Places To Visit In July : ಜುಲೈ ತಿಂಗಳಲ್ಲಿ ಸುಮಧುರ ಪ್ರವಾಸಕ್ಕೆ ಸೂಕ್ತ ಸ್ಥಳಗಳಿವು... - Vistara News

ಪ್ರವಾಸ

Places To Visit In July : ಜುಲೈ ತಿಂಗಳಲ್ಲಿ ಸುಮಧುರ ಪ್ರವಾಸಕ್ಕೆ ಸೂಕ್ತ ಸ್ಥಳಗಳಿವು…

ಈ ಜುಲೈ ತಿಂಗಳಲ್ಲಿ ಪ್ರವಾಸ (Places To Visit In July ) ಹೋಗುವ ಬಗ್ಗೆ ಪ್ಲಾನಿಂಗ್‌ ಮಾಡುತ್ತಿದ್ದೀರೇ? ಈ ತಿಂಗಳಲ್ಲಿ ಯಾವ ಸ್ಥಳಕ್ಕೆ ಹೋಗುವುದು ಸೂಕ್ತ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

tourist places for july
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರವಾಸದ ಸೂಕ್ತ ಸ್ಥಳಗಳು:

ಮಳೆಗಾಲ ಆರಂಭವಾಗಿದೆ. ಈ ಮುಂಗಾರಿನಲ್ಲಿ ಜಾಲಿ ರೈಡ್‌ ಹೋಗಿ ಒಂದಿಷ್ಟು ದಿನ ಪ್ರವಾಸದ ( Places To Visit In July ) ಮೂಡ್‌ನಲ್ಲಿದ್ದುಬರಬೇಕು ಎನ್ನುತ್ತದೆ ಅನೇಕರ ಮನಸ್ಸು. ಎಲ್ಲೆಡೆ ಹಸಿರು ಕಂಗೊಳಿಸುವ ಈ ಸಮಯದಲ್ಲಿ ಯಾವ್ಯಾವ ಸ್ಥಳಗಳಿಗೆ ಪ್ರವಾಸ ಹೋಗಬಹುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಇದ್ದಿರಬಹುದು. ಅದಕ್ಕೆಂದೇ ನಾವಿಲ್ಲಿ ಒಂದಿಷ್ಟು ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

ಲೇ ಲಡಾಕ್‌

Leh Ladakh


ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಲೇ ಲಡಾಕ್‌ನ್ನು ಭೇಟಿ ನೀಡುವುದಕ್ಕೆ ಇದು ಸೂಕ್ತ ಸಮಯ. ಟಿಬೆಟಿಯನ್‌ ಬೌದ್ಧ ಮಠಗಳಿಂದ ತುಂಬಿರುವ ಲಡಾಕ್‌ನಲ್ಲಿ ಪಾಂಗಾಂಗ್‌ ಸರೋವರ, ಪರ್ವತ ಶ್ರೇಣಿ ಎಲ್ಲವೂ ನಿಮ್ಮನ್ನು ಸೆಳೆಯುತ್ತದೆ. ಅದರ ಜತೆಗೆ ನುಬ್ರಾ ಕಣಿವೆಗ ಕೂಡ ಲೇ ಲಡಾಕ್‌ ಸನಿಹದಲ್ಲೇ ಇದ್ದು, ಅದಕ್ಕೂ ಕೂಡ ನೀವು ಭೇಟಿ ನೀಡಬಹುದು. ಟ್ರೆಕ್ಕಿಂಗ್‌, ಮೌಂಟೇನ್‌ ಬೈಕಿಂಗ್‌, ಜೀಪ್‌ ಸಫಾರಿ, ಮೋಟಾರ್‌ ಸೈಕಲ್‌ ರೋಡ್‌ ಟ್ರಿಪ್‌ ಸೇರಿ ಇನ್ನಷ್ಟು ರೀತಿಯ ಸಾಹಸಮಯ ಕೆಲಸಗಳನ್ನು ನೀವಿಲ್ಲಿ ಮಾಡಬಹುದು. ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅದು ಜೂನ್‌ನಿಂದ ಸೆಪ್ಟೆಂಬರ್‌.

ಇದನ್ನೂ ಓದಿ: Tiger Sighting: ಹುಲಿಯ ಲಂಗೂರ್‌ ಬೇಟೆ, ಪ್ರವಾಸಿಗರಿಗೆ ಕಂಡ ಅಪರೂಪದ ದೃಶ್ಯ

ಸ್ಪಿತಿ ಕಣಿವೆ

Spiti Valley


ಹಿಮಾಚಲ ಪ್ರದೇಶದಲ್ಲಿರುವ ಸ್ಪಿತಿ ಕಣಿವೆ ಕೂಡ ಈ ತಿಂಗಳಲ್ಲಿ ಪ್ರವಾಸಕ್ಕೆ ಉತ್ತಮ ಆಯ್ಕೆಯಾಗಿದೆ. ಹಿಮಗಳಿಂದ ಆವೃತವಾಗಿರುವ ಪರ್ವತಗಳ ವಿಹಂಗಮ ನೋಟವನ್ನು ನೀವು ಇಲ್ಲಿಂದ ಕಾಣಬಹುದು. ವರ್ಷದ ಆರು ತಿಂಗಳುಗಳ ಕಾಲ ಮಾತ್ರವೇ ಇಲ್ಲಿಗೆ ಭೇಟಿ ನೀಡಲು ಸಾಧ್ಯ. ಉಳಿದ ಆರು ತಿಂಗಳು ಇಲ್ಲಿಗೆ ರಸ್ತೆ ಸಂಪರ್ಕವೇ ಕಡಿತವಾಗಿರುತ್ತದೆ. ಕಡಿಮೆ ಜನಸಂಖ್ಯೆಯಿರುವ ಈ ಕಣಿವೆಯಲ್ಲಿ ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ನೀವು ಇಲ್ಲಿ ಟ್ರೆಕ್ಕಿಂಗ್‌ ಮಾಡಬಹುದಾಗಿದೆ. ಅದಷ್ಟೇ ಅಲ್ಲದೆ ಕ್ಯಾಂಪಿಂಗ್‌, ಮೋಟಾರ್‌ ಬೈಕ್‌ ರೋಡ್‌ ಟ್ರಿಪ್‌, ರಿವರ್‌ ರಾಫ್ಟಿಂಗ್‌, ಯಾಕ್‌ ಸಫಾರಿ ಸೇರಿ ವಿವಿಧ ರೀತಿಯ ಸಾಹಸಗಳನ್ನು ಮಾಡಬಹುದು. ಸ್ಥಳೀಯ ಟೀ ಶಾಪಿಂಗ್‌, ಹಿಮ ಚಿರತೆಗಳನ್ನು ನೋಡುವುದನ್ನು ಕೂಡ ಮಿಸ್‌ ಮಾಡಿಕೊಳ್ಳಬಾರದು. ಇಲ್ಲಿಗೆ ಭೇಟಿ ನೀಡಲು ಮೇ ಇಂದ ಅಕ್ಟೋಬರ್‌ವರೆಗೆ ಸೂಕ್ತ ಸಮಯವಾಗಿದೆ.

ಕೊಡೈಕೆನಾಲ್‌

Kodaikanal


ತಮಿಳುನಾಡಿನ ಪ್ರಸಿದ್ಧ ಕೊಡೈಕೆನಾಲ್‌ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಹನಿಮೂನ್‌ ತಾಣಗಳಲ್ಲಿ ಒಂದಾಗಿದೆ. ಲೇಕ್‌ಸೈಡ್‌ ರೆಸಾರ್ಟ್‌ಗಳಿಂದಲೇ ತುಂಬಿಕೊಂಡಿರುವ ಈ ಪಟ್ಟಣದಲ್ಲಿ ನೀವು ಮಂಜು ತುಂಬಿದ ಬೆಟ್ಟಗಳನ್ನು, ಜಲಪಾತಗಳನ್ನು ಕಾಣಬಹುದು. ಪಳನಿ ಬೆಟ್ಟಗಳ ಇಳಿಜಾರಿನಲ್ಲಿರುವ ಈ ಪಟ್ಟಣ ಸಮುದ್ರ ಮಟ್ಟದಿಂದ 7200 ಅಡಿ ಎತ್ತರದಲ್ಲಿದೆ. ಇಲ್ಲಿ ನೀವು ಬೆಟ್ಟಗಳನ್ನು ಹತ್ತುವುದರೊಂದಿಗೆ ಸೈಕ್ಲಿಂಗ್‌, ಹೈಕಿಂಗ್‌, ಟ್ರೆಕ್ಕಿಂಗ್‌ ಮಾಡಬಹುದಾಗಿದೆ.

ಇದನ್ನೂ ಓದಿ: Free Bus Service: ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು; ಪ್ರವಾಸೋದ್ಯಮಕ್ಕೆ ಸಿಕ್ಕಿತು ʼಶಕ್ತಿʼ

ಕೊಡಗು

Abbey Falls kodagu


ಕರ್ನಾಟಕದಲ್ಲಿ ನೀವು ಜುಲೈ ತಿಂಗಳಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಲ್ಲಿ ಒಂದೆಂದರೆ ಅದು ಕೊಡಗು. ಹಸಿರೇ ತುಂಬಿರುವ ಈ ಪುಟ್ಟ ಪಟ್ಟಣದಲ್ಲಿ ನೀವು ನಿಸರ್ಗ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಪುಟ್ಟ ಪುಟ್ಟ ಬೆಟ್ಟಗಳು, ಅದನ್ನು ಆವರಿಸಿಕೊಂಡಿರುವ ಮಂಜು ಎಲ್ಲವೂ ನಿಮ್ಮನ್ನು ಆಕರ್ಷಿಸುತ್ತದೆ. ಇಲ್ಲಿ ಅತ್ಯದ್ಭುತ ರೆಸಾರ್ಟ್‌ಗಳೂ ಇದ್ದು, ನೀವು ಒಂದೆರೆಡು ದಿನಗಳ ಮಟ್ಟಿಗೆ ಅರಾಮಾವಾಗಿ ಇಲ್ಲಿದ್ದುಬರಬಹುದು. ಇಲ್ಲಿ ಆನೆ ಸವಾರಿ, ರಿವರ್‌ ರಾಫ್ಟಿಂಗ್‌, ಟ್ರೆಕ್ಕಿಂಗ್‌, ಕ್ಯಾಂಪಿಂಗ್‌, ಬೋಟಿಂಗ್‌, ಜೀಪ್‌ ಸಫಾರಿಯನ್ನು ನೀವು ಮಾಡಬಹುದು.

ಪುಷ್ಪಗಳ ಕಣಿವೆ

Valley of flowers


ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಪುಷ್ಪಗಳ ಕಣಿವೆಯಿದೆ. ಇದು ಪ್ರಸಿದ್ಧ ಋಷಿಕೇಶದಿಂದ ಸರಿಸುಮಾರು 300 ಕಿ.ಮೀ ದೂರದಲ್ಲಿದೆ. ಜುಲೈ ತಿಂಗಳಲ್ಲಿ ಈ ಕಣಿವೆ ಹೂವುಗಳಿಂದ ತುಂಬಿರುತ್ತದೆ. ಈ ಸಮಯದಲ್ಲಿ ಕಣಿವೆ ನೋಡುವುದಕ್ಕೆ ರತ್ನಗಂಬಳಿ ಹೊದ್ದುಕೊಂಡಂತೆ ಕಾಣಿಸುತ್ತದೆ. ಕಾಡು ಗುಲಾಬಿ, ನೀಲಿ ಕೋರಿಡಾಲಿಸ್‌, ಸ್ಯಾಕ್ಸಿಫ್ರೇಜ್‌, ಜೆರೇನಿಯಂನಂತಹ ಹೂವುಗಳನ್ನು ನೀವಿಲ್ಲಿ ಕಾಣಬಹುದು. ಪರ್ವತಾರೋಹಿ ಫ್ರಾಂಕ್‌ ಎಸ್‌ ಸ್ಮಿತ್‌ ಅವರು 1931ರಲ್ಲಿ ಈ ಕಣಿವೆಯನ್ನು ಮೊದಲಿಗೆ ಕಂಡುಕೊಂಡರು. ನಂತರ ಅದನ್ನು ವಿಶ್ವ ಪರಂಪರೆಯ ತಾಣ ಎಂದು ಘೋಷಿಸಲಾಯಿತು. ಇದು ಔಷಧೀಯ ಗಿಡಮೂಲಿಕೆಗಳ ವಿಲಕ್ಷಣ ಪ್ರಭೇದಗಳಿಗೆ ಹೆಸರುವಾಸಿಯಾಗಿದೆ. ಈ ಕಣಿವೆಯಿಂದ ಹನುಮಂತನು ಅನಾರೋಗ್ಯದಿಂದ ಬಳಲುತ್ತಿರುವ ಲಕ್ಷ್ಮಣನಿಗೆ ಸಂಜೀವನಿಯನ್ನು ತಂದನು ಎಂದು ನಂಬಲಾಗಿದೆ.

