಅಧಿಕಾರಕ್ಕಾಗಿ ರಾಜಿ ಮಾಡಿಕೊಂಡರೆ ಕೇಡರ್‌ ಬೇಸ್‌ ಕರಗಿ ಅಸ್ತಿತ್ವಕ್ಕೇ ಹೊಡೆತ ಬೀಳುತ್ತದೆ ಎಂಬುದು ರಾಜಕೀಯ ಸತ್ಯ.

ಒಂದೊಮ್ಮೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳು ಕೊನೆಯವರೆಗೂ ಆಡಳಿತ ನಡೆಸಿದರೂ ಮುಂದಿನ ಚುನಾವಣೆಯನ್ನು ಜತೆಯಾಗಿ ಎದುರಿಸುವುದಂತೂ ಸಾಧ್ಯವೇ ಇರಲಿಲ್ಲ. ಯಾಕೆಂದರೆ, ಹಳೆ ಮೈಸೂರು ಭಾಗದಲ್ಲಿ ಪರಸ್ಪರ ಜಿದ್ದಾಜಿದ್ದಿಗೆ ಇಳಿಯವುದು ಅವೆರಡೇ ಪಕ್ಷಗಳು. ಅವರೇ ಮೈತ್ರಿ ಮಾಡಿಕೊಳ್ಳುವುದಂತೂ ಸಾಧ್ಯವೇ ಇಲ್ಲ.  ಹಾಗೆ ಮಾಡಿಕೊಂಡರೆ  ಇಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗೆ ಕೆಂಪು ಹಾಸಿಗೆ ಹಾಸಿದಂತೆಯೇ.  ಹಾಗಂತ, ಕೊನೆಯ ಕ್ಷಣದಲ್ಲಿ ಮೈತ್ರಿ ಮುರಿದುಕೊಳ್ಳುವ ನಾಟಕ ಮಾಡಿದರೂ ಅದು ಜನರಿಗೆ ಅಧಿಕಾರ ದಾಹ ಅಂತ ತಕ್ಷಣಕ್ಕೆ ಅನಿಸಿಬಿಡುತ್ತದೆ.

ಚುನಾವಣೆಗೆ ಇನ್ನೂ ಎರಡುವರೆ ವರ್ಷ ಇರುವಾಗಲೇ ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಎರಡುವರೆ ವರ್ಷ ಅಧಿಕಾರ ಅನುಭವಿಸಿದ್ದೂಆಯಿತು, ಉಳಿದ ಅವಧಿ ಪಕ್ಷ ಕಟ್ಟಲು ಸಿಕ್ಕಿದ್ದೂ ಆಯಿತು! ಇದು ನಿಜವಾದ ರಾಜಕಾರಣ.

ಮಹಾರಾಷ್ಟ್ರದಲ್ಲೂ ಹೀಗೇ ಆಗಬೇಕಿತ್ತು!

ನಿಜವೆಂದರೆ, ಉದ್ಧವ್‌ ಠಾಕ್ರೆ ಅವರಿಗೆ ಕರ್ನಾಟಕವೇ ಮಾದರಿ ಆಗಬೇಕಿತ್ತು. ಅಧಿಕಾರದ ಒಂದು ಹಂತದಲ್ಲಿ ಮಹಾ ವಿಕಾಸ ಅಘಾಡಿ ಸರಕಾರದಿಂದ ಹೊರಬಂದು ಸಹಜ ಮಿತ್ರನಾಗಿರುವ ಬಿಜೆಪಿ ಜತೆಗೆ ಸೇರಿಕೊಳ್ಳುವ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು. ಅಥವಾ ಬಂಡಾಯದ ಸಣ್ಣ ಸೂಚನೆ ಸಿಕ್ಕಾಗ ತಾನೇ ಅದನ್ನು ಸಮಾಧಾನಪಡಿಸಿ, ಅಘಾಡಿ ಮೈತ್ರಿಕೂಟದಿಂದ ಹೊರಬರುವ ಭರವಸೆ ನೀಡಬಹುದಿತ್ತು. ಆದರೆ, ಉದ್ಧವ್‌ ಠಾಕ್ರೆ ಅವರು ಶಿವಸೈನಿಕರಿಗಿಂತಲೂ ಕಾಂಗ್ರೆಸ್‌ ಮತ್ತು ಎನ್‌ಸಿಪಿಯನ್ನೇ ನಂಬಿಕೊಂಡಂತೆ ವರ್ತಿಸಿದರು. ತಮಗೆ ಅಧಿಕಾರ ನೀಡಿದ ಪಕ್ಷಗಳಿಗೆ ಮೋಸ ಮಾಡಬಾರದು ಎಂಬ ಧ್ವನಿ ಅವರ ಮಾತುಗಳಲ್ಲಿ ಹೊಮ್ಮುತ್ತಿತ್ತು. ಹೀಗಾಗಿ ಶಿವಸೇನಾ ಶಾಸಕರಿಗೇ ಅವರ ಮೇಲೆ ಭರವಸೆ ಕುಸಿಯಿತು. ಅಂತಿಮವಾಗಿ ಈಗ ಉದ್ಧವ್‌ ಠಾಕ್ರೆ ಅವರೇ ಏಕಾಂಗಿಯಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಸಶಕ್ತ ನಾಯಕನೊಬ್ಬ ಅಸಹಾಯಕನಾಗಿ, ದೈನೇಸಿಯಂತೆ ಕೈ ಮುಗಿಯುವ ಸ್ಥಿತಿ ಸೃಷ್ಟಿಯಾಯಿತು.

