ಪ್ರವಾಸ
Travel Tips: Beach Tourism: ಬ್ಲೂ ಸರ್ಟಿಫಿಕೇಶನ್ ಪಡೆದ ಭಾರತದ ಸ್ವಚ್ಛ ಬೀಚ್‌ಗಳಿವು! (ಭಾಗ 2)
ಎಲೆಮರೆ ಕಾಯಿಯಂಥ, ಅಷ್ಟಾಗಿ ಇನ್ನೂ ಬೆಳಕಿಗೆ ಬಾರದ ಚಂದನೆಯ ಹಲವು ಸಮುದ್ರತೀರಗಳೆಷ್ಟೋ ಇವೆ. ಇವನ್ನೆಲ್ಲ ಹಾಗೆಯೇ ಉಳಿಸುವ ಜೊತೆಗೆ, ನಮ್ಮ ಸುತ್ತಮುತ್ತಲ ಸಮುದ್ರ ತೀರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಪ್ರವಾಸಿರ ಪಾತ್ರವೂ ಇದೆ
ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಬಹುದಾದ, ಚಂದನೆಯ ಸಮುದ್ರ ತೀರಗಳಿವೆ. ಸ್ಫಟಿಕ ಶುದ್ಧ ಸೊಗಸಿನ ಈ ಬೀಚ್‌ಗಳಲ್ಲಿ 12 ತೀರಗಳು ಬ್ಲೂ ಸರ್ಟಿಫಿಕೇಶನ್ ಪಡೆದಿವೆ. ಮೊದಲ ಭಾಗದಲ್ಲಿ ಆರು ಬೀಚ್‌ಗಳ ವಿವರ ಓದಿದ್ದೀರಿ. ಪಟ್ಟಿಯ ಮುಂದುವರಿದ ಭಾಗ ಇಲ್ಲಿದೆ!
೭. ಕಪ್ಪದ್, ಕೇರಳ: ಕೇರಳದ ಈ ಕಡಲ ಕಿನಾರೆಗೊಂದು ಇತಿಹಾಸವೇ ಇದೆ. ೧1498ರಲ್ಲಿ ವಾಸ್ಕೋಡಗಾಮ 170 ಮಂದಿ ಸಹಚರರೊಂದಿಗೆ ಭಾರತಕ್ಕೆ ಬಂದಿಳಿದ ಕಡಲ ಕಿನಾರೆಯಿದು. ಇದು ಸ್ವಚ್ಛವಷ್ಟೇ ಅಲ್ಲ, ಚಂದನೆಯ ವಲಸಿಗ ಹಕ್ಕಿಗಳಿಗೂ ತಾಣ. ಸದ್ಯ ಪ್ರವಾಸೋದ್ಯಮಕ್ಕೆ ಸೂಕ್ತವಾಗುವಂತೆ ವಾಕಿಂಗ್ ಟ್ರ್ಯಾಕ್, ವಾಶ್‌ರೂಂಗಳು ಸೇರಿದಂತೆ ಹಲವು ನಾಗರಿಕ ಸೇವೆಗಳು ಇಲ್ಲಿ ಲಭ್ಯವಿವೆ.
೮. ಗೋಲ್ಡನ್ ಬೀಚ್, ಪುರಿ, ಒಡಿಶಾ: ಒಡಿಶಾದ ಪುರಿಯ ಗೋಲ್ಡನ್ ಬೀಚ್ ಸಾವಿರಾರು ಜನರನ್ನು ನಿತ್ಯವೂ ಸೆಳೆಯುವ ಪ್ರಸಿದ್ಧ ಕಡಲತೀರಗಳಲ್ಲೊಂದು. ಇಲ್ಲಿ ಮಾಡಲಾದ ಸಾರ್ವಜನಿಕ ಸೇವೆಗಳಾದ, ಟಾಯ್ಲೆಟ್, ವಿಕಲಚೇತನರಿಗೆ ಸರಳ ವ್ಯವಸ್ಥೆಗಳು, ವಾಚ್‌ಟವರ್‌ಗಳು, ಸ್ನಾನದ ಝೋನ್‌ಗಳು ಎಲ್ಲವೂ ಇದನ್ನು ಅಧ್ಬುತವನ್ನಾಗಿಸಿದೆ. ಪ್ರತಿ ವರ್ಷವೂ ಇಲ್ಲಿ ನಡೆಯುವ ಬೀಚ್ ಉತ್ಸವ, ಮರಳು ಚಿತ್ರಕಲೆ ಸಾಕಷ್ಟು ಜನರನ್ನಿಲ್ಲಿಗೆ ಸೆಳೆಯುತ್ತದೆ.
೯. ಮಿನಿಕೋಯ್ ತುಂಡಿ ಬೀಚ್, ಲಕ್ಷದ್ವೀಪ: ಪಚ್ಚೆ ರತ್ನವೆನ್ನ ನೀರಲ್ಲಿ ಕರಗಿ ಹೋಗಿದೆಯೋ ಎಂಬಂತೆ ಸದಾ ಹರಿರು ಬಣ್ಣದಲ್ಲಿ ಫಳಪಳಿಸುತ್ತಿರುವ ಸಮುದ್ರ ತೀರವಿದು. ಜೀವನದಲ್ಲಿ ಒಮ್ಮೆಯಾದರೂ ಭಾರತದ ಈ ಪುಟಾಣೀ ದ್ವೀಪವನ್ನು ನೋಡಿ, ಇಲ್ಲಿನ ಸ್ಪಟಿಕ ಶುದ್ಧ ತೀರಗಳಲ್ಲಿ ಅಲೆದಾಡಬೇಕು.
೧೦. ಕದ್ಮತ್ ಬೀಚ್, ಲಕ್ಷದ್ವೀಪ: ಲಕ್ಷದ್ವೀಪದ ಕಡಲ ಕಿನಾರೆಗಳೆಲ್ಲವೂ ಅದ್ಭುತವೇ. ಹಸಿರು ಹಸಿರಾಗಿ ಕಂಗೊಳಿಸುವ ಇವು ನಮ್ಮ ಸಾದಾ ಬೀಚ್‌ಗಳಿಗಿಂತ ಕೊಂಚ ಭಿನ್ನವಾಗಿಯೇ ಕಾಣುತ್ತವೆ.
ಇದನ್ನೂ ಓದಿ: Travel Tips: ಗುಂಡಿಗೆ ಗಟ್ಟಿ ಇದ್ದವರು ಪ್ರಯಾಣಿಸಲೇಬೇಕಾದ ಭಾರತದ ದುರ್ಗಮ ರಸ್ತೆಗಳು!
೧೧. ಈಡನ್ ಬೀಚ್, ಪಾಂಡಿಚೇರಿ: ಪಾಂಡಿಚೇರಿ ಎಂಬ ಪುಟಾಣಿ ನಗರ ಹಲವಾರು ಕಾರಣಗಳಿಗೆ ಪ್ರವಾಸಿಗರನ್ನು ಸೆಳೆಯುತ್ತದೆ. ಅವುಗಳ ಪೈಕಿ ಸುಂದರ ಕಡಲ ಕಿನಾರೆಯೂ ಒಂದು. ಈಡೆನ್ ಬೀಚ್ ಪಾಂಡಿಯ ಚಂದನೆಯ ಸ್ವಚ್ಛವಾದ ಬೀಚ್‌ಗಳ ಪೈಕಿ ಅಗ್ರಗಣ್ಯ. ಪಾಂಡಿಯ ಆರೋವಿಲ್ಲೆಯಲ್ಲಿ ನಡೆದಾಡಿ, ಧ್ಯಾನ ಮಾಡಿ, ಅರವಿಂದಾಶ್ರಮದಲ್ಲಿ ಒಂದಿಷ್ಟು ಹೊತ್ತು ಕೂತು, ಸಂಜೆ ಈ ಕಡಲ ಕಿನಾರೆಯ ಗಾಳಿ ಸೇವನೆಗೆ ಕೂತರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನಬಹುದು.
