ವಿಸ್ತಾರ Explainer: France Riots: ಫ್ರಾನ್ಸ್‌ ಹೊತ್ತಿ ಉರಿಯುತ್ತಿರುವುದೇಕೆ? - Vistara News

EXPLAINER

ವಿಸ್ತಾರ Explainer: France Riots: ಫ್ರಾನ್ಸ್‌ ಹೊತ್ತಿ ಉರಿಯುತ್ತಿರುವುದೇಕೆ?

ಅರಬ್‌ ಮೂಲದ ಯುವಕನೊಬ್ಬನ್ನು ಪೊಲೀಸನೊಬ್ಬ ಕೊಂದುದೇ ಮೂಲವಾಗಿ, ಫ್ರಾನ್ಸ್‌ನಾದ್ಯಂತ ಗಲಭೆಗಳು ಭುಗಿಲೆದ್ದಿವೆ. ಜಗತ್ತಿನ ಗಮನ ಸೆಳೆದಿರುವ ಈ ಬೆಳವಣಿಗೆಯ ಬಗ್ಗೆ ವಿವರವಾದ ನೋಟ ಇಲ್ಲಿದೆ.

VISTARANEWS.COM


on

france riots
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವು ತಿಂಗಳುಗಳ ಹಿಂದೆ, ಪಿಂಚಣಿ ನಿಯಮದಲ್ಲಿ ಸುಧಾರಣೆ ವಿರೋಧಿಸಿ ಫ್ರಾನ್ಸ್‌ನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ತಿಂಗಳುಗಳ ನಂತರ ಫ್ರಾನ್ಸ್ ಮತ್ತೆ (France Riots) ಕುದಿಯುತ್ತಿದೆ. ಕಳೆದ ವಾರವಿಡೀ ಪ್ಯಾರಿಸ್‌ ಅಗ್ನಿಕುಂಡದ ನಡುವೆ ಇದ್ದಂತೆ ಧಗಧಗಿಸಿತು. ‌

ಕಾರುಗಳು ಮತ್ತು ಸಾರ್ವಜನಿಕ ಕಟ್ಟಡಗಳಿಗೆ ಬೆಂಕಿ ಹಚ್ಚಲಾಯಿತು. ಫ್ರೆಂಚ್ ಅಧಿಕಾರಿಗಳ ಮಿತಿಮೀರಿದ ದೌರ್ಜನ್ಯದ ವಿರುದ್ಧ ರ್ಯಾಲಿಗಳು ನಡೆದವು. ಬೀದಿಗಿಳಿದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದವು. ಶಾಲೆಗಳನ್ನೂ ಪ್ರತಿಭಟನಾಕಾರರು ಬಿಡಲಿಲ್ಲ, ಸುಟ್ಟುಹಾಕಿದರು. ಭಾನುವಾರ ರಾತ್ರಿ ಉರಿಯುತ್ತಿರುವ ಕಾರೊಂದನ್ನು ಪ್ರತಿಭಟನಾಕಾರರು ಪ್ಯಾರಿಸ್ ಉಪನಗರ ಎಲ್ಹೇ-ಲೆಸ್-ರೋಸಸ್‌ನ ಮೇಯರ್‌ ಮನೆಗೆ ನುಗ್ಗಿಸಿದರು. ಮೇಯರ್‌ ಪತ್ನಿ ಮತ್ತು ಅವರ ಮಕ್ಕಳಲ್ಲಿ ಒಬ್ಬರು ಗಾಯಗೊಂಡರು. ಆ ಹೊತ್ತಿನಲ್ಲಿ ಮೇಯರ್ ವಿನ್ಸೆಂಟ್ ಜೀನ್‌ಬ್ರುನ್ ಅವರು ಟೌನ್‌ಹಾಲ್‌ನಲ್ಲಿದ್ದುಕೊಂಡು ಹಿಂಸಾಚಾರ ನಿಯಂತ್ರಣದ ನಿಗಾ ಇಟ್ಟಿದ್ದರು.

ಅಲ್ಜೀರಿಯಾ ಮೂಲದ ನಹೆಲ್ ಎಂಬ ಬಾಲಕನನ್ನು ಫ್ರೆಂಚ್ ಪೊಲೀಸರು ಗುಂಡಿಕ್ಕಿ ಕೊಂದ ನಂತರ ಫ್ರಾನ್ಸ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಮೊದಲು ಗಲಭೆ ಸುರುವಾದುದು ಪ್ಯಾರಿಸ್‌ನ ಉಪನಗರದಲ್ಲಿ. ನಂತರ ಇದು ರಾಜಧಾನಿ ಪ್ಯಾರಿಸ್‌ನಾದ್ಯಂತ ವ್ಯಾಪಿಸಿತು. ಬಳಿಕ ರಾಷ್ಟ್ರವ್ಯಾಪಿ ಕಾಣಿಸಿಕೊಂಡಿತು. ಇದರ ನಡುವೆ ಪ್ರತಿಭಟನೆಗಳ ಹೆಸರಿನಲ್ಲಿ ಲೂಟಿಕೋರರೂ ಸೇರಿಕೊಂಡರು. ಅಂಗಡಿ ಮಳಿಗೆಗಳನ್ನು ಲೂಟಿ ಮಾಡಿದರು. ಇದುವರೆಗೂ ಪೊಲೀಸರು 3,000ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಸುಮಾರು 45,000 ಪೊಲೀಸ್ ಸಿಬ್ಬಂದಿಯನ್ನು ಬೀದಿಗಳಲ್ಲಿ ನಿಯೋಜಿಸಲಾಗಿದೆ.

ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರಾನ್ ಜರ್ಮನಿಗೆ ನಿಗದಿಯಾಗಿದ್ದ ತಮ್ಮ ಅಧಿಕೃತ ಭೇಟಿಯನ್ನು ರದ್ದುಗೊಳಿಸಿದರು. ‌ʼʼಯವಕನ ಹತ್ಯೆ ಕ್ಷಮಾರ್ಹವಲ್ಲʼʼ ಎಂದು ಮ್ಯಾಕ್ರಾನ್ ಹೇಳಿದ್ದಾರೆ. ನಹೆಲ್‌ನನ್ನು ಗುಂಡಿಟ್ಟು ಕೊಂದ ಪೊಲೀಸ್‌ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಆತನ ಮೇಲೆ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಅವಶ್ಯ ಕ್ರಮ ಕೈಗೊಳ್ಳಲಾಗುತ್ತದೆ, ಆದರೆ ದೊಂಬಿ ಕ್ಷಮಾರ್ಹವಲ್ಲ ಎಂದೂ ಅಧ್ಯಕ್ಷರು ಹೇಳಿದ್ದಾರೆ.

France President Macron

ಪೊಲೀಸ್‌ನಿಂದ ಯುವಕನ ಹತ್ಯೆ

ಇದಕ್ಕೆ ಕಾರಣವಾದದ್ದು ಒಬ್ಬ ಹುಡುಗನ ಸಾವು. ಫ್ರೆಂಚ್‌ ಪೊಲೀಸ್‌ ಅಧಿಕಾರಿಯೊಬ್ಬ ಈತನನ್ನು ಬಂದೂಕಿನಿಂದ ಸುಟ್ಟುಹಾಕಿದ್ದ. ಇದು ನಡೆದದ್ದು ಜೂನ್ 27ರಂದು. ನಹೆಲ್ ಎಂಬ ಈ ಯುವಕ ಪ್ಯಾರಿಸ್‌ನ ಪಶ್ಚಿಮದ ಉಪನಗರವಾದ ನಾಂಟೆರ್ರೆ ನಿವಾಸಿ. ಈತ ಹಳದಿ ಬಣ್ಣದ ಮರ್ಸಿಡಿಸ್‌ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೊರಟಿದ್ದ. ಟ್ರಾಫಿಕ್‌ ಸಿಗ್ನಲ್‌ನಲ್ಲಿ ನಿಲ್ಲಿಸುವಂತೆ ಇಬ್ಬರು ಪೊಲೀಸರು ಸೂಚಿಸಿದ್ದಾರೆ. ಆತ ನಿಲ್ಲಿಸಲಿಲ್ಲ. ಪೊಲೀಸರು ಮತ್ತೆ ಆತನನ್ನು ಅಡ್ಡಹಾಕಿ, ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ನಿಲ್ಲಿಸದೆ ಕಾರನ್ನು ಮತ್ತೆ ವೇಗವಾಗಿ ಚಲಾಯಿಸಿದ್ದಾನೆ. ಆ ಕ್ಷಣದಲ್ಲಿ ಪೊಲೀಸರಲ್ಲೊಬ್ಬ ಚಾಲಕನಿಗೆ ಶೂಟ್‌ ಮಾಡಿದ್ದಾನೆ. ಕಾರು ಪೇವ್‌ಮೆಂಟ್‌ ಮೇಲೆ ಹತ್ತಿ ಮುಂಭಾಗ ಜಖಂಗೊಂಡು ನಿಂತಿದೆ. ಕಾರಿನಲ್ಲಿ ಇನ್ನೂ ಇಬ್ಬರು ಪ್ರಯಾಣಿಕರಿದ್ದರು. ಅವರಿಬ್ಬರೂ ಕಾರಿನಿಂದಿಳಿದು ಪರಾರಿಯಾಗಿದ್ದಾರೆ.