ಉದ್ಧವ್‌ ಠಾಕ್ರೆ ಕೊನೆಯ ಹಂತದಲ್ಲಾದರೂ ತನ್ನ ಪಕ್ಷದೊಳಗೆ ಹುಟ್ಟಿಕೊಂಡಿರುವ ಬಂಡಾಯದ ಸಾಚಾತನವನ್ನು ಅರ್ಥ ಮಾಡಿಕೊಂಡು ವ್ಯವಹರಿಸಿದ್ದರೆ ಇವತ್ತು ಅಧಿಕಾರವಿಲ್ಲದಿದ್ದರೂ ಶಿವಸೇನೆಯ ಪ್ರಧಾನ ಸೇನಾನಿಯಾಗಿ, ಸಾರಥಿಯಾಗಿ ನಿಂತು ರಥ ಓಡಿಸಬಹುದಿತ್ತು. ಎಲ್ಲ ಶಿವಸೈನಿಕರು ಅವರ ಬೆನ್ನ ಹಿಂದೆ ನಿಲ್ಲುತ್ತಿದ್ದರು. ಆದರೆ, ಈಗ ಅರಮನೆ ಇದೆ, ರಥವಿದೆ, ಸೈನಿಕರೇ ಇಲ್ಲದ ಸ್ಥಿತಿ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

ರಾಜಸ್ಥಾನದ ಜೈಪುರದಲ್ಲಿ ಮಹಿಳೆಯೊಬ್ಬರು ತಮ್ಮ 22 ವರ್ಷದ ಮಗಳನ್ನೇ ಕೊಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುವುದು ಬಿಟ್ಟು, ಮೂರು ಹೊತ್ತೂ ಮೊಬೈಲ್‌ನಲ್ಲಿಯೇ ಮುಳುಗಿರುತ್ತಿದ್ದ ಮಗಳ ಗೀಳನ್ನು ಸಹಿಸದೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರಾಡ್‌ನಿಂದ ಬಿದ್ದ ಪೆಟ್ಟಿನಿಂದಾಗಿ ಯುವತಿಯು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

VISTARANEWS.COM


on

Mobile
Koo

ಜೈಪುರ: ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಅಕ್ಷರಸ್ಥರಿಂದ ಹಿಡಿದು, ಅನಕ್ಷರಸ್ಥರವರೆಗೆ ಬಹುತೇಕ ಮಂದಿ ದಿನದ ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿಯೇ (Mobile Addiction) ಕಳೆಯುತ್ತಾರೆ. ಅದರಲ್ಲೂ, ಶಾಲೆ-ಕಾಲೇಜುಗಳಿಗೆ ತೆರಳುವ ಮಕ್ಕಳು ಮೂರು ಹೊತ್ತೂ ಮೊಬೈಲ್‌ನಲ್ಲಿಯೇ ಮುಳುಗಿರುವುದನ್ನು ಕಂಡು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇಷ್ಟಾದರೂ ಮಕ್ಕಳು ಮೊಬೈಲ್‌ನಲ್ಲೇ ತಲ್ಲೀನರಾಗಿರುತ್ತಾರೆ. ಹೀಗೆ, ರಾಜಸ್ಥಾನದಲ್ಲಿ (Rajasthan) ಮೂರು ಹೊತ್ತೂ ಮೊಬೈಲ್‌ ಹಿಡಿದುಕೊಂಡೇ ಕೂತಿರುತ್ತಿದ್ದನ್ನು ಸಹಿಸದ ಮಹಿಳೆಯೊಬ್ಬರು ತಮ್ಮ 22 ವರ್ಷದ ಮಗಳನ್ನೇ ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ರಾಜಸ್ಥಾನದ ಜೈಪುರದಲ್ಲಿ ಸೀತಾ ದೇವಿ ಎಂಬ ಮಹಿಳೆಯು ತಮ್ಮ ಮಗಳನ್ನೇ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನಿಕಿತಾ (22) ಮೃತ ಯುವತಿ. ನಿಕಿತಾ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಳು. ಪರೀಕ್ಷೆಗೆ ಓದು, ಮೊಬೈಲ್‌ ನೋಡುವುದು ಬಿಡು. ಮೂರು ಹೊತ್ತೂ ಮೊಬೈಲ್‌ ಹಿಡಿದರೆ ಪರೀಕ್ಷೆಯಲ್ಲಿ ಹೇಗೆ ತೇರ್ಗಡೆಯಾಗ್ತೀಯಾ ಎಂಬುದಾಗಿ ಸೀತಾ ದೇವಿ ಗದರಿದ್ದಾರೆ. ಇದರಿಂದ ಕುಪಿತಗೊಂಡ ನಿಕಿತಾ, ತಾಯಿಗೆ ಎದುರು ಉತ್ತರ ಕೊಟ್ಟಿದ್ದಾಳೆ. ಆಗ ಇಬ್ಬರ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದೆ.