೧೨. ಕೋವಲಂ ಬೀಚ್, ತಮಿಳುನಾಡು: ಸರ್ಫಿಂಗ್ ಕಲಿಯಲು ಆಸಕ್ತಿಯಿರುವ ಮಂದಿಗೆ ದಕ್ಕುವ ಕೆಲವೇ ಕೆಲವು ದಕ್ಷಿಣದ ಬೀಚ್‌ಗಳ ಪೈಕಿ ಕೋವಲಂ ಬೀಚ್ ಕೂಡಾ ಒಂದು. ಚಂದನೆಯ, ಚಿಪ್ಪುಗಳಿಂದಾವೃತವಾದ ಮರಳ ದಿಣ್ಣೆಗಳಿರುವ ಸಂಜೆಯ ಹೊತ್ತು ತಪ್ಪದೇ ಭೇಟಿಕೊಡಬಹುದಾದ ಸರಳ ಸುಂದರ ಬೀಚ್ ಇದು. ಚೈನ್ನೈನ ಜನಜಂಗುಳಿಯ ಸಮುದ್ರ ತೀರಗಳಾದ ಬೆಸೆಂಟ್ ನಗರ ಹಾಗೂ ಮರೀನಾ ಬೀಚ್‌ಗಳಿಂದ ದೂರವಿರುವ ಆಫ್‌ಬೀಟ್ ಜಾಗ ಬೇಕು ಎಂದು ಆಸೆಪಡುವ ಮಂದಿಗೆ, ಚೆನ್ನೈನಿಂದ ಸುಮಾರು ೪೦ ಕಿಮೀ ದೂರದಲ್ಲಿರುವ ಈ ಬೀಚ್ ಬೆಸ್ಟ್ ಆಯ್ಕೆ.
ಕೇವಲ ಇವಿಷ್ಟೇ ಅಲ್ಲ, ಇವೆಲ್ಲ ಈಗಾಗಲೇ ಬ್ಲೂ ಸರ್ಟಿಫಿಕೇಶನ್ ಪಡೆದ ಸಮುದ್ರ ತೀರಗಳ ಕಥೆಯಾಯಿತು. ಇನ್ನೂ ಎಲೆಮರೆ ಕಾಯಿಯಂಥ, ಅಷ್ಟಾಗಿ ಇನ್ನೂ ಬೆಳಕಿಗೆ ಬಾರದ ಚಂದನೆಯ ಹಲವು ಸಮುದ್ರತೀರಗಳೆಷ್ಟೋ ಇವೆ. ಇವನ್ನೆಲ್ಲ ಹಾಗೆಯೇ ಉಳಿಸುವ ಜೊತೆಗೆ, ನಮ್ಮ ಸುತ್ತಮುತ್ತಲ ಸಮುದ್ರ ತೀರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಪ್ರವಾಸಿರ ಪಾತ್ರವೂ ಇದೆ ಎಂಬುದನ್ನು ಮಾತ್ರ ನಾವು ಸದಾ ನೆನಪಿಟ್ಟುಕೊಳ್ಳಬೇಕು.
ಸ್ಪಟಿಕ ಶುದ್ಧ ಚಂದನೆಯ ಬೀಚ್‌ಗಳ ಪಟ್ಟಿಯ ಮೊದಲ ಆರು ಬೀಚ್‌ಗಳ ವಿವರಕ್ಕೆ ಮೊದಲ ಭಾಗ ಓದಿ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
ಪ್ರವಾಸ
ವಿಸ್ತಾರ ಸಂಪಾದಕೀಯ: ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳಿಗೆ ಕಡಿವಾಣ ಅಗತ್ಯ
ರಾಜ್ಯದಲ್ಲಿ ಮತದಾರರಿಗೆ ಗಿಫ್ಟ್ ಹಂಚುವ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಪ್ರಜಾಪ್ರಭುತ್ವಕ್ಕೆ ಇದು ಭೂಷಣವಲ್ಲ. ಇಂತಹ ಆಮಿಷಗಳನ್ನು ಜನರೇ ತಿರಸ್ಕರಿಸಬೇಕು. ಚುನಾವಣೆ ಆಯೋಗ ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು.
ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಹಾಗಾಗಿ, ನೀತಿ ಸಂಹಿತೆ ಜಾರಿಯಾಗಿಲ್ಲ. ಆದರೆ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಡೆಸುತ್ತಿರುವ ಕಸರತ್ತು ಜೋರಾಗಿದೆ. ಕುಕ್ಕರ್, ಸೀರೆ, ಪಂಚೆ, ಸ್ಕೂಲ್ ಬ್ಯಾಗ್, ಬಳೆ, ಬಾಡೂಟ, ಮದ್ಯ, ನಗದು ವಿತರಣೆ ಸೇರಿದಂತೆ ನಾನಾ ರೂಪದಲ್ಲಿ ಮತದಾರರನ್ನೂ ಭ್ರಷ್ಟರನ್ನಾಗಿಸುವ ಅಕ್ರಮ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಈ ಅಕ್ರಮವನ್ನು ತಡೆಗಟ್ಟಲು ಚುನಾವಣಾ ಆಯೋಗವು, ವಿವಿಧ ಇಲಾಖೆಗಳ ಸಹಾಯದೊಂದಿಗೆ ದಾಳಿಗಳನ್ನು ನಡೆಸುತ್ತಿದೆ. ಈವರೆಗೆ, ವಿಶೇಷ ಕಾರ್ಯಾಚರಣೆ ಮೂಲಕ ಕಳೆದ 3 ದಿನಗಳಲ್ಲಿ 5.4 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಿ, ಚುನಾವಣಾ ಅಕ್ರಮ ತಡೆಯಲು ಸೂಚನೆ ನೀಡಿದ್ದರು. ಬಳಿಕ, ಅಧಿಕಾರಿಗಳು ದಾಳಿಗಳನ್ನು ಚುರುಕುಗೊಳಿಸಿದ್ದಾರೆ. ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಲಕ್ಷ್ಯದೊಂದಿಗೆ ಅಭ್ಯರ್ಥಿಗಳು ನೀಡುವ ಆಮಿಷಗಳಿಗೆ ಮತದಾರರು ಸೊಪ್ಪ ಹಾಕಬಾರದು. ತಾತ್ಕಾಲಿಕ ಲಾಭಕ್ಕಾಗಿ ಮತವನ್ನು ಮಾರಿಕೊಳ್ಳುವುದನ್ನು ಜನರು ತಿರಸ್ಕರಿಸಬೇಕು.