ನಹೆಲ್‌ಗೆ ಆಗಿದ್ದುದು 17 ವರ್ಷ. ಪೊಲೀಸರು ಹೇಳುವಂತೆ ಈತನ ಬಳಿ ಡ್ರೈವಿಂಗ್‌ ಲೈಸೆನ್ಸ್‌ ಇರಲಿಲ್ಲ. ಡ್ರೈವಿಂಗ್‌ ಲೈಸೆನ್ಸ್‌ ಪಡೆಯುವ ವಯಸ್ಸೂ ಈತನಿಗೆ ಆಗಿರಲಿಲ್ಲ. ಆತ ಈ ಹಿಂದೆ ಹಲವು ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದ, ಪೊಲೀಸರೊಂದಿಗೆ ಕಿರಿಕ್‌ ಮಾಡಿಕೊಂಡ ಪ್ರಕರಣಗಳು ಇವೆ. ಈತನ ಕೆಲವು ಪ್ರಕರಣಗಳು ಯುವ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ. ಟ್ರಾಫಿಕ್‌ ನಿಯಮ ಉಲ್ಲಂಘಿಸುವುದೇ ಇವನ ಜಾಯಮಾನ ಆಗಿತ್ತು. ಡ್ರಗ್‌ ಸಾಗಿಸುವವರು ಸಹಜವಾಗಿಯೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಲು ಇಷ್ಟಪಡುತ್ತಾರೆ. ಪ್ಯಾರಿಸ್‌ನಾದ್ಯಂತ ಯುವಜನತೆಯ ನಡುವೆ ಡ್ರಗ್‌ ಸೇವನೆ ಹಾಗೂ ವ್ಯವಹಾರ ವ್ಯಾಪಕವಾಗಿದೆ. ಇದರಲ್ಲಿ ಅತ್ಯಧಿಕ ಅರಬ್‌ ಮೂಲದ, ಅಲ್ಜೀರಿಯಾ ಮೂಲದ ಯುವಜನತೆ ಭಾಗಿಯಾಗಿದ್ದಾರೆ. ಹೀಗಾಗಿ ಇವರಿಗೂ ಪೊಲೀಸರಿಗೂ ಹೊಯ್‌ ಕೈ ಸದಾ ಇದ್ದದ್ದೇ.

ಫ್ರೆಂಚ್- ಅಲ್ಜೀರಿಯನ್ ಕುಟುಂಬಕ್ಕೆ ಸೇರಿದ ನಹೆಲ್ ತನ್ನ ತಾಯಿಗೆ ಏಕೈಕ ಮಗ. ಈತ ಅರ್ಧದಲ್ಲಿ ಶಾಲೆ ಶಿಕ್ಷಣ ಬಿಟ್ಟಿದ್ದಾನೆ. ಆದರೆ ಹಾಗೆ ಶಿಕ್ಷಣ ಅರ್ಧದಲ್ಲಿ ಕೈಬಿಟ್ಟ ಯುವಜನರಿಗೆ ಕೌಶಲ್ಯವೃದ್ಧಿಗೆ ಮತ್ತು ಸಹಾಯಕ್ಕೆ ಫ್ರಾನ್ಸ್‌ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ಒಂದರಲ್ಲಿ ಆತ ರಿಹ್ಯಾಬಿಲಿಟೇಷನ್‌ಗೆ ಸೇರಿಕೊಂಡು, ಎಲೆಕ್ಟ್ರಿಷಿಯನ್ ಕೋರ್ಸ್‌ಗೆ ಸೇರಿಕೊಂಡಿದ್ದ. ಚೆನ್ನಾಗಿ ರಗ್ಬಿ ಆಡುತ್ತಿದ್ದ. ಯಾವುದೇ ಕ್ರಿಮಿನಲ್‌ ದಾಖಲೆ ಇವನ ಮೇಲೆ ಇರಲಿಲ್ಲ. ಕ್ರಿಮಿನಲ್‌ ಹಿನ್ನೆಲೆಯ ಗೆಳೆಯರ ಗುಂಪಿನ ಸಹವಾಸ ಇದ್ದರೂ ಸ್ವತಃ ಈತನ ಮೇಲೆ ಆ ದಾಖಲೆ ಇರಲಿಲ್ಲ.

ಆದರೆ ಗಲಭೆ ಇಷ್ಟೊಂದು ವ್ಯಾಪಕವಾಗಿ ಹರಡಿದ್ದೇಕೆ?

ಯುವಕನ ಹತ್ಯೆಯ ಎರಡನೇ ದಿನದಿಂದ ಪ್ರತಿಭಟನೆಗಳು ಫ್ರಾನ್ಸ್‌ನಾದ್ಯಂತ ಹರಡಿದವು. ಇದರಲ್ಲಿ ಅರಬ್‌ ಹಿನ್ನೆಲೆಯ ಯುವಕ- ಯುವತಿಯರೇ ಹೆಚ್ಚಾಗಿದ್ದರು. ಬಿಳಿಯರೂ ಅಲ್ಪ ಸಂಖ್ಯೆಯಲ್ಲಿ ಸೇರಿಕೊಂಡಿದ್ದರು. ಪ್ಯಾರಿಸ್‌ನಲ್ಲಿ ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವ ವರ್ಣಭೇದ ನೀತಿ, ಪೊಲೀಸರ ದರ್ಪ- ದೌರ್ಜನ್ಯಗಳು ಈ ಗಲಭೆ ತುರೀಯ ಸ್ಥಿತಿಗೆ ಮುಟ್ಟಲು ಕಾರಣವಾಗಿವೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

France Riots

ʼʼಕೇವಲ ಪೋಲೀಸರ ದಬ್ಬಾಳಿಕೆ ಮಾತ್ರವಲ್ಲ ಆರ್ಥಿಕ ಮತ್ತು ಜನಾಂಗೀಯ ಅಸಮಾನತೆಗಳ ಬಗ್ಗೆಯೂ ಕೋಪವನ್ನು ಈ ಗಲಭೆಗಳಲ್ಲಿ ಕಾಣಬಹುದು. ಅಂತಾರಾಷ್ಟ್ರೀಯ ಟೀಕೆಗಳು ಮತ್ತು ಸ್ಥಳೀಯ ಹೋರಾಟಗಳ ನಡುವೆಯೂ ಫ್ರೆಂಚ್‌ ಆಡಳಿತ ತನ್ನ ಪೊಲೀಸ್‌ ಮತ್ತು ಜೈಲು ವ್ಯವಸ್ಥೆಯನ್ನು ಮಾನವೀಯಗೊಳಿಸಿಲ್ಲ. ವಲಸಿಗರನ್ನು ಕಂಡರೆ ಈಗಲೂ ಇಲ್ಲಿ ಹೆಚ್ಚಿನ ಮಂದಿಯಲ್ಲಿ ಹೇವರಿಕೆ ಇದೆ. ಸರ್ಕಾರ- ಪೊಲೀಸ್-‌ ನ್ಯಾಯಾಂಗ ಮಟ್ಟದಲ್ಲೂ ಇದು ಬೇರೂರಿದೆ ಎನ್ನುತ್ತಾರೆ ಫ್ರೆಂಚ್‌ನ ಸಮಾಜಶಾಸ್ತ್ರ ತಜ್ಞ, ಲೇಖಕ ಮ್ಯಾಥ್ಯೂ ರಿಗೌಸ್ಟ್.‌

ಇದನ್ನೂ ಓದಿ: France Riots: 17ವರ್ಷದ ಹುಡುಗನ ಸಾವು ಇಡೀ ಫ್ರಾನ್ಸ್​ ದೇಶವನ್ನು ನಲುಗಿಸುತ್ತಿದೆ; ತಾರಕಕ್ಕೆ ಏರಿದ ಗಲಭೆ

ಪ್ಯಾರಿಸ್‌ನಲ್ಲಿ ಅರಬ್‌ ದೇಶಗಳಿಂದ ಬಂದ ವಲಸಿಗರು, ಕರಿಯರು ವಾಸಿಸುತ್ತಿರುವ ಹಲವು ಪ್ರದೇಶಗಳಿವೆ. ಅಲ್ಲಿ ಮೂಲವಸತಿ ಹಾಗೂ ಶಿಕ್ಷಣದ ಕೊರತೆ ಎದ್ದು ಕಾಣಿಸುತ್ತದೆ. ಫ್ರಾನ್ಸ್‌ನ ಉಳಿದ ಭಾಗಗಳೊಂದಿಗೆ ಹೋಲಿಸಿದರೆ ನಿರುದ್ಯೋಗ ಎದ್ದು ಕಾಣಿಸುವಂತಿದೆ. ಇಲ್ಲಿ ಶಾಲಾ ಶಿಕ್ಷಣದ ಯಶಸ್ಸು ಹೆಚ್ಚಿಲ್ಲ. ಹೀಗಾಗಿ ಯುವಕರು ಅಸಹನೆಗೆ ತುತ್ತಾಗುತ್ತಿದ್ದಾರೆ. ಸಹಜವಾಗಿ ಇದು ಪೊಲೀಸರಿಗೂ ವಲಸಿಗರಿಗೂ ನಡುವೆ ಘರ್ಷಣೆಗೆ ಕಾರಣವಾಗುತ್ತಿದೆ.

ಅಸಹನೆ ಎಷ್ಟು ಕಾರಣ?