Mobile

ರಾಡ್‌ನಿಂದ ಹೊಡೆದಾಡಿಕೊಂಡರು

ಮೂರು ಹೊತ್ತೂ ಮೊಬೈಲ್‌ ನೋಡಬೇಡ ಎಂದಿದ್ದಕ್ಕೆ ನಿಕಿತಾ ರೇಗಿದ್ದಾಳೆ. ಇದರಿಂದ ಸೀತಾ ದೇವಿ ಅವರಿಗೆ ಸಿಟ್ಟು ಬಂದಿದೆ. ಪಕ್ಕದಲ್ಲಿದ್ದ ರಾಡ್‌ ತೆಗೆದುಕೊಂಡು ಮಗಳಿಗೆ ಹೊಡೆದಿದ್ದಾರೆ. ತಾಯಿ ಎಂಬುದನ್ನೂ ಲೆಕ್ಕಿಸದ ಮಗಳು ಕೂಡ ರಾಡ್‌ನಿಂದ ತಾಯಿ ಮೇಲೆ ಹಲ್ಲೆ ನಡೆಸಿದ್ದಾಳೆ. ಇಬ್ಬರೂ ರಾಡ್‌ಗಳಿಂದ ಬಡಿದಾಡಿಕೊಂಡಿದ್ದಾರೆ. ಜೈಪುರದ ಮುಂಡಿಯಾರಮ್ಸಾರ್‌ ಎಂಬ ಗ್ರಾಮದಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರೂ ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ನಿಕಿತಾ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ. ಸೀತಾ ದೇವಿ ವಿರುದ್ಧ ಕೊಲೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಧುನಿಕ ಕಾಲಘಟ್ಟದಲ್ಲಿ ಮೊಬೈಲ್‌ ಎಲ್ಲರಿಗೂ ಅವಿಭಾಜ್ಯ ಅಂಗವೇ ಆಗಿದೆ. ಅದರಲ್ಲೂ, ವಿದ್ಯಾರ್ಥಿಗಳಿಗೆ ಮೊಬೈಲ್‌ ಅಚ್ಚುಮೆಚ್ಚಾಗಿದೆ. ಹಾಗೆಯೇ, ಇದು ಶಿಕ್ಷಣಕ್ಕೂ ಅನುಕೂಲ ಕಲ್ಪಿಸಿದೆ. ಆದರೆ, ಮಕ್ಕಳು ಯಾವಾಗಲೂ ಮೊಬೈಲ್‌ ಬಳಸುತ್ತಿದ್ದರೆ, ಅದು ಗೀಳಾಗಿ ಬದಲಾಗಿದ್ದರೆ, ಪೋಷಕರು ಅದರ ಕುರಿತು ಮಕ್ಕಳೊಂದಿಗೆ ಸಮಾಧಾನದಿಂದ ಜಾಗೃತಿ ಮೂಡಿಸಬೇಕು. ಅತಿಯಾಗಿ ಮೊಬೈಲ್‌ ಬಳಸುವುದರಿಂದ ಶಿಕ್ಷಣದ ಮೇಲೆ ಬೀರುವ ಪರಿಣಾಮದ ಮೇಲೆ ತಿಳಿಹೇಳಬೇಕು. ಸಮಾಧಾನದಿಂದ ತಿಳಿಹೇಳದೆ, ಬೈಯುವುದು, ಹೊಡೆಯುವುದು ಮಾಡಿದರೆ ಹಿಂಸೆ, ದುಃಖಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಜೈಪುರದ ಪ್ರಕರಣವೇ ಸಾಕ್ಷಿಯಾಗಿದೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

ಎಲ್ಲಿಯವರೆಗೆ ದುರ್ಬಲರು ನ್ಯಾಯ ಪಡೆಯದೆ, ಸಬಲರು ನ್ಯಾಯಾಂಗದ ಎಲ್ಲ ಲಾಭವನ್ನೂ ಪಡೆಯುತ್ತಾರೋ ಅಲ್ಲಿಯವರೆಗೂ ನ್ಯಾಯಾಂಗಕ್ಕೂ ಪೊಲೀಸ್‌ ವ್ಯವಸ್ಥೆಗೂ ಅಂಟಿದ ಸಬಲ ಪಕ್ಷಪಾತಿ ಎಂಬ ಕಳಂಕ ತಪ್ಪುವುದಿಲ್ಲ. ಅಪರಾಧದ ಗಂಭೀರತೆ ಪರಿಗಣಿಸಿ ಶೀಘ್ರ ಶಿಕ್ಷೆ, ತ್ವರಿತ ನ್ಯಾಯದಾನ ಸಾಧ್ಯವಾಗಬೇಕು.