ಇದನ್ನೂ ಓದಿ: Scotland Tour: ಸರ್ಕಾರಿ ವಿವಿಯ 15 ವಿದ್ಯಾರ್ಥಿಗಳಿಗೆ ಸ್ಕಾಟ್ಲೆಂಡ್‌ ಪ್ರವಾಸ ಭಾಗ್ಯ!

ಲೋನಾವಾಲಾ

Lonavala mumbai


ವಾಣಿಜ್ಯ ನಗರಿ ಮುಂಬೈನಲ್ಲಿರುವವರಿಗೆ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ಲೋನಾವಾಲಾ. ಜಲಪಾತಗಳು, ಸರೋವರಗಳು ಮತ್ತು ಬೆಟ್ಟಗಳಿರುವ ಸ್ಥಳವಿದು. ಇಲ್ಲಿ ನೀವು ಕ್ಯಾಂಪಿಂಗ್‌, ಟ್ರೆಕ್ಕಿಂಗ್‌ ಜತೆ ಹಲವು ಸಾಹಸ ಕ್ರೀಡೆಗಳನ್ನು ಆಡಬಹುದಾಗಿದೆ. ಭಾಜಾ ಗುಹೆಗಳು, ಬುಶಿ ಅಣೆಕಟ್ಟು, ಕಾರ್ಲಾ ಗುಹೆಗಳು, ರಾಜ್ಮಾಚಿ ಕೋಟೆ, ರೈವುಡ್ ಸರೋವರ ಇತ್ಯಾದಿಗಳು ಲೋನಾವಾಲಾದ ಜನಪ್ರಿಯ ಪ್ರವಾಸಿ ಆಕರ್ಷಣೆಗಳಾಗಿವೆ. ಇಲ್ಲಿನ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮತ್ತು ವ್ಯಾಕ್ಸ್‌ ಮ್ಯೂಸಿಯಂ ಅನ್ನು ನೀವು ವೀಕ್ಷಿಸಲೇಬೇಕು. ವರ್ಷ ಪೂರ್ತಿ ಈ ಸ್ಥಳಕ್ಕೆ ನೀವು ಭೇಟಿ ನೀಡಬಹುದಾಗಿದೆ.

ಜೋಗ ಜಲಪಾತ

Jog Falls


ಮಲೆನಾಡಿನ ಮಡಿಲು ಶಿವಮೊಗ್ಗದ ಸಾಗರದಲ್ಲಿರುವ ಜೋಗವನ್ನು ಈ ತಿಂಗಳಲ್ಲಿ ನೀವು ಭೇಟಿ ನೀಡಬಹುದು. ಭಾರತದ ಅತಿ ಎತ್ತರದ ಜಲಪಾತವಾಗಿರುವ ಇಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಾಳೆ. 830 ಅಡಿಗಳಷ್ಟು ಆಳಕ್ಕೆ ಬೀಳುವ ನೀರನ್ನು ನೋಡುವುದಕ್ಕೇ ಸುಂದರವಾಗಿರುತ್ತದೆ. ಮಳೆಗಾಲ ಶುರುವಾದ ನಂತರ ಶರಾವತಿಯಲ್ಲಿ ನೀರು ಹೆಚ್ಚಾಗುವುದರಿಂದ ಜಲಪಾತದ ಸೌಂದರ್ಯ ನೋಡುವುದಕ್ಕೆ ಸುಂದರವಾಗಿರುತ್ತದೆ. ಜೋಗ ಸುತ್ತಲೂ ಹಸಿರೇ ತುಂಬಿರುವುದರಿಂದ ನಿಸರ್ಗ ಪ್ರಿಯರಿಗೆ ಈ ಜಾಗ ತುಂಬಾನೇ ಇಷ್ಟವಾಗುತ್ತದೆ.

ಅಮರನಾಥ

amarnath ice lingam


ಶಿವ ಭಕ್ತರಿಗೆ ಅತ್ಯಂತ ಪ್ರಿಯವಾದ ದಿವ್ಯ ಕ್ಷೇತ್ರವೆಂದರೆ ಅದು ಅಮರನಾಥ. ಇಲ್ಲಿ ಮಂಜುಗಡ್ಡೆಯಿಂದಲೇ ಶಿವಲಿಂಗದಂತರ ರೂಪ ನಿರ್ಮಾಣವಾಗುತ್ತದೆ. ಭಾರತದ ಪ್ರಮುಖ ತೀರ್ಥಯಾತ್ರೆಯ ಸ್ಥಳಗಳಲ್ಲಿ ಇದೂ ಒಂದು. ಇದನ್ನು ನೋಡುವುದಕ್ಕೆ ಮೇ ತಿಂಗಳಿಂದ ಸೆಪ್ಟೆಂಬರ್‌ ಸೂಕ್ತವಾದ ಸಮಯವಾಗಿದೆ.

ಇದನ್ನೂ ಓದಿ: Travel Tips: Beach Tourism: ಬ್ಲೂ ಸರ್ಟಿಫಿಕೇಶನ್‌ ಪಡೆದ ಭಾರತದ ಸ್ವಚ್ಛ ಬೀಚ್‌ಗಳಿವು! (ಭಾಗ 2)

ಉದಯ್‌ಪುರ

udaipur


ರಾಜಸ್ಥಾನ ದೇಶದಲ್ಲೇ ಅತ್ಯಂತ ಕಡಿಮೆ ಮಳೆ ಕಾಣುವ ರಾಜ್ಯಗಳಲ್ಲಿ ಒಂದು. ಮಳೆಗಾಲದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಸರೋವರಗಳ ನಗರವಾರ ಉದಯಪುರದ ರೊಮ್ಯಾಂಟಿಕ್‌ ನಗರ ಎಂದು ಕರೆಸಿಕೊಂಡಿದೆ. ಸಮುದ್ರ ಮಟ್ಟದಿಂದ 3100ಅಡಿ ಎತ್ತರದಲ್ಲಿರುವ ಸಜ್ಜನ್‌ಗಡ ಅರಮನೆಯನ್ನು ನೀವಿಲ್ಲಿ ಕಾಣಬಹುದು. ಈ ಅರಮನೆಯನ್ನು ಮಾನ್ಸೂನ್‌ ಪ್ಯಾಲೇಸ್‌ ಎಂದೂ ಕರೆಯಲಾಗುತ್ತದೆ. ಅಲ್ಲಿಂದ ನಗರ ಮತ್ತು ಸರೋವರಗಳ ವಿಹಂಗಮ ನೋಟವನ್ನೂ ಕಾಣಬಹುದು. ಇಲ್ಲೊ ಬೋಟಿಂಗ್‌, ಕೇಬಲ್‌ ಕಾರ್‌ ರೋಪ್‌ವೇ ಕೂಡ ಇವೆ. ಇಲ್ಲಿ ನೀವು ಕರಕುಶಲ ವಸ್ತುಗಳನ್ನು ಶಾಪಿಂಗ್‌ ಮಾಡಬಹುದು.

ಕೇರಳ

kerala


ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳಕ್ಕೆ ಈ ಸಮಯದಲ್ಲಿ ನೀವು ಭೇಟಿ ನೀಡಬೇಕು. ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಮಳೆಗಾಲದ ಸಮಯದಲ್ಲಿ ಪೂರ್ತಿ ರಾಜ್ಯವೇ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿ ಬೋಟಿಂಗ್‌ ಮಾಡಬಹುದು. ಹಾಗೆಯೇ ಆಯುರ್ವೇದ ಸ್ಪಾಗಳು ಕೂಡ ಇರುವುದರಿಂದ ದೇಹಕ್ಕೆ ಸ್ವಲ್ಪ ವಿಶ್ರಾಂತಿಯನ್ನೂ ನೀಡಬಹುದು. ಇಲ್ಲಿನ ಆಹಾರ ಪದ್ಧತಿ ಕೂಡ ನಿಮಗೆ ಇಷ್ಟವಾಗುತ್ತದೆ. ಬ್ಯಾಕ್‌ವಾಟರ್‌ ಕ್ರೂಸ್‌, ಹೌಸ್‌ಬೋಟ್‌ ಸ್ಟೇಗೆ ಕೇರಳ ಪ್ರಸಿದ್ಧ.

ಪಶ್ಚಿಮ ಸಿಕ್ಕಿಂ

Buddha statue West Sikkim


ಪಶ್ಚಿಮ ಸಿಕ್ಕಿಂ ಕಾಂಚನಜುಂಗಾ ಪರ್ವತದ ತಪ್ಪಲಿನಲ್ಲಿರುವ ಸುಂದರ ಭೂಮಿ. ಬೌದ್ಧ ಮಠವಿರುವ ಈ ಪ್ರದೇಶದಲ್ಲಿ ದಟ್ಟವಾದ ಕಾಡನ್ನು ನೀವು ಕಾಣಬಹುದು. ಸುತ್ತಲೂ ಬೆಟ್ಟಗಳಿಂದ ತುಂಬಿರುವ ಈ ಪ್ರದೇಶ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇಲ್ಲಿ ಕಾಡಿನ ನಡುವೆ ಕ್ಯಾಂಪಿಂಗ್‌ ಮಾಡಬಹುದು. ಹಾಗೆಯೇ ಟ್ರೆಕ್ಕಿಂಗ್‌ ಮಾಡುವುದಕ್ಕೂ ಇಲ್ಲಿ ಸೂಕ್ತವಾದ ಸ್ಥಳಗಳಿವೆ. ಜುಲೈ ತಿಂಗಳಲ್ಲಿ ಪ್ರವಾಸ ಮಾಡುವುದಕ್ಕೆ ಸೂಕ್ತವಾದ ಸ್ಥಳವಿದು.

ಇದನ್ನೂ ಓದಿ: Actor Dhanush: ತಲೆ ಬೊಳಿಸಿಕೊಂಡ ಸೂಪರ್ ಸ್ಟಾರ್ ಧನುಷ್; ಹೊಸ ಲುಕ್‌ ಯಾತಕ್ಕಾಗಿ?