ಅರಬ್‌ ಮೂಲದ ಹಾಗೂ ಮುಸ್ಲಿಂ ವಲಸಿಗರ ಬಗ್ಗೆ ಇಲ್ಲಿನ ಬಿಳಿಯರಲ್ಲಿ, ಪೊಲೀಸರಲ್ಲಿ ಭೇದ ನೀತಿ ಬೇರೂರಿದೆ. ಇದು ಒಂದೆರಡು ದಶಕಗಳಿಂದ ಹೆಪ್ಪುಗಟ್ಟುತ್ತಿದೆ. ಇದನ್ನೇ ಬಂಡವಾಳವಾಗಿಸಿಕೊಂಡು ತೀವ್ರ ಬಲಪಂಥೀಯರೂ ಅಧಿಕಾರ ಹಿಡಿದಿದ್ದಾರೆ. 2015ರಲ್ಲಿ ಫ್ರಾನ್ಸ್‌ನ ಚಾರ್ಲಿ ಹೆಬ್ಡೊ ಎಂಬ ಪತ್ರಿಕೆ ಪ್ರವಾದಿ ಮಹಮ್ಮದರನ್ನು ಅವಹೇಳನ ಮಾಡುವ ವ್ಯಂಗ್ಯಚಿತ್ರ ಪ್ರಕಟಿಸಿದ್ದನ್ನೂ, ಮುಸ್ಲಿಂ ಉಗ್ರಗಾಮಿಗಳು ಇದರಿಂದ ರೊಚ್ಚಿಗೆದ್ದು ಆ ಪತ್ರಿಕೆಯ ಕಚೇರಿಗೆ ಸಶಸ್ತ್ರ ದಾಳಿ ನಡೆಸಿ ಎಸಗಿದ ಹತ್ಯಾಕಾಂಡದಲ್ಲಿ 17 ಮಂದಿ ಹತರಾದುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಫ್ರಾನ್ಸ್‌ನ ಹಲವು ಕಡೆ ʼಲೋನ್‌ ವೂಲ್ಫ್‌ʼ ದಾಳಿಗಳೂ ನಡೆದಿವೆ.

ಇದನ್ನೂ ಓದಿ: France Riots: ಫ್ರಾನ್ಸ್ ದಂಗೆಗೆ ವಿಡಿಯೋ ಗೇಮ್ಸ್ ಕಾರಣ! ಮಕ್ಕಳನ್ನು ಬೀದಿಗೆ ಬೀಡಬೇಡಿ ಅಂದ್ರು ಫ್ರೆಂಚ್ ಅಧ್ಯಕ್ಷರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

PM Modi: ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ; ಪ್ರಧಾನಿ ಈ ಸ್ಥಳವನ್ನೇ ಆಯ್ಕೆ ಮಾಡಲು ಏನು ಕಾರಣ?

ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಈ ಬಾರಿ ಲೋಕ ಸಭಾ ಚುನಾವಣಾ ಪ್ರಚಾರದ ಅಂತ್ಯವನ್ನು ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ನಡೆಸಲಿದ್ದಾರೆ. ಇಲ್ಲಿ ಸುಮಾರು 45 ಗಂಟೆಗಳ ಕಾಲ ಅವರು ಕಳೆಯಲಿದ್ದಾರೆ.

VISTARANEWS.COM


on

By

PM Modi
Koo

ಲೋಕಸಭಾ ಚುನಾವಣೆ- 2024ರ (Loksabha election-2024) ಬಿಜೆಪಿ ಪ್ರಚಾರ ಕಾರ್ಯವನ್ನು ಅಂತ್ಯಗೊಳಿಸಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕನ್ಯಾಕುಮಾರಿಗೆ ತೆರಳಲಿದ್ದು, ( Kanyakumari) ಇಲ್ಲಿನ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ (Vivekananda Rock Memorial) ಮೇ 30ರಿಂದ ಜೂನ್ 1ರವರೆಗೆ ಒಟ್ಟು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ.

ಇದೇ ಸ್ಥಳದಲ್ಲಿ ಭಾರತದ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು 1892ರಲ್ಲಿ ಮೂರು ದಿನಗಳ ಕಾಲ ಧ್ಯಾನ ಮಾಡಿ ಜ್ಞಾನೋದಯವನ್ನು ಪಡೆದಿದ್ದರು.

2019ರ ಚುನಾವಣಾ ಪ್ರಚಾರದ ಕೊನೆಯಲ್ಲಿ ಪ್ರಧಾನಿ ಮೋದಿ ಅವರು ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ 15 ಗಂಟೆಗಳ ‘ಏಕಾಂತವಾಸ್’ (ಏಕಾಂತ ಧ್ಯಾನ) ಕೈಗೊಂಡಿದ್ದರು.

2014 ರಲ್ಲಿ ಮಹಾರಾಷ್ಟ್ರದ ಪ್ರತಾಪಗಢಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. 1659ರ ನವೆಂಬರ್ ನಲ್ಲಿ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ಅವರನ್ನು ಕೊಂದು ಯುದ್ಧದಲ್ಲಿ ಗೆದ್ದ ಛತ್ರಪತಿ ಶಿವಾಜಿಗೆ ಗೌರವ ಸಲ್ಲಿಸಿದರು. ಈ ವಿಜಯವು ಮರಾಠಾ ಸಾಮ್ರಾಜ್ಯದ ಮುಖ್ಯಸ್ಥನಾಗಿ ಶಿವಾಜಿಯ ಪಟ್ಟಾಭಿಷೇಕಕ್ಕೆ ದಾರಿ ಮಾಡಿಕೊಟ್ಟಿತು. ಇದನ್ನು ಹಿಂದವಿ ಸ್ವರಾಜ್ ಎಂದು ಛತ್ರಪತಿ ಶಿವಾಜಿ ಕರೆದರು.

ಇದೀಗ ಜೂನ್ 4 ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮುಂಚಿತವಾಗಿ ಮೋದಿ ಕನ್ಯಾಕುಮಾರಿ ಪ್ರವಾಸ ಯೋಜನೆ ಹಾಕಿಕೊಂಡಿದ್ದಾರೆ.


ವಿವೇಕಾನಂದ ಬಂಡೆಯ ಮಹತ್ವ ಏನು?

ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ವವತುರೈ ಕಡಲತೀರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ದ್ವೀಪದ ಮೇಲೆ ಧ್ಯಾನ ಮಾಡುವಾಗ ಸ್ವಾಮಿ ವಿವೇಕಾನಂದರು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು.

ಭಾರತದಾದ್ಯಂತ ನಾಲ್ಕು ವರ್ಷಗಳ ಕಾಲ ಅಲೆದಾಡಿದ ಅವರು ದೈವಿಕ ಸ್ವಭಾವ, ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಪರಿಶ್ರಮ, ಧೈರ್ಯ, ಶಕ್ತಿ ಮತ್ತು ಪ್ರೀತಿಯಲ್ಲಿ ನಂಬಿಕೆಯ ಇಡುವ ತತ್ತ್ವವನ್ನು ಸಾರಿದರು.

ಸ್ವಾಮಿ ರಾಮಕೃಷ್ಣಾನಂದರಿಗೆ 1894ರಲ್ಲಿ ವಿವೇಕಾನಂದರು, ಭಾರತೀಯ ಬಂಡೆಯ ಕೊನೆಯ ತುಣುಕಿನ ಮೇಲೆ ಕುಳಿತು ನಾನು ಒಂದು ಯೋಜನೆಯನ್ನು ಕಂಡಿದ್ದೇನೆ. ಸನ್ಯಾಸಿಗಳು ಅಲೆದಾಡುತ್ತಾ ಜನರಿಗೆ ಆಧ್ಯಾತ್ಮಿಕತೆಯನ್ನು ಕಲಿಸುವುದು ಹುಚ್ಚುತನ. ಬಡವರು ಅತ್ಯಂತ ಕಷ್ಟವಾದ ಜೀವನ ನಡೆಸುತ್ತಿರುವುದು ಅವರ ಅಜ್ಞಾನದಿಂದಾಗಿ. ನಾವು ಅದನ್ನು ಹೋಗಲಾಡಿಸುವ ಬದಲು ಅವರ ರಕ್ತವನ್ನು ಹೀರುತ್ತಿದ್ದೇವೆ ಮತ್ತು ಅವರನ್ನು ಪಾದದಡಿಯಲ್ಲಿ ತುಳಿಯುತ್ತಿದ್ದೇವೆ ಎಂದು ಹೇಳಿದ್ದರು.

1963ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವದ ಮುನ್ನಾದಿನ ಆರ್‌ಎಸ್‌ಎಸ್ ಕಾರ್ಯಕರ್ತ ಏಕನಾಥ್ ರಾನಡೆ ನೇತೃತ್ವದ ವಿವೇಕಾನಂದ ರಾಕ್ ಸ್ಮಾರಕ ಸಮಿತಿಯು ಈ ಸ್ಥಳವನ್ನು ನೆನಪಿಸಿತ್ತು. ಇದನ್ನು 1970 ರಲ್ಲಿ ರಾಷ್ಟ್ರಪತಿ ವಿ.ವಿ.ಗಿರಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.

ಒಂದು ನಂಬಿಕೆಯ ಪ್ರಕಾರ ಪಾರ್ವತಿ ದೇವಿಯು ಶಿವನಿಗಾಗಿ ಕಾಯುತ್ತಿರುವಾಗ ಇದೇ ಬಂಡೆಯ ಮೇಲೆ ಒಂದೇ ಕಾಲಿನ ಮೇಲೆ ಧ್ಯಾನ ಮಾಡುತ್ತಿದ್ದಳು.

ವವತುರೈನಿಂದ 15 ನಿಮಿಷಗಳ ದೋಣಿ ಸಂಚಾರದ ಮೂಲಕ ಕಲ್ಲಿನ ದ್ವೀಪವನ್ನು ಪ್ರವೇಶಿಸಬಹುದು. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ.


ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ.

ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು.

ಈ ಬಾರಿ ತಮಿಳುನಾಡಿನ ಕನ್ಯಾಕುಮಾರಿಯನ್ನು ಅವರು ಧ್ಯಾನ ಮಾಡಲು ಅವರು ಆಯ್ಕೆ ಮಾಡಿರುವುದು ಈ ವರ್ಷದ ಚುನಾವಣಾ ಪ್ರಚಾರದ ಸಮಯದಲ್ಲಿ ಅವರ ಪಕ್ಷ ದಕ್ಷಿಣ ಭಾರತದಲ್ಲಿ ಬಲವಾಗಿರುವುದನ್ನು ಸೂಚಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಅವರ ಒಟ್ಟು ಪ್ರವಾಸಗಳಲ್ಲಿ ಮೂರನೇ ಒಂದು ಭಾಗದಷ್ಟು ಅವರು ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು. 2024ರಲ್ಲಿ ತಮಿಳುನಾಡಿಗೆ ಏಳು ಭಾರಿ ಭೇಟಿ ನೀಡಿದ್ದಾರೆ.