ಚುನಾವಣಾ ಸ್ಪರ್ಧೆಗೆ ಮುಂದಾಗಿರುವ ರಾಜಕಾರಣಿಯೊಬ್ಬರ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಕಂದಾಯ ಅಧಿಕಾರಿಗಳು, ಭಾರೀ ಸಂಖ್ಯೆಯಲ್ಲಿ ಸಂಗ್ರಹಿಸಲಾಗಿದ್ದ ಫುಡ್‌ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಈ ಹಿಂದೆಯೂ ಕುಕ್ಕರ್, ಸೀರೆ ಹಂಚಿ ಸುದ್ದಿಗೆ ಗ್ರಾಸವಾಗಿದ್ದರು. ಮತ್ತೊಂದೆಡೆ, ರಾಮನಗರ ತಾಲೂಕಿನಲ್ಲಿ, ಮತದಾರರಿಗೆ ಹಂಚಲು ಸಿದ್ಧವಾಗಿದ್ದ 2,900 ಕುಕ್ಕರ್‌ಗಳನ್ನು ತಹಸೀಲ್ದಾರ್ ಜಪ್ತಿ ಮಾಡಿದ್ದಾರೆ. ಐದು ದಿನಗಳ ಹಿಂದೆ, ಪರಿಷತ್ ಸದಸ್ಯರೊಬ್ಬರ ಹಾವೇರಿ ನಿವಾಸದ ಮೇಲೆ ವಾಣಿಜ್ಯ ಅಧಿಕಾರಿಗಳು ದಾಳಿ ನಡೆಸಿ, 6000ಕ್ಕೂ ಅಧಿಕ ಸೀರೆ, 9000ಕ್ಕೂ ಅಧಿಕ ಸ್ಕೂಲ್ ಬ್ಯಾಗ್‌ಗಳು, ತಟ್ಟೆ-ಲೋಟಗಳು ಸೇರಿದಂತೆ ಒಟ್ಟಾರೆ 8 ಕೋಟಿ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇವು ಕೆಲವು ಉದಾಹರಣೆಗಳಷ್ಟೇ. ಇದು ಯಾವುದೋ ಒಂದು ಕ್ಷೇತ್ರಕ್ಕೆ ಅಥವಾ ಯಾವುದೋ ಒಂದೇ ಪಕ್ಷಕ್ಕೆ ಮಾತ್ರ ಸಿಮೀತವಾಗಿಲ್ಲ.
ಈ ಹಿಂದೆ ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳು ಒಂದಿಷ್ಟು ಕ್ಷೇತ್ರಗಳಲ್ಲಿ ಮಾತ್ರ ನಡೆಯುತ್ತಿದ್ದವು. ಆದರೆ, ಈಗ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಈ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ.
ಚುನಾವಣೆ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಮತದಾರರು ಈ ವಿಷಯದಲ್ಲಿ ಜಾಗೃತರಾಗಬೇಕು. ಜನ ಜಾಗೃತರಾಗದೆ ಕಾನೂನು ಎಷ್ಟೇ ಬಿಗಿಗೊಳಿಸಿದರೂ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ಐನೂರು, ಸಾವಿರ ರೂಪಾಯಿಗೆ ಮತಗಳನ್ನು ಮಾರಿಕೊಂಡರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರರು ಕಳೆದುಕೊಳ್ಳುತ್ತಾರೆ. ಹಣ, ಹೆಂಡ ಹಂಚಿ ಗೆದ್ದುಬರುವ ಅಭ್ಯರ್ಥಿ, ಚುನಾವಣಾ ವೆಚ್ಚವನ್ನು ಸರಿದೂಗಿಸಲು ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಅಂತಿಮವಾಗಿ ಅದರ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಇದೊಂದು ವಿಷ ವರ್ತುಲ. ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರ ಒಳ್ಳೆಯ ಲಾಭ ಜನರಿಗೇ ಆಗುತ್ತದೆ. ಆಮಿಷಕ್ಕೆ ಬಿದ್ದು ಅರ್ಹನಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರಿಂದಾಗುವ ದುಷ್ಪರಿಣಾಮವನ್ನು ತಾವೇ ಅನುಭವಿಸಬೇಕಾಗುತ್ತದೆ ಎಂಬುದನ್ನು ಜನ ಅರಿತುಕೊಳ್ಳಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಬೇಟೆ, ಮತ್ತಷ್ಟು ಕಠಿಣ ಕ್ರಮ ಅಗತ್ಯ
ಈಗಿನ ಚುನಾವಣೆ ನಡೆಯುವ ರೀತಿ ನೋಡಿದರೆ, ಸಭ್ಯರು ಎಲೆಕ್ಷನ್ ಗೆಲ್ಲುವುದೇ ಅಸಾಧ್ಯ. ಹಣವಂತರು ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಈ ಕಳಂಕವನ್ನು ನಿವಾರಿಸಬೇಕಾದ ಮಹತ್ತರ ಜವಾಬ್ದಾರಿ ಮತದಾರರ ಮೇಲಿದೆ. ಚುನಾವಣೆ ಆಯೋಗದ ಜವಾಬ್ದಾರಿಯೂ ಇಲ್ಲಿ ದೊಡ್ಡದಿದೆ. ಆಮಿಷ ಮುಕ್ತ ಮತ್ತು ಅಕ್ರಮ ಮುಕ್ತ ಚುನಾವಣೆ ನಡೆಸಲು ಕಾಯಿದೆ ಕಾನೂನು ರೂಪಿಸಿದರೆ ಸಾಲದು. ಇದರ ಕಠಿಣ ಅನುಷ್ಠಾನವೂ ಮುಖ್ಯ. ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ಮಾಡದೆ ಚುನಾವಣೆ ಆಯೋಗವು ನಿಷ್ಪಕ್ಷಪಾತವಾಗಿ ಇಂಥ ಅಕ್ರಮಗಳಿಗೆ ತಡೆ ಹಾಕಬೇಕು.
ಪ್ರವಾಸ
Travel Tips: ಬ್ಲೂ ಸರ್ಟೀಫಿಕೆಟ್ ಪಡೆದ ನೀಲಿ ಹಸಿರ ಸ್ವಚ್ಛ ಸುಂದರ ನಮ್ಮ ಕಡಲ ಕಿನಾರೆಗಳಿವು! ರಾಜ್ಯದ್ದೂ ಇವೆ!
ಚಂದನೆಯ ನೀಲಿಹಸಿರು ಸಮುದ್ರ ತೀರಗಳು ಭಾರತದಲ್ಲಿ ಸಿಗುವುದು ಅತ್ಯಪೂರ್ವ. ಆದರೂ ನಮ್ಮ ದೇಶದಲ್ಲೂ ಸುಂದರ, ಶಾಂತವಾಗಿರುವ ಕಡಲ ತೀರಗಳೂ ಇವೆ. ಈ ಕೆಳಗಿನ 12 ಕಡಲ ತೀರಗಳಿಗೆ ಅಂಥ ಮಾನ್ಯತೆಯಾದ ಬ್ಲೂ ಸರ್ಟಿಫಿಕೇಶನ್ ಕೂಡಾ ದೊರಕಿದೆ. ಹಾಗಾದರೆ, ಆ ಸಮುದ್ರ ತೀರಗಳ್ಯಾವುವು ಎಂಬುದನ್ನು ನೋಡೋಣ.