ಮೌಂಟ್‌ ಅಬು

Mount Abu Rajasthan


ರಾಜಸ್ಥಾನದ ಏಕೈಕ ಗಿರಿಧಾಮವೆಂದರೆ ಅದು ಮೌಂಟ್‌ ಅಬು. ಈ ಗಿರಿಧಾಮದಲ್ಲಿ ವೈವಿಧ್ಯಮಯ ಸಸ್ಯಗಳನ್ನು ಕಾಣಬಹುದು. ಶ್ರೀಮಂತ ಇತಿಹಾಸವನ್ನು ಹೊಂದಿರುವ ಈ ಸ್ಥಳದಲ್ಲಿ ನೀವು ಅತ್ಯಂತ ಅದ್ಭುತವಾದ ವಾಸ್ತುಶಿಲ್ಪವನ್ನು ನೋಡಬಹುದು. ಪ್ರಾಚೀನ ಕಟ್ಟಡಗಳಿರುವ ಈ ಸ್ಥಳದಲ್ಲಿ ಸಾಹಸಮಯ ಕ್ರೀಡೆಗಳಿಗೂ ಅವಕಾಶವಿದೆ. ಬೋಟಿಂಗ್, ಹೈಕಿಂಗ್‌, ಟ್ರೆಕ್ಕಿಂಗ್‌, ರಾಕ್‌ ಕ್ಲೈಂಬಿಂಗ್‌, ಕ್ಯಾಂಪಿಂಗ್‌ ಅನ್ನು ನೀವಿಲ್ಲಿ ಮಾಡಬಹುದು. ಹಾಗೆಯೇ ವಿಶೇಷ ರೀತಿಯ ವಸ್ತುಗಳ ಶಾಪಿಂಗ್‌ ಅನ್ನೂ ಮಾಡಬಹುದಾಗಿದೆ.

ಓರ್ಚಾ

Orchha Madhya Pradesh


ಮಧ್ಯಪ್ರದೇಶದ ಓರ್ಚಾ ಕೂಡ ಪ್ರವಾಸಿಗರು ನೋಡಬೇಕಾದ ಒಂದು ಅದ್ಭುತ ಸ್ಥಳ. ಐತಿಹಾಸಿಕ ಅರಮನೆಗಳು ಮತ್ತು ದೇವಾಲಯಗಳಿಂದ ತುಂಬಿರುವ ಈ ನಗರ ಮಳೆಗಾಲದ ಸಮಯದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಹಳ್ಳಿಗಾಡಿನ ಸೊಬಗಳನ್ನು ನೀವಿಲ್ಲಿ ಕಾಣಬಹುದು. ಏಳು ಹೊಳೆಗಳು ಈ ಓರ್ಚದಲ್ಲಿ ಸಂಗಮಿಸುತ್ತವೆ. ಇಲ್ಲಿ ರಿವರ್‌ ರಾಫ್ಟಿಂಗ್‌, ಜಂಗಲ್‌ ಸಫಾರಿ, ಕಯಾಕಿಂಗ್‌, ಬೋಟಿಂಗ್‌ ಮಾಡಬಹುದು. ಹಾಗೆಯೇ ಇಲ್ಲಿನ ಲೈಟ್‌ ಮತ್ತು ಸೌಂಡ್‌ ಶೋಗೂ ಭೇಟಿ ಕೊಟ್ಟು ಬರಬಹುದು.

ಮಲ್ಶೆಜ್ ಘಾಟ್‌

Malshej Ghat Maharashtra


ಮಹಾರಾಷ್ಟ್ರದ ಮಲ್ಶೆಜ್ ಘಾಟ್‌ ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಗಿರಿಧಾಮವಾಗಿದೆ. ಮುಂಬೈಗೆ ಸಮೀಪದಲ್ಲಿರುವ ಈ ಗಿರಿಧಾಮದಲ್ಲಿ ಮಳೆಗಾಲದ ಸಮಯದಲ್ಲಿ ಹಸಿರು ತುಂಬಿದ ನಿಸರ್ಗ ಹಾಗೂ ಜಲಪಾತಗಳನ್ನು ಕಾಣಬಹುದು. ಇದು ಹಲವು ರೀತಿಯ ಸಸ್ಯಗಳು ಮತ್ತು ಪ್ರಾಣಿಗಳ ನೆಲೆಯೂ ಹೌದು. ಫ್ಲೆಮಿಂಗೋಗಳು ಮಳೆಗಾಲದಲ್ಲಿ ಯುರೋಪ್‌ನಿಂದ ಇಲ್ಲಿಗೆ ಬರುತ್ತವೆ. ಟ್ರೆಕ್ಕಿಂಗ್‌, ರಾಕ್ ಕ್ಲೈಂಬಿಂಗ್, ಹೈಕಿಂಗ್‌ ಮಾಡುವುದಕ್ಕೂ ಇಲ್ಲಿ ಅವಕಾಶವಿದೆ. ಇಲ್ಲಿ ಒಂದೆರೆಡು ದಿನ ನೆಮ್ಮದಿಯಾಗಿ ಇದ್ದು ಹೋಗುತ್ತೇವೆ ಎನ್ನುವಂತವರಿಗೆ ಹಲವಾರು ರೆಸಾರ್ಟ್‌ಗಳು ಕೂಡ ಇವೆ.

ಇದನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತಕ್ಕೆ ಮಾನವ ಪ್ರಮಾದವೇ ಕಾರಣ ಎಂದ ತನಿಖೆ, ಯಾರು ಆ ವ್ಯಕ್ತಿ?

ಪಂಚಗನಿ

Panchgani Maharashtra


ಮಹಾರಾಷ್ಟ್ರದ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ಪಂಚಗನಿ. ಪಂಚಗನಿ ಮಹಾಬಲೇಶ್ವರ ದೇಗುಲದ ಸಮೀಪದಲ್ಲಿರುವ ಜನಪ್ರಿಯ ಗಿರಿಧಾಮವಿದು. ಇಲ್ಲಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಬಹುದಾಗಿದೆ. ಭಾರೀ ಮಳೆ ಬೀಳುವ ಪ್ರದೇಶವಾಗಿರುವ ಈ ಸ್ಥಳ ಮಂಜಿನಿಂದ ಮುಚ್ಚಿಕೊಂಡಿರುತ್ತದೆ. ಆ ರೀತಿಯ ವಾತಾವರಣವನ್ನು ಇಷ್ಟಪಡುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಟ್ರೆಕ್ಕಿಂಗ್‌, ಪ್ಯಾರಾಗ್ಲೈಡಿಂಗ್, ಸ್ಟ್ರಾಬೆರಿ ಶಾಪಿಂಗ್ ಸೇರಿ ಅನೇಕ ಕೆಲಸಗಳನ್ನು ನೀವಿಲ್ಲಿ ಮಾಡಬಹುದು.

ಚಿರಾಪುಂಜಿ

cherrapunji Meghalaya


ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸ್ಥಳ ಮೇಘಾಲಯದ ಚಿರಾಪುಂಜಿ. ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿರುವ ಇದು ಅತ್ಯಂತ ಸ್ವಚ್ಛ ಸ್ಥಳವೂ ಹೌದು. ಹಚ್ಚ ಹಸಿರು, ಅಲ್ಲಲ್ಲಿ ಕಾಣುವ ಜಲಪಾತಗಳನ್ನು ನೋಡುವುದೇ ಚಂದ. ಮಳೆಗಾಲದಲ್ಲಿ ಈ ಚಿರಾಪುಂಜಿಯ ಸೌಂದರ್ಯ ಇಮ್ಮಡಿಯಾಗಿರುತ್ತದೆ. ಇಲ್ಲಿ ಟ್ರೆಕ್ಕಿಂಗ್‌ ಮಾಡುವುದಕ್ಕೂ ಅವಕಾಶವಿರುತ್ತದೆ.

ಶಿಲ್ಲಾಂಗ್‌

Shillong Meghalaya


ಮೇಘಾಲಯದ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ಶಿಲ್ಲಾಂಗ್‌. ಈಸ್ಟ್‌ನ ಸ್ಕಾಟ್‌ಲ್ಯಾಂಡ್‌ ಎಂದೂ ಇದನ್ನು ಕರೆಯಲಾಗುತ್ತದೆ. ಇಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವುದರಿಂದಾಗಿ ನಿಸರ್ಗ ದೇವತೆ ಹಸಿರು ಹೊದ್ದು ಮಲಗಿರುತ್ತಾಳೆ. ಬೆಟ್ಟಗಳು, ಅವುಗಳಿಂದ ಹರಿಯುವ ಜಲಪಾತಗಳನ್ನು ನೀವಿಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಹಲವಾರು ಸರೋವರಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಲ್ಲಿ ನೀವು ಬೋಟ್‌ ರೈಡ್‌, ಆಂಗ್ಲಿಂಗ್‌, ಟ್ರೆಕ್ಕಿಂಗ್‌, ಮೌಂಟೇನ್‌ ಕ್ಲೈಂಬಿಂಗ್‌ ಮಾಡಬಹುದು. ಅದಷ್ಟೇ ಅಲ್ಲದೆ ವಿಶೇಷವಾದ ಬಟರ್‌ಫ್ಲೈ ಮ್ಯೂಸಿಯಂ ಅನ್ನು ವೀಕ್ಷಿಸಬಹುದು. ಜುಲೈ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ತವಾಂಗ್‌

Tawang Arunachal Pradesh


ಅರುಣಾಚಲ ಪ್ರದೇಶದ ತವಾಂಗ್‌ ಪ್ರವಾಸಿಗರನ್ನು ಸೆಳೆಯುವ ಸ್ಥಳ. ಭಾರತ ಮತ್ತು ಚೀನಾದ ಗಡಿಯಲ್ಲಿ ಕಾಣಿಸಿಕೊಳ್ಳುವ ಈ ತವಾಂಗ್‌ನಲ್ಲಿ ಸುಂದರವಾದ ನಿಸರ್ಗ ಸೌಂದರ್ಯವನ್ನು ನೀವು ಕಾಣಬಹುದು. ಬೌದ್ಧ ಮಠಗಳೂ ಇಲ್ಲಿರುವುದರಿಂದಾಗಿ ನಿಮಗೆ ಆಧ್ಯಾತ್ಮಿಕವಾಗಿಯೂ ಸೆಳೆಯುವ ಸ್ಥಳ ಇದಾಗಿದೆ. ಆರ್ಕಿಡ್‌ ಗಿಡಗಳು ಈ ಪ್ರದೇಶದ ತುಂಬೆಲ್ಲ ಇದ್ದು, ಅದರ ಹೂವುಗಳು ನಿಮ್ಮ ಮನಸೂರೆಗೊಳ್ಳುವುದು ಗ್ಯಾರಂಟಿ. ಇಲ್ಲಿಗೆ ಭೇಟಿ ನೀಡಲು ಜುಲೈ ಸೂಕ್ತ ಸಮಯವಾಗಿದೆ.

ಮಹಾಬಲೇಶ್ವರ

Mahabaleshwar


ಸಹ್ಯಾದ್ರಿ ಶ್ರೇಣಿಯಲ್ಲಿ ಕಾಣಸಿಗುವ ಮತ್ತೊಂದು ಜನಪ್ರಿಯ ಗಿರಿಧಾಮವೆಂದರೆ ಅದು ಮಹಾಬಲೇಶ್ವರ. ಮಹಾರಾಷ್ಟ್ರದಲ್ಲಿರುವ ಈ ಸ್ಥಳದಲ್ಲಿ ಸುತ್ತಮುತ್ತಲಿನ ಬೆಟ್ಟಗಳು ಮತ್ತು ಕಣಿವೆಗಳ ವಿಹಂಗಮ ನೋಟವನ್ನು ನೀವು ಕಾಣಬಹುದು. ಮಳೆಗಾಲದ ಸಮಯದಲ್ಲಿ ಪೂರ್ತಿ ಬೆಟ್ಟಗಳು ಹಸಿರಿನಿಂದ ಕಂಗೊಳಿಸುವುದರ ಜತೆಗೆ ಅಲ್ಲಲ್ಲಿ ಹರಿವ ಜಲಪಾತಗಳು ಮನಸ್ಸಿಗೆ ಮುದ ನೀಡುತ್ತವೆ. ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ನೀವು ಬೋಟ್‌ ರೈಟ್‌, ಟ್ರೆಕ್ಕಿಂಗ್‌ ಮಾಡಬಹುದು. ಹಾಗೆಯೇ ಇಲ್ಲಿ ಬೆಳೆಯುವ ಸ್ಟ್ರಾಬೆರಿಯ ರುಚಿಯನ್ನೂ ನೋಡಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಶ್ಮೀರದಲ್ಲಿ ಜಿ 20 ಪ್ರವಾಸೋದ್ಯಮ ಸಭೆ ಐತಿಹಾಸಿಕ

ಆಗುಂಬೆ

Agumbe


ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಸಿಕೊಳ್ಳುವುದು ಶಿವಮೊಗ್ಗ ಜಿಲ್ಲೆಯಲ್ಲಿರುವ ಆಗುಂಬೆ. ಚಿಕ್ಕ ಹಳ್ಳಿಯಾಗಿರುವ ಇಲ್ಲಿ ಅತ್ಯಧಿಕ ಮಳೆ ಸುರಿಯುತ್ತದೆ. ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ಎರಡನೇ ಪ್ರದೇಶ ಇದಾಗಿದೆ. ಇಲ್ಲಿನಿಂದ ಸೂರ್ಯಾಸ್ತವನ್ನು ನೋಡುವುದು ಒಂದು ಅದ್ಭುತವನ್ನು ನೋಡಿದಂತೆಯೇ ಸರಿ. ಮಳೆಗಾಲಯದಲ್ಲಿ ಈ ಪ್ರದೇಶ ಪೂರ್ತಿಯಾಗಿ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಎಲ್ಲೆಡೆ ಬೆಟ್ಟಗಳಿಂದ ಕೆಳಗೆ ಹರಿಯುವ ನೀರು ಚಿಕ್ಕ ಚಿಕ್ಕ ಜಲಪಾತಗಳಂತೆಯೇ ಕಾಣಿಸಿಕೊಳ್ಳುತ್ತವೆ.