ದಕ್ಷಿಣದ ರಾಜ್ಯಗಳ ಮೇಲೆ ದೃಷ್ಟಿ

ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವು ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ 131 ಸ್ಥಾನಗಳನ್ನು ಹೊಂದಿವೆ. ತಮಿಳುನಾಡುವೊಂದೇ ಸಂಸತ್ತಿನಲ್ಲಿ 39 ಸ್ಥಾನಗಳನ್ನು ಹೊಂದಿದೆ. ದಕ್ಷಿಣದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಮೋದಿ ಭೇಟಿಗೆ ಸಿದ್ಧತೆ ಏನು?

ಗುರುವಾರ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ಪ್ರಧಾನಿಯವರ 45 ಗಂಟೆಗಳ ವಾಸ್ತವ್ಯ ಸುಗಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸುಮಾರು 2,000 ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

ತಿರುನೆಲ್ವೇಲಿ ವ್ಯಾಪ್ತಿಯ ಡಿಐಜಿ ಪ್ರವೇಶ್ ಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಇ. ಸುಂದರವತನಂ ಅವರೊಂದಿಗೆ ಇಲ್ಲಿನ ಕಲ್ಲಿನ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚುನಾವಣಾ ಪ್ರಚಾರವನ್ನು ಮುಗಿಸಿದ ಅನಂತರ ಪ್ರಧಾನಿ ಗುರುವಾರ ಮಧ್ಯಾಹ್ನ ತಿರುವನಂತಪುರಂ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಸಂಜೆ ಕನ್ಯಾಕುಮಾರಿಯಲ್ಲಿರುವ ರಾಜ್ಯ ಅತಿಥಿ ಗೃಹ ತಲುಪಿ ದೋಣಿ ಮೂಲಕ ವಿವೇಕಾನಂದ ಕಲ್ಲಿನ ಸ್ಮಾರಕಕ್ಕೆ ತೆರಳಲಿದ್ದಾರೆ. ಅವರು ಶನಿವಾರ ಮಧ್ಯಾಹ್ನದವರೆಗೆ ಅಲ್ಲಿಯೇ ಇರುತ್ತಾರೆ ಎನ್ನಲಾಗಿದೆ.

ಮೋದಿ ಶನಿವಾರ ಸಂಜೆ ವೇಳೆಗೆ ಕನ್ಯಾಕುಮಾರಿ ಹೆಲಿಪ್ಯಾಡ್ ತಲುಪಿ ತಿರುವನಂತಪುರಕ್ಕೆ ಹಿಂತಿರುಗಿ ಅದೇ ದಿನ ದೆಹಲಿಗೆ ತೆರಳಲಿದ್ದಾರೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರವು ಪ್ರಧಾನಿಯವರ ಈ ಭೇಟಿಗೆ ಅನುಮತಿಯನ್ನು ವಿರೋಧಿಸಿ ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಮಾದರಿ ನೀತಿ ಸಂಹಿತೆ ಮತ್ತು ನಡೆಯುತ್ತಿರುವ ಪ್ರವಾಸೋದ್ಯಮ ಋತುವನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

Continue Reading

ವಿದೇಶ

Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

ವಿಮಾನಗಳಲ್ಲಿ ಪ್ರಕ್ಷುಬ್ಧತೆಯ (Flight Turbulence) ಸಮಯದಲ್ಲಿ ಸುರಕ್ಷಿತವಾಗಿರಲು ಪ್ರಯಾಣಿಕರಿಗೆ ಅಮೆರಿಕದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌, ವಿಮಾನ ಸಿಬ್ಬಂದಿ ಪಾಲಿಸಬಹುದಾದ ಮತ್ತು ಪ್ರಯಾಣಿಕರು ನಿರ್ವಹಿಸಬೇಕಾದ ಮಾರ್ಗಸೂಚಿಯನ್ನು ನೀಡಿದೆ. ಈ ಕುರಿತ ವಿವರಣೆ ಇಲ್ಲಿದೆ. ವಿಮಾನದೊಳಗಿನ ಪ್ರಕ್ಷುಬ್ಧತೆ (Flight Turbulence) ಎಂದರೇನು, ಇದರಿಂದ ಪಾರಾಗುವುದು ಹೇಗೆ ಎಂಬ ಮಾಹಿತಿಯೂ ಇಲ್ಲಿದೆ.

VISTARANEWS.COM


on

By

Flight Turbulence
Koo

ವಿಮಾನ (flight) ಹಾರುವಾಗ ವಾಯು ಒತ್ತಡದಿಂದ ಕೆಲವೊಮ್ಮೆ ಪ್ರಕ್ಷುಬ್ಧತೆ (Flight Turbulence) ಉಂಟಾಗುತ್ತದೆ. ವಿಮಾನ ನಡುಗುತ್ತದೆ. ಈ ಸಂದರ್ಭದಲ್ಲಿ ಹಠಾತ್ ಆಘಾತಗಳು ಸಂಭವಿಸಿ ಸಾವು ನೋವು ಉಂಟಾಗುವುದೂ ಇದೆ. ಇಂಥ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಬೇಕಾಗುತ್ತದೆ. ಇತ್ತೀಚೆಗೆ ಸಿಂಗಾಪುರ ಏರ್‌ಲೈನ್ಸ್ (singapore airlines) ವಿಮಾನ ಇಂಥದ್ದೇ ಪರಿಸ್ಥಿತಿಗೆ ಒಳಗಾಗಿ ಪ್ರಯಾಣಿಕರೊಬ್ಬರು ಸಾವಿಗೀಡಾಗಿ, ಹಲವರು ಪ್ರಯಾಣಿಕರು ಗಾಯಗೊಂಡಿದ್ದರು. ಲಂಡನ್‌ನಿಂದ ಸಿಂಗಾಪುರಕ್ಕೆ ಹಾರುತ್ತಿದ್ದ ಬೋಯಿಂಗ್ 777-312ER ವಿಮಾನ 321ರಲ್ಲಿದ್ದ ಪ್ರಯಾಣಿಕರು ವಾಯು ಪ್ರಕ್ಷುಬ್ಧತೆಯ ಭಯಾನಕತೆಯನ್ನು ಅನುಭವಿಸಬೇಕಾಯಿತು.

ವಾಯು ಪ್ರಕ್ಷುಬ್ಧತೆ ಎಂದರೇನು?

ವಾಯು ಪ್ರಕ್ಷುಬ್ಧತೆಯು ಭೂಮಿಯ ವಾತಾವರಣದಲ್ಲಿ ಗಾಳಿಯ ಅನಿಯಮಿತ ಮತ್ತು ಅನಿರೀಕ್ಷಿತ ಚಲನೆಯಿಂದ ಉಂಟಾಗುತ್ತದೆ. ಇದು ವಿಮಾನ ಹಾರಾಟದ ಸಮಯದಲ್ಲಿ ಅಪಘಾತಕ್ಕೆ ಕಾರಣವಾಗುತ್ತದೆ. ವೇಗವಾಗಿ ವಾಹನ ಓಡಿಸುತ್ತಿದ್ದಾಗ ಯಾವ ಸೂಚನಾ ಫಲಕ ಇಲ್ಲದೆ ಹಠಾತ್‌ ಹಂಪ್‌ ಎದುರಾದಾಗ ಏನಾಗುತ್ತದೋ ವಿಮಾನದೊಳಗೆ ಹಾಗೆಯೇ ಆಗುತ್ತದೆ. ವಿಮಾನವು ಚಾಲಕನ ನಿಯಂತ್ರಣ ಕಳೆದುಕೊಂಡು ಪತನಗೊಳ್ಳುವಂತಾಗುತ್ತದೆ.

ಆಗ ಏನು ಮಾಡಬೇಕು?

ಯಾವಾಗಲೂ ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ಕುಳಿತಿರಬೇಕು. ಸೈನ್ ಆಫ್ ಆಗಿದ್ದರೂ, ಅದನ್ನು ಬಿಗಿಯಾಗಿ ಇರಿಸಬೇಕು.
ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸಿ. ಅವರ ಮಾತನ್ನು ಕೇಳಿ. ಪ್ರಕ್ಷುಬ್ಧತೆಯನ್ನು ನಿಭಾಯಿಸಲು ಅವರಿಗೆ ತರಬೇತಿ ನೀಡಲಾಗಿರುತ್ತದೆ. ಪ್ರಕ್ಷುಬ್ಧತೆಯ ಸಮಯದಲ್ಲಿ ಕ್ಯಾಬಿನ್ ಸುತ್ತಲೂ ಚಲಿಸುವುದನ್ನು ತಪ್ಪಿಸಿ ಮತ್ತು ಆತಂಕದಿಂದ ಕಿರುಚದೇ ಮೌನವಾಗಿ ಕುಳಿತುಕೊಳ್ಳಿ.

ಕ್ಯಾಬಿನ್‌ನಲ್ಲಿ ಇಟ್ಟಿರುವ ವಸ್ತುಗಳು ಮೈಮೇಲೆ ಬೀಳದಂತೆ ಸುರಕ್ಷಿತವಾಗಿರಿಸಿ. ಸೋರಿಕೆ ಅಥವಾ ಬೀಳುವಿಕೆಯನ್ನು ತಪ್ಪಿಸಲು ವಸ್ತುಗಳನ್ನು ಓವರ್ ಹೆಡ್ ವಿಭಾಗಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ.
ಪ್ರಕ್ಷುಬ್ಧತೆ ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಶಾಂತವಾಗಿರಿ ಮತ್ತು ಭಯಭೀತರಾಗಬೇಡಿ. ರೆಸ್ಟ್ ರೂಮ್‌ ಅನ್ನು ಬಳಸಬೇಕಾದರೆ ಎದ್ದೇಳುವ ಮೊದಲು ಶಾಂತ ಕ್ಷಣಕ್ಕಾಗಿ ಕಾಯಿರಿ. ಸ್ಥಿರತೆಗಾಗಿ ಹ್ಯಾಂಡ್ರೈಲ್‌ಗಳನ್ನು ಬಳಸಿ.