VISTARANEWS.COM


on

Porsche
Koo

ಪುಣೆಯಲ್ಲಿ ಒಬ್ಬಾತ ಅಪ್ರಾಪ್ತ ವಯಸ್ಕ ಸ್ಪೋರ್ಟ್ಸ್‌ ಕಾರು ಅತಿ ವೇಗದಲ್ಲಿ ಯದ್ವಾತದ್ವಾ ಓಡಿಸಿ ಇಬ್ಬರ ಸಾವಿನ ಕಾರಣನಾಗಿದ್ದಾನೆ. ವಿಶೇಷ ಎಂದರೆ, ಇವನಿಗೆ ಬಂಧನವಾದ 15 ಗಂಟೆಯೊಳಗೇ ಜಾಮೀನು ದೊರೆತಿದೆ. 17 ವರ್ಷದ ಈತ ಶನಿವಾರ ಪುಣೆಯಲ್ಲಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಕೋರೆಗಾಂವ್ ಪಾರ್ಕ್‌ ಸಮೀಪ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿದ್ದರು. ಇವರಿಬ್ಬರೂ ಐಟಿ ಎಂಜಿನಿಯರ್ ಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಆತನಿಗೆ ಜಾಮೀನು ನೀಡಿದ್ದಲ್ಲದೆ, ಕೆಲವು ಸರಳ ಶಿಕ್ಷೆಗಳನ್ನು ಆತನಿಗೆ ವಿಧಿಸಿದೆ. ಯೆರವಾಡಾದ ಸಂಚಾರ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡಬೇಕು, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಕುಡಿತದ ಅಭ್ಯಾಸಕ್ಕೆ ಚಿಕಿತ್ಸೆ ಪಡೆಯಬೇಕು ಮತ್ತು ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂಬುದು ಷರತ್ತು. ಈತ ಪುಣೆಯ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಯ ಮಗ ಹಾಗೂ ಪ್ರಭಾವಿ. ಪಬ್‌ನಲ್ಲಿ ಪಾರ್ಟಿ ಮಾಡಿ ಪಾನಮತ್ತನಾಗಿ ಹಿಂದಿರುಗುತ್ತಿದ್ದ. ಸಮಾಧಾನದ ವಿಷಯ ಎಂದರೆ ಪುಣೆ ಪೊಲೀಸರು ಜಾಮೀನು ಆದೇಶದ ವಿರುದ್ಧ ಮೇಲಿನ ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಈ ಪ್ರಕರಣದ ಬಗ್ಗೆ ಜನಾಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಬಾಲಕನ ತಂದೆ ಮತ್ತು ಆತನಿಗೆ ಮದ್ಯ ಪೂರೈಸಿದ ಬಾರ್ ಮಾಲೀಕನನ್ನು ಬಂಧಿಸಿದ್ದಾರೆ. ಇವರು ಕೂಡ ಬೇಗನೆ ಜಾಮೀನಿನ ಮೇಲೆ ಬಿಡುಗಡೆಯಾದರೆ ಆಶ್ಚರ್ಯವಿಲ್ಲ.

ಇದು ನಮ್ಮ ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಯ ಛಿದ್ರಗಳು ಎಲ್ಲಿವೆ ಎಂಬುದನ್ನು ಬೆಟ್ಟು ಮಾಡಿ ತೋರಿಸುವಂತಿದೆ. ಕರ್ನಾಟಕದಲ್ಲಿಯೂ ಹೀಗೇ ಆಗಿದೆ; ಲೈಂಗಿಕ ದೌರ್ಜನ್ಯ ಹಾಗೂ ಕಿಡ್‌ನ್ಯಾಪ್‌ ಪ್ರಕರಣದಲ್ಲಿ ಬಂಧಿತರಾದ ಮಾಜಿ ಸಚಿವರು ಆರು ದಿನಗಳಲ್ಲಿ ಜಾಮೀನು ಪಡೆಯುತ್ತಾರೆ. ವಿಶೇಷ ತನಿಖಾ ದಳದ ವಕೀಲರು ಎಷ್ಟು ಪ್ರಯತ್ನಿಸಿದರೂ ಜಾಮೀನು ತಪ್ಪಿಸಲು ಆಗುವುದಿಲ್ಲ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಆತನನ್ನು ಕರೆದು ತರುವಲ್ಲಿ ಇಲ್ಲಿನ ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಗಳು ಸದ್ಯಕ್ಕೆ ಅಸಹಾಯಕವಾಗಿವೆ. ಇದು ಈ ಪ್ರಕರಣದ ಒಂದು ಮುಖ.