ಖಂಡಾಲಾ

khandala


ಮುಂಬೈಗೆ ಸಮೀಪದಲ್ಲಿರುವ ಮತ್ತೊಂದು ಪ್ರವಾಸಿ ತಾಣವೆಂದರೆ ಅದು ಖಂಡಾಲಾ. ಸಹ್ಯಾದ್ರಿ ತಪ್ಪಲಿನಲ್ಲಿರುವ ಈ ಪ್ರದೇಶದ ಮುಂಬೈ ಜನರಿಗೆ ವಾರಾಂತ್ಯದ ಪ್ರವಾಸಿ ತಾಣವಾಗಿಬಿಟ್ಟಿದೆ. ಹುಲ್ಲಿನ ಬೆಟ್ಟಗಳು, ರಮಣೀಯ ಕಣಿವೆಗಳು, ಪ್ರಶಾಂತರವಾದ ಸರೋವರ ಹಾಗೂ ಅಲ್ಲಲ್ಲಿ ಸಣ್ಣ ಜಲಪಾತಗಳನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ಟ್ರೆಕ್ಕಿಂಗ್‌ ಮಾಡುವುದಕ್ಕೂ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಜೈಪುರ

hawa mahal


ಗುಲಾಬಿ ನಗರವೆಂದೇ ಕರೆಸಿಕೊಳ್ಳುವ ರಾಜಸ್ಥಾನದ ಜೈಪುರಕ್ಕೆ ಒಮ್ಮೆಯಾದರೂ ಭೇಟಿ ನೀಡಿ. ಭಾರತದ ಇತಿಹಾಸದಲ್ಲಿಯೂ ಪ್ರಮುಖ ಪಾತ್ರ ವಹಿಸಿಕೊಂಡಿರುವ ಈ ನಗರದಲ್ಲಿ ಅನೇಕ ಪುಟ್ಟ ಪುಟ್ಟ ಅರಮನೆಗಳು, ಕೋಟೆಗಳು, ವಿಶೇಷ ವಿನ್ಯಾಸದ ಕಟ್ಟಡಗಳನ್ನು ಕಾಣಬಹುದು. ಇದೊಂದು ರೀತಿಯಲ್ಲಿ ರಾಯಲ್‌ ನಗರವೆಂದರೂ ತಪ್ಪಾಗದು. ಮಳೆಗಾಲದ ಜುಲೈ ತಿಂಗಳಲ್ಲಿ ಈ ಪ್ರದೇಶದಲ್ಲಿ ತಂಪಾದ ವಾತಾವರಣವಿರುತ್ತದೆ. ಸುತ್ತಲಿರುವ ಬೆಟ್ಟ ಗುಡ್ಡಗಳು ಹಸಿರಿನಿಂದ ತುಂಬಿರುತ್ತವೆ. ಇಲ್ಲಿಗೆ ಹೋದ ಮೇಲೆ ಇಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ವೀಕ್ಷಿಸಲು ಮರೆಯಬೇಡಿ. ಇಲ್ಲಿ ಹಾಟ್‌ ಏರ್‌ ಬಲೂನ್‌ ರೈಡ್‌, ಆನೆ ಸಫಾರಿ ಸೇರಿ ಅನೇಕ ಸಾಹಸಮಯ ಕ್ರೀಡೆಗಳನ್ನು ನೀವು ಆಡಬಹುದು.

ಕುದುರೆಮುಖ

kudremukh


ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ಕರ್ನಾಟಕದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಕುದುರೆಯ ಮುಖದ ಆಕಾರದಲ್ಲಿ ಇಲ್ಲಿನ ಬೆಟ್ಟ ಇರುವುದರಿಂದ ಸ್ಥಳಕ್ಕೆ ಆ ಹೆಸರು ಬಂದಿದೆ. ಇಲ್ಲಿ ನಿಸರ್ಗ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಸಿಕೊಳ್ಳಬಹುದು. ಸುತ್ತಲೂ ಸುತ್ತುವರಿದುಕೊಳ್ಳುವ ಮಂಜು ನಿಮಗೆ ಸ್ವರ್ಗದಲ್ಲಿ ಇರುವಂತಹ ಅನುಭವವನ್ನು ನೀಡುತ್ತದೆ. ಇಲ್ಲಿ ಟ್ರೆಕ್ಕಿಂಗ್‌ ಮಾಡುವುದಕ್ಕೆ ಅವಕಾಶವಿದೆ.

ಕಾಸ್‌ ಪ್ರಸ್ಥಭೂಮಿ

Kaas Pathar


ಪಮಚಗಣಿಯಲ್ಲಿರುವ ಕಾಸ್‌ ಪ್ರಸ್ಥಭೂಮಿಯನ್ನು 2012ರಲ್ಲಿ ವಿಶ್ವ ನೈಸರ್ಗಿಕ ಪರಂಪರೆಯ ತಾಣ ಎಂದು ಘೋಷಿಸಲಾಗಿದೆ. ಇದು ಸರೋವರಗಳು, ವೈವಿಧ್ಯಮಯ ಹೂವುಗಳು ಮತ್ತು ಚಿಟ್ಟೆಗಳಿಂದ ಕೂಡಿರುವ ಮಾಂತ್ರಿಕ ಸ್ಥಳವಾಗಿದೆ. ಇಲ್ಲಿ ಸುಮಾರು 850 ಜಾತಿಯ ಹೂವುಗಳನ್ನು ನೀವು ಕಾಣಬಹುದಾಗಿದೆ. 1000 ಹೆಕ್ಟೇರ್‌ ಪ್ರದೇಶವನ್ನು ಮೀಸಲು ಪ್ರದೇಶ ಎಂದು ಘೋಷಿಸಲಾಗಿದೆ. ದಿನಕ್ಕೆ ಮೂರು ಸಾವಿರ ಜನರಿಗೆ ಮಾತ್ರ ಈ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ.

FAQ

ಜುಲೈನಲ್ಲಿ ಭಾರತದ ಯಾವ ಭಾಗಕ್ಕೆ ಭೇಟಿ ನೀಡಲು ಉತ್ತಮವಾಗಿದೆ?

ಈ ಜುಲೈ ತಿಂಗಳಲ್ಲಿ ಪ್ರವಾಸ ಹೋಗುವ ಬಗ್ಗೆ ಪ್ಲಾನಿಂಗ್‌ ಮಾಡುತ್ತಿದ್ದೀರೇ? ಈ ತಿಂಗಳಲ್ಲಿ ಯಾವ ಸ್ಥಳಕ್ಕೆ ಹೋಗುವುದು ಸೂಕ್ತ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Trichy Tour: ದಾಂಪತ್ಯದ ಲವಲವಿಕೆಯನ್ನು ಮತ್ತೆ ಜೀವಂತಗೊಳಿಸಲು ತಿರುಚಿರಾಪಳ್ಳಿಗೆ ಹೋಗಿ ಬನ್ನಿ!

ನಿತ್ಯದ ಬದುಕಿನ ಒತ್ತಡದಲ್ಲಿ ದಂಪತಿಗೆ ಪರಸ್ಪರ ಸಮಯ ಕೊಡಲು ಅವಕಾಶವೇ ಸಿಗುವುದಿಲ್ಲ. ಇಂತವರು ಬಿಡುವು ಮಾಡಿಕೊಂಡು ಒಮ್ಮೆ ತಿರುಚಿರಾಪಳ್ಳಿಗೆ (Trichy Tour) ಬಂದರೆ ಬದುಕಿನಲ್ಲಿ ಮತ್ತೆ ಪ್ರೀತಿ ಹುಟ್ಟದೇ ಇರಲು ಸಾಧ್ಯವೇ ಇಲ್ಲ. ಅಂತಹ ರೊಮ್ಯಾಂಟಿಕ್ ಸ್ಥಳಗಳು ಇಲ್ಲಿವೆ.

VISTARANEWS.COM


on

By

Trichy Tour
Koo

ಒಟ್ಟಿಗೆ ಇದ್ದರೂ ಕೆಲಸದ ಒತ್ತಡವನ್ನೆಲ್ಲ ಬದಿಗೊತ್ತಿ ವರ್ಷದಲ್ಲೊಮ್ಮೆಯಾದರೂ ಪತಿ – ಪತ್ನಿ (Couple) ಏಕಾಂತವಾಗಿ ಸಮಯ ಕಳೆಯಬೇಕು ಎಂದು ಬಯಸುವುದು ಸಹಜ. ಇಂಥವರಿಗೆ ಸೂಕ್ತವೆನಿಸುವ ಹಲವಾರು ತಾಣಗಳು ಭಾರತದಲ್ಲಿ (india) ಇದೆ. ಅದರಲ್ಲಿ ತಿರುಚಿರಾಪಳ್ಳಿ (Trichy Tour) ಕೂಡ ಒಂದು.

ತಿರುಚಿರಾಪಳ್ಳಿ ಅಥವಾ ತಿರುಚಿ ಗಡಿಬಿಡಿಯ ಜೀವನದಿಂದ ದೂರವಿರಲು ಬಯಸುವ ದಂಪತಿ ಖಂಡಿತವಾಗಿಯೂ ಭೇಟಿ ನೀಡಬೇಕಾದ ಸ್ಥಳ. ಇಲ್ಲಿನ ಪುರಾತನ ದೇವಾಲಯಗಳು, ಶಾಂತವಾದ ನದಿ, ರುಚಿಕರವಾದ ಆಹಾರ, ಆಳವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಗೆ ಸುಂದರವಾದ ನೈಸರ್ಗಿಕ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದು. ರೋಮ್ಯಾಂಟಿಕ್ ಮತ್ತು ಸಾಹಸಮಯ ಪ್ರವಾಸಗಳಿಗೆ ಸೂಕ್ತವಾಗಿರುವ ತಿರುಚಿಯಲ್ಲಿ ಯಾವುದಾದರೂ ಹಳೆಯ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಕೈ ಹಿಡಿದುಕೊಂಡು ಹೋಗುತ್ತಿರುವಾಗ ಅಥವಾ ನದಿಯ ದಡದಲ್ಲಿ ಒಟ್ಟಿಗೆ ವಿವಿಧ ಭಕ್ಷ್ಯಗಳನ್ನು ಸವಿಯುತ್ತಿರುವಾಗ ನಿಮ್ಮ ಪ್ರೇಮ ಕಥೆಯ ಪ್ರಾರಂಭದ ದಿನಗಳ ನೆನಪು ಚಿಗುರೊಡೆಯದೆ ಇರಲಾರದು.