ಸಮುದ್ರ ತೀರಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಆದರೆ ಬಹಳಷ್ಟು ಸಾರಿ ಸಮುದ್ರ ತೀರಗಳಲ್ಲಿ ಅಲೆದಾಡಲು ಹೊರಟರೆ ಸುತ್ತಮುತ್ತ ಕಸದ ರಾಶಿ, ದುರ್ನಾತ ಬೀರುವ ಮರಳ ದಂಡೆಗಳು ಸುಖಕ್ಕಿಂತ ತೊಂದರೆ ಅನುಭವಿಸುವುದೇ ಹೆಚ್ಚು. ಸ್ವಚ್ಛವಾಗಿರುವ ಸಮುದ್ರ ತೀರಗಳನ್ನು ಭಾರತದಲ್ಲಿ ಹುಡುಕುವುದು (beach tourism) ಕಷ್ಟ ಅನಿಸಿರಬಹುದು. ಪೋಸ್ಟರಿನ ಚಿತ್ರಗಳಂತೆ ಕಾಣುವ ನೀಲಿ ಹಸಿರು ಸಮುದ್ರ ತೀರಗಳನ್ನು ನೋಡಬೇಕೆಂದರೆ ವಿದೇಶಕ್ಕೇ ಹೋಗಬೇಕು ಎಂಬ ಕಲ್ಪನೆ ಬಹಳಷ್ಟು ಮಂದಿಗಿದೆ. ಯಾಕೆಂದರೆ, ಅಂಥಾ ಚಂದನೆಯ ನೀಲಿಹಸಿರು ಸಮುದ್ರ ತೀರಗಳು ಭಾರತದಲ್ಲಿ ಸಿಗುವುದು ಅತ್ಯಪೂರ್ವ. ಆದರೂ, ಹುಡುಕಿದರೆ, ಒಂದಿಷ್ಟು ಮಾಹಿತಿ ಕೆದಕಿದರೆ, ನಮ್ಮ ದೇಶದಲ್ಲೂ ಸುಂದರ, ಶಾಂತವಾಗಿರುವ ಪೋಸ್ಟರ್ ಪರ್ಫೆಕ್ಟ್ ಎನಿಸುವ ಕಡಲ ತೀರಗಳೂ ಇವೆ. ಈ ಕೆಳಗಿನ 12 ಕಡಲ ತೀರಗಳಿಗೆ ಅಂಥ ಮಾನ್ಯತೆಯಾದ ಬ್ಲೂ ಸರ್ಟಿಫಿಕೇಶನ್ ಕೂಡಾ ದೊರಕಿದೆ. ಹಾಗಾದರೆ, ಆ ಸಮುದ್ರ ತೀರಗಳ್ಯಾವುವು ಎಂಬುದನ್ನು ನೋಡೋಣ.
1. ಘೋಗ್ಲಾ, ದಿಯು: ಎಲ್ಲ ಮರೆತು ದಂಡೆಗಪ್ಪಳಿಸುವ ಅಲೆಗಳನ್ನೇ ಕೂತು ನೋಡುತ್ತಿರಬೇಕು, ಯಾರ ತೊಂದರೆಯೂ ಬೇಡ ಎಂದೆನಿಸುವ ಜೀವಗಳಿಗಿದು ಹೇಳಿ ಮಾಡಿಸಿದ ಬೀಚ್. ಶಾಂತ ಸುಂದರ ಸ್ವಚ್ಛ ಸಮುದ್ರ ತೀರವೆಂದರೆ ಇದು. ನೀವು ಕೊಂಚ ಸಾಹಸೀಪ್ರಿಯರಾಗಿದ್ದರೆ, ಇಲ್ಲಿ ಬನಾನಾ ಬೋಟ್‌ನಿಂದ ಹಿಡಿದು ಪಾರಾಸೈಲಿಂಗ್‌ವರೆಗೂ ಹಲವಾರು ಚಟುವಟಿಕೆಗಳನ್ನಿಲ್ಲಿ ಟ್ರೈ ಮಾಡಬಹುದು.
2. ಶಿವರಾಜಪುರ, ದ್ವಾರಕಾ, ಗುಜರಾತ್: ಗುಜರಾತಿನಲ್ಲಿರುವ ಕೃಷ್ಣನೂರು ದ್ವಾರಕೆಗೆ ಹೋಗುವ ಮನಸ್ಸಾಗಿದ್ದರೆ ಚಂದದೊಂದು ಸಮುದ್ರ ತೀರದಲ್ಲಿ ಒಮ್ಮೆ ಕೂತು ಕೃಷ್ಣನನ್ನು ನೆನೆಯಬೇಕೆನ್ನಿಸಿದರೆ, ಶಿವರಾಜಪುರದ ಬೀಚಿಗೊಮ್ಮೆ ಹೋಗಬೇಕು. ಇದು ರುಕ್ಮಿಣಿ ಮಂದಿರದಿಂದ ೧೫ ನಿಮಿಷ ಉತ್ತರಕ್ಕೆ ಪ್ರಯಾಣಿಸಿದರೆ ಸಿಗುತ್ತದೆ. ಮೆತ್ತನೆಯ ಮರಳು, ಚಂದನೆಯ ಗಾಢ ನೀಲಿ ಕಡಲು, ಸ್ವಚ್ಛ ಪರಿಸರ, ಒಂದು ಲೈಟ್‌ಹೌಸ್, ಕಲ್ಲು ಬಂಡೆಗಳು ʻಆಹಾ, ಇದಷ್ಟೇ ಬೇಕಿತ್ತುʼ ಎನಿಸುವಂತೆ ಮಾಡುತ್ತದೆ.
3. ರಾಧಾನಗರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: ಅಂಡಮಾನಿನ ಹ್ಯಾವ್ಲಾಕ್ ದ್ವೀಪದ ರಾಧಾನಗರ ಬೀಚ್ ಜಗತ್ತಿನ ಅತ್ಯಂತ ಸುಂದರ ಕಡಲ ಕಿನಾರೆಗಳ ಪೈಕಿ ೧೬ನೇ ಸ್ಥಾನದಲ್ಲಿದೆ. ಏಷ್ಯಾದ ಅತ್ಯಂತ ಸುಂದರ ಬೀಚ್‌ಗಳಲ್ಲಿ ಇದೂ ಒಂದು. ಪೋಸ್ಟ್‌ಕಾರ್ಡ್ ಚಿತ್ರದಲ್ಲಿರುವ ನಮ್ಮ ಕನಸಿನಲ್ಲಿ ಬಂದ ಚೆಂದನೆಯ ಹಸಿರು ಬಣ್ಣದ ಸ್ಪಟಿಕ ಶುದ್ಧ ನೀರಿನ, ʻಆಹಾʼ ಎನಿಸುವ ಮಧುರಾನುಭೂತಿ ನೀಡುವ ಸಮುದ್ರ ತೀರವಿದು. ಜಗತ್ಪ್ರಸಿದ್ಧ ಕಡಲತೀರವಾದರೂ ಈ ತೀರದ ಸುತ್ತಲೂ ಇರುವ ಮಳೆಕಾಡುಗಳು ಈ ಪರಿಸರವನ್ನೂ ಇನ್ನೂ ರಮ್ಯವಾಗಿಸಿ, ಹೊಸ ಜೋಡಿಗಳಿಗೆ ಬೆಸ್ಟ್ ಎನಿಸುವ ಹನಿಮೂನ್ ತಾಣವಾಗಿಸಿರುವುದು ಸುಳ್ಳಲ್ಲ. ಸಾಹಸೀಪ್ರಿಯರಿಗೂ ಹೇಳಿ ಮಾಡಿಸಿದ ಚಟುವಟಿಕೆಗಳು ಇಲ್ಲಿ ಲಭ್ಯ.