ಪ್ರಭಾವಿಗಳು ಏನು ಮಾಡಿದರೂ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರೆ ಎಂಬ ಪರಿಸ್ಥಿತಿ ಸೃಷ್ಟಿಯಾಗಿರುವಂತಿದೆ. ನಗರಗಳಲ್ಲಿ ಇತ್ತೀಚೆಗೆ ನಡೆಯುವ ಅಪರಾಧ ಸ್ವರೂಪಗಳನ್ನು ನೋಡುವುದಾದರೆ, ಕುಬೇರರು ಬಡವರ ಮೇಲೆ ಕೈ ಮಾಡುವುದು, ಹಲ್ಲೆ ನಡೆಸಿಯೂ ಪಾರಾಗುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಯಮಕನಮರಡಿಯಲ್ಲಿ ಇತ್ತೀಚೆಗೆ ನಡೆದ ಒಂದು ಅಪರಾಧ ನೋಡಿದರೆ, ಸಾಲ ಪಾವತಿ ಮಾಡಲಿಲ್ಲ ಎಂದು ರೈತನ ಪತ್ನಿ- ಮಗನನ್ನು ಒಬ್ಬಾಕೆ ಗೃಹಬಂಧನದಲ್ಲಿಟ್ಟಿದ್ದಾಳೆ. ಇದರಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಿಗ ಮಹಿಳೆಯ ಮೇಲೆ ಪೊಲೀಸ್‌ ಕ್ರಮ ಕೈಗೊಂಡಂತಿಲ್ಲ. ಶ್ರೀಮಂತರು ಸಾಕಿದ ನಾಯಿಗಳು ಬೀದಿಯಲ್ಲಿ ಬಡವರ ಮಕ್ಕಳನ್ನು ಕಚ್ಚಿ ತಿನ್ನುತ್ತಿವೆ. ನಿರ್ಲಕ್ಷ್ಯದಿಂದ ಮಕ್ಕಳ ಜೀವಕ್ಕೆ ಎರವಾದವರಿಗೂ ಶಿಕ್ಷೆಯಾದ ಹಾಗಿಲ್ಲ.

ಇನ್ನು ಟ್ರಾಫಿಕ್‌ ಅಪರಾಧಗಳ ಕತೆಯೂ ಇದೇ ಮಾದರಿಯಲ್ಲಿದೆ. ಹಿಟ್‌ ಆಂಡ್‌ ರನ್‌ಗಳು ಹೆಚ್ಚುತ್ತಿವೆ. ದೊಡ್ಡ ವಾಹನಗಳನ್ನು ಯದ್ವಾತದ್ವಾ ಓಡಿಸಿ, ದ್ವಿಚಕ್ರ ವಾಹನ ಸವಾರರ ಜೀವ ತೆಗೆಯುವವರ ಸಂಖ್ಯೆ ಹೆಚ್ಚಿದೆ. ರೋಡ್‌ ರೇಜ್‌ ಪ್ರಕರಣಗಳಲ್ಲಿ ಸಬಲರು ದುರ್ಬಲರ ಮೇಲೆ ವಿನಾಕಾರಣ ಹಲ್ಲೆ ಮಾಡುತ್ತಿದ್ದಾರೆ. ಇವರ್ಯಾರಿಗೂ ಶೀಘ್ರವಾಗಿ ಶಿಕ್ಷೆಯಾಗುತ್ತಿಲ್ಲ. ಸುಲಭವಾಗಿ ಜಾಮೀನೂ ದೊರೆಯುತ್ತಿದೆ. ದುರ್ಬಲ ಸೆಕ್ಷನ್‌ಗಳು, ದುರ್ಬಲ ಸಾಕ್ಷಿಗಳು, ವಿಲಂಬಿತ ನ್ಯಾಯಾಂಗ ಪ್ರಕ್ರಿಯೆ ಇವುಗಳಿಂದಾಗಿ ಸಂತ್ರಸ್ತರು ಮತ್ತಷ್ಟು ಸಂತ್ರಸ್ತರೇ ಆಗುತ್ತಿದ್ದಾರೆ. ನ್ಯಾಯದಾನ ವಿಳಂಬವಾದಷ್ಟೂ ಸಾಕ್ಷಿಗಳು, ಕಕ್ಷಿದಾರರು ಕೇಸ್‌ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೆಲವು ದಾಖಲೆ ಪತ್ರಗಳು ನಾಶವಾಗಬಹುದು, ಸಾಕ್ಷಿಗಳು ಇಲ್ಲವಾಗಬಹುದು. ಕಾಲದ ಹೊಡೆತಕ್ಕೆ ಸಿಲುಕಿ, ಪ್ರತಿ ತಿಂಗಳೂ ಕೋರ್ಟಿಗೆ ಅಲೆದು ಹೈರಾಣಾಗುವ ಪರಿಸ್ಥಿತಿಯಿಂದ ರೋಸಿಹೋಗಿ ರಾಜಿ ಮಾಡಿಕೊಂಡ ಎಷ್ಟೋ ಪ್ರಕರಣಗಳು ಇವೆ. ಇದು ನ್ಯಾಯ ಬೇಡವೆಂದಲ್ಲ, ಶಿಕ್ಷೆಗಿಂತಲೂ ನಿಷ್ಕರುಣಿಯಾಗಿರುವ ಕಟಕಟೆಯ ಸಹವಾಸ ಬೇಡವೆಂದು.