ತಿರುಚಿ ಎಂದೂ ಕರೆಯಲ್ಪಡುವ ತಿರುಚಿರಾಪಳ್ಳಿಯು ಇತಿಹಾಸ, ಸಂಸ್ಕೃತಿ ಮತ್ತು ಸೌಂದರ್ಯದ ನಗರವಾಗಿದೆ. ಇದು ಭಾರತದ ಅತ್ಯುತ್ತಮ ಪ್ರಣಯ ವಿಹಾರ ತಾಣಗಳಲ್ಲಿ ಒಂದಾಗಿದೆ. ತಮಿಳುನಾಡಿನ ದಕ್ಷಿಣ ರಾಜ್ಯದಲ್ಲಿರುವ ಪ್ರಾಚೀನ ವಾಸ್ತುಶೈಲಿಯು ಶಾಂತವಾದ ನೈಸರ್ಗಿಕ ಭೂದೃಶ್ಯಗಳು ಮತ್ತು ರುಚಿಕರವಾದ ಆಹಾರದೊಂದಿಗೆ ಬೆರೆತಿರುವ ಕೆಲವು ಕ್ಷಣಗಳನ್ನು ಜೀವಂತಗೊಳಿಸುತ್ತದೆ.

ಪ್ರಾಚೀನ ದೇವಾಲಯಗಳು

ಸ್ಥಳದ ಸುತ್ತಲೂ ಹರಡಿರುವ ಹಲವಾರು ದೇವಾಲಯಗಳಿಗಿಂತ ಹೆಚ್ಚು ಆಕರ್ಷಕವಾದದ್ದು ಯಾವುದು? ತಿರುಚ್ಚಿಯು ಅನೇಕ ಪವಿತ್ರ ದೇವಾಲಯಗಳೊಂದಿಗೆ ಅಗಾಧವಾದ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಅವುಗಳಲ್ಲಿ ದೈವಿಕ ವೈಭವ ಮತ್ತು ವಾಸ್ತುಶಿಲ್ಪದ ಅದ್ಭುತಗಳ ಸಾರಾಂಶವಾಗಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವೂ ಒಂದು. ಭಗವಾನ್ ವಿಷ್ಣುವಿನ ರಂಗನಾಥ ಅವತಾರದಲ್ಲಿ ನಿರ್ಮಿಸಲಾದ ಈ ದೇವಾಲಯದ ಸಂಕೀರ್ಣವು ತನ್ನ ಸಂಕೀರ್ಣವಾದ ಕೆತ್ತನೆಗಳು, ಎತ್ತರದ ಗೋಪುರಗಳು ಮತ್ತು ಪವಿತ್ರ ತೊಟ್ಟಿಗಳಿಂದ ಭಕ್ತರನ್ನು ಮೋಡಿಮಾಡುತ್ತದೆ. ಇಲ್ಲಿನ ವಿಸ್ಮಯಕಾರಿ ರಚನೆಗಳ ಮಧ್ಯೆ ದಂಪತಿ ಆಧ್ಯಾತ್ಮಿಕ ವಾತಾವರಣದಲ್ಲಿ ತಮ್ಮನ್ನು ತಾವು ನೆನೆಯಬಹುದು.


ರಾಕ್‌ಫೋರ್ಟ್ ಟೆಂಪಲ್

ತಪ್ಪಿಸಿಕೊಳ್ಳಬಾರದ ಮತ್ತೊಂದು ದೇವಾಲಯ ರಾಕ್‌ಫೋರ್ಟ್ ಟೆಂಪಲ್. ನಗರದ ಮೇಲೆ ಪಕ್ಷಿನೋಟವನ್ನು ನೀಡುವ ಬೃಹತ್ ಬಂಡೆಯ ಮೇಲೆ ಕುಳಿತಿರುವ ಈ ದೇಗುಲ 437 ಕಲ್ಲು ಮೆಟ್ಟಿಲುಗಳನ್ನು ಒಟ್ಟಿಗೆ ಹತ್ತುವುದು ಪ್ರೀತಿಯ ಸಂಬಂಧವನ್ನು ಪರೀಕ್ಷಿಸುತ್ತದೆ; ಅಕ್ಕಪಕ್ಕದಲ್ಲಿ ಸವಾಲುಗಳನ್ನು ಎದುರಿಸುವ ಮೂಲಕ ದಂಪತಿ ತಮ್ಮ ಸಂಬಂಧವನ್ನು ಬಲಪಡಿಸಲು ಇದು ಒಂದು ಉತ್ತಮ ಮಾರ್ಗವಾಗಿದೆ. ಅವರ ಉತ್ತುಂಗದಲ್ಲಿ ಗಣಪತಿ ಮತ್ತು ನಟರಾಜನಿಗೆ ಸಮರ್ಪಿತವಾದ ಪ್ರಾಚೀನ ಪಲ್ಲವ-ಯುಗದ ದೇವಾಲಯಗಳಿವೆ. ಅಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯ ಜೀವನದಲ್ಲಿ ಶಾಂತಿಗಾಗಿ ಪ್ರಾರ್ಥಿಸಬಹುದು.

ಕಾವೇರಿ ನದಿ ತೀರ

ಕಾವೇರಿ ನದಿಯ ದಡವು ರಮಣೀಯ ಸೌಂದರ್ಯದೊಂದಿಗೆ ಶಾಂತಿಯನ್ನು ನೀಡುತ್ತದೆ. ಗದ್ದಲದ ಸ್ಥಳಗಳಿಂದ ಸ್ವಲ್ಪ ದೂರವಾಗಿ ಶಾಂತತೆವಾಗಿ ಪ್ರಕೃತಿಯ ಮಧ್ಯೆ ಸುತ್ತಲು ಬಯಸಿದರೆ ಈ ತೀರದಲ್ಲಿ ನಿಧಾನವಾಗಿ ನಡೆಯಿರಿ. ದಂಪತಿ ಮೌನವಾಗಿ ದೋಣಿ ವಿಹಾರಕ್ಕೆ ಹೋಗಬಹುದು ಅಥವಾ ನದಿಯ ಪಕ್ಕದಲ್ಲಿ ಹಾಕಲಾದ ಬೆಂಚುಗಳ ಮೇಲೆ ಕುಳಿತುಕೊಳ್ಳಬಹುದು. ದೂರದ ಪರ್ವತಗಳ ಹಿಂದೆ ಸೂರ್ಯ ಮುಳುಗಿದ ಅನಂತರ ಕಿತ್ತಳೆ ಬಣ್ಣದ ಆಕಾಶವನ್ನು ವೀಕ್ಷಿಸಬಹುದು.


ಪಾಕಶಾಲೆ

ರೊಮ್ಯಾಂಟಿಕ್ ಗೆಟ್‌ವೇಗಳ ವಿಷಯಕ್ಕೆ ಬಂದಾಗ ಸ್ಥಳೀಯ ಆಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದಿರುವುದು ಹೇಗೆ? ತಿರುಚಿ ನಿಮಗೆ ಅದಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ಸಾಂಪ್ರದಾಯಿಕ ತಮಿಳುನಾಡಿನ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಪಾಕಪದ್ಧತಿಗಳವರೆಗೆ ರೆಸ್ಟೋರೆಂಟ್‌ಗಳು ಇಲ್ಲಿ ವಿಭಿನ್ನ ರುಚಿ ಮೊಗ್ಗುಗಳನ್ನು ಪೂರೈಸುತ್ತವೆ. ದಂಪತಿಗಳು ಸ್ಥಳೀಯ ತಿನಿಸುಗಳಲ್ಲಿ ದೋಸೆ, ಇಡ್ಲಿ ಮತ್ತು ಬಿರಿಯಾನಿಯನ್ನು ಪ್ರಯತ್ನಿಸಬೇಕು ಅಥವಾ ನದಿಯ ನೋಟವನ್ನು ಆನಂದಿಸುತ್ತಿರುವಾಗ ಉನ್ನತ ಮಟ್ಟದ ರೆಸ್ಟೋರೆಂಟ್‌ನಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್ ಮಾಡಬಹುದು.

ಸಾಂಸ್ಕೃತಿಕ ಪ್ರದರ್ಶನ

ಸಂಸ್ಕೃತಿಗೆ ಹತ್ತಿರವಾಗುವುದು ನಿಮ್ಮ ಪ್ರೀತಿಪಾತ್ರರೊಂದಿಗಿನ ಯಾವುದೇ ಪ್ರವಾಸದ ಪ್ರಮುಖ ಭಾಗವಾಗಿದೆ ಮತ್ತು ಈ ನಿಟ್ಟಿನಲ್ಲಿ ತಿರುಚಿಯು ಸಾಕಷ್ಟು ಕೊಡುಗೆಗಳನ್ನು ಹೊಂದಿದೆ. ಪ್ರದೇಶದ ಶ್ರೀಮಂತ ಕಲಾತ್ಮಕ ಸಂಪ್ರದಾಯಗಳನ್ನು ಪ್ರದರ್ಶಿಸುವ ಶಾಸ್ತ್ರೀಯ ಸಂಗೀತ ಕಛೇರಿಗಳು ಮತ್ತು ನೃತ್ಯ ಕಾರ್ಯಕ್ರಮಗಳಿಗೆ ಹಾಜರಾಗಿ ಅಥವಾ ಪ್ರದೇಶದ ವಿಶಿಷ್ಟವಾದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ರೋಮಾಂಚಕ ಮಾರುಕಟ್ಟೆಗಳಿಗೆ ಭೇಟಿ ನೀಡಿ. ಯಾಕೆಂದರೆ ಮನೆಗೆ ಮರಳಿದ ಸ್ಮಾರಕಗಳು ಶಾಶ್ವತವಾಗಿ ಹತ್ತಿರದಲ್ಲಿ ಉಳಿಯುತ್ತವೆ. ಮಸಾಲೆಯುಕ್ತ ಗಾಳಿಯ ನಡುವೆ ಕೈ- ಕೈ ಹಿಡಿದು ಬಿಡುವಿಲ್ಲದ ಬೀದಿಗಳಲ್ಲಿ ನಡೆಯುವುದು ದಂಪತಿ ಹೃದಯದಲ್ಲಿ ದೀರ್ಘಕಾಲ ಬದುಕುವ ನೆನಪುಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?

ಪ್ರಕೃತಿಯ ನಡುವೆ ಒಂದಷ್ಟು ಹೊತ್ತು

ನಮ್ಮ ರಜಾದಿನಗಳಲ್ಲಿ ಬೇಕಾಗಿರುವುದು ಶಾಂತಿ. ನಗರಗಳು ಕೆಲವೊಮ್ಮೆ ನಮ್ಮನ್ನು ಬ್ಯುಸಿಯಾಗಿರುವಂತೆ ಮಾಡುತ್ತದೆ. ಆದ್ದರಿಂದ ತಿರುಚ್ಚಿಗೆ ಬಂದರೆ ಹೊರವಲಯವನ್ನು ನೋಡಬೇಡಿ. ಸುತ್ತಮುತ್ತಲಿನ ಹಚ್ಚ ಹಸಿರಿನಿಂದಾಗಿ ಪ್ರಶಾಂತ ವಾತಾವರಣವನ್ನು ನೋಡಿ. ಜಲಪಾತಗಳ ಶಬ್ದಗಳನ್ನು ಕಿವಿಕೊಟ್ಟು ಆಲಿಸಿ. ದಂಪತಿಗಳು ಪರಸ್ಪರ ಜೊತೆಯಾಗಿ ಪ್ರಕೃತಿಯೊಂದಿಗೆ ಇರಲು ಇದಕ್ಕಿಂತ ಹೆಚ್ಚು ನೆಮ್ಮದಿಯ ತಾಣ ಬೇರೆ ಇರಲಾರದು ಎಂದೆನಿಸಿದರೆ ತಪ್ಪಿಲ್ಲ.