ವಾಯು ಪ್ರಕ್ಷುಬ್ಧತೆಗೆ ಕಾರಣಗಳೇನು?

ಚಂಡಮಾರುತ, ಜೆಟ್ ಸ್ಟ್ರೀಮ್‌ ಅಥವಾ ಗಾಳಿಯ ಒತ್ತಡದಲ್ಲಿನ ಬದಲಾವಣೆಗಳಿಂದ ವಾಯು ಪ್ರಕ್ಷುಬ್ಧತೆ ಉಂಟಾಗಬಹುದು. ಹವಾಮಾನ ಬದಲಾವಣೆಗಳಿಂದಾಗಿ ಗಾಳಿಯ ಪ್ರಕ್ಷುಬ್ಧತೆಯು ಆಗಾಗ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು. ತೀವ್ರವಾದ ಪ್ರಕ್ಷುಬ್ಧ ಘಟನೆಗಳು ಅಪರೂಪ. ಪೈಲಟ್‌ಗಳು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತರಬೇತಿ ಪಡೆದಿರುತ್ತಾರೆ.

ಇದನ್ನೂ ಓದಿ: Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

ಮಾಜಿ ಪೈಲೆಟ್ ಹೇಳಿದ್ದೇನು?

43 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಪೈಲಟ್ ಕ್ಯಾಪ್ಟನ್ ಕ್ರಿಸ್ ಹ್ಯಾಮಂಡ್ ಅವರು ಈ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ: ಇಂಥ ಸಂದರ್ಭದಲ್ಲಿ ಪ್ರಯಾಣಿಕರನ್ನು ಹೆಚ್ಚು ಸಮಾಧಾನದಿಂದ ಇರಿಸುವಂತೆ ಮಾಡುವ ಜವಾಬ್ದಾರಿ ಪೈಲಟ್‌ನದ್ದಾಗಿದೆ. ಎಲ್ಲಕ್ಕಿಂತ ಪೈಲಟ್‌ ತಾನು ಸಮಾಧಾನದಿಂದ ಇದ್ದು, ವಿವೇಚನೆ ಮತ್ತು ಅನುಭವ ಬಳಸಿ ವಿಮಾನವನ್ನು ನಿಯಂತ್ರಿಸಬೇಕಾಗುತ್ತದೆ. ಅನುಭವಿ ಚಾಲಕರು ಇಂಥ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡುತ್ತಾರೆ.

Continue Reading

ದೇಶ

Share Market: ಸೆನ್ಸೆಕ್ಸ್‌ ನೆಗೆತ, ನಿಫ್ಟಿ ಜಿಗಿತ; ಮೋದಿ ಭವಿಷ್ಯ ನಿಜವಾಗುತ್ತಾ? ಇಂದಿನ ಏರಿಕೆಗೆ ಕಾರಣಗಳು ಗೊತ್ತಾ?

Share Market: ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 1,197 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 75,460 ಪಾಯಿಂಟ್ಸ್‌ಗೆ ತಲುಪಿದರೆ, ನಿಫ್ಟಿಯು 370 ಪಾಯಿಂಟ್ಸ್‌ ಏರಿಕೆಯೊಂದಿಗೆ 22,989 ಪಾಯಿಂಟ್ಸ್‌ ತಲುಪಿದೆ. ಇದು ಲೋಕಸಭೆ ಚುನಾವಣೆ ಫಲಿತಾಂಶ, ಸ್ಥಿರ ಸರ್ಕಾರದ ಮುನ್ಸೂಚನೆಗೆ ಹಿಡಿದ ಕನ್ನಡಿ ಎಂದೇ ವಿಶ್ಲೇಷಿಸಲಾಗುತಿದೆ.

VISTARANEWS.COM


on

Share Market
Koo

ಮುಂಬೈ: “ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ ಪ್ರಕಟವಾಗುವ ಜೂನ್‌ 4ರಂದು ಭಾರತದ ಷೇರು ಮಾರುಕಟ್ಟೆಯು (Share Market) ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಇದೇ ಮಾತು ಹೇಳಿದ್ದಾರೆ. ಇದರ ಮಧ್ಯೆಯೇ, ಗುರುವಾರ (ಮೇ 23) ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 1,197 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 75,460 ಪಾಯಿಂಟ್ಸ್‌ಗೆ ತಲುಪಿದರೆ, ನಿಫ್ಟಿಯು 370 ಪಾಯಿಂಟ್ಸ್‌ ಏರಿಕೆಯೊಂದಿಗೆ 22,989 ಪಾಯಿಂಟ್ಸ್‌ ತಲುಪಿದೆ. ಲೋಕಸಭೆ ಚುನಾವಣೆ ಫಲಿತಾಂಶ, ಸ್ಥಿರ ಸರ್ಕಾರದ ಮುನ್ಸೂಚನೆಯ ಸಂಕೇತವಾಗಿಯೇ ಷೇರು ಮಾರುಕಟ್ಟೆಯು ದಾಖಲೆ ಬರೆದಿದೆ ಎಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

“ನಿಫ್ಟಿಯು ದಾಖಲೆಯ ಏರಿಕೆ ಕಾಣುವ ಮೂಲಕ ಚುನಾವಣೆ ನಂತರದಲ್ಲಿ ದೇಶದಲ್ಲಿ ರಾಜಕೀಯ ಸ್ಥಿರತೆ ಇರುತ್ತದೆ ಎಂಬ ಸಂದೇಶ ರವಾನಿಸಿದೆ. ಅತಿ ಹೆಚ್ಚಿನ ಹಣ ಹೂಡಿಕೆ ಮಾಡುವವರು ಸೇರಿ ಎಲ್ಲರಿಗೂ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ” ಎಂದು ಜಿಯೋಜೀತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ರಣತಂತ್ರಗಾರ ವಿ.ಕೆ.ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ, ಸಾರ್ವತ್ರಿಕ ಚುನಾವಣೆ ಫಲಿತಾಂಶದ ದಿನ ಷೇರು ಪೇಟೆಯಲ್ಲಿ ಲವಲವಿಕೆ ಇದ್ದೇ ಇರುತ್ತದೆ. ಆದರೆ, ಜೂನ್‌ 4ರಂದು ಇತಿಹಾಸ ಸೃಷ್ಟಿಯಾಗುತ್ತದೆ ಎಂದು ಹೇಳುತ್ತಿರುವುದು ಹೂಡಿಕೆದಾರರ ಖುಷಿ ಹೆಚ್ಚಿಸಿದೆ.

Share Market

ಕೇಂದ್ರಕ್ಕೆ ಆರ್‌ಬಿಐ ಲಾಭಾಂಶದ ಕೊಡುಗೆ

ಕೇಂದ್ರ ಸರ್ಕಾರಕ್ಕೆ 2023-24ನೇ ಸಾಲಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ದಾಖಲೆಯ 2.10 ಲಕ್ಷ ಕೋಟಿ ರೂ. ಡೆವಿಡೆಂಡ್‌ (ಲಾಭಾಂಶ) ನೀಡಲು ಒಪ್ಪಿಗೆ ನೀಡಿರುವುದು ಕೂಡ ಷೇರು ಮಾರುಕಟ್ಟೆಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 2022-23ರಲ್ಲಿ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ 87 ಸಾವಿರ ಕೋಟಿ ರೂ. ನೀಡಿತ್ತು. ಆದರೆ, ಅದು ಎರಡು ಪಟ್ಟು ಜಾಸ್ತಿಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣ ಸಿಗುತ್ತದೆ. ಆ ಹಣವು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ವಿನಿಯೋಗವಾಗುತ್ತದೆ. ಇದರಿಂದ ಷೇರು ಪೇಟೆಯಲ್ಲಿ ಲಾಭ ಗಳಿಸಬಹುದು ಎಂಬ ಕಾರಣದಿಂದ ಹೂಡಿಕೆ ಜಾಸ್ತಿಯಾಗಿದೆ. ಗುರುವಾರವೂ ಸಾರ್ವಜನಿಕ ವಲಯದ ಸಂಸ್ಥೆಗಳು ಲಾಭ ಗಳಿಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಷೇರು ಮಾರುಕಟ್ಟೆ ಬಗ್ಗೆ ಮೋದಿ ಹೇಳಿದ್ದೇನು?

“ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಮಹತ್ವದ ಸುಧಾರಣೆ ತಂದಿದೆ. ಆರ್ಥಿಕ ಶಿಸ್ತು, ವಿತ್ತೀಯ ಪ್ರಕ್ರಿಯೆಗಳಲ್ಲಿ ಸುಧಾರಣಾ ಕ್ರಮಗಳನ್ನು ಅನುಸರಿಸಿಕೊಂಡಿದೆ. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಯು ಕಳೆದ ಒಂದು ದಶಕದಲ್ಲಿ ಗಣನೀಯ ಏಳಿಗೆ ಕಂಡಿದೆ. 10 ವರ್ಷಗಳ ಹಿಂದೆ ಸೆನ್ಸೆಕ್ಸ್‌ 25 ಸಾವಿರ ಪಾಯಿಂಟ್ಸ್‌ ಹೊಂದಿತ್ತು. ಆದರೀಗ, ಸೆನ್ಸೆಕ್ಸ್‌ 75 ಸಾವಿರ ಪಾಯಿಂಟ್ಸ್‌ಗೆ ಏರಿಕೆಯಾಗಿದೆ. ಈಕ್ವಿಟಿ ಮಾರುಕಟ್ಟೆಯ ಮೌಲ್ಯವು ಕೆಲ ದಿನಗಳ ಹಿಂಷ್ಟೇ 5 ಲಕ್ಷ ಕೋಟಿ ಡಾಲರ್‌ ಆಗಿದೆ. ಹಾಗಾಗಿ, ಜೂನ್‌ 4ರಂದು ಷೇರು ಮಾರುಕಟ್ಟೆಯು ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Continue Reading

ಸಿನಿಮಾ

CGI Technology In Film: ʼವೆಸ್ಟ್‌ವರ್ಲ್ಡ್‌ʼನಿಂದ ʼಅವತಾರ್‌ʼ ಚಿತ್ರದವರೆಗೆ ಸಿಜಿಐ ತಂತ್ರಜ್ಞಾನದ ರೋಚಕ ಹಾದಿ! ವಿಡಿಯೊಗಳಿವೆ

ಹೊಸ ತಂತ್ರಜ್ಞಾನಗಳು, ಆವಿಷ್ಕಾರಗಳು ಚಲನಚಿತ್ರ ಕ್ಷೇತ್ರದಲ್ಲೂ ಸಾಕಷ್ಟು ನಡೆದಿದೆ. ಇದರಲ್ಲಿ ಸಿಜಿಐ (CGI Technology In Film) ಕೂಡ ಒಂದು. 1970ರ ದಶಕದ ಆರಂಭದ ದಿನಗಳಿಂದಲೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ಸಾಕಷ್ಟು ಪ್ರಯೋಗಗಳಿಗೆ ಒಳಗಾಗಿದೆ. ಇದು ಸಾಕಷ್ಟು ಅದ್ಭುತ ಚಲನಚಿತ್ರಗಳ ಮೇಲೆ ಪ್ರಭಾವವನ್ನು ಬೀರಿದೆ. ಕಥೆ ಹೇಳುವ ಶೈಲಿ ಮತ್ತು ದೃಶ್ಯ ಸಂಯೋಜನೆಯ ಗಡಿಗಳನ್ನು ವಿಸ್ತರಿಸಿದೆ. ಚಲನಚಿತ್ರ ರಂಗದಲ್ಲಿ ಸಿಜಿಐ ನ ಮೈಲುಗಲ್ಲು ಹೇಗಿತ್ತು ಎನ್ನುವ ಕಿರು ನೋಟ ಇಲ್ಲಿದೆ.

VISTARANEWS.COM


on

By

CGI Technology In Film
Koo

ಹಿಂದಿನ ದಿನಗಳಲ್ಲಿ ಚಲನಚಿತ್ರಗಳಲ್ಲಿ (film) ಒಂದು ವಿಶೇಷ ಸನ್ನಿವೇಶವನ್ನು ಚಿತ್ರಿಸಬೇಕಾದರೆ ಸೆಟ್‌ಗಳ ನಿರ್ಮಾಣಕ್ಕೆ ನಿರ್ಮಾಪಕರು (filmmakers), ಕೆಮರಾಮೆನ್‌ಗಳು (camera men) ಸಾಕಷ್ಟು ಕಷ್ಟಪಡುತ್ತಿದ್ದರು. ಆದರೆ ಈಗ ಎಲ್ಲವೂ ಕಂಪ್ಯೂಟರ್ ರಚಿತ ಚಿತ್ರಣ (CGI- computer generated imagery) ತಂತ್ರಜ್ಞಾನದ (CGI Technology In Film) ಮೂಲಕ ನಡೆದುಹೋಗುತ್ತದೆ. ಇದೀಗ ʼಮುಂಜ್ಯಾʼ ಎಂಬ ಭಾರತದ ಚಿತ್ರದಲ್ಲಿ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ʼಮುಂಜ್ಯಾʼ ಭಾರತದ ಮೊದಲ CGI ಚಿತ್ರ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನದ ಹಿನ್ನೋಟ ಇಲ್ಲಿ ಕೊಡಲಾಗಿದೆ.

ಸಿನಿಮಾ ಜಗತ್ತಿನಲ್ಲಿ ಸಿಜಿಐಯ ವಿಕಾಸ ಒಂದು ಪ್ರಮುಖ ಮೈಲುಗಲ್ಲು ಎಂದರೆ ತಪ್ಪಾಗಲಾರದು. ಇದು ಸಿನಿಮಾದ ಭವಿಷ್ಯವನ್ನೇ ಬದಲಾಯಿಸಿತ್ತು. ಹಿಂದೆ ಚಲನಚಿತ್ರ ನಿರ್ಮಾಪಕರು ಪ್ರೇಕ್ಷಕರ ಗ್ರಹಿಕೆಯನ್ನು ರೂಪಿಸಲು ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದರು ಜೊತೆಗೆ ಆಪ್ಟಿಕಲ್ ತಂತ್ರಗಳನ್ನು ಅವಲಂಬಿಸಿದ್ದರು. ಕೆಮರಾ ಕೋನಗಳು, ಲೆನ್ಸ್ ಆಯ್ಕೆ ಮತ್ತು ವಿಸ್ತಾರವಾಗಿ ವಿನ್ಯಾಸಗೊಳಿಸಿದ ಸೆಟ್‌ ಗಳ ತಂತ್ರಗಳನ್ನು ಬಳಸುತ್ತಿದ್ದರು. ಹಸಿರು ಮತ್ತು ವಾಲ್ಯೂಮೆಟ್ರಿಕ್ ಎಲ್ಇಡಿ ಪರದೆಯನ್ನು ಬಳಸಿ ಹಿಂದೆ ಸೆಟ್ ವಿಸ್ತರಣೆಗಳನ್ನು ಕೈಯಿಂದ ನಿಖರವಾಗಿ ಚಿತ್ರಿಸಲಾಗುತ್ತಿತ್ತು.

ಈ ವಿಧಾನಕ್ಕೆ ಈಗ ಡಿಜಿಟಲ್ ಸ್ಪರ್ಶ ಸಿಕ್ಕಿದೆ. ಇಲ್ಲಿ ಕಂಪ್ಯೂಟರ್‌ಗಳು ಮತ್ತು ವಿವಿಧ ಸಾಫ್ಟ್‌ವೇರ್‌ಗಳು ಊಹಿಸುವ ಯಾವುದೇ ವಿನ್ಯಾಸವನ್ನು ರಚಿಸಲು ಇದು ಸಹಾಯ ಮಾಡುತ್ತದೆ. ಡಿಜಿಟಲ್ ಸೃಜನಶೀಲತೆಯೆಡೆಗಿನ ಈ ಬದಲಾವಣೆಯು ಸಿಜಿಐ ತಂತ್ರಜ್ಞಾನದ ಪ್ರಗತಿ ವೇಗವನ್ನು ಹೆಚ್ಚಿಸಿತ್ತು.


ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿ ಈಗಾಗಲೇ ಹಲವಾರು ಚಿತ್ರಗಳನ್ನು ನಿರ್ಮಿಸಲಾಗಿದೆ. ಉದಾಹರಣೆಗೆ ಮಾರ್ವೆಲ್‌ನ ದಿ ಅವೆಂಜರ್ಸ್‌ನಲ್ಲಿ ಮಾರ್ಕ್ ರುಫಲೋ ಧರಿಸಿರುವ ಸೂಟ್ ಮತ್ತು ಸುತ್ತಲಿನ ದೃಶ್ಯಗಳಿಗೆ ಮತ್ತೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ.

ಸಿಜಿಐಯ ಮೊದಲ ಪ್ರಯೋಗ ಯಾವಾಗ?

ಸಿಜಿಐ ಅನ್ನು ಆಧುನಿಕ ಚಲನಚಿತ್ರಗಳಲ್ಲಿ ಮಾತ್ರ ನಾವು ಗಮನಿಸಿದ್ದೇವೆ. ಆದರೆ ಇದು 2000 ರ ದಶಕದಿಂದ ಹಾಲಿವುಡ್‌ನ ಚಿತ್ರೀಕರಣದಲ್ಲಿ ಬಳಕೆಯಾಗುತ್ತಿದೆ. ಕಂಪ್ಯೂಟರ್ ರಚಿತ ಚಿತ್ರಣ 1973ರ ವೆಸ್ಟ್‌ವರ್ಲ್ಡ್ ಮತ್ತು 1977ರ ಸ್ಟಾರ್ ವಾರ್ಸ್‌ನಲ್ಲೂ ಮಾಡಲಾಗಿದೆ.

ವೆಸ್ಟ್‌ವರ್ಲ್ಡ್ ( 1973)

ವೆಸ್ಟ್‌ವರ್ಲ್ಡ್ ಚಲನಚಿತ್ರದಲ್ಲಿ ಸಿಜಿಐ ಸಂಕ್ಷಿಪ್ತವಾಗಿ ಸರಿಸುಮಾರು 10 ಸೆಕೆಂಡ್ ನಷ್ಟೇ ಬಳಕೆ ಮಾಡಲಾಗಿದೆ. ಚಿತ್ರದಲ್ಲಿ ಇದು ಬಣ್ಣಗಳನ್ನು ಬದಲಾಯಿಸುವುದು, ಸಂಕುಚಿತಗೊಳಿಸುವುದು ಮತ್ತು ಚಿತ್ರಣವನ್ನು ವಿಸ್ತರಿಸುವುದು ಸೇರಿದೆ.