ಎಲ್ಲಿಯವರೆಗೆ ದುರ್ಬಲರು ನ್ಯಾಯ ಪಡೆಯದೆ, ಸಬಲರು ನ್ಯಾಯಾಂಗದ ಎಲ್ಲ ಲಾಭವನ್ನೂ ಪಡೆಯುತ್ತಾರೋ ಅಲ್ಲಿಯವರೆಗೂ ನ್ಯಾಯಾಂಗಕ್ಕೂ ಪೊಲೀಸ್‌ ವ್ಯವಸ್ಥೆಗೂ ಅಂಟಿದ ಸಬಲ ಪಕ್ಷಪಾತಿ ಎಂಬ ಕಳಂಕ ತಪ್ಪುವುದಿಲ್ಲ. ಅಪರಾಧದ ಗಂಭೀರತೆ ಪರಿಗಣಿಸಿ ಶೀಘ್ರ ಶಿಕ್ಷೆ, ತ್ವರಿತ ನ್ಯಾಯದಾನ ಸಾಧ್ಯವಾಗಬೇಕು.

ಇದನ್ನೂ ಓದಿ: Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಕಾರು ಗುದ್ದಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

Continue Reading

ದೇಶ

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

Robert Vadra: ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಅವರು ಅಮೇಥಿ ಅಥವಾ ರಾಯ್‌ಬರೇಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅವರೀಗ ರಾಜಕೀಯ ಪ್ರವೇಶಿಸುವ ಕುರಿತು ಸ್ಪಷ್ಟನೆ ನೀಡಿದ್ದಾರೆ. “ನಾನು ರಾಜಕೀಯಕ್ಕೆ ಬರುವುದಾದರೆ, ನನ್ನ ಹೆಸರು ಬಳಸಿಕೊಂಡು ಬರುತ್ತೇನೆ. ಗಾಂಧಿ ಕುಟುಂಬದ ಹೆಸರಿನಲ್ಲಿ ರಾಜಕೀಯ ಮಾಡಲ್ಲ” ಎಂದಿದ್ದಾರೆ.

VISTARANEWS.COM


on

Robert Vadra
Koo

ನವದೆಹಲಿ: ದೇಶದ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆಯು (Lok Sabha Election 2024) ಕೊನೆಯ ಹಂತಕ್ಕೆ ಬಂದಿದೆ. ಈಗಾಗಲೇ ಐದು ಹಂತದ ಮತದಾನ ಮುಕ್ತಾಯಗೊಂಡಿದ್ದು, ಇನ್ನೂ ಎರಡು ಹಂತದ ಮತದಾನ ಬಾಕಿ ಇದೆ. ಜೂನ್‌ 1ರಂದು ಚುನಾವಣೆ ಮುಗಿಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇದರ ಮಧ್ಯೆಯೇ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka Vadra) ಅವರ ಪತಿ ರಾಬರ್ಟ್‌ ವಾದ್ರಾ (Robert Vadra) ಅವರು ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, “ನನ್ನ ಹೆಸರು, ನನ್ನ ಕೆಲಸದಿಂದ ರಾಜಕೀಯ ಪ್ರವೇಶಿಸುತ್ತೇನೆ. ಗಾಂಧಿ ಕುಟುಂಬದ (Gandhi Family) ಹೆಸರು ಬಳಸಿ ರಾಜಕೀಯಕ್ಕೆ ಬರಲ್ಲ” ಎಂದಿದ್ದಾರೆ.

ಎಎನ್‌ಐ ಜತೆ ಮಾತನಾಡುವಾಗ, ನೀವು ರಾಜಕೀಯ ಪ್ರವೇಶಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. “ನಾನು ದೇಶದ ಸೇವೆ ಮಾಡುತ್ತಿದ್ದೇನೆ. ನಾನು ರಾಜಕೀಯ ಪ್ರವೇಶಿಸುವುದಿದ್ದರೆ, ನನ್ನ ಸಮಾಜ ಸೇವೆ, ನನ್ನ ಕೆಲಸ ಹಾಗೂ ನನ್ನ ಹೆಸರು ಬಳಸಿ ಪ್ರವೇಶಿಸುತ್ತೇನೆ. ಗಾಂಧಿ ಕುಟುಂಬದ ಹೆಸರು ಬಳಸಿಕೊಂಡು ನಾನು ರಾಜಕೀಯ ಪ್ರವೇಶಿಸುವುದಿಲ್ಲ. ಹೀಗೆ ಹೇಳಿದ ಮಾತ್ರಕ್ಕೆ ನಾನು ಗಾಂಧಿ ಕುಟುಂಬದ ಸದಸ್ಯ ಅಲ್ಲ ಎಂಬ ಅರ್ಥವಲ್ಲ. ಆದರೆ, ನನ್ನ ಹೆಸರು ಬಳಸಿಯೇ ನಾನು ರಾಜಕೀಯ ಪ್ರವೇಶಿಸುತ್ತೇನೆ” ಎಂದು ಹೇಳಿದರು.