Continue Reading

ಪ್ರವಾಸ

Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಭಾರತೀಯರು ರಷ್ಯಾಕ್ಕೆ ವೀಸಾ ಇಲ್ಲದೇ (Russia Tourism) ತೆರಳಬಹುದು. ಈ ಕುರಿತು ಮಾತುಕತೆ ಜೂನ್‌ನಲ್ಲಿ ಪ್ರಾರಂಭವಾಗಲಿದೆ. ರಷ್ಯಾ ಮತ್ತು ಭಾರತವು ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯದ ಮೂಲಕ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

VISTARANEWS.COM


on

By

Russia Tourism
Koo

ವಿಶ್ವವನ್ನು ಸುತ್ತಬೇಕು (world tour) ಎನ್ನುವ ಆಸೆ ಉಳ್ಳ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು (indians) ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ (Russia Tourism) ಮಾಡಬಹುದು. ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚಿಸಲು ಎರಡೂ ದೇಶಗಳು ಪ್ರಯಾಣದ ಪರಿಸ್ಥಿತಿಗಳನ್ನು ಸರಾಗಗೊಳಿಸಲು ಯೋಜನೆ ರೂಪಿಸುತ್ತಿವೆ.

ರಷ್ಯಾ ಮತ್ತು ಭಾರತ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಮಾನದಂಡಗಳನ್ನು ಅಂತಿಮಗೊಳಿಸಲು ಸಮಾಲೋಚನೆಗಳನ್ನು ಜೂನ್‌ ನಿಂದ ಪ್ರಾರಂಭಿಸಲಿದೆ. ವೀಸಾ ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸಿದ ಅನಂತರ ಭಾರತೀಯರು ರಷ್ಯಾಕ್ಕೆ ಸುಲಭವಾಗಿ ಪ್ರಯಾಣಿಸಬಹುದು.

ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ಬಹುಪಕ್ಷೀಯ ಆರ್ಥಿಕ ಸಹಕಾರ ಮತ್ತು ವಿಶೇಷ ಯೋಜನೆಗಳ ವಿಭಾಗದ ನಿರ್ದೇಶಕಿ ನಿಕಿತಾ ಕೊಂಡ್ರಾಟ್ಯೆವ್, ಭಾರತವು ಆಂತರಿಕ ರಾಜ್ಯ ಸಮನ್ವಯದ ಅಂತಿಮ ಹಂತದಲ್ಲಿದೆ ಎಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಚಾರಗಳಿವೆ.

ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ

ರಷ್ಯಾ ಮತ್ತು ಭಾರತದ ನಡುವಿನ ಮಾತುಕತೆಗಳು ಇನ್ನೂ ನಡೆಯುತ್ತಿವೆ ಮತ್ತು ಜೂನ್‌ನಲ್ಲಿ ಪ್ರಯಾಣವನ್ನು ಸರಾಗಗೊಳಿಸುವ ದ್ವಿಪಕ್ಷೀಯ ಒಪ್ಪಂದದ ಕುರಿತು ಉಭಯ ರಾಷ್ಟ್ರಗಳು ಸಮಾಲೋಚನೆಗಳನ್ನು ಪ್ರಾರಂಭಿಸುತ್ತವೆ. ಅಂತಿಮಗೊಳಿಸುವಿಕೆಯ ಅನಂತರ ರಷ್ಯಾ ಮತ್ತು ಭಾರತವು ಒಟ್ಟಾಗಿ ವೀಸಾ- ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸುತ್ತದೆ ಎಂದು ರಷ್ಯಾದ ಸಚಿವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.


ಯಾವಾಗ ಸಾಧ್ಯವಾಗುತ್ತದೆ?

ಕಜಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ “ರಷ್ಯಾ- ಇಸ್ಲಾಮಿಕ್ ವರ್ಲ್ಡ್: ಕಜಾನ್‌ಫೋರಮ್ 2024” ಭಾಗದಲ್ಲಿ ಸಚಿವರು ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ: Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

“ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯ ಕೇಂದ್ರಗಳನ್ನು ಪ್ರಾರಂಭಿಸಲು ಸಜ್ಜಾಗುತ್ತಿರುವಂತೆ ರಷ್ಯಾ ಮತ್ತು ಭಾರತವು ತಮ್ಮ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸಲು ಸಜ್ಜಾಗಿದೆ. ಎರಡು ರಾಷ್ಟ್ರಗಳ ನಡುವಿನ ಮೊದಲ ಸುತ್ತಿನ ಸಮಾಲೋಚನೆಯನ್ನು ಜೂನ್‌ನಲ್ಲಿ ನಿಗದಿಪಡಿಸಲಾಗಿದೆ. ಇದು ದ್ವಿಪಕ್ಷೀಯ ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿದೆ.


ಪ್ರಸ್ತುತ ಯಾರಿಗಿದೆ ಅವಕಾಶ?

ರಷ್ಯಾ ಈಗ ಚೀನಾ ಮತ್ತು ಇರಾನ್‌ನ ಜನರಿಗೆ ತನ್ನ ವೀಸಾ ಮುಕ್ತ ಪ್ರವಾಸಿ ವಿನಿಮಯ ಕಾರ್ಯಕ್ರಮದ ಮೂಲಕ ವೀಸಾ ಮುಕ್ತವಾಗಿ ಪ್ರವೇಶಿಸಲು ಅವಕಾಶ ನೀಡುತ್ತದೆ. ಸಚಿವರ ಪ್ರಕಾರ, ಕಾರ್ಯಕ್ರಮದ ಯಶಸ್ಸನ್ನು ಭಾರತದೊಂದಿಗೆ ಪುನರಾವರ್ತಿಸುವ ಗುರಿಯನ್ನು ದೇಶ ಹೊಂದಿದೆ. ರಷ್ಯಾ ಮತ್ತು ಚೀನಾ ನಡುವೆ ಮತ್ತು ರಷ್ಯಾ ಮತ್ತು ಇರಾನ್ ನಡುವೆ ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯವು 2023ರ ಆಗಸ್ಟ್ 1ರಂದು ಪ್ರಾರಂಭವಾಯಿತು.

Continue Reading

ದೇಶ

Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

ತತ್ಕಾಲ್ ಸೇವೆಯ ವ್ಯವಸ್ಥೆಯನ್ನು ಬಳಸಿಕೊಂಡು ತಕ್ಷಣದ ಪ್ರಯಾಣದ ಯೋಜನೆಗಳಿಗೆ ಟಿಕೇಟ್‌ಗಳನ್ನು ಬುಕ್ ಮಾಡಬಹುದು. ಎಲ್ಲಾ ರೈಲುಗಳ ಕಾಯ್ದಿರಿಸಿದ ಕೋಚ್ ಗಳಲ್ಲಿ ಭಾರತೀಯ ರೈಲ್ವೇಯು ರೈಲು ಟಿಕೆಟ್‌ಗಳ ತತ್ಕಾಲ್ ಬುಕಿಂಗ್ (Tatkal Tickets) ಅನ್ನು ಅನುಮತಿಸುತ್ತದೆ. ತತ್ಕಾಲ್‌ ಟಿಕೆಟ್‌ ಪಡೆಯುವ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Tatkal Tickets
Koo

ಕೊನೆ ಘಳಿಗೆಯಲ್ಲಿ ಪ್ರವಾಸ (travel) ಹೊರಡುವ ಯೋಜನೆಯೇ ಅಥವಾ ತುರ್ತಾಗಿ ಬೇರೆ ನಗರಕ್ಕೆ ಹೋಗಬೇಕಿದೆಯೇ? ಆದರೆ ಇನ್ನೂ ರೈಲ್ವೇ ಟಿಕೇಟ್ ಕಾದಿರಿಸಿಲ್ಲ ಎಂಬ ಚಿಂತೆ ಬೇಡ. ಐಆರ್‌ಸಿಟಿಸಿಯ (IRCTC) ತತ್ಕಾಲ್ ಸೇವೆಯು (Tatkal Tickets) ಪ್ರಯಾಣಿಕರಿಗೆ ಹೊರಡುವ ಒಂದು ದಿನದ ಮುಂಚಿತವಾಗಿ ರೈಲು ಸೀಟುಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ.

ತತ್ಕಾಲ್ ಸೇವೆಯ ವ್ಯವಸ್ಥೆಯನ್ನು ಬಳಸಿಕೊಂಡು ತಕ್ಷಣದ ಪ್ರಯಾಣದ ಯೋಜನೆಗಳಿಗೆ ಟಿಕೇಟ್‌ಗಳನ್ನು ಬುಕ್ ಮಾಡಬಹುದು. ಎಲ್ಲಾ ರೈಲುಗಳ ಕಾಯ್ದಿರಿಸಿದ ಕೋಚ್‌ಗಳಲ್ಲಿ ಭಾರತೀಯ ರೈಲ್ವೇಯು ರೈಲು ಟಿಕೆಟ್‌ಗಳ ತತ್ಕಾಲ್ ಬುಕಿಂಗ್ ಅನ್ನು ಅನುಮತಿಸುತ್ತದೆ. ಆದ್ದರಿಂದ ನೀವು ಕೊನೆಯ ನಿಮಿಷದಲ್ಲಿ ಸ್ಲೀಪರ್, 3AC, 2AC, ಅಥವಾ 1AC ಯ ಟಿಕೆಟ್ ಖರೀದಿಸಬಹುದು.

ತತ್ಕಾಲ್ ಟಿಕೆಟ್ ಶುಲ್ಕ

ಐಆರ್‌ಸಿಟಿಸಿ ಬುಕಿಂಗ್‌ಗಳಿಗೆ ಹೆಚ್ಚುವರಿ ದರವನ್ನು ವಿಧಿಸುತ್ತದೆ. ಏಕೆಂದರೆ ಅದು ತತ್ಕಾಲ್ ಯೋಜನೆಗೆ ಸೀಟುಗಳನ್ನು ಕಾಯ್ದಿರಿಸಬೇಕು. ಉದಾಹರಣೆಗೆ ತತ್ಕಾಲ್ ಟಿಕೆಟ್‌ನ ಬೆಲೆ ಅಂದಾಜು 1,300 ರೂ. ಆಗಿರುತ್ತದೆ ಎಂದರೆ, ಸಾಮಾನ್ಯ ಟಿಕೆಟ್‌ಗಳ ಬೆಲೆ 900 ರೂ. ಆಗಿರುತ್ತದೆ. ಎರಡನೇ ದರ್ಜೆಯ (ಕುಳಿತುಕೊಳ್ಳುವಿಕೆ) ಹೊರತುಪಡಿಸಿ, ಐಆರ್‌ಸಿಟಿಸಿ ಎಲ್ಲಾ ಪ್ರಯಾಣಿಕರಿಗೆ ಮೂಲ ದರದ ಶೇ. 30 ಹೆಚ್ಚು ಶುಲ್ಕ ವಿಧಿಸುತ್ತದೆ.