ಸ್ಟಾರ್ ವಾರ್ಸ್ (1977)

ಇದರಲ್ಲಿ ಚಿಕಣಿ ಮಾದರಿಗಳು ಮತ್ತು ಬೆಳಕಿನ ತಂತ್ರಗಳ ಮಿಶ್ರಣವನ್ನು ಮಾಡಲಾಗಿದೆ. ಚಿತ್ರದ ಪ್ರಮುಖ ಕ್ಷಣವೊಂದರಲ್ಲಿ ಲ್ಯೂಕ್ ಸ್ಕೈವಾಕರ್ ಮತ್ತು ಇತರ ಎಕ್ಸ್-ವಿಂಗ್ ಪೈಲಟ್‌ಗಳು ಡೆತ್ ಸ್ಟಾರ್‌ನ ಮೇಲೆ ತಮ್ಮ ಆಕ್ರಮಣಕ್ಕೆ ತಯಾರಿ ನಡೆಸುತ್ತಿರುವಾಗ ಇದನ್ನು ಪ್ರಯೋಗಿಸಲಾಗಿದೆ. ಇದರಲ್ಲಿ 3ಡಿ ಯುದ್ಧತಂತ್ರದ ನಕ್ಷೆಯನ್ನು ತೋರಿಸಲಾಗಿದೆ. ಇದನ್ನು ಇಲಿನಾಯ್ಸ್ ವಿಶ್ವವಿದ್ಯಾಲಯವು ಚಿಕಾಗೋದ ಎಲೆಕ್ಟ್ರಾನಿಕ್ ದೃಶ್ಯೀಕರಣ ಪ್ರಯೋಗಾಲಯ ತಂಡದೊಂದಿಗೆ ಅಭಿವೃದ್ಧಿಪಡಿಸಿದೆ.


ಸಿಜಿಐನ ಸಂಪೂರ್ಣ ಬಳಕೆ

ಸಂಪೂರ್ಣವಾಗಿ ಸಿಜಿಐ ಪಾತ್ರವನ್ನು ಸ್ಟಾರ್ ವಾರ್ಸ್ ಮತ್ತೊಮ್ಮೆ ಪರಿಚಯಿಸಿದ್ದು 1999ರ ಸ್ಟಾರ್ ವಾರ್ಸ್ ಸಂಚಿಕೆ 1: ದಿ ಫ್ಯಾಂಟಮ್ ಮೆನೇಸ್‌ನಲ್ಲಿ ಜಾರ್ ಜಾರ್ ಬಿಂಕ್ಸ್ ಮೂಲಕ.

ಸ್ಟಾರ್ ವಾರ್ಸ್: ಎ ನ್ಯೂ ಹೋಪ್ (1977)

1977ರಲ್ಲಿ ಬಿಡುಗಡೆಯಾದ ಜಾರ್ಜ್ ಲ್ಯೂಕಾಸ್‌ನ ಸ್ಟಾರ್ ವಾರ್ಸ್: ಎ ನ್ಯೂ ಹೋಪ್‌ ಪ್ರಾಯೋಗಿಕ ಮತ್ತು ಚಿಕಣಿ ಪರಿಣಾಮಗಳೊಂದಿಗೆ ಬೆರೆಸಿದ ಸಿಜಿಐ ಅಂಶಗಳ ಮನಮುಟ್ಟುವ ಬಳಕೆಯ ಮೂಲಕ ಚಲನಚಿತ್ರ ನಿರ್ಮಾಣದ ಹೊಸ ಯುಗವನ್ನು ಪ್ರಾರಂಭಿಸಿತು. 80ರ ದಶಕದಲ್ಲಿ ಇದು ಟ್ರಾನ್, ಪ್ರಿಡೇಟರ್, ಸೂಪರ್‌ಮ್ಯಾನ್, ಇ.ಟಿ. ಮತ್ತು ಏಲಿಯನ್ಸ್‌ನಂತಹ ಚಲನಚಿತ್ರಗಳ ಮೇಲೆ ಇದು ಪ್ರಭಾವ ಬೀರಿತು.


ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ (1991)

ಹೆಚ್ಚಿನ ಚಲನಚಿತ್ರ ಶಾಲೆಗಳಲ್ಲಿ ಒಂದು ಸಾಮಾನ್ಯ ಮಾತು ಇದೆ. ಸ್ಟಾರ್ ವಾರ್ಸ್ ಆಟವನ್ನು ಪ್ರಾರಂಭಿಸಿತು ಮತ್ತು ನಂತರ ಜುರಾಸಿಕ್ ಪಾರ್ಕ್ ಅದನ್ನು ಬದಲಾಯಿಸಿತು. ಇದಕ್ಕೆ ಸರಿಯಾದ ಒಂದು ಚಿತ್ರ ಟರ್ಮಿನೇಟರ್ 2: ಜಡ್ಜ್‌ಮೆಂಟ್ ಡೇ. ಈ ಚಿತ್ರದಲ್ಲಿ ಸಿಜಿಐ ಬಳಕೆಯಲ್ಲಿ ಇದು ಒಂದು ಅತ್ಯಂತ ಪ್ರಭಾವಶಾಲಿ ಚಲನಚಿತ್ರ. ಯಾಕೆಂದರೆ ಇಲ್ಲಿ ಖಳನಾಯಕನನ್ನು ಸಿಜಿಐ ಮೂಲಕ ಸಂಪೂರ್ಣ ಲಿಕ್ವಿಡ್ ಮೆಟಲ್ ಪಾತ್ರದಲ್ಲಿ ರಚಿಸಲಾಗಿದೆ. ಈ ಮೂಲಕ ಇದು ಯಾವುದೇ ಆಕಾರವನ್ನು ಮಾರ್ಫ್ ಮಾಡಬಹುದು ಎಂಬುದನ್ನು ನಿರೂಪಿಸಿತ್ತು.


ಜುರಾಸಿಕ್ ಪಾರ್ಕ್ (1995)

ಜುರಾಸಿಕ್ ಪಾರ್ಕ್ ಒಂದು ಬ್ಲಾಕ್ಬಸ್ಟರ್ ಚಿತ್ರ. ಇದು ಸಿಜಿಐ ಇತಿಹಾಸದಲ್ಲೊಂದು ಮೈಲುಗಲ್ಲು ಸ್ಥಾಪಿಸಿತ್ತು. ಇದರಲ್ಲಿ ಡೈನೋಸಾರ್‌ಗಳು ಕಲಾವಿದರೊಂದಿಗೆ ಸಂವಾದ ನಡೆಸುವುದನ್ನು ಕಾಣಬಹುದು. ಇದರಲ್ಲಿ ಮಾನವನ ಪಕ್ಕದಲ್ಲಿ ಡೈನೋಸಾರ್ ತಲೆಯ ಕ್ಲೋಸ್-ಅಪ್ ಅಗತ್ಯವಿರುವಾಗ ಪ್ರಾಯೋಗಿಕ ಡೈನೋಸಾರ್ ಮಾದರಿಯನ್ನು ಬಳಸಿದ್ದರೆ ದೂರದ ಶಾಟ್ ಗಳಿಗಾಗಿ ಡೈನೋಸಾರ್‌ಗಳ ಸಿಜಿಐ ಆವೃತ್ತಿಗಳನ್ನು ಬಳಸಲಾಗಿತ್ತು.


ದಿ ಮ್ಯಾಟ್ರಿಕ್ಸ್ (1999)

ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ ದೃಶ್ಯ ದಿ ಮ್ಯಾಟ್ರಿಕ್ಸ್ ಚಿತ್ರದ ತುಣುಕು ಚಿತ್ರ ನೋಡಿದವರೆಲ್ಲರಿಗೂ ನೆನಪಿರಬಹುದು. 360 ಡಿಗ್ರಿ ಕ್ಯಾಮರಾ ರಿಗ್‌ನ ಬಳಕೆ, ಮಧ್ಯದಲ್ಲಿ ಕೀನು ರೀವ್ಸ್‌ನ ಪ್ರತ್ಯೇಕ ಫೋಟೋಗಳನ್ನು ತೆಗೆಯುವ ಮೂಲಕ ನಟರು ಮತ್ತು ಸಿಜಿಐ ಒಟ್ಟಿಗೆ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಈ ಚಿತ್ರ ತೋರಿಸಿಕೊಟ್ಟಿದೆ. ಸಿಜಿಐ ಅನ್ನು ದೋಷರಹಿತವಾಗಿ ಕಾರ್ಯಗತಗೊಳಿಸಿದ ಕೀರ್ತಿ ಈ ಚಿತ್ರ ತಂಡದ್ದು.


ಅವತಾರ್ (2009)

ಅವತಾರ್ ಚಿತ್ರದ ದೃಶ್ಯಾವಳಿಗಳು ಎಲ್ಲರ ಕಣ್ಣ ಮುಂದಿದೆ. ಇದರಲ್ಲಿ ಮೋಷನ್ ಕ್ಯಾಪ್ಚರ್ ಮತ್ತು ಸಿಜಿಐ ಸಂಪೂರ್ಣ ಮಿಶ್ರಣವಾಗಿತ್ತು.ಇದರಲ್ಲಿ ಕ್ಯಾಮರಾಗಳನ್ನು ಬಳಸಿಕೊಂಡು ನಟರ ಹೆಚ್ಚು ವಿವರವಾದ ಫೇಸ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಆ ಡೇಟಾವನ್ನು ಬಳಿಕ ಕಂಪ್ಯೂಟರ್ ರಚಿತ ಅಕ್ಷರ ಮಾದರಿಗಳಿಗೆ ವರ್ಗಾಯಿಸುತ್ತದೆ. ಸಂಪೂರ್ಣ ಮೂರು ಗಂಟೆಗಳ ಚಿತ್ರದಲ್ಲಿ ಶೇ. 60ರಷ್ಟನ್ನು ಸಿಜಿಐ ಮೂಲಕವೇ ಚಿತ್ರಣ ಮಾಡಲಾಗಿದೆ. ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.