“ರಾಜಕೀಯದಲ್ಲಿ ಬದಲಾವಣೆಯಾಗಬೇಕಿದೆ. ನಾನು ರೈತರು, ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೌದು, ಸೋನಿಯಾ ಗಾಂಧಿ ಸೇರಿ ಗಾಂಧಿ ಕುಟುಂಬದ ಹೆಸರು ಬಳಸಿದರೆ, ಅವರಿಂದ ಸಲಹೆ ಪಡೆದರೆ ನನಗೆ ಅನುಕೂಲವಾಗಬಹುದು. ಆದರೆ, ನನ್ನ ಕೆಲಸದಿಂದ ನಾನು ರಾಜಕೀಯಕ್ಕೆ ಬರಲು ಇಷ್ಟಪಡುತ್ತೇನೆ. ಹಾಗಂತ, ರಾಜಕೀಯ ಪ್ರವೇಶಿಸಲು ನಾನು ಸಮಾಜ ಸೇವೆ ಮಾಡುತ್ತಿಲ್ಲ. ಸೇವೆಯು ನನಗೆ ಖುಷಿ ಕೊಡುವ ವಿಚಾರವಾಗಿದೆ” ಎಂದು ಸಂದರ್ಶನದ ವೇಳೆ ಹೇಳಿದರು.

ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಕೂಡ ರಾಬರ್ಟ್‌ ವಾದ್ರಾ ವಾಗ್ದಾಳಿ ನಡೆಸಿದರು. “ಕಳೆದ 10 ವರ್ಷಗಳಿಂದ ದೇಶದ ರಾಜಕೀಯ ವ್ಯವಸ್ಥೆಯನ್ನು ಜನ ನೋಡಿದ್ದಾರೆ. ಅಭಿವೃದ್ಧಿ ಹೊರತುಪಡಿಸಿ, ಧರ್ಮದ ಆಧಾರದ ಮೇಲೆ ರಾಜಕೀಯ ನಡೆಯುತ್ತಿದೆ. ನಾನು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಿಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಇ.ಡಿ ದಾಳಿ ನಡೆಯುತ್ತದೆ. ಆದರೆ, ಇದೆಲ್ಲದರ ಮಧ್ಯೆ ನಾನು ಸೇವೆ ಮುಂದುವರಿಸಿದ್ದೇನೆ. ನಾನು ರಾಜಕೀಯಕ್ಕೆ ಬಂದ ತಕ್ಷಣ ಎಲ್ಲವೂ ಬದಲಾಗಲಿದೆ ಎಂದು ಹೇಳುವುದಿಲ್ಲ. ಸೇವೆಗಾಗಿ ನಾನು ರಾಜಕೀಯ ಪ್ರವೇಶಿಸಲು ಬಯಸುತ್ತೇನೆ” ಎಂದು ಹೇಳಿದರು. ರಾಬರ್ಟ್‌ ವಾದ್ರಾ ಅವರು ಅಮೇಥಿ ಅಥವಾ ರಾಯ್‌ಬರೇಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: Narendra Modi: ಡ್ರಮ್‌, ಜಾಗಟೆ ಬಾರಿಸಿ, ಹಾಡು ಹಾಡಿ; ಮತದಾನ ಹೆಚ್ಚಿಸಲು ಸ್ತ್ರೀಯರಿಗೆ ಕರೆ ಕೊಟ್ಟ ಮೋದಿ

Continue Reading

ದೇಶ

Narendra Modi: ಡ್ರಮ್‌, ಜಾಗಟೆ ಬಾರಿಸಿ, ಹಾಡು ಹಾಡಿ; ಮತದಾನ ಹೆಚ್ಚಿಸಲು ಸ್ತ್ರೀಯರಿಗೆ ಕರೆ ಕೊಟ್ಟ ಮೋದಿ

Narendra Modi: ವಾರಾಣಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು. ಇದಕ್ಕಾಗಿ ಮಹಿಳೆಯರು ಕೈಜೋಡಿಸಬೇಕು. ಮತದಾನ ನಡೆಯುವ ದಿನ ಸುಮಾರು 20-25 ಮಹಿಳೆಯರು ಒಗ್ಗೂಡಿ ಮತಗಟ್ಟೆಗಳ ಬಳಿ ತೆರಳಿ. ಡ್ರಮ್‌ ಹಾಗೂ ತಟ್ಟೆಗಳನ್ನು ಬಾರಿಸಿ, ಹಾಡು ಹಾಡಿ ಎಂಬುದಾಗಿ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜೂನ್‌ 1ರಂದು ವಾರಾಣಸಿಯಲ್ಲಿ ಮತದಾನ ನಡೆಯಲಿದೆ.

VISTARANEWS.COM


on

Narendra Modi
Koo

ವಾರಾಣಸಿ: ಲೋಕಸಭೆ ಚುನಾವಣೆಯ (Lok Sabha Election 2024) 5 ಹಂತದ ಮತದಾನ ಮುಕ್ತಾಯವಾಗಿದೆ. ಇದರೊಂದಿಗೆ ದೇಶಾದ್ಯಂತ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯವಾದಂತಾಗಿದೆ. ಇನ್ನೂ ಎರಡು ಹಂತದ ಮತದಾನ ಬಾಕಿ ಇರುವ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ಎಲ್ಲ ಪಕ್ಷಗಳ ಪ್ರಮುಖ ನಾಯಕರು, ಅಭ್ಯರ್ಥಿಗಳು ಪ್ರಚಾರ ಕೈಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ, ಮತದಾನ ಪ್ರಮಾಣ ಹೆಚ್ಚಿಸಲು ಮಹಿಳೆಯರಿಗೆ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. “ಡ್ರಮ್‌ ಹಾಗೂ ತಟ್ಟೆಗಳನ್ನು ಬಾರಿಸುವ ಮೂಲಕ ಮತದಾನ ಹೆಚ್ಚಿಸಿ” ಎಂದು ವಾರಾಣಸಿ (Varanasi) ಮಹಿಳೆಯರಿಗೆ ಮೋದಿ ಸಲಹೆ ನೀಡಿದ್ದಾರೆ.

“ವಾರಾಣಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು. ಇದಕ್ಕಾಗಿ ಮಹಿಳೆಯರು ಕೈಜೋಡಿಸಬೇಕು. ಮತದಾನ ನಡೆಯುವ ದಿನ ಸುಮಾರು 20-25 ಮಹಿಳೆಯರು ಒಗ್ಗೂಡಿ ಮತಗಟ್ಟೆಗಳ ಬಳಿ ತೆರಳಿ. ಡ್ರಮ್‌ ಹಾಗೂ ತಟ್ಟೆಗಳನ್ನು ಬಾರಿಸಿ, ಹಾಡು ಹಾಡಿ. ಬೆಳಗ್ಗೆ 10 ಗಂಟೆಯೊಳಗೆ ಮತಗಟ್ಟೆಯ ಬಳಿ ಹೀಗೆ ಮಾಡಿದರೆ ಖಂಡಿತವಾಗಿಯೂ ಹೆಚ್ಚಿನ ಪ್ರಮಾಣದ ಮತದಾನ ದಾಖಲಾಗುತ್ತದೆ. ಪ್ರತಿಯೊಂದು ಮತಗಟ್ಟೆಗಳಲ್ಲೂ ಹೆಣ್ಣುಮಕ್ಕಳು ಹೀಗೆ ಮಾಡುವ ಮೂಲಕ ಮತದಾನದ ಜಾಗೃತಿ ಮೂಡಿಸಬೇಕು” ಎಂದು ವಾರಾಣಸಿಯಲ್ಲಿ ಮಹಿಳೆಯರಿಗೆ ಮೋದಿ ಕರೆ ನೀಡಿದ್ದಾರೆ.

ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ

ವಾರಾಣಸಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ನರೇಂದ್ರ ಮೋದಿ ಅವರು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. “ಇಂಡಿಯಾ ಒಕ್ಕೂಟವು ಎಂದಿಗೂ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದೆ. ಅವರು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದರು. ಇಂಡಿಯಾ ಒಕ್ಕೂಟದ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೇ ಹೆಚ್ಚು ತೊಂದರೆಯಾಗುತ್ತದೆ. ಹೆಣ್ಣುಮಕ್ಕಳಿಗೆ ತೊಂದರೆಯಾದರೆ, ಹುಡುಗರು ಎಂದ ಮೇಲೆ ತಪ್ಪು ಮಾಡುತ್ತಾರೆ ಎಂದು ಹೇಳುತ್ತಾರೆ. ಆದರೆ, ಯೋಗಿ ಆದಿತ್ಯನಾಥ್‌ ಅವರು ಸಿಎಂ ಆದ ಮೇಲೆ ತಪ್ಪು ಮಾಡುವ ಹುಡುಗರಿಗೆ ತಕ್ಕ ಪಾಠ ಕಲಿಸಿದ್ದಾರೆ. ಇದರಿಂದ ನಮ್ಮ ಸಹೋದರ-ಸಹೋದರಿಯರು ಸುರಕ್ಷಿತವಾಗಿದ್ದಾರೆ” ಎಂದರು.

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: Narendra Modi: ಅಂಬೇಡ್ಕರ್‌ ಇರದಿದ್ದರೆ ಮೀಸಲಾತಿ ಜಾರಿಗೆ ನೆಹರು ಬಿಡುತ್ತಿರಲಿಲ್ಲ ಎಂದ ಮೋದಿ!

Continue Reading
Advertisement
Sweat Problem
ಆರೋಗ್ಯ47 mins ago

Sweat Problem: ದುರ್ಗಂಧದ ಬೆವರಿನ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರಗಳು!

Dina Bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರು ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ

Mobile
ದೇಶ6 hours ago

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

Rameshwaram Cafe Blast
ಕರ್ನಾಟಕ6 hours ago

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಹುಬ್ಬಳ್ಳಿಯಲ್ಲಿ ಇಬ್ಬರು ಎನ್‌ಐಎ ವಶಕ್ಕೆ

LPL 2024
ಪ್ರಮುಖ ಸುದ್ದಿ7 hours ago

LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

Porsche
ಸಂಪಾದಕೀಯ7 hours ago

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

Hajj pilgrimage
ಬೆಂಗಳೂರು7 hours ago

Hajj Pilgrimage: ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಿಎಂ ಸಿದ್ದರಾಮಯ್ಯ; ಹಜ್ ಭವನ ನಿರ್ಮಾಣಕ್ಕೆ ಅನುದಾನ

IPL 2024
ಕ್ರೀಡೆ7 hours ago

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

Robert Vadra
ದೇಶ8 hours ago

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

IPL 2024
ಕ್ರೀಡೆ8 hours ago

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ12 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು17 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು19 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