4. ಪಡುಬಿದ್ರಿ, ಕರ್ನಾಟಕ: ಗಾಢ ನೀಲಿ ಬಣ್ಣದ ಚೆಂದನೆಯ ಬೀಚ್ ಇದು. ನಮ್ಮದೇ ರಾಜ್ಯದ ಉಡುಪಿ ಪಡುಬಿದ್ರಿಯ ಈ ಬೀಚ್ ಅಷ್ಟಾಗಿ ಜನಜಂಗುಳಿಯಿಲ್ಲದ, ಶಾಂತವಾದ, ಎಲ್ಲವೂ ಅಚ್ಚುಕಟ್ಟಾಗಿ ಇರುವ ಸಮುದ್ರ ತೀರ.
5. ಕಾಸರ್ಕೋಡ್, ಕರ್ನಾಟಕ: ಚಂದನೆಯ ಗಾಳಿ ಮರದ ತೋಪಿನ ಸಮುದ್ರ ತೀರವಾಗಿರುವ ಇದು ಇರುವುದು ನಮ್ಮ ರಾಜ್ಯದ ಹೊನ್ನಾವರದ ಬಳಿ. ಇಲ್ಲಿರುವ ಲೈಟ್‌ಹೌಸ್, ನಡೆಯಬೇಕೆನಿಸಿದಷ್ಟೂ ನಡೆಯಲು ಮರಳ ತೀರ, ಬೋಟಿಂಗ್, ಮಕ್ಕಳಿಗಾಗಿ ಪಾರ್ಕ್ ಹೀಗೆ ಸಮುದ್ರ ತೀರವೊಂದರಲ್ಲಿ ಎಲ್ಲ ವಯಸ್ಸಿನವರು ಬಯಸುವ ಎಲ್ಲವೂ ಇಲ್ಲಿದೆ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
6. ಋಷಿಕೊಂಡ, ಆಂಧ್ರಪ್ರದೇಶ: ಚಂದನೆಯ ಹಸಿರರಾಶಿಯ, ಬೆಟ್ಟಗುಡ್ಡಗಳ ದೃಶ್ಯಗಳನ್ನು ಸಮುದ್ರ ತೀರದಿಂದಲೂ ಕಣ್ತುಂಬಿಕೊಳ್ಳಬಹುದೆಂದರೆ ಅದಕ್ಕೆ ಋಷಿಕೊಂಡಕ್ಕೆ ಬರಬೇಕು. ಇದು ವಿಶಾಖಪಟ್ಟಣದ ಚಂದನೆಯ ಸಮುದ್ರ ತೀರ. ವಾಟರ್ ಸ್ಕೀಯಿಂಗ್, ವಿಂಡ್ ಸರ್ಫಿಂಗ್, ಈಜು ಮತ್ತಿತರ ಸಾಹಸೀಕ್ರೀಡೆಗಳನ್ನೂ ಇಲ್ಲಿ ಟ್ರೈ ಮಾಡಬಹುದು. ದಕ್ಷಿಣ ಭಾರತದ ಅದ್ಭುತ ಬೀಚ್‌ಗಳಲ್ಲಿ ಇದೂ ಒಂದು.
ಇನ್ನೂ ಆರು ಬೀಚ್‌ಗಳ ವಿವರ ಮುಂದಿನ ಭಾಗದಲ್ಲಿ
ಪ್ರವಾಸ
Scuba Diving in India: ಸಾಗರದಾಳದ ವಿಸ್ಮಯ ನೋಡಿ: ಜೀವನದಲ್ಲಿ ಒಮ್ಮೆ ಮಾಡಿ ಸ್ಕೂಬಾ ಡೈವಿಂಗ್!
ಸಾಗರದಾಳದ ನೈಸರ್ಗಿಕ ವಿಸ್ಮಯವನ್ನು ಕಣ್ತುಂಬಿಕೊಳ್ಳುವ ಪ್ರಕೃತಿಪ್ರಿಯರು ಖಂಡಿತ ಮಾಡಬೇಕಾದ ಸಾಹಸವಿದು. ಹಾಗಾದರೆ ಭಾರತದಲ್ಲಿ ಎಲ್ಲೆಲ್ಲಿ ಸ್ಕೂಬಾ ಮಾಡಬಹುದು ಎಂಬುದನ್ನು ನೋಡೋಣ.
ಸಾಹಸೀ ಪ್ರಿಯ ಪ್ರವಾಸಿಗರಿಗೆ ಜೀವನದಲ್ಲೊಮ್ಮೆಯಾದರೂ ಸ್ಕೂಬಾ ಡೈವಿಂಗ್ ಮಾಡುವ ಆಸೆಯಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಭಾರತೀಯರು ಸ್ಕೂಬಾದಂತಹ ವಾಟರ್ ಸ್ಪೋರ್ಟ್ಸ್ ಕಡೆಗೆ ಹೆಚ್ಚು ಆಸಕ್ತಿಯನ್ನೂ ತೋರಿಸುತ್ತಿದ್ದಾರೆ. ಸಾಗರದಾಳದ ನೈಸರ್ಗಿಕ ವಿಸ್ಮಯವನ್ನು ಕಣ್ತುಂಬಿಕೊಳ್ಳುವ ಪ್ರಕೃತಿಪ್ರಿಯರು ಖಂಡಿತ ಮಾಡಬೇಕಾದ ಸಾಹಸವಿದು. ಹಾಗಾದರೆ ಭಾರತದಲ್ಲಿ ಎಲ್ಲೆಲ್ಲಿ ಸ್ಕೂಬಾ ಮಾಡಬಹುದು ಎಂಬುದನ್ನು ನೋಡೋಣ.
1. ಅಂಡಮಾನ್ ನಿಕೋಬಾರ್: ಸ್ಕೂಬಾದ ಅನುಭವಕ್ಕೆ ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಸಮೂಹದಷ್ಟು ಸುಂದರ, ರಮಣೀಯ, ಆಕರ್ಷಕ ತಾಣ ನಮಗೆ ಹತ್ತಿರದಲ್ಲಿ ಎಲ್ಲಿ ಸಿಕ್ಕೀತು ಹೇಳಿ. ನಮ್ಮ ದೇಶದ ಸುತ್ತಮುತ್ತಲ ಸಮುದ್ರದಾಳದ ಅದ್ಭುತ ಲೋಕವನ್ನು ಕಣ್ಣಾರೆ ಕಾಣಬೇಕೆಂದರೆ ಅಂಡಮಾನ್ ತೀರದಲ್ಲೊಮ್ಮೆ ಮುಳುಗಿ ಏಳಬೇಕು. ಕೇವಲ ಪ್ರವಾಸ ಮಾತ್ರವಲ್ಲದೆ, ಅನುಭವಗಳನ್ನು ದಕ್ಕಿಸಿಕೊಳ್ಳುವ ಆಸಕ್ತಿ ಇರುವ ಮಂದಿಗೆ ಹಾಗೂ ಸಾಹಸೀ ಪ್ರವೃತ್ತಿಯವರಿಗೆ ಸ್ಕೂಬಾ ಮಾಡಲು ಅತ್ಯಂತ ಚೆಂದನೆಯ ಸ್ಪಟಿಕ ಶುದ್ಧ ನೀಲಿ ಹಸಿರು ಸಮುದ್ರವೆಂದರೆ ಇದೇ. ಇಲ್ಲಿ ಸಾಗರದಾಳದಲ್ಲಿ ಆಮೆ, ಮಾಂಟಾ ರೇ, ಏಲ್, ಬ್ಯಾಟ್‌ಫಿಶ್ ಸೇರಿದಂತೆ ಅನೇಕ ಬಗೆಯ ಜೀವಿಗಳನ್ನೂ ಪ್ರತ್ಯಕ್ಷವಾಗಿ ಅವುಗಳ ತಾಣದಲ್ಲಿಯೇ ನೋಡಿ ಅನುಭವಿಸಬಹುದು. ಎಲ್ಲಕ್ಕಿಂತ ಹೆಚ್ಚು ಸ್ಕೂಬಾದ ಜೀವಮಾನದ ಅನುಭವಕ್ಕೆ ಇಲ್ಲಿಗೇ ಬರಬೇಕು. ನವೆಂಬರ್ ತಿಂಗಳಿಂದ ಎಪ್ರಿಲ್‌ವರೆಗೆ ಇಲ್ಲಿ ಸ್ಕೂಬಾ ಮಾಡಲು ಪ್ರಶಸ್ತ ಸಮಯ.