ಇನ್ಸೆಪ್ಶನ್ (2010)

ಕ್ರಿಸ್ಟೋಫರ್ ನೋಲನ್ ಅವರ ಇನ್ಸೆಪ್ಶನ್ ನಲ್ಲಿ ಸಿಜಿಐನೊಂದಿಗೆ ಸಂಕೀರ್ಣ ನಿರೂಪಣಾ ರಚನೆಯ ನವೀನ ಅಪ್ಲಿಕೇಶನ್‌ ಅನ್ನು ಬಳಸಲಾಗಿದೆ. ಇದು ಕನಸಿನ ಕುಶಲತೆಯ ಮೂಲಕ ಮಾನವ ಮನಸ್ಸಿನ ಆಳವನ್ನು ಪರಿಶೋಧಿಸುತ್ತದೆ. ವೀಕ್ಷಕರ ವಾಸ್ತವತೆಯ ಗ್ರಹಿಕೆಗೆ ಸವಾಲು ಹಾಕುವ ಈ ಚಿತ್ರ ಪ್ರೇಕ್ಷಕರನ್ನು ತನ್ನ ಕಥೆಯೊಳಗೆ ಲೀನ ವಾಗುವಂತೆ ಮಾಡುತ್ತದೆ.


ಅವತಾರ್: ದಿ ವೇ ಆಫ್ ವಾಟರ್ (2022)

ಜೇಮ್ಸ್ ಕ್ಯಾಮರೂನ್ ಅವರ ಅವತಾರ್‌ನ ಬಹುನಿರೀಕ್ಷಿತ ಮುಂದುವರಿದ ಭಾಗ ದಿ ವೇ ಆಫ್ ವಾಟರ್ ಸಿನಿಮೀಯ ತಂತ್ರಜ್ಞಾನ ಮತ್ತು ಕಥೆ ಹೇಳುವಿಕೆಯನ್ನು ಮೀರಿ ಮತ್ತಷ್ಟು ಅಭಿವೃದ್ಧಿ ಹೊಂದಿದೆ. ಅತ್ಯಾಧುನಿಕ ಸಿಜಿಐ ಮತ್ತು ಕಾರ್ಯಕ್ಷಮತೆ ಕ್ಯಾಪ್ಚರ್ ತಂತ್ರಜ್ಞಾನದ ಪ್ರಭಾವಶಾಲಿ ಪರಾಕಾಷ್ಠೆಯನ್ನು ಈ ಚಿತ್ರದಲ್ಲಿ ಕಾಣಬಹುದು.


ಸಿಜಿಐ ಪ್ರಭಾವ ಹೇಗಿದೆ?

ಇತ್ತೀಚಿನ ವರ್ಷಗಳಲ್ಲಿ ಸ್ಟುಡಿಯೋಗಳು ಮತ್ತು ಚಲನಚಿತ್ರ ನಿರ್ಮಾಪಕರು ಸಿಜಿಐ ಅನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಿಜಿಐ ಬಳಕೆಯಿಂದ ನಿಜವಾದ ಅನುಭವ, ಸಂತೃಪ್ತಿ ಕಲಾವಿದನಿಗೆ ಸಿಗುವುದಿಲ್ಲ. ಕಲಾವಿದರೊಬ್ಬರ ಪ್ರಕಾರ ಶೂಟಿಂಗ್ ವೇಳೆ ನಾನು ಜೆಟ್ ಗಳಲ್ಲಿ ಹಾರಲು ಬಯಸಿದರೆ ಸಿಜಿಐನಲ್ಲಿ ಜೆಟ್‌ಗಳೇ ಇರುವುದಿಲ್ಲ ಎನ್ನುತ್ತಾರೆ. ಈ ಹೇಳಿಕೆ ಚಿತ್ರರಂಗದ ಮಾರುಕಟ್ಟೆಯಲ್ಲಿ ಬಹುದೊಡ್ಡ ಪ್ರಭಾವವನ್ನು ಬೀರಿದೆ. ಯಾಕೆಂದರೆ ಚಿತ್ರಗಳಲ್ಲಿ ನೋಡುವ ದೃಶ್ಯಗಳು ಯಾವುದು ನಿಜವಲ್ಲ ಎಂದು ಪ್ರೇಕ್ಷಕರಿಗೆ ಗೊತ್ತಾದರೆ ಅವರು ಚಿತ್ರದ ಮೇಲಿನ ಆಸಕ್ತಿ ಕಳೆದುಕೊಳ್ಳಬಹುದು ಎನ್ನುವ ವಾದವೂ ಇದೆ.

ಇದನ್ನೂ ಓದಿ: Munjya Teaser: ʻಮುಂಜ್ಯಾʼ ಟೀಸರ್‌ ಔಟ್‌; ಇದು ಭಾರತದ ಮೊದಲ CGI ಚಿತ್ರ!

ಸಿಜಿಐನ ಭವಿಷ್ಯವೇನು?

ಸಿಜಿಐ ಭವಿಷ್ಯವು ಸ್ಟುಡಿಯೋದ ಮಿತಿಯಲ್ಲಿರುವುದು ಸ್ಪಷ್ಟ. ಚಿತ್ರೀಕರಣದಲ್ಲಿ ಈಗ ಅದ್ಧೂರಿ ಬಜೆಟ್‌ಗಳ ಯುಗವು ಕ್ಷೀಣಿಸುತ್ತಿದೆ. ಆದರೆ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನೈಜ ಸಮಯದ ಫೋಟೊರಿಯಾಲಿಸ್ಟಿಕ್ ಹಿನ್ನೆಲೆಗಳನ್ನು ಪ್ರದರ್ಶಿಸುವ ಎಲ್ಇಡಿ ಪರದೆಗಳನ್ನು ಒಳಗೊಂಡಿರುವ ವರ್ಚುವಲ್ ಸೆಟ್ ಗಳ ಆಗಮನವು ಅಭೂತಪೂರ್ವ ಉನ್ನತ ಗುಣಮಟ್ಟದ ಸಿಜಿಐ ಯುಗವನ್ನು ಸೂಚಿಸುತ್ತದೆ.

ದಿ ಬ್ಯಾಟ್‌ಮ್ಯಾನ್, ಡ್ಯೂನ್ ಮತ್ತು ದಿ ಮ್ಯಾಂಡಲೋರಿಯನ್‌ನಂತಹ ಕೃತಿಗಳಲ್ಲಿ ಈ ನವೀನ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸುವ ಗ್ರೀಗ್ ಫ್ರೇಸರ್‌ನಂತಹ ಸಿನಿಮಾಟೋಗ್ರಾಫರ್‌ಗಳು ಮುಂಚೂಣಿಯಲ್ಲಿದ್ದಾರೆ.

Continue Reading
Advertisement
Radhika Merchant
ಪ್ರಮುಖ ಸುದ್ದಿ8 mins ago

Radhika Merchant : ಅನಂತ್​​ ಅಂಬಾನಿ- ರಾಧಿಕಾ ಮರ್ಚೆಂಟ್​ ವಿವಾಹದ ಸ್ಥಳ ಬಹಿರಂಗ; ಇಲ್ಲಿದೆ ವಿವರ

Suspicious Death Advocate Chaitra Gowda Case
ಬೆಂಗಳೂರು27 mins ago

Suspicious Death: ಸಿಸಿಬಿ ತೆಕ್ಕೆಗೆ ವಕೀಲೆ ಚೈತ್ರಾ ಡೆತ್ ಕೇಸ್; 15 ದಿನಗಳ ಸಿಸಿಟಿವಿ ಪರಿಶೀಲನೆ

Star Fashion
ಫ್ಯಾಷನ್54 mins ago

Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

Health Insurance
ಮನಿ-ಗೈಡ್1 hour ago

Health Insurance: ಕ್ಯಾಶ್​ಲೆಸ್​ ಕ್ಲೈಮ್‌ ಗಳಿಗೆ ಆಸ್ಪತ್ರೆಯಲ್ಲಿ ಇನ್ನು ಹೆಚ್ಚು ಹೊತ್ತು ಕಾಯಬೇಕಿಲ್ಲ; ಇಲ್ಲಿದೆ ಹೊಸ ನಿಯಮ

First successful TAVR surgery in the state at Fortis Hospital
ಬೆಂಗಳೂರು1 hour ago

Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

MLA Belur Gopalakrishna election campaign for Congress candidates at ripponpete
ರಾಜಕೀಯ1 hour ago

MLC Election: ವಿಧಾನಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ಬೇಳೂರು ಗೋಪಾಲಕೃಷ್ಣ ಮತಯಾಚನೆ

Vijayanagara News Distribute good quality sowing seeds and fertilizers says Tehsildar Amaresh G K
ವಿಜಯನಗರ1 hour ago

Vijayanagara News: ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿ: ತಹಸೀಲ್ದಾರ್‌ ಅಮರೇಶ್

Vishwadarshan Education Institute President Hariprakash konemane spoke in Training Workshop for Vishwadarshan Central School Teachers at Yallapura
ಉತ್ತರ ಕನ್ನಡ1 hour ago

Uttara Kannada News: ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮುಂಚೂಣಿ: ಹರಿಪ್ರಕಾಶ್‌ ಕೋಣೆಮನೆ

indo Chaina border
ದೇಶ1 hour ago

Indo China Border : ಸಿಕ್ಕಿಂನಿಂದ 150 ಕಿ.ಮೀ ದೂರದಲ್ಲಿ ಚೀನಾದಿಂದ ಅತ್ಯಾಧುನಿಕ ಯುದ್ಧ ವಿಮಾನ ನಿಯೋಜನೆ

Prevention Of Obesity
ಆರೋಗ್ಯ1 hour ago

Prevention Of Obesity: ಆರೋಗ್ಯಪೂರ್ಣ ಜೀರ್ಣಕ್ರಿಯೆ ಮೂಲಕ ಬೊಜ್ಜು ನಿವಾರಣೆ ಸಾಧ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ6 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