ಬುಕ್ಕಿಂಗ್ ಸಮಯ

ತತ್ಕಾಲ್ ಟಿಕೆಟ್ ಬುಕ್ಕಿಂಗ್ ವಿಂಡೋವನ್ನು ಐಆರ್‌ಸಿಟಿಸಿಯಿಂದ ರೈಲು ಪ್ರಾರಂಭವಾಗುವ ನಿಲ್ದಾಣದಿಂದ ಹೊರಡುವ ಒಂದು ದಿನ ಮೊದಲು ತೆರೆಯಲಾಗುತ್ತದೆ. ಉದಾಹರಣೆಗೆ, ನೀವು ಕೋಲ್ಕತ್ತಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರೆ, ಕೋಲ್ಕತ್ತಾದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ ಪ್ರಯಾಣ ಪ್ರಾರಂಭಿಸಿಸುವ ಹಿಂದಿನ ದಿನದಿಂದ ಶುರುವಾಗುತ್ತದೆ. ಹೆಚ್ಚುವರಿಯಾಗಿ ಎಸಿ ವರ್ಗದ ಟಿಕೆಟ್‌ಗಳಿಗಾಗಿ (2A/3A/CC/EC/3E) ಖರೀದಿ ವಿಂಡೋ ಬೆಳಗ್ಗೆ 10 ಗಂಟೆಗೆ ತೆರೆಯುತ್ತದೆ. ಈ ಮಧ್ಯೆ ಎಸಿ ಅಲ್ಲದ ವರ್ಗ (SL/FC/2S) ತತ್ಕಾಲ್ ಟಿಕೆಟ್‌ಗಳು ಬೆಳಗ್ಗೆ 11 ಗಂಟೆಗೆ ಮಾರಾಟವಾಗುತ್ತವೆ.

ಬುಕ್ ಮಾಡುವುದು ಹೇಗೆ?

ಐಆರ್‌ಸಿಟಿಸಿಯ ವೆಬ್‌ಸೈಟ್ irctc.co.in ಗೆ ಹೋಗಿ ಲಾಗ್ ಇನ್ ಮಾಡಲು ನಿಮ್ಮ ಐಆರ್‌ಸಿಟಿಸಿ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. “ಸೈನ್ ಅಪ್” ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಮತ್ತು ನೀವು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಐಆರ್ ಸಿಟಿಸಿ ಖಾತೆಯನ್ನು ರಚಿಸಬಹುದು. ಲಾಗ್ ಇನ್ ಮಾಡಿದ ಅನಂತರ “ಬುಕ್ ಟಿಕೆಟ್” ಕ್ಲಿಕ್ ಮಾಡಿ.


“ತತ್ಕಾಲ್” ಬುಕ್ಕಿಂಗ್ ಆಯ್ಕೆಯನ್ನು ಆರಿಸಿ ಮತ್ತು ಪ್ರಯಾಣದ ದಿನಾಂಕ, ಮೂಲ ಮತ್ತು ಗಮ್ಯಸ್ಥಾನದ ನಿಲ್ದಾಣಗಳಂತಹ ಎಲ್ಲಾ ಅಗತ್ಯ ಮಾಹಿತಿಯನ್ನು ನಮೂದಿಸಿ. ನಿಮ್ಮ ಪ್ರಯಾಣಕ್ಕಾಗಿ ನೀವು ಬಯಸುವ ರೈಲು ಮತ್ತು ವರ್ಗವನ್ನು ಆಯ್ಕೆಮಾಡಿ. ಮುಂದೆ ಪ್ರಯಾಣಿಕರ ಮಾಹಿತಿಯನ್ನು ನಮೂದಿಸಿ. ಹೆಚ್ಚುವರಿಯಾಗಿ, ನಿಮ್ಮ ಆದ್ಯತೆಯ ಬರ್ತ್ ಅನ್ನು ನೀವು ಆಯ್ಕೆ ಮಾಡಬಹುದು. ಆದಾಗ್ಯೂ, ನಿಮಗೆ ಬರ್ತ್ ಆಸನವನ್ನು ನಿಯೋಜಿಸಲಾಗುವುದು ಎಂದು ನೀವು ಖಾತರಿಪಡಿಸದಿರಬಹುದು.

ಶುಲ್ಕ ಮತ್ತು ಹೆಚ್ಚುವರಿ ಮಾಹಿತಿಯನ್ನು ಪರಿಶೀಲಿಸಿದ ಅನಂತರ, “ಪಾವತಿಗೆ ಮುಂದುವರಿಯಿರಿ” ಕ್ಲಿಕ್ ಮಾಡಿ. ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್, ಯುಪಿಐ ಮತ್ತು ಇತರ ಪರ್ಯಾಯ ವಿಧಾನಗಳು ನೀವು ವಹಿವಾಟಿಗೆ ಪಾವತಿಸಬಹುದಾದ ಮಾರ್ಗಗಳಾಗಿವೆ. ಮೀಸಲಾತಿಯನ್ನು ಪರಿಶೀಲಿಸಿ. ಎಲೆಕ್ಟ್ರಾನಿಕ್ ಟಿಕೆಟ್ ಪಡೆಯಿರಿ.

ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ಐಆರ್‌ಸಿಟಿಸಿ ಅಪ್ಲಿಕೇಶನ್ ಬಳಸುವುದು ಹೇಗೆ?

ಐಆರ್‌ಸಿಟಿಸಿ ಅಪ್ಲಿಕೇಶನ್ ಅನ್ನು ರನ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹೊಂದಿಸಿ. ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ನಿಮ್ಮ ಐಆರ್ ಸಿಟಿಸಿ ರುಜುವಾತುಗಳೊಂದಿಗೆ ಸೈನ್ ಇನ್ ಮಾಡಿ. ಈ ಹಂತದಲ್ಲಿ “ತತ್ಕಾಲ್ ಬುಕಿಂಗ್” ಆಯ್ಕೆ ಮಾಡಿ. ನೀವು ಟಿಕೇಟ್‌ಗಳನ್ನು ಕಾಯ್ದಿರಿಸಿದ್ದರೂ ಹಲವು ಬಾರಿ ಅವುಗಳನ್ನು ದೃಢೀಕರಿಸಲಾಗುವುದಿಲ್ಲ.

ಜನರು ತಮ್ಮ ರೈಲು ಟಿಕೆಟ್ ದೃಢೀಕರಿಸದಿರುವಾಗ ಅಥವಾ ಅವರು ಈಗಿನಿಂದಲೇ ತಮ್ಮ ಪ್ರಯಾಣದ ಯೋಜನೆಗಳನ್ನು ಮಾಡಿದರೆ ತತ್ಕಾಲ್ ಟಿಕೆಟ್ ಅಥವಾ ಪ್ರೀಮಿಯಂ ತತ್ಕಾಲ್ ಅನ್ನು ಆಯ್ಕೆ ಮಾಡುತ್ತಾರೆ. ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಸ್ವಲ್ಪ ಹೆಚ್ಚಿನ ಶುಲ್ಕವನ್ನು ಹೊಂದಿದ್ದರೂ ವೇಗವಾಗಿ ಸೀಟ್ ಲಭ್ಯವಾಗುವುದು.

Continue Reading

ಪ್ರವಾಸ

Ooty Tour: ಪ್ರತಿ ಸೀಸನ್‌ನಲ್ಲೂ ಭಿನ್ನ ಅನುಭವ! ನಿಮ್ಮ ಊಟಿ ಪ್ರವಾಸ ಯಾವಾಗ?

ಊಟಿಗೆ ಯಾವ ಸಮಯದಲ್ಲಿ ಬೇಕಾದರೂ ಭೇಟಿ ನೀಡಬಹುದು. ಇಲ್ಲಿ ಪ್ರತಿಯೊಂದು ತಿಂಗಳೂ ಏನಾದರೂ ಒಂದು ವಿಶೇಷ ಇದ್ದೇ ಇರುತ್ತದೆ. ಹೀಗಾಗಿ ನಿಮ್ಮ ಆಸಕ್ತಿಗೆ ಅನುಗುಣವಾಗಿ ಊಟಿಗೆ ಪ್ರವಾಸ (Ooty Tour) ಹೊರಡುವ ಯೋಜನೆ ಮಾಡಬಹುದು. ಊಟಿಯ ಅದ್ಭುತಗಳ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

By

Ooty Tour
Koo

ಬೇಸಿಗೆಯ ಬಿಸಿಲಿನ ಕಣ್ತಪ್ಪಿಸಿ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಬೇಕು ಎನ್ನುವ ಆಸೆ ಮನದಲ್ಲಿ ಮೂಡಿದಾಗ ಕೂಡಲೇ ನೆನಪುಗುವುದು ದಕ್ಷಿಣ ಭಾರತದ (southern India) ಸುಪ್ರಸಿದ್ಧ ಪ್ರವಾಸಿ ತಾಣ ಊಟಿ (Ooty Tour). ದಕ್ಷಿಣ ಭಾರತದ ನೀಲಗಿರಿ ಬೆಟ್ಟಗಳಲ್ಲಿ ( Nilgiri Hills) ನೆಲೆಯಾಗಿರುವ ಸುಂದರವಾದ ಗಿರಿಧಾಮ ಪ್ರದೇಶವಾಗಿರುವ ಊಟಿಯಲ್ಲಿ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರದೇಶಗಳಿವೆ. ಪ್ರಶಾಂತವಾದ ಭೂದೃಶ್ಯಗಳು, ಆಹ್ಲಾದಕರ ಹವಾಮಾನ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಇದು ಹೊಂದಿದೆ.

ಪ್ರವಾಸ ಪ್ರಿಯರಿಗಾಗಿ ಊಟಿ ಏನನ್ನಾದರೂ ನೀಡುತ್ತದೆ. ಅದು ಪ್ರಕೃತಿಯ ಪ್ರೀತಿ, ಸಾಹಸದ ಪ್ರಜ್ಞೆ ಅಥವಾ ಶಾಂತಿ ಮತ್ತು ಶಾಂತತೆಯ ಹಂಬಲವನ್ನು ತಣಿಸುತ್ತದೆ. ಪ್ರತಿ ಋತುವಿಗೂ ತನ್ನದೇ ಆದ ವಿಶೇಷತೆಯನ್ನು ಒದಗಿಸುತ್ತದೆ. ವರ್ಷವಿಡೀ ಬೇಸಿಗೆಯು ಬಹುವರ್ಣದ ಹೂವುಗಳನ್ನು ತರುತ್ತದೆ. ಮಳೆಗಾಲ ಬಂದೊಡನೆ ಎಲ್ಲವನ್ನೂ ಮಂಜಿನಿಂದ ಆವರಿಸುವಂತೆ ಮಾಡುತ್ತದೆ. ಶರತ್ಕಾಲದಲ್ಲಿ ಉಲ್ಲಾಸಕರವಾದ ಗಾಳಿ ಮತ್ತು ಚಳಿಗಾಲದ ತಂಪು ಅಪ್ಪುಗೆಯನ್ನು ಮರೆಯಲಾಗದು.

ಗಿರಿಧಾಮಗಳ ರಾಣಿ ಎಂದೂ ಕರೆಯಲಾಗುವ ಊಟಿಗೆ ವರ್ಷಪೂರ್ತಿ ಭೇಟಿ ಮಾಡಬಹುದು. ಪ್ರತಿ ಋತುವಿನಲ್ಲಿ ಇದು ತನ್ನದೇ ಆದ ವೈಭವವನ್ನು ತೊಂಬಿಕೊಂಡು ತನುಮನಕ್ಕೆ ಸಂತೋಷವನ್ನು ಉಣಬಡಿಸುತ್ತದೆ. ನಿಖರವಾಗಿ ಯಾವಾಗ ಹೋಗಬೇಕೆಂದು ತಿಳಿಯುವುದು ಖಂಡಿತವಾಗಿಯೂ ನಮ್ಮ ಪ್ರಯಾಣದ ಅನುಭವವನ್ನು ಸುಧಾರಿಸುತ್ತದೆ. ಊಟಿಯಲ್ಲಿ ಪ್ರತಿ ಸೀಸನ್ ಏನು ವಿಶೇಷ ಎಂಬ ಮಾಹಿತಿ ಇಲ್ಲಿದೆ.


ಬೇಸಿಗೆಯ ವೈಭವ; ಮಾರ್ಚ್‌ನಿಂದ ಜೂನ್

ಊಟಿಗೆ ಪ್ರವಾಸ ಹೋಗಲು ಅತ್ಯಂತ ಜನಪ್ರಿಯ ಸಮಯವೆಂದರೆ ಬೇಸಿಗೆಯ ತಿಂಗಳು. ಮಾರ್ಚ್‌ನಿಂದ ಜೂನ್‌ವರೆಗೆ ಹಗಲಿನ ತಾಪಮಾನವು ಇಲ್ಲಿ 15 ಡಿಗ್ರಿ ಸೆಲ್ಸಿಯಸ್ ನಿಂದ 25 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಇದು ಬಿಸಿಯಾದ ಬಯಲು ಪ್ರದೇಶಗಳಿಗೆ ಹೋಲಿಸಿದರೆ ಇದು ತುಂಬಾ ಆರಾಮದಾಯಕವಾಗಿದೆ. ಈ ಅವಧಿಯಲ್ಲಿ ಹವಾಮಾನವು ತಂಪಾಗಿರುತ್ತದೆ. ಇದು ಹಸಿರು ಕಣಿವೆಗಳು, ಹೂಬಿಡುವ ಹೂವುಗಳು ಮತ್ತು ಬೀಳುವ ಕ್ಯಾಸ್ಕೇಡ್‌ಗಳನ್ನು ಅನ್ವೇಷಿಸಲು ಸೂಕ್ತವಾಗಿದೆ. ಪ್ರತೀ ವರ್ಷ ಮೇ ತಿಂಗಳಲ್ಲಿ, ಬೊಟಾನಿಕಲ್ ಗಾರ್ಡನ್ಸ್‌ನಲ್ಲಿ ಅದ್ಭುತವಾದ ಪುಷ್ಪ ಪ್ರದರ್ಶನವನ್ನು ನಡೆಸಲಾಗುತ್ತದೆ.


ಮಾನ್ಸೂನ್‌ ಮ್ಯಾಜಿಕ್ -ಜುಲೈನಿಂದ ಸೆಪ್ಟೆಂಬರ್

ಒಮ್ಮೆ ಮಳೆ ಬಂದರೆ ಮತ್ತೆ ಎಲ್ಲವೂ ಹಸಿರು ಬಣ್ಣಕ್ಕೆ ತಿರುಗುತ್ತದೆ. ಆದರೆ ಈ ಬಾರಿ ಹೆಚ್ಚು ತೀವ್ರವಾಗಿ ಇಡೀ ಪ್ರದೇಶವು ಸೊಂಪಾದ ಸಸ್ಯಗಳಿಂದ ಆವೃತವಾಗಿದೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಇಡೀ ಪಟ್ಟಣವು ದಟ್ಟವಾದ ಎಲೆಗಳ ಅಡಿಯಲ್ಲಿ ಕಣ್ಮರೆಯಾಗುತ್ತದೆ. ಈ ತಿಂಗಳುಗಳಲ್ಲಿ ಜುಲೈನಿಂದ ಸೆಪ್ಟೆಂಬರ್ ವರೆಗೆ, ಊಟಿಯ ಮೇಲೆ ಮಧ್ಯಮ ಅಥವಾ ಭಾರೀ ಮಳೆ ಬೀಳುತ್ತದೆ. ಇದು ಸುತ್ತಲಿನ ಎಲ್ಲವನ್ನೂ ರಿಫ್ರೆಶ್ ಮಾಡಿದಂತೆ ಭಾಸವಾಗುತ್ತದೆ. ಬೇಸಿಗೆಯ ಶಾಖದ ಅನಂತರ ಮತ್ತೊಮ್ಮೆ ಜೀವಂತ ತಳೆದಂತೆ ಕಾಣುತ್ತದೆ. ಮಳೆಯ ಕಾರಣದಿಂದ ಹೊರಾಂಗಣ ಚಟುವಟಿಕೆಗಳು ಸೀಮಿತವಾಗಿರಬಹುದು. ಆದರೆ ಮಂಜಿನಿಂದ ಆವೃತವಾದ ಪರ್ವತಗಳ ಮೂಲಕ ಹರಿಯುವ ತೊರೆಗಳ ಸೌಂದರ್ಯ ಇಮ್ಮಡಿಯಾಗುತ್ತದೆ.


ಶರತ್ಕಾಲದ ಅದ್ಭುತ- ಅಕ್ಟೋಬರ್‌ನಿಂದ ನವೆಂಬರ್

ಮಳೆಗಾಲ ಅವಧಿ ಮುಗಿದ ಅನಂತರ, ಶರತ್ಕಾಲದಲ್ಲಿ ಆಕಾಶವು ಮತ್ತೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಚಳಿಗಾಲ ಪ್ರಾರಂಭವಾಗುವವರೆಗೆ ಪ್ರಶಾಂತ ಪರಿಸರ ಮನಸ್ಸಿಗೆ ಹಿತ ನೀಡುತ್ತದೆ. ಈ ಸಮಯದಲ್ಲಿ ತಾಪಮಾನವು 10 ಡಿಗ್ರಿಯಿಂದ 20 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಹೀಗಾಗಿ ಇದು ಚಟುವಟಿಕೆಗಳಿಗೆ ಸೂಕ್ತವಾಗಿರುತ್ತದೆ. ಟ್ರೆಕ್ಕಿಂಗ್, ಬೋಟಿಂಗ್, ದೃಶ್ಯವೀಕ್ಷಣೆ ನಡೆಸಲು ಸೂಕ್ತ ಸಮಯವಾಗಿರುತ್ತದೆ. ಹವಾಮಾನವು ಸಾಕಷ್ಟು ಸ್ನೇಹಪರವಾಗಿರುತ್ತದೆ. ಛಾಯಾಗ್ರಹಣಕ್ಕೆ ಇದು ಸೂಕ್ತ ಸಮಯ. ಈ ಸಂದರ್ಭದಲ್ಲಿ ಊಟಿ ಮಾರಿಯಮ್ಮನ್ ದೇವಾಲಯದ ಉತ್ಸವವನ್ನು ಕಣ್ತುಂಬಿಕೊಳ್ಳಲು ಮರೆಯಬೇಡಿ.


ಚಳಿಗಾಲದ ವಂಡರ್ ಲ್ಯಾಂಡ್ (ಡಿಸೆಂಬರ್‌ನಿಂದ ಫೆಬ್ರವರಿ)

ಚಳಿಗಾಲದಲ್ಲಿ ರಾತ್ರಿಯ ಸಮಯದಲ್ಲಿ ತಾಪಮಾನವು ತೀವ್ರವಾಗಿ ಇಳಿಯುತ್ತದೆ. ಸುಮಾರು 5 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕೆಳಗೆ ಇಳಿಯುತ್ತದೆ. ಮುಂಜಾನೆಯು ಸಾಮಾನ್ಯವಾಗಿ ಮಂಜಿನಿಂದ ಕೂಡಿರುತ್ತದೆ. ಆದರೆ ಇಡೀ ದಿನ ತಂಪಾಗಿರುತ್ತದೆ.

ಇದನ್ನೂ ಓದಿ: Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

ಸಾಕಷ್ಟು ಬಿಸಿಲು ಸಿಗುತ್ತದೆ. ಆದರೂ ಪ್ರದೇಶದ ಸುತ್ತಲಿನ ದಟ್ಟವಾದ ಕಾಡುಗಳಿಂದಾಗಿ ಸೂರ್ಯನ ಬೆಳಕು ಅಷ್ಟೇನೂ ನೆಲದ ಮಟ್ಟವನ್ನು ತಲುಪುವುದಿಲ್ಲ, ಆದ್ದರಿಂದ ಚಹಾ ತೋಟಗಳ ಸುತ್ತಲೂ ಮಾಂತ್ರಿಕ ಸ್ಪರ್ಶ ನೀಡಿದಂತೆ ಭಾಸವಾಗುತ್ತದೆ. ಸಾಹಸಿಗಳು ನೀಲಗಿರಿಯ ಅತೀ ಎತ್ತರದ ಪ್ರದೇಶವಾದ ದೊಡ್ಡಬೆಟ್ಟ ಶಿಖರದಲ್ಲಿ ಚಾರಣಕ್ಕೆ ಹೋಗಬಹುದು ಅಥವಾ ವಿವಿಧ ಜಾತಿಯ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು, ಕೀಟಗಳನ್ನು ಮುದುಮಲೈ ವನ್ಯಜೀವಿ ಅಭಯಾರಣ್ಯದಲ್ಲಿ ಅನ್ವೇಷಿಸಬಹುದು. ಜನವರಿಯಲ್ಲಿ ಇಲ್ಲಿ ವಾರ್ಷಿಕ ಚಹಾ ಪ್ರವಾಸೋದ್ಯಮ ಉತ್ಸವ ನಡೆಯುತ್ತದೆ. ಇಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ಆನಂದಿಸಬಹುದು, ವಿವಿಧ ಮಾದರಿಯ ಚಹಾಗಳನ್ನು ಸವಿಯಬಹುದು.

Continue Reading
Advertisement
Sambita Patra
ದೇಶ11 mins ago

Sambit Patra: ಭಗವಾನ್‌ ಜಗನ್ನಾಥನೇ ಮೋದಿಯ ಭಕ್ತ ಎಂದ ಬಿಜೆಪಿ ನಾಯಕ; ಭುಗಿಲೆದ್ದ ವಿವಾದ

Anti Terrorism Day
ದೇಶ42 mins ago

Anti Terrorism Day: ಇಂದು ಭಯೋತ್ಪಾದನಾ ವಿರೋಧಿ ದಿನ; ಏನು ಈ ದಿನದ ಹಿನ್ನೆಲೆ?

Dina Bhavishya
ಭವಿಷ್ಯ1 hour ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಹೆಚ್ಚು ಲಾಭ; ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

Prajwal Revanna Case
ಕರ್ನಾಟಕ6 hours ago

Prajwal Revanna Case: ಪ್ರಜ್ವಲ್ ರೇವಣ್ಣ ಪಾಸ್‌ ಪೋರ್ಟ್ ರದ್ದು ಮಾಡಲು ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

Mobile
ದೇಶ6 hours ago

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡಿ 15 ವರ್ಷದ ಅಕ್ಕನನ್ನೇ ಗರ್ಭಿಣಿ ಮಾಡಿದ 13 ವರ್ಷದ ಬಾಲಕ!

Army Officer
Lok Sabha Election 20247 hours ago

101ನೇ ವಯಸ್ಸಿನಲ್ಲೂ ‘ಕರ್ತವ್ಯ’ ಮರೆಯದೆ ವೋಟ್‌ ಮಾಡಿದ ನಿವೃತ್ತ ಯೋಧ; ಸೆಲ್ಯೂಟ್‌ ಎಂದರು ಜನ

Congress Guarantee
ಪ್ರಮುಖ ಸುದ್ದಿ7 hours ago

Congress Guarantee: ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ ಸರ್ಕಾರ ಮಾಡಿದ ಖರ್ಚು ಎಷ್ಟು ಸಾವಿರ ಕೋಟಿ?

Malaysia Masters
ಕ್ರೀಡೆ7 hours ago

Malaysia Masters: ವಿಶ್ರಾಂತಿ ಬಳಿಕ ಮಲೇಷ್ಯಾ ಮಾಸ್ಟರ್ಸ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಸಿಂಧು

Rahul Gandhi
ದೇಶ7 hours ago

Rahul Gandhi: ರಾಯ್‌ಬರೇಲಿಯಲ್ಲಿ ಜನ ಜೈ ಶ್ರೀರಾಮ್‌ ಎನ್ನುತ್ತಲೇ ಕಾಲ್ಕಿತ್ತ ರಾಹುಲ್‌ ಗಾಂಧಿ! Video ಇದೆ

MS Dhoni Bike Riding
ಕ್ರೀಡೆ8 hours ago

MS Dhoni Bike Riding: ಐಪಿಎಲ್​ ಮುಗಿಸಿ ತವರಿಗೆ ಮರಳಿದ್ದೇ ತಡ, ಬೈಕ್ ರೈಡಿಂಗ್​ ಮಾಡಿದ ಧೋನಿ​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ17 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