2. ಲಕ್ಷದ್ವೀಪಗಳು: ವಾಟರ್ ಸ್ಪೋರ್ಟ್ಸ್ ಹಾಗೂ ಸ್ಕೂಬಾ ಡೈವಿಂಗ್‌ಗೆ ಲಕ್ಷದ್ವೀಪಗಳೂ ಕೂಡಾ ಅತ್ಯುತ್ತಮ ಆಯ್ಕೆ. ಇಲ್ಲಿನ ನೀಲಿ ಹಸಿರು ಸ್ಪಟಿಕ ಶುದ್ಧ ಸಮುದ್ರದಲ್ಲಿ ಸ್ಕೂಬಾ ಮಾಡುವುದೇಒಂದು ದಿವ್ಯ ಅನುಭೂತಿ. ಸಾಗರದಾಳದ ಜಲಚರಗಳು ಹಾಗೂ ಅತ್ಯಪೂರ್ವ ಜಲಸಂಪತ್ತನ್ನು ಮನದಣಿಯೆ ನೋಡಲು ಅದ್ಭುತ ಆಯ್ಕೆಗಳಲ್ಲಿ ಲಕ್ಷದ್ವೀಪಗಳೂ ಒಂದು. ಅಕ್ಟೋಬರ್ ತಿಂಗಳಿಂದ ಮೇ ಮಧ್ಯದವರೆಗೂ ಸ್ಕೂಬಾ ಮಾಡಲು ಬೆಸ್ಟ್ ಟೈಮ್.
3. ಗೋವಾ: ಅಂಡಮಾನ್, ಲಕ್ಷದ್ವೀಪಗಳಿಗೆಲ್ಲ ಹೋಗಲು ಸಧ್ಯಕ್ಕೆ ಸಾಧ್ಯವಿಲ್ಲ ಅನಿಸಿದರೆ ಹತ್ತಿರದ ಗೋವಾದಲ್ಲಿ ಕೂಡಾ ಸ್ಕೂಬಾ ಮಾಡಬಹುದು. ನೈಟ್‌ಲೈಫ್, ಪಾರ್ಟಿ ಪ್ರಿಯರ ಪ್ರವಾಸೀ ತಾಣ ಇದಾದರೂ, ಪಾರಾಸೈಲಿಂಗ್, ಜೆಟ್‌ಸ್ಕೀ, ಸರ್ಫಿಂಗ್, ಸ್ಕೂಬಾ ಡೈವಿಂಗ್‌ನಂತಹ ಸಾಹಸೀ ಕ್ರೀಡೆಗಳಿಗೂ ಇದು ಪ್ರಸಿದ್ಧ ತಾಣ.
4. ನೇತ್ರಾಣಿ: ನಮ್ಮ ಕರ್ನಾಟಕ ಬಿಟ್ಟು ಹೊರಗೆಲ್ಲೂ ಸದ್ಯ ಹೋಗಲು ಸಾಧ್ಯವಿಲ್ಲ ಅಂತ ಹೇಳುವ ಮಂದಿಗೆ ಬೆಸ್ಟ್ ತಾಣ ನಮ್ಮದೇ ನೇತ್ರಾಣಿ. ನಮ್ಮ ಮುರುಡೇಶ್ವರ ಕರಾವಳಿಯಿಂದ ಹತ್ತು ಕಿಮೀ ದೂರದಲ್ಲಿರುವ ನೇತ್ರಾಣಿ ಎಂಬ ಪುಟ್ಟ ದ್ವೀಪ ನಮ್ಮ ರಾಜ್ಯದ ಅದ್ಭುತಗಳಲ್ಲೊಂದು. ಇಲ್ಲಿರುವ ಅದ್ಭುತ ಸಾಗರ ಸಂಪತ್ತನ್ನು ನಾವು ಕಣ್ಣಾರೆ ನೋಡಿ ಅನುಭವಿಸಬೇಕೆಂದರೆ ಒಮ್ಮೆಯಾದರೂ ನೇತ್ರಾಣಿಯಲ್ಲಿ ಸ್ಕೂಬಾ ಮಾಡಬೇಕು. ಸೆಪ್ಟೆಂಬರ್‌ನಿಂದ ಮೇವರೆಗೂ ಇಲ್ಲಿ ಸ್ಕೂಬಾ ಮಾಡಲು ಒಳ್ಳೆಯ ಸಮಯ.
ಇದನ್ನೂ ಓದಿ: Summer holidays: ಈ ಬೇಸಿಗೆ ರಜೆಯಲ್ಲಿ ಮಕ್ಕಳ ಜೊತೆ ಇಲ್ಲಿಗೂ ಹೋಗಬಹುದು!
5. ಕೋವಲಂ: ಕೇರಳದ ಕೊಚ್ಚಿಯ ಸಮೀಪ ಇರುವ ಕೋವಲಂ ಇತ್ತೀಚೆಗೆ ಪ್ರಸಿದ್ಧಿ ಪಡೆಯುತ್ತಿರುವ ತಾಣಗಳಲ್ಲೊಂದು. ಸ್ವಚ್ಛವಾದ ಬೀಚ್‌ಗಳು ಇಲ್ಲಿನ ಹೆಗ್ಗಳಿಕೆ. ಇದೂ ಕೂಡಾ ಸ್ಕೂಬಾ ಟ್ರೈ ಮಾಡಲು ಬೆಸ್ಟ್ ತಾಣಗಳಲ್ಲಿ ಒಂದು. ಸೆಪ್ಟೆಂಬರ್‌ನಿಂದ ಫೆಬ್ರವರಿ ಒಳಗೆ ಇಲ್ಲಿ ಸ್ಕೂಬಾ ಮಾಡಲು ಹೇಳಿ ಮಾಡಿಸಿದ ಸಮಯ.
6. ತರ್ಕರ್ಲಿ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ತರ್ಕರ್ಲಿ ಸಮುದ್ರ ತೀರವೂ ಕೂಡಾ ಸಾಗರದಾಳದ ಜೀವಿಗಳ ಕಲರ್‌ಫುಲ್ ಲೈಫ್ ನೋಡಲು ಸೂಕ್ತ ತಾಣ. ಮನಮೋಹಕ ಹವಳದ ದಿಣ್ಣೆಗಳು, ನಾನಾ ಬಗೆವ ಮೀನುಗಳು, ಸಮುದ್ರಜೀವಿಗಳನ್ನು ಇಲ್ಲಿ ಸ್ಕೂಬಾ ಮಾಡುವ ಮೂಲಕ ನೋಡಬಹುದು. ದಂಡಿ ಬೀಚ್‌ನಿಂದ ತರ್ಕರ್ಲಿ ಬೀಚ್‌ಗೆ ಸ್ಕೂಬಾ ಮಾಡುವ ಮಂದಿಯನ್ನು ಕರೆದೊಯ್ದು ಈ ಅನುಭವ ನೀಡಲಾಗುತ್ತದೆ. ಅಕ್ಟೋಬರ್‌ನಿಂದ ಎಪ್ರಿಲ್ ಇಲ್ಲಿ ಸ್ಕೂಬಾಗೆ ಪ್ರಶಸ್ತ ಕಾಲ.
7. ಪುದುಚೆರಿ: ಸ್ಕೂಬಾ ಡೈವಿಂಗ್ ಮತ್ತು ಸ್ನೋರ್ಕ್ಲಿಂಗ್ ಮಾಡಬಹುದಾದ ಇನ್ನೊಂದು ತಾಣ ಎಂದರೆ ಹತ್ತಿರದ ಪುದುಚೇರಿ. ಇಲ್ಲಿ ಎಲ್ಲ ಬಗೆಯ ವಾಟರ್ ಸ್ಪೋರ್ಟ್ಸ್‌ಗಳೂ ಲಭ್ಯವಿದ್ದು, ಹವಳದ ದಿಣ್ಣೆಗಳನ್ನೂ, ಸಾಗರದಾಳದ ಅದ್ಭುತವನ್ನೂ ಕಣ್ತುಂಬಬಹುದು. ಫೆಬ್ರವರಿಯಿಂದ ಎಪ್ರಿಲ್‌ವರೆಗೆ ಹಾಗೂ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಇಲ್ಲಿ ಸ್ಕೂಬಾ ಡೈವಿಂಗ್ ಸೂಕ್ತ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
ಪ್ರವಾಸ
Summer holidays: ಈ ಬೇಸಿಗೆ ರಜೆಯಲ್ಲಿ ಮಕ್ಕಳ ಜೊತೆ ಇಲ್ಲಿಗೂ ಹೋಗಬಹುದು!
ನಮ್ಮ ಭಾರತದೊಳಗೇ ಅತ್ಯದ್ಭುತ ತಾಣಗಳಿರುವಾಗ ಇನ್ನು ಬೇರೆಡೆ ಹುಡುಕುವ ಮಾತೆಲ್ಲಿದೆ! ನಮ್ಮ ದೇಶದೊಳಗೇ ಈ ಬೇಸಿಗೆ ರಜೆಯಲ್ಲೊಮ್ಮೆ ಮಕ್ಕಳ ಜೊತೆ ಹೋಗಿ ನೋಡಬಹುದಾದ ಉತ್ತಮ ಆಯ್ಕೆಗಳಿವು!
ಇನ್ನೇನು ಶಾಲೆಗಳೆಲ್ಲ ಮುಗಿದು ಎಲ್ಲರೂ ಏಪ್ರಿಲ್‌ನಲ್ಲೊಂದು ಪ್ರವಾಸದ ಸಿದ್ಧತೆ ಮಾಡಿಕೊಳ್ಳುವುದು ಸಾಮಾನ್ಯ. ಎಲ್ಲಿಗೆ ಪ್ರವಾಸ ಹೋಗುವುದು ಎಂಬುದು ಅವರವರ ಆಸಕ್ತಿ, ಸಮಯ, ಹಣ ಎಲ್ಲವುಗಳ ಮೇಲೆ ನಿರ್ಧರಿತವಾದದ್ದು. ಆದರೆ, ವರ್ಷದಲ್ಲೊಮ್ಮೆ ಹೋಗುವ ಪ್ರವಾಸವು ಜೀವಮಾನದಲ್ಲೊಮ್ಮೆ ನೆನಪಿನಲ್ಲಿಟ್ಟುಕೊಳ್ಳುವಂಥದ್ದಾದರೆ ಅದಕ್ಕಿಂತ ಸುಂದರ ಅನುಭವ ಇನ್ನೇನಿದೆ ಹೇಳಿ! ಅದರಲ್ಲೂ ನಮ್ಮ ಭಾರತದೊಳಗೇ ಅತ್ಯದ್ಭುತ ತಾಣಗಳಿರುವಾಗ ಇನ್ನು ಬೇರೆಡೆ ಹುಡುಕುವ ಮಾತೆಲ್ಲಿದೆ! ನಮ್ಮ ದೇಶದೊಳಗೇ ಈ ಬೇಸಿಗೆ ರಜೆಯಲ್ಲೊಮ್ಮೆ ಮಕ್ಕಳ ಜೊತೆ ಹೋಗಿ ನೋಡಬಹುದಾದ ಉತ್ತಮ ಆಯ್ಕೆಗಳಿವು!
1. ಡಾರ್ಜಿಲಿಂಗ್, ಪಶ್ಚಿಮ ಬಂಗಾಳ: ಬೇಸಿಗೆಯಲ್ಲಿ ಗಿರಿಧಾಮಗಳಿಗೆ ಪ್ರವಾಸ ಹೋಗುವುದು ಎಂದರೆ ಮನಸ್ಸಿಗೆ, ದೇಹಕ್ಕೆ ಹಿತ. ವಸಂತ ಕಾಲದಲ್ಲಿ ಹೂಬಿಟ್ಟು ಆಗಷ್ಟೇ ನಳನಳಿಸುವ ಪ್ರಕೃತಿಯಿಂದ ಬೆಟ್ಟಗುಡ್ಡಗಳಿಗೆ ಆಗಷ್ಟೇ ರಂಗು ಬಂದಿರುತ್ತದೆ. ಡಾರ್ಜಿಲಿಂಗ್‌ನಲ್ಲಿ ರೋಡೋಡೆಂಡ್ರಾನ್ ಹೂಗಳು ಅರಳಿ ನಿಂತು ಇಡೀ ಬೆಟ್ಟವೇ ಪಿಂಕ್ ಬಣ್ಣಕ್ಕೆ ತಿರುಗುವುದನ್ನು ನೋಡುವುದು ಚಂದ. ಅದಕ್ಕಾದರೂ ಡಾರ್ಜಿಲಿಂಗ್ ಸುತ್ತಾಡಬೇಕು. ಮಕ್ಕಳ ಜೊತೆಗೆ ಅಲ್ಲಿನ ಪುಟಾಣಿ ರೈಲಿನಲ್ಲಿ ಕೂತು ಊರು ಸುತ್ತಬೇಕು. ಆಕಾಶ ಶುಭ್ರವಾಗಿದ್ದರೆ ದೂರದಿಂದ ಕಾಣುವ ಕಾಂಚನಜುಂಗವನ್ನು ಕಣ್ತುಂಬಬೇಕು. ಬೆಟ್ಟ ಗುಡ್ಡದ ಬದುಕು, ಚಹಾತೋಟಗಳು ಹೀಗೆ ಬದುಕಿನ ಅನುಭವಕ್ಕೆ ಇಲ್ಲಿ ಸಾಕಷ್ಟಿದೆ.
2. ತವಾಂಗ್, ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶವನ್ನು ನಮ್ಮ ನಕ್ಷೆಯಲ್ಲಿ ಮೂಲೆಯಲ್ಲಿ ನೋಡಿ ಅಷ್ಟೇ ಯಾಕೆ ಸುಮ್ಮನಾಗಬೇಕು ಹೇಳಿ! ಆ ಮೂಲೆಯನ್ನೊಮ್ಮೆ ಸಾಕ್ಷಾತ್ ಸ್ಪರ್ಶಿಸಿದರೆ ಹೇಗೆ ಎಂದು ಕಲ್ಪಿಸಿಕೊಳ್ಳಿ. ಒಮ್ಮೆ ಹೋಗಿ ಬಂದರೆ ಆಗುವ ಅನುಭವವೇ ಬೇರೆ. ಇಲ್ಲಿನ ಬೌದ್ಧ ಮಂದಿರಗಳ ಅನುಭೂತಿಯೊಂದಿಗೆ ಹಿಮಚ್ಛಾದಿತ ಬೆಟ್ಟಗಳನ್ನು ಕಣ್ತುಂಬಿಕೊಂಡು ಸ್ಪಟಿಕ ಶುದ್ಧ ಆಕಾಶವನ್ನೂ, ಸರೋವರದ ನೀರನ್ನೂ ಕಣ್ತುಂಬಿಕೊಳ್ಳಬಹುದು.
3. ಬೀರ್, ಹಿಮಾಚಲ ಪ್ರದೇಶ: ಉತ್ತರ ಭಾರತದ ವಸಂತಕಾಲದ ಸ್ವರ್ಗ ಹಿಮಾಚಲದ ಬೀರ್. ತೀಕ್ಷ್ಣವಾದ ಚಳಿಗಾಲ ಮೆಲ್ಲನೆ ತನ್ನ ಬಾಹುಗಳನ್ನು ಸಡಿಲಗೊಳಿಸುತ್ತಿರುವ ವಸಂತ ಕಾಲದಲ್ಲಿ ಬೀರ್‌ನಂತಹ ಜಾಗಕ್ಕೆ ಹೋಗಬೇಕು. ಪಾರಾಗ್ಲೈಡಿಂಗ್ ಮತ್ತಿತರ ಸಾಹಸೀ ಕ್ರೀಡೆಗಳಿಗೆ ಬೀರ್‌ನಂತಹ ಪ್ರಶಸ್ತ ಸ್ಥಳ ಇನ್ನೊಂದಿಲ್ಲ. ಇಲ್ಲಿನ ಸ್ಥಳೀಯ ಕಲೆ, ಸಂಸ್ಕೃತಿ ತಿಳಿಯಲು, ಒಂದಿಷ್ಟು ಸಾಹಸೀಕ್ರೀಡೆಗಳನ್ನೂ ಆಡಿ, ಸಾಲುಸಾಲು ಬೆಟ್ಟಗಳನ್ನು ಸುಮ್ಮನೆ ಕುಳಿತು ನೋಡುತ್ತಾ ಕಳೆಯುವುದೇ ಖುಷಿ.
4. ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯ ಪ್ರದೇಶ: ನಮ್ಮ ಮಧ್ಯಪ್ರದೇಶದಲ್ಲಿರುವ ಕನ್ಹಾ ರಾಷ್ಟ್ರೀಯ ಉದ್ಯಾನವನವನ್ನೇ ನಾವು ಮರೆತರೆ ಹೇಗೆ? ವನ್ಯಜೀವಿಗಳ ಬಗ್ಗೆ ನಮ್ಮ ತಿಳುವಳಿಕೆ, ಕಳಕಳಿ ಹೆಚ್ಚಿಸಿಕೊಳ್ಳಲು ಹಾಗೂ, ಅವುಗಳ ಬಗ್ಗೆ ಬೇರೆಯವರಿಗೆ ನಮ್ಮ ಅರಿವು ದಾಟಿಸಲು, ನಾವು ಇನ್ನೂ ಹೆಚ್ಚು ಪ್ರಜ್ಞಾವಂತರಾಗಿ ಬದುಕಲು, ಭೂಮಿಯ ಮೇಲಿನ ಸಕಲ ಜೀವಜಂತುಗಳಿಗೆ ಬದುಕಲು ನಮ್ಮಷ್ಟೇ ಹಕ್ಕಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ನಾವು ಆಗಾಗ ಕಾಡಿಗೆ ಹೋಗಬೇಕು. ಕನ್ಹಾ ಕೂಡಾ ಆಂಥದ್ದೇ ಒಂದು ಒಳ್ಳೆಯ ಆಯ್ಕೆ.
ಇದನ್ನೂ ಓದಿ: Travel Tips: ಗುಂಡಿಗೆ ಗಟ್ಟಿ ಇದ್ದವರು ಪ್ರಯಾಣಿಸಲೇಬೇಕಾದ ಭಾರತದ ದುರ್ಗಮ ರಸ್ತೆಗಳು!
5. ಅಮೃತಸರ, ಪಂಜಾಬ್: ನಮ್ಮ ದೇಶದ ಭವ್ಯ ಸಂಸ್ಕೃತಿ ಪರಂಪರೆ ಅರಿಯಲು ಕೇವಲ ನಮ್ಮ ಸುತ್ತಮುತ್ತಲ ಜಾಗಗಳ ಬಗ್ಗೆಯಷ್ಟೇ ಗೊತ್ತಿದ್ದರೆ ಸಾಲದು. ನಮ್ಮ ಗಡಿ ಪ್ರದೇಶಗಳ, ನಮ್ಮ ಭಾರತದ ಐತಿಹ್ಯ, ವಿವಿಧ ಧರ್ಮ ಸಂಸ್ಕೃತಿಯ ಬಗ್ಗೆಯೂ ತಿಳಿಯುವುದು ಮುಖ್ಯ. ಅಂಥದ್ದೊಂದು ಒಳ್ಳೆಯ ಆಯ್ಕೆ ಅಮೃತಸರ. ಸಿಖ್ಖರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ನೇಡಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ನೆಲದಲ್ಲಿ ನಡೆದಾಡಿ ಇತಿಹಾಸದ ಪುಟವನ್ನೊಮ್ಮೆ ಬಿಡಿಸಿ ಕಣ್ಣು ತೇವವಾಗಿಸಬಹುದು. ಅಷ್ಟೇ ಅಲ್ಲ, ವಾಘಾ ಗಡಿಯಲ್ಲಿ ನಮ್ಮ ದೇಶ ಕಾಯ್ವ ಸೈನಿಕರ ಕಾರ್ಯ ನೋಡಿ ರೋಮಾಂಚನಗೊಳ್ಳಬಹುದು. ಮಕ್ಕಳಿಗೆ ದೇಶದ ಕಥೆ ಹೇಳಲು, ದೇಶಪ್ರೇಮ ಚಿಗುರಿಸಲು ಪಂಜಾಬ್ ಪ್ರವಾಸಕ್ಕಿಂತ ಒಳ್ಳೆಯ ಆಯ್ಕೆ ಇನ್ನೊಂದಿಲ್ಲ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು